ವಿಷಯಕ್ಕೆ ಹೋಗು

ಜೀವವೈವಿಧ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹವಳ ದಿಬ್ಬದ ಜೀವವೈವಿಧ್ಯದಲ್ಲಿ ಕೆಲವು.
ಮಳೆಕಾಡುಗಳು ಈ ಭೂಮಿಯ ಮೇಲಿನ ವೈವಿಧ್ಯಕ್ಕೆ ಉದಾಹರಣೆ, ಅವು ಭಾರೀ ಪ್ರಮಾಣದ ಜಾತಿ ಜೀವವೈವಿಧ್ಯವನ್ನು ಹೊಂದಿವೆ.ಇದು ಸೆನೆಗಲ್‌ ದೇಶದ ನಿಯೊಕೊಲೊಕೊಬಾ ರಾಷ್ಟ್ರೀಯ ಉದ್ಯಾನವನದಲ್ಲಿರುವ ಗ್ಯಾಂಬಿಯಾ ನದಿ.

ಜೀವವೈವಿಧ್ಯ ಎಂಬುದು ನಿರ್ದಿಷ್ಟ ಪರಿಸರ ವ್ಯವಸ್ಥೆ ಅಥವಾ ಬಯೊಮ್‌ನೊಳಗೆ ಅಥವಾ ಇಡೀ ಭೂಮಿಯಲ್ಲಿರುವ ಜೀವಸಂಕುಲಗಳ (ಹಲವು) ರೂಪಗಳ ಏರಿಳಿತ. ಜೀವವೈವಿಧ್ಯ ನಿಸರ್ಗ ವ್ಯವಸ್ಥೆಯ ಆರೋಗ್ಯದ ಮಾನದಂಡವಾಗಿಯೂ ಬಳಸಲಾಗಿದೆ. ಸುಮಾರು 3.5 ಶತಕೋಟಿ ವರ್ಷಗಳ ವಿಕಸನದ ಫಲವಾಗಿ ಇಂದು ಭೂಮಿಯಲ್ಲಿ ಕಂಡುಬರುವ ಜೀವವೈವಿಧ್ಯದಲ್ಲಿ ದಶಲಕ್ಷಗಳಷ್ಟು ವಿವಿಧ ಜೈವಿಕ ಪ್ರಭೇಧಗಳಿವೆ.[][]

ಉತ್ಪತ್ತಿ ಶಾಸ್ತ್ರ

[ಬದಲಾಯಿಸಿ]

ಜೀವವೈವಿಧ್ಯ ಎಂಬ ಪದವನ್ನು ಮೊದಲು ವನ್ಯಜೀವಿ ವಿಜ್ಞಾನಿ ಮತ್ತು ಪರಿಸರವಾದಿ ರೇಮಂಡ್‌ ಎಫ್‌. ಡಾಸ್ಮನ್‌ ಅವರು ನಿಸರ್ಗ ರಕ್ಷಣೆ ಪ್ರತಿಪಾದಿಸಿ ರಚಿಸಿದ ಗ್ರಂಥದಲ್ಲಿ[] ಬಳಸಿದ್ದರು. ಈ ಪದವನ್ನು ಒಂದು ದಶಕಕ್ಕೂ ಹೆಚ್ಚು ಕಾಲ ವ್ಯಾಪಕವಾಗಿ ಬಳಸಲಾಗಿರಲಿಲ್ಲ. 1980ರ ವೇಳೆಗೆ ವಿಜ್ಞಾನ ಮತ್ತು ಪರಿಸರ ನೀತಿಗಳಲ್ಲಿ ಜೀವವೈವಿಧ್ಯ ಸಾಮಾನ್ಯ ಬಳಕೆಯಾಯಿತು. ಗ್ರಂಥದ ಮುನ್ನುಡಿಯಲ್ಲಿ,[] ಧಾಮಸ್ ಲವ್‌ಜಾಯ್‌ರ ಜೀವವೈವಿಧ್ಯ ಎಂಬ ಪದಸಂರಕ್ಷಣಾ ಜೀವವಿಜ್ಞಾನ ಕ್ಷೇತ್ರಕ್ಕೆ ನಾಂದಿಯಾಯಿತು. ಇದು ವಿಜ್ಞಾನಿಗಳ ಸಮುದಾಯಕ್ಕೆ ಸಂರಕ್ಷಣಾ ಜೀವವಿಜ್ಞಾನಕ್ಕೆ ಜೈವಿಕ ವೈವಿಧ್ಯವೆಂದು ಪರಿಚಯವಾಯಿತು. "ನೈಸರ್ಗಿಕ ವೈವಿಧ್ಯ" ಎಂಬ ಪದವನ್ನು, 1975ರಲ್ಲಿ ನಡೆದ "ನೈಸರ್ಗಿಕ ವೈವಿಧ್ಯ ಸಂರಕ್ಷಣೆ" ಎಂಬ ಅಧ್ಯಯನದಲ್ಲಿ ಬಳಸಲಾಗಿತ್ತು. ನಿಸರ್ಗ ರಕ್ಷಕ ಮಂಡಳಿ ವಿಜ್ಞಾನ ವಿಭಾಗ ಸೇರಿದಂತೆ, ಸಂರಕ್ಷಣಾ ವಿಜ್ಞಾನ ವಲಯಗಳಲ್ಲಿ ಉಪಯೋಗಿಸಲಾಗಿತ್ತು. 1980ರ ಆರಂಭದಲ್ಲಿ, TNCಯ ವಿಜ್ಞಾನ ಯೋಜನೆ ಮತ್ತು ಅದರ ಮುಖ್ಯಸ್ಥ ರಾಬರ್ಟ್‌ ಇ. ಜೆನ್ಕಿನ್ಸ್‌ Archived 2010-04-18 ವೇಬ್ಯಾಕ್ ಮೆಷಿನ್ ನಲ್ಲಿ., ಲವ್‌ಜಾಯ್‌, ಹಾಗೂ ಅಮೆರಿಕಾದಲ್ಲಿನ ಇತರ ಪ್ರಮುಖ ಸಂರಕ್ಷಣಾ ವಿಜ್ಞಾನಿಗಳು, ಜೈವಿಕ ಸಂರಕ್ಷಣೆಯ ಉದ್ದೇಶಕ್ಕೆ "ಜೈವಿಕ ವೈವಿಧ್ಯ" ಎಂದು ಪ್ರತಿಪಾದಿಸಿದರು.

ಜೈವಿಕ ವೈವಿಧ್ಯದ ಸಂಕ್ಷಿಪ್ತ ರೂಪ ಜೀವವೈವಿಧ್ಯ ವನ್ನು W. G. ರೊಸೆನ್‌, 1985ರಲ್ಲಿ ಮೊದಲು ಬಳಸಿದರು. ರಾಷ್ಟ್ರೀಯ ಸಂಶೋಧನಾ ಪರಿಷತ್ತು (NRC) 1986ರಲ್ಲಿ ಆಯೋಜಿಸಲಿದ್ದ ಜೈವಿಕ ವೈವಿಧ್ಯ ಕುರಿತ ರಾಷ್ಟ್ರೀಯ ಪರಿಷತ್ತಿ ಗಾಗಿ ಅವರು ಯೋಜನೆ ರೂಪಿಸುತ್ತಿದ್ದರು. ಕೀಟಶಾಸ್ತ್ರ ವಿಜ್ಞಾನಿ E. O. ವಿಲ್ಸನ್‌ ಆ ವೇದಿಕೆಯ[] ಚಟುವಟಿಕೆ[] ದಾಖಲಿಸಿ, 'ಜೀವವೈವಿಧ್ಯ'ವೆಂಬ ಶಿರೋನಾಮೆ ನೀಡಿದರು. ಮೊದಲ ಬಾರಿಗೆ 1988ರಲ್ಲಿ ಆ ಪದವು ಪ್ರಕಾಶನಗೊಂಡಿತು.

ಅಂದಿನಿಂದಲೂ, ಪರಿಕಲ್ಪನೆ ಮತ್ತು ಪದಗಳೆರಡೂ, ಜೀವ ವಿಜ್ಞಾನಿಗಳು, ಪರಿಸರವಾದಿಗಳು, ರಾಜಕೀಯ ಮುಖಂಡರು ಮತ್ತು ವಿಶ್ವಾದ್ಯಂತ ನಾಗರಿಕರಿಂದ ವ್ಯಾಪಕ ಬಳಕೆಯಾಗಿವೆ. ಸ್ವಾಭಾವಿಕ ವಾತಾವರಣ ಮತ್ತು ನೈಸರ್ಗಿಕ ಸಂರಕ್ಷಣೆಗಾಗಿ ಒಂದು ಕಳಕಳಿ ಸಮೀಕರಣಗೊಳಿಸಲು ಜೀವವೈವಿಧ್ಯ ಪದ ಕೆಲವೊಮ್ಮೆ ಬಳಕೆಯಾಗಿದೆ. 20ನೆಯ ಶತಮಾನದ ಅಂತ್ಯಕ್ಕೆ ಪ್ರಕೃತಿ-ಪರಿಸರ ವಿನಾಶದ ಬಗ್ಗೆ ವ್ಯಾಪಕವಾಗುತ್ತಿರುವ ಕಾಳಜಿಯೊಂದಿಗೆ ಈ ಪದ ಬಳಕೆ ತಾಳೆಯಾಗಿದೆ.

'ನೈಸರ್ಗಿಕ ವೈವಿಧ್ಯ' ಪದವಲ್ಲದೆ, ನಿಸರ್ಗ ಪರಂಪರೆ' ಎಂಬ ಪರಿಕಲ್ಪನೆಯು ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿದೆ." ಈ ಪದವು ಹೆಚ್ಚಾಗಿ ವೈಜ್ಞಾನಿಕ ಪಾರಿಭಾಷಿಕ ಬಳಕೆ ಅಲ್ಲದಿದ್ದರೂ ಹಾಗೂ ಸಂರಕ್ಷಣೆ ಪ್ರಕ್ರಿಯೆಯ ಕುರಿತು ಆಸಕ್ತಿಯಿರುವ ಹೆಚ್ಚಿನ ಸಂಖ್ಯೆಯ ಜನರಿಗೆ ಕೆಲವು ರೀತಿಯಲ್ಲಿ ಸುಲಭವಾಗಿ ಅರ್ಥವಾಗುವಂತಿದ್ದರೂ, ಇದು ಆ ಎರಡೂ ಪದಗಳಿಗೂ ಮುಂಚಿನದಾಗಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಜಿಮ್ಮಿ ಕಾರ್ಟರ್ ಜಾರ್ಜಿಯಾದ ರಾಜ್ಯಪಾಲರಾಗಿದ್ದಾಗ ಸ್ಥಾಪಿಸಿದ ಜಾರ್ಜಿಯಾ ಪರಂಪರೆ ಎಂಬುದರಿಂದ 'ನೈಸರ್ಗಿಕ ಪರಂಪರೆ'ಯನ್ನು ಬಳಸಲಾಯಿತು. ಕಾರ್ಟರ್‌ರ ಈ ದತ್ತಿಯು ನೈಸರ್ಗಿಕ ಮತ್ತು ಸಾಂಸ್ಕೃತಿಕ ದತ್ತಿಗಳೊಂದಿಗೆ ವ್ಯವಹರಿಸುತ್ತಿತ್ತು. 1966ರಲ್ಲಿ ಲಿಂಡನ್‌ ಜಾನ್ಸನ್‌ ಕಾಂಗ್ರೆಸ್‌ಗೆ ಕಳಿಸಿದ ಸಂದೇಶದಲ್ಲಿದ್ದ ಈ ಪದವನ್ನು ಜಿಮ್ಮಿ ಕಾರ್ಟರ್‌ ಬಳಸಿದರೆಂದು ಕಾಣುತ್ತದೆ. ಜೆನ್ಕಿನ್ಸ್‌ ನೇತೃತ್ವದ, ರಾಜ್ಯ ನೈಸರ್ಗಿಕ ಪರಂಪರೆ ಕಾರ್ಯಕ್ರಮಗಳ ಜಾಲವನ್ನು 1974ರಲ್ಲಿ ಆರಂಭಿಸಿತು. ನೈಸರ್ಗಿಕ ಸಂರಕ್ಷಕ ಮಂಡಳಿಯು 'ನೈಸರ್ಗಿಕ ಪರಂಪರೆ' ಎಂಬ ಪದ ಬಳಸಿತು. USAದ ಹೊರಗೆ ಈ ಜಾಲ ವಿಸ್ತರಿಸಿ, 'ಸಂರಕ್ಷಣಾ ಅಂಕಿ ಅಂಶ ಕೇಂದ್ರ' ಎಂಬ ಪದವನ್ನು ಗಿಲರ್ಮೊ ಮಾನ್‌ ಸೂಚಿಸಿದರು. ಕ್ರಮೇಣ ಇದನ್ನೇ ಆರಿಸಿಕೊಳ್ಳಲಾಯಿತು.

ವ್ಯಾಖ್ಯಾನಗಳು

[ಬದಲಾಯಿಸಿ]
2008ರ ಬೇಸಿಗೆಯಲ್ಲಿ, ಉತ್ತರ ಸಾಸ್ಕ್ಯಾಚವನ್‌ ಪ್ರಾಂತ್ಯದಲ್ಲಿ ಲಾರೊಂಜ್‌ನಲ್ಲಿ ಸಂಗ್ರಹಿಸಲಾದ ಶಿಲೀಂಧ್ರಗಳ ಮಾದರಿಯು, ಶಿಲೀಂಧ್ರಗಳ ಜಾತಿ ವೈವಿಧ್ಯದ ಉದಾಹರಣೆಯಾಗಿದೆ. ಈ ಚಿತ್ರದಲ್ಲಿ ಎಲೆಯ ಕಲ್ಲುಹೂವು ಮತ್ತು ಪಾಚಿಗಳೂ ಇವೆ.

'ಜೈವಿಕ ವೈವಿಧ್ಯ' ಅಥವಾ 'ಜೀವವೈವಿಧ್ಯ'ವನ್ನು 'ಜೀನ್‌ ತಳಿ, ಜಾತಿ ಮತ್ತು ಆ ಪ್ರದೇಶದ ಪರಿಸರ ವ್ಯವಸ್ಥೆ' ಎಂದು ಜೀವವಿಜ್ಞಾನಿಗಳು ವ್ಯಾಖ್ಯಾನಿಸಿದ್ದಾರೆ. ಈ ವ್ಯಾಖ್ಯಾನ ಹಲವು ವಾಸ್ತವಾಂಶಗಳನ್ನು ವಿವರಿಸುತ್ತದೆ, ಜೈವಿಕ ವೈವಿಧ್ಯ ಗುರುತಿಸಿ ಮೂರು ಶ್ರೇಣಿಯ ಸಾಂಪ್ರದಾಯಿಕ ಸಮಗ್ರ ದೃಷ್ಟಿಕೋನ ನೀಡುತ್ತದೆ: ಇದರಲ್ಲಿ ಜೀವ ವೈವಿಧ್ಯದ ಬಗೆಯನ್ನು ಗುರ್ತಿಸಬಹುದಾಗಿದೆ.

1960ರ ದಶಕದ ಉತ್ತರಾರ್ಧ ಮತ್ತು 1970ರ ದಶಕದಲ್ಲಿ, ವಾಷಿಂಗ್ಟನ್‌ D.C. ಮತ್ತು ಅಂತಾರಾಷ್ಟ್ರೀಯ ಸಂರಕ್ಷಣಾ ಸಂಘಟನೆಗಳು ಮೊದಲ ಬಾರಿಗೆ ಈ ಶಬ್ದವನ್ನು ಸೂಚಿಸಿದವು. ರೇಮಂಡ್‌ ಎಫ್‌. ಡಾಸ್ಮನ್‌ ಮತ್ತು ವಿಸ್ತೃತ ಸಂರಕ್ಷಣಾ ಮತ್ತು ವೈಜ್ಞಾನಿಕ ಸಮುದಾಯಗಳಿಗೆ ಈ ಪದವನ್ನು ಪರಿಚಯಿಸಲಾಯಿತು. ಥಾಮಸ್‌ ಇ. ಲವ್‌ಜಾಯ್‌ರಿಂದ, ಬಳಕೆಯಾದ 'ಜೈವಿಕ ವೈವಿಧ್ಯ' ಈ ಬಹುಉದ್ದೇಶಿತ ಪರಿಕಲ್ಪನೆಯ ಸಮಂಜಸ ಉತ್ತರವಾಗಿದೆ. ಸಮಂಜಸ ಅರ್ಥವಿವರಣೆ ಸ್ಪಷ್ಟ ವ್ಯಾಖ್ಯಾನವನ್ನು ಮೊದಲ ಬಾರಿಗೆ ಬ್ರೂಸ್‌ ಎ. ವಿಲ್ಕಾಕ್ಸ್‌ ನೀಡಿದ್ದರು. 1982ರಲ್ಲಿ ಬಾಲಿಯಲ್ಲಿ ನಡೆದ ವಿಶ್ವ ರಾಷ್ಟ್ರೀಯ ಉದ್ಯಾನಗಳ ಸಮ್ಮೇಳನ[] ಕ್ಕಾಗಿ ಅಂತಾರಾಷ್ಟ್ರೀಯ ಪರಿಸರ ಮತ್ತು ಸಂಪನ್ಮೂಲಗಳ ಸಂರಕ್ಷಣಾ ಒಕ್ಕೂಟವನ್ನು ಅವರು (IUCN) ಪ್ರತಿನಿಧಿಸಿದ್ದರು. "ಜೈವಿಕ ವೈವಿಧ್ಯ ಜೀವ ವ್ಯವಸ್ಥೆಗಳ ಎಲ್ಲಾ ವಲಯಗಳಲ್ಲಿ (ಅರ್ಥಾತ್, ಪರಮಾಣು, ಸಾವಯವ, ಒಟ್ಟು ಸಾಮೂಹಿಕ ಸಂಖ್ಯೆ, ಜಾತಿ ಮತ್ತು ಪರಿಸರ ವ್ಯವಸ್ಥೆ) ಜೀವ ರೂಪಗಳಲ್ಲಿರುವ ವೈವಿಧ್ಯ" ಎಂದು ಬ್ರೂಸ್‌ ವ್ಯಾಖ್ಯಾನಿಸಿದ್ದಾರೆ. ರಿಯೊ ಡಿ ಜನೇರೊದಲ್ಲಿ ನಡೆದ ವಿಶ್ವ ಸಂಸ್ಥೆಶೃಂಗಸಭೆಯಲ್ಲಿ 'ಜೈವಿಕ ವೈವಿಧ್ಯ'ವನ್ನು ವ್ಯಾಖ್ಯಾನಿಸಲಾಯಿತು: 'ಪ್ರಾದೇಶಿಕ, ಸಮುದ್ರ, ಮತ್ತಿತರ ಜಲ ಪರಿಸರ ವ್ಯವಸ್ಥೆ ಸೇರಿದಂತೆ ಎಲ್ಲಾ ಜೀವಿಗಳ ನಡುವಿನ ಅಂತರ, ಮತ್ತು ಅವುಗಳಲ್ಲಿನ ಪರಿಸರ ಸಂಕೀರ್ಣತೆ: ಇದರಲ್ಲಿ, ಜಾತಿಗಳ ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ವೈವಿಧ್ಯವೂ ಸೇರಿರುತ್ತದೆ.' ವ್ಯಾಪಕವಾಗಿ ಸ್ವೀಕೃತ ವ್ಯಾಖ್ಯಾನಕ್ಕೆ ಇದು ಅತಿ ಸನಿಹವಾಗಿದೆ, ಏಕೆಂದರೆ ಈ ವ್ಯಾಖ್ಯಾನವನ್ನು ವಿಶ್ವಸಂಸ್ಥೆಯ ಜೈವಿಕ ವೈವಿಧ್ಯ ಸಮ್ಮೇಳನದಲ್ಲಿ ಆಯ್ಕೆ ಮಾಡಲಾಯಿತು.

'ಜೀವವೈವಿಧ್ಯ'ದ ಗ್ರಾಂಥಿಕ ವ್ಯಾಖ್ಯಾನವೆಂದರೆ, 'ಜೈವಿಕ ಸಂಘಟನೆಯ ಎಲ್ಲಾ ವರ್ಗದ ಜೀವಿಗಳ ವೈವಿಧ್ಯ ವಿಭಿನ್ನತೆ.'[]

ತಳಿವಿಜ್ಞಾನಿಗಳ ದೃಷ್ಟಿಯಿಂದ, ಜೀವವೈವಿಧ್ಯ ಜೀನ್‌ಗಳು ಮತ್ತು ಜೀವಿರಾಶಿಯ ವೈವಿಧ್ಯವಾಗಿದೆ. ವಿಕಸನಕ್ಕಾಗಿ DNA ಮಟ್ಟದಲ್ಲಿ ಸಂಭವಿಸುವ ರೂಪಾಂತರ, ಜೀನ್‌ ವಿನಿಮಯ ಮತ್ತು ಜಿನೊಮ್‌ ಕ್ರಿಯಾ-ಶಾಸ್ತ್ರಗಳನ್ನು ಅವರು ಅಧ್ಯಯನ ಮಾಡುತ್ತಾರೆ. ಇದಕ್ಕೆ ಪೂರಕವಾಗಿ, ಮೇಲಿನ ವ್ಯಾಖ್ಯಾನದಂತೆ, 'ಜೈವಿಕ ವ್ಯವಸ್ಥೆಗಳ ಎಲ್ಲಾ ಜೈವಿಕ ಮೂಲಗಳಿಗೆ ಜೀನ್‌ಗಳೇ ಜೀವಾಳ' ಎಂದು ಬ್ರೂಸ್‌ ವಿಲ್ಕಾಕ್ಸ್‌ ಮಂಡಿಸಿದ್ದಾರೆ.

ಅಳತೆಗೋಲು

[ಬದಲಾಯಿಸಿ]

ಜೀವವೈವಿಧ್ಯ ಮಾಪನಕ್ಕೆ ರೂಪಿಸಲಾಗಿದೆ. ಜೀವವೈವಿಧ್ಯದ ಪ್ರತಿ ಅಳತೆಯೂ ಅಂಕಿಅಂಶಗಳ ನಿಗದಿತ ಬಳಕೆಗೆ ಸಂಬಂಧಿಸಿದೆ. ಜೀವವಿಜ್ಞಾನದ ಅಳತೆಗೆ ವಿಭಿನ್ನ ವಿಧಾನಗಳನ್ನು ಉಪಯೋಗಿಸಲಾಗುತ್ತದೆ. ವೃತ್ತಿನಿರತ ಪರಿಸರವಾದಿಗಳಿಗೆ, ಮನುಕುಲವೂ ಸೇರಿದಂತೆ ದೇಶೀಯ ಪ್ರಭಾವಿತ ಜೀವಿಗಳಲ್ಲಿ ಸಾಮಾನ್ಯವಾಗಿ ವಿಭಜಿತ ಮೌಲ್ಯಗಳ ಪರಿಮಾಣವನ್ನು ಇವು ಒಳಗೊಂಡಿರಬೇಕು. ಪರಿಸರ ಉಳಿವಿಗೆ ಅದರ ವ್ಯಾಖ್ಯಾನಗಳನ್ನು ಸಮರ್ಪಕವಾಗಿ ಬಳಸುವ ತಾತ್ವಿಕ ನಿಲುವು ಪರಿಸರವಾದಿಗಳದ್ದಾಗಿದೆ.

ಹಂಚಿಕೆ

[ಬದಲಾಯಿಸಿ]
ಸ್ವಿಸ್‌ ಆಲ್ಪ್ಸ್‌ (ರಾಷ್ಟ್ರೀಯ ಉದ್ಯಾನ) ನಲ್ಲಿರುವ ಶಂಕುಮರದ ಕಾಡು.

ಆಯ್ಕೆಯಲ್ಲಿನ ದೋಷಗಳು ಜೀವವೈವಿಧ್ಯದ ಆಧುನಿಕ ಪರಿಕಲ್ಪನೆಗಳಿಗೆ ಅಡ್ಡಿಯನ್ನುಂಟು ಮಾಡುತ್ತದೆ. 1768ರಲ್ಲಿ, ತಮ್ಮೂರಾದ ಹ್ಯಾಂಪ್‌ಶೈರ್‌ನಲ್ಲಿನ ಸೆಲ್ಬೊರನ್‌ನ್ನು ರೆವ್‌. ಜಿಲ್ಬರ್ಟ್‌ ವೈಟ್‌ ಗಮನಿಸಿದ್ದು, ಅದನ್ನು ಸಂಕ್ಷೇಪವಾಗಿ ಹೀಗೆ ವಿವರಿಸಿದ್ದಾರೆ: 'ಪ್ರಕೃತಿಯು ಬಹಳ ಸಮೃದ್ಧವಾಗಿದ್ದು, ಅತಿ ಹೆಚ್ಚಿನ ಪರಾಮರ್ಶನೆಗೆ ಒಳಗಾದ ಅತ್ಯುತ್ಕೃಷ್ಟ ವೈವಿಧ್ಯಕ್ಕೆ ಆ ಜಿಲ್ಲೆಯು ಆಶ್ರಯ ತಾಣವಾಗಿದೆ'[]

ಆದರೂ, ಭೂಮಿಯ ಮೇಲೆ ಜೀವವೈವಿಧ್ಯದ ಸಮಹಂಚಿಕೆ ಇಲ್ಲ. ಉಷ್ಣವಲಯಗಳಲ್ಲಿ ಮತ್ತು ಕೇಪ್‌ ಫ್ಲೊರಿಸ್ಟಿಕ್‌ ಪ್ರಾಂತ‌ ಸೇರಿದಂತೆ ಹಲವೆಡೆ ಅದು ಸಮೃದ್ಧವಾಗಿದೆ. ಧ್ರುವಗಳೆಡೆಗೆ ಸಾಗಿದಂತೆ ಕಡಿಮೆ ಪ್ರಭೇಧಗಳು ದೊರೆಯುತ್ತವೆ. ಸಸ್ಯ-ವನ್ಯ ಜೀವಿಗಳ ವೈವಿಧ್ಯವು ಹವಾಮಾನ, ಧ್ರುವ ಪ್ರದೇಶ, ಮಣ್ಣು ಮತ್ತು ಸಹ ಜೀವಿಗಳ ಅಸ್ತಿತ್ವವನ್ನು ಅವಲಂಬಿಸಿದೆ. 2006ರಲ್ಲಿ, ಭೂಮಿಯ ಮೇಲಿನ ಜೀವಿಗಳ ಪ್ರಕಾರಗಳನ್ನು ವಿಧ್ಯುಕ್ತವಾಗಿ ಅಪರೂಪ ಅಥವಾ ಅಪಾಯಕ್ಕೀಡಾಗಿರುವ ಅಥವಾ ಅಳಿವಿನಲ್ಲಿರುವ ಎಂದು ವಿಂಗಡಿಸಲಾಗಿವೆ. ಮಿಲಿಯನ್‌ಗಿಂತ ಹೆಚ್ಚು ಜಾತಿಗಳು ಗಂಡಾಂತರದಲ್ಲಿರುವುದನ್ನು ಅಧಿಕೃತವಾಗಿ ಗುರುತಿಸಿಲ್ಲ ಎಂದು ಹಲವು ವಿಜ್ಞಾನಿಗಳು ಅಂದಾಜಿಸಿದ್ದಾರೆ. IUCN ಕೆಂಪು ಪಟ್ಟಿಯ ಮಾನದಂಡ ಬಳಸಿ ಮೌಲ್ಯಮಾಪನ ಮಾಡಿದ 40,177 ಜಾತಿಗಳ ಪೈಕಿ ನೂರಕ್ಕೆ 40 (ಒಟ್ಟು 16,119 ಜಾತಿಗಳು) ಈಗ ಅಳಿಸಿಹೋಗುವ ಭೀತಿಗೀಡಾಗಿವೆ ಎಂದು ವಿಂಗಡಿಸಲಾಗಿದೆ.[೧೦]

ಭೂಮಂಡಲದ ಪರಿಸರ ವಲಯಗಳಲ್ಲಿ ಸಮಭಾಜಕ ವೃತ್ತದಿಂದ ಧ್ರುವಗಳೆಡೆಗೆ ಜೀವವೈವಿಧ್ಯವು ಕ್ಷೀಣಿಸುತ್ತಿದೆ. ಆದರೆ, ಕಾರಣಗಳು ಸ್ಪಷ್ಟವಾಗಿಲ್ಲ. ಜಲಚರ ಪರಿಸರ ಗಳಲ್ಲಿ, ಅದರಲ್ಲೂ ಕಡಲ ಪರಿಸರ ವ್ಯವಸ್ಥೆಗಳಲ್ಲಿ ಇದೇ ರೀತಿ ಎಂದು ತಾರ್ಕಿಕವಾಗಿ ಸಾಧಿಸಬೇಕಾಗಿದೆ.[೧೧] ಜೊತೆಗೆ, ನಿರ್ದಿಷ್ಟವಾಗಿ ಕಡಲ ಪರಿಸರ ವ್ಯವಸ್ಥೆಗಳಲ್ಲಿ, ಅಕ್ಷಾಂಶ ವಲಯಗಳಲ್ಲಿ ವೈವಿಧ್ಯಗಳ ಸಂಖ್ಯೆ ಹೆಚ್ಚುತ್ತವೆ. ಹೀಗಾಗಿ, ಉಷ್ಣವಲಯ ಮತ್ತು ಧ್ರುವ ಗಳ ಜೀವವೈವಿಧ್ಯದ ಬಗೆಗಿನ ಮಾಹಿತಿ ಕೊರತೆಯು ವಿಶ್ವದ ಜಲಚರ ವಿಂಗಡಣೆ ಬಗ್ಗೆ ಯಾವುದೇ ವೈಜ್ಞಾನಿಕ ನಿರ್ಣಯಕ್ಕೆ ಬರುವುದನ್ನು ತಡೆಗಟ್ಟುತ್ತದೆ.

ಜೀವವೈವಿಧ್ಯ ಆಯಕಟ್ಟಿನ ಸ್ಥಳವೆಂದರೆ ಅಧಿಕ ಪ್ರಮಾಣದಲ್ಲಿ ದೇಶೀಯ ತಳಿಗಳನ್ನು ಹೊಂದಿರುವ ವಲಯ ಎಂದು ಪರಿಗಣಿತವಾಗಿದೆ. Dr. ನಾರ್ಮನ್‌ ಮಯರ್ಸ್‌ ವಿಜ್ಞಾನ ನಿಯತಕಾಲಿಕೆ ದಿ ಎನ್ವಿರಾನ್ಮೆಂಟಲಿಸ್ಟ್‌ ನಲ್ಲಿ ಎರಡು ಲೇಖನಗಳಲ್ಲಿ ಮೊದಲ ಬಾರಿಗೆ ಈ ಜೀವವೈವಿಧ್ಯ ತಾಣಗಳನ್ನು ಗುರುತಿಸಿದರು.[೧೨][೧೩] ಉಷ್ಣವಲಯದ ಬಳಿಯೇ ವಸತಿಗೆ ಹೆಚ್ಚಿನ ನಿಬಿಡತೆ ಕಂಡು ಬರುತ್ತದೆ. ಹಲವಾರು ತಾಣಗಳು ಉಷ್ಣವಲಯಗಳಲ್ಲಿದ್ದು, ಇವುಗಳಲ್ಲಿ ಬಹುಪಾಲು ಕಾಡು ಪ್ರದೇಶಗಳಾಗಿವೆ.

ಬ್ರೆಜಿಲ್‌ಅಟ್ಲಾಂಟಿಕ್‌ ಅರಣ್ಯ ಜೀವವೈವಿಧ್ಯದ ತಾಣವಾಗಿದೆ. ಅಲ್ಲಿ ಸುಮಾರು 20,000 ಸಸ್ಯ ವರ್ಗಗಳು, ಜಾತಿಗಳು, 1350 ಕಶೇರುಕ ಪ್ರಾಣಿ ಮತ್ತು ಅಸಂಖ್ಯಾತ ಕೀಟಗಳಿವೆ; ಇವುಗಳಲ್ಲಿ ಅರ್ಧದಷ್ಟು ಇನ್ನೆಲ್ಲೂ ಕಂಡುಬಂದಿಲ್ಲ. ಮಡಗಾಸ್ಕರ್‌ನ ಹಣ್ಣೆಲೆ ಅರಣ್ಯವೂ ಸೇರಿದಂತೆ ಮಡಗಾಸ್ಕರ್‌ ದ್ವೀಪ ಮತ್ತು ತಗ್ಗು ಪ್ರದೇಶಗಳ ಮಳೆಕಾಡುಗಳಲ್ಲಿ ವಿವಿಧತೆ ಅಧಿಕ. ಅವು ದೇಶೀಯ ಮತ್ತು ಜೀವವೈವಿಧ್ಯ ಗುಣ ಹೊಂದಿವೆ. ಏಕೆಂದರೆ 65 ದಶಲಕ್ಷ ವರ್ಷಗಳ ಹಿಂದೆ ಈ ದ್ವೀಪ ಆಫ್ರಿಕಾ ಖಂಡದಿಂದ ಬೇರ್ಪಟ್ಟು, ತಳಿ ಮತ್ತು ಪರಿಸರ ವ್ಯವಸ್ಥೆಗಳಲ್ಲಿ ಬಹುಪಾಲು ಸ್ವತಂತ್ರವಾಗಿ ವಿಕಸನ ಹೊಂದಿ, ಆಫ್ರಿಕಾ ಖಂಡದಲ್ಲಿರುವ ವಿಭಿನ್ನ, ಅಪೂರ್ವ ಜಾತಿಗಳಿಗೆ ಮೂಲವಾಗಿದೆ.

