ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭಾರತ ಮತ್ತು ಪಾಕೀಸ್ತಾನಗಳ ಬಲಾಬಲ[ಬದಲಾಯಿಸಿ]

 • ಪಾಕ್‌ ಉಗ್ರರು ಉರಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ 18 ಭಾರತೀಯ ಯೋಧರ ಹತ್ಯೆಗೈದುದನ್ನು ಅನುಸರಿಸಿ ಉಭಯ ದೇಶಗಳ ನಡುವಿನ ಉದ್ರಿಕ್ತತೆ ಹೆಚ್ಚಿದ್ದು ಭಾರತ ಯಾವುದೇ ಹೊತ್ತಿಗೂ ದಾಳಿ ನಡೆಸಬಹುದೆಂಬ ಭಯದಲ್ಲಿ ಪಾಕಿಸ್ಥಾನ ಸಮರ ಸಿದ್ಧತೆ ಹಾಗೂ ಸನ್ನದ್ಧತೆಗೆ ಮುಂದಾಗಿತ್ತು.
 • ಈ ಸಂದರ್ಭದಲ್ಲಿ ಉಭಯ ದೇಶಗಳ ಜನ ಶಕ್ತಿ, ಆರ್ಥಿಕ ಶಕ್ತಿ, ಮಿಲಿಟರಿ ಶಕ್ತಿ ಇತ್ಯಾದಿಗಳ ತುಲನ ಕಾರ್ಯ ನಡೆಯುತ್ತಿದೆ. ಗ್ಲೋಬಲ್‌ ಫ‌ಯರ್‌ ಡಾಟ್‌ ಕಾಮ್‌ ಈ ಕುರಿತಾಗಿ ಅಂಕಿ ಅಂಶಗಳನ್ನು ಹೊರಗೆಡಹಿದೆ. ಸಿಐಎ ಸಹಿತವಾಗಿ ವಿವಿಧ ಮೂಲಗಳಿಂದ ತಾನು ಈ ಅಂಕಿ ಅಂಶಗಳನ್ನು ಕಲೆ ಹಾಕಿರುವುದಾಗಿ ವೆಬ್‌ ಸೈಟ್‌ ಹೇಳಿಕೊಂಡಿದೆ. ಆ ಪ್ರಕಾರ ಆ ವಿವರಗಳು ಇಂತಿವೆ :

ಬಲಾಬಲಗಳ ವಿವರ[ಬದಲಾಯಿಸಿ]

[೧]

[೨] [೩]

ನೌಕಾದಳ[ಬದಲಾಯಿಸಿ]

ಭಾರತ ಪಾಕಿಸ್ತಾನಗಳ ಯುದ್ಧ ವಿಮಾಗಳು[ಬದಲಾಯಿಸಿ]

ಭಾರತದ ಶೀಜು ಎಮ್.ಐ.ಜಿ (ಮಿಗ್) 21 (Sheeju mig21)
ಪಾಕೀಸ್ತಾನದ ಎಫ್ F-16A (F-16A Fighting Falcon)

ಯುದ್ಧ ನೌಕೆಗಳು[ಬದಲಾಯಿಸಿ]

(ಭಾರತ ಐಎನ್ಎಸ್ ಕೋಲ್ಕತಾ:ದೂರವ್ಯಾಪ್ತಿಯ ಒಂದು ಬರಾಕ್ 8 ಏರ್ ಕ್ಷಿಪಣಿಯ ನೌಕೆಯಿಂದ ಆಕಾಶಕ್ಕೆ ಫೈರಿಂಗ್(SAM).
ಪಾಕಿಸ್ತಾನ PNS ಟಿಪ್ಪು ಸುಲ್ತಾನ್ ಮಾಜಿ ಎಚ್ಎಂಎಸ್ ಎವೆಂಜರ್

ಅಣು ಸಮರ ಶಕ್ತಿ[ಬದಲಾಯಿಸಿ]

 • ಭಾರತ
 • ಭಾರತದ ಅಣ್ವಸ್ತ್ರ ಶೇಖರಣೆ ಪಾಕಿಸ್ತಾನದಕ್ಕಿಂತ ಹೆಚ್ಚೇನಿಲ್ಲ. ಆದರೆ ಅವನ್ನು ಚಿಮ್ಮಿಸುವ ಸಾಧನಗಳು ಹೆಚ್ಚು ಪ್ರಬಲವಾಗಿವೆ. ಲಭ್ಯ ಮಾಹಿತಿಗಳ ಪ್ರಕಾರ ನಮ್ಮ ವಜ್ರ (ಮಿರಾಜ್) ಮತ್ತು ಶಮ್‌ಶೇರ್ (ಸುಧಾರಿತ ಜಾಗ್ವಾರ್) ವಿಮಾನಗಳಲ್ಲಿ 48 ಅಣುಬಾಂಬ್‌ಗಳಿವೆ;
 • ಪೃಥ್ವಿ ಕ್ಷಿಪಣಿ ಮತ್ತು ಬಹುದೂರಗಾಮಿ ಅಗ್ನಿ ಕ್ಷಿಪಣಿಗಳಲ್ಲಿ 56 ಬಾಂಬ್‌ಗಳಿವೆ; ಹಡಗಿನ ಮೇಲಿನ ಧನುಷ್ ಮತ್ತು ಜಲಾಂತರ್ಗಾಮಿಯ ಸಾಗರಿಕಾ ಕ್ಷಿಪಣಿಗಳಲ್ಲಿ 14 ಅಣುಬಾಂಬ್‌ಗಳಿವೆ.

+

 • ಭಾರತದ ಒಟ್ಟಾರೆ ಮಿಲಿಟರಿ ತಾಕತ್ತಿಗೆ ಹೋಲಿಸಿದರೆ ಪಾಕಿಸ್ತಾನದ್ದು ತೀರ ದುರ್ಬಲವಾಗಿದ್ದು, ನಾವು ಸಾದಾ ದಾಳಿಯ ಮೂಲಕ ಶೆಲ್‌ಗಳ ಮಳೆಗರೆದರೆ ಅವರು ಸಲೀಸಾಗಿ ಅಣ್ವಸ್ತ್ರವನ್ನೇ ಚಿಮ್ಮಿಸುವ ಸಾಧ್ಯತೆ ಇರುತ್ತದೆ.
 • ಪಾಕಿಸ್ತಾನ
 • ಅಮೆರಿಕದ ‘ಬುಲ್ಲೆಟಿನ್ ಆಫ್ ಅಟಾಮಿಕ್ ಸೈಂಟಿಸ್ಟ್ಸ್’ ಪತ್ರಿಕೆಯ 2015 ವರದಿಯ ಪ್ರಕಾರ ಪಾಕಿಸ್ತಾನದ ಬಳಿ ಎಫ್-ಸಿಕ್ಸ್‌ಟೀನ್ ಮತ್ತು ಮಿರಾಜ್ ವಿಮಾನಗಳಲ್ಲಿ 36 ಅಣುಬಾಂಬ್‌ಗಳಿವೆ; ಘಝ್ನವಿ, ಶಹೀನ್, ಘಾವ್ರಿ ಮತ್ತು ನಾಸ್ರ್ ಹೆಸರಿನ ಕ್ಷಿಪಣಿಗಳಲ್ಲಿ 86 ಬಾಂಬ್‌ಗಳಿವೆ. ದೂರಗಾಮಿ ಬಾಬರ್ ಕ್ಷಿಪಣಿಯ ಮೇಲೆ 8 ಬಾಂಬ್‌ಗಳು ಕೂತಿವೆ.
 • ಬಾಬರ್ ಕ್ಷಿಪಣಿ 1300 ಕಿ.ಮೀ ದೂರಕ್ಕೂ ಸಾಗಿ ಬರಬಹುದಾಗಿದ್ದು ಲುಧಿಯಾನಾ, ದಿಲ್ಲಿ, ಜಯಪುರ, ಭೋಪಾಲ, ಲಖ್ನೋ ಮತ್ತು ಅಹ್ಮದಾಬಾದ್‌ವರೆಗೆ ಬರಬಹುದು. ಕ್ಷಿಪಣಿಗಳಿಗಿಂತ ಬಾಂಬರ್ ವಿಮಾನಗಳು ಹೆಚ್ಚು ಅಪಾಯಕಾರಿ. ಸಮುದ್ರ ಪಾತಳಿಯಿಂದ ಕೇವಲ ಮೂರಡಿ ಎತ್ತರದಲ್ಲಿ ಹಾರುತ್ತ ರಡಾರ್‌ಗಳ ಕಣ್ತಪ್ಪಿಸಿ ಪಾಕಿಸ್ತಾನದ ಎಫ್-16 ಮುಂಬಯಿ, ಕಾರವಾರ, ಕೈಗಾ, ಸೀಬರ್ಡ್‌ವರೆಗೂ ಬರಬಹುದು.[೬]

ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ಭಾರತ ಮತ್ತು ಪಾಕೀಸ್ತಾನಗಳ ಬಲಾಬಲ
 2. ಭಾರತ v/s ಪಾಕಿಸ್ಥಾನ :ಯಾರ ಮಿಲಿಟರಿ ಪವರ್ ಎಷ್ಟಿದೆ ಲೆಕ್ಕಚಾರ ಹೀಗಿದೆ
 3. ಭಾರತ v/s ಪಾಕಿಸ್ಥಾನ
 4. http://indiannavy.nic.in/
 5. http://www.paknavy.gov.pk/
 6. [೨]