ವಿಷಯಕ್ಕೆ ಹೋಗು

ಒತ್ತಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಒಂದು ಮುಚ್ಚಿದ ಧಾರಕದೊಳಗೆ ಕಣಗಳ ಘರ್ಷಣೆಗಳಿಂದ ವಿನಿಯೋಗಿಸಲ್ಪಟ್ಟ ಒತ್ತಡ

ಒತ್ತಡ(ಚಿಹ್ನೆp or P) ಎಂದರೆ ಒಂದು ವಸ್ತುವಿನ ಮೇಲ್ಮೈಗೆ ಲಂಬವಾಗಿ ವಿಸ್ತೀರ್ಣದ (ಈ ವಿಸ್ತೀರ್ಣದ ಮೇಲೆ ಬಲವು ಹಂಚಿಕೆಯಾಗಿರುತ್ತದೆ.[]: 445 ಪ್ರತಿ ಏಕಮಾನದಲ್ಲಿ ಪ್ರಯೋಗಿಸಲಾದ ಬಲ. ಮಾಪಕದ ಒತ್ತಡವೆಂದರೆ ಪರಿವೇಷ್ಟಕ ಒತ್ತಡಕ್ಕೆ ಸಾಪೇಕ್ಷವಾಗಿರುವ ಒತ್ತಡ. ಪ್ಯಾಸ್ಕಲ್ ಒತ್ತಡದ ಎಸ್ಐ ಏಕಮಾನವಾಗಿದೆ. ಒತ್ತಡವು ಒಂದು ಅದಿಶ ಪರಿಮಾಣವಾಗಿದೆ.

ಒತ್ತಡವನ್ನು ಸಾಮಾನ್ಯವಾಗಿ ಒಂದು ಒತ್ತಡಮಾಪಕದಲ್ಲಿನ ದ್ರವದ ಪಂಕ್ತಿಯನ್ನು ಸ್ಥಳಾಂತರಿಸುವ ಅದರ ಸಾಮರ್ಥ್ಯದಿಂದ ಅಳೆಯಲಾಗುವುದರಿಂದ, ಒತ್ತಡಗಳನ್ನು ಹಲವುವೇಳೆ ಒಂದು ನಿರ್ದಿಷ್ಟ ದ್ರವದ ಆಳವಾಗಿ ವ್ಯಕ್ತಪಡಿಸಲಾಗುತ್ತದೆ (ಉದಾ. ನೀರಿನ ಇಷ್ಟು ಸೆಂಟಿಮೀಟರ್‌ಗಳು, ಪಾದರಸದ ಇಷ್ಟು ಮಿಲಿಮೀಟರ್‌ಗಳು ಅಥವಾ ಪಾದರಸದ ಇಷ್ಟು ಅಂಗುಲಗಳು). ಅತ್ಯಂತ ಸಾಮಾನ್ಯ ಆಯ್ಕೆಗಳೆಂದರೆ ಪಾದರಸ ಮತ್ತು ನೀರು; ನೀರು ವಿಷಯುಕ್ತವಾಗಿಲ್ಲ ಮತ್ತು ಸುಲಭವಾಗಿ ಲಭ್ಯವಾಗಿದ್ದರೆ, ಪಾದರಸದ ಸಾಂದ್ರತೆಯು ಹೆಚ್ಚಿರುವುದರಿಂದ ಒಂದು ನಿರ್ದಿಷ್ಟ ಒತ್ತಡವನ್ನು ಅಳೆಯಲು ಹೆಚ್ಚು ಗಿಡ್ಡನೆಯ ಪಂಕ್ತಿಯನ್ನು ಬಳಸುವುದನ್ನು ಸಾಧ್ಯವಾಗಿಸುತ್ತದೆ. ವಿಶ್ವದ ಬಹುತೇಕ ಭಾಗದಲ್ಲಿ ರಕ್ತದೊತ್ತಡವನ್ನು ಪಾದರಸದ ಮಿಲಿಮೀಟರ್‌ಗಳಲ್ಲಿ ಅಳೆಯಲಾಗುತ್ತದೆ, ಮತ್ತು ಶ್ವಾಸಕೋಶದ ಒತ್ತಡಗಳನ್ನು ನೀರಿನ ಸೆಂಟಿಮೀಟರ್‌ಗಳಲ್ಲಿ ಅಳೆಯುವುದು ಈಗಲೂ ಸಾಮಾನ್ಯವಾಗಿದೆ.

ಬದಲಾಗುವ ಒತ್ತಡಗಳ ಒಂದು ಉದಾಹರಣೆಯೆಂದರೆ, ಒಂದು ಬೆರಳನ್ನು ಗೋಡೆಗೆ ಯಾವುದೇ ಶಾಶ್ವತ ಪ್ರಭಾವ ಮಾಡದೇ ಒತ್ತಬಹುದು; ಆದರೆ, ಅದೇ ಬೆರಳು ರೇಖನ ಸೂಜಿಯನ್ನು ಒತ್ತಿದರೆ ಗೋಡೆಯನ್ನು ಸುಲಭವಾಗಿ ಹಾನಿಗೊಳಿಸಬಹುದು. ಮೇಲ್ಮೈ ಮೇಲೆ ಪ್ರಯೋಗಿಸಲಾದ ಬಲವು ಸಮಾನವಾಗಿದ್ದರೂ, ರೇಖನ ಸೂಜಿಯು ಹೆಚ್ಚು ಒತ್ತಡವನ್ನು ಪ್ರಯೋಗಿಸುತ್ತದೆ ಏಕೆಂದರೆ ಬಿಂದುವು ಆ ಬಲವನ್ನು ಹೆಚ್ಚು ಚಿಕ್ಕ ಪ್ರದೇಶದಲ್ಲಿ ಕೇಂದ್ರೀಕರಿಸುತ್ತದೆ. ಒತ್ತಡವು ಘನ ಗಡಿರೇಖೆಗಳಿಗೆ ಅಥವಾ ದ್ರವದ ಕ್ರಮವಿಲ್ಲದ ವಿಭಾಗಗಳ ಉದ್ದಕ್ಕೆ ಪ್ರತಿ ಬಿಂದುವಿನಲ್ಲಿ ಈ ಗಡಿರೇಖೆಗಳಿಗೆ ಅಥವಾ ವಿಭಾಗಗಳಿಗೆ ಲಂಬವಾಗಿ ಪ್ರಸಾರಗೊಳ್ಳುತ್ತದೆ. ಒತ್ತರದಿಂದ ಭಿನ್ನವಾಗಿ, ಒತ್ತಡವನ್ನು ಒಂದು ಅದಿಶ ಪರಿಣಾಮವಾಗಿ ವ್ಯಾಖ್ಯಾನಿಸಲಾಗುತ್ತದೆ. ಒತ್ತಡದ ಋಣಾತ್ಮಕ ಪ್ರವಣತೆಯನ್ನು ಬಲ ಸಾಂದ್ರತೆ ಎಂದು ಕರೆಯಲಾಗುತ್ತದೆ.

ಮತ್ತೊಂದು ಉದಾಹರಣೆಯೆಂದರೆ ಒಂದು ಚಾಕೂ. ಚಪ್ಪಟೆಯಾದ ಪಾರ್ಶ್ವದಿಂದ ಒಂದು ಹಣ್ಣನ್ನು ಕತ್ತರಿಸಲು ಪ್ರಯತ್ನಿಸಿದರೆ, ಬಲವು ದೊಡ್ಡ ವಿಸ್ತೀರ್ಣದ ಉದ್ದಕ್ಕೆ ಹರಡಿರುತ್ತದೆ, ಮತ್ತು ಅದು ಕತ್ತರಿಸುವುದಿಲ್ಲ. ಆದರೆ ಅಂಚನ್ನು ಬಳಸಿದರೆ, ಅದು ಸಲೀಸಾಗಿ ಕತ್ತರಿಸುತ್ತದೆ. ಕಾರಣವೇನೆಂದರೆ ಚಪ್ಪಟೆಯಾದ ಪಾರ್ಶ್ವವು ಹೆಚ್ಚು ದೊಡ್ಡ ಮೇಲ್ಮೈ ಪ್ರದೇಶವನ್ನು ಹೊಂದಿರುತ್ತದೆ (ಕಡಿಮೆ ಒತ್ತಡ), ಮತ್ತು ಹಾಗಾಗಿ ಅದು ಹಣ್ಣನ್ನು ಕತ್ತರಿಸುವುದಿಲ್ಲ. ತೆಳು ಪಾರ್ಶ್ವವನ್ನು ತೆಗೆದುಕೊಂಡಾಗ, ಮೇಲ್ಮೈ ಪ್ರದೇಶವು ಕಡಿಮೆಯಾಗಿರುತ್ತದೆ, ಮತ್ತು ಹಾಗಾಗಿ ಅದು ಹಣ್ಣನ್ನು ಸುಲಭವಾಗಿ ಮತ್ತು ಬೇಗನೇ ಕತ್ತರಿಸುತ್ತದೆ. ಇದು ಒತ್ತಡದ ಪ್ರಾಯೋಗಿಕ ಅನ್ವಯದ ಒಂದು ಉದಾಹರಣೆಯಾಗಿದೆ.



ಉಲ್ಲೇಖಗಳು

[ಬದಲಾಯಿಸಿ]
  1. Knight, PhD, Randall D. (2007). "Fluid Mechanics". Physics for Scientists and Engineers: A Strategic Approach (google books) (in ಅಮೆರಿಕನ್ ಇಂಗ್ಲಿಷ್) (2nd ed.). San Francisco: Pearson Addison Wesley. p. 1183. ISBN 978-0-321-51671-8. Retrieved 6 April 2020. Pressure itself is not a Force, even though we sometimes talk "informally" about the "force exerted by the pressure. The correct statement is that the Fluid exerts a force on a surface. In addition, Pressure is a scalar, not a vector.


"https://kn.wikipedia.org/w/index.php?title=ಒತ್ತಡ&oldid=1249790" ಇಂದ ಪಡೆಯಲ್ಪಟ್ಟಿದೆ