ಪಚ್ಚೆ
Emerald | |
---|---|
General | |
ವರ್ಗ | Beryl variety |
ರಾಸಾಯನಿಕ ಸೂತ್ರ | Beryllium aluminium silicate with chromium, Be3Al2(SiO3)6::Cr |
Identification | |
ಬಣ್ಣ | Green |
ಸ್ಫಟಿಕ ಗುಣಲಕ್ಷಣ | Hexagonal Crystals |
ಸ್ಫಟಿಕ ಪದ್ಧತಿ | Hexagonal |
ಸೀಳು | Poor Basal Cleavage (Seldom Visible) |
ಬಿರಿತ | Conchoidal |
ಮೋಸ್ ಮಾಪಕ ಗಡಸುತನ | 7.5–8.0 |
ಹೊಳಪು | Vitreous |
ಪುಡಿಗೆರೆ | White |
ವಿಶಿಷ್ಟ ಗುರುತ್ವ | 2.70–2.78 |
ವಕ್ರೀಕರಣ ಸೂಚಿ | 1.576–1.582 |
ಬಹುವರ್ಣಕತೆ | Distinct, Blue-Green/Yellow-Green |
ಬೆರಿಲಿಯಂ ಮತ್ತು ಅಲ್ಯೂಮಿನಂ ಹಾಗೂ ಸಿಲಿಕೇಟುಳ್ಳ ಖನಿಜ ದ ವೈವಿಧ್ಯ ವಸ್ತು ಪಚ್ಚೆ (Be3Al2(SiO3)6,) ಇದು ಹಸಿರು ಬಣ್ಣವುಳ್ಳದಾಗಿದ್ದು ಇದರಲ್ಲಿ ಕ್ರೋಮಿಯಂ ನ ಜಾಡು ಇರುತ್ತದೆ ಮತ್ತು ಕೆಲವು ಸಾರಿ ವನೇಡಿಯಂ ಕೂಡ ಇರುತ್ತದೆ.[೧] ಖನಿಜ ಕಾಠಿಣ್ಯ ಮೋಹ್ಸ್ ಮಾಪನದ 10 ಪಾಯಿಂಟ್‌ನಲ್ಲಿ ಬೆರಿಲ್‌ನ ಕಾಠಿಣ್ಯ 7.5–8ರಷ್ಟು ಇರುತ್ತದೆ.[೧] ಅನೇಕ ಪಚ್ಚೆಗಳು ಅಂತರ್ಗತವಾಗಿರುತ್ತದೆ, ಆದುದರಿಂದ ಅವುಗಳ ಕಾಠಿಣ್ಯತೆ (ಮುರಿಯುವುದಕ್ಕೆ ಇರುವ ಪ್ರತಿರೋಧ) ಪಚ್ಚೆಯಲ್ಲಿ ಉತ್ತಮವಾಗಿಲ್ಲ, ಸಾಧಾರಣವಾಗಿದೆ ಎಂದು ವರ್ಗೀಕರಿಸಲಾಗಿದೆ. "ಪಚ್ಚೆ" ಎಂಬ ಶಬ್ದವು (ಮಧ್ಯ ಇಂಗ್ಲೀಷ್ ನಿಂದ ಬಂದಿರುವುದಾಗಿರುತ್ತದೆ : ಎಮರಾಡೆ ಓಳ್ಡ್ ಫ್ರೆಂಚ್ ನಿಂದ ಆಮದಾಗಿರುತ್ತದೆ : ಎಸ್ಮೆರಾಡೆ ಮತ್ತು ಮಧ್ಯಕಾಲೀನ ಲ್ಯಾಟಿನ್ ನಿಂದ : ಎಸ್ಮರಾಳ್ಡಸ್) ಲ್ಯಾಟಿನ್ ನಿಂದ ಸ್ಮಾರಾಗ್ಡಸ್ ಗ್ರೀಕ್ ನಿಂದ ಸ್ಮಾರಾಗ್ಡಸ್ – σμάραγδος ("ಹಸಿರು ಹರಳು") ಇವುಗಳ ಮೂಲ ಸೆಮಿಟಿಕ್ ಶಬ್ದ ಇಸ್ಮರ್ಗಾಡ್ (אזמרגד) ಅಥವಾ ಸಂಸ್ಕೃತ ಶಬ್ದ ಮಾರ್ಕನ್ (मरकन) ಇದರರ್ಥ "ಪಚ್ಚೆ" ಅಥವಾ "ಹಸಿರು".[೨]
ಶಬ್ದವ್ಯುತ್ಪತ್ತಿ ಶಾಸ್ತ್ರ
[ಬದಲಾಯಿಸಿ]"ಪಚ್ಚೆ" ಎಂಬ ಶಬ್ದವು (ಮಧ್ಯ ಇಂಗ್ಲೀಷ್ ನಿಂದ ಬಂದಿರುವುದಾಗಿದೆ : ಎಮರಾಡೆ ಮತ್ತು ಓಳ್ಡ್ ಫ್ರೆಂಚ್ ನಿಂದ : ಎಸ್ಮರಾಡೆ) ಜನಸಾಮಾನ್ಯರ ಲ್ಯಾಟಿನ್ ನಿಂದ : ಎಸ್ಮರಾಳ್ಡಾ/ಎಸ್ಮಾರಾಳ್ಡಸ್ ಲ್ಯಾಟಿನ್ ಸ್ಮಾರಾಗ್ಡಸ್ ನಿಂದ ವಿಭಿನ್ನವಾದದ್ದು ಇದು ಗ್ರೀಕ್ ನ ಮೂಲದಿಂದ ಬಂದಂತಹುದು : σμάραγδος (ಸ್ಮಾರಾಗ್ಡಸ್; "ಹಸಿರು ಹರಳು") ಇದರ ಮೂಲ ಸೆಮಿಟಿಕ್ ಶಬ್ದ ಇಜ್ಮಾರ್ಗಡ್ (אזמרגד) ಅಥವಾ ಸಂಸ್ಕೃತ ಶಬ್ದ ಮರಕಟ (मरकन) ಅಂದರೆ "ಪಚ್ಚೆ" ಅಥವಾ "ಹಸಿರು" ಎಂದಾಗುತ್ತದೆ.[೨]. ಈ ಹೆಸರು ಸೆಮಿಟಿಕ್ ಶಬ್ದ ಬರಾಕ್‌ಗೂ ಸಂಬಂದ ಕಲ್ಪಿಸಬಹುದಾಗಿದೆ (בָּרָק ;البُراق; "ಮಿಂಚು" ಅಥವಾ "ಕಂಗೊಳಿಸು") (c.f. ಯೆಹೂದಿ: ברקת ಬ್ಯಾರೆಕ್ವೆಥ್ ಮತ್ತು ಅರೇಬಿಕ್: برق ಬಾರ್ಕ್ "ಮಿಂಚು"). ಪಚ್ಚೆಗೆ ಸಂಸ್ಕೃತದ ಶಬ್ದ : मरग्दम् ಮರಗ್ಡಂ ಕೂಡ ಅದೇ ಮೂಲದಿಂದ ಬಂದಿರುವುದಾಗಿದೆ ಮತ್ತು ಅದರ ಪರ್ಷಿಯನ್ ಕೂಡ ಹಾಗೆಯೇ ಬಂದಿರುತ್ತದೆ (زمرّد zomorrod), ಟರ್ಕಿಷ್ (ಜುಮ್ರುಟ್) ಮತ್ತು ರಷಿಯನ್ (изумруд; ಇಜುಮ್ರುಡ್) ಹೆಸರುಗಳು. [೩]
ಸ್ವಾಮ್ಯಗಳನ್ನು ನಿರ್ಣಯಿಸುವ ಮೌಲ್ಯ