ಅತಿ ವಿಶಿಷ್ಟ ಗುಣಲಕ್ಷಣಗಳ ವಾಸಸ್ಥಾನಗಳಿಂದ ಉನ್ನತ ಜೀವವೈವಿಧ್ಯದ (ಉನ್ನತ ಸ್ಥಳೀಯತೆಯ ಸ್ವರೂಪದ್ದು ಕೂಡಾ) ಅನೇಕ ವಲಯಗಳು ಉದ್ಭವಿಸುತ್ತವೆ. ಈ ವಾಸಸ್ಥಾನಗಳಿಗೆ ಅಸಾಮಾನ್ಯವಾದ ಹೊಂದಾಣಿಕಾ ವ್ಯವಸ್ಥೆಗಳು ಅಥವಾ ಕೌಶಲಗಳ ಅಗತ್ಯವಿರುತ್ತದೆ. ಉದಾಹರಣೆಗೆ, ಉತ್ತರ ಯುರೋಪ್‌ಸಸ್ಯದಿದ್ದಿಲು ಭೂಮಿಗಳು.

ವಿಕಾಸ

[ಬದಲಾಯಿಸಿ]
ಫನೆರೊಜೊಯಿಕ್‌ ಯುಗದಲ್ಲಿ ಗೋಚರಿಸಿದ ಕಡಲ ಪಳೆಯುಳಿಕೆಯ ಜೀವವೈವಿಧ್ಯ

ಇಂದು ಭೂಮಿಯ ಮೇಲೆ ಕಾಣಸಿಗುವ ಜೀವವೈವಿಧ್ಯವು 4 ದಶಲಕ್ಷ ವರ್ಷಗಳ ಜೀವ ವಿಕಾಸದ ಫಲವಾಗಿದೆ. ಜೀವಿಗಳ ಮೂಲ ಉಗಮವನ್ನು ವಿಜ್ಞಾನ ನಿಖರವಾಗಿ ಗುರ್ತಿಸಿಲ್ಲ. ಆದರೂ, ಭೂಮಿ ರೂಪುಗೊಂಡ ಸುಮಾರು ನೂರು ದಶಲಕ್ಷ ವರ್ಷಗಳ ನಂತರ ಜೀವಿಗಳು ನೆಲೆಗೊಂಡಿರಬಹುದು ಎಂಬುದನ್ನು ಕೆಲವು ಸಾಕ್ಷ್ಯಾಧಾರಗಳು ಸೂಚಿಸುತ್ತವೆ. ಸುಮಾರು 600 ದಶಲಕ್ಷ ವರ್ಷಗಳ ಹಿಂದೆ, ಸಮಸ್ತ ವಲಯ ಆರ್ಕಿಯಾ, ಬ್ಯಾಕ್ಟೀರಿಯಾ, ಪ್ರೊಟೊಸೋವನ್‌ಗಳು ಮತ್ತು ಇದೇ ರೀತಿಯ ಏಕಕೋಶೀಯ ಜೀವಿಗಳನ್ನು ಒಳಗೊಂಡಿತ್ತು.

ಫಾನೆರೊಜೊಯಿಕ್‌ (ಕಳೆದ 540 ದಶಲಕ್ಷ ವರ್ಷಗಳು) ಯುಗದಲ್ಲಿ ಜೀವವೈವಿಧ್ಯ ಇತಿಹಾಸ ಆರಂಭಗೊಂಡಿತು. - ಕ್ಯಾಂಬ್ರಿಯನ್‌ ಸ್ಫೋಟದ ಸಮಯದಲ್ಲಿ ಬಹುಶಃ ಪ್ರತಿಯೊಂದು ಬಹುಕೋಶೀಯ ಜೀವಿಗಳ ಫೈಲಮ್‌(ಅವತಾರ) ಮೊದಲ ಬಾರಿಗೆ ಗೋಚರಿಸಿತು. ಆನಂತರದ 400 ದಶಲಕ್ಷ ವರ್ಷಗಳಲ್ಲಿ ಜಾಗತಿಕ ವೈವಿಧ್ಯವು ಮಂದ ಗತಿ ತೋರಿತು. ಆದರೆ, ಅದು ಸಮೂಹ ಅಳಿವು ಎಂದು ವಿಂಗಡಿಸಲಾಗಿ,ಜೀವಿಗಳ ಭಾರೀ ಪ್ರಮಾಣದ ಹಾನಿ ಸಹ ತೋರಿತು.

ಪಳೆಯುಳಿಕೆಯ ದಾಖಲೆಯಲ್ಲಿ ಗೋಚರವಾದ ಜೀವವೈವಿಧ್ಯವು, ಕೊನೆಯ ಕೆಲವು ದಶಲಕ್ಷ ವರ್ಷಗಳು ಭೂಮಿಯ ಇತಿಹಾಸದಲ್ಲಿಯೇ ಮಹಾ ಜೀವವೈವಿಧ್ಯ ಉದ್ಭವದ ಕಾಲವನ್ನು ಒಳಗೊಂಡಿದೆ. ಸದ್ಯದ ಭೌಗೋಳಿಕ ಜೀವವೈವಿಧ್ಯ ವಿಂಗಡಣೆಯು ಪಳೆಯುಳಿಕೆಗಳ ಆಯ್ಕೆಯ ಲೋಪಗಳಿಂದ ಕೂಡಿರುವುದರಿಂದ ಬಹುತೇಕ ಪರಿಣಿತರು ಈ ವಾಖ್ಯಾನವನ್ನು ಬೆಂಬಲಿಸುವುದಿಲ್ಲ. ಇದು ಭೂವೈಜ್ಞಾನಿಕ ದಾಖಲೆಗಳಿಗೆ ಸರಿಯಾಗಲಾರದು ಎಂಬ ವಾದವೂ ಇದೆ. ಮಾನವ ನಿರ್ಮಿತ ವಸ್ತುಗಳ ಮಾದರಿ ಹೊರತುಪಡಿಸಿ, ಆಧುನಿಕ ಜೀವವೈವಿಧ್ಯವು, 300 ದಶಲಕ್ಷ ವರ್ಷಗಳ ಹಿಂದಿನಕ್ಕಿಂತ ಹೆಚ್ಚು ಭಿನ್ನವಾಗಿರಲಿಲ್ಲ ಎಂದು ಕೆಲವರು (ಉದಾಹರಣೆಗೆ ಅಲ್ರಾಯ್‌ ಮತ್ತು ಇತರರು, 2001) ವಾದಿಸಿದ್ದಾರೆ.[೧೪] ಪ್ರಸ್ತುತ ಜೀವ ವೈವಿಧ್ಯದ ಅಂದಾಜುಗಳು 2 ದಶಲಕ್ಷಗಳಿಂದ 100 ದಶಲಕ್ಷ ಜಾತಿಗಳವರೆಗೂ ಕಾಣಸಿಗುತ್ತವೆ. ಇದರಲ್ಲಿ ಅತ್ಯುತ್ತಮ ಅಂದಾಜಿನ ಸುಮಾರು 13-14 ದಶಲಕ್ಷ ಜೀವಿಪ್ರಭೇಧ. ಬಹುಪಾಲು ಸಂಧಿಪದಿಗಳಾಗಿದ್ದವು (ಆರ್ಥ್ರೊಪಾಡ್ಸ್‌).[೧೫]

ಮನುಕುಲ ಆರಂಭ ಕಾಲವು ಸಾಮೂಹಿಕ ಅಳಿವಿನ ಕಾಲವೂ ಆಗಿದೆ. ಇದಕ್ಕೆ ಹಾಲಸೀನ್‌ ವಿನಾಶ ಘಟನೆ ಎನ್ನಲಾಗಿದೆ. ಪರಿಸರದ ಮೇಲೆ ಮಾನವನ ಪ್ರಭಾವ ಎಂದು ಹಲವು ಜೀವವಿಜ್ಞಾನಿಗಳು ಒಪ್ಪುತ್ತಾರೆ. ಮುಂದಿನ ನೂರು ವರ್ಷಗಳಲ್ಲಿ ಅಳಿವಿನ ಪ್ರಮಾಣವು ಬಹಳಷ್ಟು ಪ್ರಭೇಧಗಳ ಕಣ್ಮರೆಗೆ ಸಾಧ್ಯತೆ ತರಲಿದೆ. ಮನುಷ್ಯನ ಆಕ್ರಮಣ ಪ್ರವೃತ್ತಿ ಸಾಕಷ್ಟು ಪ್ರಭಾವಿತವಾಗಿದೆ ಎಂದೂ ವಾದಿಸಲಾಗಿದೆ.[೧೬]

ನವೀನ ತಳಿಗಳನ್ನು ನಿರಂತರವಾಗಿ ಸಂಶೋಧಿಸಲಾಗುತ್ತಿದೆ (ಪ್ರತಿ ವರ್ಷ ಸರಾಸರಿ ಸುಮಾರು 5ರಿಂದ 10,000 ಹೊಸ ಜಾತಿಗಳು); ಇವುಗಳಲ್ಲಿ ಬಹು ಸಂಖ್ಯೆಯ ಕೀಟಗಳು). ಹಲವನ್ನು ಗುರ್ತಿಸಿದ್ದರೂ ಇನ್ನೂ ವಿಂಗಡಿಸಲಾಗಿಲ್ಲ (ಸುಮಾರು 90%ರಷ್ಟು ಸಂಧಿಪದಿಗಳ ವಿಂಗಡನೆ ಬಾಕಿ ಇದೆ ಎಂದು ಅಂದಾಜಾಗಿದೆ).[೧೫] ಭೂಮಿಯ ಮೇಲೆ ವಾಸಿಸುವ ವೈವಿಧ್ಯಗಳಲ್ಲಿ ಹಲವು ಪ್ರಭೇದಗಳು ಉಷ್ಣವಲಯದ ಕಾಡುಗಳಲ್ಲಿ ಕಂಡುಬಂದಿವೆ.

ಮಾನವನ ಫಲಾಪೇಕ್ಷೆಗಳು

[ಬದಲಾಯಿಸಿ]
ಬೆಲ್ಜಿಯಮ್‌ನಲ್ಲಿರುವ ಬೇಸಿಗೆಯ ಕ್ಷೇತ್ರ (ಹಮೊಯಿಸ್‌).

ಜೀವವೈವಿಧ್ಯವು ನೈಸರ್ಗಿಕ ಪರಿಸರ ಪ್ರಕ್ರಿಯೆ ಮತ್ತು ಸೇವೆಗಳ (ಸೌಲಭ್ಯ) ಅನುಭೂತಿಯಾಗಿದೆ.[೧೭]. ಜೀವ ಸಂಕುಲಕ್ಕೆ ಅನುಕೂಲವಾಗುವ ಪರಿಸರದ ಉಪಯೋಗಗಳೆಂದರೆ ಹವಾ ಗುಣ, ಪರಿಸರ (ಜಾಗತಿಕ CO2 ಸ್ವಾಧೀನ ಮತ್ತು ಸ್ಥಳೀಯ),ಶುದ್ಧ ನೀರು, ಪರಾಗಸ್ಪರ್ಶ ಮತ್ತು ಫಲವತ್ತಾದ ಭೂ ಕೊರೆತ ತಡೆ.[೧೮]

ಶಿಲಾಯುಗದಿಂದ, ಮಾನವನ ಅತೀ ಅವಲಂಬನೆಯಿಂದ, ಜೀವವೈವಿಧ್ಯದ ಅಳಿವಿನ ಪ್ರಮಾಣವು ಭೂವೈಜ್ಞಾನಿಕ ಅಂದಾಜಿಗಿಂತಲೂ ಹೆಚ್ಚಾಗಿದೆ. ಜಾತಿಗಳ ಅಳಿವಿನ ಅಂದಾಜು ಬಹಳ ಕಷ್ಟಕರ. ಆದರೆ, ಅಳಿವು ಭೂವೈಜ್ಞಾನಿಕ ದಾಖಲೆಯ ಪ್ರಕಾರ ಸುಮಾರು 100 ಪಟ್ಟು ಹೆಚ್ಚು ವೇಗದಲ್ಲಿ ನಡೆಯುತ್ತಿದೆ, ಅಥವಾ ಬಹುಶಃ ಸುಮಾರು 10,000 ಪಟ್ಟು ವೇಗವಾಗಿ ಸಂಭವಿಸುತ್ತದೆ.[೧೯] ಗಣನೀಯವಾಗಿ ಬೆಳೆಯುತ್ತಿರುವ ಜನಸಂಖ್ಯೆಗೆ ಆಹಾರ ಪೂರೈಕೆ ಹಾಗೂ ಮಾನವನ ಮಿತಿಮೀರಿದ ಅರಣ್ಯ ಪ್ರದೇಶದ ಉಪಭೋಗದಿಂದಾಗಿ ನಗರೀಕರಣ ವ್ಯಾಪಿಸುತ್ತಿದೆ. ಗಣಿಗಾರಿಕೆಯಿಂದ ಲೂಟಿ ಮತ್ತು ಕಾಡು ಪ್ರದೇಶದ ದುರ್ಬಳಕೆ ಇಂದು ವನ್ಯ ಜೀವಿಗಳ ವಿನಾಶಕ್ಕೆ ಕಾರಣವಾಗಿದೆ.

ಪರಿಸರ ಮಾನವನಿಗೆ ಲೌಕಿಕತೆಯನ್ನು ಕಲಿಸುವ ಪಾಠಶಾಲೆಯಾಗಿದೆ. ಇದು ದಿನಬಳಕೆಯ ವಸ್ತುಗಳನ್ನಲ್ಲದೇ ಧಾರ್ಮಿಕತೆಯನ್ನು ಉತ್ತೇಜಿಸುವ ಸ್ಫೂರ್ತಿಯಾಗಿದೆ. ಮನುಷ್ಯ ನಿಸರ್ಗ ಸೌಂದರ್ಯದಲ್ಲಿ ತನ್ಮಯನಾಗುತ್ತಾನೆ, ಇದು ಪರಿಸರದ ಅಲೌಕಿಕ ಉಪಕಾರ.

ಹುಲ್ಲು ಬೆಳೆಸುವುದು ಕೃಷಿಯಲ್ಲಿ ಆರ್ಥಿಕವಾಗಿ ಉತ್ತಮ ಆದಾಯದ ವಿಧಾನ. ಲ್ಯಾಂಡ್ರೇಸಸ್‌. ಬೇಸಾಯದ ಚಟುವಟಿಕೆಗಳು ಇಲ್ಲದಾಗ ಕೃಷಿಕ ತನ್ನ ಭೂಮಿಯಲ್ಲಿ ಹುಲ್ಲು ಬೆಳೆಯುತ್ತಾನೆ.[ಸೂಕ್ತ ಉಲ್ಲೇಖನ ಬೇಕು]ಇದು ಅರ್ಥಿಕ ಮೌಲ್ಯ ವೃದ್ಧಿಗೆ ಪೂರಕವಾಗುತ್ತದೆ ಮತ್ತು ಪರಿಸರದ ಸಮತೋಲನ ಕಾಯ್ದುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ಇಳುವರಿ ಹೆಚ್ಚಳವೂ ಇದೆ. ಆಲೂಗಡ್ಡೆ ಮತ್ತು ಕಾಫಿಯಂತಹ ಪ್ರಮುಖ ಬೆಳೆಗಳು ಕೇವಲ ಕೆಲವೇ ತಳಿ ಅಭಿವೃದ್ಧಿಯ ಫಲಿತಾಂಶಗಳಾಗಿವೆ. ಇದಕ್ಕೆ ನಿಗದಿತ ಕಾಲಘಟ್ಟವನ್ನು ಹೊಂದಲಾಗಿದೆ[ಸೂಕ್ತ ಉಲ್ಲೇಖನ ಬೇಕು]. ಕಳೆದ ಕೆಲವರ್ಷಗಳಿಂದ ಆಹಾರ ಧಾನ್ಯಗಳ ಅಧಿಕ ಇಳುವರಿಗೆ ಹಲವಾರು ವೈಜ್ಣಾನಿಕ ಸುಧಾರಣೆ ತರಲಾಗಿದೆ. ಸುಧಾರಿತ ಮತ್ತು ಹೈಬ್ರೀಡ್ ತಳಿಗಳ ಉತ್ಪಾದನೆಗೆ ಹೆಚ್ಚು ಒತ್ತು ನೀಡುವುದು ಕಾರಣವಾಗಿದೆ[ಸೂಕ್ತ ಉಲ್ಲೇಖನ ಬೇಕು]. ಅಂತರ್ ಜಾತೀಯ ತಳಿಗಳ ಮಿಶ್ರಣ ಮತ್ತು ಅಧಿಕ ಇಳುವರಿ ಜಾತಿಗಳ ಸಂಶೋಧನೆ ಇಂದಿನ ಅಗತ್ಯವಾಗಿದೆ. ವಿಶೇಷ ತಳಿಗಳ ಆವಿಷ್ಕಾರದಿಂದ ಇಳುವರಿ ದುಪ್ಪಟ್ಟುಗೊಂಡು ಹಸಿರು ಕ್ರಾಂತಿಗೆ ನಾಂದಿ ಹಾಡಿತು. 50 ವರ್ಷಗಳಿಂದ ಇವುಗಳ ಸಂಶೋಧನೆ ಇಂದು ಫಲಿತಾಂಶ ನೀಡಿದೆ.[ಸೂಕ್ತ ಉಲ್ಲೇಖನ ಬೇಕು].

ಪ್ರಮುಖ ಆಹಾರ ಬೆಳೆ ರೋಗಕಾರಕವಾಗಿ ಇಳುವರಿ ಕಡಿಮೆಯಾದಾಗ ಪರ್ಯಾಯ ತಳಿಗಳನ್ನು ಬೆಳೆಯಲು ವಿಜ್ಞಾನಿಗಳು ಮುಂದಾಗುತ್ತಾರೆ. ಇಂತಹ ಸಂದರ್ಭದಲ್ಲಿ ವಿವಿಧ ನೂತನ ಬೀಜಗಳ ಮಿಶ್ರ ಬೆಳೆಗಳ ಅಭಿವೃದ್ಧಿ ಮಾಡಬೇಕಾಗುತ್ತದೆ'

  • 1846ರಲ್ಲಿ ಐರಿಷ್‌ ಆಲೂಗಡ್ಡೆ ರೋಗ (ಐರಿಷ್‌ ಪೊಟೆಟೊ ಬ್ಲೈಟ್‌) ಸುಮಾರು ಒಂದು ದಶಲಕ್ಷ ಜನರ ಸಾವಿಗೆ ಕಾರಣವಾಯಿತು. ಇದರಷ್ಟೇ ಜನರು ವಲಸೆ ಹೋಗಬೇಕಾಯಿತು. ಆಲೂಗಡ್ಡೆಯ ಕೇವಲ ಎರಡೇ ವಿಧಗಳ ಬೆಳೆಗೆ ಆದ್ಯತೆ ನೀಡಿದ್ದೇ ಇದಕ್ಕೆ ಕಾರಣ. ಇವರಡೂ ರೋಗಕ್ಕೆ ಸುಲಭ ತುತ್ತಾಗಬಲ್ಲವಾಗಿದ್ದವು.
  • 1970ರ ಸುಮಾರಿಗೆ ಇಂಡೋನೇಷಿಯಾ ದಿಂದ ಭಾರತದವರೆಗಿನ ಭತ್ತದ ಹೊಲಗದ್ದೆಗಳಿಗೆ ರೈಸ್ ಗ್ರ್ಯಾಸಿ ಸ್ಟಂಟ್‌ ವೈರಸ್‌ ಸೋಂಕು ತಗುಲಿತ್ತು. ಇದರ ಪ್ರತಿರೋಧ ಶಕ್ತಿಗಾಗಿ 6273 ವಿಧದ ತಳಿಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.[೨೦] ಇತ್ತೀಚೆಗೆ 1966ರಲ್ಲಿ ಭಾರತೀಯರು ಕಂಡು ಹಿಡಿದ ಭತ್ತದ ತಳಿ ಐರಿಷ್ ತಳಿಗೆ ತದ್ವಿರುದ್ದವಾದ ಪ್ರತಿರೋಧಕ ಶಕ್ತಿ ಹೊಂದಿತ್ತು.[೨೦] ಈ ಮಿಶ್ರ ತಳಿ ಇತರ ವಿಧಗಳೊಂದಿಗೆ ಪರ್ಯಾಯವಾಗಿ ಇದೀಗ ವ್ಯಾಪಕವಾಗಿ ಬೆಳೆಸಲಾಗಿದೆ.[೨೦]
  • 1970ರಲ್ಲಿ ಶ್ರೀಲಂಕಾ, ಬ್ರೆಜಿಲ್‌ ಮತ್ತು ಮಧ್ಯ ಅಮೆರಿಕಾದ ಕಾಫಿ ತೋಟಗಳಲ್ಲಿ ಕಾಫಿ ರಸ್ಟ್‌ ಎಂಬ ರೋಗ ಹರಡಿತು. ಪ್ರತಿರೋಧಕ ಶಕ್ತಿಯ ಕಾಫಿ ಬೆಳೆ ಎಥ್ಯೊಪಿಯಾದಲ್ಲಿ ಕಂಡು ಹಿಡಿಯಲಾಯಿತು.[೨೧] ಆದರೂ, ರೋಗಗಳೇ ಒಂದು ರೀತಿಯ ಜೀವವೈವಿಧ್ಯದ ರೂಪಗಳಾಗಿವೆ.
ಬ್ರೆಜಿಲ್‌ನಲ್ಲಿರುವ ಅಮೆಜಾನ್‌ ಮಳೆಕಾಡು

ಒಂದೇ ತೆರನಾದ ಬೆಳೆಗಳ (ತಳಿಗಳ) ಬಳಕೆ (ಮೊನೊಕಲ್ಚರ್‌) ಹಲವಾರು ಕೃಷಿ ದುರಂತಗಳನ್ನು ಕಂಡಿತು. ಯುರೋಪಿನ ಮದ್ಯಸಾರ ಉದ್ಯಮ 1800ರಲ್ಲಿ ಕುಸಿದು ಹೋಯಿತು. ಅದೇ ತೆರನಾಗಿ ದಕ್ಷಿಣದ ಗೋವಿನ ಜೋಳ ಕಾರ್ನ್ ಬ್ಲೈಟ್ ಎಂಬ ಸಾಂಕ್ರಾಮಿಕಕ್ಕೆ ತುತ್ತಾಯಿತು.[೨೨] ಇದನ್ನೂ ನೋಡಿ: ಕೃಷಿಯ ಜೀವವೈವಿಧ್ಯ

ಉನ್ನತ ಮಟ್ಟದ ಜೀವವೈವಿಧ್ಯವು ಕೆಲವು ರೋಗಗಳ ಹರಡುವಿಕೆಯನ್ನು ನಿಯಂತ್ರಿಸುತ್ತದೆ. ವಿವಿಧ ಸುಧಾರಿತ ತಳಿಗಳ ಮೂಲಕ ಪ್ರತಿರೋಧಕತೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುವುದು ರೋಗ ತಡೆಗೆ ಒಂದು ಕ್ರಮ ಎನ್ನಬಹುದು.[ಸೂಕ್ತ ಉಲ್ಲೇಖನ ಬೇಕು].

ಜೀವವೈವಿಧ್ಯವು ಮನುಷ್ಯರ ಹಸಿವನ್ನು ನೀಗುತ್ತದೆ. [ಸೂಕ್ತ ಉಲ್ಲೇಖನ ಬೇಕು]. ಮನುಷ್ಯನ ಆಹಾರಕ್ಕಾಗಿ ಸುಮಾರು 20 ತೆರನಾದ ಸಸ್ಯ[ಸೂಕ್ತ ಉಲ್ಲೇಖನ ಬೇಕು] ಪ್ರಕಾರಗಳು ಉಪಯೋಗಿಸಲ್ಪಡುತ್ತವೆ. ಒಟ್ಟಾರೆ ಪ್ರಾಣಿ ಮತ್ತು ಗಿಡ-ಮರಗಳ 40000 ಪ್ರಭೇಧಗಳು ಬಹುಪಯೋಗಿ ಎನಿಸಿವೆ.ಇದು ಮಾನವನ ಬಳಕೆಯ[ಸೂಕ್ತ ಉಲ್ಲೇಖನ ಬೇಕು] ಶೇಕಡಾ 80ರಷ್ಟು ಪಾಲು ಪಡೆದಿದೆ. ವಿಶ್ವಾದ್ಯಂತ ಆಹಾರ, ಆಶ್ರಯ ಮತ್ತು ಉಡುಗೆಗಳಿಗಾಗಿ ಈ ಪ್ರಭೇದಗಳನ್ನು ಜನರು ಅವಲಂಬಿಸುತ್ತಾರೆ[ಸೂಕ್ತ ಉಲ್ಲೇಖನ ಬೇಕು]. ನಿಸರ್ಗದಲ್ಲಿ ಇನ್ನೂ ಹಲವಾರು ಅಗೋಚರ ಸಂಪನ್ಮೂಲಗಳಿವೆ, ಅವುಗಳನ್ನು ಹುಡುಕಿ ನಾವು ಅದರ ಪ್ರಯೋಜನ ಪಡೆಯಬೇಕಾಗಿದೆ. ಮಾನವನಿಗೆ ಯೋಗ್ಯ ಆಹಾರ ಹಾಗು ವಿವಿಧ ಉಪಭೋಗದ ಅವಕಾಶಗಳನ್ನು ಶೋಧಿಸಬೇಕಾಗಿದೆ.

