ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ
ಗೋಚರ
ವಿಕಿಪೀಡಿಯದ ಮುಖಪುಟದಲ್ಲಿನ "ಇತಿಹಾಸದಲ್ಲಿ ಈ ದಿನ" ವಿಭಾಗಕ್ಕೆ ಪುಟಗಳನ್ನು ಸಂಯೋಜಿಸಲು ಕೇಂದ್ರ ಪುಟ ಇದು.
ಎಲ್ಲಾ ದಿನಗಳ ಪುಟಗಳಿಗೆ ಸಂಪರ್ಕಗಳು:
ಜನವರಿ - ಫೆಬ್ರುವರಿ - ಮಾರ್ಚ್ - ಏಪ್ರಿಲ್ - ಮೇ - ಜೂನ್ - ಜುಲೈ - ಆಗಸ್ಟ್ - ಸೆಪ್ಟೆಂಬರ್ - ಅಕ್ಟೋಬರ್ - ನವೆಂಬರ್ - ಡಿಸೆಂಬರ್
ಈಗಿನ ಸಮಯ: ೨೨:೨೨. ಇಂದು ಶುಕ್ರವಾರ, ಸೆಪ್ಟೆಂಬರ್ ೧೩, ೨೦೨೪ (UTC) - ಈ ಪುಟವನ್ನು ರೀಲೋಡ್ ಮಾಡಿ
- ಜನವರಿ ೧: ಗ್ರೆಗೋರಿಯನ್ ಪಂಚಾಂಗದಲ್ಲಿ ವರ್ಷದ ಮೊದಲ ದಿನ.
- ಜನವರಿ ೩: ಸಾವಿತ್ರಿಬಾಯಿ ಫುಲೆ ಜನ್ಮದಿನ
- ಜನವರಿ ೧೦: ವಿಶ್ವ ನಗುವಿನ ದಿನ
- ಜನವರಿ ೧೨: ರಾಷ್ಟ್ರೀಯ ಯುವದಿನ
- ಜನವರಿ ೧೪: ಮಕರ ಸಂಕ್ರಾಂತಿ ಹಬ್ಬ ಆಚರಣೆ.
- ಜನವರಿ ೧೫: ಮಾರ್ಟಿನ್ ಲೂಥರ್ ಕಿಂಗ್ ಜನ್ಮದಿನಾಚರಣೆ, ಸೇನಾದಿನ
- ಜನವರಿ ೨೩: ದೇಶಪ್ರೇಮ ದಿನ
- ಜನವರಿ ೨೫: ಅಂತರಾಷ್ಟ್ರೀಯ ತೆರಿಗೆ ದಿನ
- ಜನವರಿ ೨೬: ಭಾರತದಲ್ಲಿ ಗಣರಾಜ್ಯೋತ್ಸವ (ಚಿತ್ರಿತ), ಪ್ರಜಾಪ್ರಭುತ್ವ ದಿನ
- ಜನವರಿ ೨೬: ಆಸ್ಟ್ರೇಲಿಯದಲ್ಲಿ ರಾಷ್ಟ್ರೀಯ ದಿನಾಚರಣೆ.
- ಜನವರಿ ೩೦: ಮಹಾತ್ಮ ಗಾಂಧಿ ಮರಣ ಹೊಂದಿದ ದಿನ. ಹುತಾತ್ಮ ದಿನಾಚರಣೆ, ಸರ್ವೋದಯ ದಿನ, ಕುಷ್ಠರೋಗ ನಿವಾರಣೆ ದಿನ
- ಫೆಬ್ರವರಿ ೧: ಭಾರತೀಯ ಕರಾವಳಿ ಸುರಕ್ಷಾ ದಿನಾಚರಣೆ
- ಫೆಬ್ರುವರಿ ೩: ಮೊಜಾಂಬಿಕ್ನಲ್ಲಿ 'ನಾಯಕರ ದಿನಾಚರಣೆ'.
- ಫೆಬ್ರುವರಿ ೩: ೧೯೬೬ರಲ್ಲಿ ಸೋವಿಯೆಟ್ ಒಕ್ಕೂಟದ ಲೂನ ೯ ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆಯಾಯಿತು.
- ಫೆಬ್ರುವರಿ ೪: ಶ್ರೀಲಂಕಾದಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ಫೆಬ್ರುವರಿ ೭: ೧೯೯೨ರಲ್ಲಿ ಯುರೋಪಿನ ಒಕ್ಕೂಟವನ್ನು ಸ್ಥಾಪಿಸಿದ ಮಾಸ್ಟ್ರಿಕ್ಟ್ ಒಪ್ಪಂದಕ್ಕೆ ಸಹಿ ಹಾಕಲಯಿತು.
- ಫೆಬ್ರುವರಿ ೧೧: ಜಪಾನ್ನಲ್ಲಿ ರಾಷ್ಟ್ರದ ಸ್ಥಾಪನೆ ದಿನಾಚರಣೆ'.
- ಫೆಬ್ರುವರಿ ೧೨: ಚಾರ್ಲ್ಸ್ ಡಾರ್ವಿನ್ ಮತ್ತು ಅಬ್ರಹಮ್ ಲಿಂಕನ್ (ಚಿತ್ರಿತ) ಅವರ ಜನ್ಮದಿನಾಚರಣೆಗಳು.
- ಫೆಬ್ರುವರಿ ೧೪: ಪ್ರೇಮಿಗಳ ದಿನಾಚರಣೆ.
- ಫೆಬ್ರವರಿ ೨೦: ಅರುಣಾಚಲ ಪ್ರದೇಶ ದಿನ
- ಫೆಬ್ರುವರಿ ೨೧: ಯುನೆಸ್ಕೊ ಘೋಷಿತ ಅಂತರರಾಷ್ಟ್ರೀಯ ಮಾತೃಭಾಷೆ ದಿನಾಚರಣೆ.
- ಫೆಬ್ರವರಿ ೨೮: ರಾಷ್ಟ್ರೀಯ ವಿಜ್ಞಾನ ದಿನ
- ಮಾರ್ಚ್ ೬: ಘಾನ ದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ಮಾರ್ಚ್ ೮: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ (ಚಿತ್ರಿತ)
- ಮಾರ್ಚ್ ೧೭: ಐರ್ಲೆಂಡ್ನಲ್ಲಿ ಸೇಂಟ್ ಪ್ಯಾಟ್ರಿಕ್ ದಿನಾಚರಣೆ.
- ಮಾರ್ಚ್ ೧೫: ವಿಶ್ವ ಗ್ರಾಹಕ ಹಕ್ಕುಗಳ ದಿನ
- ಮಾರ್ಚ್ ೨೦: ವಿಶ್ವ ಅರಣ್ಯ ದಿನ, ಇರಾನ್ ದೇಶದಲ್ಲಿ ನೌರೋಜ್ ಹಬ್ಬ.
- ಮಾರ್ಚ್ ೨೨: ವಿಶ್ವ ಜಲದಿನ
- ಮಾರ್ಚ್ ೨೩: ವಿಶ್ವ ಖಗೋಳಶಾಸ್ತ್ರ ಅಧ್ಯಯನ ದಿನ
- ಮಾರ್ಚ್ ೨೪: ವಿಶ್ವ ಕ್ಷಯ ದಿನ
- ಮಾರ್ಚ್ ೨೬: ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ಮಾರ್ಚ್ ೩೧: ವಾರ್ಷಿಕ ಬ್ಯಾಂಕ್ ಲೆಕ್ಕಪತ್ರ ಮುಕ್ತಾಯ ದಿನ
- ಏಪ್ರಿಲ್ ೧: ವಿಶ್ವದ ಹಲವೆಡೆ ಮೂರ್ಖರ ದಿನ, ವಾರ್ಷಿಕ ಬ್ಯಾಂಕ್ ಲೆಕ್ಕ ಪತ್ರ ಆರಂಭ ದಿನ
- ಏಪ್ರಿಲ್ ೭: ವಿಶ್ವ ಆರೋಗ್ಯ ದಿನ
- ಏಪ್ರಿಲ್ ೮: ಹಿಂದೂ ಧರ್ಮದಲ್ಲಿ ರಾಮ ನವಮಿ ಹಬ್ಬ ಆಚರಣೆ
- ಏಪ್ರಿಲ್ ೧೨: ಕನ್ನಡ ಚಿತ್ರರಂಗದ ಮೇರುನಟ ಡಾ.ರಾಜ್ಕುಮಾರ್ ನಿಧನ, ವಿಶ್ವ ಆಕಾಶಯಾನ ದಿನ.
- ಏಪ್ರಿಲ್ ೧೩: ಜೈನ ಧರ್ಮದಲ್ಲಿ ಮಹಾವೀರ ಜಯಂತಿ, ಜಲಿಯನ್ ವಾಲಾಬಾಗ್ ದಿನ.
- ಏಪ್ರಿಲ್ ೧೪: ಭಾರತದ ಸಂವಿಧಾನದ ಪಿತಾಮಹ ಅಂಬೇಡ್ಕರ್ (ಚಿತ್ರಿತ) ಜಯಂತಿ.
- ಏಪ್ರಿಲ್ ೧೮: ವಿಶ್ವ ಪರಂಪರೆಯ ದಿನ.
- ಏಪ್ರಿಲ್ ೨೨: ಭೂಮಿ ದಿನ.
- ಏಪ್ರಿಲ್ ೨೩: ವಿಶ್ವ ಪುಸ್ತಕ ದಿನ.
- ಏಪ್ರಿಲ್ ೨೪: ಡಾ.ರಾಜ್ಕುಮಾರ್ ಜನ್ಮದಿನಾಚರಣೆ, ಮಾನವ ಏಕತಾ ದಿನ
ಮೇ:
- ಮೇ ೧: ಕಾರ್ಮಿಕರ ದಿನಾಚರಣೆ.
- ಮೇ ೩: ಪತ್ರಿಕಾ ಸ್ವಾತಂತ್ರ್ಯ ದಿನ
- ಮೇ ೮: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆ ದಿನಾಚರಣೆ.
- ಮೇ ೯: ಅ.ನ.ಕೃಷ್ಣರಾಯರ ಜನ್ಮದಿನ, ೧೯೪೫ರಲ್ಲಿ ಎರಡನೇ ಮಹಾಯುದ್ಧ ಕೊನೆಗೊಂಡ ದಿನ.
- ಮೇ ೧೦: ಭಾರತದ ಮೊದಲನೇ ಸ್ವಾತಂತ್ರ್ಯ ಸಂಗ್ರಾಮದ ೧೫೧ನೇ ವಾರ್ಷಿಕೋತ್ಸವ.
- ಮೇ ೧೨: ವಿಶ್ವದ ಹಲವೆಡೆ ತಾಯಂದಿರ ದಿನ.
- ಮೇ ೧೩: ತತ್ವಜ್ಞಾನಿಗಳ ದಿನ, ರಾಷ್ಟ್ರೀಯ ಭಾವೈಕ್ಯತೆಯ ದಿನ
- ಮೇ ೧೪: ಗೌತಮ ಬುದ್ಧನ (ಚಿತ್ರಿತ) ಜನ್ಮದಿನೋತ್ಸವವಾದ ಬುದ್ಧ ಪೂರ್ಣಿಮ.
- ಮೇ ೧೫: ಅಂತಾರಾಷ್ಟ್ರೀಯ ಕುಟುಂಬ ದಿನ
- ಮೇ ೧೭: ವಿಶ್ವ ದೂರಸಂಪರ್ಕ ದಿನ
- ಮೇ ೨೧: ಭಯೋತ್ಪಾದನೆ ವಿರೋಧಿ ದಿನ
- ಮೇ ೨೪: ಕಾಮನ್ ವೆಲ್ತ್ ದಿನ
- ಮೇ ೨೯: ೧೯೫೩ರಲ್ಲಿ ಎಡ್ಮಂಡ್ ಹಿಲರಿ ಮತ್ತು ತೇನ್ಸಿಂಗ್ ನೋರ್ಗೆಯವರಿಂದ ಮೌಂಟ್ ಎವರೆಸ್ಟ್ ಪರ್ವತದ ಮೊದಲ ಆರೋಹಣ - ಮೌಂಟ್ ಎವರೆಸ್ಟ್ ದಿನ
- ಮೇ ೩೦: ಫ್ರಾನ್ಸ್ ದೇಶದ ನಾಯಕಿ ಜೋನ್ ಆಫ್ ಆರ್ಕ್ ದಹನದ ಆಚರಣೆ.
- ಮೇ ೩೧: ವಿಶ್ವ ತಂಬಾಕುರಹಿತ ದಿನ
- ಜೂನ್ ೧: ವಿಶ್ವ ಹಾಲು ದಿನ
- ಜೂನ್ ೩: ವಿಶ್ವ ಬೈಸಿಕಲ್ ದಿನ
- ಜೂನ್ ೫: ವಿಶ್ವ ಪರಿಸರ ದಿನ, ಕಬೀರ್ ಜಯಂತಿ
- ಜೂನ್ ೭: ವಿಶ್ವ ಸಾಗರ ದಿನ
- ಜೂನ್ ೧೨: ಬಾಲ ಕಾರ್ಮಿಕರ ವಿರುದ್ಧ ವಿಶ್ವ ದಿನ.
- ಜೂನ್ ೧೨: ಫಿಲಿಪ್ಪೀನ್ಸ್ ದೇಶದ ಸ್ವಾತಂತ್ರ್ಯ ದಿನಾಚರಣೆ.
- ಜೂನ್ ೧೫: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಸ್ಥಾಪನೆಯ ವಾರ್ಷಿಕೋತ್ಸವ.
- ಜೂನ್ ೧೮: ಗೋವಾ ವಿಮೋಚನೆ ದಿನ, ವಿಶ್ವ ತಂದೆಯರ ದಿನ
- ಜೂನ್ ೨೦: ವಿಶ್ವ ನಿರಾಶ್ರಿತರ ದಿನ .
- ಜೂನ್ ೨೧: ಅಂತಾರಾಷ್ಟ್ರೀಯ ಯೋಗ ದಿನ , ವಿಶ್ವ ಸಂಗೀತ ದಿನ
- ಜೂನ್ ೨೬: ವಿಶ್ವ ಮಾದಕ ವಸ್ತು ನಿರ್ಮೂಲನಾ ದಿನ, ತುರ್ತು ಪರಿಸ್ಥಿತಿ ವಿರೋಧಿ ದಿನ
- ಜೂನ್ ೨೭: ವಿಶ್ವ ಮಧುಮೇಹ ದಿನ (ಚಿತ್ರಿತ)
- ಜೂನ್ ೨೮: ಬಡತನ ದಿನ
- ಜೂನ್ ೨೯: ಬಕ್ರಿದ್ ಹಬ್ಬ
ಜುಲೈ:
- ಜುಲೈ ೧: ವೈದ್ಯರ ದಿನ
- ಜುಲೈ ೨: ೧೯೭೬ರಲ್ಲಿ ವಿಯೆಟ್ನಾಮ್ ದೇಶದ ಉತ್ತರ ಮತ್ತು ದಕ್ಷಿಣ ಭಾಗಗಳ ಏಕೀಕರಣ.
- ಜುಲೈ ೪: ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ.
- ಜುಲೈ ೧೧:ವಿಶ್ವ ಜನಸಂಖ್ಯಾ ದಿನ
- ಜುಲೈ ೧೨: ಕನ್ನಡ ಕುಲ ಪುರೋಹಿತ ಹಾಗೂ ಕನ್ನಡ ಏಕೀಕರಣದ ರೂವಾರಿ ಆಲೂರು ವೆಂಕಟರಾಯರ ಜನುಮ ದಿನ.
- ಜುಲೈ ೧೩: ರೋಮ್ ಗಣರಾಜ್ಯದ ಅಧಿಪತಿ ಜೂಲಿಯಸ್ ಸೀಜರ್ ಹುಟ್ಟಿದ ದಿನ
- ಜುಲೈ ೧೪: ಫ್ರೆಂಚ್ ಕ್ರಾಂತಿಯ ವಾರ್ಷಿಕೋತ್ಸವದ ಆಚರಣೆಯಾದ ಬ್ಯಾಸ್ಟಿಲ್ ದಿನಾಚರಣೆ.
- ಜುಲೈ ೧೬: ವಿಶ್ವ ಹಾವು ದಿನ
- ಜುಲೈ ೧೭: ಕನ್ನಡದ ಹೆಸರಾಂತ ನಟಿಯಾಗಿದ್ದ ದಿ॥ಕಲ್ಪನಾರ ಜನುಮ ದಿನ.
- ಜುಲೈ ೧೯: ಪ್ರಮುಖವಾಗಿ ಹಿಂದೂಗಳು ಗುರುಗಳಿಗೆ ವಂದಿಸುವ ದಿನ ಗುರು ಪೂರ್ಣಿಮಾ
- ಜುಲೈ ೨೦: ಅಪೋಲೊ ೧೧ರ ಗಗನಯಾನಿಗಳು (ಚಿತ್ರಿತ) ನೀಲ್ ಆರ್ಮ್ಸ್ಟ್ರಾಂಗ್ ಮತ್ತು ಬಜ್ ಆಲ್ಡ್ರಿನ್ ಚಂದ್ರನ ಮೇಲೆ ಕಾಲಿಟ್ಟ ಮೊದಲ ಮಾನವರಾದರು.
- ಜುಲೈ ೨೪: ಎಕ್ವಡಾರ್ ಮತ್ತು ವೆನೆಜುವೆಲಾ ದೇಶಗಳಲ್ಲಿ ಸಿಮೋನ್ ಬೊಲಿವಾರ್ ದಿನಾಚರಣೆ.
- ಜುಲೈ ೨೬: ಕಾರ್ಗಿಲ್ ವಿಜಯ ದಿನ
- ಜುಲೈ ೨೮: ೧೯೧೪ರಲ್ಲಿ ಆಸ್ಟ್ರಿಯ-ಹಂಗೆರಿಯು ಸೆರ್ಬಿಯಾದ ಮೇಲೆ ಯುದ್ಧವನ್ನು ಘೋಷಿಸಿ ಮೊದಲನೇ ವಿಶ್ವಯುದ್ಧ ಪ್ರಾರಂಭವಾಯಿತು.
- ಜುಲೈ ೨೯: ಆಧುನಿಕ ರಂಗಭೂಮಿಯ ಹರಿಕಾರ ಎಂದು ಪ್ರಸಿದ್ದಿಯಾಗಿದ್ದ ಟಿ.ಪಿ.ಕೈಲಾಸಂ ಜನುಮ ದಿನ.
- ಜುಲೈ ೨೯: ೧೯೪೭ರಲ್ಲಿ ಪ್ರಪಂಚದ ಮೊದಲ ಸಾಮಾನ್ಯ ಬಳಕೆಯ ಗಣಕಯಂತ್ರವಾದ ಎನಿಯಾಕ್(ENIAC) ಅಮೇರಿಕ ದೇಶದಲ್ಲಿ ಚಾಲನೆಗೆ ಬಂದಿತು.
- ಆಗಸ್ಟ್ ೧: ೧೯೦೭ರಲ್ಲಿ ಇಂಗ್ಲೆಂಡ್ನಲ್ಲಿ ರಾಬರ್ಟ್ ಬಾಡೆನ್-ಪೊವೆಲ್ ಸ್ಕೌಟ್ ಶಿಬಿರವನ್ನು ಪ್ರಾರಂಭಿಸಿ ಸ್ಕೌಟ್ ಚಳುವಳಿಗೆ ನಾಂದಿ ಹಾಕಿದರು, ವಿಶ್ವ ಎದೆಹಾಲು ದಿನ.
- ಆಗಸ್ಟ್ ೨: ಕ್ರಿ.ಪೂ. ೨೧೬ರಲ್ಲಿ ಹ್ಯಾನಿಬಾಲ್ ನೇತೃತ್ವದ ಕಾರ್ಥೇಜ್ನ ಸೇನೆ ಎರಡನೇ ಪ್ಯೂನಿಕ್ ಯುದ್ಧದಲ್ಲಿ ರೋಮ್ ಗಣರಾಜ್ಯವನ್ನು ಸೋಲಿಸಿತು.
- ಆಗಸ್ಟ್ ೬: ೧೯೪೫ರಲ್ಲಿ ಎರಡನೇ ವಿಶ್ವಯುದ್ಧದಲ್ಲಿ ಅಮೇರಿಕ ದೇಶದ ವಾಯುಸೇನೆಯು ಜಪಾನಿನ ಹಿರೋಶಿಮ ನಗರದ ಮೇಲೆ ಮೊದಲ ಅಣು ಬಾಂಬ್ ಉಪಯೋಗಿಸಿತು (ಚಿತ್ರಿತ).
- ಆಗಸ್ಟ್ ೮: ಸ್ನೇಹ ದಿನಾಚರಣೆ
- ಆಗಸ್ಟ್ ೯: ಸಂಸ್ಕೃತ ದಿನ, ನಾಗಾಸಾಕಿ ದಿನ, ಕ್ವಿಟ್ ಇಂಡಿಯಾ ದಿನ, ೧೯೭೪ರಲ್ಲಿ ಅಮೇರಿಕ ದೇಶದ ರಾಷ್ಟ್ರಪತಿಯಾಗಿದ್ದ ರಿಚರ್ಡ್ ನಿಕ್ಸನ್ ವಾಟರ್ಗೇಟ್ ಘಟನೆಯಿಂದ ರಾಜೀನಾಮೆ ನೀಡಿದರು.
- ಆಗಸ್ಟ್ ೯: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ದಿ॥ವಿನಾಯಕ ಕೃಷ್ಣ ಗೋಕಾಕ್ ರವರ ಜನ್ಮ ದಿನ.
- ಆಗಸ್ಟ್ ೧೨: ವಿಶ್ವ ಆನೆಗಳ ದಿನ
- ಆಗಸ್ಟ್ ೧೩: ವಿಶ್ವ ಎಡಗೈಯವರ ದಿನ
- ಆಗಸ್ಟ್ ೧೫: ೧೯೪೭ರಲ್ಲಿ ಬ್ರಿಟೀಷ್ ರಾಜ್ಯ ಇಬ್ಬಾಗಗೊಂಡು ಭಾರತವು ಸ್ವಾತಂತ್ರ್ಯ ಪಡೆಯಿತು.
- ಆಗಸ್ಟ್ ೧೯: ವಿಶ್ವ ಛಾಯಾಗ್ರಹಣ ದಿನ
- ಆಗಸ್ಟ್ ೨೨: ೧೭೯೧ರಲ್ಲಿ ಹೈತಿಯಲ್ಲಿ ಗುಲಾಮರು ದಂಗೆಯೆದ್ದು ಹೈತಿ ಕ್ರಾಂತಿಯ ಪ್ರಾರಂಭ.
- ಆಗಸ್ಟ್ ೨೪: ಹಿಂದುಗಳಿಗೆ ವರಮಹಾಲಕ್ಷ್ಮಿ ವ್ರತ
- ಆಗಸ್ಟ್ ೨೪: ಓಣಂ
- ಆಗಸ್ಟ್ ೨೮: ನಾಗರೀಕ ಹಕ್ಕು ದಿನ
- ಆಗಸ್ಟ್ ೨೯: ರಾಷ್ಟ್ರೀಯ ಕ್ರೀಡಾ ದಿನ
- ಸೆಪ್ಟೆಂಬರ್ ೪ : ಹೊನ್ನಾವರದಲ್ಲಿ ೧೯೪೮`ರಲ್ಲಿ ಅನಂತ್ ನಾಗ್ ಜನನ.
- ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.
- ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.
- ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.
- ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.
- ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ.
- ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟ ಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.
- ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ
- ಸೆಪ್ಟೆಂಬರ್ ೧೮ : ೧೯೫೦ರಲ್ಲಿ ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಜನನ, ೧೯೬೮ರಲ್ಲಿ ಕುಂದಾಪುರದಲ್ಲಿ ಉಪೇಂದ್ರ ಜನನ.
- ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.
- ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.
- ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ 'ರೋಷ್ ಹಶಾನ್ನ' ಹಬ್ಬ.
- ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ
- ಅಕ್ಟೋಬರ್ ೧ : ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ ಸಂಗೀತ ದಿನ, ರಾಷ್ಟ್ರೀಯ ಸ್ವಯಂಪ್ರೇರಿತ ರಕ್ತ ದಾನ ದಿನ.
- ಅಕ್ಟೋಬರ್ ೨ : ವಿಶ್ವ ಸಸ್ಯಾಹಾರಿಗಳ ದಿನ, ಗಾಂಧೀಜಿಯವರ ಜನ್ಮದಿನಾಚರಣೆ.
- ಅಕ್ಟೋಬರ್ ೨ : ಲಾಲ್ ಬಹಾದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆ.
- ಅಕ್ಟೋಬರ್ ೩ : ೧೯೯೦ರಲ್ಲಿ ಜರ್ಮನಿ ದೇಶದ ಪುನರೇಕೀಕರಣ. ವಿಶ್ವ ಪ್ರಾಕೃತಿಕ ದಿನ
- ಅಕ್ಟೋಬರ್ ೪ : ೧೮೮೪ರಲ್ಲಿ ಹುಯಿಲಗೋಳ ನಾರಾಯಣರಾಯರ ಜನನ, ೧೯೫೭ರಲ್ಲಿ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೧ ಭೂಮಿಯನ್ನು ಪ್ರದಕ್ಷಿಣೆ ಮಾಡಿದ ಮೊದಲ ಕೃತಕ ಉಪಗ್ರಹವಾಯಿತು, ವಿಶ್ವ ಪ್ರಾಣಿದಯಾ/ಪ್ರಾಣಿ ಕ್ಷೇಮಾಭಿವೃದ್ಧಿ ದಿನ
- ಅಕ್ಟೋಬರ್ ೫ : ವಿಶ್ವ ಹವ್ಯಾಸ ದಿನ
- ಅಕ್ಟೋಬರ್ ೬ : ೧೯೭೩ರಲ್ಲಿ ಈಜಿಪ್ಟ್ನ ಸೇನೆ ಇಸ್ರೇಲ್ ದೇಶವನ್ನು ಪ್ರವೇಶಿಸಿ ಯೊಮ್ ಕಿಪ್ಪೂರ್ ಯುದ್ಧ ಪ್ರಾರಂಭವಾಯಿತು.
- ಅಕ್ಟೋಬರ್ ೮ : ವಾಯುಪಡೆ ದಿನ
- ಅಕ್ಟೋಬರ್ ೯ : ವಿಶ್ವ ಅಂಚೆ ದಿನ
- ಅಕ್ಟೋಬರ್ ೧೦: ೧೯೦೨ರಲ್ಲಿ ಶಿವರಾಮ ಕಾರಂತರ ಜನನ. (ಚಿತ್ರಿತ), ವಿಶ್ವ ಮರಣದಂಡನೆ ವಿರೋಧಿ ದಿನ
- ಅಕ್ಟೋಬರ್ ೧೨ : ೧೪೯೨ರಲ್ಲಿ ಕ್ರಿಸ್ಟೊಫರ್ ಕೊಲಂಬಸ್ ಕೆರಿಬಿಯನ್ ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು.
- ಅಕ್ಟೋಬರ್ ೧೪ : ವಿಶ್ವ ಗುಣಮಟ್ಟ ದಿನ
- ಅಕ್ಟೋಬರ್ ೧೬ : ವಿಶ್ವ ಆಹಾರ ದಿನ
- ಅಕ್ಟೋಬರ್ ೧೮ : ೧೯೨೨ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್ (ಬಿಬಿಸಿ)ಯ ಸ್ಥಾಪನೆ.
- ಅಕ್ಟೋಬರ್ ೧೯ : ನೊಬೆಲ್ ಪ್ರಶಸ್ತಿ ವಿಜೇತ ಡಾ. ಸುಬ್ರಮಣ್ಯಂ ಚಂದ್ರಶೇಖರ್ (1910-1995) ಅವರ ಜನ್ಮದಿನ.
- ಅಕ್ಟೋಬರ್ ೨೧ : ಪೋಲಿಸ್ ಹುತಾತ್ಮರ ದಿನ.
- ಅಕ್ಟೋಬರ್ ೨೩ : ಕಿತ್ತೂರು ರಾಣಿ ಚೆನ್ನಮ್ಮ ಜನ್ಮ ದಿನ.
- ಅಕ್ಟೋಬರ್ ೨೪ : ೧೯೪೫ರಲ್ಲಿ ಸಂಯುಕ್ತ ರಾಷ್ಟ್ರ ಸಂಸ್ಥೆ(ವಿಶ್ವಸಂಸ್ಥೆ)ಯ ಸ್ಥಾಪನೆ.
- ಅಕ್ಟೋಬರ್ ೨೯ : ೧೯೩೬ರಲ್ಲಿ ಕವಿ ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ ಜನನ, ಟರ್ಕಿ ಗಣರಾಜ್ಯವಾಗಿ ೧೯೨೩ರಲ್ಲಿ ಮುಸ್ತಫ ಕೆಮಲ್ ಅಟಾತುರ್ಕ್ ಅದರ ಮೊದಲ ರಾಷ್ಟ್ರಪತಿಯಾದರು.
- ಅಕ್ಟೋಬರ್ ೩೦ : ವಿಶ್ವ ಉಳಿತಾಯ / ಮಿತವ್ಯಯ ದಿನ
- ಅಕ್ಟೋಬರ್ ೩೧ : ಸರ್ದಾರ್ ವಲ್ಲಭಭಾಯ್ ಪಟೇಲ್ ಜನ್ಮದಿನ, ೧೯೮೪ರಲ್ಲಿ ಇಂದಿರಾ ಗಾಂಧಿಯ ಹತ್ಯೆ.
- ನವೆಂಬರ್ ೧ : ೧೯೫೬ರಲ್ಲಿ ಕರ್ನಾಟಕ ರಾಜ್ಯದ ಸ್ಥಾಪನೆಯ ಆಚರಣೆ: ಕರ್ನಾಟಕ ರಾಜ್ಯೋತ್ಸವ.
- ನವೆಂಬರ್ ೩ : ೧೯೫೭ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ ಲೈಕಾ ನಾಯಿಯನ್ನು ಹೊತ್ತ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೨ ಗಗನನೌಕೆಯ ಉಡಾವಣೆ.
- ನವೆಂಬರ್ ೭ : ೧೯೧೭ರಲ್ಲಿ ವ್ಲಾಡಿಮಿರ್ ಲೆನಿನ್ ನೇತೃತ್ವದಲ್ಲಿ ರಷ್ಯಾದ ಕ್ರಾಂತಿಯ ಪ್ರಾರಂಭ.
- ನವೆಂಬರ್ ೯ : ಚಲನಚಿತ್ರ ಮತ್ತು ರಂಗಭೂಮಿ ನಟ ಶಂಕರನಾಗ್ ಅವರ ಜನ್ಮದಿನ.
- ನವೆಂಬರ್ ೧೪ : ಮಕ್ಕಳ ದಿನಾಚರಣೆ:(ಜವಾಹರಲಾಲ್ ನೆಹರು ಜನ್ಮದಿನ).
- ನವೆಂಬರ್ ೧೫ : ೧೯೦೭ರಲ್ಲಿ ಹಚ್ಚೇವು ಕನ್ನಡದ ದೀಪ" ಗೀತೆಯನ್ನು ರಚಿಸಿದ ಡಾ. ದುಂಡಪ್ಪ ಸಿದ್ದಪ್ಪ ಕರ್ಕಿ ಜನನ
- ನವೆಂಬರ್ ೧೮ :
** ಭಾರತೀಯ ಗಡಿ ಸೇನಾ ದಿನ
** 1493: ಕ್ರಿಸ್ಟೋಫರ್ ಕೊಲಂಬಸ್ ಪೋರ್ಟೊರಿಕೊ ದ್ವೀಪವನ್ನು ಕಂಡುಹಿಡಿದ ಮೊದಲಿಗ
** 1901: ಚಲನಚಿತ್ರ ನಿರ್ಮಾಪಕ
** ನಿರ್ದೇಶಕ ಮತ್ತು ನಟ ವಿ. ಶಾಂತಾರಾಮ್ ಅವರ ಜನನ (ಜನನ 1990)
** 1945: ಶ್ರೀಲಂಕಾದ ಆರನೇ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಜನನ
** 1962: ಜಲಜನಕದ ಪರಮಾಣು ತ್ರಿಜ್ಯವನ್ನು ಕಂಡುಹಿಡಿದ ಪ್ರಸಿದ್ಧ ವಿಜ್ಞಾನಿ ನೊಬೆಲ್ ಪ್ರಶಸ್ತಿ ವಿಜೇತ ನೀಲ್ಸ್ ಬೋರ್ (ಜನನ 1885) ಅವರ ಸಾವು
** 1963: ಮೊದಲ ಪುಶ್ ಬಟನ್ ದೂರವಾಣಿ ಸೇವೆಗಳು ಪ್ರಾರಂಭವಾದವು.
1972: ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಅಂಗೀಕರಿಸಲಾಯಿತು. 1982: ಬಹುಭಾಷಾ, ರಾಷ್ಟ್ರೀಯವಾದಿ, ಬರಹಗಾರ ಮತ್ತು ಪತ್ರಕರ್ತ ಪುರಿಪಂಡ ಅಪ್ಪಲಸ್ವಾಮಿ ನಿಧನ (ಜನನ 1904).
- ನವೆಂಬರ್ ೧೯ : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನ, ಇಂದಿರಾ ಗಾಂಧಿ ಜನ್ಮ ದಿನ
- ನವೆಂಬರ್ ೨೧ : ೧೯೬೨ರಲ್ಲಿ ಭಾರತ-ಚೀನ ಯುದ್ಧದ ಅಂತ್ಯ.
- ನವೆಂಬರ್ ೨೨ : ಕಾನೂನು ಸಾಕ್ಷರತಾ ದಿನ
- ನವೆಂಬರ್ ೨೪ : ೧೮೫೯ರಲ್ಲಿ ಜೀವವಿಕಾಸವಾದವನ್ನು ಘೋಷಿಸಿದ ಚಾರ್ಲ್ಸ್ ಡಾರ್ವಿನ್ ಅವರ "ದ ಆರಿಜಿನ್ ಆಫ್ ಸ್ಪೀಶೀಸ್" ಪುಸ್ತಕದ ಪ್ರಕಟಣೆ.
