ವಿಷಯಕ್ಕೆ ಹೋಗು

ಚಂದ್ರಶಿಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಯಗೊಳಿಸಿದ ಚಂದ್ರಶಿಲೆ ರತ್ನ

ಚಂದ್ರಶಿಲೆ (ಚಂದ್ರಾಶ್ಮ) ಎಂದರೆ ಫ಼ೆಲ್ಡ್‌ಸ್ಪಾರ್ ಗುಂಪಿನ ಸೋಡಿಯಮ್ ಪೊಟ್ಯಾಶಿಯಮ್ ಅಲ್ಯೂಮಿನಿಯಮ್ ಸಿಲಿಕೇಟ್ ((Na,K)AlSi3O8). ಇದು ಮುತ್ತಿನಂಥ ಹಾಗೂ ಕ್ಷೀರಸ್ಫಟಿಕತ್ವವುಳ್ಳ ಹೊಳಪನ್ನು ಪ್ರದರ್ಶಿಸುತ್ತದೆ.[೧][೨] ಒಂದು ಪರ್ಯಾಯ ಹೆಸರೆಂದರೆ ಹೆಕಟೊಲೈಟ್.

ಇತಿಹಾಸ[ಬದಲಾಯಿಸಿ]

ಚಂದ್ರಶಿಲೆಯನ್ನು ಪ್ರಾಚೀನ ನಾಗರೀಕತೆಗಳು ಸೇರಿದಂತೆ ಸಹಸ್ರಮಾನಗಳಿಂದ ಆಭರಣಗಳಲ್ಲಿ ಬಳಸಲಾಗಿದೆ. ರೋಮನ್ನರು ಚಂದ್ರಶಿಲೆಯನ್ನು ಮೆಚ್ಚಿಕೊಳ್ಳುತ್ತಿದ್ದರು, ಮತ್ತು ಅದು ಚಂದ್ರನ ಘನೀಕೃತ ಕಿರಣಗಳಿಂದ ಉದ್ಭವಿಸುತ್ತದೆ ಎಂದು ನಂಬಿದ್ದರು. ರೋಮನ್ನರು ಮತ್ತು ಗ್ರೀಕರು ಇಬ್ಬರೂ ಚಂದ್ರಶಿಲೆಯನ್ನು ತಮ್ಮ ಚಂದ್ರ ದೇವತೆಗಳೊಂದಿಗೆ ಸಂಬಂಧಿಸಿದ್ದರು. ಹೆಚ್ಚು ಇತ್ತೀಚಿನ ಇತಿಹಾಸದಲ್ಲಿ, ಚಂದ್ರಶಿಲೆಯು ಆರ್ಟ್ ನೋವೊ ಅವಧಿಯಲ್ಲಿ ಜನಪ್ರಿಯವಾಯಿತು; ಫ಼್ರೆಂಚ್ ಅಕ್ಕಸಾಲಿಗ ರನೆ ಲಲಿಕ್ಯ ಹಾಗೂ ಅನೇಕ ಇತರರು ಈ ಶಿಲೆಯನ್ನು ಬಳಸಿ ಭಾರೀ ಪ್ರಮಾಣದ ಆಭರಣಗಳನ್ನು ಸೃಷ್ಟಿಸಿದರು.[೩]

ಉಲ್ಲೇಖಗಳು[ಬದಲಾಯಿಸಿ]

  1. Moonstone Gemological Information Archived 2016-04-19 ವೇಬ್ಯಾಕ್ ಮೆಷಿನ್ ನಲ್ಲಿ. International Gem Society, Retrieved 01-05-15
  2. Moonstone on Mindat.org
  3. "Moonstone" International Colored Gemstone Association. Retrieved 26 April 2012.