ವಿಷಯಕ್ಕೆ ಹೋಗು

ಪರಮಾಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Bohr atom animation 2- ಪರಮಾಣು-ಪ್ರೋಟಾನ್ ಬೀಜದ ಸುತ್ತ ಸುತ್ತುತ್ತಿರುವ ಎಲೆಕ್ಟ್ರಾನ್ ಮತ್ತು ಊಹಾ ರಚನೆ, ಮತ್ತು ಒಂದು ಎಲೆಕ್ಟ್ರಾನ್'ಒಂದು ಪಥದಿಂದ ಮತ್ತೊಂದು ಪಥಕ್ಕೆ ತತ್'ಕ್ಷಣದಲ್ಲಿ ತಂತಾನೆ ಜಿಗಿಯುವುದನ್ನು ತೋರಿಸುತ್ತದೆ.

ಪರಮಾಣು

[ಬದಲಾಯಿಸಿ]

ಪರಮಾಣು (Atom) ಗಳು ದ್ರವ್ಯಗಳ ಅತ್ಯಂತ ಮೂಲಭೂತ ಕಣಗಳು. ಇವು ಕೇಂದ್ರದಲ್ಲಿ ಭೀಜಕೇಂದ್ರ(Nucleus)ವನ್ನು ಹೊಂದಿದ್ದು ಸುತ್ತಲೂ ಇಲೆಕ್ಟ್ರಾನ್ ಗಳನ್ನು ಹೊಂದಿರುತ್ತವೆ. ಭೀಜಕೇಂದ್ರ ದಲ್ಲಿ ಕನಿಷ್ಠ ಒಂದು ಪ್ರೋಟಾನ್(Protons) ಇರುತ್ತದೆ. ಅಲ್ಲದೇ, ಭೀಜಕೇಂದ್ರದಲ್ಲಿ ನ್ಯೂಟ್ರಾನ್(Neutrons) ಗಳು ಕೂಡ ಇರಬಹುದು.


ಪರಮಾಣುಗಳ ರಚನೆ

[ಬದಲಾಯಿಸಿ]
ಯು.ಎಸ್ ಅಟಾಮಿಕ್ ಕಮಿಶನ್ ಲೊಗೊ: ಸುಂದರ ಪರಮಾಣುವಿನ ಚಿತ್ರ ಹಾಕಿದ್ದಾರೆ
  • ಪರಮಾಣುಗಳ ವಿಷಯ ತಿಳಿಯುವ ಮೊದಲು ವೈಜ್ಞಾನಿಕ ಪರಿಭಾಷೆಯ ದ್ರವ್ಯ(matter), ಧಾತು(element) ಅಥವಾ ಮೂಲಧಾತು, ಅಣು (molecules), ಪ್ರೋಟಾನ್, ಎಲೆಕ್ಟ್ರಾನ್‎, ನ್ಯೂಟ್ರಾನ್'ಗಳ ಬಗೆಗೆ ತಿಳಿಯುವುದು ಅವಶ್ಯ. ನಮಗೆ ಪ್ರಕೃತಿಯಲ್ಲಿ ದೊರೆಯುವ ವಸ್ತುಗಳಲ್ಲಿ ಅನೇಕ ಬಗೆಯ ಮೂಲ ವಸ್ತುಗಳು(element) ಸೇರಿರುತ್ತವೆ. ಈ ಮೂಲ ವಸ್ತುಗಳಿಗೆ ‘ಮೂಲಧಾತು’ ಎನ್ನುತ್ತಾರೆ. ‘ದ್ರವ್ಯ’ವೆಂದರೆ ಯಾವುದೇ ವಸ್ತು (‘ದ್ರವ್ಯ’ ಆ ವಸ್ತುವಿನ ತೂಕವನ್ನೂ ಆ ಹೆಸರು ಒಳಗೊಂಡಿದೆ (mass)} ಅದರಲ್ಲಿ ಅನೇಕ ಮೂಲ ವಸ್ತು ಸೇರಿರಬಹುದು. ಧಾತು ಅಥವಾ ಮೂಲಧಾತು ಎಂದರೆ, ಈ ದ್ರವ್ಯ (ಮ್ಯಾಟರ್) ಅಥವಾ ವಸ್ತುಗಳಲ್ಲಿ ಸೇರಿರುವ ಮೂಲ ವಸ್ತುಗಳನ್ನು ಬೇರೆ ಬೇರೆ ಮಾಡಿದರೆ ಮೂಲ ವಸ್ತು (element)ದೊರೆಯುವುದು. ಅದೇ ಧಾತು ಅಥವಾ ಮೂಲ ಧಾತು. (ಎಲಿಮೆಂಟ್). ಉದಾಹರಣೆಗೆ, ‘ನೀರು’, ‘ಉಪ್ಪು’ ಇತ್ಯಾದಿ; ಪ್ರಕೃತಿಯಲ್ಲಿ ಸಿಗುವ ಸಂಯುಕ್ತ ವಸ್ತು(chemical compounds). ನೀರನ್ನು ವಿಭಜಿಸಿದರೆ ನಮಗೆ ಆಮ್ಲಜನಕ ಮತ್ತು ಜಲಜನಕ ಸಿಗುವುದು. ಉಪ್ಪನ್ನು ವಿಭಜಿಸಿದರೆ ಅದರಲ್ಲಿ ಸೋಡಿಯಂ ಮತ್ತು ಕ್ಲೊರೀನ್ ಎಂಬ ಮೂಲಧಾತುಗಳು ಸಿಗುವುದು. ಇದರಲ್ಲಿ ಮೂಲ ಪರಮಾಣುಗಳೆಂಬ ಅತಿ ಚಿಕ್ಕ ಘಟಕಗಳು ಪರಸ್ಪರ ಸೇರಿ ಅಣುಗಳಾಗುತ್ತವೆ. ಅಥವಾ ನೀರಿನ ಗುಣವುಳ್ಳ ಚಿಕ್ಕ ಘಟಕದಲ್ಲಿ "ಆಮ್ಲಜನಕದ ಒಂದು ಪರಮಾಣು ಮತ್ತು ಜಲಜನಕದ 2 ಪರಮಾಣು" ಇರುವ ಅಣುಗಳಿರುತ್ತವೆ (molecules -> mol·e·cule ˈmäləˌkyo͞ol -> ಮಾಲಿಕ್ಯೂಲ್ಸ್- ಭರದ್ವಾಜ ಇಂಗ್ಲಿಷ್ ನಿಘಂಟು ನೋಡಿ). ಪ್ರಕೃತಿಯಲ್ಲಿ ಸಿಗುವ ವಸ್ತುಗಳು ಅಣುಗಳಿಂದ ಅಥವಾ ಸಂಯುಕ್ತ ಅಣುಗಳಿಂದ ಕೂಡಿವೆ. ಈ ಸಂಯುಕ್ತ ಅಣುಗಳನ್ನು ವಿಭಜಿಸಿದಾಗ ಈ ಜಗತ್ತಿನ ಸೃಷ್ಟಿಗೆ ಕಾರಣವಾದ ಮೂಲಧಾತುಗಳು ಸಿಗುತ್ತವೆ. ಈ ಮೂಲ ಧಾತುವಿನ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಎಂದರೆ ಒಂದು ಮೂಲ ಧಾತುವಿನ ಅದೇ ಗುಣಗಳುಳ್ಳ ಅತ್ಯಂತ ಚಿಕ್ಕ ಘಟಕವೇ ಪರಮಾಣು. ಕೆಲವು ಪರಮಾಣುಗಳು ಸುಲಭವಾಗಿ ಮತ್ತೊಂದರೊಡನೆ ಸೇರಿ ದ್ರವ್ಯರಚನೆಗೆ ಕಾರಣವಾಗುತ್ತದೆ. ಆದರೆ ಕೆಲವು ಮೂಲಧಾತುಗಳು ಬೇರೆ ವಸ್ತು ಅಥವಾ ಮೂಲಧಾತುವಿನೊಡನೆ ಸುಲಭವಾಗಿ ಬೆರೆಯುವುದಿಲ್ಲ; ಉದಾಹರಣೆಗೆ: ಗಾಳಿಯಲ್ಲಿರುವ ಸಾರಜನಕ ಅಥವಾ ನೈಟ್ರೋಜನ್, ಹಾಗೆಯೇ ನಮ್ಮ ಜೀವ ಧಾರಣೆಗೆ ಬೇಕಾದ ಆಮ್ಲಜನಕ. ಅದ್ದರಿಂದ ಗಾಳಿ ಒಂದು ಮಿಶ್ರವಸ್ತು,ಉಪ್ಪು ಒಂದು ಸಂಯುಕ್ತ ವಸ್ತು.
ಪರಮಾಣುವಿನ ರೇಖಾಚಿತ್ರ-ಪ್ರೋಟಾನ್ ಮತ್ತು ನ್ಯೂಟ್ರಾನ್ ಬೀಜ ಮಧ್ಯ ಇದೆ;ಹಸಿರು ಬಣ್ಣದ ಇಲೆಕ್ಟ್ರಾನ್' ಸುತ್ತ ಇದೆ(Rutherford model)
  • ತಾತ್ಪರ್ಯ: ಸಾಮಾನ್ಯ ವಸ್ತುವಿನ ಅತ್ಯಂತ ಚಿಕ್ಕ ಘಟಕವೇ ಒಂದು ಪರಮಾಣು. ಈ ಅಂಶ (ಘಟಕ) ರಾಸಾಯನಿಕ ಗುಣ ಲಕ್ಷಣಗಳನ್ನು ಹೊಂದಿರುತ್ತದೆ. ಪ್ರತಿಯೊಂದು ಘನ, ದ್ರವ, ಅನಿಲ, ಮತ್ತು ಪ್ಲಾಸ್ಮಾ - ಇವು ತಟಸ್ಥ ಅಥವಾ ಅಯಾನೀಕೃತ ಪರಮಾಣುಗಳಿಂದ ಕೂಡಿದೆ. ಆ ವಸ್ತುಗಳ ಗುಣ-ಲಕ್ಷಣಗಳನ್ನು ಹೊಂದಿದೆ.
  • ಪರಮಾಣುಗಳು ವಿಶಿಷ್ಟ ಗಾತ್ರಗಳ ಚಿಕ್ಕ ಘಟಕ. ; ಗಾತ್ರ 100 ಪಿ.ಎಮ್. (ಒಂದು ಮೀಟರ್’ನ ಹತ್ತು ಶತಕೋಟಿಯ ಒಂದು ಅಂಶ, ಸಣ್ಣ ಮಾಪನದಲ್ಲಿ) ಸುತ್ತ. ಒಂದು ಅಣುವು ಎಲೆಕ್ಟ್ರಾನ್ಗಳು ಕೇಂದ್ರದಲ್ಲಿರುವ ಪ್ರೋಟಾನ್’ಗಳಿಗೆ ವಿದ್ಯುತ್ಕಾಂತೀಯ ಬಲದಿಂದ ಆಕರ್ಷಿಸಲ್ಪಡುತ್ತವೆ. ಕೇಂದ್ರದಲ್ಲಿರುವ ಪ್ರೋಟಾನ್ ಮತ್ತು ನ್ಯೂಟ್ರಾನ್’ಗಳು ಪರಸ್ಪರ ಬೇರೆ ವಿಧದ ಶಕ್ತಿಯ ಮೂಲಕ ಆಕರ್ಷಿಸಲ್ಪಡುತ್ತವೆ. ಅದನ್ನು ಕೇಂದ್ರ ಕಾಂತೀಯ ಬಲ ಎನ್ನಬಹುದು (nuclear force).[]

[]

ಪರಮಾಣುವಿನ ಕಣಗಳು

[ಬದಲಾಯಿಸಿ]
  • ಪರಮಾಣುವಿನಲ್ಲಿ ಸೂರ್ಯಮಂಡಲದಲ್ಲಿ ಸೂರ್ಯ ಇರುವಂತೆ ಪರಮಾಣು ಬೀಜವಿದೆ. ಬೀಜವು ಪ್ರೋಟಾನ್ ಮತ್ತು ನ್ಯೂಟ್ರಾನ್ ಎಂಬ ಎರಡು ಜಾತಿಯ ಕಣಗಳ ವ್ಯೂಹ. ಈ ಅಬೇಧ್ಯವೆಂದು ಭಾವಿಸಿದ್ದ ಪರಮಾಣುಗಳನ್ನು ಬೇಧಿಸಿದಾಗ ಪ್ರೋಟಾನ್ ಮತ್ತು ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಕಣಗಳು ಇರುವುದು ಗೊತ್ತಾಯಿತು. (ಜಲಜನಕದ ಪರಮಾಣುವಿನಲ್ಲಿ ನ್ಯೂಟ್ರಾನ್ ಇಲ್ಲ). ಈ ಎರಡು ಕಣಗಳ ಭಾರವೂ ಹೆಚ್ಚು ಕಡಿಮೆ ಒಂದೇ. ಆದರೆ ಪ್ರೋಟಾನಿನಲ್ಲಿ ಧನ ವಿದ್ಯುತ್ ಇದೆ. ನ್ಯೂಟ್ರಾನಿನಲ್ಲಿ ವಿದ್ಯತ್ ಇಲ್ಲ. ಒಂದು ಧಾತುವಿನ ಪರಮಾಣು ಬೀಜಕ್ಕೂ ಮತ್ತೊಂದು ಧಾತುವಿನ ಬೀಜಕ್ಕೂ ಇರುವ ಈ ಪ್ರೋಟಾನ್ ಮತ್ತು ನ್ಯೂಟ್ರಾನ್‍ಗಳ ಸಂಖ್ಯೆಯಲ್ಲಿರುವ ವ್ಯತ್ಯಾಸವೇ ಬೇರೆ ಬೇರೆ ಮೂಲಧಾತುಗಳಿಗೆ ಕಾರಣವಾಗಿದೆ. ಕೇಂದ್ರದ ಬೀಜದ ಸುತ್ತಲೂ ಎಷ್ಟು ಪ್ರೋಟಾನುಗಳಿವೆಯೋ ಅಷ್ಟು ಎಲೆಕ್ಟ್ರಾನು ಎಂಬ ಸೂಕ್ಷ್ಮ ಕಣಗಳು ಸುತ್ತುತ್ತಿವೆ. ಎಲೆಕ್ಟ್ರಾನ್ ಬಹಳ ಹಗುರ ಕಣ. ಅದರ ಭಾರವು ಪ್ರೋಟಾನಿನ 1840 ರಲ್ಲಿ ಒಂದಂಶ. ಬಹಳ ಹಗುರ ಕಣ. ಅದರ ಋಣ ವಿದ್ಯುತ್ ಪ್ರಮಾಣ ಪ್ರೋಟಾನಿನ ಧನ ವಿದ್ಯುತ್ತಿಗೆ ಸಮ. ಆದ್ದರಿಂದ ಪ್ರತಿ ಪರಮಾಣುವಿನ ಸಾಮಾನ್ಯ ಸ್ಥಿತಿಯೂ ‘ಅವಿದ್ಯುತ್’ಸ್ಥಿತಿ ಅಥವಾ ವಿದ್ಯುತ್ ನ ಸಮ ಸ್ಥಿತಿ.[]