[ಬದಲಾಯಿಸಿ]ಎಲ್ಲಾ, ಬಣ್ಣದ ಹರಳಿನಕಲ್ಲುಗಳಂತೆ ಪಚ್ಚೆಯೂ ಕೂಡ ನಾಲ್ಕು ಪ್ರಾಥಮಿಕ ಪರಿಮಾಣಗಳಿಂದ ಶ್ರೇಣೀಕರಿಸಲಾಗಿದೆ, ಇಂಗ್ಲೀಷ್‌ನ C ಅಕ್ಷರದಿಂದ ಪ್ರಾರಂಭವಾಗುವ ಆ ನಾಲ್ಕು ಹೀಗಿದೆ ; ಬಣ್ಣ , ಛೇದನ , ಸ್ಫುಟತೆ ಮತ್ತು ಸ್ಫಟಿಕ . ಕೊನೆಯ C ಸ್ಫಟಿಕ ಸಮನಾರ್ಥದ ಪದವು ಪಾರದರ್ಶಕತೆಗಾಗಿ ಬಳಸುವುದಾಗಿದೆ ಅಥವಾ ಹರಳಿನ ತಜ್ಞರು ಡೈಯಾಫನೇಯ್ಟಿ ಎಂದು ಕರೆಯುತ್ತಾರೆ. ನೀರು ಶಬ್ದವನ್ನು "ಶುದ್ಧ ತಿಳಿ ನೀರಿನಲ್ಲಿ ರತ್ನದಂತೆ"[೪] ಎಂದು 20ನೇ ಶತಮಾನದ ಪೂರ್ವದಲ್ಲಿ ಆಭರಣಕಾರರು ಬಣ್ಣ ಮತ್ತು ಸ್ಫಟಿಕದ ಸಂಯೋಜನೆಯನ್ನು ಗುಣವೊಂದನ್ನು ವರ್ಣಿಸುವುದಕ್ಕೆ ಬಳಸುತ್ತಿದ್ದರು. ಸಾಧಾರಣವಾಗಿ ಬಣ್ಣಗಳ ಹರಳಿನ ಕಲ್ಲುಗಳನ್ನು ಶ್ರೇಣೀಕರಿಸಬೇಕಾದರೆ ಅದರ ಬಣ್ಣದ ಪಾತ್ರ ಬಹಳ ಮಹತ್ವವುಳ್ಳದ್ದು. ಆದಾಗ್ಯೂ, ಪಚ್ಚೆಯನ್ನು ಶ್ರೇಣೀಕರಿಸುವಲ್ಲಿ ಸ್ಫಟಿಕವನ್ನು ಅದರ ನಂತರದ ದ್ವಿತೀಯವಾದುದೆಂದು ಪರಿಗಣಿಸಲಾಗಿದೆ. ಎರಡೂ ಅಗತ್ಯ ಸ್ಥಿತಿಗಳೇ. ಉತ್ತಮವಾದ ಪಚ್ಚೆ ಎನ್ನಿಸಿಕೊಳ್ಳಬೇಕಾದರೆ ಅದು ಬರೀ ಹಚ್ಚ ಹಸಿರು ವರ್ಣ ಎಂದು ಈ ಕೆಳಗಡೆ ವಿವರಿಸಿದಂತೆ ಇದ್ದರೆ ಸಾಲದು ಅದು ಹೆಚ್ಚು ಪಾರದರ್ಶಕತೆಯನ್ನು ಹೊಂದಿರಬೇಕಾಗುತ್ತದೆ ಆಗ ಅದು ಶ್ರೇಷ್ಟ ಹರಳು ಎಂದು ಪರಿಗಣಿಸಲಾಗುತ್ತದೆ.[೫]
ಬಣ್ಣ
[ಬದಲಾಯಿಸಿ]ವೈಜ್ಞಾನಿಕವಾಗಿ ಹೇಳುವುದಾದರೆ, ಬಣ್ಣವನ್ನು ಮೂರು ಅಂಶಗಳಾಗಿ ವಿಂಗಡಿಸಲಾಗಿದೆ : ವರ್ಣ , ಶುದ್ಧತ್ವ ಮತ್ತು ಛಾಯೆ . ಬಣ್ಣಗಳ ಚಕ್ರದಲ್ಲಿ ಹಳದಿ ಮತ್ತು ನೀಲಿಯು ಹಸಿರಿನ ಮಗ್ಗುಲಿನಲ್ಲಿ ಕಂಡು ಬರುತ್ತದೆ,ಪಚ್ಚೆಯಲ್ಲಿ ಇವು ಸಾಧಾರಣವಾಗಿ ದ್ವಿತೀಯ ವರ್ಣವಾಗಿರುತ್ತದೆ. ಪಚ್ಚೆ ಹರಳುಗಳು ಹಳದಿ-ಹಸಿರಿನಿಂದ ಹಿಡಿದು ನೀಲಿ-ಹಸಿರಿನವರೆಗೂ ಇರುತ್ತದೆ. ಪ್ರಾಥಮಿಕ ವರ್ಣ ಹಸಿರಿರಲೇ ಬೇಕು. ಹರಳುಗಳು ಛಾಯೆಯಲ್ಲಿ ಮಧ್ಯಗತಿಯಿಂದ ಹಿಡಿದು ಗಾಢವಾಗಿ ಇದ್ದರೆ ಪಚ್ಚೆ ಎಂದು ಪರಿಗಣಿಸಲಾಗುತ್ತದೆ. ಹರಳುಗಳು ತಿಳಿ ಛಾಯೆಯುಳ್ಳದ್ದಾಗಿದ್ದರೆ ಅವನ್ನು ಹಸಿರು ಬೆರಿಲ್ ಎಂದು ವರ್ಗೀಕರಿಸಲಾಗುತ್ತದೆ. ಜೊತೆಗೆ ಅದರ ವರ್ಣವು ಪ್ರಕಾಶಿಸಬೇಕು. ಗ್ರೇಯ್ ಬಣ್ಣವು ಸಾಧಾರಣವಾಗಿ ಶುದ್ಧತೆ ಪರಿವರ್ತಕವಾಗಿರುತ್ತದೆ ಅಥವಾ ಪಚ್ಚೆಗೆ ಮುಖ ತೆರೆಯಾಗಿ ಇರುತ್ತದೆ. ಗ್ರೇಯ್ ಹಸಿರು ವರ್ಣವು ಮಂಕು ಹಿಡಿದ ಹಸಿರಾಗಿರುತ್ತದೆ.
ಸ್ಪಷ್ಟತೆ
[ಬದಲಾಯಿಸಿ]ಪಚ್ಚೆಯು ಅಸಂಖ್ಯಾತ ಅಂತರ್ಗತವನ್ನು ಮತ್ತು ಹೊರಮೈ ಸೀಳು ಬಿಡುವ ಗುಣವನ್ನು ಹೊಂದಿರುತ್ತದೆ. ವಜ್ರದಲ್ಲಿ ಮಾಡುವಂತೆ 10X ವರ್ಧಕ ಬೂದುಗಾಜು ಅನ್ನು ಸ್ಪಷ್ಟತೆಯ ಶ್ರೇಣೀಕರೀಸುವುದಕ್ಕೆ ಬಳಸುವುದಿಲ್ಲ ಕೇವಲ ಕಣ್ಣೋಟದಲ್ಲೇ ಪಚ್ಚೆಯ ಶ್ರೇಣೀಯನ್ನು ಮಾಡಲಾಗುತ್ತದೆ. ಪಚ್ಚೆಯಲ್ಲಿ ಕಣ್ಣಿಗೆ ಕಾಣುವಂತೆ (ಸಾಧಾರಣ ದೃಷ್ಟಿಯ ಅನುಗುಣವಾಗಿ) ಅಂತರ್ಗತಗಳು ಇಲ್ಲದಿದ್ದಲ್ಲಿ ಆಗ ಅದು ದೋಷರಹಿತ ಎನ್ನಬಹುದು. ಹೊರಮೈ ಸೀಳುವ ಗುಣ ಇಲ್ಲದ ಕಲ್ಲುಗಳು ಇರುವುದು ಅಪರೂಪ ಆದುದರಿಂದ ಬಹುತೇಖ ಎಲ್ಲಾ ಪಚ್ಚೆಗಳ ಸ್ಫುಟತೆಯನ್ನು ಹೆಚ್ಚಿಸುವುದಕ್ಕೆ "ಎಣ್ಣೆ"ಯಿಂದ ಸಂಸ್ಕರಿಸಲಾಗುತ್ತದೆ. ಕಣ್ಣಿಗೆ ಸ್ಪಷ್ಟವಾಗಿ ಕಾಣುವ ಪ್ರಾಥಮಿಕ ಹಸಿರ ವರ್ಣದ ಕಲ್ಲುಗಳಲ್ಲಿ 15% ರಷ್ಟು ದ್ವಿತೀಯ ವರ್ಣ ಅಥವಾ ನೀಲಿ ಯಾ ಹಳದಿ ಜಂಟಿಯಾಗಿರುವ ಮಧ್ಯಮ ಗತಿಯ ಗಾಢ ಕಲ್ಲುಗಳಿಗೆ ದುಬಾರಿ ಬೆಲೆ ಇರುತ್ತದೆ.[೫] ಬೇರೆ ಹರಳುಗಳಿಗಿಂತ ಈ ಪಚ್ಚೆಯಲ್ಲಿ ಕಂಡು ಬರುವುದೇನೆಂದರೆ, ಈ ಪಟ್ಟೆ ಹೊಡೆದಿಲ್ಲದ ರತ್ನಗಳನ್ನು ಮುಖವುಳ್ಳ ಆಕಾರದಲ್ಲಿ ಸೀಳುವುದಕ್ಕಾಗುವುದಿಲ್ಲ.
ಸಂಸ್ಕರಣಗಳು
[ಬದಲಾಯಿಸಿ]ರತ್ನಶಿಲ್ಪಿ ಪ್ರಕ್ರಿಯೆಯ ತರುವಾಯ ಅನೇಕ ಪಚ್ಚೆಗಳಿಗೆ ಎಣ್ಣೆಯ ಸಂಸ್ಕರಣವನ್ನು ಅದರ ಸ್ಪಷ್ಟತೆಯನ್ನು ಹೆಚ್ಚಿಸುವುದಕ್ಕಾಗಿ ಮಾಡಲಾಗುತ್ತದೆ. ಈ ಕಾರ್ಯಗಳಿಗೆ, ಸದೃಶವಾದ ವಕ್ರೀಕರಣ ಸೂಚಿ ಇರುವ ನಿತ್ಯಹರಿದ್ವರ್ಣದ ವೃಕ್ಷ ದ ಎಣ್ಣೆಯನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಸಿಂಥೆಟೀಕ್ ಎಣ್ಣೆಗಳು ಮತ್ತು ಪಾಲಿಮರ್ಸ್‌ನಂಥ, ಆಪ್ಟಿಕಾನ್ ಪಚ್ಚೆಗೆ ಹತ್ತಿರವಿರುವ ವಕ್ರೀಕರಣ ಸೂಚಿಯನ್ನು ಹೊಂದಿರುವ ಬೇರೆ ದ್ರವಗಳನ್ನೂ ಸಂಸ್ಕರಣಕ್ಕೆ ಬಳಸಲಾಗುತ್ತದೆ. U.S. ಫೆಡರಲ್ ಟ್ರೇಡ್ ಕಮೀಷನ್ ನವರು ಈ ರೀತಿಯ ಸಂಸ್ಕರಣವನ್ನು ಮಾಡಿದಾಗ ಅದರ ವಿವರವನ್ನು ಮಾರಾಟದ ಸಂದರ್ಭದಲ್ಲಿ ಕೊಡಬೇಕೆಂದು ಬಯಸುತ್ತಾರೆ.[೬] ಸಂಸ್ಕರಣಕ್ಕಾಗಿ ಎಣ್ಣೆಯನ್ನು ಬಳಸುವುದು ಸಾಂಪ್ರದಾಯಿಕ ರೂಢಿ ಮತ್ತು ಹರಳುಗಳ ಮಾರಾಟದಲ್ಲಿ ಅದು ಅಂಗೀಕೃತ ವಿಷಯವೇ. ಹಸಿರು ಬಣ್ಣ ಕೊಡುವ ಇತರ ಎಣ್ಣೆಗಳನ್ನು ಸಂಸ್ಕರಣಕ್ಕಾಗಿ ಉಪಯೋಗಿಸುವುದು ವ್ಯಾಪಾರದಲ್ಲಿ ಒಪ್ಪಿತವಲ್ಲ. ಪಚ್ಚೆಯ ನಿರ್ಮಲತೆಯನ್ನು ಹೆಚ್ಚಿಸಿ ಅದರ ಶ್ರೇಣಿಕೃತ ಮಾಡುವುದಕ್ಕೆ ಪ್ರಯೋಗಾಲಯ ಸಮುದಾಯವು ಇತ್ತೀಚೆಗೆ ಒಂದು ಗುಣಮಟ್ಟದ ಭಾಷೆಯನ್ನು ನಿಗದಿಪಡಿಸಿವೆ. ಹರಳುಗಳನ್ನು ನಾಲ್ಕು ಹಂತಗಳಲ್ಲಿ ಶ್ರೇಣೀಕರಿಸಲಾಗಿದೆ ; ಇಲ್ಲದಿರುವುದು , ಅಲ್ಪ , ಮಧ್ಯಮ ಮತ್ತು ಹೆಚ್ಚು . ಈ ವರ್ಗೀಕರಣವು ವರ್ಧಕವನ್ನು ಸೂಚಿಸುತ್ತದೆ ವಿನ: ನಿರ್ಮಲ ತೆ ಅಲ್ಲ. ವರ್ಧಕ ಮಾಪನದಲ್ಲಿ ಇಲ್ಲದಿರುವುದು ಎಂದು ಶ್ರೇಣೀಕರಿಸಿರುವ ಹರಳು ನೋಡಲು ಸಾಧ್ಯವಿರುವ ಅಂತರ್ಗತವನ್ನು ಪ್ರದರ್ಶಿಸುತ್ತದೆ. ಪ್ರಯೋಗಾಲಗಳು ಈ ಮಾನದಂಡಗಳನ್ನು ಬೇರೆ ರೀತಿಯಲ್ಲಿ ಪ್ರಯೋಗಿಸುತ್ತವೆ. ಎಣ್ಣೆ ಅಥವಾ ಪಾಲಿಮರ್ಸ್‌ಗಳ ಇರುವಿಕೆಯನ್ನು ಕೆಲವು ಪ್ರಯೋಗಾಲಯವು ಹರಳುಗಳ ವರ್ಧಕಗಳು ಎಂದು ಪರಿಗಣಿಸುತ್ತವೆ. ಬೇರೆಯವರು, ಎಣ್ಣೆಯ ಜಾಡು ಹರಳುಗಳ ಹೊಳಪನ್ನು ವರ್ಧಿಸದಿದ್ದರೆ ಅದನ್ನು ನಿರ್ಲಕ್ಷಿಸುತ್ತಾರೆ.
ಬಹುತೇಖ ಹರಳುಗಳನ್ನು ಮೇಲೆ ತಿಳಿಸಿದಂತೆ ಸಂಸ್ಕರಿಸಿದರೂ, ಒಂದೇ ರೀತಿ ಕಾಣುವಂಥ ಎರಡು ಹರಳುಗಳನ್ನು ಬೇರೆ ಬೇರೆ ರೀತಿಯಲ್ಲಿಯೇ ಸಂಸ್ಕರಿಸಬೇಕಾಗುತ್ತದೆ ಕಾರಣ ಅವು ಬೇರೆ ಬೇರೆಯೇ ಆಗಿರುತ್ತದೆ, ಆದುದರಿಂದ ದುಬಾರಿ ಬೆಲೆಯ ಪಚ್ಚೆಯನ್ನು ಖರೀದಿಸಬೇಕಾದರೆ ಪ್ರತಿಷ್ಠಿತ ಪ್ರಯೋಗಾಲಯದಿಂದ ಸಂಸ್ಕರಣದ ವರದಿಯನ್ನು ಪಡೆದೇ ಖರೀದಿಸಬೇಕೆಂದು ಗ್ರಾಹಕರಿಗೆ ಸೂಚಿಸಲಾಗಿರುತ್ತದೆ. ಇಲ್ಲದಿರುವುದು ಎಂದು ಶ್ರೇಣೀಕರಿಸಿದ ಅನನ್ಯವಾದ ಹರಳಿನ ಕಲ್ಲು, ಸಮಾನವಾದ ಅಂಶಗಳನ್ನು ಒಳಗೊಂಡ ಉನ್ನತ ಗುಣಮಟ್ಟದ ಮಧ್ಯಮ ಎಂದು ಶ್ರೇಣೀಕರಿಸಿರುವ ಪಚ್ಚೆಯ ಕಲ್ಲಿನ ಬೆಲೆಗಿಂತ 40–50% ರಷ್ಟು ಅಧಿಕವಾಗಿರುತ್ತದೆ.
