ಉಂಗುರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Thetford treasure rings.JPG

ಉಂಗುರ ಅಲಂಕಾರಿಕ ಆಭರಣವಾಗಿ ಕೈಬೆರಳ, ಅಥವಾ ಕೆಲವೊಮ್ಮೆ ಕಾಲ್ಬೆರಳ ಸುತ್ತ ಧರಿಸಲಾದ, ಸಾಮಾನ್ಯವಾಗಿ ಲೋಹದ ಒಂದು ದುಂಡನೆಯ ಪಟ್ಟಿ. ಕಟ್ಟುನಿಟ್ಟಾಗಿ ಹೇಳುವುದಾದರೆ ಒಂದು ಸಾಮಾನ್ಯ ಉಂಗುರವು ಒಂದು ಕೈಬೆರಳ ಉಂಗುರ; ಮಣಿಕಟ್ಟಿಗೆ ಕೈಬಳೆಗಳು, ವಂಕಿಗಳು, ಮತ್ತು ಕಾಲುಂಗುರಗಳು ಒಡವೆಗಳಾಗಿ ಧರಿಸಲಾದ ಇತರ ಪ್ರಕಾರದ ಉಂಗುರಗಳು.

ಉಂಗುರಗಳನ್ನು ಹೆಚ್ಚಾಗಿ ಲೋಹದಿಂದ ತಯಾರಿಸಲಾಗುತ್ತದೆ ಆದರೆ ಅವನ್ನು ಬಹುತೇಕ ಯಾವುದೇ ವಸ್ತುವಿನಿಂದ ತಯಾರಿಸಬಹುದು: ಲೋಹ, ಪ್ಲ್ಯಾಸ್ಟಿಕ್, ಕಲ್ಲು, ಕಟ್ಟಿಗೆ, ಮೂಳೆ, ಗಾಜು, ಅಥವಾ ರತ್ನ. ಅವುಗಳಲ್ಲಿ ಹರಳು ಅಥವಾ ಹರಳುಗಳನ್ನು ಕೂಡಿಸಬಹುದು, ಹಲವುವೇಳೆ ವಜ್ರ, ಮಾಣಿಕ್ಯ, ನೀಲಮಣಿ ಅಥವಾ ಪಚ್ಚೆಯಂತಹ ಒಂದು ರತ್ನವನ್ನು ಕೂಡಿಸಲಾಗುತ್ತದೆ.

ನಿಖರವಾದ ಇತಿಹಾಸವನ್ನು ಪತ್ತೆಹಚ್ಚುವುದು ಕಠಿಣವಾದರೂ, ಉಂಗುರಗಳನ್ನು ಕೊಡುವ ಮತ್ತು ತೆಗೆದುಕೊಳ್ಳುವ ಪದ್ಧತಿ ಸುಮಾರು ೬೦೦೦ ವರ್ಷಗಳಷ್ಟು ಹಿಂದಿನದ್ದು.

ವಿಶ್ವದ ಬಹುಭಾಗದಲ್ಲಿ, ಎಡ ಹಸ್ತದ ನಾಲ್ಕನೆ ಬೆರಳು ಮದುವೆ ಉಂಗುರವನ್ನು ಧರಿಸುವ ಸಾಂಪ್ರದಾಯಿಕ ಸ್ಥಳವಾಗಿದೆ, ಆದರೆ ಕೆಲವು ದೇಶಗಳಲ್ಲಿ ಬಲ ಹಸ್ತದ ಬೆರಳನ್ನು ಬಳಸಲಾಗುತ್ತದೆ.

"https://kn.wikipedia.org/w/index.php?title=ಉಂಗುರ&oldid=733030" ಇಂದ ಪಡೆಯಲ್ಪಟ್ಟಿದೆ