ಲೋಹ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಲೋಹದ ಮಾದರಿ.

ಲೋಹ ಎಂದರೆ ರಸಾಯನಶಾಸ್ತ್ರ ದಲ್ಲಿ ಮೂಲಧಾತುಗಳಲ್ಲಿ ಒಂದು ಪ್ರಕಾರ. ಸುಮಾರು ಎಂಬತ್ತು ಶೇಕಡಾ ಮೂಲಧಾತುಗಳು ಲೋಹಗಳ ವರ್ಗಕ್ಕೆ ಸೇರುತ್ತವೆ. ಲೋಹಗಳು ಇತರೆ ಮೂಲಧಾತುಗಳಿಗಿಂತ ಹಲವಾರು ರೀತಿಯಲ್ಲಿ ಭಿನ್ನವಾಗಿವೆ. ಲೋಹಗಳಿಗೆ ಹೊಳಪು ಇದೆ. ಹೆಚ್ಚಿನ ಲೋಹಗಳು ಬೆಳಕನ್ನು ಪ್ರತಿಫಲಿಸುತ್ತವೆ. ಇವುಗಳು ಶಾಖ ಹಾಗೂ ವಿದ್ಯುತ್ ನ ಉತ್ತಮ ವಾಹಕಗಳು. ಇವುಗಳನ್ನು ತೆಳು ಹಾಳೆಗಳನ್ನಾಗಿ ಪರಿವರ್ತಿಸಬಹುದು ಹಾಗೂ ಉದ್ದವಾದ ಸರಿಗೆಗಳನ್ನಾಗಿಸಬಹುದು.

ರಾಸಾಯನಿಕ ವೈಶಿಷ್ಟ್ಯಗಳು[ಬದಲಾಯಿಸಿ]

ಲೋಹಗಳ ಚರಿತ್ರೆ[ಬದಲಾಯಿಸಿ]

ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಬಹುಶ:ಕಬ್ಬಿಣ ಪ್ರಾಚೀನರಿಗೆ ತಿಳಿದಿದ್ದ ಮೊದಲ ಲೋಹ. ಚಿನ್ನ ಕ್ರಿ.ಪೂ.೩೫೦೦ ರಷ್ಟು ಹಿಂದೆಯೇ ಬಳಕೆಯಲ್ಲಿದ್ದ ಬಗ್ಗೆ ಮೆಸಪಟೋಮಿಯದಲ್ಲಿ ಕುರುಹುಗಳು ದೊರೆತಿವೆ. ಬೆಳ್ಳಿ ಕೂಡಾ ಕ್ರಿಸ್ತ ಪೂರ್ವದಲ್ಲಿಯೇ ಬಳಕೆಯಲ್ಲಿದ್ದ ಇನ್ನೊಂದು ಲೋಹ. ತಾಮ್ರ ಪಾತ್ರೆಗಳನ್ನು ಮಾಡಲು, ಆಯುಧಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತಿತ್ತು. ಕಬ್ಬಿಣ, ಉಕ್ಕು,ಅಲ್ಯುಮಿನಿಯಮ್ ನಿರ್ಮಾಣ ಕಾರ್ಯದಲ್ಲಿ ಬಹಳ ಹಿಂದಿನಿಂದಲೂ ಉಪಯೋಗಲ್ಲಿರುವ ಲೋಹಗಳಲ್ಲಿ ಪ್ರಮುಖವಾಗಿವೆ.

ಉಪಯೋಗಗಳು[ಬದಲಾಯಿಸಿ]

ಲೋಹಗಳನ್ನು ಮಾನವನ ದಿನನಿತ್ಯದ ಕೆಲಸ ಕಾರ್ಯಗಳಿಗಾಗಿ ಉಪಯೋಗಿಸುತ್ತಾರೆ

ಆಧಾರ[ಬದಲಾಯಿಸಿ]

"https://kn.wikipedia.org/w/index.php?title=ಲೋಹ&oldid=323501" ಇಂದ ಪಡೆಯಲ್ಪಟ್ಟಿದೆ