ವಿಷಯಕ್ಕೆ ಹೋಗು

ಬಿಸ್ಮತ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬಿಸ್ಮತ್ ಪ್ರಾಚೀನ ಜನರಿಗೆ ತಿಳಿದಿದ್ದ ಲೋಹಗಳಲ್ಲಿ ಒಂದು. ಇದು ತಿಳಿ ಗುಲಾಬಿ ಬಣ್ಣದ ಮೂಲಧಾತು.ಪ್ರಕೃತಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಮೂಲ ರೂಪದಲ್ಲಿಯೇ ದೊರೆಯುತ್ತದೆ. ಬೊಲಿವಿಯಾ ದೇಶದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬಿಸ್ಮತ್ ನ ಸಂಗ್ರಹವಿದೆ.ಲೋಹವಾಗಿ ಬಿಸ್ಮತ್ ಬಹುವಾಗಿ ಉಪಯೋಗದಲ್ಲಿದೆ.ಔಷಧಗಳಲ್ಲಿ, ವಿದ್ಯುತ್ ಉಪಕರಣಗಳಲ್ಲಿ,ಕಡಿಮೆ ಉಷ್ಣತೆಯಲ್ಲಿ ಕರಗುವ ಮಿಶ್ರ ಲೋಹವಾಗಿ ಕೈಗಾರಿಕೆ ಗಳಲ್ಲಿ ವ್ಯಾಪಕವಾಗಿ ಬಳಕೆಯಲ್ಲಿದೆ.ಇದರ ಅತ್ಯಂತ ಪ್ರಮುಖ ಉಪಯೋಗ ಅಣು ರಿಯಾಕ್ಟರ್ ಗಳಲ್ಲಿದೆ.

"https://kn.wikipedia.org/w/index.php?title=ಬಿಸ್ಮತ್&oldid=318437" ಇಂದ ಪಡೆಯಲ್ಪಟ್ಟಿದೆ