ಅಚ್ಚುಮೊಳೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Diagram of a cast metal sort. a face, b body or shank, c point size, 1 shoulder, 2 nick, 3 groove, 4 foot.

ಅಚ್ಚುಮೊಳೆಯು ಯಾವುದೇ ಭಾಷೆಯ ಅಕ್ಷರ, ಅಂಕಿ, ಸಂಕೇತಗಳನ್ನು ಕಾಗದದ ಮೇಲೆ ಮುದ್ರಿಸಲು ವಿಶೇಷ ರೀತಿಯಲ್ಲಿ ತಯಾರಿಸಲಾಗಿರುವ ಮೊಳೆ. ಇವನ್ನು ತಯಾರಿಸಲು ಪ್ರತಿ ಅಕ್ಷರ ಅಥವಾ ಚಿಹ್ನೆಗೂ ಪ್ರತ್ಯೇಕ ಮಾತೃಕೆಯನ್ನು (ಮ್ಯಾಟ್ರಿಕ್ಸ್) ಮೊದಲು ತಯಾರಿಸಿಕೊಂಡು ಅನಂತರ ಸೀಸ, ತವರ ಮತ್ತು ಆಂಟಿಮೊನಿ ಲೋಹಗಳಿಂದ ಸೂಕ್ತ ಮಿಶ್ರಣವನ್ನು ತಯಾರಿಸಿ ಮಾತೃಕೆಗಳಲ್ಲಿ ತುಂಬಿ ಮೊಳೆಯನ್ನು ಎರಕ ಹೊಯ್ಯುವರು. ಕೆಲವು ವೇಳೆ ಈ ಮಿಶ್ರ ಲೋಹದಲ್ಲಿ ತಾಮ್ರ ಮತ್ತು ನಿಕ್ಕಲ್‍ಗಳೂ ಸೇರಿರುತ್ತವೆ.

ಅಚ್ಚುಮೊಳೆಗಳು ಸಮಕೋನಾಕಾರದಲ್ಲಿದ್ದು, 23317ಮಿ.ಮೀ. ಎತ್ತರ ಇರುತ್ತದೆ. ಇವುಗಳ ಅಗಲ ಮತ್ತು ದಪ್ಪವನ್ನು ಅಂತರರಾಷ್ಟ್ರೀಯ ಮುದ್ರಣ ಸಂಘದ ನಿಯಮವನ್ನನುಸರಿಸಿ ನಿಗದಿ ಮಾಡಲಾಗಿದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: