ಮೆಸೊಪಟ್ಯಾಮಿಯಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೆಸೊಪಟ್ಯಾಮಿಯಾ ಎಂಬುದು (ಗ್ರೀಕ್‌ ಭಾಷೆಯ Μεσοποταμία "ನದಿಗಳ ನಡುವಿನ [ಭೂಮಿ]" ಎಂಬುದರಿಂದ ಬಂದದ್ದು, ಅರೇಬಿಕ್‌‌ ಭಾಷೆಯಲ್ಲಿ ಇದನ್ನು ....بلاد الرافدين bilād al-rāfidayn ಎಂಬುದಾಗಿ ತರ್ಜುಮೆ ಮಾಡಲಾಗುತ್ತದೆ)[೧], ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ಉದ್ದಕ್ಕೂ ಇರುವ ಟೈಗ್ರಿಸ್‌-ಯೂಫ್ರಟಿಸ್‌ ನದಿಗಳ ಜಾಲದ ಪ್ರದೇಶಕ್ಕಾಗಿರುವ ಒಂದು ಅನ್ವರ್ಥ ಸ್ಥಳನಾಮವಾಗಿದೆ. ಆಧುನಿಕ ಇರಾಕ್‌[೨] ಮಾತ್ರವೇ ಅಲ್ಲದೇ, ವಾಯವ್ಯ ಸಿರಿಯಾ[೨] ಕೆಲವು ಭಾಗಗಳು, ಆಗ್ನೇಯ ಟರ್ಕಿ[೨] ಕೆಲ ಭಾಗಗಳು ಮತ್ತು ನೈರುತ್ಯ ಇರಾನ್‌ಖೂಜೆಸ್ತಾನ್‌ ಪ್ರಾಂತ್ಯದ ಕೆಲವೊಂದು ಭಾಗಗಳಿಗೂ ಈ ಪ್ರದೇಶವು ವ್ಯಾಪಕ ದೃಷ್ಟಿಯಲ್ಲಿ ಸಂಬಂಧಪಟ್ಟಿದೆ.[೩][೪]


ನಾಗರಿಕತೆಯ ತೊಟ್ಟಿಲು ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟಿರುವ ಕಂಚಿನ ಯುಗದ ಮೆಸೊಪಟ್ಯಾಮಿಯಾದಲ್ಲಿ ಸುಮೇರು ಮತ್ತು ಅಕ್ಕೇಡಿಯನ್, ಬ್ಯಾಬಿಲೋನಿಯಾದ ಮತ್ತು ಅಸ್ಸೀರಿಯದ ಸಾಮ್ರಾಜ್ಯಗಳು ಸೇರಿಕೊಂಡಿದ್ದವು. ಕಬ್ಬಿಣದ ಯುಗದಲ್ಲಿ, ಇದು ನವ-ಅಸಿರಿಯಾದ ಮತ್ತು ನವ-ಬ್ಯಾಬಿಲೋನಿಯಾದ ಸಾಮ್ರಾಜ್ಯಗಳಿಂದ ಆಳಲ್ಪಟ್ಟಿತು. ಸುಮಾರು 3100 BCಯಲ್ಲಿನ ಬರಹ ರೂಪದ ಇತಿಹಾಸವು ಉದಯವಾದಂದಿನಿಂದ 539 BCಯಲ್ಲಿ ಬ್ಯಾಬಿಲೋನ್‌ನ ಅವನತಿಯಾಗುವವರೆಗೆ ಮೆಸೊಪಟ್ಯಾಮಿಯಾದ ಮೇಲೆ ಸ್ಥಳೀಯ ಸುಮೇರಿಯಾದ ಜನರು ಮತ್ತು ಅಕಾಡ್‌ನ ಜನರು (ಅಸಿರಿಯಾದ ಜನರು & ಬ್ಯಾಬಿಲೋನಿಯಾದ ಜನರನ್ನೂ ಒಳಗೊಂಡಂತೆ) ಪ್ರಾಬಲ್ಯವನ್ನು ಸಾಧಿಸಿದರು. ನಂತರ ಇದು ಅಕೀಮನೀಸ್‌ ರಾಜವಂಶದ ಸಾಮ್ರಾಜ್ಯದಿಂದ ಗೆಲ್ಲಲ್ಪಟ್ಟಿತು. 332 BCಯಲ್ಲಿ ಇದು ಅಲೆಕ್ಸಾಂಡರ್‌ ಮಹಾಶಯನ ತೆಕ್ಕೆಗೆ ಬಂದುಬಿದ್ದಿತು ಮತ್ತು ಅವನ ಮರಣದ ನಂತರ ಅದು ಗ್ರೀಕ್‌ ಸೆಲ್ಯುಸಿಡ್‌ ಸಾಮ್ರಾಜ್ಯದ ಒಂದು ಭಾಗವಾಯಿತು. ಸುಮಾರು 150 BCಯ ಹೊತ್ತಿಗೆ ಮೆಸೊಪಟ್ಯಾಮಿಯಾವು ಪಾರ್ತಿಯನ್ನರ ನಿಯಂತ್ರಣದ ಅಡಿಯಲ್ಲಿತ್ತು. ಮೆಸೊಪಟ್ಯಾಮಿಯಾದ ಕೆಲ ಭಾಗಗಳು (ನಿರ್ದಿಷ್ಟವಾಗಿ ಅಸಿರಿಯಾ) ರೋಮನ್ನರ ಆವರ್ತಕ ನಿಯಂತ್ರಣದ ಅಡಿಯಲ್ಲಿ ಬರುವುದರೊಂದಿಗೆ, ರೋಮನ್ನರು ಮತ್ತು ಪಾರ್ತಿಯನ್ನರ ನಡುವಿನ ಒಂದು ರಣಾಂಗಣವಾಗಿ ಮೆಸೊಪಟ್ಯಾಮಿಯಾವು ಮಾರ್ಪಟ್ಟಿತು. 226 ADಯಲ್ಲಿ ಇದು ಸಸಾನ್‌ ವಂಶದ ಪರ್ಷಿಯನ್ನರ ತೆಕ್ಕೆಗೆ ಸೇರಿಕೊಂಡಿತು, ಮತ್ತು

ಸಸಾನ್‌ ವಂಶದ ಸಾಮ್ರಾಜ್ಯದ 7ನೇ ಶತಮಾನದ ADಯಲ್ಲಿನ ಅರಬ್‌ ಇಸ್ಲಾಮಿನ ವಿಜಯವಾಗುವವರೆಗೆ ಇದು ಪರ್ಷಿಯನ್ನರ ಆಡಳಿತದ ಅಡಿಯಲ್ಲಿಯೇ ಉಳಿದುಕೊಂಡಿತು. ಅಡಿಯಾಬೀನ್‌, ಓಶ್ರೋಯೀನ್‌ ಮತ್ತು ಹಾಟ್ರಾ ಇವೇ ಮೊದಲಾದ, ಮೂಲಭೂತವಾಗಿ ಕ್ರೈಸ್ತ ಮೂಲದ್ದಾಗಿರುವ ಮೆಸೊಪಟ್ಯಾಮಿಯಾದ ಹಲವಾರು ಸಂಸ್ಥಾನಗಳು ಅಥವಾ ರಾಜ್ಯಗಳು 1ನೇ ಶತಮಾನದ BC ಮತ್ತು 3ನೇ ಶತಮಾನದ ADಯ ನಡುವಣ ಅಸ್ತಿತ್ವದಲ್ಲಿದ್ದವು.

ವ್ಯುತ್ಪತ್ತಿ[ಬದಲಾಯಿಸಿ]

ಪ್ರಾಂತೀಯ ಅನ್ವರ್ಥ ಸ್ಥಳನಾಮವಾದ ಮೆಸೊಪಟ್ಯಾಮಿಯಾವು ( < ಮೆಸೊ (μέσος) = ಮಧ್ಯ ಮತ್ತು ಪಟ್ಯಾಮಿಯಾ < ποταμός = ನದಿ, ಅಕ್ಷರಶಃ ಇದು "ಎರಡು ನದಿಗಳ ನಡುವೆ" ಎಂಬ ಅರ್ಥವನ್ನು ಕೊಡುತ್ತದೆ) ಯಾವುದೇ ನಿರ್ದಿಷ್ಟ ಎಲ್ಲೆಗಳು ಇಲ್ಲದೆಯೇ ಅಲೆಕ್ಸಾಂಡರನ ಕಾಲದ ನಂತರದ ಅವಧಿಯಲ್ಲಿ ಸೃಷ್ಟಿಸಲ್ಪಟ್ಟಿತು. ಒಂದು ವಿಶಾಲವಾದ ಭೌಗೋಳಿಕ ಪ್ರದೇಶವನ್ನು ಉಲ್ಲೇಖಿಸಲು ಸೃಷ್ಟಿಗೊಂಡ ಇದು, ಸೆಲ್ಯುಸಿಡ್‌ಗಳಿಂದ ಪ್ರಾಯಶಃ ಬಳಸಲ್ಪಟ್ಟಿತು. ಬಿರಿಟಮ್‌/ಬಿರಿಟ್‌ ನೇರಿಯಂ ಎಂಬ ಶಬ್ದವು ಇದೇ ರೀತಿಯ ಒಂದು ಭೌಗೋಳಿಕ ಪರಿಕಲ್ಪನೆಗೆ ಸಂಬಂಧಿಸಿತ್ತು ಮತ್ತು 10ನೇ ಶತಮಾನದ BCEಯ ಅವಧಿಯಲ್ಲಿನ ಈ ವಲಯವನ್ನು ಅರಮೇಯಿಕ್‌ ಸ್ವರೂಪಕ್ಕೆ ಬದಲಾಯಿಸುವ ಸಮಯದಲ್ಲಿ ಅದು ಸೃಷ್ಟಿಯಾಯಿತು.[೫] ಆದಾಗ್ಯೂ, ಸುಮೇರಿಯಾ ಭಾಷೆಯಲ್ಲಿ ಕಲಾಮ್‌ (ಅಕ್ಷರಶಃ ಅರ್ಥ "ನೆಲ") ಎಂದು ಉಲ್ಲೇಖಿಸಲ್ಪಡುವಂತೆ, ಸಮಗ್ರ ನೆರೆಮಣ್ಣಿನ ಭಾಗಕ್ಕೆ ಆರಂಭದ ಮೆಸೊಪಟ್ಯಾಮಿಯಾದ ಸಮಾಜಗಳು ಸರಳವಾಗಿ ಉಲ್ಲೇಖಿಸಿದವು ಎಂಬುದು ಇದೀಗ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟಿದೆ. ಸಮೀಪ ಪ್ರಾಚ್ಯ ಅಥವಾ ಮಧ್ಯಪ್ರಾಚ್ಯಕ್ಕೆ ಸಂಬಂಧಿಸಿದ ವ್ಯಾಪಕ ಭೌಗೋಳಿಕ ಪ್ರದೇಶಗಳನ್ನು ಉಲ್ಲೇಖಿಸಲು, ತೀರಾ ಇತ್ತೀಚೆಗೆ, "ಗ್ರೇಟರ್‌ ಮೆಸೊಪಟ್ಯಾಮಿಯಾ" ಅಥವಾ "ಸೈರೋ-ಮೆಸೊಪಟ್ಯಾಮಿಯಾ"ದಂಥ ಪದಗಳನ್ನು ಸ್ವೀಕರಿಸಲಾಗಿದೆ. ನಂತರದ ಸೌಮ್ಯೋಕ್ತಿಗಳು ಐರೋಪ್ಯ ಕೇಂದ್ರಿತ ಶಬ್ದಗಳಾಗಿದ್ದು, 19ನೇ ಶತಮಾನದ ಹಲವಾರು ಪಾಶ್ಚಾತ್ಯ ಅತಿಕ್ರಮಣಗಳ ಮಧ್ಯದಲ್ಲಿನ ವಲಯಕ್ಕೆ ಅವು ಸೇರಿವೆ.[೬]

ಇತಿಹಾಸ[ಬದಲಾಯಿಸಿ]

ಪ್ರಾಚೀನ ಮೆಸೊಪಟ್ಯಾಮಿಯಾದ ಸ್ಥೂಲಸಮೀಕ್ಷೆಯ ನಕ್ಷೆ

ಯುಬಾಯ್ಡ್‌ ಕಾಲದ ಅವಧಿಯಲ್ಲಿದ್ದ ನಗರ ಪ್ರದೇಶದ ಸಮಾಜಗಳ ಹೊರಹೊಮ್ಮುವಿಕೆಯೊಂದಿಗೆ ಪ್ರಾಚೀನ ಮೆಸೊಪಟ್ಯಾಮಿಯಾದ ಇತಿಹಾಸವು ಪ್ರಾರಂಭವಾಗುತ್ತದೆ. ಈ ಅವಧಿಯು ಸುಮಾರು 5300 BCEಗೆ ಸೇರಿತ್ತು. 6ನೇ ಶತಮಾನ BCEಯ ಅವಧಿಯಲ್ಲಿನ ಅಕೀಮನೀಸ್‌ ರಾಜವಂಶದ ಸಾಮ್ರಾಜ್ಯದ ಆಗಮನವಾಗುವುದರೊಂದಿಗೆ, ಅಥವಾ ಮೆಸೊಪಟ್ಯಾಮಿಯಾದ ಇಸ್ಲಾಮಿನ ವಿಜಯದ ಆಗಮನ ಮತ್ತು ಕಲೀಫನ ಅಧಿಕಾರದ ಸ್ಥಾಪನೆಯಾಗುವುದರೊಂದಿಗೆ ಪ್ರಾಚೀನ ಸಮೀಪ ಪ್ರಾಚ್ಯದ ಇತಿಹಾಸವು ಅಂತ್ಯಗೊಂಡಿತು ಎಂದು ಪರಿಗಣಿಸಲಾಗುತ್ತದೆ. ಕಲೀಫನ ಅಧಿಕಾರದ ಸ್ಥಾಪನೆಯ ಘಟ್ಟದಿಂದ ಈ ವಲಯವು ಇರಾಕ್‌ ಎಂದು ಹೆಸರಾಯಿತು.

ಈ ಸಂಪೂರ್ಣ ಐತಿಹಾಸಿಕ ಭೌಗೋಳಿಕ ವಿಷಯದ ("ಮಹಾನ್‌ ಸಂಪ್ರದಾಯ") ಒಂದು ಸಾಂಸ್ಕೃತಿಕ ಅವಿಚ್ಛಿನ್ನತೆ ಹಾಗೂ ಪ್ರಾದೇಶಿಕ ಪರಸ್ಪರ ಹೊಂದಾಣಿಕೆಯು ಜನೋಚಿತ ಶೈಲಿಯಲ್ಲಿ ಸ್ವೀಕರಿಸಲ್ಪಟ್ಟಿದೆಯಾದರೂ, ಆ ಸ್ವೀಕರಣವು ಸಮಸ್ಯಾತ್ಮಕವಾಗಿದೆ. ಅತೀವವಾಗಿ ಅಭಿವೃದ್ಧಿಗೊಂಡಿರುವ ಸಾಮಾಜಿಕ ಸಂಕೀರ್ಣತೆಯೊಂದಿಗಿನ ವಿಶ್ವದ ಅತ್ಯಂತ ಪ್ರಾಚೀನ ಸಂಸ್ಥಾನಗಳು ಅಥವಾ ರಾಜ್ಯಗಳ ಪೈಕಿ ಕೆಲವಕ್ಕೆ ಮೆಸೊಪಟ್ಯಾಮಿಯಾ ನೆಲೆಬೀಡಾಗಿದೆ. ಬರಹಗಾರಿಕೆಯು ಮೊಟ್ಟಮೊದಲಿಗೆ ಸೃಷ್ಟಿಸಲ್ಪಟ್ಟ ನದೀ ತೀರದ ನಾಗರಿಕತೆಗಳ ಪೈಕಿ ಇದೂ ಒಂದು ಎಂಬುದಾಗಿ ಈ ವಲಯವು ಪ್ರಖ್ಯಾತವಾಗಿತ್ತು. ಈಜಿಪ್ಟ್‌ನಲ್ಲಿನ ನೈಲ್‌ ಕಣಿವೆಯ ನಾಗರಿಕತೆ, ಭಾರತದ ಉಪಖಂಡದಲ್ಲಿನ ಇಂಡಸ್‌ ಕಣಿವೆಯ ನಾಗರಿಕತೆ ಮತ್ತು ಚೀನಾದಲ್ಲಿನ ಹಳದಿ ನದಿ ಕಣಿವೆ ನಾಗರಿಕತೆಗಳು ಇನ್ನುಳಿದ ಮೂರು ಬಗೆಗಳಾಗಿವೆ (ಆದರೂ, ಬರಹಗಾರಿಕೆಯು ಮಧ್ಯ-ಅಮೆರಿಕಾದಲ್ಲಿ ಸ್ವತಂತ್ರವಾಗಿ ಹುಟ್ಟಿಕೊಂಡಿತು ಎಂಬ ಅಭಿಪ್ರಾಯವೂ ಚಾಲ್ತಿಯಲ್ಲಿದೆ).

ಉರುಕ್‌, ನಿಪ್ಪುರ್‌, ನಿನೆವೆಹ್‌, ಮತ್ತು ಬ್ಯಾಬಿಲೋನ್‌‌ನಂಥ ಐತಿಹಾಸಿಕವಾಗಿ ಪ್ರಮುಖವಾಗಿರುವ ನಗರಗಳಿಗೆ ಮಾತ್ರವೇ ಅಲ್ಲದೇ, ಮಾ-ಅಸೆಬ್ಲು ನಗರ, ಅಕಾಡ್‌ನ ರಾಜ್ಯ, ಉರ್‌ನ ಮೂರನೇ ರಾಜವಂಶ, ಮತ್ತು ಅಸಿರಿಯಾದ ಸಾಮ್ರಾಜ್ಯದಂಥ ಪ್ರಮುಖ ಪ್ರಾದೇಶಿಕ ಸಂಸ್ಥಾನಗಳಿಗೂ ಮೆಸೊಪಟ್ಯಾಮಿಯಾವು ನೆಲೆಬೀಡಾಗಿತ್ತು. ಮೆಸೊಪಟ್ಯಾಮಿಯಾದ ಕೆಲವೊಂದು ಪ್ರಮುಖ ಐತಿಹಾಸಿಕ ನಾಯಕರಲ್ಲಿ ಉರ್‌-ಅಸ಼್ (ಉರ್‌ನ ರಾಜ), ಸಾರ್ಗೋನ್‌ (ಅಕಾಡ್‌ನ ರಾಜ್ಯವನ್ನು ಸ್ಥಾಪಿಸಿದವ), ಹಮ್ಮುರಾಬಿ (ಹಳೆಯ ಬ್ಯಾಬಿಲೋನಿಯಾದ ಸಂಸ್ಥಾನವನ್ನು ಸ್ಥಾಪಿಸಿದವ), ಮತ್ತು Iನೇ ಟಿಗ್ಲಾತ್‌-ಪೈಲ್ಸರ್‌ (ಅಸಿರಿಯಾದ ಸಾಮ್ರಾಜ್ಯವನ್ನು ಸ್ಥಾಪಿಸಿದವ) ಮೊದಲಾದವರು ಸೇರಿದ್ದಾರೆ.

"ಪ್ರಾಚೀನ ಮೆಸೊಪಟ್ಯಾಮಿಯಾ"ವು 6ನೇ ಸಹಸ್ರಮಾನದ BCಯ ಅಂತ್ಯದಲ್ಲಿ ಪ್ರಾರಂಭವಾಗುತ್ತದೆ, ಮತ್ತು 6ನೇ ಶತಮಾನದ BCEಯಲ್ಲಿನ ಅಕೀಮನೀಸ್‌ ವಂಶದ ಪರ್ಷಿಯನ್ನರ ಉಗಮದೊಂದಿಗೆ ಅಥವಾ 7ನೇ ಶತಮಾನದ CEನಲ್ಲಿನ ಇಸ್ಲಾಮಿನ ವಿಜಯದ ಪರ್ಷಿಯಾದ ಮೆಸೊಪಟ್ಯಾಮಿಯಾದೊಂದಿಗೆ ಅಂತ್ಯಗೊಳ್ಳುತ್ತದೆ. ಈ ಸುದೀರ್ಘಾವಧಿಯನ್ನು ಕೆಳಕಂಡಂತೆ ವಿಭಜಿಸಬಹುದು:

ಮೆಸೊಪಟ್ಯಾಮಿಯಾದ ಇತಿಹಾಸದಲ್ಲಿನ ಪ್ರವೃತ್ತಿಗಳು

ಎರಡನೇ ಮತ್ತು ಮೂರನೇ ಸಹಸ್ರಮಾನಗಳ BCEಗೆ ಸಂಬಂಧಿಸಿದಂತೆ ದಿನಾಂಕಗಳು ಅಂದಾಜಿನ ಆಧಾರದಲ್ಲಿವೆ; ಪ್ರಾಚೀನ ಸಮೀಪ ಪ್ರಾಚ್ಯದ ಕಾಲಗಣನೆಯನ್ನು ಹೋಲಿಸಿ ನೋಡಿ.

ಭೂಗೋಳಶಾಸ್ತ್ರ[ಬದಲಾಯಿಸಿ]

ಯೂಫ್ರಟಿಸ್‌ ಮತ್ತು ಟೈಗ್ರಿಸ್‌ ನದಿಗಳ ನಡುವಿನ ಭೂಮಿಯನ್ನು ಮೆಸೊಪಟ್ಯಾಮಿಯಾವು ಒಳಗೊಳ್ಳುತ್ತದೆ. ಈ ಎರಡೂ ನದಿಗಳು ಆಧುನಿಕ ಟರ್ಕಿಯಲ್ಲಿನ ಆರ್ಮೇನಿಯಾದ ಪರ್ವತಗಳಲ್ಲಿ ತಮ್ಮ ಮೂಲತೊರೆಗಳನ್ನು ಹೊಂದಿವೆ. ಎರಡೂ ನದಿಗಳಿಗೆ ಅನೇಕ ಉಪನದಿಗಳು ಬಂದು ಸೇರಿಕೊಳ್ಳುತ್ತವೆ, ಮತ್ತು ಸದರಿ ಸಮಗ್ರ ನದಿ ವ್ಯವಸ್ಥೆಯು ಒಂದು ವಿಶಾಲವಾದ ಪರ್ವತಮಯ ವಲಯದ ಮೂಲಕ ಹಾದುಹೋಗುತ್ತದೆ. ಮೆಸೊಪಟ್ಯಾಮಿಯಾದಲ್ಲಿನ ಭೂಮಾರ್ಗದ ದಾರಿಗಳು ವಾಡಿಕೆಯಂತೆ ಯೂಫ್ರಟಿಸ್‌ ನದಿಯನ್ನು ಅನುಸರಿಸುತ್ತವೆ. ಏಕೆಂದರೆ, ಟೈಗ್ರಿಸ್‌ ನದಿಯ ದಂಡೆಗಳು ಅಲ್ಲಲ್ಲಿ ಕಡಿದಾಗಿವೆ ಮತ್ತು ಸಾಗಲು ಕಷ್ಟಕರವಾಗಿವೆ. ಈ ವಲಯದ್ದು ಅರೆ-ಶುಷ್ಕ ಹವಾಮಾನವಾಗಿದ್ದು, ಉತ್ತರಭಾಗದಲ್ಲಿ ಒಂದು ವಿಶಾಲವಾದ ಮರುಭೂಮಿಯ ಹರಡಿಕೆಯು ಕಂಡುಬರುತ್ತದೆ. ಈ ಪ್ರದೇಶವು ಜೌಗುಭೂಮಿಗಳು, ಆವೃತ ಜಲಭಾಗಗಳು, ಮಣ್ಣುದಂಡೆಗಳನ್ನು ಒಳಗೊಂಡ ಸುಮಾರು 6,000 ಚದರ ಮೈಲಿಯ ವಲಯವಾಗಿದೆ, ಮತ್ತು ದಕ್ಷಿಣ ಭಾಗದಲ್ಲಿ ಜೊಂಡಿನ ಅಥವಾ ಲಾಳದಕಡ್ಡಿಯ ದಂಡೆಗಳನ್ನು ಹೊಂದಿದೆ. ಪರಮೋಚ್ಚ ದಕ್ಷಿಣದ ಭಾಗದಲ್ಲಿ ಯೂಫ್ರಟಿಸ್‌ ಮತ್ತು ಟೈಗ್ರಿಸ್‌ ನದಿಗಳು ಸಂಗಮವಾಗುತ್ತವೆ ಮತ್ತು ಪರ್ಷಿಯಾದ ಕೊಲ್ಲಿಯೊಳಗೆ ತಮ್ಮನ್ನು ಬರಿದುಮಾಡಿಕೊಳ್ಳುತ್ತವೆ.

ಮಳೆಯಿಂದ ಪೋಷಿಸಲ್ಪಟ್ಟ ವ್ಯವಸಾಯದ ಉತ್ತರಭಾಗದ ಪ್ರದೇಶಗಳಿಂದ ದಕ್ಷಿಣದ ಭಾಗದವರೆಗೆ ಶುಷ್ಕ ವಾತಾವರಣವು ಹಬ್ಬುತ್ತದೆ. ಈ ದಕ್ಷಿಣ ಭಾಗದಲ್ಲಿ, ಒಂದು ವೇಳೆ ಒಂದು ಹೆಚ್ಚುವರಿ ಪ್ರಮಾಣದಲ್ಲಿನ, ಹೂಡಿಕೆಯಾದ ಶಕ್ತಿಯ ಮೇಲೆ ಶಕ್ತಿಯು ಹಿಂದಿರುಗಿಸಲ್ಪಡುವ‌ (ಎನರ್ಜಿ ರಿಟರ್ನ್‌ಡ್‌ ಆನ್‌ ಎನರ್ಜಿ ಇನ್ವೆಸ್ಟೆಡ್-EROEI) ಸ್ಥಿತಿಯನ್ನು ಸಾಧಿಸಬೇಕೆಂದರೆ, ವ್ಯವಸಾಯದ ನೀರಾವರಿಯು ಅತ್ಯಗತ್ಯವಾಗಿದೆ. ಉನ್ನತವಾಗಿರುವ ಒಂದು ನೀರಜಾರು ಅಥವಾ ಜಲಸ್ತರದಿಂದ ಹಾಗೂ ಝಾಗ್ರೋಸ್‌ ಪರ್ವತಗಳ ಉನ್ನತ ಶಿಖರಗಳಿಂದ ಬರುವ ಕರಗಿದ ಹಿಮಸಂಗ್ರಹಗಳಿಂದ ಈ ನೀರಾವರಿಗೆ ಒತ್ತಾಸೆ ದೊರೆಯುತ್ತದೆ. ಅಷ್ಟೇ ಅಲ್ಲ, ಈ ವಲಯಕ್ಕೆ ತನ್ನ ಹೆಸರನ್ನು ನೀಡಿರುವ, ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ಮೂಲವಾಗಿರುವ ಆರ್ಮೇನಿಯಾದ ಪರ್ವತಶ್ರೇಣಿಗಳಿಂದ ಕೂಡಾ ಸದರಿ ನೀರಾವರಿಗೆ ನೆರವು ಸಿಗುತ್ತದೆ. ಕಾಲುವೆಗಳ ನಿರ್ಮಾಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಾಕಷ್ಟು ಸಂಖ್ಯೆಯ ಕಾರ್ಮಿಕರನ್ನು ಸನ್ನದ್ಧಗೊಳಿಸುವ ಸಾಮರ್ಥ್ಯದ ಮೇಲೆ ಸದರಿ ನೀರಾವರಿಯ ಪ್ರಯೋಜಕತೆಯು ಅವಲಂಬಿತವಾಗಿದೆ. ಆರಂಭಿಕ ಕಾಲದಿಂದಲೂ ಇದು ರಾಜಕೀಯ ಅಧಿಕಾರದ ವ್ಯಾಪ್ತಿಯ ನಗರ ಪ್ರದೇಶದ ವಸಾಹತುಗಳು ಹಾಗೂ ಕೇಂದ್ರೀಕರಿಸಲ್ಪಟ್ಟ ವ್ಯವಸ್ಥೆಗಳ ಅಭಿವೃದ್ಧಿ ಕಾರ್ಯಕ್ಕೆ ನೆರವಾಗಿದೆ. ಈ ವಲಯದಾದ್ಯಂತದ ವ್ಯವಸಾಯಕ್ಕೆ ಅಲೆಮಾರಿ ವಂಶದ ಹಳ್ಳಿಗಾಡಿನ ಲಕ್ಷಣವು ಪೂರಕವಾಗಿ ನಿಂತಿದ್ದು, ಗುಡಾರಗಳಲ್ಲಿ ವಾಸಿಸುವ ಅಲೆಮಾರಿಗಳು ಕುರಿಗಳು ಮತ್ತು ಮೇಕೆಗಳ ಮಂದೆಗಳನ್ನು (ಮತ್ತು ನಂತರದಲ್ಲಿ ಒಂಟೆಗಳನ್ನು) ನದಿಯ ಗೋಮಾಳದಲ್ಲಿ ಸಾಗಿಸುತ್ತಾರೆ. ಶುಷ್ಕ ಬೇಸಿಗೆ ಕಾಲದ ತಿಂಗಳುಗಳಲ್ಲಿ ನದಿಯ ಗೋಮಾಳಗಳಿಂದ ಹೊರಡುವ ಈ ಮಂದೆಗಳು, ತೇವವಾದ ಚಳಿಗಾಲದ ಋತುವಿನ ಹೊತ್ತಿಗೆ ಮರುಭೂಮಿಯ ಅಂಚಿನ ಮೇಲಿರುವ ಋತುಯೋಗ್ಯವಾದ ಅಥವಾ ಕಾಲೋಚಿತವಾದ ಮೇಯಿಸುವಿಕೆಯ ಹುಲ್ಲುಗಾವಲಿನ ಪಟ್ಟಿಯೊಳಗೆ ಸೇರಿಕೊಳ್ಳುತ್ತವೆ. ಸಾಮಾನ್ಯವಾಗಿ ಈ ಪ್ರದೇಶದಲ್ಲಿ ಕಟ್ಟಡದ ಕಲ್ಲು, ಅಮೂಲ್ಯವಾದ ಲೋಹಗಳು ಮತ್ತು ಮರದ ದಿಮ್ಮಿ ಮೊದಲಾದ ವಸ್ತುಗಳು ಕಾಣಬರುವುದಿಲ್ಲ. ಹೀಗಾಗಿ, ಹೊರವಲಯದ ಪ್ರದೇಶಗಳಿಂದ ಈ ವಸ್ತುಗಳನ್ನು ಪಡೆಯಲು ಕೃಷಿಯ ಉತ್ಪನ್ನಗಳ ಸುದೀರ್ಘ ಅಂತರದ ವ್ಯಾಪಾರವನ್ನು ಇದು ಐತಿಹಾಸಿಕವಾಗಿ ನೆಚ್ಚಿಕೊಂಡಿದೆ. ದೇಶದ ದಕ್ಷಿಣ ಭಾಗದಲ್ಲಿರುವ ಜೌಗುಭೂಮಿಗಳಲ್ಲಿ, ಇತಿಹಾಸಪೂರ್ವ ಕಾಲದಿಂದಲೂ ಒಂದು ಸಂಕೀರ್ಣವಾದ ಜಲವಾಹಿತ ಅಥವಾ ನೀರುಸಾಗಣೆಯ ಮೀನುಗಾರಿಕಾ ಸಂಸ್ಕೃತಿಯು ಅಸ್ತಿತ್ವದಲ್ಲಿದ್ದು, ಇದು ಇಲ್ಲಿನ ಸಾಂಸ್ಕೃತಿಕ ಸಮ್ಮಿಶ್ರಣಕ್ಕೆ ಒಂದು ಸೇರ್ಪಡೆಯಾಗಿದೆ.

ಇಲ್ಲಿನ ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಹಲವಾರು ಕಾರಣಗಳಿಗಾಗಿ ಆವರ್ತಕ ಕುಸಿತಗಳು ಸಂಭವಿಸಿವೆ. ಕಾರ್ಮಿಕ ವರ್ಗಕ್ಕಾಗಿರುವ ಬೇಡಿಕೆಗಳು ಕಾಲದಿಂದ ಕಾಲಕ್ಕೆ ಜನಸಂಖ್ಯೆಯ ಹೆಚ್ಚಳಕ್ಕೆ ಕಾರಣವಾಗಿದ್ದು, ಅದು ಪರಿಸರ ವಿಜ್ಞಾನಕ್ಕೆ ಸಂಬಂಧಿಸಿದ ಹೊತ್ತೊಯ್ಯುವ ಸಾಮರ್ಥ್ಯದ ಮಿತಿಗಳನ್ನು ತಳ್ಳಿದೆ, ಮತ್ತು ಹವಾಮಾನದ ಅಸ್ಥಿರತೆಯ ಒಂದು ಅವಧಿಯು ಸಂಭವಿಸಿದರೆ, ಕೇಂದ್ರ ಸರ್ಕಾರದ ಕುಸಿಯುವಿಕೆ ಮತ್ತು ಜನಸಂಖ್ಯೆಗಳಲ್ಲಿನ ಕುಸಿತವು ಉಂಟಾಗಲು ಸಾಧ್ಯವಿದೆ. ಇದಕ್ಕೆ ಪರ್ಯಾಯವಾಗಿ, ಗಡಿಬದಿಯ ಬೆಟ್ಟದ ಬುಡಕಟ್ಟು ಜನರು ಅಥವಾ ಅಲೆಮಾರಿ ಕುರಿಸಾಕುವವರಿಂದ ಕಂಡುಬರುವ ಅತಿಕ್ರಮಣಕ್ಕೆ ಸೇನೆಯ ವತಿಯಿಂದ ಆದ ಘಾಸಿಗೊಳಿಸುವಿಕೆಯು ವ್ಯಾಪಾರದ ಅವನತಿಯ ಅವಧಿಗಳಿಗೆ ಮತ್ತು ನೀರಾವರಿ ವ್ಯವಸ್ಥೆಗಳ ಕುರಿತಾದ ಉಪೇಕ್ಷೆಗಳಿಗೆ ಕಾರಣವಾಗಿವೆ. ಇದಕ್ಕೆ ಸರಿಸಮವಾಗಿ, ನಗರ ಸಂಸ್ಥಾನಗಳ ಮಧ್ಯೆ ಇರುವ ಕೇಂದ್ರಾಭಿಗಾಮಿ ಪ್ರವೃತ್ತಿಗಳು ಅರ್ಥೈಸಿರುವ ಪ್ರಕಾರ, ನಿರ್ಬಂಧಕ್ಕೊಳಗಾದಾಗ ಈ ಸಂಪೂರ್ಣ ವಲಯದ ಮೇಲಿನ ಕೇಂದ್ರೀಯ ಪ್ರಾಧಿಕಾರವು ಅಲ್ಪಕಾಲಿಕವಾಗಿರುವುದರ ಕಡೆ ಒಲವನ್ನು ತೋರಿಸಿದೆ, ಮತ್ತು ಸ್ಥಳೀಯ ಪಕ್ಷಪಾತ ಅಥವಾ ಸ್ಥಳದ ಮೇಲಿನ ಅಭಿಮಾನವು ಬುಡಕಟ್ಟಿನ ಅಥವಾ ಪ್ರಾದೇಶಿಕ ಘಟಕಗಳಾಗಿ ಅಧಿಕಾರವನ್ನು ಒಡೆದು ಚೂರುಚೂರಾಗಿಸಿದೆ.[೭] ಈ ಪ್ರವೃತ್ತಿಗಳು ಇರಾಕ್‌ನಲ್ಲಿನ ವರ್ತಮಾನ ಕಾಲದ ಪರಿಸ್ಥಿತಿಯವರೆಗೂ ಮುಂದುವರಿದುಕೊಂಡು ಬಂದಿವೆ.

ಭಾಷೆ ಮತ್ತು ಬರಹಗಾರಿಕೆ[ಬದಲಾಯಿಸಿ]

ಮೆಸೊಪಟ್ಯಾಮಿಯಾದಲ್ಲಿ ಬರೆಯಲ್ಪಟ್ಟ ಅತ್ಯಂತ ಪ್ರಾಚೀನ ಭಾಷೆಯು ಸುಮೇರಿಯಾ ಭಾಷೆಯಾಗಿದ್ದು, ಇದೊಂದು ಸಂಯೋಜನಾಶೀಲ ಪ್ರತ್ಯೇಕಿತ ಭಾಷೆಯಾಗಿದೆ. ಪ್ರಾಚೀನ ಮೆಸೊಪಟ್ಯಾಮಿಯಾದಲ್ಲಿ ಸುಮೇರಿಯಾ ಭಾಷೆಯ ಜೊತೆಜೊತೆಗೆ ಸೆಮೈಟ್‌ ಭಾಷೆಗಳಲ್ಲೊಂದರ ಪ್ರಾಂತಭಾಷೆಗಳಲ್ಲೂ ಮಾತನ್ನಾಡಲಾಗುತ್ತಿತ್ತು. ನಂತರದಲ್ಲಿ ಅಕಾಡ್‌ ಭಾಷೆ ಎಂಬ ಒಂದು ಸೆಮೆಟಿಕ್‌ ಭಾಷೆಯು ಪ್ರಬಲ ಭಾಷೆಯಾಗಿ ನೆಲೆಗೊಂಡಿತಾದರೂ, ಸುಮೇರಿಯಾ ಭಾಷೆಯನ್ನು ಆಡಳಿತ, ಧಾರ್ಮಿಕ, ಸಾಹಿತ್ಯಿಕ, ಮತ್ತು ವೈಜ್ಞಾನಿಕ ಉದ್ದೇಶಗಳಿಗಾಗಿ ಉಳಿಸಿಕೊಳ್ಳಲಾಯಿತು. ನವ-ಬ್ಯಾಬಿಲೋನಿಯಾದ ಅವಧಿಯು ಅಂತ್ಯವಾಗುವವರೆಗೆ, ಅಕಾಡ್‌ ಭಾಷೆಯ ವಿಭಿನ್ನ ವಿವಿಧತೆಗಳು ಬಳಕೆಯಲ್ಲಿದ್ದವು. ನಂತರ, ಮೆಸೊಪಟ್ಯಾಮಿಯಾದಲ್ಲಿ ಅಷ್ಟುಹೊತ್ತಿಗಾಗಲೇ ಸಾಮಾನ್ಯವಾಗಿದ್ದ ಅರಮೇಯಿಕ್‌ ಭಾಷೆಯು, ಅಕೀಮನೀಸ್‌ ವಂಶದ ಪರ್ಷಿಯಾದ ಸಾಮ್ರಾಜ್ಯದ ಅಧಿಕೃತ ಪ್ರಾಂತೀಯ ಆಡಳಿತ ಭಾಷೆಯಾಗಿ ಮಾರ್ಪಟ್ಟಿತು. ಅಕಾಡ್‌ ಭಾಷೆಯ ಬಳಕೆ ತಪ್ಪಿದ ಸ್ಥಿತಿಗೆ ಬಿದ್ದಿತಾದರೂ, ಅದು ಮತ್ತು ಸುಮೇರಿಯಾ ಭಾಷೆಗಳೆರಡೂ ಕೆಲವೊಂದು ಶತಮಾನಗಳವರೆಗೆ ದೇವಸ್ಥಾನಗಳಲ್ಲಿ ಇನ್ನೂ ಬಳಸಲ್ಪಡುತ್ತಿದ್ದವು.

ಪ್ರಾಚೀನ ಮೆಸೊಪಟ್ಯಾಮಿಯಾದಲ್ಲಿ (ಸುಮಾರು 4ನೇ ಸಹಸ್ರಮಾನದ ಮಧ್ಯಭಾಗದ BC) ಬೆಣೆಯಾಕಾರದ ಲಿಪಿಯು ಆವಿಷ್ಕರಿಸಲ್ಪಟ್ಟಿತು. ಬೆಣೆಯಾಕಾರದ ಎಂಬ ಪದದ ಅಕ್ಷರಶಃ ಅರ್ಥ "ಗೂಟದ-ಆಕಾರದ" ಎಂಬುದಾಗಿದ್ದು, ಹಸಿ ಮಣ್ಣಿನ ಮೇಲೆ ಚಿಹ್ನೆಗಳನ್ನು ಅಚ್ಚೊತ್ತುವುದಕ್ಕಾಗಿ ಬಳಸಲಾಗುತ್ತಿದ್ದ ಲೇಖನಕಂಠದ ತ್ರಿಕೋಣಾಕಾರದ ತುದಿಯ ಕಾರಣದಿಂದಾಗಿ ಈ ಹೆಸರು ಅದಕ್ಕೆ ಬಂದಿತ್ತು. ಪ್ರತಿಯೊಂದು ಬೆಣೆಯಾಕಾರದ ಚಿಹ್ನೆಯ ಪ್ರಮಾಣಕವಾಗಿಸಿದ ಸ್ವರೂಪವು ಚಿತ್ರಸಂಕೇತಗಳಿಂದ ಅಭಿವೃದ್ಧಿಯಾಗಿರುವಂತೆ ಕಾಣುತ್ತವೆ. ಅತ್ಯಂತ ಪ್ರಾಚೀನವಾಗಿರುವ ಮೂಲ ಗ್ರಂಥಪಾಠಗಳು (ಹಳೆಯಕಾಲದ 7 ಫಲಕಗಳು), IIIನೇ ಹಂತದ ಉರುಕ್‌ನಲ್ಲಿನ ಇನನ್ನಾ ದೇವತೆಗೆ ಅರ್ಪಿಸಲಾದ E-ಅನ್ನಾ ಎಂಬ ಪರಮ ಪವಿತ್ರ ಪ್ರಾಕಾರದಿಂದ ಬಂದವು. ದೇವಸ್ಥಾನ C ಎಂಬುದಾಗಿ ಅದರ ಉತ್ಖನನಕಾರರಿಂದ ಹಣೆಪಟ್ಟಿ ಅಂಟಿಸಿಕೊಂಡ ಕಟ್ಟಡವೊಂದಕ್ಕೆ ಈ ಪವಿತ್ರ ಪ್ರಾಕಾರವು ಸೇರಿತ್ತು.

ಬೆಣೆಯಾಕಾರದ ಲಿಪಿಯ ಪ್ರಾಚೀನ ಪದಸಂಕೇತದ ವ್ಯವಸ್ಥೆಯು ಪರಿಣತಿಯನ್ನು ಪಡೆಯಲು ಅನೇಕ ವರ್ಷಗಳನ್ನು ತೆಗೆದುಕೊಂಡಿತು. ಹೀಗಾಗಿ, ಇದರ ವಾಚನ ಹಾಗೂ ಬರಹಗಾರಿಕೆಯಲ್ಲಿ ತರಬೇತಿಯನ್ನು ಹೊಂದಲು ಕೇವಲ ಒಂದು ಸೀಮಿತ ಸಂಖ್ಯೆಯ ವ್ಯಕ್ತಿಗಳನ್ನಷ್ಟೇ ಹಸ್ತಪ್ರತಿಗಳ ನಕಲುಗಾರರನ್ನಾಗಿ ನೇಮಿಸಿಕೊಳ್ಳಲಾಯಿತು. ಸಾರ್ಗೋನ್‌ನ ಆಡಳಿತದ[ಸೂಕ್ತ ಉಲ್ಲೇಖನ ಬೇಕು] ಅಡಿಯಲ್ಲಿ ಉಚ್ಚಾರಾಂಶಸೂಚಕ ಲಿಪಿಯೊಂದರ ವ್ಯಾಪಕ ಬಳಕೆಯನ್ನು ಅನುಮೋದಿಸುವವರೆಗೂ, ಮೆಸೊಪಟ್ಯಾಮಿಯಾದ ಜನಸಂಖ್ಯೆಯ ಗಮನಾರ್ಹ ಭಾಗದ ಜನರು ಅಕ್ಷರಸ್ಥರಾಗಿರಲಿಲ್ಲ. ಬ್ಯಾಬಿಲೋನಿಯಾದ ಹಳೆಯ ನಕಲುಗಾರ ವೃತ್ತಿಯ ಶಾಲೆಗಳ ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಪ್ರಸಂಗಗಳಿಂದ ಮೂಲ ಗ್ರಂಥಪಾಠಗಳ ಬೃಹತ್‌ ದಾಖಲೆಪತ್ರಗಳನ್ನು ಪುನರ್ವಶಮಾಡಿಕೊಳ್ಳಲಾಯಿತು ಮತ್ತು ಅವುಗಳ ಮೂಲಕ ಸಾಕ್ಷರತೆಯನ್ನು ಪ್ರಸಾರಮಾಡಲಾಯಿತು.

ಸಾಹಿತ್ಯ ಮತ್ತು ಪುರಾಣ[ಬದಲಾಯಿಸಿ]

ಬ್ಯಾಬಿಲೋನಿಯಾದ ಕಾಲದಲ್ಲಿ ಬಹುಪಾಲು ಪಟ್ಟಣಗಳು ಹಾಗೂ ದೇವಸ್ಥಾನಗಳಲ್ಲಿ ಗ್ರಂಥಾಲಯಗಳಿದ್ದವು; ಸುಮೇರಿಯಾ ಭಾಷೆಯ ಒಂದು ಹಳೆಯ ನಾಣ್ಣುಡಿಯು, "ಹಸ್ತಪ್ರತಿಗಳ ನಕಲುಗಾರರ ಶಾಲೆಯಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಬಯಸುವವನು ಸೂರ್ಯೋದಯದೊಂದಿಗೆ ಮೇಲೇಳಬೇಕು" ಎಂಬ ಮಾತನ್ನು ದೃಢವಾಗಿ ಹೇಳಿತ್ತು. ಮಹಿಳೆಯರಷ್ಟೇ ಅಲ್ಲದೇ ಪುರುಷರೂ ಸಹ ಓದಲು ಮತ್ತು ಬರೆಯಲು ಕಲಿತರು,[೮] ಮತ್ತು ಸೆಮೈಟ್‌ ಕುಲದ‌ ಬ್ಯಾಬಿಲೋನಿಯನ್ನರಿಗೆ ಸಂಬಂಧಿಸಿ ಹೇಳುವುದಾದರೆ, ಇದರಲ್ಲಿ ಅಪ್ರಚಲಿತವಾಗಿರುವ ಸುಮೇರಿಯಾದ ಭಾಷೆಯ ಜ್ಞಾನ, ಮತ್ತು ಒಂದು ಸಂಕೀರ್ಣಾತ್ಮಕ ಹಾಗೂ ವ್ಯಾಪಕವಾದ ಮಾತ್ರಾಕ್ಷರಮಾಲೆಯು ಸೇರಿಕೊಂಡಿತ್ತು.

ಬ್ಯಾಬಿಲೋನಿಯಾದ ಸಾಹಿತ್ಯದ ಒಂದು ಪರಿಗಣನೀಯ ಪ್ರಮಾಣವು ಸುಮೇರಿಯಾ ಭಾಷೆಯ ಮೂಲಕೃತಿಗಳಿಂದ ಭಾಷಾಂತರಿಸಲ್ಪಟ್ಟಿತು, ಮತ್ತು ಧರ್ಮ ಹಾಗೂ ಕಾನೂನಿನ ಭಾಷೆಯು ಸುಮೇರುವಿನ ಹಳೆಯ ಸಂಯೋಜಕ ಭಾಷೆಯಾಗಿ ಬಹಳ ಕಾಲದವರೆಗೆ ಮುಂದುವರಿಯಿತು. ಶಬ್ದಸಂಪತ್ತುಗಳು, ವ್ಯಾಕರಣಗಳು, ಮತ್ತು ಒಳಪಂಕ್ತಿಯ ಅನುವಾದಗಳು ವಿದ್ಯಾರ್ಥಿಗಳ ಸದುಪಯೋಗಕ್ಕಾಗಿ ಸಂಕಲಿಸಲ್ಪಟ್ಟವು. ಇದೇ ರೀತಿಯಲ್ಲಿ, ಹಳೆಯದಾದ ಮೂಲ ಗ್ರಂಥಪಾಠಗಳ ಮೇಲಿನ ವ್ಯಾಖ್ಯಾನಗಳು ಮತ್ತು ಅಸ್ಪಷ್ಟವಾದ ಪದಗಳು ಹಾಗೂ ಪದಗುಚ್ಛಗಳ ವಿವರಣೆಗಳೂ ಸಹ ಸಂಕಲಿಸಲ್ಪಟ್ಟವು. ಮಾತ್ರಾಕ್ಷರಮಾಲೆಯ ಅಕ್ಷರಗಳೆಲ್ಲವೂ ವ್ಯವಸ್ಥೆಗೊಳಿಸಲ್ಪಟ್ಟಿದ್ದವು ಮತ್ತು ಹೆಸರಿಸಲ್ಪಟ್ಟಿದ್ದವು, ಮತ್ತು ಅವುಗಳ ಸವಿವರವಾದ ಪಟ್ಟಿಗಳನ್ನು ತಯಾರಿಸಲಾಗಿತ್ತು.

ಬ್ಯಾಬಿಲೋನಿಯಾದ ಅನೇಕ ಸಾಹಿತ್ಯಿಕ ಕೃತಿಗಳು ಲಭ್ಯವಿದ್ದು, ಅವುಗಳ ಶೀರ್ಷಿಕೆಗಳು ನಮ್ಮವರೆಗೂ ಇಳಿದು ಬಂದಿವೆ. ಇವುಗಳ ಪೈಕಿಯ ಒಂದು ಅತ್ಯಂತ ಪ್ರಸಿದ್ಧ ಕೃತಿಯು ಹನ್ನೆರಡು ಪುಸ್ತಕಗಳಲ್ಲಿದ್ದ ಗಿಲ್ಗಮೆಶ್‌ನ ಮಹಾಕಾವ್ಯವಾಗಿತ್ತು. ಮೂಲ ಸುಮೇರಿಯಾ ಭಾಷೆಯಿಂದ ಸಿನ್‌-ಲಿಕೆ-ಉನ್ನಿನ್ನಿ ಎಂಬೋರ್ವನಿಂದ ಅನುವಾದಿಸಲ್ಪಟ್ಟ ಈ ಕೃತಿಯು, ಒಂದು ಖಗೋಳೀಯ ತತ್ತ್ವದ ಮೇಲೆ ವ್ಯವಸ್ಥೆಗೊಳಿಸಲ್ಪಟ್ಟಿತ್ತು. ಇದರಲ್ಲಿನ ಪ್ರತಿಯೊಂದು ವಿಭಾಗವೂ ಗಿಲ್ಗಮೆಶ್‌ನ ವೃತ್ತಿಜೀವನದಲ್ಲಿನ ಒಂದು ಏಕ ಸಾಹಸದ ಕಥೆಯನ್ನು ಒಳಗೊಂಡಿದೆ. ಸಮಗ್ರ ಕಥೆಯು ಒಂದು ಸಂಯೋಜಿತ ಉತ್ಪನ್ನವಾಗಿದೆ, ಮತ್ತು ಕೆಲವೊಂದು ಕಥೆಗಳನ್ನು ಪ್ರಧಾನ ವ್ಯಕ್ತಿಗೆ ಕೃತಕವಾಗಿ ಜೋಡಿಸಿರುವ ಸಾಧ್ಯತೆಗಳು ಕಂಡುಬರುತ್ತವೆ.

ತತ್ವಚಿಂತನೆ[ಬದಲಾಯಿಸಿ]

ಟೆಂಪ್ಲೇಟು:Futher

ತತ್ತ್ವಚಿಂತನೆಯ ಹುಟ್ಟುಗಳನ್ನು ಅಥವಾ ಮೂಲಗಳನ್ನು ಪ್ರಾಚೀನ ಮೆಸೊಪಟ್ಯಾಮಿಯಾದ ವಿವೇಕದಲ್ಲಿ ಗುರುತಿಸಬಹುದಾಗಿದ್ದು, ನೈತಿಕ ಮೌಲ್ಯದಂಥ ಜೀವನದ ಕೆಲವೊಂದು ತತ್ತ್ವಚಿಂತನೆಗಳನ್ನು ಇದು ಒಳಗೊಂಡಿದೆ. ಈ ತತ್ತ್ವಚಿಂತನೆಗಳು ತತ್ತ್ವಜಿಜ್ಞಾಸೆ, ಸಂಭಾಷಣೆಗಳು, ಮಹಾಕಾವ್ಯ, ಜನಶ್ರುತಿ, ಶ್ಲೋಕಗಳು, ಭಾವಗೀತಾತ್ಮಕ ಕವನಗಳು, ಗದ್ಯ, ಮತ್ತು ನಾಣ್ಣುಡಿಗಳ ಸ್ವರೂಪದಲ್ಲಿವೆ. ಬ್ಯಾಬಿಲೋನಿಯಾದ ತಾರ್ಕಿಕ ವಿಧಾನ ಮತ್ತು ವಿವೇಚನಾಶೀಲತೆಗಳು

ಅನುಭವಾತ್ಮಕ ವೀಕ್ಷಣೆಯಿಂದ ಆಚೆಗೆ ಅಭಿವೃದ್ಧಿಯಾದವು.[೯]

ತರ್ಕ ಪ್ರಾಚೀನ ಸ್ವರೂಪವು ಬ್ಯಾಬಿಲೋನಿಯಾದ ಜನರಿಂದ ಅಭಿವೃದ್ಧಿಪಡಿಸಲ್ಪಟ್ಟಿತು. ಅವರ ಸಾಮಾಜಿಕ ವ್ಯವಸ್ಥೆಗಳ ಅತಿಕಟ್ಟುನಿಟ್ಟಿನ ಚಲನಶೀಲವಲ್ಲದ ಸ್ವರೂಪದಲ್ಲಿ ಗಮನಾರ್ಹವಾದ ರೀತಿಯಲ್ಲಿ ಈ ಬೆಳವಣಿಗೆಯು ಕಂಡುಬಂತು. ಬ್ಯಾಬಿಲೋನಿಯನ್ನರ ಆಲೋಚನೆಯು ಆಧಾರಸೂತ್ರ ರೂಪದ್ದಾಗಿತ್ತು ಮತ್ತು ಜಾನ್‌ ಮೇನಾರ್ಡ್‌ ಕೇನ್ಸ್‌ ಎಂಬಾತನಿಂದ ವಿವರಿಸಲ್ಪಟ್ಟಿರುವ "ಸಾಧಾರಣ ತರ್ಕ"ಕ್ಕೆ ಇದನ್ನು ಹೋಲಿಸಬಹುದಾಗಿದೆ. ಬ್ಯಾಬಿಲೋನಿಯನ್ನರ ಆಲೋಚನೆಯು ಮುಕ್ತ-ವ್ಯವಸ್ಥೆಗಳ ಮೂಲತತ್ತ್ವ ವಿಚಾರವನ್ನೂ ಆಧರಿಸಿದ್ದು, ಅದು ಚಲನಶೀಲ ಆಧಾರಸೂತ್ರಗಳೊಂದಿಗೆ ಹೊಂದಿಕೊಳ್ಳುತ್ತದೆ.[೧೦] ಬ್ಯಾಬಿಲೋನಿಯಾದ ಖಗೋಳಶಾಸ್ತ್ರ ಮತ್ತು ಔಷಧಿಶಾಸ್ತ್ರದಲ್ಲಿ ತರ್ಕವು ಒಂದು ಹಂತಕ್ಕೆ ಬಳಸಲ್ಪಟ್ಟಿತ್ತು.

ಬ್ಯಾಬಿಲೋನಿಯನ್ನರ ಆಲೋಚನೆಯು

ಪ್ರಾಚೀನ ಗ್ರೀಕ್‌ ತತ್ತ್ವಚಿಂತನೆ ಹಾಗೂ ಅಲೆಕ್ಸಾಂಡರನ ಕಾಲದ ನಂತರದ ತತ್ತ್ವಚಿಂತನೆಗಳ ಮೇಲೆ ಒಂದು ಪರಿಗಣನೀಯ ಪ್ರಭಾವವನ್ನು ಹೊಂದಿತ್ತು. ನಿರ್ದಿಷ್ಟವಾಗಿ ಹೇಳುವುದಾದರೆ, ಬ್ಯಾಬಿಲೋನಿಯನ್ನರ ಮೂಲ ಗ್ರಂಥಪಾಠವಾದ ಡಯಲಾಗ್‌ ಆಫ್‌ ಪೆಸಿಮಿಸಂ ನಲ್ಲಿ, ಕೂಟವಾದಿಗಳ ಸಂಘರ್ಷಕ ಆಲೋಚನೆ, ವೈದೃಶ್ಯದರ್ಶನಗಳ ಕುರಿತಾದ ಹೆರಾಕ್ಲಿಟಿಯನ್‌ ಸಿದ್ಧಾಂತ, ಮತ್ತು ಪ್ಲೇಟೋತತ್ತ್ವಜಿಜ್ಞಾಸೆ ಮತ್ತು ಸಂಭಾಷಣೆಗಳಿಗೆ ಇರುವ ಸಮಾನರೂಪತೆಗಳು ಒಳಗೊಂಡಿವೆ. ಅಷ್ಟೇ ಅಲ್ಲ, ಸಾಕ್ರಟೀಸ್‌ಭಾವ ಪ್ರಸೂತಿಕ ಸಾಕ್ರಟೀಸನ ವಿಧಾನಕ್ಕೆ ಇರುವ ಒಂದು ಪೂರ್ವಸೂಚಕವನ್ನೂ ಇದು ಒಳಗೊಂಡಿದೆ.[೧೧] ಅಯೋನಿಯಾದ ಥೇಲ್ಸ್‌ ಎಂಬ ದಾರ್ಶನಿಕ, ಬ್ಯಾಬಿಲೋನಿಯನ್ನರ ವಿಶ್ವವಿಜ್ಞಾನದ ಪರಿಕಲ್ಪನೆಗಳಿಂದ ಪ್ರಭಾವಿತನಾಗಿದ್ದ.

ವಿಜ್ಞಾನ ಮತ್ತು ತಂತ್ರಜ್ಞಾನ[ಬದಲಾಯಿಸಿ]

ಖಗೋಳಶಾಸ್ತ್ರ[ಬದಲಾಯಿಸಿ]

ಬ್ಯಾಬಿಲೋನಿಯಾದ ಖಗೋಳ ಶಾಸ್ತ್ರಜ್ಞರು

ನಕ್ಷತ್ರಗಳು ಹಾಗೂ ಆಕಾಶವನ್ನು ಅಧ್ಯಯನ ಮಾಡುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರು, ಮತ್ತು ಅವರಲ್ಲಾಗಲೇ ಅನೇಕರು ಗ್ರಹಣಗಳು ಹಾಗೂ ಆಯನ ಸಂಕ್ರಾಂತಿಗಳ ಕುರಿತು ಮೊದಲೇ ಹೇಳಬಲ್ಲವರಾಗಿದ್ದರು. ಖಗೋಳಶಾಸ್ತ್ರದಲ್ಲಿ ಪ್ರತಿಯೊಂದೂ ಏನಾದರೊಂದು ಉದ್ದೇಶವನ್ನು ಹೊಂದಿದೆ ಎಂಬುದು ಆ ಜನರ ಆಲೋಚನಾಲಹರಿಯಾಗಿತ್ತು. ಆ ಆಲೋಚನೆಗಳಲ್ಲಿ ಬಹುಪಾಲು ಧರ್ಮ ಮತ್ತು ಶಕುನಗಳಿಗೆ ಸಂಬಂಧಿಸಿದ್ದವು. ಚಂದ್ರನ ಆವರ್ತನವನ್ನು ಆಧರಿಸಿ, ಮೆಸೊಪಟ್ಯಾಮಿಯಾದ ಖಗೋಳ ಶಾಸ್ತ್ರಜ್ಞರು 12 ತಿಂಗಳ ಒಂದು ಪಂಚಾಂಗವನ್ನು ಲೆಕ್ಕಾಚಾರ ಮಾಡಿದರು. ಅವರು ವರ್ಷವನ್ನು ಬೇಸಗೆ ಕಾಲ ಮತ್ತು ಚಳಿಗಾಲ ಎಂಬ ಎರಡು ಋತುಗಳಾಗಿ ವಿಭಜಿಸಿದರು. ಖಗೋಳಶಾಸ್ತ್ರದ್ದಷ್ಟೇ ಅಲ್ಲದೇ ಜ್ಯೋತಿಷ್ಯಶಾಸ್ತ್ರದ ಮೂಲಗಳು ಈ ಕಾಲದಿಂದ ಕಾಲನಿರ್ದೇಶಿಸಿ ಹೇಳಲ್ಪಟ್ಟಿವೆ.

