ವಿಷಯಕ್ಕೆ ಹೋಗು

ಕರಗುವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕರಗುವ ಮಂಜುಗಡ್ಡೆ ಚೂರುಗಳು ದ್ರವಣದ ಪ್ರಕ್ರಿಯೆಯನ್ನು ಚಿತ್ರಿಸುತ್ತವೆ.

ಕರಗುವಿಕೆ, ಅಥವಾ ದ್ರವಣವು ಒಂದು ವಸ್ತುವು ಘನದಿಂದ ದ್ರವದ ಅವಸ್ಥೆಗೆ ಪರಿವರ್ತನೆಯಾಗುವ ಭೌತಿಕ ಪ್ರಕ್ರಿಯೆ. ಸಾಮಾನ್ಯವಾಗಿ ಶಾಖ ಅಥವಾ ಒತ್ತಡದ ಅನ್ವಯದಿಂದ ಘನದ ಆಂತರಿಕ ಶಕ್ತಿಯು ಹೆಚ್ಚಾದಾಗ, ವಸ್ತುವಿನ ಉಷ್ಣಾಂಶವು ಕರಗುವ ತಾಪಮಾನಕ್ಕೆ ಏರಿ ಇದು ಉಂಟಾಗುತ್ತದೆ. ಕರಗುವ ತಾಪಮಾನದ ಸ್ಥಿತಿಯಲ್ಲಿ, ಘನದಲ್ಲಿನ ಅಯಾನುಗಳು ಮತ್ತು ಅಣುಗಳ ವ್ಯವಸ್ಥೆಯು ಕಡಿಮೆ ವ್ಯವಸ್ಥೆಯ ಸ್ಥಿತಿಗೆ ವಿಘಟಿಸುತ್ತದೆ, ಮತ್ತು ಘನವಸ್ತುವು ಕರಗಿ ದ್ರವವಾಗುತ್ತದೆ.

ಕರಗಿದ ಸ್ಥಿತಿಯಲ್ಲಿನ ವಸ್ತುಗಳು ತಾಪಮಾನ ಏರಿದಂತೆ ಸಾಮಾನ್ಯವಾಗಿ ಕಡಿಮೆ ಸ್ನಿಗ್ಧತೆಯನ್ನು ಹೊಂದಿರುತ್ತವೆ. ಈ ತತ್ತ್ವಕ್ಕೆ ಅಪವಾದವೆಂದರೆ ಮೂಲಧಾತುವಾದ ಗಂಧಕ. ೧೬೦ ರಿಂದ ೧೮೦ °C ವ್ಯಾಪ್ತಿಯಲ್ಲಿ ಪಾಲಿಮರೀಕರಣದ ಕಾರಣದಿಂದ ಇದರ ಸ್ನಿಗ್ಧತೆಯು ಹೆಚ್ಚಾಗುತ್ತದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Sofekun, Gabriel O.; Evoy, Erin; Lesage, Kevin L.; Chou, Nancy; Marriott, Robert A. (2018). "The rheology of liquid elemental sulfur across the λ-transition". Journal of Rheology. Society of Rheology. 62 (2): 469–476. doi:10.1122/1.5001523. ISSN 0148-6055.