- ನವೆಂಬರ್ ೨೫ : ೧೯೯೨ರಲ್ಲಿ ಚೆಕೊಸ್ಲೊವೇಕಿಯಾ ಒಡೆದು ಚೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ ದೇಶಗಳಾಗಲು ನಿರ್ಧರಿಸಿತು.
- ನವೆಂಬರ್ ೨೫ : ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ
- ನವೆಂಬರ್ ೨೬ : ಕನಕದಾಸ ಜಯಂತಿ (ಚಿತ್ರಿತ)
- ನವೆಂಬರ್ ೨೯ : ಅಂತಾರಾಷ್ಟ್ರೀಯ ಸಾಮರಸ್ಯ ದಿನ
- ನವೆಂಬರ್ ೩೦ : ರಾಷ್ಟ್ರೀಯ ವಿಪತ್ತು ನಿಗ್ರಹ ದಿನ
- ಡಿಸೆಂಬರ್ ೧ : ೧೯೩೩ - ಪ್ರಸಿದ್ಧ ಸಿನೆಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಜನನ.
- ಡಿಸೆಂಬರ್ ೧ : ೧೯೦೯ - ಜಿ.ಪಿ.ರಾಜರತ್ನಂ ರಾಮನಗರದಲ್ಲಿ ಜನನ.
- ಡಿಸೆಂಬರ್ ೧ : ೧೨೪೦ - ಬಾಟು ಖಾನ್ನ ನೇತೃತ್ವದ ಮಂಗೋಲರು ಕಿಯೇವ್ ನಗರವನ್ನು ವಶಪಡಿಸಿಕೊಂಡರು.
- ಡಿಸೆಂಬರ್ ೧ : ೧೫೩೪ - ಎಕ್ವಡಾರ್ನ ರಾಜಧಾನಿ ಕ್ವಿಟೊ ನಗರದ ಸ್ಥಾಪನೆ.
- ಡಿಸೆಂಬರ್ : ೧೭೬೮ - ಎನ್ಸೈಕ್ಲೊಪೀಡಿಯ ಬ್ರಿಟಾನಿಕ (ಚಿತ್ರಿತ) ವಿಶ್ವಕೋಶದ ಮೊದಲ ಆವೃತ್ತಿ ಪ್ರಕಟಣೆ.
- ಡಿಸೆಂಬರ್ ೧ : ೧೮೬೫ - ಅಮೇರಿಕ ದೇಶದಲ್ಲಿ ಗುಲಾಮಗಿರಿಯನ ನಿಷೇಧ ಮಾಡುವ ಸಂವಿಧಾನಿಕ ತಿದ್ದುಪಡಿ ಜಾರಿಗೆ.
- ಡಿಸೆಂಬರ್ ೬ : ೧೯೧೭ - ಫಿನ್ಲ್ಯಾಂಡ್ ರಷ್ಯಾದಿಂದ ಸ್ವಾತಂತ್ರ್ಯ ಘೋಷಣೆ.
- ಡಿಸೆಂಬರ್ ೬ : ೧೯೯೨ - ಹಿಂದೂ ಕರಸೇವಕರು ಅಯೋಧ್ಯೆಯಲ್ಲಿನ ಬಾಬ್ರಿ ಮಸೀದಿಯನ್ನು ಕೆಡವಿದರು. ಡಾ. ಬಿ.ಆರ್.ಅಂಬೇಡ್ಕರ್ ನಿಧನದ ದಿನ.
- ಡಿಸೆಂಬರ್ ೬ : ೧೮೨೩ - ಜರ್ಮನಿಯ ವಿದ್ವಾಂಸ ಮ್ಯಾಕ್ಸ್ ಮುಲ್ಲರ್ ಜನನ.
- ಡಿಸೆಂಬರ್ ೨೧ : ೧೯೩೨ - ಯು. ಆರ್. ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ 'ಮೇಳಿಗೆ' ಯಲ್ಲಿ ಜನನ.
- ಡಿಸೆಂಬರ್ ೨೯ : ವಿಶ್ವಮಾನವ ಸಂದೇಶ ನೀಡಿದ ರಾಷ್ಟ್ರಕವಿ ಕುವೆಂಪು ೧೯೦೪ರಂದು ಶಿವಮೊಗ್ಗದ ಹಿರೇಕೂಡಿಗೆಯಲ್ಲಿ ಜನನ
೧ – ೨ – ೩ – ೪ – ೫ – ೬ – ೭ – ೮ – ೯ – ೧೦ – ೧೧ – ೧೨ – ೧೩ – ೧೪ – ೧೫ – ೧೬ – ೧೭ – ೧೮ – ೧೯ – ೨೦ – ೨೧ – ೨೨ – ೨೩ – ೨೪ – ೨೫ – ೨೬ – ೨೭ – ೨೮ – ೨೯ – ೩೦ – ೩೧