ಆಂಟಿಮೊನಿ
ಗೋಚರ
ಆಂಟಿಮೊನಿ ಅಥವಾ ಸ್ಟಿಬಿಯಮ್ ಒಂದು ಮೂಲಧಾತು ಲೋಹ. ಇದು ಎಸ್.ಬಿ ಚಿಹ್ನೆಯಿಂದ ಗುರುತಿಸಲ್ಪಟ್ಟಿದೆ ಹಾಗೂ ಇದರ ಪರಮಾಣು ಸಂಖ್ಯೆ ೫೧. ಇದು ಒಂದು ಹೊಳಪಿನ ಬೂದು ಲೋಹಾಭ, ಇದು ಪ್ರಕೃತಿಯಲ್ಲಿ ಮುಖ್ಯವಾಗಿ ಸಲ್ಫೈಡ್ ಖನಿಜ ಸ್ಟಿಬ್'ನೈಟ್ ಆಗಿ (stibnite) ಕಂಡುಬರುತ್ತದೆ. ಕೆಲ ಕಾಲ, ಚೀನಾ ದೇಶವು ಆಂಟಿಮನಿ ಮತ್ತು ಅದರ ಸಂಯುಕ್ತಗಳನ್ನು ಉತ್ಪಾದಿಸುವ ಅತ್ಯಂತ ದೊಡ್ಡ ಉತ್ಪಾದಕವಾಗಿದೆ.
ಇದು ಪ್ರಾಚೀನ ಕಾಲದಿಂದಲೂ ಪ್ರಪಂಚದ ವಿವಿಧ ದೇಶಗಳಲ್ಲಿ ಉಪಯೋಗದಲ್ಲಿದ್ದರ ಬಗ್ಗೆ ಹಲವಾರು ಉಲ್ಲೇಖಗಳಿವೆ.ಇದು ಬಹುತೇಕ ಗಂಧಕದೊಂದಿಗೆ ಬೆರೆತ ರೂಪದಲ್ಲಿ ಭೂಮಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ. ವಿದ್ಯುತ್ ತಂತಿಗಳ ತಯಾರಿಕೆಯಲ್ಲಿ, ಬ್ಯಾಟರಿಗಳ ತಯಾರಿಕೆಯಲ್ಲಿ ಬಳಕೆಯಾಗುತ್ತದೆ. ಕೆಲವು ಔಷಧಗಳ ತಯಾರಿಕೆಯಲ್ಲಿಯೂ ಉಪಯೋಗದಲ್ಲಿದೆ. ಸಂಸ್ಕರಣಾ ಆಂಟಿಮನಿ ಕೈಗಾರಿಕಾ ವಿಧಾನಗಳು - ಸುಡುವುದು ಮತ್ತು ಇಂಗಾಲದ ಕಡಿತ ಅಥವಾ ಕಬ್ಬಿಣದ ಸ್ಟಿಬ್'ನೈಟ್ ನೇರ ಕಡಿತ.
ಉತ್ಪಾದನೆ
[ಬದಲಾಯಿಸಿ]ಉನ್ನತ ನಿರ್ಮಾಪಕರು ಮತ್ತು ನಿರ್ಮಾಣ ಸಂಪುಟಗಳಲ್ಲಿ
[ಬದಲಾಯಿಸಿ]Country | Tonnes | % of total |
---|---|---|
ಚೀನಾ | 150,000 | 76.7 |
ಆಸ್ಟ್ರೇಲಿಯಾ | 5,500 | 3.7 |
ಬೊಲಿವಿಯ | 5,000 | 3.3 |
ರಷ್ಯಾ | 9,000 | 6.0 |
ತಾಜಿಕಿಸ್ತಾನ್ | 4,700 | 3.1 |
Top 5 | 139,200 | 92.8 |
Total world | 150,000 | 100.0 |
- ↑ ೧.೦ ೧.೧ "Mineral Commodity Summaries: Antimony" (PDF). United States Geological Survey. Retrieved 1 January 2016.