ಗೋಮೇದಕ
ಗೋಮೇದಕ | |
---|---|
General | |
ವರ್ಗ | Nesosilicates |
ರಾಸಾಯನಿಕ ಸೂತ್ರ | zirconium silicate ZrSiO4 |
ಸ್ಟ್ರೋಂಝ್ ವರ್ಗೀಕರಣ | 09.AD.30 |
ಸ್ಫಟಿಕ ಸಮರೂಪತೆ | Tetragonal ditetragonal dipyramidal H-M symbol: (4/m 2/m 2/m) Space group: I 41/amd |
ಏಕಕೋಶ | a = 6.607(1) Å, c = 5.982(1) Å; Z=4 |
Identification | |
ಬಣ್ಣ | Reddish brown, yellow, green, blue, gray, colorless; in thin section, colorless to pale brown |
ಸ್ಫಟಿಕ ಗುಣಲಕ್ಷಣ | tabular to prismatic crystals, irregular grains, massive |
ಸ್ಫಟಿಕ ಪದ್ಧತಿ | Tetragonal |
ಅವಳಿ ಸಂಯೋಜನೆ | On {101} |
ಸೀಳು | indistinct, on {110} and {111} |
ಬಿರಿತ | Conchoidal to uneven |
ಜಿಗುಟುತನ | Brittle |
ಮೋಸ್ ಮಾಪಕ ಗಡಸುತನ | 7.5 |
ಹೊಳಪು | Vitreous to adamantine; greasy when metamict. |
ಪುಡಿಗೆರೆ | White |
ಪಾರದರ್ಶಕತೆ | Transparent to opaque |
ವಿಶಿಷ್ಟ ಗುರುತ್ವ | 4.6–4.7 |
ದ್ಯುತಿ ಗುಣಗಳು | Uniaxial (+) |
ವಕ್ರೀಕರಣ ಸೂಚಿ | nω = 1.925–1.961 nε = 1.980–2.015, 1.75 when metamict |
ದ್ವಿವಕ್ರೀಭವನ | δ = 0.047–0.055 |
ಬಹುವರ್ಣಕತೆ | Weak |
ಕರಗು ಗುಣ | close to 2,550 °C depend on Hf,Th,U,H,etc... concentrations. |
ಕರಗುವಿಕೆ | Insoluble |
ಇತರ ಗುಣಲಕ್ಷಣಗಳು | Fluorescent and radioactive, may form pleochroic halos |
ಉಲ್ಲೇಖಗಳು | [೧][೨][೩][೪] |
ಗೋಮೇದಕ ಆದರ್ಶೀಕೃತ ರಾಸಾಯನಿಕ ಸೂತ್ರ ZrSiO_4 (ಜಿರ್ಕೋನಿಯಮ್ ಸಿಲಿಕೇಟ್) ಇರುವ ಒಂದು ಖನಿಜ (ಜಿರ್ಕೋನ್). ನವರತ್ನಗಳಲ್ಲಿ ಒಂದು. ಜಿರ್ಕೋನಿಯಮ್ ಧಾತುವಿನ ಬಲುಮುಖ್ಯ ಆಕರ. ಇದರ ರಾಸಾಯನಿಕ ಸಂಯೋಜನೆಯಲ್ಲಿ ಅಲ್ಪ ಮೊತ್ತದಲ್ಲಿ ಯುರೇನಿಯಮ್ ಪ್ರವೇಶಿಸಿದರೆ ಅದಕ್ಕೆ ಸಿರ್ಟೊಲೈಟ್ ಎಂದು ಹೆಸರಾಗುತ್ತದೆ.
ಲಕ್ಷಣಗಳು
[ಬದಲಾಯಿಸಿ]ಗೋಮೇದಕ ಚತುಷ್ಕೋಣೀಯ (ಟೆಟ್ರಾಗೊನಲ್) ವರ್ಗದ ಹರಳುಗಳಾಗಿ ಚತುರ್ಮುಖ ಅಥವಾ ಅಷ್ಟಮುಖಗಳ ಪ್ರಿಸಮ್ಗಳಂತೆ ರೂಪುಗೊಳ್ಳುತ್ತದೆ. ಪ್ರಿಸಮ್‍ಗಳ ತುದಿಗಳು ಪಿರಮಿಡ್ಡುಗಳಂತೆ ಮೊನಚಾಗಿ ಮಾರ್ಪಡುತ್ತವೆ. ಅವಳಿಗಳಾಗಿ ಬೆಳೆಯುವ ಕೆಲವು ಹರಳುಗಳು ಬಗ್ಗಿದ ಮೊಣಕಾಲಿನ ರೂಪವನ್ನು ಪಡೆಯುತ್ತವೆ. ಸರ್ವ ಸಾಮಾನ್ಯವಾಗಿ ದೊರೆಯುವ ಗೋಮೇದಕ ಸ್ವಚ್ಛವಾಗಿರುವುದಿಲ್ಲ. ಅಚ್ಚ ಹೊಳಪನ್ನುಳ್ಳ ಅಚ್ಚಗೆಂಪು, ಕಿತ್ತಳೆ ಕೆಂಪು ಇಲ್ಲವೆ ಹಳದಿ ಬಣ್ಣಗಳಿಂದ ಕೂಡಿ ಪಾರದರ್ಶಕತೆಯುಳ್ಳ ಹೈಯಾಸಿಂತ್ ಎಂಬ ಅಪರೂಪದ ಗೋಮೇದಕಗಳು ಬೆಲೆಬಾಳುವ ರತ್ನಗಳು. ಕಾಯಿಸುವುದರಿಂದ ಗೋಮೇದಕದ ಬಣ್ಣ ಮಾಯವಾಗುತ್ತದೆ. ನಿರ್ಮಲವಾದ ಗೋಮೇದಕ ವಜ್ರಕ್ಕೆ ಸಮವಾದ ಹೊಳಪನ್ನು ಬೀರಿದರೆ ಅದಕ್ಕೆ ಮಟುರಾ ವಜ್ರವೆನ್ನುತ್ತಾರೆ. ಇದನ್ನು ಒಡೆದಾಗ ಶಂಖಾಕೃತಿಯ ಸೀಳುಗಳನ್ನು ಕಾಣಬಹುದು. ಇದರ ಕಠಿಣತೆ 7.5, ಸಾಪೇಕ್ಷ ಸಾಂದ್ರತೆ 4.7.
ದೊರೆಯುವಿಕೆ
[ಬದಲಾಯಿಸಿ]ರತ್ನ ಜಾತಿಗೆ ಸೇರಿದ ಗೋಮೇದಕಗಳು ಶ್ರೀಲಂಕ, ಇಂಡೊಚೀನ, ಆಸ್ಟ್ರೇಲಿಯ, ರಷ್ಯ, ಆಗ್ನೇಯ ಏಷ್ಯ, ಇಟಲಿ ಮೊದಲಾದ ದೇಶಗಳಲ್ಲಿ ದೊರೆಯುತ್ತವೆ. ಗೋಮೇದಕದ ಗಣಿಗಾರಿಕೆಯಲ್ಲಿ ಆಸ್ಟ್ರೇಲಿಯ ಮುಂಚೂಣಿಯಲ್ಲಿದೆ (37%). ಭಾರತದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಒರಿಸ್ಸ ರಾಜ್ಯಗಳಲ್ಲಿನ ಸಮುದ್ರತೀರದಲ್ಲಿರುವ ಮರಳಿನಲ್ಲೂ ಇವು ಹೇರಳ. ಗೋಮೇದಕ ಸಾಮಾನ್ಯವಾಗಿ ಅಗ್ನಿಶಿಲೆಗಳಾದ ಗ್ರಾನೈಟ್, ಸೈನೈಟ್ ಮತ್ತು ಪೆಗ್ಮೆಟೈಟ್ ಶಿಲೆಗಳಲ್ಲಿ ಉಪಖನಿಜವಾಗಿ ಭೂಮಿಯ ನಾನಾ ಭಾಗಗಳಲ್ಲಿ ಉತ್ಪತ್ತಿಯಾಗಿರುತ್ತದೆ. ಆಂಧ್ರಪ್ರದೇಶದ ಖಮ್ಮಮ್ ಜಿಲ್ಲೆಯ ಸೈನೈಟ್ ಶಿಲೆಗಳಲ್ಲಿ ಅಸ್ಪಷ್ಟವಾದ ಹರಳುಗಳು ಸಾಕಷ್ಟು ಮೊತ್ತದಲ್ಲಿ ದೊರೆಯುತ್ತವೆ.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- Geochemistry of old zircons Archived 2007-04-12 ವೇಬ್ಯಾಕ್ ಮೆಷಿನ್ ನಲ್ಲಿ.
- Mineral galleries Archived 2005-04-07 ವೇಬ್ಯಾಕ್ ಮೆಷಿನ್ ನಲ್ಲಿ.
- GIA Gem Encyclopedia - Zircon Online articles and information on zircon history, lore, and research.
- ↑ Anthony, John W.; Bideaux, Richard A.; Bladh, Kenneth W. and Nichols, Monte C. (ed.). "Zircon". Handbook of Mineralogy (PDF). Vol. II (Silica, Silicates). Chantilly, VA, US: Mineralogical Society of America. ISBN 0962209716.
{{cite book}}
: CS1 maint: multiple names: editors list (link) - ↑ Zircon. Mindat
- ↑ Zircon. Webmineral
- ↑ Hurlbut, Cornelius S.; Klein, Cornelis, 1985, Manual of Mineralogy, 20th ed., ISBN 0-471-80580-7