ವಿಕಿಪೀಡಿಯ:ಅರಳಿ ಕಟ್ಟೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Community.png ಕಾರ್ಯನೀತಿಗಳ ಬಗ್ಗೆ ಚರ್ಚೆ | ತಾಂತ್ರಿಕ ದೋಷಗಳ ಬಗ್ಗೆ ಚರ್ಚೆ | ಇತರ ಚರ್ಚೆ | ತಾ೦ತ್ರಿಕ ಸುದ್ದಿ
ಅರಳಿಕಟ್ಟೆ.png

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ::

 • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

 • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
 • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು -

{{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.

 • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
 • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
 • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.
Folder.png

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦಼಼

ಇತರ ಚರ್ಚೆ: | |


Bhubaneswar Heritage Edit-a-thon 2017

Hello,
The Odia Wikimedia Community and CIS-A2K are happy to announce the "Bhubaneswar Heritage Edit-a-thon" between 12 October and 10 November 2017

This Bhubaneswar Heritage Edit-a-thon aims to create, expand, and improve articles related to monuments in the Indian city of Bhubaneswar.

Please see the event page here.

We invite you to participate in this edit-a-thon, please add your name to this list here.

You can find more details about the edit-a-thon and the list of articles to be improved here: here.

Please feel free to ask questions. -- User:Titodutta (sent using MediaWiki message delivery (ಚರ್ಚೆ) ೦೯:೨೦, ೪ ಅಕ್ಟೋಬರ್ ೨೦೧೭ (UTC))

ಪ್ರಾಜ್ಯಾಕ್ಟ್ ಗ್ರಾಂಟೀನಾ ಸಲುವಾಗಿ ನಮ್ಮ ಅರ್ಜಿ

ನಮಸ್ಕಾರ,

User: Rohini ಮತ್ತು ನನ್ನ ಪ್ರಾಜ್ಯಾಕ್ಟ್ ಗ್ರಾಂಟೀನಾ ಸಲುವಾಗಿ ಅರ್ಜಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಹಳ ಸಂತೋಷವಾಗಿದೆ. ನಮ್ಮ ಅರ್ಜಿ “Community toolkit for greater diversity” ಎಂದು ಹೆಸರಿಸಲಾಗಿದೆ ಮತ್ತು ಇದು ಪ್ರಾಥಮಿಕ ಸುತ್ತಿನ ವಿಮರ್ಶೆಯನ್ನು ತೆರವುಗೊಳಿಸಲಾಗಿದೆ. ಈ ಅರ್ಜಿ ಅಕ್ಟೋಬರ್ 17, 2017 ರವರೆಗೂ ಸಮುದಾಯ ವಿಮರ್ಶೆಗಾಗಿ ತೆರೆದಿರುತ್ತದೆ. <https://meta.wikimedia.org/wiki/Grants:Project/Chinmayisk/Community_toolkit_for_Greater_Diversity> ಈ ಅರ್ಜಿಯ ಚರ್ಚ ಪುಟದಲ್ಲಿ ನಿಮ್ಮ ಸಲಹೆ ಮತ್ತು ಪ್ರತಿಕ್ರಿಯೆಗಳನ್ನು (https://meta.wikimedia.org/wiki/Grants_talk:Project/Chinmayisk/Community_toolkit_for_Greater_Diversity), ಮತ್ತು ನಿಮ್ಮ ಬೆಂಬಲವನ್ನು ಅನುಮೋದನೆ ವಿಭಾಗದಲ್ಲಿ ತಿಳಿಸಿದರೆ ನಾವು ಮೆಚ್ಚುತ್ತೇವೆ (https://meta.wikimedia.org/wiki/Grants:Project/Chinmayisk/Community_toolkit_for_Greater_Diversity#Endorsements).

ನೀವು ನಮ್ಮೊಂದಿಗೆ ಸ್ವಯಂಸೇವಕರಾಗಿ ಸಹಾಯ ಮಾಡಲು ಬಯಸಿದರೆ ,ನನ್ನನ್ನು ಸಂಪರ್ಕಿಸಿ. ತುಂಬ ಧನ್ಯವಾದಗಳು -Chinmayisk (ಚರ್ಚೆ) ೦೮:೩೬, ೮ ಅಕ್ಟೋಬರ್ ೨೦೧೭ (UTC)

ಸೆಪ್ಟೆಂಬರ್ ತಿಂಗಳ ವರದಿ

ಸೆಪ್ಟೆಂಬರ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳು

 • ಸೆಪ್ಟೆಂಬರ್ ತಿಂಗಳ ಮೊದಲನೆಯ ವಾರದಲ್ಲಿ ದಿನಾಂಕ ೨&೩ ರಂದು ಕರಾವಳಿ ವಿಕಿಮೀಡಿಯನ್ನರ ತುಳು ವಿಕಿಪೀಡಿಯ ವರ್ಷಾಚರಣೆಯ ಕಾರ್ಯಕ್ರಮದ ಸಂದರ್ಭದಲ್ಲಿ ಅಸಫ್ ಅವರು ನಡೆಸಿಕೊಟ್ಟ ಎರಡು ದಿನದ ವಿಕಿಡೇಟಾ ಕಾರ್ಯಾಗಾರದಲ್ಲಿ ಭಾಗವಹಿಸಿದ್ದೆ.
 • ಸೆಪ್ಟೆಂಬರ್ ತಿಂಗಳ ಕೊನೆಯ ವಾರದಲ್ಲಿ ಐಆರ್‌ಸಿ ಯನ್ನು ನಡೆಸಲಾಯಿತು.
 • ನವೆಂಬರ್ ತಿಂಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವುದರ ಸಂಪಾದನೋತ್ಸವದ ಬಗ್ಗೆ ಮತ್ತು ಕನ್ನಡ ವಿಕಿಪೀಡಿಯದ ಕೆಲಸದಲ್ಲಿ ಸಮುದಾಯನದೊಂದಿಗೆ ಕೈಜೋಡಿಸುವಂತೆ ಗುಲಬರ್ಗ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕರಲ್ಲಿ ಮಿಂಚಂಚೆ ಮೂಲಕ ಮನವಿ ಮಾಡಿಕೊಂಡಿದ್ದೇನೆ.

ವಿಫಲತೆಗಳು

 • ಮುಖ್ಯವಾಗಿ ಸಪ್ಟೆಂಬರ್ ತಿಂಗಳಲ್ಲಿ ನಡೆಬೇಕೆಂದಿದ್ದ ಟೆಂಪ್ಲೇಟು ಕಾರ್ಯಾಗಾರದ ಮುಂದಿನ ಭಾಗ ಸಾಧ್ಯವಾಗಲಿಲ್ಲ. ಸಮುದಾಯ ಸದಸ್ಯರಲ್ಲಿ ಕೇಳಿಕೊಂಡಾಗ ಸಂಪನ್ಮೂಲ ವ್ಯಕ್ತಿಗಳು ಬದಲಾಗಬೇಕೆಂದು ಕೇಳಿಬಂತು. ಹಾಗಾಗಿ ಸಮುದಾಯದ ಬಳಿಯೇ ಸಂಪನ್ಮೂಲ ವ್ಯಕ್ತಿಗಳನ್ನು ಸೂಚಿಸಲು ಕೇಳಿಕೊಂಡೆವು. ನಂತರ ಸಂಪನ್ಮೂಲ ವ್ಯಕ್ತಿಗಳು ಹಿಂದಿನ ಬಾರಿಯವರೇ ಆಗಬಹುದು ಆದರೆ ಸಲಹೆಯಲ್ಲಿ ಸೂಚಿಸಿದ ವಿಷಯಗಳನ್ನು ಅಳವಡಿಸಿಕೊಂಡರೆ ಉತ್ತಮ ಎನ್ನುವ ವಿಚಾರ ಬಂತು.
 • ತುಮಕೂರು ವಿಜ್ಞಾನ ಕೇಂದ್ರವನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಏನೂ ಉತ್ತರ ಬಂದಿಲ್ಲ.
 • ಇನ್ನೂ ಹೆಚ್ಚಿನ ವಿಶ್ಯವಿದ್ಯಾಲಯಗಳಿಗೆ, ಸಂಸ್ಥೆಗಳಿಗೆ ಮಿಂಚಂಚೆ ಮೂಲಕ ಕನ್ನಡ ವಿಕಿಪೀಡಿಯದ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಅವರು ವಿಕಿಮೀಡಿಯದ ಯೋಜನೆಗಳಲ್ಲಿ ಪಾಲ್ಗೊಳ್ಳುವಂತೆ ಕೇಳಿಕೊಳ್ಳುವುದರಲ್ಲಿ ಇನ್ನೂ ಹೆಚ್ಚಿನ ಶ್ರಮ ಬೇಕೆಂದು ನನ್ನ ಅಭಿಪ್ರಾಯ.
 • ಡಿಎಸ್‌ಸಿಆರ್‍ಟಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ನನ್ನಲ್ಲಿರುವ ದೂರವಾಣಿ ಸಂಖ್ಯೆ ಕೆಲಸ ಮಾಡಲಿಲ್ಲ.

