ಎರಡನೇ ಮಹಾಯುದ್ಧ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಎರಡನೇ ಮಹಾಯುದ್ಧ
ಕಾಲ: ಸೆಪ್ಟಂಬರ್ ೧,೧೯೩೯ಸೆಪ್ಟಂಬರ್ ೨, ೧೯೪೫
ಸ್ಥಳ: ಯುರೋಪ್, ಪೆಸಿಫಿಕ್ ಮಹಾಸಾಗರ, ಆಗ್ನೇಯ ಏಷ್ಯಾ, ಮಧ್ಯ ಏಷ್ಯಾ, ಮೆಡಿಟೆರೇನಿಯ ಮತ್ತು ಆಫ್ರಿಕ
ಪರಿಣಾಮ: Allied victory. ಪ್ರಪಂಚದ ಅತಿ ಬಲಾಡ್ಯ ಶಕ್ತಿಗಳಾಗಿ (superpower) ಅಮೇರಿಕ ಸಂಯುಕ್ತ ಸಂಸ್ಥಾನ ಮತ್ತು ಸೋವಿಯಟ್ ಒಕ್ಕೂಟಗಳ ಉದ್ಭವ. Creation of First World and Second World spheres of influence in Europe leading to the Cold War.
ಕಾರಣ(ಗಳು): ಜರ್ಮನಿಯಿಂದ ಪೊಲೆಂಡ್ನ ಆಕ್ರಮಣ, ಪರ್ಲ್ ಹಾರ್ಬರ್ ಮೇಲೆ ಜಪಾನಿನ ದಾಳಿ.
ಕದನಕಾರರು
Allied Powers:
Flag of the Soviet Union.svg ಸೊವಿಯೆಟ್ ಒಕ್ಕೂಟ
Canadian Red Ensign 1957-1965.svg ಕೆನಡ

US flag 48 stars.svg ಅಮೇರಿಕ ದೇಶ
Flag of the United Kingdom.svg ಯುನೈಟೆಡ್ ಕಿಂಗ್‍ಡಮ್
ಮತ್ತಿತರರು

Axis Powers:
Flag of German Reich (1935–1945).svg ಜರ್ಮನಿ
Flag of Japan (bordered).svg ಜಪಾನ್
Flag of Italy (1861-1946).svg ಇಟಲಿ
ಮತ್ತಿತರರು
ಸೇನಾಧಿಪತಿಗಳು
Flag of the Soviet Union.svg ಜೋಸೆಫ್ ಸ್ಟಾಲಿನ್
US flag 48 stars.svg ಫ್ರಾಂಕ್ಲಿನ್ ರೂಸ್ವೆಲ್ಟ್
Canadian Red Ensign 1957-1965.svg ವಿಲಿಯಮ್ ಲ್ಯೋನ್ ಮೆಕೆನ್ಜಿ ಕಿಂಗ್
Flag of the United Kingdom.svg ವಿನ್ಸ್ಟನ್ ಚರ್ಚಿಲ್
Flag of German Reich (1935–1945).svg ಅಡೋಲ್ಫ್ ಹಿಟ್ಲರ್
Flag of Japan (bordered).svg ಹಿದೇಕಿ ತೊಜೊ
Flag of Italy (1861-1946).svg ಬೆನಿಟೊ ಮುಸ್ಸೊಲಿನಿ
ಮೃತರು ಮತ್ತು ಗಾಯಾಳುಗಳು
ಮೃತ ಸೈನಿಕರು:
17,000,000
ಮೃತ ನಾಗರೀಕರು:
33,000,000
ಒಟ್ಟು ಸಾವು:
50,000,000
ಮೃತ ಸೈನಿಕರು:
8,000,000
ಮೃತ ನಾಗರೀಕರು:
4,000,000
ಒಟ್ಟು ಸಾವು:
12,000,000

ಎರಡನೆಯ ಮಹಾಯುದ್ಧ ೧೯೩೯ರಿಂದ ೧೯೪೫ರವರೆಗೆ ನಡೆದ, ಜಗತ್ತಿನ ಅನೇಕ ದೇಶಗಳನ್ನೊಳಗೊಂಡ ಯುದ್ಧ. ಪ್ರಧಾನವಾಗಿ ಯೂರೋಪ್ ಮತ್ತು ಏಷಿಯಾ ಖಂಡದಲ್ಲಿ ನಡೆಯಲ್ಪಟ್ಟ ಈ ಯುದ್ಧದಲ್ಲಿ ಮಿತ್ರ ರಾಷ್ಟ್ರ ( ಫ್ರಾನ್ಸ್, ರಶಿಯಾ, ಇಂಗ್ಲೆಂಡ್ ಮತ್ತು ಅಮೆರಿಕಾ) ಮತ್ತು ಅಕ್ಷ ರಾಷ್ಟ್ರ (ಜರ್ಮನಿ, ಇಟಲಿ ಮತ್ತು ಜಪಾನ್) ಎಂಬ ಎರಡು ಬಣಗಳಿದ್ದವು. ಒಟ್ಟಿನಲ್ಲಿ ೭೦ ರಾಷ್ಟ್ರಗಳ ಸೈನ್ಯಗಳು ಭಾಗವಹಿಸಿದ ಈ ಯುದ್ಧದಲ್ಲಿ ಆರು ಕೋಟಿಗೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿರಬಹುದು ಎಂದು ಅಂದಾಜಿದೆ. ಮನುಷ್ಯನ ಇತಿಹಾಸದಲ್ಲಿಯೇ ಇದು ಅತಿ ಹೆಚ್ಚು. ಕೊನೆಯಲ್ಲಿ ಮಿತ್ರ ರಾಷ್ಟ್ರಗಳ ಮೇಲುಗೈಯಾಯಿತು.

ಯೂರೋಪು[ಬದಲಾಯಿಸಿ]

 • ೧೯೩೯ರ ಸೆಪ್ಟೆಂಬರ್‍ ೧ರಂದು ಜರ್ಮನಿಯು ಪೋಲೆಂಡಿನ ಮೇಲೆ ಆಕ್ರಮಣ ಮಾಡಿತು. ಜರ್ಮನಿಯ ಮುಖಂಡ ಅಡಾಲ್ಫ್ ಹಿಟ್ಲರನು ಸೊವಿಯೆಟ್ ಒಕ್ಕೂಟದೊಂದಿಗೆ ಮಾಡಿಕೊಂಡಿದ್ದ ಒಪ್ಪಂದದಂತೆ, ಅದೇ ದಿನ ಸೊವಿಯೆಟ್ ಒಕ್ಕೂಟವು ಪೋಲೆಂಡನ್ನು ಪೂರ್ವದಿಂದ ಆಕ್ರಮಣ ಮಾಡಿತು. ಇದಕ್ಕೆ ಪ್ರತ್ಯುತ್ತರವಾಗಿ ಸೆಪ್ಟೆಂಬರ್‍ ಮೂರರಂದು ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್, ಜರ್ಮನಿಯ ವಿರುದ್ಧ ಯುದ್ಧ ಸಾರಿದವು.
 • ಕೆಲವು ತಿಂಗಳುಗಳಲ್ಲಿ ಜರ್ಮನಿ ಪೋಲೆಂಡನ್ನು ಪೂರ್ಣವಾಗಿ ಆಕ್ರಮಿಸಿಕೊಂಡಿತು. ೧೯೪೦ರಲ್ಲಿ ಜರ್ಮನಿಯು ನಾರ್ವೆ, ನೆದರ್ಲೆಂಡ್, ಬೆಲ್ಜಿಯಮ್ ಮತ್ತು ಫ್ರಾನ್ಸುಗಳ ಮೇಲೆ ಏರಿ ಹೋಯಿತು. ೧೯೪೧ರಲ್ಲಿ ಯುಗೋಸ್ಲಾವಿಯಾ ಮತ್ತು ಗ್ರೀಸ್ ಕೂಡಾ ಜರ್ಮನಿಯ ದಾಳಿಗೀಡಾದವು. ಇಟಲಿಯು ಉತ್ತರ ಆಫ್ರಿಕಾದ ಬ್ರಿಟಿಷ್ ವಸಾಹತುಗಳ ಮೇಲೆ ಆಕ್ರಮಣ ಮಾಡಿತು. ಕೆಲವೇ ತಿಂಗಳುಗಳಲ್ಲಿ ಜರ್ಮನಿ ಇಟಲಿಗೆ ಬೆಂಬಲ ಘೋಷಿಸಿತು.