ರಚನೆ-ವಿಂಗಡಣೆ ಮತ್ತು ತೂಕ

[ಬದಲಾಯಿಸಿ]
  • ಜಲಜನಕದ ಪರಮಾಣುವಿನಲ್ಲಿ ಒಂದೇ ಪ್ರೋಟಾನ್ ಇದ್ದರೆ, ಹೀಲಿಯಂ ಬೀಜದಲ್ಲಿ 2 ಪ್ರೋಟಾನ್,2 ನ್ಯೂಟ್ರಾನ್'ಗಳಿವೆ,-ಅದಕ್ಕೆ ಪ್ರದಕ್ಷಿಣೆ ಹಾಕುವ ಎಲೆಕ್ಟ್ರಾನ್ ಗಳು ಎರಡು.ಆಮ್ಲಜನಕದ ಬೀಜದಲ್ಲಿ 8 ಪ್ರೋಟಾನ್ ಇದ್ದರೆ, 8ನ್ಯೂಟ್ರಾನ್'ಗಳಿವೆ.ಈ ಬೀಜವನ್ನು 8 ಎಲೆಕ್ಟ್ರಾನ್'ಗಳು ಬೇರೆ ಬೇರೆ ಪಥಗಳಲ್ಲಿ ಸುತ್ತುತ್ತವೆ. ಬೀಜಗಳಲ್ಲಿರುವ ಕಣಗಳ ಒಟ್ಟು ಸಂಖ್ಯೆಯನ್ನು (ಪ್ರೋಟಾನ್+ನ್ಯೂಟ್ರಾನ್) 'ಪರಮಾಣೂ-ಭಾರಾಂಕ'ವೆಂದೂ (Atomic weight-mass number=ತೂಕ), ಕೇವಲ ಪ್ರೋಟಾನಗಳ ಸಂಖ್ಯೆಯನ್ನು 'ಪರಮಾಣು-ಅಂಕ'ವೆಂದೂ (atomic number =ಅಣು ಸಂಖ್ಯೆ) ಕರೆಯುವರು. ಹೀಗೆ ಜಲಜನಕದ ಭಾರಾಂಕ 1; ಕ್ರಮಾಂಕವೂ 1. ಆಮ್ಲಜನಕದ ಭಾರಾಂಕ 16; ಕ್ರಮಾಂಕ 8.ಪ್ರೋಟಾನ್ 8+ನ್ಯೂಟ್ರಾನ್ 8); ಇಂಗಾಲದ್ದು 12 ಮತ್ತು 6. ಈ ಪರಮಾಣುಗಳನ್ನು ಗುರುತಿಸುವುದು ಅದರ ಪರಮಾಣು ಅಂಕವನ್ನು ನೋಡಿ. ಈ ಅಂಕವನ್ನು ಗುರುತಿಸುವಲ್ಲಿ ಪರಮಾಣುವಿನ ಕವಚದಂತಿರುವ ಸುತ್ತುವ ಎಲೆಕ್ಟ್ರಾನ್'ಗಳು ಪ್ರಾಮುಖ್ಯವಾಗುತ್ತವೆ. ಭಾರಾಂಕವು ಅದರಲ್ಲಿರುವ ನ್ಯೂಟ್ರಾನ್ ಮತ್ತು ಪರಮಾಣು ಭಾರವನ್ನು ಗುರುತಿಸಲು ಬೇಕು. ಇದರಲ್ಲಿ ಒಂದು ತೊಡಕಿದೆ. ಒಂದೇ ಬಗೆಯ ಮೂಲ ಧಾತು ಎರಡು ಬಗೆಯ ಪರಮಾಣುಗಳಿಂದ ಆಗಬಹುದು! ಬೆಳ್ಳಿಯ ಧಾತುವಿನಲ್ಲಿ 47 ಪ್ರೋಟಾನ್,60 ನ್ಯೂಟ್ರಾನ್'ಗಳ ಮತ್ತು 47ಪ್ರೋಟಾನ್ ಇದ್ದರೆ,62 ನ್ಯೂಟ್ರಾನ್'ಗಳ ಬೀಜಗಳೂ ಇವೆ. ಈ ಎರಡುಬಗೆಯ ಬೀಜಗಳಲ್ಲೂ 47 ಎಲೆಕ್ಟ್ರಾನ್'ಗಳು ಸುತ್ತುತ್ತವೆ.ಈ ಎರಡೂ ಬೆಳ್ಳಿಯ ಪರಮಾಣುಗಳಂತೆಯೇ ಕಾಣುತ್ತವೆ.ನಮಗೆ ಸಿಗುವುದು ಇವೆರಡರ ಸಮ್ಮಿಳಿತದ್ದೇ-ಅವನ್ನು ಪ್ರತ್ಯೇಕಿಸುವುದು ಸುಲಭಸಾಧ್ಯವಲ್ಲ. ಇವನ್ನು ವೈಜ್ಞಾನಿಕ ಪರಿಭಾಷೆಯಲ್ಲಿ 107 ಮತ್ತು 108 'ಬೆಳ್ಳಿಯ-ಸಮಸ್ಥಾನೀಯ'(Isotope) ಪರಮಾಣುಗಳೆಂದು ಕರೆಯುತ್ತಾರೆ. ಈ ಬಗೆಯ ಸಮಸ್ಥಾನೀಯ'(Isotope) ಧಾತುಗಳು ಬಹಳ ಇವೆ. 92 ಪರಮಾಣುಗಳಲ್ಲಿ 81ರಿಂದ ಮುಂದಿನವು ವಿಕಿರಣಶೀಲವಾದವು. ಎಂದರೆ ಅದರ ಬೀಜಗಳು ತಾವಾಗಿಯೇ ಸಿಡಿದು ಕಣಗಳನ್ನು ಚಿಮ್ಮುತ್ತವೆ. ಇವು ಸ್ವಯಂ-ಸ್ಪೋಟಕ ಅಥವಾ ಸಹಜ ವಿಕಿರಣಶೀಲ-ಪರಮಾಣುಗಳು (Natural radio active Atoms).ಇವು ರೇಡಿಯೊ ಆಕ್ಟಿವ್ ಮೂಲಧಾತುಗಳು ಅಥವಾ ಮೂಲವಸ್ತುಗಳು- ಇವು ಎಚ್ಚರಿಕೆ ವಹಿಸದೆ ಉಪಯೋಗಿಸಿದರೆ ಮಾನವನಿಗೆ (ಪ್ರಾಣಿಗಳಿಗೆ) ಅಪಾಯಕಾರಿ ವಿಕಿರಣಶೀಲ-ಧಾತುಗಳು (radio active elements).
  • ನಮಗೆ ಭೂಮಿಯಲ್ಲಿ/ಪ್ರಕೃತಿಯಲ್ಲಿ ಸಹಜವಾಗಿ 92 ಪರಮಾಣು ಧಾತುಗಳು ಸಿಕ್ಕಿವೆ (1952); ನಂತರ ಕಂಡುಹಿಡಿದವು ಮತ್ತು ಪ್ರಯೋಗದಿಂದ ಸೃಷ್ಟಿಸಿದವು ಸೇರಿ 118 ಧಾತುಗಳು ಲಭ್ಯವಿವೆ(2013).ಇವುಗಳಲ್ಲಿ ಕೆಲವು ಅಭದ್ರ ಪರಮಾಣುಗಳು,[][]

  • ಎಲೆಕ್ಟ್ರಾನ್’ ತುಂಬಾ ಹಗುರವಾದ ಕಣ. ಋಣ ವಿದ್ಯುತ್'ಪ್ರೇಷಿತ. ಮತ್ತು ಒಂದು ಗಾತ್ರ ಲಭ್ಯವಿರುವ ತಂತ್ರಗಳನ್ನು ಬಳಸಿ ಅಳೆದಾಗ ಅದರ ತೂಕ : 9.11 x10−31 ಕೆಜಿ. ಇದು ಉಳಿದ ಧನಾತ್ಮಕ ಕಣಗಳಿಗೆ ಹೋಲಿಸಿದಾಗ ಕನಿಷ್ಠ ತೂಕದ್ದು. ಮಾಪನ ಸಮೂಹ. ಸಾಮಾನ್ಯ ಪರಿಸ್ಥಿತಿಗಳಲ್ಲಿ, ಎಲೆಕ್ಟ್ರಾನ್ಗಳು ಧನ (+)ವಿದ್ಯುತ್ ಧನಾತ್ಮಕ ಆವೇಶದ ನ್ಯೂಕ್ಲಿಯಸ್’ಗೆ ಅಂಟಿಕೊಂಡು ಋಣವಿದ್ಯತ್’ ಗುಣ ಹೊಂದಿ ಪರಿಭ್ರಮಣೆ ಮಾಡುತ್ತದೆ. ಒಂದು ಪರಮಾಣುವಿನಲ್ಲಿ ಒಂದು ವೇಳೆ ಅದರ ಪರಮಾಣು ಸಂಖ್ಯೆಗಿಂತ ಹೆಚ್ಚು ಅಥವಾ ಕಡಿಮೆ ಎಲೆಕ್ಟ್ರಾನ್ಗಳು ಇದ್ದರೆ, ನಂತರ ಅದು ಇಡೀ ಪರಮಾಣು ಕ್ರಮವಾಗಿ ಋಣಾತ್ಮಕ ಅಥವಾ ಧನಾತ್ಮಕ ವಿದ್ಯುದಾವೇಶದ ಹೋದಿರುತ್ತದೆ. ಅದನ್ನು ‘ಅಯಾನು’ ಎಂದು ಕರೆಯಲಾಗುತ್ತದೆ.