8ನೇ ಮತ್ತು 7ನೇ ಶತಮಾನಗಳ BCಯ ಅವಧಿಯಲ್ಲಿ, ಬ್ಯಾಬಿಲೋನಿಯಾದ ಖಗೋಳ ಶಾಸ್ತ್ರಜ್ಞರು

ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಹೊಸ ಮಾರ್ಗವನ್ನು ಅಭಿವೃದ್ಧಿಪಡಿಸಿದರು. ಪ್ರಾಚೀನ ಬ್ರಹ್ಮಾಂಡದ ಮಾದರಿ ಸ್ವರೂಪದೊಂದಿಗೆ ವ್ಯವಹರಿಸುವ ಅಥವಾ ಅದನ್ನು ಕುರಿತಾದ ತತ್ತ್ವಚಿಂತನೆಯನ್ನು ಅಧ್ಯಯನ ಮಾಡಲು ಅವರು ಪ್ರಾರಂಭಿಸಿದರು ಮತ್ತು ಭವಿಷ್ಯಕ್ಕೆ ಸಂಬಂಧಿಸಿದ ಅವರ ಗ್ರಹಗಳ ವ್ಯವಸ್ಥೆಗಳ ವ್ಯಾಪ್ತಿಯೊಳಗೆ ಒಂದು ಆಂತರಿಕ ತರ್ಕವನ್ನು ಬಳಸಿಕೊಳ್ಳಲು ಅವರು ಪ್ರಾರಂಭಿಸಿದರು. ಖಗೋಳಶಾಸ್ತ್ರ ಮತ್ತು ವಿಜ್ಞಾನದ ತತ್ತ್ವಚಿಂತನೆಗಳಿಗೆ ಇದೊಂದು ಪ್ರಮುಖವಾದ ಕೊಡುಗೆಯಾಗಿತ್ತು ಹಾಗೂ ಈ ಹೊಸ ಮಾರ್ಗವನ್ನು ಕೆಲವೊಂದು ವಿದ್ವಾಂಸರು ಮೊದಲ ವೈಜ್ಞಾನಿಕ ಕ್ರಾಂತಿ ಎಂದು ಉಲ್ಲೇಖಿಸಿದ್ದಾರೆ.[೧೨] ಖಗೋಳಶಾಸ್ತ್ರದೆಡೆಗಿರುವ ಈ ಹೊಸ ಮಾರ್ಗವು, ಗ್ರೀಕ್‌ ಹಾಗೂ ಅಲೆಕ್ಸಾಂಡರನ ಕಾಲದ ನಂತರದ ಖಗೋಳಶಾಸ್ತ್ರದಲ್ಲಿ ಸ್ವೀಕರಿಸಲ್ಪಟ್ಟಿತು ಹಾಗೂ ಮತ್ತಷ್ಟು ಅಭಿವೃದ್ಧಿಗೆ ಒಳಗಾಯಿತು.

ಸೆಲ್ಯುಸಿಡ್‌ ಹಾಗೂ ಪಾರ್ತಿಯನ್ನರ ಕಾಲಗಳಲ್ಲಿ, ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ವರದಿಗಳು ಒಂದು ಆಳವಾದ ವೈಜ್ಞಾನಿಕ ಲಕ್ಷಣವನ್ನು ಹೊಂದಿರುತ್ತಿದ್ದವು; ಅವರ ಪ್ರಗತಿಪರ ಜ್ಞಾನ ಹಾಗೂ ವಿಧಾನಗಳು ಎಷ್ಟು ಮುಂಚಿತವಾಗಿ ಅಭಿವೃದ್ಧಿಯಾದವು ಎಂಬುದಿನ್ನೂ ಖಚಿತವಾಗಿ ತಿಳಿದಿಲ್ಲ. ಗ್ರಹಗಳ ಚಲನೆಯನ್ನು ಮುಂಚಿತವಾಗಿ ಊಹಿಸಿ ಹೇಳುವುದಕ್ಕೆ ಸಂಬಂಧಿಸಿದ ಬ್ಯಾಬಿಲೋನಿಯನ್ನರ ವಿಧಾನಗಳ ಅಭಿವೃದ್ಧಿಯು ಖಗೋಳಶಾಸ್ತ್ರದ ಇತಿಹಾಸದಲ್ಲಿ ಒಂದು ಪ್ರಮುಖ ಅಧ್ಯಾಯವಾಗಿದೆ ಎಂದು ಪರಿಗಣಿಸಲ್ಪಟ್ಟಿದೆ.

ಗ್ರಹಗಳ ಚಲನೆಗೆ ಸಂಬಂಧಿಸಿದ ಸೂರ್ಯಕೇಂದ್ರಿತ ಮಾದರಿಯೊಂದನ್ನು ಸೆಲ್ಯೂಸಿಯಾದ ಸೆಲ್ಯೂಕಸ್‌ ಎಂಬ ಬ್ಯಾಬಿಲೋನಿಯಾದ ಏಕೈಕ ಗ್ರೀಕ್‌ ಖಗೋಳ ಶಾಸ್ತ್ರಜ್ಞನು ಬೆಂಬಲಿಸಿದ ಎಂಬುದು ತಿಳಿದುಬಂದಿದೆ ( ಈತ ಹುಟ್ಟಿದ್ದು 190 BCಯಲ್ಲಿ).[೧೩][೧೪][೧೫] ಪ್ಲೂಟಾರ್ಕ್‌‌ನ ಬರಹಗಳಿಂದ ಸೆಲ್ಯೂಕಸ್‌ ಕುರಿತಾಗಿ ತಿಳಿದುಬಂದಿದೆ. ಸಾಮೋಸ್‌ಗೆ ಸೇರಿದ ಅರಿಸ್ಟಾರ್ಕಸ್‌ನ ಸೂರ್ಯಕೇಂದ್ರಿತ ಸಿದ್ಧಾಂತವನ್ನು ಅವನು ಬೆಂಬಲಿಸಿದ. ತನ್ನದೇ ಸ್ವಂತ ಅಕ್ಷದ ಮೇಲೆ ಭೂಮಿಯು ತಿರುಗುತ್ತದೆ, ನಂತರ ಅನುಕ್ರಮವಾಗಿ ಸೂರ್ಯನ ಸುತ್ತ ಪರಿಭ್ರಮಿಸುತ್ತದೆ ಎಂಬುದು ಈ ಸಿದ್ಧಾಂತದ ಪ್ರತಿಪಾದನೆಯಾಗಿತ್ತು. ಪ್ಲೂಟಾರ್ಕ್‌‌ನ ಅನುಸಾರ, ಸೂರ್ಯಕೇಂದ್ರಿತ ವ್ಯವಸ್ಥೆಯನ್ನು ಸೆಲ್ಯೂಕಸ್‌ ಸಾಬೀತನ್ನೂ ಮಾಡಿದ. ಆದರೆ

(ಚಂದ್ರನ ಆಕರ್ಷಣೆಯ ಪರಿಣಾಮವಾಗಿ ಸಮುದ್ರದಲ್ಲಿ ಉಬ್ಬರವಿಳಿತಗಳು ಕಂಡುಬರುತ್ತವೆ ಎಂಬುದರ ಕುರಿತಾಗಿ ಆತ ಕರಾರುವಾಕ್ಕಾಗಿ ಸಿದ್ಧಾಂತ ರಚಿಸಿದ್ದನ್ನು ಹೊರತುಪಡಿಸಿ) ಯಾವ ಸ್ವರೂಪದ ಸಮರ್ಥನೆಗಳನ್ನು ಆತ ಮಂಡಿಸಿದ ಎಂಬುದು ತಿಳಿದುಬಂದಿಲ್ಲ.

ಬ್ಯಾಬಿಲೋನಿಯನ್ನರ ಖಗೋಳಶಾಸ್ತ್ರವು ಇಂಥ ಅನೇಕ ಪದ್ಧತಿಗಳಿಗೆ ಆಧಾರವಾಗಿ ಪರಿಣಮಿಸಿತು. ಗ್ರೀಕ್‌ ಮತ್ತು ಅಲೆಕ್ಸಾಂಡರನ ಕಾಲದ ನಂತರದ ಖಗೋಳಶಾಸ್ತ್ರ, ಸಾಂಪ್ರದಾಯಿಕ ಭಾರತೀಯ ಖಗೋಳಶಾಸ್ತ್ರ, ಸಸಾನ್‌ ವಂಶದ, ಬೈಸ್ಯಾಂಟಿಯಂ ಸಾಮ್ರಾಜ್ಯದ ಮತ್ತು ಸಿರಿಯಾದ ಖಗೋಳಶಾಸ್ತ್ರ, ಮಧ್ಯಯುಗದ ಇಸ್ಲಾಮಿನ ಖಗೋಳಶಾಸ್ತ್ರ, ಹಾಗೂ ಮಧ್ಯ ಏಷ್ಯಾದ ಮತ್ತು ಪಾಶ್ಚಾತ್ಯ ಯುರೋಪ್‌ನ ಖಗೋಳಶಾಸ್ತ್ರಗಳಲ್ಲಿ ಏನೆಲ್ಲಾ ಕೆಲಸಗಳು ನಡೆದವೋ ಅದರ ಬಹುಪಾಲಿಗೆ ಬ್ಯಾಬಿಲೋನಿಯನ್ನರ ಖಗೋಳಶಾಸ್ತ್ರವು ಆಧಾರವಾಗಿತ್ತು.[೧೬]

ಗಣಿತಶಾಸ್ತ್ರ[ಬದಲಾಯಿಸಿ]

ಮೆಸೊಪಟ್ಯಾಮಿಯನ್ನರು ಅರವತ್ತನೇ ಒಂದು ಅಂಶದ (ಆಧಾರಸಂಖ್ಯೆ 60) ಒಂದು ಸಂಖ್ಯಾವಾಚಕ ಪದ್ಧತಿಯನ್ನು ಬಳಸಿದರು. ಪ್ರಸಕ್ತ ಕಾಲದ 60-ನಿಮಿಷದ ಗಂಟೆಗಳು ಮತ್ತು 24-ಗಂಟೆಯ ದಿನಗಳು, ಅಷ್ಟೇ ಏಕೆ 360 ಡಿಗ್ರಿಯ ವೃತ್ತಕ್ಕೆ ಇದೇ ಮೂಲವಾಗಿದೆ. ತಲಾ ಏಳುದಿನಗಳನ್ನು ಹೊಂದಿರುವ ವಾರಗಳನ್ನೂ ಸಹ ಸುಮೇರಿಯಾದ ಪಂಚಾಗವು ಲೆಕ್ಕಾಚಾರ ಮಾಡಿತು. ಭೂಪಟ ರೂಪಿಸುವಿಕೆಯಲ್ಲಿ ಗಣಿತದ ಈ ಜ್ಞಾನವು ಬಳಸಲ್ಪಟ್ಟಿತು.

ವಿಸ್ತೀರ್ಣ ಅಥವಾ ಕ್ಷೇತ್ರಫಲವನ್ನು ಅಳೆಯುವುದಕ್ಕಾಗಿರುವ ಸಾರ್ವತ್ರಿಕ ನಿಯಮಗಳೊಂದಿಗೆ ಬ್ಯಾಬಿಲೋನಿಯನ್ನರು ಪ್ರಾಯಶಃ ನಿಕಟತೆಯನ್ನು ಹೊಂದಿದ್ದರು. ವೃತ್ತವೊಂದರ ಪರಿಧಿಯು ಅದರ ವ್ಯಾಸದ ಮೂರು ಪಟ್ಟಿನಷ್ಟು ಇರುತ್ತದೆ ಮತ್ತು ಕ್ಷೇತ್ರಫಲವು ಪರಿಧಿಯ ವರ್ಗ ಐದನೇ ಒಂದರಷ್ಟು ಇರುತ್ತದೆ ಎಂಬುದನ್ನು ಅವರು ಲೆಕ್ಕಾಚಾರ ಹಾಕಿದರು. ಒಂದು ವೇಳೆ ಪೈ ಮೌಲ್ಯವು 3 ಎಂದು ಅಂದಾಜಿಸಲ್ಪಟ್ಟರೆ ಈ ಲೆಕ್ಕಾಚಾರವು ಸರಿಯಾಗಿರುತ್ತದೆ. ಸಿಲಿಂಡರ್‌ ಒಂದರ ಘನ ಅಳತೆಯನ್ನು ಅದರ ಪಾದ ಮತ್ತು ಎತ್ತರದ ಗುಣಲಬ್ಧವಾಗಿ ತೆಗೆದುಕೊಳ್ಳಲಾಯಿತಾದರೂ, ಒಂದು ಶಂಕು ಅಥವಾ ಒಂದು ವರ್ಗ ಪಿರಮಿಡ್ಡಿನ (ಚೌಕ ಪಿರಮಿಡ್ಡಿನ) ಛಿನ್ನಕದ ಘನ ಅಳತೆಯನ್ನು, ಎತ್ತರ ಮತ್ತು ಪಾದಗಳ ಮೊತ್ತದ ಅರ್ಧದಷ್ಟರ ಗುಣಲಬ್ಧ ಎಂದು ತಪ್ಪಾಗಿ ತೆಗೆದುಕೊಳ್ಳಲಾಯಿತು. ಅಷ್ಟೇ ಅಲ್ಲ, ಇತ್ತೀಚಿಗೆ ಆವಿಷ್ಕಾರವೊಂದು ಹೊರಬಿದ್ದಿದ್ದು, ಅದರಲ್ಲಿ ಕೋಷ್ಟಕ ಫಲಕವೊಂದು ಪೈ ಮೌಲ್ಯವನ್ನು 3 ಮತ್ತು 1/8 (3.14159~ಗೆ 3.125) ಎಂಬುದಾಗಿ ಬಳಸಿತು. ಬ್ಯಾಬಿಲೋನಿಯಾದ ಮೈಲು ಅಳತೆಗೂ ಸಹ ಬ್ಯಾಬಿಲೋನಿಯನ್ನರು ಹೆಸರಾಗಿದ್ದಾರೆ. ಇಂದು ಚಾಲ್ತಿಯಲ್ಲಿರುವ ಸುಮಾರು ಏಳು ಮೈಲುಗಳಿಗೆ (11 ಕಿಮೀ) ಸಮನಾಗಿರುವ ಅಂತರದ ಒಂದು ಅಳತೆ ಇದಾಗಿತ್ತು. ಅಂತರಗಳ ಈ ಅಳತೆಯು ಅಂತಿಮವಾಗಿ ಒಂದು ಸಮಯ-ಮೈಲು ಎಂಬುದಕ್ಕೆ ಪರಿವರ್ತನೆಯಾಯಿತು. ಇದು ಸೂರ್ಯನ ಸಂಚಾರವನ್ನು ಅಳೆಯಲು ಬಳಸಲ್ಪಡುತ್ತದೆಯಾದ್ದರಿಂದ, ಸಮಯವನ್ನು ಪ್ರತಿನಿಧಿಸುತ್ತದೆ.[೧೭]

ಔಷಧಿ[ಬದಲಾಯಿಸಿ]

ಔಷಧಿಯ ಕುರಿತಾದ ಬ್ಯಾಬಿಲೋನಿಯಾದ ಅತ್ಯಂತ ಹಳೆಯ ಮೂಲ ಗ್ರಂಥಪಾಠಗಳು, 2ನೇ ಸಹಸ್ರಮಾನದ BCಯ ಪ್ರಥಮಾರ್ಧದಲ್ಲಿನ ಹಳೆಯ ಬ್ಯಾಬಿಲೋನಿಯಾದ ಅವಧಿಯಷ್ಟು ಹಿಂದಿನ ಕಾಲಕ್ಕೆ ಸೇರಿವೆ. ಆದಾಗ್ಯೂ, ಡಯಾಗ್ನೋಸ್ಟಿಕ್‌ ಹ್ಯಾಂಡ್‌ಬುಕ್‌ ಎಂಬುದು ಬ್ಯಾಬಿಲೋನಿಯಾದ ಅತ್ಯಂತ ವ್ಯಾಪಕ ವೈದ್ಯಕೀಯ ಮೂಲ ಗ್ರಂಥಪಾಠವಾಗಿದೆ. ಬ್ಯಾಬಿಲೋನಿಯಾದ ರಾಜನಾಗಿದ್ದ ಅದಾದ್‌-ಅಪ್ಲ-ಇದ್ದಿನ (1069-1046 BC) ಎಂಬಾತನ ಅಧಿಕಾರಾವಧಿಯಲ್ಲಿ ಬೊರ್ಸಿಪ್ಪಾ[೧೮] ಎಸಾಗಿಲ್‌-ಕಿನ್‌-ಆಪ್ಲಿ ಎಂಬ ಓರ್ವ ವೈದ್ಯ ಇದನ್ನು ಬರೆದಿದ್ದ.[೧೯]

ಸಮಕಾಲೀನ ಪ್ರಾಚೀನ ಈಜಿಪ್ಟ್‌ನ ಔಷಧಿಯ ಜೊತೆಗೆ, ರೋಗನಿರ್ಣಯ, ಭವಿಷ್ಯಜ್ಞಾನ, ದೇಹ ಪರೀಕ್ಷೆ, ಮತ್ತು ಲಿಖಿತ ಸೂಚಿಗಳ ಪರಿಕಲ್ಪನೆಗಳನ್ನು ಬ್ಯಾಬಿಲೋನಿಯನ್ನರು ಪರಿಚಯಿಸಿದರು. ಇದರ ಜೊತೆಗೆ, ಡಯಾಗ್ನೋಸ್ಟಿಕ್‌ ಹ್ಯಾಂಡ್‌ಬುಕ್‌ ಎಂಬ ಪುಸ್ತಕವು ಚಿಕಿತ್ಸೆ ಮತ್ತು ರೋಗನಿದಾನ ಶಾಸ್ತ್ರದ ವಿಧಾನಗಳು ಮತ್ತು ರೋಗನಿರ್ಣಯ, ಭವಿಷ್ಯಜ್ಞಾನ ಹಾಗೂ ಚಿಕಿತ್ಸೆಯಲ್ಲಿ ಪ್ರಯೋಗಶೀಲತೆ, ತರ್ಕ ಮತ್ತು ವಿವೇಚನಾಶೀಲತೆಯ ಬಳಕೆಯನ್ನು ಪರಿಚಯಿಸಿದರು. ಮೂಲ ಗ್ರಂಥಪಾಠವು

ವೈದ್ಯಕೀಯ ರೋಗಲಕ್ಷಣಗಳ ಒಂದು ಪಟ್ಟಿಯನ್ನು ಒಳಗೊಂಡಿದ್ದು, ಅನುಭವಾತ್ಮಕ ವೀಕ್ಷಣೆಗಳನ್ನು ವಿವರಿಸಿದೆ. ಇದರ ಜೊತೆಗೆ, ರೋಗಿಯ ದೇಹಕ್ಕೆ ಸಂಬಂಧಿಸಿದಂತೆ ವೀಕ್ಷಿಸಲ್ಪಟ್ಟ ರೋಗಲಕ್ಷಣಗಳನ್ನು ತನ್ನ ರೋಗನಿರ್ಣಯ ಹಾಗೂ ಭವಿಷ್ಯಜ್ಞಾನದೊಂದಿಗೆ ಸಂಯೋಜಿಸುವಲ್ಲಿ ಬಳಸಲಾಗುವ ತಾರ್ಕಿಕ ನಿಯಮಗಳನ್ನೂ ಸಹ ಈ ಗ್ರಂಥಪಾಠವು ಒಳಗೊಂಡಿದೆ.[೨೦]

ರೋಗಿಯೊಬ್ಬನ ರೋಗಲಕ್ಷಣಗಳು ಮತ್ತು ರೋಗಗಳನ್ನು ಗಾಯದ ಪಟ್ಟಿಗಳು, ಮುಲಾಮುಗಳು ಮತ್ತು ಮಾತ್ರೆಗಳಂಥ ಚಿಕಿತ್ಸಾವಿಧಾನಗಳಿಂದ ಉಪಚರಿಸಲಾಗುತ್ತಿತ್ತು. ಒಂದು ವೇಳೆ ರೋಗಿಯೊಬ್ಬನು ಶಾರೀರಿಕವಾಗಿ ಗುಣಮುಖನಾಗದಿದ್ದಲ್ಲಿ, ರೋಗಿಯನ್ನು ಯಾವುದೇ ಶಾಪಗಳಿಂದ ಪುನೀತಗೊಳಿಸಲು ಬ್ಯಾಬಿಲೋನಿಯಾದ ವೈದ್ಯರು ಭೂತೋಚ್ಚಾಟನೆಯ ವಿಧಾನವನ್ನು ಅನೇಕ ವೇಳೆ ನೆಚ್ಚಿಕೊಳ್ಳುತ್ತಿದ್ದರು. ಎಸಾಗಿಲ್‌-ಕಿನ್‌-ಆಪ್ಲಿ ಬರೆದಿರುವ ಡಯಾಗ್ನೋಸ್ಟಿಕ್‌ ಹ್ಯಾಂಡ್‌ಬುಕ್‌ ಎಂಬ ಪುಸ್ತಕವು ಆಧಾರಸೂತ್ರಗಳು ಮತ್ತು ಕಲ್ಪನೆಗಳ ಒಂದು ತಾರ್ಕಿಕ ಸಂಗ್ರಹವನ್ನು ಆಧರಿಸಿತ್ತು. ರೋಗಿಯೊಬ್ಬನ ರೋಗಲಕ್ಷಣಗಳ ಅವಲೋಕನ ಮತ್ತು ತಪಾಸಣೆಗಳನ್ನು ಮಾಡುವ ಮೂಲಕ, ರೋಗಿಯ ರೋಗ, ಅದರ ರೋಗನಿದಾನ ಶಾಸ್ತ್ರ ಹಾಗೂ ಮುಂದಿನ ಬೆಳವಣಿಗೆ, ಮತ್ತು ರೋಗಿಯು ತನ್ನ ಆರೋಗ್ಯಸ್ಥಿತಿಯನ್ನು ಮರಳಿಪಡೆಯುವುದರ ಕುರಿತಾದ ಸಾಧ್ಯತೆಗಳನ್ನು ನಿಷ್ಕರ್ಷಿಸಲು ಸಾಧ್ಯ ಎಂಬ ಆಧುನಿಕ ದೃಷ್ಟಿಕೋನವನ್ನೂ ಸಹ ಈ ಪುಸ್ತಕವು ಒಳಗೊಂಡಿತ್ತು.[೧೮]

ಎಸಾಗಿಲ್‌-ಕಿನ್‌-ಆಪ್ಲಿ ಎಂಬಾತ ವೈವಿಧ್ಯಮಯ ಅಸ್ವಸ್ಥತೆಗಳು ಹಾಗೂ ರೋಗಗಳನ್ನು ಪತ್ತೆಹಚ್ಚಿದ್ದೇ ಅಲ್ಲದೇ, ಅವುಗಳ ರೋಗಲಕ್ಷಣಗಳನ್ನು ಡಯಾಗ್ನೋಸ್ಟಿಕ್‌ ಹ್ಯಾಂಡ್‌ಬುಕ್‌ ಎಂಬ ತನ್ನ ಪುಸ್ತಕದಲ್ಲಿ ವಿವರಿಸಿದ. ಅಪಸ್ಮಾರದ ಅನೇಕ ಬಗೆಗಳು ಮತ್ತು ಸಂಬಂಧಪಟ್ಟ ಬೇನೆಗಳಿಗಾಗಿರುವ ರೋಗಲಕ್ಷಣದ ಜೊತೆಗೆ, ಅವುಗಳ ರೋಗನಿರ್ಣಯ ಮತ್ತು ಭವಿಷ್ಯಜ್ಞಾನವನ್ನೂ ಇವು ಒಳಗೊಂಡಿವೆ.[೨೧]

ತಂತ್ರಜ್ಞಾನ[ಬದಲಾಯಿಸಿ]

ಲೋಹ ಮತ್ತು ತಾಮ್ರದ-ಕುಸುರಿಗಾರಿಕೆ, ಗಾಜು ಹಾಗೂ ದೀಪವನ್ನು ತಯಾರಿಸುವುದು, ಬಟ್ಟೆಯ ನೇಯ್ಗೆ, ಪ್ರವಾಹ ನಿಯಂತ್ರಣ, ನೀರಿನ ಸಂಗ್ರಹಣೆ, ಮತ್ತು ನೀರಾವರಿ ಇವೇ ಮೊದಲಾದವುಗಳನ್ನು ಒಳಗೊಂಡಂತೆ ಅನೇಕ ತಂತ್ರಜ್ಞಾನಗಳನ್ನು ಮೆಸೊಪಟ್ಯಾಮಿಯಾದ ಜನರು ಆವಿಷ್ಕರಿಸಿದರು.

ವಿಶ್ವದಲ್ಲಿನ ಕಂಚಿನ ಯುಗದ ಮೊದಲ ಜನರ ಪೈಕಿ ಅವರೂ ಸಹ ಒಬ್ಬರಾಗಿದ್ದರು. ಇದಕ್ಕೂ ಮುಂಚಿತವಾಗಿ ಅವರು ತಾಮ್ರ, ಕಂಚು ಮತ್ತು ಬಂಗಾರವನ್ನು ಅವರು ಬಳಸಿದರು, ಮತ್ತು ನಂತರದಲ್ಲಿ ಅವರು ಕಬ್ಬಿಣವನ್ನು ಬಳಸಿದರು. ನೂರಾರು ಸಾವಿರಾರು ಕಿಲೋಗ್ರಾಂಗಳಷ್ಟು ಪ್ರಮಾಣದಲ್ಲಿ ಅತ್ಯಂತ ಬೆಲೆಬಾಳುವ ಲೋಹಗಳನ್ನು ಈ ಬಳಸಿ ಅರಮನೆಗಳನ್ನು ಅಲಂಕರಿಸಲಾಗಿತ್ತು. ಅಷ್ಟೇ ಅಲ್ಲ, ತಾಮ್ರ, ಕಂಚು, ಮತ್ತು ಕಬ್ಬಿಣಗಳನ್ನು ರಕ್ಷಾಕವಚವನ್ನು ತಯಾರಿಸಲಿಕ್ಕೆ ಮಾತ್ರವೇ ಅಲ್ಲದೇ,

ಕತ್ತಿಗಳು, ಬಾಕುಗಳು, ಈಟಿಗಳು, ಹಾಗೂ ಶಂಕುಗಳುಳ್ಳ ಗದೆಗಳು ಇವೇ ಮೊದಲಾದ ವಿಭಿನ್ನ ಆಯುಧಗಳನ್ನು ತಯಾರಿಸಲೂ ಬಳಸಲಾಗಿತ್ತು.

ಆರ್ಕಿಮಿಡಿಸ್‌ ತಿರುಪು ಎಂಬುದು ಅತ್ಯಂತ ಮುಂಚಿನ ಪಂಪ್‌ನ ಒಂದು ಬಗೆಯಾಗಿದ್ದು, ಅಸಿರಿಯಾದ ರಾಜನಾದ ಸೆನ್ನಾಚೆರಿಬ್‌ ಇದನ್ನು 7ನೇ ಶತಮಾನದ BCಯಲ್ಲಿ ಮೊಟ್ಟಮೊದಲ ಬಾರಿಗೆ ಬಳಸಿದ. ಬ್ಯಾಬಿಲೋನಿನ ತೂಗಾಡುವ ತೋಟಗಳು ಹಾಗೂ ನಿನೆವೆಹ್‌‌‌ನಲ್ಲಿನ ನೀರುಪೂರೈಕೆ ವ್ಯವಸ್ಥೆಗಳಿಗಾಗಿ ಬಳಸಲ್ಪಟ್ಟ ಇವು, ನಂತರ 3ನೇ ಶತಮಾನದ BCಯ ಸಮಯದಲ್ಲಿ ಆರ್ಕಿಮಿಡಿಸ್‌‌ನಿಂದ ಹೆಚ್ಚು ವಿವರವಾಗಿ ವಿವರಿಸಲ್ಪಟ್ಟವು.[೨೨] ನಂತರ, ಪಾರ್ತಿಯನ್ನರ ಅಥವಾ ಸಸಾನ್‌ ವಂಶದ ಅವಧಿಗಳಲ್ಲಿ, ಮೊಟ್ಟಮೊದಲ ಬ್ಯಾಟರಿಗಳು ಎಂದು ಭಾವಿಸಲಾಗಿರುವ ಬಾಗ್ದಾದ್‌ ಬ್ಯಾಟರಿಗಳು ಮೆಸೊಪಟ್ಯಾಮಿಯಾದಲ್ಲಿ ಸೃಷ್ಟಿಸಲ್ಪಟ್ಟವು.[೨೩]

ಧರ್ಮ[ಬದಲಾಯಿಸಿ]

ಮೆಸೊಪಟ್ಯಾಮಿಯಾದ ಧರ್ಮವು ದಾಖಲಿಸಲ್ಪಡುವಿಕೆಯಲ್ಲಿ ಮೊಟ್ಟಮೊದಲನೆಯದು ಎನಿಸಿಕೊಂಡಿದೆ. ಈ ವಿಶ್ವವೊಂದು ಚಪ್ಪಟೆಯಾಗಿರುವ ತಟ್ಟೆಯಾಗಿದ್ದು[ಸೂಕ್ತ ಉಲ್ಲೇಖನ ಬೇಕು], ಒಂದು ಬೃಹತ್ತಾದ, ರಂಧ್ರವಿರುವ ಸ್ಥಳಾವಕಾಶದಿಂದ ಅಥವಾ ಬಾಹ್ಯಾಕಾಶದಿಂದ ಅದು ಆವರಿಸಲ್ಪಟ್ಟಿದೆ, ಮತ್ತು ಈ ಆಕಾಶಕ್ಕೂ ಮೇಲ್ಭಾಗದಲ್ಲಿ ಸ್ವರ್ಗವಿದೆ ಎಂದು ಮೆಸೊಪಟ್ಯಾಮಿಯನ್ನರು ನಂಬಿದ್ದರು. ಮೇಲೆ, ಕೆಳಗೆ ಮತ್ತು ಅಕ್ಕಪಕ್ಕಗಳಲ್ಲಿ ಹೀಗೆ ಎಲ್ಲ ಕಡೆಯೂ ನೀರು ಆವರಿಸಿಕೊಂಡಿದೆ ಎಂದೂ, ಮತ್ತು ಈ ಅಗಾಧ ಸಮುದ್ರದಿಂದಲೇ ಬ್ರಹ್ಮಾಂಡವು ಸೃಷ್ಟಿಯಾಗಿದೆ ಎಂದೂ ಅವರು ನಂಬಿದ್ದರು. ಇದರ ಜೊತೆಗೆ, ಮೆಸೊಪಟ್ಯಾಮಿಯಾದ ಧರ್ಮವು ಬಹುದೇವತಾ ಸಿದ್ಧಾಂತದವನ್ನು ಒಳಗೊಂಡಿತ್ತು.

ಮೇಲೆ ವಿವರಿಸಲಾಗಿರುವ ನಂಬಿಕೆಗಳನ್ನು ಮೆಸಪಟೋಮಿಯನ್ನರ ನಡುವೆ ಸಾಮಾನ್ಯವಾಗಿತ್ತಾದರೂ, ಅದರಲ್ಲಿ ಪ್ರಾದೇಶಿಕ ಬದಲಾವಣೆಗಳೂ ಇದ್ದವು. ಸುಮೇರಿಯಾ ಭಾಷೆಯಲ್ಲಿ ಬ್ರಹ್ಮಾಂಡ ಎಂಬುದನ್ನು ಹೇಳಲು ಆನ್‌-ಕಿ ಎಂಬ ಪದವಿದ್ದು, ಇದು ಆನ್‌ ಎಂಬ ದೇವರು ಹಾಗೂ ಕಿ ಎಂಬ ದೇವತೆಯನ್ನು ಉಲ್ಲೇಖಿಸುತ್ತದೆ. ಎನ್ಲಿಲ್‌ ಎಂಬುವವ ಅವರ ಮಗನಾಗಿದ್ದು, ಆತ ಗಾಳಿಯ ದೇವರಾಗಿದ್ದ. ಎನ್ಲಿಲ್‌ ಅತ್ಯಂತ ಶಕ್ತಿಯುತ ದೇವರು ಎಂದು ಅವರು ನಂಬಿದ್ದರು. ಗ್ರೀಕರು ಝಿಯಸ್‌‌ನನ್ನು ಮತ್ತು ರೋಮನ್ನರು ಜುಪಿಟರ್‌‌ನನ್ನು ಪರಿಗಣಿಸಿದಂತೆಯೇ, ಎನ್ಸಿಲ್‌ನನ್ನು ದೇವತಾಗಣದ ಪ್ರಮುಖ ದೇವರಾಗಿ ಅವರು ಪರಿಗಣಿಸಿದ್ದರು. ನಾವು ಯಾರು?, ನಾವು ಎಲ್ಲಿದ್ದೇವೆ?, ನಾವು ಇಲ್ಲಿಗೆ ಹೇಗೆ ಬಂದೆವು? ಎಂಬಂಥ ತತ್ತ್ವಚಿಂತನೆಯ ಪ್ರಶ್ನೆಗಳನ್ನೂ ಸಹ ಸುಮೇರಿಯಾದ ಜನರು ಮುಂದಿಡುತ್ತಿದ್ದರು. ಈ ಪ್ರಶ್ನೆಗಳಿಗೆ ಸಿಕ್ಕ ಉತ್ತರಗಳನ್ನು ಅವರು ತಮ್ಮ ದೇವರುಗಳಿಂದ ಒದಗಿಸಲ್ಪಟ್ಟ ವಿವರಣೆಗಳು ಎಂಬುದಾಗಿ ದೇವರ ಕಡೆಗೆ ಬೆರಳುಮಾಡಿ ತೋರಿಸುತ್ತಿದ್ದರು.

ರಜಾದಿನಗಳು, ಭೋಜನಕೂಟಗಳು ಮತ್ತು ಹಬ್ಬಗಳು[ಬದಲಾಯಿಸಿ]

ಪ್ರಾಚೀನ ಮೆಸೊಪಟ್ಯಾಮಿಯನ್ನರು ಪ್ರತಿತಿಂಗಳಲ್ಲೂ ಉತ್ಸವಾಚರಣೆಗಳನ್ನು ಹೊಂದಿದ್ದರು. ಪ್ರತಿ ತಿಂಗಳಿಗಾಗಿರುವ ಕ್ರಿಯಾವಿಧಿ ಆಚರಣೆಗಳು ಮತ್ತು ಹಬ್ಬಗಳ ವಿಷಯವು ಆರು ಪ್ರಮುಖ ಅಂಶಗಳಿಂದ ನಿಷ್ಕರ್ಷಿಸಲ್ಪಡುತ್ತದೆ:

 1. ಚಂದ್ರನ ಕಲೆ ಅಥವಾ ದೃಶ್ಯಭಾಗ;
  ವರ್ಧಿಸುತ್ತಿರುವ ಚಂದ್ರ = ಸಮೃದ್ಧಿ ಮತ್ತು ಬೆಳವಣಿಗೆ;
  ಕ್ಷಯಿಸುತ್ತಿರುವ ಚಂದ್ರ = ಅವನತಿ, ಸಂರಕ್ಷಣೆ, ಮತ್ತು ಪಾತಾಳಲೋಕದ ಹಬ್ಬಗಳು;
 2. ವಾರ್ಷಿಕ ಕೃಷಿಯ ಆವರ್ತನ ಅಥವಾ ಚಕ್ರದ ದೃಶ್ಯಭಾಗ;
 3. ಸೌರವರ್ಷದ ವಿಷುವಂದ್ಬಿಂದಗಳು ಮತ್ತು ಆಯನ ಸಂಕ್ರಾಂತಿಗಳು;
 4. ದೇವನಗರ ಮತ್ತು ಅದರ ದೈವೀಕ ಪೋಷಕರ ಪುರಾಣಕಥೆಗಳು;
 5. ಆಳುತ್ತಿರುವ ಸಾರ್ವಭೌಮನ ಯಶಸ್ಸು;
 6. ನಿರ್ದಿಷ್ಟ ಐತಿಹಾಸಿಕ ಘಟನೆಗಳ ಸ್ಮರಣೆ (ಅಸ್ತಿಭಾರ ಹಾಕುವಿಕೆ, ಸೇನಾ ವಿಜಯಗಳು, ದೇವಸ್ಥಾನದ ರಜಾದಿನಗಳು, ಇತ್ಯಾದಿ.)

ಪ್ರಮುಖ ದೇವರುಗಳು ಮತ್ತು ದೇವತೆಯರು[ಬದಲಾಯಿಸಿ]

 • ಅನು ಸುಮೇರಿಯನ್ನರ ಆಕಾಶದ ದೇವರಾಗಿದ್ದ. ಆತ ಕಿ ಎಂಬಾಕೆಯನ್ನು ಮದುವೆಯಾಗಿದ್ದ, ಆದರೆ ಮೆಸೊಪಟ್ಯಾಮಿಯಾದ ಇತರ ಕೆಲವೊಂದು ಧರ್ಮಗಳ ಪ್ರಕಾರ ಅವನಿಗೆ ಉರಸ್‌ ಎಂಬ ಹೆಸರಿನ ಹೆಂಡತಿಯಿದ್ದಳು. ಆತನನ್ನು ದೇವತಾಗಣದಲ್ಲಿನ ಅತ್ಯಂತ ಪ್ರಮುಖ ದೇವರು ಎಂದು ಪರಿಗಣಿಸಲಾಗಿತ್ತಾದರೂ, ಮಹಾಕಾವ್ಯಗಳಲ್ಲಿನ ಒಂದು ಬಹುಮಟ್ಟಿನ ನಿಷ್ಕ್ರಿಯ ಪಾತ್ರವನ್ನು ಆತ ವಹಿಸಿಕೊಂಡ, ಮತ್ತು ತನ್ಮೂಲಕ ಅತ್ಯಂತ ಶಕ್ತಿಯುತ ದೇವರು ಎಂಬ ಹಕ್ಕನ್ನು ಸಾಧಿಸಲು ಎನ್ಲಿಲ್‌ಗೆ ಅನುವುಮಾಡಿಕೊಟ್ಟ.
 • ಆರಂಭದಲ್ಲಿ ಎನ್ಲಿಲ್‌ ಮೆಸೊಪಟ್ಯಾಮಿಯಾದ ಧರ್ಮದಲ್ಲಿನ ಅತ್ಯಂತ ಶಕ್ತಿಯುತ ದೇವರಾಗಿದ್ದ. ನಿನ್ಲಿಲ್‌ ಅವನ ಹೆಂಡತಿಯಾಗಿದ್ದಳು, ಮತ್ತು ಅವನ ಮಕ್ಕಳ ಹೆಸರುಗಳು ಹೀಗಿದ್ದವು: ಇಸ್ಕುರ್‌ (ಕೆಲವೊಮ್ಮೆ), ನನ್ನಾ - ಸೂಯೆನ್‌, ನೆರ್ಗಲ್‌, ನಿಸಬಾ, ನಮ್‌ತಾರ್‌, ನಿನುರ್ತಾ (ಕೆಲವೊಮ್ಮೆ), ಪಾಬಿಲ್‌ಸ್ಯಾಗ್‌, ನುನ್ಶು, ಎನ್ಬಿಲುಲು, ಉರಸ್‌ ಝಬಾದಾ ಮತ್ತು ಎನ್ನುಗಿ. ದೇವತಾಗಣದಲ್ಲಿನ ಅವನ ಅತ್ಯುನ್ನತ ಸ್ಥಾನವು ನಂತರದಲ್ಲಿ ಮರ್ದುಕ್‌ನಿಂದ ಮತ್ತು ಆಮೇಲೆ ಅಶುರ್‌ನಿಂದ ಕಿತ್ತುಕೊಳ್ಳಲ್ಪಟ್ಟಿತು.
 • ಎನ್ಕಿ (ಇಯಾ) ಎರಿದುವಿನ ದೇವರಾಗಿದ್ದ. ಆತ ಮಳೆಯ ದೇವರಾಗಿದ್ದ.
 • ಮರ್ದುಕ್‌, ಬ್ಯಾಬಿಲೋನ್‌ನ ಅಗ್ರಗಣ್ಯ ದೇವರಾಗಿದ್ದ. ಬ್ಯಾಬಿಲೋನ್‌ ಅಧಿಕಾರಕ್ಕೆ ಬಂದಾಗ, ಅಲ್ಲಿನ ಪುರಾಣಕಥೆಗಳು ಮರ್ದುಕ್‌ನನ್ನು ಓರ್ವ ಕೃಷಿಯ ದೇವರಾಗಿದ್ದ ಅವನ ಮೂಲಸ್ಥಾನದಿಂದ ದೇವತಾಗಣದಲ್ಲಿನ ಅಗ್ರಗಣ್ಯ ದೇವರ ಸ್ಥಾನಕ್ಕೆ ಏರಿಸಿದವು.
 • ಅಶುರ್‌,
ಅಸಿರಿಯಾದ ಸಾಮ್ರಾಜ್ಯದ ದೇವರಾಗಿದ್ದ ಮತ್ತು ಇದೇ ರೀತಿಯಲ್ಲಿ ಅಸಿರಿಯನ್ನರು ಅಧಿಕಾರಕ್ಕೇರಿದಾಗ, ಅವರ ಪುರಾಣ ಕಥೆಗಳು ಅಶುರ್‌ನನ್ನು ಪ್ರಾಮುಖ್ಯತೆ ಹೊಂದಿರುವ ಸ್ಥಾನವೊಂದಕ್ಕೆ ಏರಿಸಿದವು.
 • ಗುಲಾ ಅಥವಾ ಉಟು (ಸುಮೇರಿಯಾ ಭಾಷೆಯಲ್ಲಿ), ಶಮಾಶ್‌ (ಅಕಾಡ್‌ನ ಭಾಷೆಯಲ್ಲಿ), ಸೂರ್ಯ ದೇವರು ಮತ್ತು ನ್ಯಾಯದೇವರಾಗಿದ್ದ.
 • ಎರಶ್ಕಿಗಲ್‌ ಅಧೋಲೋಕದ ದೇವತೆಯಾಗಿದ್ದಳು.
 • ನಬು, ಬರಹಗಾರಿಕೆಗೆ ಸಂಬಂಧಿಸಿದ ಮೆಸೊಪಟ್ಯಾಮಿಯಾದ ದೇವರಾಗಿದ್ದ. ಆತ ತುಂಬಾ ಬುದ್ಧಿವಂತನಾಗಿದ್ದ, ಮತ್ತು ತನ್ನ ಬರಹಗಾರಿಕೆಯ ಸಾಮರ್ಥ್ಯಕ್ಕೆ ಆತ ಮೆಚ್ಚುಗೆಯನ್ನೂ ಪಡೆದಿದ್ದ. ಸ್ವರ್ಗ ಮತ್ತು ಭೂಮಿಯ ಹತೋಟಿಯನ್ನು ಆತ ಹೊಂದಿದ್ದ ಎಂದು ಕೆಲವೊಂದು ಸ್ಥಳಗಳಲ್ಲಿ ನಂಬಲಾಗಿತ್ತು. ನಂತರದ ಅವಧಿಗಳಲ್ಲಿ ಅವನ ಪ್ರಾಮುಖ್ಯತೆಯು ಪರಿಗಣನೀಯವಾದ ರೀತಿಯಲ್ಲಿ ಹೆಚ್ಚಾಯಿತು.
 • ನಿನುರ್ತಾ, ಯುದ್ಧಕ್ಕೆ ಸಂಬಂಧಿಸಿದ ಸುಮೇರಿಯನ್ನರ ದೇವರಾಗಿದ್ದ. ಆತ ದೇವಾಂಶ ಪುರುಷರ ಅಥವಾ ಧೀರೋದಾತ್ತರ ದೇವರೂ ಆಗಿದ್ದ.
 • ಇಸ್ಕುರ್‌ (ಅಥವಾ ಅದಾದ್‌), ಬಿರುಗಾಳಿಗಳ ದೇವರಾಗಿದ್ದ.
 • ಎರ್ರ, ಪ್ರಾಯಶಃ ಬರಗಾಲದ ಅಥವಾ ಅನಾವೃಷ್ಟಿಯ ದೇವರಾಗಿದ್ದ. ನೆಲವನ್ನು ಪಾಳುಗೆಡವುವುದಕ್ಕೆ ಸಂಬಂಧಿಸಿದಂತೆ ಅವನನ್ನು ಅದಾದ್‌ ಮತ್ತು ನೆರ್ಗಲ್‌‌ರೊಂದಿಗೆ ಜೊತೆಗೂಡಿ ಅನೇಕ ಬಾರಿ ಉಲ್ಲೇಖಿಸಲಾಗುತ್ತದೆ.
 • ನೆರ್ಗಲ್‌, ಪ್ರಾಯಶಃ ಓರ್ವ ಪ್ಲೇಗು ದೇವರಾಗಿದ್ದ. ಆತ ಎರಶ್ಕಿಗಲ್‌ಳ ಗಂಡನೂ ಆಗಿದ್ದ.
 • ಝು ಎಂದೂ ಹೆಸರಾದ ಪಝುಝು ಓರ್ವ ಕೆಟ್ಟ ದೇವರಾಗಿದ್ದ. ಎನ್ಲಿಲ್‌‌ನ ಹಣೆಬರಹದ ಮಾತ್ರೆಗಳನ್ನು ಆತ ಕದ್ದಿದ್ದ, ಮತ್ತು ಇದಕ್ಕಾಗಿ ಆತ ಕೊಲ್ಲಲ್ಪಟ್ಟ. ಯಾವುದೇ ರೋಗಪರಿಹಾರಕಗಳಿದ್ದ ರೋಗಗಗಳನ್ನೂ ಸಹ ಆತ ತಂದ.

ಹೂಳುವಿಕೆಗಳು[ಬದಲಾಯಿಸಿ]

ಮೆಸೊಪಟ್ಯಾಮಿಯಾದ ಭಾಗಗಳಲ್ಲಿ ನೂರಾರು ಸಮಾಧಿಗಳು ಉತ್ಖನನಕ್ಕೆ ಒಳಗಾದವಷ್ಟೇ ಅಲ್ಲದೇ, ಮೆಸೊಪಟ್ಯಾಮಿಯಾದ ಹೂಳುವಿಕೆಯ ಪದ್ಧತಿಗಳ ಕುರಿತಾದ ಮಾಹಿತಿಯನ್ನು ಬಹಿರಂಗಪಡಿಸಿದವು. ಉರ್‌ ನಗರದಲ್ಲಿ, ಬಹುಪಾಲು ಜನರನ್ನು ಅವರ ಮನೆಗಳ ಅಡಿಯಲ್ಲಿನ ಕುಟುಂಬದ ಸಮಾಧಿಗಳಲ್ಲಿ (ಕ್ಯಾಟಲ್‌ಹುಯುಕ್‌‌ನಲ್ಲಿರುವಂತೆ) ಒಂದಷ್ಟು ಆಸ್ತಿ-ಐಶ್ವರ್ಯಗಳೊಂದಿಗೆ ಹೂಳಲಾಗಿತ್ತು. ಕೆಲವು ಜನರನ್ನು ಚಾಪೆಗಳು ಹಾಗೂ ರತ್ನಗಂಬಳಿಗಳಲ್ಲಿ ಸುತ್ತಿಟ್ಟು ಸಮಾಧಿ ಮಾಡಲಾಯಿತು. ರೋಗಗ್ರಸ್ತ ಮಕ್ಕಳನ್ನು ದೊಡ್ಡ "ಜಾಡಿಗಳಲ್ಲಿ" ಇಟ್ಟು ಅವನ್ನು ಕುಟುಂಬದ ಪ್ರಾರ್ಥನಾ ಮಂದಿರದಲ್ಲಿ ಇರಿಸಲಾಗಿತ್ತು. ಇತರ ಉಳಿಕೆಗಳು ಅಥವಾ ಅವಶೇಷಗಳನ್ನು ನಗರದ ಸಾರ್ವಜನಿಕ ಸ್ಮಶಾನಗಳಲ್ಲಿ ಹೂತಿರುವುದು ಕಂಡುಬಂದಿತ್ತು. ಅತ್ಯಂತ ಅಮೂಲ್ಯ ವಸ್ತುಗಳನ್ನು ಒಳಗೊಂಡಿದ್ದ 17 ಸಮಾಧಿಗಳು ಈ ಉತ್ಖನನದ ಅವಧಿಯಲ್ಲಿ ಕಂಡುಬಂದವು; ಇವು ರಾಜವಂಶದ ಸಮಾಧಿಗಳಾಗಿದ್ದವು ಎಂದು ಗ್ರಹಿಸಲಾಗಿದೆ.

ಸಂಸ್ಕೃತಿ[ಬದಲಾಯಿಸಿ]

ಸಂಗೀತ, ಹಾಡುಗಳು ಮತ್ತು ಸಂಗೀತವಾದ್ಯಗಳು[ಬದಲಾಯಿಸಿ]

ದೇವರುಗಳಿಗಾಗಿ ಕೆಲವೊಂದು ಹಾಡುಗಳನ್ನು ಬರೆಯಲಾಯಿತಾದರೂ, ಪ್ರಮುಖ ಘಟನೆಗಳನ್ನು ವಿವರಿಸಲು ಅನೇಕ ಹಾಡುಗಳನ್ನು ಬರೆಯಲಾಯಿತು. ಸಂಗೀತ ಮತ್ತು ಹಾಡುಗಳು ರಾಜರನ್ನು ರಂಜಿಸಿದವಾದರೂ, ತಮ್ಮ ಮನೆಗಳಲ್ಲಿ ಅಥವಾ ವ್ಯಾಪಾರ ಚೌಕಗಳಲ್ಲಿ ಹಾಡಿ ಕುಣಿಯಲು ಬಯಸುತ್ತಿದ್ದ ಜನಸಾಮಾನ್ಯರೂ ಅವನ್ನು ಆನಂದಿಸುತ್ತಿದ್ದರು. ಹಾಡುಗಳನ್ನು ಮಕ್ಕಳಿಗೆ ಮತ್ತು ಮಕ್ಕಳ ಮುಂದೆ ಹಾಡಲಾಗುತ್ತಿತ್ತು. ಆ ಹಾಡುಗಳನ್ನು ಅವರು ತಮ್ಮ ಮಕ್ಕಳಿಗೆ ವರ್ಗಾಯಿಸುತ್ತಿದ್ದರು. ಈ ರೀತಿಯಲ್ಲಿ, ಯಾರಾದರೊಬ್ಬರು ಅವುಗಳನ್ನು ಬರೆದಿಡುವವರೆಗೆ ಆ ಹಾಡುಗಳು ಅನೇಕ ಪೀಳಿಗೆಗಳ ಮೂಲಕ ವರ್ಗಾಯಿಸಲ್ಪಟ್ಟವು. ಅಂತಿಮವಾಗಿ ಆಧುನಿಕ ಇತಿಹಾಸಕಾರರಿಗೆ ವರ್ಗಾಯಿಸಲ್ಪಟ್ಟ ಐತಿಹಾಸಿಕ ಘಟನೆಗಳನ್ನು ಕುರಿತಾದ ಅತ್ಯಂತ ಪ್ರಮುಖವಾದ ಮಾಹಿತಿಯನ್ನು ಶತಮಾನಗಳ ಆದ್ಯಂತವಾಗಿ ಮುಂದಿನ ಪೀಳಿಗೆಗೆ ಸಾಗಿಸುವ ಒಂದು ಮಾಧ್ಯಮವಾಗಿ ಈ ಹಾಡುಗಳು ಪಾತ್ರವನ್ನು ವಹಿಸಿದವು.

ಔಡ್‌ (ಅರೇಬಿಕ್‌:العود) ಎಂಬುದು ತಂತಿಯನ್ನು ಹೊಂದಿರುವ ಒಂದು ಸಣ್ಣ ಸಂಗೀತವಾದ್ಯವಾಗಿದೆ. ಔಡ್‌ನ ಅತ್ಯಂತ ಹಳೆಯ ಚಿತ್ರಾತ್ಮಕ ದಾಖಲೆಯು, 5000ಕ್ಕೂ ಹೆಚ್ಚಿನ ವರ್ಷಗಳ ಹಿಂದಿನ ದಕ್ಷಿಣದ ಮೆಸೊಪಟ್ಯಾಮಿಯಾದಲ್ಲಿನ ಉರುಕ್‌ ಅವಧಿಯಷ್ಟು ಹಿಂದಿನ ಕಾಲದ್ದಾಗಿದೆ. ಒಂದು ಸಿಲಿಂಡರು ಮೇಲಿನ ಕೆತ್ತನೆಯ ಮೇಲೆ ಇದನ್ನು ಚಿತ್ರಿಸಲಾಗಿದ್ದು, ಸದ್ಯಕ್ಕೆ ಅದು ಬ್ರಿಟಿಷ್‌ ವಸ್ತುಸಂಗ್ರಹಾಲಯದಲ್ಲಿ ಇರಿಸಲ್ಪಟ್ಟಿದೆ ಮತ್ತು ಡಾ.ಡೊಮಿನಿಕ್‌ ಕಾಲನ್‌ರವರ ಸ್ವಾಧೀನದಲ್ಲಿದೆ. ದೋಣಿಯೊಂದರಲ್ಲಿ ತನ್ನ ಸಂಗೀತವಾದ್ಯಗಳೊಂದಿಗೆ ಬಾಗಿ ಕುಳಿತಿರುವ ಸ್ತ್ರೀಯೊಬ್ಬಳು ಬಲಗೈನಲ್ಲಿ ಅದನ್ನು ನುಡಿಸುತ್ತಿರುವುದನ್ನು ಸದರಿ ಚಿತ್ರಿಕೆಯು

ಚಿತ್ರಿಸುತ್ತದೆ. ಈ ಸಂಗೀತವಾದ್ಯವು
ಮೆಸೊಪಟ್ಯಾಮಿಯಾದ ಇತಿಹಾಸದಾದ್ಯಂತ ನೂರಾರು ಬಾರಿ ಕಾಣಿಸಿಕೊಳ್ಳುತ್ತದೆ ಮತ್ತು ಮತ್ತೊಮ್ಮೆ ಪ್ರಾಚೀನ ಈಜಿಪ್ಟ್‌‌ನಲ್ಲಿ 18ನೇ ರಾಜವಂಶದಿಂದ ನಂತರದ ಅವಧಿಯಲ್ಲಿ ಉದ್ದವಾದ- ಮತ್ತು ಗಿಡ್ಡನೆಯ-ಕತ್ತಿನ ಬಗೆಗಳಲ್ಲಿ ಈ ಸಂಗೀತವಾದ್ಯವು ಕಾಣಿಸಿಕೊಳ್ಳುತ್ತದೆ.

ಯುರೋಪ್‌‌ಲೂಟ್‌ ತಂತಿವಾದ್ಯದ ಒಂದು ಪೂರ್ವವರ್ತಿಯಾಗಿ ಔಡ್‌ ವಾದ್ಯವನ್ನು ಪರಿಗಣಿಸಲಾಗಿದೆ. ಅಲ್‌-'ಊದ್‌ العود ಅಂದರೆ 'ಮರ' ಎಂದು ಅರ್ಥವನ್ನು ಕೊಡುವ ಅರೇಬಿಕ್‌ ಪದದಿಂದ ಇದರ ಹೆಸರು ಜನ್ಯವಾಗಿದ್ದು, ಯಾವ ಮರದಿಂದ ಔಡ್‌ ವಾದ್ಯವನ್ನು ತಯಾರಿಸಲಾಗಿತ್ತೋ ಪ್ರಾಯಶಃ ಇದು ಆ ಮರದ ಹೆಸರೇ ಇರಬೇಕೆನಿಸುತ್ತದೆ. (ನಿರ್ದೇಶಕ ಗುಣವಾಚಿಯೊಂದಿಗಿನ ಅರೇಬಿಕ್‌ ಹೆಸರು, 'ಲೂಟ್‌' ಎಂಬ ಪದದ ಮೂಲವಾಗಿದೆ.)

ಆಟಗಳು[ಬದಲಾಯಿಸಿ]

ಬೇಟೆಯಾಡುವಿಕೆಯು ಅಸಿರಿಯಾದ ರಾಜರ ನಡುವೆ ಜನಪ್ರಿಯವಾಗಿತ್ತು. ಮುಷ್ಟಿಯುದ್ಧ ಮತ್ತು ಕುಸ್ತಿ ಪಂದ್ಯಗಳು ಕಲೆಯಲ್ಲಿ ಆಗಿಂದಾಗ್ಗೆ ಚಿತ್ರಿಸಲ್ಪಟ್ಟಿವೆ, ಮತ್ತು ಪೋಲೋ ಆಟದ ಒಂದು ಸ್ವರೂಪವೂ ಪ್ರಾಯಶಃ ಜನಪ್ರಿಯವಾಗಿತ್ತು ಎನಿಸುತ್ತದೆ. ಆದರೆ ಆಟಗಾರರು ಕುದುರೆಗಳ ಮೇಲೆ ಕೂರುವುದಕ್ಕೆ ಬದಲಾಗಿ ಇತರ ಜನರ ಹೆಗಲುಗಳ ಮೇಲೆ ಕೂರುತ್ತಿದ್ದುದು ಈ ಆಟದ ವೈಶಿಷ್ಟ್ಯವಾಗಿತ್ತು.[೨೪] ರಗ್ಬಿ ಕ್ರೀಡೆಯಂತೆಯೇ ಇರುವ ಮೆಜೋರೆ ಆಟವನ್ನೂ ಅವರು ಆಡುತ್ತಿದ್ದರಾದರೂ, ಮರದಲ್ಲಿ ಮಾಡಿದ್ದ ಚೆಂಡನ್ನು ಇದರಲ್ಲಿ ಆಡಲು ಬಳಸಲಾಗುತ್ತಿತ್ತು. ಸೆನೆಟ್‌ ಮತ್ತು ಬ್ಯಾಕ್‌ಗ್ಯಾಮನ್‌ನ್ನು (ಒಂದು ಪಗೆಯ ಪಗಡೆ ಆಟ) ಹೋಲುವ ಒಂದು ತೆರನಾದ ಫಲಕದ ಆಟವನ್ನೂ ಅವರು ಆಡುತ್ತಿದ್ದರು. ಅದಕ್ಕೀಗ "ರಾಯಲ್‌ ಗೇಮ್‌ ಆಫ್‌ ಮಾ-ಅಸೆಬ್ಲು" ಎಂಬ ಹೆಸರು ಬಂದಿದೆ.

ಕುಟುಂಬ ಜೀವನ[ಬದಲಾಯಿಸಿ]

ರಾಯಲ್‌ ಹಾಲೋವೇ ಕಾಲೇಜಿನಲ್ಲಿರುವ ಬ್ಯಾಬಿಲೋನಿಯಾದ ಮದುವೆ ಮಾರುಕಟ್ಟೆ.

ಮೆಸೊಪಟ್ಯಾಮಿಯಾವು ತನ್ನ ಇತಿಹಾಸದಾದ್ಯಂತವೂ ಹೆಚ್ಚು ಹೆಚ್ಚು ಒಂದು ಪೇಟ್ರಿಯಾರ್ಕನ್ನು ಹೋಲುವ ಸಮಾಜವಾಯಿತು. ಇದರಲ್ಲಿ ಮಹಿಳೆಯರಿಗಿಂತ ಪುರುಷರು ಅತಿ ಹೆಚ್ಚು ಶಕ್ತಿಶಾಲಿಗಳಾಗಿದ್ದರು. ಥೋರ್ಕಿಲ್ಡ್‌ ಜಾಕೋಬ್‌ಸನ್‌, ಮತ್ತು ಇತರರು ಸೂಚಿಸಿರುವ ಪ್ರಕಾರ, ಪ್ರಾಚೀನ ಮೆಸೊಪಟ್ಯಾಮಿಯಾದ ಸಮಾಜವು "ಹಿರಿಯರ ಒಂದು ಪರಿಷತ್ತಿನಿಂದ" ಆಳಲ್ಪಡುತ್ತಿತ್ತು. ಇದರಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಸಮಾನ ಪ್ರಾತಿನಿಧ್ಯವಿತ್ತಾದರೂ, ಕಾಲಾನಂತರದಲ್ಲಿ ಮಹಿಳೆಯರ ಸ್ಥಾನಮಾನವು ಕುಸಿಯುತ್ತಿದ್ದಂತೆ, ಪುರುಷರ ಸ್ಥಾನಮಾನವು ಹೆಚ್ಚಾಯಿತು. ಶಾಲಾ ಶಿಕ್ಷಣದ ವ್ಯವಸ್ಥೆಗೆ ಸಂಬಂಧಿಸಿ ಹೇಳುವುದಾದರೆ, ರಾಜವಂಶಕ್ಕೆ ಸೇರಿದ ಮಕ್ಕಳು ಹಾಗೂ ಹಸ್ತಪ್ರತಿಗಳ ನಕಲುಗಾರರು, ವೈದ್ಯರು, ದೇವಸ್ಥಾನದ ಆಡಳಿತಗಾರರು, ಮತ್ತು ಇದೇ ಬಗೆಯ ಇತರ ವೃತ್ತಿನಿರತರ ಮಕ್ಕಳು ಮತ್ತು ಶ್ರೀಮಂತರ ಮಕ್ಕಳು ಮಾತ್ರವೇ ಶಾಲೆಗೆ ಹೋಗುತ್ತಿದ್ದರು. ಬಹುಪಾಲು ಹುಡುಗರಿಗೆ ಅವರ ತಂದೆಯ ಕಸುಬುಗಾರಿಕೆಯನ್ನೇ ಕಲಿಸಲಾಗುತ್ತಿತ್ತು ಅಥವಾ ಕಸುಬುಗಾರಿಕೆಯೊಂದನ್ನು ಕಲಿಯಲು ಅವರನ್ನು ಶಿಷ್ಯವೃತ್ತಿಗೆ ನಿಯೋಜಿಸಲಾಗುತ್ತಿತ್ತು.[೨೫] ಗೃಹಕೃತ್ಯ ನಿರ್ವಹಣೆ ಮತ್ತು ಅಡುಗೆಯನ್ನು ಕಲಿಯಲು, ಹಾಗೂ ಮನೆಯಲ್ಲಿನ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ಹುಡುಗಿಯರು ತಮ್ಮ ತಾಯಂದಿರೊಂದಿಗೆ ಮನೆಯಲ್ಲೇ ಉಳಿಯಬೇಕಿತ್ತು. ಬೇಳೆಯನ್ನು ಜಜ್ಜುವುದು, ಅಥವಾ ಹಕ್ಕಿಗಳನ್ನು ಶುದ್ಧಗೊಳಿಸುವುದು ಇವೇ ಮೊದಲಾದ ಕೆಲಸಗಳನ್ನು ಮಾಡುವುದರೊಂದಿಗೆ ಕೆಲವೊಂದು ಮಕ್ಕಳು ಕೆಲಸದಲ್ಲಿ ನೆರವಾಗುತ್ತಿದ್ದರು. ಮೆಸೊಪಟ್ಯಾಮಿಯಾದಲ್ಲಿನ ಮಹಿಳೆಯರು ಹಕ್ಕುಗಳನ್ನು ಹೊಂದಿದ್ದುದು ಇತಿಹಾಸದಲ್ಲಿನ ಆ ಸಮಯದಲ್ಲಿ ಒಂದು ರೀತಿಯ ವಾಡಿಕೆಯಲ್ಲಿಲ್ಲದ ವಿಷಯವಾಗಿತ್ತು. ಅವರು ಆಸ್ತಿಯನ್ನು ಹೊಂದಬಹುದಾಗಿತ್ತು ಮತ್ತು, ಅವರ ಬಳಿ ಸಾಕಷ್ಟು ಬಲವಾದ ಕಾರಣಗಳು ಇದ್ದಿದ್ದೇ ಆದಲ್ಲಿ, ಒಂದು ವಿಚ್ಛೇದನವನ್ನೂ ಪಡೆಯಲು ಸಾಧ್ಯವಿತ್ತು.

ಆರ್ಥಿಕತೆ[ಬದಲಾಯಿಸಿ]

ಪ್ರಾಚೀನ ಮಧ್ಯಪ್ರಾಚ್ಯದ ಗಣಿಗಾರಿಕೆ ಪ್ರದೇಶಗಳು. ಪೆಟ್ಟಿಗೆಗಳ ಬಣ್ಣಗಳು: ಕಂದಿನಲ್ಲಿರುವುದು ಆರ್ಸೆನಿಕ್‌, ಕೆಂಪಿನಲ್ಲಿರುವುದು ತಾಮ್ರ, ಬೂದು ಬಣ್ಣದಲ್ಲಿರುವುದು ತವರ, ಕೆಂಪುಛಾಯೆಯ ಕಂದಿನಲ್ಲಿರುವುದು ಕಬ್ಬಿಣ, ಹಳದಿಯಲ್ಲಿರುವುದು ಬಂಗಾರ, ಬಿಳಿಯಲ್ಲಿರುವುದು ಬೆಳ್ಳಿ ಮತ್ತು ಕಪ್ಪು ಬಣ್ಣದಲ್ಲಿರುವುದು ಸೀಸ. ಹಳದಿ ಪ್ರದೇಶವು ಆರ್ಸೆನಿಕ್‌ ಕಂಚನ್ನು ಪ್ರತಿನಿಧಿಸಿದರೆ, ಬೂದು ಪ್ರದೇಶವು ತವರ ಕಂಚನ್ನು ಪ್ರತಿನಿಧಿಸುತ್ತದೆ.

ಸುಮೇರು ಮೊದಲ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಿದರೆ, ಬ್ಯಾಬಿಲೋನಿಯನ್ನರು

ಅರ್ಥಶಾಸ್ತ್ರದ ಅತ್ಯಂತ ಮುಂಚಿನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದರು. ಇದು ಆಧುನಿಕ ಕೇನ್ಸ್‌ಪಂಥೀಯ ಸಿದ್ಧಾಂತದ-ನಂತರದ ಅರ್ಥಶಾಸ್ತ್ರದೊಂದಿಗೆ ಹೋಲಿಕೆಗೆ ಅರ್ಹವಾಗಿತ್ತಾದರೂ, "ಏನೋ ಒಂದು ನಡೆಯುತ್ತದೆ" ಎಂಬ ಮಾರ್ಗ ಅಥವಾ ಧೋರಣೆಯನ್ನು ಹೆಚ್ಚು ಒಳಗೊಂಡಿತ್ತು.[೧೦]

ಕೃಷಿ[ಬದಲಾಯಿಸಿ]

ಮೆಸೊಪಟ್ಯಾಮಿಯಾವು ಹೊಂದಿರುವ ಭೌಗೋಳಿಕ ಲಕ್ಷಣದ ಅನುಸಾರವಾಗಿ ಹೇಳುವುದಾದರೆ, ಕೇವಲ ನೀರಾವರಿ ಮತ್ತು ಉತ್ತಮ ಚರಂಡಿ ವ್ಯವಸ್ಥೆಯೊಂದಿಗೆ ಮಾತ್ರವೇ ಕೃಷಿ ಕಾರ್ಯವು ಸಾಧ್ಯವಾಗುತ್ತದೆ. ಈ ಒಂದು ಅಂಶವೇ ಮೆಸೊಪಟ್ಯಾಮಿಯಾದ ನಾಗರಿಕತೆಯ ವಿಕಸನದ ಮೇಲೆ ಒಂದು ಗಾಡವಾದ ಪ್ರಭಾವವನ್ನು ಬೀರಿತ್ತು. ನೀರಾವರಿಯ ಅಗತ್ಯವನ್ನು ಮನಗಂಡಿದ್ದರಿಂದಲೇ ಸುಮೇರಿಯಾದ ಜನರು ಮತ್ತು ನಂತರದಲ್ಲಿ ಅಕಾಡ್‌ನ ಜನರು ತಮ್ಮ ತಮ್ಮ ನಗರಗಳನ್ನು ಟೈಗ್ರಿಸ್‌ ಮತ್ತು ಯೂಫ್ರಟಿಸ್‌ನ ಉದ್ದಕ್ಕೂ ಮತ್ತು ಈ ನದಿಗಳ ಶಾಖೆಗಳ ಉದ್ದಕ್ಕೂ ಕಟ್ಟಲು ಕಾರಣವಾಯಿತು. ಉರ್‌ ಮತ್ತು ಉರುಕ್‌ನಂಥ ಕೆಲವೊಂದು ಪ್ರಮುಖ ನಗರಗಳು‌, ಯೂಫ್ರಟಿಸ್‌ನ ಉಪನದಿಗಳ ಬಳಿಯಲ್ಲಿ ನೆಲೆಗೊಂಡರೆ, ಇತರ ನಗರಗಳು, ಮುಖ್ಯವಾಗಿ ಲಗಾಶ್‌ನಂಥ ನಗರಗಳು, ಟೈಗ್ರಿಸ್‌ ನದಿಯ ಶಾಖೆಗಳ ದಡದಲ್ಲಿ ನೆಲೆಗೊಂಡವು. ಈ ನದಿಗಳು, ಮೀನು (ಇದನ್ನು ಆಹಾರವಾಗಿ ಮತ್ತು ರಸಗೊಬ್ಬರವಾಗಿ ಬಳಸಲಾಗುತ್ತಿತ್ತು), ಲಾಳದ ಕಡ್ಡಿಗಳು ಮತ್ತು ಜೇಡಿಮಣ್ಣು (ಕಟ್ಟಡ ಸಾಮಗ್ರಿಗಳಿಗಾಗಿ) ಇವೇ ಮೊದಲಾದ ಹೆಚ್ಚಿನ ಪ್ರಯೋಜನಗಳನ್ನು ಒದಗಿಸಿದವು.

ನೀರಾವರಿಯ ನೆರವಿನೊಂದಿಗೆ ಮೆಸೊಪಟ್ಯಾಮಿಯಾದಲ್ಲಿನ ಆಹಾರ ಪೂರೈಕೆಯು ಸಾಕಷ್ಟು ಸಮೃದ್ಧವಾಗಿತ್ತು. ಫಲವಂತ ಬಾಲಚಂದ್ರ ವಲಯದ (ಅರ್ಧವೃತ್ತಾಕಾರದ ಪ್ರದೇಶದ) ವಾಯವ್ಯ ಭಾಗವನ್ನು ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ಕಣಿವೆಗಳು ರೂಪಿಸಿದ್ದು ಇದಕ್ಕೆ ಕಾರಣವಾಗಿದ್ದು, ಜೋರ್ಡಾನ್‌ ನದಿ ಮತ್ತು ನೈಲ್‌ ನದಿಯ ಕಣಿವೆಗಳನ್ನೂ ಇದು ಒಳಗೊಂಡಿತ್ತು. ನದಿಗಳಿಗೆ ಸಮೀಪವಿದ್ದ ಜಮೀನು ಫಲವತ್ತಾಗಿದ್ದು ಬೆಳೆಗಳಿಗೆ ಅದು ಉತ್ತಮವಾಗಿ ಪರಿಣಮಿಸಿತ್ತಾದರೂ, ನೀರಿನಿಂದ ತುಂಬಾ ದೂರದಲ್ಲಿದ್ದ ಜಮೀನಿನ ಭಾಗಗಳು ಶುಷ್ಕವಾಗಿದ್ದು, ಬಹುಮಟ್ಟಿಗೆ ವಾಸಯೋಗ್ಯವಲ್ಲದವಾಗಿದ್ದವು. ಈ ಕಾರಣದಿಂದಾಗಿಯೇ ನೀರಾವರಿಯ ಅಭಿವೃದ್ಧಿಯು ಮೆಸೊಪಟ್ಯಾಮಿಯಾದ ವಸಾಹತುಗಾರರಿಗೆ ಅತ್ಯಂತ ಮುಖ್ಯವಾಗಿ ಕಂಡಿತ್ತು. ಅಣೆಕಟ್ಟುಗಳಿಂದ ಮತ್ತು ಮೇಲುಕಾಲುವೆಗಳ ಬಳಕೆಯಿಂದ ನೀರಿನ ನಿಯಂತ್ರಣ ಮಾಡುವುದು ಮೆಸೊಪಟ್ಯಾಮಿಯಾದ ಇತರ ಹೊಸ ಕಲ್ಪನೆಗಳಲ್ಲಿ ಸೇರಿದೆ. ಮೆಸೊಪಟ್ಯಾಮಿಯಾದಲ್ಲಿನ ಫಲವತ್ತಾದ ಜಮೀನಿನ ಆರಂಭದ ವಸಾಹತುಗಾರರು, ಮಣ್ಣನ್ನು ಹದಗೊಳಿಸಲು ಅಥವಾ ಮೆದುಗೊಳಿಸಲು ಮರದಿಂದ ಮಾಡಿದ ನೇಗಿಲುಗಳನ್ನು ಬಳಸಿದರು. ಬಾರ್ಲಿ, ಈರುಳ್ಳಿಗಳು, ದ್ರಾಕ್ಷಿಗಳು, ಟರ್ನಿಪ್‌ ಗೆಡ್ಡೆಗಳು ಮತ್ತು ಸೇಬುಗಳಂಥ ಬೆಳೆಗಳನ್ನು ನೆಡುವುದಕ್ಕೆ ಮುಂಚಿತವಾಗಿ ಅವರು ಈ ಕ್ರಮವನ್ನು ಅನುಸರಿಸುತ್ತಿದ್ದರು. ಮೆಸೊಪಟ್ಯಾಮಿಯಾದ ವಸಾಹತುಗಾರರು ಬಿಯರ್‌ ಹಾಗೂ ಮದ್ಯವನ್ನು ತಯಾರಿಸಿದ ಮೊದಲ ಜನರ ಪೈಕಿ ಕೆಲವರಾಗಿದ್ದಾರೆ.

ನದಿಗಳು ಜೀವಕ್ಕೆ ಆಧಾರವಾಗಿದ್ದರೂ ಸಹ, ಸಂಪೂರ್ಣ ನಗರಗಳನ್ನು ಧ್ವಂಸಮಾಡಿದ ಪುನರಾವರ್ತಿಸುವ ಪ್ರವಾಹಗಳನ್ನು ಸೃಷ್ಟಿಸುವ ಮೂಲಕ ಅವು ಜೀವದ ನಾಶಕ್ಕೂ ಕಾರಣವಾಗಿವೆ. ಮೆಸೊಪಟ್ಯಾಮಿಯಾದ ಊಹಿಸಿ ಹೇಳಲಾಗದ ಹವಾಮಾನವು ರೈತರ ವಿಷಯದಲ್ಲಿ ಅನೇಕಬಾರಿ ಕಠೋರವಾಗಿ ವರ್ತಿಸುತ್ತಿತ್ತು; ಬೆಳೆಗಳು ಅನೇಕ ಬಾರಿ ನಾಶವಾಗುತ್ತಿದ್ದುದರಿಂದ, ಹಸುಗಳು ಮತ್ತು ಕುರಿಮರಿಗಳಂಥ ಆಹಾರದ ಮೀಸಲು ಮೂಲಗಳನ್ನೂ ಸಹ ಕಾಯ್ದಿಟ್ಟುಕೊಳ್ಳಲಾಗುತ್ತಿತ್ತು. ಮೆಸೊಪಟ್ಯಾಮಿಯನ್ನರು ಒಕ್ಕಲುತನದಲ್ಲಿ ಪರಿಣತಿಯನ್ನು ಸಾಧಿಸಿದ್ದರಾದ್ದರಿಂದ, ಕೆಲವೊಂದು ನಿದರ್ಶನಗಳನ್ನು ಹೊರತುಪಡಿಸಿದರೆ ವ್ಯವಸಾಯದ ಕೆಲಸವನ್ನು ಸಂಪೂರ್ಣಗೊಳಿಸಲು ರೈತರು ಜೀತದಾಳುಗಳನ್ನು ನೆಚ್ಚಿಕೊಂಡಿರಲಿಲ್ಲ. ಜೀತಪದ್ಧತಿಯನ್ನು ಕಾರ್ಯಸಾಧ್ಯವನ್ನಾಗಿ ಮಾಡಬೇಕಿದ್ದರೂ ಸಹ, ಅದರಲ್ಲಿ ಅನೇಕ ಅಪಾಯಗಳು ಸೇರಿಕೊಂಡಿದ್ದವು (ಅಂದರೆ, ಜೀತದಾಳಿನ ತಪ್ಪಿಸಿಕೊಳ್ಳುವಿಕೆ/ಬಂಡಾಯ).

ಸರ್ಕಾರ[ಬದಲಾಯಿಸಿ]

ಮೆಸೊಪಟ್ಯಾಮಿಯಾದ ಭೌಗೋಳಿಕ ಲಕ್ಷಣವು ಆ ವಲಯದ ರಾಜಕೀಯ ಬೆಳವಣಿಗೆಯ ಮೇಲೆ ಒಂದು ಗಾಢವಾದ ಪ್ರಭಾವವನ್ನು ಹೊಂದಿತ್ತು. ನದಿಗಳು ಮತ್ತು ತೊರೆಗಳ ಪೈಕಿ, ಸುಮೇರಿಯಾದ ಜನರು ನೀರಾವರಿ ಕಾಲುವೆಗಳೊಂದಿಗೆ ಮೊದಲ ನಗರಗಳನ್ನೂ ಕಟ್ಟಿದರು. ಇವು ತೆರೆದ ಮರುಭೂಮಿ ಅಥವಾ ಜೌಗುಪ್ರದೇಶದ ವಿಶಾಲವಾದ ವಿಸ್ತರಣಗಳಿಂದ ಪ್ರತ್ಯೇಕಿಸಲ್ಪಟ್ಟಿದ್ದವು. ಈ ವಿಸ್ತರಣ ಪ್ರದೇಶಗಳಲ್ಲಿ ಅಲೆಮಾರಿ ಬುಡಕಟ್ಟಿನವರು ತಿರುಗಾಡುತ್ತಿದ್ದರು. ಪ್ರತ್ಯೇಕಿತ ನಗರಗಳ ನಡುವಿನ ಸಂಪರ್ಕ-ವ್ಯವಸ್ಥೆಯು ಕಷ್ಟಕರವಾಗಿತ್ತು ಮತ್ತು ಕೆಲವೊಮ್ಮೆ ಇದು ಅಪಾಯಕಾರಿಯೂ ಆಗಿತ್ತು. ಹೀಗಾಗಿ ಸುಮೇರಿಯಾದ ಪ್ರತಿನಗರವೂ ಒಂದು ನಗರ-ಸಂಸ್ಥಾನವಾಗಿ ಮಾರ್ಪಟ್ಟಿದ್ದು, ಇತರರಿಂದ ಸ್ವತಂತ್ರವಾಗಿದ್ದುಕೊಂಡು ತನ್ನ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದರ ಕಡೆಗೆ ಆದ್ಯತೆ ನೀಡಿತ್ತು. ಕೆಲವೊಮ್ಮೆ ಒಂದು ನಗರವು ಮತ್ತೊಂದನ್ನು ಗೆದ್ದು ಆ ವಲಯವನ್ನು ತನ್ನದರೊಂದಿಗೆ ಒಗ್ಗೂಡಿಸುವ ಪ್ರಯತ್ನ ಮಾಡುತ್ತಿತ್ತು. ಆದರೆ ಇಂಥ ಪ್ರಯತ್ನಗಳಿಗೆ ಪ್ರತಿರೋಧ ಬಂದದ್ದೇ ಅಲ್ಲದೇ, ಶತಮಾನಗಳವರೆಗೂ ವಿಫಲತೆಯನ್ನು ಕಾಣಬೇಕಾಯಿತು. ಇದರ ಪರಿಣಾಮವಾಗಿ, ಸುಮೇರುವಿನ ರಾಜಕೀಯ ಇತಿಹಾಸವು ಹೆಚ್ಚೂಕಮ್ಮಿ ನಿರಂತರವಾದ ಯುದ್ಧಸ್ಥಿತಿಯ ಪೈಕಿ ಒಂದೆನಿಸಿದೆ. ಅಂತಿಮವಾಗಿ ಇಯನ್ನಾಟಮ್‌ನಿಂದ ಸುಮೇರುವು ಒಂದುಗೂಡಿಸಲ್ಪಟ್ಟಿತು. ಆದರೆ ಈ ಏಕೀಕರಣವು ಅತಿ ದುರ್ಬಲವಾಗಿತ್ತು ಮತ್ತು ಅಕಾಡ್‌ನ ಜನರು, ಕೇವಲ ಒಂದು ತಲೆಮಾರಿನ ನಂತರ 2331 B.C.ಯಲ್ಲಿ ಸುಮೇರಿಯಾವನ್ನು ಗೆದ್ದುದರಿಂದ ಈ ಏಕೀಕರಣವು ಬಹುದಿನಗಳವರೆಗೆ ಮುಂದುವರಿಯುವಲ್ಲಿ ವಿಫಲಗೊಂಡಿತು.

ಒಂದು ತಲೆಮಾರಿನಿಂದ ಆಚೆಗೆ ಮುಂದುವರಿಯುವಲ್ಲಿನ ಮತ್ತು ರಾಜರ ಶಾಂತಿಯುತ ಅನುಕ್ರಮ ಉತ್ತರಾಧಿಕಾರವನ್ನು ನೋಡುವಲ್ಲಿನ ಮೊದಲ ಯಶಸ್ವೀ ಸಾಮ್ರಾಜ್ಯವಾಗಿ ಅಕಾಡ್‌ನ ಸಾಮ್ರಾಜ್ಯವು ಹೊರಹೊಮ್ಮಿತು. ಕೇವಲ ಕೆಲವೇ ತಲೆಮಾರುಗಳ ಒಳಗೆಯೇ ಬ್ಯಾಬಿಲೋನಿಯನ್ನರು ಅವರನ್ನು ಗೆದ್ದದ್ದರಿಂದ, ಅಕಾಡ್‌ನ ಸಾಮ್ರಾಜ್ಯವು ಸಾಕಷ್ಟು ಅಲ್ಪಾಯು ಎನಿಸಿಕೊಳ್ಳಬೇಕಾಯಿತು.

ರಾಜರು[ಬದಲಾಯಿಸಿ]

ತಮ್ಮ ರಾಜರು ಮತ್ತು ರಾಣಿಯರು ದೇವರುಗಳ ನಗರದಿಂದ (ಅಂದರೆ ಸ್ವರ್ಗದಿಂದ) ಇಳಿದುಬಂದವರು ಎಂದು ಮೆಸೊಪಟ್ಯಾಮಿಯನ್ನರು ನಂಬಿದ್ದರು. ಆದರೆ ಪ್ರಾಚೀನ ಈಜಿಪ್ಟಿಯನ್ನರಿಗಿಂತ ಭಿನ್ನವಾಗಿದ್ದ ಅವರು, ತಮ್ಮ ರಾಜರನ್ನು ನಿಜವಾದ ದೇವರುಗಳೆಂದು ಎಂದಿಗೂ ನಂಬಲಿಲ್ಲ.[೨೬] ಬಹುಪಾಲು ರಾಜರು ಸ್ವತಃ ತಮ್ಮನ್ನು “ಬ್ರಹ್ಮಾಂಡದ ರಾಜ” ಅಥವಾ “ಮಹಾನ್‌ ರಾಜ” ಎಂದು ಕರೆದುಕೊಳ್ಳುತ್ತಿದ್ದರು. ರಾಜರು ತಮ್ಮ ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕಿತ್ತಾದ್ದರಿಂದ, ಅವರ ಕುರಿತು “ಕುರುಬ” ಎಂಬ ಮತ್ತೊಂದು ಹೆಸರೂ ಸಹ ಸಾಮಾನ್ಯವಾಗಿತ್ತು.

ಮೆಸೊಪಟ್ಯಾಮಿಯಾದ ಗಮನಸೆಳೆಯುವ ರಾಜರಲ್ಲಿ ಇವರು ಸೇರಿದ್ದಾರೆ:

ಲಗಾಶ್‌‌ಇಯನ್ನಾಟಮ್‌; ಈತ ಮೊದಲ (ಅಲ್ಪಾವಧಿಯ) ಸಾಮ್ರಾಜ್ಯವನ್ನು ಸಂಸ್ಥಾಪಿಸಿದ.

ಅಕಾಡ್‌‌‌‌ಸಾರ್ಗೋನ್‌; ಈತ

ಮೆಸೊಪಟ್ಯಾಮಿಯಾದ ಎಲ್ಲ ಭಾಗವನ್ನೂ ಗೆದ್ದ ಮತ್ತು ತನ್ನ ಸಂಸ್ಥಾಪಕನಿಗಿಂತ ಹೆಚ್ಚುಕಾಲ ಬಾಳಿದ ಮೊದಲ ಸಾಮ್ರಾಜ್ಯವನ್ನು ಅವನು ಸೃಷ್ಟಿಸಿದ.

ಹಮ್ಮುರಾಬಿಯು ಬ್ಯಾಬಿಲೋನ್‌ನ ಮೊದಲ ಸಾಮ್ರಾಜ್ಯವನ್ನು ಸಂಸ್ಥಾಪಿಸಿದ.

IIIನೇ ಟಿಗ್ಲಾತ್‌-ಪೈಲ್ಸರ್‌ ಎಂಬಾತ ನವ-ಅಸಿರಿಯಾದ ಸಾಮ್ರಾಜ್ಯವನ್ನು ಸಂಸ್ಥಾಪಿಸಿದ.

ನೆಬುಚಾಡ್ನೆಝರ್‌‌ನು ನವ-ಬ್ಯಾಬಿಲೋನಿಯಾದ ಸಾಮ್ರಾಜ್ಯದಲ್ಲಿ ಅತ್ಯಂತ ಬಲಿಷ್ಠ ರಾಜನಾಗಿದ್ದ. ಈತನು ನಬು ದೇವರ ಮಗನೆಂದು ನಂಬಲಾಗಿತ್ತು. ಸಿಯಾಕ್ಸೆರ್ಸ್‌ನ ಮಗಳನ್ನು ಅವನು ಮದುವೆಯಾದ, ಆದ್ದರಿಂದ ಮೀಡ್‌ನ ವಂಶ ಮತ್ತು ಬ್ಯಾಬಿಲೋನಿಯಾದ ರಾಜವಂಶಗಳು ಒಂದು ಕೌಟುಂಬಿಕ ಸಂಬಂಧವನ್ನು ಹೊಂದಿದ್ದವು. ನೆಬುಚಾಡ್ನೆಝರ್‌‌ನ ಹೆಸರಿನ ಅರ್ಥ ಹೀಗಿದೆ: ನೆಬೊ, ಕಿರೀಟವನ್ನು (ರಾಜಪ್ರಭುತ್ವವನ್ನು) ರಕ್ಷಿಸು!

ಬೆಲ್ಷೆಡೆಝರ್‌ ಎಂಬಾತ ಬ್ಯಾಬಿಲೋನಿಯಾದ ಕೊನೆಯ ದೊರೆಯಾಗಿದ್ದ. ಆತ ನೆಬೊನಿಡಸ್‌ನ ಮಗನಾಗಿದ್ದ. ನೆಬೊನಿಡಸ್‌ನ ಹೆಂಡತಿಯಾದ ನಿಕ್ಟೋರಿಸ್‌, ನೆಬುಚಾಡ್ನೆಝರ್‌‌ನ ಮಗಳಾಗಿದ್ದಳು.

ಅಧಿಕಾರ[ಬದಲಾಯಿಸಿ]

ಅಸಿರಿಯಾವು ಒಂದು ಸಾಮ್ರಾಜ್ಯವಾಗಿ ಬೆಳೆದಾಗ, ಪ್ರಾಂತ್ಯಗಳು ಎಂದು ಕರೆಯಲಾಗುವ ಸಣ್ಣ ಸಣ್ಣ ಭಾಗಗಳಾಗಿ ಅದು ವಿಭಜಿಸಲ್ಪಟ್ಟಿತು. ಇವುಗಳ ಪೈಕಿ ಪ್ರತಿಯೊಂದಕ್ಕೂ ಅವುಗಳ ಪ್ರಮುಖ ನಗರಗಳ ಹೆಸರನ್ನು ಇಡಲಾಯಿತು. ಈ ರೀತಿಯಲ್ಲಿ ನಿನೆವೆಹ್‌, ಸಮಾರಿಯಾ, ದಮಾಸ್ಕಸ್‌ ಮತ್ತು ಆರ್ಪಾಡ್‌‌‌ನಂಥ ಪ್ರಾಂತ್ಯಗಳು ಮೈದಳೆದವು. ಅವೆಲ್ಲವೂ ತಮ್ಮದೇ ಸ್ವಂತದ ಪ್ರಾಂತ್ಯಾಧಿಪತಿಯನ್ನು ಹೊಂದಿದ್ದವು. ಪ್ರತಿಯೊಬ್ಬರೂ ತಂತಮ್ಮ ತೆರಿಗೆಗಳನ್ನು ಪಾವತಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳುವುದು ಅವನ ಕರ್ತವ್ಯವಾಗಿತ್ತು; ಯುದ್ಧದ ಸಮಯದಲ್ಲಿ ಸೈನ್ಯಸೇರಲು ಸೈನಿಕರಿಗೆ ಆಜ್ಞಾಪಿಸುವುದು, ಮತ್ತು ದೇವಸ್ಥಾನವೊಂದು ಕಟ್ಟುವಾಗ ಕೆಲಸಗಾರರನ್ನು ಸರಬರಾಜು ಮಾಡುವುದು ಅವನ ಕರ್ತವ್ಯದಲ್ಲಿ ಸೇರಿದ್ದವು. ಕಾನೂನುಗಳನ್ನು ಜಾರಿಮಾಡುವುದರ ಹೊಣೆಗಾರಿಕೆಯೂ ಅವನ ಮೇಲಿತ್ತು. ಈ ರೀತಿಯಲ್ಲಿ ಅಸಿರಿಯಾದಂಥ ಒಂದು ಸಾಮ್ರಾಜ್ಯದ ನಿಯಂತ್ರಣವನ್ನು ಕೈಲಿರಿಸಿಕೊಳ್ಳುವುದು ಸುಲಭಸಾಧ್ಯವಾಗಿತ್ತು. ಸುಮೇರಿಯಾದ ವಲಯದಲ್ಲಿ ಬ್ಯಾಬಿಲೋನ್‌ ಒಂದು ಕೊಂಚಮಟ್ಟಿಗಿನ ಪುಟ್ಟ ಸಂಸ್ಥಾನವಾಗಿತ್ತಾದರೂ, ಹಮ್ಮುರಾಬಿಯ ಆಡಳಿತದ ಅವಧಿಯಾದ್ಯಂತ ಅದು ಅತ್ಯಮೋಘವಾಗಿ ಬೆಳೆಯಿತು. ಆತ “ನ್ಯಾಯ ಶಾಸನಕಾರ” ಎಂದೇ ಹೆಸರಾಗಿದ್ದ, ಮತ್ತು ಕೆಲವೇ ದಿನಗಳಲ್ಲಿ ಬ್ಯಾಬಿಲೋನ್‌ ಮೆಸೊಪಟ್ಯಾಮಿಯಾದಲ್ಲಿನ ಪ್ರಮುಖ ನಗರಗಳಲ್ಲಿ ಒಂದೆನಿಸಿಕೊಂಡಿತು. ನಂತರದಲ್ಲಿ ಅದು ಬ್ಯಾಬಿಲೋನಿಯಾ ಎಂದು ಕರೆಸಿಕೊಂಡಿತು. "ದೇವರುಗಳ ಮಹಾದ್ವಾರ" ಎಂಬುದು ಈ ಹೆಸರಿನ ಅರ್ಥವಾಗಿತ್ತು. ಕಲಿಕೆಗೆ ಸಂಬಂಧಿಸಿದಂತೆಯೂ ಇದು ಇತಿಹಾಸದ ಮಹಾನ್‌ ಕೇಂದ್ರಗಳ ಪೈಕಿ ಒಂದೆನಿಸಿಕೊಂಡಿತು

ಸಂಗ್ರಾಮ[ಬದಲಾಯಿಸಿ]

ಬ್ರೌನ್‌ & ಷಿಂಡ್ಲರ್‌ (ಸುಮಾರು 1860) ಸೃಷ್ಟಿಸಿರುವ THE ಇತಿಹಾಸ OF COSTUMEನಲ್ಲಿನ ಫಲಕವೊಂದರಿಂದ ಪಡೆದ ಅಸಿರಿಯಾದ ಯೋಧರು.

ನಗರ-ಸಂಸ್ಥಾನಗಳು ಬೆಳೆಯಲು ಪ್ರಾರಂಭಿಸಿದಂತೆ, ಅವುಗಳ ಪ್ರಭಾವ ಕ್ಷೇತ್ರಗಳು ಒಂದನ್ನೊಂದು ಅತಿಕ್ರಮಿಸಿದವು. ಇದರಿಂದಾಗಿ ಇತರ ನಗರ-ಕ್ಷೇತ್ರಗಳ ನಡುವೆ ವಾದವಿವಾದಗಳು ಸೃಷ್ಟಿಯಾದವು. ವಿಶೇಷವಾಗಿ ಭೂಮಿ ಮತ್ತು ತೋಡುನಾಲೆಗಳಿಗೆ (ಕಾಲುವೆಗಳಿಗೆ) ಸಂಬಂಧಿಸಿದಂತೆ ವಾದವಿವಾದಗಳು ಕಂಡುಬರುತ್ತಿದ್ದವು. ಯಾವುದೇ ಪ್ರಮುಖ ಯುದ್ಧಕ್ಕೆ ಮುಂಚಿತವಾಗಿ, ಈ ವಾದವಿವಾದಗಳು ಕೋಷ್ಟಕಫಲಕಗಳಲ್ಲಿ ದಾಖಲಿಸಲ್ಪಡುತ್ತಿದ್ದವು. ಯುದ್ಧವೊಂದರ ಇಂಥ ಮೊದಲ ದಾಖಲಾತಿಯು ಸುಮಾರು 3200 BCEಯ ವೇಳೆಗೆ ಕಂಡುಬಂದರೂ, ಸುಮಾರು 2500 BCEಯವರೆಗೂ ಚಿರಪರಿಚಿತವಾಗಿರಲಿಲ್ಲ. ಈ ಘಟ್ಟದಲ್ಲಿ ಮೆಸೊಪಟ್ಯಾಮಿಯಾದ ರಾಜಕೀಯ ವ್ಯವಸ್ಥೆಯೊಳಗೆ ಸಂಗ್ರಾಮ ಅಥವಾ ಯುದ್ಧಸ್ಥಿತಿಯು ಸಂಯೋಜಿಸಲ್ಪಟ್ಟಿತು. ಒಂದು ತಟಸ್ಥ ನಗರವು ಎರಡು ಪರಸ್ಪರ ಎದುರಾಳಿ ನಗರಗಳಿಗೆ ಸಂಬಂಧಿಸಿದಂತೆ ಮಧ್ಯಸ್ಥಗಾರ ಅಥವಾ ತೀರ್ಪುಗಾರನ ಪಾತ್ರವನ್ನು ವಹಿಸಬಹುದು ಎಂಬುದು ಇದರ ಮುಖ್ಯಾಂಶವಾಗಿತ್ತು. ನಗರಗಳ ನಡುವೆ ಒಕ್ಕೂಟಗಳು ರೂಪುಗೊಳ್ಳಲು ಇದು ಕಾರಣವಾಗಿ, ಪ್ರಾದೇಶಿಕ ಸಂಸ್ಥಾನಗಳ ಅಸ್ತಿತ್ವಕ್ಕೆ ಅದು ಕಾರಣವಾಯಿತು.[೨೭] ಸಾಮ್ರಾಜ್ಯಗಳು ಸೃಷ್ಟಿಸಲ್ಪಟ್ಟಾಗ, ಹೊರಗಿನ ದೇಶಗಳೊಂದಿಗೆ ಅವು ಯುದ್ಧದಲ್ಲಿ ತೊಡಗುತ್ತಿದ್ದವು. ಉದಾಹರಣೆಗೆ, ಸಾರ್ಗೋನ್‌ ರಾಜನು ಸುಮೇರುವಿನ ಎಲ್ಲಾ ನಗರಗಳು, ಮಾರಿಯಲ್ಲಿನ ಕೆಲವೊಂದು ನಗರಗಳನ್ನು ಗೆದ್ದ ಮತ್ತು ಉತ್ತರ ಭಾಗದ ಸಿರಿಯಾದೊಂದಿಗೆ ಯುದ್ಧ ಮಾಡಲು ತೆರಳಿದ. ಬ್ಯಾಬಿಲೋನಿಯಾದ ಅನೇಕ ಅರಮನೆ ಗೋಡೆಗಳು ಯಶಸ್ವೀ ಕದನಗಳ ಚಿತ್ರಗಳಿಂದ ಅಲಂಕರಿಸಲ್ಪಟ್ಟಿದ್ದವು. ಶತ್ರುವು ನಿರಾಶನಾಗಿ ತಪ್ಪಿಸಿಕೊಂಡು ಹೋಗುತ್ತಿರುವಂತೆ, ಇಲ್ಲವೇ ಲಾಳದ ಕಡ್ಡಿಯ ಮಧ್ಯದಲ್ಲಿ ಅಡಗಿಕೊಂಡಿರುವಂತೆ ಅವನನ್ನು ಈ ಕದನ ಚಿತ್ರಗಳಲ್ಲಿ ಚಿತ್ರಿಸಲಾಗಿತ್ತು. ಸುಮೇರುವಿನಲ್ಲಿನ ಓರ್ವ ರಾಜನಾದ ಗಿಲ್ಗಮೆಶ್‌ನು, ಮೂರನೇ ಎರಡು ಭಾಗದಷ್ಟು ದೇವರ ಅಂಶ ಮತ್ತು ಕೇವಲ ಮೂರನೇ ಒಂದು ಭಾಗದಷ್ಟು ಮಾನವ ಅಂಶದಿಂದ ಕೂಡಿದ್ದಾನೆ ಎಂದು ಭಾವಿಸಲಾಗಿತ್ತು. ಅವನ ಕುರಿತಾದ ಪುರಾಣದಂಥ ಕಥೆಗಳು ಮತ್ತು ಪದ್ಯಗಳು ಚಾಲ್ತಿಯಲ್ಲಿದ್ದು, ಅವು ಅನೇಕ ತಲೆಮಾರುಗಳವರೆಗೆ ವರ್ಗಾಯಿಸಲ್ಪಟ್ಟವು. ಏಕೆಂದರೆ ಅತ್ಯಂತ ಪ್ರಮುಖವಾದವು ಎಂದು ನಂಬಲಾಗಿದ್ದ ಅನೇಕ ಸಾಹಸಕಾರ್ಯಗಳು ಅವನ ಬತ್ತಳಿಕೆಯಲ್ಲಿದ್ದವು, ಹಾಗೂ ಅನೇಕ ಯುದ್ಧಗಳು ಹಾಗೂ ಕದನಗಳನ್ನು ಆತ ಗೆದ್ದಿದ್ದ.

ಕಾನೂನುಗಳು[ಬದಲಾಯಿಸಿ]

ಮೇಲೆ ಉಲ್ಲೇಖಿಸಿರುವಂತೆ ಹಮ್ಮುರಾಬಿ ರಾಜನು ತನ್ನ ಕಾನೂನುಗಳ ಸಂಗ್ರಹವಾದ ಹಮ್ಮುರಾಬಿಯ ಸಂಹಿತೆಗೆ (ದಿ ಕೋಡ್‌ ಆಫ್‌ ಹಮ್ಮುರಾಬಿ) ಪ್ರಸಿದ್ಧನಾಗಿದ್ದ. (ಈ ಸಂಹಿತೆಯು ಸುಮಾರು 1780 BCಯಲ್ಲಿ ಸೃಷ್ಟಿಯಾಯಿತು) ಈ ಸಂಹಿತೆಯು ಬಹಳ ಮುಂಚಿನ ಕಾಲದಲ್ಲಿ ಕಂಡುಬಂದಿರುವ ಕಾನೂನುಗಳ ಸಂಗ್ರಹಗಳ ಪೈಕಿ ಒಂದಾಗಿದೆ ಮತ್ತು ಪ್ರಾಚೀನ ಮೆಸೊಪಟ್ಯಾಮಿಯಾದಿಂದ ಸಂಗ್ರಹಿಸಲಾಗಿರುವ ಈ ಬಗೆಯ ದಸ್ತಾವೇಜಿನ ಅತ್ಯುತ್ತಮವಾಗಿ ಸಂರಕ್ಷಿಸಲ್ಪಟ್ಟ ಉದಾಹರಣೆಗಳಲ್ಲಿ ಒಂದಾಗಿದೆ. ಮೆಸೊಪಟ್ಯಾಮಿಯಾಗೆ ಸಂಬಂಧಿಸಿದಂತೆ ಆತ 200ಕ್ಕೂ ಹೆಚ್ಚಿನ ಕಾನೂನುಗಳನ್ನು ರೂಪಿಸಿದ ಹೆಚ್ಚಿನ ಮಾಹಿತಿಗಾಗಿ, ನೋಡಿ ಹಮ್ಮುರಾಬಿ ಅಂಡ್‌ ಕೋಡ್‌ ಆಫ್‌ ಹಮ್ಮುರಾಬಿ. ಇದನ್ನೂ ನೋಡಿ: ಲಾಸ್‌ ಆಫ್‌ ಎಶ್ನುನ್ನಾ, ಕೋಡ್‌ ಆಫ್‌ ಉರ್‌-ನಮ್ಮು.

ವಾಸ್ತು ಶೈಲಿ[ಬದಲಾಯಿಸಿ]

ಪ್ರಾಚೀನ ಮೆಸೊಪಟ್ಯಾಮಿಯಾದ ವಾಸ್ತುಶೈಲಿಯ ಅಧ್ಯಯನವು ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಲಭ್ಯವಿರುವ ಸಾಕ್ಷ್ಯ, ಕಟ್ಟಡಗಳ ಚಿತ್ರಾತ್ಮಕ ನಿರೂಪಣೆಗಳು ಮತ್ತು ಕಟ್ಟಡ ನಿರ್ಮಾಣದ ಪರಿಪಾಠಗಳ ಕುರಿತಾಗಿರುವ ಮೂಲ ಗ್ರಂಥಪಾಠಗಳನ್ನು ಆಧರಿಸಿದೆ. ವಿದ್ವತ್ಪೂರ್ಣ ಸಾಹಿತ್ಯವು ವಾಡಿಕೆಯಂತೆ

ದೇವಸ್ಥಾನಗಳು, ಅರಮನೆಗಳು, ನಗರದ ಗೋಡೆಗಳು ಮತ್ತು ದ್ವಾರಗಳು ಹಾಗೂ ಇತರ ಸ್ಮಾರಕರೂಪದ ಕಟ್ಟಡಗಳ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆಯಾದರೂ, ವಾಸಯೋಗ್ಯ ವಾಸ್ತುಶೈಲಿಯ ಕುರಿತಾಗಿಯೂ ಕೆಲಸ ಮಾಡಿರುವುದನ್ನು ಅಥವಾ ಗಮನ ಹರಿಸಿರುವುದನ್ನು ಆಗೊಮ್ಮೆ ಈಗೊಮ್ಮೆ ಇಲ್ಲಿ ಕಾಣಲು ಸಾಧ್ಯವಿದೆ.[೨೮] ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಮೇಲುಮೇಲಿನ ಸಮೀಕ್ಷೆಗಳು ಪ್ರಾಚೀನ ಕಾಲದ ಮೆಸೊಪಟ್ಯಾಮಿಯಾದ ನಗರಗಳಲ್ಲಿನ ನಗರ ಸ್ವರೂಪದ ಅಧ್ಯಯನವನ್ನು ಮಾಡಲೂ ಸಹ ಅನುವುಮಾಡಿಕೊಟ್ಟಿವೆ. ಪ್ರಾಚೀನ ಮೆಸೊಪಟ್ಯಾಮಿಯಾದಿಂದ ದೊರೆತಿರುವ ವಾಸ್ತುಶಿಲ್ಪೀಯ ಅವಶೇಷಗಳ ಪೈಕಿ ಅತ್ಯಂತ ಗಮನ ಸೆಳೆಯುವಂಥವುಗಳ ವಿವರಗಳು ಹೀಗಿವೆ: 4ನೇ ಸಹಸ್ರಮಾನದ BCಗೆ ಸೇರಿದ ಉರುಕ್‌ನಲ್ಲಿನ ದೇವಸ್ಥಾನ ಸಂಕೀರ್ಣಗಳು, ದಿಯಾಲಾ ನದಿ ಕಣಿವೆ ಪ್ರದೇಶದಲ್ಲಿನ ಪ್ರಾಚೀನ ರಾಜವಂಶದ ಅವಧಿಗೆ ಸೇರಿದ ಖಫಜಾಹ್‌ ಮತ್ತು ಟೆಲ್‌ ಆಸ್ಮಾರ್‌ನಂಥ ದೇವಸ್ಥಾನಗಳು ಮತ್ತು ಅರಮನೆಗಳು, ನಿಪ್ಪುರ್‌‌‌ (ಎನ್ಲಿಲ್‌ನ ಪವಿತ್ರಸ್ಥಳ) ಮತ್ತು ಉರ್‌‌‌ನಲ್ಲಿನ (ನನ್ನಾದ ಪವಿತ್ರಸ್ಥಳ) ಉರ್‌ನ ಮೂರನೇ ರಾಜವಂಶದ ಅವಶೇಷಗಳು, ಎಬ್ಲಾ, ಮಾರಿ, ಅಲಾಲಾಖ್‌, ಅಲೆಪ್ಪೊ ಮತ್ತು ಕುಲ್ಟೆಪೆಗಳಲ್ಲಿನ ಸಿರಿಯನ್‌-ಟರ್ಕಿಷ್‌ ನಿವೇಶನಗಳಲ್ಲಿನ ಮಧ್ಯ ಕಂಚಿನ ಯುಗದ ಅವಶೇಷಗಳು, ಬೊಗಾಝ್‌ಕೊಯ್‌ (ಹತ್ತುಶಾ), ಉಗಾರಿಟ್‌, ಅಶುರ್‌ ಮತ್ತು ನುಝಿಗಳಲ್ಲಿನ ಕಂಚಿನ ಯುಗದ ಅಂತ್ಯದ ಅರಮನೆಗಳು, ಅಸಿರಿಯಾದ (ಕಲ್ಹು/ನಿಮ್ರುಡ್‌, ಖೋರ್ಸಾಬಾದ್‌, ನಿನೆವೆಹ್‌), ಬ್ಯಾಬಿಲೋನಿಯಾದ (ಬ್ಯಾಬಿಲೋನ್‌), ಉರಾರ್ಟಿಯಾದ (ತುಷ್ಪಾ/ವ್ಯಾನ್‌ ಕಲೇಸಿ, ಕ್ಯಾವುಸ್ಟೆಪೆ, ಅಯಾನಿಸ್‌, ಅರ್ಮಾವಿರ್‌, ಎರೆಬುನಿ, ಬಾಸ್ಟಾಮ್‌) ಮತ್ತು ನವ-ಹಿಟೈಟ್‌ (ಕಾರ್ಕಾಮಿಸ್‌, ಟೆಲ್‌ ಹಲಾಫ್‌, ಕರಾಟೆಪೆ) ನಿವೇಶನಗಳಲ್ಲಿನ ಕಬ್ಬಿಣ ಯುಗದ ಅರಮನೆಗಳು ಮತ್ತು ದೇವಸ್ಥಾನಗಳು. ನಿಪ್ಪುರ್‌ ಮತ್ತು ಉರ್‌ನಲ್ಲಿನ ಹಳೆಯ ಬ್ಯಾಬಿಲೋನಿಯಾದ ಅವಶೇಷಗಳಿಂದ ಮನೆಗಳು ಪ್ರಾಯಶಃ ಬೆಳಕಿಗೆ ಬಂದಿವೆ. ಕಟ್ಟಡ ನಿರ್ಮಾಣ ಮತ್ತು ಸಂಬಂಧಿತ ಕ್ರಿಯಾವಿಧಿ ಆಚರಣೆಗಳನ್ನು ಕುರಿತಾದ ಮೂಲ ಗ್ರಂಥಪಾಠದ ಆಕರಗಳ ಪೈಕಿ, 3ನೇ ಸಹಸ್ರಮಾನದ ಅಂತ್ಯಭಾಗಕ್ಕೆ ಸೇರಿದ ಗುಡಿಯಾದ ಸಿಲಿಂಡರುಳು ಗಮನ ಸೆಳೆಯುವಂತಿವೆ. ಅಷ್ಟೇ ಅಲ್ಲ, ಕಬ್ಬಿಣದ ಯುಗಕ್ಕೆ ಸೇರಿದ ಅಸಿರಿಯಾದ ಮತ್ತು ಬ್ಯಾಬಿಲೋನಿಯಾದ ರಾಜವಂಶದ ಶಾಸನಗಳು ಈ ನಿಟ್ಟಿನಲ್ಲಿ ಗಮನಾರ್ಹವಾಗಿವೆ.

Houses[ಬದಲಾಯಿಸಿ]

ಮೆಸೊಪಟ್ಯಾಮಿಯಾದ ಮನೆಯೊಂದನ್ನು ಕಟ್ಟಲು ಬಳಸಲಾದ ಸಾಮಗ್ರಿಗಳು ಇಂದು ಬಳಸಲಾಗುತ್ತಿರುವ ಸಾಮಗ್ರಿಗಳಂತೆಯೇ ಇದ್ದವು. ವಿವರಿಸಲಾಗಿರುವ ನಿರ್ದಿಷ್ಟ ಕಾಲಾವಧಿಯ ಸಮಯದಲ್ಲಿ ಮರವನ್ನು ಉತ್ತಮವಾದ ರೀತಿಯಲ್ಲಿ ಸ್ವಾಭಾವಿಕವಾಗಿ ರೂಪಿಸಲು ಸಾಧ್ಯವಿರಲಿಲ್ಲವಾದರೂ, ಮಣ್ಣಿನ ಇಟ್ಟಿಗೆ, ಮಣ್ಣಿನ ಗಾರೆ ಮತ್ತು ಮರದ ಬಾಗಿಲುಗಳು, ಇವೆಲ್ಲವೂ ನಗರದ[೨೯] ಸುತ್ತಮುತ್ತ ಸ್ವಾಭಾವಿಕವಾಗಿ ದೊರೆಯುತ್ತಿದ್ದವು. ಬಹುಪಾಲು ಮನೆಗಳು ಒಂದು ಚಚ್ಚೌಕವಾಗಿರುವ ಮಧ್ಯದ ಕೋಣೆಯನ್ನು ಹೊಂದಿರುತ್ತಿದ್ದು, ಅದಕ್ಕೆ ಇತರ ಕೋಣೆಗಳು ಜೋಡಣೆಗೊಂಡಿರುತ್ತಿದ್ದವು. ಆದರೆ, ಅವುಗಳ ಗಾತ್ರ ಹಾಗೂ ಮನೆಗಳನ್ನು ಕಟ್ಟಲು ಬಳಸಲಾಗಿದ್ದ ಸಾಮಗ್ರಿಗಳಲ್ಲಿನ ಒಂದು ಮಹತ್ವದ ಬದಲಾವಣೆಯು ಸೂಚಿಸಿರುವ ಪ್ರಕಾರ, ಸ್ವತಃ ಆ ಮನೆಗಳ ನಿವಾಸಿಗಳಿಂದಲೇ ಸದರಿ ಮನೆಗಳು ಕಟ್ಟಲ್ಪಟ್ಟಿದ್ದವು [೪]. ಅತ್ಯಂತ ಸಣ್ಣ ಕೋಣೆಗಳಿದ್ದವೆಂದ ಮಾತ್ರಕ್ಕೆ ಅವು ಅತ್ಯಂತ ಬಡವರ ಮನೆಗಳೆಂಬ ಕಾಕತಾಳೀಯ ಅಥವಾ ತಾಳೆಯಾಗುವ ಅಭಿಪ್ರಾಯಕ್ಕೆ ಬರುವಂತಿರಲಿಲ್ಲ; ವಾಸ್ತವವಾಗಿ, ಅತ್ಯಂತ ಬಡಜನರು ನಗರದ ಹೊರಭಾಗದಲ್ಲಿ ದೊರೆಯುತ್ತಿದ್ದ ಲಾಳದ ಕಡ್ಡಿಗಳು ಅಥವಾ ಜೊಂಡುಗಳಂಥ ಬೇಗನೇ ಹಾಳಾಗಿ ಹೋಗುವ ಸಾಮಗ್ರಿಗಳಿಂದ ಮನೆಗಳನ್ನು ಕಟ್ಟಿದ್ದರು. ಆದರೆ ಇದಕ್ಕೆ ಸಂಬಂಧಿಸಿದಂತಿರುವ ಪ್ರತ್ಯಕ್ಷ ಸಾಕ್ಷ್ಯವು ತೀರಾ ಅಲ್ಪಪ್ರಮಾಣದ್ದು ಎನ್ನಬಹುದು.[೩೦]

ಅರಮನೆ[ಬದಲಾಯಿಸಿ]

ಪ್ರಾಚೀನ ಮೆಸೊಪಟ್ಯಾಮಿಯಾದ ಗಣ್ಯರ ಅರಮನೆಗಳು ಬೃಹತ್‌ ಪ್ರಮಾಣದ ಸಂಕೀರ್ಣಗಳಾಗಿದ್ದವು, ಮತ್ತು ಅನೇಕ ಬಾರಿ ಅದ್ದೂರಿಯಾಗಿ ಅಲಂಕರಿಸಲ್ಪಟ್ಟಿದ್ದವು. ಖಫಾಜಾಹ್‌ ಮತ್ತು ಟೆಲ್‌ ಆಸ್ಮಾರ್‌ನಂಥ ದಿಯಾಲಾ ನದಿ ಕಣಿವೆಯ ನಿವೇಶನಗಳಿಂದ ಇದಕ್ಕೆ ಸಂಬಂಧಿಸಿದ ಅತ್ಯಂತ ಮುಂಚಿನ ನಿದರ್ಶನಗಳು ದೊರೆತಿವೆ.

ಮೂರನೇ ಸಹಸ್ರಮಾನದ BCಯ ಈ ಅರಮನೆಗಳು ಒಂದು ಬೃಹತ್‌ ಸಮಾಜೋ-ಆರ್ಥಿಕ ಸಂಸ್ಥೆಗಳಾಗಿ ಕಾರ್ಯನಿರ್ವಹಿಸಿದವು. ಆದ್ದರಿಂದ ವಾಸದ ಮತ್ತು ಖಾಸಗಿ ಕಾರ್ಯಚಟುವಟಿಕೆಯ ಜೊತೆಜೊತೆಗೆ ಕುಶಲಕರ್ಮಿಗಳ ಕಾರ್ಯಾಗಾರಗಳು, ಆಹಾರದ ಉಗ್ರಾಣಗಳು, ಶುಭಾಶುಭ ಕಾರ್ಯಗಳು ನಡೆಯುವ ಅಂಗಳಗಳಿಗೆ ಅವು ನೆಲೆಯಾದವು, ಮತ್ತು ಪ್ರಾರ್ಥನಾ ಮಂದಿರಗಳೊಂದಿಗೆ ಹಲವು ಬಾರಿ ಭಾಗಿಯಾಗಿದ್ದವು. ಇದಕ್ಕೊಂದು ಉದಾಹರಣೆ ನೀಡುವುದಾದರೆ, ಉರ್‌ನಲ್ಲಿನ "ಗಿಪಾರು" (ಅಥವಾ ಸುಮೇರಿಯಾ ಭಾಷೆಯಲ್ಲಿ ಹೇಳುವುದಾದರೆ ಗಿಗ್‌-ಪಾರ್‌-ಕು) ಎಂದು ಕರೆಯಲ್ಪಡುತ್ತಿದ್ದ ಸ್ಥಳವು ಚಂದ್ರ ದೇವರು ನನ್ನಾನ ಪೂಜಾರಿಣಿಗೆ ವಾಸಸ್ಥಳವಾಗಿದ್ದು, ಬಹುಸಂಖ್ಯೆಯ ಅಂಗಳಗಳು, ಅನೇಕ ಪವಿತ್ರಸ್ಥಳಗಳು, ಮರಣಹೊಂದಿದ ಪೂಜಾರಿಣಿಯರ ಹೂಳುವಿಕೆಯ ಕೋಣೆಗಳು, ಶುಭಾಶುಭ ಕರ್ಮಾಚರಣೆಗಳ ಒಂದು ಭೋಜನ ಭವನ ಇತ್ಯಾದಿಗಳನ್ನೊಳಗೊಂಡ ಒಂದು ಪ್ರಮುಖ ಸಂಕೀರ್ಣವಾಗಿತ್ತು. ಇದೇ ರೀತಿಯ ಸಂರ್ಕೀಣತೆಗೆ ಉದಾಹರಣೆಯಾಗಿದ್ದ ಮೆಸೊಪಟ್ಯಾಮಿಯಾದ ಅರಮನೆಯೊಂದನ್ನು ಸಿರಿಯಾದಲ್ಲಿನ ಮಾರಿ ಎಂಬಲ್ಲಿ ಉತ್ಖನನ ಮಾಡಲಾಯಿತು. ಇದು ಹಳೆಯ ಬ್ಯಾಬಿಲೋನಿಯಾದ ಅವಧಿಯಷ್ಟು ಹಿಂದಿನ ಕಾಲಕ್ಕೆ ಸೇರಿತ್ತು.

ಕಬ್ಬಿಣದ ಯುಗಕ್ಕೆ ಸೇರಿದ ಅಸಿರಿಯಾದ ಅರಮನೆಗಳು, ಅದರಲ್ಲೂ ವಿಶೇಷವಾಗಿ ಕಲ್ಹು/ನಿಮ್ರುಡ್‌, ದುರ್‌ ಶರ್ರುಕಿನ್‌/ಖೊರ್ಸಾಬಾದ್‌ ಮತ್ತು ನಿನುವಾ/ನಿನೆವೆಹ್‌‌ನಲ್ಲಿನ ಅರಮನೆಗಳು, ತಮ್ಮ ಗೋಡೆಗಳ ಮೇಲೆ ಕೆತ್ತಲಾಗಿದ್ದ ಚಿತ್ರಾತ್ಮಕವಾದ ಮತ್ತು ಮೂಲ ಗ್ರಂಥಪಾಠದ ನಿರೂಪಣಾತ್ಮಕ ಶ್ರೇಣಿಗಳ ಕಾರಣದಿಂದ ಪ್ರಸಿದ್ಧವಾಗಿದ್ದವು. ಈ ಎಲ್ಲ ನಿರೂಪಣೆಗಳನ್ನೂ ಆರ್ತೊಸ್ಟಾಟ್‌ಗಳೆಂದು ಕರೆಯಲ್ಪಡುತ್ತಿದ್ದ ಕಲ್ಲಿನ ಚಪ್ಪಡಿಗಳ ಮೇಲೆ ಕೆತ್ತಲಾಗಿತ್ತು. ಈ ಚಿತ್ರಾತ್ಮಕ ಶ್ರೇಣಿಗಳು ಧಾರ್ಮಿಕ ಪಂಥದ ದೃಶ್ಯಗಳನ್ನು ಇಲ್ಲವೇ ರಾಜರ ಸೇನಾ ಮತ್ತು ನಾಗರಿಕ ನಿರ್ವಹಣೆಗಳ ನಿರೂಪಣಾತ್ಮಕ ದಾಖಲೆಗಳನ್ನು ಒಳಗೊಂಡಿದ್ದವು. ದುರದೃಷ್ಟ ನಿವಾರಕ ಪುರಾಣ ಪ್ರಸಿದ್ಧ ವ್ಯಕ್ತಿ-ಶಕ್ತಿಗಳ ಬೃಹತ್‌ ಕಲ್ಲಿನ ಶಿಲ್ಪಾಕೃತಿಗಳು ಮಹಾದ್ವಾರಗಳು ಹಾಗೂ ಪ್ರಮುಖ ನಡುವಣಂಕಗಳನ್ನು ಸುತ್ತುವರಿದಿದ್ದವು. ಕಬ್ಬಿಣದ ಯುಗದ ಈ ಅರಮನೆಗಳ ವಾಸ್ತುಶಿಲ್ಪೀಯ ವ್ಯವಸ್ಥೆಗಳನ್ನು ದೊಡ್ಡ ಮತ್ತು ಸಣ್ಣ ಅಂಗಳಗಳ ಸುತ್ತಲೂ ವ್ಯವಸ್ಥೆಗೊಳಿಸಲಾಗಿತ್ತು. ವಾಡಿಕೆಯಂತೆ ರಾಜರ ಸಿಂಹಾಸನದ ಕೋಣೆಯು ಒಂದು ಬೃಹತ್ತಾದ ಕರ್ಮಾಚರಣೆಯ ಅಂಗಳಕ್ಕೆ ತೆರೆದುಕೊಳ್ಳುವಂತಿದ್ದು, ಅಲ್ಲಿ ಸಂಸ್ಥಾನದ ಪ್ರಮುಖ ಸಮಾಲೋಚನಾ ಸಮಿತಿಗಳು ಬೇಟಿಯಾಗುತ್ತಿದ್ದವು, ಸಂಸ್ಥಾನದ ಉತ್ಸವಾಚರಣೆಗಳು ಜರುಗುತ್ತಿದ್ದವು.

ದಂತದ ಪೀಠೋಪಕರಣದ ನಮೂನೆಗಳು ಬೃಹತ್ ಪ್ರಮಾಣದಲ್ಲಿ ಅಸಿರಿಯಾದ ಅನೇಕ ಅರಮನೆಗಳಲ್ಲಿ ಕಂಡುಬಂದವು. ಆ ಕಾಲದಲ್ಲಿ ಉತ್ತರ ಸಿರಿಯಾದ ನವ-ಹಿಟೈಟ್‌ ಸಂಸ್ಥಾನಗಳೊಂದಿಗೆ ಅಸಿರಿಯಾವು ಹೊಂದಿದ್ದ ಒಂದು ಗಾಢವಾದ ವ್ಯಾಪಾರ ಸಂಬಂಧವನ್ನು ಇದು ಸೂಚಿಸುತ್ತಿತ್ತು. ಮರದ ಪ್ರವೇಶದ್ವಾರಗಳನ್ನು ಹಿಂಬದಿಯಿಂದ ಉಬ್ಬಿಸಿ ಸೃಷ್ಟಿಸಿದ ಕಂಚಿನ ಲೋಹಚಿತ್ರಗಳ ಪಟ್ಟಿಗಳು ಅಲಂಕರಿಸಿರುವುದಕ್ಕೂ ಉತ್ತಮವಾದ ಸಾಕ್ಷ್ಯವು ದೊರೆತಿದೆ.

ಹಂತಗೋಪುರದ ದೇವಾಲಯಗಳು[ಬದಲಾಯಿಸಿ]

ಹಂತಗೋಪುರದ ದೇವಾಲಯಗಳು ಬೃಹತ್‌ಗಾತ್ರದ ಪಿರಮಿಡ್‌ ಆಕಾರದ ದೇವಸ್ಥಾನದ ಗೋಪುರಗಳಾಗಿದ್ದು, ಪ್ರಾಚೀನ ಮೆಸೊಪಟ್ಯಾಮಿಯಾದ ಕಣಿವೆ ಮತ್ತು ಪಶ್ಚಿಮ ಭಾಗದ ಇರಾನಿನ ಪ್ರಸ್ಥಭೂಮಿಯಲ್ಲಿ ಕಟ್ಟಲ್ಪಟ್ಟಿದ್ದವು. ಒಂದು ಚಪ್ಪಟೆಮಾಡಲಾದ ಹಂತಗಳ ಪಿರಮಿಡ್‌ನ ಸ್ವರೂಪವನ್ನು ಹೊಂದಿದ್ದ ಈ ಗೋಪುರಗಳು, ಅನುಕ್ರಮವಾಗಿ ಇಳಿಯುತ್ತಿರುವ ಅಂತಸ್ತುಗಳ ಅಥವಾ ಮಟ್ಟಗಳ ಶೈಲಿಯಲ್ಲಿದ್ದವು. ಮೆಸೊಪಟ್ಯಾಮಿಯಾದಲ್ಲಿ, ಹಾಗೂ ಅದರ ಸಮೀಪದಲ್ಲಿ ಇಂಥ 32 ಹಂತಗೋಪುರದ ದೇವಾಲಯಗಳು ಬೆಳಕಿಗೆ ಬಂದಿವೆ. ಅವುಗಳ ಪೈಕಿ ಇಪ್ಪತ್ತೆಂಟು ದೇವಾಲಯಗಳು ಇರಾಕ್‌‌ನಲ್ಲಿದ್ದರೆ, ಉಳಿದ ನಾಲ್ಕು ದೇವಾಲಯಗಳು ಇರಾನ್‌‌ನಲ್ಲಿವೆ. ಗಮನಾರ್ಹವಾದ ಹಂತಗೋಪುರದ ದೇವಾಲಯಗಳಲ್ಲಿ ಇವು ಸೇರಿವೆ: ಇರಾಕ್‌ನ ನಸಿರಿಯಾಹ್‌ ಸಮೀಪದಲ್ಲಿರುವ ಉರ್‌ನ ಮಹಾನ್‌ ಹಂತಗೋಪುರದ ದೇವಾಲಯ, ಇರಾಕ್‌ನ ಬಾಗ್ದಾದ್‌ ಸಮೀಪವಿರುವ ಅಕ್ವರ್‌ ಕುಫ್‌ನ ಹಂತಗೋಪುರದ ದೇವಾಲಯ, ಇರಾನ್‌ ಖುಝೆಸ್ತಾನ್‌ನಲ್ಲಿರುವ ಚೊಘಾ ಝಂಬಿಲ್‌. ಇಷ್ಟೇ ಅಲ್ಲದೇ, ತೀರಾ ಇತ್ತೀಚೆಗಷ್ಟೇ ಪತ್ತೆಮಾಡಲ್ಪಟ್ಟ ಇರಾನ್‌ನ ಕಶಾನ್‌ ಸಮೀಪದಲ್ಲಿರುವ ಸಿಲಾಕ್‌, ಮತ್ತು ಇತರ ದೇವಾಲಯಗಳು ಮತ್ತಷ್ಟು ನಿದರ್ಶನಗಳಾಗಿವೆ. ಸುಮೇರಿಯಾದ ಜನರು, ಬ್ಯಾಬಿಲೋನ್‌ನ ಜನರು, ಎಲಾಮ್‌ನ ಜನರು ಮತ್ತು ಅಸಿರಿಯಾದ ಜನರು ಹಂತಗೋಪುರದ ದೇವಾಲಯಗಳನ್ನು ಸ್ಥಳೀಯ ಧರ್ಮಗಳ ಸ್ಮರಣಾರ್ಥವಾಗಿ ಕಟ್ಟಿದರು. ಹಂತಗೋಪುರದ ದೇವಾಲಯದ ಅತ್ಯಂತ ಮುಂಚಿನ ಉದಾಹರಣೆಗಳು ಎತ್ತರಿಸಿದ ವೇದಿಕೆಗಳಂಥ ರಚನೆಗಳಾಗಿದ್ದು, ನಾಲ್ಕನೇ ಸಹಸ್ರಮಾನದ BCಯ ಸಮಯದಲ್ಲಿನ ಯುಬಾಯ್ಡ್‌ ಅವಧಿಯಷ್ಟು[೩೧] ಹಿಂದಿನ ಕಾಲದವಾಗಿದ್ದವು, ಮತ್ತು ಇತ್ತೀಚಿನದು 6ನೇ ಶತಮಾನದ BCಯ ಅವಧಿಗೆ ಸೇರಿದುದಾಗಿದೆ. ಬಹುತೇಕ ಪಿರಮಿಡ್‌ಗಳಿಗಿಂತ ಭಿನ್ನವಾಗಿ, ಹಂತಗೋಪುರದ ದೇವಾಲಯ ತುದಿಯು ಚಪ್ಪಟೆಯಾಗಿತ್ತು. ಹಂತಗಳ ಪಿರಮಿಡ್‌ ಶೈಲಿಯು ಪ್ರಾಚೀನ ರಾಜವಂಶದ ಅವಧಿಯ ಅಂತ್ಯದ ಸಮೀಪದಲ್ಲಿ ಶುರುವಾಯಿತು.[೩೨] ಒಂದು ಆಯಾತಾಕಾರದ, ಅಂಡಾಕಾರದ, ಅಥವಾ ಚಚ್ಚೌಕಾಕಾರದ ವೇದಿಕೆಯ ಮೇಲೆ ಇಳಿಕೆಯ ಸೋಪಾನಪಂಕ್ತಿಯಲ್ಲಿ ಕಟ್ಟಲಾಗಿದ್ದ ಹಂತಗೋಪುರದ ದೇವಾಲಯವು ಒಂದು ಪಿರಮಿಡ್‌ ಆಕಾರದ ರಚನೆಯಾಗಿತ್ತು. ಸೂರ್ಯನ ಬಿಸಿಲಿನಿಂದ ಒಣಗಿ ಗಟ್ಟಿಯಾದ ಇಟ್ಟಿಗೆಗಳು ಹಂತಗೋಪುರದ ದೇವಾಲಯದ ಪ್ರಮುಖ ತಿರುಳುಭಾಗವಾಗಿದ್ದು, ಸುಟ್ಟ ಇಟ್ಟಿಗೆಗಳು ಅದರ ಮುಖವರಸೆಗಳು ಅಥವಾ ಹೊರಹೊದಿಕೆಗಳಾಗಿದ್ದವು. ಈ ಹೊರಹೊದಿಕೆಗಳನ್ನು ಹಲವು ಬಾರಿ ವಿವಿಧ ಬಣ್ಣಗಳನ್ನು ಬಳಸಿ ಮೆರುಗನ್ನು ಕೊಡಲಾಗಿತ್ತು ಮತ್ತು ಪ್ರಾಯಶಃ ಇದು ಜ್ಯೋತಿಷ್ಯ ಶಾಸ್ತ್ರದ ಪ್ರಾಮುಖ್ಯತೆಯನ್ನೂ ಹೊಂದಿರಬಹುತ್ತು ಎನಿಸುತ್ತದೆ.

ಮೆರುಗುಗೊಳಿಸಲಾದ ಈ ಇಟ್ಟಿಗೆಗಳ ಮೇಲೆ ರಾಜರು ಕೆಲವೊಮ್ಮೆ ತಮ್ಮ ಹೆಸರನ್ನು ಕೆತ್ತಿಸುತ್ತಿದ್ದರು. ಸೋಪಾನ ಪಂಕ್ತಿಗಳ ಸಂಖ್ಯೆಯು ಎರಡರಿಂದ ಏಳರವರೆಗೆ ಇರುತ್ತಿದ್ದು, ಒಂದು ಪವಿತ್ರ ಸ್ಥಳ ಅಥವಾ ದೇವಸ್ಥಾನವು ಶೃಂಗದಲ್ಲಿರುತ್ತಿತ್ತು. ಹಂತಗೋಪುರದ ದೇವಾಲಯದ ಒಂದು ಪಾರ್ಶ್ವದ ಮೇಲೆ ಕೈಗಂಬಿಯ ಏರುವೋರೆಗಳ ಒಂದು ಶ್ರೇಣಿಯಿಂದ ಸದರಿ ಪವಿತ್ರ ಸ್ಥಳಕ್ಕೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿತ್ತು, ಅಥವಾ ತಳಭಾಗದಿಂದ ಶೃಂಗಭಾಗದವರೆಗೆ ಒಂದು ಸುರುಳಿಯಾಕಾರದ ಕೈಗಂಬಿಯ ಏರುವೋರೆಯಿಂದ ಪ್ರವೇಶಾವಕಾಶದ ವ್ಯವಸ್ಥೆ ಮಾಡಲಾಗಿತ್ತು. ಪರ್ವತಗಳನ್ನು ಹೋಲುವಂತೆ ಹಂತಗೋಪುರದ ದೇವಾಲಯಗಳನ್ನು ನಿರ್ಮಿಸಲಾಗಿತ್ತು ಎಂದು ಈಗಾಗಲೇ ಸೂಚಿಸಲ್ಪಟ್ಟಿದೆಯಾದರೂ, ಆ ನಿರಾಧಾರ-ಕಲ್ಪನೆಯನ್ನು ಬೆಂಬಲಿಸಲು ಮೂಲ ಗ್ರಂಥಪಾಠದ ಅಥವಾ ಪುರಾತತ್ತ್ವಶಾಸ್ತ್ರಕ್ಕೆ ಸಂಬಂಧಿಸಿದ ಸಾಕ್ಷ್ಯವು ಅಷ್ಟಾಗಿ ಲಭ್ಯವಿಲ್ಲ.

ಉರ್‌ನಲ್ಲಿನ ಉರ್‌-ನಮ್ಮುವಿನ ಹಂತಗೋಪುರದ ದೇವಾಲಯವು ಒಂದು ಮೂರು-ಹಂತದ ನಿರ್ಮಾಣವಾಗಿ ವಿನ್ಯಾಸಗೊಳಿಸಲ್ಪಟ್ಟಿತ್ತು. ಇಂದು ಇಂಥವುಗಳ ಪೈಕಿ ಕೇವಲ ಎರಡು ಮಾತ್ರ ಉಳಿದಿವೆ. ಮಣ್ಣಿನ ಇಟ್ಟಿಗೆಯ ತಿರುಳಿನ ಈ ಸಂಪೂರ್ಣ ರಚನೆಗೆ ಬಿಟುಮೆನ್‌ನಲ್ಲಿ ಸಿದ್ಧಪಡಿಸಲಾದ ಬೇಯಿಸಿದ ಇಟ್ಟಿಗೆಯ ಹೊದಿಕೆಯ ಒಂದು ಹೊರಹೊದಿಕೆಯನ್ನು ಮೂಲತಃ ನೀಡಲಾಗಿತ್ತು. ಮೊದಲ ಅತ್ಯಂತ ಕೆಳಗಿನ ಹಂತದ ಮೇಲೆ ಸುಮಾರು 2.5 ಮೀ ಹಾಗೂ ಎರಡನೆಯದರ ಮೇಲೆ 1.15 ಮೀ.ನಷ್ಟು ಪ್ರಮಾಣದಲ್ಲಿ ಇದನ್ನು ನೀಡಲಾಗಿತ್ತು. ಈ ಬೇಯಿಸಿದ ಇಟ್ಟಿಗೆಳ ಪೈಕಿ ಪ್ರತಿಯೊಂದರ ಮೇಲೂ ರಾಜನ ಹೆಸರನ್ನು ಮುದ್ರೆಯೊತ್ತಲಾಗಿತ್ತು. ಹಂತಗಳ ಇಳಿಜಾರಿಕೆಯ ಗೋಡೆಗಳಿಗೆ ಆಧಾರವನ್ನು ಕೊಡಲಾಗಿತ್ತು. ಒಂದು ಅಗಾಧವಾಗಿರುವ ಮುಮ್ಮಡಿ ಮೆಟ್ಟಿಲಸಾಲಿನ ನೆರವಿನೊಂದಿಗೆ ತುದಿಯ ಭಾಗಕ್ಕೆ ಪ್ರವೇಶಾವಕಾಶವನ್ನು ಕಲ್ಪಿಸಲಾಗಿತ್ತು. ಮೊದಲನೆಯ ಮತ್ತು ಎರಡನೆಯ ಹಂತಗಳ ನಡುವಿನ ಒಂದು ಇಳಿದಾಣ ಅಥವಾ ಮಹಡಿ ಮೇಲಿನ ಮೆಟ್ಟಿಲ ಚೌಕಿಯ ಮೇಲೆ ತೆರೆದುಕೊಳ್ಳುವ ಒಂದು ದ್ವಾರದ ಬಳಿ ಈ ಮೆಟ್ಟಿಲಸಾಲುಗಳೆಲ್ಲವೂ ಒಂದೆಡೆ ಸಂಧಿಸುವಂತಿದ್ದವು. ಮೊದಲ ಹಂತದ ಎತ್ತರವು ಸುಮಾರು 11 ಮೀ.ನಷ್ಟಿದ್ದರೆ ಎರಡನೆಯ ಹಂತವು 5.7 ಮೀ. ಎತ್ತರಕ್ಕೆ ಏರಿತ್ತು. ಹಂತಗೋಪುರದ ದೇವಾಲಯದ ಉತ್ಖನನಕಾರನಿಂದ (ಲಿಯೋನಾರ್ಡ್‌ ವೂಲ್ಲೆ) ಒಂದು ಮೂರನೆಯ ಹಂತವು ವಾಡಿಕೆಯಂತೆ ಮರುನಿರ್ಮಿಸಲ್ಪಟ್ಟಿದೆ, ಮತ್ತು ದೇವಸ್ಥಾನವೊಂದರಿಂದ ಕಳಶಪ್ರಾಯವಾಗಿದೆ. ಚೊಘಾ ಝಂಬಿಲ್ ಹಂತಗೋಪುರದ ದೇವಾಲಯದಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಬೃಹತ್‌ ಪ್ರಮಾಣದ ಲಾಳದ ಕಡ್ಡಿಯ ಹಗ್ಗಗಳನ್ನು ಪತ್ತೆಹಚ್ಚಿದ್ದು, ಹಂತಗೋಪುರದ ದೇವಾಲಯದ ರಚನೆಯ ತಿರುಳಿಗೆ ಅಡ್ಡಲಾಗಿ ಅವು ಹಾದುಹೋಗಿದ್ದುದು ಮತ್ತು ಮಣ್ಣಿನ ಇಟ್ಟಿಗೆಯ ಸಮೂಹವನ್ನು ಅವು ಒಟ್ಟುಗೂಡಿಸಿ ಕಟ್ಟಿದ್ದುದು ಕಂಡುಬಂದಿದೆ. ಪ್ರಾಚೀನ ಮೆಸೊಪಟ್ಯಾಮಿಯನ್ನರು ಸಮೀಪ ಪ್ರಾಚ್ಯದ ಮಧ್ಯಭಾಗದಲ್ಲಿ ನೆಲೆಗೊಂಡಿದ್ದರು. ಇದು ವರ್ತಮಾನ ಕಾಲದ ಸಿರಿಯಾ, ಟರ್ಕಿ, ಮತ್ತು ಇರಾಕ್‌ನಲ್ಲಿ ಸೇರಿಕೊಂಡಿತ್ತು‌. ಪ್ರಾಚೀನ ಮೆಸೊಪಟ್ಯಾಮಿಯಾವು ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ನಡುವೆಯಿತ್ತು. ಮೆಸೊಪಟ್ಯಾಮಿಯಾ ಎಂಬ ಪದವು ಅಕ್ಷರಶಃ “ಎರಡು ನದಿಗಳ ನಡುವಿನ ಭೂಮಿ” ಎಂಬ ಅರ್ಥವನ್ನು ಕೊಡುತ್ತದೆ. ಮೆಸೊಪಟ್ಯಾಮಿಯಾದ ದಕ್ಷಿಣದ ಭಾಗವು ಫಲವಂತ ಬಾಲಚಂದ್ರ ವಲಯದ ಭಾಗವೊಂದನ್ನು ರೂಪಿಸಿತ್ತು. ತಾನು ನೆಲೆಗೊಂಡಿರುವ ಪ್ರದೇಶದ ಲಕ್ಷಣಗಳ ಕಾರಣದಿಂದಾಗಿ, ಮೆಸೊಪಟ್ಯಾಮಿಯಾವು ಸುಡು ಬೇಸಗೆ ಕಾಲಗಳು ಮತ್ತು ಶೀತಲ ಚಳಿಗಾಲಗಳನ್ನು ಹೊಂದಿದೆ. ಎರಿದು ಎಂಬುದು ಮೆಸೊಪಟ್ಯಾಮಿಯಾದ ಮೊದಲ ನಗರವಾಗಿತ್ತು. ಮೆಸೊಪಟ್ಯಾಮಿಯಾದ ನದಿಗಳು ಜೀವಾಧಾರವಾಗುವಲ್ಲಿ ಮತ್ತು ಆಹಾರವನ್ನು ಒದಗಿಸುವಲ್ಲಿ ನೆರವು ನೀಡಿದವು. ಸದರಿ ಪ್ರದೇಶದ ಮಣ್ಣು ಹಾಗೂ ಜಮೀನನ್ನು ತೇವವಾಗಿಸುವ ಮತ್ತು ನೀರಾವರಿ ಒದಗಿಸುವ ಮೂಲಕ ಇಲ್ಲಿನ ನದಿಗಳು ಮೆಸೊಪಟ್ಯಾಮಿಯನ್ನರಿಗೆ ನೆರವಾದವು. ಇಲ್ಲಿನ ನದಿಗಳು ಅಪಾಯಕಾರಿಯಾಗಿಯೂ ಪರಿಣಮಿಸಿದವು, ಮತ್ತು ಪ್ರವಾಹಗಳನ್ನು ಉಂಟುಮಾಡಿ, ಬೆಳೆದು ನಿಂತ ಪೈರುಗಳು ಹಾಗೂ ಹೊಸದಾಗಿ ಬಿತ್ತಲಾಗಿದ್ದ ಬೀಜಗಳೂ ಸಹ ಕೊಚ್ಚಿಕೊಂಡುಹೋಗಲು ಕಾರಣವಾದವು. ಜೌಗುಭೂಮಿ ಪ್ರದೇಶಗಳಲ್ಲಿ ವಾಸವಾಗಿದ್ದ ಅರಬರ ಜೀವನಶೈಲಿಯ ರೀತಿಯನ್ನೇ ಮೆಸೊಪಟ್ಯಾಮಿಯನ್ನರು ಅನುಸರಿಸಿದರು. ಈ ಅರಬರು ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳ ದಂಡೆಯ ಮೇಲೆ ವಾಸವಾಗಿದ್ದು, ತಮ್ಮ ಜೀವನ ನಿರ್ವಹಣೆಯಲ್ಲಿ ಮೆಸೊಪಟ್ಯಾಮಿಯನ್ನರ ನೆರವು ಪಡೆಯುತ್ತಿದ್ದರು. ಮಳೆಗಾಲದ ಋತುವಿನ ಸಮಯದಲ್ಲಿ ನದಿಗಳು ಜಮೀನಿನೊಳಗೆ ಭಾಗಶಃ ಉಕ್ಕಿಹರಿಯುತ್ತಿದ್ದವು, ಮತ್ತು ಎತ್ತರದ ಭಾಗಗಳು ಅಥವಾ ಕಸದ ದಿಣ್ಣೆಗಳನ್ನು ಮಾತ್ರವೇ ನೀರು ಆವರಿಸುತ್ತಿರಲಿಲ್ಲ. ಈ ರೀತಿಯ ಸನ್ನಿವೇಶ ಎದುರಾದಾಗಲೆಲ್ಲಾ ಇತರರ ಮನೆಗಳಿಗೆ ಹೋಗಲು ಅಥವಾ ಪ್ರವಾಹದ ಪ್ರದೇಶಗಳಿಂದ ಆಚೆಗೆ ಹೋಗಲು ಮೆಸೊಪಟ್ಯಾಮಿಯನ್ನರು ದೋಣಿಗಳನ್ನು ಬಳಸಬೇಕಾಗಿಬರುತ್ತಿತ್ತು. ನದಿಯು ಮೆಸೊಪಟ್ಯಾಮಿಯನ್ನರ ಜೀವನವನ್ನು ಅನೇಕ ವಿಧಗಳಲ್ಲಿ ಸಂಕಷ್ಟಕ್ಕೆ ಸಿಲುಕಿಸಿತ್ತು.. ಒಕ್ಕಲುತನಕ್ಕೆ ಸಂಬಂಧಿಸಿದ ಸಂಕೀರ್ಣ ಮತ್ತು ಗಹನವಾದ ಮಾರ್ಗಗಳನ್ನು ಮೆಸೊಪಟ್ಯಾಮಿಯನ್ನರು ಹೊಂದಿದ್ದರು. ಶುಷ್ಕ ಋತುವಿನ ಸಮಯದಲ್ಲಿ ಜಮೀನಿಗೆ ನೀರಾವರಿಯನ್ನು ಒದಗಿಸಲು ಅವರು ಕಾಲುವೆಗಳನ್ನು (ಇದನ್ನು ಅವರು ಬಾರಿ ಬಾರಿ ದುರಸ್ತಿ ಮಾಡಬೇಕಿತ್ತು ಮತ್ತು ಮರು-ಅಗೆಯಬೇಕಿತ್ತು) ಬಳಸುತ್ತಿದ್ದರು. ಕಾಲುವೆಗಳಲ್ಲಿನ ವಿವಿಧ ಹಂತಗಳ ನಡುವೆ ನೀರನ್ನು ಸಾಗಿಸಲು ಮತ್ತು ಬೆಳೆಗಳಿಗೆ ನೀರನ್ನು ಉಣಿಸಲು, ಬಾಲ್ದಿಯನ್ನು (ಬಕೆಟ್‌ನ್ನು) ಎತ್ತುವ ಉಪಕರಣಗಳನ್ನು ಮೆಸೊಪಟ್ಯಾಮಿಯನ್ನರು ಹೊಂದಿದ್ದರು. ನೀರಾವರಿಯನ್ನೇ ನೆಚ್ಚಿಕೊಳ್ಳಲಾಗಿತ್ತಾದ್ದರಿಂದ ಬೆಳೆಗಳನ್ನು ಬೆಳೆಯಲು ಸಾಧ್ಯವಾಗಿತ್ತು ಮತ್ತು ಚಳಿಗಾಲದಾದ್ಯಂತ ಬೆಳೆಗಳು ಸಾಕಷ್ಟು ಆಹಾರವನ್ನು ಒದಗಿಸುತ್ತಿದ್ದವು. ಮೆಸೊಪಟ್ಯಾಮಿಯಾದಲ್ಲಿ ನೀರಾವರಿಯು ಒಂದು ಪ್ರಮುಖ ಪಾತ್ರವನ್ನು ವಹಿಸಿತು. ಬರಹಗಾರಿಕೆ, ಅಥವಾ ಅಕ್ಷರಮಾಲೆಯೊಂದನ್ನು ಆವಿಷ್ಕರಿಸುವಲ್ಲಿ ಮೆಸೊಪಟ್ಯಾಮಿಯನ್ನರು ಮೊದಲಿಗರಾಗಿದ್ದರು! ಪ್ರಾರಂಭದಲ್ಲಿ, ಬರಹಗಾರಿಕೆಯು ಸರಳವಾಗಿದ್ದು, ನೀವು ಏನನ್ನು ತೋರಿಸಲು ಬಯಸಿದ್ದಿರೋ ಅದನ್ನು ತೋರಿಸುವ ಚಿತ್ರವಾಗಿತ್ತು. ಅಂತಿಮವಾಗಿ ಸಂಕೀರ್ಣ ಬೆಣೆಯಾಕಾರದ ಸ್ವರೂಪಕ್ಕೆ ಬರಹಗಾರಿಕೆಯು ವಿಕಸನಗೊಂಡಿತು. ಬೆಣೆಯಾಕಾರದ ಅಕ್ಷರಮಾಲೆಯಲ್ಲಿ ನೂರಾರು ಅಕ್ಷರಗಳಿದ್ದವು. ಮೆಸೊಪಟ್ಯಾಮಿಯನ್ನರು ಮಾತನಾಡುತ್ತಿದ್ದ ಭಾಷೆಯನ್ನು ಮೆಸೊಪಟ್ಯಾಮಿಯಾ ಭಾಷೆ ಎಂಬುದರ ಬದಲಿಗೆ ಸುಮೇರಿಯಾ ಭಾಷೆ ಎಂದು ಕರೆಯಲಾಗುತ್ತಿತ್ತು. ಅಕಾಡ್‌ನ ಭಾಷೆ, ಬ್ಯಾಬಿಲೋನಿಯಾದ ಭಾಷೆ, ಪರ್ಷಿಯಾದ ಭಾಷೆ, ಮತ್ತು ಇತರ ಅನೇಕ ಭಾಷೆಗಳೊಂದಿಗಿನ ಬಳಕೆಗಾಗಿ ಬೆಣೆಯಾಕಾರದ ಅಕ್ಷರಗಳನ್ನು ಮಾರ್ಪಡಿಸಲಾಗಿದೆ.

ಮೆಸೊಪಟ್ಯಾಮಿಯಾದ ಜನರನ್ನು ಪೋಷಿಸಲು ರೂತರು ಆಹಾರದ ಬೆಳೆಯನ್ನು ಬೆಳೆಯುತ್ತಿದ್ದರು. ಆದರೆ ಮೆಸೊಪಟ್ಯಾಮಿಯಾದ ನಗರಗಳ ಸಂಪತ್ತು, ವರ್ತಕರಿಂದ ಮತ್ತು ಕುಶಲಕರ್ಮಿಗಳಿಂದ ಬಂದಿತು. ವಾಣಿಜ್ಯ ವಲಯಕ್ಕೆ ಮೆಸೊಪಟ್ಯಾಮಿಯನ್ನರು ಮಹತ್ವದ ಮೌಲ್ಯವನ್ನು ನೀಡಿದ್ದರು. ಮೆಸೊಪಟ್ಯಾಮಿಯಾದಲ್ಲಿ ಸ್ವಾಭಾವಿಕ ಸಂಪನ್ಮೂಲಗಳು ಹೆಚ್ಚಿನ ಪ್ರಮಾಣದಲ್ಲಿರಲಿಲ್ಲ. ಆದ್ದರಿಂದ ಅಲ್ಲಿನವರು ಬಹುಮಟ್ಟಿಗೆ ಧಾನ್ಯಗಳು ಹಾಗೂ ನೆಯ್ದ ಸರಕುಗಳ ವ್ಯಾಪಾರವನ್ನು ಮಾಡಿದರು. ಮೆಸೊಪಟ್ಯಾಮಿಯಾಕ್ಕೆ ಮತ್ತು ಅಲ್ಲಿಂದ ಹೊರಕ್ಕೆ ಸರಕುಗಳನ್ನು ಸಾಗಿಸುವಲ್ಲಿ ಟೈಗ್ರಿಸ್‌ ಮತ್ತು ಯೂಫ್ರಟಿಸ್‌ ನದಿಗಳು ಪ್ರಧಾನ ಪಾತ್ರವನ್ನು ವಹಿಸಿದವು. ಆಫ್ರಿಕಾ, ಏಷ್ಯಾ, ಮತ್ತು ಯುರೋಪ್‌ ಇವೇ ಮೊದಲಾದ ಖಂಡಗಳೊಂದಿಗೆ ಅಲ್ಲಿನ ವ್ಯಾಪಾರಿಗಳು ಸರಕುಗಳ ವಹಿವಾಟನ್ನು ಇಟ್ಟುಕೊಂಡಿದ್ದರು. ಮೆಸೊಪಟ್ಯಾಮಿಯಾವು ನಾಣ್ಯಗಳನ್ನು ಬಳಸಲಿಲ್ಲವಾದರೂ, ಬೆಳ್ಳಿ ಮತ್ತು ಧಾನ್ಯಗಳ ತೂಕವನ್ನು ಆಧರಿಸಿದ ಅಳತೆಯ ಮಾನಕಗಳು ಅಲ್ಲಿ ಅಂಗೀಕೃತಗೊಳಿಸಲ್ಪಟ್ಟಿದ್ದವು. ತೆರಿಗೆಗಳಿಂದ ಸಂಗ್ರಹಿಸಲಾದ ಹಣವು ಯೂಫ್ರಟಿಸ್‌ ನದಿ ಗೆ ಅಡ್ಡಲಾಗಿ ಸೇತುವೆಯೊಂದನ್ನು ಕಟ್ಟುವ ಯೋಜನೆಗೆ ನೆರವಾಯಿತು. ಹೆಚ್ಚೆಚ್ಚು ಪ್ರಮಾಣದಲ್ಲಿ ವ್ಯಾಪಾರವನ್ನು ನಡೆಸುವುದು ಇದರ ಹಿಂದಿನ ಉದ್ದೇಶವಾಗಿತ್ತು. ವ್ಯಾಪಾರದ ವ್ಯವಸ್ಥೆಯು ಇಲ್ಲದಿದ್ದಿದ್ದರೆ ಮೆಸೊಪಟ್ಯಾಮಿಯಾದ ವ್ಯಾವಹಾರಿಕ ಸ್ಥಿತಿಯು ಸುಲಭವಾಗಿ ವಿಫಲಗೊಳ್ಳುತ್ತಿತ್ತು. ಸುಮಾರು 3500 B.C.Eಯ ಅವಧಿಯಲ್ಲಿ ಮೊದಲ ಚಕ್ರಗಳುಳ್ಳ ವಾಹನಗಳನ್ನು ಮೆಸೊಪಟ್ಯಾಮಿಯನ್ನರು ಸೃಷ್ಟಿಸಿದರು. ಚಕ್ರದಿಂದ-ರೂಪಿಸಲ್ಪಟ್ಟ ಕುಂಬಾರಿಕೆಯನ್ನು ಕಾರ್ಯರೂಪಕ್ಕೆ ತರಲು ಅವರು ಮೊದಲು ಚಕ್ರವನ್ನು ಬಳಸಿದರು. ನಂತರ ಉರುಕ್‌ನಲ್ಲಿ, ಸರಕುಗಳ ಒಂದು ಭಾರವಾದ ಹೊರೆಯನ್ನು ಹೇಗೆ ಹೊತ್ತೊಯ್ಯುವುದು ಎಂಬುದರ ಕುರಿತು ಲೆಕ್ಕಾಚಾರ ಹಾಕುವ ಪ್ರಯತ್ನದಲ್ಲಿದ್ದಾಗ ವ್ಯಕ್ತಿಯೋರ್ವ ಒಂದು ವಿಧದ ಚಕ್ರವನ್ನು ಸೃಷ್ಟಿಸಿದ. ಕೊರಡೊಂದರ ಮೇಲೆ ಮರದ ದಿಮ್ಮಿಯೊಂದನ್ನು ಇರಿಸಿದ ಅವನು, ತನ್ನ ಸರಕುಗಳನ್ನು ಎಳೆದುಕೊಂಡುಹೋಗಲು ಅದನ್ನು ಬಳಸಿದ.ಚಕ್ರದ ಆವಿಷ್ಕಾರವಾಗದೇ ಹೋಗಿದ್ದರೆ ಇಂದಿನ ಆಧುನಿಕ ಜಗತ್ತು ಈಗಿದ್ದ ಹಾಗೆ ಇರುತ್ತಿರಲಿಲ್ಲ.

ಆಕರಗಳು[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

 1. "Mesopotamia - The British Museum".
 2. ೨.೦ ೨.೧ ೨.೨ "Geography of Mesopotamia - Thematic Essay - Timeline of Art History - The Metropolitan Museum of Art". Archived from the original on 2009-02-27. Retrieved 2010-03-29.
 3. [೧]
 4. Khuzestan. Britannica Online Encyclopedia. 2008. Retrieved 2008-12-27.
 5. ಫಿಂಕೆಲ್‌ಸ್ಟೀನ್‌, J. J.; 1962. “ಮೆಸೊಪಟ್ಯಾಮಿಯಾ”, ಜರ್ನಲ್‌ ಆಫ್‌ ನಿಯರ್‌ ಈಸ್ಟರ್ನ್‌ ಸ್ಟಡೀಸ್‌ 21: 73-92
 6. ಷೆಫ್ಲರ್‌, ಥಾಮಸ್‌; 2003. “ 'ಫರ್ಟೈಲ್‌ ಕ್ರೆಸೆಂಟ್‌', 'ಓರಿಯೆಂಟ್‌, 'ಮಿಡ್ಲ್‌ಈಸ್ಟ್‌': ದಿ ಚೇಂಜಿಂಗ್‌ ಮೆಂಟಲ್‌ ಮ್ಯಾಪ್ಸ್‌ ಆಫ್‌ ಸೌತ್‌ಐಸ್ಟ್‌ ಏಷ್ಯಾ,” ಯುರೋಪಿಯನ್‌ ರಿವ್ಯೂ ಆಫ್‌ ಹಿಸ್ಟರಿ 10/2: 253–272. ಇದನ್ನು ಕೂಡಾ: ಬಹ್ರಾನಿ, ಝೈನಾಬ್‌; 1998. ಆರ್ಕಿಯಾಲಜಿ ಅಂಡರ್‌ ಫೈರ್‌: ನ್ಯಾಷನಲಿಸಂ, ಪಾಲಿಟಿಕ್ಸ್‌ ಅಂಡ್‌ ಹೆರಿಟೇಜ್‌ ಇನ್‌ ದಿ ಈಸ್ಟರ್ನ್‌ ಮೆಡಿಟರೇನಿಯನ್‌ ಅಂಡ್‌ ಮಿಡ್ಲ್‌ ಈಸ್ಟ್‌‌ ಇದರಲ್ಲಿನ “ಕಂಜ್ಯೂರಿಂಗ್‌ ಮೆಸೊಪಟ್ಯಾಮಿಯಾ: ಇಮ್ಯಾಜಿನೇಟಿವ್ ಜಿಯಾಗ್ರಫಿ ಎ ವರ್ಲ್ಡ್ ಪಾಸ್ಟ್‌". L. ಮೆಸ್ಕೆಲ್‌ (ಸಂಪಾದಿತ), ರೌಟ್ಲೆಜ್‌: ಲಂಡನ್‌ ಮತ್ತು ನ್ಯೂಯಾರ್ಕ್‌, 159–174.
 7. ಥಾಂಪ್ಸನ್‌, ವಿಲಿಯಂ R. (2004) "ಕಾಂಪ್ಲೆಕ್ಸಿಟಿ, ಡಿಮಿನಿಷಿಂಗ್‌ ಮಾರ್ಜಿನಲ್‌ ರಿಟರ್ನ್ಸ್, ಅಂಡ್‌ ಸೀರಿಯಲ್‌ ಮೆಸೊಪಟ್ಯಾಮಿಯನ್‌ ಫ್ರಾಗ್ಮೆಂಟೇಷನ್‌" (ಸಂಪುಟ 3, ಜರ್ನಲ್‌ ಆಫ್‌ ವರ್ಲ್ಡ್ ಸಿಸ್ಟಮ್ಸ್‌ ರಿಸರ್ಚ್‌)
 8. ಟ್ಯಾಟ್ಲೊ, ಎಲಿಸಬೆತ್‌ ಮೀಯರ್‌ ವಿಮೆನ್‌, ಕ್ರೈಮ್‌, ಅಂಡ್‌ ಪನಿಷ್‌ಮೆಂಟ್‌ ಇನ್‌ ಏನ್ಷಿಯಂಟ್‌ ಲಾ ಅಂಡ್‌ ಸೊಸೈಟಿ: ದಿ ಏನ್ಷಿಯಂಟ್‌ ನಿಯರ್‌ ಫಾಸ್ಟ್‌ ಕಂಟಿನ್ಯುಯಂ ಇಂಟರ್‌ನ್ಯಾಷನಲ್‌ ಪಬ್ಲಿಷಿಂಗ್‌ ಗ್ರೂಪ್‌ ಲಿಮಿಟೆಡ್ (31 ಮಾರ್ಚ್‌ 2005) ISBN 978-0-8264-1628-5 ಪುಟ 75 [೨]
 9. ಜಿಯಾರ್ಜಿಯೋ ಬುಸೆಲ್ಲಾಟಿ (1981), "ವಿಸ್ಡಮ್‌ ಅಂಡ್‌ ನಾಟ್‌: ದಿ ಕೇಸ್‌ ಆಫ್‌ ಮೆಸೊಪಟ್ಯಾಮಿಯಾ", ಜರ್ನಲ್‌ ಆಫ್‌ ಅಮೆರಿಕನ್‌ ಓರಿಯಂಟಲ್‌ ಸೊಸೈಟಿ 101 (1), ಪುಟ 35-47.
 10. ೧೦.೦ ೧೦.೧ ಶೀಲಾ C. ಡೋವ್‌ (2005), "ಆಕ್ಸಿಯಮ್ಸ್‌ ಅಂಡ್‌ ಬ್ಯಾಬಿಲೋನಿಯನ್‌ ಥಾಟ್‌: ಎ ರಿಪ್ಲೇ", ಜರ್ನಲ್‌ ಆಫ್‌ ಪೋಸ್ಟ್‌ ಕೀನ್ಯೇಷಿಯನ್‌ ಇಕನಾಮಿಕ್ಸ್‌ 27 (3), ಪುಟ 385-391.
 11. ಜಿಯಾರ್ಜಿಯೋ ಬುಸೆಲ್ಲಾಟಿ (1981), "ವಿಸ್ಡಮ್‌ ಅಂಡ್‌ ನಾಟ್‌: ದಿ ಕೇಸ್‌ ಆಫ್‌ ಮೆಸೊಪಟ್ಯಾಮಿಯಾ", ಜರ್ನಲ್‌ ಆಫ್‌ ಅಮೆರಿಕನ್‌ ಓರಿಯಂಟಲ್‌ ಸೊಸೈಟಿ 101 (1), ಪುಟ 35-47 43.
 12. D. ಬ್ರೌನ್‌ (2000), ಮೆಸೊಪಟ್ಯಾಮಿಯನ್‌ ಪ್ಲಾನೆಟರಿ ಅಸ್ಟ್ರಾನಮಿ-ಅಸ್ಟ್ರಾಲಜಿ , ಸ್ಟೈಕ್ಸ್‌ ಪಬ್ಲಿಕೇಷನ್ಸ್‌, ISBN 90-5693-036-2.
 13. ಒಟ್ಟೊ E. ನ್ಯೂಜೆಎಬ್ಯೂಯರ್‌ (1945). "ದಿ ಹಿಸ್ಟರಿ ಆಫ್‌ ಏನ್ಷಿಯಂಟ್‌ ಅಸ್ಟ್ರಾನಮಿ ಪ್ರಾಬ್ಲಮ್ಸ್‌ ಅಂಡ್‌ ಮೆಥಡ್ಸ್‌", ಜರ್ನಲ್‌ ಆಫ್‌ ನಿಯರ್‌‌ ಈಸ್ಟರ್ನ್‌ ಸ್ಟಡೀಸ್‌ 4 (1), ಪುಟ 1-38.
 14. ಜಾರ್ಜ್‌ ಸಾರ್ಟನ್‌ (1955). "ಚಾಲ್ಡಿಯನ್‌ ಅಸ್ಟ್ರಾನಮಿ ಆಫ್‌ ದಿ ಲಾಸ್ಟ್‌ ಥ್ರೀ ಸೆಂಚುರೀಸ್‌ B. C.", ಜರ್ನಲ್‌ ಆಫ್‌ ದಿ ಅಮೆರಿಕನ್‌ ಓರಿಯೆಂಟಲ್‌ ಸೊಸೈಟಿ 75 (3), ಪುಟ 166-173 [169].
 15. ವಿಲಿಯಂ P. D. ವೈಟ್‌ಮನ್‌ (1951, 1953), ದಿ ಗ್ರೋತ್‌ ಆಫ್‌ ಸೈಂಟಿಫಿಕ್‌ ಐಡಿಯಾಸ್‌ , ಯೇಲ್‌ ಯೂನಿವರ್ಸಿಟಿ ಪ್ರೆಸ್‌ ಪುಟ 38.
 16. Pingree (1998)
 17. ಈವ್ಸ್‌‌, ಹೋವರ್ಡ್‌ ಆನ್‌ ಇಂಟ್ರಡಕ್ಷನ್‌ ಟು ದಿ ಹಿಸ್ಟರಿ ಆಫ್‌ ಮ್ಯಾಥಮೆಟಿಕ್ಸ್‌ ಹೋಲ್ಟ್‌, ರೀನ್‌ಹಾರ್ಟ್‌ ಅಂಡ್‌ ವಿನ್ಸ್ಟನ್‌, 1969 ಪುಟ 31 [೩]
 18. ೧೮.೦ ೧೮.೧ H. F. J. ಹೋರ್ಸ್ಟ್‌ಮನ್‌ಷಾಫ್‌, ಮಾರ್ಟೆನ್‌ ಸ್ಟಾಲ್‌, ಕಾರ್ನೆಲಿಸ್‌ ಟಿಲ್‌ಬರ್ಗ್‌ (2004), ಮ್ಯಾಜಿಕ್‌ ಅಂಡ್‌ ರ್ಯಾಷನಾಲಿಟಿ ಇನ್‌ ಏನ್ಷಿಯಂಟ್‌ ನಿಯರ್‌ ಈಸ್ಟರ್ನ್‌ ಅಂಡ್‌ ಗ್ರೇಸಿಯೋ-ರೋಮನ್‌ ಮೆಡಿಸಿನ್‌ , ಪುಟ 99, ಬ್ರಿಲ್‌ ಪಬ್ಲಿಷರ್ಸ್, ISBN 90-04-13666-5.
 19. ಮಾರ್ಟೆನ್‌ ಸ್ಟಾಲ್‌ (1993), ಎಪಿಲೆಪ್ಸಿ ಇನ್‌ ಬ್ಯಾಬಿಲೋನಿಯಾ , ಪುಟ 55, ಬ್ರಿಲ್‌ ಪಬ್ಲಿಷರ್ಸ್‌, ISBN 90-72371-63-1.
 20. H. F. J. ಹೋರ್ಸ್ಟ್‌ಮನ್‌ಷಾಫ್‌, ಮಾರ್ಟೆನ್‌ ಸ್ಟಾಲ್‌, ಕಾರ್ನೆಲಿಸ್‌ ಟಿಲ್‌ಬರ್ಗ್‌ (2004), ಮ್ಯಾಜಿಕ್‌ ಅಂಡ್‌ ರ್ಯಾಷನಾಲಿಟಿ ಇನ್‌ ಏನ್ಷಿಯಂಟ್‌ ನಿಯರ್‌ ಈಸ್ಟರ್ನ್‌ ಅಂಡ್‌ ಗ್ರೇಸಿಯೋ-ರೋಮನ್‌ ಮೆಡಿಸಿನ್‌ , ಪುಟ 97-98, ಬ್ರಿಲ್‌ ಪಬ್ಲಿಷರ್ಸ್‌, ISBN 90-04-13666-5.
 21. ಮಾರ್ಟೆನ್‌ ಸ್ಟಾಲ್‌ (1993), ಎಪಿಲೆಪ್ಸಿ ಇನ್‌ ಬ್ಯಾಬಿಲೋನಿಯಾ , ಪುಟ 5, ಬ್ರಿಲ್‌ ಪಬ್ಲಿಷರ್ಸ್, ISBN 90-72371-63-1.
 22. ಸ್ಟಿಫಾನೀ ಡ್ಯಾಲಿ ಅಂಡ್‌ ಜಾನ್‌ ಪೀಟರ್‌ ಒಲೆಸನ್‌ (ಜನವರಿ 2003). "ಸೆನ್ನಾಚೆರಿಬ್‌, ಆರ್ಕಿಮಿಡಿಸ್‌, ಅಂಡ್‌ ದಿ ವಾಟರ್‌ ಸ್ಕ್ರ್ಯೂ: ದಿ ಕಾಂಟೆಕ್ಸ್ಟ್‌ ಆಫ್‌ ಇನ್ವೆನ್ಷನ್‌ ಇನ್‌ ದಿ ಏನ್ಷಿಯಂಟ್‌ ವರ್ಲ್ಡ್", ಟೆಕ್ನಾಲಜಿ ಅಂಡ್‌ ಕಲ್ಚರ್‌ 44 (1).
 23. Twist, Jo (20 November 2005). "Open media to connect communities". BBC News. Retrieved 2007-08-06.
 24. Karen Rhea Nemet-Nejat (1998). Daily Life in Ancient Mesopotamia.
 25. Rivkah Harris (2000). Gender and Aging in Mesopotamia.
 26. Robert Dalling (2004). The Story of Us Humans, from Atoms to Today's Civilization.
 27. >Robert Dalling (2004). The Story of Us Humans, from Atoms to Today's Civilization.
 28. Dunham, Sally (2005). "Ancient Near Eastern architecture". In Daniel Snell (ed.). A Companion to the Ancient Near East. Oxford: Blackwell. pp. 266–280. ISBN 0-631-23293-1.
 29. Nicholas Postgate, J N Postgate (1994). Early Mesopotamia: Society and Economy at the Dawn of History.
 30. Susan Pollock (1999). Ancient Mesopotamia.
 31. ಕ್ರಾಫರ್ಡ್‌, ಪುಟ 73
 32. ಕ್ರಾಫರ್ಡ್‌, ಪುಟ 73-74

ಗ್ರಂಥಸೂಚಿ[ಬದಲಾಯಿಸಿ]

 • ಅಟ್ಲಾಸ್‌ ಡೆ ಲಾ ಮೆಸೊಪಟ್ಯಾಮಿಯೆ ಎಟ್‌ ಡು ಪ್ರೊಷೆ-ಓರಿಯೆಂಟ್‌ ಏನ್ಷಿಯೆನ್‌ , ಬ್ರೆಪಾಲ್ಸ್‌, 1996 ISBN

|2503500463.

 • ಬೆನೋಯಿಟ್‌, ಆಗ್ನೆಸ್‌; 2003. ಆರ್ಟ್‌ ಎಟ್‌ ಆರ್ಕಿಯೋಲಾಜಿಯೆ : ಲೆಸ್‌ ಸಿವಿಲೈಸೇಷನ್ಸ್‌ ಡು ಪ್ರೊಷೆ-ಓರಿಯೆಂಟ್‌ ಏನ್ಷಿಯೆನ್‌‌ , ಮ್ಯಾನುಯೆಲ್ಸ್‌ ಡೆ ಎಲ್‌'ಎಕೊಲೆ ಡು ಲೌವ್ರೆ.
 • ಜೀನ್‌ ಬೊಟ್ಟೆರೊ; 1987.ಮೆಸೊಪಟ್ಯಾಮಿಯೆ. ಎಲ್‌'ಎಕ್ರಿಚರ್‌, ಲಾ ರೈಸನ್‌ ಎಟ್‌ ಲೆಸ್‌ ಡಯೂಕ್ಸ್‌ , ಗ್ಯಾಲಿಮಾರ್ಡ್‌, ಕಾಲೇಜ್‌ « ಫೋಲಿಯೋ ಹಿಸ್ಟೊರೆ », ISBN

|2070403084.

 • ಜೀನ್‌ ಬೊಟ್ಟೆರೊ; 1992. ಮೆಸೊಪಟ್ಯಾಮಿಯಾ: ರೈಟಿಂಗ್‌, ರೀಸನಿಂಗ್‌ ಅಂಡ್‌ ದಿ ಗಾಡ್ಸ್‌ . ಭಾಷಾಂತರಿಸಿದ್ದು: ಝೈನಾಬ್‌ ಬಹ್ರಾನಿ ಮತ್ತು ಮಾರ್ಕ್‌ ವಾನ್‌ ಡಿ ಮೈರೂಪ್‌, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌: ಚಿಕಾ.
 • ಎಡ್ಜರ್ಡ್‌, ಡಯೆಟ್ಜ್‌ ಒಟ್ಟೊ; 2004. ಗೆಷಿಷ್ಟೆ ಮೆಸೊಪಟ್ಯಾಮಿಯೆನ್ಸ್‌. ವಾನ್‌ ಡೆನ್‌ ಸುಮೇರರ್ನ್‌ ಬಿಸ್‌ ಝು ಅಲೆಕ್ಸಾಂಡರ್‌ ಡೆಮ್‌ ಗ್ರೊಬೆನ್‌ , ಮುನ್‌ಚೆನ್‌, ISBN 3-406-51664-5
 • ಹ್ರೌಡಾ, ಬಾರ್ಥೆಲ್‌ ಮತ್ತು ರೆನಿ ಫೈಲ್‌ಷಿಫ್ಟರ್‌; 2005. ಮೆಸೊಪಟ್ಯಾಮಿಯೆನ್‌. ಡೈ ಆಂಟಿಕೆನ್‌ ಕಲ್‌ಟುರೆನ್‌ ಜ್ವಿಷೆನ್‌ ಯುಫ್ರಾಟ್‌ ಅಂಡ್‌ ಟೈಗ್ರಿಸ್‌. ಮುನ್‌ಚೆನ್‌ 2005 (4. Aufl.), ISBN 3-406-46530-7
 • ಜೋವಾನ್ನೆಸ್‌, ಫ್ರಾನ್ಸಿಸ್‌; 2001. ಡಿಕ್ಷನ್ನೇರೆ ಡೆ ಲಾ ಸಿವಿಲೈಸೇಷನ್‌ ಮೆಸೊಪಟ್ಯಾಮಿಯೆನ್ನೆ , ರಾಬರ್ಟ್‌ ಲಾಫಾಂಟ್‌.
 • ಕೋರ್ನ್‌, ವೋಲ್ಫ್‌ಗ್ಯಾಂಗ್‌; 2004. ಮೆಸೊಪಟ್ಯಾಮಿಯೆನ್‌ - ವೆಯ್ಜ್‌ ಡೆರ್‌ ಜಿವಿಲೈಸೇಷನ್‌. 6000 ಜಾಹ್ರೆ ಹೊಚ್ಕುಲ್‌ಟ್ಯೂರೆನ್‌ ಆನ್‌ ಯೂಫ್ರಟ್‌ ಅಂಡ್‌ ಟೈಗ್ರಿಸ್‌ , ಸ್ಟಟ್‌ಗಾರ್ಟ್‌, ISBN 3-8062-1851-X
 • ಕುಹ್ರಟ್‌, ಅಮೆಲಿಯೆ; 1995. ದಿ ಏನ್ಷಿಯೆಂಟ್‌ ನಿಯರ್‌ ಈಸ್ಟ್‌: ಸುಮಾರು 3000-330 B.C . 2 ಸಂಪುಟಗಳು ರೌಟ್‌ಲೆಜ್‌: ಲಂಡನ್‌ ಮತ್ತು ನ್ಯೂಯಾರ್ಕ್‌.
 • ಲಿವೆರಾನಿ, ಮಾರಿಯೋ; 1991. ಆಂಟಿಕೋ ಓರಿಯೆಂಟೆ: ಸ್ಟೋರಿಯಾ, ಸೋಷಿಯೇಟಾ, ಇಕನಾಮಿಕಾ . ಎಡಿಟೊರಿ ಲ್ಯಾಟೆರ್ಜಾ: ರೋಮಾ.
 • ಮ್ಯಾಥ್ಯೂಸ್‌, ರೋಜರ್‌: 2003. ದಿ ಆರ್ಕಿಯಾಲಜಿ ಆಫ್‌ ಮೆಸೊಪಟ್ಯಾಮಿಯಾ. ಥಿಯರೀಸ್‌ ಅಂಡ್‌ ಅಪ್ರೋಚಸ್‌ , ಲಂಡನ್‌ 2003, ISBN 0-415-25317-9
 • ಮ್ಯಾಥ್ಯೂಸ್‌, ರೋಜರ್‌; 2005. ದಿ ಅರ್ಲಿ ಪ್ರಿಹಿಸ್ಟರಿ ಆಫ್‌ ಮೆಸೊಪಟ್ಯಾಮಿಯಾ - 500,000 ದಿಂದ 4,500 BC , ಟರ್ನ್‌ಹೌಟ್‌ 2005, ISBN 2-503-50729-8
 • ಓಪ್ಪೆನ್‌ಹೇಮ್‌, A. ಲಿಯೋ; 1964. ಏನ್ಷಿಯಂಟ್‌ ಮೆಸೊಪಟ್ಯಾಮಿಯಾ: ಪೋರ್ಟ್ರೇಟ್‌ ಆಫ್‌ ಎ ಡೆಡ್‌ ಸಿವಿಲೈಸೇಷನ್‌ . ದಿ ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌: ಚಿಕಾಗೊ ಮತ್ತು ಲಂಡನ್‌. ಪರಿಷ್ಕೃತ ಆವೃತ್ತಿಯನ್ನು ಸಂಪೂರ್ಣಗೊಳಿಸಿದ್ದು ಎರಿಕಾ ರೀನರ್‌, 1977.
 • ಪೊಲಾಕ್‌, ಸುಸಾನ್‌; 1999. ಏನ್ಷಿಯಂಟ್‌ ಮೆಸೊಪಟ್ಯಾಮಿಯಾ: ದಿ ಈಡನ್‌ ದಟ್‌ ನೆವರ್‌ ವಾಸ್‌ . ಕೇಂಬ್ರಿಜ್‌ ಯೂನಿವರ್ಸಿಟ್‌ ಪ್ರೆಸ್‌: ಕೇಂಬ್ರಿಜ್‌.
 • ಪೋಸ್ಟ್‌ಗೇಟ್‌, J. ನಿಕೋಲಸ್‌; 1992. ಅರ್ಲಿ ಮೆಸೊಪಟ್ಯಾಮಿಯಾ: ಸೊಸೈಟಿ ಅಂಡ್‌ ಇಕಾನಮಿ ಅಟ್‌ ದಿ ಡಾನ್‌ ಆಫ್‌ ಹಿಸ್ಟರಿ . ರೌಲೆಟ್ಜ್‌: ಲಂಡನ್‌ ಮತ್ತು ನ್ಯೂಯಾರ್ಕ್‌.
 • ರೂಕ್ಸ್‌, ಜಾರ್ಜಸ್‌; 1964. ಏನ್ಷಿಯಂಟ್‌ ಇರಾಕ್‌ , ಪೆಂಗ್ವಿನ್‌ ಬುಕ್ಸ್‌.
 • ಸಿಲ್ವರ್‌, ಮೋರಿಸ್‌; 2007. "ರೀಡಿಸ್ಟ್ರಿಬ್ಯೂಷನ್‌ ಅಂಡ್‌ ಮಾರ್ಕೆಟ್ಸ್‌ ಇನ್‌ ದಿ ಇಕಾನಮಿ ಆಫ್‌ ಏನ್ಷಿಯಂಟ್‌ ಮೆಸೊಪಟ್ಯಾಮಿಯಾ: ಅಪ್‌ಡೇಟಿಂಗ್‌ ಪೊಲಾನ್ಯಿ", ಆಂಟಿಗುವಾ ಓರಿಯೆಂಟೆ 5: 89-112.
 • ಸ್ನೆಲ್‌, ಡೇನಿಯಲ್‌ (ಸಂಪಾದಿತ)2005. ಎ ಕಂಪ್ಯಾನಿಯನ್‌ ಟು ದಿ ಏನ್ಷಿಯಂಟ್‌ ನಿಯರ್‌ ಈಸ್ಟ್‌ . ಮಾಲ್ಡೆನ್‌, MA : ಬ್ಲ್ಯಾಕ್‌ವೆಲ್‌ ಪಬ್ಲಿಷರ್ಸ್‌, 2005.
 • ವಾನ್‌ ಡೆ ಮೀರೂಪ್‌, ಮಾರ್ಕ್‌; 2004. ಎ ಹಿಸ್ಟರಿ ಆಫ್‌ ದಿ ಏನ್ಷಿಯಂಟ್‌ ನಿಯರ್‌ ಈಸ್ಟ್‌. ಸುಮಾರು 3000-323 BC . ಆಕ್ಸ್‌ಫರ್ಡ್‌: ಬ್ಲ್ಯಾಕ್‌ವೆಲ್‌ ಪಬ್ಲಿಷಿಂಗ್‌.

ಹೊರಗಿನ ಕೊಂಡಿಗಳು[ಬದಲಾಯಿಸಿ]