ವಿಷಯಕ್ಕೆ ಹೋಗು

ಕಂಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನ್ಯೂಯಾರ್ಕ್ ನಗರದ ಮೆಟ್ರೊಪೊಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿರುವ ಭಾರತದ ನಟರಾಜನ ಕಂಚಿನ ಚೋಳ ಪ್ರತಿಮೆ

ಕಂಚು ಒಂದು ಮಿಶ್ರ ಲೋಹವಾಗಿದೆ. ಇದು ಮೂಲತಃ ತಾಮ್ರವನ್ನು ಹೊಂದಿದ್ದು, ಇದಕ್ಕೆ ತವರವನ್ನು ಮುಖ್ಯ ಘಟಕವಾಗಿ ಸೇರಿಸಲಾಗುತ್ತದೆ. ಆದರೆ ಕೆಲವೊಮ್ಮೆ ಫಾಸ್ಫರಸ್‌(ರಂಜಕ), ಮ್ಯಾಂಗನೀಸ್‌, ಅಲ್ಯೂಮಿನಿಯಂ ಅಥವಾ ಸಿಲಿಕಾನ್ ಮೊದಲಾದ ಇತರ ಲೋಹಗಳನ್ನೂ ಸೇರಿಸಲಾಗುತ್ತದೆ. ಇದು ಗಟ್ಟಿಯಾಗಿದ್ದು, ಸುಲಭವಾಗಿ ಒಡೆಯುವುದಿಲ್ಲ. ಈ ಲೋಹವು ಪ್ರಾಚೀನತೆಯಲ್ಲಿ ಎಷ್ಟೊಂದು ವಿಶೇಷತೆಯನ್ನು ಹೊಂದಿದೆಯೆಂದರೆ ಇದನ್ನು ಉಲ್ಲೇಖಿಸಿ ಕಂಚಿನ ಯುಗವನ್ನು ಹೆಸರಿಸಲಾಗಿದೆ. "ಕಂಚು" ಎಂಬುದು ಸ್ವಲ್ಪ ನಿಖರವಲ್ಲದ ಪದವಾಗಿರುವುದರಿಂದ ಮತ್ತು ಐತಿಹಾಸಿಕ ವಸ್ತುಗಳು ವ್ಯತ್ಯಾಸಗೊಳ್ಳುವ ಸಂಯೋಜನೆಗಳನ್ನು ಹೊಂದಿರುವುದರಿಂದ, ವಿಶೇಷವಾಗಿ ಹಿತ್ತಾಳೆಯೊಂದಿಗಿನ ಅಸ್ಪಷ್ಟ ಮಿತಿಯೊಂದಿಗೆ, ಹಳೆಯ ವಸ್ತುಗಳ ಆಧುನಿಕ ಮ್ಯೂಸಿಯಂ ಮತ್ತು ಪಾಂಡಿತ್ಯಪೂರ್ಣ ವಿವರಗಳು ಹೆಚ್ಚಾಗಿ "ತಾಮ್ರದ ಮಿಶ್ರಲೋಹ" ಎಂಬ ಪದವನ್ನು ಬಳಸುತ್ತವೆ.[]

ಕಂಚು ಪದವು ಇಟಾಲಿಯನ್:bronzo ಮತ್ತು German: [brunst] Error: {{Lang}}: text has italic markup (help)ಗೆ ಸಜಾತೀಯ ಪದವಾಗಿದೆ. ಬಹುಶಃ ಇದನ್ನು ಪರ್ಷಿಯನ್ ಪದ ಬಿರಿಂಜ್ ‌ನಿಂದ ("ಕಂಚು") ಅಥವಾ ಬ್ರಿಂದಿಸಿ ನಗರದ (ಏಸ್ ಬ್ರುಂದುಸಿನಮ್ -ಪ್ಲಿನಿ) ಲ್ಯಾಟಿನ್ ಹೆಸರಿನಿಂದ ಪಡೆದಿರಬಹುದು.[]

ಇತಿಹಾಸ

[ಬದಲಾಯಿಸಿ]
ಡ್ರ್ಯಾಗನ್ ಚಿತ್ರ ಬಿಡಿಸಿರುವ ಚೀನಾದ ಪು ಪಾತ್ರೆ, ವಸಂತಕಾಲ ಮತ್ತು ಶರತ್ಕಾಲ (ಕ್ರಿ.ಪೂ. 722-ಕ್ರಿ.ಪೂ. 481)

ಕಂಚಿನ ಆವಿಷ್ಕಾರವು ಜನರಿಗೆ ಹಿಂದಿಗಿಂತ ಉತ್ತಮವಾದ ಲೋಹದ ವಸ್ತುಗಳನ್ನು ತಯಾರಿಸಲು ಅನುವು ಮಾಡಿಕೊಟ್ಟಿತು. ಕಂಚಿನಿಂದ ತಯಾರಿಸಿದ ಸಲಕರಣೆಗಳು, ಆಯುಧಗಳು, ಯುದ್ಧ ಕವಚಗಳು ಮತ್ತು ಆಲಂಕಾರಿಕ ಹಾಸು ಬಿಲ್ಲೆ(ಟೈಲ್ಸ್)ಗಳಂತಹ ವಿವಿಧ ಕಟ್ಟಡ ಸಾಮಗ್ರಿಗಳು ಹಿಂದಿನ ಕಲ್ಲು ಮತ್ತು ತಾಮ್ರದ ("ಚಾಲ್ಕೊಲಿಥಿಕ್") ಸಾಮಗ್ರಿಗಳಿಗಿಂತ ಗಟ್ಟಿಯಾಗಿರುತ್ತವೆ ಮತ್ತು ಹೆಚ್ಚು ಬಾಳಿಕೆ ಬರುತ್ತವೆ. ಆರಂಭದಲ್ಲಿ ಕಂಚನ್ನು ತಾಮ್ರ ಮತ್ತು ಆರ್ಸನಿಕ್‌ನಿಂದ ತಯಾರಿಸಿ ಆರ್ಸೆನಿಕ್ ಕಂಚು ಉತ್ಪಾದನೆ ಮಾಡಲಾಗುತ್ತಿತ್ತು. ನಂತರ ತವರವನ್ನು ಬಳಸಲಾಯಿತು, ಇದು ಕ್ರಿ.ಪೂ. 3ನೇ ಸಹಸ್ರಮಾನದ ಉತ್ತರಾರ್ಧದಲ್ಲಿ ಏಕೈಕ ಪ್ರಕಾರದ ಕಂಚಾಯಿತು. ತವರ ಕಂಚು ಆರ್ಸೆನಿಕ್ ಕಂಚಿಗಿಂತ ಉತ್ತಮವಾಗಿದೆ. ಇದರಲ್ಲಿ ಲೋಹಗಳನ್ನು ಮಿಶ್ರಮಾಡುವ ಕ್ರಿಯೆಯನ್ನು ಹೆಚ್ಚು ಸುಲಭವಾಗಿ ನಿಯಂತ್ರಿಸಬಹುದು (ತವರವು ಲೋಹದ ರೂಪದಲ್ಲಿ ಲಭ್ಯವಿರುವುದರಿಂದ) ಹಾಗೂ ಈ ಮಿಶ್ರ ಲೋಹವು ಹೆಚ್ಚು ದೃಢವಾಗಿರುತ್ತದೆ ಮತ್ತು ಕ್ಯಾಸ್ಟ್(ಬೇಕಾದ ರೂಪ ಕೊಡುವುದು) ಮಾಡಲು ಸುಲಭವಾಗಿರುತ್ತದೆ. ಅಲ್ಲದೆ, ಆರ್ಸೆನಿಕ್‌ನಂತೆ ತವರವು ವಿಷಕಾರಿಯಲ್ಲ.

ಆರಂಭಿಕ ತವರ-ಮಿಶ್ರ-ಲೋಹ ಕಂಚುಗಳು ಕ್ರಿ.ಪೂ. 4ನೇ ಸಹಸ್ರಮಾನದಷ್ಟು ಹಿಂದಿನದಾಗಿದ್ದು, ಇವು ಸೂಸ (ಇರಾನ್) ಮತ್ತು ಕೆಲವು ಪುರಾತನ ಪ್ರದೇಶಗಳಾದ ಲುರಿಸ್ತಾನ್ (ಇರಾನ್) ಮತ್ತು ಮೆಸಪೊಟಮಿಯ (ಇರಾಕ್)ದಲ್ಲಿ ಲಭ್ಯವಾಗಿವೆ.

ತಾಮ್ರ ಮತ್ತು ತವರದ ಅದಿರುಗಳು ಜೊತೆಯಾಗಿ ವಿರಳವಾಗಿ ಕಂಡುಬರುತ್ತವೆ (ಇದಕ್ಕೆ ಹೊರತಾದ ಸ್ಥಳಗಳಲ್ಲಿ ಥೈಲ್ಯಾಂಡ್ನ ಪ್ರಾಚೀನ ಸ್ಥಳ ಮತ್ತು ಇರಾನ್‌ನಲ್ಲಿನ ಒಂದು ಸ್ಥಳ ಸೇರಿದೆ). ಆದ್ದರಿಂದ ಗಂಭೀರ ಕಂಚಿನ ಕೆಲಸವು ಹೆಚ್ಚಾಗಿ ವ್ಯಾಪಾರವನ್ನು ಒಳಗೊಂಡಿರುತ್ತದೆ. ಯುರೋಪಿನ ತವರದ ಪ್ರಮುಖ ಮೂಲವೆಂದರೆ ಕಾರ್ನ್‌ವಾಲ್‌‌ನಲ್ಲಿರುವ ಗ್ರೇಟ್ ಬ್ರಿಟನ್‌ನ ಅದಿರಿನ ನಿಕ್ಷೇಪಗಳು. ಇವನ್ನು ಪೂರ್ವ ಮೆಡಿಟರೇನಿಯನ್‌ನ ಫೊಯನೀಶಿಯಾದವರೆಗೂ ವ್ಯಾಪಾರ ಮಾಡಲಾಗುತ್ತಿತ್ತು.

60–258[] vs. 30–80[] ನಷ್ಟು ವಿಕರ್ಸ್ ಕಠಿಣತೆಯನ್ನು ಹೊಂದಿರುವ ಕಂಚು ಸಾಮಾನ್ಯವಾಗಿ ಮೆದು ಕಬ್ಬಿಣಕ್ಕಿಂತ ಗಟ್ಟಿಯಾದರೂ, ಕಂಚಿನ ಯುಗವು ಕಬ್ಬಿಣದ ಯುಗಕ್ಕೆ ದಾರಿ ಮಾಡಿಕೊಟ್ಟಿದೆ; ಇದಕ್ಕೆ ಕಾರಣವೆಂದರೆ ಕಬ್ಬಿಣವನ್ನು ಸುಲಭದಲ್ಲಿ ಕಂಡುಹಿಡಿಯಲಾಯಿತು. ಕಬ್ಬಿಣದ ಯುಗದಲ್ಲಿ ಕಂಚನ್ನು ಮತ್ತೆಯೂ ಬಳಸಲಾಯಿತು. ಆದರೆ ಅನೇಕ ಉದ್ದೇಶಗಳಿಗೆ ದುರ್ಬಲ ಮೆದು ಕಬ್ಬಿಣವು ಸಾಕಷ್ಟು ಗಟ್ಟಿಯಾದುದೆಂದು ಕಂಡುಬಂತು. ಪುರಾತತ್ತ್ವಶಾಸ್ತ್ರಜ್ಞರು ತವರದ ವ್ಯಾಪಾರದ ಗಂಭೀರ ಅಡೆತಡೆಗಳಿಂದಾಗಿ ಪರಿವರ್ತನೆಗೆ ಕಾರಣವಾಯಿತೆಂದು ಶಂಕಿಸಿದ್ದಾರೆ. ಸುಮಾರು ಕ್ರಿ.ಪೂ. 1200–1100ರ ಸಂದರ್ಭದ ಜನರ ವಲಸೆಯು ಮೆಡಿಟರೇನಿಯನ್‌ (ಮತ್ತು ಗ್ರೇಟ್ ಬ್ರಿಟನ್‌ನ) ಸುತ್ತಮುತ್ತಲಿನ ಪ್ರದೇಶದಿಂದ ಹಡಗಿನಲ್ಲಿ ತವರದ ಸಾಗಣೆಯನ್ನು ತಗ್ಗಿಸಿತು. ಇದು ಪೂರೈಕೆಗಳನ್ನು ಮಿತಿಗೊಳಿಸಿತು ಮತ್ತು ಬೆಲೆಗಳನ್ನು ಹೆಚ್ಚಿಸಿತು.[] ಕಬ್ಬಿಣದ ಕೆಲಸ ಸುಧಾರಿಸಿದ ನಂತರ ಕಬ್ಬಿಣವು ಅಗ್ಗವಾಯಿತು; ಮೆದು ಕಬ್ಬಿಣದಿಂದ ವಿವಿಧ ಆಕಾರಕೊಡುವ ಕಬ್ಬಿಣ(ಕುಲುಮೆ)ಅಭಿವೃದ್ಧಿಯಾಗಿದ್ದರಿಂದ ಜನರು ಕಂಚಿಗಿಂತ ಹೆಚ್ಚು ಗಟ್ಟಿಮುಟ್ಟಾದ ಮತ್ತು ಚೂಪಾದ ತುದಿಯನ್ನು ಹೆಚ್ಚು ಕಾಲ ಉಳಿಸಿಕೊಳ್ಳುವ ಉಕ್ಕನ್ನು ತಯಾರಿಸಲು ಕಲಿತರು.[]

