ಮುಖ್ಯ ಪುಟ
ಗೋಚರ
ವಿಶೇಷ ಲೇಖನ
ಕನ್ನಡ ಅಕ್ಷರಮಾಲೆಯು ಬ್ರಾಹ್ಮಿ ಲಿಪಿಯಿಂದ ಬೆಳೆದು ಬಂದಿದೆ. ಇದನ್ನು ಸ್ವರಗಳು, ಅನುಸ್ವಾರ, ವಿಸರ್ಗ, ವ್ಯಂಜನಗಳು, ಅವರ್ಗೀಯ ವ್ಯಂಜನಗಳೆಂದು ವಿಭಾಗಿಸಲಾಗಿದೆ. ಕನ್ನಡ ಅಕ್ಷರಮಾಲೆಯನ್ನು ಕನ್ನಡ ವರ್ಣಮಾಲೆಯೆಂದು ಕರೆಯಲಾಗುತ್ತದೆ. ನಾವು ಮಾತನಾಡುವ ಮಾತುಗಳೆಲ್ಲ ವಾಕ್ಯ ವಾಕ್ಯಗಳಾಗಿರುತ್ತವೆ. ವಾಕ್ಯಗಳು ಪದಗಳಿಂದ ಕೂಡಿರುತ್ತವೆ. ಪದಗಳು ಅಕ್ಷರಗಳಿಂದ ಕೂಡಿರುತ್ತವೆ. ಉದಾಹರಣೆಗೆ, ನಾನು ಶಾಲೆಗೆ ಹೋಗಿ ಬರುವೆನು. ಈ ವಾಕ್ಯದಲ್ಲಿ ನಾನು, ಶಾಲೆಗೆ, ಹೋಗಿ, ಬರುವೆನು, ಹೀಗೆ ನಾಲ್ಕು ಪದಗಳಿವೆ. ಒಂದೊಂದು ಪದದಲ್ಲೂ ಹಲವು ಅಕ್ಷರಗಳಿವೆ. ನಾನು ಎಂಬ ಪದದಲ್ಲಿ ನ್+ಆ+ನ್+ಉ ಎಂಬ ಧ್ವನಿಮಾ ವ್ಯವಸ್ಥೆಯ ಬೇರೆ ಬೇರೆ ಅಕ್ಷರಗಳಿವೆ. ಹೀಗೆ ಕನ್ನಡ ಭಾಷೆಯನ್ನು ಮಾತನಾಡುವಾಗ ಬಳಸುವ ಅಕ್ಷರಗಳ ಮಾಲೆಗೆ ವರ್ಣಮಾಲೆ ಅಥವಾ ಅಕ್ಷರಮಾಲೆ ಎಂದು ಕರೆಯುತ್ತೇವೆ.
ನಮ್ಮ ಹೊಸ ಲೇಖನಗಳಿಂದ...
ಕನ್ನಡ ವಿಶ್ವಕೋಶದ ಸದಸ್ಯರಿಂದ ರಚಿಸಲ್ಪಟ್ಟ ಹೊಸ ಲೇಖನಗಳಿಂದ ಕೆಲವು ಸ್ವಾರಸ್ಯಕರ ಸಂಗತಿಗಳು:
- ವಂಶವೃಕ್ಷ_(ಕಾದಂಬರಿ) ೧೯೬೫ರಲ್ಲಿ ಬಿಡುಗಡೆಯಾದ ಡಾ. ಎಸ್.ಎಲ್. ಭೈರಪ್ಪನವರ ಕನ್ನಡ ಕಾದಂಬರಿ. ಸಮಾಜದ ಕಟ್ಟು ಪಾಡನ್ನು ಮುರಿದು ಹೊಸ ಜೀವನಕ್ಕೆ ನಾಂದಿ ಹಾಡುವ ಸಶಕ್ತ ಪಾತ್ರಗಳಿಂದ, ಖ್ಯಾತಿ ಪಡೆದ ಕೃತಿ.
- ಕಪ್ಪು ಶಿಲೀಂಧ್ರ ಮ್ಯೂಕೋರ್ಮೈಕೋಸಿಸ್ (ಕಪ್ಪು ಶಿಲೀಂದ್ರ) ಎನ್ನುವುದು ಶಿಲೀಂದ್ರಗಳಿಂದ ಉಂಟಾಗುವ ಸೋಂಕು. ಸಾಮಾನ್ಯವಾಗಿ ಮಣ್ಣು, ಹಳೆಯ ಕಟ್ಟಡಗಳ ಮೇಲೆ ಒದ್ದೆಯಾದ ಗೋಡೆಗಳು ಇತ್ಯಾದಿಗಳಿಂದ ಈ ಸೋಂಕು ಹರಡುತ್ತದೆ.
- ಅಭಿನಂದನ್ ವರ್ಧಮಾನ್ ೨೦೧೯ರ ಫೆಬ್ರವರಿ ೨೬ರಂದು ಭಾರತೀಯ ವಾಯುಸೇನೆಯು ಬಾಲಕೋಟ್ ಭಯೋತ್ಪಾದಕ ಶಿಬಿರದ ಮೇಲೆ ನಡೆಸಿದ ವಾಯುದಾಳಿಗೆ ಪ್ರತಿಯಾಗಿ, ಭಾರತೀಯ ಸೇನಾನೆಲೆಗಳ ಮೇಲೆ ಪಾಕಿಸ್ತಾನದ ವಾಯುಸೇನೆಯು ೨೭ನೇ ಫೆಬ್ರವರಿ ೨೦೧೯ರಂದು ವಿಫಲ ದಾಳಿಯನ್ನು ನಡೆಸಿದ ಸಂದರ್ಭದಲ್ಲಿ, ಪಾಕ್ ಯುದ್ಧವಿಮಾನವನ್ನು ಅಟ್ಟಿಸಿಕೊಂಡು ಹೋಗಿ, ಪಾಕಿ ವಾಯುಸೇನೆಯ, ಅಮೇರಿಕಾ ನಿರ್ಮಿತ ಎಫ್- ೧೬ ವಿಮಾನವನ್ನು, ಮಿಗ್-೨೧ ಬೈಸನ್ ವಿಮಾನದ ಸಹಾಯದಿಂದ ಹೊಡೆದುರುಳಿಸಿದ ಸಾಹಸಿ ಸೈನಿಕ.
- ಕೊವ್ಯಾಕ್ಸಿನ್ (ಅಧೀಕೃತ ಹೆಸರು ಬಿಬಿವಿ೧೫೨) ಕೊರೊನಾ ವೈರಸ್ ಖಾಯಿಲೆಯ ಉಪಶಮನಕ್ಕಾಗಿ ನೀಡಲಾಗುವ ಒಂದು ಲಸಿಕೆ. ಇದನ್ನು, ನಿಷ್ಕ್ರಿಯಗೊಳಿಸಿದ ವೈರಸ್ಸಿನ ಸಹಾಯದಿಂದ ತಯಾರಿಸಲಾಗಿದ್ದು, ಭಾರತ್ ಬಯೋಟೆಕ್ ಸಂಸ್ಥೆಯು, ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
- ಸಿಗಡಿ ಕೃಷಿ ಯು ಮನುಷ್ಯನ ಆಹಾರಕ್ಕಾಗಿ, ಜಲಚರಗಳನ್ನು ಸಾಕುವ ಉದ್ಯಮವಾಗಿದೆ. ಸಿಗಡಿ ಕೃಷಿಯು ಆಗ್ನೇಯ ಏಷಿಯಾದಲ್ಲಿ ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ, ಇಂದು ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ.
- ವರಾಹ ಉಪನಿಷತ್ತು೧೩ ನೇ ಮತ್ತು ೧೬ ನೇ ಶತಮಾನದ ನಡುವೆ ಸಂಯೋಜಿಸಲ್ಪಟ್ಟ ಹಿಂದೂ ಧರ್ಮದ ಒಂದು ಚಿಕ್ಕ ಉಪನಿಷತ್ ಆಗಿದೆ. ಇದನ್ನು ಸಂಸ್ಕೃತದಲ್ಲಿ ರಚಿಸಲಾಗಿದೆ ಹಾಗೂ ಇದನ್ನು ಕೃಷ್ಣ ಯಜುರ್ವೇದದ ೩೨ ಉಪನಿಷತ್ತುಗಳಲ್ಲಿ ಒಂದೆಂದು ಪಟ್ಟಿ ಮಾಡಲಾಗಿದೆ ಮತ್ತು ೨೦ ಯೋಗ ಉಪನಿಷತ್ತುಗಳಲ್ಲಿ ಒಂದೆಂದು ವರ್ಗೀಕರಿಸಲಾಗಿದೆ.
ಸುದ್ದಿಯಲ್ಲಿ
- ಆಗಸ್ಟ್ ೨೮: ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಜಯ್ ಶಾ(ಚಿತ್ರಿತ) ಆಯ್ಕೆ
- ಆಗಸ್ಟ್ ೨೪: ಮೈಸೂರು ದಸರಾ- ಮೈಸೂರು ಅರಮನೆ ತಲುಪಿದ ಗಜಪಡೆ[೧]
- ಆಗಸ್ಟ್ ೨೪: ಅಂತರರಾಷ್ಟ್ರೀಯ ಮತ್ತು ದೇಶೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಶಿಖರ್ ಧವನ್[೨]
- ಆಗಸ್ಟ್ ೨೪: ಭಾರತದ ಪ್ರಧಾನಿ ಮೋದಿ ಉಕ್ರೇನ್ ಭೇಟಿ, ನಾಲ್ಕು ಒಪ್ಪಂದಗಳಿಗೆ ಸಹಿ[೩]
- ಆಗಸ್ಟ್ ೨೩: ಹಣ ದುರುಪಯೋಗ- ಅನಿಲ್ ಅಂಬಾನಿ ಮತ್ತು ಇತರ ೨೪ ಮಂದಿಗೆ ಭಾರತೀಯ ಶೇರು ಮಾರುಕಟ್ಟೆಯಿಂದ ೫ ವರ್ಷ ನಿಷೇಧ[೪]
ಈ ತಿಂಗಳ ಪ್ರಮುಖ ದಿನಗಳು
ಸೆಪ್ಟೆಂಬರ್:
- ಸೆಪ್ಟೆಂಬರ್ ೪ : ಹೊನ್ನಾವರದಲ್ಲಿ ೧೯೪೮`ರಲ್ಲಿ ಅನಂತ್ ನಾಗ್ ಜನನ.
- ಸೆಪ್ಟೆಂಬರ್ ೫ : ಭಾರತದ ರಾಷ್ಟ್ರಪತಿಯಾಗಿದ್ದ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟು ಹಬ್ಬದ ನೆನಪಿನಲ್ಲಿ ಶಿಕ್ಷಕರ ದಿನಾಚರಣೆ.
- ಸೆಪ್ಟೆಂಬರ್ ೬ : ೧೫೨೨ರಲ್ಲಿ ಫೆರ್ಡಿನೆಂಡ್ ಮೆಗಲನ್ ನೇತೃತ್ವದಲ್ಲಿ ಹೊರಟಿದ್ದ ವಿಕ್ಟೋರಿಯ ಹಡಗು ೨೬೫ ದಿನಗಳ ನಂತರ ಪ್ರಪಂಚವನ್ನು ಸುತ್ತಿ ಬಂದ ಮೊದಲ ಹಡಗಾಯಿತು.
- ಸೆಪ್ಟೆಂಬರ್ ೮ : ಯೇಸುಕ್ರಿಸ್ತನ ತಾಯಿ ಮರಿಯಾ ಮಾತೆಯ ಜನನೋತ್ಸವ.
- ಸೆಪ್ಟೆಂಬರ್ ೮ : ಪೂರ್ಣಚಂದ್ರ ತೇಜಸ್ವಿಯವರ ಹುಟ್ಟು ಹಬ್ಬ.
- ಸೆಪ್ಟೆಂಬರ್ ೧೧ : ೨೦೦೧ರಲ್ಲಿ ಅಮೇರಿಕ ದೇಶದ ನ್ಯೂ ಯಾರ್ಕ್ ನಗರದ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡಗಳ ಮೇಲೆ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟ ವಿಮಾನಗಳಿಂದ ದಾಳಿ.
- ಸೆಪ್ಟೆಂಬರ್ ೧೪ : ೧೯೫೯ರಲ್ಲಿ ಸೋವಿಯೆಟ್ ಒಕ್ಕೂಟ ಉಡಾವಣೆ ಮಾಡಿದ ಲೂನ ೨ ಗಗನನೌಕೆ ಚಂದ್ರನನ್ನು ತಲುಪಿದ ಮೊದಲ ಮಾನವ ನಿರ್ಮಿತ ವಸ್ತು ಆಯಿತು.
- ಸೆಪ್ಟೆಂಬರ್ ೧೫ : ಸರ್ ಎಂ.ವಿಶ್ವೇಶ್ವರಯ್ಯನವರ ಜನ್ಮದಿನ. ಅವರ ಹುಟ್ಟುಹಬ್ಬದ ನೆನಪಿನಲ್ಲಿ ಎಂಜಿನಿಯರುಗಳ ದಿನಾಚರಣೆ
- ಸೆಪ್ಟೆಂಬರ್ ೧೮ : ೧೯೫೦ರಲ್ಲಿ ಮೈಸೂರಿನಲ್ಲಿ ನಟ ವಿಷ್ಣುವರ್ಧನ್ ಜನನ, ೧೯೬೮ರಲ್ಲಿ ಕುಂದಾಪುರದಲ್ಲಿ ಉಪೇಂದ್ರ ಜನನ.
- ಸೆಪ್ಟೆಂಬರ್ ೨೩ : ವಿಶ್ವಸಂಸ್ಥೆಯ ಮಧ್ಯಸ್ಥಿಕೆಯಿಂದ ೧೯೬೫ರ ಭಾರತ ಪಾಕಿಸ್ತಾನದ ಯುದ್ಧದಲ್ಲಿ ಕದನ ವಿರಾಮ.
- ಸೆಪ್ಟೆಂಬರ್ ೨೮ : ಭಾರತದ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿಕಾರಿ ಭಗತ್ ಸಿಂಗ್ ಅವರ ಜನ್ಮದಿನ.
- ಸೆಪ್ಟೆಂಬರ್ ೩೦ : ಯಹೂದಿ ಧರ್ಮದಲ್ಲಿ 'ರೋಷ್ ಹಶಾನ್ನ' ಹಬ್ಬ.