 • ೧೯೪೧ರ ಮಧ್ಯದ ಸುಮಾರಿಗೆ ಪಶ್ಚಿಮ ಯೂರೋಪಿನ ಬಹುತೇಕ ರಾಷ್ಟ್ರಗಳು ಜರ್ಮನಿಯ ಅಧೀನಕ್ಕೆ ಸೇರಿಹೋಗಿದ್ದವು. ಆದರೆ ಯುನೈಟೆಡ್ ಕಿಂಗ್ಡಮ್ ಅನ್ನು ಗೆಲ್ಲಲು ಜರ್ಮನಿಗೆ ಸಾಧ್ಯವಾಗಲಿಲ್ಲ. ಇದಕ್ಕೆ ಮುಖ್ಯ ಕಾರಣ ಬ್ರಿಟನ್ನಿನ ರಾಯಲ್ ವಾಯುಪಡೆ ಮತ್ತು ನೌಕಾದಳ ಗಳು ನೀಡಿದ ಉಗ್ರ ಪ್ರತಿಭಟನೆ. ಈಗ ಹಿಟ್ಲರ್‍ ಸೋವಿಯತ್ ಒಕ್ಕೂಟದ ಮೇಲೆ ತಿರುಗಿಬಿದ್ದನು. ೧೯೪೧ರ ಜೂನ್ ೨೨ರಂದು ಏಕಾಏಕಿ ಜರ್ಮನಿಯು ಸೋವಿಯತ್ ಒಕ್ಕೂಟಕ್ಕೆ ನುಗ್ಗಿತು.
 • ಆಪರೇಷನ್ ಬಾರ್ಬಾರೋಸಾ ಎಂಬ ಸಂಕೇತ ನಾಮದ ಈ ದಾಳಿಯಲ್ಲಿ ಜರ್ಮನಿಗೆ ಮೊದಮೊದಲು ಅಪಾರ ಯಶಸ್ಸು ಸಿಕ್ಕಿತು. ೧೯೪೧ರ ಕೊನೆ ಯಷ್ಟರಲ್ಲಿ ಜರ್ಮನ್ ಸೈನ್ಯ ಮಾಸ್ಕೋನಗರದ ಹತ್ತಿರಹತ್ತಿರದ ವರೆಗೂ ಮುನ್ನಡೆದಿದ್ದರು. ಆದರೆ ಅಲ್ಲಿಂದ ಮುಂದೆ ಜರ್ಮನಿ ಮುನ್ನಡೆಯಲಾಗಲಿಲ್ಲ. ಸೋವಿಯತ್ ಸೈನ್ಯ ಭೀಕರ ಪ್ರತೀಕಾರ ಕೈಗೊಂಡು ಜರ್ಮನ್ ಸೈನ್ಯದ ಮಗ್ಗುಲು ಮುರಿದರು.
 • ಮುಂದೆ ಸೋವಿಯತ್ ಸೈನ್ಯವು ಸ್ಟಾಲಿನ್ ಗ್ರಾಡ್ ನಗರಕ್ಕೆ ದಿಗ್ಬಂಧನ ಹಾಕಿ ಕುಳಿತಿದ್ದ ಜರ್ಮನಿಯ ಆರನೆಯ ತುಕಡಿಯನ್ನು ಮುತ್ತುವರೆದು ಪ್ರತಿದಿಗ್ಬಂಧನ ಹಾಕಿದರು. ಮುಂದೆ ಕುರ್ಸ್ಕ್ ಎಂಬಲ್ಲಿ ನಡೆದ ಯುದ್ಧದಲ್ಲಿ ಸೋವಿಯತ್ ಸೈನ್ಯ ಜರ್ಮನಿಯನ್ನು ಸೋಲಿಸಿ, ಲೆನಿನ್ ಗ್ರಾಡ್ ನಗರದ ದಿಗ್ಬಂಧನವನ್ನೂ ಮುರಿದರು. ಈ ನಂತರ ಜರ್ಮನ್ ಸೈನ್ಯ ಹಿಮ್ಮೆಟ್ಟಿತು. ಸೋವಿಯತ್ತರ ಕೆಂಪು ಸೈನ್ಯವು ಅವರನ್ನು ಬರ್ಲಿನ್ ನಗರದವರೆಗೂ ಬೆನ್ನಟ್ಟಿ ಹೋಯಿತು.
 • ಬರ್ಲಿನ್ ನಲ್ಲಿ ಜರ್ಮನ್ ಸೈನ್ಯಕ್ಕೆ ಮನೆಮನೆಯ ನಾಗರೀಕರು ಕುಮ್ಮಕ್ಕು ಕೊಟ್ಟರೂ, ಪ್ರಚಂಡ ಪ್ರಮಾಣದಲ್ಲಿದ್ದ ಕೆಂಪು ಸೈನ್ಯವು ಬರ್ಲಿನ್ ನಗರವನ್ನು ಗೆದ್ದಿತು. ಇದೇ ಸುಮಾರಿಗೆ ( ಏಪ್ರಿಲ್ ೩೦, ೧೯೪೫ರ ಮುಂಜಾನೆ) ಹಿಟ್ಲರನು ತನ್ನ ನೆಲಮಾಳಿಗೆಯ ಬಂಕರಿನಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಇತ್ತ ಪಾಶ್ಚಿಮಾತ್ಯ ಮಿತ್ರ ರಾಷ್ಟ್ರ ಪಡೆ ೧೯೪೩ರಲ್ಲಿ ಇಟಲಿಯತ್ತ ನುಗ್ಗಿತು. ೧೯೪೪ರಲ್ಲಿ ಫ್ರಾನ್ಸಿನ ನಾರ್ಮಂಡಿಯ ತೀರದಿಂದ ಒಳನುಗ್ಗಿ ಫ್ರಾನ್ಸನ್ನು ಜರ್ಮನಿಯ ಮುಷ್ಠಿಯಿಂದ ಬಿಡುಗಡೆಮಾಡಿದರು.
 • ಜರ್ಮನಿಯ ಪ್ರತಿದಾಳಿಗೆ ರೈನ್ ನದಿಯ ದಡದ ಮೇಲೆ ಮಿತ್ರ ರಾಷ್ಟ್ರಗಳು ಬ್ಯಾಟಲ್ ಆಫ್ ದ ಬಲ್ಜ್ ಎಂದೇ ಪ್ರಸಿದ್ಧವಾದ ಯುದ್ಧದಲ್ಲಿ ಜರ್ಮನಿಯನ್ನು ಹಿಮ್ಮೆಟ್ಟಿಸಿ, ಮುನ್ನಡೆದು ಎಲ್ಬ್ ನದಿಯ ದಂಡೆಯ ಮೇಲೆ ಪೂರ್ವ ದಿಕ್ಕಿನಿಂದ ಬಂದು ಮುಟ್ಟಿದ್ದ ಸೋವಿಯತ್ ಸೈನ್ಯವನ್ನು ಮುಟ್ಟಿ ಸಂಧಾನ ಸಾಧಿಸಿದರು. ಅಳಿದುಳಿದ ಜರ್ಮನ್ ಸೈನ್ಯವು ಶರಣಾಯಿತು. ಈ ಯುದ್ಧದ ಕಾಲದಲ್ಲಿಯೇ ಜರ್ಮನಿಯಲ್ಲಿ ೬೦,೦೦,೦೦೦ ಯಹೂದಿಗಳನ್ನು ಸೆರೆವಾಸದಲ್ಲಿಟ್ಟು ಕೊಲ್ಲಲಾಯಿತು. ಇದನ್ನು ಹಾಲೋಕಾಸ್ಟ್ ಎಂಬ ಹೆಸರಿನಿಂದ ಕರೆಯಲಾಗಿದೆ.

ಏಷಿಯಾ ಮತ್ತು ಶಾಂತ ಸಾಗರ[ಬದಲಾಯಿಸಿ]

 • ಯೂರೋಪಿನಲ್ಲಿ ಯುದ್ಧ ಶುರುವಾಗುವ ಮೊದಲೇ ೧೯೩೯ರ ಜುಲೈ ೭ರಂದು ಜಪಾನ್ ಚೀನಾದ ಮೇಲೆ ದಾಳಿ ಮಾಡಿತು. ಚೀನಾ ಮೊದಲಾಗಿ ಪೂರ್ವ ಮತ್ತು ಆಗ್ನೇಯ ಏಷಿಯಾದ ಒಂದೊಂದೇ ರಾಷ್ಟ್ರವನ್ನು ಗೆಲ್ಲುತ್ತಾ ಹೋಗುವುದು ಜಪಾನಿನ ಉದ್ದೇಶವಾಗಿತ್ತು. ಚೀನಾದ ಮೇಲಿನ ದಾಳಿಯಲ್ಲಿ ಯಶ ಸಿಕ್ಕಿದ ನಂತರ ಜಪಾನು ೧೯೪೧ರ ಡಿಸೆಂಬರ್‍ ೭ರಂದು ಅನೇಕ ರಾಷ್ಟ್ರಗಳ ಮೇಲೆ ಏಕಾಏಕಿ ದಾಳಿ ಮಾಡಿತು. ಅದೇ ದಿನ ಪರ್ಲ್ ಹಾರ್ಬರ್‍ ಎಂಬಲ್ಲಿ ಅಮೇರಿಕಾದ ನೌಕಾದಳದ ಮೇಲೆ ಬಾಂಬ್ ದಾಳಿ ಮಾಡಿತು.
 • ಇದಕ್ಕೆ ಪ್ರತ್ಯುತ್ತರವಾಗಿ ಅಮೇರಿಕಾವು ಯುದ್ಧದಲ್ಲಿ ಧುಮುಕಲು ನಿರ್ಧರಿಸಿತು. ಮುಂದಿನ ಆರು ತಿಂಗಳು ಜಪಾನಿಗೆ ಒಂದಾದಮೇಲೆ ಒಂದರಂತೆ ಯಶಸ್ಸು ಸಿಕ್ಕಿದರೂ, ಕೋರಲ್ ಸಮುದ್ರದ ಯುದ್ಧದಲ್ಲಿ ಅಮೆರಿಕನ್ ನೌಕಾದಳವು ಜಪಾನಿನ ಮೇಲೆ ಸೇಡು ತೀರಿಸಿಕೊಂಡದ್ದಲ್ಲದೆ, ಮಿಡ್ ವೇ ಯುದ್ಧದಲ್ಲಿಯೂ ಜಪಾನನ್ನು ಸೋಲಿಸಿತು. ಈ ಯುದ್ಧದಲ್ಲಿ ಜಪಾನಿನ ನಾಲ್ಕು ವಿಮಾನವಾಹಕ ದಡಗುಗಳನ್ನು ಮುಳುಗಿಸಿ ಅಮೆರಿಕಾ, ಜಪಾನಿನ ನೌಸೇನೆಗೆ ದೊಡ್ಡ ನಷ್ಟ ಉಂಟುಮಾಡಿತು.
 • ಇಲ್ಲಿಂದ ಮುಂದೆ ಮಿತ್ರ ರಾಷ್ಟ್ರಗಳು ಜಪಾನಿನ ಮೇಲೆ ಪ್ರತಿ ಹಲ್ಲೆ ಮುಂದುವರಿಸಿ ಮಿಲ್ನೆ ಬೇ ಮತ್ತು ಗ್ವಾದಾಲ್ ಕನಾಲ್ ಯುದ್ಧಗಳಲ್ಲಿ ವಿಜಯ ಸಾಧಿಸಿದವು. ಶಾಂತ ಸಾಗರದ ನೈರುತ್ಯ ದಿಕ್ಕಿನಲ್ಲಿ ವಿಜಯ ಸಾಧಿಸಿದ ಮಿತ್ರ ರಾಷ್ಟ್ರಗಳು ಅದೇ ಸಾಗರದ ಮಧ್ಯ ಭಾಗದಲ್ಲಿ ನಿಯಂತ್ರಣ ಪಡೆದುಕೊಳ್ಳಲು ಹೊಸ ಮುನ್ನಡೆ ಪ್ರಾರಂಭಿಸಿದವು. ಆದೆ ಈ ಯುದ್ಧದಲ್ಲಿ ಜಪಾನಿ ಸೈನ್ಯವು ತಕ್ಕ ಉತ್ತರ ಕೊಟ್ಟಿತು.
 • ಈ ಯುದ್ಧ ಭಾಗವಾಗಿ ಫಿಲಿಪೈನ್ ಸಮುದ್ರದ ಯುದ್ಧ, ಲೆಯಟೆ ಕೊಲ್ಲಿಯ ಯುದ್ಧ, ಇವೋ ಜಿಮಾ ಮತ್ತು ಓಕಿನಾವಾದ ಯುದ್ಧ ಮೊದಲಾದ ಭೀಕರ ಹೋರಾಟಗಳು ನಡೆದವು. ಇದೇ ವೇಳೆಗೆ ಅಮೇರಿಕದ ಸಬ್ ಮೆರೀನುಗಳು ಜಪಾನಿನ ಕಡೆಗೆ ಸರಕು ಸಾಗಣೆಯನ್ನು ಭಗ್ನಗೊಳಿಸುವುದರಲ್ಲಿ ಯಶಸ್ವಿಯಾದವು. ಇದರಿಂದ ಜಪಾನಿನ ಆರ್ಥಿಕಪರಿಸ್ಥಿತಿ ಬಿಗಡಾಯಿಸತೊಡಗಿತು. ೧೯೪೫ರಲ್ಲಿ ಮಿತ್ರ ರಾಷ್ಟ್ರಗಳು ಜಪಾನಿನಗ ಮೇಲೆ ಅನೇಕ ವಾಯುದಾಳಿಯನ್ನು ಕೈಗೊಂಡವು.
 • ಜಪಾನಿನ ನಗರಗಳು ಮತ್ತು ಕಾರಖಾನೆಗಳ ಮೇಲೆ ಮುಖ್ಯವಾಗಿ ನಡೆದ ಈ ಹಲ್ಲೆಗಳಿಂದ ಜಪಾನಿನ ಜನಜೀವನ ಅಸ್ಥವ್ಯಸ್ಥವಾಗಿ , ಯುದ್ಧ ಮುಂದುವರಿಸುವ ಶಕ್ತಿ ಕುಂಠಿತವಾಯಿತು. ಕೊನೆಗೆ ೧೯೪೫ರ ಆಗಸ್ಟ್ ೬ರಂದು ಅಮೆರಿಕವು ಜಪಾನಿನ ಹಿರೋಶಿಮಾ ನಗರದ ಮೇಲೆ ಪರಮಾಣು ಬಾಂಬ್ ಹಾಕಿತು. ಆಗಸ್ಟ್ ೯ರಂದು ನಾಗಸಾಕಿ ಎಂಬ ನಗರದ ಮೇಲೆ ಮತ್ತೊಂದು ಪರಮಾಣು ಬಾಂಬ್ ಹಾಕಲಾಯಿತು.
 • ಅಷ್ಟೇ ಅಲ್ಲ ಎಲ್ಲಯವರೆಗೆ ಜಪಾನ್ ಶರಣಾಗುವುದಿಲ್ಲವೋ ಅಲ್ಲಿಯವರೆಗೂ ಒಂದೊಂದು ಹೊಸ ಹೊಸ ನಗರಗಳ ಮೇಲೆ ಬಾಂಬ್ ಹಾಕುವುದಾಗಿ ಬೆದರಿಕೆ ಹಾಕಲಾಯಿತು. ೧೯೪೫ರ ಆಗಸ್ಟ್ ೧೫ರ ಮುಂಜಾನೆ ಜಪಾನ್ ಬೇಶರತ್ ಶರಣಾಗತಿ ಘೋಷಿಸುವುದರೊಂದಿಗೆ ಎರಡನೆಯ ಮಹಾಯುದ್ಧ ಮುಕ್ತಾಯವಾಯಿತು.

ಪರ್ಯವಸಾನ[ಬದಲಾಯಿಸಿ]

 • ಈ ಅತಿಭಯಂಕರ ಯುದ್ಧದಲ್ಲಿ ೬,೨೦,೦೦,೦೦೦ ಜನರು ಸತ್ತಿರಬಹುದು ಎಂದು ಅಂದಾಜಿದೆ. ಇದು ಆವೇಳೆಯ ಜಗತ್ತಿನ ಜನಸಂಖ್ಯೆಯ ೨.೫% ಆಗಿತ್ತು. ಪ್ರತಿಯೊಂದು ರಾಷ್ಟ್ರದ ಮೃತರ ಸಂಖ್ಯೆಯ ಅಂದಾಜಿನಂತೆ ಈ ಒಟ್ಟು ಮೊತ್ತವೂ ಕೂಡಾ ಒಂದು ಅಂದಾಜು. ಯೂರೋಪ್ ಮತ್ತು ಏಶಿಯಾದ ಅನೇಕ ದೇಶಕ್ಕೆ ದೇಶವೇ ವಿನಾಶದ ಪರಿಸ್ಥಿತಿಗೆ ತಲುಪಿದವು.
 • ಅದರಿಂದ ಚೇತರಿಸಿಕೊಳ್ಳಲು ಅನೇಕ ದಶಕಗಳೇ ಬೇಕಾದವು. ಎರಡನೆಯ ಮಹಾಯುದ್ಧದ ರಾಜಕೀಯ, ಸಾಮಾಜಿಕ, ಆರ್ಥಿಕ ಮತ್ತು ತಂತ್ರಜ್ಞಾನದ ದೃಷ್ಟಿಯಿಂದ ಜಗತ್ತಿನ ಮೇಲಾದ ಮಹತ್ತರ ಪರಿಣಾಮದ ಕುರುಹುಗಳನ್ನು ಇಂದಿನವರೆಗೂ ಕಾಣಬಹುದು.

ಕಾರಣಗಳು[ಬದಲಾಯಿಸಿ]

 • ಪೋಲೆಂಡಿನ ಮೇಲೆ ಜರ್ಮನಿಯ ಆಕ್ರಮಣ ಹಾಗೂ ಚೀನಾ, ಅಮೆರಿಕಾ ಮತ್ತು ಬ್ರಿಟಿಷ್ ಮತ್ತು ಡಚ್ ವಸಾಹುತುಗಳ ಮೇಲೆ ಜಪಾನಿನ ಆಕ್ರಮಣ ಇವು ಎರಡನೆಯ ಮಹಾಯುದ್ಧ ಪ್ರಾರಂಭವಾಗಲಿಕ್ಕೆ ಕಾರಣಗಳೆಂದು ತಿಳಿಯಲಾಗುತ್ತದೆ. ಜಗತ್ತಿನ ಎರಡೂ ಮಗ್ಗಲುಗಳಲ್ಲಿ ಪ್ರಾರಂಭವಾದ ಈ ಘಟನೆಗಳಿಗೆ ಮುಖ್ಯ ಕಾರಣವೆಂದರೆ ಜರ್ಮನಿ ಮತ್ತು ಜಪಾನಿನಲ್ಲಿ ಸರ್ವಾಧಿಕಾರೀ ಆಡಳಿತವಿದ್ದುದು ಹಾಗೂ ಅವರಿಬ್ಬರ ಜಗತ್ತನ್ನೆ ಗೆಲ್ಲುವ ಮಹತ್ವಾಕಾಂಕ್ಷೆ.
 • ಇವೆರಡು ರಾಷ್ಟ್ರಗಳು ತಮ್ಮ ರಾಜ್ಯ ವಿಸ್ತಾರ ಕಾರ್ಯಕ್ರಮವನ್ನು ಮೊದಲೇ ಪ್ರಾರಂಭಿಸಿದ್ದರೂ, ಮಹಾಯುದ್ಧದ ಅಧಿಕೃತ ಶುರುವಾತು ಅವಕ್ಕೆ ಸಶಸ್ತ್ರ ಪ್ರತಿಭಟನೆ ಬಂದಾಗಲೇ ಆಯಿತು. ಜರ್ಮನಿಯಲ್ಲಿ ಪ್ರಜಾಸತ್ತಾತ್ಮಕ ವಿಧಾನದಿಂದಲೇ ನಾಝೀ ಪಕ್ಷವು ಅಧಿಕಾರಕ್ಕೆ ಬಂದರೂ, ಒಮ್ಮೆ ಅಧಿಕಾರಕ್ಕೆ ಬಂದಮೇಲೆ ಪ್ರಜಾಸತ್ತಾತ್ಮಕ ವಿಧಾನಗಳನ್ನು ಮೂಲೆಗೆ ತಳ್ಳಲಾಯಿತು.
 • ಪ್ರಥಮ ಮಹಾಯುದ್ಧದಲ್ಲಿ ಸೋತ ಮೇಲೆ ಕಳೆದುಕೊಂಡ ಜರ್ಮನ್ ಸ್ವಾಭಿಮಾನವನ್ನು ಮರಳಿ ದೊರಕಿಸುವ ಆಶ್ವಾಸನೆ ಕೊಟ್ಟ ಮೊದಲ ಪಕ್ಷ ಅದಾದ್ದರಿಂದ ಜರ್ಮನ್ ಜನತೆ ಆ ಪಕ್ಷಕ್ಕೆ ತನ್ನ ಬೆಂಬಲ ನೀಡಿತು. ಮೊದಲನೆಯ ಮಹಾಯುದ್ಧ ಕೊನೆಗೊಂಡ ವರ್ಸಾಯಿಯ ಒಪ್ಪಂದ ದ ೨೩೧ನೆಯ ನಿಯಮ ಜರ್ಮನ್ ಜನತೆಗೆ ಸಹಿಸಲಸಾದ್ಯವಾಗಿತ್ತು. ನಾಝೀ ನಾಯಕ ಅಡೋಲ್ಫ್ ಹಿಟ್ಲರ್‍ ಜರ್ಮನಿ ತಮ್ಮ ಹಕ್ಕು ಎಂದು ತಿಳಿದುಕೊಂಡಿರುವ ಪ್ರತಿಯೊಂದು ರಾಷ್ಟ್ರದ ವಿರುದ್ಧವೂ ಹೋರಾಡುವುದಾಗಿ ಆಶ್ವಾಸನೆ ಕೊಟ್ಟದ್ದಲ್ಲದೇ ಆಬಗ್ಯೆ ಮೊದಲ ಹೆಜ್ಜೆಗಳ ನ್ನೂ ಇಟ್ಟನು.
 • ಇತ್ತ ಜಪಾನಿನಲ್ಲಿ ಹೆಸರಿಗೆ ಕ್ರೈಸಾಂತಿಮಮ್ ( ಸೇವಂತಿಗೆ) ವಂಶದ ರಾಜಸತ್ತೆಯಿದ್ದರೂ, ನಿಜವಾದ ಅಧಿಕಾರ ಸೇನಾ ವರಿಷ್ಠರ ಸಣ್ಣ ಗುಂಪೊಂದರ ಕೈಯಲ್ಲಿತ್ತು. ಅವರ ಮಹತ್ವಾಕಾಂಕ್ಷೆ ಜಪಾನನ್ನು ದೊಡ್ಡ ಸಾಮ್ರಾಜ್ಯವನ್ನು ಮಾಡುವದಾಗಿತ್ತು. ಈ ಗುಂಪಿನ ನೇತೃತ್ವದಲ್ಲಿ ಜಪಾನ್ ೧೯೩೧ರಲ್ಲಿ ಮಂಚೂರಿಯಾದ ಮೇಲೂ, ೧೯೩೭ರಲ್ಲಿ ಚೀನಾದ ಮೇಲೂ ಆಕ್ರಮಣ ಮಾಡಿತ್ತು. ಚೀನಾ ಮತ್ತು ಮಂಚೂರಿಯಾ ದ ನೈಸರ್ಗಿಕ ಸಂಪತ್ತನ್ನು ಕೈವಶ ಮಾಡಿಕೊಂಡು , ಅದರ ಮೂಲಕ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಅಮೆರಿಕಾ ಅಥವಾ ಯುನೈಟೆಡ್ ಕಿಂಗ್ ಡಮ್ ನೇರವಾಗಿ ಈ ಯುದ್ಧದಲ್ಲಿ ಭಾಗವಹಿಸದಿದ್ದರೂ ಚೀನಾಕ್ಕೆ ಆರ್ಥಿಕ ಮತ್ತು ಸೈನಿಕ ನೆರವು ನೀಡಿದವು.