ಅನೇಕ ವಿವಿಧ ಕಂಚು ಮಿಶ್ರಲೋಹಗಳಿವೆ. ಆದರೆ ಆಧುನಿಕ ಕಂಚು ವಿಶಿಷ್ಟವಾಗಿ 88%ನಷ್ಟು ತಾಮ್ರ ಮತ್ತು 12%ನಷ್ಟು ತವರವನ್ನು ಹೊಂದಿದೆ.[] ಆಲ್ಫಾ ಕಂಚು ತಾಮ್ರದಲ್ಲಿ ತವರದ ಆಲ್ಫಾ ಪ್ರಬಲ ದ್ರಾವಣವನ್ನು ಹೊಂದಿದೆ. 4–5%ನಷ್ಟು ತವರದ ಆಲ್ಫಾ ಕಂಚು ಮಿಶ್ರಲೋಹಗಳನ್ನು ನಾಣ್ಯಗಳು, ಸ್ಪ್ರಿಂಗ್‌ಗಳು, ನೀರ್ಗಾಲಿಗಳು ಮತ್ತು ಬ್ಲೇಡ್‌ಗಳನ್ನು ತಯಾರಿಸಲು ಬಳಸಲಾಗುತ್ತದೆ. ಐತಿಹಾಸಿಕ "ಕಂಚು"ಗಳ ಸಂಯೋಜನೆಯು ಹೆಚ್ಚಾಗಿ ಬದಲಾಗುತ್ತದೆ, ಹೆಚ್ಚಿನ ಲೋಹದ ಕೆಲಸಗಾರರು ಕೈಗೆ ಸಿಗುವ ಲೋಹದ ಚೂರುಗಳನ್ನು ಬಹುಶಃ ಬಳಸಿರಬಹುದು; 12ನೇ ಶತಮಾನದ ಇಂಗ್ಲಿಷ್ ಗ್ಲೌಸೆಸ್ಟರ್ ಕ್ಯಾಂಡಲ್‌ಸ್ಟಿಕ್‌ ಕಂಚಿನದಾಗಿದೆ, ಇದು ತಾಮ್ರ, ಸತು, ತವರ, ಸೀಸ, ನಿಕಲ್, ಕಬ್ಬಿಣ, ಆಂಟಿಮನಿ, ಆರ್ಸೆನಿಕ್ ಮೊದಲಾವುಗಳ ಮಿಶ್ರಣವನ್ನು ಹೊಂದಿದೆ. ಈ ಮಿಶ್ರಣದಲ್ಲಿ ಅಸಾಮಾನ್ಯವಾಗಿ ಅತಿ ಹೆಚ್ಚಿನ ಪ್ರಮಾಣದ ಬೆಳ್ಳಿಯಿದೆ - ತಳದಲ್ಲಿ 22.5%ನಷ್ಟು ಮತ್ತು ಕ್ಯಾಂಡಲ್‌ನ ಕೆಳಗಿನ ತಟ್ಟೆಯಲ್ಲಿ 5.76%ನಷ್ಟು. ಈ ಮಿಶ್ರಣದ ಪ್ರಮಾಣಗಳು ಈ ಮೊಂಬತ್ತಿ ಕಂಬವು ಹಳೆಯ ನಾಣ್ಯಗಳ ಸಂಗ್ರಹದಿಂದ ರಚಿಸಲಾಗಿದೆಯೆಂದು ಸೂಚಿಸುತ್ತದೆ. ಬೆನಿನ್ ಕಂಚುಗಳು ವಾಸ್ತವವಾಗಿ ಹಿತ್ತಾಳೆಯದಾಗಿವೆ ಹಾಗೂ ಬೆಲ್ಜಿಯಂನ ಲೀಗ್‌ನಲ್ಲಿರುವ ಸೇಂಟ್ ಬಾರ್ತೊಲೊಮೆವ್‌ನ ರೋಮನೆಸ್ಕ್ ದೀಕ್ಷಾಸ್ನಾನದ ಪಾತ್ರೆಯು ಕಂಚು ಮತ್ತು ಹಿತ್ತಾಳೆಯದೆಂದು ಬಣ್ಣಿಸಲಾಗಿದೆ.

ವಾಣಿಜ್ಯ ಕಂಚು (90% ತಾಮ್ರ ಮತ್ತು 10% ಸತು) ಮತ್ತು ವಾಸ್ತುಶೈಲಿಯ ಕಂಚನ್ನು (57% ತಾಮ್ರ, 3% ಸೀಸ, 40% ಸತು) ಹೆಚ್ಚು ಸೂಕ್ತವಾಗಿ ಹಿತ್ತಾಳೆಯ ಮಿಶ್ರಲೋಹಗಳೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಅವು ಸತುವನ್ನು ಮುಖ್ಯ ಮಿಶ್ರಲೋಹದ ಅಂಶವಾಗಿ ಹೊಂದಿವೆ. ಅವನ್ನು ಸಾಮಾನ್ಯವಾಗಿ ವಾಸ್ತುಶೈಲಿಯ ಅನ್ವಯಗಳಲ್ಲಿ ಬಳಸಲಾಗುತ್ತದೆ.[][]

ಬಿಸ್ಮತ್‌ ಕಂಚು ಕಂಚಿನ ಮಿಶ್ರಲೋಹವಾಗಿದ್ದು, 52%ನಷ್ಟು ತಾಮ್ರ, 30%ನಷ್ಟು ನಿಕಲ್, 12%ನಷ್ಟು ಸತು, 5%ನಷ್ಟು ಸೀಸ, 1%ನಷ್ಟು ಬಿಸ್ಮತ್ ಮೊದಲಾದವನ್ನು ಹೊಂದಿದೆ. ಇದು ಉತ್ತಮ ಹೊಳಪನ್ನು ಹೊಂದುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದದ .[೧೦]

ಇತರ ಕಂಚಿನ ಮಿಶ್ರಲೋಹಗಳೆಂದರೆ ಅಲ್ಯೂಮಿನಿಯಂ ಕಂಚು, ಫಾಸ್ಫರ್ ಕಂಚು, ಮ್ಯಾಂಗನೀಸ್‌ ಕಂಚು, ಗಂಟೆಲೋಹ(ಬೆಲ್ ಮೆಟಲ್), ಸ್ಪೆಕ್ಯುಲಮ್ ಲೋಹ ಮತ್ತು ಸಿಂಬಲ್ ಮಿಶ್ರಲೋಹಗಳು.

ಗುಣಲಕ್ಷಣಗಳು

[ಬದಲಾಯಿಸಿ]
ಒಟ್ಟುಗೂಡಿಸಿದ ಪ್ರಾಚೀನ ಕಂಚಿನ ಅಚ್ಚುಗಳು

ಕಂಚು ಕಬ್ಬಿಣಕ್ಕಿಂತ ಕಡಿಮೆ ಕಠಿಣವಾಗಿರುತ್ತದೆ. ವಿಶಿಷ್ಟವಾಗಿ ಕಂಚು ಮಾತ್ರ ಆಕ್ಸಿಡೀಕರಣಗೊಳ್ಳುತ್ತದೆ; ತಾಮ್ರದ ಆಕ್ಸೈಡ್ (ಅಂತಿಮವಾಗಿ ತಾಮ್ರದ ಕಾರ್ಬೊನೇಟ್ ಆಗುತ್ತದೆ) ಪದರವು ರೂಪುಗೊಂಡರೆ ಕೆಳಗಿರುವ ಲೋಹವು ಮುಂದೆ ತುಕ್ಕು ಹಿಡಿಯದಂತೆ ರಕ್ಷಿಸಲ್ಪಡುತ್ತದೆ. ತಾಮ್ರದ ಕ್ಲೋರೈಡ್‌ಗಳು ರೂಪುಗೊಂಡರೆ, "ಕಂಚಿನ ರೋಗ" ಎಂಬ ಒಂದು ತುಕ್ಕಿನ-ಪ್ರಕಾರವು ಅದನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.[೧೧] ತಾಮ್ರ-ಆಧಾರಿತ ಮಿಶ್ರಲೋಹಗಳು ಉಕ್ಕು ಅಥವಾ ಕಬ್ಬಿಣಕ್ಕಿಂತ ಕಡಿಮೆ ಕರಗುವ ಬಿಂದುವನ್ನು ಹೊಂದಿರುತ್ತವೆ ಹಾಗೂ ಅವುಗಳನ್ನು ಅವುಗಳ ರಚನೆಗೆ ಬೇಕಾದ ಲೋಹಗಳಿಂದ ಹೆಚ್ಚು ಸುಲಭವಾಗಿ ತಯಾರಿಸಬಹುದು. ಅವು ಸಾಮಾನ್ಯವಾಗಿ ಉಕ್ಕಿಗಿಂತ ಸುಮಾರು 10 ಪ್ರತಿಶತದಷ್ಟು ಹೆಚ್ಚು ಭಾರವಾಗಿರುತ್ತವೆ. ಆದರೂ ಅಲ್ಯೂಮಿನಿಯಂ ಅಥವಾ ಸಿಲಿಕಾನ್ಅನ್ನು ಬಳಸುವ ಮಿಶ್ರಲೋಹಗಳು ಸ್ವಲ್ಪ ಕಡಿಮೆ ಭಾರವಾಗಿರುತ್ತವೆ. ಕಂಚುಗಳು ಉಕ್ಕು—ಕಂಚು ಸ್ಪ್ರಿಂಗುಗಳಿಗಿಂತ ಹೆಚ್ಚು ಮೃದುವಾಗಿರುತ್ತವೆ ಮತ್ತು ಗಟ್ಟಿಯಿರುವುದಿಲ್ಲ. ಉದಾಹರಣೆಗಾಗಿ, ಅವು ಕಡಿಮೆ ಬಿಗಿಯಾಗಿರುತ್ತವೆ (ಆದ್ದರಿಂದ ಕಡಿಮೆ ಶಕ್ತಿಯನ್ನು ಸಂಗ್ರಹಿಸುತ್ತವೆ). ಕಂಚು ಉಕ್ಕಿಗಿಂತ ಹೆಚ್ಚಾಗಿ ತುಕ್ಕು ಹಿಡಿಯುವುದನ್ನು (ವಿಶೇಷವಾಗಿ ಉಪ್ಪುನೀರಿನ ತುಕ್ಕು ಹಿಡಿಯುವಿಕೆ) ಮತ್ತು ಲೋಹದ ದೌರ್ಬಲ್ಯವನ್ನು ನಿರೋಧಿಸುತ್ತದೆ. ಅಲ್ಲದೆ ಇದು ಹೆಚ್ಚಿನ ಉಕ್ಕುಗಳಿಗಿಂತ ಉತ್ತಮ ಉಷ್ಣ ಮತ್ತು ವಿದ್ಯುತ್ ವಾಹಕವಾಗಿದೆ. ತಾಮ್ರ-ಆಧಾರಿತ ಮಿಶ್ರಲೋಹಗಳ ಬೆಲೆಯು ಸಾಮಾನ್ಯವಾಗಿ ಉಕ್ಕುಗಳಿಗಿಂತ ಹೆಚ್ಚಾಗಿರುತ್ತದೆ, ಆದರೆ ನಿಕಲ್-ಆಧಾರಿತ ಮಿಶ್ರಲೋಹಗಳಿಗಿಂತ ಕಡಿಮೆಯಾಗಿರುತ್ತದೆ.

ತಾಮ್ರ ಮತ್ತು ಅದರ ಮಿಶ್ರಲೋಹಗಳಿಂದ ಹಲವಾರು ಪ್ರಯೋಜನಗಳಿವೆ, ಅದು ಅವುಗಳ ಬಹುಕಾರ್ಯೋಪಯೋಗಿ ಭೌತಿಕ, ಯಾಂತ್ರಿಕ ಮತ್ತು ರಾಸಾಯನಿಕ ಗುಣಲಕ್ಷಣಗಳನ್ನು ಪ್ರತಿಬಿಂಬಿಸುತ್ತದೆ. ಕೆಲವು ಸಾಮಾನ್ಯ ಉದಾಹರಣೆಗಳೆಂದರೆ - ಶುದ್ಧ ತಾಮ್ರವು ಅತಿ ಹೆಚ್ಚು ವಿದ್ಯುತ್ ವಾಹಕತೆಯನ್ನು ಹೊಂದಿದೆ, ಕಾರ್ಟ್ರಿಜ್-ಮಾದರಿಯ ಹಿತ್ತಾಳೆಗೆ ಅತ್ಯುತ್ತಮ ಸ್ಪಷ್ಟವಾಗಿ ಚಿತ್ರ ಬಿಡಿಸುವ ಗುಣಲಕ್ಷಣಗಳಿವೆ, ತಡೆದುಕೊಳ್ಳುವ ಕಂಚು ಕಡಿಮೆ-ಘರ್ಷಣೆಯ ಗುಣಲಕ್ಷಣಗಳನ್ನು ಹೊಂದಿದೆ, ಬೆಲ್ ಕಂಚು ಉತ್ತಮ ಪ್ರತಿಧ್ವನಿಸುವ ಗುಣಲಕ್ಷಣಗಳನ್ನು ಹೊಂದಿದೆ ಮತ್ತು ಅನೇಕ ಕಂಚಿನ ಮಿಶ್ರಲೋಹಗಳು ಉಪ್ಪು ನೀರಿಗೆ ತುಕ್ಕು ಹಿಡಿಯುವುದನ್ನು ನಿರೋಧಿಸುತ್ತವೆ.

ಕಂಚಿನ ಕರಗುವ ಬಿಂದು ಮಿಶ್ರಲೋಹದ ಘಟಕಗಳ ನಿಜವಾದ ಅನುಪಾತದ ಆಧಾರದಲ್ಲಿ ಬದಲಾಗುತ್ತದೆ ಹಾಗೂ ಇದು ಸುಮಾರು 950 & nbsp;°C ಆಗಿದೆ.

ಉಪಯೋಗಗಳು

[ಬದಲಾಯಿಸಿ]
7ನೇ ಶತಮಾನದ ಇರಾನ್‌ನ ಈವರ್(ದೊಡ್ಡ ಬಾಯುಳ್ಳ ನೀರಿನ ಕೂಜ)ಎರಕ ಹೊಯ್ದು, ಕೆತ್ತಿ ಕೂಡಿಸಿದ ಕಂಚು. ನ್ಯೂಯಾರ್ಕ್ ಮೆಟ್ರೊಪೊಲಿಟನ್ ಮ್ಯೂಸಿಯಂ ಆಫ್ ಆರ್ಟ್

