ಮಾಣಿಕ್ಯ (ರೂಬಿ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Lua error in package.lua at line 80: module 'Module:Pagetype/setindex' not found.

Ruby
A naturally occurring ruby crystal
General
ವರ್ಗMineral variety
ರಾಸಾಯನಿಕ ಸೂತ್ರaluminium oxide with chromium, Al2O3:Cr
Identification
ಬಣ್ಣRed, may be brownish, purplish or pinkish
ಸ್ಫಟಿಕ ಗುಣಲಕ್ಷಣVaries with locality. Terminated tabular hexagonal prisms.
ಸ್ಫಟಿಕ ಪದ್ಧತಿTrigonal (Hexagonal Scalenohedral) Symbol (-3 2/m) Space Group: R-3c
ಸೀಳುNo true cleavage
ಬಿರಿತUneven or conchoidal
ಮೋಸ್ ಮಾಪಕ ಗಡಸುತನ9.0
ಹೊಳಪುVitreous
ಪುಡಿಗೆರೆwhite
ಪಾರದರ್ಶಕತೆtransparent
ವಿಶಿಷ್ಟ ಗುರುತ್ವ4.0
ವಕ್ರೀಕರಣ ಸೂಚಿnω=1.768 - 1.772 nε=1.760 - 1.763, Birefringence 0.008
ಬಹುವರ್ಣಕತೆOrangey red, purplish red
ನೇರಳಾತೀತ ಪ್ರತಿದೀಪ್ತಿred under longwave
ಕರಗುವ ಬಿಂದು2044 °C
ಕರಗುವಿಕೆnone
Major varieties
SapphireAny color except red
Corundumvarious colors
EmeryGranular
ಹರಳುರೂಪದ ಮಾಣಿಕ್ಯ

ರೂಬಿ ಅಥವಾ ಮಾಣಿಕ್ಯ ಇದು ಗುಲಾಬಿ ಬಣ್ಣದಿಂದ ರಕ್ತ-ಕೆಂಪು ಬಣ್ಣದವರೆಗೆ ಇರುವ ರತ್ನದ ಹರಳಾಗಿದೆ, ಇದು ಖನಿಜ ಪಚ್ಚೆಯ (ಅಲ್ಯುಮಿನಿಯಮ್ ಆಕ್ಸೈಡ್) ಒಂದು ವಿಧವಾಗಿದೆ. ಇದರ ಕೆಂಪು ಬಣ್ಣವು ಮುಖ್ಯವಾಗಿ ಕ್ರೋಮಿಯಮ್ ಘಟಕದ ಅಸ್ತಿತ್ವದ ಕಾರಣದಿಂದ ಉಂಟಾಗುತ್ತದೆ. ಇದರ ಹೆಸರು ಕೆಂಪು ಎಂಬ ಅರ್ಥವನ್ನು ನೀಡುವ ಲ್ಯಾಟಿನ್‌ರೂಬರ್ ಎಂಬ ಶಬ್ದದಿಂದ ತೆಗೆದುಕೊಳ್ಳಲ್ಪಟ್ಟಿದೆ. ಪಚ್ಚೆ ಹರಳಿನ-ಗುಣಮಟ್ಟದ ಇತರ ವಿಧಗಳು ಸ್ಯಾಫೈರ್‌ಗಳು (ಇಂದ್ರನೀಲ ವರ್ಣದ ಹರಳುಗಳು) ಎಂದು ಕರೆಯಲ್ಪಡುತ್ತವೆ. ಮಾಣಿಕ್ಯವು ಸ್ಯಾಫೈರ್, ಎಮರಾಲ್ಡ್‌ (ಪಚ್ಚೆ), ಮತ್ತು ವಜ್ರಗಳ ಜೊತೆಗಿನ ನಾಲ್ಕು ಅತ್ಯಮೂಲ್ಯವಾದ ಹರಳುಗಳಲ್ಲಿ ಒಂದು ಎಂಬುದಾಗಿ ಪರಿಗಣಿಸಲ್ಪಡುತ್ತದೆ.[೧]

ಮಾಣಿಕ್ಯಗಳ ಬೆಲೆಗಳು ಮುಖ್ಯವಾಗಿ ಅವುಗಳ ಬಣ್ಣಗಳಿಂದ ನಿರ್ಧರಿಸಲ್ಪಡುತ್ತವೆ. ಅತ್ಯಂತ ಪ್ರಕಾಶಮಾನವಾದ ಮತ್ತು ಹೆಚ್ಚಿನ ಬೆಲೆಯ "ಕೆಂಪು" ಹರಳು ಪಿಜನ್ ಬ್ಲಡ್-ರೆಡ್ (ಪಿಜನ್ ಬ್ಲಡ್-ಕೆಂಪು) ಎಂದು ಕರೆಯಲ್ಪಡುತ್ತದೆ, ಇದು ಅದೇ ರೀತಿಯ ಗುಣಮಟ್ಟದ ಇತರ ಮಾಣಿಕ್ಯಗಳಿಗಿಂತ ಅತ್ಯಂತ ವ್ಯಾಪಕವಾದ ಅಧಿಕ ಮೌಲ್ಯವನ್ನು ಪಡೆದುಕೊಳ್ಳುತ್ತದೆ. ಬಣ್ಣದ ನಂತರ ಸ್ಪಷ್ಟತೆಯು ಪರಿಗಣಿಸಲ್ಪಡುತ್ತದೆ: ವಜ್ರಗಳಿಗೆ ಸದೃಶವಾಗಿ, ಒಂದು ಬಣ್ಣದ ಹರಳು ಅಧಿಕ ಮೌಲ್ಯವನ್ನು ಪಡೆದುಕೊಳ್ಳುತ್ತದೆ, ಆದರೆ ಯಾವುದೇ ಸೂಜಿಯ-ತರಹದ ರೂಟೈಲ್‌ನ ಸಂಯೋಜನಗಳಿಲ್ಲದ ಒಂದು ಮಾಣಿಕ್ಯವು ಹರಳು ಪರಿಗಣಿಸಲ್ಪಟ್ಟಿದೆ ಎಂಬುದನ್ನು ಸೂಚಿಸುತ್ತದೆ. ಕಟ್ ಮತ್ತು ಕ್ಯಾರಟ್ (ತೂಕ) ಇವುಗಳೂ ಕೂಡ ಬೆಲೆಯನ್ನು ನಿರ್ಧರಿಸುತ್ತವೆ.

ಭೌತಿಕ ಗುಣಗಳು[ಬದಲಾಯಿಸಿ]

