ಪಾಕಿಸ್ತಾನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
اسلامی جمہوریۂ پاکستان
ಇಸ್ಲಾಮಿ ಜಮ್‌ಹೂರಿಯ-ಇ-ಪಾಕಿಸ್ತಾನ್

ಪಾಕಿಸ್ತಾನ ಇಸ್ಲಾಮಿ ಗಣರಾಜ್ಯ
ಪಾಕಿಸ್ತಾನ ದೇಶದ ಧ್ವಜ ಪಾಕಿಸ್ತಾನ ದೇಶದ ರಾಷ್ಟ್ರಚಿಹ್ನೆ
ಧ್ವಜ ರಾಷ್ಟ್ರಚಿಹ್ನೆ
ಧ್ಯೇಯ: ಇಮಾನ್, ಇತ್ತೆಹಾದ್, ತನ್‍ಜೀಮ್
(ಉರ್ದು ಭಾಷೆಯಲ್ಲಿ: "Faith, Unity, Discipline")
ರಾಷ್ಟ್ರಗೀತೆ: Qaumi Tarana

Location of ಪಾಕಿಸ್ತಾನ

ರಾಜಧಾನಿ ಇಸ್ಲಾಮಾಬಾದ್
೩೩°೪೦′N ೭೩°೧೦′E
ಅತ್ಯಂತ ದೊಡ್ಡ ನಗರ ಕರಾಚಿ
ಅಧಿಕೃತ ಭಾಷೆ(ಗಳು) ಉರ್ದು, ಆಂಗ್ಲ
ಸರಕಾರ Islamic Federal Republic
Independence From United Kingdom 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ ೮೮೦,೨೫೪ ಚದರ ಕಿಮಿ ;  (೩೪th)
  ೩೩೯,೮೬೮ ಚದರ ಮೈಲಿ 
 - ನೀರು (%) ೩.೧
ಜನಸಂಖ್ಯೆ  
 - ೨೦೦೪ರ ಅಂದಾಜು ೧೬೩,೯೮೫,೩೭೩[೧] (೬th)
 - ಸಾಂದ್ರತೆ ೨೧೧ /ಚದರ ಕಿಮಿ ;  (೫೩rd)
೫೨೯ /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೫ರ ಅಂದಾಜು
 - ಒಟ್ಟು $೪೦೪.೬ billion (೨೬th)
 - ತಲಾ $೨,೬೨೮ (೧೨೮th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೧)
೦.೫೨೭ (೧೩೫th) – medium
ಕರೆನ್ಸಿ Rupee (Rs.) (PKR)
ಸಮಯ ವಲಯ PST (UTC+೫:೦೦)
 - ಬೇಸಿಗೆ (DST) not observed (UTC+೬:೦೦)
ಅಂತರ್ಜಾಲ TLD .pk
ದೂರವಾಣಿ ಕೋಡ್ +೯೨

ಪಾಕಿಸ್ತಾನ - ಭಾರತೀಯ ಉಪಖಂಡದಲ್ಲಿನ ದೇಶಗಳಲ್ಲೊಂದು.

National symbols of Pakistan (Official)
National animal Markhor.jpg
National bird Keklik.jpg
National tree Pedrengo cedro nel parco Frizzoni.jpg
National flower Jasminum officinale.JPG
National heritage animal Snow Leopard 13.jpg
National heritage bird Vándorsólyom.JPG
National aquatic marine mammal Platanista gangetica.jpg
National reptile Persiancrocodile.jpg
National amphibian Bufo stomaticus04.jpg
National fruit Chaunsa.JPG
National mosque Shah Faisal Mosque (Islamabad, Pakistan).jpg
National mausoleum
National river Indus river from karakouram highway.jpg
National mountain K2, Mount Godwin Austen, Chogori, Savage Mountain.jpg

ಪಾಕಿಸ್ತಾನ ಪ್ರದೇಶದ ಪೂರ್ವ ಇತಿಹಾಸ[ಬದಲಾಯಿಸಿ]

ಪಾಕಿಸ್ತಾನದ ಉದಯ[ಬದಲಾಯಿಸಿ]

ಪಾಕೀಸ್ತಾನ -2014[ಬದಲಾಯಿಸಿ]

ನವಾಜ್ ಷರೀಫ್ ರ ಹಿನ್ನೆಲೆ ಮತ್ತು ಸಂಕಷ್ಟ

 • 1999 ರಲ್ಲಿ (ಎರಡು ಬಾರಿ ಪ್ರಧಾನಿಯಾಗಿದ್ದ) ಷರೀಫರ ಮೇಲೆ ಮಿಲಿಟರಿ ನ್ಯಾಯಾಲಯವು ಮಾನವ ಅಪಹರಣ ಕೊಲೆ ಪ್ರಯತ್ನ ಹೈಜಾಕಿಂಗ್ , ಭಯೋತ್ಪಾದನೆ ,ಭ್ರಷ್ಟಾಚಾರ ಆಪಾದನೆಗಳನ್ನು ಹೊರಿಸಿ ವಿಚಾರಣೆ ನಡೆಸಿ ಮರಣದಂಡನೆ ಕೊಡುವುದರಲ್ಲಿತ್ತು. ಆರೆ ಸೌದಿಅರೇಬಿಯಾ ಯುಎಸ್ಎ ಗಳ ವತ್ತಡಕ್ಕೆ ಮಣಿದು ೧೪ವರ್ಷ ಸೆರೆವಾಸ, US$400,000 ದಂಡವನ್ನು ವಿಧಿಸಿತು ನಂತರ ಸೌದಿ ಅರೆಬಿಯಾದ ಮಧ್ಯಸ್ತಿಕೆಯಿಂದ ಸೌದಿ ಅರೇಬಿಯಾಕ್ಕೆ 21 ವರ್ಷಗಳ ಕಾಲ ಪಾಕೀಸ್ತಾನ ರಾಜಕೀಯಕ್ಕೆ ಮರಳಬಾರದೆಂಬ ಷರತ್ತಿನೊಂದಿಗೆ ಸೌದಿ ಅರೇಬಿಯಾಕ್ಕೆ ಗಡೀಪಾರು ಮಾಡಲಾಯಿತು .
 • ಷರೀಫ್, ಸಾಚಾತನಕ್ಕೆ ಸರಿಯಾದ ಪುರಾವೆ ಒದಗಿಸ ಕಾರಣ ಲಾಹೋರ್ ಉನ್ನತ ನ್ಯಾಯಾಲಯ ಅವರಿಗೆ ತೆರಿಗೆ ವಂಚನೆ ಯ ಬಾಬ್ತು U.S. $400,000 ತೆರಲು ಹೇಳಿತು-(25 Novmber 2007).ನ್ಯಾಯಾಲಯವು ಜೂನ್ 2008 ರಲ್ಲಿ ಹಿಂದಿನ ಅಪರಾಧಗಳಿಗೆ ವಿನಾಯತಿ ನೀಡಿ ಪುನಃ ಪಾರ್ಲಿಮೆಂಟ್` ಚುನಾವಣೆ ಗಳಲ್ಲಿ ಭಾಗವಹಿಸಲು ಅನುಮತಿ ನೀಡಿತು.
 • ಜೂನ್ 2008 ರ ಉಪಚುನಾವಣೆಯಲ್ಲಿ(by-elections,) ಷರಿಫ್ ರ'ಪಾಕೀಸ್ತಾನ ಮುಸ್ಲಿಮ್ ಲೀಗ್ (N) 91 ರಾಷ್ಟ್ರೀಯ ಅಸೆಂಬ್ಲಿಯ ಸ್ಥಾನಗಳನ್ನೂ 180 ಪ್ರಾಂತೀಯ ಅಸಸೆಂಬ್ಲೀ ಸ್ಥಾನಗಳನ್ನು ಪಡೆಯಿತು. ದಿ. 2 ಏಪ್ರಿಲ್ 2010, ಪುನಃ ರಾಜ್ಯಾಂಗ ತಿದ್ದುಪಡಿಯಾಗಿ ಷರೀಫರು ಮೋರನೇ ಬಾರಿ ಪ್ರಧಾನ ಮಂತ್ರಿಯಾಗಲು ಅನುಮತಿ ದೊರೆಯಿತು.
 • 1999 ರಲ್ಲಿ ಷರೀಫರ ಮೇಲೆ ಮಿಲಿಟರಿ ನ್ಯಾಯಾಲಯವು ದಿ 2 ಏಪ್ರಿಲ್ 2010 ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿಸಿಕೊಂಡು ಮೂರನೇ ಬಾರಿ ಪ್ರಧಾನ ಮೋತ್ರಿಯಾಗಳು ಅರ್ಹತೆ ಪಡೆದರು. 2013 ರ ಪಾಕೀಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಚುನಾವಣೆಯಲ್ಲಿ ನವಾಜ್ ಷರೀಫರ 'ಪಾಕೀಸ್ತಾನ ಮುಸ್ಲಿಮ್ ಲೀಗ್ (N) 126 ಸ್ಥಾನ ಗಳೀಸಿ ವಿರೋಧ ಪಕ್ಷಗಳ ಅಚ್ಚರಿಗೆ ಕಾರಣವಾಯಿತು ಆದರೂ ಬಹುಮತಕ್ಕೆ ೧೩೭/137 ಸ್ಥಾನ ಬೇಕಿತ್ತು. ಸ್ವತಂತ್ರ ಸದಸ್ಯರ ಮತ್ತು ಇತರರ ಬೆಂಬಲ/ಪಕ್ಷದಲ್ಲಿ ಸೇರ್ಪಡೆ ಪಡೆದು 142 (On 19 May 2013) ಸ್ಥಾನಗಳ ಬಹುಮತ ಪಡೆದು, ದಿ 7 ಜೂನ್ 2013 ಪ್ರಧಾನ ಮಂತ್ರಿಯಾಗಿ ಅಧಿಕಾರ ಪೆಡೆದರು.ಆದರೆ ಈಗ ಚುನಾವಣೆಯಲ್ಲಿ ಅಕ್ರಮ /ಮೋಸ ನೆಡೆದಿದೆಯಾದ್ದರಿಂದ ಷರೀಫ್ ರು ರಾಜೀನಾಮೆ ನೀಡಿ ವಿಚಾರಣೆ / ಚುನಾವಣೆ ನಡೆಸಬೇಕೆಂದು ಇಮ್ರಾನ್ ಖಾನ್,ಕೆಲವೇ ಸಾವಿರ ಜನರ ಬೆಂಬಕದೊಂದಿಗೆ (ತೆಹ್ರೀಕ್-ಇ-ಇನ್ಸಾಫ್ ಪಕ್ಷ)ಉಗ್ರ ಚಳುವಳಿ ನಡೆಸುತ್ತಿದ್ದಾರೆ. ಅವರಜೊತೆ ಪಾಕಿಸ್ತಾನ ಅವಾಮಿ ತೆಹರಿಕ್‌ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್‌ ಖಾದ್ರಿ ನೇತೃತ್ವದಲ್ಲಿ ಆಗಸ್ಟ್‌ 14ರಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರದಲ್ಲಿ ಸೇರಿದ್ದಾರೆ-೧

ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ರ ತಕರಾರು[ಬದಲಾಯಿಸಿ]

 • ಏಪ್ರಿಲ್ 1996 ರಲ್ಲಿ ಕ್ರಿಕೆಟ್ ಆಲ್ ರೌಂಡರ್ ಇಮ್ರಾನ್ ಖಾನ್, ತೆಹ್ರೀಕ್-ಇ-ಇನ್ಸಾಫ್("Movement for Justice") ರಾಜಕೀಯ ಪಕ್ಷವನ್ನು ಕಟ್ಟಿದರು. ನವೆಂ. 2002 ರಿಂದ ಅಕ್ಟೋಬರ್ 2007,ರಾಷ್ಟ್ರೀಯ ಅಸೆಂಬಲಿಗೆ ಸದಸ್ಯರಾಗಿದ್ದರು. ದಿ 11 ಮೇ 2013, ಚುನಾವಣೆಯಲ್ಲಿ ಭಾಗವಹಿಸಿ 35 ಸ್ಥಾನ ಗಳಿಸಿದರು. ಫಲಿತಾಶ ಎಣಿಕೆ ಆಗುತ್ತಿದ್ಆಗಲೇ ಷರೀಫರಿಗೆ ಅವರ ಗೆಲುವಿಗಾಗಿ ಶುಭಾಶಯ ಹೇಳಿದ್ದರು. ಆದರ ನಂತರ ಇಮ್ರಾನ್ ಖಾನ್ ಅವರು ಚುನಾವಣೆಯಲ್ಲಿ ಮೋಸ ನೆಡೆದಿದೆ ಎಂದು ನವಾಜ್ ಷರೀಫ್ ರಾಜೀನಾಮೆ ಕೊಟ್ಟು ಪುನಃ ,ಅಪರಾಧವಿಲ್ಲವೆಂದು ಕಂಡುಬಂದಲ್ಲಿ ಪ್ರಧಾನಿಯಾಗಬಹುದೆಂದು ಚಳವಳಿ,/ ಉಗ್ರ ಪ್ರತಿಭಟನೆಯನ್ನು ದಿ.14-ಆಗಸ್ಟ್ 2014 ರಿಂದ ನೆಡೆಸುತ್ತಿದ್ದಾರೆ([[೧]]). ಪಾಕಿಸ್ತಾನ ಅವಾಮಿ ತೆಹರಿಕ್‌ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್‌ ಖಾದ್ರಿ ಅವರು ಪ್ರತಿಭಟನೆಗೆ ಪೂರ್ಣ ಬೆಂಬಲ ನೀಡಿ ಅದರಲ್ಲಿ ಭಾಗವಹಿಸಿದ್ದಾರೆ

ಸಂಸತ್ತಿನ ನಿರ್ಣಯ-2,ಸೆಪ್ಟಂಬರ್ 2014[ಬದಲಾಯಿಸಿ]

