ವಿಕಿಪೀಡಿಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿಕಿಪೀಡಿಅ [ಇಂಗ್ಲಿಷ್: Wikipedia ವಿಕಿಪೀಡಿಅ] ಒಂದು ಅಂತರ್ಜಾಲ-ಆಧಾರಿತ ಬಹುಭಾಷೀಯ ವಿಶ್ವಕೋಶವಾಗಿದೆ. ಹಾಗೆಯೇ ಇದು ಒಂದು ವಿಶ್ವಕೋಶೀಯ ಜಾಲತಾಣವು ಸಹ ಆಗಿದೆ.

Wikipedia
A white sphere made of large jigsaw pieces, with letters from several alphabets shown on the pieces
Wikipedia wordmark
The logo of Wikipedia, a globe featuring glyphs from several writing systems, most of them meaning the letter W or sound "wi"
ಜಾಲದ ವಿಳಾಸ wikipedia.org
ಘೋಷಣೆ The free encyclopedia that anyone can edit
ವಾಣಿಜ್ಯ ತಾಣ? No
ತಾಣದ ಪ್ರಕಾರ Internet encyclopedia
ನೊಂದಾವಣಿ Mostly optional[notes ೧]
ಲಭ್ಯವಿರುವ ಭಾಷೆ 287 editions[೧]
ಬಳಕೆದಾರರು 69,189 active editors (November 2014),೨೯,೮೧೩ total accounts.
ವಿಷಯದ ಪರವಾನಗಿ CC Attribution / Share-Alike 3.0
Most text is also dual-licensed under GFDL; media licensing varies.
ಇದರಲ್ಲಿ ಬರೆಯಲಾಗಿದೆ PHP[೨]
ಒಡೆಯ Wikimedia Foundation
ಸೃಷ್ಟಿಸಿದ್ದು Jimmy Wales, Larry Sanger
ಪ್ರಾರಂಭಿಸಿದ್ದು ಜನವರಿ 15, 2001 (2001-01-15)
ಅಲೆಕ್ಸ ‍‍ಸ್ಥಾನ Steady 7 (January 2015)
ಸಧ್ಯದ ಸ್ಥಿತಿ Active

ಇದು ಪ್ರಸ್ತುತ ವಿಕಿಮೀಡಿಅ ಫೌ಼ಂಡೇಷನ್ (wikimedia foundation) ಎಂಬ ಅಮೆರಿಕದ ಸ್ಯಾನ್^ಫ್ರ್ಯಾ಼ನ್ಸಿಸ್ಕೊ ನಗರದಲ್ಲಿ ತನ್ನ ಕೇಂದ್ರಕಾರ್ಯಲಯವನ್ನು ಹೊಂದಿರುವ ಒಂದು ಲಾಬೋದ್ದೇಶರಹಿತ ಹಾಗೂ ದಾನಶೀಲ ಸಂಘಟನೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ. ಇದರ ಸೇವೆಯು ಉಚಿತವಾಗಿದ್ದು, ಅಂತರ್ಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಸೇವೆಯನ್ನು ಪಡೆಯಬಹುದಾಗಿದೆ. ಪ್ರಸ್ತುತ ಇದು ಏಳನೇ ಅತಿ ಪ್ರಸಿದ್ಧ ಜಾಲತಾಣವಾಗಿದೆ (ಜನವರಿ ೨೦೧೫ ಕ್ಕೆ ಇದ್ದಂತೆ).

ಚಿತ್ರ: ವಿಕಿಮೀಡಿಅ ಫೌ಼ಂಡೇಷನ್^ನ ಲಾಂಛನ
ಚಿತ್ರ: ವಿಕಿಮೀಡಿಅ ಫೌ಼ಂಡೇಷನ್^ನ ಸ್ಯಾನ್^ಫ್ರ್ಯಾನ್ಸಿಸ್ಕೊದ ಕೇಂದ್ರಕಾರ್ಯಲಯದ ನೆಲೆ
ಚಿತ್ರ: ವಿಕಿಮೀಡಿಅ ಫೌ಼ಂಡೇಷನ್^ನ ಸ್ಯಾನ್^ಫ್ರ್ಯಾನ್ಸಿಸ್ಕೊದ ಕೇಂದ್ರಕಾರ್ಯಲಯದಲ್ಲಿನ ಕೆಲಸಗಾರರ ಕ್ಷೇತ್ರ

ವ್ಯುತ್ಪತ್ತಿ[ಬದಲಾಯಿಸಿ]

'ವಿಕಿಪೀಡಿಅ' ಎಂಬ ಪದವು ಒಂದು ಮಿಶ್ರಪದ (Portmanteau word) ಆಗಿದ್ದು, ಹವಾಯಿ ಭಾಷೆಯ 'ವಿಕಿ' (ಅಂದರೆ 'ಶೀಘ್ರ' ಎಂದರ್ಥ) ಹಾಗು ಇಂಗ್ಲಿಷ್‌ನ 'ಎನ್^ಸೈಕ್ಲೊಪೀಡಿಅ' ಎಂಬ ಎರಡು ಪದಗಳು ಸೇರಿ ರಚನೆಯಾಗಿದೆ.

ಚರಿತ್ರೆ[ಬದಲಾಯಿಸಿ]

ವಿಕಿಪೀಡಿಅವು ಮೂಲತಃ ನ್ಯುಪೀಡಿಅ ಎಂಬ ಇನ್ನೊಂದು ವಿಶ್ವಕೋಶದ ಯೋಜನೆಯಿಂದ ಮೂಡಿಬಂದಿತು

ವಿಕಿಪೀಡಿಅವು ಮೂಲತಃ ನ್ಯುಪೀಡಿಅ (Nupedia) ಎಂಬ ಇನ್ನೊಂದು ಇಂಗ್ಲಿಷ್ ವಿಶ್ವಕೋಶೀಯ ಜಾಲತಾಣದ ಯೋಜನೆಯಿಂದ ಮೂಡಿಬಂದಿತು. ಜಿಮ್ಮಿ ವೇಲ್ಸ್ (Jimmy Wales) ಮತ್ತು ಲ್ಯಾರಿ ಸ್ಯಾಂಗರ್ (Larry Sanger) ಎಂಬುವವರು ಇದನ್ನು ಜನವರಿ ೧೫, ೨೦೦೧ ರಂದು ಆರಂಭಿಸಿದರು. ಪ್ರಸ್ತುತ ಇದು ವಿಕಿಮೀಡಿಅ ಫೌ಼ಂಡೇಷನ್ ಎಂಬ ಒಂದು ಲಾಭೋದ್ದೆಶರಹಿತ ಸಂಸ್ಥೆಯ ಮೇಲ್ವಿಚಾರಣೆಗೆ ಒಳಪಟ್ಟಿದೆ.

ಚಿತ್ರ:ಜಿಮ್ಮಿ ವೇಲ್ಸ್
ಚಿತ್ರ:ಲ್ಯಾರಿ ಸ್ಯಾಂಗರ್

ವೈಶಿಷ್ಟ್ಯಗಳು[ಬದಲಾಯಿಸಿ]

 • ವಿಕಿಪೀಡಿಅವು ಒಂದು ಬಹುಭಾಷೀಯ ವಿಶ್ವಕೋಶವಾಗಿದ್ದು, ಇದರಲ್ಲಿನ ಲೇಖನಗಳು ಜಗತ್ತಿನ ೨೦೦ ಕ್ಕಿಂತಲು ಹೆಚ್ಚಿನ ಭಾಷೆಗಳಲ್ಲಿ ಲಭ್ಯವಿದೆ.
 • ಇದು ಇತರ ಇಂಗ್ಲಿಷ್ ಅಂತರ್ಜಾಲ-ಆಧಾರಿತ ವಿಶ್ವಕೋಶಗಳ ಪೈಕಿ ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿದೆ. ಪ್ರಸ್ತುತ ಇದರ ಇಂಗ್ಲಿಷ್ ಆವೃತ್ತಿಯಲ್ಲಿ ೪.೭ ದಶಲಕ್ಷಕ್ಕಿಂತಲೂ ಹೆಚ್ಚಿನ ಲೇಖನಗಳು ಲಭ್ಯವಿದೆ.
 • ಇದರ ಅತಿ ಪ್ರಮುಖ ವೈಶಿಷ್ಟ್ಯವೆಂದರೆ ಇದು ಮುಖ್ತವಾಗಿದ್ದು, ಅಂತರ್ಜಾಲ ಸಂಪರ್ಕವನ್ನು ಹೊಂದಿರುವ ಯಾರು ಬೇಕಾದರೂ ಇದರಲ್ಲಿನ ಲೇಖನಗಳನ್ನು ಪರಿಷ್ಕರಿಸಬಹುದಾಗಿದೆ ಹಾಗೆಯೇ ಹೊಸದಾಗಿ ಲೇಖನಗಳನ್ನು ಸೇರಿಸಲು ಬಹುದಾಗಿದೆ. ಈ ರೀತಿಯ ಬಹಿರಂಗ ವ್ಯವಸ್ಥೆಯ ಕಾರಣದಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಇಲ್ಲಿ ಲಭ್ಯವಾಗಲು ಸಾಧ್ಯವಾಗಿದೆ.
 • ವಿಕಿಪೀಡಿಅದಲ್ಲಿನ ಲೇಖನಗಳು ಒಂದಕ್ಕೊಂದು ಬೆಸುಗೆಗೊಂಡಿದ್ದು ಅವು ಪಾರಸ್ಪರಿಕ ಆಕರಗಳನ್ನು ಹೊಂದಿರುತ್ತವೆ. ಗಣಕಯಂತ್ರದ ಮೂಷಿಕವನ್ನು ಯಾವುದಾದರೂ ಬೆಸುಗೆಯ (Link) ಮೇಲೆ ಇರಿಸಿದಾಗ ಆ ಬೆಸುಗೆಯು ಯಾವ ಲೇಖನದ ಬಗ್ಗೆ ಮಾಹಿತಿಗಳನ್ನು ನೀಡಬಲ್ಲದೆಂದು ಸೂಚಿಸುತ್ತದೆ. ಪ್ರತಿಯೊಂದು ಲೇಖನದ ಅಂತ್ಯದಲ್ಲಿಯೂ ಹಲವಾರು ಪ್ರತ್ಯೇಕ ಬೆಸುಗೆಗಳಿದ್ದು, ಅವು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳು, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿ ಯನ್ನು ನೀಡಬಲ್ಲವು. ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲೂ ಸಹ ಇಲ್ಲಿ ಅವಕಾಶವಿದೆ.
 • ಇದರಲ್ಲಿ ಪರಿಷ್ಕರಿಸಿದ ಲೇಖನಗಳು ಓದುಗರಿಗೆ ತಕ್ಷಣವೇ ಕಾಣ ಸಿಗುತ್ತವೆ. ಅಲ್ಲದೆ ಒಂದು ವಿಷಯವನ್ನು ಪ್ರತಿ ಬಾರಿ ಪರಿಷ್ಕರಿಸಿದಾಗಲೂ ಆ ವಿಷಯ ಪುಟದ ಬದಲಾವಣೆಗಳು 'ಇತಿಹಾಸ' ಪುಟದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಯಾವುದೇ ಹಿಂದಿನ ಮತ್ತು ಅದರ ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು ಹಾಗು ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು. 'ಚರ್ಚೆ' ಪುಟಗಳು ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕರಿಸುತ್ತವೆ.

ವಿಶ್ವಾಸಾರ್ಹತೆ[ಬದಲಾಯಿಸಿ]

 • ವಿಕಿಪೀಡಿಅದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳನ್ನು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು. ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ. ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯ ವಾಗುತ್ತದೆ.
 • ಇಲ್ಲಿನ ಎಲ್ಲ ಮಾಹಿತಿಗಳೂ ಪ್ರಾರಂಭದಲ್ಲಿಯೇ ಮಾಹಿತಿಕೋಶಿಯ ದರ್ಜೆಯವೆಂದು ಬಳಕೆದಾರರು ಭಾವಿಸಬಾರದು. ಇಲ್ಲಿ ದೊರೆಯುವ ಹಲವಾರು ಮಾಹಿತಿಗಳು ಸತ್ಯದೂರ ಅಥವಾ ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ. ವಾಸ್ತವವಾಗಿ ಅನೇಕ ಮಾಹಿತಿಗಳು ಕೇವಲ ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು.
 • ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು. ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗ್ಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯಾ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೂಳಿಸಿದೆ.
 • ವಿಕಿಪೀಡಿಅದಲ್ಲಿನ ಲೇಖನಗಳು ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ. ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶಿಯ ದರ್ಜೆಯ ಮಾಹಿತಿಗಳನ್ನು ಹೊಂದಿರುತ್ತವಲ್ಲದೆ ಅವು ವ್ಯಾಪಕ ಹಾಗೂ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.
 • ವಿಕಿಪೀಡಿಅದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ. ಏಕೆಂದರೆ ಇಲ್ಲಿನ ಹಲವಾರು ಲೇಖನಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು. ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾಪುಟಗಳನ್ನು ವ್ಯವಸ್ಥೆಗೂಳಿಸಲಾಗಿದೆ.
 • ವಿಕಿಪೀಡಿಅದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆಯಾಗುವ ಹಾಗೂ ಸೇರ್ಪಡೆಯಾಗಿರುವ ಸಾಧ್ಯತೆಗಳೂ ಉಂಟು. ಹಾಗಾಗಿ ಅಂತಹ ಮಾಹಿತಿಗಳನ್ನು ತಗೆದುಕೊಳ್ಳುವಾಗ ಹೆಚ್ಚರಿಕೆ ವಹಿಸಬೇಕಾಗುತ್ತದೆ.
 • ಆಗಾಗ್ಗೆ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯಾ ಸಮೃದ್ಧವಾದ ವಿಧಾನಗಳನ್ನು ಹೂಂದಿದೆ. ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತ ಮಟ್ಟದ್ದಾಗಿದೆ.

ಕಾರ್ಯನಿರ್ವಹಣೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. Kiss, Jemima; Gibbs, Samuel (August 6, 2014). "Wikipedia boss Lila Tretikov: 'Glasnost taught me much about freedom of information". The Guardian. Retrieved August 21, 2014. 
 2. Roger Chapman. "Top 40 Website Programming Languages". roadchap.com. Retrieved September 6, 2011. 


Cite error: <ref> tags exist for a group named "notes", but no corresponding <references group="notes"/> tag was found, or a closing </ref> is missing