ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ

ವಿಕಿಪೀಡಿಯ ಇಂದ
(ಯುನೆಸ್ಕೊ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗವು (ಯುನೆಸ್ಕೋ) ೧೬ ನವಂಬರ್ ೧೯೪೫ರಂದು ಸ್ಥಾಪಿಸಲಾದ ವಿಶ್ವಸಂಸ್ಥೆಯ ಒಂದು ವಿಶಿಷ್ಟವಾದ ಸಂಸ್ಥೆ. ವಿಶ್ವಸಂಸ್ಥೆಯ ಸ್ಥಾಪನಶಾಸನದಲ್ಲಿ ಸೂಚಿಸಲಾದ ನ್ಯಾಯ, ನ್ಯಾಯ ಪರಿಪಾಲನೆ, ಮತ್ತು ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯಗಳಿಗಾಗಿ ವಿಶ್ವವ್ಯಾಪಿ ಗೌರವವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಶಿಕ್ಷಣ, ವಿಜ್ಞಾನ, ಮತ್ತು ಸಂಸ್ಕೃತಿಯ ಮೂಲಕ ಅಂತರರಾಷ್ಟ್ರೀಯ ಸಹಯೋಗಕ್ಕೆ ಪ್ರೋತ್ಸಾಹ ನೀಡಿ ಶಾಂತಿ ಮತ್ತು ಭದ್ರತೆಗೆ ನೆರವಾಗುವುದು ಅದರ ಅಧಿಕೃತ ಉದ್ದೇಶವಾಗಿದೆ. ಅದು ರಾಷ್ಟ್ರಗಳ ಒಕ್ಕೂಟಬೌದ್ಧಿಕ ಸಹಕಾರದ ಅಂತರರಾಷ್ಟ್ರೀಯ ಆಯೋಗದ ಉತ್ತರಾಧಿಕಾರಿಯಾಗಿದೆ.