ಉಷ್ಣತೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೂರ್ಯನಿಂದ ಸಿಗುವ ಉಷ್ಣತೆ ಭೂಮಿಯ ಜೀವರಾಶಿಯ ಅಸ್ತಿತ್ವಕ್ಕೆ ಮತ್ತು ಬೆಳವಣಿಗೆಗೆ ಕಾರಣವಾದ ಮೂಲ ಶಕ್ತಿ. ಉಷ್ಣತೆಯ ವಿಙ್ಞಾನ ಮತ್ತು ಅದರ ಚಲನೆ/ಪರಿಣಾಮಗಳ ಅಧ್ಯಯನಕ್ಕೆ ಥರ್ಮೋಡೈನಾಮಿಕ್ಸ್ ಎನ್ನುತ್ತಾರೆ.ಉಷ್ಣತೆಯ ಪ್ರಸರಣವನ್ನು ಹಲವು ರೀತಿಯಿಂದ ಮಾಡಬಹುದು.

ಉಷ್ಣತೆ ಅಥವಾ "ಕಾವು" ಅಥವಾ "ಬಿಸಿ" ಒಂದು ಶಕ್ತಿರೂಪವು.ಭೌತಶಾಸ್ತ್ರ ಥೆರ್ಮೋಡೈನಾಮಿಕ್ಸ್ ನಲ್ಲಿ ಇದನ್ನು ಶಕ್ತಿಯನ್ನು ಒಂದು ವಸ್ತು ಅಥವಾ ವ್ಯವಸ್ಥೆಯಿಂದ ಬೇರೆಡೆಗೆ ಪ್ರಸಾರಿಸುವ ಕ್ರಿಯೆಯೆಂದು ಅರ್ಥೈಸಲಾಗುತ್ತದೆ.ಉಷ್ಣತೆಯಿಂದ ಶಕ್ತಿ ಪ್ರಸರಣವು ಔಷ್ಣ ಸಂಪರ್ಕದಿಂದಾಗುತ್ತದೆ. ಔಷ್ಣ ಸಂಪರ್ಕವೆಂದರೆ ವಸ್ತುವಿನ ಮೇಲೆ ಯಾವುದೇ ರೀತಿಯ ಬಲ ಪ್ರಯೋಗಿಸದೇ ಅದರಲ್ಲಿ ಶಕ್ತಿಯನ್ನು ರವಾನಿಸುವುದು ಅಥವಾ ಪ್ರಸರಿಸುವುದು. ಅತ್ಯಂತ ಸಣ್ಣ ಪ್ರಮಾಣದ ಉಷ್ಣತೆ δQ ಯನ್ನು ತನ್ನ ಕನಿಷ್ಟ ತಾಪಮಾನ T (ಅಬ್ಸೊಲ್ಯೂಟ್ ಟೆಂಪೆರೇಚರ್), ಮತ್ತು ಔಷ್ಣೀಯ ಸ್ತಿತಿಸ್ಥಾಪಕತ್ವ (ಥರ್ಮಲ್ ಇಕ್ವಿಲಿಬ್ರಿಯಮ್) ದಲ್ಲಿರುವ ವಸ್ತುವಿಗೆ ರವಾನಿಸಿದರೆ, ಅ ಉಷ್ಣತೆಯ ಪ್ರಮಾಣವು TdS ಎಂದು ಪರಿಗಣಿಸಲ್ಪಡುತ್ತದೆ . ಇಲ್ಲಿ S ವಸ್ತುವಿನ "ಎಂಟ್ರೋಪಿ".

"http://kn.wikipedia.org/w/index.php?title=ಉಷ್ಣತೆ&oldid=407346" ಇಂದ ಪಡೆಯಲ್ಪಟ್ಟಿದೆ