ಕಿರೀಟ
ಗೋಚರ
ಕಿರೀಟವು ಒಬ್ಬ ಅರಸ ಅಥವಾ ಒಬ್ಬ ದೇವತೆಯಿಂದ ಧರಿಸಲ್ಪಟ್ಟ ತಲೆಯುಡಿಗೆಯ ಸಾಂಪ್ರದಾಯಿಕ ಸಾಂಕೇತಿಕ ಪ್ರಕಾರ, ಮತ್ತು ಇದು ಸಾಂಪ್ರದಾಯಿಕವಾಗಿ ಅಧಿಕಾರ, ಔರಸತ್ವ, ಅಮರತ್ವ, ಸದಾಚಾರ, ವಿಜಯ, ಯಶಸ್ಸು ಪುನರುಜ್ಜೀವನ, ಘನತೆ ಮತ್ತು ಮರಣೋತ್ತರ ಬದುಕಿನ ಕೀರ್ತಿಯನ್ನು ಪ್ರತಿನಿಧಿಸುತ್ತದೆ. ಕಲೆಯಲ್ಲಿ ಕಿರೀಟವನ್ನು ದೇವದೂತರು ಭೂಲೋಕದಲ್ಲಿರುವವರಿಗೆ ಕೊಡುತ್ತಿರುವಂತೆ ತೋರಿಸಬಹುದು. ಸಾಂಪ್ರದಾಯಿಕ ಸ್ವರೂಪದ ಹೊರತಾಗಿ, ಕಿರೀಟವು, ಉದಾಹರಣೆಗೆ, ಹೂವುಗಳು, ನಕ್ಷತ್ರಗಳು, ಓಕ್ ಮರದ ಎಲೆಗಳು ಅಥವಾ ಮುಳ್ಳುಗಳಿಂದ ನಿರ್ಮಿಸಲ್ಪಟ್ಟಿರಬಹುದು, ಮತ್ತು ಇತರರಿಂದ ಧರಿಸಲ್ಪಡಬಹುದು, ಮತ್ತು ಹೀಗೆ ನಿರ್ದಿಷ್ಟ ಕಿರೀಟದಿಂದ ಕಿರೀಟಧಾರಣೆಯ ಕಾರ್ಯವು ಏನನ್ನು ಸಂಕೇತಿಸಲು ಉದ್ದೇಶಿಸುತ್ತದೆಂಬುದನ್ನು ಪ್ರತಿನಿಧಿಸುತ್ತದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |