ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

  • ಕನ್ನಡದ ಲೇಖನಗಳ ಶಿರೋನಾಮೆಯನ್ನು ಸರ್ಚ್ ಮಾಡುವುದು ಸ್ವಲ್ಪ ಕಷ್ಟದ ಕೆಲಸವಾಗುತ್ತದೆ. ಆದ್ದರಿಂದ, ಹುಡುಕುವುದಕ್ಕೆ ಅನುಕೂಲವಾಗಲು ಪ್ರತಿ ಲೇಖನಕ್ಕೆ ಆಗ್ಲ ಭಾಷೆಯಲ್ಲಿ ರೀ ಡೈರೆಕ್ಟ್ ಪುಟಗಳನ್ನು ಸೃಷ್ಟಿಸುವುದರಿಂದ ಹೊಸತಾಗಿ ವಿಕಿಪೀಡಿಯಾವನ್ನು ಸಂದರ್ಶಿಸುವ ಓದುಗರಿಗೆ ಹಾಗೂ ಸದಸ್ಯರಿಗೆ ಅನುಕೂಲವಾಗುತ್ತದೆ. --ರಾಜಾ ಹುಸೇನ್ ೦೪:೦೨, ೨೪ May ೨೦೦೬ (UTC)
ಇಲ್ಲಿ ಎರಡು ವಿಷಯಗಳತ್ತ ಗಮನಹರಿಸಬೇಕು:
  1. ಕನ್ನಡದಲ್ಲಿ ಸರ್ಚ್ ಮಾಡುವುದು ಯಾಕೆ ಕಷ್ಟದ ಕೆಲಸ? ಸದಸ್ಯರು ಕನ್ನಡದಲ್ಲಿ ಬರೆದು (ಟೈಪ್ ಮಾಡಿ) ಸಮುದಾಯದಲ್ಲಿ ಪಾಲ್ಗೊಳ್ಳಬೇಕು ಎಂಬುದೇ ನಮ್ಮ ಮೂಲ ಉದ್ದೇಶ. ಎಲ್ಲದಕ್ಕೂ ಆಂಗ್ಲ ಟೈಟಲ್ ಹಾಕಿದರೆ ನಮ್ಮ ಮೂಲ ಉದ್ದೇಶದಿಂದಲೇ ದೂರ ಸರಿದಂತೆ. ಅಲ್ಲದೆ, ಕನ್ನಡದಲ್ಲಿ ಸರ್ಚ್ ಮಾಡುವುದು ರೂಢಿಯ ವಿಷಯವಷ್ಟೆ... ರೂಢಿಸಿಕೊಂಡರೆ ಸುಲಭವಾಗತ್ತೆ, ಹೊಸ ಸದಸ್ಯರಿಗೆ ನಾವು ಅದರ ರೂಢಿಯಾಗುವಂತೆ ಮುಂದುವರೆಯಬೇಕೆ ಹೊರತು ಹಿಂದಕ್ಕೆ ಹೆಜ್ಜೆಯಿಡಕೂಡದು.
  2. ನೆಗೆಟಿವ್ ಆಗಿ ತೆಗೆದುಕೊಳ್ಳಬೇಡಿ, ಆದರೆ ವಾಸ್ತವದ ವಿಷಯವನ್ನು ತಿಳಿಸಬಯಸುವೆ. ಈ ರೀತಿಯ ಸಲಹೆಗಳನ್ನು ಹೊತ್ತು ತಂದವರು ಸುಮಾರು ಜನ... ಆದರೆ ಸಲಹೆಗಳನ್ನು ತಾವೇ ಹೊತ್ತು ಕಾರ್ಯಾಚರಣೆಗೆ ತರಲು ಪ್ರಯತ್ನಿಸಿದವರು ಕಡಿಮೆ. ವಿಕಿಪೀಡಿಯದಲ್ಲಿ ಸದ್ಯಕ್ಕೆ ೧೫೦೦ಕ್ಕೂ ಅಧಿಕ ಲೇಖನಗಳುಂಟು - ಅವಕ್ಕೆಲ್ಲ ಸೂಕ್ತ ಆಂಗ್ಲ ಟೈಟಲ್ಲುಗಳನ್ನು ಹೊಂದಿಸುವುದು ಅಥವಾ 'ANSCII' ಸರ್ಚ್ ಹಾಕ್ತೇನೆ,,, ಎಂದೆಲ್ಲ ಪ್ರಯತ್ನ ಮಾಡುವ ಬದಲು ಇರುವ ಲೇಖನಗಳಲ್ಲೇ ಮಾಹಿತಿ ತುಂಬುವುದರ ಬಗ್ಗೆ ನಾವು ನಮ್ಮ ಗಮನ ಕೇಂದ್ರೀಕರಿಸಿದರೆ ಒಳ್ಳೆಯದು. ಕನ್ನಡ ವಿಕಿಯಲ್ಲಿ ಸಾಕಷ್ಟು ಲೇಖನಗಳನ್ನು ಪೇರಿಸುವ ಹೊತ್ತಿಗೆ ಕನ್ನಡದಲ್ಲಿ ಸರ್ಚ್ ಮಾಡುವುದೂ ಸಾಮಾನ್ಯ ರೂಢಿಯಾಗತ್ತೆ, ಯೂನಿಕೋಡ್ ಕೂಡ ಸಾಕಷ್ಟು ಜನರಿಂದ ಬಳಸಲ್ಪಡುವಂತಾಗಿರತ್ತೆ.
ನನ್ನ ಎರಡು ಪೈಸೆಗಳು ಈ ವಿಷಯಕ್ಕೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೫:೦೪, ೨೪ May ೨೦೦೬ (UTC)


ಈ ವಿಷಯ ಈಗಾಗಲೇ ಅರಳಿಕಟ್ಟೆಯಲ್ಲಿ ಹಿಂದೆ ಚರ್ಚೆಯಾಗಿದೆ. ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive1 ನೋಡಿ. ಆಂಗ್ಲಭಾಷೆಯ ಟೈಟಲ್ ಗಳ ಅವಶ್ಯಕತೆ ನಿಜಕ್ಕೂ ಇಲ್ಲ. ಕನ್ನಡ ಅಕ್ಷರಗಳಲ್ಲೇ ಹುಡುಕುವುದು ಎಲ್ಲರೀತಿಯಿಂದಲೂ ಕ್ಷೇಮ, ಸಮಂಜಸ.
ಉದಾಹರಣೆಗೆ, 'ನಾಗರಹಾವು' ಲೇಖನವನ್ನು ಆಂಗ್ಲದಲ್ಲಿ ಏನೆಂದು ಕರೆಯುವುದು? Cobra, nAgarahAvu, naagarahaavu, nAgarahaavu, naagarahAvu, Naagara Haavu. ಇದು ಒಂದು ಉದಾಹರಣೆಯಷ್ಟೆ. ಈ ರೀತಿಯ ತೊಡಕುಗಳು ಹಲವಾರಿವೆ. ಮುಖ್ಯವಾಗಿ ಈಗ ಇರುವ ಸುಮಾರು ೧೬೦೦ ಲೇಖನಗಳಿಗೂ ಆಂಗ್ಲ ಶಿರೋನಾಮೆ ಹಾಕಲು(ತೊಡಕುಗಳನ್ನೆಲ್ಲಾ ನಿವಾರಿಸಿಕೊಂಡು) ಬಹಳ ಸಮಯಬೇಕಾಗುತ್ತದೆ. - ಮನ | Mana ೧೫:೧೪, ೨೪ May ೨೦೦೬ (UTC)
ಮೇಲಿನ ವಿವರಣೆಯನ್ನು ಸ್ವಾಗತಿಸುತ್ತಾ ಗೊಂದಲವನ್ನು ಪರಿಹರಿಸಿದ್ದಕ್ಕೆ ಹಾಗೂ ವಿಷಯಕ್ಕಾಗಿ ತಮ್ಮ ಎರಡು ಪೈಸೆಗಳನ್ನು ಕಳೆದುಕೊಂಡ ಹರಿ ಪ್ರಸಾದ್ ನಾಡಿಗ್ ರಿಗೂ ಮತ್ತು ವಿಷಯವನ್ನು ವಿಸ್ತೃತವಾಗಿ ವಿವರಿಸಿದ ಮನ | Manaರವರಿಗೆ ನನ್ನ ಕೃತಜ್ಞತೆಗಳು. :) --ರಾಜಾ ಹುಸೇನ್ ೧೨:೦೯, ೨೫ May ೨೦೦೬ (UTC)


ಶೀರ್ಷಿಕೆಗಳ ಬಗ್ಗೆ (ಶಿರೋನಾಮೆಗಳ ಬಗ್ಗೆ)[ಬದಲಾಯಿಸಿ]

ಕನ್ನಡದಲ್ಲಿ ಲೇಖನಗಳ ಹೆಸರುಗಳ ಸಂಪ್ರದಾಯ(Naming Convention) ಹೇಗಿರಬೇಕೆಂದು ಆಗಲೇ ನಿರ್ಧಾರವಾಗಿದೆಯೇ? ಆಗಿದ್ದಲ್ಲಿ ಆ ಪುಟ ಎಲ್ಲಿದೆಯೆಂದು ತಿಳಿಸಿ.
ಈಗಾಗಲೇ ಇಲ್ಲದಿದ್ದಲ್ಲಿ, ಇಲ್ಲಿ ಚರ್ಚಿಸಬಹುದೆಂದುಕೊಂಡಿರುವೆ.
ಅ. ಇನಿಷಿಯಲ್ಸ್ ಹಾಕುವಾಗ ಯಾವರೀತಿ ಹಾಕಬೇಕು ಎಂದು ನಿರ್ಧಾರವಾಗಬೇಕಿದೆ.
ಉದಾ: ೧. ಎಸ್.ಎಲ್.ಭೈರಪ್ಪ (ಎಲ್ಲಿಯೂ ಸ್ಪೇಸ್ ಇಲ್ಲ; ಭಿಂದು(dot)ಗಳು ಇವೆ)
೨. ಎಸ್. ಎಲ್. ಭೈರಪ್ಪ (ಇನಿಷಿಯಲ್ಸ್‍ಗಳ ಮಧ್ಯೆಯೂ ಸ್ಪೇಸ್, ಇನಿಷಿಯಲ್ಸ್ ಮತ್ತು ಹೆಸರಿನ ಮಧ್ಯೆಯೂ ಸ್ಪೇಸ್ ಹಾಗು ಇನಿಷಿಯಲ್ಸ್ ಆದನಂತರ ಭಿಂದುಗಳು)
೩. ಎಸ್.ಎಲ್. ಭೈರಪ್ಪ (ಇನಿಷಿಯಲ್ಸ್‍ಗಳ ಮಧ್ಯೆ ಸ್ಪೇಸ್ ಇಲ್ಲ, ಇನಿಷಿಯಲ್ಸ್ ಮತ್ತು ಹೆಸರಿನ ಮಧ್ಯೆ ಸ್ಪೇಸ್, ಹಾಗು ಇನಿಷಿಯಲ್ಸ್ ಆದನಂತರ ಭಿಂದುಗಳು)
೪. ಎಸ್ ಎಲ್ ಭೈರಪ್ಪ (ಎಲ್ಲಿಯೂ ಭಿಂದುಗಳಿಲ್ಲ; ಸ್ಪೇಸ್‍ಗಳು ಇವೆ)

ಇವುಗಳಲ್ಲಿ ಯಾವುದು ಅತ್ಯಂತ ಸಮಂಜಸ ರೀತಿ? ಅಥವಾ ಇವ್ಯಾವುದೂ ಅಲ್ಲದೇ, ಬೇರಾವುದಾದರೂ ರೀತಿಯಿದೆಯೆ?
ಮುದ್ರಿತ ಸಾಹಿತ್ಯ ಕೃತಿಗಳ ಪ್ರಕಾರ, ೩ನೇ ರೀತಿ ಸಾಮಾನ್ಯವಾಗಿ ಜನಬಳಕೆಯಲ್ಲಿದೆ. ಈಗಾಗಾಲೇ ಇರುವ ಬಹಳಷ್ಟು ವಿಕಿ ಲೇಖನಗಳು ಈ ರೀತಿಯದ್ದಾಗಿವೆ.
ನಾಲ್ಕನೇ ರೀತಿಯು ಹುಡುಕುವುದಕ್ಕೆ(ಸರ್ಚಿಂಗ್‍ಗೆ) ಅನುಕೂಲಕರವಾಗಿದೆ. ಮೊದಲೆರಡು ವಿಧಾನಗಳು ವಿರಳವಾಗಿ ಉಪಯೋಗಿಸಲ್ಪಟ್ಟಿವೆ.
ನಿಮ್ಮ ಅನಿಸಿಕೆ ತಿಳಿಸಿ. ನನ್ನ ಬೆಂಬಲ ಮೂರನೆ ರೀತಿಗೆ. --ಮನ 06:57, ೨೯ March ೨೦೦೬ (UTC)

ಮೊದಲನೆಯದು ಸರಿಯಿರುತ್ತದೆ ಎಂದು ನನ್ನ ಅನಿಸಿಕೆ. ಉಳಿದವುಗಳಿಗೆ ಬೇಕಿದ್ದಲ್ಲಿ ರೀಡೈರೆಕ್ಟ್ ಹಾಕಬಹುದು (ಬೇಕಿದ್ದಲ್ಲಿ ಮಾತ್ರ - ಎಲ್ಲಕ್ಕೂ‌ ಹಾಕಲೇಬೇಕೆಂದೇನಿಲ್ಲ) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:14, ೨೯ March ೨೦೦೬ (UTC)
ಪ್ರಸಕ್ತ ಸಂದರ್ಭದಲ್ಲಿ ಮೊದಲನೆಯದೇ ಸೂಕ್ತವಾಗಿ ತೋರುತ್ತದೆ. ಏಕೆಂದರೆ ಇಂದು ಹೆಸರುಗಳನ್ನು ಚಿಕ್ಕದಾಗಿ ಬಳಸುವ ರೂಢಿ ಹೆಚ್ಚು ಇದೆ. ಉದಾಹರಣೆಗೆ ಚಂ.ಪಾ., ದೇ.ಜ.ಗೌ. ಇತ್ಯಾದಿ. ಆದ್ದರಿಂದ ಒಂದು ಹೆಸರಿನಿಂದ ಮತ್ತೊಂದು ಹೆಸರು ಗುರುತಿಸಲು ಮೊದಲನೆಯ ರೀತಿ (ಎಸ್.ಎಲ್.ಭೈರಪ್ಪ) ಸೂಕ್ತವೆಂದು ಅನಿಸುತ್ತದೆ.-- ಸುಗ್ಗನಹಳ್ಳಿ ವಿಜಯಸಾರಥಿ
ಮೇಲ್ಕಂಡ ಚರ್ಚೆಯನ್ನು ಗಮನಿಸಿ, ಹಾಗು ಇತರ ರೀತಿಗಳ ಪರವಾಗಿ ಮತ್ತಾರು ಚರ್ಚೆಸದ ಕಾರಣ, ಮೊದಲನೆಯ ರೀತಿಯನ್ನು ಅಂಗೀಕರಿಸೋಣವೇ? ಇದರಿಂದ ಮುಂದಿನ ಲೇಖನಗಳನ್ನು ಪ್ರಾರಂಭಿಸುವವರಿಗೆ, ಹಾಗು ಲೇಖನಗಳನ್ನು ಹುಡುಕು(ಸರ್ಚ್)ವವರಿಗೆ ಬಹಳ ಅನುಕೂಲವಾಗುತ್ತದೆ. ಇದಕ್ಕೆ ಇನ್ನಾವುದೇ ಭಿನ್ನಾಭಿಪ್ರಾಯಗಳಿಲ್ಲದಿದ್ದಲ್ಲಿ ಇದನ್ನು ಕನ್ನಡ ವಿಕಿಪೀಡಿಯ ಅಧಿಕೃತ, ಹೆಸರಿಸುವ ನಿಯಮಗಳಲ್ಲಿ(naming convention) ನಮೂದಿಸಬೇಕೆಂದು ನಿರ್ವಾಹಕರಲ್ಲಿ ಕೋರುವೆ. - ಮನ ೦೩:೧೬, ೫ May ೨೦೦೬ (UTC)
ಖಂಡಿತ. ಪಾಲಿಸಿ ಪುಟವೊಂದನ್ನು ಸ್ಥಾಪಿಸಿ ಅಲ್ಲಿ ಹಾಕಬಹುದು.-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೭:೧೩, ೫ May ೨೦೦೬ (UTC)
ಒಂದು ಪ್ರಮುಖ ವಿಷಯ ನಾವೆಲ್ಲ ಇಲ್ಲಿ ಮರೆತುಬಿಟ್ಟೆವು. ಹೆಸರಿನಲ್ಲಿ initials ಮಧ್ಯೆ Dot ಇಟ್ಟು ಸ್ಪೇಸ್ ಕೊಡದೇ ಹೋದರೆ search ಮಾಡುವಾಗ ಬಹಳ ತೊಂದರೆಯಾಗುತ್ತದೆ. ಆದ್ದರಿಂದ (೨) ನೆಯ ವಿಧಾನ ಅನುಸರಿಸುವುದು ಹೆಚ್ಚು ಸೂಕ್ತ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೪೭, ೫ ಆಗಸ್ಟ್ ೨೦೦೬ (UTC)

[ಬದಲಾಯಿಸಿ]

ಬ. ಡಾಕ್ಟರೇಟ್ ಪ್ರಶಸ್ತಿ ದೊರೆತವರ ಬಗ್ಗೆ, ಹಾಗೂ ವೈದ್ಯರುಗಳ ಬಗ್ಗೆ ಬರೆಯುವಾಗ ನಿರ್ಧಿಷ್ಟವಾಗಿ ಹೇಗೆ ಬರೆಯಬೇಕು?
ಉದಾ: ೧. ಡಾ|| ರಾಜ್‍ಕುಮಾರ್
೨. ಡಾ| ರಾಜ್‍ಕುಮಾರ್
೩. ಡಾ. ರಾಜ್‍ಕುಮಾರ್
೪. ಡಾ ರಾಜ್‍ಕುಮಾರ್

