ವಿಕಿಪೀಡಿಯ:ಅರಳಿ ಕಟ್ಟೆ/ಕಾರ್ಯನೀತಿ ಚರ್ಚೆ-archive೧೨

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಳಿ ಕಟ್ಟೆಗೆ ಸ್ವಾಗತ. ಇದು ಕನ್ನಡ ವಿಕಿಪೀಡಿಯಾದ ಕಾರ್ಯನೀತಿಗಳ ಬಗ್ಗೆ, ತಾಂತ್ರಿಕ ದೋಷಗಳ ಬಗ್ಗೆ, ಹಾಗೂ ಕೆಲಸ ಕಾರ್ಯಗಳ ಬಗ್ಗೆ ಚರ್ಚಿಸಲು ಮೀಸಲಾಗಿರುವ ಪುಟ.

ಗಮನಿಸಿ:

  • ನಿಮ್ಮ ಸಲಹೆ ಚರ್ಚೆ ಹಾಗೂ ಅಭಿಪ್ರಾಯಗಳು ಯಾವುದೇ ಪುಟ ಅಥವ ಟೆಂಪ್ಲೇಟಿಗೆ ಸಂಬಂಧಪಟ್ಟಿದ್ದಲ್ಲಿ ಆಯಾ ಪುಟದ ಚರ್ಚೆ ಪುಟವನ್ನು ಬಳಸಿ.

ಹೊಸ ಸದಸ್ಯರ ಗಮನಕ್ಕೆ:

  • ಸಾಧ್ಯವಾದಷ್ಟೂ ಲೇಖನಗಳಿಗೆ ಸಂಬಂಧಪಟ್ಟ ಚರ್ಚೆಗಳನ್ನು ಆಯಾ ಲೇಖನದ ಚರ್ಚೆ ಪುಟಗಳಲ್ಲಿ ಸೇರಿಸಿ.
  • ಅಯಾ ಲೇಖನದ ಚರ್ಚೆ ಪುಟದಲ್ಲಿ ಲೇಖನಕ್ಕೆ ಸೇರಿಸಬೇಕಿರುವ ಮಾಹಿತಿಯ ಬಗ್ಗೆ, ಅದರ ಮೇಲಾಗಬೇಕಿರುವ ಕೆಲಸದ ಬಗ್ಗೆ ಬರೆದಿಡಲು - {{ಮಾಡಬೇಕಾದ ಕೆಲಸಗಳು}} ಟೆಂಪ್ಲೇಟ್ ಬಳಸಿ. ಉದಾಹರಣೆಗೆ: Talk:ಮಹಾಭಾರತ ನೋಡಿ.
  • ಈಗಾಗಲೇ ಇರುವ ಟೆಂಪ್ಲೇಟುಗಳನ್ನು ಸಾಧ್ಯವಾದಷ್ಟೂ ಬಳಸಿ. ಹೊಸ ಟೆಂಪ್ಲೇಟುಗಳನ್ನು ಸೇರಿಸುವ ಮುನ್ನ ಒಮ್ಮೆ ಹುಡುಕಿ ನೋಡಿ.
  • ವಿಶೇಷ ಪುಟಗಳನ್ನು ಸಾಧ್ಯವಾದಷ್ಟೂ ಬಳಸಿ,
  • ಚಿತ್ರಗಳನ್ನು ಅಪ್ಲೋಡ್ ಮಾಡುವ ಬಗ್ಗೆ ಕನ್ನಡ ವಿಕಿಪೀಡಿಯ ಪಾಲಿಸಿಗಳನ್ನು (ಕಾರ್ಯನೀತಿಗಳನ್ನು)‌ ರೂಪಿಸಬೇಕಿದೆ. ಆಂಗ್ಲ ವಿಕಿಪೀಡಿಯದಿಂದ ಚಿತ್ರಗಳಿಗಾಗಿ ಇರುವ ಲೈಸೆನ್ಸುಗಳ ಟೆಂಪ್ಲೇಟುಗಳನ್ನು ಕನ್ನಡ ವಿಕಿಪೀಡಿಯದಲ್ಲಿ ನಕಲು ಮಾಡಬೇಕಿದೆ. ಆಸಕ್ತಿಯುಳ್ಳವರು ಮುಂದೆ ಬಂದು ಪಾಲ್ಗೊಳ್ಳಿ.

justify

ಆರ್ಕೈವ್:

ಕಾರ್ಯನೀತಿಗಳ ಬಗ್ಗೆ ನಡೆದ ಚರ್ಚೆ: | | | | | | | | | ೧೦ | ೧೧ | ೧೨|೧೩ | ೧೩ | ೧೪ |೧೫ | ೧೬ | ೨೦ | ೨೧

ಇತರ ಚರ್ಚೆ: | | |

ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕಗಳನ್ನು ಸೇರಿಸುವುದು[ಬದಲಾಯಿಸಿ]

ಕನ್ನಡ ಸಾಹಿತ್ಯ ಪರಿಷತ್ತು ಹಲವು ಹಳೆಯ ಪುಸ್ತಕಗಳನ್ನು ಮುಕ್ತಜ್ಞಾನದ ಅಡಿಯಲ್ಲಿ ಪಿಡಿಎಫ್ ಮಾದರಿಯಲ್ಲಿ ಓದಲು ಅವಕಾಶ ಮಾಡಿ ಕೊಡುತ್ತಿದೆ. ಈ ಪುಸ್ತಕಗಳನ್ನು ಕಾಮನ್ಸ್‌ಗೆ ಸೇರಿಸಿ ನಂತರ ವಿಕಿಸೋರ್ಸ್‌ಗೆ ಸೇರಿಸಬಹುದು. ಸಮುದಾಯದವರಾದ ನಾವೆಲ್ಲರೂ ಈ ಕೆಲಸದಲ್ಲಿ ಕೈಜೋಡಿಸಬೇಕಾಗಿ ವಿನಂತಿ. ಇದಕ್ಕೆ ಸಾಹಿತ್ಯ ಪರಿಷತ್ತಿನ ಭೇಟಿ ಅಗತ್ಯ. ಪರಿಷತ್ತಿನ ಭೇಟಿಗೆ ಹಿರಿಯ ಸಮುದಾಯ ಸದಸ್ಯರ ಸಹಾಯ ಕೋರುತ್ತೇನೆ. --Gopala Krishna A (ಚರ್ಚೆ) ೦೫:೨೫, ೧೭ ಜನವರಿ ೨೦೧೮ (UTC)

ನಾನು ಕ.ಸಾ.ಪ.ದ ತಾಂತ್ರಿಕ ಸಲಹಾ ಸಮಿತಿ ಸದಸ್ಯ. ಕ.ಸಾ.ಪ.ದ ಪ್ರಕಟಣೆಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಬೇಕು ಎಂಬ ನನ್ನ ವಿನಂತಿ ಪತ್ರದ ಬಗ್ಗೆ ಸಭೆಯಲ್ಲಿ ಚರ್ಚೆಯಾಗಿದೆ. ಕೆಲವು ಪುಸ್ತಕಗಳನ್ನು ಬಿಡುಗಡೆ ಮಾಡುವುದು ಎಂಬ ತೀರ್ಮಾನವೂ ಆಗಿದೆ. ಮುಂದೆ ಏನಾಯಿತು ಗೊತ್ತಿಲ್ಲ. ಇತ್ತೀಚೆಗೆ ಯಾವುದೇ ಸಭೆ ನಡೆದಂತಿಲ್ಲ.--ಪವನಜ (ಚರ್ಚೆ) ೦೯:೩೨, ೧೭ ಜನವರಿ ೨೦೧೮ (UTC)
Pavanaja (talk · contribs)ರೇ ಕ.ಸಾ.ಪದ ಅಂತರ್ಜಾಲ ಪುಟದಲ್ಲಿ ಮುಕ್ತಜ್ಞಾನದ ಅಡಿಯಲ್ಲಿ ಹಲವು ಪುಸ್ತಕಗಳಿವೆ. ಕೊಂಡಿ ಇಲ್ಲಿದೆ. ಇದು ಕ್ರಿಯೇಟಿವ್ ಕಾಮನ್ಸ್‌ನಲ್ಲಿಯೇ ಇದೆ ಎಂದು ತೋರುತ್ತಿದೆ. --Gopala Krishna A (ಚರ್ಚೆ) ೦೯:೫೦, ೧೭ ಜನವರಿ ೨೦೧೮ (UTC)

ಇದಲ್ಲದೇ ಕನ್ನಡ ಸಾಹಿತ್ಯ ಪರಿಷತ್ತು ಅನೇಕ ಅಮೂಲ್ಯ ಚಿತ್ರಗಳನ್ನು ಹೊಂದಿದೆ. ಇವುಗಳನ್ನು ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ ಬಿಡುಗಡೆಗೊಳಿಸುವಂತೆ ಕೇಳಬಹುದು. --Gopala Krishna A (ಚರ್ಚೆ) ೧೦:೦೦, ೧೭ ಜನವರಿ ೨೦೧೮ (UTC)

Supporting Indian Language Wikipedias Program: Needs Assessment Survey[ಬದಲಾಯಿಸಿ]

Please translate this message if possible

Hello,
We are extremely delighted to inform that the Wikimedia Foundation and CIS-A2K have come together in a partnership with Google to launch a pilot project Supporting Indian Language Wikipedias Program to address local online knowledge content gaps in India. In order to engage and support active Wikipedia volunteers to produce valuable new content in local Indian languages, we are conducting a needs assessment survey. The aim of this survey is to understand the needs of the Indic Wikimedia community and ascertaining their infrastructure requirements that we can fulfill during the course of this project.

Please help us by participating in the survey here.

Your opinion will help to make the program better. Kindly share this survey across your communities, user groups and network of fellow Indic Wikimedians. -- m:User:Titodutta, sent using MediaWiki message delivery (ಚರ್ಚೆ) ೦೮:೫೧, ೮ ಡಿಸೆಂಬರ್ ೨೦೧೭ (UTC)

ಕನ್ನಡ ವಿಕ್ಷನರಿಯ ಲೋಗೋ[ಬದಲಾಯಿಸಿ]

ಕನ್ನಡ ವಿಕ್ಷನರಿಯ ಲೋಗೋ ಸರಿಪಡಿಸಬೇಕಾಗಿದೆ. ಇದರ ಬಗ್ಗೆ ಸಮುದಾಯ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕಾಗಿ ವಿನಂತಿ. --Gopala Krishna A (ಚರ್ಚೆ) ೦೭:೦೫, ೧೩ ಡಿಸೆಂಬರ್ ೨೦೧೭ (UTC)

ಸದಸ್ಯ:Anoop Rao ನಿಂದ ವಿನ್ಯಾಸ[ಬದಲಾಯಿಸಿ]

Support i support image No:2 for kannada wiktionary ★ Anoop / ಅನೂಪ್ © ೧೦:೨೯, ೧೩ ಡಿಸೆಂಬರ್ ೨೦೧೭ (UTC)

ಈ ಚರ್ಚೆಯನ್ನು ವಿಕ್ಷನರಿ ಅರಳಿಕಟ್ಟೆಯಲ್ಲಿ ನಡೆಸಿದರೆ ಹೇಗೆ? --Gopala Krishna A (ಚರ್ಚೆ) ೧೦:೩೪, ೧೩ ಡಿಸೆಂಬರ್ ೨೦೧೭ (UTC)

ಹಂಪಿಯಲ್ಲಿ ನಡೆಯಲಿರುವ ಸ್ಕ್ಯಾನಿಂಗ್ ಕೆಲಸದ ಬಗ್ಗೆ[ಬದಲಾಯಿಸಿ]

ಮುಂದಿನ ತಿಂಗಳ ಫೆಬ್ರವರಿಯ ತಾರೀಕು ೮,೯ ಮತ್ತು ೧೦ ರಂದು ಹಂಪಿ ವಿಶ್ವವಿದ್ಯಾಲಯದಲ್ಲಿ ದ್ರಾವಿಡ ನಿಘಂಟಿನ ಸ್ಕ್ಯಾನಿಂಗ್ ಪ್ರಕ್ರಿಯೆ ನಡೆಸಲು ಕೈಜೋಡಿಸಬೇಕೆಂದು ವಿಶ್ವವಿದ್ಯಾಲಯದಿಂದ ಮಾಹಿತಿ ಕಳಿಸಿದ್ದಾರೆ. ಈ ಕೆಲಸದಲ್ಲಿ ಸಮುದಾಯ ಸದಸ್ಯರೂ ಕೈಜೋಡಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (CIS-A2K) (ಚರ್ಚೆ) ೧೧:೪೬, ೨೩ ಜನವರಿ ೨೦೧೮ (UTC)

ಸ್ಕ್ಯಾನಿಂಗ್ ಮೂಲಕ ವಿಕ್ಷನರಿಯಲ್ಲಿ ಹೇಗೆ ಸೇರಿಸಲು ಸಾಧ್ಯ? ಸ್ಕ್ಯಾನಿಂಗ್ ನಂತರದ ಪ್ರಕ್ರಿಯೆ ಏನು? ಸ್ವಲ್ಪ ವಿವರ ತಿಳಿಸಿ ಎಂದು ಕೋರಿಕೆ.--Vikashegde (ಚರ್ಚೆ) ೦೫:೧೨, ೨೪ ಜನವರಿ ೨೦೧೮ (UTC)

@Vikashegde: ಈಗಾಗಲೇ ದ್ರಾವಿಡ ನಿಘಂಟಿನ ಶಬ್ದಗಳ ದಾಖಲೀಕರಣ ಕಂಬಸಾಲುಗಳ ಹಾಳೆಯಲ್ಲಿ (Spread sheet) ನಡೆಸಲಾಗಿದೆ. ಈಗಾಗಲೇ ಹಕ್ಕು ಸ್ವಾಮ್ಯದ ನವೀಕರಣ ಪ್ರಕ್ರಿಯೆ ನಡೆದಿದೆ. (ಅದನ್ನು OTRS ತಂಡಕ್ಕೆ ಕಳುಹಿಸಿ ಅವರ ಅನುಮತಿ ಪಡೆಯುವ ಕೆಲಸ ನಡೆಯಬೇಕಿದೆ.) ಪುಸ್ತಕದ ಸ್ಕ್ಯಾನಿಂಗ್ ನಡೆಸಿ ಅದನ್ನು ಕಾಮನ್ಸ್‌ಗೆ ಸೇರಿಸಿ ನಂತರ ಅದನ್ನು ವಿಕಿಸೋರ್ಸ್‌ಗೆ ಸೇರಿಸೋಣ. ವಿಕ್ಷನರಿಗೆ Spread sheet ಗಳನ್ನು ಸೇರಿಸಲು ಅದನ್ನು .csv ಗೆ ಕನ್ವರ್ಟ್ ಮಾಡಿ ಸಮುದಾಯದ ಒಪ್ಪಿಗೆ ಪಡೆದುಕೊಂಡು ಸೇರಿಸಬಹುದಾಗಿದೆ. (ಸರ್ವರ್‌ನ ಲೋಡ್‌ನಿಂದಾಗಿ ನಿಮಿಷಕ್ಕೆ ೫ ಶಬ್ದಗಳನ್ನು ಸೇರಿಸಬಹುದಾಗಿದೆ. ಹಾಗಾಗಿ ಅದು ಒಂದು ವಾರ ಆದರೆ ಸದ್ಯಕ್ಕೆ ವಿಕ್ಷನರಿಯನ್ನು ಬದಲಾಯಿಸುವುದು ಬೇಡ ಎಂಬುದು ನನ್ನ ಅಭಿಪ್ರಾಯ. ವಿಕ್ಷನರಿಯ Interface ಜೊತೆ ಅನೇಕ ರೀತಿಯ ಬದಲಾವಣೆಗಳಾಗಲಿವೆ ಎಂದು ತಿಳಿಯಲ್ಪಟ್ಟೆ. --ಗೋಪಾಲಕೃಷ್ಣ (ಚರ್ಚೆ) ೦೬:೩೭, ೨೪ ಜನವರಿ ೨೦೧೮ (UTC)

ವಿಕ್ಷನರಿ ಈಗ ಇರುವ ದತ್ತ ನಿರ್ವಹಣಾ ವಿಧಾನದಿಂದ ವಿಕಿಡಾಟಾ ನಡೆಸುತ್ತಿರುವ ವಿಕಿಬೇಸ್‍ಗೆ ಸ್ಥಳಾಂತರಗೊಳ್ಳಲಿದೆ ಎಂದು ತಿಳಿದುಬಂದಿದೆ. ಆದುದರಿಂದ ನಾವು ತುಳು ವಿಕ್ಷನರಿ ಕೋರಿಕೆಯನ್ನು ಮುಂದೂಡುತ್ತಿದ್ದೇವೆ.--ಪವನಜ (ಚರ್ಚೆ) ೦೬:೫೫, ೨೪ ಜನವರಿ ೨೦೧೮ (UTC)
ಹೌದು. ಪವನಜ ಅವರು ಹೇಳಿದ್ದು ಸರಿ. --ಗೋಪಾಲಕೃಷ್ಣ (ಚರ್ಚೆ) ೦೭:೫೦, ೨೪ ಜನವರಿ ೨೦೧೮ (UTC)


ವಿಕಿಪೀಡಿಯ ಸಂಪಾದನೊತ್ಸವ[ಬದಲಾಯಿಸಿ]

ವಿಕಿಪೀಡಿಯ ಸಂಪಾದನೋತ್ಸವವು ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆಯ ಅಡಿಯಲ್ಲಿ ನಡೆಯಲಿದೆ.ಈ ಸಂಪಾದನೋತ್ಸವದಲ್ಲಿ ಭಾಗವಹಿಸುವ ಆಸಕ್ತರು ಈ ಪುಟದಲ್ಲಿ ಸಹಿ ಮಾಡಿ.--Lokesha kunchadka (ಚರ್ಚೆ) ೧೭:೪೭, ೨೬ ಜನವರಿ ೨೦೧೮ (UTC)

ಆರು ತಿಂಗಳ ಪ್ರಗತಿ[ಬದಲಾಯಿಸಿ]

ಕನ್ನಡ ಸಮುದಾಯದ ಆರು ತಿಂಗಳ ಪ್ರಗತಿಯ ಬಗ್ಗೆ ವರದಿಯನ್ನು ತಯಾರಿಸಲಾಗಿದೆ. ಮುಂದಿನ ಆರು ತಿಂಗಳಲ್ಲಿ ಈ ಪ್ರಗತಿಯನ್ನು ಹೇಗೆ ಅಭಿವೃದ್ಧಿಪಡಿಸಬಹುದು ಎಂದು ಸಲಹೆಗಳನ್ನೂ ನೀಡಬೇಕಾಗಿ ವಿನಂತಿ. --Gopala Krishna A (CIS-A2K) (ಚರ್ಚೆ) ೧೨:೧೦, ೨೮ ಜನವರಿ ೨೦೧೮ (UTC)

ಅಭಿಪ್ರಾಯ[ಬದಲಾಯಿಸಿ]

ಕನ್ನಡ ಸಮುದಾಯ ಅಭಿವೃದ್ಧಿಪಡಿಸಲು ಮತ್ತು ಸಂಪಾದಕರ ನಡುವೆ ಸ೦ಪರ್ಕ ಅಭಿವೃದ್ಧಿಪಡಿಸಲು 10 ಕಿಂತ(ತಿಂಗಳಲ್ಲಿ) ಹೆಚ್ಚಿಗೆ ಸಂಪಾದನೆ ಮಾಡಿದ ಸಂಪಾದಕರನ್ನು ತಿಂಗಳ IRC ಚರ್ಚೆಯಲ್ಲಿ ಭಾಗವಹಿಸಲು ಹೊಸ ಸಂಪಾದಕರನ್ನು ಉತ್ತೇಜನ ನೀಡುವದು ಉತ್ತಮ.ಇದು ನನ್ನ ಅಭಿಪ್ರಾಯ.Sangappadyamani (ಚರ್ಚೆ) ೧೩:೦೬, ೨೮ ಜನವರಿ ೨೦೧೮ (UTC)
@ಗೋಪಾಲಕೃಷ್ಣ --ಫೆಭ್ರವರಿ ತಿಂಗಳ irc ದಿನಾಂಕ ಮತ್ತು ಸಮಯ ಸೂಚಿಸಲು ವಿನಂತಿ.
Content addition ಏನೇನೂ ಸಾಲದು ಅನಿಸುತ್ತಿದೆ. ಆರು ತಿಂಗಳ ಅವಧಿಗೆ ಇದು ಬಹಳ ಕಡಿಮೆಯಾಯಿತು. ಇದನ್ನು ಹೆಚ್ಚಿಸಲು ಇನ್ನೂ ಹೆಚ್ಚಿನ ಕೆಲಸಗಳನ್ನು ಮಾಡಲೇಬೇಕಿದೆ --Vikashegde (ಚರ್ಚೆ) ೧೭:೫೬, ೨೮ ಜನವರಿ ೨೦೧೮ (UTC)

ಲೆಖನದ ಗುಣಮಟ್ಟ ಉತ್ತಮ ಪಡಿಸುವುದು ,ತಿಂಗಳಿಗೊಂದು IRcನಡೆಸುವುದು. ಹೊಸ ಸದಸ್ಯರಿಗೆ ಪ್ರೋತ್ಸಾಹ ನೀಡುವುದು--Lokesha kunchadka (ಚರ್ಚೆ) ೦೪:೪೭, ೨೯ ಜನವರಿ ೨೦೧೮ (UTC).

  • ಧನ್ಯವಾದಗಳು. ಫೆಬ್ರವರಿ ತಿಂಗಳ ಕೊನೆಯಲ್ಲಿ IRC ನಡೆಸಿ ಮಾರ್ಚ್ ತಿಂಗಳಲ್ಲಿ ಸಮ್ಮಿಲನ ಮತ್ತು ಅಟೋ ವಿಕಿ ಬ್ರೌಸರ್ (AWB) ತರಬೇತಿ ಕಾರ್ಯಕ್ರಮ ನಡೆಸೋಣವೇ? --Gopala Krishna A (CIS-A2K) (ಚರ್ಚೆ) ೦೮:೧೭, ೨೯ ಜನವರಿ ೨೦೧೮ (UTC)
ಅಟೋ ವಿಕಿ ಬ್ರೌಸರ್ (AWB) ಅನ್ನು ಕೆಲವು ಆಯ್ದ ಜವಾಬ್ದಾರಿಯುತವಾಗಿ ಕೆಲಸ ಮಾಡುವ ಸಂಪಾದಕರಿಗೆ ಮಾತ್ರ ಹೇಳಿ ಕೊಡುವುದು ಉತ್ತಮ ಎಂದು ನನ್ನ ಅಭಿಪ್ರಾಯ. ಯಾಕೆಂದರೆ ಒಂದು ತಪ್ಪು ಆದೇಶದ ಮೂಲಕ ಇಡಿಯ ಕನ್ನಡ ವಿಕಿಪೀಡಿಯವನ್ನೇ ಕೆಡಿಸುವ ಸಾಮರ್ಥ್ಯ ಅದಕ್ಕಿದೆ.--ಪವನಜ (ಚರ್ಚೆ) ೦೯:೪೨, ೨೯ ಜನವರಿ ೨೦೧೮ (UTC)
ಈ ಜವಾಬ್ದಾರಿಯುತ ಸಂಪಾದಕರ ಆಯ್ಕೆಯೇ ಕಷ್ಟ :). ಇರಲಿ. ತರಬೇತಿಯಂತೂ ಬೇಕು. ಬಹಳ ಉಪಯುಕ್ತ ಟೂಲ್ ಅದು. ಫೆಬ್ರವರಿಗೊಂದು ಐ ಆರ್ ಸಿ ನಡೆಸಿ ಆಟೋ ವಿಕಿ ಬ್ರೌಸರ್ ತರಬೇತಿ ಜೊತೆಗೆ ಸಮ್ಮಿಲನವನ್ನೂ ಏರ್ಪಡಿಸಬಹುದು.--Vikashegde (ಚರ್ಚೆ) ೧೨:೫೩, ೨೯ ಜನವರಿ ೨೦೧೮ (UTC)

ಶಾಲೆಗಳಿಗೆ ತುಳು ಆಫ್‍ಲೈನ್ ವಿಕಿಪೀಡಿಯ[ಬದಲಾಯಿಸಿ]

ತುಳುನಾಡಿನ ಶಾಲೆಗಳಲ್ಲಿ ತುಳುವನ್ನು ಒಂದು ಭಾಷೆಯಾಗಿ ಕಲಿಸುತ್ತಿದ್ದಾರೆ. ತುಳುವನ್ನು ಕಲಿಯುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುವ ವಿಷಯಗಳ ಬಗೆಗೆ ತುಳು ವಿಕಿಪೀಡಿಯದಲ್ಲಿ ಲೇಖನಗಳನ್ನು ಸೇರಿಸಿ, ನಂತರ ತುಳು ವಿಕಿಪೀಡಿಯದ ಆಫ್‍ಲೈನ್ ಆವೃತ್ತಿ (Kiwix) ತಯಾರಿಸಿ, ಅವುಗಳನ್ನು ಶಾಲೆಗಳಿಗೆ ತಲುಪಿಸುವ ಒಂದು ಯೋಜನೆಯನ್ನು ತಯಾರಿಸಲಾಗಿದೆ. ಅದಕ್ಕಾಗಿ ವಿಕಿಮೀಡಿಯ ಫೌಂಡೇಶನ್‍ಗೆ ಧನಸಹಾಯಕ್ಕೆ ಅರ್ಜಿಯನ್ನು ಸಲ್ಲಿಸಲಾಗಿದೆ. ಅದು ಇಲ್ಲಿದೆ. ದಯವಿಟ್ಟು ಎಲ್ಲರೂ ಅದನ್ನು ಓದಿ ನಿಮ್ಮ ಸಲಹೆ ಸೂಚನೆಗಳನ್ನು ಆ ಯೋಜನೆಯ ಚರ್ಚಾ ಪುಟದಲ್ಲಿ ದಾಖಲಿಸಿ. ಹಾಗೆಯೇ ಈ ಯೋಜನೆಗೆ ನಿಮಗೆ ಸಮ್ಮತಿ ಇದ್ದಲ್ಲಿ ಅದನ್ನು ಬೆಂಬಲಿಸಬೇಕಾಗಿ ಕೋರುತ್ತೇನೆ.--ಪವನಜ (ಚರ್ಚೆ) ೦೪:೩೨, ೩೧ ಜನವರಿ ೨೦೧೮ (UTC)

ಮೈಸೂರು ಸಂಪಾದನೋತ್ಸವ ೨೦೧೮[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಸಮುದಾಯ ಬಲಪಡಿಸುವ ಉದ್ದೇಶದಿಂದ ಮತ್ತು ವನ್ಯಜೀವಿ ಮತ್ತು ಪರಿಸರ ಅಧ್ಯಯನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಸೇರಿಸುವ ಉದ್ದೇಶದಿಂದ ದಿನಾಂಕ ೧೭ ಮತ್ತು ೧೮ರಂದು ಮೈಸೂರಿನಲ್ಲಿ ಕಾರ್ಯಾಗಾರ ಮತ್ತು ಸಂಪಾದನೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಬೇಕಾಗಿ ವಿನಂತಿ. --Gopala Krishna A (CIS-A2K) (ಚರ್ಚೆ) ೦೬:೦೪, ೧ ಫೆಬ್ರುವರಿ ೨೦೧೮ (UTC)

Gopala Krishna A (CIS-A2K) ಫೆಬ್ರುವರಿ ದಿನಾಂಕ ೧೭ ಮತ್ತು ೧೮ರಂದು ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಶಿವಮೊಗ್ಗ ಫೆಬ್ರವರಿ ೨೦೧೮ ಕೂಡ ಇದೆ. ★ Anoop / ಅನೂಪ್ © ೦೮:೨೦, ೧ ಫೆಬ್ರುವರಿ ೨೦೧೮ (UTC)

ವಿಕಿಸೋರ್ಸ್‌ಗೆ ಬೇಕಾದ ಗ್ಯಾಜೆಟ್‌ಗಳ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಸೋರ್ಸ್‌ಗೆ ಕೆಲವು ಮುಖ್ಯ ಗ್ಯಾಜೆಟ್‌ಗಳ ಅವಶ್ಯಕತೆ ಇದೆ. ಅವುಗಳನ್ನು ಇಂಪೋರ್ಟ್ ಮಾಡಬೇಕೆಂದು ಅಡ್ಮಿನ್‌ಗಳಲ್ಲಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೦:೪೩, ೧೧ ಫೆಬ್ರುವರಿ ೨೦೧೮ (UTC)

  1. Twinkle
  2. Easy LST
  3. Generate Paragraph
  4. Change the "new section" tab text to instead display the much narrower "+".
ವಿಕಿಸೋರ್ಸ್'ನಲ್ಲಿ ಉತ್ತರಿಸಿದ್ದೇನೆ. ಚರ್ಚೆ ವಿಕಿಸೋರ್ಸ್'ನಲ್ಲಿ ಮುಂದುವರಿಸಿ. ★ Anoop / ಅನೂಪ್ © ೧೭:೦೭, ೧೩ ಫೆಬ್ರುವರಿ ೨೦೧೮ (UTC)

ವಿಕಿಕೋಟ್ಸ್ ಗೆ ಗ್ಯಾಜೆಟ್ಗಳ ಅಳವಡಿಕೆ (ಹಳೆಯ ಚರ್ಚೆ)[ಬದಲಾಯಿಸಿ]

ವಿಕಿಕೋಟ್'ನಲ್ಲಿ ಸದ್ಯದಲ್ಲಿಯೇ ಗ್ಯಾಜೆಟ್ಗಳನ್ನು ಅಳವಡಿಸುತ್ತೇನೆ. ★ Anoop / ಅನೂಪ್ © ೧೭:೧೪, ೧೩ ಫೆಬ್ರುವರಿ ೨೦೧೮ (UTC)

ಲಿಂಗ ಅಸಮಾನತೆ ಸಂಪಾದನೋತ್ಸವಗಳು-೨೦೧೮[ಬದಲಾಯಿಸಿ]

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ. ವಿವರಗಳಿಗೆ ಈ ಪುಟ ನೋಡಿ.--Dhanalakshmi .K. T (ಚರ್ಚೆ) ೧೪:೧೨, ೧೨ ಫೆಬ್ರುವರಿ ೨೦೧೮ (UTC)

AWB, Tools ಮತ್ತು ಗ್ಯಾಜೆಟ್ ಕಾರ್ಯಾಗಾರ ಮತ್ತು ಸಮ್ಮಿಲನ[ಬದಲಾಯಿಸಿ]

ಕನ್ನಡ ವಿಕಿಪೀಡಿಯನ್ನರ ಸಲಹೆಯ ಮೇರೆಗೆ AWB (Auto Wiki Browser), Tools, Gadget ಗಳನ್ನು ಬಳಸುವುದು ಹೇಗೆ, ಅದನ್ನು ಉಪಯೋಗಿಸಿಕೊಂಡು ಸಂಪಾದನೆಯನ್ನು ಹೇಗೆ ಸುಲಭ ಮತ್ತು ಉತ್ತಮ ಪಡಿಸಿಕೊಳ್ಳಬಹುದು ಎಂಬುದನ್ನೆಲ್ಲ ತಿಳಿಯಲು ಕಾರ್ಯಾಗಾರವನ್ನು ಹಮ್ಮಿಕೊಳ್ಳಲು ಮಾರ್ಚ್ ತಿಂಗಳ ದಿನಾಂಕ ೩ ಮತ್ತು ೪ ರಂದು ಸೆಂಟರ್ ಫಾರ್ ಇಂಟರ್ನೆಟ್ ಮತ್ತು ಸೊಸೈಟಿಯಲ್ಲಿ ಸ್ಥಳಾವಕಾಶ ಇದೆ. ಇದನ್ನು ಕನ್ನಡ ವಿಕಿಪೀಡಿಯ ಸಮುದಾಯ ಸದುಪಯೋಗ ಪಡಿಸಿಕೊಂಡು ಕಾರ್ಯಾಗಾರ ಮತ್ತು ಸಮ್ಮಿಲನ ಜೊತೆಯಾಗಿ ನಡೆಸೋಣವೇ? --Gopala Krishna A (CIS-A2K) (ಚರ್ಚೆ) ೦೮:೫೯, ೧೩ ಫೆಬ್ರುವರಿ ೨೦೧೮ (UTC)

ಚರ್ಚೆ[ಬದಲಾಯಿಸಿ]

ಮಾರ್ಚ್ ೦೩-೦೪ ಕ್ಕೆ ಮಂಗಳೂರಿನಲ್ಲಿ ಸಂಪಾದನೋತ್ಸವ ಇದೆ. ಇತರೆ ಕೆಲವು ಸಂಪಾದನೋತ್ಸವಗಳ ಪಟ್ಟಿ ಇಲ್ಲಿದೆ.--ಪವನಜ (ಚರ್ಚೆ) ೦೯:೩೩, ೧೩ ಫೆಬ್ರುವರಿ ೨೦೧೮ (UTC)
ಟೆಕ್ನಿಕಲ್ ಕಾರ್ಯಾಗಾರ ಸಮುದಾಯದ ಬಹು ದಿನದ ಬೇಡಿಕೆಯಾಗಿದೆ. ಹಲವು ದಿನಗಳಿಂದ ಮತ್ತು ಹಲವು ಕಾರಣಗಳಿಂದ ಇದು ನಡೆದಿಲ್ಲ. ಕನ್ನಡ ವಿಕಿಪೀಡಿಯ ಸಮುದಾಯ ವೇಗವಾಗಿ ಬೆಳೆಯುತ್ತಿರುವ ಕಾರಣ ಪ್ರತಿಯೊಂದಕ್ಕೂ ಪರ್ಯಾಯ ದಿನ ಹುಡುಕುವುದು ಕಷ್ಟವಾಗುತ್ತಿದೆ. ೦೩-೦೪ ರಂದು ಸಿಐಎಸ್‌ನಲ್ಲಿ ಸಮಯ, ಸಂಪನ್ಮೂಲ ವ್ಯಕ್ತಿಗಳ ಲಭ್ಯತೆ ಇದೆ . ಇತರ ಬೇರೆ ದಿನಗಳು ಸಮುದಾಯ ಸದಸ್ಯರಿಗೂ ಹೊಂದಿಕೆ ಆಗುತ್ತಿಲ್ಲ. ಮಂಗಳೂರಿನಲ್ಲಿ ನಡೆಯುತ್ತಿರುವುದು ಸಂಪಾದನೋತ್ಸವ ಆದ್ದರಿಂದ ಸಂಪಾದನೋತ್ಸವದಲ್ಲಿ ಆಸಕ್ತಿ ಇರುವವರು ಅಲ್ಲಿ ಭಾಗವಹಿಸುತ್ತಾರೆ ಎಂಬುದು ನಮ್ಮ ಆಶಯ. ಇಲ್ಲಿ ನಡೆಸಬೇಕೆಂದಿಸುವುದು ಟೆಕ್ನಿಲಲ್ ತರಬೇತಿ ಆದ್ದರಿಂದ ಇದರಲ್ಲಿ ಆಸಕ್ತಿ ಇರುವವರು ಟೆಕ್ನಿಕಲ್ ತರಬೇತಿಯಲ್ಲಿ ಭಾಗವಹಿಸಲಿ. ಮಂಗಳೂರಿನಲ್ಲಿ ನಡೆಯಲಿರುವ ಸಂಪಾದನೋತ್ಸವಕ್ಕೆ ಸಿಐಎಸ್ ತಂಡದಿಂದ ಯಾವುದೇ ರೀತಿಯ ಸಹಾಯವನ್ನು ನೀಡಲು ಸಿದ್ದರಿದ್ದೇವೆ. --Gopala Krishna A (CIS-A2K) (ಚರ್ಚೆ) ೧೦:೧೫, ೧೩ ಫೆಬ್ರುವರಿ ೨೦೧೮ (UTC)
ಮಂಗಳೂರಿನವರು ಬೆಂಗಳೂರಿನಲ್ಲಿ ಜರುಗಲಿರುವ ಕಾರ್ಯಕ್ರಮಕ್ಕೆ ಬರುವುದಿಲ್ಲ ಅಥವಾ ಬರಬೇಕಾದ ಅಗತ್ಯವಿಲ್ಲ ಎಂದು ತೀರ್ಮಾನಿಸಿದಂತಿದೆ. ಮಂಗಳೂರಿನ ಸಂಪಾದನೋತ್ಸವದಲ್ಲಿ ಭಾಗವಹಿಸುವವರಿಗೆ ಟೆಕ್ನಿಕಲ್ ತರಬೇತಿಯ ಅಗತ್ಯವಿದ್ದರೆ ಏನು ಮಾಡಬೇಕು?--ಪವನಜ (ಚರ್ಚೆ) ೧೩:೦೧, ೧೩ ಫೆಬ್ರುವರಿ ೨೦೧೮ (UTC)
Pavanaja (talk · contribs) ಮತ್ತೊಂದು ಕಾರ್ಯಾಗಾರ ನಡೆಸೋಣ. --Gopala Krishna A (CIS-A2K) (ಚರ್ಚೆ) ೧೩:೧೮, ೧೩ ಫೆಬ್ರುವರಿ ೨೦೧೮ (UTC)
ತರಬೇತಿ ನೀಡುವವರು ಯಾರು?--ಪವನಜ (ಚರ್ಚೆ) ೧೩:೪೦, ೧೩ ಫೆಬ್ರುವರಿ ೨೦೧೮ (UTC)
@Pavanaja: Anoop Rao (talk · contribs) --Gopala Krishna A (CIS-A2K) (ಚರ್ಚೆ) ೧೮:೩೮, ೧೫ ಫೆಬ್ರುವರಿ ೨೦೧೮ (UTC)

ಈ ಕಾರ್ಯಾಗಾರದಲ್ಲಿ ಭಾಗವಹಿಸಲು ಆಶಿಸುವವರು ಈ ಪುಟಕ್ಕೆ ಭೇಟಿ ನೀಡಬೇಕಾಗಿ ವಿನಂತಿ.

ಮಹಿಳಾ ಕೇಂದ್ರಿತ ಸಂಪಾದನೋತ್ಸವಗಳು-೨೦೧೮[ಬದಲಾಯಿಸಿ]

ವಿಕಿಪೀಡಿಯದಲ್ಲಿ ಲಿಂಗ ಅಸಮಾನತೆ ಇದೆ. ಅಂದರೆ ಪುರುಷ ಸಂಪಾದಕರ ಸಂಖ್ಯೆ ಮಹಿಳಾ ಸಂಪಾದಕರ ಸಂಖ್ಯೆಗಿಂತ ಜಾಸ್ತಿ ಇದೆ. ಒಂದು ಅಂದಾಜಿನ ಪ್ರಕಾರ ಕನ್ನಡ ವಿಕಿಪೀಡಿಯದಲ್ಲಿ ಪುರುಷ ಮತ್ತು ಮಹಿಳಾ ಸಂಫಾದಕರ ಸಂಖ್ಯೆಯ ಅನುಪಾತ ೭:೧ ಇದೆ. ಸಹಜವಾಗಿಯೇ ವಿಕಿಪೀಡಿಯದಲ್ಲಿ ಮಹಿಳಾ ಸಂಬಂಧಿ ಲೇಖನಗಳೂ ಕಡಿಮೆಯಿವೆ. ಈ ಅಸಮಾನತೆಯನ್ನು ಹೋಗಲಾಡಿಸಲು ಮಹಿಳಾ ದಿನ ಮತ್ತು ತಿಂಗಳು ಸಂದರ್ಭದಲ್ಲಿ ಅಂದರೆ ಮಾರ್ಚ್ ೨೦೧೮ರಲ್ಲಿ ಪ್ರಾರಂಭಿಸಿ ಹಲವು ಸಂಪಾದನೋತ್ಸವಗಳನ್ನು ಆಯೋಜಿಸಲಾಗಿದೆ. ವಿವರಗಳಿಗೆ ಈ ಪುಟವನ್ನು ನೋಡಿ.--Dhanalakshmi .K. T (ಚರ್ಚೆ) ೧೨:೧೧, ೧೮ ಫೆಬ್ರುವರಿ ೨೦೧೮ (UTC)

ಮಾರ್ಚ್ ೮ರಂದು ನಡೆವ ಮಹಿಳಾ ದಿನಾಚರಣೆ ಪ್ರಯುಕ್ತ ನಡೆಯುವ ಈ ಸಂಪಾದನೋತ್ಸವದಲ್ಲಿ ಈಗಾಗಲೇ ೩೭ ಮಂದಿ ಹೆಸರು ನೋಂದಾಯಿಸಿದ್ದಾರೆ. ಇದೊಂದು ಉತ್ತಮ ಪ್ರತಿಕ್ರಿಯೆ. ೧೩ನೆಯ ವರ್ಷಾಚರಣೆ ನಂತರ ಸಂತ ಅಲೋಶಿಯಸ್ ಕಾಲೇಜಿನಲ್ಲಿ ನಡೆಯುವ ವ್ಯವಸ್ಥಿತ ಸಂಪಾದನೋತ್ಸವ ಇದಾಗಿದೆ. ಧನಲಕ್ಷ್ಮಿ ಪ್ರಯತ್ನ ಉತ್ತಮವಾಗಲಿದೆ. ಮಂಗಳೂರಿನಲ್ಲಿ ಈ ಸಂಪಾದನೋತ್ಸವವನ್ನು ಆಯೋಜಿಸಿರುವುದಕ್ಕೆ ಧನ್ಯವಾದಗಳು. --Vishwanatha Badikana (ಚರ್ಚೆ) ೧೫:೫೧, ೨೩ ಫೆಬ್ರುವರಿ ೨೦೧೮ (UTC)
ಸಂಪಾದನೋತ್ಸವಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ. ಆಯೋಜಕರಿಗೆ ಧನ್ಯವಾದಗಳು ಮತ್ತು ಶ್ಲಾಘನೆಗಳು.--Vikashegde (ಚರ್ಚೆ) ೧೨:೦೪, ೨೭ ಫೆಬ್ರುವರಿ ೨೦೧೮ (UTC)
ಪ್ರೋತ್ಸಾಹದ ನುಡಿಗಳಿಗೆ ಧನ್ಯವಾದಗಳು--Dhanalakshmi .K. T (ಚರ್ಚೆ) ೦೩:೧೨, ೨೮ ಫೆಬ್ರುವರಿ ೨೦೧೮ (UTC)

International Mother Langage Day and Open Data Day Wikidata Edit-a-thon[ಬದಲಾಯಿಸಿ]

Please translate the message to your language, if applicable

Hello,
We are happy to inform you that a national level Wikidata editing campaign "IMLD-ODD 2018 Wikidata India Edit-a-thon" on content related to India is being organized from from 21 February 2018 to 3 March 2018. This edit-a-thon marks International Mother Language Day and Open Data Day.

Please learn more about this event: here.
Please consider participating in the event, by joining here.
You may get a list of suggested items to work on here.

Please let us know if you have question. -- Titodutta using MediaWiki message delivery (ಚರ್ಚೆ) ೦೭:೧೨, ೨೧ ಫೆಬ್ರುವರಿ ೨೦೧೮ (UTC)

Project Tiger ಸಂಪಾದನಾ ಸ್ಪರ್ಧೆ[ಬದಲಾಯಿಸಿ]

ಮಾರ್ಚ್ ೧ನೇ ತಾರೀಕಿನಿಂದ ಈ ಭಾರತೀಯ ಭಾಷೆಯ ವಿಕಿಪೀಡಿಯ ಸಂಪಾದಕರಿಗೆ ಸಹಕಾರ ಯೋಜನೆಯ ಸಂಪಾದನಾ ಸ್ಪರ್ಧೆ ನಡೆಯಲಿದೆ. ಈ ಸ್ಪರ್ಧೆಯಲ್ಲಿ ವಿವಿಧ ಭಾರತೀಯ ಭಾಷೆಯ ವಿಕಿಪೀಡಿಯನ್ನರು ಮತ್ತು ಸಮುದಾಯಗಳು ಭಾಗವಹಿಸುತ್ತಿದೆ. ಈ ಸ್ಪರ್ಧೆಯಲ್ಲಿ ವೈಯಕ್ತಿಕ ಬಹುಮಾನ ಮತ್ತು ಸಮುದಾಯಕ್ಕೆ ಬಹುಮಾನಗಳು ಪ್ರತ್ಯೇಕವಾಗಿ ಲಭಿಸಲಿವೆ. ಈ ಸ್ಪರ್ಧೆಯಲ್ಲಿ ಎಲ್ಲರೂ ಆಸಕ್ತಿಯಿಂದ ಭಾಗವಹಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೯:೦೯, ೨೭ ಫೆಬ್ರುವರಿ ೨೦೧೮ (UTC)

CISನಲ್ಲಿ ಇರುವ ಪುಸ್ತಕಗಳು[ಬದಲಾಯಿಸಿ]

ಸಿಐಎಸ್‌ನಲ್ಲಿ ಕನ್ನಡ ವಿಕಿ ಸಮುದಾಯದ ಬಳಕೆಗಾಗಿ ಇರುವ ಪುಸ್ತಕಗಳ ಪಟ್ಟಿ ಇಲ್ಲಿದೆ. ಸಮುದಾಯದವರು ಈ ಪುಸ್ತಕಗಳ ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ. ಸಮುದಾಯ ಸದಸ್ಯರಲ್ಲಿ ಇತರ ಪುಸ್ತಕಗಳಿದ್ದರೆ ಪಟಟಿಗೆ ಸೇರಿಸಬೇಕಾಗಿ ವಿನಂತಿ. --Gopala Krishna A (CIS-A2K) (ಚರ್ಚೆ) ೧೧:೨೯, ೧ ಮಾರ್ಚ್ ೨೦೧೮ (UTC)

ವಿಕಿಪೀಡಿಯದಲ್ಲಿ ಒಂದಕ್ಕಿಂತ ಹೆಚ್ಚಿನ ಖಾತೆ ಬಳಕೆಯ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಒಂದಕ್ಕಿಂತ ಹೆಚ್ಚಿನ ಖಾತೆ ಬಳಸಿಕೊಂಡು ಸಂಪಾದನೆ ಮಾಡುವುದು ಸರಿಯೇ? ಇದಕ್ಕೆ ಇಂಗ್ಲಿಷ್ ವಿಕಿಪೀಡಿಯದಂತೆ ನಮ್ಮಲ್ಲಿಯೂ ನಿಯಮ ಮಾಡುವ ಅಗತ್ಯತೆ ಇದೆಯಾ? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೧೧:೨೮, ೧ ಮಾರ್ಚ್ ೨೦೧೮ (UTC)

ಕನ್ನಡ ವಿಕಿಪೀಡಿಯಾದಲ್ಲಿ ಅಥವಾ ಇತರ ವಿಕಿಗಳಲ್ಲಿ ಹೆಚ್ಚಿನ ಖಾತೆಯನ್ನು ಹೊಂದಬಹುದು,ನೀವು ಮೇಲೆ ಲಿಂಕ್ ಮಾಡಿದ ಆಂಗ್ಲ ವಿಕಿ ನಿಯಮಾವಳಿ ಎಲ್ಲಾ ವಿಕಿಮೀಡಿಯಾ ವಿಕಿಗಳಿಗೆ ಅನ್ವಯಿಸುತ್ತದೆ. ★ Anoop / ಅನೂಪ್ © ೧೧:೫೩, ೧ ಮಾರ್ಚ್ ೨೦೧೮ (UTC)
ಮೇಲೆ ಲಿಂಕ್‌ನಲ್ಲಿ ತಿಳಿಸಿದ ನಿಯಮದಂತೆ ಒಂದೇ ಸದಸ್ಯ ಒಂದಕ್ಕಿಂತ ಹೆಚ್ಚಿನ ಖಾತೆಗಳಿಂದ ವಿಕಿಪೀಡಿಯ ಸಂಪಾದಿಸುವಂತಿಲ್ಲ. ಅಂದರೆ ಎರಡು ಖಾತೆಗಳಿಂದ ಸಂಪಾದಿಸುವಂತಿಲ್ಲ ಎಂದಲ್ಲವೇ? --ಗೋಪಾಲಕೃಷ್ಣ (ಚರ್ಚೆ) ೧೨:೫೪, ೧ ಮಾರ್ಚ್ ೨೦೧೮ (UTC)
ಕನ್ನಡ ವಿಕಿಪೀಡಿಯದಲ್ಲಿ ಪ್ರತ್ಯೇಕ ನಿಯಮವಿಲ್ಲದಿದ್ದಾಗ, ಬಹುತೇಕ ಸಂದರ್ಭಗಳಲ್ಲಿ, ಇಂಗ್ಲಿಶ್ ವಿಕಿಪೀಡಿಯದ ನಿಯಮ ಸಾಮನ್ಯವಾಗಿ ಅನ್ವಯವಾಗುತ್ತದೆ--ಪವನಜ (ಚರ್ಚೆ) ೦೫:೨೭, ೨ ಮಾರ್ಚ್ ೨೦೧೮ (UTC)
ಕನ್ನಡ ವಿಕಿಪೀಡಿಯಾದಲ್ಲಿ ಅಥವಾ ಇತರ ವಿಕಿಗಳಲ್ಲಿ ಹೆಚ್ಚಿನ ಖಾತೆಯನ್ನು ಹೊಂದಬಹುದು, ಆದರೆ, ಷರತ್ತಿಗೆ ಒಳಪಟ್ಟು ಎಂದು ತಿಳಿದುಬರುವುದು ಮತ್ತು ದುರುಪಯೋಗ ಸಲ್ಲ. ಇಂಗ್ಲಿಷ್ ವಿಕಿಪೀಡಿಯ. --ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೦೪, ೨ ಮಾರ್ಚ್ ೨೦೧೮ (UTC)

ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಬೇಕಾದ ಅಗತ್ಯತೆಗಳು[ಬದಲಾಯಿಸಿ]

ಈ ಲಿಂಕ್‌ನಲ್ಲಿರುವ ಫಾರ್ಮ್‌ಅನ್ನು ತುಂಬಿಸಿ ಕನ್ನಡ ವಿಕಿಪೀಡಿಯಕ್ಕೆ ಮುಂದಿನ ವರ್ಷ ಬೇಕಾದ ಅಗತ್ಯತೆ, ಅಭಿಪ್ರಾಯಗಳನ್ನು ತಿಳಿಸಬೇಕಾಗಿ ವಿನಂತಿ. --Gopala Krishna A (CIS-A2K) (ಚರ್ಚೆ) ೦೬:೪೯, ೨ ಮಾರ್ಚ್ ೨೦೧೮ (UTC)

ಮುಂದಿನ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆ[ಬದಲಾಯಿಸಿ]

ಮಾರ್ಚ್ ತಿಂಗಳ ವಿಕಿಪೀಡಿಯ ಸಾಧಕರ ಆಯ್ಕೆಯ ಚರ್ಚೆ ಪ್ರಾರಂಭಿಸೋಣ. ಸೂಕ್ತ ವ್ಯಕ್ತಿಯನ್ನು ಆರಿಸಬೇಕಾಗಿ ವಿನಂತಿ. ಈ ವರೆಗಿನ ಸಾಧಕರ ಪಟ್ಟಿ ಇಲ್ಲಿದೆ. --ಗೋಪಾಲಕೃಷ್ಣ (ಚರ್ಚೆ) ೦೭:೧೫, ೨ ಮಾರ್ಚ್ ೨೦೧೮ (UTC)

  • ಮಾರ್ಚ್ ತಿಂಗಳು ಮಹಿಳಾ ದಿನಾಚರಣೆ ಮತ್ತು ತಿಂಗಳು ಎಂದು ಜಗತ್ತಿನ ಎಲ್ಲ ಭಾಷೆಯ ವಿಕಿಪೀಡಿಯಗಳು ಆಚರಿಸುತ್ತಿವೆ. ಆದುದರಿಂದ ಈ ತಿಂಗಳು ಓರ್ವ ಮಹಿಳಾ ಸಂಪಾದಕಿಯನ್ನು ಸಾಧಕಿ ಎಂದು ಗುರುತಿಸಬಹುದು. ಅವರು ಈ ಹಿಂದಿನ ತಿಂಗಳೇ ಸಾಧನೆ ಮಾಡಿರಬೇಕಾಗಿಲ್ಲ. ಅಂತೆಯೇ ನಾನು ಸೂಚಿಸುವ ಹೆಸರು ದಿವ್ಯ ಎಚ್.ಎಂ.--ಪವನಜ (ಚರ್ಚೆ) ೦೭:೫೫, ೨ ಮಾರ್ಚ್ ೨೦೧೮ (UTC)
  • ನಾನು ಅನುಮೋದಿಸುತ್ತೇನೆ.ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೧೭, ೨ ಮಾರ್ಚ್ ೨೦೧೮ (UTC)
  • ಸದಸ್ಯ:Dr.K.Soubhagyavathi ಇವರನ್ನೂ ಪರಿಗಣಿಸಬಹುದೇ? -- Manjappabg (ಚರ್ಚೆ) ೧೯:೩೩, ೨ ಮಾರ್ಚ್ ೨೦೧೮ (UTC)
@Manjappabg , ಸದಸ್ಯ:Dr.K.Soubhagyavathi ಅವರನ್ನು ಕೆಲ ತಿಂಗಳುಗಳ ಹಿಂದೆ ಆಯ್ಕೆ ಮಾಡಲಾಗಿದೆ . ★ Anoop / ಅನೂಪ್ ©

ದಿವ್ಯಾ ಅವರನ್ನು ವಿಕಿಪೀಡಿಯ ಸಾಧಕಿಯಾಗಿ ಒಮ್ಮತದಿಂದ ಆರಿಸಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಮುಖ್ಯವಾಗಿ ಆಸಕ್ತಿಯಿಂದ ಅರಳಿಕಟ್ಟೆಯ ಚರ್ಚೆಯಲ್ಲಿ ಭಾಗವಹಿಸಿದ್ದಕ್ಕೆ ಧನ್ಯವಾದಗಳು. ಹೀಗೆಯೇ ನಮ್ಮ ಸಕ್ರಿಯ ಭಾಗವಹಿಸುವಿಕೆಯನ್ನು ಅರಳಿಕಟ್ಟೆ, ಲೇಖನಗಳ ಚರ್ಚಾಪುಟಗಳಲ್ಲಿ ಮುಂದುವರಿಸೋಣ. --ಗೋಪಾಲಕೃಷ್ಣ (ಚರ್ಚೆ) ೦೬:೧೬, ೬ ಮಾರ್ಚ್ ೨೦೧೮ (UTC)
ಈ ಚರ್ಚೆ ಇಲ್ಲಿಗೆ no ಈ ಚರ್ಚೆ ಇಲ್ಲಿಗೆ ಮುಕ್ತಾಯಗೊಂಡಿದೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಲೇಖನ ಮತ್ತು ಸಂಬಂಧಿತ ವಿಷಯಗಳು[ಬದಲಾಯಿಸಿ]

  • 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಲೇಖನವಿಲ್ಲ. ಅದು ತಪ್ಪಾಗಿ ಕನ್ನಡ ಸಾಹಿತ್ಯ ಪರಿಷತ್ತು ಲೇಖನಕ್ಕೆ ತಳಕು ಹಾಕಲಾಗಿದೆ. ಸೋಜಿಗವೆಂದರೆ, ಇಂಗ್ಲೀಷ್‍ನಲ್ಲಿ ಲೇಖನವಿದೆ. ಆದರೆ 'ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು' ಎಂಬ ಅನಾಥ ಎನ್ನ ಬಹುದಾದ ಕೆಲವು ಲೇಖನಗಳು ಇವೆ. ಸದ್ಯಕ್ಕೆ ಕೊಂಡಿ ಸಮಸ್ಯೆಗಳನ್ನು ಅಡ್ಮಿನ್ ಗಳು ಸರಿಪಡಿಸಲು ಸಾದ್ಯವೆ?----ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೩೬, ೪ ಮಾರ್ಚ್ ೨೦೧೮ (UTC)೧೪:೩೬, ೪ ಮಾರ್ಚ್ ೨೦೧೮ (UTC)
  • 'ಕರ್ನಾಟಕ ಸಾಹಿತ್ಯ ಅಕಾಡೆಮಿ' ಹೊಸ ಲೇಖನ ಮಾಡಲು ದಯವಿಟ್ಟು ಇಗಾಗಲೇ ಇರುವ ಕೊಂಡಿಯನ್ನು ತೆಗೆದು ಹಾಕಿದರೆ ಅನುಕೂಲವಾಗುವುದು.ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೫೧, ೪ ಮಾರ್ಚ್ ೨೦೧೮ (UTC)
  • ಇದನ್ನು ತಾತ್ಕಾಲಿಕವಾಗಿ ಸರಿಪಡಿಸಿದ್ದೇನೆ.ಆಸಕ್ತಿ ಇದ್ದವರು ವಿಸ್ತರಿಸಬೇಕು. ★ Anoop / ಅನೂಪ್ © ೧೭:೧೧, ೫ ಮಾರ್ಚ್ ೨೦೧೮ (UTC)
  • ಲೇಖನ ಪರಿಷ್ಕರಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳು.ವಿದ್ಯಾಧರ ಚಿಪ್ಳಿ (ಚರ್ಚೆ) ೦೪:೪೬, ೬ ಮಾರ್ಚ್ ೨೦೧೮ (UTC)

ಈ ಚರ್ಚೆ ಇಲ್ಲಿಗೆ no Closed

ಕನ್ನಡ ವಿಕಿಪೀಡಿಯದ ಲೇಖನಗಳ ಬರೆಯುವ ಶೈಲಿ ಬಗ್ಗೆ[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಲೇಖನದ ಗುಣಮಟ್ಟ ಹೆಚ್ಚಿಸಲು ಲೇಖನಗಳ ಫಾರ್ಮ್ಯಾಟಿಂಗ್, ಲೀಡ್ (Lead) ಮತ್ತು ಉಲ್ಲೇಖ ವಿಭಾಗ ಎಲ್ಲಿ ಸೇರಿಸಬೇಕು, ಬಾಹ್ಯ ಕೊಂಡಿಗಳ ವಿಭಾಗ ಎಲ್ಲಿ ಸೇರಿಸಬೇಕು ಎಂಬುದನ್ನು ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಬೇಕು ಎಂದು ದಿನಾಂಕ ೪ರಂದು ಸಮ್ಮಿಲನ/ಕಾರ್ಯಾಗಾರದಲ್ಲಿ ಚರ್ಚೆ ನಡೆಸಲಾಗಿತ್ತು. ಅದಲ್ಲದೇ ಲೀಡ್ ವಿಭಾಗ, ಮತ್ತು ಇತರ ವಿಭಾಗಗಳನ್ನು ಕನ್ನಡದಲ್ಲಿ ಯಾವ ರೀತಿ ಹೆಸರಿಸಬೇಕು ಎಂಬುದನ್ನು ಚರ್ಚೆ ನಡೆಸಬೇಕಾಗಿ ಚರ್ಚಿಸಲಾಗಿದೆ. ಈ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕಾಗಿ ವಿನಂತಿ.
ಇಂಗ್ಲಿಷ್ ವಿಕಿಪೀಡಿಯದಲ್ಲಿ ಫೀಚರ್ಡ್ ಆರ್ಟಿಕಲ್ ಎಂಬುದನ್ನು ಮಾಡಿ ಮುಖ್ಯಪುಟದಲ್ಲಿ ಆ ಲೇಖನವನ್ನು ಗುರುತಿಸಿ ಲೇಖನವನ್ನು ಓದಲು ಅನುವು ಮಾಡುತ್ತಾರೆ. ಕನ್ನಡ ವಿಕಿಪಿಡಿಯದಲ್ಲಿ ಇದನ್ನುವಿಶೇಷ ಬರಹ ಎಂದು ಮಾಡುತ್ತಿದ್ದೇವೆ. ಆದರೆ ಲೇಖನವನ್ನು ಓದಲು ಅನುವು ಮಾಡುತ್ತಿಲ್ಲ. ಇದನ್ನು ಇನ್ನೂ ಉತ್ತಮ ರೀತಿಯಲ್ಲಿ ಮಾಡಲು ಚರ್ಚೆ ನಡೆಸಬೇಕಿದೆ. --ಗೋಪಾಲಕೃಷ್ಣ (ಚರ್ಚೆ) ೦೯:೫೨, ೬ ಮಾರ್ಚ್ ೨೦೧೮ (UTC)

ಒಂದು ಉತ್ತಮ ಲೇಖನ ಹೇಗಿರಬೇಕು ಎಂಬುದಕ್ಕೆ ಅಂಶಗಳನ್ನು ಈ ಪುಟದಲ್ಲಿ ಹೇಳಲಾಗಿದೆ: ಉತ್ತಮ ಲೇಖನ. ಈ ರೀತಿ ಇರುವ ಲೇಖನಗಳನ್ನು ಪರಿಗಣಿಸಬೇಕು. ಇನ್ನು ಪುಟದ ಫಾರ್ಮ್ಯಾಟ್ ಹೇಗಿರಬೇಕು ಎಂಬುದಕ್ಕೆ ನನ್ನ ಅನಿಸಿಕೆ ಹೀಗೆದೆ. ಅನುಕ್ರಮವಾಗಿ ಪರಿಚಯ, ವಿವರಣೆ (ವಿವಿಧ ವಿಭಾಗಗಳು), ಉಲ್ಲೇಖಗಳು, ಇವನ್ನೂ ನೋಡಿ, ಹೊರಸಂಪರ್ಕ ಕೊಂಡಿಗಳು, ಹೆಚ್ಚಿನ ಓದು, ಚಿತ್ರಗಳು--Vikashegde (ಚರ್ಚೆ) ೧೧:೧೩, ೧೨ ಮಾರ್ಚ್ ೨೦೧೮ (UTC)

ಕನ್ನಡ ಪುಸ್ತಕಗಳನ್ನು ಸ್ಕ್ಯಾನ್ ಮಾಡುವ ಕುರಿತು[ಬದಲಾಯಿಸಿ]

ಕರಾವಳಿ ವಿಕಿಮೀಡಿಯನ್ಸ್‌ ಇಲ್ಲಿಗೆ ಕಳೆದ ವರ್ಷವೆ ಸ್ಕಾನಿಂಗ್ ಯಂತ್ರವನ್ನು ಕೇಳಲಾಗಿತ್ತು. ಆದರೂ ಇನ್ನೂ ಯಾಕೆ ಸ್ಕಾನಿಂಗ್ ಯಂತ್ರವನ್ನು ಕೊಟ್ಟಿಲ್ಲ.?. ಮಂಗಳೂರಿಗೆ ಸ್ಕಾನಿಂಗ್ ಯಂತ್ರವನ್ನು ನೀಡಲು ಸಾದ್ಯವಿಲ್ಲವೆಂದಾದರೆ ಕಾರಣ ತಿಳಿಸಿ. ಇಲ್ಲದಿದ್ದರೆ ಕೋಡುತ್ತೇವೆ ಎಂದು ಹೇಳಿ ಗೂಬೆಕೂರಿಸುತ್ತಾ ಇರುವ ಬದಲು ಯಾವ ತಿಂಗಳು ಮತ್ತು ದಿನಾಂಕವನ್ನು ಕೋಡುವುದಾದರೆ ತಿಳಿಸಿ. --Lokesha kunchadka (ಚರ್ಚೆ) ೧೭:೪೦, ೮ ಮಾರ್ಚ್ ೨೦೧೮ (UTC)

@Lokesha kunchadka: ಸದ್ಯಕ್ಕೆ ಸ್ಕ್ಯಾನಿಂಗ್ ಯಂತ್ರ ಬೆಂಗಳೂರಿನಲ್ಲಿಯೇ ಇದೆ ಎಂದು ನಿಮಗೂ ತಿಳಿದಿದೆ. ಬೆಂಗಳೂರಿನಲ್ಲಿ ಕೆಲವು ಪುಸ್ತಕಗಳ ಸ್ಕ್ಯಾನಿಂಗ್ ಕೆಲಸ ನಡೆಯುತ್ತಿದೆ. ಎಪ್ರಿಲ್ ತಿಂಗಳಿನಲ್ಲಿ ಸ್ಕ್ಯಾನಿಂಗ್ ಯಂತ್ರವನ್ನು ಕಳುಹಿಸಿ ಕೊಡುತ್ತೇವೆ. --Gopala Krishna A (CIS-A2K) (ಚರ್ಚೆ) ೦೨:೩೨, ೯ ಮಾರ್ಚ್ ೨೦೧೮ (UTC)
@Gopala Krishna A (CIS-A2K):ತಿಂಗಳನ್ನು ಎಪ್ರೀಲ್ ಎಂದು ಹೇಳಿದ್ದಿರಿ, ಆದರೆ ದಿನಾಂಕವನ್ನು ತಿಳಿಸಿದರೆ ಸೂಕ್ತ. ಯಾಕೆಂದರೆ ಮತ್ತೆ ಮತ್ತೆ ದಿನ ದೂಡುವ ಬದಲು, ಅಯಾ ಕೆಲಸವನ್ನು ಆಯಾ ಕಾಲಕ್ಕೆ ಸರಿಯಾಗಿ ಮುಗಿಸಲು ಸಾದ್ಯವಾಗುತ್ತದೆ.--Lokesha kunchadka (ಚರ್ಚೆ) ೦೨:೩೭, ೯ ಮಾರ್ಚ್ ೨೦೧೮ (UTC)
ಯಾವ ಕಾರ್ಯಕ್ಕೆ ಸ್ಕ್ಯಾನಿಂಗ್ ಯಂತ್ರದ ಅವಶ್ಯಕತೆ ಇರುತ್ತದೆ? ಕರಾವಳಿ ವಿಕಿಮೀಡಿಯನ್ಸ್ ಬಳಿ ಸಿಸಿ ಲೈಸೆನ್ಸಿನಲ್ಲಿ ಬಿಡುಗಡೆ ಮಾಡಿರುವ ಪುಸ್ತಕಗಳಿವೆಯೇ? ಅವುಗಳನ್ನು ವಿಕಿಸೋರ್ಸಿಗೆ ಹಾಕುವ ಕೆಲಸ ಶುರುವಾಗಿದೆಯಾ? ಆ ಪುಸ್ತಕಗಳ ಸಾಫ್ಟ್ ಕಾಪಿ ಕಾಮನ್ಸಿಗೆ ಅಪ್ಲೋಡ್ ಆಗಿದೆಯೇ? ಆಗಿದ್ದರೆ ಅವು ಯಾವುವು ಎಂದು ತಿಳಿಸಲು ಕೋರಿಕೆ. --Vikashegde (ಚರ್ಚೆ) ೦೫:೩೨, ೧೨ ಮಾರ್ಚ್ ೨೦೧೮ (UTC)
@Vikashegde: ಈ ಬಗ್ಗೆ ಹಿಂದೆಯೇ ಚರ್ಚೆ ಆಗಿತ್ತು. ಆ ಥ್ರೆಡ್ ಇಲ್ಲಿದೆ.--ಪವನಜ (ಚರ್ಚೆ) ೦೭:೫೭, ೧೨ ಮಾರ್ಚ್ ೨೦೧೮ (UTC)
@Vikashegde:ಸ್ಕ್ಯಾನರ್ ನೀಡಿಯೇ ಇಲ್ಲ ಎಂದ ಮೇಲೆ ಪುಸ್ತಕಗಳನ್ನು ವಿಕಿಸೋರ್ಸ್‍ಗೆ ಹಾಕುವ ಕೆಲಸ ಪ್ರಾರಂಭವಾಗುವುದು ಹೇಗೆ?--ಪವನಜ (ಚರ್ಚೆ) ೦೮:೨೦, ೧೨ ಮಾರ್ಚ್ ೨೦೧೮ (UTC)
ಕರಾವಳಿಯವರು ಸ್ಕ್ಯಾನರ್ ಕೇಳಿದ್ದು ನವಂಬರ್ ೧೬, ೨೦೧೭ ರಂದು. ನವಂಬರ್ ೨೧, ೨೦೧೭ ರಂದು ಗೋಪಾಲಕೃಷ್ಣ ಸ್ಕ್ಯಾನರ್ ಒದಗಿಸಿಕೊಡುತ್ತೇವೆ ಎಂದು ವಾಗ್ದಾನ ಮಾಡಿದ್ದು. ಸ್ಕ್ಯಾನರ್ ಒದಗಿಸಿ ಕೊಡುವ ವಿಷಯ ಏನಾಯಿತು ಎಂದು ನಾನು ಜನವರಿ ೨೩, ೨೦೧೮ ರಂದು ಕೇಳಿದಾಗ ಹಂಪಿಯಲ್ಲಿ ಸ್ಕ್ಯಾನಿಂಗ್ ಕೆಲಸ ಮುಗಿದ ನಂತ ಕೊಡುತ್ತೇವೆ ಎಂದು ಗೋಪಾಲಕೃಷ್ಣ ಹೊಸದಾಗಿ ಮಾತು ನೀಡಿದ್ದು. ಕರಾವಳಿಯವರು ನವಂಬರ್‍ನಲ್ಲೇ ಸ್ಕ್ಯಾನರ್ ಕೇಳಿದ್ದು. ಹಂಪಿಯಲ್ಲಿ ಸ್ಕ್ಯಾನಿಂಗ್ ಇದೆ ಎಂದು ಗೋಪಾಲಕೃಷ್ಣ ಘೋಷಿಸಿದ್ದು ಜನವರಿ ೨೦೧೮ರಲ್ಲಿ. ಹಂಪಿಯಲ್ಲಿ ಸ್ಕ್ಯಾನಿಂಗ್ ನಡೆದಿದ್ದು ಫೆಬ್ರವರಿ ೮-೧೦, ೨೦೧೮ರಂದು. ಇನ್ನೂ ಸ್ಕ್ಯಾನರ್ ನೀಡಿಲ್ಲ ಎಂದರೆ ಕರಾವಳಿಯವರಿಗೆ ಕೊಡುವುದು ಇಷ್ಟ ಇಲ್ಲ ಎಂದು ತೀರ್ಮಾನಿಸಬೇಕಾಗುತ್ತದೆ.--ಪವನಜ (ಚರ್ಚೆ) ೦೮:೧೭, ೧೨ ಮಾರ್ಚ್ ೨೦೧೮ (UTC)
@Pavanaja: CIS-A2K ಇತರ ಸಮುದಾಯಗಳ ಕೋರಿಕೆಯಂತೆಯೇ ಕರಾವಳಿ ವಿಕಿಮೀಡಿಯನ್ನರ ಕೋರಿಕೆಯನ್ನು ಪರಿಗಣಿಸುತ್ತದೆ. ಸಿ. ಆರ್. ಚಂದ್ರಶೇಖರ್ ಅವರ ಪುಸ್ತಕಗಳನ್ನು ಸ್ಕ್ಯಾನ್ ಮಾಡಲು ಸ್ಕ್ಯಾನರ್‌‌ಅನ್ನು ನಮ್ಮ ಬಳಿ ಇರಿಸಿಕೊಂಡಿದ್ದೇವೆ. ಪ್ರಕಾಶಕರನ್ನು ಸಂಪರ್ಕಿಸಿದಾಗ ಸಾಪ್ಟ್ ಕಾಪಿ ಇದೆ ಎಂದು ಹೇಳಿದ್ದಾರೆ. ಇನ್ನು ೧೫ ದಿನದ ಒಳಗಾಗಿ ನಮಗೆ ಸಾಪ್ಟ್ ಕಾಪಿ ಸಿಗದೇ ಇದ್ದರೆ ಪುಸ್ತಕಗಳನ್ನು ಸ್ಕ್ಯಾನ್ ಮಾಡಿ ನಂತರ ಸ್ಕ್ಯಾನರನ್ನು ಮಂಗಳೂರಿಗೆ ತಲುಪಿಸುತ್ತೇವೆ ಅಥವಾ ಯಾರಾದರೂ ಕರಾವಳಿ ವಿಕಿಮೀಡಿಯನ್ನರೊಂದಿಗೆ ಕಳುಹಿಸಿ ಕೊಡುತ್ತೇವೆ. --Gopala Krishna A (CIS-A2K) (ಚರ್ಚೆ) ೦೯:೦೨, ೧೨ ಮಾರ್ಚ್ ೨೦೧೮ (UTC)
ಡಾ. ಸಿ. ಆರ್. ಚಂದ್ರಶೇಖರ ಅವರ ಪುಸ್ತಕಗಳನ್ನು ನಾನು Gopala Krishna A (CIS-A2K) ಗೆ ಹಸ್ತಾಂತರಿಸಿದ್ದು ಜನವರಿ ೪, ೨೦೧೮ ರಂದು. ಇಷ್ಟು ಹೊತ್ತಿಗೆ ಸ್ಕ್ಯಾನ್ ಮಾಡಿ ಎಲ್ಲ ಪುಸ್ತಕಗಳನ್ನು ಸೇರಿಸಿ ಆಗಬೇಕಿತ್ತು. ಪ್ರಕಾಶಕರ ಫೋನ್ ಸಂಖ್ಯೆಯನ್ನೂ ಆವತ್ತೇ ನೀಡಿದ್ದೆ. ಅವರಿಂದ ಸಾಫ್ಟ್ ಕಾಪಿಯನ್ನೂ ಪಡೆದಿಲ್ಲ, ಸ್ಕ್ಯಾನಿಂಗೂ ಮಾಡಿಲ್ಲ ಎಂದರೆ ಏನು ಅರ್ಥ?--ಪವನಜ (ಚರ್ಚೆ) ೧೦:೨೩, ೧೨ ಮಾರ್ಚ್ ೨೦೧೮ (UTC)
@Pavanaja: ಅವರು ಸಾಪ್ಟ್ ಕಾಪಿ ಒದಗಿಸಿ ಕೊಡುತ್ತೇವೆ ಎಂದಿದ್ದಾರೆ. ಹಾಗಾಗಿ ಸ್ಕ್ಯಾನ್ ಮಾಡಬೇಕಾದ ಅವಶ್ಯಕತೆ ಇಲ್ಲ ಎಂದು ಸ್ಕ್ಯಾನಿಂಗ್ ನಡೆಸಲಿಲ್ಲ. ಅಷ್ಟೇ. --Gopala Krishna A (CIS-A2K) (ಚರ್ಚೆ) ೧೧:೪೭, ೧೨ ಮಾರ್ಚ್ ೨೦೧೮ (UTC)

ಸ್ಕ್ಯಾನರ್‌ಅನ್ನು ಮಂಗಳೂರು, ವಿಶ್ವನಾಥ ಬದಿಕಾನ ಅವರಿಗೆ ಕಳುಹಿಸಿಕೊಡಲಾಗಿದೆ. --ಗೋಪಾಲಕೃಷ್ಣ (ಚರ್ಚೆ) ೧೭:೫೧, ೩೦ ಮೇ ೨೦೧೮ (UTC)

Galicia 15 - 15 Challenge[ಬದಲಾಯಿಸಿ]

Wikipedia:Galicia 15 - 15 Challenge is a public writing competition which will improve improve and translate this list of 15 really important articles into as many languages as possible. Everybody can help in any language to collaborate on writing and/or translating articles related to Galicia. To participate you just need to sign up here. Thank you very much.--Breogan2008 (ಚರ್ಚೆ) ೧೪:೧೪, ೧೨ ಮಾರ್ಚ್ ೨೦೧೮ (UTC)

ಮಾರ್ಚ್ ತಿಂಗಳ ಕೆಲಸಗಳು[ಬದಲಾಯಿಸಿ]

ಮಾರ್ಚ್ ತಿಂಗಳ ಕೆಲಸದ ಪಟ್ಟಿ ಇಲ್ಲಿದೆ. ಈ ಪಟ್ಟಿಯನ್ನು ಗಮನಿಸಿ ಇನ್ನೂ ಏನಾದರೂ ಹೆಚ್ಚಿನ ಕೆಲಸಗಳಿದ್ದರೆ ಸೇರಿಸಬೇಕಾಗಿ ವಿನಂತಿ. --Gopala Krishna A (CIS-A2K) (ಚರ್ಚೆ)

ಬೆಂಗಳೂರಿನ ಶಿಲಾ ಶಾಸನಗಳ ಲೇಖನ ಸೇರಿಸುವ ಯೋಜನೆ[ಬದಲಾಯಿಸಿ]

ಬೆಂಗಳೂರಿಗೆ ಸುಮಾರು ೨೫೦೦ ವರ್ಷಗಳ ಇತಿಹಾಸ ಇದೆ ಎಂಬುದಕ್ಕೆ ಪುರಾವೆಯಾಗಿ ಕಬ್ಬಿಣ ಯುಗದ ಗೋರಿಗಳು ಅಗರದ ಸಮೀಪದಲ್ಲಿ ದೊರಕಿವೆ. ಬೆಂಗಳೂರಿನಲ್ಲಿ ಸುಮಾರು ೧೭೫ಕ್ಕೂ ಮೀರಿ ಶಿಲಾ ಶಾಸನಗಳಿವೆ ಎಂದು ಇತಿಹಾಸ ಹೇಳಿದೆ. ಆದರೆ ಜನರ ಅಸಡ್ಡೆ, ಕಾಳಜಿ ಇಲ್ಲದ ಕಾರಣ ಇಂದು ಕೇವಲ ೩೦ ಮಾತ್ರ ಉಳಿದಿವೆ. ಇವುಗಳ ಬಗ್ಗೆ ಮಾಹಿತಿಯನ್ನು ವಿಕಿಪೀಡಿಯಕ್ಕೆ ಸೇರಿಸುವ ಕೆಲಸ ನಡೆಯಬೇಕಿದೆ. ಇದುವರೆಗೆ ತಯಾರಿಸಿದ ಎರಡು ಮಾದರಿ ಲೇಖನವನ್ನು ಇಲ್ಲಿ[೧] ನೋಡಿ. ಈ ಮೂವತ್ತು ಶಾಸನಗಳನ್ನು ಹುಡುಕಿ ಅದರ ಸಂಪೂರ್ಣ ದಾಖಲೆಗಳನ್ನು ವಿನಯ್ ಮತ್ತು ಉದಯ್ (ಬೆಂಗಳೂರು ಇನ್ಸ್ಕ್ರಿಪ್ಶನ್ ತಂಡ) ಅವರು ನೀಡಿದ್ದಾರೆ. ಈ ಕೆಲಸವು ಯುನೆಸ್ಕೋ ಮನ್ನಣೆಯನ್ನೂ ಪಡೆದುಕೊಂಡಿದೆ. ಆಸಕ್ತ ಸಮುದಾಯ ಸದಸ್ಯರು ಪಟ್ಟಿಯನ್ನು ನೋಡಿ ತಮ್ಮಲ್ಲಿ ಯಾವುದೇ ಸಂದೇಹ, ದಾಖಲೆಗಳ ಕೋರಿಕೆಗೆ ನನ್ನನ್ನು (Gopala Krishna A (talk · contribs) ಸಂಪರ್ಕಿಸಬೇಕಾಗಿ ವಿನಂತಿ. ಸಮುದಾಯ ಸದಸ್ಯರು ತಮ್ಮ ಆಸಕ್ತಿ ಇರುವ ಶಿಲಾ ಶಾಸನವನ್ನು ಆರಿಸಿ ಲೇಖನ ಬರೆಯುವುದನ್ನೂ ಸ್ವಾಗತಿಸುತ್ತೇವೆ. --ಗೋಪಾಲಕೃಷ್ಣ (ಚರ್ಚೆ) ೧೭:೫೨, ೧೨ ಮಾರ್ಚ್ ೨೦೧೮ (UTC)

ಒಳ್ಳೆಯ ಯೋಜನೆ. ನಾನು ಭಾಗವಹಿಸುತ್ತೇನೆ. ಆದರೆ ಮಾದರಿ ಲೇಖನಗಳು ಅಪೂರ್ಣವಾಗಿವೆ ಮತ್ತು ಅದರಲ್ಲಿ ಬೆಂಗಳೂರಿನ ನಕಾಶೆ ಹಾಕಿ ಶಾಸನದ ಇರುವೆಡೆ (ಲೊಕೇಶನ್) ಗುರುತಿಸಬೇಕು ಅಂತ ಅಂತ ಚರ್ಚಿಸಲಾಗಿತ್ತು.--Vikashegde (ಚರ್ಚೆ) ೧೪:೪೯, ೧೩ ಮಾರ್ಚ್ ೨೦೧೮ (UTC)
@Vikashegde:ಹೌದು. ಇದಕ್ಕೆ ನಾನು Anoop Rao (talk · contribs) ಅವರ ಸಹಾಯ ಪಡೆದುಕೊಳ್ಳೋಣ ಅಂದುಕೊಂಡೆ. ಗೂಗಲ್ ಮ್ಯಾಪನ್ನೂ ಬಳಕೆ ಮಾಡೋಣ ಎಂದು. --ಗೋಪಾಲಕೃಷ್ಣ (ಚರ್ಚೆ) ೧೫:೦೫, ೧೩ ಮಾರ್ಚ್ ೨೦೧೮ (UTC)
@Vikashegde @ಗೋಪಾಲಕೃಷ್ಣ --mediawikiwiki:Extension:Kartographer ಈಗಾಗಲೇ ಸ್ಥಾಪಿಸಲಾಗಿದೆ ಮೂಲಕ ಭೂಪಟ ತಯಾರಿಸುವ ಯೋಚನೆ ಇದೆ, ಶೀಘ್ರದಲ್ಲೇ ಕೆಲಸ ಪ್ರಾರಂಭವಾಗುತ್ತದೆ. ★ Anoop / ಅನೂಪ್ © ೦೫:೨೪, ೧೪ ಮಾರ್ಚ್ ೨೦೧೮ (UTC)
ನಾನೂ ಈ ಬಗ್ಗೆ ಒಂದು ಪುಟ ರಚಿಸುವ ಪ್ರಯತ್ನದಲ್ಲಿದ್ದೆ. ಅದು ಇಲ್ಲಿದೆ ನೋಡಿ.--Vikashegde (ಚರ್ಚೆ) ೦೫:೨೯, ೧೪ ಮಾರ್ಚ್ ೨೦೧೮ (UTC)
@Anoop Rao:, ಕಾರ್ಟೋಗ್ರಾಫರ್ ರೆಡಿಯಾಯಿತೇ? --Vikashegde (ಚರ್ಚೆ) ೦೮:೧೮, ೯ ಮೇ ೨೦೧೮ (UTC)
ಸದ್ಯ ಎರಡು ಸ್ಥಳಗಳನ್ನು (ಲೇಖನಕ್ಕೆ) ಆಯ್ಕೆ ಮಾಡಿದ್ದೇನೆ --ವಿಶ್ವನಾಥ/Vishwanatha (ಚರ್ಚೆ) ೧೩:೧೦, ೩ ಏಪ್ರಿಲ್ ೨೦೧೮ (UTC)
ಧನ್ಯವಾದಗಳು Msvishwa (talk · contribs). ನಿಮ್ಮೊಂದಿಗೆ ದಾಖಲೆ ಮತ್ತು ಉಲ್ಲೇಖಗಳ ಕಡತಗಳನ್ನು ಗೂಗಲ್ ಡ್ರೈವಿನಲ್ಲಿ ಹಂಚಿಕೊಂಡಿದ್ದೇನೆ. ದಯವಿಟ್ಟು ಉಪಯೋಗ ಪಡಿಸಿಕೊಳ್ಳಿ. --ಗೋಪಾಲಕೃಷ್ಣ (ಚರ್ಚೆ)
@Vikashegde kartographer ಬಳಸಲು ಸಿದ್ಧವಾಗಿದೆ.ಸೋಮವಾರ ಅದನ್ನು ಹೇಗೆ ಬಳಸುವುದು ಎಂದು ನಾನು ಈ ಪುಟದಲ್ಲಿ WP:ISB ನವೀಕರಿಸುತ್ತೇನೆ ★ Anoop / ಅನೂಪ್ © ೦೩:೪೧, ೧೦ ಮೇ ೨೦೧೮ (UTC)

ಮುಂದಿನ ವರ್ಷದ ಕಾರ್ಯ ಯೋಜನೆಯ ಬಗ್ಗೆ ಚರ್ಚೆ (IRC)[ಬದಲಾಯಿಸಿ]

ನಮ್ಮ ಕನ್ನಡ ವಿಕಿಪೀಡಿಯ ಸಮುದಾಯವನ್ನು ಬಲಪಡಿಸಲು ಮತ್ತು ಮುಂದಿನ ವರ್ಷದ ಕಾರ್ಯ ಯೋಜನೆ/ ಯೋಜನೆಯ ಬಗ್ಗೆ ಚರ್ಚಿನಲು CIS-A2K ತಂಡವು ಕನ್ನಡ ಸಮುದಾಯದ ಜೊತೆ IRC ಸಮ್ಮಿಲನವನ್ನು ಆಯೋಜಿಸಲು ಇಚ್ಚಿಸುತ್ತದೆ. ಇದಕ್ಕಾಗಿ ಒಂದು ದಿನವನ್ನು ಗೊತ್ತುಪಡಿಸಬೇಕಾಗಿದೆ. ಸಮುದಾಯ ಸಹಾಯಕನಾದ ನಾನು ೧೮ ರಂದು ಭಾನುವಾರ ಸೂಚಿಸುತ್ತೇನೆ. --Gopala Krishna A (CIS-A2K) (ಚರ್ಚೆ) ೦೫:೨೮, ೧೪ ಮಾರ್ಚ್ ೨೦೧೮ (UTC)

ಸಮಯ[ಬದಲಾಯಿಸಿ]

  • ಮಾರ್ಚ್ ೧೮ ರಂದು ರಾತ್ರಿ ೮:೦೦ ಘಂಟೆಗೆ
  • ವಿಷಯ- ಮುಂದಿನ ವರ್ಷದ ಕಾರ್ಯ ಯೋಜನೆ/ಸಮುದಾಯದ ಜೊತೆ CIS-A2K ತಂಡದ ಹೊಂದಾಣಿಕೆಯನ್ನು ಮರುಪರಿಶೀಲಿಸುವುದರ ಬಗ್ಗೆ.

ಭಾಗವಹಿಸಲು ಇಚ್ಚಿನುವವರು ಈ ಪುಟದಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ. --Gopala Krishna A (CIS-A2K) (talk)

ಕನ್ನಡ ವಿಕಿಪೀಡಿಯದಲ್ಲಿ MapFrameಅನ್ನು ಸಕ್ರಿಯ ಗೊಳಿಸಲು ಕೋರಿಕೆ[ಬದಲಾಯಿಸಿ]

ಬೆಂಗಳೂರು ಶಿಲಾ ಶಾಸನಗಳ ಲೇಖನ ಹಾಕುವುದರಿಂದ ಶಾನಸಗಳ ಬಗ್ಗೆ ಅರಿವು ಮೂಡಿಸಬಹುದು ಅದಲ್ಲದೇ ಆಸಕ್ತ ಬೆಂಗಳೂರು ನಿವಾಸಿಗಳು ಅಥವಾ ಯಾರಿಗಾದರೂ ಶಾಸನದ ಭೇಟಿ ಮಾಡಬೇಕೆಂದಿದ್ದರೆ MapFrame ಮೂಲಕ ಸರಿಯಾದ ನಿರ್ದೇಶಾಂಕಗಳನ್ನು ಮತ್ತು ಸ್ಥಳವನ್ನು ಗುರುತಿಸಬಹುದು. ಕನ್ನಡ ವಿಕಿಪೀಡಿಯದಲ್ಲಿ ಈ ವ್ಯವಸ್ಥಯನ್ನು ಸಕ್ರಿಯಗೊಳಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೬:೩೫, ೧೫ ಮಾರ್ಚ್ ೨೦೧೮ (UTC)

ಬೆಂಬಲ[ಬದಲಾಯಿಸಿ]

  1. Support ಬೆಂಬಲ --ಗೋಪಾಲಕೃಷ್ಣ (ಚರ್ಚೆ) ೦೬:೩೫, ೧೫ ಮಾರ್ಚ್ ೨೦೧೮ (UTC)
  2. Support ಬೆಂಬಲ --Sangappadyamani (ಚರ್ಚೆ) ೦೬:೫೪, ೧೫ ಮಾರ್ಚ್ ೨೦೧೮ (UTC)
  3. --Vikashegde (ಚರ್ಚೆ) ೦೮:೩೧, ೧೫ ಮಾರ್ಚ್ ೨೦೧೮ (UTC)
  4. --ವಿದ್ಯಾಧರ ಚಿಪ್ಳಿ (ಚರ್ಚೆ) ೦೬:೧೬, ೧೬ ಮಾರ್ಚ್ ೨೦೧೮ (UTC)
  5. Support ಬೆಂಬಲ--ಪವನಜ (ಚರ್ಚೆ) ೦೬:೪೦, ೧೬ ಮಾರ್ಚ್ ೨೦೧೮ (UTC)
  6. --Support ಬೆಂಬಲ ★ Anoop / ಅನೂಪ್ © ೧೬:೦೫, ೧೬ ಮಾರ್ಚ್ ೨೦೧೮ (UTC)
  7. --Support ಬೆಂಬಲ --Manjappabg (ಚರ್ಚೆ) ೧೬:೨೯, ೧೬ ಮಾರ್ಚ್ ೨೦೧೮ (UTC)
ಈ ಚರ್ಚೆ ಇಲ್ಲಿಗೆ no 'ಮುಕ್ತಾಯಗೊಂಡಿದೆ'

ಇನ್ಫೋಬಾಕ್ಸ್ ದೋಷ[ಬದಲಾಯಿಸಿ]

ಈ ಟೆಂಪ್ಲೆಟ್ ಆಂಗ್ಲ ವಿಕಿಯಲ್ಲಿ ೯ ಮಾಹಿತಿ ಪ್ರದರ್ಶಿಸುತ್ತಿದೆ ಯಾವುದೇ ತೊಂದರೆ ಇಲ್ಲ ಆದರೆ ಕನ್ನಡ ವಿಕಿಯಲ್ಲಿ ೫ ಮಾಹಿತಿ ಮಾತ್ರ ಕಾಣುತ್ತಿದೆ ಮತ್ತು Lua error in ಮಾಡ್ಯೂಲ್:Location_map at line 368: No value was provided for longitude.Location in Karnataka, India ದೋಷ ಕಾಣಿಸುತ್ತಿದೆ ಪರೀಕ್ಷಿಸಿ .Sangappadyamani (ಚರ್ಚೆ) ೦೭:೫೮, ೧೮ ಮಾರ್ಚ್ ೨೦೧೮ (UTC)

 ಬಗೆಹರಿಸಲಾಗಿದೆ ★ Anoop / ಅನೂಪ್ © ೦೩:೪೪, ೨೪ ಮಾರ್ಚ್ ೨೦೧೮ (UTC)

ವಿಕಿಸೋರ್ಸ್ ಈಗ ೬೦,೦೦೯ ಲೇಖನಗಳ ಆಗರ![ಬದಲಾಯಿಸಿ]

  • Content pages--6,792
  • Pages (All pages in the wiki, including talk pages, redirects, etc.) 60,009

ಕನ್ನಡ ವಿಕಿಸೋರ್ಸ್ ನಲ್ಲಿ 6,792 ಲೇಖನಗಳಿವೆ.ಆದರೆ ಮುಖ್ಯ ಪುಟದಲ್ಲಿ 60,009 ಎಂದು ತೊರಿಸುತ್ತಿದೆ ಪರಿಶಿಲಿಸಿ.---Sangappadyamani (ಚರ್ಚೆ) ೦೫:೩೦, ೨೦ ಮಾರ್ಚ್ ೨೦೧೮ (UTC)

ಕನ್ನಡ ವಿಕಿಪೀಡಿಯದಲ್ಲಿ ಕೆಲವು Gadget ಗಳನ್ನು ಸಕ್ರಿಯಗೊಳಿಸಲು ಕೋರಿಕೆ.[ಬದಲಾಯಿಸಿ]

ಕನ್ನಡ ವಿಕಿಪೀಡಿಯದ ಸಂಪಾದನೆಯನ್ನು ಸುಲಭಗೊಳಿಸಲು ಕೆಲವು ಗ್ಯಾಜೆಟ್ಟುಗಳ ಅವಶ್ಯಕತೆ ಇದೆ. ಇವುಗಳ ಪಟ್ಟಿಯ ಜೊತೆ ಅವುಗಳ ಉಪಯೋಗ ಪಟ್ಟಿ ಮಾಡಿದ್ದೇನೆ. ಇವುಗಳನ್ನು ಕನ್ನಡ ವಿಕಿಪೀಡಿಯಕ್ಕೆ ಆಮದು ಮಾಡಿಕೊಳ್ಳಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೦೭:೧೨, ೨೩ ಮಾರ್ಚ್ ೨೦೧೮ (UTC)

  1.  Done en:MediaWiki:Gadget-edittop - ಮೇಲೆ Lead ಭಾಗವನ್ನು ಸಂಪಾದಿಸಲು ಅವಕಾಶ ಮಾಡಿಕೊಡುತ್ತದೆ.
  2.  Done en:MediaWiki:Gadget-libLua- ಉಪಯುಕ್ತ. ಪ್ರಾಶಸ್ತ್ಯಗಳಿಂದ ನೋಡಲು ಸಾಧ್ಯವಿಲ್ಲ.
  3.  ToDo lens Review - This section is under or has been partially reviewed by en:MediaWiki:Gadget-WatchlistGreenIndicators ನಮ್ಮ ವೀಕ್ಷಣಾ ಪಟ್ಟಿಯಲ್ಲಿರುವ ಪುಟಗಳು ಬದಲಾದಾಗ ಹಸಿರು ಬಣ್ಣದ ಅಡಗಿಸಬಹುದಾದಂತಹ ಬಾಣ ಮತ್ತು ಬುಲಟ್ಟುಗಳು.
  4.  ToDo lens Review - This section is under or has been partially reviewed byen:MediaWiki:Gadget-WatchlistChangesBold ವೀಕ್ಷಣಾ ಪಟ್ಟಿಯ ಪುಟಗಳು ಬದಲಾದಾಗ ದಪ್ಪ ಅಕ್ಷರದಲ್ಲಿ ತೋರಿಸುತ್ತದೆ.

ಸಮ್ಮತಿ/ಸಲಹೆ[ಬದಲಾಯಿಸಿ]

  1. --Support ನನ್ನ ಸಮ್ಮತಿ ಇದೆ, ಇತರ ವಿಕಿಪಿಡಿಯನ್ನರು ಸಮ್ಮತಿಸಿದರೆ, ಗ್ಯಾಡ್ಜೆಟ್'ಗಳನ್ನು ನಿಯೋಜಿಸಲಾಗುವುದು/ಅಳವಡಿಸಲಾಗುವುದು. ★ Anoop / ಅನೂಪ್ © ೦೩:೫೦, ೨೪ ಮಾರ್ಚ್ ೨೦೧೮ (UTC)
  2. Support ಬೆಂಬಲ ನನ್ನ ಬೆಂಬಲ ಇದೆ. --Lokesha kunchadka (ಚರ್ಚೆ) ೦೪:೧೯, ೨೪ ಮಾರ್ಚ್ ೨೦೧೮ (UTC)
  3. Support ಬೆಂಬಲ--ಕನ್ನಡ ವಿಕಿಗೆ ಅಗತ್ಯವಿದ್ದರೆ ಇಂಪೋರ್ಟ್ ಮಾಡುವದು ಉತ್ತಮ.ಆದರೆ ಚರ್ಚೆ ನಡೆಸುವ ಅಗತ್ಯವಿದೆಯೇ.ಇದನ್ನು ಅಡ್ಮಿನ್ ಮಾಡಬಹುದಲ್ಲವೇ?--Sangappadyamani (ಚರ್ಚೆ) ೦೪:೪೫, ೨೪ ಮಾರ್ಚ್ ೨೦೧೮ (UTC)
  4. --Support ನನ್ನ ಸಮ್ಮತಿ ಇದೆ--Ananth Subray (ಚರ್ಚೆ) ೧೨:೦೧, ೨೪ ಮಾರ್ಚ್ ೨೦೧೮ (UTC)
  5. --Support ಬೆಂಬಲ ನನ್ನ ಬೆಂಬಲ ಇದೆ. -- Manjappabg (ಚರ್ಚೆ) ೧೯:೦೩, ೨೪ ಮಾರ್ಚ್ ೨೦೧೮ (UTC)
  6. Support ಬೆಂಬಲ ನನ್ನ ಬೆಂಬಲ ಇದೆ.--ವಿದ್ಯಾಧರ ಚಿಪ್ಳಿ (ಚರ್ಚೆ) ೧೪:೨೪, ೨೬ ಮಾರ್ಚ್ ೨೦೧೮ (UTC)
  7. Support ಬೆಂಬಲ --Vikashegde (ಚರ್ಚೆ) ೦೮:೩೯, ೨೮ ಮಾರ್ಚ್ ೨೦೧೮ (UTC)
  8. Support ಬೆಂಬಲ --ವಿಶ್ವನಾಥ/Vishwanatha (ಚರ್ಚೆ) ೧೩:೦೨, ೩ ಏಪ್ರಿಲ್ ೨೦೧೮ (UTC)