ವಿಷಯಕ್ಕೆ ಹೋಗು

ಸೆಲ್ಸಿಯಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೆಲ್ಸಿಯಸ್ - ಉಷ್ಣತೆಯ ಅಳತೆಯ ಮಾಪಕಪಟ್ಟಿಯಾಗಿದ್ದು , ಅದರ ಮಾನಕವೂ ಆಗಿದೆ. ಇದನ್ನು ೧೭೪೨ನಲ್ಲಿ ಸ್ವೀಡಿಂನ್ ದೇಶದ ಖಗೋಳಶಾಸ್ತ್ರಜ್ಞ ಆಂಡರ್ಸ್ ಸೆಲ್ಸಿಯಸ್ ಕಂಡುಹಿಡಿದನು. ಇದನ್ನು ಸೆಂಟಿಗ್ರೇಡು ಎಂದೂ ಕರೆಯುತ್ತಾರೆ . ಇದಕ್ಕೆ ಸ್ವೀಡಿಷ್ ಖಗೋಳಶಾಸ್ತ್ರಜ್ಞ ಆಂಡರ್ಸ್ ಸೆಲ್ಷಿಯಸ್ ನ ಹೆಸರನ್ನು ಇಡಲಾಗಿದೆ. ೧೯೪೮ ರವರೆಗೆ ಇದನ್ನು ಸೆಂಟಿಗ್ರೇಡು ಎಂದು ಕರೆಯುತ್ತಿದ್ದರು. ಲ್ಯಾಟಿನ್ ಭಾಷೆಯಲ್ಲಿ 'ಸೆಂಟಂ' ಎಂದರೆ ನೂರು, 'ಗ್ರೇಡಸ್' ಎಂದರೆ ಮೆಟ್ಟಿಲುಗಳು. ಇಂಗ್ಲೀಶಿನಲ್ಲಿ ಇದನ್ನು °C ಎಂಬ ಸಂಕೇತದಿಂದಲೂ ಕನ್ನಡದಲ್ಲಿ °ಸೆ. ಎಂದೂ ಸಂಕ್ಷೇಪಿಸಿ ಬರೆಯುತ್ತಾರೆ. 1744 ರಿಂದ 1954, ರವರೆಗೆ ೦ °C ಅನ್ನು ನೀರು ಹೆಪ್ಪುಗಟ್ಟಿ ಘನೀಭೂತವಾಗುವ ಬಿಂದು ಎಂದೂ , ೧೦೦ °C ಅನ್ನು ನೀರಿನ ಕುದಿಯುವ ಬಿಂದು ಎಂದೂ ವ್ಯಾಖ್ಯಾನಿಸಲಾಗುತ್ತಿತ್ತು. ಸಾಮಾನ್ಯವಾಗಿ ಶಾಲೆಗಳಲ್ಲಿ ಹೀಗೆಯೇ ಕಲಿಸಲಾಗುವುದಾದರೂ , ಅಂತರ್ರಾಷ್ಟ್ರೀಯವಾಗಿ ವ್ಯಾಖ್ಯೆಯನ್ನು ನಿಖರವಾಗಿ ಮಾಡುವಾಗ ಆದರ್ಶ ಶೂನ್ಯ ತಾಪಮಾನವನ್ನು ಅಧಾರವಾಗಿ ಬಳಸುತ್ತಾರೆ. ಈ ವ್ಯಾಖ್ಯೆಯು ಈಗ ಕೆಲ್ವಿನ್ ಮಾಪಕಕ್ಕೆ ಸಂಬಂಧಿಸಿದೆ.