ಸುತ್ತಿಗೆ
Jump to navigation
Jump to search
ಆಧುನಿಕ ಸುತ್ತಿಗೆಯು ಉದ್ದನೆಯ ಹಿಡಿಕೆಗೆ ಜೋಡಿಸಲಾಗಿರುವ ಭಾರದ "ಶಿರ" ಇರುವ ಒಂದು ಉಪಕರಣ. ಒಂದು ವಸ್ತುವಿನ ಚಿಕ್ಕ ಪ್ರದೇಶಕ್ಕೆ ಹೊಡೆತ ಕೊಡಲು ಇದನ್ನು ಬಲವಾಗಿ ಚಲಿಸಲಾಗುತ್ತದೆ. ಇದು ಉದಾಹರಣೆಗೆ ಕಟ್ಟಿಗೆಯೊಳಗೆ ಮೊಳೆಗಳನ್ನು ಹೊಡೆಯಲು, ಲೋಹಕ್ಕೆ ಆಕಾರ ಕೊಡಲು (ಕುಲುಮೆಯಲ್ಲಿ ಮಾಡಿದಂತೆ), ಅಥವಾ ಬಂಡೆಯನ್ನು ಪುಡಿಪುಡಿ ಮಾಡಲು ಇರಬಹುದು.[೧] ಸುತ್ತಿಗೆಗಳನ್ನು ವ್ಯಾಪಕ ಶ್ರೇಣಿಯ ಹೊಡೆಯುವ, ಆಕಾರ ಕೊಡುವ, ಮತ್ತು ಮುರಿಯುವ ಅನ್ವಯಗಳಿಗೆ ಬಳಸಲಾಗುತ್ತದೆ.
ಆಧುನಿಕ ಸುತ್ತಿಗೆಯ ಶಿರವನ್ನು ಸಾಮಾನ್ಯವಾಗಿ ಗಡಸುತನ ಬರಲು ತಾಪ ಸಂಸ್ಕಾರ ಮಾಡಿದ ಉಕ್ಕಿನಿಂದ ತಯಾರಿಸಲಾಗಿರುತ್ತದೆ, ಮತ್ತು ಹಿಡಿಕೆಯನ್ನು (ಕಾವು ಎಂದೂ ಕರೆಯಲ್ಪಡುತ್ತದೆ) ಸಾಮಾನ್ಯವಾಗಿ ಕಟ್ಟಿಗೆ ಅಥವಾ ಪ್ಲಾಸ್ಟಿಕ್‍ನಿಂದ ತಯಾರಿಸಲಾಗಿರುತ್ತದೆ.
ಉಲ್ಲೇಖಗಳು[ಬದಲಾಯಿಸಿ]
- ↑ "How hammer is made - material, making, history, used, components, structure, steps". www.madehow.com (in ಇಂಗ್ಲಿಷ್). Retrieved 2018-08-21.
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Types of Hammers (images and descriptions)
- "Choosing a Hammer". Popular Science, June 1960, pp. 164–167.