ಗಾತ್ರ -ತೂಕ-ಶೂನ್ಯ ಭಾಗ

[ಬದಲಾಯಿಸಿ]
  • ಪರಮಾಣುವಿನ ಗಾತ್ರ ಊಹೆಗೂ ನಿಲುಕದಷ್ಟು ಚಿಕ್ಕದು.ಕೇವಲ ಗಣಿತದ ಪರಿಭಾಷೆಯದು. ಪರಮಾಣುವಿನ ಗಾತ್ರವೆಂದರೆ ಪ್ರೋಟಾನ್'ನ್ಯೂಟ್ರಾನ್'ಮತ್ತು ಸುತ್ತುವ ಎಲೆಕ್ಟ್ರಾನ್ ಸೇರಿ, ಒಟ್ಟು ಪ್ರಮಾಣದ ವ್ಯಾಸ. ಇದು ಸುಮಾರು 2 ಸೆಂ.ಮೀ.ನ ದಶಕೋಟಿ ಅಂಶಕ್ಕಿಂತ ಕಡಿಮೆ. ಅದರ ಬೀಜದ ಗಾತ್ರ ಅದರ 1ಕೋಟಿಯ ಲಕ್ಷಾಂಶದಷ್ಟು. ಒಂದು ಪ್ರೋಟಾನಿನ ತೂಕ 1.67262×10−27 kg (Proton, stable subatomic particle that has a positive charge equal in magnitude to a unit of electron charge and a rest mass of 1.67262 × 10−27 kg, which is 1,836 times the mass of an electron.)[] ಅಥವಾ 1.672621777(74)×10−27 kg []. ಒಂದು ಜಲಜನಕ ಪರಮಾಣುವಿನ ತೂಕ ಒಂದು ಪ್ರೋಟಾನಿನ ತೂಕ + ಒಂದು ಎಲೆಕ್ಟ್ರಾನ್'ನತೂಕ (ಪ್ರೋಟಾನಿನ ತೂಕದ 184೦ರ ಒಂದು ಭಾಗ/ಅಥವಾ 1826?-ಪ್ರೋಟಾನ್)
  • ನ್ಯೂಟ್ರಾನ್'ನ ತೂಕ ಪ್ರೋಟಾನ್'ಗಿಂತ ಸ್ವಲ್ಪ ಹೆಚ್ಚು. ಆದರೆ ಅದಕ್ಕೆ ವಿದ್ಯತ್'ಆವೇಶ ಇಲ್ಲ. ಎಲೆಕ್ಟ್ರಾನ್ ದ್ರವ್ಯರಾಶಿಗಿಂತ 1,839 ರಷ್ಟು ಭಾರ. ಅಥವಾ 1,6929 × 10−27 ಕೆಜಿ, ಈ ಮೂರು ಅಂಗ-ಕಣಗಳಲ್ಲಿ ಇದು ಹೆಚ್ಚು ಭಾರವಾದದ್ದು.
  • (ಎಲೆಕ್ಟ್ರಾನ್ ಬದಲಾಗದ ದ್ರವ್ಯರಾಶಿ ಸುಮಾರು 9,109 × 10−31 ಕಿಲೋಗ್ರಾಂಗಳಷ್ಟು, ಅಥವಾ 5,489 × 10−4 ಪರಮಾಣು ರಾಶಿ ಘಟಕಗಳು. ಪ್ರೋಟಾನ್ ದ್ರವ್ಯರಾಶಿ ಮತ್ತು ಒಂದು ಎಲೆಕ್ಟ್ರಾನ್ ನಡುವಿನ ಅನುಪಾತ ಬಗ್ಗೆ 1836 ಆಗಿದೆ(ಎಲೆಕ್ಟ್ರಾನ್'ತೂಕ×1836=ಪ್ರೋಟಾನ್' ತೂಕ) . ಎಲೆಕ್ಟ್ರಾನ್ ಯಾವುದೇ ಗೊತ್ತಿರುವ ಉಪ-ಸಂರಚನೆ ಹೊಂದಿಲ್ಲ, ಮತ್ತು ಇದು ಒಂದು ವಿದ್ಯತ್'ಆವೇಶಿತ ಬಿಂದು ಮತ್ತು ಯಾವುದೇ ದೇಶ-ಆಕ್ರಮಿತವಲ್ಲದ ಬಿಂದು-ಕಣ ಎಂದು ಭಾವಿಸಲಾಗಿದೆ. ಈ ಗುಣಗಳು ಸೀಮಾ-ಶೂನ್ಯವಾದ ಎಲೆಕ್ಟ್ರಾನ್ ಗಾತ್ರದ 'ಶೂನ್ಯವಲ್ಲದ ತ್ರಿಜ್ಯ'ದ ಇರುವಿಕೆ ಅಥವಾ ಗಾತ್ರಕ್ಕೆ ತ್ರಿಜ್ಯವಿರಬೇಕೆಂಬ ನಿಯಮ, ಎಲ್ಲಾ ಪ್ರಾಯೋಗಿಕ ವೀಕ್ಷಣೆಗೆ ತದ್ವಿರುದ್ಧವಾಗಿದೆ.....these properties contrasts to experimental observations in Penning traps which point to finite non-zero radius of the electron.)
(ಮೇಲೆ ತಿಳಿಸಿದಂತೆ 1.67 ಕೆ.ಜಿ.ಯನ್ನು 1ರ ಮುಂದೆ 27 ಸೊನ್ನೆಗಳಿರುವ ಅಂಕೆಯಿಂದ ಭಾಗಿಸಿದರೆ ಬರುವ ಸಂಖ್ಯೆಯೇ ಒಂದು ಪ್ರೋಟಾನಿನ ತೂಕ)
  • ಪರಮಾಣುವಿನ ಒಳಗಡೆಯಲ್ಲಾ ಬಹುಮಟ್ಟಿಗೆ ಶೂನ್ಯವೇ. ಪರಮಾಣುವಿನ ಬೀಜವು ಒಂದು ಗೋಲಿಯಷ್ಟು ದೊಡ್ಡದು ಎಂದು ಭಾವಿಸಿದರೆ ಅದನ್ನು ಸುತ್ತುವ ಎಲೆಕ್ಟ್ರಾನುಗಳು (ಸಾಸಿವೆ ಕಾಳಿನ ಗಾತ್ರದಲ್ಲಿ) 200 ಮೀಟರನಷ್ಟು ದೂರದಲ್ಲಿರವುದೆಂದು ಭಾವಿಸಬಹುದು. ಅದರ ಮಧ್ಯೆ ಶೂನ್ಯ. ಆದರೆ ಈ ಪರಮಾಣುಗಳನ್ನು ಯಾವುದೇ ಸೂಕ್ಷ್ಮದರ್ಶಕದಿಂದಲೂ (Microscope) ನೋಡಲಾಗದಷ್ಟು ಚಿಕ್ಕದು. ಉಕ್ಕು/ಕಬ್ಬಿಣ, ಅತಿಹೆಚ್ಚು ಸಾಂದ್ರತೆಯುಳ್ಳ ಚಿನ್ನ ಇವುಗಳು ಕೂಡ ಇಂತಹ ಪರಮಾಣುಗಳ ಸಮೂಹ. ಈ ಎಲ್ಲಾ ಪದಾರ್ಥ/ವಸ್ತು/ದ್ರವ್ಯಗಳು ಆಕ್ರಮಿಸಿರುವ ಅವಕಾಶದ (space) ಬಹುಭಾಗ ಅಂದರೆ 10 ಸಹಸ್ರ ಕೋಟಿಯಲ್ಲಿ ಒಂದು ಭಾಗ ಬಿಟ್ಟು(ಎಲೆಕ್ಟ್ರಾನ್,ಪ್ರೋಟಾನ್, ನ್ಯೂಟ್ರಾನ್ ಇರುವ ಭಾಗ ಬಿಟ್ಟು), ಉಳಿದುದೆಲ್ಲವೂ ಶೂನ್ಯ ಪ್ರದೇಶವೇ! ಇದೇ ಪ್ರಮಾಣವನ್ನು -ಅಥವಾ ಸ್ವಲ್ಪ ಹೆಚ್ಚು ಪ್ರಮಾಣದಲ್ಲಿ ಈ ಜಗತ್ತಿಗೆ ಅನ್ವಯಿಸಬಹುದು.

ಪರಮಾಣು ಸಂಖ್ಯೇತ ಸೂಚಿಸುವ ಅಂತರಾಷ್ಟ್ರೀಯ ಸಂಸ್ಥೆ IUPAC[ಶುದ್ಧ ಮತ್ತು ಅನ್ವಯಿಕ ರಸಾಯನಶಾಸ್ತ್ರದ ಅಂತರಾಷ್ಟ್ರೀಯ ಸಂಸ್ಥೆ]

  • ಆದರೆ ಮೇಲೆ ಹೇಳಿದಂತೆ ಪರಮಾಣುಗಳ ಭಾರಾಂಕ, ಕ್ರಮಾಂಕ,ಗಳಿಂದಲೇ ಅವನ್ನು ಗುರುತಿಸುತ್ತಾರೆ. ಅದಕ್ಕಾಗಿ ಅನಿಲ(11), ದ್ರವ(2), ಘನ(ಇತರೆ-105?), ಇತ್ಯಾದಿ ವಿಂಗಡಿಸಿ ಮೂಲಧಾತುಗಳ ಒಂದು ಅಂಕಣ-ಪಟ್ಟಿ (ಆವರ್ತ ಕೋಷ್ಟಕ)ಮಾಡಿದ್ದಾರೆ. ಅದಕ್ಕೆ ಪಿರಿಯಾಡಿಕ್'ಟೇಬಲ್' ಎಂದು ಕರೆಯುವರು. ಅದರಲ್ಲಿ ಎಲ್ಲಾ ಮೂಲಧಾತುಗಳ ಸ್ಥೂಲ ವಿವರ ಇದೆ. ಈ ಜಗತ್ತಿನ ರಚನೆಗೆ ಆಥವಾ ಸೃಷ್ಟಿಗೆ ಮೂಲಾಧಾರವಾದ ಈ ಪರಮಾಣುಗಳ ವಿವರಗಳನ್ನು ಸಂಕೇತಾಕ್ಷರದಲ್ಲಿ ನಮೂದಿಸಿದೆ. ಡಿಮಿಟ್ರಿ ಮೆಂಡಲೀವ್ 1869 ಮೊದಲ ಚಿರಪರಿಚಿತ 'ಆವರ್ತಕ ಕೋಷ್ಟಕ'(ಪಿರಿಯಾಡಿಕ್'ಟೇಬಲ್)ದಲ್ಲಿ ಪ್ರಕಟಿಸಿದರು.ಮುಖ್ಯ ಅಂಶಗಳನ್ನು ಗುಣಗಳನ್ನು ಆವರ್ತಕ ಪ್ರವೃತ್ತಿಗಳನ್ನು ವಿವರಿಸಲು ಅವರು ಈ ಟೇಬಲ್'ನ್ನು ಅಭಿವೃದ್ಧಿಪಡಿಸಿದ್ದಾರೆ. ಅಲ್ಲದೆ ಮೆಂಡಲೀವ್(Dmitri Mendeleev) ಆ ಟೇಬಲ್'ನಲ್ಲಿ ಆಗ ಅಪರಿಚಿತವಾಗಿದ್ದ ಕೆಲವು ಧಾತುಗಳನ್ನು ನಿರೀಕ್ಷಿಸಿ ಬಿಟ್ಟ ಸ್ಥಳವನ್ನು ತುಂಬಲು ಅವಕಾಶವಿಟ್ಟಿದ್ದಾನೆ. ಈಗ ಅದನ್ನು ಹೆಚ್ಚು ಸುಧಾರಿಸಿ ಉತ್ತಮ ಪಡಿಸಿದ್ದಾರೆ. [೧]Periodic tableಆವರ್ತ ಕೋಷ್ಟಕ