ಕಂಚು ವಿಶೇಷವಾಗಿ ದೋಣಿ ಮತ್ತು ಹಡಗುಗಳ ಸಲಕರಣೆಗಳಲ್ಲಿ ಬಳಸಲು ಸೂಕ್ತವಾಗಿತ್ತು. ನಂತರ ಉಪ್ಪು ನೀರಿಗೆ ತುಕ್ಕು ಹಿಡಿಯುವುದನ್ನು ನಿರೋಧಿಸುವುದರಿಂದ ಮತ್ತು ಕಠಿಣತೆಯನ್ನು ಹೊಂದಿರುವುದರಿಂದ ಸ್ಟೈನ್‌ಲೆಸ್ ಉಕ್ಕನ್ನು ವ್ಯಾಪಕವಾಗಿ ಬಳಸಲಾಯಿತು. ಕಂಚನ್ನು ಈಗಲೂ ಹಡಗಿನ ಪ್ರೊಪೆಲ್ಲರ್ ಮತ್ತು ನೀರಿನಲ್ಲಿ ಮುಳುಗುವ ಬೇರಿಂಗುಗಳಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಇಪ್ಪತ್ತನೇ ಶತಮಾನದಲ್ಲಿ, ಸಿಲಿಕಾನ್ಅನ್ನು ಮಿಶ್ರ ಮಾಡುವ ಪ್ರಾಥಮಿಕ ಲೋಹವಾಗಿ ಬಳಸಲಾಯಿತು. ಇದರಿಂದ ಕೈಗಾರಿಕೆಯಲ್ಲಿ ವ್ಯಾಪಕ ಪ್ರಯೋಜನವಿರುವ ಮಿಶ್ರಲೋಹವೊಂದನ್ನು ತಯಾರಿಸಲಾಯಿತು. ಅದರ ಪ್ರಮುಖ ಪ್ರಕಾರವನ್ನು ಆ ಕಾಲದ ಪ್ರತಿಮೆಗಳಲ್ಲಿ ಉಪಯೋಗಿಸಲಾಯಿತು. ಅಲ್ಯೂಮಿನಿಯಂನ್ನು ರಚನಾತ್ಮಕ ಲೋಹ ಅಲ್ಯೂಮಿನಿಯಂ ಕಂಚಿನ ತಯಾರಿಕೆಯಲ್ಲಿ ಬಳಸಲಾಗುತ್ತದೆ.

ಇದನ್ನು ವ್ಯಾಪಕವಾಗಿ ಕಂಚಿನ ಶಿಲ್ಪಗಳನ್ನು ತಯಾರಿಸಲೂ ಉಪಯೋಗಿಸಲಾಗುತ್ತದೆ. ಹೆಚ್ಚಿನ ಸಾಮಾನ್ಯ ಕಂಚಿನ ಮಿಶ್ರಲೋಹಗಳು ಅಸಾಧಾರಣ ಮತ್ತು ತುಂಬಾ ಉಪಯುಕ್ತವಾದ ಸರಿಹೊಂದುವುದಕ್ಕಿಂತ ಸ್ವಲ್ಪ ಮೊದಲು ಉಬ್ಬುವ ಗುಣಲಕ್ಷಣವನ್ನು ಹೊಂದಿರುತ್ತವೆ. ಆ ಮೂಲಕ ಅವು ಎರಕದ ಅಚ್ಚಿನ ಸೂಕ್ಷ್ಮ ಸ್ಥಳಾವಕಾಶಗಳಲ್ಲಿ ತುಂಬಿಕೊಳ್ಳುತ್ತವೆ. ಕಂಚಿನ ಭಾಗಗಳು ಗಟ್ಟಿಯಾಗಿರುತ್ತವೆ ಮತ್ತು ಅವನ್ನು ವಿಶಿಷ್ಟವಾಗಿ ಬೇರಿಂಗುಗಳು, ಕ್ಲಿಪ್‌ಗಳು, ವಿದ್ಯುತ್ತಿನ ಸಂಯೋಜಕಗಳು ಮತ್ತು ಸ್ಪ್ರಿಂಗುಗಳಲ್ಲಿ ಬಳಸಲಾಗುತ್ತದೆ.

ಸ್ಪ್ರಿಂಗ್ ಕಂಚು ಮಳೆ ಅಥವಾ ಗಾಳಿ ತಡೆಯು ತೆಳ್ಳಗಿನ ತಗಡುಗಳ ಸುರುಳಿಗಳಲ್ಲಿ ಕಂಡುಬರುತ್ತವೆ. ಅವನ್ನು ಮರದ ಕಿಟಕಿಗಳು ಮತ್ತು ಬಾಗಿಲುಗಳಿಗೆ ಮೊಳೆಹೊಡೆದು ಭದ್ರಪಡಿಸಲಾಗುತ್ತದೆ ಅಥವಾ ತಂತಿ ಕೊಂಡಿಗಳಿಂದ ಜೋಡಿಸಲಾಗುತ್ತದೆ. ಅವುಗಳಲ್ಲಿ ಎರಡು ವಿಧಗಳಿವೆ, ಚಪ್ಪಟೆ ಮತ್ತು v-ಪಟ್ಟಿ. ಅದನ್ನು ನೂರಾರು ವರ್ಷಗಳ ಕಾಲ ಬಳಸಬಹುದು ಏಕೆಂದರೆ ಅದು ಕಡಿಮೆ ಘರ್ಷಣೆಯನ್ನು ಹೊಂದಿರುತ್ತದೆ, ಉತ್ತಮ ರೀತಿಯಲ್ಲಿ ಭದ್ರವಾಗುತ್ತದೆ ಮತ್ತು ದೀರ್ಘ ಕಾಲ ಉಳಿಯುತ್ತದೆ. ಇದನ್ನು ಕಟ್ಟಡ ರಚನೆ ಮತ್ತು ಸುಂಕದ ಕಟ್ಟೆಯ ನಿರ್ಮಾಣದಲ್ಲಿ ಬಳಸಲಾಗುತ್ತದೆ.

ಕಂಚು ಕಡಿಮೆ ಲೋಹ-ಲೋಹದ ಘರ್ಷಣೆಯನ್ನು ಹೊಂದಿದೆ. ಆದ್ದರಿಂದ ಇದನ್ನು ಬಾಂಬುತೋಪಿನಲ್ಲಿ ಬಳಸಲಾಗುವುದಿಲ್ಲ ಏಕೆಂದರೆ ಇದು ನಳಿಕೆಯಲ್ಲಿ ಕಬ್ಬಿಣದ ಕ್ಯಾನನ್‌ಬಾಲ್‌ಗಳು ಅಂಟಿಕೊಳ್ಳುವಂತೆ ಮಾಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇದನ್ನು ಈಗಲೂ ಸಹ ವ್ಯಾಪಕವಾಗಿ ಸ್ಪ್ರಿಂಗುಗಳು, ಬೇರಿಂಗುಗಳು, ಬುಷಿಂಗ್, ಮೋಟಾರು ಗಾಡಿಗಳನ್ನು ಸಾಗಿಸುವ ಪೈಲಟ್ ಬೇರಿಂಗುಗಳು ಮತ್ತು ಅಂತಹ ಇತರ ಸಲಕರಣೆಗಳಲ್ಲಿ ಹಾಗೂ ವಿಶೇಷವಾಗಿ ಸಣ್ಣ ವಿದ್ಯುತ್ ಮೋಟಾರುಗಳ ಬೇರಿಂಗುಗಳಲ್ಲಿ ಬಳಸಲಾಗುತ್ತದೆ. ಫಾಸ್ಫರ್ ಕಂಚು ವಿಶೇಷವಾಗಿ ನಿಷ್ಕೃಷ್ಟ-ದರ್ಜೆಯ ಬೇರಿಂಗುಗಳು ಮತ್ತು ಸ್ಪ್ರಿಂಗುಗಳಲ್ಲಿ ಸೂಕ್ತವಾಗಿರುತ್ತದೆ. ಇದನ್ನು ಗಿಟಾರ್ ಮತ್ತು ಪಿಯಾನೋ ತಂತಿಗಳಲ್ಲೂ ಬಳಸಲಾಗುತ್ತದೆ.

ಉಕ್ಕಿಗೆ ವಿರುದ್ಧವಾಗಿ, ಕಂಚು ಗಟ್ಟಿ ಮೇಲ್ಮೆಗೆ ತಾಗಿದಾಗ ಬೆಂಕಿಯನ್ನು ಉಂಟುಮಾಡುವುದಿಲ್ಲ. ಆದ್ದರಿಂದ ಇದನ್ನು (ಬೆರಿಲಿಯಮ್ ಕಾಪರ್ ಒಂದಿಗೆ) ಸುತ್ತಿಗೆ, ಕೊಡತಿ, ತಿರುಚುಳಿ(ರೆಂಚ್) ಮತ್ತು ಸ್ಫೋಟಕ ಪರಿಸರದಲ್ಲಿ ಅಥವಾ ಉರಿ ಹೊತ್ತಿಕೊಳ್ಳುವ ಹೊಗೆಯಲ್ಲಿ ಬಳಸಲಾಗುವ ಹೆಚ್ಚು ಬಾಳಿಕೆ ಬರುವ ಇತರ ಸಲಕರಣೆಗಳಲ್ಲಿ ಉಪಯೋಗಿಸಲಾಗುತ್ತದೆ.

ಕಂಚಿನ ಪ್ರತಿಮೆಗಳು

[ಬದಲಾಯಿಸಿ]

ತಮಿಳುನಾಡಿನ ಚೋಳರ ಅವಧಿಯ ಭಾರತೀಯ ಹಿಂದು ಕುಶಲಕರ್ಮಿಗಳು ಮೇಣದಚ್ಚಿನ ಎರಕದಿಂದ ತಯಾರಿಸುವ ವಿಧಾನದ ಮೂಲಕ ಹಿಂದು ದೇವರನ್ನು ಚಿತ್ರಿಸುವ ಅಲಂಕಾರಮಯ ಕ್ಲಿಷ್ಟ ಪ್ರತಿಮೆಗಳನ್ನು ಮಾತ್ರವಲ್ಲದೆ ಆ ಅವಧಿಯ ಜೀವನಶೈಲಿಯನ್ನು ರಚಿಸಲು ಕಂಚನ್ನು ಬಳಸಿದರು. ಈ ಕಲೆಯು ಅನೇಕ ಶಿಲ್ಪಿಗಳು ಮತ್ತು ಕುಶಲಕರ್ಮಿಗಳು ಸ್ವಾಮಿಮಲೈ ಮತ್ತು ಚೆನ್ನೈ ಮೊದಲಾದ ಪ್ರದೇಶಗಳಲ್ಲಿ ಕೆಲಸ ಮಾಡುವುದರೊಂದಿಗೆ ಇಂದಿಗೂ ಉಳಿದುಕೊಂಡಿದೆ.

ಪ್ರಾಚೀನ ಕಾಲದಲ್ಲಿ ಇತರ ಸಂಸ್ಕೃತಿಗಳೂ ಸಹ ಕಂಚನ್ನು ಬಳಸಿಕೊಂಡು ಅತ್ಯುತ್ತಮ ಕಲಾಕೃತಿಗಳನ್ನು ರಚಿಸಿವೆ. ಉದಾಹರಣೆಗಾಗಿ: ಆಫ್ರಿಕಾದಲ್ಲಿ, ಬೆನಿನ್ ಸಾಮ್ರಾಜ್ಯದ ಕಂಚಿನ ಶಿರಗಳು; ಯುರೋಪಿನಲ್ಲಿ, ವಿಶಿಷ್ಟವಾಗಿ ಗ್ರೀಕ್ ಪುರಾಣದ ವ್ಯಕ್ತಿಗಳ ಗ್ರೆಶಿಯನ್ ಕಂಚುಗಳು; ಪೂರ್ವ ಏಷ್ಯಾದಲ್ಲಿ, ಶಾಂಗ್ ಮತ್ತು ಜೌ ರಾಜವಂಶದ ಚೀನಾದ ಕಂಚುಗಳು - ಹೆಚ್ಚಾಗಿ ಶುಭ ಕಾರ್ಯಗಳ ಪಾತ್ರೆಗಳು, ಅಲ್ಲದೆ ಕೆಲವು ಸಣ್ಣ ಪ್ರತಿಮೆಗಳನ್ನೂ ಒಳಗೊಂಡಿವೆ.

ಕಂಚು ಸ್ಮಾರಕ ಶಿಲ್ಪಗಳ ತಯಾರಿಕೆಯಲ್ಲಿ ಬಳಸುವ ಒಂದು ಲೋಹವಾಗಿ ಆಧುನಿಕ ಕಾಲದಲ್ಲೂ ಮುಂದುವರಿದಿದೆ.

ಸಂಗೀತದ ಉಪಕರಣಗಳು

[ಬದಲಾಯಿಸಿ]

ಕಂಚು ಉತ್ತಮ-ಗುಣಮಟ್ಟದ ಗಂಟೆಗಳಿಗೆ ಹೆಚ್ಚು ಪ್ರಸಿದ್ಧ ಲೋಹವಾಗಿದೆ, ನಿರ್ದಿಷ್ಟವಾಗಿ ಗಂಟೆಲೋಹ, ಇದು ಸುಮಾರು 23%ನಷ್ಟು ತವರವನ್ನು ಹೊಂದಿದೆ.

ಹೆಚ್ಚುಕಡಿಮೆ ಎಲ್ಲಾ ವೃತ್ತಿಪರ ತಾಳ(ಸಿಂಬಲ್)‌ಗಳನ್ನು ಕಂಚಿನ ಮಿಶ್ರಲೋಹದಿಂದ ಮಾಡಲಾಗುತ್ತದೆ. ಡ್ರಮ್ ಕಿಟ್ ಸಿಂಬಲ್ ಕಂಚಿನಲ್ಲಿ ಬಳಸುವ ಮಿಶ್ರಲೋಹವು ಬಾಳಿಕೆ ಮತ್ತು ಧ್ವನಿರೂಪದ ಅಪೇಕ್ಷಿತ ನಿಯಂತ್ರಣಕ್ಕೆ ಅನನ್ಯವಾಗಿದೆ.

ಆಧುನಿಕ ತಾಳಗಳು ಅನೇಕ ಪ್ರಕಾರದ ಕಂಚನ್ನು ಹೊಂದಿರುತ್ತವೆ. ಅವುಗಳಲ್ಲಿ ಹೆಚ್ಚು ಸಾಮಾನ್ಯವಾದುದೆಂದರೆ B20 ಕಂಚು , ಇದು 20%ನಷ್ಟು ತವರ, 80%ನಷ್ಟು ತಾಮ್ರ ಮತ್ತು ಸ್ವಲ್ಪ ಬೆಳ್ಳಿಯನ್ನು ಹೊಂದಿದೆ. ಜಿಲ್ಡ್‌ಜಿಯನ್ ಮತ್ತು ಸೇಬಿಯನ್ ಈ ಮಿಶ್ರಲೋಹವನ್ನು ಅವುಗಳ ವೃತ್ತಿಪರ ತಯಾರಿಕೆಗಳಿಗೆ ಬಳಸುತ್ತದೆ. ಸ್ವಿಸ್ ಕಂಪನಿ ಪೈಸ್ಟೆಯು 8%ನಷ್ಟು ತವರ ಮತ್ತು 92%ನಷ್ಟು ತಾಮ್ರದಿಂದ ಮಾಡಲ್ಪಟ್ಟ ಮೃದು B8 ಕಂಚನ್ನು ಅದರ ಹೆಚ್ಚುಕಡಿಮೆ ಎಲ್ಲಾ ತಾಳಗಳಲ್ಲಿ ಬಳಸುತ್ತದೆ. ಜಿಲ್ಡ್‌ಜಿಯನ್ ಮತ್ತು ಸೇಬಿಯನ್ ಸಹ ಅವುಗಳ ಬಜೆಟ್ ಬೆಲೆಯ ತಾಳಗಳಲ್ಲಿ ಈ ಲೋಹವನ್ನು ಬಳಸುತ್ತವೆ.

ಗಂಟೆ ಅಥವಾ ತಾಳದಲ್ಲಿ ತವರದ ಪ್ರಮಾಣವು ಹೆಚ್ಚಾದರೆ, ನಾದಗುಣವು ಕ್ಷೀಣಿಸುತ್ತದೆ.[೧೨] ಅಲ್ಲದೆ B8 ಮತ್ತು B20, ಮೈನ್ಲ್ ಪರ್ಕ್ಯೂಶನ್ ತಾಳಗಳಿಗೆ B10 (10% ತವರ) ಮತ್ತು B12 (12% ತವರ) ಮಿಶ್ರಲೋಹಗಳನ್ನು ಬಳಸುತ್ತದೆ, ಇವು ಸುಮಾರು B8ರಿಂದ B20ರವರೆಗಿನ ನಾದಗುಣಗಳನ್ನು ಹೊಂದಿರುತ್ತವೆ.[೧೩]

ದ್ವಿಮಂದ್ರವಾದ್ಯ, ಪಿಯಾನೋ, ಹಾರ್ಪ್ಸಿಕಾರ್ಡ್ ಮತ್ತು ಗಿಟಾರ್ ಮೊದಲಾದ ವಿವಿಧ ತಂತಿ ವಾದ್ಯಗಳ ಉಕ್ಕಿನ ತಂತಿಗಳ ಸುರುಳಿಗಳಿಗೆ ಹಿಂದಿನ ಹುರಿ ಮತ್ತು ನೈಲಾನ್ ತಂತಿಗಳ ಬದಲಿಗೆ ಕಂಚನ್ನು ಬಳಸಲಾಗುತ್ತದೆ. ಪಿಯಾನೋದಲ್ಲಿ ಕೆಳ ಸ್ತರದ ಧ್ವನಿಗಾಗಿ ಕಂಚಿನ ತಂತಿಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ಏಕೆಂದರೆ ಅವು ಅಧಿಕ-ಕರ್ಷಕದ ಉಕ್ಕಿಗೆ ಹೋಲಿಸಿದರೆ ಹೆಚ್ಚು ತಡೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತವೆ.[೧೪]

ವಿವಿಧ ಲೋಹ ವಿಜ್ಞಾನದ ಗುಣಲಕ್ಷಣಗಳನ್ನು ಹೊಂದಿರುವ ಕಂಚುಗಳನ್ನು ಪ್ರಪಂಚದಾದ್ಯಂತ ವ್ಯಾಪಕವಾಗಿ ಸ್ಟ್ರಕ್ ಐಡಿಯೊಫೋನ್‌ಗಳಲ್ಲಿ, ಗಮನಾರ್ಹವಾಗಿ ಆಗ್ನೇಯ ಏಷ್ಯಾದಲ್ಲಿ, ಹಾಗೂ ಹೆಚ್ಚು ಪ್ರಸಿದ್ಧವಾಗಿ ಜಾವನೀಸ್ ಗ್ಯಾಮಲಾನ್ ಮತ್ತು ಇತರ ಗ್ಲಾಕನ್‌ಸ್ಪೀಲ್-ರೀತಿಯ ಸಂಗೀತ ಉಪಕರಣಗಳಲ್ಲಿ ಬಳಸಲಾಗುತ್ತದೆ. ಇಂಡೋನೇಷಿಯಾದ ಆರಂಭಿಕ ಕಂಚಿನ ಪುರಾತನ ಆವಿಷ್ಕಾರಗಳು 1–2 BCEನಷ್ಟು ಹಿಂದಿನದಾಗಿವೆ. ಅಂದಿನ ಚಪ್ಪಟೆ ತಟ್ಟೆಗಳನ್ನು ಬಹುಶಃ ಮರದ ಅಥವಾ ಮೂಳೆಯ ಕೊಡತಿಗಳಿಂದ ಬಡಿದು ಮಾಡಿರಬಹುದು.[೧೪][೧೫]

ಕೆಲವು ಕಂಪನಿಗಳು ಈಗ ಸ್ಯಾಕ್ಸೋಫೋನ್‌ಗಳನ್ನು ಫಾಸ್ಫರ್ ಕಂಚಿನಿಂದ (3.5ರಿಂದ 10%ನಷ್ಟು ತವರ ಮತ್ತು ಸುಮಾರು 1%ನಷ್ಟು ಫಾಸ್ಫರಸ್‌ ಅಂಶ) ಮಾಡುತ್ತಿವೆ.

ಪದಕಗಳು

[ಬದಲಾಯಿಸಿ]

ಕಂಚನ್ನು ವಿವಿಧ ರೀತಿಯ ಪದಕಗಳ ತಯಾರಿಕೆಯಲ್ಲಿ ಹಲವಾರು ಶತಮಾನಗಳಿಂದ ಬಳಸಲಾಗುತ್ತಿದೆ. ಅವನ್ನು ಆಧುನಿಕ ಕಾಲದಲ್ಲಿ ಕ್ರೀಡಾ ಸ್ಪರ್ಧೆಗಳಲ್ಲಿ ಮತ್ತು ಇತರ ಕಾರ್ಯಕ್ರಮಗಳಲ್ಲಿ ಎರಡನೇ ಸ್ಥಾನ ಗಳಿಸುವ ಸ್ಪರ್ಧಿಗೆ ನೀಡಲಾಗುತ್ತಿದೆ. ಬಂಗಾರ, ಬೆಳ್ಳಿ ಮತ್ತು ಕಂಚನ್ನು ಗ್ರೀಕ್ ಪುರಾಣದಲ್ಲಿ ಮನುಷ್ಯನ ಮೊದಲ ಮೂರು ಯುಗಗಳನ್ನು ಸೂಚಿಸಲು ಬಳಸಲಾಗಿದೆ: ಬಂಗಾರದ ಯುಗ, ಈ ಯುಗದಲ್ಲಿ ಮನುಷ್ಯನು ದೇವರೊಂದಿಗೆ ಜೀವಿಸುತ್ತಿದ್ದನು; ಬೆಳ್ಳಿಯ ಯುಗ, ಈ ಯುಗದಲ್ಲಿ ಯೌವನವು ನೂರು ವರ್ಷಗಳ ಕಾಲ ಇತ್ತು; ಮತ್ತು ಕಂಚಿನ ಯುಗ, ಹೀರೋಗಳ ಯುಗ. ಇದನ್ನು ಮೊದಲು 1904ರ ಬೇಸಿಗೆಯ ಒಲಿಂಪಿಕ್ಸ್‌ನಲ್ಲಿ ಅಳವಡಿಸಿಕೊಳ್ಳಲಾಯಿತು. 1896ರ ಸ್ಪರ್ಧೆಯಲ್ಲಿ ಬೆಳ್ಳಿಯನ್ನು ಜಯಶಾಲಿಗಳಿಗೆ ಮತ್ತು ಕಂಚನ್ನು ಎರಡನೇ ಸ್ಥಾನ ಗಳಿಸಿದವರಿಗೆ ನೀಡಲಾಯಿತು. 1900ರಲ್ಲಿ ಇತರ ಪ್ರಶಸ್ತಿಗಳನ್ನು ವಿತರಿಸಲಾಯಿತು, ಪದಕಗಳನ್ನು ನೀಡಲಿಲ್ಲ.

