ವಿಷಯಕ್ಕೆ ಹೋಗು

ವಿದ್ಯುದೃಣತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
This electrostatic potential map shows how the oxygen atom has a more negative charge (red) than the positive (blue) hydrogen atoms of a water molecule .

ವಿದ್ಯುದೃಣತ್ವ ಅಥವಾ ವಿದ್ಯುತ್ ಋಣತೆ (Electronegetivity) ಎಂದರೆ ಎಲೆಕ್ಟ್ರಾನ್‍ಗಳನ್ನು ಉಳಿಸಿಕೊಳ್ಳಲು ಅಥವಾ ಪಡೆದುಕೊಳ್ಳಲು ಮತ್ತು ಋಣಾತ್ಮಕ ಅಯಾನ್‍ಗಳನ್ನು ರೂಪಿಸಲು ಪರಮಾಣುವೊಂದು ಹೊಂದಿರುವ ಸಾಪೇಕ್ಷ ಸಾಮರ್ಥ್ಯ.[]ಉದಾಹರಣೆ ಹ್ಯಾಲೋಜನ್.ಇದರ ಸಂಕೇತಾಕ್ಷರ 'χ'ಒಂದು ವಸ್ತುವಿನ ವಿದ್ಯುತ್ ಋಣತೆಯು ಅದರ ಪರಮಾಣು ಸಂಖ್ಯೆ ಮತ್ತು ಅದರ ವ್ಯಾಲೆನ್ಸ್ ಎಲೆಕ್ಟ್ರಾನ್‍ಗಳು ನ್ಯೂಕ್ಲಿಯಸ್‍ನಿಂದ ಹೊಂದಿರುವ ದೂರದಿಂದ ಪರಿಣಾಮ ಹೊಂದುತ್ತದೆ.ವಿದ್ಯುತ್ ಋಣತೆಯ ಸಂಖ್ಯೆಯು ದೊಡ್ಡದಿದ್ದಷ್ಟು ಆ ವಸ್ತುವು ಇತರ ವಸ್ತುಗಳ ಎಲೆಕ್ಟ್ರಾನ್‍ಗಳನ್ನು ತನ್ನತ್ತ ಸೆಳೆದುಕೊಳ್ಳುವ ಕ್ರಿಯೆ ಹೆಚ್ಚುತ್ತದೆ.ಇದನ್ನು ಅಳತೆ ಮಾಡಲು ಯಾವುದೇ ನಿರ್ದಿಷ್ಟ ಮಾಪಕಗಳಿಲ್ಲದಿದ್ದರೂ ಹಲವಾರು ಅಂಶಗಳನ್ನು ಪರಿಗಣಿಸಿ ಇದನ್ನು "ಪೌಲಿಂಗ್ ಸ್ಕೇಲ್"ನ ಮೂಲಕ ನಿರೂಪಿಸಲಾಗುತ್ತಿದೆ. ವಿದ್ಯುತ್ ಋಣತೆಯ ವಿರುದ್ಧ ಕ್ರಿಯೆ ವಿದ್ಯುತ್ ಧನತೆ. ಇದು ಎಲೆಕ್ಟ್ರಾನ್‍ಗಳನ್ನು ದಾನಮಾಡಲು ವಸ್ತುವೊಂದು ಹೊಂದಿರುವ ಸಾಮರ್ಥ್ಯ.

ಉಲ್ಲೇಖಗಳು

[ಬದಲಾಯಿಸಿ]
  1. ಕೆ.ಎಲ್.ಗೋಪಾಲಕೃಷ್ಣ ರಾವ್, ಟಿ.ಆರ್.ಅನಂತರಾಮು, ಸಿ.ಆರ್.ಕೃಷ್ಣರಾವ್ (2012). ನವಕರ್ನಾಟಕ ವಿಜ್ಞಾನ-ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೆಟ್ ಲಿಮಿಟೆಡ್. pp. ೫೮೧. ISBN 978-81-8467-198-8.{{cite book}}: CS1 maint: multiple names: authors list (link)


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]