ಅನಿಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಿಲ ಹಂತದ ಕಣಗಳು (ಪರಮಾಣುಗಳು, ಅಣುಗಳು,ಅಥವಾ ಅಯಾನುಗಳು) ಯಾವುದೇ ವಿದ್ಯುತ್ಕಾಂತೀಯ ಕ್ಷೇತ್ರದ ಒತ್ತಡವಿಲ್ಲದಿದ್ದಾಗ ಸ್ವತಂತ್ರವಾಗಿ ಚಲಿಸುತ್ತಿರುವುದು.

ಅನಿಲ ದ್ರವ್ಯಗಳ ನಾಲ್ಕು ಸ್ಥಿತಿಗಳಲ್ಲಿ ಒಂದು .ಉಳಿದ ಮೂರು ಘನ,ದ್ರವ ಮತ್ತು ಪ್ಲಾಸ್ಮಾ.ಅಣುಗಳು ಸ್ವತಂತ್ರವಾಗಿ ಇರುವ ದ್ರವ್ಯವನ್ನು ಅನಿಲ ಎನ್ನುವರು. ಶುದ್ಧ ಅನಿಲವು ಪ್ರತ್ಯೇಕವಾದ ಪರಮಾಣು ಆಗಿರಬಹುದು{ಉದಾ:ನಿಯಾನ್) ಅಥವಾ ಒಂದೇ ವಸ್ತುವಿನ ಅಣುಗಳಾಗಿರಬಹುದು (ಉದಾ:ಆಮ್ಲಜನಕ) ಅಥವಾ ಹಲವಾರು ಪರಮಾಣು ಮತ್ತು ಅಣುಗಳ ಸಂಯುಕ್ತ ವಸ್ತುಗಳಾಗಿರಬಹುದು (ಉದಾ:ಇಂಗಾಲದ ಡೈ ಆಕ್ಸೈಡ್). ಅನಿಲ ಮಿಶ್ರಣವು ವಾಯುವಿನ ಹಾಗೆ ವಿವಿಧ ಶುದ್ಧ ಅನಿಲಗಳನ್ನು ಹೊಂದಿರಬಹುದು.

ದ್ರವ್ಯದ ಅನಿಲ ಸ್ಥಿತಿಯು ದ್ರವ ಮತ್ತು ಪ್ಲಾಸ್ಮಾ ಸ್ಥಿತಿಗಳ ನಡುವೆ ಕಂಡುಬರುತ್ತದೆ, ಮತ್ತು ಪ್ಲಾಸ್ಮಾ ಸ್ಥಿತಿ ಅನಿಲಗಳಿಗೆ ಮೇಲ್ಭಾಗದ ತಾಪಮಾನದ ಗಡಿಯನ್ನು ಒದಗಿಸುತ್ತದೆ.

ಸರಳೀಕೃತ ಮಾದರಿಗಳು[ಬದಲಾಯಿಸಿ]

ಅತ್ಯಂತ ವ್ಯಾಪಕವಾಗಿ ಚರ್ಚಿಸಲಾದ ಅನಿಲ ಮಾದರಿಗಳು ಹೀಗಿವೆ ಪರಿಪೂರ್ಣ ಅನಿಲ, ಆದರ್ಶ ಅನಿಲ ಮತ್ತು ನಿಜ ಅನಿಲ. ಒಂದು ನಿರ್ದಿಷ್ಟ ಉಷ್ಣಬಲ ವ್ಯವಸ್ಥೆಯ ವಿಶ್ಲೇಷಣೆಯನ್ನು ಸುಗಮವಾಗಿಸಲು ಈ ಪ್ರತಿಯೊಂದು ಮಾದರಿಯು ಅದರದೇ ಊಹೆಗಳ ಸಮೂಹವನ್ನು ಹೊಂದಿದೆ.

ಆದರ್ಶ ಅನಿಲ ನಿಯಮವು ಆದರ್ಶ ಅಥವಾ ಪರಿಪೂರ್ಣ ಅನಿಲದ ದ್ರವ್ಯ ಸಮೀಕರಣ ಮತ್ತು ಇದು

ಇಲ್ಲಿ ಒತ್ತಡ, ಘನ ಅಳತೆ, ಹಾಗೇ ಅನಿಲದ ಪರಿಮಾಣ ಮತ್ತು ಸಾರ್ವತ್ರಿಕ ಅನಿಲ ನಿಯತಾಂಕ, 8,314 ಜೆ / (ಮೋಲ್ ಕೆ) ವಾಗಿದೆ ಮತ್ತು ತಾಪಮಾನವಾಗಿದೆ. ಈ ಸಮೀಕರಣವನ್ನು ಹೀಗೆಯು ಬರೆಯ ಬಹುದು

ಇಲ್ಲಿ ನಿರ್ದಿಷ್ಟ ಅನಿಲ ನಿಯತಾಂಕ ಮತ್ತು ಸಾಂದ್ರತೆಯಾಗಿದೆ.

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

"https://kn.wikipedia.org/w/index.php?title=ಅನಿಲ&oldid=1135648" ಇಂದ ಪಡೆಯಲ್ಪಟ್ಟಿದೆ