ಇತಿಹಾಸ

[ಬದಲಾಯಿಸಿ]
H2O ನೀರಿನ ಅಣು (moilicule)
  • ಸುಮಾರು 20 ನೇ ಶತಮಾನದ ಆರಂಭದ ವರೆಗೂ ಪರಮಾಣುವು ಅಬೇಧ್ಯವೆಂದು (ಇದನ್ನು ಒಡೆಯಲು ಅಸಾಧ್ಯ) ತಿಳಿದಿದ್ದರು. ‘ಆಟಮ್’ ಎಂದರೆ ಗ್ರೀಕ್ ಭಾಷೆಯಲ್ಲಿ ಅಭೇಧ್ಯ-ಒಡೆಯಲಾಗದ್ದು ಎಂದು ಅರ್ಥ. ಅದರಿಂದ ಆ ಚಿಕ್ಕ ಘಟಕಕ್ಕೆ ಆ ಹೆಸರು ಬಂದಿತು.
  • 19ನೇ ಶತಮಾನದ ಆರಂಭದಲ್ಲಿ ಬ್ರಿಟಿಷ್ ರಸಾಯನಶಾಸ್ತ್ರ ತಜ್ಞ , ಶಿಕ್ಷಕ ಜಾನ್ ಡಾಲ್ಟನ್ ಈ ಸಂಯುಕ್ತ ವಸ್ತುಗಳ ಬಗೆಗೆ ಸಂಶೋಧನೆ ಮಾಡಿ ನೀರಿನ ಅತ್ಯಂತ ಚಿಕ್ಕ ಘಟಕವು ನೀರಿನ ‘ಅಣು’. ಅದರಲ್ಲಿ ಒಂದು ಆಮ್ಲಜನಕದ ಪರಮಾಣು ಮತ್ತು ಎರಡು ಜಲಜನಕದ ಪರಮಾಣುಗಳಿವೆಯೆಂದೂ ಮತ್ತು ಅವು ವಿದ್ಯುತ್ಕಾಂತಿಯ ಬಲದಿಂದ ಬಂಧಿಸಲ್ಪಟ್ಟಿದೆಯೆಂದೂ ಸಾಧಿಸಿದನು. ಅದಕ್ಕಾಗಿ ಹೈಡ್ರೋಜನ್’ಗೆ ‘ಎಚ್’ಸಂಕೆತವನ್ನೂ ಆಕ್ಸಿಜೆನ್’ಗೆ ‘ಒ’ ಸಂಕೇತವನ್ನೂ ನೀಡಿ, ನೀರಿನ ಪರಮಾಣು ಸಂಕೇತವನ್ನು ‘ಎಚ್‍ಒಎಚ್’(HOH) ಅಥವಾ ‘ಎಚ್2ಒ’(H2O) ಎಂದು ಕೊಟ್ಟನು. ಅದು ಜಲಜನಕದ 2 ಮತ್ತು ಆಮ್ಲಜನಕದ 1 ಪರಮಾಣುಗಳನ್ನು ಹೊಂದಿದೆ ಎಂದು ಸೂಚಿಸುವುದು. ಜಾನ್ ಡಾಲ್ಟನ್ ಅಣುವಿಜ್ಞಾನ ಶಾಸ್ತ್ರದಲ್ಲಿ ದೊಡ್ಡ ಹೆಸರು.
  • ಡಾಲ್ಟನ್'ನ ನಂತರದ ಪ್ರಮುಖ ಹೆಸರು, ಅಮೀಡಿಯೊ ಅವೊಗಾಡ್ರೊ(Amedeo Avogadro),ಇಟಲಿಯ ಭೌತಶಾಸ್ತ್ರಜ್ಞ. ಇವನು 1811 ರಲ್ಲಿ ಪರಮಾಣುಗಳ ದ್ರವ್ಯರಾಶಿಗಳ ಮೂಲಮಾನಗಳನ್ನು(Atomic mass units- ಸಂಕೇತ-a.m.u.) ಸೂಚಿಸಿದನು. ಅದು ಅವನ ಹೆಸರಿನ ಅವೊಗಾಡ್ರೊನ ನಿಯಮಎಂದು ಹೆಸರಾಗಿದೆ.[] (Amedeo_Avogadro [೨])
  • ಪರಮಾಣು ರಾಶಿ ಘಟಕಗಳು: ಮೋಲ್ ಅಂತರಾಷ್ಟ್ರೀಯ ಪದ್ದತಿಯ ಘಟಕ (ಎಸ್ಐ). 12 ಗ್ರಾಂ ಇಂಗಾಲದಲ್ಲಿ ಆಟಮ್ಸ್’ಗಳು ಇದ್ದು., ಸಮಸ್ಥಾನಿ ಸಾಪೇಕ್ಷ ಪರಮಾಣು ದ್ರವ್ಯರಾಶಿ 12, ಅವಗಾಡ್ರೋನ ಘಟಕಗಳ ಮಾಪನ ವ್ಯಾಖ್ಯಾನ ಮೂಲಕ ಈ ಸಂಖ್ಯೆ: 6.02214129 (27)×1023 ಮೋಲ್-1.. ಉದಾಹರಣೆಗೆ ರಾಸಾಯನಿಕ ಸಮೀಕರಣವು 2H2 + O2 → 2 H2O ಸೂಚಿಸುತ್ತದೆ. ಇದು 2 ಮೋಲ್ ಜಲಜನಕ (H2) ಮತ್ತು 1ಮೋಲ್' ನಷ್ಟು ಆಮ್ಲಜನಕದ (O2) ನೀರಿನ (H2O). 2 ಮೋಲ್’ ಆಗುತ್ತದೆ.
  • ಅವಗಾಡ್ರೋನ ಸಿದ್ಧಾಂತ (ಕೆಲವೊಮ್ಮೆ ಅವಗಾಡ್ರೋನ ಕಲ್ಪನೆ ಅಥವಾ ಅವಗಾಡ್ರೋನ ತತ್ವ ಎಂದು ಕರೆಯಲಾಗುತ್ತದೆ) ಪ್ರಾಯೋಗಿಕ ಅನಿಲ ಪದಾರ್ಥದ ನಿಯಮ. ಅನಿಲ ಪದಾರ್ಥಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಇರುವ ಅನಿಲದ ಪ್ರಮಾಣ ಕುರಿತ ನಿಯಮ. ಅವಗಾಡ್ರೋನ ನಿಯಮದ ಆಧುನಿಕ ಹೇಳಿಕೆ: ಅವಗಾಡ್ರೋನ ನಿಯಮದ ಪ್ರಕಾರ, "ಅದೇ (ಒಂದೇ ಸ್ಥಿರ) ಉಷ್ಣಾಂಶದ ಮತ್ತು ಒತ್ತಡದ ಮತ್ತು ಸಮಾನ ಪರಿಮಾಣದ ಎಲ್ಲಾ ಅನಿಲಗಳ, ಅದೇ ಸಮಾನ ಸಂಖ್ಯೆಯ ಅಣುಗಳನ್ನು ಹೊಂದಿರುತ್ತದೆ. ಪ್ರಾಯೋಗಿಕ ಅನಿಲದ ಉಷ್ಣಾಂಶ ಮತ್ತು ಒತ್ತಡ ಸ್ಥಿರವಾಗಿದ್ದರೆ (ಆದರ್ಶ)ಆಯ್ಕೆಯ ಅನಿಲದ ಪ್ರಮಾಣ, ಮತ್ತು ದ್ರವ್ಯ ವು (ಮೋಲ್ ) (ತೂಕ) ನೇರವಾಗಿ ಭಾಗ-ಭಾಜಕವಾಗಿರುತ್ತದೆ.[]
  • ಈಚಿನ ಬೆಳವಣಿಗೆ:ಇಂಗಾಲದ ಪರಮಾಣುವಿ ಗೆ 12,0000 ಪರಮಾಣು ದ್ರವ್ಯರಾಶಿ ಮಾನಗಳು /ಘಟಕಗಳು (ತೂಕ)ಎನ್ನುತ್ತಿದ್ದರು- ಚಿಹ್ನೆu,(12,0000 u) (symbol u, formerly amu) , ಹೈಡ್ರೋಜನ್ ಪರಮಾಣುವಿನ ದ್ರವ್ಯರಾಶಿ (ತೂಕ) 1,0079u,. ಈ ಸಂಖ್ಯೆಗಳನ್ನು ಹಿಂದೆ "ಪರಮಾಣು ತೂಕ" (atomic weight) ಎಂದು ಕರೆಯಲಾಗುತಿತ್ತು, ಆದರೆ ಈಗ "ಸಾಪೇಕ್ಷ ಪರಮಾಣು ದ್ರವ್ಯರಾಶಿ" ಎಂದು ನಿಗದಿಪಡಿಸಲಾಗಿದೆ (r.a.m relative atomic masses.). ಹೊಸ ಪದ ಆದ್ಯತೆ ಏಕೆಂದರೆ ಪರಮಾಣುವಿನಲ್ಲಿರುವ ಒಟ್ಟು ವಸ್ತು ಅಥವಾ ದ್ರವ್ಯ (ಮ್ಯಾಟರ್) ಪ್ರಮಾಣ ಇಲ್ಲಿ ಪ್ರಸ್ತುತವಾಗಿದೆ . ತೂಕ ಸಾಕಷ್ಟು ಭಿನ್ನವಾಗಿದೆ: ಗುರುತ್ವಾಕರ್ಷಣೆಯ ಶಕ್ತಿ ಪ್ರಭಾವದಿಂದ ತೂಕ ಉಂಟಾಗುವದು.

[೧೦][೧೧]

ಪರಮಾಣು ಭೌತಶಾಸ್ತ್ರದ ಪಿತಾಮಹ,ರುದರ್‌ಫೋರ್ಡ್
  • ನ್ಯೂಜಿಲ್ಯಾಂಡಿನ ಪ್ರಖ್ಯಾತ ವಿಜ್ಞಾನಿ ರುದರ್ ಫೋರ್ಡ್ 1908 ರಲ್ಲಿ ವಿಕಿರಣ ವಸ್ತುಗಳ ಕುರಿತು ನಡೆಸಿದ ಸಂಶೋಧನೆಗಾಗಿ, ರಸಾಯನ ಶಾಸ್ತ್ರದ ನೋಬಲ್ ಪ್ರಶಸ್ತಿಯನ್ನು ಪಡೆದನು.
ಎಲೆಕ್ಟ್ರಾನ್'ಗಳ ಸಂಶೋಧನೆ
  • ರುದರ್ ಫೋರ್ಡ್'ಗೂ ಮೊದಲು 1897ರಲ್ಲಿ ಬ್ರಿಟಿಷ್ ಭೌತವಿಜ್ಞಾನಿ ಜೆ.ಜೆ. ಥಾಮ್ಸನ್, ಯಾವುದೇ ಪರಮಾಣುವಿಗಿಂತ (ಕಣಕ್ಕಿಂತ?) ಕಡಿಮೆ ತೂಕದ ಎಲೆಕ್ಟ್ರಾನ್’ಇರುವುದನ್ನು ಕಂಡುಹಿಡಿದರು. ಫ್ರೆಂಚ್ ಭೌತವಿಜ್ಞಾನಿ ಆಂಟೊನಿ ಹೆನ್ರಿ ಬೀಕ್ವಿರೆಲ್’ ಇಂತಹ ಯುರೇನಿಯಮ್ ಲವಣಗಳ ವಸ್ತುಗಳು ನಿಗೂಢವಾದ ತೂರಿಹೋಗುವ ಕಿರಣಗಳನ್ನು ಬಿಡುಡೆಗೊಳಿಸುತ್ತವೆ ಎಂದು ಕಂಡುಹಿಡಿದನು. ಫ್ರೆಂಚ್ ವಿಜ್ಞಾನಿಗಳಾದ ಮೇರಿ ಕ್ಯೂರಿ ಮತ್ತು ಪತಿ ಪೀರ್ (ಪಿಯರಿ) ಕ್ಯೂರಿ ಈ ನಿಘೂಡ ಕಿರಣಗಳ ಬಗೆಗೆ ಮತ್ತಷ್ಟು ಸಂಶೋಧನೆ ನಡೆಸಿದರು.
  • ಸಮರ್ಥ ಪ್ರಯೋಗಶೀಲನಾದ ಅರ್ನೆಸ್ಟ್ ರುದರ್ಫೋರ್ಡ್ (1871-1937) ವಿಕಿರಣ ಮತ್ತು ಅಣು ಭೌತಶಾಸ್ತ್ರದ ವಿಭಾಗದಲ್ಲಿ ಗಮನಾರ್ಹವಾದ ಸರಣಿ ಸಂಶೋಧನೆಗಳಿಗೆ ಕಾರಣನಾಗಿದ್ದಾನೆ. ಅವನು ಆಲ್ಫಾ ಮತ್ತು ಬೀಟಾ ಕಿರಣಗಳನ್ನು ಕಂಡುಹಿಡಿದನು. ವಿಕಿರಣ ಕ್ಷಯದ ನಿಯಮಗಳನ್ನು ರೂಪಿಸಿದನು,ಮತ್ತು ಈ ನಿಯಮದಲ್ಲಿ ಆಲ್ಫಾ ಕಣಗಳು ಹೀಲಿಯಂ ನ್ಯೂಕ್ಲಿಯೈಗಳು ಎಂದು ಗುರುತಿಸಿದನು (ಕಂಡುಹಿಡಿದರು). ಬಹಳ ಪ್ರಮುಖವಾದದ್ದು ಅವನು ಪರಮಾಣುವಿನ ರಚನೆಯನ್ನು ಮಂಡಿಸಿದನು. ರುದರ್'ರ್ಫೋರ್ಡ್ ತನ್ನ ಪ್ರಯೋಗಾಲಯದಲ್ಲಿ ಅನಿಲ ಪರಮಾಣುಗಳ ಮೂಲಕ ಆಲ್ಫಾ ಕಣಗಳನ್ನು ತೂರಿಸಿದರೆ, 'ಕೆಲವು ಆವೇಶಾತ್ಮಕವಾಗಿ ದಿಕ್ಕುಬದಲಿಸಲ್ಪಟ್ಟಿತು' ಎಂದು ತೋರಿಸಿ,ಇದರಿಂದ,ಧನಾತ್ಮಕವಾಗಿ ವಿದುತ್’ಧಾರಕವಾದ ಕೇಂದ್ರ ಪ್ರದೇಶದಲ್ಲಿ, ದಟ್ಟವಾದ ಪರಮಾಣು ದ್ರವ್ಯರಾಶಿ ಹೊಂದಿರುವುದನ್ನು ಸೂಚಿಸುತ್ತದೆ,ಎಂದು ಧೃಡಪಡಿಸಿದನು.[೧೨]

ಪರಮಾಣುಗಳ ವಿಕಿರಣ

[ಬದಲಾಯಿಸಿ]
  • ಒಟ್ಟು 118 ಧಾತು ಅಥವಾ ಮೂಲಧಾತುಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಮೊದಲ 94 ಭೂಮಿಯಲ್ಲಿ ಸ್ವಾಭಾವಿಕವಾಗಿ ದೊರಕುತ್ತವೆ. (ಸಂಭವಿಸುತ್ತವೆ). ಉಳಿದ 24 ಮೂಲಧಾತುಗಳು ಕೃತಕ; ಮಾರ್ಪಡಿಸಿದವು. 118ಮೂಲಧಾತುಗಳಲ್ಲಿ 80 ಮೂಲಧಾತುಗಳು (ಕನಿಷ್ಠ ಒಂದು ಐಸೊಟೋಪ್) ಸ್ಥಿರ ಗುಣವುಳ್ಳವು. ಉಳಿದ 38 ಮೂಲಧಾತುಗಳು ವಿಕಿರಣಶೀಲ (radioactive) ಮತ್ತು ಅವುಗಳ ಸಮಸ್ಥಾನಿಯ (ಐಸೊಟೋಪ್) ಧಾತುಗಳೂ ಸಹ ವಿಕಿರಣಶೀಲತೆ ಹೊಂದಿವೆ. ಪರಮಾಣು ಕೋಷ್ಟಕದಲ್ಲಿ ಸೂಚಿಸಿದ ಪರಮಾಣು ಕ್ರಮಾಂಕದ 80ರ ನಂತರದ ಧಾತುಗಳ ಬೀಜಗಳು ಕೆಲವು ತಾವಾಗಿಯೇ ಸಿಡಿದು ಕಣಗಳನ್ನು ಚಿಮ್ಮುತ್ತವೆ. ಈ ಬಗೆಯ ಪರಮಾಣುಗಳಿಗೆ (ಧಾತುಗಳಿಗೆ)ಸಹಜ ವಿಕಿರಣಕ್ರಿಯಾಶೀಲ ಪರಮಾಣುಗಳೆಂದು (radioactive elements or Atoms) ಹೆಸರು.
ವಿಕಿರಣದಿಂದ ಪರಿವರ್ತನೆ
  • ಉದಾಹರಣೆಗೆ, ಬಹಳ ಪ್ರಸಿದ್ಧವಾದ, ಭಾರತಮ ಪರಮಾಣು ಯುರೇನಿಯಮ್(238) ನೋಡೋಣ. ಅದು ಒಂದು ಸ್ವಯಂ ಸ್ಪೋಟಕ ಪರಮಾಣು. ಈ ಪರಮಾಣು ಸಿಡಿದಾಗ ಒಂದು ಆಲ್ಫಾ ಕಣವನ್ನು ತನ್ನ ಬೀಜದಿಂದ ಹೊರ ನೂಕವುದು.ಆಲ್ಫಾ ಕಣವೆಂದರೆ ಹೀಲಿಯಂ ಪರಮಾಣು ಬೀಜ; ಅದು ಎರಡು ಪ್ರೊಟಾನ್’ ಮತ್ತು ಎರಡು ನ್ಯೂಟ್ರಾನ್’ಗಳ ಒಂದು ತುಂಡು. ಇದನ್ನು ಕಳೆದುಕೊಂಡ ಯುರೇನಿಯಮ್ ಬೀಜದ ಭಾರಾಂಕ 234 ಮತ್ತು ಪರಮಾಣ್ವಂಕ 90 ಆಗುತ್ತದೆ. ಹೀಗೆ ಪರಮಾಣ್ವಂಕ ಬದಲಾದಾಗ ವಸ್ತುವೇ ಬೇರೆಯಾಯಿತು.- ಅದನ್ನು ಯುರೇನಿಯಮ್ Χ1 ಎಂದು ಕರೆದಿದ್ದಾರೆ. ಅದೂ ಕೂಡಾ ವಿಕಿರಣ ಧಾತು - ಸ್ವಯಂ ಸ್ಪೋಟಕ. ಅದು ಥೋರಿಯಮ್ ಧಾತುವಿನ ಸಮಸ್ಥಾನೀಯ. ಇದರ ಬೀಜದಲ್ಲಿರುವ ನ್ಯೂಟ್ರಾನ್ ಒಂದು ಪ್ರೋಟಾನಿಗೆ ಬದಲಾವಣೆ ಹೊಂದಿ ಎಲೆಕ್ಟ್ರಾನ್’ಕಣವನ್ನು ಹೊರ ಹಾಕುತ್ತದೆ. ಇದು ಯುರೇನಿಯಮ್ ನ ಎರಡನೇ ಸಂತತಿ. ಇದರ ಪರಮಾಣ್ವಂಕ 90 ಇದ್ದುದು 91 ಆಯಿತು. ಇದು ಪ್ರೋಟಾಕ್ಟನೀಯಮ್ ನ ಸಮಸ್ಥಾನೀಯ. ಇದೂ ಸಹಜ ವಿಕಿರಣ ಕ್ರಿಯಾ ಧಾತು. ಹೀಗೆ ವಿಕಿರಣದಿಂದ ಕಣಗಳನ್ನು ಕಳೆದು ಕೊಳ್ಳುತ್ತಾ ಧಾತುವೂ ಪರಿವರ್ತನೆ ಆಗುತ್ತಾ ಐದನೆಯ ಸಂತತಿಯಲ್ಲಿ ರೇಡಿಯಂ ಆಗಿ, ಹದಿನಾಲ್ಕನೆಯ ಸಂತತಿಯಲ್ಲಿ ಸಿಡಿಯದ ವಿಕಿರಣವಲ್ಲದ ‘ಸೀಸ’ವಾಗುತ್ತದೆ. ಈ ಸೀಸದ ಭಾರಾಂಕ 206 ಪರಮಾಣು ಅಂಕ 82. ಇದು ಸ್ಥಿರ ಪರಮಾಣು. ವಿಕಿರಣ ಸೂಸುವುದಿಲ್ಲ. ಹೀಗೆ ವಿಕಿರಣ ಧಾತುಗಳು ಸಿಡಿದು ಸಿಡಿದು ಬದಲಾವಣೆ ಹೊಂದಿ ಕಡೆಗೆ ಭದ್ರ-ಸ್ತಿರ ಸೀಸವಾಗುತ್ತವೆ ಅಥವಾ ಸೀಸದ ಸಮಸ್ಥಾಯಿ ಧಾತುವಾಗುತ್ತವೆ. ಆಕ್ಟೇನಿಯಂ ಶ್ರೇಣಿಯ ಕಡೆಯ ಸಂತತಿ 207 ಭಾರಾಂಕದ ಸೀಸ. ಥೋರಿಯಂ ಧಾತುವಿನ ಕೊನೆಯ ಸಂತತಿ 208 ಭಾರಾಂಕದ ಸೀಸ.

