ವಿಕಿಪೀಡಿಯ:ಪ್ರಚಲಿತ ಸಂಗತಿಗಳು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸಿಂಧೂ ನದಿಯ ವಿಹಂಗಮ ನೋಟ
  • ಸೆಪ್ಟೆಂಬರ್ ೧೬: ಸಿಂಧೂ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಇಲ್ಲಿ ನಡೆದ ಮಾತುಕತೆ ಸಂದರ್ಭದಲ್ಲಿ ಹೊಸದಾಗಿ ಯಾವುದೇ ಒಪ್ಪಂದಗಳನ್ನು ಕೈಗೊಂಡಿಲ್ಲ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.
  • ಸೆಪ್ಟೆಂಬರ್ ೧೬: ವಿಧಾನಸೌಧ ವಜ್ರ ಮಹೋತ್ಸವದ ಅಂಗವಾಗಿ ಅಕ್ಟೋಬರ್‌ 6ರಂದು ನಡೆಯಲಿರುವ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಭಾಷಣ ಮಾಡಲಿದ್ದಾರೆ.
  • ಸೆಪ್ಟೆಂಬರ್ ೧೬: ದಕ್ಷಿಣ ಭಾರತದ ಅಪಾಯದ ಅಂಚಿನಲ್ಲಿರುವ ರಣಹದ್ದುಗಳ ಏಕೈಕ ಆವಾಸಸ್ಥಾನವಾಗಿರುವ ರಾಮದೇವರ ಬೆಟ್ಟದ ಸುತ್ತಲಿನ 7.08 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
  • ಸೆಪ್ಟೆಂಬರ್ ೧೫: ದಸರಾ ವೇಳೆ ಉಂಟಾಗುವ ದಟ್ಟಣೆ ನಿವಾರಿಸಲು ನೈರುತ್ಯ ರೈಲ್ವೆಯು ಯಶವಂತಪುರ– ಬೆಳಗಾವಿ ಮಧ್ಯೆ ವಿಶೇಷ ರೈಲನ್ನು ಓಡಿಸಲಿದೆ.
  • ಸೆಪ್ಟೆಂಬರ್ ೬: ಗೌರಿ ಲಂಕೇಶ್‌ ಹತ್ಯೆ; ಮೂರು ಗುಂಡುಗಳು ತಗುಲಿ ಕುಸಿದು ಬಿದ್ದ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸಂಪಾದಿಸಿ