ಜಾನ್ ಡಾಲ್ಟನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜಾನ್ ಡಾಲ್ಟನ್
ಜಾನ್ ಡಾಲ್ಟನ್
ಜನನ(೧೭೬೬-೦೯-೦೬)೬ ಸೆಪ್ಟೆಂಬರ್ ೧೭೬೬
ಏಗರ್ ಫೀಲ್ಡ್, ಇಂಗ್ಲೆಂಡ್
ಮರಣ27 July 1844(1844-07-27) (aged 77)
ಮ್ಯಾಂಚೆಸ್ಟರ್, ಇಂಗ್ಲೆಂಡ್
ಪಾರ್ಶ್ವವಾಯು
ರಾಷ್ಟ್ರೀಯತೆಬ್ರಿಟಿಷ್
ಗಮನಾರ್ಹ ವಿದ್ಯಾರ್ಥಿಗಳುಜೇಮ್ಸ್ ಪ್ರೆಸ್ಕಾಟ್ ಜೂಲ್
ಪ್ರಸಿದ್ಧಿಗೆ ಕಾರಣಪರಮಾಣು ಸಿದ್ಧಾಂತ, ಡಾಲ್ಟನ್ನನ ನಿಯಮ
ಗಮನಾರ್ಹ ಪ್ರಶಸ್ತಿಗಳುರಾಯಲ್ ಮೆಡಲ್ (1826)
ಹಸ್ತಾಕ್ಷರ


ಜಾನ್ ಡಾಲ್ಟನ್

ಜಾನ್ ಡಾಲ್ಟನ್[ಬದಲಾಯಿಸಿ]

ಜಾನ್ ಡಾಲ್ಟನ್ ಅವರು ರಸಾಯನಶಾಸ್ತ್ರಜ್ಞರು, ಭೌತಶಾಸ್ತ್ರಜ್ಞರು ಮತ್ತು ಪವನ ವಿಜ್ಞಾನಿ. ಅವರು ಪರಮಾಣು ಸಿದ್ಧಾಂತದ ಅಭಿವೃದ್ಧಿಯಲ್ಲಿ ತೊಡಗಿದ್ದರು. ಅವರು ಬಣ್ಣ ಅಂಧತೆ ಬಗ್ಗೆ ಸ್ಂಶೋಧನೆ ಮಾಡಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ಜಾನ್ ಡಾಲ್ಟನ್ ಅವರು ೬ ಸೆಪ್ಟೆಂಬರ್ ೧೭೬೬ ಇಂಗ್ಲೆಂಡ್ ಅಲ್ಲಿ ಜನಿಸಿದರು.ಅವರು ನೇಕಾರನ ಮಗ. ಆರಂಭಿಕ ಶಿಕ್ಷಣವನ್ನು ಅವರ ತಂದೆಯಿಂದ ಕ್ವೇಕರ್ ಜಾನ್ ಫ್ಲೆಚರಿಂದ ಪಡೆದುಕೊಂಡರು.ಕ್ವೇಕರ್ ಜಾನ್ ಫ್ಲೆಚರ್ ಅವರು ಪಾರ್ಡ್ಶಾ ಹಾಲಿನಲ್ಲಿ ಒಂದು ಖಾಸಗಿ ಶಾಲೆಯನ್ನು ನಿರ್ಮಿಸಿದರು.ಅವರ ಕುಟುಂಬ ಬಡತನದಲ್ಲಿ ಇದ್ದ ಕಾರಣ, ಅವರು ಹತ್ತು ವಯಸಿನಲ್ಲಿಯೇ ದುಡಿಯಲು ಪ್ರಾರಂಭಿಸಿದರು.ಅವರು ಹನ್ನೆರಡು ವಯಸ್ಸಿನಲ್ಲಿ ಶಾಲಾ ಮಕ್ಕಳಿಗೆ ಭೋದಿಸಲು ಪ್ರಾರಂಭಿಸಿ ಹದಿನಾಲ್ಕು ವಯಸ್ಸಿನಲ್ಲಿ ಲ್ಯಾಟಿನ್ ಭಾಷೆಯನ್ನು ಕಲಿತುಕೊಂಡರು ಎಂದು ಹೇಳಲಾಗಿದೆ.

ಆರಂಭಿಕ ವೃತ್ತಿ[ಬದಲಾಯಿಸಿ]

ಜಾನ್ ಡಾಲ್ಟನ್ ಹದಿನೈದು ವಯಸ್ಸಿದ್ದಾಗ ಅವರ ಅಣ್ಣನಾದ ಜೊನಾಥನ್ ಅವರೊಂದಿಗೆ ಶಾಲೆಯನ್ನು ನಡೆಸಿದರು. ಅವರ ಮನೆಯಿಂದ ಆ ಶಾಲೆಯೂ ೪೫ ಕಿಲೋಮೀಟರ್ ದೂರವಿತ್ತು. ೨೩ ವಯಸ್ಸಿನಲ್ಲಿ, ಅವರು ಕಾನೂನಿನ ಬಗ್ಗೆ ಅಥವಾ ವೈದಕೀಯದಲ್ಲಿ ಅಧ್ಯಾಯನ ಮಾಡುತಿದ್ದರು ಆದರೆ ಅವರ ಕುಟುಂಬ ಅದನ್ನು ಪ್ರೋತ್ಸಾಹಿಸಲಿಲ್ಲ ಏಕೆಂದರೆ ಅವರು ಭಿನ್ನಮತಿಯರವರಾಗಿದ್ದ ಕಾರಣ ಅವರು ಆಂಗ್ಲ ಭಾಷೆಯ ವಿಶ್ವವಿದ್ಯಾಲಯದಲ್ಲಿ ಓದುವ ಹಾಗೆ ಇರಲಿಲ್ಲ.ಅವರು ಬಹಳಷ್ಟು ವೈಜ್ಞಾನಿಕ ಜ್ಞಾನವನ್ನು ಜಾನ್ ಗಫ್ ಅವರಿಂದ ಕಲಿತರು.ಜಾನ್ ಗಫ್ ಅವರು ಕುರುಡು ತತ್ವಜ್ಞಾನಿಯಾಗಿ ವಿಜ್ಞಾನ ಮತ್ತು ಕಲೆಯ ಬಗ್ಗೆ ಹೇಳಿಕೊಡುತಿದ್ದರು. ೨೭ ವಯಸ್ಸಿನಲ್ಲಿ, ಜಾನ್ ಡಾಲ್ಟನ್ ಅವರು ಗಣಿತ ಹಾಗು ನೈಸರ್ಗಿಕ ತತ್ವಶಾಸ್ತ್ರದ ಶಿಕ್ಷಕರಾಗಿ ಮ್ಯಾಂಚೆಸ್ಟರ್ನಲಿದ್ದ ನ್ಯೂ ಕಾಲೇಜಿನಲ್ಲಿ ಕೆಲಸ ನಿರ್ವಹಿಸಿದರು.೩೪ ವಯಸ್ಸಿನವರೆಗೂ ಅಲ್ಲಿಯೆ ಕೆಲಸ ನಿರ್ವಹಿಸಿದರು.

ಡಾಲ್ಟನ್ ಅವರು ಆಲೋಚಿಸುತ್ತಿರುವ ಚಿತ್ರ

ವೈಜ್ಞಾನಿಕ ಕೊಡುಗೆ[ಬದಲಾಯಿಸಿ]

ಪವನಶಾಸ್ತ್ರ[ಬದಲಾಯಿಸಿ]

ಅವರು ಜಾರ್ಜ್ ಹ್ಯಾಡ್ಲಿ ಅವರ ವಾತಾವರಣದ ಹರವಿನ ಬಗ್ಗೆ ಮರು ಆವಿಷ್ಕರಿಸಿದರು.ಅವರಿಗೆ ೨೭ ವಯಸ್ಸಿದ್ದಾಗ ಹವಾಮಾನ ಪ್ರಕಟಣೆಗಳು ಮತ್ತು ಪ್ರಬಂಧಗಳ ಬಗ್ಗೆ ಪ್ರಕತಿಸಿದರು.ಅವರ ೩೫ ವಯಸ್ಸಿನಲ್ಲಿ ಇಂಗ್ಲೀಷ್ ವ್ಯಾಕರಣದ ಬಗ್ಗೆ ಬರೆದರು. ಇದು ಅವರ ಎರಡನೆ ಪುಸ್ತಕವಾಗಿದೆ.

ಪರಮಾಣು ಸಿದ್ಧಾಂತ[ಬದಲಾಯಿಸಿ]

ಅವರ ಅತ್ಯಂತ ಪ್ರಮುಖವಾದ ಕೊಡುಗೆಯೂ ರಸಾಯನಶಾಸ್ತ್ರದಲ್ಲಿ ಪರಮಾಣು ಸಿದ್ಧಾಂತವಾಗಿತ್ತು.

  • ಎಲ್ಲಾ ದ್ರವ್ಯವು ಪರಮಾಣುಗಳೆಂಬ ಅತಿ ಚಿಕ್ಕ ಕಣಗಳಿಂದ ಮಾಡಲ್ಪಟ್ಟದೆ.
  • ಪರಮಾಣುಗಳು ಅಭೇಧ್ಯ ಕಣಗಳಾಗಿದ್ದು, ರಾಸಾಯನಿಕ ಕ್ರಿಯೆಯಲ್ಲಿ ಇವುಗಳನ್ನು ಸೃಷ್ಟಿಸಲೂ ಸಾಧ್ಯವಿಲ್ಲ ಅಥವಾ ನಾಶಗೊಳಿಸಲು ಸಾಧ್ಯವಿಲ್ಲ.
  • ಒಂದು ನಿರ್ದಿಷ್ಟ ಧಾತುವಿನ ಪರಮಾಣುಗಳು ರಾಶಿ ಮತ್ತು ರಾಸಾಯನಿಕ ಗುಣಗಳಲ್ಲಿ ಒಂದೇ ತೆರೆನಾಗಿರುತ್ತವೆ.
  • ವಿಭಿನ್ನ ಧಾತುಗಳ ಪರಮಾಣುಗಳು ವಿಭಿನ್ನ ರಾಶಿ ಮತ್ತು ರಾಸಾಯನಿಕ ಗುಣಗಳನ್ನು ಹೊಂದಿರುತ್ತವೆ.
  • ಕನಿಷ್ಟ ಪೂರ್ಣಸಂಖ್ಯೆಯ ಅನುಪಾತದಲ್ಲಿ ಪರಮಾಣುಗಳ ಸಂಯೋಜನೆ ಹೊಂದಿ ಸಂಯುಕ್ತಗಳನ್ನು ಉಂಟುಮಾಡುತ್ತದೆ.
  • ಒಂದು ಸಂಯುಕ್ತದಲ್ಲಿನ ಪರಮಾಣುಗಳ ವಿಧಗಳು ಮತ್ತು ಸಾಪೇಕ್ಷ ಸಂಖ್ಯೆಗಳು ಸ್ಥಿರವಾಗಿರುತ್ತದೆ.

ಅವರು ರಸಾಯನಶಾಸ್ತ್ರ ಮತ್ತು ಪವನಶಾಸ್ತ್ರದಲ್ಲಿ ಲೇಖನಗಳನ್ನು ಬರೆದರು.ಆದರೆ ಅವು ಯಾವು ತಿಳಿಯಲ್ಪಟ್ಟಿಲ್ಲ

ಪರಮಾಣು ತೂಕ[ಬದಲಾಯಿಸಿ]

ಸಾಪೇಕ್ಷ ಪರಮಾಣು ತೂಕದ ಟೇಬಲ್ ಮುದ್ರಿಸಿದರು. ಆರು ಅಂಶಗಳನ್ನು ಈ ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತವೆ. ಅವು ಹೈಡ್ರೋಜನ್, ಆಮ್ಲಜನಕ, ಸಾರಜನಕ, ಇಂಗಾಲ, ಸಲ್ಫರ್ ಮತ್ತು ರಂಜಕ.ಹೈಡ್ರೋಜನ್ನ ಪರಮಾಣು ತೂಕವೂ ಒಂದು ಎಂದು ಒಪ್ಪಿಕೊಳ್ಳಲಾಯಿತು.

ಇತರ ತನಿಖೆಗಳು[ಬದಲಾಯಿಸಿ]

ಡಾಲ್ಟನ್ ಅವರು ಪ್ರಕಟಿಸಿದ ಲೇಖನಗಳು ಇವುಗಳ ಬಗ್ಗೆಯಾಗಿತ್ತು. ಅವು ಮಳೆ ಮತ್ತು ಇಬ್ಬನಿ, ವಸಂತದ ಮೂಲ (ಜಲಗೋಳ) , ಉಷ್ಣ, ಆಕಾಶದ ಬಣ್ಣ. ಹಬೆ, ಪ್ರತಿಬಿಂಬ ಮತ್ತು ಬೆಳಕಿನ ವಕ್ರೀಭವನ .

ಪ್ರಾಯೋಗಿಕ ಪ್ರಸ್ತಾಪ[ಬದಲಾಯಿಸಿ]

ಅವರು ಕ್ಲೋರಿನಿನ ಸಾಂಪ್ರದಾಯಿಕ ವಿಧಾನಗಳ ಬಗ್ಗೆ ಬರೆದರು.

ಇತರ ಪ್ರಕಟಣೆಗಳು[ಬದಲಾಯಿಸಿ]

೧೮೪೦ರಲ್ಲಿ ಫಾಸ್ಫೇಟ್ಗಳು ಮತ್ತು ಆರ್ಸನೇಟ್ಸ್ ಬಗ್ಗೆ ಬರೆದರು. ಆದರೆ ರಾಯಲ್ ಸೊಸೈಟಿಯವರು ನಿರಾಕರಿಸಿದರು.ಕೆಲವು ಅನ್ಹೈಡ್ರೈಡ್ಗಳೂ ನೀರಿನಲ್ಲಿ ಕರಗಿದಾಗ ,ಅದರ ಸಂಪುಟದಲ್ಲಿ ಯಾವುದೇ ಹೆಚ್ಚಳವಾಗಲಿಲ್ಲ; ಇದರ ನಿರ್ಣಯವೇನೆಂದರೆ ಲವಣಗಳು ನೀರಿನ ರಂಧ್ರಗಳಲ್ಲಿ ಪ್ರವೇಶಿಸುತ್ತದೆ.

ಸಾರ್ವಜನಿಕ ಜೀವನ[ಬದಲಾಯಿಸಿ]

ಅವರು ಪರಮಾಣು ಸಿದ್ಧಾಂತ ಪ್ರತಿಪಾದಿಸಿದ ಮುಂಚೆಯೇ, ಅವರು ಈಗಾಗಲೇ ಗಣನೀಯ ವೈಜ್ಞಾನಿಕ ಖ್ಯಾತಿ ಗಳಿಸಿದರು. ೧೮೧೦ರಲ್ಲಿ ಸರ್ ಹಂಫ್ರಿ ಡೇವಿ ರಾಯಲ್ ಸೊಸೈಟಿಯ ಫೆಲೋಷಿಪ್ ಅಭ್ಯರ್ಥಿಯಾಗಿ ಸೇರಿಕೊಳ್ಳಲು ಕೇಳಿಕೊಂಡರು. ಆದರೆ ಡಾಲ್ಟನ್ ನಿರಾಕರಿಸಿದರು. ಜೇಮ್ಸ್ ಪ್ರೆಸ್ಕಾಟ್ ಜೌಲ್ ಅವರು ಡಾಲ್ಟನವರ ಪ್ರಖ್ಯಾತ ವಿಧ್ಯಾರ್ಥಿಗಳಲ್ಲಿ ಒಬ್ಬರು.

ವೈಯಕ್ತಿಕ ಜೀವನ[ಬದಲಾಯಿಸಿ]

ಡಾಲ್ಟನ್ ಮದುವೆಯಾಗಿಲ್ಲ. ಅವರಿಗೆ ಕೇವಲ ಕೆಲವೇ ನಿಕಟ ಸ್ನೇಹಿತರಿದ್ದರು. ಅವರು ಸಾಧಾರಣ ಮತ್ತು ನಿಗರ್ವಿ ವೈಯಕ್ತಿಕ ಜೀವನವನ್ನು ಸಾಗಿದರು. ಇಪ್ಪತ್ತಾರು ವರ್ಷಗಳ ಡಾಲ್ಟನ್ ಸಾವಿನ ಮೊದಲುಅವರು ರೆವರೆಂಡ್ (ಮತ್ತು ಶ್ರೀಮತಿ) ಡಬ್ಲ್ಯೂ ಜಾನ್ಸ್, ಪ್ರಕಟಿತ ಸಸ್ಯಶಾಸ್ತ್ರಜ್ಞ, ಜಾರ್ಜ್ ಸ್ಟ್ರೀಟ್ ಮ್ಯಾಂಚೆಸ್ಟರ್ ಮನೆಯ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ೧೮೪೪ರಲ್ಲಿ ಡಾಲ್ಟನ್ ಮತ್ತು ಜಾನ್ಸ್ ಅದೇ ವರ್ಷದಲ್ಲಿ ನಿಧನರಾದರು. ಮ್ಯಾಂಚೆಸ್ಟರ್ನಲ್ಲಿ ಪ್ರಯೋಗಾಲಯದ ಕೆಲಸವನ್ನು ಮತ್ತು ಪಾಠಗಳು ಮುರಿಯಿತು.. ಅದರ ಕಾರಣವೇನೆಂದರೆ ಡಾಲ್ಟನ್ ದೈನಂದಿನ ಸುತ್ತಿನಲ್ಲಿ ಕೇವಲ ಲೇಕ್ ಡಿಸ್ಟ್ರಿಕ್ಟ್ ವಾರ್ಷಿಕ ವಿಹಾರ ಮತ್ತು ಲಂಡನ್ಗೆ ಸಾಂದರ್ಭಿಕ ಭೇಟಿಗಳು ಮುರಿಯಿತು. ೧೮೨೨ರಲ್ಲಿ ಅವರು ಪ್ಯಾರಿಸ್ಗೆ ಒಂದು ಸಣ್ಣ ಭೇಟಿ ನೀಡಿದರು ಆಗ ಅವರು ವಿಜ್ಞಾನದ ಅನೇಕ ವಿಶೇಷ ಪುರುಷರನ್ನು ಭೇಟಿಯಾದರು.[೧][೨]


ವೈಕಲ್ಯ ಮತ್ತು ಸಾವು[ಬದಲಾಯಿಸಿ]

೧೮೩೭ರಲ್ಲಿ ಡಾಲ್ಟನ್ ಲಘು ಪಾರ್ಶ್ವವಾಯುವಿನಿಂದ ಬಳಲುತ್ತಿದರು.. ೧೮೩೮ರಲ್ಲಿ ಎರಡನೆ ಬಾರಿ ಬಳಲಿದರು. ಇದರ ಪರಿಣಾಮವಾಗಿ ಅವರು ಭಾಷಣ ದುರ್ಬಲತೆಗೆ ಒಳಗಾದರು. ಆದರು ಅವರು ಪ್ರಯೋಗಗಳನ್ನು ಬಿಡಲಿಲ್ಲ. ೧೮೪೪ರಲ್ಲಿ ಮತ್ತೊಮ್ಮೆ ಪಾರ್ಶ್ವವಾಯುವಿಗೆ ಬಲಿಯಾದರು. ೨೭ ಜುಲೈ ೧೮೪೪ ರಂದು, ಮ್ಯಾಂಚೆಸ್ಟರ್ ಅಲ್ಲಿ ಡಾಲ್ಟನ್ ಅವರ ಹಾಸಿಗೆಯಿಂದ ಕುಸಿದರು.ತನ್ನ ಸೇವಕ ಇದ್ದನು ನೋಡಿದರು. ಅವರ ದೇಹವನ್ನು ಮ್ಯಾಂಚೆಸ್ಟರಿನಾ ಆರ್ದ್ವಿಕ್ ಸ್ಮಶಾನದಲ್ಲಿ ಸಮಾಧಿ ಮಾಡಿದರು. ಅವರ ಹೆಸರು ಲೇಖಕ ಸಸ್ಯಶಾಸ್ತ್ರೀಯ ಹೆಸರಿನ ವಿಭಾಗದಲ್ಲಿ ಬಳಸಲಾಯಿತು

ಗಮನಾರ್ಹ ಪ್ರಶಸ್ತಿ[ಬದಲಾಯಿಸಿ]

೧೮೨೮ ರಲ್ಲಿ ರಾಯಲ್ ಪದಕ ಅವರಿಗೆ ನೀಡಲಾಯಿತು

ಆಸ್ತಿ[ಬದಲಾಯಿಸಿ]

ಮ್ಯಾಂಚೆಸ್ಟರ್ ಕೇಂದ್ರದಲ್ಲಿ ಡೀನ್ಸ್ಗೇಟ್ ಮತ್ತು ಆಲ್ಬರ್ಟ್ ಸ್ಕ್ವೇರ್ ಸಂಪರ್ಕಿಸುವ ಜಾನ್ ಡಾಲ್ಟನ್ ಸ್ಟ್ರೀಟ್ ಇದೆ. ಒಂದು ಚಂದ್ರನ ಕುಳಿ ಡಾಲ್ಟನ್ ಹೆಸರಿಡಲಾಗಿದೆ ವರ್ಣಾಂಧತೆ "ವರ್ಣ ಅಂಧತೆ ಒಂದು ಸಾಮಾನ್ಯ ಪದ ಮತ್ತು" ಡಾಲ್ಟೊನಿಯನ್ ಬಣ್ಣ ಕುರುಡು "ನಿಜವಾದ ಫ್ರೆಂಚ್ ಪದ" ಡಾಲ್ಟನ್ ಕೃತಿಯ ಗೌರವಾರ್ಥವಾಗಿ, ಅನೇಕ ರಸಾಯನ ವಿಜ್ಞಾನಿಗಳು ಮತ್ತು ಜೀವರಸಾಯನ ಅಂಕಿತವನ್ನು ಡಾಲ್ಟನ್ (ಸಂಕ್ಷಿಪ್ತ ಡಾ) (ಇನ್ನೂ ಅನಧಿಕೃತ ಮುಂತಾದವು) ಪರಮಾಣು ದ್ರವ್ಯರಾಶಿ ಮಾನ ಸೂಚಿಸಲು ಬಳಸಬಹುದು.



ಉಲ್ಲೇಖಗಳು[ಬದಲಾಯಿಸಿ]

  1. Smith, R. Angus (1856). Memoir of John Dalton and History of the Atomic Theory. London: H. Bailliere. p. 279. ISBN 1-4021-6437-8.
  2. George Hadley Encyclopædia Britannica. Accessed 30 April 2009.