ಜುಲೈ

July, from the Très Riches Heures du Duc de Berry
ಜುಲೈ - ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ಏಳನೆಯ ತಿಂಗಳು.ಈ ತಿಂಗಳಿನಲ್ಲಿ ಮೂವತ್ತೊಂದು ದಿನಗಳು ಇರುತ್ತವೆ. ಜುಲೈ ಕ್ರಿಸ್ತವರ್ಷದ ಏಳನೆಯ ತಿಂಗಳು. ಜೂಲಿಯಸ್ ಸೀಸರನ ಕಾಲಕ್ಕಿಂತ (ಕ್ರಿ.ಪೂ. 100-ಕ್ರಿ.ಪೂ. 44) ಮೊದಲು ಈ ತಿಂಗಳು ವರ್ಷದ ಐದನೆಯ ಮಾಸವಾಗಿ ಪರಿಗಣನೆ ಆಗುತ್ತಿತ್ತು; ಅಂತೆಯೇ ಅಂದಿನ ರೋಮನ್ನರು ಇದನ್ನು ಕ್ವಿಂಟೆಲಿಸ್ ಎಂದು ಕರೆಯುತ್ತಿದ್ದರು. ಜೂಲಿಯಸ್ ಸೀಸರ್ ಈ ತಿಂಗಳಿನಲ್ಲಿ ಹುಟ್ಟಿದುದರಿಂದ ಅವನ ಗೌರವಾರ್ಥ ಮುಂದೆ ಇದನ್ನು ಜುಲೈ ಎಂದು ನಾಮಕರಿಸಲಾಯಿತು. ಇದು ಬಳಕೆಗೆ ಬಂದದ್ದು ಸೀಸರನ ಮರಣದ ವರ್ಷದಲ್ಲಿ. ಆಂಗ್ಲೋ ಸ್ಯಾಕ್ಸನರು ಜುಲೈ ತಿಂಗಳನ್ನು ಹುಲ್ಲಿನ ತಿಂಗಳೆಂದೂ ಹುಲ್ಲುಗಾವಲಿನ ತಿಂಗಳೆಂದೂ ಕರೆದಿದ್ದರು. ಭಾರತೀಯ ಪಂಚಾಂಗದ ಪ್ರಕಾರ ಜ್ಯೇಷ್ಠ-ಆಷಾಢ ಮಾಸಗಳು ಸಾಮಾನ್ಯವಾಗಿ ಈ ತಿಂಗಳಲ್ಲಿ ಬರುತ್ತವೆ. ನವರತ್ನಗಳಲ್ಲಿ ಒಂದಾದ ಕೆಂಪನ್ನು ಜುಲೈ ತಿಂಗಳಿಗೆ ಅನ್ವಯಿಸುವುದು ರೂಢಿ. ಜುಲೈ ೨೦೨೩
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: