ವಿಷಯಕ್ಕೆ ಹೋಗು

ಕೋಬಾಲ್ಟ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೨೭ ಕಬ್ಬಿಣಕೊಬಾಲ್ಟ್ನಿಕಲ್
-

Co

Rh
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಕೊಬಾಲ್ಟ್, Co, ೨೭
ರಾಸಾಯನಿಕ ಸರಣಿtransition metal
ಗುಂಪು, ಆವರ್ತ, ಖಂಡ 9, 4, d
ಸ್ವರೂಪmetallic with gray tinge
ಅಣುವಿನ ತೂಕ58.933195(5)g·mol1
ಋಣವಿದ್ಯುತ್ಕಣ ಜೋಡಣೆ[Ar] 3d7 4s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 15, 2
ಬಣ್ಣa grayish silver
ಸಾಂದ್ರತೆ (ಕೋ.ತಾ. ಹತ್ತಿರ)8.90 g·cm3
ದ್ರವಸಾಂದ್ರತೆ at ಕ.ಬಿ.7.75 g·cm3
ಕರಗುವ ತಾಪಮಾನ1768 K
(1495 °C, 2723 °ಎಫ್)
ಕುದಿಯುವ ತಾಪಮಾನ3200 K
(2927 °C, 5301 °F)
ಸಮ್ಮಿಲನದ ಉಷ್ಣಾಂಶ16.06 kJ·mol1
ಭಾಷ್ಪೀಕರಣ ಉಷ್ಣಾಂಶ377 kJ·mol1
ಉಷ್ಣ ಸಾಮರ್ಥ್ಯ(25 °C) 24.81 J·mol1·K1
ಆವಿಯ ಒತ್ತಡ
P/Pa1101001 k10 k100 k
at T/K179019602165242327553198
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು4 , 3, 2, 1
(amphoteric oxide)
ವಿದ್ಯುದೃಣತ್ವ1.88 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)152 pm
ತ್ರಿಜ್ಯ ಸಹಾಂಕ126 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆferromagnetic
ವಿದ್ಯುತ್ ರೋಧಶೀಲತೆ(20 °C) 62.4 nΩ·m
ಉಷ್ಣ ವಾಹಕತೆ(300 K) 100 W·m1·K1
ಉಷ್ಣ ವ್ಯಾಕೋಚನ(25 °C) 13.0 µm·m1·K1
ಶಬ್ದದ ವೇಗ (ತೆಳು ಸರಳು)(20 °C) 4720 m/s
ಯಂಗ್ ಮಾಪಾಂಕ209 GPa
ವಿರೋಧಬಲ ಮಾಪನಾಂಕ75 GPa
ಸಗಟು ಮಾಪನಾಂಕ180 GPa
ವಿಷ ನಿಷ್ಪತ್ತಿ 0.31
ಮೋಸ್ ಗಡಸುತನ5.0
Vickers ಗಡಸುತನ1043 MPa
ಬ್ರಿನೆಲ್ ಗಡಸುತನ700 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-48-4
ಉಲ್ಲೇಖನೆಗಳು

ಕೊಬಾಲ್ಟ್ ಒಂದು ಬೆಳ್ಳಿಯಂತೆ ಬಿಳಿ ಬಣ್ಣದ ಮೂಲಧಾತು ಲೋಹವಾಗಿದೆ. ಇದನ್ನು ಸಿ.ಒ ಚಿಹ್ನೆಯಿಂದ ಗುರುತಿಸಲಾಗಿದೆ ಮತ್ತು ಇದರ ಪರಮಾಣು ಸಂಖ್ಯೆ ೨೭. ಇದು ಗುಣಲಕ್ಷಣಗಳಲ್ಲಿ ಕಬ್ಬಿಣ ಹಾಗೂ ನಿಕಲ್ ಲೋಹಗಳನ್ನು ಹೋಲುತ್ತದೆ. ಅವುಗಳಂತೆ ಇದು ಕೂಡಾ ಅಯಸ್ಕಾಂತೀಯ ಗುಣವನ್ನು ಹೊಂದಿದೆ. ಇದನ್ನು ಸ್ವೀಡನ್ ದೇಶದ ಜಾರ್ಜ್ ಬ್ರಾಂಡ್ (Georg Brandt) ಎಂಬವರು ೧೭೩೭ರಲ್ಲಿ ಕಂಡುಹಿಡಿದರು. ಕೋಬಾಲ್ಟ್ ನಿರ್ದಿಷ್ಟ ೮.೯ ಗುರುತ್ವಾಕರ್ಷಣೆಯೊಂದಿಗೆ 'ಫೆರ್ರೊಮ್ಯಾಗ್ನೆಟಿಕ್ ಲೋಹವಾಗಿದೆ'.

ಲಭ್ಯತೆ

[ಬದಲಾಯಿಸಿ]

ಉಲ್ಕಾಪಿಂಡಗಳಲ್ಲಿ ಲೋಹರೂಪದ ಕೋಬಾಲ್ಟ್ ಅಲ್ಪಪರಿಮಾಣದಲ್ಲಿ ಸಿಕ್ಕುತ್ತದೆ. ಕೋಬಾಲ್ಟ್ ಮುಖ್ಯವಾಗಿ ದೊರೆಯುವುದು ಆರ್ಸೆನಾಯಿಡ್ ಸಂಯುಕ್ತರೂಪದಲ್ಲಿ-ಸ್ಮಾಲ್‍ಟೈಟ್ ನ್ಸ್ , ಲಿನ್ನೆಯಾಟ್, ಎರಿಥ್ರಾಯ್ಟ್ ಎಂಬವುಗಳಲ್ಲಿ. ಭಾರತದಲ್ಲಿ ಕೋಬಾಲ್ಟ್ ಅದುರುಗಳು ರಾಜಸ್ಥಾನ ಮತ್ತು ನೇಪಾಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಕ್ಕುತ್ತವೆ. ಕೆನಡಆಂಟೇರಿಯೋದ ಹತ್ತಿರ ನಿಕಲ್ ಮತ್ತು ಬೆಳ್ಳಿಮಿಶ್ರಿತವಾದ ಕೋಬಾಲ್ಟಿನ ಅದುರುಗಳಲ್ಲಿ ಹೆಚ್ಚಿನ ಮೊತ್ತದಲ್ಲಿ ಕೋಬಾಲ್ಟ್ ಸಿಕ್ಕುತ್ತದೆ.

ತಯಾರಿಕೆ

[ಬದಲಾಯಿಸಿ]

ಅದುರನ್ನು ಪುಡಿಪುಡಿಮಾಡಿ ಚೆನ್ನಾಗಿ ಅರೆದು ಆ ಮೇಲೆ ನೊರೆ ತೇಲುವ ವಿಧಾನದಿಂದ (ಫ್ರಾತ್ ಫ್ಲೊಟೇಶನ್ ಮೆಥಡ್) ಕೇಂದ್ರೀಕರಿಸುತ್ತಾರೆ. ಅನಂತರ ಅದನ್ನು ದೊಡ್ಡ ರಾಶಿಮಾಡಿ ಹುರಿಯುವುದರಿಂದ ಅದರಲ್ಲಿರುವ ಗಂಧಕ ಮತ್ತು ಆರ್ಸೆನಿಕ್‍ಗಳು ಆಕ್ಸೈಡ್ ಆಗಿ ಪರಿವರ್ತನೆಗೊಳ್ಳುತ್ತವೆ. ಕಾಯಿಸಿದ ಅದುರನ್ನು ಸುಣ್ಣ ಮತ್ತು ಮರಳಿನೊಡನೆ ಮಿಶ್ರಮಾಡಿ ಸಣ್ಣ ಊದು ಕುಲುಮೆಯಲ್ಲಿ (ಬ್ಲಾಸ್ಟ್ ಫರ್ನೇಸ್) ಕರಗುವ ವರೆಗೆ ಕಾಯಿಸುತ್ತಾರೆ. ಹೀಗೆ ಕಾಯಿಸುವುದರಿಂದ ಕಬ್ಬಿಣದ ಹೆಚ್ಚು ಮೊತ್ತ ಕಬ್ಬಿಣದ ಸಿಲಿಕೇಟ್ ರೂಪದಲ್ಲಿಯೂ ಉಳಿದ ಅದುರು ಎರಡು ಪದರಗಳಲ್ಲಿಯೂ ಬೇರ್ಪಡುತ್ತವೆ. ಮೇಲಿನ ಪದರದ ಅಶುದ್ಧ ಕೋಬಾಲ್ಟ್, ನಿಕಲ್, ಕಬ್ಬಿಣ ಮತ್ತು ತಾಮ್ರದ ಆರ್ಸೆನಾಯಿಡ್ ಇರುತ್ತವೆ. ಇದಕ್ಕೆ ಸ್ಪಿಸ್ ಎಂದು ಹೆಸರು. ಕೆಳಗಿನ ಪದರದ ಅಶುದ್ಧ ಬೆಳ್ಳಿ ಇರುತ್ತದೆ. ಮೇಲಿನ ಸ್ಪಿಸನ್ನು ಬೇರ್ಪಡಿಸಿ, ಆರಿಸಿ, ಚೆನ್ನಾಗಿ ಪುಡಿಪುಡಿಮಾಡಿ ಉಪ್ಪಿನೊಂದಿಗೆ ಮಿಶ್ರಮಾಡಿ ಪರಾವರ್ತಿನಿ (ರೆವರ್ಬರೇಟರಿ) ಕುಲುಮೆಯಲ್ಲಿ ಕಾಯಿಸುತ್ತಾರೆ. ಈ ಪ್ರಯೋಗದಿಂದ ಆರ್ಸೆನಿಕ್ ಆಕ್ಸೈಡ್ ರೂಪದಿಂದ ಆರ್ಸೆನಿಕ್ ಹೊರಗೆ ಹೋಗುತ್ತದೆ. ಉಳಿದ ಲೋಹಗಳಾದ ನಿಕಲ್, ಕೋಬಾಲ್ಟ್ ಮತ್ತು ತಾಮ್ರಗಳು ಕ್ಲೋರೈಡ್ ಆಗಿ ಮಾರ್ಪಡುತ್ತವೆ. ಈ ಕ್ಲೋರೈಡುಗಳನ್ನು ನೀರಿನಲ್ಲಿ ಕರಗಿಸಿ ಸಾರವನ್ನು ತೆಗೆಯುತ್ತಾರೆ. ಸಾರದಲ್ಲಿರುವ ತಾಮ್ರವನ್ನು ಕಬ್ಬಿಣ ತುಣುಕುಗಳನ್ನು ಹಾಕಿಯೂ ಕಬ್ಬಿಣವನ್ನು ಖಡುವನ್ನು ಹಾಕಿಯೂ ತೆಗೆಯುತ್ತಾರೆ. ಅನಂತರ ಇದನ್ನು ಸೋಸಿ, ಅದಕ್ಕೆ ಕಾಸ್ಟಿಕ್ ಸೋಡ ಹಾಕುತ್ತಾರೆ. ಇದರಿಂದ ಕೋಬಾಲ್ಟ್ ಮತ್ತು ನಿಕಲ್ಲುಗಳು ಹೈಡ್ರಾಕ್ಸೈಡ್ ರೂಪದಲ್ಲಿ ಒತ್ತರಿಸುತ್ತವೆ. ಈ ಒತ್ತರಗಳನ್ನು (ಪ್ರೆಸಿಪಿಟೇಟ್ಸ್) ಒಣಗಿಸಿ ದಹನ ಮಾಡುವುದರಿಂದ ಅವು ಕೋಬಾಲ್ಟ್ ಮತ್ತು ನಿಕಲ್ ಆಕ್ಸೈಡಾಗಿ ಪರಿವರ್ತನೆಗೊಳ್ಳುತ್ತವೆ. ಕೋಬಾಲ್ಟನ್ನು ನಿಕಲ್‍ನಿಂದ ಬೇರ್ಪಡಿಸಲಿಕ್ಕೆ ಹಲವಾರು ವಿಧಾನಗಳಿವೆ. ಅವುಗಳಲ್ಲಿ ಮೋಂಡ್ ಎಂಬಾತನ ವಿಧಾನ ಹೆಚ್ಚು ಬಳಕೆಯಲ್ಲಿದೆ. ಇದರಲ್ಲಿ ಇಂಗಾಲದ ಮಾನಾಕ್ಸೈಡನ್ನು 500 ಸೆಂ.ಉಷ್ಣತೆಯಲ್ಲಿ ಬಿಡಲಾಗುತ್ತದೆ. ಇದರಿಂದ ನಿಕಲ್ ಅನಿಲರೂಪ ನಿಕಲ್ ಕಾರ್ಬೊನಿಲ್ [ಓi(ಅo)4] ಆಗುತ್ತದೆ. ಆದರೆ ಕೋಬಾಲ್ಟ್, ತಾಮ್ರ ಮತ್ತು ಕಬ್ಬಿಣ ಈ ಪರಿಸ್ಥಿತಿಯಲ್ಲಿ ಅನಿಲರೂಪದ ಕಾರ್ಬೊನಿಲ್ ಆಗುವುದಿಲ್ಲ. ಕೋಬಾಲ್ಟ್ ಮತ್ತು ನಿಕಲ್ ಆಕ್ಸೈಡುಗಳನ್ನು ಹೈಡ್ರೊಕ್ಲೋರಿಕ್ ಆಮ್ಲದಲ್ಲಿ ಕರಗಿಸಿ ಆ ದ್ರಾವಣವನ್ನು ಖಡುವಿನಿಂದ ತಡಸ್ಥೀಕರಿಸುವುದು ಇನ್ನೊಂದು ವಿಧಾನ. ಇದಕ್ಕೆ ಚೆಲುವೆ ಪುಡಿ (ಬ್ಲೀಚಿಂಗ್ ಪೌಡರ್) ಹಾಕುವುದರಿಂದ ಕೋಬಾಲ್ಟ್ ಹೈಡ್ರಾಕ್ಸೈಡ್ ರೂಪದಿಂದ ಒತ್ತರಿಸಲ್ಪಡುತ್ತದೆ. ಆದರೆ ನಿಕಲ್ ಈ ಪರಿಸ್ಥಿತಿಯಲ್ಲಿ ಒತ್ತರಿಸುವುದಿಲ್ಲ.ಕೋಬಾಲ್ಟ್ ಹೈಡ್ರಾಕ್ಸೈಡನ್ನು ತೊಳೆದು ಒಣಗಿಸಿ, ದಹಿಸುವುದರಿಂದ ಅದು ಕೋಬಾಲ್ಟೊ ಆಕ್ಸೈಡ್ ಆಗುತ್ತದೆ. ಹೀಗೆ ಪಡೆದ ಆಕ್ಸೈಡನ್ನು ಲೋಹಕ್ಕೆ ಅಪಕರ್ಷಿಸಲು ಅದನ್ನು ಇಂಗಾಲ ಮತ್ತು ಸುಣ್ಣದ ಹರಳುಗಳೊಂದಿಗೆ ವಿದ್ಯುತ್ ಕುಲುಮೆಯಲ್ಲಿ ಕಾಯಿಸಬೇಕು. ಈ ಅಪಕರ್ಷಣೆಯನ್ನು ಜಲಜನಕ ಅನಿಲದಿಂದಾಗಲಿ ಇಂಗಾಲದ ಮಾನಾಕ್ಸೈಡಿನಿಂದಾಗಲಿ ಇಲ್ಲವೇ ಅಲ್ಯೂಮಿನಿಯಂನಿಂದಾಗಲಿ ಮಾಡಬಹುದು. ಈ ಅಪಕರ್ಷಣೆಯನ್ನು ಅಲ್ಯೂಮಿನಿಯಂನಿಂದ ಮಾಡುವುದು ಅತಿ ಸುಲಭ. ಇದಕ್ಕೆ ಗೋಲ್ಡ್‍ಶ್ಮಿಟ್ ವಿಧಾನ ಎಂದು ಹೆಸರು. ಇದರಿಂದ ನಿಕಟವಾದ (ಕಾಂಪ್ಯಾಕ್ಟ್) ಲೋಹ ಸಿಕ್ಕುತ್ತದೆ. ಕೋಬಾಲ್ಟ್ ಸಲ್ಫೇಟ್, ಸ್ವಲ್ಪ ಅಮೋನಿಯ ಮತ್ತು ಅಮೋನಿಯಂ ಸಲ್ಫೇಟ್ ಇವುಗಳ ದ್ರಾವಣವನ್ನು ವಿದ್ಯುದ್ವಿಶ್ಲೇಷಿಸಿ ಅತಿಶುದ್ಧವಾದ ಧಾತುವನ್ನು ಪಡೆಯಬಹುದು. ಕೋಬಾಲ್ಟ್ ಆಕ್ಸೈಡನ್ನು ಫಾರ್ಮಿಕ್ ಆಮ್ಲದಲ್ಲಿ ಕರಗಿಸಿ ದ್ರಾವಣವನ್ನು ವಿದ್ಯುದ್ವಿಶ್ಲೇಷಿಸಿದರೆ 99.9% ಶುದ್ಧತೆಯುಳ್ಳ ಲೋಹವನ್ನು ಪಡೆಯಬಹುದೆಂದು ಹೇಳಲಾಗುತ್ತದೆ.

ಭೌತಗುಣಗಳು

[ಬದಲಾಯಿಸಿ]

ಕೋಬಾಲ್ಟ್ ಬೆಳ್ಳಿಯ ಹಾಗೆ ಬೆಳ್ಳಗೆ ಹಾಗೂ ಹೊಳಪುಳ್ಳ ಬಿರುಸು ಲೋಹ. ಅದನ್ನು ತಗಡಾಗಿ ತಟ್ಟಬಹುದು. ಮತ್ತು ತಂತಿಯಾಗಿ ಎಳೆಯಬಹುದು. ಇದರ ಲೋಹಚುಂಬಕ ಗುಣ 1.1500 ಸೆಂ. ಉಷ್ಣತೆಯ ವರೆಗೂ ಉಳಿದಿರುತ್ತದೆ. ಸಾಮಾನ್ಯ ಉಷ್ಣತೆಗಳಲ್ಲಿ ಒಣಗಾಳಿ ಈ ಲೋಹದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಆದರೆ ಮೇಲ್ಮಟ್ಟದ ಉಷ್ಣತೆಯಲ್ಲಿ ಅದು ಉರಿಯುವುದು. ಹುಡಿಹಿಟ್ಟು ಕೋಬಾಲ್ಟ್‍ಗೆ ಅಗ್ನಿಗ್ರಾಹಕ ಗುಣವಿದೆ. ನೀರು ಕೋಬಾಲ್ಟಿನ ಮೇಲೆ ವರ್ತಿಸುವುದಿಲ್ಲ. ಆದರೆ ತಪ್ತವಾದ ಲೋಹ ಉಗಿಯನ್ನು ವಿಘಟಿಸುತ್ತದೆ.ಹೈಡ್ರೊಕ್ಲೋರಿಕ್ ಮತ್ತು ಸಲ್ಫ್ಯೂರಿಕ್ ಆಮ್ಲಗಳ ಸಂಗಡ ಕೋಬಾಲ್ಟ್ ವರ್ತಿಸಿ ಕೋಬಾಲ್ಟಸ್ ಲವಣಗಳನ್ನೂ ಜಲಜನಕ ಅನಿಲವನ್ನೂ ಉತ್ಪಾದಿಸುತ್ತದೆ. ನೈಟ್ರಿಕ್ ಆಮ್ಲದಲ್ಲಿ ಕೋಬಾಲ್ಟ್ ಸುಲಭವಾಗಿ ಕರಗುತ್ತದೆ. ಆದರೆ ಹೊಗೆಬೀರುವ ತಣ್ಣಗಿನ ಸಾರ ನೈಟ್ರಿಕ್ ಆಮ್ಲದಲ್ಲಿ ಅದು ನಿಷ್ಕ್ರಿಯ. ಜಲಜಲನಕ, ಗಂಧಕ, ರಂಜಕ ಮತ್ತು ಬೊರಾನುಗಳು ಕೋಬಾಲ್ಟಿನ ಮೇಲೆ ವರ್ತಿಸುತ್ತವೆ. ಆದರೆ ನೈಟ್ರೊಜನ್ ವರ್ತಿಸುವುದಿಲ್ಲ.

ಸಂಯುಕ್ತಗಳು

[ಬದಲಾಯಿಸಿ]

ಕೋಬಾಲ್ಟಸ್ ಸಂಯುಕ್ತಗಳು ಕೋಬಾಲ್ಟಿನ ಅತಿಸಾಮಾನ್ಯ ಸಂಯುಕ್ತಗಳು. ಈ ಸಂಯುಕ್ತಗಳಲ್ಲಿ ಕೋಬಾಲ್ಟಿನ ವೇಲೆನ್ಸಿ 2. ಇವು ಸ್ಥಿರ ಸಂಯುಕ್ತಗಳು. ಇವು ಸಜಲವಾಗಿದ್ದರೆ ನೀಲವಾಗಿಯೂ ನಿರ್ಜಲವಾಗಿದ್ದರೆ ಗುಲಾಬಿ ಅಥವಾ ಕೆಂಪು ಆಗಿಯೂ ಇರುತ್ತವೆ. ನೀರಿನಲ್ಲಿ ಮಿಶ್ರಿತವಾಗಿದ್ದರೆ ಗಡುಸಾದ ಕೆಂಪು ಬಣ್ಣ ಇರುತ್ತದೆ. ಸರಳ ಕೋಬಾಲ್ಟಿಕ್ ಸಂಯುಕ್ತಗಳಲ್ಲಿ ಕೋಬಾಲ್ಟಿನ ವೇಲೆನ್ಸಿ 3. ಸಂಕೀರ್ಣ ಸಂಯುಕ್ತಗಳಲ್ಲಿ ಇದು 3 ಮತ್ತು 4. ಕೋಬಾಲ್ಟಿನ ವೇಲೆನ್ಸಿ 4 ಇರುವ ಸಂಕೀರ್ಣ ಸಂಯುಕ್ತಗಳು ವಿಪುಲವಾಗಿವೆ.

shelf with blue glass vessels
Cobalt blue glass
blue glass bottle with neck
Cobalt-colored glass

ಕೋಬಾಲ್ಟ್ ಪ್ರಾಥಮಿಕವಾಗಿ, ಮ್ಯಾಗ್ನೆಟ್ ತಯಾರಿಕೆಯಲ್ಲಿ, ಉಡುಗೆ ನಿರೋಧಕ ಮತ್ತು ಉನ್ನತ ಶಕ್ತಿಯ ಮಿಶ್ರಲೋಹಗಳಲ್ಲಿ ಬಳಸಲಾಗುತ್ತದೆ. ಅಜೈವಿಕ ರೂಪದಲ್ಲಿ ಕೋಬಾಲ್ಟ್ - ಬ್ಯಾಕ್ಟೀರಿಯಾ, ಪಾಚಿ ಮತ್ತು ಶಿಲೀಂಧ್ರಗಳ ಒಂದು ಮೈಕ್ರೋನ್ಯೂಟ್ರಿಯಂಟ್ ಆಗಿದೆ. ಇದನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇದಲ್ಲದೆ ಕೆಲವು ಅತ್ಯಂತ ಗಟ್ಟಿಯಾದ ವಸ್ತುಗಳ ತಯಾರಿಕೆಯಲ್ಲಿ, ಅಯಸ್ಕಾಂತೀಯ ವಸ್ತುಗಳ ತಯಾರಿಕೆಯಲ್ಲಿ, ಉಷ್ಣ ನಿರೋಧಕ ತಯಾರಿಕೆಯಲ್ಲಿ, ವಿಟಮಿನ್ B-12ರ ತಯಾರಿಕೆಯಲ್ಲಿ ಬಳಕೆಯಲ್ಲಿದೆ. ಇದರ ಒಂದು ಸಮಸ್ಥಾನಿ (isotope) ಕೊಬಾಲ್ಟ್-೬೦ ಕ್ಯಾನ್ಸರ್ ನ ಚಿಕಿತ್ಸೆಯಲ್ಲಿ ಉಪಯೋಗಿಸಲ್ಪಡುತ್ತದೆ. ಮಿಶ್ರಲೋಹಗಳ ಉತ್ಪಾದನೆಯಲ್ಲಿ ಕೋಬಾಲ್ಟಿನ ಉಪಯೋಗ ಉಂಟು. ಸ್ಥಿರಲೋಹಚುಂಬಕಗಳ ರಚನೆಗೆ 35% ಕೋಬಾಲ್ಟ್ ಇರುವ ಕೋಬಾಲ್ಟ್ ಉಕ್ಕು ಬೇಕಾಗುತ್ತದೆ. ಕೋಬಾಲ್ಟ್, ಕ್ರೋಮಿಯಂ ಮತ್ತು ಅಲ್ಪಾಂಶ ಟಂಗ್‍ಸ್ಟನ್ ಇರುವ ಸ್ಟೆಲ್ಲೈಟನ್ನ್ನು ಶಸ್ತ್ರಚಿಕಿತ್ಸೆಯ ಉಪಕರಣಗಳ ಮತ್ತು ಕರ್ತನೋಪಕರಣಗಳ ನಿರ್ಮಾಣದಲ್ಲಿ ಉಪಯೋಗಿಸುತ್ತಾರೆ. ಕೋಬಾಲ್ಟ್, ಕಬ್ಬಿಣ ಮತ್ತು ಕ್ರೋಮಿಯಂ ಇರುವ ಮಿಶ್ರಲೋಹ ಕೋಕ್ರೋಮ್ ಎಂಬುದು ವಿದ್ಯುತ್ ಕೈಗಾರಿಕೆಯಲ್ಲೂ ಕರ್ತನೋಪಕರಣಗಳ ತಯಾರಿಕೆಯಲ್ಲಿಯೂ ಅವಶ್ಯ. ಗಾಜಿನ ಮತ್ತು ಪಿಂಗಾಣಿ ಪಾತ್ರೆಗಳಿಗೆ ಬಣ್ಣ ಕೊಡುವ ಕಾರ್ಯದಲ್ಲಿ ಕೋಬಾಲ್ಟನ್ನು ತಳಹದಿಯನ್ನಾಗಿ ಉಪಯೋಗಿಸುತ್ತಾರೆ. ವೈದ್ಯದಲ್ಲಿ, ಮುಖ್ಯವಾಗಿ ಏಡಿಗಂತಿ ಸಂಬಂಧಿ ವ್ರಣಗಳ ನಿರ್ಮೂಲನ ಚಿಕಿತ್ಸೆಯಲ್ಲಿ, ಕೋಬಾಲ್ಟಿನ ಉಪಯೋಗ ಉಂಟು.

ಕೋಬಾಲ್ಟ್ ಆಧಾರಿತ ನೀಲಿ ವರ್ಣದ್ರವ್ಯಗಳನ್ನು ಮಾನವರು ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ, ಹೆಚ್ಚಾಗಿ ಕನ್ನಡಿಗಳಿಗೆ ನೀಲಿ ಬಣ್ಣವನ್ನು ನೀಡಲು . ಇದನ್ನು ಮಡಿಕೆಗಳು, ಕಪ್‌ಗಳು, ಶಾಯಿ ಮತ್ತು ಇತರ ವಸ್ತುಗಳನ್ನು ಬಣ್ಣ ಮಾಡಲು ಸಹ ಬಳಸಲಾಗುತ್ತದೆ. ಆಧುನಿಕ ಕಾಲದಲ್ಲಿ, ಹೆಚ್ಚಿನ ಕೋಬಾಲ್ಟ್ ಅನ್ನು ಆಫ್ರಿಕಾದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಜಾಂಬಿಯಾದಲ್ಲಿ ಗಣಿಗಾರಿಕೆ ಮಾಡಲಾಗುತ್ತದೆ . ಬಲವಾದ ಫೆರೋಮ್ಯಾಗ್ನೆಟಿಸಮ್ ಹೊಂದಿರುವ ಈ ಮೂಲಧಾತುವು ಹೆಚ್ಚು ಕಾಂತೀಯವಾಗಿದೆ ಮತ್ತು ಇದನ್ನು ಉದ್ಯಮದಲ್ಲಿ ಕಾಂತೀಯ ಮತ್ತು ಗಟ್ಟಿಯಾದ ಲೋಹವಾಗಿ ಬಳಸಲಾಗುತ್ತದೆ. ಮಾನವರು ಸೇರಿದಂತೆ ಅನೇಕ ಜೀವಿಗಳು ಬದುಕುಳಿಯಲು ಸಣ್ಣ ಪ್ರಮಾಣದ ಕೋಬಾಲ್ಟ್-ಭರಿತ ಆಹಾರಗಳ ಅಗತ್ಯವಿರುತ್ತದೆ.

ಉತ್ಪಾದನೆ

[ಬದಲಾಯಿಸಿ]
2017 ರಲ್ಲಿ ಕೋಬಾಲ್ಟ್‌ನ ಒಟ್ಟು ಉತ್ಪಾದನೆ ಮತ್ತು ನಿಕ್ಷೇಪಗಳು []
ದೇಶ ಉತ್ಪಾದನೆ (ಟನ್‌ಗಳು) ಸ್ಟಾಕ್ (ಟನ್‌ಗಳು)
ಟೆಂಪ್ಲೇಟು:Country data DR Congo 64,000 3,500,000
Russia 5,600 250,000
Australia 5,000 1,200,000
Canada 4,300 250,000
Cuba 4,200 500,000
Philippines 4,000 280,000
Madagascar 3,800 150,000
Papua New Guinea 3,200 51,000
Zambia 2,900 270,000
New Caledonia 2,800 -
South Africa 2,500 29,000
United States 650 23,000
ಇತರ ದೇಶಗಳು 5,900 560,000
ಜಗತ್ತಿನ ಒಟ್ಟು 110,000 7,100,000

{ಆವರ್ತ ಕೋಷ್ಟಕ}}

ಉಲ್ಲೇಖಗಳು

[ಬದಲಾಯಿಸಿ]
  1. Cobalt Statistics and Information (PDF), U.S. Geological Survey, 2018, archived (PDF) from the original on 10 जनवरी 2019, retrieved 7 जनवरी 2019 {{citation}}: Check date values in: |access-date= and |archive-date= (help)
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: