ಇರಾನ್
ವಿಕಿಪೀಡಿಯ ಇಂದ
ಇರಾನ್, (ಪರ್ಷಿಯನ್ ಭಾಷೆಯಲ್ಲಿ: ايران), ಅಧಿಕೃತವಾಗಿ ಇರಾನ್ ಇಸ್ಲಾಮಿ ಗಣರಾಜ್ಯ (ಪರ್ಷಿಯನ್‍ನಲ್ಲಿ: جمهوری اسلامی ايران - ಜೊಮ್ಹೂರಿ-ಯೆ ಎಸ್ಲಾಮಿ-ಯೆ ಇರಾನ್), ಮುಂಚೆ ಪರ್ಷಿಯ ಎಂದು ಕರೆಯಲ್ಪಡುತ್ತಿದ್ದ ಪಶ್ಚಿಮ ಏಷ್ಯಾ ದೇಶ. ಇದು ಪ್ರಪಂಚದ ೧೮ನೇ ದೊಡ್ಡ ರಾಷ್ಟ್ರವಾಗಿದ್ದು ಸುಮಾರು ೭೦ ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. ಉತ್ತರಕ್ಕೆ ಅರ್ಮೇನಿಯ, ಅಜರ್‍ಬೈಜಾನ್ ಮತ್ತು ತುರ್ಕ್‍ಮೇನಿಸ್ಥಾನ್, ಪೂರ್ವಕ್ಕೆ ಅಫ್ಘಾನಿಸ್ಥಾನ ಮತ್ತು ಪಾಕಿಸ್ಥಾನ, ಮತ್ತು ಪಶ್ಚಿಮಕ್ಕೆ ಟರ್ಕಿ ಮತ್ತು ಇರಾಕ್ಗಳೊಂದಿಗೆ ಸೀಮೆಯನ್ನು ಹೊಂದಿದೆ. ಅಲ್ಲದೆ ಪರ್ಷಿಯನ್ ಕೊಲ್ಲಿ ಮತ್ತು ಕ್ಯಾಸ್ಪಿಯನ್ ಸಮುದ್ರಗಳ ತಟಗಳನ್ನೂ ಹೊಂದಿದೆ. ಶಿಯ ಇಸ್ಲಾಮ್ ಇರಾನ್‍ನ ಅಧಿಕೃತ ಧರ್ಮ ಮತ್ತು ಪರ್ಷಿಯನ್ ಭಾಷೆ ಅಧಿಕೃತ ಭಾಷೆ.[೧][೨][೩][೪]
ಉಲ್ಲೇಖಗಳು[ಬದಲಾಯಿಸಿ]
- ↑ www.ashrafiu.ac.ir...index.aspx
- ↑ "Iran Country Profile". BBC NEWS. Retrieved 8 August 2012.
- ↑ ""CESWW" – Definition of Central Eurasia". Cesww.fas.harvard.edu. Retrieved 1 August 2010.
- ↑ "Iran Guide". National Geographic. 14 June 2013. Retrieved 21 June 2013.