ವಿಷಯಕ್ಕೆ ಹೋಗು

ನವೆಂಬರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನವೆಂಬರ್ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಹನ್ನೊಂದನೆಯ ತಿಂಗಳು. ಈ ತಿಂಗಳಿನಲ್ಲಿ ಮೂವತ್ತು ದಿನಗಳು ಇರುತ್ತವೆ. ಹಿಂದೆ ಆಚರಣೆಯಲ್ಲಿ ಇತ್ತೆಂದು ಹೇಳಲಾದ ರೋಮನ್ ತಾರೀಕು ಪಟ್ಟಿಯಲ್ಲಿ ಇದನ್ನು ಒಂಬತ್ತನೆಯ ತಿಂಗಳೆಂದು ಕಾಣಿಸಲಾಗಿತ್ತು. ರೋಮನರ ವರ್ಷ ಮಾರ್ಚಿಯಲ್ಲಿ ಮೊದಲುಗೊಂಡು ಡಿಸೆಂಬರಿನಲ್ಲಿ ಅಂತ್ಯವಾಗುವ ಹತ್ತು ತಿಂಗಳ ಅವಧಿಯದಾಗಿದ್ದುದೇ ಇದರ ಕಾರಣ. ಕ್ರಿ.ಪೂ. 153ರಲ್ಲಿ ಇದನ್ನು ಹನ್ನೊಂದನೆಯ ತಿಂಗಳಾಗಿ ಪರಿಗಣಿಸಲಾಯಿತು. 1914ರಲ್ಲಿ ಆರಂಭವಾದ ಒಂದನೆಯ ಮಹಾಯುದ್ಧ 1918ರ ನವೆಂಬರ್ 11ರಂದು ಕೊನೆಗೊಂಡ ಕಾರಣ ಆ ತಾರೀಕಿನ ಜ್ಞಾಪಕಾರ್ಥವಾಗಿ ಪ್ರತಿವರ್ಷವೂ ಅದನ್ನು ಯುದ್ಧವಿರಾಮ ದಿವಸವಾಗಿ ಆಚರಿಸುವುದು ರೂಢಿ. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ನವೆಂಬರ್ ತಿಂಗಳ ನಾಲ್ಕನೆಯ ಗುರುವಾರವನ್ನು ರಾಷ್ಟ್ರೀಯ ರಜಾದಿವಸವಾಗಿ ಆಚರಿಸುವುದಿದೆ. ಇದೇ ಕೃತಜ್ಞತಾ ಸಮರ್ಪಣ ದಿನ


ಟೆಂಪ್ಲೇಟು:ನವೆಂಬರ್ ೨೦೨೪

ಆಚರಣೆಗಳು

[ಬದಲಾಯಿಸಿ]
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:


"https://kn.wikipedia.org/w/index.php?title=ನವೆಂಬರ್&oldid=756416" ಇಂದ ಪಡೆಯಲ್ಪಟ್ಟಿದೆ