- ಸೆಪ್ಟೆಂಬರ್ ೩೦ : ವಿಶ್ವ ಹೃದಯ ದಿನ
ವಿಕಿಪೀಡಿಯ ಪರ್ಯಟನೆ
ಭಾರತದ ಇತರ ಭಾಷೆಗಳಲ್ಲಿ ವಿಕಿಪೀಡಿಯ
-
- অসমীয়া (ಅಸ್ಸಾಮಿ)
- भोजपुरी (ಭೋಜಪುರಿ)
- বাংলা (ಬಂಗಾಳಿ)
- বিষ্ণুপ্রিয়া মণিপুরী (ವಿಷ್ಣುಪ್ರಿಯಾ ಮಣಿಪುರಿ)
- ދިވެހި (ದಿವೇಹಿ)
- سنڌي (ಸಿಂಧಿ)
- తెలుగు (ತೆಲುಗು)
- ગુજરાતી (ಗುಜರಾತಿ)
- हिन्दी (ಹಿಂದಿ)
- कश्मीरी (ಕಾಶ್ಮೀರಿ)
- മലയാളം (ಮಲೆಯಾಳ)
- मराठी (ಮರಾಠಿ)
- नेपाली (ನೇಪಾಳಿ)
- ଓଡ଼ିଆ (ಒರಿಯಾ)
- ਪੰਜਾਬੀ (ಪಂಜಾಬಿ)
- Pāḷi (ಪಾಳಿ)
- संस्कृत (ಸಂಸ್ಕೃತ)
- தமிழ் (ತಮಿಳು)
- دو (ಉರ್ದು)
- ತುಳು
- ಕೊಂಕಣಿ
- ᱥᱟᱱᱛᱟᱲᱤ (ಸಂತಾಲಿ)
ವಿಕಿಮೀಡಿಯ ಬಳಗದ ಇತರ ಯೋಜನೆಗಳು:
-
ಕಾಮನ್ಸ್
ಮಾಧ್ಯಮಗಳ ಸಂಗ್ರಹ -
ಮೀಡಿಯಾವಿಕಿ
ವಿಕಿ ತಂತ್ರಾಂಶ ಅಭಿವೃದ್ಧಿ -
ಮೆಟಾವಿಕಿ
ವಿಕಿಮೀಡಿಯಾ ಸಂಯೋಜನೆ -
ವಿಕಿ ಬುಕ್ಸ್
ಉಚಿತ ಪಠ್ಯಪುಸ್ತಕಗಳು ಮತ್ತು ಕೈಪಿಡಿಗಳು -
ವಿಕಿಡಾಟ
ಉಚಿತ ಜ್ಞಾನದ ಮೂಲ -
ವಿಕಿನ್ಯೂಸ್
ಉಚಿತ ವಿಷಯ ಸುದ್ದಿ -
ವಿಕಿಕೋಟ್
ಉಲ್ಲೇಖಗಳ ಸಂಗ್ರಹ -
ವಿಕಿಸೋರ್ಸ್
ಉಚಿತ-ವಿಷಯ ಗ್ರಂಥಾಲಯ -
ವಿಕಿ ಸ್ಪೀಷೀಸ್
ಜೈವಿಕ ಮಾಹಿತಿ -
ವಿಕಿವರ್ಸಿಟಿ
ಉಚಿತ ಕಲಿಕೆಯ ಪರಿಕರಗಳು -
ವಿಕಿವಾಯೇಜ್
ಉಚಿತ ಪ್ರಯಾಣ ಮಾರ್ಗದರ್ಶಿ -
ವಿಕ್ಷನರಿ
ಶಬ್ದಕೋಶ -
ವಿಕಿಫಂಕ್ಷನ್ಸ್
ಕೋಡ್ ಫಂಕ್ಷನ್ಸ್ಗಳ ಸಂಗ್ರಹ
ನಿಮಗೆ ವಿಕಿಪೀಡಿಯ ಅಥವಾ ವಿಕಿ ಬಳಗದ ಇತರ ಯೋಜನೆಗಳು ಉಪಯೋಗಕ್ಕೆ ಬಂದಲ್ಲಿ, ಈ ಪುಟಗಳನ್ನು ಆತಿಥೇಯವಹಿಸಿರುವ ವಿಕಿಮೀಡಿಯ ಫೌಂಡೇಶನ್‌ಗೆ ದೇಣಿಗೆ ನೀಡಬಹುದು. ದಯವಿಟ್ಟು ದೇಣಿಗೆ ನೀಡಲು ಈ ಪುಟಕ್ಕೆ ಭೇಟಿ ನೀಡಿ (ದೇಣಿಗೆ ಲಿಂಕ್ ವಿಕಿಮೀಡಿಯ ಫೌಂಡೇಶನ್‌ಗೆ ಹೋಗುತ್ತದೆ & ಜಾಲತಾಣ ಆಂಗ್ಲ ಭಾಷೆಯಲ್ಲಿದೆ). |