ಪಟಿಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಟಿಕದ ಸ್ಪಟಿಕ(crystal)

ಪಟಿಕ (ಆಲಮ್)ಎಂದರೆ ದ್ವಿ ಲವಣಗಳ (double salts) ಒಂದು ನಿರ್ದಿಷ್ಟ ಗುಂಪು.ಒಂದು ನಿರ್ದಿಷ್ಟ ಪ್ರಮಾಣದಲ್ಲಿ ಸ್ಪಟಿಕ ರೂಪದಲ್ಲಿ ಬೆರೆತಿರುವ ಎರಡು ಸಾಮಾನ್ಯ ಲವಣಗಳಿಗೆ ದ್ವಿ ಲವಣ ಎನ್ನುತ್ತಾರೆ. ನೀರಿನ ಅಣುಗಳೊಂದಿಗೆ ಇರುವ (hydrated) ಪೊಟಾಸಿಯಂ ಸಲ್ಫೇಟ್ ಹಾಗೂ ಅಲ್ಯುಮಿನಿಯಮ್ ಸಲ್ಫೇಟ್ ನಮಗೆ ಚಿರಪರಿಚಿತ ಪಟಿಕ.ಇದನ್ನು ಪೊಟಾಸಿಯಂ ಪಟಿಕ ಎನ್ನುತ್ತಾರೆ.ಇದೇ ರೀತಿ ಅಮೋನಿಯಮ್ ಪಟಿಕ,ಸೋಡಿಯಂ ಪಟಿಕ ಮುಂತಾದವುಗಳು ಬಳಕೆಯಲ್ಲಿವೆ.ಹೆಚ್ಚಿನ ಪಟಿಕಗಳನ್ನು ಅಲ್ಯುಮಿನಿಯಮ್ ಆಕ್ಸೈಡ್ (ಬಾಕ್ಸೈಟ್)ಅದಿರಿನಿಂದ ಪಡೆಯಲಾಗುತ್ತದೆ. ಪಟಿಕಗಳನ್ನು ಔಷಧಗಳ ತಯಾರಿಕೆಯಲ್ಲಿ,ನೀರಿನ ಶುದ್ಧೀಕರಣಕ್ಕೆ,ಬಣ್ಣಗಳ ತಯಾರಿಕೆಯಲ್ಲಿ,ಅಡುಗೆ ಸೋಡ ತಯಾರಿಕೆಯಲ್ಲಿ,ಅಂಟುಗಳ ತಯಾರಿಕೆಯಲ್ಲಿ ಮುಂತಾಗಿ ಬಳಸುತ್ತಾರೆ.

"https://kn.wikipedia.org/w/index.php?title=ಪಟಿಕ&oldid=691979" ಇಂದ ಪಡೆಯಲ್ಪಟ್ಟಿದೆ