 • ಪಾಕಿಸ್ತಾನದ ಸಂಸತ್ತು ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಸಂಪೂರ್ಣ ಬೆಂಬಲ ನೀಡಿದ್ದು, ಅವರ ರಾಜೀನಾಮೆಗೆ ಆಗ್ರಹಿಸಿರುವ ಪ್ರತಿಭಟನಾಕಾರರು 'ದೇಶದಲ್ಲಿ ದಂಗೆಯೇಳಲು' ಸಂಚು ಹೂಡಿದ್ದಾರೆ ಎಂದು ಖಂಡಿಸಿದೆ..
 • ಇದು ಪ್ರಜಾಪ್ರಭುತ್ವದ ವಿಧಾನಗಳ ಮೂಲಕ ಆಯ್ಕೆಯಾದ ಸರಕಾರ. ಈಗ ನಡೆಯುತ್ತಿರುವುದು ಪ್ರಜಾಸತ್ತಾತ್ಮಕ ಪ್ರಕ್ರಿಯೆಗಳಾದ ಪ್ರತಿಭಟನೆ ಅಥವಾ ಧರಣಿಯಲ್ಲ; ಈಗ ನಡೆದಿರುವುದು ರಾಜಕೀಯ ಸಮಾವೇಶವೂ ಅಲ್ಲ. ಇದು ಪಾಕಿಸ್ತಾನದ ವಿರುದ್ಧ ದಂಗೆ ಎಂದು ಆಂತರಿಕ ವ್ಯವಹಾರಗಳ ಸಚಿವ ಚೌಧರಿ ನಿಸಾರ್‌ ಬಣ್ಣಿಸಿದ್ದಾರೆ.
 • ಪಾಕಿಸ್ತಾನ ಸಂಸತ್ತು ಪ್ರಧಾನಿ ನವಾಜ್‌ ಷರೀಫ್‌ ಅವರಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದು, ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು ಎಂದು ಒತ್ತಡ ಹೇರಿದೆ-೨.ಪ್ರಧಾನಿ ಷರೀಫ್‌ ರಾಜೀನಾಮೆಗೆ ಆಗ್ರಹಿಸಿ ಪಾಕಿಸ್ತಾನ ತೆಹರಿಕ್‌-ಎ–ಇನ್ಸಾಫ್‌ (ಪಿಟಿಐ) ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಮತ್ತು ಪಾಕಿಸ್ತಾನ ಅವಾಮಿ ತೆಹರಿಕ್‌ (ಪಿಎಟಿ) ಪಕ್ಷದ ಮುಖ್ಯಸ್ಥ ತಹಿರುಲ್‌ ಖಾದ್ರಿ ನೇತೃತ್ವದಲ್ಲಿ ಆಗಸ್ಟ್‌ 14ರಿಂದ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರ, ಪ್ರಸಕ್ತ ರಾಜಕೀಯ ಬೆಳವಣಿಗೆಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಯಿತು.
 • ಅವರು ಸುಪ್ರೀಂ ಕೋರ್ಟ್‌ ಮತ್ತು ಸಂಸತ್ತಿನ ಹೆಬ್ಬಾಗಿಲಿನ ವರೆಗೆ ತಲುಪಿದ್ದಾರೆ. ನಿನ್ನೆ ಅವರು ಇನ್ನೊಂದು ಸರಕಾರಿ ಕಟ್ಟಡದೊಳಕ್ಕೆ (ಪಿಟಿವಿ ಕಚೇರಿ) ಪ್ರವೇಶಿಸಿ 'ತಾಹಿರ್‌ ಉಲ್‌ ಖಾದ್ರಿ ಜಿಂದಾಬಾದ್‌' ಎಂದು ಘೋಷಣೆಯನ್ನೂ ಕೂಗಿದ್ದಾರೆ ಎಂದು ನಿಸಾರ್‌ ನುಡಿದರು.-೧
 • ಪಿಟಿವಿ ಕಚೇರಿಗೆ ದಾಳಿಯಿಟ್ಟವರು ಪಿಸ್ತೂಲುಗಳು, ಕಟ್ಟರ್‌ಗಳು, ಸುತ್ತಿಗೆಗಳು, ಕವಣೆಗಳು, ಕವೆಗೋಲುಗಳು, ಮೊಳೆ ಚುಚ್ಚಿದ ಕೋಲುಗಳನ್ನು ಹಿಡಿದಿದ್ದರು. ಗುಂಪಿನಲ್ಲಿದ್ದ ಈ ಮಂದಿ ಭಯೋತ್ಪಾದಕ ಸಂಘಟನೆಯವರು ಎಂದು ಸಚಿವರು ಬಣ್ಣಿಸಿದರು.
 • ಪ್ರತಿಭಟನಾಕಾರರ ಒತ್ತಡಕ್ಕೆ ಮಣಿದು ರಾಜೀ­ನಾಮೆ ನೀಡಬಾರದು ಅಥವಾ ರಜೆ ಮೇಲೆ ತೆರಳ­ಬಾರದು ಎಂದು ಆಗ್ರಹಿಸುವ ನಿರ್ಣಯವನ್ನು ಸಂಸತ್‌ನಲ್ಲಿ ಅಂಗೀಕರಿಸಲಾಗಿದೆ ಎಂದು ಮೂಲ­ಗಳು ತಿಳಿಸಿವೆ. ಜಂಟಿ ಅಧಿವೇಶನ ಕರೆದು ಚರ್ಚೆ ನಡೆಸುವ ಪ್ರಸ್ತಾವನೆ ವಿರೋಧ ಪಕ್ಷಗಳಿಂದ ಬಂದಿತ್ತು. ಇದಕ್ಕೆ ಸಹಮತ ವ್ಯಕ್ತಪಡಿಸಿದ ಷರೀಫ್‌ ಅಧಿವೇಶನ ಕರೆ­ದಿದ್ದಾರೆ. ಸಂಸದರ ಆಸಕ್ತಿ ಗಮನಿಸಿ ಎಷ್ಟು ದಿನ ಅಧಿವೇಶನ ನಡೆಸಬೇಕು ಎಂದು ನಿರ್ಧರಿಸಲಾಗುತ್ತದೆ.-೨
 • ಬಹುತೇಕ ಪ್ರತಿಪಕ್ಷಗಳು ಷರೀಫ್‌ ಅವರಿಗೆ ಬೆಂಬಲ ವ್ಯಕ್ತಪಡಿಸಿವೆ. ಚುನಾಯಿತ ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ನೀಡಬಾರದು. ಈ ವಿಷಯದಲ್ಲಿ ಷರೀಫ್‌ ಅವರು ತೆಗೆದುಕೊಳ್ಳುವ ನಿರ್ಧಾರಗಳಿಗೆ ಬೆಂಬಲ ಸೂಚಿಸುವುದು ಒಳ್ಳೆಯದು ಎಂಬ ಇಂಗಿತವನ್ನು ಪ್ರತಿಪಕ್ಷಗಳು ವ್ಯಕ್ತಪಡಿಸಿವೆ.
 • ಷರೀಫ್‌ ರಾಜೀನಾಮೆಗೆ ಆಗ್ರಹಿಸಿ ಎರಡು ವಾರಗಳಿಂದ ಹೋರಾಟ ನಡೆಯುತ್ತಿದೆ. ಈ ಮಧ್ಯೆ ಪ್ರತಿಪಕ್ಷಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಇದು ಷರೀಫ್‌ ಅವರ ಕೈಬಲಪಡಿಸಿದಂತಾಗಿದೆ.
 • ಪಾಕಿಸ್ತಾನ ವಿರುದ್ಧದ ದಂಗೆ: ಪ್ರತಿಭಟನೆಯು ‘ಪಾಕಿಸ್ತಾನ ವಿರುದ್ಧದ ದಂಗೆ’ ಎಂದು ಪರಿಗಣಿಸಿರುವ ಸರ್ಕಾರ, ಇದನ್ನು ತೀವ್ರವಾಗಿ ಖಂಡಿಸಿದೆ. ಪ್ರಜಾಸತ್ತಾತ್ಮಕ ರೂಪದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸರ್ಕಾರವನ್ನು ವಾಮಮಾರ್ಗದ ಮೂಲಕ ಉರುಳಿಸಲು ಪ್ರತಿಭಟನಾಕಾರರು ಮುಂದಾಗಿರುವುದು ಸರಿಯಲ್ಲ. ಇದು ಧರಣಿ ಅಥವಾ ಪ್ರತಿಭಟನೆ ಅಲ್ಲ. ಪಾಕಿಸ್ತಾನ ವಿರುದ್ಧದ ದಂಗೆ ಎಂದು ಒಳಾಡಳಿತ ಸಚಿವ ಚೌಧುರಿ ನಿಸಾರ್‌ ತಿಳಿಸಿದ್ದಾರೆ.-೨

ಪ್ರಧಾನಿ ನವಾಜ್ ಷರೀಫ್ ರಾಜೀನಾಮೆ[ಬದಲಾಯಿಸಿ]

Sharif at the conference on Afghanistan in London.
 • 28 Jul, 2017;
 • ಪಾಕಿಸ್ತಾನದ ಪ್ರಧಾನಿ ನವಾಜ್‌ ಷರೀಫ್‌ ಹಾಗೂ ಅವರ ಕುಟುಂಬ ವಿರುದ್ಧದ ಪನಾಮಾ ಪೇಪರ್ಸ್‌ ಪ್ರಕರಣದ ವಿಚಾರಣೆ ನಡೆಸಿದ ಪಾಕಿಸ್ತಾನದ ಸುಪ್ರೀಂ ಕೋರ್ಟ್‌ ನವಾಜ್‌ ಷರೀಫ್‌ ಅವರನ್ನು ದೋಷಿ ಎಂದು ಮಹತ್ವದ ತೀರ್ಪು ಪ್ರಕಟಿಸಿದೆ. ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ ಬೆನ್ನಲ್ಲೇ ಷರೀಫ್ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಕ್ರಮ ಸಂಪಾದನೆ ಹಾಗೂ ತೆರಿಗೆ ವಂಚನೆಯಿಂದ ಗಳಿಸಿದ ಕಾಳಧನವನ್ನು ಅಂತರರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಇರಿಸಿರುವವರ ಪಟ್ಟಿಯು ಪನಾಮಾ ಪೇಪರ್ಸ್‌ ಸೋರಿಕೆಯಿಂದ ಬಹಿರಂಗಗೊಂಡಿತ್ತು.
 • ನವಾಜ್ ಷರೀಫ್ ಅವರೇ ಈ ಪಕ್ಷದ ಮುಖ್ಯಸ್ಥರಾಗಿರುವುದರಿಂದ ಅವರೇ ಮುಂದಿನ ಪ್ರಧಾನಿ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.[೨]

ಶಾಹೀದ್‌ ಪಾಕ್‌ನ ಪ್ರಧಾನಿ[ಬದಲಾಯಿಸಿ]

ಶಾಹೀದ್‌ ಖಾಕನ್‌ ಅಬ್ಬಾಸಿ
 • 2 Aug, 2017
 • ದಿ.೧-೮-೨೦೧೭ ರಂದು ಮಂಗಳವಾರ ಪಾಕಿಸ್ತಾನದ ನೂತನ ಪ್ರಧಾನಿಯಾಗಿ,ಹೊರಹೋಗುತ್ತಿರುವ ನವಾಜ್ ಶರೀಪರ ಆಪ್ತರಾದ, ಶಾಹೀದ್‌ ಖಾಕನ್‌ ಅಬ್ಬಾಸಿ ಆಯ್ಕೆಯಾಗಿದ್ದಾರೆ. 342 ಸದಸ್ಯ ಬಲದ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ನಡೆದ ಚುನಾವಣೆಯಲ್ಲಿ ಅಬ್ಬಾಸಿ ಅವರು 221 ಮತಗಳನ್ನು ಪಡೆಯುವ ಮೂಲಕ ಪ್ರಧಾನಿ ಹುದ್ದೆಗೆ ಆಯ್ಕೆಯಾದರು.[೩] [೪]
 • ಅಬ್ಬಾಸಿ (58), ಪಂಜಾಬ್ ಪ್ರಾಂತ್ಯದ ರಾವಪಿಂಡಿ ಜಿಲ್ಲೆಯ ಮುರ್ರಿಯ ಪ್ರಸಿದ್ಧ ಬೆಟ್ಟದ ವಾಸಿ ಆಗಿದ್ದು, ಪೆಟ್ರೋಲಿಯಂನ ಸಚಿವರಾಗಿದ್ದಾರೆ. ಅವರು ನವಾಜ್ ಶರೀಪರಿಂದ ತೆರವಾದ ಸ್ಥಾಕ್ಕೆ ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿಯಿಂದ ಪ್ರಧಾನಿಯಾಗಿ ಚುನಾಯಿತರಾದರು. ಷರೀಫ್ ಅವರ ಪಾಕಿಸ್ತಾನ್ ಮುಸ್ಲಿಮ್ ಲೀಗ್-ನವಾಜ್ (ಪಿಎಂಎಲ್-ಎನ್) ಅಬಾಸಿಯನ್ನು ಮಧ್ಯಂತರ ಪ್ರಧಾನಿಯಾಗಿ ನೇಮಕ ಮಾಡಿದೆ. ಷರೀಫ್‍ರ ಸಹೋದರ ಮತ್ತು ಪಂಜಾಬ್ ಪ್ರಾಂತ್ಯ ಮುಖ್ಯಮಂತ್ರಿ ಶೆಹಬಾಜ್ ಶರೀಫ್ ರಾಷ್ಟ್ರೀಯ ಅಸೆಂಬ್ಲಿಯ ಸದಸ್ಯರಾಗಿ ಆಯ್ಕೆಯಾಗುವವರೆಗೆ ಇವರು ಪ್ರಧಾನಿಯಾಗಿರುತ್ತಾರೆ ಎಂದು ಹೇಳಲಾಗಿದೆ.[೫]
 • ದಿ.೫-೮-೨೧೭ರಂದು ಸಂಪುಟ ರಚನೆ ಮಾಡಿ 28 ಮಂದಿ ಸಂಪುಟ ದರ್ಜೆಯ ಸಚಿವರಾಗಿ ಮತ್ತು 19 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಿಂದೂ ಸಚಿವ ದರ್ಶನ್‌ ಲಾಲ್‌ ಅವರಿಗೆ ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳ ಸಮನ್ವಯ ಹೊಣೆಗಾರಿಕೆಯನ್ನು ನೀಡಲಾಗಿದೆ.[೬]

ಆಧಾರ[ಬದಲಾಯಿಸಿ]

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]