ಭಾರತೀಯ ವಾಯುಸೇನೆ
ಭಾರತೀಯ ವಾಯುಸೇನೆ ಪ್ರಪಂಚದ ಅತಿ ದೊಡ್ಡ ವಾಯು ಸೇನೆಗಳಲ್ಲಿ ಒಂದು. ಇದನ್ನು ಸ್ಥಾಪಿಸಿದ್ದು ಅಕ್ಟೋಬರ್ ೮, ೧೯೩೨ ರಂದು.
ಚರಿತ್ರೆ
[ಬದಲಾಯಿಸಿ]೧೯೩೨ ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯ ನಂ.೧ ಸ್ಕ್ವಾಡ್ರನ್ ೧೯೩೩ ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದದ್ದು ಕೇವಲ ಐದು ಪೈಲಟ್ ಗಳು! ಕೇವಲ ನಾಲ್ಕು ವಪೀಟೀ ವಿಮಾನಗಳನ್ನು ಹೊಂದಿದ್ದ ವಾಯುಸೇನೆ ಇಂದು ೨೦೦೦ ಕ್ಕೂ ಹೆಚ್ಚು ಯುದ್ಧವಿಮಾನಗಳನ್ನು ಹೊಂದಿದೆ.
ಮೊದಲ ಪೈಲಟ್ ಗಳು
[ಬದಲಾಯಿಸಿ]ಭಾರತೀಯ ವಾಯುಸೇನೆಯ ಮೊದಲ ಐದು ಪೈಲಟ್‍ಗಳು ಹೆ ಸಿ ಸರ್ಕಾರ್, ಸುಬ್ರೊತೊ ಮುಖರ್ಜೀ, ಭೂಪೇಂದ್ರ ಸಿಂಗ್, ಎ ಬ್ ಅವನ್ ಮತ್ತು ಅಮರ್ಜೀತ್ ಸಿಂಗ್. ೧೯೩೩ ರಲ್ಲಿ ಸೇರಿದ ಈ ಐವರಲ್ಲಿ ಭೂಪೇಂದ್ರ ಸಿಂಗ್ ಮತ್ತು ಅಮರ್ಜೀತ್ ಸಿಂಗ್ ವಿಮಾನ ಅಪಘಾತಗಳಲ್ಲಿ ಮೃತರಾದರು. ಸರ್ಕಾರ್ ಒಂದು ವರ್ಷದೊಳಗೇ ವಾಯುಸೇನೆಯನ್ನು ಬಿಟ್ಟರು. ಎ ಬಿ ಅವನ್ ಭಾರತದ ವಿಂಗಡಣೆಯ ನಂತರ ಪಾಕಿಸ್ತಾನವನ್ನು ಸೇರುವುದಾಗಿ ನಿರ್ಧರಿಸಿದರು. ಸುಬ್ರೊತೊ ಮುಖರ್ಜಿ ಮುಂದೆ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾದರು.
ಎರಡನೆಯ ಮಹಾಯುದ್ಧದ ಮೊದಲು ಇನ್ನಷ್ಟು ವಿಮಾನಗಳು ಮತ್ತು ಪೈಲಟ್‍ಗಳು ವಾಯುಸೇನೆಯನ್ನು ಸೇರಿದರು.
ಎರಡನೇ ಮಹಾಯುದ್ಧ
[ಬದಲಾಯಿಸಿ]ಭಾರತೀಯ ಸೈನ್ಯ ಎರಡನೇ ಮಹಾಯುದ್ಧದಲ್ಲಿ ಅತಿ ದೊಡ್ಡ ಸ್ವಯಂಸೇವಕ ಪಡೆ ಎಂಬುದು ಹೆಚ್ಚು ಜನರಿಗೆ ತಿಳಿದಿಲ್ಲ. ಒಟ್ಟು ೨ ಕೋಟಿ ಭಾರತೀಯ ಸೈನಿಕರು ಪಾಲ್ಗೊಂಡ ಈ ಯುದ್ಧದಲ್ಲಿ ಭಾರತೀಯ ವಾಯುಸೇನೆಯೂ ಪಾಲ್ಗೊಂಡಿತು.
೧೯೪೭-೪೮ ಕಾಶ್ಮೀರ ಯುದ್ಧ
[ಬದಲಾಯಿಸಿ]ಅಕ್ಟೋಬರ್ ೨೦, ೧೯೪೭ ರಲ್ಲಿ ಪಾಕಿಸ್ತಾನದಿಂದ ಸಹಾಯ ಪಡೆದ ಪಠಾಣರ ದಳವೊಂದು ಕಾಶ್ಮೀರದೊಳಕ್ಕೆ ನುಗ್ಗಿತು. ಕಾಶ್ಮೀರದ ಮಹಾರಾಜರಾದ ಹರಿ ಸಿಂಗ್ ಭಾರತದ ಸಹಾಯ ಕೋರಿದರು. ಕಾಶ್ಮೀರ ಭಾರತಕ್ಕೆ ಸೇರಬೇಕೆಂಬ ಶರತ್ತಿನ ಸಹಾಯ ನೀಡಿದ ಭಾರತ, ವಾಯುಸೇನಯ ವಿಮಾನಗಳ ಮೂಲಕ ತನ್ನ ಸೈನಿಕರನ್ನು ಕಾಶ್ಮೀರಕ್ಕೆ ಸಾಗಿಸಿತು. ಡಿಸಂಬರ್ ೩೧, ೧೯೪೮ ರಲ್ಲಿ ಈ ಯುದ್ಧ ಕೊನೆಗೊಂಡಿತು. ವಾಯುಸೇನೆ ನೇರವಾಗಿ ಯುದ್ಧದಲ್ಲಿ ಪಾಲ್ಗೊಳ್ಳುವ ಸಂದರ್ಭ ಈ ಯುದ್ಧದಲ್ಲಿ ಉಂಟಾಗಲಿಲ್ಲ.
೧೯೬೧ ಕಾಂಗೋ
[ಬದಲಾಯಿಸಿ]ಜೂನ್ ೩೦, ೧೯೬೦ ರಲ್ಲಿ ಕಾಂಗೋ ದೇಶದ ಮೇಲಿನ ಬೆಲ್ಜಿಯಮ್ ನ ಆಡಳಿತ ಹಠಾತ್ತಾಗಿ ಕೊನೆಗೊಂಡಿತು. ಆಗ ಅಲ್ಲಿ ಶಾಂತಿ ನಿರ್ವಹಣಾ ಕಾರ್ಯಕ್ಕೆ ವಿಶ್ವಸಂಸ್ಥೆ ಸಹಾಯವನ್ನು ಕೋರಿತು. ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಭಾರತೀಯ ವಾಯುಸೇನೆಯ ವಿಮಾನಗಳು ಮತ್ತು ಸೈನಿಕರನ್ನು ಒದಗಿಸಿದರು. ಕೆನ್ಬೆರ್ರಾ ಯುದ್ಧವಿಮಾನ ಈ ಕಾಲದಲ್ಲಿ ಉಪಯೋಗಿತವಾಯಿತು.
ವಾಯು ಸೇನೆ ಮುಖ್ಯಸ್ಥರು
[ಬದಲಾಯಿಸಿ]- 31 Dec, 2016
- ವಾಯುಪಡೆಯ ಮುಖ್ಯಸ್ಥರಾಗಿ ರಾಕೇಶ್ ಸಿಂಗ್ ಭಾದೌಇರ ಅವರು 30 sep, 2019 ಶನಿವಾರ ಅಧಿಕಾರ ಸ್ವೀಕರಿಸಿದರು. ಬಿಪಿನ್ ಅವರು ಸೇನೆಯ 28ನೇ ಮುಖ್ಯಸ್ಥರಾಗಿದ್ದರೆ, ರಾಕೇಶ್ ಸಿಂಗ್ ಭಾದೌಇರ ಅವರು ವಾಯುಪಡೆಯ/ಮುಖ್ಯಸ್ಥರಾಗಿದ್ದಾರೆhttpwww.prajavani.net/news/article/2016/12/31/462862.html ವಾಯುಪಡೆ, ಸೇನೆಯ ಹೊಸ ಮುಖ್ಯಸ್ಥರ ಅಧಿಕಾರ ಸ್ವೀಕಾರ;ಪಿಟಿಐ;1 Jan, 2017]
೧೯೬೫ ಭಾರತ-ಪಾಕಿಸ್ತಾನ ಯುದ್ಧ
[ಬದಲಾಯಿಸಿ]೧೯೭೧ ಭಾರತ ಪಾಕಿಸ್ತಾನ ಯುದ್ಧ
[ಬದಲಾಯಿಸಿ]ವಾಯುಸೇನೆಯ ವಿಮಾನಗಳು
[ಬದಲಾಯಿಸಿ]ಬಾಂಬರ್ ಗಳು
[ಬದಲಾಯಿಸಿ]- ಲಿಬರೇಟರ್
- ಕೆನ್‍ಬೆರ್ರಾ
ಫೈಟರ್ ಗಳು
[ಬದಲಾಯಿಸಿ]- ಸುಖೋಯಿ Su-30MKI
- ಮಿರಾಜ್ 2000H
- ಜಾಗ್ವಾರ್ IS
- ಜಾಗ್ವಾರ್ IM
- ಮಿಗ್-೨೯ (Fulcrum)
- ಮಿಗ್-೨೭ ML (Flogger)
- ಮಿಗ್-೨೫ U (Foxbat)
- ಮಿಗ್-೨೫ R (Foxbat)
- ಮಿಗ್-೨೩ MF (Flogger)
- ಮಿಗ್-೨೩ BN (Flogger)
- ಮಿಗ್-೨೧ Bison (Fishbed)
- ಮಿಗ್-೨೧ Bis (Fishbed)
- ಮಿಗ್-೨೧ M (Fishbed)
- ಮಿಗ್-೨೧ MF(Fishbed)
- ಮಿಗ್-೨೧ FL(Fishbed)
- ಮಿಗ್-೨೧ PF(Fishbed)
- ಮಿಗ್-೨೧ F-13(Fishbed)
- ಕಳೆದ 40 ವರ್ಷಗಳಲ್ಲಿ ಮಿಗ್–21 ಯುದ್ಧ ವಿಮಾನಗಳು ಹಲವು ಬಾರಿ ಪತನಗೊಂಡಿವೆ. ಭಾರತ 872 ಮಿಗ್ ವಿಮಾನಗಳಲ್ಲಿ ಅರ್ಧದಷ್ಟು ಕಳೆದುಕೊಂಡಿದೆ. 1973–74ರಲ್ಲಿ ಭಾರತೀಯ ವಾಯುಪಡೆಗೆ ಮಿಗ್–21 ಯುದ್ಧ ವಿಮಾನ ಸೇರ್ಪಡೆಯಾಯಿತು. 2006ರಲ್ಲಿ ಕನಿಷ್ಠ 110 ಮಿಗ್–21 ಯುದ್ಧ ವಿಮಾನಗಳನ್ನು ಆಧುನೀಕರಿಸಲಾಯಿತು. ಮಿಗ್–21 ಬೈಸನ್ ಹೆಸರಿನ ಅವುಗಳು ಅಧಿಕ ಸಾಮರ್ಥ್ಯದ ರಡಾರ್, ಉತ್ತಮಗೊಳಿಸಿದ ಎಲೆಕ್ಟ್ರಾನಿಕ್ ವ್ಯವಸ್ಥೆ ಹಾಗೂ ಸಂವಹನ ವ್ಯವಸ್ಥೆಯನ್ನು ಒಳಗೊಂಡಿವೆ.[೮]
ಹೆಲಿಕಾಪ್ಟರ್ ಗಳು
[ಬದಲಾಯಿಸಿ]- HAL ಧ್ರುವ
- HAL ಚೀತಾ
- HAL ಚೇತಕ್
ತರಬೇತಿ ವಿಮಾನಗಳು
[ಬದಲಾಯಿಸಿ]- BAE Hawk
- HAL HJT-16 ("ಕಿರಣ್")
- HAL HPT-32 ("ದೀಪಕ್")
ಬರಲಿರುವ ವಿಮಾನಗಳು
[ಬದಲಾಯಿಸಿ]- HAL ತೇಜಸ್ (ಹಗುರ ಯುದ್ಧ ವಿಮಾನ)
- HAL ಹೆಚ್-ಜೆ-ಟಿ ೩೬ (ತರಬೇತಿ ವಿಮಾನ)
ಮಿಗ್–21 ಯುದ್ಧ ವಿಮಾನ ಅಪಘಾತ
[ಬದಲಾಯಿಸಿ]- ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್ ಜೆಟ್ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ ಕಾರ್ಗಿಲ್ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ.
- ವಿಶ್ವದಲ್ಲೇ ಹೆಚ್ಚಿನ ಸಂಖ್ಯೆಯಲ್ಲಿರುವ ಯುದ್ಧ ವಿಮಾನಗಳ ಪೈಕಿ ಸೋವಿಯತ್ ರಷ್ಯಾದ ಮಿಗ್–21 ವಿಮಾನಕ್ಕೆ ಅಗ್ರ ಸ್ಥಾನ. 1955ರಲ್ಲಿ ತಯಾರಾದ ಈ ವಿಮಾನ ಈಗಲೂ ಬೇರೆ ಬೇರೆ ರಾಷ್ಟ್ರಗಳ ವಾಯುಪಡೆಗಳಲ್ಲಿ ಸೇವೆ ಸಲ್ಲಿಸುತ್ತಿವೆ. ಭಾರತೀಯ ವಾಯುಪಡೆಯಲ್ಲೂ ಮಿಗ್–21 ತುಕಡಿಗಳಿವೆ.
- ನಿವೃತ್ತಿಯ ಅಂಚಿನಲ್ಲಿರುವ ಈ ವಿಮಾನಗಳು ಪದೇ ಪದೇ ಅಪಘಾತಕ್ಕೆ ಈಡಾಗುತ್ತಿವೆ. ಅವಧಿ ಮುಗಿದ ನಂತರವೂ ಅವನ್ನು ಬಳಸುತ್ತಿರುವುದು ಅಪಘಾತಕ್ಕೆ ಪ್ರಮುಖ ಕಾರಣ ಎಂಬ ಅಭಿಪ್ರಾಯ ತಜ್ಞರಿಂದ ವ್ಯಕ್ತವಾಗಿದೆ.
ಭಾರತೀಯ ಸೇನೆಯಲ್ಲಿ ಸೇವೆ
[ಬದಲಾಯಿಸಿ]- ಭಾರತೀಯ ವಾಯುಪಡೆಯಲ್ಲಿ ಬಳಸಿದ ಮೊದಲ ಸೂಪರ್‌ಸಾನಿಕ್ ಜೆಟ್ ಯುದ್ಧ ವಿಮಾನ. 1971ರ ಬಾಂಗ್ಲಾ ವಿಮೋಚನಾ ಯುದ್ಧ ಮತ್ತು 1999ರ *ಕಾರ್ಗಿಲ್ ಯುದ್ಧಗಳ ಗೆಲುವಿನಲ್ಲಿ ಈ ವಿಮಾನಗಳು ಮಹತ್ವದ ಪಾತ್ರ ವಹಿಸಿವೆ. 1990ರ ದಶಕದಲ್ಲೇ ಇವುಗಳನ್ನು ಸೇವೆಯಿಂದ ನಿವೃತ್ತಿಗೊಳಿಸಬೇಕಾಗಿತ್ತು. ಆದರೆ ಇವುಗಳಿಗೆ ಸರಿಸಮನಾದ ಯುದ್ಧ ವಿಮಾನ ವಾಯುಪಡೆಯಲ್ಲಿ ಇಲ್ಲದ ಕಾರಣ ಇವುಗಳ ಸೇವೆಯನ್ನು ಮುಂದುವರೆಸಲಾಗಿದೆ.
- ಮಿಗ್–21 ಎಂಎಫ್ ಮತ್ತು ಮಿಗ್ –21 ಬಿಸನ್ ಎಂಬ ಎರಡು ಅವತರಣಿಕೆಯ ವಿಮಾನಗಳು ಸೇವೆಯಲ್ಲಿದ್ದವು. ಈಗ ಎಂಎಫ್ ಸರಣಿಯ ವಿಮಾನಗಳನ್ನು ನಿವೃತ್ತಿ ಮಾಡಲಾಗಿದೆ. ಎಚ್‌ಎಎಲ್ ತಯಾರಿಸಿದ ಎಚ್ಎಎಲ್ ತೇಜಸ್ ಲಘು ಯುದ್ಧ ವಿಮಾನಗಳು ಸೇವೆಗೆ ಲಭ್ಯವಾದ ನಂತರ ಬಿಸನ್ ಸರಣಿಯ ಮಿಗ್–21ಗಳನ್ನೂ ಸೇವೆಯಿಂದ ನಿವೃತ್ತಿಗೊಳಿಸಲಾಗುತ್ತದೆ.ಶ್ರೀನಗರ: (ತಾಂತ್ರಿಕ ಸಮಸ್ಯೆಯಿಂದ ಮಿಗ್–21 ಯುದ್ಧ ವಿಮಾನವು ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಮಂಗಳವಾರ 20 Sep, 2016 ನಂದು ಶ್ರೀನಗರ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಫೈಲಟ್ ಸೇರಿದಂತೆ ಯಾರಿಗೂ ಅಪಾಯ ಆಗಿಲ್ಲ ಎಂದು ಮೂಲಗಳು ತಿಳಿಸಿವೆ.
ವಿವರ
[ಬದಲಾಯಿಸಿ]- ತಯಾರಿಕಾ ಸಂಸ್ಥೆ: ಸೋವಿಯತ್ ಒಕ್ಕೂಟದ ಮಿಕೊಯಾನ್ ಗೌರೆವಿಚ್
- ತಾಂತ್ರಿಕ ವಿವರ
- 15.7 ಮೀಟರ್ ಉದ್ದ
- 4.5 ಮೀಟರ್ ಎತ್ತರ
- 7.15 ಮೀಟರ್ ರೆಕ್ಕೆಗಳ ಅಗಲ
- 6,050 ಕೆ.ಜಿ ಖಾಲಿ ತೂಕ
- 10,050 ಕೆ.ಜಿ ಭರ್ತಿ ತೂಕ
- 14 ಸಾವಿರಕ್ಕಿಂತ ಹೆಚ್ಚು ವಿಮಾನ ತಯಾರಿ
- 2,050 ಕಿ.ಮೀ ವೇಗ
- 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
- 54,500 ಅಡಿ ಎತ್ತರದಲ್ಲಿ ಹಾರಾಟ ನಡೆಸುವ ಸಾಮರ್ಥ್ಯ
ಸೇರ್ಪಡೆ ಮತ್ತು ಸೇವೆಯಿಂದ ನಿವೃತ್ತಿ
[ಬದಲಾಯಿಸಿ]- 1963ರಲ್ಲಿ ಭಾರತೀಯ ವಾಯುಪಡೆಗೆ ಮಿಗ್ ಯುದ್ಧವಿಮಾನಗಳ ಸೇರ್ಪಡೆ
- 872 ಮಿಗ್–21 ಎಂಎಫ್ ಮತ್ತು ಮಿಗ್–21 ಬಿಸನ್ ವಿಮಾನಗಳ ಸಂಖ್ಯೆ
- 485 ಈವರೆಗೆ ಪತನವಾಗಿರುವ ಎರಡೂ ಅವತರಣಿಕೆಯ ವಿಮಾನಗಳ ಸಂಖ್ಯೆ
- 171 ಪತನಗಳಲ್ಲಿ ಮೃತಪಟ್ಟಿರುವ ಪೈಲಟ್‌ಗಳ ಸಂಖ್ಯೆ
- 2013ರ ಡಿಸೆಂಬರ್ ಮಿಗ್–21 ಎಂಎಫ್ ವಿಮಾನಗಳು ಸೇವೆಯಿಂದ ನಿವೃತ್ತಿ
- 8 ಪತನ ಸಂಬಂಧಿ ಘಟನೆಗಳಲ್ಲಿ ಮೃತಪಟ್ಟ ತುರ್ತು ಸೇವೆಗಳ ಸಿಬ್ಬಂದಿ
- 40 ಪತನಗಳಲ್ಲಿ ಮೃತಪಟ್ಟ ನಾಗರಿಕರು
- 150 ಈಗ ಸೇವೆಯಲ್ಲಿರುವ ಮಿಗ್–21 ಬಿಸನ್ ವಿಮಾನಗಳ ಸಂಖ್ಯೆ
- 2022 ಮಿಗ್–21 ವಿಮಾನಗಳು ಸಂಪೂರ್ಣವಾಗಿ ಸೇವೆಯಿಂದ ನಿವೃತ್ತಿಯಾ
ಗಲಿವೆ [೯]
ರಫೆಲ್ ಜೆಟ್ ಒಪ್ಪಂದ
[ಬದಲಾಯಿಸಿ]- ಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್ ದಿ.23 Sep 2016:ಶುಕ್ರವಾರ ಸಹಿ ಮಾಡಿದವು. ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಈ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವ ಜೀನ್ ಯವೆಸ್ ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. 16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು.[೧೦]
- ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸುತ್ತಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಿದ್ದಾರೆ. ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ನ ಹಲವು ಸಂಸ್ಥೆಗಳ ಸಿಇಒ ಗಳು ಭಾಗಿಯಾಗಲಿದ್ದಾರೆ.
- ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ.
- ಆರಂಭಿಕ ಯೋಜನೆ 126 ಜೆಟ್ ಖರೀದಿಸುವುದಿದ್ದರೂ, ಭಾರತವು ಅದನ್ನು 36 ಜೆಟ್ ಗಳನ್ನು, ಅದೂ ಸಿದ್ಧ ಸ್ಥಿತಿಯಲ್ಲಿ ಕೊಳ್ಳುವ ತೀರ್ಮಾನಕ್ಕೆ ಬಂದು ಮುಟ್ಟಿತು. ಹೀಗಾಗಿ ಜೆಟ್ ವಿಮಾನದ ದರ ಮೊದಲು ಒಪ್ಪಿದ್ದಕ್ಕಿಂತ ಹೆಚ್ಚೇ ಆಗಿದೆ.[೧೧][೧೨]
- ಈ ರಾಫೆಲ್ ಮೆಟೊರೊ ಶ್ರೇಣಿಯ (ದೂರವ್ಯಾಪಿ) ಕ್ಷಿಪಣಿಯಾಗಿದ್ದು, 150 ಕಿ.ಮೀ ಸಾಗುವ ಸಾಮರ್ಥ್ಯ ಹೊಂದಿದೆ. ದೃಷ್ಠಿವ್ಯಾಪಿಗೂ ಮಿಗಿಲಾಗಿ ಸಾಗುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿಯಲ್ಲಿ ಗುರಿ ತಪ್ಪುವ ಸಾಧ್ಯತೆ ಇತರ ಕ್ಷಿಪಣಿಗಳಿಗಿಂತ ಮೂರುಪಟ್ಟಿ ಕಡಿಮೆ ಇದೆ. ರಾಫೆಲ್ ಜೆಟ್ ಖರೀದಿ ಒಪ್ಪಂದಕ್ಕೆ ಜನವರಿ ತಿಂಗಳಲ್ಲಿ ಪ್ರಾನ್ಸ್ ಮತ್ತು ಭಾರತ ಸರ್ಕಾರಗಳು ಹಣಕಾಸು ವಿಚಾರ ಹೊರತುಪಡಿಸಿ ಸಹಿ ಹಾಕಿದ್ದವು.[೧೩]
ರಫೇಲ್ ಜೆಟ್- ಮೊದಲ ಕಂತು ಆಗಮನ
[ಬದಲಾಯಿಸಿ]- Dassault Rafale
- ಫ್ರಾನ್ಸ್ ಮತ್ತು ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ೨೯-೭-೨೦೨೦ ಬುಧವಾರ ಬಂದಿವೆ. ಈ ಹಿಂದೆ ಒಂದು ವಿಮಾನ ಬಂದಿತ್ತ. ಆ ಮೂಲಕ ಭಾರತದ ವಾಯುಸೇನೆಯ ಸಾಮರ್ಥ್ಯವನ್ನು ಹೆಚ್ಚು ಮಾಡಿವೆ. ಪ್ರಾನ್ಸ್ ದೇಶದ ಪ್ರಮುಖ ವಾಯುಯಾನ ಕಂಪನಿ ರಫೇಲ್‌ನಿಂದ 36 ಯುದ್ಧವಿಮಾನಗಳನ್ನು ಖರೀದಿಸಲು ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ 2016ರ ಸೆಪ್ಟೆಂಬರ್‌ನಲ್ಲಿ ರೂ.59,000 ಕೋಟಿ ಮೊತ್ತದ ವ್ಯವಹಾರ ಒಪ್ಪಂದ ಮಾಡಿಕೊಂಡಿತ್ತು.[೧೪]
ಭಾರತದ ಅಗತ್ಯ
[ಬದಲಾಯಿಸಿ]- ವಾಯುಪಡೆಯ ಉನ್ನತ ಅಧಿಕಾರಿಗಳು ಇಂದು ಭಾತರದ ಉತ್ತರ ಮತ್ತು ಪಶ್ಚಿಮ ಗಡಿ ರಕ್ಷಿಸಲು (ಪಾಕಿಸ್ತಾನ ಮತ್ತು ಚೀನಾ-ಗಡಿ) ಕನಿಷ್ಠ 42 ವಿಮಾನದಳ ತುಕಡಿಗಳು ಅಗತ್ಯವಿದೆ ಎಂದು ಹೇಳುತ್ತಾರೆ.
- ಇದು ಪ್ರಸ್ತುತ ಸುಮಾರು 32 ವಿಮಾನದಳ ತುಕಡಿಗಳನ್ನು ಒಳಗೊಂಡಿದೆ, ಪ್ರತಯೊಂದರಲ್ಲಿ 18 ವಿಮಾನಗಳಿವೆ, ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಿಗೆ ಕಳೆದ ವರ್ಷ, ಪರಮಾಣು ಶಸ್ತ್ರಸಜ್ಜಿತ ನೆರೆಯ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ ಸರಿಸಮಾನವಾಗಿ ಭಾರತ ತಂಡದ ತುಕಡಿಗಳು 2022ರ ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದೆಂದು ಎಚ್ಚರಿಸಿದ್ದಾರೆ.ಆದರೆ ನಿಜವಾದ ಕಾಳಜಿ ಚೀನಾ, ಪಾಕಿಸ್ತಾನದ ಮಿತ್ರರಾಷ್ಟ್ರ; ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಿಂತ ಹೆಚ್ಚು.[೧೫]
ವಾಯು ಪಡೆಯ ಮುಖ್ಯಸ್ತರ ನೇಮಕ
[ಬದಲಾಯಿಸಿ]- 18 Dec, 2016
- ಏರ್ ಚೀಫ್ ಮಾರ್ಷಲ್ ರಾಕೇಶ್ ಸಿಂಗ್ ಭಾದೌಇರ ಅವರನ್ನು ವಾಯು ಪಡೆಯ (ಐಎಎಫ್) ಮುಖ್ಯಸ್ಥರನ್ನಾಗಿ ಕೇಂದ್ರ ಸರ್ಕಾರ ಶನಿವಾರ ನೇಮಕ ಮಾಡಿದೆ. ವಾಯುಪಡೆಯ ಮುಖ್ಯಸ್ಥರಾದ ಧನೋವಾ ಅವರು ಸೆಪ್ಟೆಂಬರ್ 30 ರಂದು ನಿವೃತ್ತರಾಗಲಿದ್ದು, ರಾಕೇಶ್ ಸಿಂಗ್ ಭಾದೌಇರ ಅವರು ಅದೇ ದಿನ ಅಧಿಕಾರ ವಹಿಸಿಕೊಳ್ಳಲಿದ್ದಾರೆ.[೧೬]
ಇವನ್ನೂ ನೋಡಿ
[ಬದಲಾಯಿಸಿ]- ಭಾರತ
- ಭಾರತೀಯ ಸೈನ್ಯ
- ಭಾರತೀಯ ಭೂಸೇನೆ
- ಭಾರತೀಯ ವಾಯುಸೇನೆ
- ಭಾರತೀಯ ನೌಕಾಸೇನೆ
- ಭಾರತೀಯ ಸೈನ್ಯ
- ಭಾರತ ಮತ್ತು ಪಾಕೀಸ್ತಾನಗಳ ಆರ್ಥಿಕ ಬಲ ಮತ್ತು ಸೈನ್ಯ ಬಲ
- ಭಾರತದಲ್ಲಿ ಕ್ಷಿಪಣಿ ವ್ವಸ್ಥೆ
- mega Rafale fighter deal [೧][೨]
- Why Rafale is a Big Mistake- Archived 2016-09-24 ವೇಬ್ಯಾಕ್ ಮೆಷಿನ್ ನಲ್ಲಿ.
- All you need to know about the Rafale deal
- ಆಗಸ್ಟಾ ವೆಸ್ಟ್ಲೆಂಡ್ ಹೆಲಿಕಾಪ್ಟರ್
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- ಅಧಿಕೃತ ತಾಣ
- ವಾಯುಸೇನೆಯ ಬಗ್ಗೆ ಮಾಹಿತಿ
- ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್) :ಅಭಿಪ್ರಾಯಗಳು;8 Oct, 2016 [೩] Archived 2016-10-08 ವೇಬ್ಯಾಕ್ ಮೆಷಿನ್ ನಲ್ಲಿ.
- ನಿರ್ದಿಷ್ಟ ಕಾರ್ಯಾಚರಣೆ (ಸರ್ಜಿಕಲ್ ಸ್ಟ್ರೈಕ್);ಸೇನೆಯ ಹೊಟ್ಟೆ ಗಟ್ಟಿ ಮಾಡಿ!;8 Oct, 2016;[೪] Archived 2016-10-08 ವೇಬ್ಯಾಕ್ ಮೆಷಿನ್ ನಲ್ಲಿ.
ಉಲ್ಲೇಖ
[ಬದಲಾಯಿಸಿ]- ↑ name="Strength_of_Defence_Forces"
- ↑ name="Flightglobal"
- ↑ name="IISS2014_p245"
- ↑ The Military Balance 2014, p.245
- ↑ "The IAF Motto". Webmaster IAF – Air Headquarters. Archived from the original on 10 ಏಪ್ರಿಲ್ 2009. Retrieved 7 April 2009.
- ↑ "A Mother in India: 8th October". 22 October 2007. Retrieved 20 July 2010.
- ↑ http://www.financialexpress.com/india-news/air-marshal-sb-deo-to-be-new-vice-chief-of-iaf-air-marshal-c-hari-kumar-to-take-charge-of-western-air-command/489723/
- ↑ ಭಾರತೀಯ ವಾಯುಪಡೆ;44 ವರ್ಷ ಹಳೆಯ ಮಿಗ್ ಯುದ್ಧ ವಿಮಾನ; ಅಷ್ಟು ವರ್ಷದ ಕಾರನ್ನೂ ಯಾರೂ ಬಳಸಲ್ಲ–ಧನೋಆ;d: 20 ಆಗಸ್ಟ್ 2019
- ↑ ಮತ್ತೆ ಮಿಗ್–21 ಯುದ್ಧ ವಿಮಾನ ಅಪಘಾತ[ಶಾಶ್ವತವಾಗಿ ಮಡಿದ ಕೊಂಡಿ]
- ↑ "ಆರ್ಕೈವ್ ನಕಲು". Archived from the original on 2016-09-24. Retrieved 2016-09-24.
- ↑ All you need to know about the Rafale deal DEEPALAKSHMI K.
- ↑ [೫]
- ↑ ರಫೆಲ್ ಜೆಟ್ ಒಪ್ಪಂದಕ್ಕೆ ಇಂದು ಸಹಿ[ಶಾಶ್ವತವಾಗಿ ಮಡಿದ ಕೊಂಡಿ]
- ↑ ರಫೇಲ್ ಜೆಟ್ ಭಾರತ ಸೈನ್ಯದ ಪರಾಕ್ರಮ ಹೆಚ್ಚಿಸಿದ ಯುದ್ದ ವಿಮಾನಗಳ ಚಿತ್ರ ಸಹಿತ ಮಾಹಿತಿ; d: 30 ಜುಲೈ 2020,
- ↑ 2022ರ ಹೊತ್ತಿಗೆ ಕೇವಲ 25ತುಕಡಿಗೆ ಇಳಿಯಬಹುದು
- ↑ ಲೆ.ಜ. ರಾವತ್ ಸೇನಾ ಪಡೆ, ಧನೋವಾ ವಾಯುಪಡೆ ಮುಖ್ಯಸ್ಥ;;ಪಿಟಿಐ;30 ಸೆಪ್ಟೆಂಬರ್ , 2019
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- ಭಾರತ
- ಸಮಾಜ
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಫೆಬ್ರವರಿ 2024
- Articles with invalid date parameter in template