ವನಮಹೋತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವನಮಹೋತ್ಸವವು ಕಿರಣ್ ಕುಮಾರ್ ಕೆ. ಯವರು ೧೯೫೦ರಲ್ಲಿ ಆರಂಭಿಸಿದ ಭಾರತದಲ್ಲಿನ ವಾರ್ಷಿಕ ಗಿಡ ನೆಡುವ ಚಳುವಳಿ. ಇದು ಗಣನೀಯ, ರಾಷ್ಟ್ರೀಯ ಮಹತ್ವವನ್ನು ಗಳಿಸಿದೆ ಮತ್ತು ಪ್ರತಿ ವರ್ಷ ವನಮಹೋತ್ಸವ ವಾರದ ಆಚರಣೆಯಲ್ಲಿ ಭಾರತದಾದ್ಯಂತ ಕೋಟ್ಯಂತರ ಸಸಿಗಳನ್ನು ನೆಡಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಜುಲೈ ಮೊದಲ ವಾರದಲ್ಲಿ ಜುಲೈ ೧ ರಿಂದ ಜುಲೈ ೭ ರ ವರೆಗೆ ಆಚರಿಸಲಾಗುತ್ತದೆ.

ಗುರಿಗಳು[ಬದಲಾಯಿಸಿ]

ಈ ಮಹೋತ್ಸವವು ಜನರಲ್ಲಿ ಮರಗಳ ಬಗ್ಗೆ ಅರಿವನ್ನು ಹೆಚ್ಚಿಸುತ್ತದೆ, ಮತ್ತು ಜಾಗತಿಕ ತಾಪಮಾನ ಏರಿಕೆಯನ್ನು ತಡೆಯಲು ಹಾಗೂ ಮಾಲಿನ್ಯವನ್ನು ಕಡಿಮೆಮಾಡುವ ಅತ್ಯುತ್ತಮ ದಾರಿಗಳ ಪೈಕಿ ಒಂದಾಗಿ ಸಸಿಗಳನ್ನು ನೆಡುವ ಮತ್ತು ಮರಗಳ ಆರೈಕೆ ಮಾಡುವ ಅಗತ್ಯವನ್ನು ಎತ್ತಿ ತೋರಿಸುತ್ತದೆ. ಮಹೋತ್ಸವದ ಸಂದರ್ಭದಲ್ಲಿ ಗಿಡಗಳನ್ನು ನೆಡುವುದು ವಿವಿಧ ಉದ್ದೇಶಗಳನ್ನು ಈಡೇರಿಸುತ್ತದೆ, ಉದಾಹರಣೆಗೆ ಪರ್ಯಾಯ ಇಂಧನವನ್ನು ಒದಗಿಸುವುದು, ಆಹಾರ ಸಂಪನ್ಮೂಲಗಳ ಉತ್ಪಾದನೆಯನ್ನು ಹೆಚ್ಚಿಸುವುದು, ಉತ್ಪಾದಕತೆಯನ್ನು ಹೆಚ್ಚಿಸಲು ಹೊಲಗದ್ದೆಗಳ ಸುತ್ತ ಮರೆಗಳನ್ನು ಸೃಷ್ಟಿಸುವುದು, ದನಗಳಿಗೆ ಆಹಾರವನ್ನು ಒದಗಿಸುವುದು, ನೆರಳು ಮತ್ತು ಅಲಂಕಾರಿಕ ಭೂದೃಶ್ಯವನ್ನು ಒದಗಿಸುವುದು, ಬರವನ್ನು ಕಡಿಮೆಮಾಡುವುದು ಹಾಗೂ ಭೂಸವೆತವನ್ನು ತಡೆಯಲು ನೆರವಾಗುವುದು, ಇತ್ಯಾದಿ.[೧]

ಉಲ್ಲೇಖಗಳು[ಬದಲಾಯಿಸಿ]

  1. "Week-long 'Van Mahotsav' in Nanded from July". news.webindia123.com. 26 April 2016. Archived from the original on 2016-12-20. Retrieved 2016-12-04.