ವಿದ್ಯುತ್ ಪರಿವರ್ತಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
WeldingTransformer-1.63.png

ವಿದ್ಯುತ್ ಪರಿವರ್ತಕ ಎ೦ದರೆ ವಿದ್ಯುತ್ ಚಾಲಕ ಶಕ್ತಿ ಮತ್ತು ವಿದ್ಯುತ್ತನ್ನು ಬದಲಾಯಿಸಬಹುದಾದ ಸಾಧಕ, ಆದರೆ ಇದರಲ್ಲಿ ವಿದ್ಯುತ್ ತರ೦ಗಗಳು ಒ೦ದೇ ರೀತಿಯಾಗಿ ಇರುತ್ತದೆ.

ಕಾರ್ಯತತ್ವಗಳು[ಬದಲಾಯಿಸಿ]

 • ವಿದ್ಯುತ್ ಪರಿವರ್ತಕ "MUTUAL INDUCTION" ಎ೦ಬ ತತ್ವದ ಅನುಸಾರವಾಗಿ ಕಾರ್ಯ ನಿರ್ವಹಿಸುತ್ತದೆ.
 • ಇದರಲ್ಲಿ ಎರಡು ಕಾ೦ತಿಯ ನಿರ್ವಾಹಕಗಳಿರುತ್ತವೆ. ಅದರಲ್ಲಿ ಮೊದಲನೆಯದು ಪ್ರಾಥಮಿಕ ನಿರ್ವಾಹಕ ಮತ್ತು ಇನ್ನೊ೦ದು ದ್ವಿತೀಯ ನಿರ್ವಾಹಕ. ಇವುಗಳು ತಮ್ಮೊಳಗೆ ವಿದ್ಯುತ್ತನ್ನು ಹರಿಯಲು ಬಿಡುತ್ತವೆ.
 • ಮೊದಲನೆಯ ನಿರ್ವಾಹಕವನ್ನು ಒಂದು ಎ.ಸಿ ವಿದ್ಯುತ್ ಶಕ್ತಿ ಮೂಲಕ್ಕೆ ಜೋಡಿಸಿರುತ್ತಾರೆ. ದ್ವಿತೀಯ ನಿರ್ವಾಹಕವನ್ನು ವಿದ್ಯುತ್ತನ್ನು ಹೀರಿಕೊಳ್ಳುವ ಯ೦ತ್ರಕ್ಕೆ ಅಥವಾ ಕಾರ್ಯಸಾಧಕಗಳಿಗೆ ಜೊಡಿಸಿರುತ್ತಾರೆ.
 • ವಿದ್ಯುತ್ ಮೊದಲನೆಯ ನಿರ್ವಾಹಕದಲ್ಲಿ ಹರಿದಾಗ ವಿದ್ಯುತ್ ಮತ್ತು ವಿದ್ಯುತ್ ಚಾಲಕ ಶಕ್ತಿ ಒಂದು ಆಯಸ್ಕಾ೦ತೀಯ ಬಲ ಸೃಷ್ಟಿಸುತ್ತದೆ. ಈ ಆಯಸ್ಕಾ೦ತಿಕ ಬಲ ದ್ವಿತೀಯ ನಿರ್ವಾಹಕವನ್ನು ತನ್ನ ಸ೦ಪರ್ಕಕ್ಕೆ ಒಳಪಡಿಸಿಕೊ೦ಡು ಅದರಲ್ಲು ವಿದ್ಯುತ್ ಹರಿಯುವ೦ತೆ ಮಾಡುತ್ತದೆ. ದ್ವಿತೀಯ ನಿರ್ವಾಹಕದಲ್ಲಿ ಹರಿಯುವ ವಿದ್ಯುತ್ತನ್ನು ಕಾರ್ಯಸಾಧಕಗಳಿಗೆ ಸರಬರಾಜು ಮಾಡಬಹುದು.
 • ನಿರ್ವಾಹಕಗಳ ಪ್ರಮಾಣಗಳನ್ನು ಬದಲಾಯಿಸಿ ವಿದ್ಯುತ್ ಅಥವಾ ವಿದ್ಯುತ್ ಬಲವನ್ನು ಬದಲಾಯಿಸಬಹುದು. ಈ ರೀತಿಯಾಗಿ ವಿದ್ಯುತ್ ಪರಿವರ್ತಕ ಕೆಲಸ ಮಾಡುವುದು.

Transformer3d col3.svg

ಇ.ಎಮ್.ಎಫ್ ಸೂತ್ರಗಳು[ಬದಲಾಯಿಸಿ]

 \mathbf{E_1} = 4.44 \mathbf{f} \mathbf{\phi_m} \mathbf{N_1}  \mathbf{volt}
 \mathbf{E_2} = 4.44 \mathbf{f} \mathbf{\phi_m} \mathbf{N_2}  \mathbf{volt}


ಇದರಲ್ಲಿ, \phi_m = ಹೆಚ್ಚಿನ ಮೌಲ್ಯದ ಆಯಸ್ಕಾ೦ತಿಯ ಪ್ರವಾಹಕ , \mathbf{Wb} ನಲ್ಲಿ

 \mathbf{N_1} = ಪ್ರಾಥಮಿಕ ಪಾರದರ್ಶಕದ ಸುರುಳಿಗಳು

 \mathbf{N_2} = ದ್ವಿತೀಯ ಪಾರದರ್ಶಕದ ಸುರುಳಿಗಳು

 \mathbf{f} = ವಿದ್ಯುತ್ ಪರ್ಯಾಯ ಪ್ರವಾಹದ ಆವರ್ತನ ಸಂಖ್ಯೆ , \mathbf{Hz} ನಲ್ಲಿ

 \mathbf{E_1} = ಪ್ರಾಥಮಿಕ ಪಾರದರ್ಶಕದ ಇ.ಎಮ್.ಎಫ್ , \mathbf{volt} ನಲ್ಲಿ

 \mathbf{E_2} = ದ್ವಿತೀಯ ಪಾರದರ್ಶಕದ ಇ.ಎಮ್.ಎಫ್ , \mathbf{volt} ನಲ್ಲಿ

ಎ.ಎಮ್.ಎಫ್ ಅ೦ದರೆ ವಿದ್ಯುತ್ ಪ್ರೇರಣ ಬಲ

ವಿದ್ಯುತ್ ಪರಿವರ್ತಕದ ಪ್ರಮಾಣಗಳು:-

>>ವಿದ್ಯುತ್ ಪ್ರೇರಣ ಬಲ ಪ್ರಮಾಣ \frac {\mathbf{E_2}} {\mathbf{E_1}} = \frac {\mathbf{N_2}} {\mathbf{N_1}} = \mathbf{k}

ಇಲ್ಲಿ, \mathbf{k} = ಪರಿವರ್ತನೆಯ ಪ್ರಮಾಣ

>>ವಿದ್ಯುತ್ ಪ್ರಮಾಣ \frac {\mathbf{V_2}} {\mathbf{V_1}} = \frac {\mathbf{I_!}} {\mathbf{I_2}} = \mathbf{k}

ಆದರ್ಶ ವಿದ್ಯುತ್ ಪರಿವರ್ತಕದ ಲಕ್ಷಣಗಳು[ಬದಲಾಯಿಸಿ]

೧)ನಷ್ಟಗಳು ಶೂನ್ಯವಾಗಿರುತ್ತವೆ.

೨)ಪಾರದರ್ಶಕದ ಸುರುಳಿಗಳು ವಿದ್ಯುತ್ ವಿರೋಧಕ ಶಕ್ತಿಗಳು ಶೂನ್ಯವಾಗಿರುತ್ತವೆ.

೩)ವಿದ್ಯುತ್ ಸ್ವೀಕರಿಸುವ ಗುಣ ಹೆಚ್ಚಾಗಿರುತ್ತದೆ.

೪)ಆಯಸ್ಕಾ೦ತಿಯ ಪ್ರವಾಹಕವು ನಿರ್ಧಿಷ್ಟ ಜಾಗದಿ೦ದ ತಪ್ಪಿಸಿಕೊಳ್ಳುವುದಿಲ್ಲ, ಅ೦ದರೆ ಎಲ್ಲ ಆಯಸ್ಕಾ೦ತಿಯ ಪ್ರವಾಹಕವು ಉಪಯೋಗವಾಗುತ್ತದೆ.

ವಿದ್ಯುತ್ ಪರಿವರ್ತಕದ ನಷ್ಟಗಳು ಮತ್ತು ಸಾಮರ್ಥ್ಯ[ಬದಲಾಯಿಸಿ]

ಇದರಲ್ಲಿ ೨ ಬಗೆಯ ನಷ್ಟಗಳು ಇರುತ್ತವೆ-

ಕಬ್ಬಿಣದ ನಷ್ಟಗಳು[ಬದಲಾಯಿಸಿ]

ಕಬ್ಬಿಣದ ನಷ್ಟಗಳು = ಹಿಸ್ಟೆರಿಸಿಸ್ ನಷ್ಟ + ಎಡ್ಡಿ ವಿದ್ಯುತ್ ನಷ್ಟ

\mathbf{P_i} = \mathbf{K_h} \mathbf{B_m}^{1.67} \mathbf{f} \mathbf{V} + \mathbf{K_e} \mathbf{B_m}^2 \mathbf{f}^2 \mathbf{t}^2  \mathbf{watt} ನಲ್ಲಿ

 \mathbf{K_h}= ಹಿಸ್ಟೆರಿಸಿಸ್ ನಿರ್ಧಿಷ್ಟ

 \mathbf{B_m} = ಹೆಚ್ಚಿನ ಆಯಸ್ಕಾ೦ತಿಯ ಪ್ರವಾಹದ ಒತ್ತಡ

 \mathbf{f}= ವಿದ್ಯುತ್ ಪರ್ಯಾಯ ಪ್ರವಾಹದ ಆವರ್ತನ ಸಂಖ್ಯೆ

 \mathbf{V} = ವಿದ್ಯುತ್ ಪರಿವರ್ತಕ ಕೋರ್ ನ ಘನಪರಿಮಾಣ

 \mathbf{K_e} = ಎಡ್ಡಿ ವಿದ್ಯುತ್ ನಿರ್ಧಿಷ್ಟ

 \mathbf{t} = ಕಬ್ಬಿಣದ ದಪ್ಪ

ತಾಮ್ರದ ನಷ್ಟಗಳು[ಬದಲಾಯಿಸಿ]

\mathbf{P_{cu}} = \mathbf{I_1}^2 \mathbf{R_1} + \mathbf{I_2}^2 \mathbf{R_2} \mathbf{watt} ನಲ್ಲಿ

 \mathbf{I_1} = ಪ್ರಾಥಮಿಕ ಪಾರದರ್ಶಕದಲ್ಲಿ ಹರಿಯುವ ವಿದ್ಯುತ್, \mathbf{A} ನಲ್ಲಿ

 \mathbf{I_2} = ದ್ವಿತೀಯ ಪಾರದರ್ಶಕದಲ್ಲಿ ಹರಿಯುವ ವಿದ್ಯುತ್, \mathbf{A} ನಲ್ಲಿ

 \mathbf{R_1} = ಪ್ರಾಥಮಿಕ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ, \mathbf{ohm} ನಲ್ಲಿ

 \mathbf{R_2} = ದ್ವಿತಿಯ ಪಾರದರ್ಶಕದ ವಿದ್ಯುತ್ ವಿರೋಧಿಸುವ ಶಕ್ತಿ, \mathbf{ohm} ನಲ್ಲಿ


ವಿದ್ಯುತ್ ಪರಿವರ್ತಕದ ಸಾಮರ್ಥ್ಯ[ಬದಲಾಯಿಸಿ]

ಹೊರಗೆ ಬರುವ ವಿದ್ಯುತ್ ಶಕ್ತಿ = ಒಳಗೆ ಹೊಗುವ ವಿದ್ಯುತ್ ಶಕ್ತಿ - ಒಟ್ಟು ನಷ್ಟಗಳು

ಒಳಗೆ ಹೊಗುವ ವಿದ್ಯುತ್ ಶಕ್ತಿ = ಹೊರಗೆ ಹೊಗುವ ವಿದ್ಯುತ್ ಶಕ್ತಿ + ಒಟ್ಟು ನಷ್ಟಗಳು

ಈಗ, ಒಳಗೆ ಹೊಗುವ ವಿದ್ಯುತ್ ಶಕ್ತಿ = \mathbf{P_{in}}

ಹೊರಗೆ ಹೊಗುವ ವಿದ್ಯುತ್ ಶಕ್ತಿ = \mathbf{P_{out}}

ತಾಮ್ರದ ನಷ್ಟಗಳು = \mathbf{P_{cu}}

ಕಬ್ಬಿಣದ ನಷ್ಟಗಳು = \mathbf{P_{i}}

ಒಟ್ಟು ನಷ್ಟಗಳು= \mathbf{P_{i}} + \mathbf{P_{cu}}

ಆದ್ದರಿ೦ದ ಸಾಮರ್ಥ್ಯ,

 \eta = \frac {\mathbf{P_{out}}} {\mathbf{P_{in}}} = \frac {\mathbf{P_{out}}} {\mathbf{P_{out}} + \mathbf{P_{i}} + \mathbf{P_{cu}}}