ಮೊದಲೆರಡು ವಿಧಾನಗಳು ಸಾಮಾನ್ಯವಾಗಿ ಉಪಯೋಗಿಸಲ್ಪಡುವಂಥವು. ನಿಖರವಾಗಿ ಯಾವ ವಿಧಾನ ಉಪಯೋಗಿಸುವುದೊಳಿತು ಎಂದು ನಿಮ್ಮ ಅಭಿಪ್ರಾಯ ತಿಳಿಸಿ.
'|' ಚಿಹ್ನೆಯನ್ನು ಕೆಲೆವೆಡೆ ಡಿಲಿಮೀಟರ್ ಆಗಿ ಉಪಯೋಗಿಸಲಾಗಿದೆ. --ಮನ 06:57, ೨೯ March ೨೦೦೬ (UTC)

ಎರಡನೆಯದು ಸರಿಯಿರುತ್ತದೆ ಎಂದು ನನ್ನ ಅನಿಸಿಕೆ. ಮೇಲೆ ಹೇಳಿದಂತೆ ಉಳಿದವುಗಳಿಗೆ ರೀಡೈರೆಕ್ಟ್ ಬೇಕಿದ್ದಲ್ಲಿ ಹಾಕಿಕೊಳ್ಳಬಹುದು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು 17:14, ೨೯ March ೨೦೦೬ (UTC)

ಸಿನಿಮಾ ಪುಟಗಳಲ್ಲಿ ಮಾಹಿತಿ[ಬದಲಾಯಿಸಿ]

ಈಗ ಕನ್ನಡ ವಿಕಿಪೀಡಿಯದಲ್ಲಿ ಸಾಕಷ್ಟು ಸಿನಿಮಾ ಪುಟಗಳಾಗಿಬಿಟ್ಟಿವೆ. Random ಪುಟಕ್ಕೆ alt+x ಒತ್ತಿದರೆ ಸುಮಾರು ಸಲ ಬರೇ ಸಿನಿಮಾ ಪುಟಗಳೇ ಬರುತ್ತಿವೆ. ಆದರೆ ಆ ಸಿನಿಮಾ ಪುಟಗಳೆಲ್ಲ ಖಾಲಿ. ಬರೇ ಇನ್ಫೋಬಾಕ್ಸ್ ಟೆಂಪ್ಲೇಟ್ ಒಂದು ಓದಲು ಸಿಗುತ್ತದೆ. ಈ ರೀತಿಯ ಚುಟುಕು ಪುಟಗಳು ಚೆಂದವಿರುವುದಿಲ್ಲ - ಬೆಳೆಯುತ್ತಿರುವ ಸಮುದಾಯದಲ್ಲಿ ಇಂತದ್ದು ನೆಗೆಟಿವ್ factor ಆಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಕನ್ನಡ ಸಿನಿಮಾ ಬಗ್ಗೆ ಆಸಕ್ತಿ ಇರುವುವರು ಸಾಧ್ಯವಾದಷ್ಟೂ ಪುಟಗಳಲ್ಲಿ ಇನ್ಫೋಬಾಕ್ಸ್ ಟೆಂಪ್ಲೇಟಿನೊಂದಿಗೆ ಸ್ವಲ್ಪವಾದರೂ ಮಾಹಿತಿ (ಉದಾ: '''ಮಯೂರ''' [[೧೯೭೫]]ರಲ್ಲಿ ಬಿಡುಗಡೆಯಾದ ಕದಂಬ ರಾಜ್ಯದ ಸಂಸ್ಥಾಪಕನಾದ ಮಯೂರವರ್ಮನ ಜೀವನವನ್ನಾಧರಿಸಿದ ಚಿತ್ರ. .....) ಸೇರಿಸಿದರೆ ಉತ್ತಮ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೪೬, ೨೩ July ೨೦೦೬ (UTC)

ಚಲನಚಿತ್ರ ಪುಟಗಳಲ್ಲಿ, ಆಯಾ ಚಲನಚಿತ್ರದ ಬಗ್ಗೆ ಮಾಹಿತಿಯಿದೆ. ಮಾಹಿತಿಯು Infobox ರೂಪದಲ್ಲಿರುವ ಕಾರಣಕ್ಕೆ, ಇವನ್ನು ಚುಟುಕು ಪುಟಗಳು ಅಥವಾ ನೆಗೆಟಿವ್ factor ಎನ್ನಲಾಗದು. ಹಾಗೆಯೇ, Random ಪುಟದಲ್ಲಿ ಸಿನಿಮಾ ಪುಟಗಳು ಬರುತ್ತಿರುವುದು ಬಹುಶಃ ಈ ಚರ್ಚೆಯಲ್ಲಿ ಅಪ್ರಸ್ತುತ. Random ಪುಟಗಳಲ್ಲಿ ಬೇರೆ ರೀತಿಯ ಲೇಖನಗಳೂ ಬರಬೇಕೆಂದರೆ, ಬೇರೆ ವರ್ಗಗಳ ಲೇಖನಗಳ ಸಂಖ್ಯೆಯೂ ಹೆಚ್ಚಬೇಕಿದೆ. ಸಿನಿಮಾ ಪುಟಗಳನ್ನು ನಿಂದಿಸಲಾಗದು. - ಮನ|Mana Talk - Contribs ೧೯:೪೨, ೨೩ July ೨೦೦೬ (UTC)
ಮನೋಹರ್, ಸಿನಿಮಾ ಪುಟಗಳನ್ನು ನಿಂದಿಸುತ್ತಿಲ್ಲ, ಗುರುವೆ. ಸಿನಿಮಾ ಪುಟಗಳು ಹೆಚ್ಚಾದದ್ದು ಒಳ್ಳೆಯದೇ, ಆದರೆ ಅದರಲ್ಲಿ ಸ್ವಲ್ಪವಾದರೂ ಮಾಹಿತಿ ಸೇರಿಸಿ ವಿಕಿಪೀಡಿಯದ ಕ್ವಾಲಿಟಿ ಹೆಚ್ಚಿಸಬೇಕೆಂಬುದು ವಿಷಯ. Random ಉದಾಹರಣೆ ಸಂಪೂರ್ಣ ಲೇಖನಗಳಿರುವುದಕ್ಕಿಂತ ಚುಟುಕ ಖಾಲಿ ಪುಟಗಳು ಹೆಚ್ಚಿರುವ ವಾಸ್ತವವನ್ನು ಹೇಳುತ್ತಿದೆ ಎಂದಷ್ಟೆ ಹೇಳಿದೆ. ಅದು ಅಪ್ರಸ್ತುತ ಖಂಡಿತ ಅಲ್ಲ. ನೋಡಿ, ಬೇರೆಯ ವಿಷಯಗಳ ಬಗ್ಗೆ ಪ್ರಾರಂಭಿಸಿದ ಚುಟುಕ ಲೇಖನಗಳು (stubs) ಸ್ವಲ್ಪವಾದರೂ ಕ್ಷೀಣ ಗತಿಯಲ್ಲಿ ಬೆಳೆಯುತ್ತಿರುವಾಗ ಈ ಸಿನಿಮಾ ಪುಟಗಳು ಯಾಕೋ stagnant ಆದಂತಿವೆ. ಆದ್ದರಿಂದ ಅದನ್ನು ಬರೇ infobox ಹಾಕಿ ಖಾಲಿ ಬಿಡುವುದಕ್ಕಿಂತ ಒಂದಷ್ಟು ಮಾಹಿತಿ ಸೇರಿಸಿದರೆ ಉತ್ತಮ. ಬೇರೆ ವಿಷಯಗಳ ಮೇಲೆ ಕೆಲಸ ನಡೆಯಬೇಕಾದದ್ದೇ. ಹಾಗೆಂದು ಸಿನಿಮಾ ಪುಟಗಳನ್ನು ಹಾಗೆಯೇ ಬಿಡಬಹುದು ಎಂಬ excuse ಸರಿಕಾಣದು ;) -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೪೭, ೨೪ July ೨೦೦೬ (UTC)
ಹೌದು. ನನಗೂ ಮನ ಅವರ ಅಭಿಪ್ರಾಯ ಸರಿ ಅನ್ನಿಸುತ್ತಿದೆ. ಮಯೂರ, ಕೃಷ್ಣದೇವರಾಯ ಮುಂತಾದ ಚಿತ್ರಗಳಿಗೆ ಹರಿಪ್ರಸಾದ್ ತಿಳಿಸಿರುವಂತೆ ಹೆಚ್ಚಿನ ಮಾಹಿತಿ ಸೇರಿಸಬಹುದಾದರೂ, ಎಲ್ಲಾ ಚಿತ್ರಗಳಿಗೆ ಇದು ಸಾಧ್ಯವಿಲ್ಲ. ಅಲ್ಲದೆ info boxನಲ್ಲಿ, ಆ ಸಿನಿಮಾಗೆ ಸಂಬಂಧಿಸಿದ (ನಿರ್ದೇಶನ/ಸಾಹಿತ್ಯ/ಸಂಗೀತ) ಎಲ್ಲಾ ಮಾಹಿತಿಗಳಿರುವುದರಿಂದ ಮತ್ತೆ ಅದನ್ನೇ ವಾಕ್ಯದಲ್ಲಿ ಬರೆಯುವ ಅಗತ್ಯವಿಲ್ಲ ಅಲ್ಲವೇ? ಸಿನಿಮಾ ಪುಟಗಳು ಹೆಚ್ಚುತ್ತಿವೆ.( ಸಾಹಿತಿಗಳ ಪುಟ ಕೂಡ) ಬೇರೆ ವಿಷಯಗಳಿಗೆ ಸಂಬಂಧಿಸಿದ ಪುಟಗಳನ್ನೂ ಹೆಚ್ಚಿಸೋಣ  :) - Sritri ೨೦:೧೧, ೨೩ July ೨೦೦೬ (UTC)
ಎಲ್ಲ ಚಿತ್ರಗಳಿಗೆ ಸಾಧ್ಯವಾಗದಿದ್ದರೆ ಬೇಡ. ಸಾಧ್ಯವಾದಷ್ಟು ಲೇಖನಗಳಿಗೆ ತಿಳಿದವರು ಮಾಹಿತಿ ಸೇರಿಸಬಹುದಲ್ಲವೆ? :)

en:Vertigo (film) ಪುಟ ನೋಡಿ. ಅದನ್ನು ಮಯೂರ ಅಥವ ಇನ್ಯಾವುದಾದರೂ ಕನ್ನಡದ ಜನಪ್ರಿಯ ಚಿತ್ರದ ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿರುವ ಲೇಖನಕ್ಕೆ ಹೋಲಿಸಿ ನೋಡಿ. ಬರೆಯುವುದು ಸಾಕಷ್ಟಿರುತ್ತದೆ :)

ಹಾಗೆಂದು ನೀವೊಬ್ಬರೇ ಬರೆಯಬೇಕೆಂದೇನಿಲ್ಲ. ಸಾಧ್ಯವಾದವರು ಪ್ರಾರಂಭಿಸಬಹುದು. ಉಳಿದವರು, ಚಿತ್ರದ ಬಗ್ಗೆ ಹೆಚ್ಚು ತಿಳಿದವರು ಅದರಲ್ಲಿ ಪಾಲ್ಗೊಳ್ಳುತ್ತಾರೆ. ಸಂಪೂರ್ಣ ಖಾಲಿ ಬಿಟ್ಟರೆ "ಈ ಪುಟ ಇಷ್ಟೇ ಏನೋ, ಹೀಗೇ ಇರುವಂಥದ್ದೇನೋ" ಎಂಬ ಭಾವನೆ/ಮನೋಭಾವ ಬರುವಂತಾಗಿಬಿಟ್ಟರೆ ಕಷ್ಟ! -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೮:೫೧, ೨೪ July ೨೦೦೬ (UTC)

ಹೊಸ ಸದಸ್ಯರಿಗೆ ಸಹಾಯ ಪುಟ[ಬದಲಾಯಿಸಿ]

ಕನ್ನಡ ವಿಶ್ವಕೋಶಕ್ಕೆ ಪ್ರತಿದಿನವೂ ಹಲವಾರು ಹೊಸಬರುನೋಂದಾಯಿಸಿಕೊಳ್ಳುತ್ತಿದ್ದಾರೆ ಸದಸ್ಯರಾಗುತ್ತಿದ್ದಾರೆ. ಆದರೆ, ಸಕ್ರಿಯರಾಗಿ ಪಾಲ್ಗೊಳ್ಳುತ್ತಿರುವವರು ಬಹಳ ಕಡಿಮೆ. ಸದಸ್ಯರ ಸಂಖ್ಯೆ ಏರುತ್ತಿದೆ(ಈಗ ೭೦೦ ಹತ್ತಿರಕ್ಕೆ ಬಂದಿದೆ), ಆದರೆ contributors ಸಂಖ್ಯೆ ಏರುತ್ತಿಲ್ಲ. ಇದಕ್ಕೆ ಕಾರಣವೇನಿರಬಹುದು? ಹೊಸಬರಿಗೆ ವಿಕಿಪೀಡಿಯ user interface ಸುಲಭವಾಗಿ ಅರ್ಥವಾಗುವುದಿಲ್ಲವೆಂಬುದು ಒಂದು ಅಂಶ. ಒಂದು ಲೇಖನವನ್ನು ಪ್ರಾರಂಭಿಸುವುದರಿಂದ ಹಿಡಿದು, ಟೆಂಪ್ಲೇಟ್ ಉಪಯೋಗ, ವರ್ಗಗಳ ಉಪಯೋಗ, ಅವುಗಳನ್ನು ಬಳಸುವುದು ಹೇಗೆ, ವಿಶೇಷ ಲೇಖನ ಹಾಕುವುದು ಹೇಗೆ, ಪ್ರಚಲಿತ/ನಿಮಗಿದು ಗೊತ್ತೆ/ವಿಕಿಪೀಡಿಯ ಸುದ್ದಿ ಇತ್ಯಾದಿ ಮುಖ್ಯಪುಟದ ಕಂಟೆಂಟ್ಸ್ ಬದಲಾಯಿಸುವುದು ಹೇಗೆ, ಲೇಖನಗಳಲ್ಲಿ ಚಿತ್ರಗಳನ್ನು ಹಾಕುವುದು ಹೇಗೆ, ಕೆಲವು ಲಿಂಕ್ ಕೆಂಪದಾಗಿ ಕಾಣುತ್ತವೆ ಇನ್ನು ಕೆಲವು ನೀಲಿಯಾಗಿ ಕಾಣುತ್ತವೆ ಏಕೆ? POV, NPOV ಹೀಗೆಲ್ಲಾ ಎಂದರೆ ಏನು?, ಇತ್ಯಾದಿಯಾಗಿ ಹಲವಾರು ಪ್ರಶ್ನೆಗಳು ಮೂಡಿ ಬರುತ್ತವೆ. ಇವೆಲ್ಲವೂ ನನಗೆ ಮೂಡಿಬಂದಿದ್ದವು.

ಸಹಾಯ ಪುಟಗಳನ್ನು ಸಂಪೂರ್ಣವಾಗಿ ಓದಿಯೋ, ಅಥವಾ ಪ್ರಾರಂಭದಲ್ಲಿ ಕಷ್ಟವಾದರೂ ಸರಿಯೇ ಎಂದು ನಿಧಾನವಾಗಿ ಒಂದೊಂದನ್ನೇ ಕಲಿತರೋ ಅಥವಾ ಈಗಾಗಲೇ ಇರುವ ಪರಿಚಿತ ಸಂಪಾದಕರ ಒಡನಾಟದಿಂದಲೋ ಕಲಿಯುವುವರು ಮಾತ್ರವೇ ಸಕ್ರಿಯವಾಗಿ contribute ಮಾಡುತ್ತಿದ್ದಾರೆಂದು ನಾನು ಭಾವಿಸಿರುವೆ. ಉಳಿದವರು ಎಲ್ಲಿಂದ, ಹೇಗೆ ಪ್ರಾರಂಭಿಸಬೇಕು ಎಂದು ಅರಿಯದೆ, ಹೆಚ್ಚಾಗಿ ಹುಡುಕುವ ಗೋಜಿಗೆ ಹೋಗದೆ ಸುಮ್ಮನಾಗಿರುವ ಸಾಧ್ಯತೆಗಳಿವೆ.

ಈ ಸಮಸ್ಯೆಗೆ ಏನಾದರೂ ಪರಿಹಾರಗಳನ್ನು ನಿಮ್ಮ ಮನಸ್ಸಿಗೆ ಬಂದರೆ ತಿಳಿಸಿ.

ಆಂಗ್ಲ ವಿಕಿಯಲ್ಲಿ ಇದರ ಬಗ್ಗೆ ಹುಡುಕಿದಾಗ, ಮುಖ್ಯವಾಗಿ ಸಿಕ್ಕಿದ ಒಂದು ಲೇಖನವೆಂದರೆ, en:Wikipedia:New contributors' help page. ಇದು ಹೊಸ ಸದಸ್ಯರಿಗೆಂದೇ ಸಹಾಯ ಮಾಡಲು ರೂಪಿಸಿರುವ ಪುಟ. ಅರಳಿಕಟ್ಟೆಗೂ ಈ ಪುಟಕ್ಕೂ ಬಹಳ ವ್ಯತ್ಯಾಸವಿದೆ. ಆ ಪುಟದಲ್ಲಿನ ಪ್ರಶ್ನೆಗಳನ್ನು ನೋಡಿದರೆ, ವ್ಯತ್ಯಾಸ ತಿಳಿಯುತ್ತದೆ. ಇದನ್ನೇ ನಾವು ಕನ್ನಡ ವಿಶ್ವಕೋಶದಲ್ಲಿಯೂ ಪ್ರಾರಂಭಿಸಬಹುದಲ್ಲವೇ? ಪ್ರಾರಂಭಿಸಿ, ಪ್ರತಿಪುಟದಲ್ಲಿಯೂ ಕಾಣುವಂತೆ, Fonts, Unicode help document | Mailing List | FAQ ಇವುಗಳ ಪಕ್ಕದಲ್ಲಿ ಹೊಸ ಸದಸ್ಯರಿಗೆ ಸಹಾಯ ಪುಟ / New contributors' Help page ಎಂದು ಹಾಕಿದಲ್ಲಿ, ಸದಸ್ಯರು ತಮಗೆದುರಾಗುವ ಪ್ರಶ್ನೆಗಳನ್ನು ಕೇಳಬಹುದು. ಸಕ್ರಿಯವಾಗಿರುವ ಸದಸ್ಯರು ಉತ್ತರಗಳನ್ನು ಕೊಡುವುದರಿಂದ, ಹೊಸ ಸದಸ್ಯರಿಗೆ ಅನುಕೂಲವಾಗುವ ಜೊತೆಗೆ ಅದೇ ಪ್ರಶ್ನೋತ್ತರಗಳು ಒಂದು Knowledge-base ಆಗಿ ರೂಪುಗೊಳ್ಳುತ್ತದೆ, FAQ ಮಾದರಿಯಲ್ಲಿ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. ಹಾಗೆ, ಸದಸ್ಯರು ಸಕ್ರಿಯರಾಗಲು ಬೇರೆ ವಿಧಾನಗಳನ್ನು ಚರ್ಚಿಸಿ. - ಮನ | Mana ೧೮:೨೮, ೧೯ July ೨೦೦೬ (UTC)

ಮರಣ / ನಿಧನ[ಬದಲಾಯಿಸಿ]

ದಿನಗಳ ಪುಟಗಳಲ್ಲಿ, ಹಾಗು ಇನ್ನಿತರ ಕ್ಯಾಲೆಂಡರ್ ಪುಟಗಳಲ್ಲಿ "Death" ಪದಕ್ಕೆ ಸಮಾನಾರ್ಥಕವಾಗಿ, ಹಲವೆಡೆ ಮರಣ ಎಂತಲೂ, ಹಲವೆಡೆ ನಿಧನ ಎಂತಲೂ ಬಳಸಲಾಗಿದೆ. ಇದನ್ನು consistent ಆಗಿ ಬಳಸುವ ನಿಟ್ಟಿನಲ್ಲಿ ಒಂದು ಕಾರ್ಯನೀತಿಯು ರಚನೆಯಾಗಬೇಕಿದೆ. ಸಾವು ಪದಕ್ಕೆ ಮರಣ ಮತ್ತು ನಿಧನ ಎರಡೂ ಸರಿಯಾದ ಪದಗಳಾಗಿದ್ದು, ಎರಡರಲ್ಲಿ ಯಾವುದು ಉಪಯೋಗಿಸಿದರೂ ತಪ್ಪು ಆಗುವುದಿಲ್ಲ. ಆದರೆ, ವಿಕಿಪೀಡಿಯದಲ್ಲಿನ ಎಲ್ಲಾ ಕ್ಯಾಲೆಂಡರ್ ಪುಟಗಳಲ್ಲಿ ಏಕರೂಪವನ್ನು (uniformity) ಕಾಪಾಡಲು ಈ ಕಾರ್ಯನೀತಿಯ ಅವಶ್ಯಕತೆ ಇದೆ. ಇವೆರಡು ಪದಗಳಲ್ಲಿ ಯಾವುದು ಉಪಯೋಗಿಸಿದರೆ ಹೆಚ್ಚು ಸಮಂಜಸ, ಮತ್ತು ಏಕೆ ಎಂಬುದನ್ನು ಎಲ್ಲಾ ಸಂಪಾದಕರು ತಿಳಿಸಬೇಕೆಂದು ಕೋರುವೆ. - ಮನ|Mana Talk - Contribs ೨೦:೦೯, ೪ ಆಗಸ್ಟ್ ೨೦೦೬ (UTC)

ಲೇಖನಗಳಲ್ಲಿ, ದಿನಪತ್ರಿಕೆಗಳಲ್ಲಿ ಜನಪ್ರಿಯ ವ್ಯಕ್ತಿಗಳ ಸಾವಿನ ವಿಷಯ ಬರೆಯಬೇಕಾದರೆ "ಈ ವ್ಯಕ್ತಿ ಈ ಕಾರಣದಿಂದ ನಿಧನರಾದರು" ಎಂದು ಪ್ರಕಟಿಸುತ್ತಾರೆಯೇ ಹೊರತು "ಮರಣ"ಹೊಂದಿದರು ಎಂದು ಬರೆಯುವುದನ್ನು ನಾನು ಕಂಡಿಲ್ಲ. ಅದೇ ಒಂದು ಅಪಘಾತವಾದಾಗ ಅಥವಾ ಭಾರೀ ಸಂಖ್ಯೆಯ ಜನರು ಸಾವಿಗೀಡಾದಾಗ, "ಇಷ್ಟು ಸಂಖ್ಯೆಯ ಜನರು ಮರಣ ಹೊಂದಿದರು" ಎಂದು ಬರೆಯುವುದು ವಾಡಿಕೆಯಲ್ಲಿದೆ. ಈ ಕ್ಯಾಲೆಂಡರ್ ಪುಟಗಳಲ್ಲಿ ಮರಣ/ನಿಧನ ಶೀರ್ಷಿಕೆಯಡಿ ಉಲ್ಲೇಖಿಸಿರುವ ಹೆಸರುಗಳೆಲ್ಲ ಪ್ರಮುಖರದ್ದೇ. ಆದ್ದರಿಂದ ಇದನ್ನು 'ನಿಧನ ಎಂದು ಕರೆಯುವುದೇ ಸೂಕ್ತ. -ಹಂಸವಾಣಿದಾಸ ೨೦:೨೧, ೪ ಆಗಸ್ಟ್ ೨೦೦೬ (UTC)
ಹಂಸವಾಣಿದಾಸರು ತಿಳಿಸಿದಂತೆ ನಿಧನ ಸರಿಯಾದ ಬಳೆಕೆಯೆಂಬುದು ನನ್ನ ಅಭಿಪ್ರಾಯ ಕೂಡ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೦:೩೩, ೫ ಆಗಸ್ಟ್ ೨೦೦೬ (UTC)
ಮತ್ತಾರೂ ಚರ್ಚೆಯಲ್ಲಿ ಅಭಿಪ್ರಾಯಗಳನ್ನು ಮಂಡಿಸದ ಕಾರಣ, ನಿಧನ ಪದವನ್ನು ಕ್ಯಾಲೆಂಡರ್ ಪುಟಗಳಲ್ಲಿ ಉಪಯೋಗಿಸಬೇಕೆಂಬ ಕಾರ್ಯನೀತಿಯನ್ನು ರೂಪಿಸಿ, ಅಂಗೀಕರಿಸಬಹುದು. - ಮನ|Mana Talk - Contribs ೧೮:೪೮, ೧೦ ಆಗಸ್ಟ್ ೨೦೦೬ (UTC)

ಹೊರಗಿನ ಸಂಪರ್ಕ/ ಬಾಹ್ಯ ಸಂಪರ್ಕ[ಬದಲಾಯಿಸಿ]

ಹಲವು ಲೇಖನಗಳಲ್ಲಿ ಹೊರಗಿನ ಸಂಪರ್ಕ ಎಂತಲೂ ಇನ್ನು ಹಲವು ಲೇಖನಗಳಲ್ಲಿ ಬಾಹ್ಯ ಸಂಪರ್ಕ ಎಂದೂ ನಾವುಗಳು ಇದುವರೆಗೂ ಬಳಸಿದ್ದೇವೆ. ಎರಡೂ ಬಳಕೆಗಳು ತಕ್ಕ ಮಟ್ಟಿಗೆ ಸರಿ ಇದ್ದರೂ ಇನ್ನು ಮುಂದೆ ಯಾವುದಾದರೂ ಒಂದು wording ಮಾತ್ರ ಬಳಸಿ consistency ತರಬೇಕಿದೆ. ಸದಸ್ಯರೆಲ್ಲರೂ ತಮ್ಮ ಅಭಿಪ್ರಾಯಗಳೊಂದಿಗೆ ನಿರ್ಧಾರ ತೆಗೆದುಕೊಳ್ಳುವಲ್ಲಿ ಪಾಲ್ಗೊಳ್ಳಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೮:೩೦, ೧೧ ಆಗಸ್ಟ್ ೨೦೦೬ (UTC)


ಭಾಹ್ಯ ಸಂಪರ್ಕ ಎನ್ನುವಿದಕ್ಕಿಂತ ಹೊರಗಿನ ಸಂಪರ್ಕ ಪದ ಬಳಸುವುದು ಹೆಚ್ಚು ಸೂಕ್ತವೆನಿಸುತ್ತದೆ. ಹೊರಗಿನ ಶಬ್ದ ಮೂಲ ಕನ್ನಡದ ಪದ, ಭಾಹ್ಯ ಸಂಸ್ಕೃತದಿಂದ ಬಂದ ತದ್ಬವ ಪದ. -- Naveenbm ೧೧:೪೦, ೧೧ ಆಗಸ್ಟ್ ೨೦೦೬ (UTC)
hmm... ವಿಕಿಪೀಡಿಯದಲ್ಲಿ ಇಂತಹವುಗಳ ಕುರಿತು ನಿರ್ಧಾರ ತೆಗೆದುಕೊಳ್ಳುವಾಗ ದಯವಿಟ್ಟು ಪದಗಳ ಮೂಲ ಗುರುತಿಸಿ ಬಳಕೆ ನಿಶ್ಚಯಿಸುವುದು ಬೇಡ (ಅಂದರೆ ಮೂಲ ಕನ್ನಡದ ಪದ ಎಂಬ ಮಾತ್ರಕ್ಕೆ ಸ್ವೀಕರಿಸುವುದು ಅಥವ ಸ್ವೀಕರಿಸದೆ ಇರುವುದು ಬೇಡ). ವಿಕಿಪೀಡಿಯ ಬೆಳೆಸುವಲ್ಲಿ ಪದ ಬಳಕೆ ಮಾಡುವಾಗ ನಮಗೆ ಪ್ರಮುಖವಾಗಿರುವುದು convinience ಹಾಗೂ ಆಯಾ contextನಲ್ಲಿ ಆಯಾ ಪದ ಬಳಕೆಯ ಔಚಿತ್ಯ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೨:೨೩, ೧೧ ಆಗಸ್ಟ್ ೨೦೦೬ (UTC)


ಒಪ್ಪಿದೆ!! ಸಾಮಾನ್ಯವಾಗಿ ಆಡು ಭಾಷೆಯಲ್ಲಿ ಬಳಕೆಯಲ್ಲಿರುವ ಪದಗಳನ್ನು,ಅವುಗಳ ಮೂಲ ಗುರುತಿಸದೆ ವಿಕಿಪಿಡಿಯದಲ್ಲಿ ಬಳಸುವುದು ಸರಿ. ಈ ದೃಷ್ಟಿಯಿಂದ ನೋಡಿದರೂ ಹೊರಗಿನ ಸಂಪರ್ಕ, ಭಾಹ್ಯ ಸಂಪರ್ಕ ಶಬ್ದಕ್ಕಿಂತ ಸರಳ ಹಾಗು ಸಾಮಾನ್ಯ ಬಳಕೆಯಲ್ಲಿರುವ ಪದವಾಗಿದೆ. --Naveenbm ೧೫:೩೩, ೧೧ ಆಗಸ್ಟ್ ೨೦೦೬ (UTC)
ಹೊರಗಿನ ಸಂಪರ್ಕಗಳು ಸೂಕ್ತವಾದ ಆಯ್ಕೆ. "ಹೊರಗಿನ" ಎನ್ನುವುದು ದಿನನಿತ್ಯದ ಮಾತಿನಲ್ಲಿ ಮತ್ತು ಬರವಣಿಗೆಯಲ್ಲಿ ಉಪಯೋಗಿಸುವ ಪದ, ಎಲ್ಲರಿಗೂ ಸುಲಭವಾಗಿ ತಿಳಿಯುವಂತಹದ್ದು. ಬಾಹ್ಯ ಎನ್ನುವುದು ಬರವಣಿಗೆಯಲ್ಲಿ ಮಾತ್ರವಿದ್ದು, ಆಡುಮಾತಿನಲ್ಲಿ ಅಷ್ಟಾಗಿ ಉಪಯೋಗವಿಲ್ಲ. ಹೊರಗಿನ ಸಂಪರ್ಕಗಳು ಎನ್ನುವುದನ್ನೇ ಉಪಯೋಗಿಸೋಣ - ಮನ|Mana Talk - Contribs ೧೫:೩೯, ೧೧ ಆಗಸ್ಟ್ ೨೦೦೬ (UTC)