ಫಾಹ್ರೆನ್ಹೈಟ್
Jump to navigation
Jump to search
ಫ್ಯಾರನ್ಹೀಟ್ ಎನ್ನುವುದು ಒಂದು ಉಷ್ಣತೆಯ ಮಾಪನ ಪ್ರಮಾಣವಾಗಿದ್ದು 1724ರಲ್ಲಿ ಭೌತಶಾಸ್ತ್ರಜ್ಞ ಡೇನಿಯಲ್ ಗೇಬ್ರಿಯಲ್ ಫ್ಯಾರನ್ಹೀಟ್ (1686-1736), ಇದನ್ನು ಸೂಚಿಸಿದನು. ಅವನ ಹೆಸರನ್ನೇ ಈ ತಾಪಮಾನ ಮಾನದಂಡಕ್ಕೆ ಇಡಲಾಗಿದೆ. ಈ ಪ್ರಮಾಣದಲ್ಲಿ ನೀರು ಘನೀಕರಿಸುವ ಉಷ್ಣತೆಯನ್ನು 32 ಡಿಗ್ರಿ ಎಂದೂ , ನೀರಿನ ಕುದಿಯವ ಬಿಂದುವನ್ನು 212 ಡಿಗ್ರಿ ಎಂದೂ ವ್ಯಾಖ್ಯಾನಿಸಲಾಗಿದೆ. ಹೆಚ್ಚಿನ ದೇಶಗಳಲ್ಲಿ ಫ್ಯಾರನ್ಹೀಟ್ ಪ್ರಮಾಣದ ಬದಲಾಗಿ ಸೆಲ್ಸಿಯಸ್ ಪ್ರಮಾಣವನ್ನು 20 ನೇ ಶತಮಾನದ ನಡುವಿನ ನಂತರದ ಕಾಲಾವಧಿಯಲ್ಲಿ ಬಳಕೆಗೆ ತರಲಾಯಿತು. ಆದರೂ ಕೆನಡಾ ದೇಶವು ಫ್ಯಾರನ್ಹೀಟ್ ಪ್ರಮಾಣವನ್ನು ಸೆಲ್ಷಿಯಸ್ ಜೊತೆಗೆ ಬಳಸಬಹುದಾದ ಪೂರಕ ಪ್ರಮಾಣ ಎಂದು ಉಳಿಸಿಕೊಂಡಿದೆ. ಫ್ಯಾರನ್ಹೀಟ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದ ಅಧಿಕೃತ ಪ್ರಮಾಣವಾಗಿ ಉಳಿದಿದೆ.
ಇಂಗ್ಲೀಶಿನಲ್ಲಿ ಇದನ್ನು °F ಎಂಬ ಸಂಕೇತದಿಂದಲೂ ಕನ್ನಡದಲ್ಲಿ °ಫ್ಯಾ. ಎಂದೂ ಸಂಕ್ಷೇಪಿಸಿ ಬರೆಯುತ್ತಾರೆ.