ಪಚ್ಚೆಯ ತಾಣಗಳು
[ಬದಲಾಯಿಸಿ]ಈಜ್ಯಿಪ್ಟ್‌ನವರು ಪುರಾತನತ್ವದ ಪಚ್ಚೆಗಳನ್ನು ಗಣಿಗಾರಿಕೆ ಮಾಡಿ ತೆಗೆದಿರುತ್ತಾರೆ ಮತ್ತು ಆಸ್ಟ್ರೀಯಾ ಹಾಗೆಯೆ ಉತ್ತರ ಪಾಕಿಸ್ತಾನದ ಸ್ವಾತ್ ನಲ್ಲಿಯೂ ಗಣಿಗಾರಿಕೆ ಮಾಡಲಾಗಿರುತ್ತದೆ.[೭][೮]
ಕೊಲಂಬಿಯಾದ ಗಣಿಗಳಲ್ಲಿ ಅಪರೂಪವೆನ್ನ ಬಹುದಾದ ಟ್ರಾಪಿಕೆ ಪಚ್ಚೆಯು ಅಪರೂಪಕ್ಕೊಮ್ಮೆ ಸಿಗುತ್ತದೆ. ಈ ಟ್ರಾಪಿಕೆ ಪಚ್ಚೆಯು "ನಕ್ಷತ್ರ" ವಿನ್ಯಾಸವನ್ನು ಪ್ರದರ್ಶಿಸುತ್ತದೆ ; ಸೈಕಲ್ ಚಕ್ರದ ಕಂಬಿಗಳಂತೆ ಗಾಢ ಕಾರ್ಬನ್ ಕಲ್ಮಶಗಳ ಗೆರೆಗಳನ್ನು ಹೊಂದಿರುತ್ತದೆ ಮತ್ತು ಇದು ಪಚ್ಚೆಗೆ ಆರು-ಮೊನಚಿನ ತ್ರಿಜ್ಯಗಳ ವಿನ್ಯಾಸವನ್ನು ಕೊಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಕೊಲಂಬಿಯಾದ ಮೂರು ಮುಖ್ಯ ಗಣಿಗಳಾದ : ಮುಜೋ, ಕಾಸ್ಕ್ಯೂಜ್ ಮತ್ತು ಚಿವೊರ್‌ಗಳಿಂದ ಪಚ್ಚೆಯು ಲಭ್ಯವಾಗುತ್ತದೆ.[ಸೂಕ್ತ ಉಲ್ಲೇಖನ ಬೇಕು] ಆಫ್ಗಾನಿಸ್ಥಾನ್, ಆಸ್ಟ್ರೇಲಿಯಾ, ಆಸ್ಟ್ರಿಯಾ, ಬ್ರೆಜಿಲ್, ಬಲ್ಗೇರಿಯಾ, ಕೆನಡಾ, ಚೀನಾ, ಈಜ್ಯೀಪ್ಟ್, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಭಾರತ, ಇಟಾಲಿ, ಕಜಾಕಿಸ್ಥಾನ್, ಮದಗಾಸ್ಕರ್, ಮೊಜಾಂಬಿಕ್, ನಮಿಬಿಯಾ, ನೈಜೀರಿಯಾ, ನಾರ್ವೇ, ಪಾಕಿಸ್ತಾನ, ರಷಿಯಾ, ಸೋಮಾಲಿಲ್ಯಾಂಡ್, ದಕ್ಷಿಣ ಆಫ್ರಿಕಾ, ಸ್ಪೇಯ್ನ್, ಸ್ವಿಜರ್‌ಲ್ಯಾಂಡ್, ಟಾನ್ಜಾನಿಯಾ, ಯುನೈಟೆಡ್ ಸ್ಟೇಟ್ಸ್, ಜಾಂಬಿಯಾ ಮತ್ತು ಜಿಂಬಾಬ್ವೇ ಮುಂತಾದ ದೇಶಗಳಲ್ಲೂ ಪಚ್ಚೆಯು ಲಭ್ಯವಾಗುತ್ತವೆ.[೯] USನಲ್ಲಿ, ಪಚ್ಚೆಯು ಕನೆಕ್ಟೀಕಟ್, ಮೊಂಟಾನಾ, ನೆವಾಡಾ, ಉತ್ತರ ಕರೋಲೀನಾ ಮತ್ತು ದಕ್ಷಿಣ ಕರೋಲೀನಾಗಳಲ್ಲಿ ಲಭ್ಯವಾಗುತ್ತದೆ.[೯] ಯುಕಾನ್ನಲ್ಲಿ 1998ರಲ್ಲಿ ಪಚ್ಚೆಯನ್ನು ಶೋಧಿಸಲಾಯಿತು .[ಸೂಕ್ತ ಉಲ್ಲೇಖನ ಬೇಕು]
ಸಂಶ್ಲೇಷಿತ ಪಚ್ಚೆ
[ಬದಲಾಯಿಸಿ]ಪಚ್ಚೆಯು ಒಂದು ಅಪರೂಪದ ಮತ್ತು ದುಬಾರಿ ಬೆಲೆಯ ಹರಳಿನ ಕಲ್ಲು, ಹೀಗಾಗಿಯೇ ಅದು ಸಂಶ್ಲೇಷಿತ ಪಚ್ಚೆಗಳನ್ನು ಅಭಿವೃದ್ಧಿ ಪಡಿಸುವುದಕ್ಕೆ ಪ್ರೇರಣೆಯನ್ನು ಒದಗಿಸುತ್ತದೆ. ಜಲೋಷ್ಣೀಯ ಮತ್ತು ಫ್ಲಕ್ಸ್-ಗ್ರೋಥ್ ಎಂಬ ಎರಡೂ ಸಂಶ್ಲೇಷಿತಗಳನ್ನು ಉತ್ಪಾದಿಸಲಾಗಿದೆ ಮತ್ತು ಬಣ್ಣರಹಿತ ಬೆರಿಲ್ ಮೇಲೆ ಮೇಲುಬೆಳೆಯಾಗಿ ಪಚ್ಚೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಯಶಸ್ವೀಗೊಂಡ, ವ್ಯಾಪಾರಕ್ಕನುಗುಣವಾದ ಮೊದಲ ಸಂಶ್ಲೇಷಿತ ಪಚ್ಚೆಯು ಕ್ಯಾರೋಲ್ ಚ್ಯಾಥಮ್ ಪಚ್ಚೆಯಾಗಿರುತ್ತದೆ. ಯಾಕೆಂದರೆ ಚ್ಯಾಥಮ್ ಪಚ್ಚೆಯಲ್ಲಿ ನೀರಿರುವುದಿಲ್ಲ ಮತ್ತು ವನಾಡೇಟ್, ಮಾಲೀಬ್ಡೀನಮ್ ಹಾಗೂ ವನಾಡೇಯಂನ ಜಾಡು ಇರುತ್ತದೆ ಅಂತೆಯೇ ಲಿಥಿಯಂ ವನಾಡೇಟ್ ಫ್ಲಕ್ಸ್ ಪ್ರಕ್ರಿಯೆ ಒಳಪಟ್ಟಿರುತ್ತದೆ. ಫ್ಲಕ್ಸ್ ಪಚ್ಚೆಯನ್ನು ಉತ್ಪಾದಿಸುವ ಮತ್ತೊಬ್ಬ ಎಂದರೆ ಹಿರಿಯ ಪೀರ್ರೀ ಗಿಲ್ಸನ್, ಈ ಪಚ್ಚೆ 1964 ರಿಂದಲೂ ಮಾರುಕಟ್ಟೆಯಲ್ಲಿ ಲಭ್ಯವಾಗಿದೆ. ಗಿಲ್ಸನ್ ಪಚ್ಚೆಗಳನ್ನು ಸಾಮಾನ್ಯವಾಗಿ ನೈಸರ್ಗಿಕವಾದ ಬಣ್ಣರಹಿತ ಬೆರಿಲ್ ಬೀಜಗಳ ಮೇಲೆ ಬೆಳೆಸಲಾಗುತ್ತದೆ ಮತ್ತು ಅದು ಎರಡು ಕಡೆಯಲ್ಲೂ ಹೊದಿಕೆಯಾಗುತ್ತದೆ. ಬೆಳವಣಿಗೆಯ ಪ್ರಮಾಣವು ಪ್ರತಿ ತಿಂಗಳಿಗೆ 1 mm ಆಗಿರುತ್ತದೆ, ಏಳು ತಿಂಗಳಿಗೆ 7 mm ದಪ್ಪ ಪಚ್ಚೆ ಕಲ್ಲು ಬೆಳವಣಿಗೆಯ ಪ್ರಮಾಣವು ಮಾದರಿಯಾಗಿ ಉತ್ಪಾದನೆಗೊಳ್ಳುತ್ತದೆ.[೧೦] 1980ರಲ್ಲಿ ಗಿಲ್ಸನ್ ತನ್ನ ಪ್ರಯೋಗಾಲಯವನ್ನು ಜಪಾನಿನ ಕಂಪೆನಿಗೆ ಮಾರಾಟ ಮಾಡಿದ ಆದರೆ ಅಂದಿನಿಂದ ಉತ್ಪಾದನೆ ನಿಂತು ಹೋಯಿತು ಹಾಗೆಯೇ ಚ್ಯಾಥಮ್ ಹರಳುಗಳೂ 1989ರ ಸ್ಯಾನ್ ಫ್ರಾನ್ಸಿಕೋದ ಭೂಕಂಪದ ನಂತರ ನಿಂತು ಹೋಯಿತು.[ಸೂಕ್ತ ಉಲ್ಲೇಖನ ಬೇಕು]
ಜಲೋಷ್ಣೀಯ ಸಂಶ್ಲೇಷಿತ ಪಚ್ಚೆಯು IG ಫಾರ್ಬೆನ್, ನ್ಯಾಕೆನ್, ಟೈರಸ್ ಮುಂತಾದವುಗಳ ಪರಿಣಾಮವಾಗಿರುತ್ತದೆ ಆದರೆ ಮೊದಲ ತೃಪ್ತಿದಾಯಕ ವ್ಯಾಪಾರದ ಪಚ್ಚೆಯು ಆಸ್ಟ್ರೀಯಾ ದ ಇನ್ಸ್‌ಬ್ರಕ್ ನ ಜೊಹಾನ್ನ್ ಲೆಕ್ಲೇಯ್ಟನರ್ ಉತ್ಪಾದಿಸಿದ್ದಾಗಿರುತ್ತದೆ ಮತ್ತು ಇದು 1960ರಲ್ಲಿ, ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿರುತ್ತದೆ. ಆರಂಭದಲ್ಲಿ ಈ ಕಲ್ಲುಗಳನ್ನು "ಎಮರ್ಷಿಯಾ" ಮತ್ತು "ಸಿಮೆರಾಳ್ಡಸ್" ಎಂದು ಕರೆದು ಮಾರಾಟ ಮಾಡುತ್ತಿದ್ದರು, ಇವನ್ನು ನೈಸರ್ಗಿಕ ಬಣ್ಣರಹಿತ ಬೆರಿಲ್ ಮೇಲೆ ಸಣ್ಣ ಪದರವನ್ನಾಗಿ ಬೆಳೆಯುತ್ತಿದ್ದರು. ಮೂಲ ಪ್ರಕ್ರಿಯೆ ಹೇಗೆಂದು ಗೊತ್ತಿಲ್ಲದಿದ್ದರೂ ಲೇಕ್ಲೇಯ್ಟನರ್ ಪಚ್ಚೆಗಳನ್ನು ಆಸಿಡ್ ಸನ್ನಿವೇಶಗಳಲ್ಲಿ ಬೆಳೆಯಲಾಗುತ್ತದೆ ಎಂದಷ್ಟೇ ಹೇಳಬಹುದು.[ಸೂಕ್ತ ಉಲ್ಲೇಖನ ಬೇಕು] ಆನಂತರ, 1965 ರಿಂದ 1970 ರವರೆಗೂ, ಯೂನಿಯನ್ ಕಾರ್ಬೈಡ್ ನ ಲಿಂಡೆ ವಿಭಾಗದವರು ಪೂರ್ಣಪ್ರಮಾಣದ ಸಂಶ್ಲೇಷಿತ ಪಚ್ಚೆಯನ್ನು ಜಲೋಷ್ಣೀಯ ಸಂಶ್ಲೇಷಣೆ ಮಾಡಿ ಉತ್ಪಾದಿಸುತ್ತಿದ್ದರು. ಅವರ ಹಕ್ಕುಸ್ವಾಮ್ಯ (ಪೇಟೆಂಟ್) ಪ್ರಕಾರ (US3,567,642 ಮತ್ತು US3,567,643) ಬಣ್ಣಕ್ಕೆ ಕಾರಣವಾಗುವ ಕ್ರೋಮಿಯಂ ಅನ್ನು ಘನೀಕರಿಸುವುದರಿಂದ ತಡೆಯುವುದಕ್ಕೆ ಅಸೀಡಿಕ್ ಸನ್ನೀವೇಶಗಳು ಅಗತ್ಯವಾಗಿರುತ್ತದೆ. ಮತ್ತು ಸಿಲಿಕಾನ್ ಒಳಗೊಂಡ ನ್ಯೂಟ್ರಿಯಂಟ್ ಅನ್ನು ದೂರ ಇಡುವುದು ಬಹಳ ಮುಖ್ಯವಾಗುತ್ತದೆ ಕಾರಣ ನ್ಯೂಕ್ಲೀಯೇಷನ್‌ನಿಂದ ತಡೆಯುವುದಕ್ಕೆ ಮತ್ತು ಬೆಳವಣಿಗೆಯನ್ನು ಸೀಡ್ ಕ್ರಿಸ್ಟಲ್ಸ್‌ಗೆ ಮಿತಗೊಳಿಸುವ ಕಾರಣಕ್ಕೂ ಆಗುತ್ತದೆ. ಪ್ರಸರಣ ಪ್ರತಿಪರಿಣಾಮದಿಂದಾಗಿ ಬೆಳವಣಿಗೆ ಸಾಧ್ಯವಾಗುತ್ತದೆ ಮತ್ತು ಈ ಪ್ರಕ್ರಿಯೆಗೆ ಸಂವಹನವು ಸಹಾಯ ಮಾಡುತ್ತದೆ. ರಷಿಯಾದ ಟೈರಸ್ ನವರು ಜಲೋಷ್ಣೀಯ ಪಚ್ಚೆಯನ್ನು ಉತ್ಪಾದಿಸುವ ಅತಿ ದೊಡ್ಡ ತಯಾರಕರು. ಕೊಲಂಬಿಯಾದ ಪಚ್ಚೆಗಳಲ್ಲಿ ಆಲ್ಕಾಲೀನ್ ಶೇಖರಣೆಯಂತೆ, ಒಂದೇ ರೀತಿಯ ರಾಸಾಯನಿಕ ಸಂಯೋಜನೆ ಇರುವ ಪಚ್ಚೆಯನ್ನು ಸಂಶ್ಲೇಷಿಸುವುದರಲ್ಲಿ ಅವರು ಯಶಸ್ವಿ ಆಗಿರುವುದರಿಂದ ಅವರು ಉತ್ಪಾದಿಸಿದ್ದನ್ನು "ಕೊಲಂಬೀಯನ್ ಕ್ರಿಯೇಟೆಡ್ ಎಮರಲ್ಡ್" ಅಥವಾ "ಟೈರಸ್ ಕ್ರಿಯೇಟೆಡ್ ಎಮರಲ್ಡ್" ಎಂದು ಕರೆಯುತ್ತಾರೆ.[ಸೂಕ್ತ ಉಲ್ಲೇಖನ ಬೇಕು]
ನೀಲಲೋಹಿತಾತೀತ ಬೆಳಕು ವಿನಲ್ಲಿ ದೀಪ್ತಿ (ಶಾಖವಿಲ್ಲದೆ ಉತ್ಪತ್ತಿಯಾಗುವ ಬೆಳಕು) ಯನ್ನು ಪಚ್ಚೆಯು ನೈಸರ್ಗಿಕವೋ ಅಥವಾ ಸಂಶ್ಲೇಷಿತವೋ ಎಂದು ನಿರ್ಧರಿಸುವುದಕ್ಕೆ ಪೂರಕ ಪರೀಕ್ಷೆ ಎಂದು ಪರಿಗಣಿಸಲಾಗಿದೆ, ಆದರೆ ಈ ಪರೀಕ್ಷೆಯನ್ನು ಎಲ್ಲಾದಕ್ಕೂ ಅನ್ವಯಿಸುವುದಿಲ್ಲ ಯಾಕೆಂದರೆ ನೈಸರ್ಗಿಕ ಪಚ್ಚೆಗಳಿಗೆ ನೀಲಲೋಹಿತಾತೀತ ಬೆಳಕು ನಿಷ್ಕ್ರೀಯವಾಗಿ ಅಥವಾ ಜಡವಾಗಿ ಸ್ಪಂದಿಸುತ್ತದೆ. ಅನೇಕ ಸಂಶ್ಲೇಷಿತವೂ UVಗೆ ಜಡವಾಗಿ ಸ್ಪಂದಿಸುತ್ತವೆ.[೧೧]
ಸಂಶ್ಲೇಷಿಸಿದ ಪಚ್ಚೆಗಳು ಅನೇಕ ಬಾರಿ "ಸೃಷ್ಟಿಸಿದ್ದು" ಎಂದು ಉಲ್ಲೇಖಿಸಲಾಗುತ್ತದೆ ಕಾರಣ ಅವುಗಳ ರಾಸಾಯನಿಕ ಮತ್ತು ಹರಳಿನ ಸಂಯೋಜನೆಗಳು ನೈಸರ್ಗಿಕ ಪ್ರತಿಗಳಂತೆಯೇ ಇರುತ್ತದೆ. ಯಾವುದು ಸಂಶ್ಲೇಷಿಸಿದ ಹರಳು ಯಾವುದು ಅಲ್ಲಾ ಎಂದು ಕರೆಯಲು U.S.ನ ಫೆಡರಲ್ ಟ್ರೇಡ್ ಕಮೀಷನ್ (FTC) ನವರು ತುಂಬಾ ಕಠಿಣ ವಿಧಾಯಕವನ್ನು ಮಾಡಿರುತ್ತಾರೆ. FTC ನವರು ಹೇಳುವ ಪ್ರಕಾರ: "§ 23.23(c) "ಪ್ರಯೋಗಾಲಯದಲ್ಲಿ-ಸೃಷ್ಟಿಸಿದ್ದು", "ಪ್ರಯೋಗಾಲಯದಲ್ಲಿ-ಬೆಳಸಿದ್ದು", "(ತಯಾರಕರ ಹೆಸರು)-ಸೃಷ್ಟಿಸಿದ್ದು" ಎಂದು ಕರೆಯುವುದು ತರವಲ್ಲ ಹಾಗೆಯೇ ಸಂಶ್ಲೇಷಿಸಿದ ಕೈಗಾರಿಕೆಯೊಂದರ ಉತ್ಪಾದನೆಯನ್ನು ಅದರ ಭೌತಿಕ ಮತ್ತು ರಾಸಾಯನಿಕ, ದೃಷ್ಟೀಯ ಗುಣಗಳನ್ನು ನೈಸರ್ಗಿಕ ಕಲ್ಲುಗಳ ಗುಣಗಳಂತೆಯೇ ಇರದ ಹೊರತು, ಅದನ್ನು ಆ ಹೆಸರಿನಿಂದ ಕರೆಯುವುದೂ ತರವಲ್ಲ.[೧೨]
ಸ್ವಲ್ಪ ಮಟ್ಟಿಗಿನ ಮುಸುಕಿನಂತಿರುವ ಅಂತರ್ಗತಗಳು ಫ್ಲಕ್ಸ್-ಬೆಳವಣಿಗೆಯ ಸಂಶ್ಲೇಷಿಸಿದ ಪಚ್ಚೆಗಳಲ್ಲಿ ಸಾಮಾನ್ಯವಾಗಿರುತ್ತದೆ.
ಪಚ್ಚೆಯ ವಿವಿಧ ಸಂಸ್ಕೃತಿಗಳು ಮತ್ತು ಪಚ್ಚೆಯ ಬೋಧೆ
[ಬದಲಾಯಿಸಿ]ಸಾಂಪ್ರದಾಯಿಕವಾಗಿ ಪಚ್ಚೆಯನ್ನು ಮೇ ತಿಂಗಳ ಜನ್ಮರಾಶಿಕಲ್ಲು ಎಂದು ಜ್ಯೋತಿಶ್ಯಾಸ್ತ್ರದ ಲಕ್ಷಣಗಳಲ್ಲಿ ಟಾರಸ್, ಕ್ಯಾನ್ಸರ್ ಮತ್ತು ಕೆಲವೊಮ್ಮೆ ಜೆಮಿನಿ ಯ ರಾಶಿಗಳಿಗೆ ಪರಿಗಣಿಸಲಾಗಿದೆ. 16ನೇ-ಶತಮಾನದ ಇತಿಹಾಸ ತಜ್ಞ ಬ್ರಾಂಟೋಮ್ ನ ವಿಲಕ್ಷಣ ಚರಿತ್ರಾಂಶದ ಪ್ರಕಾರ ಪಚ್ಚೆ ಕಲ್ಲುಗಳನ್ನು ಸ್ಪ್ಯಾನಿಶ್‌ನ ಕೊರ್ಟೆಜ್ ಲ್ಯಾಟಿನ್ ಅಮೇರಿಕಾದಿಂದ ಮರಳಿ ಯೂರೋಪ್‌ಗೆ ತಂದನು. ಕೋರ್ಟೆಜ್‌ನ ಗಮನೀಯವಾದ ಪಚ್ಚೆಗಳೊಂದರಲ್ಲಿ ಲಿಪಿ ಕೆತ್ತನೆ ಮಾಡಿಸಿರುತ್ತಾನೆ ಅದು ಇಂಟರ್ ನ್ಯಾಟೋಸ್ ಮ್ಯೂಲೀರಮ್ ನಾನ್ ಸರ್-ರೆಕ್ಸಿಟ್ ಮೇಯರ್ ಎಂದಿದೆ (ಈ ಪಚ್ಚೆಯುಂಗುರವನ್ನು ಧರಿಸಿದ ಮೇಲೆ ಯಾವ ಹೆಣ್ಣೂ ಮಹಾನ್ ಪುರುಷನಿಗಿಂತ ಕಡಿಮೆ ಎನ್ನಲಾಗುವುದಿಲ್ಲ. XI, 11) ಇವು ಜಾನ್ ದಿ ಬ್ಯಾಪ್ಟಿಸ್ಟ್ ಅನ್ನು ಉಲ್ಲೇಖಿಸುತ್ತದೆ. ಪ್ರಕೃತಿಯ ಈ ಸುಂದರ ಉತ್ಪನ್ನದ ಮೇಲೆ ಕೆತ್ತನೆ ಮಾಡುವುದನ್ನು ಬ್ರಾಂಟೋಮ್ ಅವಮರ್ಯಾದೆ ಮಾಡಿದಂತೆ ಎಂದು ಭಾವಿಸಿದ್ದಾನೆ ಮತ್ತು ಇದರಿಂದಾಗಿಯೇ ತನ್ನ ಬಹು ಬೆಲೆ ಬಾಳುವ ಪಚ್ಚೆ ಕಳೆದು ಹೋಯಿತು (ಈ ಕಾರಣಕ್ಕೇ ಸುಂದರ ಮತ್ತು ಹೋಲಿಸಲಾಗದ ಪಚ್ಚೆ ಎಂಬ ಕೃತಿಯನ್ನು ಸಮರ್ಪಿಸಿದ್ದಾನೆ) ಮತ್ತು ಇದಾದನಂತರವೇ ಚಕ್ರವರ್ತಿ ಫ್ರಾನ್ಸ್‌ನ ಚಾರ್ಲ್ಸ್ IX ಸತ್ತಿದ್ದು ಎಂದೂ ಭಾವಿಸುತ್ತಾನೆ.[೧೩]
ಕೆಲವು ಸಂಸ್ಕೃತಿಯಲ್ಲಿ ಪಚ್ಚೆಯನ್ನು 55ನೇ ವಿವಾಹ ವಾರ್ಷಿಕೋತ್ಸಕ್ಕೆ ಉಡುಗೊರೆಯಾಗಿ ಕೊಡುವುದು ಸಂಪ್ರದಾಯ. 20ನೇ ಮತ್ತು 35ನೇ ವಿವಾಹ ವಾರ್ಷಿಕೋತ್ಸವಕ್ಕೂ ಇದನ್ನು ಬಳಸುವುದುಂಟು.