ಇವನ್ನೂ ಗಮನಿಸಿ

[ಬದಲಾಯಿಸಿ]
ಶಿಲ್ಪಿ ಜೆಸ್ಲಾ ಜ್ವಿಗಾಜ್ ರಚಿಸಿದ ಪೋಲೆಂಡ್‌ನ ಕ್ರ್ಯಾಕೊವ್‌ನ ವ್ಯಾವೆಲ್ ಕ್ಯಾಥೆಡ್ರಲ್‌ನ ಬಾರ್ಡ್ಸ್ ನೆಲಮಾಳಿಗೆಯಲ್ಲಿರುವ ಸಿಪ್ರಿಯನ್ ಕಮಿಲ್ ನಾರ್ವಿಜ್‌ನ ಸಮಾಧಿಯ ಅವಶೇಷ.
  • ತಾಮ್ರ ಮಿಶ್ರಲೋಹಗಳ ಪಟ್ಟಿ
  • ಕಲಾ ವಸ್ತು
  • ಕಂಚಿನ ಪದಕ
  • ಕಂಚಿನ ಶಿಲ್ಪ
  • ಕಂಚಿನಂತೆ ಮಾಡುವುದು
  • ಚೀನಾದ ಕಂಚಿನ ಕೆತ್ತನೆಗಳು
  • ಫ್ರೆಂಚ್ ಸಾಮ್ರಾಜ್ಯದ ಬೆಂಕಿಗೂಡಿನ ಚೌಕಟ್ಟು ಇರುವ ಗಡಿಯಾರ
  • ಸೀಗ್ರಾಮ್ ಕಟ್ಟಡ
  • DZR ಡೆಜಿಂಸಿಫಿಕೇಶನ್ ರೆಸಿಸ್ಟೆಂಟ್ ಬ್ರಾಸ್
  • UNS C69100

ಉಲ್ಲೇಖಗಳು

[ಬದಲಾಯಿಸಿ]
  1. ಬ್ರಿಟಿಷ್ ಮ್ಯೂಸಿಯಂ, "ಸ್ಕೋಪ್ ನೋಟ್" ಫಾರ್ "ಕಾಪರ್ ಅಲಾಯ್"
  2. ಬ್ರಾಂಜ್ - ಆನ್‌ಲೈನ್ ಎಟಿಮಲಾಜಿಕಲ್ ಡಿಕ್ಷನರಿ
  3. "ಪ್ರೀಶಿಯಸ್ ಮೆಟಲ್ಸ್: ಬ್ರಾಂಜ್ ಜ್ಯುವೆಲ್ಲರಿ". Archived from the original on 2010-08-15. Retrieved 2010-11-12.
  4. ಸ್ಮಿತೆಲ್ಸ್ ಮೆಟಲ್ಸ್ ರೆಫರೆನ್ಸ್ ಬುಕ್ , 8ನೇ ಆವೃತ್ತಿ, ಚ್ಯಾಪ್ಟರ್ 22
  5. "ಆರ್ಕೈವ್ ನಕಲು" (PDF). Archived from the original (PDF) on 2008-06-25. Retrieved 2010-11-12.
  6. "ಏನ್ಶಿಯೆಂಟ್ ಬ್ಲ್ಯಾಕ್‌ಸ್ಮಿತ್ಸ್, ದಿ ಐರನ್ ಏಜ್, ಡಮಸ್ಕಸ್ ಸ್ಟೀಲ್ಸ್ ಆಂಡ್ ಮಾಡರ್ನ್ ಮೆ" (PDF). Archived from the original (PDF) on 2007-06-26. Retrieved 2010-11-12.
  7. ಕ್ನ್ಯಾಪ್, ಬ್ರಿಯಾನ್. (1996) ಕಾಪರ್, ಸಿಲ್ವರ್ ಆಂಡ್ ಗೋಲ್ಡ್ . ರೀಡ್ ಲೈಬ್ರರಿ, ಆಸ್ಟ್ರೇಲಿಯಾ.
  8. "ಕಾಪರ್ ಅಲಾಯ್ಸ್". Archived from the original on 2013-09-11. Retrieved 2010-11-12.
  9. "CDA UNS ಸ್ಟ್ಯಾಂಡರ್ಡ್ ಡೆಸಿಗ್ನೇಶನ್ಸ್ ಫಾರ್ ವ್ರಾಟ್ ಆಂಡ್ ಕಾಸ್ಟ್ ಕಾಪರ್ ಆಂಡ್ ಕಾಪರ್ ಅಲಾಯ್ಸ್: ಇಂಟ್ರೊಡಕ್ಷನ್". Archived from the original on 2013-09-24. Retrieved 2010-11-12.
  10. "ಬಿಸ್ಮತ್ ಬ್ರಾಂಜ್". Archived from the original on 2015-03-16. Retrieved 2010-11-12.
  11. "ಬ್ರಾಂಜ್ ಡಿಸೀಸ್, ಅರ್ಕಿಯಲಾಜೀಸ್ ಆಫ್ ದಿ ಗ್ರೀಕ್ ಪಾಸ್ಟ್". Archived from the original on 2015-02-26. Retrieved 2010-11-12.
  12. Von Falkenhausen, Lothar (1993). Suspended Music: Chime-Bells in the Culture of Bronze Age China. Berkeley and Los Angeles: University of California Press. p. 106. ISBN 9780520073784.
  13. ಮೈನ್ಲ್ ಸಿಂಬಲ್ಸ್... ಇನ್ಸ್ಪೈರ್: 4 ಈಸ್ ಮೋರ್
  14. ೧೪.೦ ೧೪.೧ ಮ್ಯಾಕ್‌ಕ್ರೈಟ್, ಟಿಮ್. ಮೆಟಲ್ಸ್ ಟೆಕ್ನಿಕ್: ಎ ಕಲೆಕ್ಷನ್ ಆಫ್ ಟೆಕ್ನಿಕ್ಸ್ ಫಾರ್ ಮೆಟಲ್‌ಸ್ಮಿತ್ಸ್ . ಬ್ರಿನ್ಮೋರ್ಗನ್ ಪ್ರೆಸ್, 1992. ISBN 0-9615984-3-3
  15. ಲಾಪ್ಲಾಂಟ್ಜ್, ಡೇವಿಡ್. ಜ್ಯುವೆಲ್ಲರಿ - ಮೆಟಲ್‌ವರ್ಕ್ 1991 ಸರ್ವೆ: ವಿಜನ್ಸ್- ಕಾನ್ಸೆಪ್ಟ್ಸ್- ಕಮ್ಯುನಿಕೇಶನ್ಸ್ : S. ಲಾಪ್ಲಾಂಟ್ಜ್: 1991. ISBN 0-688-16894-9


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ಕಂಚು&oldid=1197236" ಇಂದ ಪಡೆಯಲ್ಪಟ್ಟಿದೆ