ಮೋಟಾರು ವಾಹನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೆನ್ಜ್ ಕೆಂಪನಿಯ ಮೊದಲಿನ ಮಾದರಿ
೨೦೦೧-೨೦೦೭ ರ ಸಾಲಿನಲ್ಲಿ ವಾಹನಗಳ ಬಳಕೆಯಲ್ಲಿ ಹೆಚ್ಚಳದ ನಕ್ಷೆ.
ಪ್ರತಿ ೧೦೦೦ ಜನರಿಗೆ ಇರುವ ವಾಹನಗಳ ಸಂಖ್ಯೆಯನ್ನು ತೋರಿಸುವ ಪ್ರಪಂಚದ ನಕ್ಷೆ

ಮೋಟಾರು ವಾಹನವು ಮೋಟಾರನ್ನು (ಕೆಲವೊಮ್ಮೆ ಎಂಜಿನ್ ಎಂದು ತಿಳಿಯಲಾಗುವ) ಒಳಗೊಂಡ ಸಾಗಣೆಗೆ ಬಳಸಲಾಗುವ ಒಂದು ಯಂತ್ರ. ಅಂತರ್ದಹನ ಇಂಜಿನ್ ಮೋಟಾರಿನ ಅತ್ಯಂತ ಸಾಮಾನ್ಯ ಆಯ್ಕೆಯಾಗಿರುತ್ತದಾದರೂ, ವಿದ್ಯುತ್ ಯಂತ್ರಗಳು ಅಥವಾ ಇತರ ಪ್ರಕಾರಗಳನ್ನು ಕೆಲವೊಮ್ಮೆ ಬಳಸಲಾಗುತ್ತದೆ. ಭೂವಾಹನಗಳು ಸಾಮಾನ್ಯವಾಗಿ ಚಕ್ರಗಳನ್ನು ಹೊಂದಿರುತ್ತವೆ ಮತ್ತು ಸಾಮಾನ್ಯವಾಗಿ ರಸ್ತೆಗಳ ಮೇಲೆ ಕಾರ್ಯನಿರ್ವಹಿಸುತ್ತವೆ.