ವಿಷಯಕ್ಕೆ ಹೋಗು

ಸಿಗಡಿ ಕೃಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಈ ಲೇಖನವು ಸಮುದ್ರ (ಉಪ್ಪುನೀರು) ಸೀಗಡಿ ಕೃಷಿ ಕುರಿತು ಇರುವುದು. ಸಿಹಿ ನೀರು ಜಾತಿಯ ಕೃಷಿಗಾಗಿ ಸಿಹಿ ನೀರು ಸೀಗಡಿ ಕೃಷಿಯನ್ನು ನೋಡಿ.
ದಕ್ಷಿಣ ಕೋರಿಯಾದ ಸಾಕಣೆ ಕೇಂದ್ರದ ಸೀಗಡಿ ಬೆಳವಣಿಗೆಯ ಹೊಂಡ

ಸಿಗಡಿ ಕೃಷಿ ಯು ಜಲಚರಗಳನ್ನು ಸಾಕುವ ಉದ್ಯಮವಾಗಿದ್ದು ಇದರಲ್ಲಿ ಸಮುದ್ರದ ಸಿಗಡಿಯನ್ನು ಅಥವಾ ಸಿಹಿನೀರಿನ ಸಿಗಡಿಗಳನ್ನು[೧] ಮನುಷ್ಯನ ಆಹಾರಕ್ಕಾಗಿ ಸಾಕುತ್ತಾರೆ. ೧೯೭೧ರ ದಶಕದಲ್ಲಿ ವಾಣಿಜ್ಯಕ ಸಿಗಡಿ ಸಾಕಣೆ ಆರಂಭವಾಯಿತು ಮತ್ತು ತೀವ್ರವಾಗಿ ಅದರ ಉತ್ಪಾದನೆ ಹೆಚ್ಚಿತು. ನಿರ್ದಿಷ್ಟವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ, ಜಪಾನ್ ಮತ್ತು ಪಶ್ಚಿಮ ಯುರೋಪ್ಗಳಿಗೆ ಸೇವೆಯನ್ನು ಒದಗಿಸುವುದು ಇದರ ಉದ್ದೇಶ. ಕೃಷಿ ಮಾಡಿದ ಸಿಗಡಿಯ ಜಾಗತಿಕ ಉತ್ಪಾದನೆ ೨೦೦೩ರಲ್ಲಿ ೧.೬ ದಶಲಕ್ಷ ಟನ್ ಗಳಿಗೂ ಹೆಚ್ಚಿಗೆ ಆಗಿತ್ತು. ಇದರ ಮೌಲ್ಯ ಸುಮಾರು 9 ಶತಕೋಟಿ ಅಮೆರಿಕದ ಡಾಲರ್‌ಗಳು. ಕೃಷಿ ಮಾಡಿದ ಸಿಗಡಿಗಳ ಪೈಕಿ ೭೫% ರಷ್ಟು ಭಾಗವು ಏಷ್ಯಾದಲ್ಲಿ, ಅದರಲ್ಲೂ ನಿರ್ದಿಷ್ಟವಾಗಿ ಚೀನಾ ಹಾಗೂ ಥೈಲೆಂಡ್‌‌‌ನಲ್ಲಿ ಉತ್ಪಾದನೆಯಾಗುತ್ತದೆ. ಉಳಿದ ಶೇ.೨೫ ಭಾಗವು ಲ್ಯಾಟಿನ್ ಅಮೆರಿಕದಿಂದ ಬರುವುದು. ಇದರಲ್ಲಿ ಬ್ರಾಝಿಲ್ ಅತಿ ಹೆಚ್ಚು ಉತ್ಪಾದಕ ದೇಶವಾಗಿದೆ. ಥೈಲ್ಯಾಂಡ್ ಅತಿ ದೊಡ್ಡ ರಫ್ತು ಮಾಡುವ ದೇಶವಾಗಿದೆ.

ಆಗ್ನೇಯ ಏಷಿಯಾದಲ್ಲಿ ಸಿಗಡಿ ಕೃಷಿಯು ಸಾಂಪ್ರದಾಯಿಕ ಸಣ್ಣ ಪ್ರಮಾಣದ ಉದ್ದಿಮೆಯಾಗಿ ಆರಂಭವಾಗಿ ಜಾಗತಿಕ ಉದ್ದಿಮೆಯೆನ್ನುವ ಮಟ್ಟಕ್ಕೆ ಬೆಳೆದಿದೆ. ತಾಂತ್ರಿಕ ಮುನ್ನಡೆಗಳು ಸಿಗಡಿ ಬೆಳೆಯುವುದನ್ನು ಹೊಸ ಎತ್ತರಕ್ಕೆ ಮುಟ್ಟಿಸಿವೆ. ಮರಿಗಳ ಸಂಗ್ರಹಗಳನ್ನು ಜಗತ್ತಿನ ಎಲ್ಲೆಡೆ ಸಮುದ್ರಮಾರ್ಗದಲ್ಲಿ ಕಳುಹಿಸುತ್ತಾರೆ. ವಸ್ತುತಃ ಕೃಷಿ ಮಾಡಿದ ಎಲ್ಲ ಸಿಗಡಿಗಳು ಪೆನೇಯೀಡ್‌‌‌‌‌‌ಗಳಾಗಿವೆ (ಅಂದರೆ, ಪೆನೇಯೀಡೇ ವಂಶಕ್ಕೆ ಸೇರಿದ ಸೀಗಡಿಗಳಾಗಿವೆ) ಮತ್ತು ಸಿಗಡಿಯ ಕೇವಲ ಎರಡು ಜಾತಿಗಳು— ಅಂದರೆ ಪೆನೇಯಸ್‌ ವನ್ನಾಮೀ (ಪೆಸಿಫಿಕ್‌ ಬಿಳಿ ಸಿಗಡಿ) ಹಾಗೂ ಪೆನೇಯಸ್‌ ಮೊನೊಡಾನ್‌ (ದೈತ್ಯ ಹುಲಿ ಸಿಗಡಿ)- ಸಾಕಲ್ಪಟ್ಟ ಉಳಿದೆಲ್ಲಾ ಸಿಗಡಿಗಳ ಪೈಕಿ ಸ್ಥೂಲವಾಗಿ ಇದು ೮೦%ನಷ್ಟು ಭಾಗವನ್ನು ಆಕ್ರಮಿಸಿಕೊಳ್ಳುತ್ತವೆ. ಈ ಔದ್ಯಮಿಕ ಏಕ ಫಸಲಿನವು ರೋಗಗಳಿಗೆ ತುತ್ತಾಗುವುದು ಬೇಗ. ಇದು ಸಾಕಿದ ಸಿಗಡಿಯ ಪ್ರಮಾಣದಲ್ಲಿ ಅನೇಕ ಪ್ರಾದೇಶಿಕ ಸಮೂಹ ನಾಶಕ್ಕೆ ಕಾರಣವಾಗಿದೆ. ಹೆಚ್ಚುತ್ತಲೇ ಇರುವ ಪಾರಿಸರಿಕ ಸಮಸ್ಯೆಗಳು,ಮೇಲಿಂದಮೇಲೆ ಬಂದ ರೋಗಗಳು ಮತ್ತು ಒತ್ತಡವಷ್ಟೇ ಅಲ್ಲದೇ NGOಗಳು ಮತ್ತು ಬಳಕೆದಾರ ದೇಶಗಳಿಂದ ಬರುವ ಟೀಕೆಯು ೧೯೯೦ರ ದಶಕದ ಅಂತ್ಯದ ವೇಳೆಗೆ ಉದ್ಯಮದಲ್ಲಿನ ಬದಲಾವಣೆಗಳಿಗೆ ಮತ್ತು ಸರ್ಕಾರವು ಕಠಿಣವಾದ ನಿಯಮಗಳನ್ನು ರೂಪಿಸುವುದಕ್ಕೆ ಕಾರಣವಾದವು. ೧೯೯೯ರಲ್ಲಿ ಹೆಚ್ಚುಕಾಲ ತಾಳಿಕೆ ಬರುವ ಸಾಕಾಣಿಕೆ ಪದ್ಧತಿಯನ್ನು ಪ್ರಾರಂಭಿಸುವುದನ್ನು ಅಭಿವೃದ್ಧಿಪಡಿಸಲು ಮತ್ತು ಪ್ರೋತ್ಸಾಹಿಸಲು ಸರ್ಕಾರದ ಸಂಸ್ಥೆಗಳು, ಉದ್ಯಮಗಳ ಪ್ರತಿನಿಧಿಗಳು ಮತ್ತು ಪರಿಸರ ಸಂಘಟನೆಗಳು ಕ್ರಮಗಳನ್ನು ಆರಂಭಿಸಿದವು.

ಇತಿಹಾಸ ಮತ್ತು ಭೂಗೋಳ[ಬದಲಾಯಿಸಿ]

ಕಡಿಮೆ ಸಾಂದ್ರತೆಯ ಸಾಂಪ್ರದಾಯಿಕ ಪದ್ಧತಿಯನ್ನು ಬಳಸುವ ಮೂಲಕ ಇಂಡೋನೇಶಿಯಾದವರು ಮತ್ತು ಇತರರು ಶತಮಾನಗಳಿಂದ ಸಿಗಡಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ. ತಂಬಾಕ್ಸ್ ಎಂದು ಕರೆಯಲಾಗುವ ಇಂಡೋನೇಶಿಯಾದ ಉಪ್ಪುನೀರಿನ ಹೊಂಡಗಳನ್ನು ೧೫ನೆ ಶತಮಾನದಷ್ಟು ಹಿಂದೆಯೇ ಗುರುತಿಸಬಹುದು. ಅವರು ಸಣ್ಣ ಪ್ರಮಾಣದ ಹೊಂಡಗಳನ್ನು ಏಕಫಸಲಿಗೆ ಅಥವಾ ಬಹು ಫಸಲಿಗೆ ಮಿಲ್ಕ್ ಫಿಶ್ ಜೊತೆಯಲ್ಲಿ ಬಳಸುತ್ತಿದ್ದರು. ಅಥವಾ ಬತ್ತದ ಜೊತೆ ಆವರ್ತದಲ್ಲಿ ಒಣ ಶ್ರಾಯದಲ್ಲಿ ಸಿಗಡಿ ಕೃಷಿಗೆ ಬತ್ತದ ಗಿಡಗಳನ್ನು ಬಳಸಿಕೊಳ್ಳುತ್ತಿದ್ದರು. ರೊನ್ಬಾಕ್, 2001.</ref> ಇಂಥ ಕೃಷಿಯು ಕರಾವಳಿ ಪ್ರದೇಶದಲ್ಲಿ ಅಥವಾ ನದಿ ದಂಡೆಯಲ್ಲಿ ಹೆಚ್ಚಾಗಿ ಕಾಣಬರುತ್ತಿದ್ದವು. ಮ್ಯಾಂಗ್ರೋವ್ ಪ್ರದೇಶವು ಹೇಳಿಮಾಡಿಸಿದಂತಿತ್ತು. ಮತ್ತು ದೊಡ್ಡ ಪ್ರಮಾಣದಲ್ಲಿ ಲಭ್ಯ ವಿರುವ ಕಾರಣಕ್ಕಾಗಿ ನೈಸರ್ಗಿಕ ಸಿಗಡಿಗೆ ಅನುಕೂಲವಾಗಿತ್ತು.[೧] ನೈಸರ್ಗಿಕವಾಗಿ ಲಭ್ಯವಿದ್ದ ಎಳೆಯ ಸಿಗಡಿಯನ್ನು ಹೊಂಡಗಳಲ್ಲಿ ಹಿಡಿಯುತ್ತಾರೆ ಮತ್ತು ನೈಸರ್ಗಿಕವಾಗಿ ಸಾವಯವರೂಪದಲ್ಲಿ ಸಿದ್ಧಗೊಂಡ ನೀರಿನಲ್ಲಿ ಅವು ನಾವು ಕೃಷಿಗೆ ಉದ್ದೇಶಪಟ್ಟ ಪ್ರಮಾಣದಲ್ಲಿ ಬೆಳೆಯುವವರೆಗೆ ಬಿಡುತ್ತಾರೆ.

ಔದ್ಯಮಿಕ ಸಿಗಡಿ ಕೃಷಿಯು ೧೯೩೦ರ ಸುಮಾರಿಗೆ ಕಂಡು ಬಂದಿದೆ. ಆಗ ಜಪಾನ ದೇಶದ ಕೃಷಿಕರು ಕುರುಮ ಸಿಗಡಿ, ಪೆನಾಯಸ್ ಜಪೋನಿಕಾಸ್ ಗಳನ್ನು ಮೊದಲಬಾರಿಗೆ ಬೆಳೆದರು. 1960ರ ವೇಳೆಗೆ ಜಪಾನದಲ್ಲಿ ಒಂದು ಚಿಕ್ಕ ಉದ್ದಿಮೆ ಬೆಳೆಯಿತು.[೨] ವಾಣಿಜ್ಯಕ ಸಿಗಡಿ ಕೃಷಿ ೧೯೬೦ರ ದಶಕದ ಕೊನೆಯಲ್ಲಿ ಮತ್ತು ೧೯೭೦ರ ದಶಕದ ಆರಂಭದಲ್ಲಿ ತ್ವರಿತವಾಗಿ ಬೆಳವಣಿಗೆ ಕಂಡಿತು. ತಂತ್ರಜ್ಞಾನದಲ್ಲಿ ಆದ ಬೆಳವಣಿಗೆಯು ಅಧಿಕೋತ್ಪತ್ತಿಯ ಸ್ವರೂಪದ ಕೃಷಿಗೆ ದಾರಿ ಮಾಡಿತು. ಮಾರುಕಟ್ಟೆಯಲ್ಲಿಯ ಬೇಡಿಕೆಯು ಜಗತ್ತಿನಾದ್ಯಂತ ಸಿಗಡಿ ಕೃಷಿ ಪ್ರಸಾರಗೊಳ್ಳುವುದಕ್ಕೆ ಕಾರಣವಾಯಿತು. ಇದು ಉಷ್ಣವಲಯ ಮತ್ತು ಸಮಶೀತೋಷ್ಣ ವಲಯದಲ್ಲಿ ಕೇಂದ್ರೀಕೃತವಾಯಿತು. ೧೯೮೦ರ ದಶಕದ ಆರಂಭದಲ್ಲಿ ವನ್ಯಜೀವಿಗಳನ್ನು ಹಿಡಿಯುವುದಕ್ಕೆ ತಡೆಯಾದಾಗ ಸಿಗಡಿಗೆ ಗ್ರಾಹಕರ ಬೇಡಿಕೆಯು ಹೆಚ್ಚಿದ್ದರಿಂದ ಉದ್ಯಮದಲ್ಲಿ ಏಳಿಗೆ ಉಂಟಾಯಿತು. ತೈವಾನ್ ಇದನ್ನು ಮೊದಲು ಸ್ವೀಕರಿಸಿದ್ದು ಮತ್ತು ೧೯೮೦ರ ದಶಕದಲ್ಲಿ ಅದು ಉತ್ಪಾದಕ ದೇಶವಾಗಿತ್ತು; ಇದರ ಉತ್ಪಾದನೆ ೧೯೮೮ರಲ್ಲಿ ಕುಸಿಯಿತು. ಇದಕ್ಕೆ ಕಾರಣ ಕಳಪೆ ನಿರ್ವಹಣೆ ಪದ್ಧತಿಗಳು ಮತ್ತು ರೋಗಗಳು.[೩] ಥೈಲ್ಯಾಂಡಿನಲ್ಲಿ, ದೊಡ್ಡ ಪ್ರಮಾಣದ ಉತ್ಪಾದನೆಯನ್ನು 1985ರಿಂದ ತ್ವರಿತವಾಗಿ ವಿಸ್ತರಿಸಲಾಯಿತು.[೪] ದಕ್ಷಿಣ ಅಮೆರಿಕದಲ್ಲಿ, ಈಕ್ವೆಡೋರ್ ಸಿಗಡಿ ಕೃಷಿಯಲ್ಲಿ ಮುಂಚೂಣಿಯಲ್ಲಿದೆ. ಇದು 1978ರಿಂದ ನಾಟಕೀಯವೆನ್ನುವಂತೆ ವಿಸ್ತರಣೆಯಾಯಿತು.[೫] ಬ್ರೆಝಿಲ್ 1974ರಿಂದ ಸಿಗಡಿ ಕೃಷಿಯಲ್ಲಿ ಸಕ್ರಿಯವಾಗಿದೆ. ಆದರೆ ಅಲ್ಲಿ ವ್ಯಾಪಾರವು ಉಚ್ಛ್ರಾಯಕ್ಕೆ ಬಂದದ್ದು 1990ರ ದಶಕದಲ್ಲಿಯೇ. ಕೆಲವೇ ವರ್ಷಗಳಲ್ಲಿಯೇ ಅದು ಪ್ರಮುಖ ಸಿಗಡಿ ಉತ್ಪಾದಕ ರಾಷ್ಟ್ರವಾಯಿತು.[೬] ಇಂದು ಐವತ್ತಕ್ಕೂ ಹೆಚ್ಚು ದೇಶಗಳಲ್ಲಿ ಸಮುದ್ರ ಸಿಗಡಿ ಕೃಷಿಯು ಇದೆ.

ಕೃಷಿ ಮಾಡುವ ಪದ್ಧತಿಗಳು[ಬದಲಾಯಿಸಿ]

ಸಿಗಡಿ ಕೃಷಿಯು ಹೆಚ್ಚುತ್ತಿರುವ ಬೇಡಿಕೆಯನ್ನು ತಣಿಸುವ ಪ್ರಮಾಣಕ್ಕೆ ಬೆಳೆದು ನಿಂತಾಗ ನೈಸರ್ಗಿಕವಾಗಿ ದೊರೆಯುವ ಮೀನುಗಳ ಸಾಮರ್ಥ್ಯವನ್ನು ದಾಟಿ ಅದು ಮುನ್ನಡೆಯಿತು. ಜಾಗತಿಕ ಮಾರುಕಟ್ಟೆಗೆ ಸೇವೆಯನ್ನು ಒದಗಿಸಲು ಹಳೆಯದಾದ ಜೀವಮಾತ್ರ ಹಿಡಿದುಕೊಂಡಿದ್ದ ಸಾಕಾಣಿಕೆ ಪದ್ಧತಿಯು ಬದಲಾಗಿ ಆಧುನಿಕವಾದ ಹೆಚ್ಚು ಉತ್ಪಾದಕತೆಯ ಪದ್ಧತಿಯು ಅಗತ್ಯವಾಯಿತು. ಔದ್ಯಮಿಕ ಸಾಕಾಣಿಕೆಯು ಮೊದಲು ಸಾಂಪ್ರದಾಯಿಕ ಪದ್ಧತಿಗಳನ್ನೇ ಅನುಸರಿಸಿತು. ಅದನ್ನೇ "ಅತ್ಯಧಿಕ" ಸಾಕಣೆ ಕೇಂದ್ರಗಳು ಎನ್ನುವುದು. ಇದರಲ್ಲಿ ದೊಡ್ಡ ಪ್ರಮಾಣದ ಹೊಂಡಗಳಲ್ಲಿ ಕಡಿಮೆ ಸಾಂದ್ರತೆಯ ಸಾಕಾಣಿಕೆ; ಕೆಲವೇ ಹೆಕ್ಟೇರುಗಳ ಹೊಂಡಗಳ ಬದಲಿಗೆ ಹೊಂಡಗಳ ಪ್ರಮಾಣ ದೊಡ್ಡದಾಯಿತು. ಕೆಲವು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮ್ಯಾಂಗ್ರೋವ್ ಗಳನ್ನು ತೆಗೆದುಹಾಕಲಾಯಿತು.

ತಂತ್ರಜ್ಞಾನ ಮುಂದುವರಿಕೆಯು ಹೆಚ್ಚು ತೀವ್ರವಾದ ಪದ್ಧತಿಗಳನ್ನು ಸಾಧ್ಯವಾಗಿಸಿ ಪ್ರತಿ ಕ್ಷೇತ್ರದ ಇಳುವರಿ ಪ್ರಮಾಣವನ್ನು ಹೆಚ್ಚಿಸಿದವು, ಇದರಿಂದ ಹೆಚ್ಚು ಭೂಮಿಯನ್ನು ಪರಿವರ್ತಿಸಬೇಕಾದ ಒತ್ತಡವನ್ನು ಕಡಿಮೆ ಮಾಡುವುದಕ್ಕೆ ಸಹಕಾರಿಯಾಯಿತು. ಅರೆ-ತೀವ್ರತೆಯ ಮತ್ತು ತೀವ್ರತೆಯ ಸಾಕಣೆ ಕೇಂದ್ರಗಳು ತಲೆಎತ್ತಿದವು. ಅಲ್ಲಿ ಸಿಗಡಿಯನ್ನು ಕೃತಕ ಆಹಾರವನ್ನು ನೀಡಿ ಬೆಳೆಸಲಾಯಿತು ಮತ್ತು ಹೊಂಡಗಳನ್ನು ಕ್ರಿಯಾಶೀಲವಾಗಿ ನಿರ್ವಹಿಸಲಾಯಿತು. ಹೀಗಿದ್ದರೂ ಅನೇಕ ದೊಡ್ಡ ಪ್ರಮಾಣದ ಸಾಕಣೆ ಕೇಂದ್ರಗಳು ಉಳಿದುಬಿಟ್ಟವು, ಹೊಸ ಸಾಕಣೆ ಕೇಂದ್ರಗಳು ಅರೆ ತೀವ್ರತೆಯ ಮಾದರಿಯಲ್ಲಿ ಇದ್ದವು.

೧೯೮೦ರ ದಶಕದ ಮಧ್ಯದ ವೇಳೆಗೆ ಬಹುತೇಕ ಸಾಕಣೆ ಕೇಂದ್ರಗಳು 'ಪೋಸ್ಟ್್ಲಾರ್ವೆ' ಎಂದು ಕರೆಯಲಾಗುವ ಯುವ ನಿಸರ್ಗಸಹಜವಾದ ಸೀಗಡಿಗಳಿಂದ ತುಂಬಿಕೊಂಡಿತು. ಇದು ಸ್ಥಳೀಯವಾಗಿಯೇ ಹಿಡಿದವುಗಳ ಮಾದರಿಯಲ್ಲಿದ್ದವು. ಪೋಸ್ಟ್ ನಾರ್ವೆ ಮೀನುಗಾರಿಕೆಯು ಅನೇಕ ದೇಶಗಳಲ್ಲಿ ಒಂದು ಮಹತ್ವದ ಆರ್ಥಿಕ ವಿಭಾಗವಾಗಿಬಿಟ್ಟಿದೆ. ಮೀನುಗಾರಿಕೆಯ ನೆಲೆಗಳು ಬರಿದಾಗುವುದನ್ನು ತಡೆಯುವ ಕ್ರಮವಾಗಿ ಮತ್ತು ಬಲಿಷ್ಠವಾದ ಸಿಗಡಿಗಳ ಪೂರೈಕೆ ನಿರಂತವಾಗಿರುವುದನ್ನು ಖಚಿತಪಡಿಸುವುದಕ್ಕಾಗಿ ಉದ್ಯಮವು ಸಿಗಡಿಯ ಮರಿಗಳ ತಯಾರಿಕೆಯನ್ನು ಮೊಟ್ಟೆಕೇಂದ್ರಗಳಲ್ಲಿ ಮಾಡಿದವು.

ಜೀವನ ಚಕ್ರ[ಬದಲಾಯಿಸಿ]

ಸಿಗಡಿಯ ಲಾರ್ವಾ.

ಸಿಗಡಿಗಳು ಬೆಳೆಯುವುದು ಮತ್ತು ಮರಿಯಾಗುವುದು ಸಮುದ್ರದ ಸಹಜ ವಾಸಸ್ಥಳದಲ್ಲಿ ಮಾತ್ರ. ಹೆಣ್ಣು ಸೀಗಡಿಗಳು ೫೦,೦೦೦ ದಿಂದ ಹತ್ತು ಲಕ್ಷ ಮೊಟ್ಟೆಗಳನ್ನು ಇಡುತ್ತವೆ. ಇವು ೨೪ ಗಂಟೆಗಳಲ್ಲಿಯೇ ಚಿಕಣಿಯಾಕಾರದ ನುಪ್ಲೀಗಳಾಗುತ್ತವೆ. ಈ ನುಪ್ಲೀಗಳು ತಮ್ಮ ಶರೀರದೊಳಗಿರುವ ಮೊಟ್ಟೆಯೊಳಗಿನ ಹಳದಿ ಲೋಳೆ ಸಂಗ್ರಹವನ್ನು ಆಹಾರವನ್ನಾಗಿ ಪಡೆಯುತ್ತವೆ. ಮತ್ತು ನಂತರ ಅವು ಝೋಯೆಗಳಾಗಿ ರೂಪಾಂತರಗೊಳ್ಳುತ್ತವೆ. ಸಿಗಡಿಯು ತನ್ನ ಈ ಎರಡನೆ ಲಾರ್ವಾ ಹಂತದಲ್ಲಿ ಅಳಗೆಯಲ್ಲಿ ನಿಸರ್ಗಸಹಜವಾಗಿಯೇ ಆಹಾರವನ್ನು ಪಡೆಯುತ್ತದೆ ಮತ್ತು ಕೆಲವು ದಿನಗಳ ಬಳಿಕ ಮೀಸೆಸ್್ಗಳಾಗಿ ರೂಪಾಂತರವನ್ನು ಹೊಂದುತ್ತವೆ. ಈ ಮೀಸೆಸ್್ಗಳು ಚಿಕಣಿ ಸಿಗಡಿಗಳ ರೀತಿಯೇ ಇರುತ್ತವೆ.

ಅಳಗೆಯಲ್ಲಿ ಮತ್ತು ಝೂಪ್ಲಾಂಕ್ಟಾನ್ನಲ್ಲಿ ಅದು ಪೋಷಣೆಯನ್ನು ಪಡೆಯುತ್ತದೆ. ಇನ್ನೊಂದು ಮೂರು ನಾಲ್ಕು ದಿನಗಳಲ್ಲಿ ಅವು ಲಾರ್ವಾ ನಂತರದ ಸ್ಥಿತಿಗೆ ರೂಪಾಂತರವನ್ನು ಪಡೆಯುತ್ತವೆ: ಮರಿ ಸಿಗಡಿಯು ದೊಡ್ಡದ್ದರ ಎಲ್ಲ ಲಕ್ಷಣಗಳನ್ನು ಹೊಂದಿರುತ್ತದೆ. ಮೊಟ್ಟೆಯು ಮರಿಯಾಗುವ ಒಟ್ಟೂ ಪ್ರಕ್ರಿಯೆಯು ಸುಮಾರು ೧೨ ದಿನಗಳನ್ನು ತೆಗೆದುಕೊಳ್ಳುತ್ತದೆ. ನೈಸರ್ಗಿಕವಾಗಿ, ಲಾರ್ವಾ ನಂತರದ ಸ್ಥಿತಿಯಲ್ಲಿ ನದೀಮುಖ ಪ್ರದೇಶಕ್ಕೆ ವಲಸೆ ಹೋಗುತ್ತವೆ. ಇವು ಪೋಷಕಾಂಶದಲ್ಲಿ ಸಮೃದ್ಧವಾಗಿರುತ್ತವೆ ಮತ್ತು ಲವಣಾಂಶ ಇಲ್ಲಿ ಕಡಿಮೆ ಇರುತ್ತದೆ. ಬೆಳವಣಿಗೆಯ ಬಳಿಕ ಅವು ಮುಕ್ತ ನೀರಿಗೆ ವಲಸೆ ಹೋಗುತ್ತವೆ. ಪ್ರಾಯದ ಸಿಗಡಿಗಳು ಜಲತಳ ಜೀವಿ ಪ್ರಾಣಿಗಳು, ಮುಖ್ಯವಾಗಿ ಇವು ಸಾಗರದ ತಳದಲ್ಲಿ ಇರುತ್ತವೆ.[೭]

ಸರಬರಾಜಿನ ಸರಪಳಿ[ಬದಲಾಯಿಸಿ]

ಸಿಗಡಿ ಸಾಕಾಣಿಕೆಯಲ್ಲಿ, ಈ ಜೀವನಚಕ್ರವು ನಿಯಂತ್ರಿತ ಷರತ್ತುಗಳ ಅಡಿಯಲ್ಲಿ ನಡೆಯುವವು. ಇದಕ್ಕೆ ನೀಡುವ ಕಾರಣಗಳು ಹೀಗಿವೆ, ಇದರಿಂದ ಹೆಚ್ಚು ವಿಸ್ತೃತವಾದ ಸಾಕಾಣಿಕೆ ನಡೆಯುತ್ತದೆ. ಗಾತ್ರದ ನಿಯಂತ್ರಣವು ಸುಧಾರಣೆಗೊಂಡು ಹೆಚ್ಚುಕಡಿಮೆ ಏಕರೂಪದ ಸಿಗಡಿಯು ದೊರೆ ಯುವಂತಾಗುತ್ತದೆ. ಮತ್ತು ಪರಭಕ್ಷಗಳ ನಿಯಂತ್ರಣವೂ ಚೆನ್ನಾಗಿ ನಡೆಯುತ್ತದೆ. ಮತ್ತು ಬೆಳವಣಿಗೆ ತ್ವರಿತ ಗತಿಯಲ್ಲಿ ಆಗುವಂತಾಗುವುದು. ಬೆಳವಣಿಗೆಗೆ ಅನುಕೂಲವಾಗುವಂತೆ ವಾತಾವರಣವನ್ನು ನಿಯಂತ್ರಿಸಬಹುದು. (ವಿಶೇಷವಾಗಿ ಸಾಕಣೆಕೇಂದ್ರಗಳಲ್ಲಿ ತಾಪಮಾನ ವಲಯಗಳಲ್ಲಿ ಹಸಿರುಮನೆಗಳನ್ನು ಬಳಸಿ ಮಾಡುವರು). ಅಲ್ಲಿ ಮೂರು ವಿಭಿನ್ನ ಹಂತಗಳಿವೆ:

 • ಮೊಟ್ಟೆ ಕೇಂದ್ರಗಳು ಸಿಗಡಿ ಮರಿಗಳನ್ನು ಮಾಡುವವು ಮತ್ತು ನುಪ್ಲೀಯನ್ನು ಉತ್ಪಾದಿಸುವವು ಅಥವಾ ಲಾರ್ವೋತ್ತರ ಮರಿಗಳನ್ನೂ ತಯಾರಿಸುವವು. ಇವನ್ನು ಅವರು ಸಾಕಣೆ ಕೇಂದ್ರಗಳಿಗೆ ಮಾರುತ್ತಾರೆ. ದೊಡ್ಡಪ್ರಮಾಣದ ಸಿಗಡಿ ಸಾಕಣೆ ಕೇಂದ್ರಗಳು ತಮ್ಮದೇ ಮೊಟ್ಟೆ ಕೇಂದ್ರಗಳನ್ನೂ ನಿರ್ವಹಿಸುತ್ತವೆ ಮತ್ತು ನಿಪ್ಲೀ ಮತ್ತು ಲಾರ್ವೋತ್ತರ ಸ್ಥಿತಿಯ ಮರಿಗಳನ್ನು ಆ ಪ್ರದೇಶದ ಸಣ್ಣ ಸಾಕಣೆ ಕೇಂದ್ರಗಳಿಗೆ ಮಾರುತ್ತವೆ.
 • ನರ್ಸರಿಗಳು ಲಾರ್ವೋತ್ತರ ಮರಿಗಳನ್ನು ಬೆಳೆಯುತ್ತವೆ ಮತ್ತು ಅವುಗಳನ್ನು ಬೆಳೆಯುವ ಹೊಂಡಗಳಲ್ಲಿ ಸಮುದ್ರದ ಸ್ಥಿತಿಗೆ ಒಗ್ಗುವಂತೆ ಮಾಡುತ್ತವೆ.
 • ಬೆಳವಣಿಗೆ ಮಾಡುವ ಹೊಂಡಗಳಲ್ಲಿ ಸಿಗಡಿಯು ಜುವೆನಿಲ್್ಗಳ ರೂಪದಿಂದ ಮಾರುಕಟ್ಟೆಗೆ ಒಯ್ಯಲು ಸೂಕ್ತವಾಗುವ ಗಾತ್ರದ ವರೆಗೆ ಬೆಳೆಯುತ್ತವೆ. ಇದಕ್ಕೆ ಮೂರರಿಂದ ಆರು ತಿಂಗಳ ಅವಧಿ ಬೇಕಾಗುತ್ತದೆ.

ಬಹುತೇಕ ಸಾಕಣೆ ಕೇಂದ್ರಗಳು ವರ್ಷಕ್ಕೆ ಒಂದರಿಂದ ಎರಡು ಬೆಳೆಯನ್ನು ಉತ್ಪಾದಿಸುತ್ತವೆ. ಉಷ್ಣವಲಯದಲ್ಲಿ ಇದು ಮೂರು ಬೆಳೆಯೂ ಆಗಬಹುದು. ಉಪ್ಪುನೀರಿನ ಅಗತ್ಯವಿರುವ ಕಾರಣ, ಸಿಗಡಿ ಸಾಕಾಣಿಕೆ ಕೇಂದ್ರಗಳನ್ನು ಸಮುದ್ರ ತೀರದಲ್ಲಿ ಅಥವಾ ಅದರ ಸಮೀಪದಲ್ಲಿ ನಿರ್ಮಿಸಿರುತ್ತಾರೆ. ಒಳನಾಡ ಸಿಗಡಿ ಸಾಕಾಣಿಕೆ ಕೇಂದ್ರಗಳನ್ನು ಸ್ಥಾಪಿಸಲು ಕೆಲವು ಪ್ರದೇಶಗಳಲ್ಲಿ ಪ್ರಯತ್ನ ಮಾಡಲಾಯಿತು.

ಆದರೆ ಉಪ್ಪು ನೀರನ್ನು ಅಲ್ಲಿಗೆ ಒಯ್ಯಬೇಕಾದ ಸಮಸ್ಯೆ ಮತ್ತು ಕೃಷಿಗೆ ಬಳಸುವ ಭೂಮಿಯನ್ನು ಸಿಗಡಿ ಬೆಳೆಯಲು ಬಳಸಿಕೊಳ್ಳುವ ಸಂಬಂಧದಲ್ಲಿ ಉದ್ಭವಿಸಿದ ಸ್ಪರ್ಧೆಗಳು ಸಮಸ್ಯೆಗಳನ್ನು ಉಂಟು ಮಾಡಿದವು. ೧೯೯೯ರಲ್ಲಿ ಥೈಲ್ಯಾಂಡ್ ಒಳನಾಡಿನಲ್ಲಿ ಸೀಗಡಿಯನ್ನು ಸಾಕಣೆ ಮಾಡುವುದನ್ನು ನಿಷೇಧಿಸಿತು.[೮]

ಮೊಟ್ಟೆಕೇಂದ್ರಗಳು[ಬದಲಾಯಿಸಿ]

ಸಿಗಡಿ ಮರಿಮಾಡುವ ಕೇಂದ್ರದ ಟ್ಯಾಂಕುಗಳು

ಆಗ್ನೇಯ ಏಷಿಯಾದಲ್ಲೆಲ್ಲ ಸಣ್ಣ-ಪ್ರಮಾಣದ ಸಿಗಡಿ ಮೊಟ್ಟೆ ಕೇಂದ್ರಗಳು ಅತ್ಯಂತ ಸಾಮಾನ್ಯವಾದವು. ಹೆಚ್ಚಾಗಿ ಅವನ್ನು ಕುಟುಂಬದ ವ್ಯವಹಾರವನ್ನಾಗಿ ನಡೆಸುತ್ತಾರೆ. ಮತ್ತು ಕಡಿಮೆ ತಂತ್ರಜ್ಞಾನದ ಅನುಸಂಧಾನ ಅಲ್ಲಾಗುತ್ತದೆ. ಅವರು ಚಿಕ್ಕ ಕೆರೆಗಳನ್ನು (ಹತ್ತು ಟನ್ ಗಳಿಗಿಂತಲೂ ಚಿಕ್ಕದು) ಬಳಸುತ್ತಾರೆ ಮತ್ತು ಕಡಿಮೆ ಪ್ರಾಣಿ ಸಾಂದ್ರತೆ ಅಲ್ಲಿರುತ್ತದೆ. ಅವು ರೋಗಗಳಿಗೆ ತುತ್ತಾಗುವುದು ಸುಲಭ. ಆದರೆ ಅವುಗಳ ಸಣ್ಣ ಗಾತ್ರದ ಕಾರಣ ಸೋಂಕು ಕಳೆದುಕೊಂಡ ಅವು ಮಾದರಿಯೆಂಬಂತೆ ಉತ್ಪಾದನೆಯನ್ನು ಮತ್ತೆ ತ್ವರಿತವಾಗಿ ಪ್ರಾರಂಭಿಸುತ್ತವೆ. ಅವುಗಳ ಬದುಕುಳಿದಿರುವಿಕೆ ದರವು ಶೂನ್ಯದಿಂದ 90%ರ ನಡುವೆ ಎಲ್ಲೋ ಒಂದುಕಡೆ ಇರುತ್ತದೆ. ರೋಗಗಳು, ವಾತಾವರಣ ಮತ್ತು ಅದನ್ನು ನಿರ್ವಹಣೆ ಮಾಡುವವನ ಅನುಭವ ಇತ್ಯಾದಿಗಳನ್ನು ಅವಲಂಬಿಸಿದ ಪರಿಣಾಮಗಳ ದೊಡ್ಡ ವ್ಯಾಪ್ತಿಯು ಇದಕ್ಕೆ ಕಾರಣ.

ಗ್ರೀನ್ ರ್ವಾಟರ್ ಮೊಟ್ಟೆ ಕೇಂದ್ರಗಳು ಮಧ್ಯಮ ಗಾತ್ರದ ಮೊಟ್ಟೆ ಸಾಕಣೆ ಕೇಂದ್ರಗಳು. ಇಲ್ಲಿ ದೊಡ್ಡ ಗಾತ್ರದ ಕೆರೆಗಳನ್ನು ಕಡಿಮೆ ಪ್ರಾಣಿ ಸಾಂದ್ರತೆಯೊಂದಿಗೆ ನಿರ್ವಹಿಸುತ್ತಾರೆ. ಸಿಗಡಿಯ ಲಾರ್ವಾಗೆ ಆಹಾರವಾಗಿ ಪಾಚಿಯ ಹೂವನ್ನು ಕೆರೆಗಳಲ್ಲಿ ಸೇರಿಸಿರುತ್ತಾರೆ. ಬದುಕುಳಿಯುವ ಪ್ರಮಾಣ ಸುಮಾರು 40%.

ಗಾಲ್ವೆಸ್ಟನ್ ಮೊಟ್ಟೆಕೇಂದ್ರಗಳು (ಗಾಲ್ವೆಸ್ಟನ್, ಟೆಕ್ಸಾಸ್, ನಿಂದ ಈ ಹೆಸರು. ಅಲ್ಲಿ ಅವು ಅಭಿವೃದ್ಧಿ ಹೊಂದಿದ್ದು) ದೊಡ್ಡ ಪ್ರಮಾಣದವು, ಉದ್ಯಮ ಸ್ವರೂಪದ ಮೊಟ್ಟೆಕೇಂದ್ರಗಳು ಮುಚ್ಚಿರುವಂತಹ ಮತ್ತು ಅತ್ಯಂತ ಕಟ್ಟುನಿಟ್ಟಾದ ನಿಯಂತ್ರಣದ ವಾತಾವರಣವನ್ನು ಬಳಸಿರುತ್ತವೆ. ಅವರು ದೊಡ್ಡ ಕೆರೆಗಳಲ್ಲಿ (15 ರಿಂದ 30 ಟನ್) ದಟ್ಟ ಸಾಂದ್ರತೆಯಲ್ಲಿ ಸೀಗಡಿಯನ್ನು ಬೆಳೆಯುತ್ತಾರೆ. ಅವುಗಳ ಬದುಕುಳಿಯುವ ಪ್ರಮಾಣವು ಶೂನ್ಯದಿಂದ 80%ರ ವರೆಗೆ ಇರುತ್ತದೆ. ಆದರೆ ಮಾದರಿಯಾಗಿ 50% ಸಾಧಿಸಲಾಗಿದೆ.

ಮೊಟ್ಟೆ ಕೇಂದ್ರಗಳಲ್ಲಿ ಬೆಳೆಯುತ್ತಿರುವ ಸಿಗಡಿಗೆ ಪಾಚಿಯನ್ನು ಆಹಾರವಾಗಿ ನೀಡುತ್ತಾರೆ. ನಂತರ ಕೂಡ ಉಪ್ಪುನೀರಿನ ಸಿಗಡಿ ನುಪ್ಲೀಗೆ, ಕೆಲವು ಸಲ (ವಿಶೇಷವಾಗಿ ಔದ್ಯಮಿಕ ಮೊಟ್ಟೆಕೇಂದ್ರಗಳಲ್ಲಿ) ಕೃತಕ ಆಹಾರವನ್ನೂ ನೀಡುತ್ತಾರೆ.. ನಂತರದ ಹಂತದಲ್ಲಿ ಆಹಾರವು ತಾಜಾ ಅಥವಾ ಶೀತಲಗೊಳಿಸಿ-ಒಣಗಿಸಿದ ಪ್ರಾಣಿಗಳ ಪ್ರೋಟೀನ್ ಆಗಿರುತ್ತದೆ., ಉದಾಹರಣೆಗೆ ಪುಟ್ಟಕಡಲಕಳೆ. ಪೋಷಕಾಂಶಗಳು ಮತ್ತು ವೈದ್ಯಕೀಯ ಚಿಕಿತ್ಸೆ (ನಂಜುನಿರೋಧಕಗಳು)ಉಪ್ಪುನೀರಿನ ಸಿಗಡಿ ನುಪ್ಲೀಗೆ ನೀಡಲಾಗುತ್ತದೆ. ಸಿಗಡಿಯ ಮೇಲೆ ಹಾದು ಹೋಗುವ ಅದನ್ನು ಅವು ತಿನ್ನುತ್ತವೆ.[೨]

ನರ್ಸರಿಗಳು[ಬದಲಾಯಿಸಿ]

ಟ್ರಕ್ಕಿನಲ್ಲಿಯ ಟ್ಯಾಂಕಿನಿಂದ ಲಾರ್ವೋತ್ತರ ಮರಿಗಳನ್ನು ಬೆಳವಣಿಗೆಯ ಹೊಂಡಕ್ಕೆ ವರ್ಗಾಯಿಸುತ್ತಿರುವುದು.

ಅನೇಕ ಸಾಕಣೆ ಕೇಂದ್ರಗಳು, ನರ್ಸರಿಗಳು ಇವೆ. ಅಲ್ಲಿ ಲಾರ್ವೋತ್ತರ ಸಿಗಡಿಗಳು ಜುವೆನಿಲ್್ಗಳಾಗಿ ಮುಂದಿನ ಮೂರು ವಾರಗಳಲ್ಲಿ ಪ್ರತ್ಯೇಕ ಹೊಂಡಗಳಲ್ಲಿ, ಕೆರೆಗಳಲ್ಲಿ ಅಥವಾ ಹಾಗೆ ಕರೆಯುವ ರೇಸ್್ವೇಗಳಲ್ಲಿ ಬೆಳೆಯುತ್ತವೆ. ರೇಸ್ ರ್ವೇ ಆಯತಾಕಾರದಾಗಿದ್ದು ಉದ್ದ ವಾಗಿರುತ್ತವೆ, ಅವು ನೆರಳಿರುವ ಕೆರೆಗಳು, ಇದರ ಮೂಲಕ ನೀರು ಸತತವಾಗಿ ಹರಿದುಹೋಗುತ್ತಲೇ ಇರುತ್ತದೆ.[೯]

ಮಾದರಿ ನರ್ಸರಿಯೊಂದರಲ್ಲಿ, ಪ್ರತಿ ಚದರ ಮೀಟರ್್ಗೆ 150ರಿಂದ 200 ಪ್ರಾಣಿಗಳು ಇರುತ್ತವೆ. ದೊಡ್ಡದಾಗಿ ಬೆಳೆಯುವ ಹೊಂಡಗಳಿಗೆ ತೆರಳುವ ಮೊದಲು ಅವುಗಳಿಗೆ ಮೂರು ವಾರಗಳ ವರೆಗೆ ಅತ್ಯಧಿಕ ಪ್ರೋಟೀನ್ ಆಹಾರವಾಗಿ ನೀಡುತ್ತಾರೆ. ಆ ಸಮಯದಲ್ಲಿ, ಅವು ಒಂದು ಮತ್ತು ಎರಡು ಗ್ರಾಂಗಳ ವರೆಗೆ ತೂಗುತ್ತವೆ.. ಬೆಳೆಯುವ ಹೊಂಡದಲ್ಲಿರುವ ನೀರಿನ ಉಪ್ಪಿನಂಶಕ್ಕೆ ಅವು ಕ್ರಮೇಣ ಒಗ್ಗಿಕೊಳ್ಳುತ್ತವೆ.

ಸಿಗಡಿಯ ಲಾರ್ವೋತ್ತರ ಸ್ಥಿತಿಯನ್ನು "PLs" ಎಂದು ರೈತರು ಗುರುತಿಸುತ್ತಾರೆ. ಅವು ಎಷ್ಟು ವಾರ ಎಂಬುದು ಉತ್ತರ ಪ್ರತ್ಯಯವಾಗಿ ಬರುತ್ತದೆ (i.e., PL-1, PL-2, ಇತ್ಯಾದಿ.). ರೆಕ್ಕೆಗಳು ಟಿಸಿಲುಗೊಂಡ ಬಳಿಕ ಅವು ಬೆಳೆಯುವ ಹೊಂಡಕ್ಕೆ ವರ್ಗಾಯಿಸುವುದಕ್ಕೆ ಸಿದ್ಧ ಗೊಳ್ಳುತ್ತವೆ. ಅವು ಸುಮಾರು PL-13 ರಿಂದ PL-17ರ ಹೊತ್ತಿಗೆ ಸಂಭವಿಸುವುದು. (ಮರಿಯಾದ ದಿನದಿಂದ ಸುಮಾರು 25 ದಿನಗಳ ಬಳಿಕ). ನರ್ಸಿಂಗ್ ಸಂಪೂರ್ಣವಾಗಿ ಬೇಕಾಗಿಯೇ ಇಲ್ಲ, ಆದರೆ ಇದರ ಬಗ್ಗೆ ಅನೇಕ ಸಾಕಣೆ ಕೇಂದ್ರಗಳು ಒಲವು ಹೊಂದಿವೆ.

ಏಕೆಂದರೆ, ಇದರಿಂದ ಆಹಾರದ ಬಳಕೆ ಸರಿಯಾಗಿ ಆಗುತ್ತದೆ, ಗಾತ್ರವು ಏಕಪ್ರಕಾರವಾಗಿ ಇರುವಂತೆ ಮಾಡುತ್ತದೆ, ಮೂಲಸೌಕರ್ಯಗಳನ್ನು ಸರಿಯಾಗಿ ಬಳಸಿಕೊಳ್ಳುವುದಕ್ಕೆ ನೆರವಾಗುತ್ತದೆ, ಬೆಳೆಯನ್ನು ಹೆಚ್ಚಿಸಲು ನಿಯಂತ್ರಿತ ಹವಾಮಾನದಲ್ಲಿ ಇದನ್ನು ಮಾಡುತ್ತಾರೆ. ನರ್ಸರಿಗಳ ಪ್ರಮುಖವಾದ ಅನನಕೂಲವೆಂದರೆ ಲಾರ್ವೋತ್ತರ ಸಿಗಡಿಗಳನ್ನು ಬೆಳೆಯುವ ಹೊಂಡಕ್ಕೆ ಸಾಗಿಸುವಾಗ ಕೆಲವು ಸತ್ತುಹೋಗುತ್ತವೆ.

ಕೆಲವು ಸಾಕಣೆ ಕೇಂದ್ರಗಳು ನರ್ಸರಿಗಳನ್ನು ಬಳಸುವುದಿಲ್ಲ. ಆದರೆ ಲಾರ್ವೋತ್ತರ ಸಂಗ್ರಹವನ್ನು ನೇರವಾಗಿ, ಅವು ಸೂಕ್ತ ತಾಪಮಾನ ಮತ್ತು ಉಪ್ಪಿನಂಶದ ಪ್ರಮಾಣಕ್ಕೆ ಕೆರೆಯಲ್ಲಿ ರೂಢಿ ಮಾಡಿಸಿ ಬೆಳೆಯುವ ಹೊಂಡದಲ್ಲಿಯೇ ಬಿಡುತ್ತಾರೆ. ಕೆಲವು ದಿನಗಳ ಪೋಷಣೆಯ ಬಳಿಕ ಈ ಕೆರೆಗಳಲ್ಲಿಯ ನೀರನ್ನು ಕ್ರಮೇಣ ಬದಲಾಯಿಸಿ ಬೆಳೆಯುವ ಹೊಂಡಗಳಲ್ಲಿರುವ ನೀರಿನ ಮಟ್ಟಕ್ಕೆ ತರುವರು. ಪ್ರಾಣಿಗಳ ಸಾಂದ್ರತೆಯು ಮರಿಯಾದ ಲಾರ್ವೋತ್ತರ ಸಿಗಡಿಗೆ 500/ಲೀಟರ್್ಗೆ ಮೀರಬಾರದು. ಮತ್ತು ದೊಡ್ಡ ಸೀಗಡಿಗೆ PL-15 ನಂತಹವು 50/ಲೀಟರ್ ಮೀರಬಾರದು.[೧೦]

ಬೆಳೆಯುವ ಹಂತ[ಬದಲಾಯಿಸಿ]

ಇಂಡೋನೇಶಿಯದಲ್ಲಿ ಕಾಲಿನಿಂದ ತುಳಿಯುವ ಚಕ್ರಗಳಿರುವ ವಾಯುಪೂರಣ ಯಂತ್ರ ಹೊಂದಿದ ಸಿಗಡಿ ಹೊಂಡ.ಕೃಷಿ ಮಾಡುವುದಕ್ಕೆ ಆರಂಭದ ಹಂತದಲ್ಲಿರುವ ಹೊಂಡ; ತೇಲುವ ಸೂಕ್ಷ್ಮಜೀವಿಗಳನ್ನು ಬೀಜ ಮಾಡಿ ಮತ್ತು ಬೆಳೆಸುತ್ತಾರೆ (ಅದರಿಂದ ಹಸಿರು ಬಣ್ಣಕ್ಕೆ ತಿರುಗಿರುವ ನೀರು); ಲಾರ್ವೋತ್ತರ ಸೀಗಡಿಯನ್ನು ಮುಂದೆ ಅಲ್ಲಿ ಬಿಡುತ್ತಾರೆ.
ಒಂದು ಅಶ್ವಶಕ್ತಿಯ ಹುಟ್ಟಿನ ಚಕ್ರದ ಅನಿಲಪೂರಣ ಯಂತ್ರಸಿಡಿಸುವಿಕೆಯು ನೀರು ಆವಿಯಾಗುವ ಪ್ರಮಾಣವನ್ನು ಹೆಚ್ಚಿಸಬಹುದು ಮತ್ತು ಇದರಿಂದ ಹೊಂಡದ ಉಪ್ಪಿನಂಶದ ಪ್ರಮಾಣವೂ ಹೆಚ್ಚುತ್ತದೆ
ಎರಡು ಅಶ್ವಶಕ್ತಿಯ "ಟರ್ಬೋ ಅನಿಲಪೂರಕ", ಇದನ್ನು ನೀರಿನ ಪಾತಳಿಯಿಂದ ಒಂದು ಮೀಟರ್ ಕೆಳಗೆ ತಿರುಗಿಸುತ್ತಾರೆ.ಹೊಂಡದೊಳಗಿನ ಕೆಸರು ರಾಡಿಯಾಗುವುದನ್ನು ತಪ್ಪಿಸಲು ನೀರಿನ ಮಟ್ಟವು ಕನಿಷ್ಠ 1.5 ಮೀಟರ್ ಇರಬೇಕು.

ಬೆಳೆಯುವ ಹಂತದಲ್ಲಿ, ಸೀಗಡಿಗಳು ಪ್ರಬುದ್ಧಾವಸ್ಥೆಯನ್ನು ತಲುಪುತ್ತವೆ. ಲಾರ್ವೋತ್ತರ ಸ್ಥಿತಿಯಲ್ಲಿ ಅವನ್ನು ಹೊಂಡಗಳಿಗೆ ವರ್ಗಾಯಿಸುತ್ತಾರೆ. ಮಾರುಕಟ್ಟೆಗೆ ಒಯ್ಯುವ ಗಾತ್ರದವರೆಗೆ ಅವು ಬೆಳೆಯುವ ತನಕ ಅವುಗಳಿಗೆ ಆಹಾರವನ್ನು ನೀಡಲಾಗುತ್ತದೆ. ಇದು ಇನ್ನೊಂದು ಮೂರರಿಂದ ಆರು ತಿಂಗಳ ಕಾಲವನ್ನು ತೆಗೆದುಕೊಳ್ಳುತ್ತದೆ. ಬಲೆಯನ್ನು ಬಳಸಿ ಅಥವಾ ಹೊಂಡದಲ್ಲಿಯ ನೀರನ್ನೆಲ್ಲ ಖಾಲಿ ಮಾಡಿ ಸಿಗಡಿಯ ಕೊಯ್ಲು ಮಾಡುವರು. ಹೊಂಡದ ಗಾತ್ರಗಳು ಮತ್ತು ತಾಂತ್ರಿಕ ಮೂಲ ಸೌಕರ್ಯಗಳ ಪ್ರಮಾಣ ಬೇರೆ ಬೇರೆಯಾಗಿರುತ್ತವೆ.

ಬಹುತೇಕ ಸಿಗಡಿ ಸಾಕಣೆ ಕೇಂದ್ರಗಳು ಸಾಂಪ್ರದಾಯಿಕವಾದ ಕಡಿಮೆ-ಸಾಂದ್ರತೆಯ ಪದ್ಧತಿಗಳನ್ನು ಬಳಸುತ್ತಾರೆ. ಇವು ತಗಲುವ ವೆಚ್ಚವನ್ನು ಅವಲಂಬಿಸಿರುತ್ತವೆ. ಮತ್ತು ಹೆಚ್ಚಾಗಿ ಮ್ಯಾಂಗ್ರೋವ್ (ಕಂದಾಳೆ) ಮರಗಳಿರುವ ಪ್ರದೇಶಗಳನ್ನು ಅವಲಂಬಿಸಿರುತ್ತವೆ. ಹೊಂಡಗಳ ಪ್ರಮಾಣವು ಕೆಲವೇ ಕೆಲವುಗಳಿಂದ ಹಿಡಿದು 100ಕ್ಕೂ ಅಧಿಕ ಹೆಕ್ಟೇರುಗಳನ್ನು ಒಳಗೊಂಡಿರುತ್ತದೆ; ಸಿಗಡಿಗಳನ್ನು ಕಡಿಮೆ ಸಾಂದ್ರತೆಯಲ್ಲಿ ಸಂಗ್ರಹಿಸುತ್ತಾರೆ. (ಪ್ರತಿ ಚದರ ಮೀಟರ್್ಗೆ 2-3 ಪ್ರಾಣಿಗಳು, ಅಥವಾ 25 ಸಾವಿರ/ಹೆ.)[೨] ಸ್ವಲ್ಪ ನೀರಿನ ವಿನಿಮಯ ಮಾಡಿ ಭರತವನ್ನುಂಟು ಮಾಡುವರು ಮತ್ತು ಸಿಗಡಿಗಳಿಗೆ ನೈಸರ್ಗಿಕವಾಗಿಯೇ ಉತ್ಪತ್ತಿಯಾಗುವ ಜೀವಿಗಳ ಮೂಲಕ ಆಹಾರವನ್ನು ಒದಗಿಸುವರು.

ಕೆಲವು ಪ್ರದೇಶಗಳಲ್ಲಿ, ರೈತರು ಇನ್ನೂ ನೈಸರ್ಗಿಕವಾದ ಸಿಗಡಿಯನ್ನು ಕೇವಲ ಗೇಟುಗಳನ್ನು ತೆರೆದು ನೈಸರ್ಗಿಕ ಲಾರ್ವಾಗಳು ಒಳಸೇರುವಂತೆ ಮಾಡಿ ಬೆಳೆಯುತ್ತಾರೆ. ಮುಖ್ಯವಾಗಿ ಇದು ಬಡ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ. ಇಲ್ಲಿ ಭೂಮಿಯ ಬೆಲೆ ಕಡಿಮೆ ಇರುತ್ತದೆ. ವಿಸ್ತೃತವಾದ ಸಾಕಣೆ ಕೇಂದ್ರಗಳಲ್ಲಿ ವಾರ್ಷಿಕ ಇಳುವರಿ 50ರಿಂದ 500 ಕಿ.ಗ್ರಾಂ./ಹೆ. ಸಿಗಡಿ ಇರುತ್ತದೆ. (ಮುಖಾಮುಖಿ-ತೂಕ). ಅವರಿಗೆ ಉತ್ಪಾದನೆ ವೆಚ್ಚವು ಕಡಿಮೆ (ಯುಎಸ್. ಡಾಲರ್ 1-3/ಕಿ.ಗ್ರಾಂ. ಜೀವಂತ ಸಿಗಡಿ), ವ್ಯಾಪಕ ಶ್ರಮವೂ ಇದರಲ್ಲಿಲ್ಲ ಮತ್ತು ಮುಂದುವರಿದ ತಾಂತ್ರಿಕ ಪರಿಣತಿಯೂ ಇಲ್ಲಿ ಬೇಕಾಗಿಲ್ಲ.[೧೧]

ಅರೆ ವಿಸ್ತೃತ ಸಾಕಣೆ ಕೇಂದ್ರಗಳು ನೀರಿನ ವಿನಿಮಯದ ಮೂಲಕ ಭರತಗಳು ಬರುವುದನ್ನು ಅವಲಂಬಿಸಿರುವುದಿಲ್ಲ. ಆದರೆ ಪಂಪನ್ನು ಬಳಸುವರು ಮತ್ತು ಯೋಜಿತ ಹೊಂಡದ ವಿನ್ಯಾಸವನ್ನು ಹೊಂದಿರುತ್ತವೆ. ಈ ಕಾರಣದಿಂದ ಅವನ್ನು ಅಧಿಕ ಭರತದ ಮಟ್ಟದ ಮೇಲೆಯೂ ನಿರ್ಮಿಸ ಬಹುದು. ಹೊಂಡದ ಗಾತ್ರವು 2ರಿಂದ 30 ಹೆಕ್ಟೇರ್ ವಿಸ್ತಾರದ ವರೆಗೆ ಇರುತ್ತವೆ. ಸಂಗ್ರಹದ ಸಾಂದ್ರತೆಯು 10ರಿಂದ 30/ಚದರ ಮೀಟರ್ ಇರುತ್ತವೆ. (100,000- 300,000/ಹೆ.) ಇಂಥ ಸಾಂದ್ರತೆಯಲ್ಲಿ, ಔದ್ಯಮಿಕವಾಗಿ ಸಿದ್ಧವಾದ ಸಿಗಡಿ ಆಹಾರವನ್ನು ಒದಗಿಸಿ ಕೃತಕವಾಗಿ ಆಹಾರ ನೀಡುತ್ತಾರೆ. ಮತ್ತು ನೈಸರ್ಗಿಕವಾಗಿ ತಯಾರಾಗುವ ಜೀವಿಗಳ ಬೆಳವಣಿಗೆಗಾಗಿ ಹೊಂಡವನ್ನು ಫಲವತ್ತಗೊಳಿಸುವುದು ಅನಿವಾರ್ಯವಾಗಿದೆ.

ವಾರ್ಷಿಕ ಇಳುವರಿಯು 500ರಿಂದ 5,000 ಕಿ.ಗ್ರಾಂ./ಹೆ., ಮತ್ತು ಉತ್ಪಾದನೆ ವೆಚ್ಚವು ಪ್ರತಿ ಕಿ.ಗ್ರಾಂ.ಜೀವಂತ ಸಿಗಡಿಗೆ 2-6 ಅಮೆರಿಕ ಡಾಲರ್. ಪ್ರತಿ ಚದರ ಮೀಟರ್್ಗೆ 15 ಪ್ರಾಣಿಗಳಿಗಿಂತ ಹೆಚ್ಚಿನ ಸಾಂದ್ರತೆ ಇರುವಲ್ಲಿ, ಪ್ರಾಣವಾಯುವಿನ ಕೊರತೆಯನ್ನು ತಪ್ಪಿಸಲು ಅನಿಲಪೂರಣ ಅಗತ್ಯವಾಗುತ್ತದೆ. ಉತ್ಪಾದನೆಯು ನೀರಿನ ತಾಪಮಾನವನ್ನು ಅವಲಂಬಿಸಿ ಬೇರೆಬೇರೆಯಾಗಿರುತ್ತದೆ. ಹೀಗಾಗಿ ಕೆಲವು ಶ್ರಾಯಗಳಲ್ಲಿ ಉಳಿದ ಶ್ರಾಯಗಳಿಗಿಂತ ದೊಡ್ಡ ಗಾತ್ರದ ಸಿಗಡಿಗಳು ದೊರೆಯುತ್ತವೆ.

ವಿಸ್ತೃತವಾದ ಸಾಕಾಣಿಕೆಯ ಬಳಕೆಯು ಚಿಕ್ಕ ಹೊಂಡಗಳಲ್ಲಿಯೂ (0.1-1.5 ಹೆ.) ಸಾಧ್ಯವಿದೆ. ಮತ್ತು ಹೆಚ್ಚು ಸಂಗ್ರಹ ಸಾಂದ್ರತೆಯಲ್ಲೂ ಇದು ಸಾಧ್ಯ. ಹೊಂಡಗಳನ್ನು ಸಕ್ರಿಯವಾಗಿ ನಿರ್ವಹಿಸುತ್ತಾರೆ: ಅವುಗಳಿಗೆ ಅನಿಲ ಪೂರಣ ಮಾಡುತ್ತಾರೆ. ನಿರುಪಯುಕ್ತ ವಸ್ತುಗಳನ್ನು ಹೊರ ಹಾಕಲು ಮತ್ತು ನೀರಿನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಭಾರೀ ಪ್ರಮಾಣದಲ್ಲಿ ನೀರಿನ ಬದಲಾವಣೆಯನ್ನು ಮಾಡುತ್ತಾರೆ. ಮತ್ತು ಸಿಗಡಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ಆಹಾರವನ್ನು ನೀಡುತ್ತಾರೆ, ಮಾದರಿಯಾಗಿ ಗುಳಿಗೆಗಳ ರೀತಿಯಲ್ಲಿ ಇವನ್ನು ಸಿದ್ಧಮಾಡಿರುತ್ತಾರೆ.

ಇಂಥ ಸಾಕಣೆ ಕೇಂದ್ರಗಳ ವಾರ್ಷಿಕ ಇಳುವರಿಯು 5,000 ಮತ್ತು 20,000 ಕಿ.ಗ್ರಾಂ./ಹೆ. ನಡುವೆ ಇರುತ್ತದೆ; ಕೆಲವು ಅತ್ಯಂತ ವಿಸ್ತೃತ ಸಾಕಣೆ ಕೇಂದ್ರಗಳು 100,000 ಕಿ.ಗ್ರಾಂ./ಹೆ. ವರೆಗೂ ಉತ್ಪಾದಿಸುತ್ತವೆ. ಅವುಗಳಿಗೆ ಮುಂದುವರಿದ ತಂತ್ರಜ್ಞಾನದ ಮೂಲಭೂತ ಸೌಕರ್ಯ ಗಳು ಮತ್ತು ಚೆನ್ನಾಗಿ ತರಬೇತಿಯನ್ನು ಪಡೆದ ವೃತ್ತಿನಿರತರು ನಿರಂತರವಾಗಿ ನೀರಿನ ಗುಣಮಟ್ಟ ನಿರ್ವಹಿಸಲು ಮತ್ತು ಹೊಂಡದ ಇತರ ಸ್ಥಿತಿಗತಿಯನ್ನು ನೋಡುವುದಕ್ಕೆ ಬೇಕು; ಅವರ ಉತ್ಪಾದನೆ ವೆಚ್ಚ ಪ್ರತಿ ಕಿ.ಗ್ರಾಂ. ಜೀವಂತ ಸಿಗಡಿಗೆ 4-8 ಅಮೆರಿಕದ ಡಾಲರ್ಗಳು.

ಸಿಗಡಿ ಸಾಕಾಣಿಕೆ ಕೇಂದ್ರಗಳ ಉತ್ಪಾದನೆಯ ಚಿತ್ರಗಳ ಅಂದಾಜು ವಿಭಿನ್ನವಾಗಿವೆ. ಜಗತ್ತಿನಾದ್ಯಂತ ಇರುವ ಸಿಗಡಿ ಸಾಕಾಣಿಕೆ ಕೇಂದ್ರಗಳಲ್ಲಿ 55–60% ರಷ್ಟು ವಿಸ್ತೃತವಾದ ಸಾಕಾಣಿಕೆ ಕೇಂದ್ರಗಳೇ ಆಗಿವೆ ಎಂದು ಹೆಚ್ಚಿನ ಅಧ್ಯಯನಗಳು ಒಪ್ಪಿವೆ. ಇನ್ನುಳಿದವುಗಳಲ್ಲಿ 25–30% ರಷ್ಟು ಅರೆ-ವಿಸ್ತೃತ ಸ್ವರೂಪದವು, ಮತ್ತು ಉಳಿದವು ವಿಸ್ತೃತ ಅಲ್ಲದವು. ಪ್ರಾದೇಶಿಕ ವೈವಿಧ್ಯತೆ ಅಧಿಕ, ಹೀಗಿದ್ದರೂ [ಟಕೂನ್ (2002)] ಆಯಾ ದೇಶಗಳು ಶೇಕಡಾವಾರು ಲೆಕ್ಕದಲ್ಲಿ ಬೇರೆಬೇರೆಯೇ ಲೆಕ್ಕವನ್ನು ವಿವಿಧ ಅಧ್ಯಯನದ ಮೂಲಕ ನೀಡುತ್ತವೆ.[೧೧]

ಸಿಗಡಿಗಳಿಗೆ ಆಹಾರ ನೀಡುವುದು[ಬದಲಾಯಿಸಿ]

ವಿಸ್ತೃತ ಸಾಕಾಣಿಕೆ ಕೇಂದ್ರಗಳು ಮುಖ್ಯವಾಗಿ ಹೊಂಡಗಳ ನೈಸರ್ಗಿಕ ಉತ್ಪಾದಕತೆಯನ್ನು ಅವಲಂಬಿಸಿದ್ದರೆ, ಹೆಚ್ಚು ತೀವ್ರವಾಗಿ ನಿರ್ವಹಿಸಲ್ಪಡುವ ಸಾಕಾಣಿಕೆ ಕೇಂದ್ರಗಳು ಕೃತಕವಾದ ಸಿಗಡಿ ಆಹಾರವನ್ನು ಅವಲಂಬಿಸಿವೆ, ಇಲ್ಲವೆ ಪೂರ್ತಿ ಹೊರತು ಪಡಿಸಿದ ಅಥವಾ ಹೊಂಡದಲ್ಲಿಯೇ ತಯಾರಾಗುವ ನೈಸರ್ಗಿಕ ಜೀವಿಗಳಿಗೆ ಪೂರಕವಾಗಿ ಇದನ್ನು ಬಯಸುತ್ತವೆ. ಒಂದು ಆಹಾರ ಸರಪಳಿಯು ತೇಲುವ ಸಸ್ಯಗಳ ಬೆಳವಣಿಗೆಯನ್ನು ಆಧರಿಸಿ ಹೊಂಡದಲ್ಲಿಯೇ ಸಿದ್ಧವಾಗುತ್ತದೆ.

ಗೊಬ್ಬರಗಳು ಮತ್ತು ಖನಿಜಗಳ ಸುಧಾರಕಗಳನ್ನು ತೇಲು ಸಸ್ಯಗಳ ಬೆಳವಣಿಗೆಯನ್ನು ಹೆಚ್ಚಿಸಲು ಬಳಸುತ್ತಾರೆ ಇದು ಸಿಗಡಿಯ ಬೆಳವಣಿಗೆಯನ್ನು ತ್ವರಿತಗೊಳಿಸುತ್ತದೆ. ಕೃತಕ ಆಹಾರಗಳ ಉಂಡೆಗಳ ತ್ಯಾಜ್ಯ ಮತ್ತು ಸಿಗಡಿಗಳ ಮಲವು ಅವುಗಳಿಗೆ ಆಮ್ಲಜನಕದ ಕೊರತೆಯು ಉಂಟಾಗುವ ಪ್ರಮಾಣದಲ್ಲಿ ಸಸ್ಯಗಳು ಬೆಳೆಯುವಂತೆ ಮಾಡಬಹುದು.

ಕೃತಕ ಆಹಾರವು ಸಾಕಣೆ ಕೇಂದ್ರಕ್ಕೆ ವಿಶೇಷ ರೀತಿಯಲ್ಲಿ ಸಿದ್ಧಗೊಂಡು ಗುಳಿಗೆಗಳು ಕಣಕಣಗಳಾಗುವ ರೀತಿಯಲ್ಲಿದ್ದು ತ್ವರಿತವಾಗಿ ಕರಗಿಹೋಗುತ್ತವೆ. 70% ರ ವರೆಗೆ ಇಂಥ ಗುಳಿಗೆಗಳು ತ್ಯಾಜ್ಯವಾಗುತ್ತವೆ, ಏಕೆಂದರೆ ಸಿಗಡಿಗಳು ಅವನ್ನು ತಿನ್ನುವ ಪೂರ್ವದಲ್ಲಿಯೇ ಅವು ನಾಶ ವಾಗಿರುತ್ತವೆ.[೨] ಅವುಗಳಿಗೆ ದಿನಕ್ಕೆ ಎರಡರಿಂದ ಐದು ಬಾರಿ ಆಹಾರವನ್ನು ನೀಡಬೇಕು. ಇದನ್ನು ಕೈಯಿಂದಲೇ ಮಾಡುತ್ತಾರೆ, ತೀರದಲ್ಲಿ ನಿಂತು ಕೊಂಡು ಅಥವಾ ದೋಣಿಗಳಲ್ಲಿ ತೆರಳಿ ಅಥವಾ ಹೊಂಡದ ಎಲ್ಲೆಡೆಯೂ ಯಾಂತ್ರೀಕೃತ ಆಹಾರ ಪೂರೈಕೆ ವ್ಯವಸ್ಥೆ ಇದೆ. ಆಹಾರ ಪರಿವರ್ತನೆ ದರವು (FCR), ಅಂದರೆ,.ಒಂದು ಘಟಕವನ್ನು ಉತ್ಪಾದಿಸಲು ಬೇಕಾದ ಆಹಾರ ಪ್ರಮಾಣ (ಉದಾ. ಒಂದು ಕಿ.ಗ್ರಾಂ.) ಸಿಗಡಿಗೆ, ಆಧುನಿಕ ಸಾಕಾಣಿಕೆ ಕೇಂದ್ರಗಳಲ್ಲಿ 1.2-2.0 ಬೇಕಾಗುವುದೆಂದು ಉದ್ಯಮದವರು ಹೇಳುತ್ತಾರೆ.

ಆದರೆ ಅದೊಂದು ಅತ್ಯುತ್ತಮ ಪರಿಸ್ಥಿತಿಯ ಮೌಲ್ಯ, ಆದರೆ ಆಚರಣೆಯಲ್ಲಿ ಅದು ಸಾಧ್ಯವಿಲ್ಲ. ಒಂದು ಸಾಕಾಣಿಕೆ ಕೇಂದ್ರ ಲಾಭದಾಯಕವಾಗಿರಬೇಕೆಂದರೆ ಆಹಾರ ಪರಿವರ್ತನೆ ದರವು 2.5ಕ್ಕಿಂತ ಕಡಿಮೆ ಇರಬೇಕಾದುದು ಅಗತ್ಯ; ಹಳೆಯ ಸಾಕಾಣಿಕೆ ಕೇಂದ್ರಗಳಲ್ಲಿ ಅಥವಾ ಅರೆ ಪ್ರಶಸ್ತ ಹೊಂಡಗಳ ಪರಿಸ್ಥಿತಿಗಳಲ್ಲಿ ಈ ಅನುಪಾತವು ಸುಲಭವಾಗಿ 4:1 ಕ್ಕೆ ಏರಬಹುದು.[೧೨] ಕಡಿಮೆ FCRಗಳು ಸಾಕಾಣಿಕೆ ಕೇಂದ್ರವು ಅತ್ಯಧಿಕ ಲಾಭ ಪಡೆಯುವುದಕ್ಕೆ ಕಾರಣವಾಗುತ್ತದೆ.

ಕೃಷಿ ಮಾಡಿದ ತಳಿಗಳು[ಬದಲಾಯಿಸಿ]

ಇಂಚಾಕಾದ ಮತ್ತು ಸೀಗಡಿಯ ತಳಿಗಳು ಹಲವಾರಿದ್ದರೂ ದೊಡ್ಡದಾಗುವ ಜಾತಿಯ ಕೆಲವಷ್ಟನ್ನೇ ಕೃಷಿಗೆ ಉಪಯೋಗಿಸುತ್ತಾರೆ. ಅವೆಲ್ಲವೂ ಪೆನೇಡ್ಗಳ (ವಂಶ ಪೆನಾಡೇಯೇ),[೧೩] ಮತ್ತು ಪೆನೆಯಸ್ ಕುಲದ ಒಳಗೆಯೇ ಬರುತ್ತವೆ[೩]. ಅನೇಕ ಜಾತಿಗಳು ಕೃಷಿ ಮಾಡುವುದಕ್ಕೆ ಸೂಕ್ತವಾದವುಗಳಲ್ಲ: ಲಾಭವನ್ನು ತರುವುದಕ್ಕೆ ಅವು ತೀರ ಚಿಕ್ಕದಾಗಿರುತ್ತವೆ, ಅಥವಾ ಒಟ್ಟಿಗೆ ಗುಂಪಿನಲ್ಲಿ ಸೇರಿದಾಗ ಅವುಗಳ ಬೆಳವಣಿಗೆ ನಿಂತುಬಿಡುತ್ತದೆ, ಅಥವಾ ಬಹುಬೇಗ ರೋಗಗಳಿಗೆ ಅವು ತುತ್ತಾಗುತ್ತವೆ. ಮಾರುಕಟ್ಟೆಯಲ್ಲಿ ಪ್ರಭುತ್ವ ಸಾಧಿಸಿದ ಎರಡು ತಳಿಗಳಿವೆ:

 • ಪ್ಯಾಸಿಫಿಕ್ ಬಿಳಿ ಸೀಗಡಿ (ಲಿಟೋಪೆನಾಸ್ ವನ್ನಾಮಿ , "ಬಿಳಿಕಾಲಿನ ಸೀಗಡಿ" ಎಂದೂ ಕರೆಯುತ್ತಾರೆ) ಪಶ್ಚಿಮದ ದೇಶಗಳಲ್ಲಿ ಇದನ್ನೇ ಹೆಚ್ಚಾಗಿ ಬೆಳೆಯುವುದು. ಪ್ಯಾಸಿಫಿಕ್ ಕರಾವಳಿಯಲ್ಲಿ ಮೂಲವನ್ನು ಹೊಂದಿರುವ ಇದು ಮೆಕ್ಸಿಕೋ ದಿಂದ ಪೆರುವರೆಗೂ ಇದೆ, ಇದು 23 ಸೆಂ.ಮೀ. ಉದ್ದದ ವರೆಗೂ ಬೆಳೆಯುತ್ತದೆ. ಎಲ್. ವನ್ನಾಮೀ ಲ್ಯಾಟಿನ್ ಅಮೆರಿಕದ ಉತ್ಪಾದನೆಯಲ್ಲಿ 95% ರಷ್ಟಿದೆ. ಇದನ್ನು ಬಂಧನದಲ್ಲಿಟ್ಟು ಮರಿಗಳನ್ನು ಮಾಡುವುದು ಸುಲಭ. ಆದರೆ ಇದು ಟೌರಾ ರೋಗಕ್ಕೆ ಬಲಿಯಾಗುತ್ತದೆ.
 • ದೈತ್ಯ ಹುಲಿ ಸೀಗಡಿ (ಪಿ. ಮೋನೋಡಾನ್ , "ಕಪ್ಪು ಹುಲಿ ಸೀಗಡಿ" ಎಂದೂ ಇದು ಪ್ರಸಿದ್ಧ) ಹಿಂದೂ ಮಹಾಸಾಗರದಲ್ಲಿ ಮತ್ತು ಪ್ಯಾಸಿಫಿಕ್ ಮಹಾಸಾಗರದಲ್ಲಿ ಜಪಾನದಿಂದ ಆಸ್ಟ್ರೇಲಿಯಾದ ವರೆಗೆ ಇದು ನೈಸರ್ಗಿಕ ವಾಗಿ ದೊರೆಯುತ್ತದೆ. ಕೃಷಿ ಮಾಡುವ ಎಲ್ಲ ಸೀಗಡಿಗಳಲ್ಲಿ ಇದು ಅತ್ಯಂತ ದೊಡ್ಡದು ಮತ್ತು ಇದು 36 ಸೆಂ.ಮೀ.ಉದ್ದದ ವರೆಗೆ ಬೆಳೆಯುತ್ತದೆ ಹಾಗೂ ಇದನ್ನು ಏಶಿಯಾದಲ್ಲಿ ಕೃಷಿ ಮಾಡುವರು. ಬಿಳಿಚುಕ್ಕಿ ರೋಗಕ್ಕೆ ಇದು ಬಲಿಯಾಗುವ ಕಾರಣ ಮತ್ತು ಬಂಧನದಲ್ಲಿಟ್ಟು ಮರಿ ಮಾಡುವುದರಲ್ಲಿ ಇರುವ ಕಷ್ಟ ಸಾಧ್ಯತೆಯಿಂದಾಗಿ, ಇದು ಕ್ರಮೇಣ 2001ರಿಂದ ಎಲ್. ವನ್ನಾಮೀ ಮಿಂದ ಸ್ಥಾನಾಂತರಗೊಂಡಿತು.

ಒಟ್ಟಿಗೆ ಈ ಎರಡು ತಳಿಗಳು ಒಟ್ಟಾರೆ ಕೃಷಿ ಮಾಡಿದ ಸೀಗಡಿ ಉತ್ಪಾದನೆಯ ಸುಮಾರು 80% ರಷ್ಟನ್ನು ಒಳಗೊಂಡಿದೆ.[೧೪] ಮರಿ ಮಾಡುವ ಇತರ ತಳಿಗಳೆಂದರೆ:

ಕುರುಮ ಸೀಗಡಿ ತೈವಾನದ ಜಲಚರ ಜೀವಿ ಕೃಷಿ ನಿರೀಕ್ಷಣಾ ಟ್ಯಾಂಕಿನಲ್ಲಿ.
 • ಪಶ್ಚಿಮದ ನೀಲಿ ಸೀಗಡಿ (ಪಿ. ಸ್ಟಿಲಿರೋಸ್ಟ್ರಿಸ್ ) ಪಶ್ಚಿಮ ಗೋಳಾರ್ಧದಲ್ಲಿ ಸೀಗಡಿ ಕೃಷಿಗೆ ಇದು, IHHN ವೈರಸ್ 1980ರ ದಶಕದ ಕೊನೆಯಲ್ಲಿ ಇದನ್ನು ಇಡಿಯಾಗಿ ನಾಮಾವಶೇಷ ಮಾಡುವ ವರೆಗೂ, ಅತ್ಯಂತ ಜನಪ್ರಿಯ ಆಯ್ಕೆಯಾಗಿತ್ತು. ಉಳಿದುಕೊಂಡ ಕೆಲವು ಸಂಗ್ರಹವು ಈ ವೈರಸ್್ ವಿರುದ್ಧ ನಿರೋಧಕ ಶಕ್ತಿಯನ್ನು ಬೆಳೆಸಿಕೊಂಡವು. ಇವುಗಳಲ್ಲಿ ಕೆಲವು ಟೌರಾ ವೈರಸ್ ವಿರುದ್ಧವೂ ನಿರೋಧಕ ಶಕ್ತಿಯನ್ನು ಪಡೆದುಕೊಂಡಿವೆ ಎಂಬುದನ್ನು ಸಂಶೋಧಿಸಿದಾಗ ಕೆಲವು ಸಾಕಣೆ ಕೇಂದ್ರಗಳು ಪುನಃ ಪಿ.ಸ್ಟಿಲಿರೋಸ್ಟ್ರಿಸ್ ತಳಿಯನ್ನು 1997ರಿಂದ ಮುಂದೆ ಬೆಳೆಯಲಾರಂಭಿಸಿದವು.
 • ಚೈನೀಸ್್ ಬಿಳಿ ಸೀಗಡಿ (ಪಿ. ಚಿನೆಸಿಸ್ , ಫ್ಲೆಶಿ ಪ್ರಾವ್ನ್ ) ಎಂದೂ ಇದು ಪ್ರಸಿದ್ಧ. ಚೀನದ ಮತ್ತು ಕೋರಿಯಾದ ಕರಾವಳಿಯಲ್ಲಿ ಬೆಳೆಯುತ್ತವೆ ಚೀನದಲ್ಲಿ ಇದನ್ನು ಕೃಷಿ ಮಾಡುತ್ತಾರೆ. ಇದು ಅತ್ಯಧಿಕ ಎಂದರೆ 18 ಸೆಂ.ಮೀ. ಉದ್ದದ ವರೆಗೆ ಬೆಳೆಯುತ್ತವೆ. ಆದರೆ ತಂಪು ನೀರನ್ನು ಸಹಿಸಿಕೊಳ್ಳುತ್ತದೆ. (ಕನಿಷ್ಠ. 16 °ಸೆಂ.). ಒಮ್ಮೆ ವಿಶ್ವ ಮಾರುಕಟ್ಟೆಯಲ್ಲಿ ಪ್ರಮುಖ ಅಂಶವಾಗಿದ್ದ ಇದು, 1993ರಲ್ಲಿ ಬಹುತೇಕ ಸಂಗ್ರಹವೆಲ್ಲ ರೋಗಕ್ಕೆ ತುತ್ತಾಗಿ ನಾಶವಾಗಿತ್ತು. ಇಂದು ಚೀನಾದ ದೇಶೀ ಮಾರುಕಟ್ಟೆಗೆ ಮಾತ್ರ ವಿಶಿಷ್ಟವಾಗಿ ಬಳಕೆಯಾಗುತ್ತಿದೆ.
 • ಕುರುಮ ಸೀಗಡಿ (ಪಿ. ಜಪೋನಿಕಸ್ )ಅನ್ನು ಪ್ರಮುಖವಾಗಿ ಜಪಾನದಲ್ಲಿ ಮತ್ತು ತೈವಾನದಲ್ಲಿ ಸಾಕಣೆ ಮಾಡುತ್ತಾರೆ, ಆದರೆ ಆಸ್ಟ್ರೇಲಿಯಾದಲ್ಲಿ ಕೂಡ; ಜಪಾನ್ ಮಾತ್ರ ಐಕೈಕ ಮಾರುಕಟ್ಟೆ, ಅಲ್ಲಿ ಕುರುಮ ಸೀಗಡಿಯ ಬೆಲೆಯು US$100 ಪ್ರತಿ ಪೌಂಡ್ ($220/ಕಿ.ಗ್ರಾಂ.).
 • ಇಂಡಿಯನ್ ಬಿಳಿ ಸೀಗಡಿ (ಪಿ. ಇಂಡಿಕಸ್ ) ಹಿಂದೂ ಮಹಾಸಾಗರದ ಕರಾವಳಿಯ ಮೂಲವನ್ನು ಹೊಂದಿವೆ ಮತ್ತು ಭಾರತ, ಇರಾನ್ ಮತ್ತು ಮಧ್ಯಪ್ರಾಚ್ಯದಲ್ಲಿ ಹಾಗೂ ಆಫ್ರಿಕಾದ ತೀರ ಪ್ರದೇಶಗಳಲ್ಲಿ ಇದನ್ನು ಬೆಳೆಯುತ್ತಾರೆ.
 • ಬನಾನಾ ಸೀಗಡಿ (ಪಿ. ಮೆರ್ಗಿಯೆನ್ಸಿಸ್ ) ಹಿಂದೂ ಮಹಾಸಾಗರದ ಒಮನ್ ದಿಂದ ಇಂಡೋನೇಶಿಯಾ ಮತ್ತು ಆಸ್ಟ್ರೇಲಿಯಾದ ವರೆಗಿನ ತೀರದಲ್ಲಿ ದೊರೆಯುವ ಕೃಷಿಮಾಡುವ ತಳಿ ಇದು. ದಟ್ಟ ಸಾಂದ್ರತೆಯಲ್ಲೂ ಇದನ್ನು ಬೆಳೆಯಬಹುದು.

ಪೆನೇಯಸ್ ನ ಇತರ ಅನೇಕ ತಳಿಗಳು ಸೀಗಡಿ ಕೃಷಿಯಲ್ಲಿ ಹೊಂದಿರುವ ಪಾತ್ರ ತೀರ ಚಿಕ್ಕದ್ದು. ಇತರ ಕೆಲವು ಮಾದರಿಯ ಸೀಗಡಿಗಳನ್ನೂ ಕೃಷಿ ಮಾಡಬಹುದು, ಉದಾ. "ಅಕಿಯಾಮಿ ಪಾಸ್ಟೆ ಸೀಗಡಿ" ಅಥವಾ ಮೆಟಾಪೆನೀಯಸ್ ಎಸ್್ಪಿಪಿ. ಜಲಜೀವಿ ಕೃಷಿಯಿಂದ ಆಗುವ ಒಟ್ಟಾರೆ ಉತ್ಪನ್ನದ ಬೇಡಿಕೆ 25,000 ಟನ್ ಪ್ರತಿ ವರ್ಷಕ್ಕೆ. ಪೆನಾಡೇಗಳ ಉತ್ಪನ್ನಕ್ಕೆ ಹೋಲಿಸಿದರೆ ಇದು ಚಿಕ್ಕದ್ದು.

ರೋಗಗಳು[ಬದಲಾಯಿಸಿ]

ಸೀಗಡಿಗೆ ಮಾರಕವಾಗುವ ವೈರಲ್ನ ವೈವಿಧ್ಯಮಯ ರೋಗಗಳು ಇವೆ.[೧೫] ಅತ್ಯಂತ ದಟ್ಟವಾಗಿರುವ, ಏಕ ಫಸಲಿನ ಸಾಕಣೆ ಕೇಂದ್ರಗಳಲ್ಲಿ ವೈರಸ್ ಸೋಂಕುಗಳು ಮೇಲಿಂದ ಮೇಲೆ ಹರಡುತ್ತವೆ ಮತ್ತು ಇಡೀ ಸೀಗಡಿ ಸಮೂಹವನ್ನೇ ನಾಶಮಾಡಿಬಿಡುತ್ತವೆ. ಈ ಅನೇಕ ವೈರಸ್್ಗಳಲ್ಲಿ ಒಂದು ಪ್ರಮುಖ ವರ್ಗಾವಣೆಯಾಗುವ ರೋಗವಾಹಕ ನೀರೇ ಆಗಿರುತ್ತದೆ; ಮತ್ತು ಈ ರೀತಿ ಯಾವುದೇ ವೈರಸ್ ಆಘಾತ ತಲೆದೋರಿದಾಗ ನಿಸರ್ಗಸಹಜವಾದ ಸೀಗಡಿಗಳಲ್ಲಿ ಬಹು ಪಾಲನ್ನು ನಾಶಮಾಡುವುದು.

ಹಳದಿ ತಲೆ ರೋಗ, ಹ್ಯು ಲಿಯಂಗ್ ಎಂದು ಥೈನಲ್ಲಿ ಕರೆಯುತ್ತಾರೆ, ಪಿ. ಮೋನೋಡಾನ್ ಮೇಲೆ ಆಗ್ನೇಯ ಏಶಿಯಾದ್ಯಂತ ಪರಿಣಾಮಬೀರುತ್ತದೆ.[೧೬]

1990ರಲ್ಲಿ ಥೈಲ್ಯಾಂಡಿನಲ್ಲಿ ಇದು ಮೊದಲಬಾರಿಗೆ ವರದಿಯಾಯಿತು. ಈ ರೋಗ ಅತ್ಯಂತ ಸಾಂಕ್ರಾಮಿಕವಾಗಿದ್ದು 2ರಿಂದ 4 ದಿನಗಳೊಳಗೆ ಇದು ಸಾಮೂಹಿಕ ನಾಶವನ್ನು ಮಾಡಬಲ್ಲುದು. ಸೆಫೆಲೋಥೋರಾಕ್ಸ್ ರೋಗ ಸೋಂಕಿದ ಸೀಗಡಿಯು ಹಳದಿ ಬಣ್ಣಕ್ಕೆ ತಿರುಗಿರುತ್ತದೆ. ಅಸ್ವಾಭಾವಿಕವಾದ ಅಧಿಕ ಆಹಾರ ಪೂರೈಕೆ ಚಟುವಟಿಕೆಯು ಒಮ್ಮೆಲೇ ನಿಂತಾಗ ಇದು ತಲೆದೋರುತ್ತವೆ. ಮತ್ತು ಸಾಯುವ ಸ್ಥಿತಿಯಲ್ಲಿರುವ ಸೀಗಡಿಯು ಸಾಯುವ ಪೂರ್ವದಲ್ಲಿ ತಮ್ಮ ಹೊಂಡದ ಮೇಲ್ಭಾಗದಲ್ಲಿ ಸಂಗ್ರಹವಾಗುತ್ತವೆ.[೧೭]

ಬಿಳಿಚುಕ್ಕಿ ಸಿಂಡ್ರೋಮ್ ಸಂಬಂಧಿ ವೈರಸ್ಸುಗಳ ಕುಟುಂಬದಿಂದ ಈ ರೋಗ ಕಾಣಿಸಿಕೊಳ್ಳುವುದು. ಜಪನೀಸ್ ಪಿ. ಜಪೋನಿಕಸ್್ ಕಲ್ಚರ್ಸ್್,[೧೮] ನಲ್ಲಿ ಇದು ಮೊದಲಬಾರಿಗೆ 1993ರಲ್ಲಿ ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು. ಇದು ಏಶಿಯಾದ್ಯಂತ ಹಬ್ಬಿತು ಮತ್ತು ನಂತರ ಅಮೆರಿಕಕ್ಕೂ ಹಬ್ಬಿತು. ಇದು ವಿಸ್ತಾರವಾದ ಆತಿಥ್ಯದ ಶ್ರೇಣಿ ಹೊಂದಿದೆ ಮತ್ತು ಅತ್ಯಂತ ಘಾತುಕವಾದದ್ದು, ದಿನದೊಳಗೇ ಇದು 100% ಬಲಿ ಪಡೆಯುವುದು.

ಬೆನ್ನು ಚಿಪ್ಪಿನ ಮೇಲೆ ಬಿಳಿ ಚುಕ್ಕಿಗಳು ಮತ್ತು ಕೆಂಪು ಹಿಪಾಟೋಪ್ಯಾಂಕ್ರಿಯಾಸ್ ಇರುವುದು ಇದರ ಲಕ್ಷಣಗಳಲ್ಲಿ ಸೇರಿದೆ. ಸೋಂಕಿಗೊಳಗಾದ ಸೀಗಡಿಯು ಸಾಯುವ ಮುನ್ನ ಮಂಪರಿಗೊಳಗಾದ ಸ್ಥಿತಿ ಯಲ್ಲಿರುತ್ತವೆ.[೧೯]

ಟೌರಾ ಸಿಂಡ್ರೋಮ್ 1992ರಲ್ಲಿ ಈಕ್ವೆಡೋರ್್ನ ಟೌರಾ ನದಿಯ ಸೀಗಡಿ ಸಾಕಾಣಿಕೆ ಕೇಂದ್ರಗಳಲ್ಲಿ ಮೊದಲು ವರದಿಯಾಗಿತ್ತು. ಈ ವೈರಸ್ ಉಂಟುಮಾಡುವ ರೋಗ ಪಿ. ವನ್ನಾಮಿ , ಸಾಕಾಣಿಕೆ ಕೇಂದ್ರದ ಸೀಗಡಿಗಳಿಗೆ ಸಾಮಾನ್ಯವಾಗಿ ಬರುವ ಎರಡು ಪ್ರಮುಖ ರೋಗಗಳಲ್ಲಿ ಇದು ಒಂದು. ಈ ರೋಗವು ಬೇಗನೆ ಹಬ್ಬುತ್ತದೆ, ಮುಖ್ಯವಾಗಿ ಇದು ಸೋಂಕಿಗೊಳಗಾದ ಈ ಪ್ರಾಣಿಗಳನ್ನು ಮತ್ತು ಮರಿಗಳನ್ನು ಸಾಗಾಟ ಮಾಡುವುದರಿಂದ ಹಬ್ಬುತ್ತದೆ. ಮೊದಲು ಇದು ಅಮೆರಿಕದಲ್ಲಿಯ ಸೀಗಡಿ ಸಾಕಣೆ ಕೇಂದ್ರಗಳಿಗೆ ಸೀಮಿತವಾಗಿತ್ತು. ಎಲ್. ವನ್ನಾಮಿ ಯನ್ನು ಪ್ರಚಾರ ಮಾಡುವ ಮೂಲಕ ಏಶಿಯಾದ ಸೀಗಡಿ ಸಾಕಾಣಿಕೆ ಕೇಂದ್ರಗಳಿಗೂ ತಗುಲಿತು. ಒಂದು ಪ್ರದೇಶದಲ್ಲಿ ಈ ರೋಗ ಹಬ್ಬುವುದಕ್ಕೆ ಪಕ್ಷಿಗಳು ಕಾರಣ ಎಂದು ತಿಳಿಯಲಾಗಿದೆ.[೨೦]

ಇನ್ಫೆರ್ಸಿಯಸ್ ಹೈಪೋಡರ್ಮಲ್ ಆ್ಯಂಡ್ ಹೆಮಾಟೋಪೋಯಿಟಿಕ್ ನೆಕ್ರೋಸಿಸ್ (IHHN) ಇದೊಂದು ಪಿ. ಸ್ಟಿಲಿರೋಸ್ಟ್ರಿಸ್ (ಅತ್ಯಧಿಕ 90%)ನಲ್ಲಿ ಸಾಮೂಹಿಕ ಸಾವನ್ನು ಉಂಟುಮಾಡುವಂಥದ್ದು ಮತ್ತು ಎಲ್. ವನ್ನಾಮಿಯ ಯಲ್ಲಿ ವಿಕೃತ ರೂಪವನ್ನು ಉಂಟು ಮಾಡುವಂಥದ್ದು. ಇದು ಪ್ಯಾಸಿಫಿಕ್್ನ ಸಾಕಣೆ ಮಾಡಿದ ಮತ್ತು ನೈಸರ್ಗಿಕವಾದ ಸೀಗಡಿಯಲ್ಲಿ ಕಂಡುಬರುವುದು. ಆದರೆ ಅಟ್ಲಾಂಟಿಕ್ ಕರಾವಳಿಯ ನೈಸರ್ಗಿಕ ಸೀಗಡಿಯಲ್ಲಿ ಇದು ಕಾಣುವುದಿಲ್ಲ.[೨೧]

ಅಲ್ಲದೆ ಇನ್ನೂ ಅನೇಕ ಬ್ಯಾಕ್ಟೀರಿಯಾ ಮೂಲದ ಸೋಂಕುಗಳೂ ಸೀಗಡಿಗೆ ಮಾರಕವಾಗಿದೆ. ಇವುಗಳಲ್ಲಿ ಅತಿ ಸಾಮಾನ್ಯವಾದದ್ದು ವಿಬ್ರಿಯೋಸಿಸ್, ವಿಬ್ರಿಯೋ ತಳಿಗಳ ಬ್ಯಾಕ್ಟೀರಿಯಾದಿಂದ ಇದು ತಲೆದೋರುತ್ತದೆ. ಸೀಗಡಿಯು ಅತ್ಯಂತ ದುರ್ಬಲವಾಗಿತ್ತವೆ ಮತ್ತು ಭ್ರಾಂತಿಗೊಳಗಾದ ಸ್ಥಿತಿಯಲ್ಲಿ ಅವು ಇರುತ್ತವೆ. ಮತ್ತು ಹೊರ ಚರ್ಮದ ಮೇಲೆ ಕಪ್ಪು ಗಾಯಗಳಿರಬಹುದು. ಸಾವಿನ ಪ್ರಮಾಣ 70%.ನ್ನು ಮೀರಬಹುದು.

ಬ್ಯಾಕ್ಟೀರಿಯಾ ಮೂಲಕ ಬರುವ ಇನ್ನೊಂದು ರೋಗ ನೆಕ್ರೋಟಿಂಗ್ ಹೆಪಾಟೋಪಾಂಕ್ರಿಯಾಟಿಸ್ (NHP); ಹೊರಕವಚವು ಮೃದುವಾಗಿರುವುದು ಮತ್ತು ಗಬ್ಬುನಾರುವುದು ಇದರ ಲಕ್ಷಣಗಳಲ್ಲಿ ಸೇರಿವೆ. ಇಂಥ ಬಹುತೇಕ ಬ್ಯಾಕ್ಟೀರಿಯಾ ಮೂಲದ ಸೋಂಕುಗಳು ತೀವ್ರವಾಗಿ ಒತ್ತಡಪೂರ್ಣ ಪರಿಸ್ಥಿತಿಗಳು, ಅಂದರೆ ಹೊಂಡದಲ್ಲಿ ಕಿಕ್ಕಿರಿದು ಸೀಗಡಿ ಇರುವುದು, ಅಧಿಕ ತಾಪಮಾನಗಳು ಮತ್ತು ಕಳಪೆ ಗುಣಮಟ್ಟದ ನೀರು ಇವುಗಳೊಂದಿಗೆ ಅನ್ಯೋನ್ಯ ಸಂಬಂಧವನ್ನು ಹೊಂದಿವೆ.ಇವು ಬ್ಯಾಕ್ಟೀರಿಯಾದ ಬೆಳವಣಿಗೆಗೆ ಸಕಾರಾತ್ಮಕವಾಗಿ ವರ್ತಿಸುತ್ತವೆ. ಪ್ರತಿ ಜೀವಾಣುಗಳನ್ನು ಬಳಸಿ ಇದಕ್ಕೆ ಚಿಕಿತ್ಸೆಯನ್ನು ನೀಡಬಹುದು.[೨೨]

ವಿವಿಧ ಪ್ರತಿಜೀವಾಣುಗಳನ್ನು ಹೊಂದಿರುವ ಸೀಗಡಿಯ ಮೇಲೆ ಆಮದು ಮಾಡಿಕೊಳ್ಳುವ ದೇಶಗಳು ಮೇಲಿಂದಮೇಲೆ ಆಮದು ನಿಷೇಧವನ್ನು ಹೇರುತ್ತಲೆ ಇವೆ. ಇಂಥ ಒಂದು ಪ್ರತಿಜೀವಾಣು ಕ್ಲೋರಾಮ್ಫೆನಿಕೋಲ್, ಇದನ್ನು ಐರೋಪ್ಯ ಒಕ್ಕೂಟದಲ್ಲಿ 1994ರಿಂದಲೇ ನಿಷೇಧ ಹೇರಲಾಗಿದೆ. ಆದರೆ ಸಮಸ್ಯೆಗಳನ್ನು ಉಂಟುಮಾಡುವುದು ಮುಂದುವರಿದೇ ಇದೆ.[೨೩]

ಸಾವಿನ ಪ್ರಮಾಣವು ಅತಿಹೆಚ್ಚು ಇರುವ ಕಾರಣ ಸೀಗತಿ ಬೆಳೆಗಾರರಿಗೆ ರೋಗಗಳು ನಿಜಕ್ಕೂ ಅತ್ಯಂತ ಅಪಾಯಕಾರಿಯಾದವು, ಒಂದುವೇಳೆ ಅವರ ಹೊಂಡಕ್ಕೆ ಸೋಂಕು ತಗುಲಿದರೆ ಅವರು ತಮ್ಮ ಇಡೀ ವರ್ಷದ ಆದಾಯವನ್ನೇ ಕಳೆದುಕೊಳ್ಳಬೇಕಾಗುತ್ತದೆ. ಬಹುತೇಕ ರೋಗಗಳನ್ನು ಪರಿಣಾಮಕಾರಿಯಾಗಿ ಗುಣಪಡಿಸುವುದು ಸಾಧ್ಯವಾಗದೆ ಇರುವ ಕಾರಣ ಮೊದಲ ಹಂತದಲ್ಲಿಯೇ ರೋಗವು ಬರುವುದನ್ನು ತಡೆಗಟ್ಟುವುದಕ್ಕೆ ಉದ್ಯಮವು ತನ್ನ ಗಮನವನ್ನು ಕೇಂದ್ರೀಕರಿಸಿದೆ. ಪರಿಣಾಮಕಾರಿಯಾದ ನೀರಿನ ಗುಣಮಟ್ಟದ ನಿರ್ವಹಣೆಯು ರೋಗ ಹರಡುವುದಕ್ಕೆ ಕಾರಣವಾಗುವ ಹೊಂಡದ ಕಳಪೆ ಪರಿಸ್ಥಿತಿಯನ್ನು ತಪ್ಪಿಸುತ್ತದೆ ಮತ್ತು ನೈಸರ್ಗಿಕವಾಗಿ ಬೆಳೆದ ಲಾರ್ವಾಗಳನ್ನು ಬಳಸುವುದಕ್ಕೆ ಬದಲಾಗಿ ವಿಶಿಷ್ಟ ರೋಗಾಣಿ ಮುಕ್ತ ಮರಿಹಿಂಡುಗಳನ್ನು ಪ್ರತ್ಯೇಕವಾದ ಕಾಯ್ದಿಟ್ಟ ಪರಿಸರಗಳಲ್ಲಿ ಬೆಳೆದು ರೋಗಗಳನ್ನು ಅವು ಒಯ್ಯುತ್ತಿಲ್ಲ ಎಂಬುದನ್ನು ಪ್ರಮಾಣೀಕರಿಸಿ ಬಳಸು ವುದು ಹೆಚ್ಚುತ್ತಿದೆ.[೨೪]

ರೋಗಮುಕ್ತ ಸಂಗ್ರಹವಿರುವ ಸಾಕಣೆ ಕೇಂದ್ರಕ್ಕೆ ರೋಗಪ್ರವೇಶವಾಗುವುದನ್ನು ತಡೆಯಲು ಅರೆ ತೀವ್ರತೆಯ ಸಾಕಣೆ ಕೇಂದ್ರಗಳಲ್ಲಿ ಹೊಂಡಗಳನ್ನು ಹೆಚ್ಚು ನಿಯಂತ್ರಿತ ಪರಿಸರಕ್ಕೆ ಒಳಪಡಿಸುವ ಪ್ರವೃತ್ತಿ ಈಗ ಹೆಚ್ಚುತ್ತಿದೆ. ಅವುಗಳಿಗೆ ಮಣ್ಣಿನ ಸಂಪರ್ಕ ತಪ್ಪಿಸಲು ಪ್ಲಾಸ್ಟಿಕ್ಕಿನ ಪಟ್ಟಿ ಕಟ್ಟುವುದು ಮತ್ತು ಹೊಂಡದಲ್ಲಿ ನೀರಿನ ವಿನಿಮಯ ಪ್ರಮಾಣವನ್ನು ಕಡಿಮೆಗೊಳಿಸುವುದು ಇತ್ಯಾದಿ ಕ್ರಮ ಅನುಸರಿಸುವರು.[೫]

ಆರ್ಥಿಕತೆ[ಬದಲಾಯಿಸಿ]

2005ರಲ್ಲಿ ಸಾಕಾಣಿಕೆ ಮಾಡಿದ ಸೀಗಡಿಯ ಒಟ್ಟಾರೆ ಜಾಗತಿಕ ಉತ್ಪಾದನೆಯು 2.5 ದಶಲಕ್ಷ ಟನ್್ಗಳನ್ನು ಮುಟ್ಟಿತ್ತು.[೨೫] ಕಳೆದ ವರ್ಷದ ಒಟ್ಟೂ ಉತ್ಪಾದನೆಯ 42% ಕ್ಕೆ ಇದು ಸಮನಾದದ್ದು. (ಸಾಕಿದ್ದು ಮತ್ತು ನೈಸರ್ಗಿಕವಾಗಿ ಹಿಡಿದ್ದು ಒಟ್ಟು ಸೇರಿ). ಸೀಗಡಿಯ ಏಕೈಕ ಅತಿದೊಡ್ಡ ಮಾರುಕಟ್ಟೆ ಅಮೆರಿಕ ಸಂಯುಕ್ತ ಸಂಸ್ಥಾನ, 2003-2009ರ ನಡುವೆ ಇದು 500 – 600,000 ಟನ್್ಗಳ ಸೀಗಡಿ ಉತ್ಪನ್ನವನ್ನು ಆಮದು ಮಾಡಿಕೊಂಡಿತು.[೨೬] ವಾರ್ಷಿಕ ಸುಮಾರು 200,000 ಟನ್್ಗಳನ್ನುಜಪಾನ್ ಆಮದುಮಾಡಿಕೊಳ್ಳುತ್ತದೆ,[೨೭][೨೮] ಐರೋಪ್ಯ ಒಕ್ಕೂಟವು 2006ರಲ್ಲಿ ಉಷ್ಣವಲಯದ ಇನ್ನೊಂದು ಸುಮಾರು 500,೦೦೦ ಟನ್್ಗಳನ್ನು ಆಮದು ಮಾಡಿ ಕೊಂಡಿತು. ಇಲ್ಲಿಯ ಅತಿ ದೊಡ್ಡ ಆಮದುಗಾರರು ಸ್ಪೇನ್ ಮತ್ತು ಫ್ರಾನ್ಸ್.[೨೯] ಶೀತನೀರಿನ ಸೀಗಡಿಗಳನ್ನು ಆಮದು ಮಾಡಿಕೊಳ್ಳುವಲ್ಲಿ ಐರೋಪ್ಯ ಒಕ್ಕೂಟವು ಮುಖ್ಯವಾದದ್ದು. ಇದರಲ್ಲಿ ಮುಖ್ಯವಾದ ಸೀಗಡಿ(ಕ್ರಾನ್್ಗೊನ್ ಕ್ರಾನ್್ಗೊನ್) ಮತ್ತು ಪಂಡಾಲಿಡೆ ಯಲ್ಲಿಯ ಪಂಡಾಲಸ್ ಬೋರೆಯಲಿಸ್  ; 2006ರಲ್ಲಿ, ಈ ಆಮದುಗಳು ಸುಮಾರು ಮತ್ತೊಂದು 200,000 ಟನ್್ಗಳು.[೩೦]

ಸೀಗಡಿಯ ಆಮದು ಬೆಲೆಯು ದೊಡ್ಡ ರೀತಿಯಲ್ಲಿ ಮೇಲೆ ಕೆಳಗೆ ಆಗುತ್ತಿರುತ್ತದೆ. 2003ರಲ್ಲಿ, ಆಮದು ಬೆಲೆಯು ಪ್ರತಿ ಕಿಲೋಗ್ರಾಂ ಸೀಗಡಿಗೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ US$ 8.80 ಇತ್ತು., ಜಪಾನಲ್ಲಿದ್ದ US$8.00 ಗಿಂತ ಸ್ವಲ್ಪ ಅಧಿಕ. ಐರೋಪ್ಯ ಒಕ್ಕೂಟದಲ್ಲಿ ಸರಾಸರಿ ಆಮದು ಬೆಲೆಯು ಕೇವಲ ಸುಮಾರು US$5.00/ಕಿ.ಗ್ರಾಂ; ಇಷ್ಟೊಂದು ಕಡಿಮೆ ಬೆಲೆಗೆ ಕಾರಣ ಐರೋಪ್ಯ ಒಕ್ಕೂಟವು ಆಮದು ಮಾಡಿಕೊಳ್ಳುವುದು ಶೀತ ನೀರಿನ ಸೀಗಡಿಯನ್ನು (ಸಾಗುವ ಬಲೆಯಲ್ಲಿ ಹಿಡಿದವು) ಎಂದು ವಿವರಣೆ ನೀಡಿತ್ತಾರೆ. ಅಲ್ಲದೆ ಇವು ಸಾಕಿದ ಮತ್ತು ಬೆಚ್ಚಗಿನ ನೀರಿನ ಸೀಗಡಿಗಿಂತ ಗಾತ್ರದ್ಲಿ ಚಿಕ್ಕವು ಇರುತ್ತವೆ. ಈ ಕಾರಣಕ್ಕೆ ಇವಕ್ಕೆ ಕಿಮೆ ಬೆಲೆ. ಇದಕ್ಕೆ ಪೂರಕವಾಗಿ, ಮೆಡಿಟರೇನಿಯನ್ ಭಾಗದ ಯುರೋಪು ಅತ್ಂಯತ ಗುಣಮಟ್ಟದ ಸೀಗಡಿಯನ್ನು ಬಯಸುತ್ತದೆ, ಇವುಗಳ ತೂಕ ಅಂದಾಜು 30% ಅಧಿಕವಾಗಿರುತ್ತದೆ, ಆದರೆ ಕಡಿಮೆಯಾದ ಘಟಕ ಬೆಲೆಯನ್ನು ಹೊಂದಿದೆ.[೩೧]

ಸಾಕಾಣಿಕೆ ಮಾಡಿದ ಸೀಗಡಿಯ ಜಾಗತಿಕ ಉತ್ಪಾದನೆಯಲ್ಲಿ ಸುಮಾರು 75% ಏಶಿಯಾದ ದೇಶಗಳಿಂದ ಬರುತ್ತವೆ; ಇದರಲ್ಲಿ ಎರಡು ಪ್ರಮುಖ ದೇಶಗಳು ಚೀನ ಮತ್ತು ಥೈಲ್ಯಾಂಡ್, ಇದರ ಬೆನ್ನಿಗೇ ವಿಯೆಟ್್ನಾಮ್, ಇಂಡೋನೇಶಿಯಾ, ಮತ್ತು ಭಾರತ. ಇನ್ನುಳಿದ 25% ಪಶ್ಚಿಮ ಗೋಳಾರ್ಧದಲ್ಲಿ ಉತ್ಪಾದನೆಯಾಗುತ್ತವೆ. ಇದರಲ್ಲಿ ದಕ್ಷಿಣ ಅಮೆರಿಕದ ದೇಶಗಳು (ಬ್ರಾಝಿಲ್, ಈಕ್ವೆಡೋರ್, ಮೆಕ್ಸಿಕೋ) ಮೇಲುಗೈ ಸಾಧಿಸಿವೆ.[೩೨]

ಆಮದಿನ ಲೆಕ್ಕಾಚಾರದಲ್ಲಿ, ಥೈಲ್ಯಾಂಡ್ ಅತ್ಯಂತ ಮುಂದುವರಿದ ದೇಶವಾಗಿದ್ದು, ಅದರ ಮಾರುಕಟ್ಟೆಯ ಪಾಲು 30%ಕ್ಕಂತ ಅಧಿಕ, ಅದರ ನಂತರ ಚೀನ, ಇಂಡೋನೇಶಿಯಾ, ಮತ್ತು ಭಾರತ, ಪ್ರತಿಯೊಂದರ ಪಾಲು ಸುಮಾರು 10%. ಇತರ ಪ್ರಮುಖ ರಫ್ತು ದೇಶಗಳೆಂದರೆ ವಿಯೆಟ್ನಾಮ್, ಬಾಂಗ್ಲಾದೇಶ ಮತ್ತು ಈಕ್ವೆಡೋರ್.[೩೩] ಥೈಲ್ಯಾಂಡ್ ಬಹುತೇಕ ತನ್ನ ಎಲ್ಲ ಉತ್ಪಾದನೆಯನ್ನೂ ರಫ್ತು ಮಾಡುತ್ತದೆ. ಚೀನವು ತನ್ನ ಸೀಗಡಿಯಲ್ಲಿ ಹೆಚ್ಚಿನವನ್ನು ದೇಶೀ ಮಾರುಕಟ್ಟೆಯಲ್ಲಿ ಬಳಸುವುದು. ಸಾಕಾಣಿಕೆ ಮಾಡಿದ ಸೀಗಡಿಯ ಬಲವಾದ ದೇಶೀ ಮಾರುಕಟ್ಟೆ ಇದ್ದೂ ಅದನ್ನು ರಫ್ತು ಮಾಡುವ ಇನ್ನೊಂದು ಏಕೈಕ ದೇಶ ಮೆಕ್ಸಿಕೋ.[೫]

ಜಲಚರ ಕೃಷಿಯ ಸೀಗಡಿ ಉತ್ಪಾದಕರು ಪ್ರಮುಖ ಉತ್ಪಾದಕ ದೇಶಗಳು
[೩೨]
ಪ್ರದೇಶ(ಪ್ರಾಂತ) ದೇಶ ಉತ್ಪಾದನೆ 1,000 ಟನ್ನುಗಳು ಪ್ರತಿ ವರ್ಷಕ್ಕೆ, ಪೂರ್ಣಾಂಕದಲ್ಲಿ
1985 86 87 88 89 1990 91 92 93 94 95 96 97 98 99 2000 01 02 03 04 05 06 07
ಏಷ್ಯಾ ಚೀನಾ 40 83 153 199 186 185 220 207 88 64 78 89 96 130 152 192 267 337 687 814 892 1'080 1'265
ಥೈಲೆಂಡ್‌‌ 10 12 19 50 90 115 161 185 223 264 259 238 225 250 274 309 279 264 330 360 401 501 501
ವಿಯೆಟ್ನಾಮ್‌‌ 8 13 19 27 28 32 36 37 39 45 55 46 45 52 55 90 150 181 232 276 327 349 377
ಇಂಡೊನೇಷಿಯಾ 25 29 42 62 82 84 116 120 117 107 121 125 127 97 121 118 129 137 168 218 266 326 315
ಭಾರತ 13 14 15 20 28 35 40 47 62 83 70 70 67 83 79 97 103 115 113 118 131 132 108
ಬಾಂಗ್ಲಾದೇಶ 11 15 15 17 18 19 20 21 28 29 32 42 48 56 58 59 55 56 56 58 63 65 64
ಫಿಲಿಪ್ಪೀನ್ಸ್‌‌ 29 30 35 44 47 48 47 77 86 91 89 77 41 38 39 41 42 37 37 37 39 40 42
ಮ್ಯಾನ್ಮಾರ್ 0 0 0 0 0 0 0 0 0 0 1 2 2 2 5 5 6 7 19 30 49 49 48
ತೈವಾನ್‌ 17 45 80 34 22 15 22 16 10 8 11 13 6 5 5 6 8 10 13 13 13 11 11
ಅಮೆರಿಕ ಖಂಡಗಳು ಬ್ರೆಜಿಲ್‌ <1 <1 <1 <1 1 2 2 2 2 2 2 3 4 7 16 25 40 60 90 76 63 65 65
ಈಕ್ವೆಡಾರ್‌ 30 44 69 74 70 76 105 113 83 89 106 108 133 144 120 50 45 63 77 90 119 150 150
ಮೆಕ್ಸಿಕೋ <1 <1 <1 <1 3 4 5 8 12 13 16 13 17 24 29 33 48 46 46 62 90 112 114
ಅಮೆರಿಕ ಸಂಯುಕ್ತಸಂಸ್ಥಾನ <1 <1 1 1 <1 <1 2 2 3 2 1 1 1 2 2 2 3 4 5 5 4 3 2
ಮಧ್ಯ ಪ್ರಾಚ್ಯ ಸೌದಿ ಅರಬಿಯಾ 0 0 0 0 <1 <1 <1 <1 <1 <1 <1 <1 1 2 2 2 4 5 9 9 11 12 15
ಇರಾನ್‌ 0 0 0 0 0 0 0 <1 <1 <1 <1 <1 <1 1 2 4 8 6 7 9 4 6 3
ಓಸಿಯಾನಿಯ ಆಸ್ಟ್ರೇಲಿಯಾ 0 <1 <1 <1 <1 <1 <1 <1 1 2 2 2 1 1 2 3 3 4 3 4 3 4 3
ಓರೆ ಅಕ್ಷರಗಳಲ್ಲಿರುವುದು ಒಟ್ಟಾರೆ ಅಂದಾಜನ್ನು ಸೂಚಿಸುವವು FAO ದತ್ತಾಂಶ ಮೂಲ.[೪] ದಪ್ಪಕ್ಷರದ ಅಂಕಿಗಳು ಕೆಲವು ಗುರುತಿಸಬಹುದಾದ ರೋಗಗಳ ಘಟನೆಗಳನ್ನು ಸೂಚಿಸುತ್ತವೆ
ತುದಿಯಿಂದ ತಳದ ವರೆಗೆ: ಲಿಟೋಪೆನೆಯಸ್ ವನ್ನಾಮಿ ಚಿಪ್ಪಿನ ತುಣುಕುಗಳು; ಕೃಷಿಮಾಡಿದ ಆರೋಗ್ಯಪೂರ್ಣ ಎಲ್. ವನ್ನಾಮಿ ಗಾತ್ರ 66 (17 ಜಿ); ಸತ್ತಿರುವ ಎಲ್. ವನ್ನಾಮಿ, ಟೌರಾ ಸಿಂಡ್ರೋಮ್ ವೈರಸ್್ನಿಂದ ಸೋಂಕಿಗೊಳಗಾಗಿದ್ದು. (TSV). ಆರೋಗ್ಯಪೂರ್ಣ ಸೀಗಡಿಯ ಬಣ್ಣವನ್ನು ಪ್ಲವಕದ ಬಣ್ಣದಿಂದ, ಹೊಂಡದ ತಳದಲ್ಲಿಯ ಮಣ್ಣಿನ ಸ್ವರೂಪ, ಮತ್ತು ಬಳಸಿದ ಹೆಚ್ಚುವರಿ ಪೋಷಕಾಂಶದಿಂದ ನಿರ್ಧರಿಸುತ್ತಾರೆ.ಸೀಗಡಿಯ ತಳದಲ್ಲಿಯ ಬಿಳಿ ಬಣ್ಣವು ಟಿಎಸ್್ವಿ ಸೋಂಕಿನಿಂದ ಆದದ್ದು.

ರೋಗದ ಸಮಸ್ಯೆಗಳು ಸೀಗಡಿ ಉತ್ಪಾದನೆಯ ಮೇಲೆ ಆಗಾಗ್ಗೆ ನಕಾರಾತ್ಮಕ ಪರಿಣಾಮವನ್ನುಂಟು ಮಾಡಿದೆ. 1993ರಲ್ಲಿ ಪಿ.ಚಿನೆನ್ಸಿಸ್ ಸಂಪೂರ್ಣ ನಾಶವಾಗುವ ಸನಿಹ ಬಂದಿತ್ತು. ವೈರಸ್್ ರೋಗಗಳು ಅಪ್ಪಳಿಸಿ ಮಾರುಕಟ್ಟೆಯಲ್ಲಿ ಕುಸಿತ ಕಂಡು ಥೈಲ್ಯಾಂಡ್ ಮತ್ತು ಈಕ್ವೆಡೋರ್್ ದೇಶಗಳಲ್ಲಿ 1996/97ರಲ್ಲಿ ಉತ್ಪಾದನೆಯು ಕುಸಿಯಿತು.[೩೪] ಈಕ್ವೆಡೋರ್ ಒಂದರಲ್ಲಿಯೇ, ಉತ್ಪಾದನೆಯು 1989ರಲ್ಲಿ (IHHN), 1993ರಲ್ಲಿ (ಟೌರಾ) ಮತ್ತು 1999ರಲ್ಲಿ (ಬಿಳಿಚುಕ್ಕಿ) ರೋಗದಿಂದ ಕುಂಠಿತವಾಯಿತು.[೩೫]

ಕೆಲವೊಮ್ಮೆ ಸೀಗಡಿ ಸಾಕಾಣಿಕೆಯ ಫಲಿತದಲ್ಲಿ ವ್ಯಾಪಕವಾದ ಬದಲಾವಣೆಗಳು ಕಂಡುಬರುವುದಕ್ಕೆ ಇನ್ನೊಂದು ಕಾರಣ ಆಮದು ಮಾಡಿಕೊಳ್ಳುವ ದೇಶಗಳ ರಫ್ತು ನಿಯಮಾವಳಿಗಳು. ಅವು ರಾಸಾಯನಿಕಗಳು ಮತ್ತು ಪ್ರತಿಜೀವಾಣುಗಳ ಕಲಬೆರಕೆಯನ್ನು ಹೊಂದಿದ ಸೀಗಡಿಗಳಿಗೆ ಅವಕಾಶವನ್ನು ನೀಡುತ್ತಿಲ್ಲ. 1980ರಲ್ಲಿ ಮತ್ತು ಹೆಚ್ಚಿನ 1990ರ ಅವಧಿಯಲ್ಲಿ, ಸೀಗಡಿ ಸಾಕಾಣಿಕೆಯು ಅತ್ಯಧಿಕ ಲಾಭವನ್ನು ತಂದಿಡುತ್ತಿದ್ದವು. ವಿಸ್ತೃತವಾದ ಸಾಕಾಣಿಕೆ ಕೇಂದ್ರಗಳನ್ನು ಮಾಡುವುದಕ್ಕೆ ಕಡಿಮೆ ಬಂಡವಾಳ ಸಾಕಾಗುತ್ತಿತ್ತು.

ವಿಶೇಷವಾಗಿ ಭೂಮಿಯ ಬೆಲೆ ಕಡಿಮೆ ಇರುವಲ್ಲಿ ಮತ್ತು ಕೂಲಿ ದರ ಕಡಿಮೆ ಇರುವಲ್ಲಿ. ಉಷ್ಣವಲಯದ ಅನೇಕ ದೇಶಗಳಲ್ಲಿ, ವಿಶೇಷವಾಗಿ ಆರ್ಥಿಕ ಬಡತನವಿರುವ ದೇಶಗಳಲ್ಲಿ ಸೀಗಡಿ ಸಾಕಾಣಿಕೆಯು ಒಂದು ಆಕರ್ಷಕ ಉದ್ಯಮವಾಗಿತ್ತು. ಕರಾವಳಿ ಪ್ರದೇಶದ ಬಡವರಿಗೆ ಉದ್ಯೋಗವನ್ನು ಒದಗಿಸಿ ಅವರ ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತಿತ್ತು. ಇದಕ್ಕೆ ಕಾರಣ ಸೀಗಡಿಗೆ ಇದ್ದ ಅತ್ಯಧಿಕ ಮಾರುಕಟ್ಟೆ ದರ. ಅನೇಕ ಅಭಿವೃದ್ಧಿಸೀಲ ದೇಶಗಳಿಗೆ ನಿರ್ಲಕ್ಷಿಸಲಾಗದ ವಿದೇಶಿ ಹಣ ಗಳಿಕೆಗೆ ಇದು ಅವಕಾಶಮಾಡಿಕೊಟ್ಟಿತ್ತು. ಅನೇಕ ಸೀಗಡಿ ಸಾಕಾಣಿಕೆ ಕೇಂದ್ರಗಳಿಗೆ ಆರಂಭದಲ್ಲಿ ವಿಶ್ವ ಬ್ಯಾಂಕ್ ಹಣವನ್ನು ನೀಡಿತು ಅಥವಾ ಗಮನಾರ್ಹವಾಗಿ ಸ್ಥಳೀಯ ಸರ್ಕಾರಗಳು ರಿಯಾಯಿತಿಯನ್ನು ನೀಡಿದವು.[೧]

1990ರ ದಶಕದ ಕೊನೆಯಲ್ಲಿ, ಆರ್ಥಿಕ ಪರಿಸ್ಥಿತಿಯು ಬದಲಾಯಿತು. ಸರ್ಕಾರಗಳು ಮತ್ತು ರೈತರು ಒಟ್ಟಿಕೇ ಎನ್ಜಿಓಗಳಿಂದ ಮತ್ತು ಇತರ ಗ್ರಾಹಕ ದೇಶಗಳಿಂದ ಒಚ್ಚುತ್ತಿರುವ ಒತ್ತಡಕ್ಕೆ ಒಳಗಾಗಬೇಕಾಯಿತು. ಅವರು ವ್ಯಾಪಾರದ ಪದ್ಧತಿಗಳನ್ನು ಟೀಕಿಸಿದರು. ಅಂತಾರಾಷ್ಟ್ರೀಯ ವಾಣಿಜ್ಯ ಸಂಘರ್ಷಗಳು ತಲೆದೋರಿದವು. ಪ್ರತಿ ಜೀವಾಣುಗಳನ್ನು ಸೇರಿಸಿದ ಸೀಗಡಿಯ ಆಮದಿನ ಮೇಲೆ ಗ್ರಾಹಕ ದೇಶಗಳು ನಿಷೇಧವನ್ನು ಹೇರಿದವು.

ಅಮೆರಿಕ ಸಂಯುಕ್ತ ಸಂಸ್ಥಾನದ ಥೈಲ್ಯಾಂಡ್ ವಿರುದ್ಧ 2004ರಲ್ಲಿ ಹೇರಿದ ಸೀಗಡಿ ಆಮದು ನಿಷೇಧ ಥೈ ಸೀಗಡಿ ಮೀನುಗಾರರು ಆಮೆ ಹೊರಗಿಡುವ ಉಪಕರಣ ತಮ್ಮ ಬಲೆಗಳಲ್ಲಿ ಬಳಸಬಾರದು ಎಂಬ ಉದ್ದೇಶದ್ದು,[೩೬] ಅಥವಾ ಯು.ಎಸ್.ನ ಸೀಗಡಿ ಸಾಕಣೆದಾರರು 2002ರಲ್ಲಿ ಜಗತ್ತಿನಾದ್ಯಂತ ಇರುವ ಸೀಗಡಿ ಮೀನುಗಾರರ ವಿರುದ್ಧ ಹೂಡಿದ "ಆ್ಯಂಟಿi-ಡಂಪಿಂಗ್" ಪ್ರಕರಣ.[೩೭] ಇದರ ಪರಿಣಾಮ ಎರಡು ವರ್ಷಗಳ ಬಳಿಕ ಅಮೆರಿಕ ಸಂಯುಕ್ತ ಸಂಸ್ಥಾನವು ತಂದು ಸುರಿಯುವ ವಿರೋಧಿತೆರಿಗೆಗಳನ್ನು ಸುಮಾರು 10% ಅನೇಕ ಉತ್ಪಾದಕ ದೇಶಗಳ ಮೇಲೆ ಹೇರಿತು. ( ಅದು 112% ಸುಂಕವನ್ನು ಪಡೆಯುವಚೀನವನ್ನು ಹೊರತುಪಡಿಸಿ).[೩೮]

ರೋಗಗಳು ಗಮನಾರ್ಹವಾದ ರೀತಿಯಲ್ಲಿ ಆರ್ಥಿಕ ಹಾನಿಯನ್ನುಂಟುಮಾಡಿದವು. ಸೀಗಡಿ ಸಾಕಾಣಿಕೆಯು ಒಂದು ಪ್ರಮುಖ ಅಮದು ಕ್ಷೇತ್ರವಾಗಿರುವ ಈಕ್ವೆಡೋರ್್ನಲ್ಲಿ, (ಉಳಿದ ಎರಡು ಬಾಳೆಹಣ್ಣುಗಳು ಮತ್ತು ಎಣ್ಣೆ), ಬಿಳಿಚುಕ್ಕಿ ರೋಗವು 1999 ಕಾಣಿಸಿಕೊಂಡು ಅಂದಾಜು 130,000 ಕೆಲಸಗಾರರು ತಮ್ಮ ಉದ್ಯೋಗ ಕಳೆದುಕೊಳ್ಳುವಂತೆ ಆಯಿತು.[೫] ಇನ್ನೂ ಹೆಚ್ಚಿನದಾಗಿ, 2000ರಲ್ಲಿ ಸೀಗಡಿಯ ಬೆಲೆಯು ತೀವ್ರವಾಗಿ ಕುಸಿಯಿತು.[೩೯] ಈ ಎಲ್ಲ ಅಂಶಗಳು ಸೀಗಡಿ ಬೆಳೆಯುವುದನ್ನು ಕ್ರಮೇಣ ಒಪ್ಪಿಕೊಳ್ಳುತ್ತ ಸಾಗಿದ ರೈತರು, ತಮ್ಮ ಸಾಕಾಣಿಕೆ ಪದ್ಧತಿಯನ್ನು ಅಗತ್ಯವಾದ ರೀತಿಯಲ್ಲಿ ಸುಧಾರಿಸಿಕೊಳ್ಳುತ್ತ ಸಾಗಿದ್ದರ ಮೇಲೆ ಪರಿಣಾಮವನ್ನು ಬೀರಿತು. ಸರ್ಕಾರವು ವಾಣಿಜ್ಯದ ನಿಯಮಗಳನ್ನು ಬಿಗಿಮಾಡಿದ್ದರಿಂದ ಕೆಲವು ಬಾಹ್ಯ ವೆಚ್ಚವನ್ನು ಹೆಚ್ಚಿಸಿತು. ವ್ಯವಹಾರ ತುರೀಯಾವಸ್ಥೆಯಲ್ಲಿದ್ದ ದಿನಗಳಲ್ಲಿ ಇದನ್ನೆಲ್ಲ ನಿರ್ಲಕ್ಷಿಸಲಾಗಿತ್ತು.[೧][೫]

ಸಮಾಜೋ ಆರ್ಥಿಕ ನೆಲೆಗಳು[ಬದಲಾಯಿಸಿ]

ಸೀಗಡಿ ಸಾಕಾಣಿಕೆಯು ಗಮನಾರ್ಹವಾದ ಅಧಿಕಾರ ನೀಡಿಕೆಯ ಅವಕಾಶಗಳನ್ನು ನೀಡಿತ್ತು, ಅನೇಕ ಪ್ರದೇಶಗಳಲ್ಲಿ ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಿದ್ದರೆ ಸ್ಥಳೀಯ ಕರಾವಳಿಯ ಜನರ ಬಡತನವನ್ನು ದೂರಮಾಡುವುದಕ್ಕೆ ನೆರವಾಗಿತ್ತು.[೪೦] ಆ ವಿಷಯದ ಮೇಲೆ ಪ್ರಕಟವಾದ ಅಧ್ಯಾಯವು ದೊಡ್ಡ ಪ್ರಮಾಣದ ವ್ಯತ್ಯಾಸವನ್ನು ತೋರಿಸುತ್ತದೆ, ಮತ್ತು ಬಹುತೇಕ ಲಭ್ಯವಿರುವ ದತ್ತಾಂಶಗಳು ಸ್ವರೂಪದಲ್ಲಿ ಉಪಾಖ್ಯಾನದಂತೆ ತೋರುವವು.[೪೧] ಇದೇ ಪ್ರಮಾಣದ ಜಾಗದಲ್ಲಿ ಬತ್ತವನ್ನು ಬೆಳೆಯುತ್ತಿದ್ದಾಗ ಬೇಕಾದ ಕಾರ್ಮಿಕರ ಬಾಹುಳ್ಯವು ಸೀಗಡಿ ಸಾಕಾಣಿಕೆ ಮಾಡುವಾಗ ಒಂದು ಮೂರಾಂಶ[೪೨] ದಿಂದ ಮೂರು ಪಟ್ಟು ಅಧಿಕ[೪೩] ದ ವರೆಗೆ ಅಂದಾಜು ಮಾಡಲಾಗಿದೆ. ಇದರಲ್ಲಿ ಪ್ರಾದೇಶಿಕ ವೈವಿಧ್ಯತೆ ಮತ್ತು ಸಮೀಕ್ಷೆ ಮಾಡಿದ ಸಾಕಾಣಿಕೆ ಕೇಂದ್ರವನ್ನು ಇದು ಅವಲಂಬಿಸಿದೆ. ಸಾಮಾನ್ಯವಾಗಿ, ವಿಸ್ತೃತ ಸೀಗಡಿ ಸಾಕಾಣಿಕೆಯು ಪ್ರತಿ ಘಟಕ ಕ್ಷೇತ್ರಕ್ಕೆ ವಿಸತಾರವಾದ ಕ್ಷೇತ್ರದ ಸೀಗಡಿ ಸಾಕಾಣಿಕೆಗಿಂತ ಹೆಚ್ಚು ಕಾರ್ಮಿಕರು ಬೇಕಾಗುತ್ತಾರೆ. ಬೃಹತ್್ಪ್ರಮಾಣದ ಸೀಗಡಿ ಸಾಕಣೆ ಕೇಂದ್ರಗಳು ಅತಿ ಹೆಚ್ಚು ಭೂಪ್ರದೇಶವನ್ನು ಆವರಿಸಿವೆ ಮತ್ತು ಆಗಾಗ್ಗೆ, ಯಾವತ್ತೂ ಅಲ್ಲ, ಎಲ್ಲಿ ಭೂಮಿಯನ್ನು ಕೃಷಿಗೆ ಬಳಸುವುದಿಲ್ಲವೋ ಅಲ್ಲಿ ಮಾತ್ರ ಅಸ್ತಿತ್ವಕ್ಕೆ ಬಂದಿವೆ.[೪೪] ಪೂರಕ ಉದ್ದಿಮೆಗಳಾದ ಆಹಾರ ತಯಾರಿಕೆ ಅಥವಾ ಸಂಗ್ರಹಣೆ, ನಿರ್ವಹಣೆ ಮತ್ತು ವ್ಯಾಪಾರಿ ಕಂಪನಿಗಳನ್ನು ಕೂಡ, ಅವುಗಳೆಲ್ಲ ಸೀಗಡಿ ಕೃಷಿಯಿಂದ ಹೊರಗಿದ್ದರೂ ನಿರ್ಲಕ್ಷಿಸುವಂತಿಲ್ಲ,

ಮಾದರಿಯಾಗಿ, ಸೀಗಡಿ ಸಾಕಾಣಿಕೆ ಕೇಂದ್ರದ ಕೆಲಸಗಾರರು ಇತರ ಉದ್ಯೋಗದಲ್ಲಿರುವವರಿಗಿಂತ ಉತ್ತಮವಾದ ಸಂಬಳವನ್ನು ಪಡೆಯುತ್ತಾರೆ. ಒಂದು ಅಧ್ಯಯನದ ಜಾಗತಿಕ ಅಂದಾಜಿನ ಪ್ರಕಾರ ಸೀಗಡಿ ಸಾಕಾಣಿಕೆಯ ಕೆಲಸಗಾರ ಇತರ ಉದ್ಯೋಗದಲ್ಲಿರುವವರಿಗಿಂತ 1.5-3 ಪಟ್ಟು ಅಧಿಕ ಸಂಪಾದನೆಯನ್ನು ಮಾಡುತ್ತಾನೆ.[೪೫] ಭಾರತದಲ್ಲಿಯ ಅಧ್ಯಯನವು ಸಂಬಳವು 1.6ರಷ್ಟು ಹೆಚ್ಚಾಗಿರುವ ಬಗ್ಗೆ ಹೇಳುತ್ತದೆ.[೪೩] ಮೆಕ್ಸಿಕೋ ರಾಜ್ಯಗಳಿಂದ ಬಂದ ಒಂದು ವರದಿಯು, ಸೀಗಡಿ ಸಾಕಾಣಿಕೆಯಲ್ಲಿ ನೀಡುವ ಅತಿ ಕಡಿಮೆ ಸಂಬಳವು 1996ರಲ್ಲಿ ದೇಶದಲ್ಲಿಯ ಕೆಲಸಗಾರರ ಸರಾಸರಿ ಸಂಬಳದ 1.22ಪಟ್ಟ ಅಧಿಕವಾಗಿತ್ತು.[೪೬]

ಲಾಭದ ದೊಡ್ಡ ಭಾಗವು ದೊಡ್ಡದಾದ ವ್ಯಾಪಾರಿ ಸಂಸ್ಥೆಗಳಿಗೆ ಹೋಗುತ್ತದೆಯೇ ವಿನಾ ಸ್ಥಳೀಯ ಜನರಿಗೆ ದಕ್ಕುವುದಿಲ್ಲೆವಂದು ಎನ್್ಜಿಓಗಳು ಮೇಲಿಂದಮೇಲೆ ಟೀಕಿಸುತ್ತಲೇ ಇರುತ್ತವೆ. ಈಕ್ವೆಡೋರ್್ನಂಥ ಕೆಲವು ಪ್ರದೇಶಗಳಲ್ಲಿ ಇದು ಸತ್ಯ ಕೂಡ ಹೌದು. ಇಲ್ಲಿ ಬಹುತೇಕ ಸೀಗಡಿ ಸಾಕಾಣಿಕೆ ಕೇಂದ್ರಗಳು ದೊಡ್ಡ ಕಂಪನಿಗಳ ಒಡೆತನದಲ್ಲಿವೆ. ಇದು ಎಲ್ಲ ಪ್ರಕರಣಗಳಲ್ಲೂ ಅನ್ವಯಿಸುವುದಿಲ್ಲ. ಉದಾಹರಣೆಗೆ ಥೈಲ್ಯಾಂಡಿನಲ್ಲಿ, ಬಹುತೇಕ ಸಾಕಾಣಿಕೆ ಕೇಂದ್ರಗಳ ಮಾಲೀಕತ್ವವನ್ನು ಚಿಕ್ಕ ಸ್ಥಳೀಯ ಸಂಸ್ಥೆಗಳೇ ಪಡೆದಿವೆ. ಆದರೆ ಸೀಗಡಿ ಸಾಕಾಣಿಕೆಗೆ ಸಂಬಂಧಿಸಿದ ಉದ್ದಿಮೆಗಳು ಆಹಾರ ಉತ್ಪಾದಕರಿಂದ ಆಹಾರ ಸಂಸ್ಕರಿಸುವವರ ವರೆಗೆ ಮತ್ತು ವ್ಯಾಪಾರಿ ಕಂಪನಿಗಳು ಲಂಬಾಕಾರದಲ್ಲಿ ಸಂಕಲಿತಗೊಳ್ಳುವ ಪ್ರವೃತ್ತಿ ಕಂಡುಬರುತ್ತಿದೆ. 1994ರಲ್ಲಿ ನಡೆದ ಒಂದು ಅಧ್ಯಯನವು, ಥೈಲ್ಯಾಂಡಿನ ಒಬ್ಬ ರೈತ ತನ್ನ ಕ್ಷೇತ್ರದಲ್ಲಿ ಬತ್ತ ಬೆಳೆಯುವುದನ್ನು ಬಿಟ್ಟು ಸೀಗಡಿ ಸಾಕಾಣಿಕೆ ಆರಂಭಿಸಿದ್ದರಿಂದ ಪಡೆದ ಲಾಭ ಹತ್ತರಲ್ಲಿ ಒಂದು ಭಾರ ಮಾತ್ರ.[೪೭] 2003ರಲ್ಲಿ ನಡೆದ ಭಾರತದಲ್ಲಿಯ ಒಂದು ಅಧ್ಯಯನವು ಆಂಧ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಸೀಗಡಿ ಸಾಕಾಣಿಕೆಯ ಸಂಬಂಧದಲ್ಲಿ ಇದೇ ರೀತಿಯ ಅಂಕಿಅಂಶಗಳನ್ನು ನೀಡುತ್ತದೆ.[೪೮]

ಸೀಗಡಿ ಸಾಕಾಣಿಕೆಯಿಂದ ಸ್ಥಳೀಯ ಜನರು ಲಾಭವನ್ನು ಪಡೆದುಕೊಳ್ಳುವುದು ಕೂಡ ತರಬೇತಿಯನ್ನು ಪಡೆದ ಸಾಕಷ್ಟು ಜನರು ಲಭ್ಯವಾಗುವುದನ್ನು ಅವಲಂಬಿಸಿ ಇರುತ್ತದೆ.[೪೯] ಬಹುತೇಕ ಸಾಕಾಣಿಕೆ ಕೇಂದ್ರಗಳು ಮುಖ್ಯವಾಗಿ ಅಲ್ಪಕಾಲದ ಸುಗ್ಗಿಯ ಕಾಲದ, ಹೆಚ್ಚು ತರಬೇತು ಬೇಕಾಗಿಲ್ಲದ ಕೆಲಸವನ್ನಷ್ಟೇ ನೀಡುತ್ತವೆ. ಈಕ್ವೆಡೋರ್್ನಲ್ಲಿ, ಬಹುತೇಕ ಇಂತಹ ಕೆಲಸಗಳನ್ನು ವಲಸೆ ಕೆಲಸಗಾರರು ಮಾಡಿಬಿಡುತ್ತಾರೆ.[೫೦] ಹೆಚ್ಚು ಬೃಹತ್್ಪ್ರಮಾಣದ ಸಾಕಾಣಿಕೆ ಕೇಂದ್ರಗಳಲ್ಲಿ ಹೆಚ್ಚು ಸೂಕ್ಷ್ಮವಾದ ಕೆಲಸಗಳಿಗೆ ವರ್ಷಪೂರ್ತಿ ಕೆಲಸ ಮಾಡುವವರು ಬೇಕಾಗುತ್ತದೆ.

ಮಾರಾಟ[ಬದಲಾಯಿಸಿ]

ವಾಣಿಜ್ಯೀಕರಣಗೊಳಿಸುವುದಕ್ಕಾಗಿ, ಸೀಗಡಿಗಳ ದರ್ಜೆಗಳನ್ನು ಮಾಡುತ್ತಾರೆ ಮತ್ತು ವಿವಿಧ ಶ್ರೇಣಿಗಳಲ್ಲಿ ಅದರ ಮಾರಾಟ ಮಾಡುತ್ತಾರೆ. ಪರಿಪೂರ್ಣ ಸೀಗಡಿ (ಶ್ರೇಷ್ಠವಾದ "ಹೆಡ್ ಆನ್, ಶೆಲ್-ಆನ್" ಅಥವಾ HOSO)ಯಿಂದ ಚಿಪ್ಪು ಸುಲಿದ ಮತ್ತು ಕತ್ತರಿಸಿದ (P&D) ಯಾವುದೇ ರೀತಿಯ ವಿವರಣೆಯವು ಮಳಿಗೆಗಳಲ್ಲಿ ದೊರೆಯುತ್ತವೆ ಸೀಗಡಿಗಳನ್ನು ಅವುಗಳ ಏಕರೂಪದ ಗಾತ್ರ ಮತ್ತು ಒಂದು ತೂಕಕ್ಕೆ ಎಷ್ಟ ಸಂಖ್ಯೆಯಲ್ಲಿ ಅವು ತೂಗುತ್ತವೆ ಎನ್ನುವುದರ ಮೇಲೆ ಅವಕ್ಕೆ ಶ್ರೇಣಿಗಳನ್ನು ನೀಡುತ್ತಾರೆ. ದೊಡ್ಡ ಗಾತ್ರದವು ಹೆಚ್ಚಿನ ದರವನ್ನು ಪಡೆಯುತ್ತವೆ.

ಪಾರಿಸರಿಕ ಪರಿಣಾಮಗಳು[ಬದಲಾಯಿಸಿ]

ನದೀಮುಖದಲ್ಲಿಯ ಮ್ಯಾಂಗ್ರೋವ್ ಅನೇಕ ಪ್ರಾಣಿಗಳು ಮತ್ತು ಸಸ್ಯಗಳಿಗೆ ನೆಲೆಯನ್ನು ಒದಗಿಸುತ್ತದೆ.
ಎರಡು ಕೃತಕ-ಬಣ್ಣದ ಚಿತ್ರಗಳು 1987 ಮತ್ತು 1999ರ ನಡುವೆ ಹೊಂಡುರಾಸ್್ನ ಪೆಸಿಫಿಕ್ ತೀರದಲ್ಲಿ ನೈಸರ್ಗಿಕವಾದ ಮ್ಯಾಂಗ್ರೋವ್್ಗಳು ಸೀಗಡಿ ಸಾಕಾಣಿಕೆ ಕೇಂದ್ರಗಳಾಗಿ ಬದಲಾಗಿರುವುದನ್ನು ತೋರಿಸುತ್ತವೆ. ಸೀಗಡಿ ಸಾಕಣೆ ಕೇಂದ್ರಗಳು ಆಯತಾಕಾರದ ಸಾಲುಗಳಂತೆ ಕಾಣುತ್ತವೆ.ಹಳೆಯ ಚಿತ್ರದಲ್ಲಿ (ಕೆಳಗೆ), ಮ್ಯಾಂಗ್ರೋವ್ ಕೆಸರಿನ ಪಟ್ಟಿ ಅನೇಕ ನದಿಗಳ ಮುಖಜ ಪ್ರದೇಶದಲ್ಲಿ ಕಂಡುಬರುತ್ತವೆ; ಒಂದು ಸೀಗಡಿ ಸಾಕಾಣಿಕೆ ಕೇಂದ್ರವು ಈಗಾಗಲೆ ಮೇಲ್ಭಾಗದ ಎಡದ ಕೋನದ ತುದಿಯಲ್ಲಿ ಕಾಣುತ್ತಿದೆ.1999ರ ವೇಳೆಗೆ (ತುದಿಯ ಚಿತ್ರ), ಪ್ರದೇಶದ ಬಹುಭಾಗವು ಸೀಗಡಿ ಸಾಕಾಣಿಕೆಯ ಹೊಂಡದ ವಿಭಾಗಗಳಾಗಿ ಬದಲಾಗಿದ್ದವು.
ಇಂಡೋನೇಶಿಯಾದಲ್ಲಿ ಸೀಗಡಿ ಸಾಕಾಣಿಕೆ ಕೇಂದ್ರದ ಹೊಂಡವೊಂದರಲ್ಲಿ ಕುಯಿಲು ಮುಗಿದ ಬಳಿಕ ಹೊಂಡದ ತಳದಿಂದ ವಿಷಯುಕ್ತ ಕೆಸರು ಸೋರಿಹೋಗುತ್ತಿರುವುದು. ಇಂಥ ಕಲುಷಿತಗೊಂಡಿರುವ ಹೊಂಡವು ಸೀಗಡಿಯ ಬೆಳವಣಿಗೆಗೆ ಅಡ್ಡಿಯನ್ನುಂಟುಮಾಡಿದೆ. ಮತ್ತು ಸಾವಿನ ಪ್ರಮಾಣವನ್ನು ಹೆಚ್ಚಿಸಿದೆ; ಪ್ಲವಕದ ಬೆಳವಣಿಗೆಯೂ ತೀವ್ರವಾಗಿ ಕಡಿಮೆಯಾಗಿದೆ.[೫೧] ಇದಕ್ಕೆ ಪ್ರತಿಕ್ರಿಯಾತ್ಮಕವಾಗಿ ಸುಣ್ಣವನ್ನು ಬಳಸಬಹುದು ಸುಣ್ಮವನ್ನು ಬಳಸಬಹುದು. ಆಮ್ಲ ಮೇಲ್ಪದರ ಮಣ್ಣಿನ ಹೊಂಡದಲ್ಲಿ ನೀರು ಆಮ್ಲೀಕರಣವಾಗಬಹುದು,[೫೨] ಇಂಥ ಮ್ಯಾಂಗ್ರೋವ್ ಮಣ್ಣುಗಳು.[೫೩]

ಬೃಹತ್್ಪ್ರಮಾಣದಿಂದ ಹಿಡಿದು ಅತ್ಯುತ್ತಮ- ಅಧಿಕೋತ್ಪಾದನೆಯವರೆಗೆ ಎಲ್ಲ ರೀತಿಯ ಸೀಗಡಿ ಸಾಕಾಣಿಕೆ ಕೇಂದ್ರಗಳು ಎಲ್ಲೆಲ್ಲಿ ಇವೆಯೋ ಅಲ್ಲೆಲ್ಲ ಗಂಭೀರ ಸ್ವರೂಪದ ಪಾರಿಸರಿಕ ಸಮಸ್ಯೆಗೆ ಕಾರಣವಾಗಿವೆ. ಬೃಹತ್್ಪ್ರಮಾಣದ ಸಿಗಡಿ ಸಾಕಣೆ ಕೇಂದ್ರಗಳಿಗೆ, ಮ್ಯಾಂಗ್ರೋವ್್ಗಳು ಬೆಳೆಯುವ ದೊಡ್ಡ ಪ್ರಮಾಣದ ಪ್ರದೇಶವನ್ನು ಸ್ವಚ್ಛಗೊಳಿಸಬೇಕಾಗುತ್ತದೆ. ಇದು ಜೀವವೈವಿಧ್ಯವನ್ನು ಕಡಿಮೆ ಮಾಡುತ್ತದೆ. 1980 ಮತ್ತು 1990ರ ದಶಕದಲ್ಲಿ ಜಗತ್ತಿನ ಮ್ಯಾಂಗೋವರ್ ಅರಣ್ಯದ ಶೇ.35 ಭಾಗ ನಾಶವಾಗಿದ್ದವು. ಸೀಗಡಿ ಸಾಕಾಣಿಕೆಯೇ ಇದರ ಪ್ರಮುಖ ಕಾರಣವಾಗಿತ್ತು. ಒಂದು ಅಧ್ಯಯನದ ಪ್ರಕಾರ ಮೂರರಲ್ಲಿ ಒಂದು ಭಾಗಕ್ಕೆ ಇದೇ ಕಾರಣ;[೫೪] ಇತರ ಅಧ್ಯಯನಗಳ ವರದಿಗಳು ಜಗತ್ತಿನಾದ್ಯಂತ ಶೇ.5ರಿಂದ ಶೇ.10ರ ನಡುವೆ ಹೇಳುತ್ತವೆ. ಇದಕ್ಕೆ ಅನಂತ ಪ್ರಾದೇಶಿಕವಾಗಿ ವೈವಿಧ್ಯತೆ ಇದೆ. ಮ್ಯಾಂಗ್ರೋವ್ ನಾಶವಾಗುವುದಕ್ಕೆ ಇರುವ ಇತರ ಕಾರಣಗಳಲ್ಲಿ ಜನಸಂಖ್ಯೆಯ ಒತ್ತಡವೂ ಒಂದು. ಮರಗಳನ್ನು ಕಟಾವು ಮಾಡುವುದು, ಉದ್ಯಮಗಳಿಂದಾಗುವ ಮಾಲಿನ್ಯ ಅಥವಾ ಉಪ್ಪು ತಯಾರಿಕೆ ಹೊಂಡ ಇತ್ಯಾದಿ ಅನ್ಯ ಕಾರಣಕ್ಕೆ ಬಳಸಿ ಕೊಂಡಿರುವುದು ಇನ್ನಿತರ ಕಾರಣಗಳು.[೧] ಮ್ಯಾಂಗ್ರೋವ್್ಗಳು ತಮ್ಮ ಬೇರುಗಳ ಮೂಲಕ ಕರಾವಳಿಗೆ ಒಂದು ಸ್ಥಿರತೆಯನ್ನು ತಂದುಕೊಡುತ್ತದೆ ಮತ್ತು ಅವು ಮಣ್ಣಿನ ಗಸಿಯನ್ನು ಶೇಖರಿಸಿಡುತ್ತವೆ; ಅವುಗಳನ್ನು ತೆಗೆದುಹಾಕುವುದರಿಂದ ಭೂಮಿಯ ಸವಕಳಿಗೆ ದಾರಿಯಾಗುತ್ತದೆ, ಪ್ರವಾಹ ಬಂದಾಗ ದೊರೆಯುವ ರಕ್ಷಣೆ ಕಡಿಮೆಯಾಗುತ್ತದೆ. ಮ್ಯಾಗ್ರೋವ್್ಗಳಿರುವ ನದೀಮುಖದ ಭೂಮಿ ಕೂಡ ವಿಶೇಷವಾಗಿ ಫಲವತ್ತಾಗಿರುತ್ತವೆ ಮತ್ತು ಪರಿಸರ ವ್ಯವಸ್ಥೆಗೆ ಉತ್ಪಾದಕತೆಯಿಂದ ಕೂಡಿರುತ್ತದೆ ಮತ್ತು ಮೀನಿನ ಅನೇಕ ತಳಿಗಳಿಗೆ ಮೊಟ್ಟೆಯನ್ನಿಡುವ ನೆಲೆಯಾಗುತ್ತದೆ, ಇವುಗಳಲ್ಲಿ ಅನೇಕವು ವಾಣಿಜ್ಯದ ದೃಷ್ಟಿಯಲ್ಲಿ ಮಹತ್ವವಾದವು.[೩] ಅನೇಕ ದೇಶಗಳು ತಮ್ಮ ಮ್ಯಾಂಗ್ರೋವ್್ಗಳನ್ನು ರಕ್ಷಿಸಿಕೊಂಡಿವೆ ಮತ್ತು ಹೊಸದಾಗಿ ಸೀಗಡಿ ಸಾಕಾಣಿಕೆ ಕೇಂದ್ರಗಳನ್ನು ಉಬ್ಬರವಿಳಿತವಿರುವ ಮತ್ತು ಮ್ಯಾಂಗ್ರೋವ್ ಇರುವ ಪ್ರದೇಶದಲ್ಲಿ ಆರಂಭಿಸದಂತೆ ನಿಷೇಧಿಸಿವೆ. ಅದಕ್ಕೆ ಸೂಕ್ತವಾದ ಕಾಯಿದೆಗಳನ್ನು ಜಾರಿಗೆ ತರುವುದು ಕೆಲವೊಮ್ಮೆ ಸಮಸ್ಯೆಗೆ ದಾರಿಮಾಡುತ್ತದೆ. ಹೀಗಿದ್ದರೂ ಕಡಿಮೆ ಅಭಿವೃದ್ಧಿಯನ್ನು ಹೊಂದಿರುವ ದೇಶಗಳಾದ ಬಾಂಗ್ಲಾದೇಶ, ಮ್ಯಾನ್ಮಾರ್ ಅಥವಾ ವಿಯೆಟ್ನಾಮ್್ಗಳಲ್ಲಿ ಅದರಲ್ಲೂ ಮ್ಯಾನ್ಮಾರದ ಕರಾವಳಿಯ ಮ್ಯಾಂಗೋವರ್್ಗಳನ್ನು ಸೀಗಡಿ ಸಾಕಾಣಿಕೆ ಪ್ರದೇಶವನ್ನಾಗಿ ಮಾಡುವುದು ಒಂದು ವಿವಾದವಾಗಿದೆ.[೧]

ಅಧಿಕೋತ್ಪಾದನೆಯ ಸಾಕಾಣಿಕೆ ಕೇಂದ್ರಗಳು ಮ್ಯಾಂಗೋವರ್್ಗಳ ಮೇಲೆ ಆಗುವ ನೇರ ಪರಿಣಾಮವನ್ನು ಕಡಿಮೆ ಮಾಡುವಾಗ ಇತರ ಸಮಸ್ಯೆಗಳನ್ನು ಎದುರಿಸಿವೆ. ಅವರ ಪೋಷಕಾಂಶ ಭರಿತ ಹೊರಸಾಗುವ ನೀರಿನ ಪ್ರವಾಹವು (ಔದ್ಯಮಿಕವಾದ ಸೀಗಡಿಯ ಆಹಾರವು ತ್ವರಿತವಾಗಿ ವಿದಳನವಾಗಿಬಿಡುವವು. ಇದರಲ್ಲಿ ನಿಜಕ್ಕೂ ಸೀಗಡಿಗಳು ತಿನ್ನುವುದು ಶೇ.30 ಭಾಗ ಮಾತ್ರ. ಇದು ಸೀಗಡಿ ಸಾಕುವ ರೈತರಿಗೆ ಆರ್ಥಿಕವಾಗಿ ನಷ್ಟವೇ. ಉಳಿದ ಭಾಗ ವ್ಯರ್ಥವಾಗಿ ಹೋಗುವುದು.[೨]) ಅದೇ ನಮೂನೆಯಲ್ಲಿ ಪರಿಸರಕ್ಕೆ ಸೇರುತ್ತದೆ, ಇದು ಗಂಭೀರ ಸ್ವರೂಪದಲ್ಲಿ ಪರಿಸರ ಸಮತೋಲನವನ್ನು ಹಾಳುಮಾಡುತ್ತದೆ. ಈ ತ್ಯಾಜ್ಯ ನೀರಿನಲ್ಲಿ ಗಣನೀಯ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಪ್ರತಿಜೀವಾಣುಗಳು ಇರುತ್ತವೆ. ಇವು ಪರಿಸರಕ್ಕೆ ಮಾಲಿನ್ಯವನ್ನು ತಂದೊಡ್ಡುತ್ತವೆ. ಇನ್ನೂ ಹೆಚ್ಚಿನದೆಂದರೆ ಪ್ರತಿಜೀವಾಣುಗಳನ್ನು ಈ ರೀತಿ ಹೊರಬಿಡುವುದರಿಂದ ಅವು ಆಹಾರ ಸರಪಳಿಯಲ್ಲಿ ಸೇರಿಕೊಂಡು ಬ್ಯಾಕ್ಟೀರಿಯಾಗಳು ಅವನ್ನು ಎದುರಿಸುವ ಪ್ರತಿರೋಧ ಸಾಮರ್ಥ್ಯವನ್ನು ಪಡೆದುಕೊಳ್ಳುವ ಅಪಾಯವಿದೆ.[೫೫] ಹೀಗಿದ್ದರೂ ನೀರಿನಲ್ಲಿರುವ ಬಹುತೇಕ ಬ್ಯಾಕ್ಟೀರಿಯಾಗಳು ಭೂಮಿಯ ಮೇಲ್ಭಾಗದಲ್ಲಿ ಪ್ರಾಣಿಗಳಿಗೆ ಸಂಬಂಧಿಸಿದ ಬ್ಯಾಕ್ಟೀರಿಯಾಗಳಂತೆ ಒಂದು ಪ್ರದೇಶಕ್ಕೆ ಸೀಮಿತವಾಗಿ ಇರುವುದಿಲ್ಲ, ಅವು ಪ್ರಾಣಿಗಳಿಂದ ಮನುಷ್ಯನಿಗೆ ಹಬ್ಬುವುದಿಲ್ಲ. ಕೆಲವೇ ರೋಗಗಳು ಪ್ರಾಣಿಗಳಿಗೆ ಮನುಷ್ಯನಿಗೆ ಹಬ್ಬಿರುವ ಬಗ್ಗೆ ವರದಿಯಾಗಿದೆ.[೫೬]

ಒಂದು ಹೊಂಡವನ್ನು ದೀರ್ಘಕಾಲದ ವರೆಗೆ ಬಳಸುವುದರಿಂದ ಹೊಂಡದ ತಳದಲ್ಲಿ ತ್ಯಾಜ್ಯವಸ್ತುಗಳು ಮತ್ತು ಸೀಗಡಿಯ ಮಲದಿಂದ ಗಸಿ ಶೇಖರಣೆಯಾಗುತ್ತದೆ.[೫೭] ಈ ಗಸಿಯನ್ನು ಯಂತ್ರಗಳ ಮೂಲಕ ತೆಗೆದುಹಾಕಬಹುದು ಅಥವಾ ಕನಿಷ್ಠ ಆಮ್ಲದ ಸಮಸ್ಯೆ ಇಲ್ಲದೆ ಇರುವಲ್ಲಿ ಅದನ್ನು ಒಣಗಲು ಬಿಟ್ಟು ಉಳುಮೆ ಮಾಡಿ ಜೈವಿಕವಾಗಿ ಗೊಬ್ಬರವಾಗಲು ಬಿಡಬಹುದು. ಹೊಂಡದಲ್ಲಿ ನೀರನ್ನು ರಭಸದಿಂದ ಹರಿಸುವುದರಿಂದ ಗಸಿಯನ್ನು ಸಂಪೂರ್ಣವಾಗಿ ಹೊರಹಾಕಲು ಆಗುವುದಿಲ್ಲ. ಮತ್ತು ಅಂತಿಮವಾಗಿ, ಹೊಂಡವು ಪರಿತ್ಯಕ್ತವಾಗುತ್ತದೆ. ಇದು ಬಂಜರು ಭೂಮಿಯಾಗುತ್ತದೆ, ಇದರ ಮಣ್ಣನ್ನು ಯಾವುದೇ ಉದ್ದೇಶಕ್ಕೆ ಬಳಸುವಂತಿಲ್ಲ ಏಕೆಂದರೆ, ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಉಪ್ಪಿನಂಶ, ಆಮ್ಲೀಯ ಗುಣ ಮತ್ತು ವಿಷಯುಕ್ತ ರಾಸಾಯನಿಕಗಳು ಇರುತ್ತವೆ. ಬೃಹತ್್ ಪ್ರಮಾಣದ ಸೀಗಡಿ ಸಾಕಾಣಿಕೆ ಕೇಂದ್ರದ ಮಾದರಿಯ ಹೊಂಡವೆಂದರೆ ಅದನ್ನು ಅದನ್ನು ಕೆಲವು ವರ್ಷ ಮಾತ್ರ ಬಳಸಿ ಬಿಡುವುದು. ಭಾರತೀಯ ಅಧ್ಯಯನವೊಂದು ಅಂದಾಜು ಮಾಡಿದ ಸಮಯವೆಂದರೆ ಸುಮಾರು 30 ವರ್ಷಗಳ ವರೆಗೆ ಮಾತ್ರ ಇಂಥ ಭೂಮಿಯನ್ನು ಬಳಸಬೇಕು. ಮತ್ತು ಪುನರ್ನೆಲೆ ಕಂಡುಕೊಳ್ಳಬೇಕು.[೩] 1999ರಿಂದ ಥೈಲ್ಯಾಂಡ್ ಒಳನಾಡು ಸೀಗಡಿ ಸಾಕಾಣಿಕೆ ಕೇಂದ್ರವನ್ನು ನಿಷೇಧಿಸಿದೆ. ಏಕೆಂದರೆ ಲವಣಾಂಶವು ಹೆಚ್ಚುವುದರಿಂದ ಅವು ಬಹಳಷ್ಟು ಕೃಷಿಭೂಮಿಯನ್ನು ನಾಶಮಾಡಿವೆ.[೮] ಒಂದು ಥೈ ಅಧ್ಯಯನದ ಪ್ರಕಾರ ಥೈಲ್ಯಾಂಡಿನ ಸೀಗಡಿ ಸಾಕಾಣಿಕೆಯ ಪ್ರದೇಶದ ಶೇ.60 ಭಾಗವು 1989-1996ರ ನಡುವೆ ನಿರುಪಯುಕ್ತವಾಗಿದೆ.[೪] ಈ ಸಮಸ್ಯೆಗಳಲ್ಲಿ ಬಹಳಷ್ಟು ಮ್ಯಾಂಗ್ರೋವ್ ಭೂಮಿಯನ್ನು ಬಳಸುವುದರ ಮೂಲದಲ್ಲಿಯೇ ಇವೆ. ಅವು ಅತ್ಯಂತ ನೈಸರ್ಗಿಕವಾದ ಪೈರಿಟಿ ಅಂಶವನ್ನು (ಆಮ್ಲ ಮೇಲ್ಮಟ್ಟದ ಮಣ್ಣು) ಹೊಂದಿರುತ್ತವೆ ಮತ್ತು ಅತ್ಯಂತ ಕಡಿಮೆಯಾಗಿ ನೀರು ಬಸಿದುಹೋಗುವ ಗುಣವನ್ನು ಹೊಂದಿರುತ್ತವೆ. ಅರೆ-ಅಧಿಕೋತ್ಪತ್ತಿಯ ಸೀಗಡಿ ಸಾಕಾಣಿಕೆಗೆ ತೆರೆದುಕೊಳ್ಳುವುದಕ್ಕೆ ಉನ್ನತವಾದ ಎತ್ತರದ ಸ್ಥಳವು ನೀರು ಬಸಿದು ಹೋಗುವ ಕೃಷಿಗೆ ಬೇಕಾಗುತ್ತದೆ. ಮತ್ತು ಕಡಿಮೆ ಸಲ್ಫೈಡ್ (ಪೈರಿಟೆ) ಅಂಶವು ಮಣ್ಣು ಆಮ್ಲಜನವಿಲ್ಲದೆ ಬದುಕುವ ಜೀವಿಗಳಿಂದ ಆಮ್ಲಜನಕವಿದ್ದರೆ ಮಾತ್ರ ಬದುಕುವ ಸ್ಥಿತಿಗೆ ಬದಲಾಗುವಾಗ ಆಮ್ಲವು ಶೇಖರಣೆಯಾಗುವುದನ್ನು ತಡೆಯಲು ಬೇಕಾಗುತ್ತದೆ.

ಸೀಗಡಿ ಸಾಕಾಣಿಕೆಯ ಜಾಗತಿಕ ಸ್ವರೂಪವು ವಾಣಿಜ್ಯದ್ದು ಮತ್ತು ಸೀಗಡಿ ಮೊಟ್ಟೆಗಳು ಮತ್ತು ಮೊಟ್ಟೆ ಮಾಡುವ ಕೇಂದ್ರದ ಉತ್ಪನ್ನಗಳನ್ನು ಜಗತ್ತಿನ ಎಲ್ಲೆಡೆ ಸಾಗಿಸುವುದು. ಇವು ವಿವಿಧ ತಳಿಗಳನ್ನು ವಿದೇಶಿ ತಳಿಗಳೆಂದು ಪರಿಚಯಿಸಿದ್ದು ಮಾತ್ರವಲ್ಲ ಇವು ಸೀಗಡಿಗಳಿಗೆ ಬರುವ ರೋಗಗಳನ್ನೂ ಜಗತ್ತಿನಾದ್ಯಂತ ಪಸರಿಸಿದವು. ಇಂಥ ಸನ್ನಿವೇಶದಲ್ಲಿ ಬಹುತೇಕ ಮೊಟ್ಟೆಗಳ ದಾಸ್ತಾನು ಹೊರದೇಶಕ್ಕೆ ಹೋಗುವಾಗ ವೈದ್ಯಕೀಯ ಪ್ರಮಾಣ ಪತ್ರದ ಅಗತ್ಯ ತಲೆದೋರಿತು/ ಅಥವಾ ವಿಶಿಷ್ಟ ರೋಗಜನಕ ಮುಕ್ತ (ಎಸ್್ಪಿಎಫ್) ಸ್ಥಿತಿ ಹೊಂದಬೇಕಾಯಿತು. ಅನೇಕ ಸಂಘಟನೆಗಳು ಸಾಕಿದ ಸೀಗಡಿಗಳನ್ನು ಗ್ರಾಹಕರು ಖರೀದಿಸದಂತೆ ಮಾಡಲು ಸಕ್ರಿಯವಾಗಿ ಲಾಬಿ ನಡೆಸಿದವು. ಕೆಲವರು ಇನ್ನೂ ಹೆಚ್ಚು ತಾಳಿಕೆ ಬರುವ ಸಾಕಾಣಿಕೆ ಪದ್ಧತಿಗಳನ್ನು ಅಭಿವೃದ್ಧಿಪಡಿಸುವ ಬಗ್ಗೆ ವಾದಿಸಿದರು.[೫೮] ವಿಶ್ವಬ್ಯಾಂಕಿನ ಒಂದು ಜಂಟಿ ಕಾರ್ಯಕ್ರಮವಾಗಿ ಸೀಗಡಿ ಸಾಕಾಣಿಕೆಯ ಸುಧಾರಿತ ಕ್ರಮಗಳ ಬಗ್ಗೆ ಅಧ್ಯಯನ ಮಾಡುವ ಉದ್ದೇಶದೊಂದಿದೆ ನೆಟ್್ವರ್ಕ್ ಆಫ್ ಅಕ್ವಾಕಲ್ಚರ್ ಸೆಂಟರ್ಸ್ ಇನ್ ಏಶಿಯಾ-ಪೆಸಿಫಿಕ್ (ಎನ್ಎಸಿಎ), ಡಬ್ಲ್ಯೂಡಬ್ಲ್ಯೂಎಫ್ ಮತ್ತು ಎಫ್ಎಓಗಳನ್ನು 1999ರ ಆಗಸ್ಟ್್ನಲ್ಲಿ ಸ್ಥಾಪಿಸಲಾಯಿತು.[೫೯] ಸೀಗಡಿಯನ್ನು "ಪರಿಸರಕ್ಕೊಪ್ಪುವಂತೆಯೇ ಉತ್ಪಾದಿಸಿದ್ದು" ಎಂದು ಸದ್ಯ ಅಸ್ತಿತ್ವದಲ್ಲಿದ್ದ ಕೆಲವು ಸಮರ್ಥನೀಯವಾದ ಪ್ರಯತ್ನಗಳನ್ನು ಎನ್್ಜಿಓಗಳು, ಅಪ್ರಾಮಾಣಿಕವಾದವು ಮತ್ತು ಕೆಲಸಕ್ಕೆ ಬಾರದ ಆಕರ್ಷಕ ಪ್ರದರ್ಶನಗಳು ಎಂದು ಟೀಕಿಸಿದವು.[೬೦]

1999ರ ಸುಮಾರಿಗೆ ಉದ್ಯಮವು ನಿಧಾನಕ್ಕೆ ಬದಲಾಗಲು ಆರಂಭಿಸಿತು. ಉದಾಹರಣೆಗೆ ಅದು ವಿಶ್ವಬ್ಯಾಂಕ್ ಕಾರ್ಯಕ್ರಮ ಅಭಿವೃದ್ಧಿಪಡಿಸಿದ "ಅತ್ಯುತ್ತಮ ಆಡಳಿತ ಪದ್ಧತಿಗಳ"ನ್ನು[೬೧] ಅಳವಡಿಸಿಕೊಂಡಿತು. ಮತ್ತು ಇತರ ಕಾರ್ಯಕ್ರಮಗಳನ್ನು.[೬೨] ಮತ್ತು ಅವರನ್ನು ಪ್ರೋತ್ಸಾಹಿಸಲು ಶೈಕ್ಷಣಿಕ ಕಾರ್ಯಕ್ರಮಗಳನ್ನು ಆರಂಭಿಸಿತು.[೬೩] ಮ್ಯಾಂಗ್ರೋವ್ ರಕ್ಷಣೆ ಕಾನೂನುಗಳನ್ನು ಅನೇಕ ದೇಶಗಳು ಜಾರಿಗೆ ತಂದಿದ್ದರಿಂದ ಹೊಸ ಸಾಕಾಣಿಕೆ ಕೇಂದ್ರಗಳು ಅರೆ-ಅಧಿಕೋತ್ಪತ್ತಿಯ ಸ್ವರೂಪದವು, ಇವನ್ನು ಮ್ಯಾಂಗ್ರೋವ್ ಪ್ರದೇಶದ ಹೊರಗಡೆಯೇ ಅತ್ಯುತ್ತಮವಾಗಿ ನಿರ್ಮಿಸಿದವು. ಈ ಸಾಕಾಣಿಕೆ ಕೇಂದ್ರಗಳಲ್ಲಿ ಉತ್ತಮ ರೋಗ ನಿಯಂತ್ರಣವನ್ನು ಸಾಧಿಸುವ ಉದ್ದೇಶದಿಂದ ಇನ್ನೂ ಕಟ್ಟುನಿಟ್ಟಾದ ನಿಯಂತ್ರಣದ ವಾತಾವರಣವನ್ನು ನಿರ್ಮಿಸುವ ಪ್ರವೃತ್ತಿ ಆರಂಭವಾಯಿತು.[೫] ತ್ಯಾಜ್ಯ ನಿರ್ವಹಣೆಯು ಗಮನಾರ್ಹವಾದ ರೀತಿಯಲ್ಲಿ ಆಕರ್ಷಣೆಯನ್ನು ಪಡೆದುಕೊಂಡಿತು. ಆಧುನಿಕ ಸೀಗಡಿ ಸಾಕಾಣಿಕೆಯ ಕೇಂದ್ರವು ಮಾಮೂಲಿಯಾಗಿ ಹೊರಹರಿಯುವಿಕೆ ಸಂಸ್ಕರಣೆ ಹೊಂಡಗಳನ್ನು ಹೊಂದಿರುತ್ತವೆ. ಇಲ್ಲಿ ಕೆಸರು ತಳದಲ್ಲಿ ನೆಲೆಯಾಗಲು ಅವಕಾಶ ಕಲ್ಪಿಸಲಾಗುತ್ತದೆ.ಮತ್ತು ಉಳಿದವನ್ನು ಸೋಸಲಾಗುತ್ತದೆ. ಇಂಥ ಸುಧಾರಣೆಗಳು ದುಬಾರಿಯಾದುದರಿಂದ ವಿಶ್ವಬ್ಯಾಂಕ್ ಕಾರ್ಯಕ್ರಮವು ಕಡಿಮೆ ತೀವ್ರತೆಯ ಪಾಲಿಕಲ್ಚರ್ ಕೃಷಿಯನ್ನು ಕೆಲವು ಪ್ರದೇಶಗಳಲ್ಲಿ ಶಿಫಾರಸ್ಸು ಮಾಡಿದೆ. ಮ್ಯಾಂಗ್ರೋವ್ ಮಣ್ಣು ತ್ಯಾಜ್ಯ ನೀರನ್ನು ಸೋಸುವಲ್ಲಿ ಅತ್ಯಧಿಕ ನೈಟ್ರೇಟ್ ಪ್ರಮಾಣವನ್ನು ಸಹಿಸಿಕೊಳ್ಳುವಲ್ಲಿ ಪರಿಣಾಮಕಾರಿ ಎಂದು ಕಂಡುಹಿಡಿದ ಬಳಿಕ ಉದ್ಯಮವು ಮ್ಯಾಂಗ್ರೋವನ್ನು ಮರಳಿ ಬೆಳೆಯುವಲ್ಲಿಯೂ ಆಸಕ್ತಿಯನ್ನು ಬೆಳೆಸಿಕೊಂಡಿತು. ಹೀಗಿದ್ದರೂ ಈಕ್ಷೇತ್ರದಲ್ಲಿ ಅದರ ಕೊಡುಗೆ ಇನ್ನೂ ಅಲ್ಪವಾದ್ದು.[೧] ಈ ಶಿಫಾರಸ್ಸುಗಳ ದೀರ್ಘಕಾಲೀನ ಶಿಫಾರಸ್ಸುಗಳು ಮತ್ತು ಉದ್ಯಮದ ಪ್ರವೃತ್ತಿಗಳನ್ನು ಇದುವರೆಗೂ ನಿರ್ಣಾಯಕವಾಗಿ ಮೌಲ್ಯಮಾಪನ ಮಾಡಿಲ್ಲ.

ಸಾಮಾಜಿಕ ಬದಲಾವಣೆಗಳು[ಬದಲಾಯಿಸಿ]

ಸೀಗಡಿ ಸಾಕಾಣಿಕೆಯು ಅನೇಕ ಪ್ರಕರಣಗಳಲ್ಲಿ ಸ್ಥಳೀಯ ಕರಾವಳಿ ಜನರ ಬದುಕಿನಲ್ಲಿ ದೂರಗಾಮಿ ಪರಿಣಾಮಗಳನ್ನು ಉಂಟುಮಾಡಿದೆ. ಅದರಲ್ಲೂ ವಿಶೇಷವಾಗಿ ಭರಾಟೆಯ ವರ್ಷಗಳಾದ 1980 ಮತ್ತು 1990ರ ದಶಕದಲ್ಲಿ, ಆಗಿನ್ನೂ ಅನೇಕ ದೇಶಗಳಲ್ಲಿ ಈ ವಾಣಿಜ್ಯವನ್ನು ಕಾನೂನಿನ ಕಟ್ಟಳೆಗೆ ಒಳಪಡಿಸಿರಲಿಲ್ಲ, ಉದ್ಯಮದ ಅತ್ಯಂತ ತ್ವರಿತವಾದ ಬೆಳವಣಿಗೆಯು ಗಮನಾರ್ಹವಾದ ಬದಲಾವಣೆಗಳನ್ನು ಉಂಟುಮಾಡಿತು, ಇದು ಕೆಲವು ಸಲ ಸ್ಥಳೀಯ ಜನರಿಗೆ ವಿನಾಶಕಾರಿಯೂ ಆಗಿತ್ತು. ಸಂಘರ್ಷದ ಎರಡು ಮೂಲ ಕಾರಣಗಳನ್ನು ಹೀಗೆ ಗುರುತಿಸಬಹುದು: ಸಾಮಾನ್ಯ ಸಂಪನ್ಮೂಲವಾದ ಭೂಮಿ ಮತ್ತು ನೀರಿಗಾಗಿ ಸ್ಪರ್ಧೆ. ಮತ್ತು ಮತ್ತು ಸಂಪತ್ತಿನ ಮರು ಹಂಚಿಕೆಯಿಂದ ಬದಲಾವಣೆಗೆ ಮನವೊಲಿಸಲಾಗಿತ್ತು.

ಒಂದು ಗಮನಾರ್ಹವಾದ ಸಮಸ್ಯೆಯು ಕೆಲವು ಪ್ರದೇಶಗಳಲ್ಲಿ ಹೆಚ್ಚು ಸಂಘರ್ಷಕ್ಕೆ ಕಾರಣವಾಗಿತ್ತು. ಉದಾಹರಣೆಗೆ, ಬಾಂಗ್ಲಾದೇಶದಲ್ಲಿ ಭೂಮಿ ಬಳಕೆಯ ಹಕ್ಕುಗಳು. ಸೀಗಡಿ ಸಾಕಾಣಿಕೆಯೊಂದಿಗೇ ಕರಾವಳಿ ಪ್ರದೇಶಗಳಲ್ಲಿ ಹೊಸ ಉದ್ಯಮವೊಂದು ವಿಸ್ತರಣೆಯಾಯಿತು. ಈ ಹಿಂದೆ ಸಾರ್ವಜನಿಕ ಸಂಪನ್ಮೂಲಗಳಾಗಿದ್ದವುಗಳನ್ನು ಪ್ರತ್ಯೇಕವಾಗಿ ಬಳಸಿಕೊಳ್ಳಲು ಆರಂಭಿಸಿದವು. ಕೆಲವು ಪ್ರದೇಶಗಳಲ್ಲಿ ವ್ಯಾಪಕವಾದ ವಿಸ್ತರಣೆಯು ಸ್ಥಳೀಯ ಕರಾವಳಿ ಜನರು ತೀರಕ್ಕೆ ಹೋಗುವುದನ್ನೇ ನಿರ್ಬಂಧಿಸಿದಂತೆ ಆಯಿತು. ಸೀಗಡಿ ಸಾಕಾಣಿಕೆ ಕೇಂದ್ರಗಳ ಸತತವಾದ ಪಟ್ಟಿಯು ಸ್ಥಳೀಯ ಮೀನುಗಾರರ ಮೇಲೆ ಗಂಭೀರ ಪರಿಣಾಮವನ್ನುಂಟುಮಾಡಿದವು. ಇಂತಹ ಸಮಸ್ಯೆಗಳು ಕಳಪೆಯಾದ ಪಾರಿಸರಿಕ ಪದ್ಧತಿಗಳ ಆಚರಣೆಯಿಂದ ಉಲ್ಬಣವಾದವು. ಇದು ಸಾಮಾನ್ಯ ಸಂಪನ್ಮೂಲಗಳನ್ನು (ಹೊಂಡಗಳಲ್ಲಿಯ ಉಪ್ಪಿನಂಶವನ್ನು ಕಡಿಮೆ ಮಾಡಲು ಶುದ್ಧ ನೀರನ್ನು ವ್ಯಾಪಕವಾಗಿ ಬಳಸಿದ್ದರಿಂದ ನೀರಿನ ಮಟ್ಟವು ಕುಸಿಯಿತು ಮತ್ತು ಇದು ಭೂಮಿಯೊಳಗಿನ ಜಲಸ್ತರದಲ್ಲಿ ಉಪ್ಪಿನಂಶದ ನೀರು ಸೇರುವಂತೆ ಆಯಿತು.) ಅವನತಿಗೀಡುಮಾಡಿತು.[೬೪] ಬೆಳೆಯುತ್ತಿರುವ ಅನುಭವದಿಂದ, ದೇಶಗಳು ಸಾಮಾನ್ಯವಾಗಿ ಕಠಿಣವಾದ ಸರ್ಕಾರದ ನಿಯಮಗಳನ್ನು ಜಾರಿಗೆ ತಂದವು. ಮತ್ತು ಇಂಥ ಸಮಸ್ಯೆಗಳನ್ನು ಶಮನಗೊಳಿಸಲು ಕ್ರಮಗಳನ್ನು ಕೈಗೊಂಡವು, ಉದಾಹರಣೆಗೆ, ಭೂಮಿ ವಲಯಗಳ ಶಾಸನಗಳ ಮೂಲಕ. ತಡವಾಗಿ ಅಳವಡಿಸಿಕೊಂಡ ಕೆಲವರು, ಮುಂದಾಗಿಯೇ ಶಾಸನಗಳನ್ನು ಮಾಡಿಕೊಳ್ಳುವ ಮೂಲಕ ಕೆಲವು ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಉದಾ, ಮೆಕ್ಸಿಕೋ.[೫] ಮೆಕ್ಸಿಕೋದಲ್ಲಿಯ ಪರಿಸ್ಥಿತಿಯು ವಿಶಿಷ್ಟವಾದದ್ದು. ಇದಕ್ಕೆ ಕಾರಣ ಬಲವಾಗಿರುವ ಸರ್ಕಾರಿ-ನಿಯಂತ್ರಣಕ್ಕೊಳಪಟ್ಟ ಮಾರುಕಟ್ಟೆ. 1990ರ ದಶಕದ ಆದಿಯಲ್ಲಿ ಉದಾರೀಕರಣ ಆದರೂ ಬಹುತೇಕ ಸೀಗಡಿ ಸಾಕಾಣಿಕೆ ಕೇಂದ್ರಗಳನ್ನು ಇನ್ನೂ ಸ್ಥಳೀಯರು ಅಥವಾ ಸ್ಥಳೀಯ ಸಹಕಾರ ಸಂಘಗಳು (ejidos) ಮಾಲೀಕತ್ವ ಹೊಂದಿವೆ ಮತ್ತು ನಿಯಂತ್ರಣ ಹೊಂದಿವೆ.[೬೫]

ಜನರ ನಡುವೆ ಸಂಪತ್ತಿನ ಹಂಚಿಕೆಯು ಬದಲಾದ ಹಿನ್ನೆಲೆಯಲ್ಲಿ ಸಾಮಾಜಿಕವಾದ ತ್ವೇಷವು ಹುಟ್ಟಿಕೊಂಡಿತು. ಇದರ ಪರಿಣಾಮಗಳು ಸಮ್ಮಿಶ್ರವಾದವು. ಮತ್ತು ಈ ಸಮಸ್ಯೆಗಳು ಕೇವಲ ಸೀಗಡಿ ಸಾಕಣೆಯವರಿಗೆ ಮಾತ್ರ ವಿಶಿಷ್ಟವಾದದ್ದು ಏನಲ್ಲ. ಹಣಕಾಸಿನ ಹಂಚಿಕೆಯು ಬದಲಾದ ಕಾರಣ ಒಂದು ಸಮುದಾಯದಲ್ಲಿ ಅಧಿಕಾರದ ಸ್ವರೂಪ ಬದಲಾಗುವುದಕ್ಕೆ ಪ್ರೇರಣೆಯಾಯಿತು. ಕೆಲವು ಪ್ರಕರಣಗಳಲ್ಲಿ ಸಾಮಾನ್ಯ ಜನಸಮೂಹಕ್ಕೂ ಸಾಗಡಿ ಕೃಷಿಯಲ್ಲಿ ತೊಡಗಿಕೊಂಡು ಸುಲಭವಾಗಿ ಸಾಲಗಳು, ಸಬ್ಸಿಡಿಗಳು ಮತ್ತು ಪರ್ಮಿಟ್್ಗಳನ್ನು ಮತ್ತು ಹೆಚ್ಚು ಅನುಕೂಲಗಳನ್ನು ದೊರಕಿಸಿಕೊಂಡ ಸ್ಥಳೀಯ ಗಣ್ಯರ ನಡುವೆ ಅಂತರ ಹೆಚ್ಚುತ್ತ ಹೋಯಿತು.[೬೬] ಬಾಂಗ್ಲಾದೇಶದಲ್ಲಿ ಇನ್ನೊಂದೆಡೆ, ಸ್ಥಳೀಯ ಗಣ್ಯರು ನಗರ ಪ್ರದೇಶದ ಗಣ್ಯರೇ ಹೆಚ್ಚಾಗಿ ನಿಯಂತ್ರಣ ಹೊಂದಿದ್ದ ಸೀಗಡಿ ಸಾಕಾಣಿಕೆಗೆ ವಿರೋಧ ವ್ಯಕ್ತಪಡಿಸಿದರು.[೬೭] ಕೆಲವೇ ಜನರ ಕೈಯಲ್ಲಿ ಭೂಮಿಯು ಕೇಂದ್ರೀಕೃತವಾಗುವುದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಹೆಚ್ಚುವುದಕ್ಕೆ, ಅದರಲ್ಲೂ ಭೂಮಿಯ ಮಾಲೀಕರು ಸ್ಥಳೀಯರಲ್ಲದವರಿದ್ದಾಗ ಉಂಟಾಗುವ ಸಮಸ್ಯೆಯನ್ನು ಗುರುತಿಸಲಾಯಿತು.[೬೬]

ಒಟ್ಟಾರೆಯಾಗಿ, ಸೀಗಡಿ ಸಾಕಾಣಿಕೆಯನ್ನು ಚೆನ್ನಾಗಿಯೇ ಒಪ್ಪಿಕೊಳ್ಳಲಾಗಿದೆ. ಅತ್ಯಂತ ಸುಲಭವಾಗಿಯೇ ಅದನ್ನು ಪರಿಚಯಿಸಲಾಗಿದೆ. ಭೂಮಿಯು ದೂರದೂರಿನ ಗಣ್ಯರಿಂದ ಅಥವಾ ಕಂಪನಿಗಳಿಂದ ನಿಯಂತ್ರಿಸಲ್ಪಡುವ ಬದಲು ಸ್ಥಳೀಯರೇ ಭೂಮಿಯ ಮಾಲೀಕರಾಗಿದ್ದಾಗ ಅತ್ಯಧಿಕ ಲಾಭವು ಸ್ಥಳೀಯ ಜನರಿಗೆ ದೊರೆತಿದೆ. ಏಕೆಂದರೆ ಸ್ಥಳೀಯ ಮಾಲೀಕರಿಗೆ ಪರಿಸರ ನಿರ್ವಹಣೆಯನ್ನು ಮಾಡುವುದರಲ್ಲಿ ಮತ್ತು ತಮ್ಮ ನೆರೆಹೊರೆಯವರೊಂದಿಗೆ ಉತ್ತಮ ಸಂಬಂಧಗಳನ್ನು ಕಾಯ್ದುಕೊಂಡು ಹೋಗುವುದರಲ್ಲಿ ನೇರ ಆಸಕ್ತಿಯನ್ನು ಹೊಂದಿರುತ್ತಾರೆ. ಮತ್ತು ಏಕೆಂದರೆ ಇದು ದೊಡ್ಡ ಪ್ರಮಾಣದಲ್ಲಿ ಭೂ ಆಸ್ತಿಯ ನಿರ್ಮಾಣವನ್ನು ಇದು ತಪ್ಪಿಸುತ್ತದೆ.[೬೮]

ಇವನ್ನೂ ಗಮನಿಸಿ[ಬದಲಾಯಿಸಿ]

Page ಮಾಡ್ಯೂಲ್:Portal/styles.css has no content.

 • ಸಿಹಿನೀರಿನ ಸೀಗಡಿ ಸಾಕಾಣಿಕೆಯ ಅನೇಕ ಗುಣಲಕ್ಷಣಗಳು ಮತ್ತು ಸಮಸ್ಯೆಗಳು ಉಪ್ಪು ನೀರಿನ ಸೀಗಡಿ ಸಾಕಾಣಿಕೆಯೊಂದಿಗೆ ಹೋಲುತ್ತವೆ. ವಿಶಿಷ್ಟವಾದ ಸಮಸ್ಯೆಗಳು ಪ್ರಮುಖ ತಳಿಗಳನ್ನು (ದೈತ್ಯ ನದಿ ಸೀಗಡಿ, ಮೈಕ್ರೋಬ್ರಾಚಿಯಂ ರೋಸೆನ್್ಬರ್ಜಿ ) ಪರಿಚಯಿಸಿದಾಗ ಅಭಿವೃದ್ದಿಯ ಜೀವನಚಕ್ರದಲ್ಲಿ ತಲೆದೋರಿದವು.[೬೯] ಸಿಹಿನೀರು ಸಿಗಡಿಯ ಜಾಗತಿಕ ವಾರ್ಷಿಕ ಉತ್ಪಾದನೆಯು (ಸಣ್ಣ ಮುಳ್ಳು ನಳ್ಳಿ ಮತ್ತು ಎಸಡಿಯನ್ನು ಹೊರತುಪಡಿಸಿ) 2003ರಲ್ಲಿ ಸುಮಾರು 280,000 ಟನ್್ಗಳಷ್ಟಿತ್ತು. ಇದರಲ್ಲಿ ಚೀನವು 1,80,000 ಟನ್ನುಗಳನ್ನು ಉತ್ಪಾದಿಸಿದರೆ ಅದರ ಹಿಂದೆ ಭಾರತ ಮತ್ತು ಥೈಲ್ಯಾಂಡ್್ಗಳು ತಲಾ 35 ಸಾವಿರ ಟನ್ನುಗಳನ್ನು ಉತ್ಪಾದಿಸಿದವು. ಚೀನವು ಸುಮಾರು 370,000 ಟನ್ನುಗಳಷ್ಟು ಚೈನೀಸ್ ಮಿಟ್ಟನ್ ಕ್ರ್ಯಾಬ್ (ಕೈಗವಸಿನಂತಹ ನಳ್ಳಿ- ಎರಿಯೋಚೆಯಿರ್ ಸಿನೆಸಿಸ್ ) ಉತ್ಪಾದಿಸಿತ್ತು.[೭೦]
 • ಸೀಗಡಿ ಮೀನುಗಾರಿಕೆ
 • ಕಡಲಕಳೆ ಚಿಪ್ಪುಜೀವಿ ಮೀನುಗಾರಿಕೆ

ಅಡಿ ಟಿಪ್ಪಣಿಗಳು[ಬದಲಾಯಿಸಿ]

^a ಶ್ರಿಂಪ್(ಉಪ್ಪುನೀರಿನ ಸೀಗಡಿ) ಮತ್ತು ಪ್ರಾವ್ನ್ (ಸಿಹಿ ನೀರಿಗ ಸೀಗಡಿ) ಇವುಗಳ ನಡುವಿನ ಅರ್ಥವ್ಯತ್ಯಾಸ ಮಸುಕಾಗಿರುವ ಕಾರಣ ಪರಿಭಾಷಾ ಶಾಸ್ತ್ರವು ಕೆಲವೊಮ್ಮೆ ಗೊಂದಲವನ್ನು ಹುಟ್ಟುಹಾಕುತ್ತದೆ.. ಉದಾಹರಣೆಗೆ ಎಫ್ಎಓ, ಪಿ.ಮೊನೋಡೋನ್ ಅನ್ನು "ಜೈಂಟ್ ಟೈಗರ್ ಪ್ರಾವ್ನ್" ಎಂದು ಕರೆಯುವದು. ಆದರೆ ಪಿ.ವನ್ನಾಮಿ ಯು "ವೈಟ್್ಲೆಗ್ ಶ್ರಿಂಪ್". ಇತ್ತೀಚಿನ ಜಲಚರ ಕೃಷಿ ಸಾಹಿತ್ಯವು ಪ್ರಾವ್ನ್ಅನ್ನು ಕೇವಲ ಸಿಹಿನೀರಿನ ರೂಪವಾದ ಪಾಲೆಮೊನಿಡ್್ಗಳಿಗೆ ಮತ್ತು ಶ್ರಿಂಪ್ಅನ್ನು ಉಪ್ಪುನೀರಿನ ಪೆನೇಡ್್ಗಳಿಗೆ ಹೆಚ್ಚಾಗಿ ಬಳಸುತ್ತಾರೆ.[೭]

^b ಬೆಳೆದ ಸೀಗಡಿಗಳು ತಳದಲ್ಲಿಯೇ ನೆಲೆಯಾಗುವುದರಿಂದ ಹೊಂಡದ ಸಂಗ್ರಹ ಸಾಂದ್ರತೆಯನ್ನು ಪ್ರತಿ ಪ್ರದೇಶದ ಲೆಕ್ಕದಲ್ಲಿ ನೀಡಲಾಗುತ್ತದೆಯೇ ಹೊರತು ನೀರಿನ ಪ್ರಮಾಣದ ಲೆಕ್ಕದಲ್ಲಿ ಅಲ್ಲ.

^c ಇಡೀ ಪೆನೆಯಸ್ ಕುಲದ ಜೀವಿವರ್ಗೀಕರಣ ಶಾಸ್ತ್ರ ಸಂತತ ಪರಿವರ್ತನೆಗೆ ಒಳಗಾಗುತ್ತಲೇ ಇದೆ. ಪೆರೆಜ್ ಫಾರ್್ಫಂಟೆ ಮತ್ತು ಕೆನ್್ಸ್ಲೇ[೭೧] ನಿರ್ದಿಷ್ಟವಾಗಿ ಜೀವವಾಹಿನಿಯ ಗುಣಲಕ್ಷಣಗಳ ಮೇಲೆ ರೂಪಾಂತರದ ಭಿನ್ನತೆಯನ್ನು ಆಧರಿಸಿ ಈ ಕುಲದ ಅನೇಕ ಜಾತಿಗಳನ್ನು ಹೊಸದದ ಕುಲದಲ್ಲಿ ಉಪವಿಭಾಗ ಅಥವಾ ಮರುಹೊಂದಾಣಿಕೆ ಮಾಡುವ ಉದ್ದೇಶ ಹೊಂದಿದ್ದಾರೆ. ನೋಡಿಪೆನೆಯಸ್ ಹೆಚ್ಚಿನ ಮಾಹಿತಿಗಾಗಿ ಇದರ ಪರಿಣಾಮವಾಗಿ ಕೆಲವು ಸಾಕಾಣಿಕೆ ಮಾಡಿದ ಜಾತಿಗಳು ಕುಲಗಳನ್ನು ಸೂಚಿಸುವ ಹೆಸರುಗಳಲ್ಲೂ ಇವೆ. ಸಾದಾ ಪೆನೆಯಸ್ ಬದಲಿಗೆ ಲೆಟೋಪೆನೆಯಸ್ , ಫಾರ್ಫಾಟೆಪೆನೆಯಸ್ , ಫೆನ್ನೆರೋಪೆನೆಯಸ್ , ಅಥವಾ ಮಾರ್ಸುಪೆನೆಯಸ್ . ಉದಾಹರಣೆಗೆ, ಪೆನೆಯಸ್ ವನ್ನಾಮಿ , ಲಿಟೋಪೆನೆಯಸ್ ವನ್ನಾಮಿ ಆಗಿದೆ.

^d ಸೀಗಡಿ ಸಾಕಾಣಿಕೆ ಕುರಿತು ನಿಖರವಾದ ಅಂಕಿಅಂಶಗಳು ಅಸ್ತಿತ್ವದಲ್ಲಿಲ್ಲ.[೭೨] FAO ಆಯಾದೇಶಗಳು ತಾವಾಗಿಯೇ ಬಿಡುಗಡೆ ಮಾಡುವ ವರದಿಗಳನ್ನು ತನ್ನ ಮೀನುಗಾರಿಕೆಯ ದತ್ತಾಂಶ ಸಂಗ್ರಹಗಳಿಗೆ ಅವಲಂಬಿಸಿದೆ; ಯಾವುದೇ ಅಂಕಿಅಂಶಗಳು ಲಭ್ಯವಿಲ್ಲದಿದ್ದರೆ, FAO ತನ್ನದೇ ಸ್ವಂತ "ಊಹೆಯ ಅಂಕಿ"ಗಳನ್ನು ತುಂಬುತ್ತದೆ. ಇಂಥ ಅಂದಾಜುಗಳನ್ನು ದತ್ತಾಂಶ ಸಂಗ್ರಹದಲ್ಲಿ ಸೇರಿಸಲಾಗಿದೆ. ಆದರೆ ಇವು ಖಂಡಿತವಾಗಿಯೂ ಈಗಾಗಲೆ ಸರ್ಕಾರಿ ಸಂಸ್ಥೆಗಳು ವರದಿ ಮಾಡಿದ ಅಂದಾಜುಗಳನ್ನು ಒಳಗೊಂಡಿದೆ. ಅನುಮಾನಾಸ್ಪದವಾಗಿ ಪೂರ್ಣ ಅಂಕಿಗಳಿದ್ದಲ್ಲಿ ಮಾತ್ರ ಇದನ್ನು ಗುರುತಿಸಬಹುದು.

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ ೧.೨ ೧.೩ ೧.೪ ೧.೫ ಲೂಯಿಸ್ et al.
 2. ೨.೦ ೨.೧ ೨.೨ ೨.೩ ರೋಸೆನ್್ಬರ್ರಿ, ಸಿಗಡಿ ಕೃಷಿ ಬಗ್ಗೆ .
 3. ೩.೦ ೩.೧ ೩.೨ ಇಂಟರ್್ ನ್ಯಾಶನಲ್ ಶ್ರಿಂಪ್ ಆ್ಯಕ್ಷನ್ ನೆಟ್್ವರ್ಕ್ 2000.
 4. ೪.೦ ೪.೧ ಹೊಸೇನ್ ಮತ್ತು ಲಿನ್, 2001.
 5. ೫.೦ ೫.೧ ೫.೨ ೫.೩ ೫.೪ ೫.೫ ೫.೬ ಮೆಕ್್ ಕ್ಲೆನ್ನನ್, 2004.
 6. ನೋವೆಲ್ಲಿ, 2003.
 7. ೭.೦ ೭.೧ ಇಂಡಿಯನ್ ಅಕ್ವಾಕಲ್ಚರ್ ಅಥಾರಿಟಿ, ಎನ್ವಿರಾನ್ ಮೆಂಟ್ ರಿಪೋರ್ಟ್ , ಅಧ್ಯಾಯ. 2.
 8. ೮.೦ ೮.೧ FAO, ಉಪ್ಪಿನಿಂದ ತೊಂದರೆಗೊಳಗಾದ ಮಣ್ಣಿನ ಪರಿಣಾಮಗಳು .
 9. ವಾನ್್ ವೈಕ್ et al. , ಮ್ಯಾನ್ಯುಅಲ್_ಅಧ್ಯಾಯ 4.ಪಿಡಿಎಫ್ HBOI ಮ್ಯಾನುಅಲ್ , ಅಧ್ಯಾಯ 4.
 10. ವಾನ್ ವೈಕ್ et al. , ಮ್ಯಾನುಅಲ್_ಅಧ್ಯಾಯ6.pdf HBOI ಮ್ಯಾನುಅಲ್ , ಅಧ್ಯಾಯ. 6
 11. ೧೧.೦ ೧೧.೧ ಟ್ರಾಕೋನ್, 2002.
 12. ಚೌಟರ್ಡ್ et al. , ಪುಟ. 39.
 13. ರೋಸೆನ್್ಬೆರ್ರಿ, ಕೃಷಿ ಮಾಡಿದ ಸೀಗಡಿಯ ಜಾತಿಪ್ರಭೇದ .
 14. ಜೋಸುಯಿಟ್, ಪುಟ. 8.
 15. ಬೊಂಡಾದ್-ರೀನ್್ಟಾಸೋ et al.
 16. ಗಲ್ಫ್್ ಸ್ಟೇಟ್ಸ್ ಮರೈನ್ ಫಿಶರೀಸ್ ಕಮಿಶನ್: ನಾನ್-ನೇಟಿವ್ ಸ್ಪೀಸಿಸ್ ಸಮರೀಸ್: ಯಲ್ಲೋಹೆಡ್ ವೈರಸ್ (YHV) , 2003. URL ಕೊನೆಯದಾಗಿ ಪ್ರವೇಶವಿದ್ದದ್ದು 2005-06-23. ಡಾಟಾ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ, ಪರಿಶೀಲನೆ ಬಾಕಿ ಇದೆ. ಕಡತ ಡಾಟಾದೊಂದಿಗೆ ಸಂಪರ್ಕ ಹೊಂದಿದೆ.
 17. OIE: ಅಕ್ವೆಟಿಕ್ ಮ್ಯಾನ್ಯುಅಲ್ , ಸೆಕ್ಸನ್. [ಶಾಶ್ವತವಾಗಿ ಮಡಿದ ಕೊಂಡಿ]2.2.7[ಶಾಶ್ವತವಾಗಿ ಮಡಿದ ಕೊಂಡಿ]. ಪರಿಷ್ಕರಿಸಿದ್ದು 2010-02-23.
 18. OIE: ಅಕ್ವಾಟಿಕ್ ಮ್ಯಾನ್ಯುಅಲ್ , ಸೆಕ್ಷನ್. [ಶಾಶ್ವತವಾಗಿ ಮಡಿದ ಕೊಂಡಿ]2.2.5[ಶಾಶ್ವತವಾಗಿ ಮಡಿದ ಕೊಂಡಿ]. ಪರಿಷ್ಕರಿಸಿದ್ದು 2010-02-23.
 19. ಗಲ್ಫ್ ಸ್ಟೇಟ್ಸ್ ಮರೈನ್ ಫಿಶೆರಿಸ್ ಕಮಿಶನ್: ನಾನ್-ನೇಟಿವ್ ಸ್ಪೆಸೀಸ್ ಸಮ್ಮರೀಸ್: ವೈಟ್ ಸ್ಪಾಟ್ ಸಿಂಡ್ರೋಮ್ ಬಾಕುಲೋವೈರಸ್ ಕಾಂಪ್ಲೆಕ್ಷ್ (WSBV) , 2003. URL ಕೊನೆಯದಾಗಿ ಲಭ್ಯವಿದ್ದದ್ದು 2005-06-23. ಡಾಟಾ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ, ಪರಿಶೀಲನೆ ಬಾರಿ ಇದೆ. ಕಡತವು ಡಾಟಾದೊಂದಿಗೆ ಸಂಪರ್ಕ ಹೊಂದಿದೆ..
 20. OIE: ಅಕ್ವಾಟಿಕ್ ಮ್ಯಾನ್ಯುಅಲ್ , ಸೆಕ್ಷನ್. [ಶಾಶ್ವತವಾಗಿ ಮಡಿದ ಕೊಂಡಿ]2.2.4[ಶಾಶ್ವತವಾಗಿ ಮಡಿದ ಕೊಂಡಿ]. ಪರಿಷ್ಕರಿಸಿದ್ದು 2010-02-23.
 21. OIE: [http:// www. oie.int/eng/normes/fmanual/2.2.02_IHHN.pdf ಅಕ್ವಾಟಿಕ್ ಮ್ಯಾನ್ಯುಅಲ್ , ಸೆಕ್ಷನ್. ]2.2.2[ಶಾಶ್ವತವಾಗಿ ಮಡಿದ ಕೊಂಡಿ].
 22. ವಾನ್್ ವೈಕ್ et al. , org/web/20070121201945 /http://www.hboi. edu/aqua/ downloads/ pdf/shrimpmanual_chapter9.pdf HBOI ಮ್ಯಾನ್ಯಅಲ್ , ಅಧ್ಯಾಯ 9 Archived 2013-07-22 ವೇಬ್ಯಾಕ್ ಮೆಷಿನ್ ನಲ್ಲಿ..
 23. ರೋಸೆನ್್ಬೆರ್ರಿ, ಕ್ಲೋರಾಮ್್ಪೆನಿಕೋಲ್ , 2005.
 24. ಸೀಟೆಕ್ ಯುೆಸ್ಎ, ಐಎನ್್ಸಿ.: The Rationale to use SPF broodstock . ಪರಿಷ್ಕರಿಸಿದ್ದು 2005-08-23.
 25. FAO, ದಿ ಸ್ಟೇಟ್್ ಆಫ್ ವರ್ಲ್ಡ್ ಫಿಶರಿಸ್ ಆ್ಯಂಡ್ ್ಕ್ವಾಕಲ್ಚರ್, ಪು. 124.
 26. ಯು.ಎಸ್ ಕೃಷಿ ಇಲಾಖೆ: ಯು.ಎಸ್. ಶ್ರಿಂಪ್ ಇಂಪೋರ್ಟ್ಸ್ ಬಾಯ್ ವಾಲ್ಯೂಮ್ Archived 2015-03-31 ವೇಬ್ಯಾಕ್ ಮೆಷಿನ್ ನಲ್ಲಿ. (ಅಕ್ವಾಕಲ್ಚರ್ ಡಾಟಾ Archived 2010-02-20 ವೇಬ್ಯಾಕ್ ಮೆಷಿನ್ ನಲ್ಲಿ.), ಫೆಬ್ರವರಿ 2010. ಪರಿಷ್ಕರಿಸಿದ್ದು2010-02-23.
 27. PIC: ಮಾರುಕಟ್ಟೆ ಮಾಹಿತಿ: ಸೀಗಡಿಗಳು ಮತ್ತು ನಳ್ಳಿಗಳು Archived 2010-05-05 ವೇಬ್ಯಾಕ್ ಮೆಷಿನ್ ನಲ್ಲಿ.. ಅಂಕಿ ಅಂಶಗಳು 1994-98ಕ್ಕೆ. ಪರಿಷ್ಕರಿಸಿದ್ದು 2010-02-23.
 28. NOAA, ನ್ಯಾಶನಲ್ ಮರೈನ್ ಫಿಶರಿಸ್ ಸರ್ವಿಸ್, ನೈಋತ್ಯ ಪ್ರಾದೇಶಿಕ ಕಚೇರಿ: ಜಪಾನಿಗಳ ಸೀಗಡಿ ಆಮದು Archived 2013-02-16 ವೇಬ್ಯಾಕ್ ಮೆಷಿನ್ ನಲ್ಲಿ.,ತಿಂಗಳು ಮಾಹಿತಿ 1997 ರಿಂದ ಮುಂದೆ. URl ಕೊನೆಯದಾಗಿ ಲಭ್ಯವಿದ್ದದ್ದು 2010-02-23.
 29. FAO: FIGIS ಕಮೋಡಿಟಿಸ್ 1976-2006, ಐರೋಪ್ಯ ಸಮುದಾಯದ ದೇಶಗಳಲ್ಲಿ ಆಮದಾಗಿರುವ ಎಲ್ಲ ಸೀಗಡಿಗಳು ಮತ್ತು ಸಿಹಿನೀರಿನ ಸೀಗಡಿಗಳ ದಾಖಲಾತಿಯ ತನಿಖೆ ಇದರಲ್ಲಿ ಪೆನೇಯಸ್ ಎಸ್್ಪಿಪಿ ಸೇರುವುದಿಲ್ಲ. (ಅಲ್ಲದೆ "nei" ದಾಖಲೆ; "nei" ಅಂದರೆ "ಬೇರೆಲ್ಲೂ ಸೇರದೆ ಇದ್ದದ್ದು" ಇದರಲ್ಲಿಲ್ಲ.). ಹೋಲಿಕೆಗೆ ಅಮೆರಿಕದ ಸಂಯುಕ್ತ ಸಂಸ್ಥಾನವನ್ನೂ ಸೇರಿಸಲಾಗಿದೆ. ಮತ್ತು ಆ ವಿಭಾಗದಲ್ಲಿ ವರದಿಯಾದ ಸಂಖ್ಯೆಗಳು ಟನ್ನುಗಳನ್ನು 1,000 ಪೌಂಡುಗಳೊಂದಿಗೆ ಪರಿವರ್ತಿಸಿದಾಗ ಯು.ಎಸ್. DOA ಸಂಖ್ಯೆಗಳೊಂದಿಗೆ Archived 2015-03-31 ವೇಬ್ಯಾಕ್ ಮೆಷಿನ್ ನಲ್ಲಿ. ಸರಿಯಾಗಿ ಹೊಂದಿಕೆಯಾಗುತ್ತವೆ. ಪರಿಷ್ಕರಿಸಿದ್ದು 2010-02-25.
 30. FAO: FIGIS ಕಮೋಡಿಟಿಸ್ 1976-2006, ಅದೇ ತನಿಖೆಯು ಕಂಗೋನ್ ಮತ್ತು ಪಂಡಾಲಿಡೇ ಯನ್ನೂ ಒಳಗೊಂಡಿದೆ. ಪರಿಷ್ಕರಿಸಿದ್ದು 2010-02-25.
 31. ಜೋಸುಯಿಟ್, ಪುಟ. 16.
 32. ೩೨.೦ ೩೨.೧ FIGIS; FAO ಡಾಟಾಬೇಸಸ್, 2007.
 33. ಫುಡ್್ಮಾರ್ಕೆಟ್: ಶ್ರ್ರಿಂಪ್ ಪ್ರಾಡಕ್ಷನ್ ; ಡಾಟಾ ಗ್ಲೋಬ್ ಫಿಶ್್ನಿಂದ, 2001. ಪರಿಷ್ಕರಿಸಿದ್ದು 2005-06-23.
 34. ಜೋಸುಯಿಟ್ ಪುಟ. 7f.
 35. ಫಂಜ್-ಸ್ಮಿತ್ ಮತ್ತು ಬ್ರಿಗ್ಗ್ಸ್, 2003.
 36. ಥೈ ಫಾರ್ಮರ್ಸ್ ರಿಸರ್ಚ್ ಸೆಂಟರ್, 2004.
 37. ರೋಸೆನ್್ಬರ್ರಿ, ಶ್ರಿಂಪ್್ನ್ಯೂಸ್ , 2005.
 38. ಯು.ಎಸ್. ಡಿಪಾರ್ಟ್್ಮೆಂಟ್ ಆಫ್ ಕಾಮರ್ಸ್: ಅಮೆಂಡೆಡ್ ಫೈನಲ್ ಡಿಟರ್ಮಿನೇಶನ್ಸ್ ಆ್ಯಂಡ್ ಇಶ್ಯುಅನ್ಸ್ ಆಫ್ ಆಂಟಿಡಂಪಿಂಗ್ ಡ್ಯೂಟಿ ಆರ್ಡರ್ಸ್ Archived 2017-05-14 ವೇಬ್ಯಾಕ್ ಮೆಷಿನ್ ನಲ್ಲಿ. , ಜನವರಿ 26, 2005. ಪರಿಷ್ಕರಿಸಿದ್ದು 2010-02-23.
 39. ರೋಸೆನ್್ಬರ್ರಿ, ಬಿ.: ಅನ್ಯುಅಲ್ ರಿಪೋರ್ಟ್ ಆನ್ ರ್ಲ್ಡ್ ಶ್ರಿಂಪ್ ಫಾರ್ಮಿಂಗ್ Archived 2005-08-16 ವೇಬ್ಯಾಕ್ ಮೆಷಿನ್ ನಲ್ಲಿ. ; ಸೀಗಡಿ ಬೆಲೆಗಳ ಮೇಲೆ ವಿವರಣೆ ಆನ್್ ಲೈನ್ ಉದ್ಧೃತಗಳು 2000–2004. ಉದ್ಧೃತ 2005-08-18.
 40. ಲೂಯಿಸ್ et al. ,  ಪುಟ. 22.
 41. ಕನ್ಸೋರ್ಟಿಯಂ ಕರಡು ವರದಿ , ಪುಟ. 43.
 42. ಬರ್ರಾಕ್ಲೌಗ್ ಮತ್ತು ಫಿಂಗರ್-ಸ್ಟಿಚ್, ಪುಟ. 14.
 43. ೪೩.೦ ೪೩.೧ ಇಂಡಿಯನ್ ಅಕ್ವಾಕಲ್ಚರ್ ಅಥಾರಿಟಿ: ಪರಿಸರ ವರದಿ , ಅಧ್ಯಾಯ. 6, ಪುಟ. 76.
 44. ಹೆಂಪೆಲ್ et al. , ಪುಟ. 42ಎಫ್
 45. ಕನ್ಸೋರ್ಟಿಯಂ ಕರಡು ವರದಿ , ಪು. 45.
 46. ಲೂಯಿಸ್ et al. , ಪು. 1.
 47. ಬರ್ರಾಕ್ಲೌಗ್ ಮತ್ತು ಫಿಂಗರ್-ಸ್ಟಿಚ್, ಪುಟ. 17.
 48. ಕುಮಾರನ್ et al. , 2003.
 49. ಬರ್ರಾಕ್ಲೌಗ್ ಮತ್ತು ಫಿಂಗರ್-ಸ್ಟಿಚ್, ಪುಟ. 15.
 50. ಮೆಕ್ಲೆನ್ನನ್, ಪು. 55.
 51. Tanavud et al., p. 330.
 52. ವಿಲ್ಕಿನ್ಸನ್
 53. Fitzpatrick et al.
 54. ವಲಿಯೆಲಾ et al. , 2001.
 55. ಓವೆನ್, 2004.
 56. ನ್ಯಾಶನಲ್ ಅಕ್ವಾಕಲ್ಚರ್ ಅಸೋಸಿಯೇಶನ್ (ಎನ್ಎಎ): ಆಂಟಿಬಯೋಟಿಕ್ ಯೂಸ್ ಇನ್ ಅಕ್ವಾಕಲ್ಚರ್: ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ರಿಬುಟ್ಟಲ್ , ಎನ್ಎಎ, ಯುಂ.ಎಸ್., ಡಿಸೆಂಬರ್ 20, 1999. URL ಕೊನೆಗೆ ಲಭ್ಯವಾಗಿದ್ದು 2007-11-26.web archive link Archived ಆಗಸ್ಟ್ ೧೩, ೨೦೦೭ at the Wayback Machine
 57. ಎನ್ಎಸಿಎ/ಎಂಪಿಇಡಿಎ: ಹೆಲ್ತ್್ ಮ್ಯಾನ್ಯುಅಲ್ , 2003.
 58. ವರ್ಲ್ಡ್ ರೇನ್್ಫಾರೆಸ್ಟ್ ಮೂವ್್ಮೆಂಟ್: ಅನ್್ಸಸ್ಟೇನೇಬಲ್ ವರ್ಸಸ್ ಸಸ್ಟೆನೇಬಲ್ ಶ್ರಿಂಪ್ ಪ್ರೊಡಕ್ಷನ್ Archived 2005-11-11 ವೇಬ್ಯಾಕ್ ಮೆಷಿನ್ ನಲ್ಲಿ. , ಡಬ್ಲೂಆರ್್ಎಂ ಬುಲೆಟಿನ್ 51, ಅಕ್ಟೋಬರ್ 2001. ಪರಿಷ್ಕರಿಸಿದ್ದು 2007-08-20.
 59. ಕನ್ಸೋರ್ಟಿಯಂ, ಕರಡು ವರದಿ .
 60. ರೊನ್ನ್್ಬಾಕ್, 2003.
 61. ಎನ್ಎಸಿಎ: ಕೋಡ್ಸ್್ ಆ್ಯಂಡ್ ಸರ್ಟಿಫಿಕೇಶನ್ ; ನೆಟ್್ವರ್ಕ್ ಆಫ್ ಅಕ್ವಾಕಲ್ಚರ್ ಸೆಂಟರ್ಸ್ ಇನ್ ಏಶಿಯಾ-ಪ್ಯಾಸಿಫಿಕ್ (ಎನ್ಎಸಿಎ). ಪರಿಷ್ಕರಿಸಿದ್ದು 2005-08-19.
 62. ಬಾಯ್ಡ್ et al. , 2002.
 63. ಗ್ಲೋಬಲ್ ಅಕ್ವಾಕಲ್ಚರ್ ಅಲಾಯನ್ಸ್: ರೆಸ್ಪಾನ್ಸಿಬಲ್ ಅಕ್ವಾಕಲ್ಚರ್ ಪ್ರೋಗ್ರಾಂ . URL ಕೊನೆಯಲ್ಲಿ ಲಭ್ಯವಾಗಿದ್ದು 2005-08-19. web archive link Archived ಆಗಸ್ಟ್ ೨೯, ೨೦೦೫ at the Wayback Machine
 64. ಬರ್ರಾಕ್ಲೌಗ್ ಮತ್ತು ಫಿಂಗರ್-ಸ್ಟಿಚ್, ಪುಟ. 23ಎಫ್ಎಫ್.
 65. ಡೆವಾಲ್ಟ್, 2000.
 66. ೬೬.೦ ೬೬.೧ ಹೆಂಪೆಲ್ et al. , ಪು. 44.
 67. ಬರ್ರಾಕ್ಲೌಗ್ ಮತ್ತು ಫಿಂಗರ್-ಸ್ಟಿಚ್, ಪುಟ. 37.
 68. ಕನ್ಸೋರ್ಟಿಯಂ: ಕರಡು ವರದಿ , ಪುಟ. 47.
 69. ನ್ಯೂ, ಎಂ. ಬಿ.: ಫಾರ್ಮಿಂಗ್‌ ಫ್ರೆಶ್‌ವಾಟರ್‌ ಪ್ರಾನ್ಸ್‌; ಎಫ್ಎಓ ಫಿಶರೀಸ್‌ ಟೆಕ್ನಿಕಲ್‌ ಪೇಪರ್‌‌ 428, 2002. ISSN 0429-9345.
 70. ಸಿಹಿನೀರಿನ ಕಠಿಣಚರ್ಮಿಗಳಿಗೆ ಸಂಬಂಧಿಸಿದಂತೆ ಎಫ್ಎಓ ಫಿಶರೀಸ್‌ ಗ್ಲೋಬಲ್‌ ಆಕ್ವಾಕಲ್ಚರ್‌ ಪ್ರೊಡಕ್ಷನ್‌ ಡೇಟಾಬೇಸ್‌ Archived 2005-09-27 ವೇಬ್ಯಾಕ್ ಮೆಷಿನ್ ನಲ್ಲಿ.‌‌ನಿಂದ ಪಡೆಯಲಾದ ದತ್ತಾಂಶ. ತೀರಾ ಇತ್ತೀಚಿನ ದತ್ತಾಂಶ ಜೋಡಿಗಳು 2003ಕ್ಕೆ ಸಂಬಂಧಿಸಿವೆ ಮತ್ತು ಕೆಲವೊಮ್ಮೆ ಅಂದಾಜುಗಳನ್ನು ಅವು ಒಳಗೊಂಡಿರುತ್ತವೆ. ಪರಿಷ್ಕರಿಸಿದ್ದು 2005-06-28.
 71. ಪೆರೆಝ್ ಫರ್ಫಾಂಟೆ ಮತ್ತು ಕೆನ್್ಸ್ಲಿ, 1997.
 72. ರೋಸೆನ್್ಬೆರ್ರಿ, ಬಿ.: ಅನ್ಯುಅಲ್ ರಿಪೋರ್ಟ್ಸ್ ಆನ್ ರ್ಲ್ಡ್ ಶ್ರಿಂಪ್ ಫಾರ್ಮಿಂಗ್ Archived 2005-08-16 ವೇಬ್ಯಾಕ್ ಮೆಷಿನ್ ನಲ್ಲಿ. ; Comments on the quality of aquaculture statistics in the on-line excerpts 2000–2004. ಪರಿಷ್ಕರಿಸಿದ್ದು 2005-08-18.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಕೊಂಡಿಗಳು[ಬದಲಾಯಿಸಿ]