ಅಕ್ಟೋಬರ್ ತಿಂಗಳಲ್ಲಿ ಮಾಡಬೇಕೆಂದಿರುವುದು

 • ತುಮಕೂರು ವಿಜ್ಞಾನ ಕೇಂದ್ರದ ಭೇಟಿ.
 • ಡಿಎಸ್‌ಸಿ‌ಆರ್‌ಟಿಯಲ್ಲಿ ಸಂಬಂಧಪಟ್ಟವರ ಭೇಟಿ.
 • ಸಮುದಾಯ ಸದಸ್ಯರು ತಮಗೆ ಪರಿಚಯವಿರುವ ಕನ್ನಡದ ಬಗ್ಗೆ ಕಾಳಜಿ ಇದ್ದು ಕೆಲಸ ಮಾಡುವ ಯಾವುದೇ ಸಂಸ್ಥೆಯಲ್ಲಿ ಪರಿಚಯದವರು ಇದ್ದಲ್ಲಿ ಅವರ ಮಾಹಿತಿಯನ್ನು ನನ್ನಲ್ಲಿ ದಯವಿಟ್ಟು ಹಂಚಿಕೊಳ್ಳಬೇಕಾಗಿ ವಿನಂತಿ. ಅವರಿಗೆ ಮಿಂಚಂಚೆ ಮೂಲಕ ಸಂಪರ್ಕಿಸುವುದರಿಂದ ಮಾಹಿತಿ ತಿಳಿಸಿದ ಸದಸ್ಯರೊಂದಿಗೆ ಸೇರಿ ಮುಖತಃ ಭೇಟಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಿದಲ್ಲಿ ಹೆಚ್ಚಿನ ಪ್ರಯೋಜನ ಎಂದು ನನ್ನ ಅನಿಸಿಕೆ.
 • ಹಂಪಿ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ನಿಘಂಟನ್ನು ಡಿಜಿಟಲೀಕರಣ ನಡೆಸಿದ್ದಾರೆ. ಕೆಲವರಿಗೆ ಯುನಿಕೋಡ್ ಸಮಸ್ಯೆ ಎದುರಾಗಿದೆ. ಅದನ್ನು ಬಗೆಹರಿಸಿ ಎಲ್ಲವನ್ನೂ ವಿಕ್ಷನರಿಗೆ ತರವುದು.
 • ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸಬೇಕೆಂದಿರುವ ಸಂಪಾದನೋತ್ಸವದ ತಯಾರಿ.
 • ಗೋಕರ್ಣದ ಸ್ವಸ್ವರ ಎಂಬ ರೆಸಾರ್ಟಿಗೆ ಭೇಟಿನೀಡಿದ್ದಾಗ ಅವರು ವಿಕಿಪೀಡಿಯಕ್ಕೆ ನಾವೇನಾದರೂ ಸಹಾಯ ಮಾಡಬಹುದೇ ಎಂದು ಮುಂದೆ ಬಂದಿದ್ದರು. ಹೀಗಾಗಿ ಅವರ ಆವರಣದಲ್ಲಿ ಸಾಕಷ್ಟು ಸಸ್ಯ ಸಂಪತ್ತು ಇದೆ. ಅದರಲ್ಲಿ ಔಷಧೀಯ ಸಸ್ಯಗಳೂ ಸೇರಿವೆ. ಅವುಗಳ ಚಿತ್ರ, ಮತ್ತು ಮಾಹಿತಿಗಳನ್ನು ಸಂಗ್ರಹಿಸುವುದು. ಇದು ಔಷಧೀಯ ಸಸ್ಯಗಳ ಯೋಜನೆಗೆ ಸಹಕಾರಿ ಆಗುತ್ತದೆ. ಇದರ ಜೊತೆ ಇತರ ಸಸ್ಯ, ಪ್ರಾಣಿಗಳ ಬಗ್ಗೆಯೂ ಮಾಹಿತಿ ಸೇರಿಸುವುದು.


--Gopala Krishna A (ಚರ್ಚೆ) ೧೦:೨೯, ೧೨ ಅಕ್ಟೋಬರ್ ೨೦೧೭ (UTC)

CS1 templates always show error in Kannada wikipedia:

CS1 error ಬಗ್ಗೆ phabricator.wikimedia.org ನಲ್ಲಿ ಚರ್ಚಿಸಿದ್ದು . ಅವರು the module does not understand kn months ಎಂದು ಉತ್ತರಿಸಿದ್ದಾರೆ. ಈ ಎರರ್ ಬಗ್ಗೆ ಪರಿಶೀಲಿಸಲು ವಿನಂತಿ.--Sangappadyamani (ಚರ್ಚೆ) ೧೩:೫೧, ೧೮ ಅಕ್ಟೋಬರ್ ೨೦೧೭ (UTC)