ಉಕ್ಕು ಇದರ ಮುಖ್ಯ ಲೋಹ ಕಬ್ಬಿಣವಾಗಿದ್ದು,ಇಂಗಾಲ ಮಿಶ್ರಣಕ್ಕೆ ಉಪಯೋಗಿಸಲ್ಪಟ್ಟ(ಶೇಕಡಾ ೦.೦೨ರಷ್ಟು) ಇನ್ನೊಂದು ಮೂಲಧಾತುವಾಗಿದೆ.
ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ.ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ:ಇಂಗಾಲ,ಸಿಲಿಕಾನ್)ಕೂಡಾ ಆಗಬಹುದು.ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.
ಮಿಶ್ರಲೋಹಗಳ ತಯಾರಿಕೆಯಲ್ಲಿ ಒಂದು ಮೂಲಲೋಹವಿರುತ್ತದೆ.ಈ ಲೋಹವನ್ನು ಕರಗಿಸಿ ಇದಕ್ಕೆ ಬೇರೆ ಮೂಲಧಾತುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸುತ್ತಾರೆ.ಇದನ್ನು ಬೇಕಾದ ಅಚ್ಚುಗಳಿಗೆ ಹೊಯ್ದು ತಣಿಸುತ್ತಾರೆ.ಕೆಲವು ಮಿಶ್ರಲೋಹಗಳನ್ನು ಲೋಹಗಳ ಪುಡಿಯನ್ನು ಮಿಶ್ರಣಮಾಡಿ ಒತ್ತಡದಲ್ಲಿ ಬಿಸಿಮಾಡುವ ವಿಧಾನದಿಂದಲೂ ತಯಾರಿಸಬಹುದು.