ಮಾಣಿಕ್ಯಗಳು ಖನಿಜ ಗಡಸುತನದ ಮೊಹ್ಸ್ ಮಾನದಂಡದ ಮೇಲೆ 9.0 ಗಡಸುತನವನ್ನು ಹೊಂದಿವೆ. ಸ್ವಾಭಾವಿಕ ಹರಳುಗಳಲ್ಲಿ ಕೇವಲ ಮೊಯಿಸನೈಟ್ ಮತ್ತು ವಜ್ರಗಳು ಗಡಸಾಗಿರುತ್ತವೆ, ವಜ್ರವು 10.0 ರ ಮೊಹ್ಸ್ ಗಡಸುತನವನ್ನು ಹೊಂದಿದೆ ಮತ್ತು ಮೊಯಿಸನೈಟ್ ಇದು ಗಡಸುತನದಲ್ಲಿ ಪಚ್ಚೆ (ಮಾಣಿಕ್ಯ) ಮತ್ತು ವಜ್ರಗಳ ನಡುವಿನ ಗಡಸುತನವನ್ನು ಹೊಂದಿದೆ. ಮಾಣಿಕ್ಯವು α-ಅಲ್ಯುಮಿನಾ (Al2O3ದ ಹೆಚ್ಚಿನ ಸ್ಥಿರತೆಯನ್ನು ಹೊಂದಿರುವ)ದಲ್ಲಿ ಸಣ್ಣ ಪ್ರಮಾಣದ ಅಲ್ಯುಮಿನಿಯಮ್ 3+ ಇಯಾನ್‌ಗಳು ಕ್ರೋಮಿಯಮ್ 3+ ಇಯಾನ್‌ಗಳಿಂದ ಬದಲಾಯಿಸಲ್ಪಡುತ್ತವೆ. ಪ್ರತಿ ಕ್ರೋಮಿಯಮ್ 3+ ಇದು ಆರು O2- ಇಯಾನ್‌ಗಳ ಮೂಲಕ ಒಕ್ಟಾಹೆಡ್ರಲ್ಲಿ ಸುತ್ತುವರಿಯಲ್ಪಟ್ಟಿರುತ್ತದೆ. ಈ ರೀತಿಯ ಸ್ಪಟಿಕಶಾಸ್ತ್ರೀಯ ವ್ಯವಸ್ಥೆಯು ಪ್ರತಿ ಕ್ರೋಮಿಯಮ್3+ ಯ ಮೇಲೆ ಬಲವಾದ ಪರಿಣಾಮವನ್ನು ಬೀರುತ್ತದೆ, ಇದು ವರ್ಣಪಟಲದ ಹಳದಿ-ಹಸಿರು ಪ್ರದೇಶದಲ್ಲಿ ಬೆಳಕಿನ ಹೀರುವಿಕೆಗೆ ಕಾರಣವಾಗುತ್ತದೆ ಮತ್ತು ಆದ್ದರಿಂದ ಹರಳಿನ ಕೆಂಪು ಬಣ್ಣದಲ್ಲಿ ಪರಿಣಾಮ ಬೀರುತ್ತದೆ. ಹಳದಿ-ಹಸಿರು ಬೆಳಕು ಕ್ರೋಮಿಯಮ್3+ ದಿಂದ ಹೀರಿಕೊಳ್ಳಲ್ಪಟ್ಟಾಗ, ಇದು ಕೆಂಪು ತೋಜೋದೀಪಕವಾಗಿ ಪುನಃ-ಹೊರಸೂಸಲ್ಪಡುತ್ತದೆ.[೨] ಈ ಕೆಂಪು ಬಣ್ಣದ ಹೊರಸೂಸುವಿಕೆಯು ಬಿಳಿ ಬಣ್ಣದಿಂದ ತೆಗೆದುಕೊಳ್ಳಲ್ಪಟ್ಟ ಹಸಿರು ಮತ್ತು ನೇರಳೆ ಬೆಳಕುಗಳ ಪ್ರತ್ಯೇಕಿಸುವಿಕೆಯ ಮೂಲಕ ಕೆಂಪು ಬಣ್ಣಕ್ಕೆ ಸಂಯೋಜಿಸಲ್ಪಡುತ್ತದೆ, ಮತ್ತು ಹರಳಿನ ಪ್ರಕಾಶನಕ್ಕೆ ಮತ್ತೂ ಹೆಚ್ಚಿನ ಹೊಳಪನ್ನು ಸೇರಿಸುತ್ತದೆ. ಎರಡು ಕನ್ನಡಿಗಳ ನಡುವೆ ಹಿಂಬದಿಗೆ ಮತ್ತು ಮುಂಭಾಗಕ್ಕೆ ಪ್ರತಿಫಲಿಸುವ 694-ನ್ಯಾನೋಮೀಟರ್ ಫೋಟೋನ್‌ಗಳ ಮೂಲಕ ಪ್ರಚೋದಿಸಲ್ಪಟ್ಟಿರುವಂತೆ ಗೋಚರವಾಗುವ ವ್ಯವಸ್ಥೆಗಳಿದ್ದಾಗ ಹೊರಸೂಸುವಿಕೆಯು ತೀವ್ರತೆಯನ್ನು ಹೆಚ್ಚು ಬಲವಾಗಿ ಬೆಳೆಯುತ್ತ ಸಾಗುತ್ತದೆ. ಈ ಪರಿಣಾಮವು 1960 ರಲ್ಲಿ ಥಿಯೋಡರ್ ಮೈಮನ್‌ನಿಂದ ಮಾಣಿಕ್ಯದ ಮೇಲೆ ಆಧಾರಿತವಾದ ಮೊದಲ ಯಶಸ್ವಿ ಲೇಸರ್ ಅನ್ನು ನಿರ್ಮಿಸುವುದಕ್ಕೆ ಬಳಸಿಕೊಳ್ಳಲ್ಪಟ್ಟಿತು.

ಎಲ್ಲಾ ಸ್ವಾಭಾವಿಕ ಮಾಣಿಕ್ಯಗಳು ಬಣ್ಣದ ಅಶುದ್ಧತೆಗಳು ಮತ್ತು "ಸಿಲ್ಕ್" ಎಂದು ಕರೆಯಲ್ಪಡುವ ರೂಟೈಲ್ ಸೂಜಿಗಳ ಒಳಗೊಳ್ಳುವಿಕೆಯನ್ನು ಒಳಗೊಂಡಂತೆ ತಮ್ಮಲ್ಲಿ ಅಪೂರ್ಣತೆಗಳನ್ನು ಹೊಂದಿರುತ್ತವೆ. ಹರಳುಶಾಸ್ತ್ರಜ್ಞರು ಸ್ವಾಭಾವಿಕ ಮಾಣಿಕ್ಯಗಳಲ್ಲಿ ಕಂಡುಬಂದ ಈ ರೀತಿಯ ನೀಡಲ್ ಒಳಗೊಳ್ಳುವಿಕೆಗಳನ್ನು ಕೃತಕವಾಗಿ ತಯಾರಿಸಿದ ಅನುಕರಣಾ ಹರಳುಗಳು, ಅಥವಾ ಪರ್ಯಾಯಗಳಿಂದ ಅವುಗಳನ್ನು ಬೇರ್ಪಡಿಸುವ ಸಲುವಾಗಿ ಬಳಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಗಡುಸಾಗಿರುವ ಹರಳು ಕತ್ತರಿಸಲ್ಪಡುವುದಕ್ಕೆ ಮುಂಚೆ ಕಾಯಿಸಲ್ಪಡುತ್ತದೆ. ಪ್ರಸ್ತುತದಲ್ಲಿ ಹೆಚ್ಚಿನ ಎಲ್ಲಾ ಮಾಣಿಕ್ಯಗಳು ಕೆಲವು ವಿಧಾನಗಳಲ್ಲಿ ಪರೀಕ್ಷಿಸಲ್ಪಡುತ್ತವೆ, ಅವುಗಳಲ್ಲಿ ತಾಪದ ಪರೀಕ್ಷಣೆಯು ಹೆಚ್ಚು ಸಾಮಾನ್ಯವಾದ ಆಚರಣೆಯಾಗಿದೆ. ಆದಾಗ್ಯೂ, ಪೂರ್ತಿಯಾಗಿ ಪರೀಕ್ಷಿಸಲ್ಪಡದ ಆದರೂ ಕೂಡ ಅತ್ಯುತ್ತಮವಾದ ಗುಣಮಟ್ಟವನ್ನು ಹೊಂದಿರುವ ಮಾಣಿಕ್ಯಗಳು ಅತ್ಯಂತ ಅಧಿಕ ಮೌಲ್ಯವನ್ನು ಪಡೆದುಕೊಳ್ಳುತ್ತವೆ.

ಕೆಲವು ಮಾಣಿಕ್ಯಗಳು 3-ಬಿಂದುವಿನ ಅಥವಾ 6-ಬಿಂದುವಿನ ಆಸ್ಟರಿಮ್ (ಚುಕ್ಕಿಗಳು) ಗಳನ್ನು ಅಥವಾ "ನಕ್ಷತ್ರ"ಗಳನ್ನು ಪ್ರದರ್ಶಿಸುತ್ತವೆ. ಈ ಮಾಣಿಕ್ಯಗಳು ಅವುಗಳ ಪರಿಣಾಮವನ್ನು ನಿಖರವಾಗಿ ಪ್ರದರ್ಶಿಸುವ ಸಲುವಾಗಿ ರತ್ನವಾಗಿ (ಹೊಳಪು ಕೊಟ್ಟ ಆದರೆ ಪಟ್ಟೆ ಹೊಡೆದಿಲ್ಲದ) ಕತ್ತರಿಸಲ್ಪಡುತ್ತವೆ. ಚುಕ್ಕೆಗಳು (ನಕ್ಷತ್ರಗಳು) ಒಂದು ಏಕೈಕ-ಬೆಳಕಿನ ಮೂಲದ ಜೊತೆಗೆ ಅತ್ಯಂತ ಸ್ಪಷ್ಟ ಗೋಚರವಾಗುತ್ತವೆ, ಮತ್ತು ಅವುಗಳು ಬೆಳಕು ಚಲಿಸಿದಂತೆ ಅಥವಾ ಹರಳು ತಿರುಗಿದಂತೆ ಹರಳಿನ ಜೊತೆಗೆ ಚಲಿಸಲ್ಪಡುತ್ತದೆ. ಅಂತಹ ಪರಿಣಾಮಗಳು ಒಂದು ನಿರ್ದಿಷ್ಟ ಮಾರ್ಗದಲ್ಲಿ ಬೆಳಕು "ಸಿಲ್ಕ್" ಅನ್ನು (ವಿನ್ಯಾಸಾತ್ಮಕವಾಗಿ ಉದ್ದೇಶಿತವಾದ ರೂಟೈಲ್ ನೀಡಲ್ ಸಂಯೋಜನಗಳು) ಪ್ರತಿಫಲಿಸದ ಸಂದರ್ಭದಲ್ಲಿ ಸಂಭವಿಸಲ್ಪಡುತ್ತವೆ. ಇದು ಸಂಯೋಜನಗಳು ಒಂದು ಹರಳಿನ ಮೌಲ್ಯವನ್ನು ಹೆಚ್ಚಿಸುತ್ತವೆ ಎಂಬುದನ್ನು ತಿಳಿಸುವ ಒಂದು ಉದಾಹರಣೆಯಾಗಿದೆ. ಅದಕ್ಕೂ ಹೆಚ್ಚಾಗಿ, ಮಾಣಿಕ್ಯಗಳು ಬಣ್ಣಗಳ ಬದಲಾವಣೆಗಳನ್ನೂ ಪ್ರದರ್ಶಿಸಬಹುದು - ಆದಾಗ್ಯೂ ಇದು ತುಂಬಾ ವಿರಳವಾಗಿ ಸಂಭವಿಸುತ್ತದೆ - ಹಾಗೆಯೇ ಕ್ಯಾಟೋಯಾಂಕಿ ಅಥವಾ "ಬೆಕ್ಕಿನ ಕಣ್ಣಿನ" ಪರಿಣಾಮವನ್ನೂ ಪ್ರದರ್ಶಿಸಬಹುದು.

ಸ್ವಾಭಾವಿಕ ಸಂಭವಿಸುವಿಕೆ[ಬದಲಾಯಿಸಿ]

ಮೇಲಿನ ಮಯನ್ಮಾರ್ (ಬರ್ಮಾ)ನಲ್ಲಿನ ಮೊಗೊಕ್ ಕಣಿವೆಯು ಶತಮಾನಗಳ ಕಾಲ ಮಾಣಿಕ್ಯಗಳಿಗೆ ಪ್ರಮುಖವಾದ ಮೂಲವಾಗಿತ್ತು. ಆ ಪ್ರದೇಶವು ಯಾವತ್ತಿಗೂ ಕೂಡ ಅಗೆಯಲ್ಪಟ್ಟಿರದಂತಹ ಅತ್ಯಂತ ಉತ್ಕೃಷ್ಟವಾದ ಮಾಣಿಕ್ಯಗಳನ್ನು ಉತ್ಪತ್ತಿ ಮಾಡಿತ್ತು, ಆದರೆ ಇತ್ತೀಚಿನ ವರ್ಷಗಳಲ್ಲಿ ಆ ಪ್ರದೇಶದಲ್ಲಿ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಒಳ್ಳೆಯ ಮಾಣಿಕ್ಯಗಳು ಕಂಡುಬಂದಿವೆ. ಮಯನ್ಮಾರ್ ಮಾಣಿಕ್ಯಗಳಲ್ಲಿ ಅತ್ಯಂತ ಒಳ್ಳೆಯ ಬಣ್ಣವೆಂದರೆ ಅನೇಕ ವೇಳೆ "ಪಾರಿವಾಳದ ರಕ್ತ"ದ ಬಣ್ಣ ಎಂದು ವರ್ಣಿಸಲ್ಪಡುವ ಬಣ್ಣವಾಗಿದೆ. ಮಧ್ಯ ಮಯನ್ಮಾರ್‌ನಲ್ಲಿ, ಮೊಂಗ್ ಹ್ಸ್ಯೂ ಪ್ರದೇಶವು 1990 ರ ದಶಕದ ಸಮಯದಲ್ಲಿ ಮಾಣಿಕ್ಯಗಳನ್ನು ಉತ್ಪಾದಿಸಲು ಪ್ರಾರಂಭಿಸಿತು, ಮತ್ತು ಅತ್ಯಂತ ತ್ವರಿತಗತಿಯಲ್ಲಿ ಜಗತ್ತಿನ ಪ್ರಮುಖ ಮಾಣಿಕ್ಯ ಗಣಿಗಾರಿಕಾ ಪ್ರದೇಶವಾಗಿ ಬೆಳೆಯಿತು. ಮಯನ್ಮಾರ್‌ನಲ್ಲಿ ತುಂಬಾ ಇತ್ತೀಚಿನ ದಿನಗಳಲ್ಲಿ ಕಂಡುಬಂದ ಮಾಣಿಕ್ಯ ಸಂಗ್ರಹವೆಂದರೆ ಕಚಿನ್‌ನ ಉತ್ತರ ಭಾಗದ ರಾಜ್ಯದಲ್ಲಿ ಸ್ಥಾಪಿತವಾಗಲ್ಪಟ್ಟ ನಮ್ಯಾ (ನಮ್ಯಾಜೈಕ್) ಆಗಿದೆ.

ಮಾಣಿಕ್ಯಗಳಿಗಾಗಿ ಅನಾದಿಕಾಲದಿಂದಲೂ ಥೈಲ್ಯಾಂಡ್, ಪೈಲಿನ್ ಮತ್ತು ಕ್ಯಾಂಬೋಡಿಯಾದ ಸ್ಯಾಮ್‌ಲೌಟ್ ಜಿಲ್ಲೆಗಳಲ್ಲಿ, ಮತ್ತು ಅಫ್ಘಾನಿಸ್ತಾನದಲ್ಲಿ ಗಣಿಗಾರಿಕೆಯನ್ನು ನಡೆಸಲಾಗಿದೆ. ಮಾಣಿಕ್ಯಗಳು ಶ್ರೀಲಂಕಾದಲ್ಲಿ ವಿರಳವಾಗಿ ಕಂಡುಬರುತ್ತವೆ, ಅಲ್ಲಿ ಗುಲಾಬಿ ಬಣ್ಣದ ಸ್ಯಾಫೈರ್‌ಗಳು ಹೆಚ್ಚು ಸಾಮಾನ್ಯವಾಗಿ ಕಂಡುಬರುತ್ತವೆ. ಎರಡನೆಯ ಜಾಗತಿಕ ಯುದ್ಧದ ನಂತರ ಮಾಣಿಕ್ಯದ ನಿಕ್ಷೇಪಗಳು ತಾಂಜಾನಿಯಾ, ಮಡಗಾಸ್ಕರ್, ವಿಯೆಟ್ನಾಂ, ನೇಪಾಳ, ತಜಿಕಿಸ್ತಾನ್, ಮತ್ತು ಪಾಕಿಸ್ತಾನಗಳಲ್ಲಿ ಕಂಡುಬಂದವು. ಅತ್ಯಂತ ಕಡಿಮೆ ಪ್ರಮಾಣದ ಮಾಣಿಕ್ಯಗಳು ಯು.ಎಸ್. ರಾಜ್ಯದ ಮೊಂಟಾನಾ, ಉತ್ತರ ಕ್ಯಾರೋಲಿನಾ, ಮತ್ತು ದಕ್ಷಿಣ ಕ್ಯಾರೋಲಿನಾಗಳಲ್ಲಿ ಕಂಡುಬಂದವು. ತೀರಾ ಇತ್ತೀಚಿಗೆ, ಹೇರಳವಾದ ಮಾಣಿಕ್ಯ ನಿಕ್ಷೇಪಗಳು ಗ್ರೀನ್‌ಲ್ಯಾಂಡ್‌ನ ಕುಗ್ಗುತ್ತಿರುವ ಮಂಜುಗಡ್ಡೆಯ ಪದರಗಳ ಅಡಿಯಲ್ಲಿ ಕಂಡುಬಂದವು. 2002 ರಲ್ಲಿ ಮಾಣಿಕ್ಯಗಳು ಕೀನ್ಯಾದ ವ್ಯಾಸೇಜಸ್ ನದಿಯ ಪ್ರದೇಶಗಳಲ್ಲಿ ಕಂಡುಬಂದವು.

ಮತ್ತೊಂದು ಕೆಂಪು ಹರಳಾದ ಸ್ಪೈನೆಲ್ ಇದು ಕೆಲವು ವೇಳೆ ಅದೇ ರೀತಿಯಾದ ಹರಳಿನ ಜಲ್ಲಿಸ್ತರಗಳಲ್ಲಿ ಅಥವಾ ಮಾರ್ಬಲ್‌ಗಳಲ್ಲಿ ಮಾಣಿಕ್ಯಗಳ ಜೊತೆಗೆ ಕಂಡುಬಂದವು. ಹರಳುಗಳ ಬಗೆಗೆ ಪರಿಣಿತಿಯ ಕೊರತೆಯನ್ನು ಹೊಂದಿರುವ ವ್ಯಕ್ತಿಗಳು ಕೆಂಪು ಸ್ಪೈನೆಲ್‌‌ಗಳನ್ನು ಮಾಣಿಕ್ಯಗಳು ಎಂಬುದಾಗಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಆದಾಗ್ಯೂ, ಉತ್ಕೃಷ್ಟವಾದ ಕೆಂಪು ಸ್ಪಿನೆಲ್‌ಗಳ ಬೆಲೆಗಳು ಸರಾಸರಿ ಗುಣಮಟ್ಟದ ಮಾಣಿಕ್ಯದ ಬೆಲೆಯನ್ನು ಸಮೀಪಿಸಬಹುದು.[೩]

ಕತ್ತರಿಸಿದ ಮಾಣಿಕ್ಯ.

ಬೆಲೆಯ ಮೇಲೆ ಪರಿಣಾಮ ಬೀರುವ ಅಂಶಗಳು[ಬದಲಾಯಿಸಿ]

ವಜ್ರಗಳು ನಾಲ್ಕು ಸಿ ಗಳು ಎಂದು ಕರೆಯಲ್ಪಡುವ ಮಾನದಂಡಗಳನ್ನು ಬಳಸಿಕೊಂಡು ಗುಣಮಟ್ಟಗಳನ್ನು (ಶ್ರೇಣಿಗಳನ್ನು) ನೀಡಲ್ಪಡುತ್ತವೆ, ನಾಲ್ಕು ಸಿ ಗಳು ಯಾವುವೆಂದರೆ ಬಣ್ಣ, ಕತ್ತರಿಸುವಿಕೆ, ಸ್ಪಷ್ಟತೆ ಮತ್ತು ಕ್ಯಾರಟ್ ತೂಕ. ಅದೇ ರೀತಿಯಾಗಿ ಮಾಣಿಕ್ಯಗಳೂ ಕೂಡ ಅವುಗಳ ಗಾತ್ರ ಮತ್ತು ಭೌಗೋಳಿಕ ಮೂಲದ ಜೊತೆಗೆ ನಾಲ್ಕು ಸಿ ಗಳನ್ನು ಬಳಸಿಕೊಂಡು ಮೌಲ್ಯಮಾಪನ ಮಾಡಲ್ಪಡುತ್ತವೆ.

ಬಣ್ಣ: ಬಣ್ಣಗಳನ್ನು ಹೊಂದಿದ ಹರಳುಗಳ ಪರಿಶೀಲನೆಯಲ್ಲಿ, ಬಣ್ಣ ಮಾತ್ರ ಅತ್ಯಂತ ಪ್ರಮುಖವಾದ ಅಂಶವಾಗಿದೆ. ಬಣ್ಣವು ಮೂರು ಘಟಕಗಳಾಗಿ ವಿಂಗಡಿಸಲ್ಪಟ್ಟಿದೆ: ಹ್ಯೂ (ವರ್ಣ ಅಥವಾ ಛಾಯೆ), ಶುದ್ಧತ್ವ ಮತ್ತು ಟೋನ್ . ಹ್ಯೂ ಇದು ನಾವು ಸಾಮಾನ್ಯವಾಗಿ ಬಳಸುವ ಶಬ್ದವಾದ "ಬಣ್ಣ" ಎಂಬ ಅರ್ಥವನ್ನು ನೀಡುತ್ತದೆ. ಪಾರದರ್ಶಕ ಹರಳುಗಳು ಈ ಕೆಳಗಿನ ಹ್ಯೂಗಳಲ್ಲಿ (ವರ್ಣಗಳಲ್ಲಿ) ಸಂಭವಿಸುತ್ತವೆ: ಕೆಂಪು, ಕೇಸರಿ, ಹಳದಿ, ಹಸಿರು, ನೀಲಿ, ನೇರಳೆ, ಕೆನ್ನೀಲಿ ಮತ್ತು ಗುಲಾಬಿ ಇವುಗಳು ರೋಹಿತದ ವರ್ಣಗಳಾಗಿವೆ. ಮೊದಲ ಆರು ವರ್ಣಗಳು ರೋಹಿತದ ವರ್ಣಗಳು ಎಂದು ಕರೆಯಲ್ಪಡುತ್ತವೆ; ಕೊನೆಯ ಎರಡು ಬದಲಾಯಿಸಲ್ಪಟ್ಟ ರೋಹಿತ ವರ್ಣಗಳು ಎಂದು ಕರೆಯಲ್ಪಡುತ್ತವೆ. ಕೆನ್ನೀಲಿ ಬಣ್ಣವು ಕೆಂಪು ಮತ್ತು ನೀಲಿ ಬಣ್ಣಗಳ ಮಧ್ಯದಲ್ಲಿನ ಒಂದು ಬಣ್ಣವಾಗಿದೆ. ಗುಲಾಬಿ ಬಣ್ಣವು ಕೆಂಪು ಬಣ್ಣದ ಮಾಸಲು ಬಣ್ಣವಾಗಿದೆ.[೪] ಪ್ರಕೃತಿಯಲ್ಲಿ ವಿರಳವಾಗಿ ಪರಿಶುದ್ಧವಾದ ಹ್ಯೂಗಳಿವೆ, ಆದ್ದರಿಂದ ಒಂದು ಹರಳಿನ ವರ್ಣದ ಬಗ್ಗೆ ಮಾತನಾಡುವಾಗ ನಾವು ಪ್ರಾಥಮಿಕ ಮತ್ತು ದ್ವಿತೀಯಕ ಮತ್ತು ಕೆಲವು ವೇಳೆ ತೃತೀಯಕ ಹ್ಯೂಗಳ ಬಗ್ಗೆ ಮಾತನಾಡುತ್ತೇವೆ. ಮಾಣಿಕ್ಯದಲ್ಲಿ ಪ್ರಾಥಮಿಕ ವರ್ಣವು ಕೆಂಪು ವರ್ಣವಾಗಿರುತ್ತದೆ. ಪಚ್ಚೆ ಹರಳಿನ ಜಾತಿಗಳ ಎಲ್ಲಾ ಇತರ ಹ್ಯೂಗಳು ಸ್ಯಾಫೈರ್‌ಗಳು ಎಂದು ಕರೆಯಲ್ಪಡುತ್ತವೆ. ಮಾಣಿಕ್ಯವು ಒಂದು ವ್ಯಾಪ್ತಿಯ ದ್ವಿತೀಯಕ ಹ್ಯೂಗಳನ್ನು ಪ್ರದರ್ಶಿಸುತ್ತದೆ. ಕೇಸರಿ, ಕೆನ್ನೀಲಿ, ನೇರಳೆ ಮತ್ತು ಗುಲಾಬಿ ಹ್ಯೂಗಳು ಸಂಭಾವ್ಯವಾಗಿರುತ್ತವೆ.

ಅತ್ಯಂತ ಉತ್ಕೃಷ್ಟವಾದ ಮಾಣಿಕ್ಯವು ಒಂದು ಪ್ರಕಾಶಮಾನವಾದ ಮಧ್ಯಮ-ದಟ್ಟ ಟೋನ್ ಕೆಂಪು ಬಣ್ಣದಲ್ಲಿರುತ್ತದೆ ಎಂದು ಉತ್ತಮವಾಗಿ ವರ್ಣಿಸಲ್ಪಡುತ್ತದೆ ದ್ವಿತೀಯಕ ಹ್ಯೂಗಳು ಒಂದು ಹೆಚ್ಚುವರಿ ಕ್ಲಿಷ್ಟತೆಗಳನ್ನು ಹೊಂದಿರುತ್ತವೆ. ಗುಲಾಬಿ, ಕೇಸರಿ, ಮತ್ತು ಕೆನ್ನೀಲಿ ಬಣ್ಣಗಳ ಮಾಣಿಕ್ಯದಲ್ಲಿ ಸಾಮಾನ್ಯವಾದ ದ್ವಿತೀಯಕ ಹ್ಯೂಗಳಾಗಿವೆ. ಈ ಮೂರರಲ್ಲಿ, ಕೆನ್ನೀಲಿ ಬಣ್ಣವು ಈ ಕೆಳಗೆ ನಮೂದಿಸಿದ ಎರಡು ಕಾರಣಗಳಿಂದ ಆಯ್ಕೆ ಮಾಡಿಕೊಳ್ಳಲ್ಪಡುತ್ತದೆ, ಮೊದಲಿಗೆ, ಕೆನ್ನೀಲಿ ಬಣ್ಣವು ಕೆಂಪು ಬಣ್ಣವನ್ನು ಅತ್ಯಂತ ಉತ್ಕೃಷ್ಟವಾಗಿ ಕಂಡುಬರುವಂತೆ ಮಾಡುವ ಮೂಲಕ ಅದನ್ನು ಬಲಪಡಿಸುತ್ತದೆ.[೪] ಎರಡನೆಯದಾಗಿ, ಕೆನ್ನೀಲಿ ಬಣ್ಣವು ಬಣ್ಣದ ಚಕ್ರದಲ್ಲಿ ಕೆಂಪು ಮತ್ತು ನೀಲಿ ಬಣ್ಣಗಳ ನಡುವಣ ಒಂದು ಸ್ಥಾನವನ್ನು ಆಕ್ರಮಿಸುತ್ತದೆ. ಬರ್ಮಾದಲ್ಲಿ ಪಾರಿವಾಳ ರಕ್ತ ಕೆಂಪು ಬಣ್ಣದ ಮಾಣಿಕ್ಯಗಳು ಪರಿಶುದ್ಧ ಬಂಗಾರದಲ್ಲಿ ತಯಾರಿಸಲ್ಪಡುತ್ತವೆ. ಪರಿಶುದ್ಧ ಬಂಗಾರವು ಅತ್ಯುತ್ತಮ ಮಟ್ಟದ ಶುದ್ಧ ಹಳದಿ ಬಣ್ಣದಲ್ಲಿರುತ್ತದೆ. ಹಳದಿ ಬಣ್ಣದಲ್ಲಿ ಸ್ಥಾಪಿತಗೊಳ್ಳಲ್ಪಟ್ಟ ಒಂದು ನೇರಳೆ ಛಾಯೆಯ-ಕೆಂಪು ಮಾಣಿಕ್ಯ ಮತ್ತು ಹಳದಿ ಬಣ್ಣಗಳು ಅದರ ಪೂರಕ ನೀಲಿ ಬಣ್ಣವನ್ನು ತಟಸ್ಥಗೊಳಿಸುವುದರ ಮೂಲಕ ಹರಳನ್ನು ಅತ್ಯಂತ ಪರಿಶುದ್ಧ ಕೆಂಪು ಬಣ್ಣವಾಗಿ ಗೋಚರವಾಗುವಂತೆ ಮಾಡುತ್ತದೆ.[೫]

ಸಂಸ್ಕರಣೆ ಮತ್ತು ಗುಣಮಟ್ಟ ಸುಧಾರಣೆ[ಬದಲಾಯಿಸಿ]

ಹರಳಿನ ಗುಣಮಟ್ಟವನ್ನು ಉತ್ತಮಪಡಿಸಲು ಸಾಧಾರಣ ಪದ್ಧತಿ ಸಂಸ್ಕರಣೆ ಬಳಸಲಲಾಗುತ್ತದೆ. ಕೆಲವೊಂದು ಸಂಸ್ಕರಣೆಗಳನ್ನು ಎಲ್ಲಾ ಸಂದರ್ಭಗಳಲ್ಲು ಬಳಸಲಾಗುತ್ತದೆ ಮತ್ತು ಸಂಸ್ಕರಿದ ನಂತರ ಹರಳನ್ನು ಬಳಸಲು ಅರ್ಹವಾಗುತ್ತದೆ. 1990ರ ನಂತರದ ದಿನಗಳಲ್ಲಿ, ದೊಡ್ಡ ಪ್ರಮಾಣದಲ್ಲಿ ಕಡಿಮೆ ವೆಚ್ಚದ ವಸ್ತುಗಳನ್ನು ಬಿಸಿಗೊಳಪಡಿಸಿ ಸಂಸ್ಕರಿಸಿ ಅದನ್ನು ಮಾರುಕಟ್ಟೆಗೆ ಪೂರೈಕೆ ಮಾಡಲಾಯಿತು, ಇದು ಮಾಣಿಕ್ಯಗಳು ಮಾರುಕಟ್ಟೆಗೆ ಶೀಘ್ರವಾಗಿ ಪ್ರವಾಹೊಪಾದಿಯಲ್ಲಿ ಪ್ರವೇಶಿಸಲು ಸಾಧ್ಯವಾಯಿತು, ಇದರಿಂದ ಮಾಣಿಕ್ಯಗಳ ಬೆಲೆ ಇಳಿಮುಖವಾಯಿತು.

ಉತ್ತಮ ಪಡಿಸುವಿಕೆಯಲ್ಲಿ ಬಣ್ಣ ಬದಲಾವಣೆ ಕೂಡ ಒಳಗೊಂಡಿದೆ, ಪಾರದರ್ಶಕತೆ ಉತ್ತಮ ಪಡಿಸಲು ಮತ್ತು ಸೀಳು ಬಂದಿರುವುದನ್ನು ( ಕ್ರ್ಯಾಕ್ಸ್) ಅಥವಾ ಅದನ್ನು ಸಂಪೂರ್ಣವಾಗಿ ಸರಿಪಡಿಸಲು ರುಟೈಲ್ ಮಿಶ್ರಮಾಡಿ ಸೇರಿಸಲಾಗುತ್ತದೆ.

ಒಂದು ಸಾಮಾನ್ಯಾದ ಸಂಸ್ಕರಣೆ ಎಂದರೆ ಬಿಸಿ ಮಾಡುವುದು. ಮಾರುಕಟ್ಟೆಯಲ್ಲಿ ದೊರೆಯುವ ಕಡಿಮೆ ದರದ ಹೆಚ್ಚಿನ ಎಲ್ಲಾ ಮಾಣಿಕ್ಯಗಳನ್ನು ಒರಟಾದ ಕಲ್ಲನ್ನು ಬಿಸಿ ಮಾಡಿ ಅದರಲ್ಲಿನ ನೇರಳೆ ಛಾಯೆ , ನೀಲಿ ಕಲೆಗಳು ಮತ್ತು ಗೆರೆಗಳನ್ನು ತೆಗೆದು ಅದರ ಬಣ್ಣ ಉತ್ತಮಪಡಿಸಿದವುಗಳಾಗಿರುತ್ತವೆ, ಆದರೇ ಮಾರುಕಟ್ಟೆಯಲ್ಲಿ ದೊರೆಯುವ ಎಲ್ಲವು ಅಲ್ಲ. ಈ ಬಿಸಿ ಮಾಡುವ ಸಂಸ್ಕರಣೆಯ ತಾಪಮಾನವು ಸುಮಾರು 1800 °ಸೆ (3300 °F) ನಷ್ಟಿರುತ್ತದೆ.[೬] 20 ರಿಂದ 30 ನಿಮಿಷ ಕಾಯಿಸಿದಾಗ ಕಲ್ಲಿದ್ದಲ್ಲಿನ ತಾಪಮಾನ ಸುಮಾರು 1300 °ಸೆ (2400 °F) ಆದಾಗ ಕೆಲವು ಮಾಣಿಕ್ಯಗಳನ್ನು ಬಿಸಿಗೆ ಒಳಪಡಿಸಲಾಗುತ್ತದೆ. ಬಣ್ಣ ಉತ್ತಮ ಪಡಿಸುವಾಗ ಮಾತ್ರ ಗೆರೆಗಳು ಉಂಟಾಗುತ್ತವೆ.

ಇತ್ತಿಚೀನ ದಿನಗಳಲ್ಲಿ ಗಾಜು ತುಂಬುವುದರಿಂದ ಕಡಿಮೆ ಪ್ರಮಾಣದಲ್ಲಿ ಬಳಸಲು ಅರ್ಹವಾಗುತ್ತಿವೆ. ಗೆರೆಗಳಿರುವ ಮಾಣಿಕ್ಯದ ಒಳಗಡೆ ಪ್ರಮುಖವಾಗಿ ಗಾಜನ್ನು ತುಂಬಿದಾಗ ಪಾರ್ದರ್ಶಕತೆಯು ಉತ್ತಮವಾಗುತ್ತದೆ, ಆಭರಣ ತಯಾರಿಸಲು ಅನರ್ಹವಾದ ಮಾಣಿಕ್ಯಗಳು ಇದರಿಂದಾಗಿ ಬಳಕೆಗೆ ಯೋಗ್ಯವಾಗುತ್ತವೆ. ಈ ಸಂಸ್ಕರಣವನ್ನು ನಾಲ್ಕು ಹಂತಗಳಲ್ಲಿ ನಡೆಸಲಾಗುತ್ತದೆ:

 1. ಹೊಳಪು ಕೊಡುವ ಮೊದಲು ಒರಟು ಕಲ್ಲುಗಳ ಮೇಲಿನ ಕೊಳೆಗಳನ್ನು ತೆಗೆದುಹಾಕುವ ಪ್ರಕ್ರಿಯೆಯು ಸಂಸ್ಕರಣೆಯ ಮೇಲೆ ಪರಿಣಾಮ ಉಂಟುಮಾಡುತ್ತದೆ.
 2. ಹೈಡ್ರೋಜನ್ ಫೆರಾಕ್ಸೈಡ್‌ ಬಳಸಿ ಒರಟು ಮೇಲ್ಮೈ ಚೊಕ್ಕಗೊಳಿಸಲಾಗುತ್ತದೆ.
 3. ಮೊದಲ ಬಿಸಿ ಮಾಡುವ ಹಂತದ ಸಂಸ್ಕರಣೆಯ ಸಮಯದಲ್ಲಿ ಯಾವುದೇ ಭರ್ತಿ ಮಾಡುವ ಸಾಧನವನ್ನು ಸೇರಿಸಲಾಗುವುದಿಲ್ಲ. ಬಿಸಿ ಮಾಡುವ ಸಂಸ್ಕರಣೆಯು ಬಿರುಕಿನ ಒಳಗಡೆಯ ಕೊಳೆಯನ್ನು ತೆಗೆದುಹಾಕುತ್ತದೆ. ಇದನ್ನು ಸುಮಾರು 1400 °ಸೆ (2500 °F) ತಾಪಮಾನದಲ್ಲಿ ನಡೆಸಲಾಗುತ್ತದೆಯಾದರೂ ಹೆಚ್ಚಾಗಿ ಇದು ಸುಮಾರು 900 °C (1600 °F) ಉಷ್ಣತೆಯಲ್ಲಿ ಘಟಿಸುತ್ತದೆ, ಏಕೆಂದರೆ ರುಟೈಲ್ ಎಳೆಯು ಈ ಹಂತದಲ್ಲಿಯೂ ಕರಗದೇ ಹಾಗೇ ಉಳಿದಿರುತ್ತದೆ.
 4. ವಿವಿಧ ಬಗೆಯ ಪೂರಕ ರಾಸಾಯನಿಕ ಬಳಸಿ ವಿದ್ಯುನ್ಮಾನ ಓವನ್‌ನಲ್ಲಿ ಎರಡನೇಯ ಹಂತದ ಬಿಸಿ ಮಾಡುವ ಸಂಸ್ಕರಣೆ ಕ್ರಿಯೆ ನಡೆಯುತ್ತದೆ. ವಿವಿಧ ದ್ರಾವಣಗಳು ಅಥವಾ ಮಿಶ್ರಣಗಳು ಯಶಸ್ವಿಯಾಗಿ ಸೇರಿಕೊಂಡಿರುವುದು ಕಾಣಿಸುತ್ತದೆ, ಆದರೂ ಇತ್ತಿಚೀನ ದಿನಗಳಲ್ಲಿ ಗಾಜಿನ ಪುಡಿಗಳನ್ನು ಬಳಸಲಾಗುತ್ತಿದೆ. ಮಾಣಿಕ್ಯವನ್ನು ಎಣ್ಣೆಯಲ್ಲಿ ಅದ್ದಿ ನಂತರ ಪುಡಿಯಿಂದ ಮುಚ್ಚಿ, ಒವನ್ ಒಳಗಡೆ ಹೆಂಚಿನಲ್ಲಿಟ್ಟು ಸುಮಾರು 900 °ಸೆ (1600 °F) ಬಿಸಿ ತಾಪಮಾನದ ಆಕ್ಸಿಡೈಜಿಂಗ್ ವಾತಾವರಣಲ್ಲಿ ಒಂದು ಘಂಟೆ ಇರಿಸಲಾಗುತ್ತದೆ. ಕಿತ್ತಳೆ ಬಣ್ಣದ ಪುಡಿಯುನ್ನು ಬಿಸಿ ಮಾಡಿದಾಗ ಹಳದಿ ಬಣ್ಣದ ಪೇಸ್ಟ್‌ಆಗಿ ರೂಪಾಂತರ ಹೊಂದುತ್ತದೆ, ಇದು ಎಲ್ಲಾ ಬಿರುಕುಗಳನ್ನು ಮುಚ್ಚಿಹಾಕುತ್ತದೆ. ಬಣ್ಣದ ಪೇಸ್ಟ್‌ನ್ನು ತಂಪುಗೊಳಿಸಿದ ನಂತರ ಸಂಪೂರ್ಣವಾಗಿ ಪಾರದರ್ಶಕವಾಗುತ್ತದೆ ಮತ್ತು ಮಾಣಿಕ್ಯದ ಪಾರದರ್ಶಕತೆಯನ್ನು ಸಮಗ್ರವಾಗಿ ಉತ್ತಮಗೊಳಿಸುತ್ತದೆ.

ಇದಕ್ಕೆ ಹೆಚ್ಚುವರಿ ಬಣ್ಣದ ಅವಶ್ಯಕತೆ ಇದ್ದರೇ, ತಾಮ್ರ ಅಥವ ಇತರೆ ಲೋಹದ ಆಕ್ಸೈಡ್‌ಗಳಾದ ಸೋಡಿಯಂ, ಕ್ಯಾಲ್ಸಿಯಂ, ಪೋಟಾಷಿಯಂ ಅಂಶಗಳನ್ನು ಗಾಜಿನ ಪುಡಿಯ ಜೊತೆ ಸೇರಿಸಿ ಗುಣಮಟ್ಟ ಹೆಚ್ಚಿಸಲಾಗುತ್ತದೆ.

ವಿವಿಧ ಮಿಶ್ರಣಗಳನ್ನು ಬಳಸಿ ಮೂರು ನಾಲ್ಕು ಬಾರಿ ಎರಡನೇಯ ಹಂತದ ಬಿಸಿ ಮಾಡುವ ಪ್ರಕ್ರಿಯೆಯನ್ನು ಮಾಡಲಾಗುತ್ತದೆ.[೭] ನೀಲಮಣಿಗಳು ಅಥವಾ ಮಾಣಿಕ್ಯಗಳನ್ನು ಅಳವಡಿಸಿರುವ ರತ್ನಾಭರಣಗಳನ್ನು (ದುರಸ್ತಿಗಳಿಗಾಗಿ) ಬಿಸಿಮಾಡುವಾಗ, ಅವುಗಳಿಗೆ ಬೊರಾಸಿಕ್‌ ಆಮ್ಲವನ್ನಾಗಲೀ ಅಥವಾ ಇನ್ನಾವುದೇ ವಸ್ತುವಿನ ಲೇಪವನ್ನಾಗಲೀ ಲೇಪಿಸಬಾರದು. ಹೀಗೆ ಮಾಡುವುದರಿಂದ ಅವುಗಳ ಮೇಲ್ಮೈಯು ತರಚಿಹೋಗುತ್ತದೆ; ಅಲ್ಲದೇ ಒಂದು ವಜ್ರದಂತೆ ಇವನ್ನು “ಸಂರಕ್ಷಿಸುವ” ಅಗತ್ಯ ಕಂಡುಬರುವುದಿಲ್ಲ.

ಕೃತಕವಾಗಿ ತಯಾರಿಸಿದ ಮತ್ತು ಅನುಕರಣ ಮಾಣಿಕ್ಯಗಳು[ಬದಲಾಯಿಸಿ]

1837ರಲ್ಲಿ ಗೂಡನ್ ಮೊದಲು ಪೊಟ್ಯಾಶ್ ಆಲಮ್‌‌ನೊಂದಿಗೆ ಹೆಚ್ಚಿನ ತಾಪಮಾನದಲ್ಲಿ ಸಣ್ಣ ಪ್ರಮಾಣದ ಕ್ರೋಮಿಯಮ್‌ನ್ನು ವರ್ಣದ್ರವ್ಯವಾಗಿ ಸೇರಿಸಿ ಕೃತಕವಾಗಿ ಮಾಣಿಕ್ಯಗಳನ್ನು ತಯಾರಿಸಿದನು. 1847ರಲ್ಲಿ ಎಬೆಲ್ಮೆನ್‌ನು ಬಿಳಿಯ ನೀಲಮಣಿವನ್ನು ಬೋರಿಕ್ ಆಮ್ಲದಲ್ಲಿ ಅಲ್ಯೂಮಿನವನ್ನು ಸಮ್ಮಿಳನಗೊಳಿಸಿ ತಯಾರಿಸಿದನು. 1877ರಲ್ಲಿ ಫ್ರೆನಿಕ್ ಮತ್ತಿ ಫ್ರೈಲ್‌ರು ಕೊರಂಡಮ್‌ ಹರಳನ್ನು ಸಣ್ಣ ಹರಳನ್ನು ಕತ್ತರಿಸುವ ರೀತಿಯಲ್ಲಿ ಮಾಡಿದರು. ಫ್ರಿಮೀ ಮತ್ತು ಆಗಷ್ಟೇ ವೆರ್ನಿಲ್ ಕೃತಕ ಮಾಣಿಕ್ಯವನ್ನು BaF2 ಮತ್ತು Al2O3 ಮತ್ತು ಚಿಕ್ಕ ಪ್ರಮಾಣದ ಕ್ರೋಮಿಯಮ್‌ನೊಂದಿಗೆ ಕೆಂಗಾವಿನಲ್ಲಿರಿಸಿ ಸಮ್ಮಿಶ್ರಣಗೊಳಿಸಿ ತಯಾರಿಸಿದನು. 1903ರಲ್ಲಿ ವೆರ್ನಿಲ್ ತಾನು ಬೆಂಕಿಯಲ್ಲಿ ಸಮ್ಮಿಳನಗೊಳಿಸುವ ವಿಧಾನದಲ್ಲಿ ಕೃತಕವಾಗಿ ತಯಾರಿಸಿದ ಮಾಣಿಕ್ಯಗಳನ್ನು ವಾಣಿಜ್ಯಿಕವಾಗಿ ಬಳಸಬಹುದೆಂದು ಘೋಷಿಸಿದನು.[೮] 1910ರಲ್ಲಿ, ವೆರ್ನಿಲ್‌ನ ಪ್ರಯೋಗಾಲಯವು 1907ರಲ್ಲಿ 1,000 kg (2,205 lb)ರಷ್ಟಿದ್ದ ಹರಳಿನ ವಾರ್ಷಿಕ ತಯಾರಿಕೆಯನ್ನು 30 ಕುಲುಮೆ ಸೌಲಭ್ಯದೊಂದಿಗೆ ವಿಸ್ತರಿಸಿತು.

ಮಾಣಿಕ್ಯಗಳನ್ನು ಕೃತಕವಾಗಿ ತಯಾರಿಸಬಹುದಾದ ಬೇರೆ ವಿಧಾನಗಳೆಂದರೆ ಜೋಕ್ರಾಲ್ಸ್ಕೀಯ ಎಳೆಯುವ ವಿಧಾನ, ಹರಿವು ವಿಧಾನ, ಮತ್ತು ಹೈಡ್ರೊಥರ್ಮಲ್ ವಿಧಾನಗಳು. ಹೆಚ್ಚಾಗಿ ಬೆಂಕಿಯಲ್ಲಿ ಸಮ್ಮಿಳನಗೊಳಿಸುವ ವಿಧಾನಗಳಿಂದ ಕೃತಕವಾಗಿ ತಯಾರಿಸುತ್ತಾರೆ ಏಕೆಂದರೆ ಇದರಲ್ಲಿ ಮಾಣಿಕ್ಯಗಳ ತಯಾರಿಕಾ ವೆಚ್ಚ ಕಡಿಮೆಯಾಗಿರುತ್ತದೆ. ಕೃತಕವಾಗಿ ತಯಾರಿಸಿದ ಮಾಣಿಕ್ಯಗಳಲ್ಲಿ ಯಾವುದೇ ಲೋಪದೋಷಗಳು ಬರಿಗಣ್ಣಿಗೆ ಕಾಣುವಂತಿರುವುದಿಲ್ಲ, ಆದರೆ ವರ್ಧಿಸಿದಾಗ ಇದರ ಗೆರೆಗಳು, ಕಲೆಗಳು ಮತ್ತು ಗಾಳಿಯ ಗುಳ್ಳೆಗಳು ಕಾಣುತ್ತವೆ. ಗೋಚರವಾಗುವ ಲೋಪದೋಷಗಳು ಕಡಿಮೆಯಾದಷ್ಟೂ ಮಾಣಿಕ್ಯವು ಹೆಚ್ಚಿನ ಬೆಲೆಯನ್ನು ಪಡೆಯುತ್ತದೆ, ಯಾವುದೇ (ಅಂದರೆ ಒಂದು "ಪರಿಪೂರ್ಣ" ಮಾಣಿಕ್ಯ ), ಲೋಪದೋಷಗಳು ಇಲ್ಲದಿದ್ದಲ್ಲಿ ಅದನ್ನು ಕೃತಕವೆಂದು ಭಾವಿಸಲಾಗುತ್ತದೆ. ಡೊಪಂಟ್‌ಗಳನ್ನು ಮಾಣಿಕ್ಯಗಳ ತಯಾರಿಕೆಯಲ್ಲಿ ಮಿಶ್ರಮಾಡಲಾಗುತ್ತದೆ ಆದ್ದರಿಂದ ಇದನ್ನು ನಾವು ಕೃತಕವಾಗಿ ತಯಾರಿಸಿದ್ದೆಂದು ಗುರುತಿಸಬಹುದು, ಆದರೆ ಹರಳುಶಾಸ್ತ್ರ ಪರೀಕ್ಷೆಯಲ್ಲಿ ಅದರ ಮೂಲವನ್ನು ಕಂಡುಹಿಡಿಯಬಹುದು.

ಕೃತಕವಾಗಿ ತಯಾರಿಸಿದ ಮಾಣಿಕ್ಯಗಳು ತಾಂತ್ರಿಕವಾದ ಮತ್ತು ಹರಳುಶಾಸ್ತ್ರದ ಉಪಯೋಗಗಳನ್ನು ಹೊಂದಿವೆ. ಕೃತಕವಾಗಿ ತಯಾರಿಸಿದ ಮಾಣಿಕ್ಯದ ಸರಳುಗಳನ್ನು ಮಾಣಿಕ್ಯ ಲೇಸರ್‌ಗಳನ್ನು ಮತ್ತು ಮೇಸರ್‌ಗಳನ್ನು ತಯಾರಿಸಲು ಬಳಸುವರು. 1960ರಲ್ಲಿ ಮೊದಲ ಲೇಸರನ್ನು ಥಿಯೋಡರ್ ಹೆಚ್. ಮೈಮನ್ [೯] ಕ್ಯಾಲಿಫೋರ್ನಿಯಾದ ಮಲಿಬುನಲ್ಲಿನ ಹಗ್ಸ್ ರಿಸರ್ಚ್ ಲ್ಯಾಬೊರೇಟರೀಸ್‌ನಲ್ಲಿ , ಕೊಲಂಬಿಯಾ ವಿಶ್ವವಿದ್ಯಾಲಯದ ಚಾರ್ಲೆಸ್ ಹೆಚ್. ಟೌನ್ಸ್ , ಬೆಲ್‌ ಲ್ಯಾಬ್‌ನ ಆರ್ಥರ್ ಶಾವ್ಲೋವ್,[೧೦] ಮತ್ತು TRG (ಟೆಕ್ನಿಕಲ್ ರಿಸರ್ಚ್ ಗ್ರೂಪ್)ಕಂಪನಿಯ ಗೂಲ್ಡ್‌ನ್ನು ಹಿಂದೆ ಸರಿಸಿ ಕಂಡುಹಿಡಿದನು. ಮೈಮನ್ ಘನ ಸ್ಥಿತಿಯ ಲೈಟ್-ಪಂಪ್ ಮಾಡಲಾದ ಕೃತಕವಾಗಿ ತಯಾರಿಸಿದ ಮಾಣಿಕ್ಯವನ್ನು 694 ನ್ಯಾನೋಮೀಟರ್‌ಗಳ (nm) ತರಂಗಾಂತರದ ಕೆಂಪು ಲೇಸರ್ ಕಿರಣಗಳನ್ನು ತಯಾರಿಸಲು ಬಳಸುವರು. ಮಾಣಿಕ್ಯ ಲೇಸರ್‌ಗಳು ಇನ್ನೂ ಬಳಕೆಯಲ್ಲಿದೆ. ನಿರ್ದೇಶಾಂಕ ಮಾಪಕಗಳ ತುದಿಯ (ಶೋಧದ) ಸ್ಕ್ಯಾನಿಂಗ್‌ನಲ್ಲಿ ಹೆಚ್ಚಿನ ಗಡಸುತನವನ್ನು ಬಯಸುವ ವಸ್ತುಗಳಲ್ಲಿ ಮಾಣಿಕ್ಯಗಳನ್ನು ಬಳಸುವರು.

ಮಾಣಿಕ್ಯಗಳ ಅನುಕರಣವನ್ನೂ ಗುರುತಿಸಬಹುದಾಗಿದೆ. ಕೆಂಪು ಸ್ಪಿನೆಲ್‌ಗಳು, ಕೆಂಪು ಗಾರ್ನೆಟ್‌ಗಳು ಮತ್ತು ಬಣ್ಣದ ಗಾಜುಗಳನ್ನು ತಪ್ಪಾಗಿ ಮಾಣಿಕ್ಯಗಳೆಂದು ಹೇಳಲಾಗುತ್ತದೆ. ಅನುಕರಣಗಳು ರೋಮನ್ನರ ಕಾಲದಲ್ಲಿ ಅಂದರೆ 17ನೇ ಶತಮಾನದಲ್ಲಿಯೇ ತಂತ್ರಜ್ಞಾನದ ಮೂಲಕ —ಕುಲುಮೆಯ ಕೆಳಭಾಗದಲ್ಲಿ ಕಡುಗೆಂಪು ಬಣ್ಣದ ಉಣ್ಣೆಯನ್ನು ಉರಿಸಿ ಅದನ್ನು ಅನುಕರಣ ಕಲ್ಲಿನ ಕೆಳಭಾಗದಲ್ಲಿಟ್ಟು ಕೆಂಪು ಬಣ್ಣದ ಹಾಳೆಗಳನ್ನು ತಯಾರಿಸಲಾಗುತಿತ್ತು.[೧೧] ವ್ಯಾಪಾರದಲ್ಲಿ ಬಳಸುವ ಪದಗಳೆಂದರೆ ಕೆಂಪು ಸ್ಪೈನೆಲ್‌ಗೆ ಬಲಾಸ್ ಮಾಣಿಕ್ಯ ಮತ್ತು ಕೆಂಪು ಟೂರ್ಮಲಿನ್‌ಗೆ ರುಬೆಲೈಟ್ ಎನ್ನುವ ಮೂಲಕ ಮುಗ್ದ ಗ್ರಾಹಕರನ್ನು ಮೋಸಗೊಳಿಸಬಹುದು. ಆದ್ದರಿಂದ ಇಂತಹ ಪದಗಳ ಬಳಕೆಯನ್ನು ಲ್ಯಾಬೊರೇಟರಿ ಮ್ಯಾನ್ಯುಯಲ್ ಹಾರ್ಮೊನೈಸೇಶನ್ ಕಮಿಟಿ (LMHC)ಯಂತಹ ಅನೇಕ ಹರಳುಶಾಸ್ತ್ರದ ಒಕ್ಕೂಟಗಳು ವಿರೋಧಿಸುತ್ತವೆ.

ದಾಖಲೆಗಳು[ಬದಲಾಯಿಸಿ]

ಅಮೆರಿಕಾದ ವಾಶಿಂಗ್ಟನ್ ಡಿಸಿಯ ನ್ಯಾಶನಲ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯಲ್ಲಿನ ಮಾಣಿಕ್ಯಗಳು

ವಾಶಿಂಗ್ಟನ್ ಡಿಸಿಯ ಸ್ಮಿತ್‌ಸೋನಿಯನ್‌ನ ನ್ಯಾಶನಲ್ ಮ್ಯೂಸಿಯಮ್ ಆಫ್ ನ್ಯಾಚುರಲ್ ಹಿಸ್ಟರಿಯು ಪ್ರಪಂಚದ ಸುಂದರವಾದ ಮತ್ತು ದೊಡ್ಡದಾದ ಮಾಣಿಕ್ಯ ಹರಳುಗಳಲ್ಲಿ ಒಂದನ್ನು ಹೊಂದಿದೆ. ಪ್ಲಾಟಿನಮ್ ರಿಂಗ್‌ನಲ್ಲಿ ವಜ್ರದೊಂದಿಗೆ ಮಾಡಲಾದ 23.1 carats (4.62 g) ಬರ್ಮೀಸ್ ಮಾಣಿಕ್ಯವನ್ನು ಉದ್ಯಮಿ, ಪೀಟರ್ ಬಕ್ ತನ್ನ ನಿಧನವಾಗಿದ್ದ ಹೆಂಡತಿ ಕಾರ್ಮೆನ್ ಲೂಸಿಯಾ ನೆನಪಿಗಾಗಿ ದಾನ ನೀಡಿದನು. ಈ ಹರಳು ಹೇರಳವಾಗಿ ಸಂಪೂರಣಗೊಳಿಸಿದ ಕೆಂಪು ಬಣ್ಣಮಿಶ್ರಿತ ವಿಶೇಷವಾದ ಪಾರದರ್ಶಕತೆಯನ್ನು ಪ್ರದರ್ಶಿಸುತ್ತದೆ. ಇದರ ಸರಿಯಾದ ಪ್ರಮಾಣದ ಕತ್ತರಿಸುವಿಕೆಯು ವಿವಿಧ ಕೆಂಪು ಪ್ರತಿಫಲನಗಳನ್ನುಂಟುಮಾಡುತ್ತದೆ. 1930 ದಶಕದಲ್ಲಿ ಈ ಹರಳನ್ನು ಬರ್ಮಾದ ಮೊಗೊಕ್‌ (ಈಗ ಮಯನ್ಮಾರ್)ನ ಗಣಿಯಿಂದ ಪಡೆಯಲಾಯಿತು.[೧೨]

ಕೃತಕವಾಗಿ ತಯಾರಿಸಿದ ಮಾಣಿಕ್ಯವನ್ನು ದೊಡ್ಡಪ್ರಮಾಣದಲ್ಲಿ ತೂಕ ಮತ್ತು ಅಳತೆಯ ಶಾಸ್ತ್ರ ಕ್ಷೇತ್ರದಲ್ಲಿ, ನಿರ್ದೇಶಾಂಕ ಮಾಪಕ (CMM)ಗಳಂತಹ ರೇಖನಿ ವಸ್ತುವಾಗಿ ಮಾಪಕಗಳಲ್ಲಿ ಬಳಸುವರು.

ಐತಿಹಾಸಿಕ ಮತ್ತು ಸಾಂಸ್ಕೃತಿಕ ಉಲ್ಲೇಖಗಳು[ಬದಲಾಯಿಸಿ]

 • ಚೀನಾದ ನಾರ್ತ್ ಸಿಲ್ಕ್ ರೋಡ್‌ನಲ್ಲಿ ಸುಮಾರು 200 ಕ್ರಿ.ಶ.ನಲ್ಲಿ ಮಾಣಿಕ್ಯಗಳನ್ನು ಪ್ರಾಚೀನ ಚೀನಾದಲ್ಲಿ ಪಶ್ಚಿಮಕ್ಕೆ ಚಲಿಸುವಾಗ ಸಿಗುವ ಟ್ರಾಕ್‌ವೇನಲ್ಲಿ ಮಾಣಿಕ್ಯಗಳ ಮಾರಾಟ ಪ್ರಕ್ರಿಯೆಗಳು ನಡೆದಿರುವ ದಾಖಲೆಗಳಿವೆ.[೧೩]
 • ಮಾಣಿಕ್ಯಗಳು ಏಷ್ಯಾದ ರಾಷ್ಟ್ರಗಳಲ್ಲಿ ಯಾವಾಗಲೂ ಹೆಚ್ಚಿನ ಮಾನ್ಯತೆ ಪಡೆದಿವೆ. ಅವುಗಳನ್ನು ಆಭರಣಗಳಲ್ಲಿ, ಕಾಪುಗಳಲ್ಲಿ, ಕೋಶ ಅಥವಾ ಹೊರಕವಚಗಳಲ್ಲಿ ಮತ್ತು ಭಾರತ ಮತ್ತು ಚೀನಾದ ಶ್ರೇಷ್ಠ ಪುರುಷರ ರಕ್ಷಕ ಉಪಕರಣಗಳಲ್ಲಿ ಬಳಸುಲಾಗುತ್ತಿತ್ತು. ಐಶ್ವರ್ಯವನ್ನು ಪಡೆಯಲು ಮಾಣಿಕ್ಯಗಳನ್ನು ಕಟ್ಟಡಗಳ ಪಾಯದ ಅಡಿಯಲ್ಲಿ ಹುದುಗಿಸಿಡಲಾಗುತಿತ್ತು.[೧೪]

ಇವನ್ನೂ ಗಮನಿಸಿ[ಬದಲಾಯಿಸಿ]

 • ಖನಿಜಗಳ ಪಟ್ಟಿ
 • ವೆರ್ನಿಲ್ ಪ್ರಕ್ರಿಯೆ

ಉಲ್ಲೇಖಗಳು[ಬದಲಾಯಿಸಿ]

 1. [4] ^ ಪ್ರೀಶಿಯಸ್‌ ಸ್ಟೋನ್ಸ್‌, ಮ್ಯಾಕ್ಸ್‌ ಬ್ಯೂಯೆರ್‌‌, ಪುಟ 2
 2. "Ruby: causes of color". Retrieved 15 may 2009. {{cite web}}: Check date values in: |accessdate= (help)
 3. Wenk, Hans-Rudolf; Bulakh, A. G. (2004). Minerals: their constitution and origin. Cambridge, U.K.: Cambridge University Press. pp. 539–541. ISBN 0-521-52958-1.{{cite book}}: CS1 maint: multiple names: authors list (link)
 4. ೪.೦ ೪.೧ Wise, Richard W. (2006). Secrets Of The Gem Trade, The Connoisseur's Guide To Precious Gemstones. Brunswick House Press. pp. 18–22. ISBN 0972822380.
 5. ಜೆಮ್‌ವೈಸ್: ವಾಟ್ ಕಲರ್ ಇಸ್ ಪೀಜನ್ಸ್ ಬ್ಲಂಡ್
 6. "The Heat Treatment of Ruby and Sapphire". Bangkok, Thailand: Gemlab Inc. 1992. {{cite web}}: |access-date= requires |url= (help); Missing or empty |url= (help)
 7. Milisenda, C C (2005). "Rubine mit bleihaltigen Glasern gefullt". Zeitschrift der Deutschen Gemmologischen Gesellschaft (in German). Deutschen Gemmologischen Gesellschaft. 54 (1): 35–41.{{cite journal}}: CS1 maint: unrecognized language (link)
 8. "Bahadur: a Handbook of Precious Stones". 1943. Archived from the original on 2007-09-27. Retrieved 2007-08-19.
 9. Maiman, T.H. (1960). "Stimulated optical radiation in ruby". Nature. 187 (4736): 493–494. doi:10.1038/187493a0.
 10. Hecht, Jeff (2005). Beam: The Race to Make the Laser. Oxford University Press. ISBN 0-19-514210-1.
 11. "Thomas Nicols: A Lapidary or History of Gemstones". 1652. Archived from the original on 2007-08-19. Retrieved 2007-08-19.
 12. "The Carmen Lúcia Ruby". Exhibitions. Archived from the original on 2008-03-09. Retrieved 2008-02-28.
 13. ಸಿ.ಮೈಕಲ್ ಹೊಗನ್,ಸಿಲ್ಕ್ ರೋಡ್, ನಾರ್ತ್ ಚೈನಾ , ದ ಮೆಗಾಲಿತಿಕ್ ಪೋರ್ಟಲ್, ed. ಎ. ಬರ್ನ್‌ಹ್ಯಾಮ್
 14. Smith, Henry G. (1896). "Chapter 2, Sapphires, Rubies". Gems and Precious Stones. Charles Potter Government Printer, Australia. Archived from the original on 2007-09-29. Retrieved 2010-10-20.

ಬಾಹ್ಯ ಕೊಂಡಿಗಳು[ಬದಲಾಯಿಸಿ]