ವಿಷಯಕ್ಕೆ ಹೋಗು

ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
"ಆಕಾಶವನ್ನು ಸ್ಪರ್ಶಿಸುವೆವು"
ರಫೆಲ್ ಯುದ್ಧವಿಮಾನ
.
ದಸ್ಸಾಲ್ಟ ರಾಫೇಲ್ ಯುದ್ಧವಿಮಾನ ೨೦೧೧ರ ಪ್ರದರ್ಶನದಲ್ಲಿ.
 • ವಿಶೇಷತೆ ಮತ್ತು ಪ್ರದರ್ಶನ ಡೇಟಾ
 • ಬೋರ್ಡೋ ಮೆರಿಗ್ಞಾಕ್ (Bordeaux Merignac) ಫೆಸಿಲಿಟಿ, ಫ್ರಾನ್ಸ್. ಡಸ್ಸಾಲ್ಟ್ ಏವಿಯೇಷನ್ ಕಾರ್ಖಾನೆಯಲ್ಲಿ ರಫೆಲ್’ನ ಅಂತಿಮ ಜೋಡಣೆ.
 • ಆಯಾಮಗಳು:
 • ವಿಂಗ್ ವಿಸ್ತಾರ= 10,90 ಮೀ
 • ಉದ್ದ =15.30 ಮೀ
 • ಎತ್ತರ =5.30 ಮೀ
 • ತೂಕ:
 • ಒಟ್ಟಾರೆ ಖಾಲಿ ತೂಕ 10 ಟಿ (22,000 ಪೌಂಡ್) ವರ್ಗ
 • ಮ್ಯಾಕ್ಸ್. ಜಿಗಿತದಲ್ಲಿ ತೂಕ 24.5 ಟಿ (54,000 ಪೌಂಡ್)
 • ಇಂಧನ (ಆಂತರಿಕ) 4.7 ಟಿ (10,300 ಪೌಂಡ್)
 • ಇಂಧನ (ಬಾಹ್ಯ) 6.7 ಟಿ ಅಪ್ (14,700 ಪೌಂಡ್)
 • ಬಾಹ್ಯ ಲೋಡ್ 9.5 ಟಿ (21,000 ಪೌಂಡ್)
 • ಖರೀದಿ = 36 ರಾಫೆಲ್ ಯುದ್ಧ ವಿಮಾನ
 • ಬೆಲೆ,ಪ್ರತಿಯೊಂದಕ್ಕೆ =1638 ಕೋಟಿ ರೂ.
.

ಭಾರತಕ್ಕೆ 36 ರಫೇಲ್ ಯುದ್ಧ ವಿಮಾನ[ಬದಲಾಯಿಸಿ]

Dassault Rafale

 • ಭಾರತ ಮತ್ತು ಫ್ರಾನ್ಸ್ ದೇಶಗಳ ನಡುವೆ 36 ರಾಫೆಲ್ ಯುದ್ಧ ವಿಮಾನ (Rafale Aircraft ) ವ್ಯವಹಾರ ಒಪ್ಪಂದಕ್ಕೆ 23 ಸೆಪ್ಟಂಬರ್ 2016 ಶುಕ್ರವಾರ ಸಹಿ ಹಾಕಿವೆ. ಸುಮಾರು 7.8 ಬಿಲಿಯನ್ ಯುರೋ (ಸುಮಾರು 780 ಕೋಟಿ ಯುರೋ) ವ್ಯವಹಾರಿಕ ಮೊತ್ತ ಇದಾಗಿದೆ. ಕೇಂದ್ರ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್ ರಕ್ಷಣಾ ಸಚಿವ ಜಿಯಾನ್ ವೈವೆಸ್ ಲೆಡ್ರಿಯನ್ ಅವರು ದೆಹಲಿಯಲ್ಲಿ ಈ ಐತಿಹಾಸಿಕ ಒಪ್ಪಂದಕ್ಕೆ ಸಹಿ ಹಾಕಿದರು. ಫ್ರಾನ್ಸಿಗೆ ಶೆಲ್ಪ್ ಡಸ್ಸಾಲ್ಟ್ ರಾಫೆಲ್ ಅವಳಿ ಇಂಜಿನ್ ಯುದ್ಧ ವಿಮಾನಗಳಿಗಾಗಿ ಅಂದಾಜು 58,000/ರೂ.59 ಸಾವಿರ ಕೋಟಿ ರೂಪಾಯಿಗಳನ್ನು ಪಾವತಿ ಮಾಡಲಿದೆ. ಶೇಕಡಾ 15ರಷ್ಟು ಹಣವನ್ನು ಮುಂಗಡವಾಗಿ ಪಾವತಿ ಮಾಡಲಿದೆ.[೧]
 • ಭಾರತದ ವಾಯುಪಡೆಯು ಪ್ರಸ್ತುತ ಸುಮಾರು ಪ್ರತಿಯೊಂದೂ 18 ವಿಮಾನಗಳಿರುವ 32 ತುಕಡಿಗಳನ್ನು ಒಳಗೊಂಡಿದೆ,. ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಗೆ ಕಳೆದ ವರ್ಷ ತನ್ನ ಪರಮಾಣು ಶಸ್ತ್ರಸಜ್ಜಿತ ನೆರೆಯ ಮತ್ತು ನೇರ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ 2022 ರ ಹೊತ್ತಿಗೆ ಸರಿಸಮಾನವಾಗುವುದೆಂದೂ ಭಾರತ ತಂಡದಿಂದ ತುಕಡಿಗಳು ಸಂಖ್ಯೆ 25 ಇಳಿಯುವುದೆಂದೂ ಎಚ್ಚರಿಸಿದ್ದಾರೆ. ಆದರೆ ನಿಜವಾದ ಕಾಳಜಿ ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ, ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಲಿಂತ ಹೆಚ್ಚು ಬಲಿಷ್ಠವಾಗಿದೆ.
 • ರಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ 23-9-2016 ರಂದು ಸಹಿ ಮಾಡಿದವು. 16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು. [೨]

ಸೋವಿಯತ್‍ನ ಮಿಗ್ 21 ರ ಸಮಸ್ಯೆ[ಬದಲಾಯಿಸಿ]

 • ಸೋವಿಯತ್‍ನ ಹಳೆಯ ಕಾಲದ ಮಿಗ್ 21 ಫ್ಲೀಟ್ ಎಂಜಿನ್ ತೊಂದರೆ ಕೊಡುತ್ತಿರುವುದರಿಂದ ಮತ್ತು ಹೊಸದು ಅಲಭ್ಯತೆ ಕಾರಣ ಭಾರತ ತನ್ನ ನೆಲದ ಮತ್ತು ಸಮುದ್ರದ ವೈಮಾನಿಕ ದಾಳಿಯ ಕ್ಷಮತೆಯನ್ನು ಬಲಪಡಿಸುವ ಅಗತ್ಯವಿದೆ. ಅವಳಿ ಎಂಜಿನ್ ನ ರಫೆಲ್ ಯುದ್ಧ ವಿಮಾನ ವಾಯು ರಕ್ಷಣಾ ಮತ್ತು ವಾಯು ಶ್ರೇಷ್ಟತೆಯನ್ನು ಬೇಹುಗಾರಿಕೆ ಹಾಗೂ ಪರಮಾಣು ಧಾಳಿ ನಿರೋಧ ನಾನಾ ಬಗೆಯ ಕಾರ್ಯ ನಿರ್ವಹಣೆಯ ಸಾಮರ್ಥ್ಯವನ್ನು ಹೊಂದಿದೆ.
 • ಭಾರತ 36 ಫ್ರೆಂಚ್ ರಫೆಲ್ (ಫೈಟರ್ ಜೆಟ್ಸ್ ಯುದ್ಧ ವಿಮಾನಗಳ ಖರೀದಿಸಲು ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ ಶುಕ್ರವಾರ ಸಹಿ ಮಾಡಿದವು. ಅತ್ಯಾಧುನಿಕ ಕ್ಷಿಪಣಿ ಹಾಗೂ ಶಸ್ತ್ರಾಸ್ತ್ರ ಹೊತ್ತೊಯ್ಯುವ ಸಾಮರ್ಥ್ಯ ಇರುವ ಈ ಯುದ್ಧ ವಿಮಾನ, ಭಾರತೀಯ ವಾಯುಪಡೆಗೆ ಪಾಕಿಸ್ತಾನಕ್ಕಿಂತ ಹೆಚ್ಚಿನ ಸಾಮರ್ಥ್ಯವನ್ನು ನೀಡಲಿದೆ ಎನ್ನಲಾಗಿದೆ. ಭಾರತದ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಮತ್ತು ಫ್ರಾನ್ಸ್‌ನ ರಕ್ಷಣಾ ಸಚಿವ ಜೀನ್ ಯವೆಸ್‌ ಲೆ ಡ್ರಿಯಾನ್ ಅವರ ಸಮ್ಮುಖದಲ್ಲಿ ಈ ಒಪ್ಪಂದ ನಡೆದಿದೆ. 16 ತಿಂಗಳ ಹಿಂದೆ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲಾಗುವುದು ಎಂದು ಘೋಷಿಸಿದ್ದರು.[೩]
 • ಫ್ರೆಂಚ್ ನ ರಕ್ಷಣಾ ಸಚಿವ ಜೀನ್ ಯೆಸ್ ಲೆ ಡ್ರಿಯಾನ್ ಅವರು ನವದೆಹಲಿಗೆ ಆಗಮಿಸಿದ್ದು ಬಹುನಿರೀಕ್ಷಿತ ರಫೆಲ್ ಜೆಟ್ ಒಪ್ಪಂದಕ್ಕೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹಿಹಾಕಿದ್ದಾರೆ. ಫ್ರಾನ್ಸ್ ನೊಂದಿಗೆ ಚೌಕಾಶಿ ಮೂಲಕ ಭಾರತ 7.8 ಬಿಲಿಯನ್ ಯುರೋಗಳಿಗೆ 36 ರಾಫೆಲ್ ಜೆಟ್ ಗಳನ್ನು ಖರೀದಿಸುವುದು ಅಂತಿಮವಾಗಿದ್ದು, ಒಪ್ಪಂದ ಪ್ರಕ್ರಿಯೆಯಲ್ಲಿ ರಾಫೆಲ್ ಜೆಟ್ ತಯಾರಕ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಸೇರಿದಂತೆ ಫ್ರೆಂಚ್ ನ ಹಲವು ಸಂಸ್ಥೆಗಳ ಸಿಇಒಗಳು ಭಾಗಿಯಾಗಿದ್ದಾರೆ.

ಸಾಮರ್ಥ್ಯ[ಬದಲಾಯಿಸಿ]

ಡಸ್ಸಾಲ್ಟ್ ರಾಫೆಲ್ ಬಿ
 • ೧.ವೇಗ:(ತಾಪಮಾನ. 20 ° ಸಿ (68 ಡಿಗ್ರಿ ಫ್ಯಾರನ್ಹೀಟ್) ಸಮುದ್ರ ಮಟ್ಟದ ಗಾಳಿಯಲ್ಲಿ, ಶಬ್ದದ ವೇಗ ಸುಮಾರು 343 ಮೀ/ಸೆ. (;767 m/ph ಎಮ್ಪಿಎಚ್ 1,230 ಕಿಮೀ/ಗಂ) ಆಗಿದೆ)
 • ರಫೆಲ್ ಹಾರಾಟ ಪರೀಕ್ಷೆಯ ಕಾರ್ಯಸೂಚಿಯ ಉದ್ದಕ್ಕೂ ವಿಮಾನ ಹಾರಾಟ ಕಾರ್ಯಾಚರಣೆಗಳ ಸಂದರ್ಭದಲ್ಲಿ ಚಾಲಕನ ದೃಷ್ಟಿಯಲ್ಲಿ ತನಿಖೆ ಕ್ಷೇತ್ರದಲ್ಲಿ ಕ್ಲೆಮಂಚು ಮತ್ತು ಫಾಚ್ ವಿಮಾನದಲ್ಲಿ ಹಲವಾರು ಹಗಲು ಮತ್ತು ರಾತ್ರಿ ಆರಂಭದ ಜಿಗಿತ (ಟೇಕ್ ಆಫ್ಸ್) ಮತ್ತು ಇಳಿಯುವಿಕೆಗಳ ಪ್ರದರ್ಶನಗಳಲ್ಲಿ ಮತ್ತು 13,000 ಮೀಟರ್ (42,000 ಅಡಿ). ಎತ್ತರದಲ್ಲಿ 2,450 ಕಿಮೀ / ಗಂ 1,322.9 ಕಿಲೋನ್ಯೂಟನ್)(;1,522 ಎಮ್ಪಿಎಚ್ (mph); ಇದು ಮ್ಯಾಕ್ 2 ವೇಗವನ್ನು ತಲುಪಿತು.[೪]
 • ಭಾರತದ ವಾಯುಪ್ರದೇಶದಲ್ಲಿ ಹಾರಾಟ ನಡೆಸುತ್ತಲೇ ಆಕಾಶದಿಂದ ಆಕಾಶಕ್ಕೆ 150 ಕಿ.ಮೀ. ಮತ್ತು ಆಕಾಶದಿಂದ ಭೂಮಿಗೆ 300 ಕಿ.ಮೀ.ಗಳಷ್ಟು ದೂರದವರೆಗೆ ಕ್ಷಿಪಣಿ ದಾಳಿ ನಡೆಸುವ ರಫೇಲ್‌ಗಳ ಸಾಮರ್ಥ್ಯಕ್ಕೆ ಭಾರತ ಉಪಖಂಡದಲ್ಲಿ ಸದ್ಯಕ್ಕೆ ಸರಿಸಾಟಿಯಾವುದೂ ಇಲ್ಲ.[೫]

ಇತಿಹಾಸ[ಬದಲಾಯಿಸಿ]

 • ಯುಪಿಎ ಸರ್ಕಾರದ ಅವಧಿಯಲ್ಲಿ ಮಾಡಿಕೊಳ್ಳಲಾಗಿದ್ದ ಒಪ್ಪಂದವನ್ನು ಮೋದಿ ಸರ್ಕಾರ ರದ್ದುಗೊಳಿಸಿ ಹೊಸ ಒಪ್ಪಂದಕ್ಕೆ ಮುಂದಾಗಿದ್ದು, ಇದರಿಂದಾಗಿ ಭಾರತಕ್ಕೆ 750 ಮಿಲಿಯನ್ ಯುರೋಗಳಷ್ಟು ಹಣ ಉಳಿತಾಯವಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಒಪ್ಪಂದ ನಡೆದ 36 ತಿಂಗಳಲ್ಲಿ ರಾಫೆಲ್ ಜೆಟ್ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳಲಿದ್ದು, 66 ತಿಂಗಳಲ್ಲಿ ಒಟ್ಟು 36 ರಾಫೆಲ್ ಜೆಟ್ ಗಳು ಭಾರತದ ಕೈಸೇರಲಿವೆ. ಭಾರತೀಯ ವಾಯುಸೇನೆ ಬಳಿ ಇಲ್ಲದ ಅತ್ಯಾಧುನಿಕ ಸ್ಕಾಪ್‌, 150 ಕಿ.ಮೀ.ಗಿಂತ ಹೆಚ್ಚಿನ ವ್ಯಾಪ್ತಿ ಹೊಂದಿರುವ ಮಿಟಿಯೋರ್ ಕ್ಷಿಪಣಿಗಳು ಈ ಯುದ್ಧ ವಿಮಾನದಲ್ಲಿ ಇರಲಿವೆ
 • ಕಳೆದ ವರ್ಷ ಏಪ್ರಿಲ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ನಲ್ಲಿ, 126 ರಫೆಲ್ಸ್ ಖರೀದಿಸಲು ಮೂಲ ಯೋಜನೆಯನ್ನು ರದ್ದು ಮಾಡಿ ಸರ್ಕಾರ ಮತ್ತು ಸರ್ಕಾರಗಳ ನೇರ ಒಪ್ಪಂದದ ಅಡಿಯಲ್ಲಿ ಫ್ರೆಂಚ್ ಫೈಟರ್ ಜೆಟ್ಸ್ ಖರೀದಿಸಲು ಘೋಷಿಸಿದರು. ಆದರೆ ಭಾರತ ಡಸ್ಸಾಲ್ಟ್ ಏವಿಯೇಷನ್ ವಿಮಾನ ತಯಾರಕ ವಾಣಿಜ್ಯ ಮಾತುಕತೆಗಳ ನಂತರ ದರದ ವಿಷಯದಲ್ಲಿ ಒಪ್ಪಂದ ಹಾನಿಗೊಳಗಾಯಿತು.
 • ರಫೆಲ್ ಕಾದಾಳಿಗಳು/ಫೈಟರ್ಗಳು ಜನವರಿ 2012 ರಲ್ಲಿ ಐದು ಅಂತರಾಷ್ಟ್ರೀಯ ಎದುರಾಳಿಗಳೊಡನೆ ಸ್ಪರ್ಧಿಸಿ ಅಗ್ರಗಣ್ಯ ಸ್ಪರ್ಧಿಯಾಗಿ ಹೊರಹೊಮ್ಮಿತು. ಡಸ್ಸಾಲ್ಟ್ ಏವಿಯೇಷನ್. ಭಾರತದ ಸರ್ಕಾರ ಯಾ ಫ್ರೆಂಚ್ ಸರ್ಕಾರ ಒಪ್ಪಂದದ ಅಡಿಯಲ್ಲಿ 36 ರಿಫೇಲ್ಸ್ ಖರೀದಿ ಮಾಡಲು ಮೋದಿ ಹರಾಜು ದರ ಘೋಷಿಸಿದರು ಆದಾಗ್ಯೂ ದರ ಘೋಷಣೆ ಒಪ್ಪಂದ ರದ್ದು ಗೊಂಡಿತು. ಈಗ ಪುನಹ ಚೌಕಾಶಿ ನಂತರ ರಫೇಲ್ ಯುದ್ಧ ವಿಮಾನಗಳ ಖರೀದಿಗೆ ರೂ.59 ಸಾವಿರ ಕೋಟಿ ಮೊತ್ತದ ಒಪ್ಪಂದಕ್ಕೆ ಭಾರತ ಮತ್ತು ಫ್ರಾನ್ಸ್‌ 23-9-2016 ಶುಕ್ರವಾರ ಸಹಿ ಮಾಡಿದವು. ಭಾರತ ಚೀನಾ ಮತ್ತು ಪಾಕಿಸ್ತಾನ ಸಂಯೋಜಿತ ಬೆದರಿಕೆಯನ್ನು ಎದುರಿಸಲು 45 ಹೋರಾಟಗಾರ ಧಾಳಿವಿಮಾನಗಳ ತುಕಡಿಗಳ ಅಗತ್ಯವಿದೆ, ಆದರೆ ಇಂದು ಸುಮಾರು ತಲಾ 18 ವಿಮಾನಗಳ, ಕೇವಲ 34 ತುಕಡಿಗಳನ್ನು ವಾಯುದಳ ಹೊಂದಿದೆ. ಅಲ್ಲದೆ, ಈ ತುಕಡಿಗಳು 14 ವಿಂಟೇಜ್ ಮಿಗ್ -21 ಮತ್ತು ಮಿಗ್ -27 ಯುದ್ಧ ವಿಮಾನಗಳನ್ನು ಅಳವಡಿಸಿಕೊಂಡಿವೆ.[೬]

ಕನಿಷ್ಠ 42 ತುಕಡಿಗಳು ಅಗತ್ಯ[ಬದಲಾಯಿಸಿ]

 • ಇದು ಪಾಕಿಸ್ತಾನ ಮತ್ತು ಚೀನಾ ಅದರ ಉತ್ತರ ಮತ್ತು ಪಶ್ಚಿಮ ಗಡಿ ರಕ್ಷಿಸಲು ಕನಿಷ್ಠ 42 ತುಕಡಿಗಳು ಅಗತ್ಯವಿದೆ ಹೇಳುತ್ತಾರೆ. ರಫೆಲ್ ಯುದ್ಧವಿಮಾನ - ಭಾರತ ಮತ್ತು ಫ್ರಾನ್ಸ್ ಒಪ್ಪಂದದ ನಂತರ ಭಾರತದ ವಾಯುಪಡೆಯು ಪ್ರಸ್ತುತ ಸುಮಾರು ಪ್ರತಿಯೊಂದೂ 18 ವಿಮಾನಗಳಿರುವ 32 ತುಕಡಿಗಳನ್ನು ಒಳಗೊಂಡಿದೆ. ವಾಯುಪಡೆಯ ಪ್ರತಿನಿಧಿಗಳು ಭಾರತದ ಸಂಸತ್ತಿಗೆ ಕಳೆದ ವರ್ಷ ತನ್ನ ಪರಮಾಣು ಶಸ್ತ್ರಸಜ್ಜಿತ ನೆರೆಯ ಮತ್ತು ನೇರ ಪ್ರತಿಸ್ಪರ್ಧಿ ಪಾಕಿಸ್ತಾನಕ್ಕೆ 2022 ರ ಹೊತ್ತಿಗೆ ಸರಿಸಮಾನವಾಗುವುದೆಂದೂ ಭಾರತ ತಂಡದಿಂದ ತುಕಡಿಗಳು ಸಂಖ್ಯೆ 25 ಇಳಿಯುವುದೆಂದೂ ಎಚ್ಚರಿಸಿದ್ದಾರೆ. ಆದರೆ ನಿಜವಾದ ಕಾಳಜಿ ಪಾಕಿಸ್ತಾನದ ಮಿತ್ರರಾಷ್ಟ್ರ ಚೀನಾ, ಅವರ ಮಿಲಿಟರಿ ಸಾಮರ್ಥ್ಯ ಭಾರತದಕ್ಕಿಂತ ಹೆಚ್ಚು ಬಲಿಷ್ಠವಾಗಿದೆ. ಈಗ ಭಾರತ 126 ವಿಮಾನಗಳ ಬದಲಿಗೆ ಭಾರತ 36 ವಿಮಾನಗಳ ಕೇವಲ 2 ತುಕಡಿಗಳನ್ನು ಸೇರಿಸಿದಂತಾಗಿದೆ. 36 ಫೈಟರ್‍ಗಳ 17 ತುಕಡಿಗಳ, 612 ಜೆಟ್‍ಗಳ ಕೊರತೆ ಬೀಳುವುದು;ಆದರೆ ಸರ್ಕಾರ ಅದರ ಬಗೆಗೆ ಏನೂ ಹೇಳಿಲ್ಲ.[೭]
 • ಫೋಟೊ:[[೧]]
 • ಒಪ್ಪಂದದ ಮೂಲಕ ಫ್ರಾನ್ಸ್ ಭಾರತದ ಮಿಲಿಟರಿ ವಾಯುಯಾನ ವಿಜ್ಞಾನ ಸಂಬಂಧಿ ಸಂಶೋಧನೆಗಳಿಗೂ ಕಾರ್ಯಕ್ರಮಗಳಲ್ಲಿ ಶೇಕಡ 30 ರಷ್ಟು - 7.8 ಬಿಲಿಯನ್ ಯುರೋಗಳಷ್ಟು ಹೂಡಿಕೆ ಮಾಡುವುದು; ಮತ್ತು ಅದರೊಡನೆ ಶೇಕಡಾ 20 ರಷ್ಟು ರಫೆಲ್ ಘಟಕಗಳ ಬಿಡಿಭಾಗಗಳ ಸ್ಥಳೀಯ ನಿರ್ಮಾಣ ಷರತ್ತು ಇಲ್ಲದೆ ಬಂಡವಾಳ ಹೂಡಿಕೆ ಸೇರಿದೆ.
 • ಈ ಜನವರಿಯಲ್ಲಿ ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲಾಂಡ್ ಗಣರಾಜ್ಯೋತ್ಸವ ಮುಖ್ಯ ಅತಿಥಿಯಾಗಿ ಬಂದಾಗ ಒಪ್ಪಂದಕ್ಕೆ ಸಹಿ ಮಾಡಲಿಲ್ಲ, ಏಕೆಂದರೆ ಭಾರತ ಉತ್ತಮ (ಕಡಿಮೆ) ಬೆಲೆಯನ್ನು ಬಯಸಿತ್ತು.
 • ಭಾರತೀಯ ವಾಯು ಪಡೆಗೆ ಈ ಒಪ್ಪಂದವು ಕಹಿಯೂ, ಸಿಹಿಯೂ ಆದ ಸುದ್ದಿ ಆಗಿದೆ. ಒಂದೆಡೆ, ರಾಷ್ಟ್ರದ ಚಾಕಚಕ್ಯತೆಯ ಎರಡು ತುಕಡಿಗಳ ಯುದ್ಧವಿಮಾನ ಲಭ್ಯತೆಯನ್ನು ಅವರು ಪಡೆಯುವರು ; ಮತ್ತೊಂದೆಡೆ, ಮೂಲ ಅವಶ್ಯಕತೆಯಾದ ಕನಿಷ್ಠ 126 ಜೆಟ್‍ಗಳ ದೊಡ್ಡ ಕೊರತೆಯೊಡನೆ ಕಾಲ ಮಾಡಬೇಕಾಗುವುದು.[೮]

ವಾಯುಸೇನೆಗೆ ಕನಿಷ್ಠ 126 ಅತ್ಯಾಧುನಿಕ ಫೈಟರ್ ಜೆಟ್‍ಗಳು ಅಗತ್ಯ[ಬದಲಾಯಿಸಿ]

 • ಸೆ.23 ರಂದು ಭಾರತ- ಫ್ರಾನ್ಸ್ ನಡುವೆ ನಡೆದ ರಾಫೆಲ್ ಜೆಟ್ ಖರೀದಿ ಒಪ್ಪಂದದ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ.ಯುಪಿಎ ಸರ್ಕಾರ ಅಸ್ತಿತ್ವದಲ್ಲಿದ್ದಾಗ 126 ರಾಫೆಲ್ ಜೆಟ್ ಗಾಲ ಖರೀದಿಯನ್ನು ಅಂತಿಮಗೊಳಿಸಲಾಗಿತ್ತು. ಆದರೆ ಬಿಜೆಪಿ ಅದನ್ನು ಕೇವಲ 36 ಕ್ಕೆ ಇಳಿಸಿದೆ. ಭಾರತೀಯ ವಾಯು ಸೇನೆ ಪರಿಸ್ಥಿತಿ ಅಸ್ಥಿರವಾಗಿದ್ದು ಸೂಕ್ಷ್ಮವಾಗಿದೆ ಇಂತಹ ಪರಿಸ್ಥಿತಿಯಲ್ಲೂ ಬಿಜೆಪಿ ಖರೀದಿಸಬೇಕಿದ್ದ ಅತ್ಯಾಧುನಿಕ ರಾಫೆಲ್ ಜೆಟ್ ಗಳ ಸಂಖ್ಯೆಯನ್ನು 36 ಕ್ಕೆ ಇಳಿಸಿದೆ, ಎಂದು ಕಾಂಗ್ರೆಸ್ ನಾಯಕ ಮಾಜಿ ರಕ್ಷಣಾ ಸಚಿವ ಎಕೆ ಆಂಟೋನಿ ಆರೋಪಿಸಿದ್ದಾರೆ.
 • ಯುಪಿಎ ಸರ್ಕಾರದ ಅವಧಿಯಲ್ಲಿ ಭಾರತೀಯ ವಾಯು ಸೇನೆಗೆ ಕನಿಷ್ಠ 126 ಅತ್ಯಾಧುನಿಕ ಫೈಟರ್ ಜೆಟ್ ಗಳು ಅಗತ್ಯವಿತ್ತು. ಪ್ರಸ್ತುತ ಅತ್ಯಾಧುನಿಕ ಫೈಟರ್ ಜೆಟ್ ಗಳ 32 ತುಕಡಿಗಳು ಅಗತ್ಯವಿದೆ. 2022 ರ ವೇಳೆಗೆ ಇದು 25 ಕ್ಕೆ ಇಳಿಕೆಯಾಗಲಿದೆ ಎಂದು ಮಾಜಿ ರಕ್ಷಣಾ ಸಚಿವರು ಮಾಹಿತಿ ನೀಡಿದ್ದಾರೆ. ಒಂದೆಡೆ ಪಾಕಿಸ್ತಾನ, ಚೀನಾ ತಮ್ಮ ಸೇನಾ ಸಾಮರ್ಥ್ಯಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದರೆ ಮತ್ತೊಂದೆಡೆ ಭಾರತದ ಅಂತರ ಹೆಚ್ಚಾಗುತ್ತಿದೆ, ಇದನ್ನು ಸರಿದೂಗಿಸುವುದಕ್ಕೆ ಕೇಂದ್ರ ಸರ್ಕಾರ ಯಾವ ರೀತಿಯ ಯೋಜನೆ ರೂಪಿಸಿದೆ ಎಂದು ರಕ್ಷಣಾ ಸಚಿವ ಎಕೆ ಆಂಟನಿ ಪ್ರಶ್ನಿಸಿದ್ದಾರೆ.ಎಂದು ಕಾಂಗ್ರೆಸ್ ನಾಯಕ ಮಾಜಿ ರಕ್ಷಣಾ ಸಚಿವ ಎಕೆ ಆಂಟೋನಿ ಆರೋಪಿಸಿದ್ದಾರೆ.[೯]

ಭಾರತದಲ್ಲಿ ತಯಾರಿ ಇಲ್ಲ ಏಕೆ[ಬದಲಾಯಿಸಿ]

 • ಮಾಜಿರಕ್ಷಣಾ ಸಚಿವ ಆಂಟನಿಯವರು ಮೂಲ ಯೋಜನೆಯಲ್ಲಿದ್ದ 'ಭಾರತದಲ್ಲಿ ಮಾಡಿ' ಕಲ್ಪನೆಯೂ ವ್ಯವಹಾರದಲ್ಲಿ ಇಲ್ಲದಂತಾಗಿದೆ,' ಎಂದು ಬೇಸರಿಸಿದರು. "ಯುಪಿಎ ಅವಧಿಯಲ್ಲಿ, ನಾವು ಅದರ ತುರ್ತು ಕಾರ್ಯಾಚರಣೆಯ ಅವಶ್ಯಕತೆ ಮತ್ತು ದೇಶದ ಭದ್ರತಾ ಪರಿಸ್ಥಿತಿಯ ಪರಿಗಣಿಸಿ ಐಎಎಫ್ ಬಲಪಡಿಸಲು 126 ವಿಮಾನ ಖರೀದಿಸಲು ಯೋಜಿಸಿದ್ದೆವು. ,ಈಗ ಕೇವಲ 36 ವಿಮಾನ ಖರೀದಿಸಲ್ಪಡುವುದು ಚಕಿತಗೊಳಿಸುತ್ತದೆ ಎಂದು ಆಂಥೋನಿ ಹೇಳಿದರು.
 • ತಿವಾರಿ ಯುಪಿಎ ರಫೆಲ್ ಏರ್ ಕ್ರಾಫ್ಟನ್ನು ಪ್ರತಿಯೊಂದಕ್ಕೆ ರೂ.715 ಕೋಟಿಗೆ ಸಂಧಾನ ಮೂಲಕದ ಬೆಲೆ ತೂಗಾಡುವ ಸ್ಥಿತಿಯಲ್ಲಿತ್ತು, ಮತ್ತು 36 ವಿಮಾನಗಳಿಗೆ ಇಂದು ಇಂದು ಸಂಧಾನದ ಮೂಲಕ ಪ್ರತಿಯೊಂದಕ್ಕೆ ರೂ 1600 ಕೋಟಿ ಮಾಡಲಾಗಿದೆ; ಇದು ವಿಮಾನ ಪ್ರತಿಯೊಂದಕ್ಕೆ ಶೇ 123 ಏರಿಕೆ ಆಗಿದೆ, ನಿಜ ಏನೆಂಬುದನ್ನು ತಿಳಿಯಲು ಅಪೇಕ್ಷಿಸಿದರು.[೧೦]
 • ಆಂಟನಿಯವರು ಭಾರತ 2012 ರಲ್ಲಿ 126 ರಫೇಲ್ ಜೆಟ್ಗಳನ್ನು ಕೊಳ್ಳಲು ಒಪ್ಪಂದ ನಿರ್ಧರಿಸಿದ್ದು, ವ್ಯವಹಾರವು $ 10.2 ಶತಕೋಟಿ ವೆಚ್ಚ ಅಂದಾಜಿಸಲಾಗಿತ್ತು ಮತ್ತು ಯೋಜನೆ ಪ್ರಕಾರ ಹಾರಾಡುವ ಸ್ಥಿತಿಯಲ್ಲಿ 18 ವಿಮಾನಗಳನ್ನು ಒದಗಿಸಿದ ನಂತರ, ಉಳಿದವನ್ನು ಭಾರತದಲ್ಲಿ ತಯಾರಿಸುವುದು ಎಂದು ನಿರಧರಿಸಲಾಗಿತ್ತು' ಎಂದರು.[೧೧]

ಖರೀದಿ ಇತಿಹಾಸ[ಬದಲಾಯಿಸಿ]

 • ವಾಸ್ತವಿಕ ಕೋಳ್ಳುವ ಪ್ರಕ್ರಿಯೆ:
 • ಭಾರತೀಯ ವಾಯುಪಡೆಯು 2001 ರಲ್ಲಿ ಹೆಚ್ಚು ಐಎಎಫ್ ಫ್ಲೀಟ್ ಹೊಂದಲು ಬಯಸಿತು. ಪ್ರಸ್ತುತ ವಾಯುಪಡೆಯು ಭಾರದ ಮತ್ತು ಸರಳ ತೂಕದ ಯುದ್ಧ ವಿಮಾನಗಳನ್ನು ಹೊಂದಿದೆ. ಆದ್ದರಿಂದ ರಕ್ಷಣಾ ಸಚಿವಾಲಯ ಹೆಚ್ಚುವರಿ ಮಧ್ಯಂತರ ಮಧ್ಯಮ ತೂಕದ ಫೈಟರ್ ಜೆಟ್ಸ್ ತರಲು ಪ್ರಯತ್ನಿಸಿತು. ಈ ಪರಿಗಣನೆ ಮತ್ತು ಕಲ್ಪನೆ 2001 ರ ಆಸುಪಾಸಿನಲ್ಲಿಯೇ ಪ್ರಚಲಿತದಲ್ಲಿತ್ತು ಆದರೂ, ನೈಜ ರಕ್ಷಣಾ ಖರೀದಿ ಪ್ರಕ್ರಿಯೆ, 2007 ಮಂಡಳಿ ಆರಂಭವಾಯಿತು . ನಂತರ ರಕ್ಷಣಾ ಸಚಿವ ಎ.ಕೆ. ಆಂಟನಿ ನೇತೃತ್ವದಲ್ಲಿ, ಆಗಸ್ಟ್ 2007 ರಲ್ಲಿ . ಈ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಹರಾಜಿನಲ್ಲಿ 126 ವಿಮಾನ ಖರೀದಿಸಲು ಅನುಮೋದನೆ ಪಡೆಯಿತು. ಇದು ಹರಾಜುಪ್ರಕ್ರಿಯೆ ಕ್ರಮಬದ್ಧವಾಗಿ ಆರಂಭವಾಗಲು ಕಾರಣವಾಯಿತು.
 • ಭಾರತ ಎಷ್ಟು ರಿಫೇಲ್ಸ್ ಖರೀದಿ ಮಾಡುವುದು ಮತ್ತು ಅದರ ವೆಚ್ಚ:
 • ಒಪ್ಪಂದದ ಆರಂಭದಲ್ಲಿ $10.2 ಶತಕೋಟಿ (ಡಾಲರ್) ಮೌಲ್ಯ ಎಂದು ಅಂದಾಜಿಸಲಾಗಿತ್ತು (ರೂ.54,000 ಕೋಟಿ) 126 ವಿಮಾನ ಕೊಳ್ಳಲು ಸ್ವಾಧೀನ ಪಡೆಯುವ ಯೋಜನೆ ಒಳಗೊಂಡಿತ್ತು. ಅವುಗಳಲ್ಲಿ 18. ಹಾರಾಟದ ಸ್ಥಿತಿಯಲ್ಲಿ ಮತ್ತು ಉಳಿದವು ತಂತ್ರಜ್ಞಾನದ ವರ್ಗಾವಣೆ ಯೋಜನೆ ಅಡಿಯಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ ನ ಸೌಲಭ್ಯವನ್ನು ಪಡೆದು ಭಾರತದಲ್ಲಿ ತಯಾರು ಮಾಡಬೇಕು ಎಂಬ ನಿಯಮ ಒಪ್ಪಿ ರಫೆಲ್ ಗುತ್ತಿಗೆಯನ್ನು ಗೆದ್ದುಕೊಂಡಿತು (2012 ರಲ್ಲಿ ಒಂದು ರಫೆಲ್ ಜೆಟ್‍ಗೆ ರೂ.429ಕೋಟಿ ಆಗುವುದು). ಆದ್ದರಿಂದ ಭಾರತ 126 ರಫೆಲ್ ಜೆಟ್ ನ್ನು ಖರೀದಿ ಮಾಡುವುದೆಂದು ನಿರ್ಧರಿಸಲಾಗಿತ್ತು. .
 • ರಫೆಲ್ ಗುತ್ತಿಗೆಯನ್ನು ಗೆದ್ದುಕೊಂಡ ನಂತರ, ಭಾರತೀಯರ ಕಡೆಯಿಂದ ಮತ್ತು ಡಸ್ಸಾಲ್ಟ್ 2012 ರಲ್ಲಿ ಹಲವಾರು ತಿಂಗಳುಗಳವರೆಗೆ ಮಾತುಕತೆ ನಡೆಯಿತು. ಈ ವ್ಯವಹಾರಗಳಲ್ಲಿ ಸಮಯದ ಹಿಗ್ಗಿಸುವಿಕೆ ಸಾಮಾನ್ಯ. ಆದರೆ ಈ ರಫೆಲ್ ಒಪ್ಪಂದವೊಂದನ್ನು ಆರಂಭಿಸಿ ಮಾತುಕತೆಗಳು ಈಗ ಸುಮಾರು ನಾಲ್ಕು ವರ್ಷಗಳ ಕಾಲ ಸಂದಿದೆ. ಆದರೆ ಒಪ್ಪಂದ ಈ ವರ್ಷದ ಜನವರಿಯಲ್ಲಿ ಮಾತ್ರ ಸಹಿ ಕಂಡಿದೆ.
 • ಯು.ಪಿ.ಎ.ಸರ್ಕಾರ ಮಾಡಿಕೊಂಡಿದ್ದ ಒಪ್ಪಂದ ರದ್ದು:ಭಾರತ ಅಧಿಕೃತವಾಗಿ ಜುಲೈ 2015 30 ರಂದು 126 ವಿಮಾನ ಎಂ.ಎಂ.ಆರ್.ಸಿ.ಎ.(MMRCA) ಹರಾಜು ಘೋಷಣೆಯನ್ನು ಹಿಂತೆಗೆದುಕೊಂಡಿತು.[೧೨]
 • ವಿಳಂಬಕ್ಕೆ ಕಾರಣ
 • ಮಾತುಕತೆ ಸಾಗಿದಾಗ ಭಾರತ ಮತ್ತು ಫ್ರಾನ್ಸ್ ಎರಡೂ ರಾಷ್ಟ್ರೀಯ ಚುನಾವಣೆಗಳಿಗೆ ಮತ್ತು ಸರ್ಕಾರದ ಬದಲಾವಣೆಗೆ ಸಾಕ್ಷಿಯಾಯಿತು. ಬೆಲೆ ಮತ್ತೊಂದು ಅಂಶವಾಗಿತ್ತು. ಖರೀದಿ ಒಪ್ಪಂದ ಸಹಿ ಮಾಡುವ ಸಂದರ್ಭದಲ್ಲಿ ಸಹ, ಎರಡೂ ದೇಶಗಳು ಹಣಕಾಸಿನ ಅಂಶಗಳಲ್ಲಿ ಒಂದು ತೀರ್ಮಾನಕ್ಕೆ ಬರಲಾಗಲಿಲ್ಲ. ಮೂಲಗಳ ಪ್ರಕಾರ, ಇಂದು ವಿಮಾನದ ಬೆಲೆ ರೂ..740 ಕೋಟಿಯ ಬಗ್ಗೆ ಚೌಕಾಶಿ ನಡೆಯುತ್ತಿತ್ತು.(ಈಗ ಒಂದು ಜೆಟ್ಟಿಗೆ 1611.ಕೋಟಿ ರೂ.ಗೆ ನಿಕ್ಕಿಆಗಿದೆ) ಭಾರತ ಕನಿಷ್ಠ ಶೇ 20ಕಡಿಮೆ ಬೆಲೆಗೆ ಅವುಗಳನ್ನು ಬಯಸುತ್ತಿತ್ತು.

36 ಜೆಟ್‍ಗಳನ್ನು ಮಾತ್ರಾ ಕೊಳ್ಳುವುದರಿಂದ ದುಬಾರಿ ಬೆಲೆ?[ಬದಲಾಯಿಸಿ]

 • ಆರಂಭಿಕ ಯೋಜನೆ 126 ಜೆಟ್ ಖರೀದಿಸುವುದಿದ್ದರೂ, ಭಾರತವು ಅದನ್ನು 36 ಜೆಟ್ ಗಳನ್ನು, ಅದೂ ಸಿದ್ಧ ಸ್ಥಿತಿಯಲ್ಲಿ ಕೊಳ್ಳುವ ತೀರ್ಮಾನಕ್ಕೆ ಬಂದು ಮುಟ್ಟಿತು. ಹೀಗಾಗಿ ಜೆಟ್ ವಿಮಾನದ ದರ ಮೊದಲು ಒಪ್ಪಿದ್ದಕ್ಕಿಂತ ಹೆಚ್ಚೇ ಆಗಿದೆ. (ಒಂದು ಜೆಟ್‍ಗೆ ಮೊದಲು ರೂ.429ಕೋಟಿ; ಈಗ 1611.ಕೋಟಿ ರೂ.36ಕ್ಕೆ=58000ಕೋಟಿ ರೂ.ಅಥವಾ 59000?). (ಆದರೆ ರಕ್ಷಣಾ ಮಂತ್ರಿಯವರು 780 ಕೋಟಿ ರೂ.ಉಳಿತಾಯವಾಗಿದೆ ಎಂದಿದ್ದಾರೆ?. ಆದರೆ 2012 ರಲ್ಲಿ 126 ಜೆಟ್‍ಗೆ 54000 ಕೋಟಿ ರೂ. ಇದ್ದದ್ದು, ಈಗ 36 ಜೆಟ್‍ ವಿಮಾನಕ್ಕೆ 58000 ಕೋಟಿ ರೂ. ಕೊಡಬೇಕಾಗಿದೆ. ತಂತ್ರಜ್ಞಾನ ವರ್ಗಾವಣೆಯೂ ಇಲ್ಲ.)[೧೩][೧೪]
 • ಮೋದಿ ಸರಕಾರ ಫ್ರೆಂಚ್ ಸರ್ಕಾರದ "ಮರು ಸಮಾಲೋಚನಾ" 21,000 ರೂ ಉಳಿಸಿದೆ. "ಫ್ರಾನ್ಸ್ ತಂತ್ರಜ್ಞಾನದ 36 ರಫೆಲ್ ವಿಮಾನವನ್ನು ದೇಶ ಖರೀದಿಸಲು ಒಪ್ಪಂದ 12 ಶತಕೋಟಿ ಡಾಲರ್ (80000 ಕೋಟಿ ರೂ)ಬೇಡಿಕೆ ಇತ್ತು; ಮತ್ತೆ ಮಾತುಕತೆ ನಂತರ 8.8 ಬಿಲಿಯನ್ ಡಾಲರ್ (59000 ಸುಮಾರು ಕೋಟಿ) ನಲ್ಲಿ ತೀರ್ಮಾನವಾಯಿತು" ಬಿಜೆಪಿ ಟ್ವೀಟ್ ಹೇಳಿದೆ.(ಎಂದರೆ ಈಗ ಕೇವಲ 36 ರಫೆಲ್ ವಿಮಾನಗಳಿಗೆ 80000 ಕೋಟಿ ರೂ.ಬೇಡಿಕೆ ಇತ್ತು; ಹಿಂದೆ 126 ರಫೆಲ್ ಜೆಟ್ ಖರೀದಿಸಲು 54000 ಕೋಟಿ ರೂ.ಒಪ್ಪಂದವಾದುದನ್ನು ಮೋದಿಯವರು ರದ್ದುಮಾಡಿ, ಪುನಹ ಒಪ್ಪಂದಮಾಡಿಕೊಂಡಾಗಿನ ಬೆಲೆ 36 ರಫೆಲ್ ವಿಮಾನಗಳಿಗೆ ಬೇಡಿಕೆ 80000 ಕೋಟಿ ರೂ.ಇದು ಫ್ರೆಂಚರ ಸ್ನೇಹಕ್ಕೆ ಕೊಡಿಗೆ ಎಂದು, ಸ್ವಾಮಿ.).[೧೫]
 • ಸೆಪ್ಟೆಂಬರ್ 23, 2016 ರಂದು 36 ರಫೆಲ್ ಫೈಟರ್ ಜೆಟ್ಗಳು ವ್ಯವಹಾರದಲ್ಲಿ 7.8 ಶತಕೋಟಿ ಯುರೋ ಮೌಲ್ಯದ ಒಪ್ಪಂದಕ್ಕೆ ಶುಕ್ರವಾರ ಮೋದಿ ಸರ್ಕಾರ ಸಹಿ ಮಾಡಿತು. ಇದು ಹಿಂದಿನ ಯುಪಿಎ ಸರಕಾರ ಸಮಯದಲ್ಲಿ ಒಪ್ಪಂದಕ್ಕಿಂತ ಸುಮಾರು 750 ಮಿಲಿಯನ್ ಯುರೋಗಳಷ್ಟು ಉಳಿತಾಯ ಆಗುತ್ತದೆ ಎಂದಿದ್ದಾರೆ.(ಇಲ್ಲ-ನಾಲ್ಕರಷ್ಟು ದುಬಾರಿಯಾಗಿದೆ, ಎಂದು ಹಿಂದಿನ ರಕ್ಷಣಾ ಮಂತ್ರಿ ಹೇಳಿದ್ದಾರೆ.)[೧೬]
 • (ತಾತ್ಪರ್ಯ::ಸೆಪ್ಟೆಂಬರ್ 23, 2016 ರಂದು, ಫ್ರೆಂಚ್ ರಫೆಲ್ ಫೈಟರ್ ಜೆಟ್ಗಳ ವ್ಯವಹಾರದಲ್ಲಿ ಒಂದು ಜೆಟ್ಟಿಗೆ ಹಿಂದಿನ ಬೆಲೆಯ ರೂ.428.57 ಕೋಟಿಯ ಯು.ಪಿ.ಯೆ.ಯ ಒಪ್ಪಂದವನ್ನು ರದ್ದು ಮಾಡಿ ಅದೇ ಜೆಟ್ಟಿಗೆ ಈಗಿನ ಬೆಲೆ ರೂ.1611.11 ಕೋಟಿಗೆ ನಾಲ್ಕರಷ್ಟು ದುಬಾರಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಅಲ್ಲದೆ ಕರ್ನಾಟಕದಲ್ಲಿರುವ, ಯುದ್ಧ ವಿಮಾನಗಳನ್ನು ತಯಾರಿಸಿ ಅನುಭವವಿರುವ ಎಚ್.ಎ.ಎಲ್‍ನಲ್ಲಿ ಬಿಡಿಭಾಗ ತಯಾರಿಕೆ ಮತ್ತು ಹೆಚ್ಚಿನ ವಿಮಾನಗಳನ್ನು ತಯಾರಿಸಬೇಕೆಂಬ ಷರತ್ತಿನೊಂದಿಗೆ ಹಿಂದೆ ಪಪ್ಪಂದ ಮಾಡಿಕೊಲ್ಲಲಾಗಿತ್ತು ಈಗಅದರ ಬದಲಿಗೆ ಅನುಭವವಿಲ್ಲದ ಆಂನಿಯ ರಿಲೆಯನ್ಸ್‍ ಕಂಪನಿಯನ್ನು ಹೊಸ ಒಪ್ಪಂದದಲ್ಲಿ ಪಾಲುದಾರಿಕೆಗೆ ಸೇರಿಸಿದೆ ಎಂಬ ದೂರು ಇದೆ. (36 ಫೈಟರ್ ಜೆಟ್‌ಗಳನ್ನು ಖರೀದಿಸಲು 2016 ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ 7.87 ಬಿಲಿಯನ್ ಯುರೋಗೆ (@ಯೂರೋ=80ರೂ. 36 ಜೆಟ್ಟಿಗೆ 62960 ಕೋಟಿ ರೂ. ಒಂದಕ್ಕೆ 1748.8.ಕೋಟಿ ರೂ.ಗೆ) ರಾಫೆಲ್ ಒಪ್ಪಂದಕ್ಕೆ ಸಹಿ ಹಾಕಲಾಯಿತು. [೧೭])

ಬಿ.ಜೆ.ಪಿ.ನಾಯಕ ಸುಬ್ರಹ್ಮಣ್ಯ ಸ್ವಾಮಿ ವಿರೋಧ[ಬದಲಾಯಿಸಿ]

 • 2015 ರಲ್ಲೇ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ, 'ರಫೆಲ್ ವಿಮಾನದಲ್ಲಿ ಗಂಭೀರ ನ್ಯೂನತೆಗಳನ್ನು ಇದ್ದವು;ಒಂದು ವೇಳೆ ಸರ್ಕಾರ ಫ್ರಾನ್ಸ್ ರಫೆಲ್ ವಿಮಾನ ಒಪ್ಪಂದ ಕುದುರಿಸಿದರೆ, ತಾವು ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ,' ಹೇಳಿದರು.
 • "ಇದು ಯಾವುದೇ ದೇಶ ರಫೆಲ್ ಕೊಂಡುಕೊಳ್ಳದಿದ್ದರೆ, ಡಸ್ಸಾಲ್ಟ್ ದಿವಾಳಿ ಆಗುತ್ತದೆ ಎಂಬುದು ಸತ್ಯ. ನಾವು ಫ್ರೆಂಚ್‍ ದೇಶಕ್ಕೆ ಸಹಾಯ ಮಾಡಲು ಬಯಸಿದರೆ, ವಿಮಾನಗಳ ಡಸ್ಸಾಲ್ಟ್ ಕಂಪನಿಯನ್ನೇ ಸ್ವತಃ ಕೊಂಡುಕೊಳ್ಳುವುದು ಉತ್ತಮ ಮತ್ತು ಹೆಚ್ಚು ಅನುಕೂಲವಾಗುವುದು."ಎಂದಿದ್ದಾರೆ.[೧೮]

ಅನಿಲ್ ಅಂಬಾನಿ ಸಹಯೋಗ[ಬದಲಾಯಿಸಿ]

 • ಬಿಡಿಭಾಗ ತಯಾರಿಕೆಗೆ ಅನಿಲ್‌ ಅಂಬಾನಿ ಮಾಲೀಕತ್ವದ ರಿಲಯನ್ಸ್‌ ಡಿಫೆನ್ಸ್‌ ಕಂಪನಿಯನ್ನೇ ದೇಶೀ ಪಾಲುದಾರನಾಗಿ ಸೇರಿಸಿಕೊಳ್ಳಬೇಕು ಎಂಬ ಷರತ್ತನ್ನು ಭಾರತ ಸರ್ಕಾರ ಹಾಕಿತ್ತು ಎಂದು ಎಂದು ಫ್ರಾನ್ಸ್‌ನ ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಶುಕ್ರವಾರ ೨೧-೯-೨೦೧೮ ರಲ್ಲಿ ಹೇಳಿದರು.[೧೯] [೨೦]

ರಾಫೇಲ್ ಹಗರಣ ಸುಪ್ರೀಂ ಕೋರ್ಟಿನಲ್ಲಿ[ಬದಲಾಯಿಸಿ]

 • 8-10-2018ರಂದು ಸುಪ್ರೀಂ ಕೋರ್ಟು ರಫೇಲ್‌ ಯುದ್ಧ ವಿಮಾನಗಳ ಖರೀದಿಯ ವಿವಾದವನ್ನು ವಿಚಾರಣೆ ಮಅಡಲು ಒಪ್ಪಿತು. 01 ನವೆಂಬರ್ 2018/ಅಕ್ಟೊ.31 2018 ರಂದು ಫ್ರಾನ್ಸ್‌ನಿಂದ ಭಾರತ ಖರೀದಿಸಿದ 36 ರಫೇಲ್‌ ಯುದ್ಧ ವಿಮಾನಗಳ ದರ ವಿವರಗಳನ್ನು ಮುಚ್ಚಿದ ಲಕೋಟೆಯಲ್ಲಿ ಹತ್ತು ದಿನಗಳೊಳಗೆ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚಿಸಿತು. ಅದರ ಜೊತೆ ಈ ಒಪ್ಪಂದಕ್ಕೆ ಸಂಬಂಧಿಸಿದ ಬಹಿರಂಗಪಡಿಸಬಹುದಾದ ಎಲ್ಲ ವಿವರಗಳೂ ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು ಎಂದು ಹೇಳಿತು. ರಕ್ಷಣೆಗೆ ಸಂಬಂಧಿಸಿ ಸೂಕ್ಷ್ಮ ಎನಿಸಿಕೊಳ್ಳುವ ಮತ್ತು ಗೋಪ್ಯ ಎಂದು ಪರಿಗಣಿಸಲಾಗುವ ಮಾಹಿತಿಯನ್ನು ಈ ಹಂತದಲ್ಲಿ ನ್ಯಾಯಾಲಯಕ್ಕೆ ಮುಚ್ಚದ ಲಕೋಟೆಯಲ್ಲಿ ಸಲ್ಲಿಸಲು ಆಜ್ಞೆಮಾಡಿತು.[೨೧]
 • ಆದರೆ ಕೇಂದ್ರ ಸರ್ಕಾರವು ರಫೇಲ್‌ ಯುದ್ಧ ವಿಮಾನಗಳ ಖರೀದಿಗೆ ಸಂಬಂಧಿಸಿದ ದರದ ಮಾಹಿತಿಯನ್ನು ಭದ್ರತೆ ಮತ್ತು ಸೇನಾ ಗೋಪ್ಯತೆಯ ಕಾರಣದಿಂದ ನೀಡಲಾಗದು ಎಂದು ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಲು ನಿರ್ಧರಿಸಿದೆ.[೨೨]
 • ಮಾಜಿ ಕೇಂದ್ರ ಸಚಿವರಾದ ಯಶವಂತ್ ಸಿನ್ಹಾ ಮತ್ತು ಅರುಣ್ ಶೌರಿ ಅವರ ಪರವಾಗಿ ವಾದಿಸಲು ರಾಫೇಲ ವ್ಯವಹಾರದ ಬಗೆಗೆ ಸಿಬಿಐ ತನಿಖೆಗಾಗಿ ಅಡ್ವೊಕೇಟ್ ಪ್ರಶಾಂತ್ ಭೂಷಣ್ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಗೆ ಸುಪ್ರೀಮ್ ಕೋರ್ಟು ಸಿಬಿಐ ವ್ಯವಸ್ಥೆ ಕ್ರಮವಾಗಲಿ ಎಂದಿದೆ. ಕೇಂದ್ರ ಸರ್ಕಾರ ಸಿಬಿಐಯನ್ನು ಸ್ಥಗಿತಗೋಳಿಸಿದೆ.[೨೩]

ಸುಪ್ರೀಮ್ ತೀರ್ಪು ಬಗೆಹರಿಯದ ಪ್ರಶ್ನೆಗಳು[ಬದಲಾಯಿಸಿ]

 • ದಿ.14-12-2018 ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ಮತ್ತು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಕೆ.ಎಂ.ಜೋಸೆಫ್ ಅವರಿದ್ದ ಪೀಠವು ಒಮ್ಮತದ ತೀರ್ಪು ನೀಡಿ, ‘36 ರಫೇಲ್ ವಿಮಾನಗಳ ಖರೀದಿ ವಿಚಾರದಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡಲು ಯಾವುದೇ ಕಾರಣ ಕಂಡು ಬಂದಿಲ್ಲ’ ಎಂದು ಅಭಿಪ್ರಾಯಪಟ್ಟಿದೆ. ಇದೇ ಕಾರಣಕ್ಕೆ ಅರ್ಜಿದಾರರ ಕೋರಿಕೆಯಂತೆ ತನ್ನ ಕಣ್ಗಾವಲಿನಲ್ಲಿ ತನಿಖೆ ನಡೆಸಲು ನ್ಯಾಯಾಲಯ ಆದೇಶಿಸಿಲ್ಲ. ಆದರೆ ಬಗೆಹರಿಯದ ಆರು ಪ್ರಶ್ನೆಗಳು ಇವೆ ಎಂದು ತಜ್ಞರಾದ ‘ಕ್ವಿಂಟ್‌’ ಜಾಲತಾಣದ ವಕ್ಷಾ ಸಚ್‌ದೇವ್ ಇವುಗಳನ್ನು ಪಟ್ಟಿಮಾಡಿ ಪ್ರಕಟಿಸಿದ್ದಾರೆ [೨೪]SC Verdict on Rafale Wrong, to Decide if We Will File Review Petition says, 'Bhushan' ಅರ್ಜಿದಾರ.[೨೫]
 • ಸುಪ್ರೀಕೋರ್ಟ್‌ 14-12-2018ರ ತೀರ್ಪಿನ 25ನೇ ಪ್ಯಾರಾದಲ್ಲಿ, ‘ಬೆಲೆಯ ವಿವರಗಳನ್ನು ಮಹಾಲೇಖಪಾಲರ (ಸಿಎಜಿ) ಜೊತೆ ಈಗಾಗಲೇ ಹಂಚಿಕೊಳ್ಳಲಾಗಿದೆ.;;;ವರದಿಯನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿ (ಪಿಎಸಿ) ಪರಿಶೀಲಿಸಿದೆ. ವರದಿಯ ಪರಿಷ್ಕೃತ ರೂಪವನ್ನು ಮಾತ್ರ ಸಂಸತ್ತಿನಲ್ಲಿ ಮಂಡಿಸಲಾಗಿದ್ದು, ಅದು ಸಾರ್ವಜನಿಕ ಅವಗಾಹನೆಗೆ ಲಭ್ಯವಿದೆ’ ಎಂದು ಹೇಳಲಾಗಿದೆ. ಆದರೆ, ಇದರಲ್ಲಿ ಯಾವುದೂ ಸತ್ಯವಲ್ಲ. ಈ ಭಾಗವನ್ನು ತೆಗೆಯುವಂತೆ ಕೋರಿ ಕೇಂದ್ರ ಸರ್ಕಾರ ಅರ್ಜಿ ಸಲ್ಲಿಸಿದೆ (ಕೇಂದ್ರಸರ್ಕಾರ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಹಾಗೆ ತಪ್ಪುಮಾಹಿತಿ (ಸುಳ್ಳುಮಾಹಿತಿ) ಇತ್ತು).[೨೬]

ರಫೆಲ್ ಯುದ್ಧವಿಮಾನದ ಬಗ್ಗೆ ಸಿಎಜಿವರದಿ[ಬದಲಾಯಿಸಿ]

 • ಹಿಂದಿನ ಯುಪಿಯೆ ರಫೆಲ್ ಒಪ್ಪಂದ ಅಂತಿಮಗೊಳಿಸದಿರಲು ಕಾರಣ:
 • ರಫೆಲ್ ಯುದ್ಧವಿಮಾನದ ಬಗ್ಗೆ ಮಹಾಲೇಖಪಾಲರು ರಾಜ್ಯಸಭೆಗೆ ೧೩-೨-೨೦೧೯ರಲ್ಲಿಸ ಲ್ಲಿಸಿರುವ ವರದಿಯಲ್ಲಿರುವ ಆಕ್ಷೇಪಗಳು ಮತ್ತು ನಿರ್ಣಯ:
 • ಭಾರತೀಯ ವಾಯುಸೇನೆ ನಡೆಸಿದ ಎಲ್ಲ ತಾಂತ್ರಿಕ ಮೌಲ್ಯಮಾಪನ ಮತ್ತು ಪರೀಕ್ಷಾರ್ಥ ಹಾರಾಟದಲ್ಲಿ ರಫೇಲ್‌ ಯುದ್ಧ ವಿಮಾನಗಳು ವಿಫಲವಾಗಿದ್ದವು ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಹೇಳಿದೆ.
 • ರಫೇಲ್‌ ಪರೀಕ್ಷೆಯ ಹಂತದಲ್ಲಿ 9 ದೋಷಗಳನ್ನು ಪಟ್ಟಿ ಮಾಡಲಾಗಿತ್ತು. ಅದಾದ ನಂತರ ರಕ್ಷಣಾ ಸಚಿವಾಲಯ ಮತ್ತು ಡಾಸೊ ಅಧಿಕಾರಿಗಳ ಮಧ್ಯೆ ನಡೆದ ಮಾತುಕತೆಯ ವೇಳೆ ಮತ್ತೆ ಐದು ದೋಷಗಳು ಬೆಳಕಿಗೆ ಬಂದಿದ್ದವು. ಕಂಪನಿ ಅವುಗಳನ್ನು ಸರಿಪಡಿಸಿರಲಿಲ್ಲ.
 • ಭಾರತ ರಕ್ಷಣಾ ಸಚಿವಾಲಯ ಸೂಚಿಸಿದ್ದ ಎಲ್ಲ ತಂತ್ರಿಕ ದೋಷಗಳನ್ನು ಸರಿಪಡಿಸಲು ಕಂಪನಿ ಒಪ್ಪಿಗೆ ಸೂಚಿಸಿದ್ದರೂ, ‘ಭಾರತ–ಫೆಸಿಪಿಕ್‌ ಪರಿಷ್ಕರಣೆ’ ಎಂಬ ಹೆಸರಿನಲ್ಲಿ ತಾಂತ್ರಿಕ ದೋಷಗಳನ್ನು ಸರಿಪಡಿಸಲು ಹೆಚ್ಚಿನ ಶುಲ್ಕ ವಿಧಿಸುವುದಾಗಿ ತಿಳಿಸಿತ್ತು.
 • ರಕ್ಷಣಾ ಸಚಿವಾಲಯ ಡಾಸೊ ಮುಂದಿಟ್ಟ ಬದಲಾವಣೆ ಬೇಡಿಕೆ ಮತ್ತು ನಿಗದಿಪಡಿಸಿದ್ದ 14 ಮಾನದಂಡಗಳಲ್ಲಿ ಹೇಳಿಕೊಳ್ಳುವಂತಹ ವಿಶೇಷತೆಗಳು ಕಂಡಿರಲಿಲ್ಲ.
 • ಡಾಸೊ ಜತೆ ಬಿಡ್‌ ಸಲ್ಲಿಸಿದ್ದ ಇನ್ನುಳಿದ ಐದು ಕಂಪನಿಗಳ ಯುದ್ಧ ವಿಮಾನಗಳಲ್ಲಿ ಈ ಎಲ್ಲ ಸೌಲಭ್ಯಗಳು ಅದಾಗಲೇ ಇದ್ದವು.
 • ಆದರೂ, ರಫೇಲ್‌ ಮತ್ತು ಯುರೊಫೈಟರ್‌ ಎರಡು ವಿಮಾನಗಳ ಖರೀದಿಗೆ ಅರ್ಹ ಎಂದು ಒಪ್ಪಿಗೆ ನೀಡಲಾಗಿದೆ.[೨೭][೨೮]
 • ರಫೇಲ್‌ ಒಪ್ಪಂದದಲ್ಲಿ ಫ್ರಾನ್ಸ್‌ ಸರ್ಕಾರದ ಖಾತರಿಯ ಬದಲಿಗೆ ಕೇವಲ ‘ಭರವಸೆ ಪತ್ರ’ಕ್ಕೆ ತೃಪ್ತವಾದ ಎನ್‌ಡಿಎ ಸರ್ಕಾರದ ಕ್ರಮದಿಂದ ಆಗುವ ಅನನುಕೂಲಗಳತ್ತ ಮಹಾಲೇಖಪಾಲರ (ಸಿಎಜಿ) ವರದಿಯು ಬೆಳಕು ಚೆಲ್ಲಿದೆ. ಇದರಿಂದ ಭಾರತ ಪಾವತಿಸಿದ ಹಣಕ್ಕೆ ಪ್ರಾನ್ಸ್ ಸರ್ಕಾರ ವಿಮಾನೊದಗಿಸುವ ಭರವಸೆ ಕೊಡುವುದಿಲ್ಲ.[೨೯]
 • ಹೀಗಿದ್ದೂ ಹಿಂದಿನ ಒಪ್ಪಂದಕ್ಕಿಂತ ಬೆಲೆ ನಾಲ್ಕುಪಟ್ಟು ಹೆಚ್ಚಾದರೂ, ಫ್ರಾನ್ಸ್‌ನ ಡಾಸೋ ಏವಿಯೇಷನ್‌ನಿಂದ ರೂ.59 ಸಾವಿರ ಕೋಟಿ ವೆಚ್ಚದಲ್ಲಿ 36 ರಫೇಲ್‌ ಯುದ್ಧ ವಿಮಾನಗಳನ್ನು ಖರೀದಿಸಲು ಎನ್‌ಡಿಎ ಸರ್ಕಾರವು ಮಾಡಿಕೊಂಡಿರುವ ಒಪ್ಪಂದವು 2007ರಲ್ಲಿ ಯುಪಿಎ ಸರ್ಕಾರದ ಮುಂದೆ ಆ ಕಂಪನಿಯು ಇಟ್ಟಿದ್ದ ದರಕ್ಕಿಂತ ಶೇ 2.86ರಷ್ಟು ಕಡಿಮೆ (ಸಿಎಜಿಗೆ ದರದ ಫೈಲುಗಳನ್ನು ಒದಗಿಸದೆ ಇರುವುದರಿಂದ,ದರ ಬಿಟ್ಟು ಉಳಿದ ಬಾಧ್ಯತೆಗಳನ್ನು ಗಮನಿಸಿ) ಎಂದು ಮಹಾಲೇಖಪಾಲರ (ಸಿಎಜಿ) ವರದಿ ಹೇಳಿದೆ. ಆದರೆ ಅದು ಕೊಂಡ ದರದ ವಿವರ ನೀಡಿಲ್ಲ [೩೦]
 • ಮಹಾಲೇಖಪಾಲರಾದ ಶ್ರೀ ರಾಜೀವ್ ಮೆಹರ್ಶಿ ಅವರು ಈ ಹಿಂದೆ ಭಾರತ ಸರ್ಕಾರದಲ್ಲಿ ಗೃಹ ಕಾರ್ಯದರ್ಶಿಯಾಗಿದ್ದರು. ಅದಕ್ಕೆ ಮುಂಚೆ, ಅವರು ಭಾರತದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ (ರಸಗೊಬ್ಬರಗಳು) ಮತ್ತು ಕಾರ್ಯದರ್ಶಿ (ಸಾಗರೋತ್ತರ ಇಂಡಿಯನ್ ಅಫೇರ್ಸ್) ಪ್ರಮುಖ ಸ್ಥಾನಗಳನ್ನು ಹೊಂದಿದ್ದರು.[೩೧] ಮಾಜಿ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರು ೧೧-೨-೨೦೧೯ ರಂದು,ವರದಿಯಲ್ಲಿ ಆಸಕ್ತಿ- ಪಕ್ಷಪಾತ ವ್ಯಕ್ತಪಡಿಸಿದ್ದಾರೆ ಮತ್ತು ರಫೆಲ್ ವ್ಯವಹಾರವನ್ನು ಸಮಾಲೋಚಿಸಿದ ಸಮಯದಲ್ಲಿ ಅದರಲ್ಲಿ ಭಾಗಿಯಾಗಿರಬಹುದಾಗಿದ್ದ ಭಾರತದ ಹಣಕಾಸಿನ ಕಾರ್ಯದರ್ಶಿಯಾಗಿದ್ದರಿಂದ ರಫೆಲ್ ಒಪ್ಪಂದವ ಆಡಿಟಿಂಗ್ ಮಾಡುವುದನ್ನು ಒಪ್ಪಬಾರದಾಗಿತ್ತು ಎಂದು ಕಾಂಪ್ರೊಲರ್ ಮತ್ತು ಆಡಿಟರ್ ಜನರಲ್ (ಸಿಎಜಿ) ರಾಜೀವ್ ಮೆಹರ್ಶಿ ಅವರ ಬಗ್ಗೆ ಹೇಳಿದರು.[೩೨]
 • ಕಾಂಗ್ರೆಸ್ ಪಕ್ಷವು ಹಿಂದೆ "ರೂ 60,150 ಕೋಟಿ" ರಫೇಲ್ ಫೈಟರ್ ಜೆಟ್ ಒಪ್ಪಂದದ ನ್ಯಾಯಯುತ ಆಡಿಟ್ ನಡೆಸಲು ಸಿಎಜಿಯನ್ನು ಒತ್ತಾಯಿಸಿದೆ. ಒಪ್ಪಂದದ ಆಪಾದಿತ ಹಗರಣಕ್ಕೆ ಸಂಬಂಧಿಸಿದಂತೆ ಹೊಣೆಗಾರಿಕೆಯನ್ನು ಖಚಿತ ಪಡಿಸಲು ಸಂಸತ್ತನ್ನು ಸಕ್ರಿಯಗೊಳಿಸುವುದಕ್ಕಾಗಿ ಎಲ್ಲಾ "ಸತ್ಯಗಳು" ದಾಖಲಿಸಲು ಕೋರಿವೆ. ಕಾಂಗ್ರೆಸ್ ಮುಖಂಡರ ನಿಯೋಗವು ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ಆಫ್ ಇಂಡಿಯಾ, ರಾಜೀವ್ ಮೆಹರ್ಷಿ ಅವರನ್ನು ಭೇಟಿ ಮಾಡಿ - ಇದು ಒಂದು ತಿಂಗಳೊಳಗೆ ಎರಡನೇ ಬಾರಿಗೆ ಅವರು ರಫೇಲ್ ವ್ಯವಹಾರದ ಕೇಂದ್ರ ಆಡಿಟರ್ ಅನ್ನು ಭೇಟಿಯಾದುದು- ಮತ್ತು ತಾಜಾ ದಾಖಲೆಗಳ ಜೊತೆಯಲ್ಲಿ ಅವರಿಗೆ ಮೆಮೋರಾಂಡಮ್ ಅನ್ನು ಪ್ರಸ್ತುತಪಡಿಸಿದ್ದರು.[೩೩]

ರಫೇಲ್ ಒಪ್ಪಂದದ ರಹಸ್ಯ ದಾಖಲೆ ಕಳವು[ಬದಲಾಯಿಸಿ]

 • ಅರ್ಜಿದಾರರ ಕೋರಿಕೆಯಂತೆ ರಫೇಲ್ ಒಪ್ಪಂದದ ತಕರಾರು ಅರ್ಜಿಯನ್ನು ಪುನರ್ ಪರಿಶಿಲನೆಗೆ ಎತ್ತಿಕೊಂಡಾಗ ರಫೇಲ್ ಒಪ್ಪಂದ ಸಂಬಂಧಿಸಿದ ರಹಸ್ಯ ದಾಖಲೆಗಳು ಕಳವಾಗಿವೆ ಎಂದು ಕೇಂದ್ರ ಸರ್ಕಾರದ ಅಟಾರ್ನಿ ಜನರಲ್ ದಿ.೬-೩-೨೦೧೯ ಬುಧವಾರ ಸುಪ್ರೀಂ ಕೋರ್ಟ್‌‍ನಲ್ಲಿ ಹೇಳಿಕೆ ನೀಡಿದರು. ದಾಖಲೆಗಳು ಹೇಗೆ ಕಳವಾಗಿವೆ ಎಂಬ ಕುರಿತು ತನಿಖೆ ನಡೆಸುತ್ತಿದ್ದೇವೆ ಎಂದರು.[೩೪][೩೫]. ರಫೇಲ್ ದಾಖಲೆಗಳನ್ನು ರಕ್ಷಣಾ ಸಚಿವಾಲಯದಿಂದ ಕಳವು ಮಾಡಲಾಗಲಿಲ್ಲ ಮತ್ತು ಸುಪ್ರೀಂ ಕೋರ್ಟ್‍ಗೆ ಮುಂಚಿತವಾಗಿ ಸಲ್ಲಿಕೆಯಲ್ಲಿ ಅವರು ಏನು ಅರ್ಥದಲ್ಲಿ ಹೇಳಿದರುರು ಎಂದರೆ ಅನ್ವಯಿಕ ಅರ್ಜಿದಾರರು "ಮೂಲದ ಪೋಟೋಕಾಪೀಸ್" ಅನ್ನು ಬಳಸಿಕೊಂಡಿದ್ದಾರೆ ಎಂದು ಅಟಾರ್ನಿ ಜನರಲ್ ಕೆ. ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ. ಹೀಗೆ ಹೇಳಿಕೆಗಳನ್ನು ತನಿಖೆ ಮಾಡಲು ಒತ್ತಾಯಿಸಿದಾಗ ಬದಲಾಸಲಾಯಿತು[೩೬]
 • ರಕ್ಷಣಾ ಸಚಿವಾಲಯವು ರಫೇಲ್ ಒಪ್ಪಂದದ ಸಮಾಲೋಚನೆಯ ಉನ್ನತ ಮಟ್ಟದ ಸಮಾಲೋಚನೆಯಲ್ಲಿದ್ದಾಗ, ಪ್ರಧಾನಮಂತ್ರಿ ಕಚೇರಿ (PMO) ಫ್ರೆಂಚ್ ತಂಡದೊಂದಿಗೆ ನಡೆಸಿದ "ಸಮಾನಾಂತರ ಮಾತುಕತೆ" ಗೆ ರಕ್ಷಣಾ ಸಚಿವಾಲಯವು ಬಲವಾದ ಆಕ್ಷೇಪಗಳನ್ನು ವ್ಯಕ್ತಪಡಿಸಿತು. ಪ್ರಧಾನಮಂತ್ರಿ ಕಚೇರಿ (PMO) ಯ ಅಂತಹ ಸಮಾನಾಂತರ ಚರ್ಚೆಗಳು ರಕ್ಷಣಾ ಸಚಿವಾಲಯ ("MoD) ಮತ್ತು ಭಾರತೀಯ ಸಮಾಲೋಚನಾ ತಂಡಗಳ ಮಾತುಕತೆ ಸ್ಥಿತಿಯನ್ನು ದುರ್ಬಲಗೊಳಿಸಿದೆ" ಎಂದು ಸ್ಪಷ್ಟಪಡಿಸಿದೆ ಎಂದು ನವೆಂಬರ್ 24, 2015 ರಂದು ರಕ್ಷಣಾ ಸಚಿವ ಟಿಪ್ಪಣಿಯು ಆಗಿನ ರಕ್ಷಣಾ ಸಚಿವ ಮನೋಹರ್ ಪರಿಕರ್ ಅವರ ಗಮನಕ್ಕೆ ತಂದಿತು ಎಂದು ದ ಹಿಂದು ಪತ್ರಿಕೆ ವರದಿಮಾಡಿದೆ.[೩೭][೩೮][೩೯]

ಮೊದಲ ಒಂದು ರಫೇಲ್ ಯುದ್ಧ ವಿಮಾನ ಸೇರ್ಪಡೆ[ಬದಲಾಯಿಸಿ]

 • ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ 1 ರಫೇಲ್ ಯುದ್ಧ ವಿಮಾನ ದೇಶದ ರಕ್ಷಣಾ ವ್ಯವಸ್ಥೆಗೆ ದಿ.8-10-2019 ಸೇರ್ಪಡೆಯಾಗಿದ. 56 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳನ್ನು ಪಡೆಯಲು 2016ರಲ್ಲಿ ಒಪ್ಪಂದ ಏರ್ಪಟ್ಟಿತ್ತು. [೪೦]

ಮೊದಲ 1 ರಫೇಲ್ ಯುದ್ಧ ವಿಮಾನ ಸೇರ್ಪಡೆ[ಬದಲಾಯಿಸಿ]

 • ಫ್ರಾನ್ಸ್‌ನ ಡಾಸೋ ಏವಿಯೇಷನ್ ಕಂಪನಿ ನಿರ್ಮಿತ ಮೊದಲ ಒಂದು ರಫೇಲ್ ಯುದ್ಧ ವಿಮಾನ ದೇಶದ ರಕ್ಷಣಾ ವ್ಯವಸ್ಥೆಗೆ ದಿ.8-10-2019 ಸೇರ್ಪಡೆಯಾಗಿದ. 56 ಸಾವಿರ ಕೋಟಿ ಮೊತ್ತದ 36 ರಫೇಲ್ ಯುದ್ಧವಿಮಾನಗಳನ್ನು ಪಡೆಯಲು 2016ರಲ್ಲಿ ಒಪ್ಪಂದ ಏರ್ಪಟ್ಟಿತ್ತು. [೪೧]

ಅಂತಿಮ ತೀರ್ಪು[ಬದಲಾಯಿಸಿ]

 • ರಫೇಲ್ ಖರೀದಿ ಒಪ್ಪಂದದಲ್ಲಿ ಅಕ್ರಮ ನಡೆದಿದ್ದು, ತನಿಖೆಗೆ ಆದೇಶಿಸಬೇಕು ಎಂದು ಕೋರಿ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ಅರ್ಜಿಗಳನ್ನು ಸಲ್ಲಿಸಿದ್ದರು. ಸುಪ್ರೀಂ ಕೋರ್ಟ್ 2018ರ ಡಿಸೆಂಬರ್ 14ರಂದು ಸಾಕ್ಷ್ಯಾಧಾರಗಳಿಲ್ಲ ಎಂಬ ಕಾರಣಕ್ಕೆ ಅವುಗಳನ್ನು ವಜಾಗೊಳಿಸಿತ್ತು. ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಅವರು ರಫೇಲ್ ಒಪ್ಪಂದದ ಕುರಿತು ಕ್ಲೀನ್ ಚಿಟ್ ತೀರ್ಪಿನ ಮರುಪರಿಶೀಲನೆಗೆ ಪುನಃ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ (ತಾವು ನಿವೃತ್ತಿಯಾಗುವ ಹಿಂದಿನ ದಿನ) ಮತ್ತು ನ್ಯಾಯಮೂರ್ತಿಗಳಾದ ಎಸ್‌.ಕೆ.ಕೌಲ್, ಕೆ.ಎಂ.ಜೋಸೆಫ್ ಅವರಿದ್ದ ನ್ಯಾಯಪೀಠವು ತೀರ್ಪು ನೀಡಿದೆ. ಈ ಮೊದಲು, ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಂದ್ರ ಸರ್ಕಾರಕ್ಕೆ ಕ್ಲೀನ್‌ ಚಿಟ್ ನೀಡಿರುವುದನ್ನು ವಿರೋಧಿಸಿ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯ ವಿಚಾರಣೆಯನ್ನು 2019 ಮೇ 10 ರಂದು ಪೂರ್ಣಗೊಳಿಸಿದ್ದ ಸರ್ವೋಚ್ಚ ನ್ಯಾಯಾಲಯವು ತೀರ್ಪನ್ನು 14 ನವೆಂಬರ್ 2019 ಗುರುವಾರಕ್ಕೆ ಕಾಯ್ದಿರಿಸಿತ್ತು. ಈಗ ಎಫ್ಐಆರ್ ದಾಖಲಿಸಲು ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಬೆಲೆಗಳನ್ನು ನಿರ್ಧರಿಸಲು ಈ ನ್ಯಾಯಾಲಯದ ಕಾರ್ಯವಲ್ಲ: ಎಸ್‌ಸಿಎಸ್‌ಸಿ ತೀರ್ಪಿನಿಂದ: ಬೆಲೆ ನಿಗದಿಪಡಿಸುವ ಅಂಶಕ್ಕೆ ಸಂಬಂಧಿಸಿದಂತೆ, ನ್ಯಾಯಾಲಯವು ಲಭ್ಯವಿರುವ ವಸ್ತುಗಳಿಂದ ತೃಪ್ತಿಪಟ್ಟುಕೊಂಡಿದೆ.ಎಂದು ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಅಗತ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಪುನರುಚ್ಚರಿಸಿ, ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದ್ದು, ಮರುಪರಿಶೀಲನಾ ಅರ್ಜಿಯನ್ನು 14 ನವೆಂಬರ್ 2019 ರಂದು ವಜಾಗೊಳಿಸಿದೆ. [೪೨][೪೩]

ಪುನಃ ಅರ್ಜಿ[ಬದಲಾಯಿಸಿ]

 • ‘ನ್ಯಾಯಾಲಯಕ್ಕೆ ತಪ್ಪು ಮಾಹಿತಿ’
 • ರಫೇಲ್‌ ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿಯೇ ಕೇಂದ್ರ ಸರ್ಕಾರ ‌ನ್ಯಾಯಾಲಯವನ್ನು ತಪ್ಪು ದಾರಿಗೆಳೆದಿದೆ’ ಎಂದು ಕೇಂದ್ರದ ಮಾಜಿ ಸಚಿವರಾದ ಅರುಣ್‌ ಶೌರಿ, ಯಶವಂತ್‌ ಸಿನ್ಹಾ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಸುಪ್ರೀಂ ಕೋರ್ಟ್‌ಗೆ ತಿಳಿಸಿದ್ದಾರೆ. ‘ಕೇಂದ್ರ ಸರ್ಕಾರ ಸತ್ಯವನ್ನು ಮರೆಮಾಚಿದೆ. ವಿಚಾರಣೆ ಸಂದರ್ಭದಲ್ಲಿ ನಿಖರ ಮಾಹಿತಿಗಳನ್ನು ನ್ಯಾಯಾಲಯಕ್ಕೆ ನೀಡದೆ ಮುಚ್ಚಿಡಲಾಗಿದೆ’ ಎಂದು ಪ್ರತಿಪಾದಿಸಿದ್ದಾರೆ. ‘ನ್ಯಾಯಾಲಯ ಸರ್ಕಾರದ ಮೇಲೆ ವಿಶ್ವಾಸವಿಟ್ಟಿತು. ಆದರೆ, ಸರ್ಕಾರ ವಿಶ್ವಾಸದ್ರೋಹವೆಸಗಿತು. ಸುಳ್ಳುಗಳು ಮತ್ತು ಮಾಹಿತಿ ಮುಚ್ಚಿಡುವ ಮೂಲಕ ವಂಚನೆ ಎಸಗಲಾಗಿದೆ’ ಎಂದು ದೂರಿದ್ದಾರೆ. ಡಾಸೊ ಕಂಪನಿಯಿಂದ ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಕೇಂದ್ರ ಸರ್ಕಾರಕ್ಕೆ ಕ್ಲೀನ್‌ ಚಿಟ್‌ ನೀಡಿ ಡಿಸೆಂಬರ್‌ 14ರಂದು ನೀಡಿರುವ ತೀರ್ಪು ಪ್ರಶ್ನಿಸಿ ಈ ಮೂವರು ಪುನರ್‌ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.[೪೪]

ಭಾರತಕ್ಕೆ ಆರು ರಫೇಲ್ ವಿಮಾನದ ಆಗಮನ[ಬದಲಾಯಿಸಿ]

 • ದಿ.೨೯-೭-೨೦೨೦ ರಂದು ಬಾರತಕ್ಕೆ ಯುದ್ಧವಿಮಾನ ಖರೀದಿಯ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ತಂಡದಲ್ಲಿ ಐದು ವಿಮಾನಗಳು ಭಾರತಕ್ಕೆ ಬರುತ್ತಿವೆ.ಈ ಹಿಂದೆ ಒಂದು ವಿಮಾನವನ್ನು ಹಸ್ತಾರಿಸಲಾಗಿತ್ತು. ಇನ್ನು ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ. ಫ್ರಾನ್ಸ್‌ನಿಂದ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು 29-7-2020 ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.
 • ವಿವಾದ:ಯುಪಿಎ ಅವಧಿಯಲ್ಲಿ ರೂ.526 ಕೋಟಿಗೆ ಒಂದು ವಿಮಾನದಂತೆ ಎಂದು ಒಪ್ಪಂದದಲ್ಲಿ 126 ವಿಮಾನ ಖರೀದಿ ನಿಗದಿಯಾಗಿತ್ತು. ಆದರೆ ಅದನ್ನು ರದ್ದು ಮಾಡಿ ಎನ್. ಡಿ.ಎ. ಮಾಡಿಕೊಂಡ ಹೊಸ ಒಪ್ಪಂದದಲ್ಲಿ ಅದು ಒಂದು ವಿಮಾನಕ್ಕೆ ರೂ.1,555 ಕೋಟಿಗೆ ಏರಿತು. ಫ್ರಾನ್ಸ್‌ನ ಡಾಸೋ ಏವಿಯೇಷನ್‌ನ ಭಾರತೀಯ ಪಾಲುದಾರ ಸಂಸ್ಥೆಯಾಗಿ ರಿಲಯನ್ಸ್‌ ಡಿಫೆನ್ಸ್‌ ಆಯ್ಕೆಯಾಗಿತ್ತು. ರೂ.59 ಸಾವಿರ ಕೋಟಿಯ ಈ ಖರೀದಿ ಒಪ್ಪಂದದಲ್ಲಿ ಸರ್ಕಾರಿ ಸ್ವಾಮ್ಯದ ಎಚ್‌ಎಎಲ್‌ ಬದಲಿಗೆ ಅನಿಲ್‌ ಅಂಬಾನಿ ಮಾಲೀಕತ್ವದ ಸಂಸ್ಥೆಯನ್ನು ಸಹಭಾಗಿಯಾಗಿ ಆಯ್ಕೆ ಮಾಡಿರುವುದರಲ್ಲಿ ಅಕ್ರಮ ನಡೆದಿದೆ ಎಂದು ವಿರೋಧ ಪಕ್ಷಗಳುಆರೋಪಿಸುತ್ತಿದೆ. ರಫೇಲ್ ದಾಖಲೆಗಳು ಕಳವಾಗಿವೆ ಎಂಬ ಸರ್ಕಾರದ ಹೇಳಿಕೆ ಪ್ರಕರಣವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಖರೀದಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು 2019ರ ನವೆಂಬರ್‌ನಲ್ಲಿ ಕೋರ್ಟ್, ಅರ್ಜಿಗಳನ್ನು ವಜಾಗೊಳಿಸಿತ್ತು.[೪೫][೪೬]

ಭಾರತದ ಮಧ್ಯವರ್ತಿಗೆ ಹಣ[ಬದಲಾಯಿಸಿ]

 • ‘ಮಧ್ಯವರ್ತಿಗೆ ಲಂಚ’:-‘ಫ್ರಾನ್ಸ್‌ ಮತ್ತು ಭಾರತದ ನಡುವಣ ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದದಲ್ಲಿ ಮಧ್ಯವರ್ತಿಗೆ 11 ಲಕ್ಷ ಯೂರೊ (ಅಂದಾಜು ರೂ. 10 ಕೋಟಿ) ಸಂದಾಯವಾಗಿದೆ ಎಂದು ಫ್ರಾನ್ಸ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆಯು (ಎಎಫ್‌ಎ) ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಹೇಳಿದೆ’ ಎಂದು ಫ್ರಾನ್ಸ್‌ನ ಮೀಡಿಯಾಪಾರ್ಟ್‌ ಎಂಬ ಆನ್‌ಲೈನ್ ಪೋರ್ಟಲ್‌ ಏಪ್ರಿಲ್ 6ರಂದು ವರದಿ ಪ್ರಕಟಿಸಿತ್ತು. ಈ ಒಪ್ಪಂದದಲ್ಲಿ ಮಧ್ಯವರ್ತಿಗೆ ಲಂಚ ನೀಡಲಾಗಿದೆ ಎಂದು ಮೀಡಿಯಾಪಾರ್ಟ್‌ ನೇರವಾಗಿ ಆರೋಪಿಸಿತ್ತು.[೪೭]
 • ರಫೇಲ್ ಜೆಟ್‌ಗಳ ತಯಾರಕರಾದ ಡಸಾಲ್ಟ್, 2016 ರಲ್ಲಿ ಇಂಡೋ-ಫ್ರೆಂಚ್ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಭಾರತೀಯ ಮಧ್ಯವರ್ತಿಗೆ ಒಂದು ಮಿಲಿಯನ್ ಯೂರೋ ಪಾವತಿಸಲು ಒಪ್ಪಿಕೊಂಡರು ಎಂದು ಫ್ರೆಂಚ್ ಪ್ರಕಟಣೆಯೊಂದರ ತನಿಖೆಯ ಪ್ರಕಾರ ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್‌ಪೆಕ್ಟರ್‌ಗಳು, ಎಜೆನ್ಸ್ ಫ್ರಾಂಕೈಸ್ ಆಂಟಿಕರ್ರಪ್ಷನ್ (ಎಎಫ್‌ಎ) ಪತ್ತೆಹಚ್ಚಿದ್ದಾರೆ. ಅಕ್ರಮವನ್ನು ಮೊದಲು ಫ್ರೆಂಚ್ ಭ್ರಷ್ಟಾಚಾರ-ವಿರೋಧಿ ಏಜೆನ್ಸಿಯ ಇನ್ಸ್‌ಪೆಕ್ಟರ್‌ಗಳು, ಎಜೆನ್ಸ್ ಫ್ರಾಂಕೈಸ್ ಅಂಟಿಟಿಕರ್ರಪ್ಷನ್ (ಎಎಫ್‌ಎ) ಪತ್ತೆಹಚ್ಚಿದ್ದಾರೆ.
 • ಡಸಾಲ್ಟ್ ಗುಂಪಿನ 2017 ರ ಖಾತೆಗಳಲ್ಲಿ "ಗ್ರಾಹಕರಿಗೆ ಉಡುಗೊರೆಗಳು" ಮುಖ್ಯಸ್ಥರ ಅಡಿಯಲ್ಲಿ 508,925 ಯೂರೋ (ರೂ.94.93 ಕೋಟಿ) ಮೊತ್ತವನ್ನು ಪಾವತಿಸಲಾಗಿದೆ ಎಂದು ಆರೋಪಿಸಲಾಗಿದೆ [೪೮] [೪೯]

ನೋಡಿ[ಬದಲಾಯಿಸಿ]

ಹೆಚ್ಚಿನ ವಿವರ (ಅಂತಿಮ ವಾದ)[ಬದಲಾಯಿಸಿ]

ಹೊರ ಸಂಪರ್ಕ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

 1. ರಾಫೆಲ್ ಯುದ್ಧ ವಿಮಾನದ ಬಲ
 2. "ರಫೇಲ್ ಖರೀದಿಗೆ ಭಾರತ ಸಹಿ;ಪ್ರಜಾವಾಣಿ ;24 Sep, 2016". Archived from the original on 2016-09-24. Retrieved 2016-09-27.
 3. India seeks further discount on Rafale
 4. Historique
 5. "ಆರ್ಕೈವ್ ನಕಲು". Archived from the original on 2016-09-27. Retrieved 2016-09-27.
 6. [https://economictimes.indiatimes.com/news/defence/france-may-offer-36-more-rafale-aircraft-to-india/articleshow/70779501.cms France may offer 36 more Rafale aircraft to India Talks on proposed deal may be held when PM Modi & President Macron meet today.;By Manu Pubby, Dipanjan Roy Chaudhury]
 7. Rafale-jets-to-counter-China-say-expe
 8. Rafale Deal For 36 Fighter Jets Finally Sealed After Long Wait: 10 Facts
 9. ಅತ್ಯಾಧುನಿಕ ಫೈಟರ್ ಜೆಟ್‍ಗಳು ಅಗತ್ಯ[ಶಾಶ್ವತವಾಗಿ ಮಡಿದ ಕೊಂಡಿ]
 10. Rafale deal, wants contract to be made public
 11. "Congress attacks BJP for buying only 36 Rafale jets;24 Sep 2016". Archived from the original on 27 ಸೆಪ್ಟೆಂಬರ್ 2016. Retrieved 25 ಸೆಪ್ಟೆಂಬರ್ 2016.
 12. withdraws-tender-for-126 aircraft
 13. All you need to know about the Rafale deal DEEPALAKSHMI K.
 14. HAL, Dassault Aviation discuss Rafale aircraft deal Hindustan Aeronautics Limited and French Dassault Aviation today reviewed the progress of their ongoing projects at the Paris air show.-PTI|Updated: Jun 19, 2013,
 15. bjp-modi-france/
 16. Rafale deal:
 17. [Https: //www.hindustantimes.com/india-news/defence-ministry-note-proves-pm-bypassed-negotiations- with-france-on-rafale-deal-rahul / story-EUd4UAbFWTQ9lX6XODsLkM.html defence ministry note proves PM bypassed negotiations with France on Rafale deal]
 18. Swamy to move court if Rafale deal is finalised
 19. ಮಾಜಿ ಅಧ್ಯಕ್ಷ ಫ್ರಾಂಸ್ವಾ ಒಲಾಂಡ್‌ ಹೇಳಿಕೆ ಬೆನ್ನಲ್ಲೇ ಸ್ಪಷ್ಟನೆ; ರಫೇಲ್ ಒಪ್ಪಂದ: ಭಾರತೀಯ ಕಂಪೆನಿ ಆಯ್ಕೆಯಲ್ಲಿ ನಮ್ಮ ಪಾತ್ರವಿಲ್ಲ ಎಂದ ಫ್ರಾನ್ಸ್;;22 ಸೆಪ್ಟೆಂಬರ್ 2018,
 20. No role in selecting Indian partners for Rafale: France;;PTI | Updated: Sep 22, 2018
 21. ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ;;ರಫೇಲ್‌ ದರ ವಿವರ ಕೊಡಿ;;ಪ್ರಜಾವಾಣಿ : 01 ನವೆಂಬರ್ 2018,
 22. ರಫೇಲ್ ಒಪ್ಪಂದ: ದರದ ಮಾಹಿತಿ ಸುಪ್ರೀಂಗೆ ನೀಡದಿರಲು ಕೇಂದ್ರ ನಿರ್ಧಾರ?;01 ನವೆಂಬರ್ 2018
 23. Rafale: SC asks govt to give info on price ;Ashish Tripathi, DH News Service, New Delhi, OCT 31 2018,
 24. ಬಗೆಹರಿಯದ ಆರು ಪ್ರಶ್ನೆಗಳು dt 15-12-2018 ಪ್ರಜಾವಾಣಿ
 25. 6 Unanswered Questions From SC’s Rafale Verdict;VAKASHA SACHDEVUPDATED: ೧೫-೧೨-೨೦೧೮
 26. https://www.prajavani.net/rafael-deal-and-supreme-court-595763.html -, ರಫೇಲ್‌ ವಿಚಾರದಲ್ಲಿನ ಗೋ‍ಪ್ಯತೆಯು ಆತಂಕ ಉಂಟುಮಾಡುತ್ತದೆ.-ಕೆ.ವಿ. ಧನಂಜಯ್‌;; 20 ಡಿಸೆಂಬರ್ 2018
 27. ಮಹಾಲೇಖಪಾಲರ(ಸಿಎಜಿ) ವರದಿ ೧೩- ೨- ೨೦೧೯
 28. ರಫೇಲ್‌ ಪರೀಕ್ಷೆಯಲ್ಲಿ ನಾಲ್ಕು ಬಾರಿ ಫೇಲ್‌;ಪ್ರಜಾವಾಣಿ : 14 ಫೆಬ್ರವರಿ 2019
 29. ಫ್ರಾನ್ಸ್ ಸರ್ಕಾರದ ಖಾತರಿಯೇ ಇಲ್ಲ;ಪಿಟಿಐ: 14 ಫೆಬ್ರವರಿ 2019
 30. ಪರೀಕ್ಷೆಯಲ್ಲಿ ನಾಲ್ಕು ಬಾರಿ ಫೇಲ್‌ ;ಪ್ರಜಾವಾಣಿ ;14 ಫೆಬ್ರವರಿ 2019
 31. https://cag.gov.in/cag-india Archived 2020-02-21 ವೇಬ್ಯಾಕ್ ಮೆಷಿನ್ ನಲ್ಲಿ. Shri Rajiv Mehrishi;Comptroller and Auditor General of India
 32. 12/02/2019 Updated 12/02/2019;Govt To Table CAG Report On Rafale Deal In Parliament Today
 33. Congress again approaches CAG over Rafale deal Oct 04, 2018[ಶಾಶ್ವತವಾಗಿ ಮಡಿದ ಕೊಂಡಿ]
 34. https://www.prajavani.net/stories/national/secret-rafale-files-stolen-619382.html ರಫೇಲ್ ರಹಸ್ಯ ದಾಖಲೆ ಕಳವು: ಸುಪ್ರೀಂ ಕೋರ್ಟ್‌ಗೆ ಕೇಂದ್ರ ಮಾಹಿತಿ;ಪ್ರಜಾವಾಣಿ ; d: 06 ಮಾರ್ಚ್ 2019
 35. Rafale documents stolen from MoD: Govt tells SC Press Trust of India, New Delhi, MAR 06 2019, 14:54PM IST UPDATED: MAR 06 2019, 16:33PM IST
 36. Rafale docu not stolen, petitioners used photocopies' Press Trust of India, New Delhi, MAR 08 2019
 37. Did the PMO undermine Rafale negotiations?;FEBRUARY 08, 2019 19:09 IST
 38. ‘In black and white’: Rahul Gandhi cites MoD document on PM role in Rafale; d: Feb 08, 2019 11:56 IST;HT Correspondent;Hindustan Times, New Delhi
 39. No bank guarantees meant a more expensive new Rafale deal;N. Ram MARCH 06, 2019 05:04 IS
 40. https://www.prajavani.net/stories/national/indian-air-force-rafael-672400.html ವಾಯುಪಡೆಗೆ ಭೀಮಬಲ;ಪ್ರಜಾವಾಣಿ d: 09 ಅಕ್ಟೋಬರ್ 2019,
 41. https://www.prajavani.net/stories/national/indian-air-force-rafael-672400.html ವಾಯುಪಡೆಗೆ ಭೀಮಬಲ;ಪ್ರಜಾವಾಣಿ d: 09 ಅಕ್ಟೋಬರ್ 2019,
 42. https://www.prajavani.net/stories/national/supreme-court-verdict-on-rafael-deal-no-investigation-required-682079.html ರಫೇಲ್ ತನಿಖೆ ಅನಗತ್ಯ ಎಂದ ಸುಪ್ರೀಂ ಕೋರ್ಟ್; ಪ್ರಜಾವಾಣಿ ;d: 14 ನವೆಂಬರ್ 2019,
 43. Rafale deal verdict highlights: SC rejects review, but Rahul Gandhi says 'door to JPC probe opened'
 44. ರಫೇಲ್‌: ಪ್ಯಾರಿಸ್‌ ಕಚೇರಿಗೆ ನುಗ್ಗಲು ಯತ್ನ/ಪಿಟಿಐ /d: 23 ಮೇ 2019
 45. ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ ;d: 29 ಜುಲೈ 2020,
 46. ಭಾರತಕ್ಕೆ ‘ರಫೇಲ್ ಬಲ’;ಪ್ರಜಾವಾಣಿ;d: 28 ಜುಲೈ 2020,
 47. ಆಳ-ಅಗಲ: ಮುಗಿಯದ ರಫೇಲ್‌ ರಗಳೆ, 'ಸುಪ್ರೀಂ'ನಲ್ಲಿ ಮುಂದಿನ ವಾರ ಅರ್ಜಿ ವಿಚಾರಣೆ;;ಪ್ರಜಾವಾಣಿ ವಾರ್ತೆ Updated: 15 ಏಪ್ರಿಲ್ 2021
 48. 05 - Dassault paid 1 million euro as 'gift' to Indian middleman in Rafale deal: French report--Ankit Kumar- New Delhi- April 5, 2021; UPDATED: April 5, 2021[ಶಾಶ್ವತವಾಗಿ ಮಡಿದ ಕೊಂಡಿ]
 49. ಪ್ರಜಾವಾಣಿ ವಾರ್ತೆ Updated: 05 ಏಪ್ರಿಲ್ 2021,