ಪರಮಾಣುವಿನ ಅರ್ಧಾಯು

[ಬದಲಾಯಿಸಿ]
  • ಸ್ವಯಂ ಸಹಜ ವಿಕಿರಣ ಧಾತುಗಳ ಸಿಡಿಯುವಿಕೆಯಲ್ಲಿ (Natural Radio-activity) ಒಂದು ನಿಯಮವಿದೆ. ರೇಡಿಯಂ ಲೋಹದ ಪ್ರತಿ ಎರಡು ಸಾವಿರ ಪರಮಾಣುಗಳಲ್ಲಿ ವರ್ಷವೊಂದಕ್ಕೆ ಒಂದು ಪರಮಾಣುವಿನಂತೆ ಸ್ಪೋಟನ ಕ್ರಿಯೆ ನಡೆಯುತ್ತದೆ. ಇದನ್ನು ವೈಜ್ಞಾನಿಕ ಭಾಷೆಯಲ್ಲಿ ರೇಡಿಯಂನ ಅರ್ಧಾಯು (Half-period- Half life) 1590 ವರ್ಷಗಳು ಎನ್ನುವರು. ಇದರ ಅರ್ಥ ಅದರ ಪೂರ್ಣ ಆಯಸ್ಸು 3180 (1590ಷ2) ಅಲ್ಲ. ನಮ್ಮಲ್ಲಿ 10 ಗ್ರಾಂ ರೇಡಿಯಂ ಇದ್ದರೆ 1590 ವರ್ಷ ಕಳೆದ ಮೇಲೆ ಅದು 5 ಗ್ರಾಮ್ ಆಗುವುದು. 3180 ವರ್ಷಗಳ ನಂತರ ಅದು 2.5 ಗ್ರಾಂ ಆಗುವುದು. 6360 ವರ್ಷಗಳ ನಂತರ 1.25 ಗ್ರಾಂ ಆಗುವುದು. ಹೀಗೆ 12,720ವರ್ಷಗಳನಂತರ ಕೇವಲ 0.625 ಗ್ರಾಮ್ ಮಾತ್ರಾ ಉಳಿಯುವುದು. ಇದು ಹೀಗೆ ಕಡಿಮೆಯಾಗಿತ್ತಾ ಹೋಗುವುದೇ ವಿನಃ ಪೂರ್ಣ ನಾಶವೆಂಬುದು ಇಲ್ಲ. ಇದು ಅನಂತ ಕಾಲದ ಕ್ರಿಯೆ. ಬೇರೆ ಬೇರೆ ಸಹಜ ವಿಕಿರಣ (ಸ್ವಯಂ ಸ್ಪೋಟಕ) ಧಾತುಗಳು ಬೇರೆ ಬೇರೆ ಅರ್ಧಾಯುಗಳನ್ನು ಹೊಂದಿವೆ. ಈ ಅರ್ಧಾಯುವು ಪ್ರತಿ ಧಾತುವಿಗೆ ಬೇರೆಬೇರೆ ಇದ್ದೂ ಅವು ನಿಯತ ಸ್ಥಿರ ಕಾಲವನ್ನು ಹೊಂದಿವೆ. ಯಾವುದೇ ಸನ್ನಿವೇಶಗಳಲ್ಲಿ ( ಉಷ್ಣಾಂಶ , ಒತ್ತಡ, ವಿದ್ಯುತ್ ಕ್ಷೇತ್ರ, ಅಥವಾ ರಸಾಯನಿಕ ಸನ್ನಿವೇಶ) ಸ್ಪೋಟನ ಕ್ರಿಯಾವೇಗದಲ್ಲಿ ವ್ಯತ್ಯಾಸ ಕಂಡುಬಂದಿಲ್ಲ.
  • ಈ ವಿಕಿರಣ ಬೀಜಗಳಿಂದ ಸಿಡಿದು ಬರುವ ಕಣಗಳಿಗೆ ವಸ್ತುಗಳನ್ನು ತೂರಿಹೋಗುವ ಶಕ್ತಿ ಇದೆ. ತೂರಿಹೋದ ಕಣಗಳು ದೂರ ಹೋದಂತೆ ಶಕ್ತಿ ಕಡಿಮೆಯಾಗಿ ಕಣವು ವಸ್ತುವಿನಲ್ಲಿ ಲೀನವಾಗುತ್ತವೆ. ಈ ದೂರಕ್ಕೆ 'ಕಣದ ಬೇಧನ ದೂರ' (Range of penetration) ಎಂದು ಹೆಸರು. ವಿಶೇಷವೆಂದರೆ ಈ ಬೇಧನ ದೂರದ ಲೆಕ್ಕದಿಂದ ವಿಕಿರಣ ಧಾತುವಿನ ಅರ್ಧಾಯುವನ್ನು ಕಂಡುಹಿಡಿಯುವರು. ಪ್ರಾಚೀನ ಶಿಲೆಗಳಲ್ಲಿ ಈ ಬಗೆಯ ಧಾತುಗಳ ವಿಕಿರಣದಿಂದ ವೃತ್ತದ ಗುರುತು ಮೂಡಿದುದನ್ನು ನೋಡಿ ಧಾತುವಿನ ಬೇಧನ ದೂರವನ್ನು ನಿರ್ಣಯಿಸಿದ್ದಾರೆ.
ವಿಸರಣ (radiation)
  • ಧಾತುಗಳ ವಿಕಿರಣ(radioactiveity) ಕ್ರಿಯೆಯಿಂದ ಬಿಡುಗಡೆಯಾಗುವ ಕಿರಣಗಳಿಗೆ 'ವಿಸರಣ'(radiation)ಎನ್ನಬಹುದು. ಮುಖ್ಯವಾಗಿ ಮೂರು ಬಗೆಯ ವಿಸರಣಗಳಿವೆ.
  • ಈ ಮೂರೂ ಬಗೆಯ ವಿಸರಣ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಮೊದಲ ಬಗೆಯ ವಿಸರಣ ಆಲ್ಫಾ ; ಎರಡನೆಯದು ಬೀಟಾ, ಮೂರನೆಯದು ಗಾಮಾಕಿರಣ.
  • ಮೊದಲ ಆಲ್ಫಾದ ಪ್ರತಿ ಕಿರಣದಲ್ಲಿ 2 ಪ್ರೋಟಾನ್ ಮತ್ತು 2 ನ್ಯೂಟ್ರಾನ್ ಸೇರಿರುತ್ತವೆ. ಪರಮಾಣು ಬೀಜ ಒಡೆಯುವಾಗ ಈ ಕಿರಣ ಸಿಡಿಯುವುದು. ಈ ಕಿರಣದ ಚಲನೆ ಕೇವಲ 2-3 ಸೆಂ.ಮೀ.ನಷ್ಟು ಉದ್ದ. ದುರ್ಬಲ ಚರ್ಮವನ್ನು ಸೀಳಿಕೊಂಡು ಒಳಹೊಗದು -ಗಾಯವಿದ್ದರೆ ಪ್ರಾಣಿಯ ದೇಹದೊಳಕ್ಕೆ ಹೋಗುವುದು. ಆಗ ಅಪಾಯಕಾರಿ.
  • ಎರಡನೆಯ ಬೀಟಾ ಕಿರಣಗಳು. ಪರಮಾಣು ಬೀಜದಿಂದ ಹೊರಡುವ ಇವು ಎಲೆಕ್ಟ್ರಾನ್ ಕಣಗಳು. ಗಾಳಿಯಲ್ಲಿ ಸುಮಾರು 2-3 ಮೀಟರ್’ ದೂರ ಚಲಿಸಬಲ್ಲವು. ಸುಮಾರ 2 ಸೆ.ಮೀ.ದಪ್ಪದ ಹಲಗೆಯನ್ನು ದಾಟದು. ಇದು ನಮ್ಮ ದೇಹದ ಮೇಲ್ಪದರಕ್ಕೆ ಹಾನಿ ಮಾಡಬಲ್ಲದು. ರಕ್ತ ಕಣಗಳನ್ನು ಒಡೆಯುವುದು.(ಅದಕ್ಕಾಗಿ ಟಿವಿಯಿಂದ ಆದಷ್ಟು ದೂರವಿರಬೇಕು)
  • ಮೂರನೆಯ ಪ್ರಬಲವಾರ ಗಾಮಾ ಕಿರಣ. ಇದು ನಮ್ಮ ದೇಹದೊಳಕ್ಕೆ ಆಳವಾಗಿ ಇಳಿಯಬಲ್ಲದು. ಇದು ರೇಡಿಯಂನ ಎಕ್ಷರೇ ಕಿರಣದ ಜಾತಿಗೆ ಸೇರಿದ್ದು. ಇದನ್ನು ತಡೆಯಲು ದಪ್ಪ ಸೀಸದ ಹಾಳೆ ಅಥವಾ ಒಂದು ಅಡಿದಪ್ಪದ ಕಾಂಕ್ರೀಟು ಗೋಡೆ ಅಗತ್ಯ. ಇವು ನ್ಯೂಟ್ರಾನ್’ಗಳ ಪ್ರವಾಹ. ಬಹಳ ಅಪಾಯಕಾರಿ. ವಿಜ್ಷಾನಿಗಳು ಪ್ರಯೊಗ ಮಾಡುವಾಗ ಇದರ ಅಪಾಯದಿಂದ ರಕ್ಷಣೆ ಪಡೆಯಲು ತುಂಬಾ ಎಚ್ಚರ ವಹಿಸುವರು. ಅದಕ್ಕಾಗಿ ವಿಶೇಷ ವ್ಯವಸ್ಥೆ ಇದೆ.

ಪರಮಾಣು ಸಂಮಿಲನ ಮತ್ತು ವಿದಳನ

[ಬದಲಾಯಿಸಿ]
  • (Nuclear fusion & fission )
  • ಪರಮಾಣು ಬೀಜದಲ್ಲಿರುವ (ನ್ಯೂಕ್ಲಿಯಸ್’ನಲ್ಲಿರುವ) ಪ್ರೋಟಾನ್ಗಳ ಮತ್ತು ನ್ಯೂಟ್ರಾನ್ಗಳ ಸಂಖ್ಯೆಯನ್ನು ಮಾರ್ಪಡಿಸಬಹುದು. ಹಾಗಿದ್ದರೂ ಅದಕ್ಕೆ ಅತ್ಯಂತ ಹೆಚ್ಚಿನ ಶಕ್ತಿಯ ಅಗತ್ಯ ಇದೆ. ಏಕೆಂದರೆ ಒಂದು ಭಾರವಾದ ಪ್ರಬಲ ಶಕ್ತಿಯ ಪರಮಾಣು ಬೀಜ (ನ್ಯೂಕ್ಲಿಯಸ್) ಆಗಲು ಅದಕ್ಕೆ ಅನೇಕ ಪರಮಾಣು ಕಣಗಳು ಸೇರಿದಾಗ ನಡೆಯುವುದು. ಎರಡು ಪರಮಾಣು ಬೀಜಗಳ (ನ್ಯೂಕ್ಲಿಯಸ್ಗಳ) ಶಕ್ತಿಯುತ ಘರ್ಷಣೆ ಮೂಲಕ ಈ ಪರಮಾಣು ಸಮ್ಮಿಳನ ಸಂಭವಿಸುತ್ತದೆ. ಉದಾಹರಣೆಗೆ, ಸೂರ್ಯನ ಕೇಂದ್ರದಲ್ಲಿ (ಕೋರ್) ಪ್ರೋಟಾನ್ಗಳು ಪರಸ್ಪರ ವಿಕರ್ಷಣೆ ತಡೆಯಲು (ಕೊಲಂಬಿನ-ಮಿತಿ) 3-10 ಕೆಇವಿ ಶಕ್ತಿಯ ಅಗತ್ಯವಿದೆ. ಪರಮಾಣು ವಿದಳನವು ವಿರುದ್ಧ ಪ್ರಕ್ರಿಯೆ. ಹಿಗಾದಾಗ ಎರಡು ಸಣ್ಣ ನ್ಯೂಕ್ಲಿಯಸ್ಗಳು-ಪರಮಾಣು ಬೀಜಗಳು ಉಂಟಾಗುವುದು ವಿಕಿರಣ ಕ್ಷಯದ ಮೂಲಕ.
  • ಪರಮಾಣುಬೀಜವನ್ನು (-ನ್ಯೂಕ್ಲಿಯಸ್’ನ್ನು) ಹೆಚ್ಚಿನ ಶಕ್ತಿಯ ಉಪಪರಮಾಣು ಕಣಗಳ ದಾಳಿಯಿಂದ ಮಾರ್ಪಡಿಸಬಹುದಾಗಿದೆ. ಆಗ ಈ ನ್ಯೂಕ್ಲಿಯಸ್ ಪ್ರೋಟಾನ್ಗಳ ಸಂಖ್ಯೆ ಮಾರ್ಪಟ್ಟು ಅದು ಬೇರೆ ರಾಸಾಯನಿಕ ಧಾತುವಾಗಿ ಮಾರ್ಪಡುತ್ತದೆ.
  • ಒಂದು ಸಮ್ಮಿಳನ ಕ್ರಿಯೆಯಲ್ಲಿ ಎರಡು ಪ್ರತ್ಯೇಕವಾದ ಬೀಜಗಳ ತೂಕದ ಮೊತ್ತವು, ಮೊದಲಿನ ನ್ಯೂಕ್ಲಿಯಸ್ ಕಣಗಳ ತೂಕಕ್ಕಿಂತ ಕಡಿಮೆಯಾದರೆ, ಈ ವ್ಯತ್ಯಾಸವು ಗಾಮಾ ಕಿರಣದಂತಹ (ಗಾಮಾ ರೇ) ಯಂತಹ ಚಲನ ಶಕ್ತಿಯಾಗಿ ಬಿಡುಗಡೆಯಾಗಿದೆಯೆಂದು ತೀರ್ಮಾನಿಸಬಹುದು (ಅಥವಾ ಕೈನೆಟಿಕ್ ಶಕ್ತಿಯ ಬೀಟಾ ಕಣಗಳಾಗಿಯೂ ಉತ್ಸರ್ಜಿಸಬಹುದು), ಒಟ್ಟು ತೂಕ ನಷ್ಟ ವನ್ನು ಐನ್ಸ್ಟೀನ್'ನ ರಾಶಿ-ಶಕ್ತಿ ಹಾಗೂ ಬೆಳಕಿನ ವೇಗದ ಸಮಾನತೆ ಸೂತ್ರ ಅನ್ವಯಿಸಿ (E = mc2), ಲೆಕ್ಕ ಹಾಕಬಹುದು. ಈ ವ್ಯತ್ಯಾಸದ ಶಕ್ತಿಯು ಹೊಸ ಬೀಜಕಣಗಳನ್ನು ಬಂಧಿಸುವ ಶಕ್ತಿಯಾಗಿದೆ ಅಥವಾ ಅದರ ಭಾಗವಾಗಿದೆ,(Albert Einstein's mass–energy equivalence formula, E = mc2, where m is the mass loss and c is the speed of light. This deficit is part of the binding energy of the new nucleus) ಎಂದರೆ ತೂಕನಷ್ಟ mass = m ಆದರೆ: m x ಬೆಳಕಿನ ವೇಗ=299,792,458 ಮೀಟರ್ ಒಂದು ಸೆಕೆಂಡಿಗೆ; ಆದ್ದರಿಂದ: m x 299,792,458 x 299,792,458.ಶಕ್ತಿ ಬಿಡುಗಡೆಆಗುವುದು.
  • ಸೂರ್ಯನು ಮುಖ್ಯವಾಗಿ ಈ ಬಗೆಯ ಪ್ರಕ್ರಿಯೆಯ ನಕ್ಷತ್ರ. ಅದರ ಕೇಂದ್ರದಲ್ಲಿ ಪರಮಾಣುಬೀಜದ ಬೆಸುಗೆಯಿಂದ (ಫೂಶನ್’)ಅದರಲ್ಲಿರುವ ಜಲಜನಕವು ಹೀಲಿಯಂಗೆ ಪರಿವರ್ತಿತವಾಗುವುದು. ಪರಮಾಣು ಬೀಜ ಹೀಗೆ(ನ್ಯೂಕ್ಲಿಯಸ್ಗಳು) ಶಕ್ತಿಯನ್ನು ಉತ್ಪಾದಿಸುತ್ತದೆ. ಸೂರ್ಯನ ಕೇಂದ್ರಭಾಗದಲ್ಲಿ, ಪರಮಾಣು ಬೀಜದ ಸಂಘಟನೆಯಿಂದ ಜಲಜನಕದ ಪರಮಾಣುಗಳ ಬೀಜವು ಹೀಲಿಯಂ ಆಗುವುದು. ಸೂಯ‍ನಲ್ಲಿ ಪ್ರತಿ ಸೆಕೆಂಡಿಗೆ 620 ದಶಲಕ್ಷ ಮೆಟ್ರಿಕ್ ಟನ್ಗಳಷ್ಟು ಜಲಜನಕದ ಸಮ್ಮಿಲನ ನೆಡೆಯುವುದು.(Sun fuses 620 million metric tons of hydrogen each second.) ೧.[೧೩].

[೧೪][೧೫][೧೬]

ಪರಮಾಣು ಮತ್ತು ಚೈತನ್ಯ

[ಬದಲಾಯಿಸಿ]
Atomic bombing of Japanಹಿರೋಷಿಮಾ: * 20,000 ಸೈನಿಕರು ಕೊಲ್ಲಲ್ಪಟ್ಟರು * ನಾಗರಿಕರು 70.000ದಿಂದ146,000 ಕೊಲ್ಲಲ್ಪಟ್ಟರು; * ನಾಗಸಾಕಿ: * ಜನ:39,000 -80.000 ಕೊಲ್ಲಲ್ಪಟ್ಟರು * ಒಟ್ಟು: 129,000 + 246.000 ಕೊಲ್ಲಲ್ಪಟ್ಟರು * ಮೊದಲ ಪರಮಾಣು ಬಾಂಬ್ 10,000 ಅಡಿ,ಎತ್ತರಕ್ಕೆ ಜಿಗಿತ.(ನಂತರ 20,000 ಅಡಿ) *ಹಿರೋಷಿಮಾ ಮೇಲೆ: * ಎಡ ಚಿತ್ರ.ನಾಗಸಾಕಿ-ಪರಮಾಣು ಬಾಂಬ್:ಆಗಸ್ಟ್ 9,1945ರಂದು, *ಇದು ಚಿಕ್ಕ ಬಾಂಬ್,ಈಗಿನವು ಇದರ 20ಕ್ಜೂ ಹೆಚ್ಚಿನ ಶಕ್ತಿಶಾಲಿಗಳು.
  • ಪರಮಾಣು ಬೀಜಗಳನ್ನು ವಿಭಜನೆ (ಒಡೆದಾಗ) ಮಾಡಿದಾಗಲೂ ಮತ್ತು ಸಂಯೊಜನೆ (ಬೀಜಕ್ಕೆ ಹೊಸ ಕಣ ಸೇರಿಸಿದಾಗ) ಮಾಡಿದಾಗಲೂ ಅಪಾರ ಪ್ರಮಾಣದ ಚೈತನ್ಯ ಬಿಡುಗಡೆ ಆಗುತ್ತದೆ. ‘ಅಣುಬಾಂಬು’ ಪರಮಾಣು ವಿಭಜನೆಯಿಂದ ಆದರೆ ಜಲಜನಕದ ಬಾಂಬು (ಹೈಡ್ರೋಜನ್ ಬಾಂಬು) ಪರಮಾಣು ಸಂಯೋಜನೆಯಿಂದ ಆಗುವುದು. ಇದು ಸಂಯೊಜನೆ ಅಥವಾ ವಿಭಜನೆ ಅನಿಯಂತ್ರಿತವಾಗಿ ನಡೆದಾಗ ಆಗುವುದು. ಪರಮಾಣು ಚೈತನ್ಯವನ್ನು ಸರಣಿಸ್ಪೋಟದಿಂದ ಸಣ್ಣ ಪ್ರಮಾಣದಲ್ಲಿ ವಿಭಜನೆ-ಸಂಯೋಜನೆ ಮಾಡುವ, ಅದನ್ನು ಬೇಕಾದಂತೆ ಹತೋಟಿಯಲ್ಲಿಡುವ ಸಾಧನಗಳನ್ನು ವಿಜ್ಞಾನಿಗಳು ಕಂಡುಹಿಡಿದಿದ್ದಾರೆ. ಪರಮಾಣು ಬೇಧಕ, ‘ಅಟಾಮಿಕ್ ಜನೆರೇಟರ್”, ಇತ್ಯಾದಿ. ಪರಮಾಣುವಿನಿಂದ ಚೈತನ್ಯ ಪಡೆಯಲು ಈಗ ಉಪಯೋಗದಲ್ಲಿರುವುದು ಯುರೇನಿಯಮ್ ಧಾತು. ಅದರಲ್ಲಿ ಮೂರು ಬಗೆಗಳಿವೆ. ಯುರೇನಿಯಮ್ 234, ಯುರೇನಿಯಮ್ 235, ಯುರೇನಿಯಮ್ 238. ಈ ಮೂರೂ ಜಾತಿಗಳು ಬೆರೆತ ಲೋಹ ಭೂಮಿಯಲ್ಲಿಸಿಗುವುದು. ಅದರಲ್ಲಿ ಯುರೇನಿಯಮ್ 234 ಇರುವುದು ಅತಿ ಸ್ವಲ್ಪ ಭಾಗ, ಯುರೇನಿಯಮ್ 238 ಹೆಚ್ಚು ಸಿಗುವುದು. ಆದರೆ ಯು234-ಯು238 ರ ವಿಭಜನೆ ಸುಲಭವಲ್ಲ. ಆದ್ದರಿಂದ ಯುರೇನಿಯಮ್ 235 ಐಸೋಟೊಪು (ಸಮಸ್ಥಾನಿಯಧಾತು) ವಿದಳನಕ್ರಿಯೆಗೆ ಸುಲಭವಾಗಿ ಒಳಗಾಗುವುದು. ಆದ್ದರಿಂದ ಅದನ್ನು ಸೃಷ್ಟಿಸುವರು. ನೂಟ್ರಾನುಗಳನ್ನು ಅದರ (ಯುರೇನಿಯಮ್ 235) ಬೀಜಕ್ಕೆ ಗುರಿಇಟ್ಟು ಎಸೆದರೆ ಅದರಿಂದ ಸರಣಿ ವಿಭಜನೆ ಆರಂಭವಾಗಿ, ಪ್ರತಿ ಒಂದು ನ್ಯೂಟ್ರಾನಿನಿಂದ ಒಡೆದ ಬೀಜದಿಂದ ಅನೇಕ ನ್ಯೂಟ್ರಾನುಗಳು ಬಿಡುಗಡೆಗೊಳ್ಳತ್ತಾ, ಅವು ಇತರ ಪರಮಾಣು ಬೀಜಗಳನ್ನು ಒಡೆಯತ್ತಾ, ಹೀಗೆ ಸರಣಿಸ್ಪೋಟದಿಂದ ಅಪಾರ ಚೈತನ್ಯ ಬಿಡುಗಡೆ ಹೊಂದಿ ಸರ್ವನಾಶ ಮಾಡುವ ಸಂಭವವಿದೆ. ಅದಕ್ಕಾಗಿ ಹತೋಟಿಯ ವ್ಯವಸ್ತೆಮಾಡುವರು. ಕೇಡ್ಮಿಯಂ ಮತ್ತು ಗ್ರಾಫೈಟ್ ನ್ಯೂಟ್ರಾನುಗಳನ್ನು ಹೀರುವುದು. ಅದಕ್ಕಾಗಿ ಅದರ ಮಧ್ಯದಲ್ಲಿ ಕೇಡ್ಮಿಯಂ ಸರಳುಗಳನ್ನೋ ಅಥವಾ ಗ್ರಾಫೈಟ್ ಇಟ್ಟಗೆಗಳನ್ನೋ ವ್ಯವಸ್ಥಿತವಾಗಿ ಇಟ್ಟು ಬಿಡುಗಡೆಯಾಗುವ ಚೈತನ್ಯವು ಅಗತ್ಯವಾದಷ್ಟೆ ಸಿಗುವಂತೆ ಮಾಡುವರು.
ಪರಮಾಣು ಚೈತನ್ಯದಿಂದ ವಿದ್ಯುತ್
Trombay-ಟ್ರಾಂಬೆ.ಭಾರತದ ಮೊದಲ ರಿಯಾಕ್ಟರ್ ಮತ್ತು ಪ್ಲುಟೋನಿಯಂ ಸಂಸ್ಕರಣ ಘಟಕ, ಮುಂಬಯಿ, 19 ಫೆಬ್ರವರಿ 1966 ರಂದು ಯು.ಎಸ್.ಎ ಉಪಗ್ರಹ ಚಿತ್ರೀಕರಿಸಿದೆ; BARC:renamed as the Bhabha Atomic Research Centre on 22 January 1967
  • ಈಗ ಯುರೇನಿಯಂ ಧಾತು ಅಥವಾ ಪ್ಲಟೋನಿಯಂ ಧಾತುವನ್ನು ಅಟಾಮಿಕ್ ರಿಯಾಕ್ಟರಿನಲ್ಲಿ ಸ್ಫೋಟಿಸಿ ಅದರಿಂದ ವಿದ್ಯುತ್ ಉತ್ಪಾದನೆಮಾಡುವರು. ಅದೇ ಅಟಾಮಿಕ್ ರಿಯಾಕ್ಟರ್. ಜಗತ್ತಿನ ಮೊದಲ ಪ್ಲಟೋನಿಯಂ ಉತ್ಪಾದನ ಘಟಕ ಮತ್ತು ಪರಮಾಣು ವಿದ್ಯುತ್ ಉತ್ಪಾದನಾ ಪ್ರಯೋಗ, ಅಮೇರಿಕಾದ (ಯು.ಎಸ್.ಎ.) ಕೊಲಂಬಿಯಾ ವದಿಯ ದಂಡೆಯ ಮೇಲಿನ ಹೆನ್ಸ್’ಫರ್ಡ್ ಪರಮಾಣು ಯೋಜನೆಯ ಕಾರ್ಯಾಗಾರದಲ್ಲಿ ಆಯಿತು. ಅಮೇರಿಕಾದ ಅಟಾಮಿಕ್ ಎನರ್ಜಿ ಕಮಿಶನ್ ಇಲ್ಲಿ ಪ್ರಯೋಗಗಳನ್ನು ಮಾಡಿ ಪ್ಲುಟೋನಿಯಂ ಉತ್ಪಾದಿಸುತ್ತಾರೆ. ಈ ಧಾತುವಿನ ಅರ್ಧಾಯು 24000 ವರ್ಷ ಹಾಗಾಗಿ ಅದು ಇಂದು ಜಗತ್ತಿನ ವಿದ್ಯುತ್ ಉತ್ಪಾದನೆಯ ಪ್ರಮುಖ ಬೆಲೆಬಾಳುವ ಲೋಹವಾಗಿದೆ. ಈಗ ಜಗತ್ತಿನಲ್ಲಿ ಸಾವಿರಾರು ಪರಮಾಣು ವಿದ್ಯತ್ ಘಟಕಗಳಿವೆ. ಭಾರತದ ಮೊದಲ ಆಣುವಿದುತ್ ಘಟಕ ಮುಂಬಯಿ (ಮುಂಬಯಿ) ಯ ಟ್ರಾಂಬೆಯಲ್ಲಿದೆ. ಮತ್ತೊಂದು ಕರ್ನಾಟಕದ ಕೈಗಾದಲ್ಲಿದೆ. ಒಂದು ದೊಡ್ಡ ಘಟಕ ತಮಿಳನಾಡಿನ ಕಲ್ಪಾಕಮ್'ನಲ್ಲಿದೆ. ಈ ವಿದ್ಯತ್ತು ಅಗ್ಗವಾದರೂ ವಿಕಿರಣ ಸೂಸುವ ತ್ಯಾಜ್ಯದ ವಿಲೇವಾರಿ ಅತಿ ದೊಡ್ಡ ಸಮಸ್ಯೆ. ಅಣುವಿದ್ಯತ್ ಉತ್ಪಾದನೆಯಲ್ಲಿ ಅಣುವಿಭಜನೆಯಿಂದ ಬಿಡುಗಡೆಯಾದ ಚೈತನ್ಯದಿಂದ ನೀರನ್ನು ಕುದಿಸಿ ಅದರ ಹಬೆಯಿಂದ ಟರ್ಬೈನ್ಗಳು (ವಿದ್ಯತ್ ಉತ್ಪಾದಕ ಚಕ್ರಗಳು) ತಿರುಗುವಂತೆ ಮಾಡಿ ವಿದ್ಯುತ್ ಉತ್ಪಾದಿಸುವರು. ಜಪಾನಿನಲ್ಲೊಂದು ದೊಡ್ಡ ವಿದ್ಯತ್ಘಟಕದಲ್ಲಿ ಅನಾಹುತವಾದ ನಂತರ ಯೂರೋಪಿನ ಅನೇಕ ರಾಷ್ಟ್ರಗಳು ಅಣುವಿದ್ಯತ್ ಘಟಕಗಳನ್ನು ಮುಚ್ಚುತ್ತಿವೆ. (see:[೩])

ಇತರ ಉಪಯೋಗಗಳು:

[ಬದಲಾಯಿಸಿ]
  • ಈಗ ಅಣು-ವಿದ್ಯತ್ತಿನಿಂದ ಹಡಗುಗಳನ್ನೂ ಜಲಾಂತರ್ಗಾ‍ಮಿಗಳನ್ನು ನೆಡೆಸುವರು. ಅಪಾಯ ಕಾರಿಯಲ್ಲದ ಅಲ್ಪ ವಿಕಿರಿಣದ ಪರಮಾಣು-ಸಮಸ್ಥಾನೀಯಗಳನ್ನು ವೈದ್ಯಕೀಯ ಚಿಕಿತ್ಸೆಗಳಲ್ಲೂ ಉಪಯೋಗಿಸುವರು. ಕ್ಯಾನ್ಸರ್ ಚಿಕಿತ್ಸೆಗೆ ಇದರ ಉಪಯೋಗವಿದೆ. ಸಸ್ಯಗಳಲ್ಲಿ ಉತ್ತಮ ಕುಲಾಂತರಿಗಳನ್ನು ಸೃಷ್ಟಿಸಲು ವಿಕಿರಣದ ಉಪಯೋಗ ಮಾಡುವರು. ಇನ್ನೂ ಹೆಚ್ಚಿನ ಸಂಶೋಧನೆಗಳೂ ಆಗುತ್ತಿವೆ.

ಫಾಸ್ಟ್ ಬ್ರೀಡರ್ ಪರಮಾಣು ಸ್ಥಾವರ

[ಬದಲಾಯಿಸಿ]
  • ಪ್ರೊಟೊಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕಲ್ಪಾಕಂ
  • ‘ಫಾಸ್ಟ್ ಬ್ರೀಡರ್’ ಪರಮಾಣು ಸ್ಥಾವರ. ಅದು ಮಾಮೂಲು ಅಣುಸ್ಥಾವರಗಳಿಗಿಂತ ಭಿನ್ನವಾದದ್ದು. ಚೆನ್ನೈ ಬಳಿಯ ಕಲ್ಪಾಕ್ಕಮ್‌ನ ಇಂದಿರಾ ಗಾಂಧಿ ಸಂಶೋಧನ ಕೇಂದ್ರದಲ್ಲಿ ಕಳೆದ 30 ವರ್ಷಗಳಿಂದ ಅದನ್ನು ಕಟ್ಟಿ ನಿಲ್ಲಿಸುವ ಯತ್ನ ನಡೆದಿದೆ. ಅಮೆರಿಕ, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಜಪಾನ್ ದೇಶಗಳು ಫಾಸ್ಟ್ ಬ್ರೀಡರ್ ತಂತ್ರಜ್ಞಾನವನ್ನು ಕರಗತ ಮಾಡಲೆಂದು ಸಾವಿರಾರು ಕೋಟಿ ಹಣವನ್ನು ವ್ಯಯಿಸಿ, ಕೊನೆಗೂ ಅದು ತೀರಾ ಅಪಾಯಕಾರಿ ಎಂದು ಕೈಬಿಟ್ಟಿವೆ. ರಷ್ಯ ದೇಶವೊಂದೇ ಈಗ ಫಾಸ್ಟ್ ಬ್ರೀಡರ್ ತಂತ್ರಜ್ಞಾನದಿಂದ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಚೀನಾ ಕಳೆದ ಹತ್ತು ವರ್ಷಗಳಿಂದ ಪ್ರಯೋಗದಲ್ಲಿ ನಿರತವಾಗಿದೆ.

ತಂತ್ರಜ್ಞಾನ

[ಬದಲಾಯಿಸಿ]
  • ಫಾಸ್ಟ್ ಬ್ರೀಡರ್ ಯಶಸ್ವಿಯಾದರೆ ಅದು ತಾನು ಉರಿಸಿದ ಇಂಧನಕ್ಕಿಂತ ಹೆಚ್ಚು ಇಂಧನವನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗುತ್ತಿದೆ. ಅಂದರೆ ಹತ್ತು ಕಿಲೊ ಕೆಂಡದಿಂದ 17 ಕಿಲೊ ಇದ್ದಿಲನ್ನು ಪಡೆದ ಹಾಗೆ.ಹತ್ತು ಕಿಲೊ ಪರಮಾಣು ಇದ್ದಿಲನ್ನು (->ಪ್ಲುಟೋನಿಯಂ) ಸುಡುವಾಗ ಅದರೊಂದಿಗೆ ಒಂದಿಷ್ಟು ಇಂಧನವಲ್ಲದ ಥೋರಿಯಂ ಮರಳನ್ನು ಸೇರಿಸಿರುತ್ತಾರೆ. ಇದ್ದಿಲು ಉರಿಯುತ್ತ ಹೋದಂತೆ ಈ ಮರಳು ಕೂಡ ಇದ್ದಿಲಾಗುತ್ತದೆ. ಅದನ್ನು ಮತ್ತೆ ಉರಿಸಬಹುದು. ಎರಡನೆಯ ಮುಖ್ಯ ಕಾರಣ ಏನೆಂದರೆ, ಥೋರಿಯಂ ಎಂಬ ಮೂಲವಸ್ತು ಮರಳಿನ ರೂಪದಲ್ಲಿ ನಿರುಪಯುಕ್ತವೆಂಬಂತೆ ನಮ್ಮಲ್ಲಿ ಹೇರಳವಾಗಿ ಹಾಸಿಬಿದ್ದಿದೆ. ಹೇರಳ ಎಂದರೆ ನಮ್ಮಲ್ಲಿದ್ದಷ್ಟು ಥೋರಿಯಂ ಜಗತ್ತಿನ ಬೇರೆ ಯಾವ ದೇಶದಲ್ಲೂ ಇಲ್ಲ! ಕೇರಳದಿಂದ ಹಿಡಿದು ತಮಿಳುನಾಡು, ಆಂಧ್ರ, ಒಡಿಶಾ, ಬಂಗಾಳದವರೆಗೂ ಕಡಲಂಚಿನ ಮರಳರಾಶಿಯಲ್ಲಿ ಅದರದ್ದೇ ದರ್ಬಾರು. ಅದನ್ನು ಅಣು ಇಂಧನವನ್ನಾಗಿ ಕುಲುಮೆಯಲ್ಲಿ ಪರಿವರ್ತನೆ ಮಾಡುತ್ತಿದ್ದರೆ ಮುಂದೆ ನೂರಿನ್ನೂರು ವರ್ಷಗಳ ಕಾಲ ವಿದ್ಯುತ್ತನ್ನು ಉತ್ಪಾದಿಸುತ್ತಿರಬಹುದು. ಮೂರನೆಯ ಮುಖ್ಯ ಕಾರಣ ಎಂದರೆ, ಪರಮಾಣು ತ್ಯಾಜ್ಯಗಳನ್ನೇ ಉರಿಸಿ ಶಕ್ತಿ ಪಡೆಯುವುದರಿಂದ ತ್ಯಾಜ್ಯದ ವಿಲೆವಾರಿಯ ಸಮಸ್ಯೆಯೇ ಇರುವುದಿಲ್ಲ. ಅಂತೂ ಎಲ್ಲ ದೃಷ್ಟಿಯಿಂದಲೂ ಉತ್ತಮ.
  • ಫಾಸ್ಟ್ ಬ್ರೀಡರ್ ತಂತ್ರವನ್ನು ಸರಳವಾಗಿ ಹೀಗೆ ಹೇಳಬಹುದು: ಮಾಮೂಲು ಅಣುಸ್ಥಾವರಗಳಲ್ಲಿ ಯುರೇನಿಯಂ ಸರಳುಗಳನ್ನು ನೀರಲ್ಲಿ ಅಥವಾ ಭಾರಜಲದಲ್ಲಿ ಉರಿಸಿ, ಉಗಿಯಿಂದ ಚಕ್ರ ತಿರುಗಿಸಿ ವಿದ್ಯುತ್ ಉತ್ಪಾದಿಸುತ್ತಾರೆ. ಉರಿದ ಸರಳುಗಳು ಪ್ಲುಟೋನಿಯಂ ಎಂಬ ಪ್ರಳಯಾಂತಕ ರೂಪ ತಾಳುತ್ತವೆ. ಅದನ್ನು ಹೊರಕ್ಕೆ ತೆಗೆದು ಆ ಜಾಗದಲ್ಲಿ ಹೊಸದಾಗಿ ಯುರೇನಿಯಂ ಸರಳುಗಳನ್ನು ತೂರಿಸಬೇಕು. ಹಾಗೆ ತೆಗೆದ ಪ್ಲುಟೋನಿಯಂ ಭಾರೀ ವಿಕಿರಣ ಸೂಸುತ್ತದೆ. ಅದನ್ನು ಆಸಿಡ್‌ನಲ್ಲಿ ಮುಳುಗಿಸಿಟ್ಟು ಲಕ್ಷಾಂತರ ವರ್ಷ ಸುರಕ್ಷಿತ ಕಾಪಾಡಬೇಕು ಅಥವಾ ಬಾಂಬ್ ತಯಾರಿಕೆಗೆ ಬಳಸಬೇಕು. ಎರಡೂ ಅಪಾಯಕಾರಿಯೇ. ಅದು ಈಗ ಎಲ್ಲೆಡೆ ಚಾಲ್ತಿಯಲ್ಲಿರುವ ತಂತ್ರಜ್ಞಾನ. ಫಾಸ್ಟ್ ಬ್ರೀಡರ್ ತಂತ್ರದಲ್ಲಿ ಇದೇ ನಿಗಿನಿಗಿ ಪ್ಲುಟೋನಿಯಮ್ಮಿಗೆ ಒಂದಿಷ್ಟು ಥೋರಿಯಂ ಮರಳು ಸೇರಿಸಿ ನೀರಿನ ಬದಲು ಸೋಡಿಯಂ ದ್ರವದಲ್ಲಿ ಮುಳುಗಿಸುತ್ತಾರೆ. ಆ ಮಿಶ್ರ ಇಂಧನ ಇನ್ನೂ ‘ಫಾಸ್ಟ್’ ಆಗಿ ಉರಿಯುತ್ತ (ವಿದ್ಯುತ್ ಉತ್ಪಾದಿಸುತ್ತಲೇ) ಹೊಸ ಇಂಧನವನ್ನು ‘ಬ್ರೀಡ್’ ಮಾಡುತ್ತದೆ. ಅರ್ಥಾತ್ ‘ಹೊಸ ಇಂಧನದ ಶೀಘ್ರ ಜನನ’. ಪ್ಲುಟೋನಿಯಂ ಸ್ಪರ್ಶದಿಂದ ಸೋಡಿಯಂ ಕುದಿತಾಪದಲ್ಲಿರುವಾಗ ಅದರೊಳಗೆ ಸುರುಳಿ ಕೊಳವೆಯ ಮೂಲಕ ನೀರನ್ನು ಹಾಯಿಸಬೇಕು. ನೀರು ಉಗಿಯಾಗಿ ದೂರ ಹೋಗಿ ಚಕ್ರವನ್ನು ತಿರುಗಿಸಿ ವಿದ್ಯುತ್ ಉತ್ಪಾದಿಸಬೇಕು. ಸೋಡಿಯಂ ದ್ರವದಲ್ಲಿರುವ ನೀರಿನ ಕೊಳವೆ ತುಸುವೇ ಸೀಳು ಬಿಟ್ಟರೂ ಸೋಡಿಯಂ ಸಿಡಿಯುತ್ತದೆ. ಹೀಗೆ ಅತಿ ಶಾಖ, ಅತಿ ಒತ್ತಡ, ಅತಿ ವಿಕಿರಣದ ಬಗ್ಗಡವನ್ನು ದೂರ ನಿಯಂತ್ರಣದಲ್ಲೇ ನಿಭಾಯಿಸಬೇಕು. ಚೂರೇಚೂರು ಹೆಚ್ಚುಕಮ್ಮಿಯಾಗಿ ಬೆಂಕಿ ಹೊತ್ತಿಕೊಂಡಿತೊ, ಎಲ್ಲವನ್ನೂ ಶಟ್‌ಡೌನ್ ಮಾಡಿ, ಇಡೀ ವ್ಯವಸ್ಥೆ ತಂಪಾಗಲು ತಿಂಗಳುಗಟ್ಟಲೆ ಕಾದು, ಬಿರುಕಿಗೆ ದೂರದಿಂದಲೇ ಬೆಸುಗೆ ಹಾಕಿ ಮತ್ತೆ ಚಾಲೂ ಮಾಡಬೇಕು.
  • ರಷ್ಯ ಮಾತ್ರ ಯೆಕೇಟರಿಂಗ್‌ಬರ್ಗ್ ಎಂಬಲ್ಲಿ 30 ವರ್ಷಗಳಿಂದ ಚಿಕ್ಕ ಫಾಸ್ಟ್‌ಬ್ರೀಡರ್ ಸ್ಥಾವರವನ್ನು ನಡೆಸುತ್ತಿದೆ. ರಷ್ಯದಲ್ಲಿ ಥೋರಿಯಂ ಇಲ್ಲವಾದ್ದರಿಂದ ಯು-238 ಎಂಬ ನಿಷ್ಪ್ರಯೋಜಕ ಯುರೇನಿಯಂ ಲೋಹದ ಪುಡಿಯನ್ನೇ 'ಚುರುಕು'ಗಾಗಿ ಉರಿಸುತ್ತಿದ್ದಾರೆ. ಕಳೆದ ವರ್ಷವಷ್ಟೆ ಫಾಸ್ಟ್‌ಬ್ರೀಡರಿನ ದೊಡ್ಡ ಮಾದರಿಯೊಂದು 800 ಮೆಗಾವಾಟ್ ವಿದ್ಯುತ್ ಪೂರೈಕೆ ಆರಂಭಿಸಿದೆ. ಹತ್ತು ದಿನಗಳ ಹಿಂದಷ್ಟೆ ಜಗತ್ತಿನ 700 ಪರಮಾಣು ತಂತ್ರಜ್ಞರನ್ನು ಸೇರಿಸಿ ಸಂಭ್ರಮಾಚರಣೆ ನಡೆಸಿದೆ. ಅಲ್ಲಿಗೆ ಹೋಗಿದ್ದ ಭಾರತೀಯ ವಿಜ್ಞಾನಿಗಳು ಅಲ್ಲೇ ನಮ್ಮ ಕಲ್ಪಾಕ್ಕಮ್ ಸ್ಥಾವರದ ಗುಟ್ಟು ಬಿಚ್ಚಿಟ್ಟಿದ್ದಾರೆ. ರಷ್ಯದ್ದಕ್ಕಿಂತ ನಮ್ಮದು ಭಿನ್ನವಾಗಿದ್ದು, ಎಲ್ಲೆಡೆ ವಿಫಲವಾಗಿರುವ ಥೋರಿಯಂ ಮರಳಿಗೇ ಚುರುಕು ಮುಟ್ಟಿಸಿ ಇಂಧನವನ್ನಾಗಿ ಪರಿವರ್ತಿಸಲಿದೆ ಎಂದು ಹೇಳಿದ್ದಾರೆ.

[೧೭]

  • ೧.ಪರಮಾಣು ಇಂದು ಮತ್ತು ನಾಳೆ; ಮಾರ್ಗರೆಟ್ ಓ ಹೈಡ್ ಅನುವಾದ ಡಾ.ಶಿವರಾಮಕಾರಂತ.ಹರ್ಷ ಮುದ್ರಣ ಪುತ್ತೂರು ದ,ಕ.
  • ೨. Andrew G.van Melsen (1952).From Atomos to Atom.Mineola,N.Y.:Dover Publications. ISBN 0-486-49584-1.
  • ೩.http://education.jlab.org/qa/element.html
  • ೪.ಜಗತ್ತುಗಳ ಹುಟ್ಟು ಸಾವು.-(ಆರ್.ಎಲ್.ನರಸಿಂಹಯ್ಯ.)ಪ್ರಕಟಣೆ ಕಾವ್ಯಾಲಯ ಮೈಸೂರು

ಪಿರಿಯಾಡಿಕ್ ಟೇಬಲ್-

[ಬದಲಾಯಿಸಿ]
Group 1 2   3 4 5 6 7 8 9 10 11 12 13 14 15 16 17 18
Alkali metals Alkaline earth metals Pnicto­gens Chal­co­gens Halo­gens Noble gases
Period

1

Hydro­gen
1
He­lium
2
2
Lith­ium
3
Beryl­lium
4
Boron
5
Carbon
6
Nitro­gen
7
Oxy­gen
8
Fluor­ine
9
Neon
10
3
So­dium
11
Magne­sium
12
Alumin­ium
13
Sili­con
14
Phos­phorus
15
Sulfur
16
Chlor­ine
17
Argon
18
4
Potas­sium
19
Cal­cium
20
Scan­dium
21
Tita­nium
22
Vana­dium
23
Chrom­ium
24
Manga­nese
25
Iron
26
Cobalt
27
Nickel
28
Copper
29
Zinc
30
Gallium
31
Germa­nium
32
Arsenic
33
Sele­nium
34
Bromine
35
Kryp­ton
36
5
Rubid­ium
37
Stront­ium
38
Yttrium
39
Zirco­nium
40
Nio­bium
41
Molyb­denum
42
Tech­netium
43
Ruthe­nium
44
Rho­dium
45
Pallad­ium
46
Silver
47
Cad­mium
48
Indium
49
Tin
50
Anti­mony
51
Tellur­ium
52
Iodine
53
Xenon
54
6
Cae­sium
55
Barium
56
1 asterisk
Lute­tium
71
Haf­nium
72
Tanta­lum
73
Tung­sten
74
Rhe­nium
75
Os­mium
76
Iridium
77
Plat­inum
78
Gold
79
Mer­cury
80
Thallium
81
Lead
82
Bis­muth
83
Polo­nium
84
Asta­tine
85
Radon
86
7
Fran­cium
87
Ra­dium
88
1 asterisk
Lawren­cium
103
Ruther­fordium
104
Dub­nium
105
Sea­borgium
106
Bohr­ium
107
Has­sium
108
Meit­nerium
109
Darm­stadtium
110
Roent­genium
111
Coper­nicium
112
Unun­trium
113
Flerov­ium
114
Unun­pentium
115
Liver­morium
116
Unun­septium
117
Unun­octium
118
1 asterisk
Lan­thanum
57
Cerium
58
Praseo­dymium
59
Neo­dymium
60
Prome­thium
61
Sama­rium
62
Europ­ium
63
Gadolin­ium
64
Ter­bium
65
Dyspro­sium
66
Hol­mium
67
Erbium
68
Thulium
69
Ytter­bium
70
 
1 asterisk
Actin­ium
89
Thor­ium
90
Protac­tinium
91
Ura­nium
92
Neptu­nium
93
Pluto­nium
94
Ameri­cium
95
Curium
96
Berkel­ium
97
Califor­nium
98
Einstei­nium
99
Fer­mium
100
Mende­levium
101
Nobel­ium
102
 

black=Solid green=Liquid red=Gas grey=Unknown Color of the atomic number shows state of matter (at 0 °C and 1 atm)
Primordial From decay Synthetic Border shows natural occurrence of the element
Background color shows subcategory in the metal–nonmetal range:
Metal Metalloid Nonmetal Unknown
chemical
properties
Alkali metal Alkaline earth metal Lan­thanide Actinide Transition metal Other metal Polyatomic nonmetal Diatomic nonmetal Noble gas


ಉಲ್ಲೇಖ

[ಬದಲಾಯಿಸಿ]
  1. "Atom". Compendium of Chemical Terminology (IUPAC Gold Book) (2nd ed.). IUPAC. Retrieved 2015-04-25.
  2. Ghosh, D. C.; Biswas, R. (2002). "Theoretical calculation of Absolute Radii of Atoms and Ions. Part 1. The Atomic Radii". Int. J. Mol. Sci. 3: 87–113. doi:10.3390/i3020087.
  3. http://education.jlab.org/qa/element.html
  4. http://www.chemicalelements.com/elements/o.html
  5. (ಜಗತ್ತುಗಳ ಹುಟ್ಟು ಸಾವು-ಗ್ರಂಥ)
  6. http://www.britannica.com/science/proton-subatomic-particle
  7. Mohr, P.J.; Taylor, B.N. and Newell, D.B. (2011), "The 2010 CODATA Recommended Values of the Fundamental Physical Constants", National Institute of Standards and Technology, Gaithersburg, MD, US.
  8. http://www.britannica.com/science/Avogadros-law
  9. http://pubs.acs.org/doi/10.1021/ed5007376
  10. The latest edition is International Union of Pure and Applied Chemistry (2006). "Atomic Weights of the Elements 2005"
  11. https://en.wikipedia.org/wiki/Relative_atomic_mass
  12. http://www.chemheritage.org/discover/online-resources/chemistry-in-history/themes/atomic-and-nuclear-structure/rutherford.aspx
  13. "ABC's of Nuclear Science". Lawrence Berkeley National Laboratory. Archived from the original on 5 December 2006. Retrieved 3 January 2007
  14. ೨.Makhijani, Arjun; Saleska, Scott (2 March 2001). "Basics of Nuclear Physics and Fission". Institute for Energy and Environmental Research. Archived from the original on 16 January 2007. Retrieved 3 January 2007.
  15. Shultis, J. Kenneth; Faw, Richard E. (2002). Fundamentals of Nuclear Science and Engineering. CRC Press. pp. 10–17. ISBN 0-8247-0834-2. OCLC 123346507
  16. (From en:Atom-ref:43;44;45)
  17. "ಬೂದಿಯೇ ಕೆಂಡವಾಗುವ ಅಕ್ಷಯ ಮಾಯಾದಂಡ13 Jul, 2017". Archived from the original on 2017-07-15. Retrieved 2017-07-14.


"https://kn.wikipedia.org/w/index.php?title=ಪರಮಾಣು&oldid=1176113" ಇಂದ ಪಡೆಯಲ್ಪಟ್ಟಿದೆ