ರಾಜ ಜೇಮ್ಸ್‌ನ ಅಧಿಕೃತ ಭಾಷಾಂತರದ ಬೈಬಲ್ ನ ಎಕ್ಸೋಡಸ್ ನ 28:18 ಮತ್ತು 39:11 ರಲ್ಲಿ "ಪಚ್ಚೆಯನ್ನು" ಜ್ಯೂವ್ಸ್‌ನ ಉನ್ನತ ಪಾದ್ರಿ ಯ ಎದೆಯ ಮೇಲಿನ ಫಲಕದಲ್ಲಿರುವ ಅಮೂಲ್ಯ ಕಲ್ಲುಗಳಲ್ಲಿ ಪಚ್ಚೆಯೂ ಒಂದು ಎಂದಿದೆ; ಆದರೆ ಆಧುನಿಕ ಅಭಿಪ್ರಾಯ ಇದನ್ನು ಅಲ್ಲಗೆಳೆದು ಬಹುಶ: ಇದು ತಪ್ಪು ಅನುವಾದ ಎನ್ನುತ್ತದೆ. (ನೋಡಿ ಹೋಶೆನ್.)
ಅಮೇರಿಕಾದಲ್ಲಿ ಐರ್‌ಲ್ಯಾಂಡ್ ಅನ್ನು "ಎಮರಲ್ಡ್ ಐಲ್" ಎಂದು ವಿಶೇಷವಾಗಿ ಉಲ್ಲೇಖಿಸಲಾಗುತ್ತದೆ.
L. ಫ್ರಾಂಕ್ ಬಾಮ್‌ನ ದಿ ವಂಡರ್ ಫುಲ್ ವಿಜಾರ್ಡ್ ಆಫ್ ಆಸ್ಟ್ರೇಲಿಯದಲ್ಲಿ ,ಐಂದ್ರಜಾಲಿಕ ಆಳುವ ನಗರವನ್ನು ಪಚ್ಚೆಯಿಂದ ಮಾಡಲಾಗಿದೆ ಎನ್ನಲಾಗಿದೆ ಆದುದರಿಂದಲ್ಲೇ ಆ ನಗರವನ್ನು ಎಮರಲ್ಡ್ ಸಿಟಿ ಎಂದು ಕರೆಯುತ್ತಾರೆ. ಈ ಸರಣಿಯ ಆರನೇ ಪುಸ್ತಕವನ್ನು ಅದೇ ಹೆಸರಿನಿಂದ ಕರೆಯಲಾಗುತ್ತದೆ.
ಪಚ್ಚೆ | ಮೂಲ |
---|---|
ಗಚಾಲಾ ಪಚ್ಚೆ | ಕೊಲಂಬಿಯಾ |
ಚಾಕ್ ಪಚ್ಚೆ | |
ಬಹಿಯಾ ಪಚ್ಚೆ | ಬ್ರೆಜಿಲ್ |
ಇವನ್ನೂ ಗಮನಿಸಿ
[ಬದಲಾಯಿಸಿ]ಚಿತ್ರಸಂಪುಟ
[ಬದಲಾಯಿಸಿ]-
ಎಡದಿಂದ ಬಲ: ಭಾರತದ ಪಚ್ಚೆಯ ಕಂಠಹಾರ, ಗಚಾಲಾದ ಪಚ್ಚೆಯ ಸ್ಫಟಿಕ ಮತ್ತು ಮ್ಯಾಕೇಯ್ನ ಪಚ್ಚೆಯ ಕಂಠಹಾರ ಎಲ್ಲವೂ ನ್ಯಾಷನಲ್ ಮ್ಯೂಷಿಯಂ ಆಫ್ ನ್ಯಾಚೂರಲ್ ಹಿಸ್ಟರಿಯಿಂದ ಬಂದಿರುವುದಾಗಿದೆ.
-
37-ಕ್ಯಾರೆಟ್ನ ಶ್ರೇಷ್ಠ ಗುಣಮಟ್ಟದ ಚಾಕ್ ಪಚ್ಚೆಯ ಬೆರಳಿನುಂಗುರವೂ ನ್ಯಾಷನಲ್ ಮ್ಯೂಷಿಯಂ ಆಫ್ ನ್ಯಾಚೂರಲ್ ಹಿಸ್ಟರಿಗೆ ಸೇರಿರುವಂತಹುದು.
ಟಿಪ್ಪಣಿಗಳು
[ಬದಲಾಯಿಸಿ]- ↑ ೧.೦ ೧.೧ ಹರ್ಲ್‌ಬಟ್, ಕಾರ್ನೆಲೀಯಸ್ S. ಜೂ, ಆಂಡ್ ಕಮ್ಮೆಲಿಂಗ್, ರಾಬರ್ಟ್ C., 1991, ಜೆಮೊಲಾಜಿ , p. 203, ಜಾನ್ ವಿಲಿ ಆಂಡ್ ಸನ್ಸ್, ನ್ಯೂ ಯಾರ್ಕ್
- ↑ ೨.೦ ೨.೧ Fernie M.D., W.T. (1906). Precious Stones for Curative Wear. John Wright. & Co.
- ↑ Harper, Douglas. "emerald". Online Etymology Dictionary.
- ↑ ಕ್ರೂಕ್ ಆಂಡ್ ಬಾಲ್ ಸಂಪುಟಗಳು., ಟಾವರ್ನೀಯರ್, J. B. ದಿ ಸಿಕ್ಸ್ ವಾಯೇಜಸ್, ವಾಲ್ಯೂಂ II, pp.44, 58
- ↑ ೫.೦ ೫.೧ ವೈಸ್, R. W., ಸೀಕ್ರೆಟ್ಸ್ ಆಫ್ ದಿ ಜೆಮ್ಸ್ ಟ್ರೇಡ್, ದಿ ಕನ್ನಾಯ್ಸೀಯರ್ಸ್ ಗೈಡ್ ಟು ಪ್ರೆಷೀಯಸ್ ಜೆಮ್‌ಸ್ಟೋನ್ಸ್, ಬ್ರನ್ಸ್‌ವಿಕ್ ಹೌಸ್ ಪ್ರೆಸ್, 2001, pp.108
- ↑ ಗೈಡ್ಸ್ ಫಾರ್ ದಿ ಜಿವೆಲ್ರಿ, ಪ್ರೆಷೀಯಸ್ ಮೆಟಲ್ಸ್, ಆಂಡ್ ಪೀವ್ಟರ್ ಇಂಡಸ್ಟ್ರೀಸ್
- ↑ ಗ್ಯೂಲಿಯಾನಿ et al. (2000): “ಆಕ್ಸಿಜೆನ್ ಐಸೋಟೋಪ್ಸ್ ಆಂಡ್ ಎಮರಲ್ಡ್ ಟ್ರೇಡ್ ರೂಟ್ಸ್ ಸಿನ್ಸ್ ಆಂಟಿಕ್ವಿಟಿ.” ಗ್ಯಾಸ್ಟನ್ ಗೀಉಲ್ಲೀಯಾನಿ, ಮಾರ್ಕ್ ಚೌಡಿಸ್ಸನ್, ಹೆನ್ರಿ-ಜೀನ್ ಸ್ಕೂಬ್ನೆಲ್, ಡ್ಯಾನೀಯಲ್-H. ಪೀಯೆಟ್, ಕ್ಲೇರಿ ರಾಲ್ಲೀಯಾನ್-ಬಾರ್ಡ್, ಕ್ರಿಶ್ಚೀಯನ್ ಫ್ರಾನ್ಸ್-ಲ್ಯಾನಾರ್ಡ್, ಡಿಡೀಯರ್ ಗಿಯಾರ್ಡ್, ಡ್ಯಾನೀಯಲ್ ಡಿ ನರ್ವಾಜ್, ಬೆನ್ಜಾಮಿನ್ ರಾನ್ಡೀವೊ. ಸೈನ್ಸ್ , ಜನವರಿ 28, 2000, pp. 631–633.
- ↑ ಗಿಉಲ್ಲೀಯಾನಿ et al. (2000b): “ಲಾ ರೂಟ್ ಡೆಸ್ ಎಮರಾಡೆಸ್ ಆನ್ಸೀನ್ನೆಸ್.” ಗ್ಯಾಸ್ಟನ್ ಗಿಉಲ್ಲೀಯಾನಿ, ಮೈಖೇಲ್ ಹೀಜೆ, ಮಾರ್ಕ್ ಚೌಡಿಸ್ಸನ್. ಪೌರ್ ಲಾ ಸೈನ್ಸ್ , ನವೆಂಬರ್ 2000, pp. 58–65.
- ↑ ೯.೦ ೯.೧ http://www.mindat.org/min-1375.html ಮಿಂಡಾಟ್ ವಿಥ್ ಲೊಕೇಷನ್ ಡಾಟಾ
- ↑ ನಾಸ್ಸೌ, K., 1980, ಜೆಮ್ಸ್ ಮೇಡ್ ಬೈ ಮ್ಯಾನ್, ಜೆಮೊಲಾಜಿಕಲ್ ಇನ್ಸ್‌ಟಿಟ್ಯೂಟ್ ಆಫ್ ಅಮೇರಿಕಾ, ISBN 0-87311-016-1
- ↑ ಹರ್ಲ್‌ಬಟ್, ಕಾರ್ನೆಲೀಯಸ್ S. ಜೂ, ಆಂಡ್ ಕಾಮ್ಮರ್ಲಿಂಗ್, ರಾಬರ್ಟ್ C., 1991, ಜೆಮೊಲಾಜಿ, p. 81, ಜಾನ್ ವಿಲಿ ಆಂಡ್ ಸನ್ಸ್, ನ್ಯೂ ಯಾರ್ಕ್
- ↑ ಗೈಡ್ಸ್ ಫಾರ್ ದಿ ಜಿವೆಲ್ರಿ, ಪ್ರೆಷೀಯಸ್ ಮೆಟಲ್ಸ್, ಆಂಡ್ ಪೀವ್ಟರ್ ಇಂಡಸ್ಟ್ರೀಸ್
- ↑ Kunz, George Frederick (1915). Magic of Jewels and Charms. Lippincott Company. p. 305
ಆಕರಗಳು
[ಬದಲಾಯಿಸಿ]- ಕೂಪರ್, J.C. ((ಆವೃತ್ತಿ). (1992). ಬ್ರಿವರ್ಸ್ ಮಿಥ್ ಆಂಡ್ ಲೀಜೆಂಡ್ . ನ್ಯೂ ಯಾರ್ಕ್: ಕ್ಯಾಸೆಲ್ ಪಬ್ಲಿಷರ್ಸ್ ಲಿ. ISBN 0-304-34084-7.
- ಸಿಂಕಂಕಾಸ್, ಜಾನ್ (1994). ಎಮರಲ್ಡ್ ಆಂಡ್ ಅದರ್ ಬೆರಿಲ್ಸ್ . ಜೀಯೋಸೈನ್ಸ್ ಪ್ರೆಸ್. ISBN 0-8019-7114-4
- ಹರ್ಲ್‌ಬಟ್, ಕಾರ್ನೀಲಿಯಸ್ S.; ಕ್ಲೀನ್, ಕಾರ್ನೆಲಿಸ್ (1985). ಮ್ಯಾನ್ಯಲ್ ಆಫ್ ಮಿನರಾಲಜಿ (20ನೇ ಸಂ.). ನ್ಯೂ ಯಾರ್ಕ್: ಜಾನ್ ವಿಲಿ ಆಂಡ್ ಸನ್ಸ್. ISBN 0-471-80580-7.
- ವಿನ್‌ಸ್ಟೇಯ್ನ್, ಮೈಖೇಲ್ (1958). ದಿ ವರ್ಳ್ಡ್ ಆಫ್ ಜಿವೆಲ್ ಸ್ಟೋನ್ಸ್ . ಶೆರಿಡೆನ್ ಹೌಸ್.
- ನಾಸೌ, ಕರ್ಟ್ (1980). ಜೆಮ್ಸ್ ಮೇಡ್ ಬೈ ಮ್ಯಾನ್ . ಜೆಮೊಲಾಜಿಕಲ್ ಇನ್ಸ್‌ಟಿಟ್ಯೂಟ್ ಆಫ್ ಅಮೇರಿಕಾ. ISBN 0-87311-016-1
- ಅಲೀ, ಸಲೀಮ್ H. (| 2006- ದಿ ಎಮರಾಲ್ಡ್ ಸಿಟಿ: ಎಮರಾಲ್ಡ್ ಮೈನಿಂಗ್ ಇನ್ ಬ್ರೆಜಿಲ್ (+ಜೆಮ್‌ಸ್ಟೋನ್ ಮೈನಿಂಗ್ ಇನ್ ಅದರ್ ಕಂಟ್ರೀಸ್) http://www.uvm.edu/envnr/gemecology/brazil.html Archived 2007-10-14 ವೇಬ್ಯಾಕ್ ಮೆಷಿನ್ ನಲ್ಲಿ.
- ವೈಸ್, ರಿಚರ್ಡ್ W., ಸೀಕ್ರೆಟ್ಸ್ ಆಫ್ ದಿ ಜೆಮ್ ಟ್ರೇಡ್, ದಿ ಕನ್ನಾಯ್ಸೀಯರ್ಸ್ ಗೈಡ್ ಟು ಪ್ರೆಷೀಯಸ್ ಜೆಮ್‌ಸ್ಟೋನ್ಸ್ (2001), ಬ್ರನ್ಸ್‌ವಿಕ್ ಹೌಸ್ ಪ್ರೆಸ್. ISBN 0-9728223-8-0 ವೆಬ್‌ಸೈಟ್: [೧]
- ಬಾಲ್, V., ಆಂಡ್ ಕ್ರೂಕ್, W., ಟ್ರಾವೆಲ್ಸ್ ಇನ್ ಇಂಡಿಯಾ ಬೈ ಜೀನ್-ಬ್ಯಾಪ್ಟಿಸ್ಟ್ ಟಾವರ್ನೀಯರ್ , ಓರೀಯೆಂಟಲ್ ರೀಪ್ರಿಂಟ್ ಕಾರ್ಪೊರೇಷನ್, ನ್ಯೂ ಡೆಲ್ಲಿ, ಇಂಡಿಯಾ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಹಿಸ್ಟಾರಿಕಲ್ ರೆಫರೆನ್ಸ್ಸ್ ಆಫ್ ಎಮರಲ್ಡ್ಸ್ Archived 2010-04-14 ವೇಬ್ಯಾಕ್ ಮೆಷಿನ್ ನಲ್ಲಿ. (ಪೂರ್ಣ ಪಾಠಾಂತರ) ಪ್ರಸಿದ್ಧ ಪಚ್ಚೆಗಳು ಮತ್ತು ಪೂರ್ಣ ಉಲ್ಲೇಖಗಳನ್ನು ಇಲ್ಲಿ ಬಳಸಲಾಗಿದೆ.
- ICA'ಯ ಎಮರಲ್ಡ್ ಪೇಜ್ ಅಂತರರಾಷ್ಟ್ರೀಯ, ಬಣ್ಣದ ಕಲ್ಲಿನ ಪಚ್ಚೆಯ ಪುಟ
- ವೆಬ್ಮಿನರಲ್ ಬೆರಿಲ್ ಪೇಜ್ ವೆಬ್ಮಿನ್ರಲ್ ವಿಥ್ ಕ್ರಿಸ್ಟಲ್ಲೋಗ್ರಾಫಿಕ್ ಆಂಡ್ ಮಿನರಾಲಜಿಕಲ್ ಇನ್ಫಾರ್ಮೇಷನ್
- Pages using the JsonConfig extension
- Pages using ISBN magic links
- Articles with hatnote templates targeting a nonexistent page
- Articles with unsourced statements from August 2009
- Articles with unsourced statements from May 2009
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Commons category link is on Wikidata
- ಬೆರಿಲ್ಲೀಯಂ ಖನಿಜಗಳು
- ಅಲ್ಯೂಮಿನಿಯಂ ಖನಿಜಗಳು
- ಸಿಲಿಕೇಟ್ ಖನಿಜಗಳು
- ಹರಳಿನ ಕಲ್ಲುಗಳು