ಮಾನವನ ಆರೋಗ್ಯ

[ಬದಲಾಯಿಸಿ]
ಪನಾಮಾದ ಬ್ಯಾರೊ ಕೊಲೊರೆಡೊ ದ್ವೀಪದಲ್ಲಿರುವ ವಿವಿಧ ಕಾಡಿನ ಚಾವಣಿಯು ವಿವಿಧ ಹಣ್ಣುಗಳನ್ನು ನೀಡಿತು.

ಮಾನವನ ಸ್ವಾಸ್ಥ್ಯಕ್ಕೆ ಜೀವವೈವಿಧ್ಯದ ಅಧ್ಯಯನ ಒಂದು ಅಂತಾರಾಷ್ಟ್ರೀಯ ರಾಜಕೀಯ ವಿಷಯವಾಗಿದೆ. ಇದರಲ್ಲಿ ಜಾಗತಿಕ ಆರೋಗ್ಯ ಮನುಕುಲದ ಮೇಲೆ ಪರಿಣಾಮ ಬೀರಿರುವುದಕ್ಕೆ ವೈಜ್ಞಾನಿಕ ಸಾಕ್ಷ್ಯಾಧಾರಗಳು ದೊರಕುತ್ತಿವೆ.[೨೩][೨೪][೨೫] ಹವಾಮಾನದಲ್ಲಾಗುವ ಬದಲಾವಣೆ[ಸೂಕ್ತ ಉಲ್ಲೇಖನ ಬೇಕು]ಗಳಿಂದ ಆರೋಗ್ಯದ ಮುನ್ಸೂಚನೆ ಅಪಾಯಗಳು ಜೀವವೈವಿಧ್ಯಗಳಲ್ಲಿನ ಬದಲಾವಣೆಗಳೊಂದಿಗೆ ತಳಕು ಹಾಕಿಕೊಂಡಿವೆ. (ಉದಾಹರಣೆಗೆ, ರೋಗಹರಡುವ ಮತ್ತು ಜನಸಂಖ್ಯೆಯಲ್ಲಿನ ಏರಿಳಿತಗಳು, ಶುದ್ಧ ನೀರಿನ ಅಭಾವ, ಕೃಷಿ ಜೀವವೈವಿಧ್ಯ ಮತ್ತು ಆಹಾರ ಮೂಲಗಳ ಮೇಲೆ ದುಷ್ಪರಿಣಾಮ) ನಮ್ಮ ಆರೋಗ್ಯ,ಆಹಾರ ಕ್ರಮ,ಆಹಾರ ಭದ್ರತೆ ಮೇಲೆ ನಿಸರ್ಗ ಸಾಕಷ್ಟು ಪ್ರಭಾವ ಬೀರುತ್ತದೆ. ಸೋಂಕು ರೋಗಗಳ ತಡೆಗೆ,ವೈದ್ಯಕೀಯ ವಿಜ್ಞಾನ ಅಧ್ಯಯನಕ್ಕೆ ಹಾಗು ಔಷದೀಯ ಮೂಲಗಳಿಗೆ ಪರಿಸರ ನಮ್ಮ ಮೇಲೆ ಗಾಢ ಪರಿಣಾಮ ಬೀರುತ್ತದೆ. ಇದರಿಂದ ಮಾನಸಿಕ ಸ್ವಾಸ್ಥ್ಯ[೨೬] ಕಾಪಾಡಲು ಸಹ ಪೃಕೃತಿ ನಮ್ಮೊಂದಿಗೆ ಸಾಥ್ ನೀಡುತ್ತದೆ.

ನಿಸರ್ಗವು ವಿನಾಶದ ಅಪಾಯಗಳನ್ನು ಕಡಿಮೆ ಮಾಡಲು ನೆರವಾಗುತ್ತದೆ. ನೈಸರ್ಗಿಕ ವಿಕೋಪಗಳ ನಂತರದ ಅಪಾಯಗಳಿಗೂ ಜೈವಿಕ ವೈವಿಧ್ಯ ಪರಿಹಾರ ಸೂಚಿಸುತ್ತಿದೆ.[೨೭][೨೮] ಗಾಯಗಳಿಗೆ ಮುಲಾಮಿನಂತೆ ಪ್ರಕೃತಿ ಕೆಲಸ ಮಾಡುತ್ತದೆ.

ಜೀವವೈವಿಧ್ಯದ ಪ್ರಮುಖ ಉಪಕಾರವೆಂದರೆ ಔಷಧಿಗಳ ಸಂಶೋಧನೆ ಮತ್ತು ವೈದ್ಯಕೀಯ ಸಂಪನ್ಮೂಲಗಳ ಲಭ್ಯತೆಯೂ ಒಂದು[ಸೂಕ್ತ ಉಲ್ಲೇಖನ ಬೇಕು]. ಇದು ಆರೋಗ್ಯದ ವಿಷಯಗಳನ್ನು ಅರಿಯಲು ಒಂದು ಕೀಲಿ ಕೈಯಂತೆ ಕಾರ್ಯ ನಿರ್ವಹಿಸುತ್ತದೆ. ಪರೋಕ್ಷವಾಗಿ ಪರಿಸರ ಮೂಲಗಳಲ್ಲಿ ಔಷಧಗಳ ಪಾಲು ಗಮನಾರ್ಹವಾಗಿದೆ.. ಚಿವಿಯನ್‌ ಮತ್ತು ಬರ್ನ್‌ಸ್ಟೀನ್‌ರವರ ವರದಿಯಂತೆ, US ಮಾರುಕಟ್ಟೆಯಲ್ಲಿರುವ ಔಷಧೀಯ ಒಟ್ಟು ಪ್ರಮಾಣದ ಕನಿಷ್ಠ 50%ರಷ್ಟು, ಗಿಡ,ಸಸ್ಯ, ನೈಸರ್ಗಿಕ ಮೂಲಗಳಿಂದ ಪಡೆಯಲಾಗುತ್ತಿದೆ. ವಿಶ್ವದ ಜನಸಂಖ್ಯೆಯಲ್ಲಿ ಸುಮಾರು 80%ರಷ್ಟು ನೈಸರ್ಗಿಕ ಮೂಲದ ಔಷಧಿಗಳನ್ನು (ಸಾಂಪ್ರದಾಯಿಕ ಅಥವಾ ಆಧುನಿಕ ವೈದ್ಯಕೀಯ ಪದ್ಧತಿಗಳಲ್ಲಿ ಬಳಕೆ) ಅವಲಂಬಿಸಲಾಗುತ್ತಿದೆ.[೨೪] ಜೀವಿ ಲೋಕದ ವೈವಿಧ್ಯದಲ್ಲಿ ಕೇವಲ ಸಣ್ಣ ಪ್ರಮಾಣವನ್ನು ಹೊಸ ಔಷಧಗಳ ಸಂಶೋಧನೆಗಾಗಿ ಬಳಸಲಾಗುತ್ತಿದೆ. ಬಯೊನಿಕ್ಸ್‌ ತಂತ್ರಜ್ಞಾನದ ಮೂಲಕ, ಗಮನಾರ್ಹ ಅಭಿವೃದ್ಧಿಗಳಾಗಿವೆ. ಸಮೃದ್ಧ ಅತ್ಯಾಧುನಿಕ ಜೀವವೈವಿಧ್ಯದ ಬೆಳವಣಿಗೆ ಕ್ರಮವಿಲ್ಲದಿದ್ದರೆ ಇದು ಅಸಾಧ್ಯವಾಗುತ್ತಿತ್ತು. ಮಾರುಕಟ್ಟೆ ವಿಶ್ಲೇಷಣೆ ಮತ್ತು ಜೀವವೈವಿಧ್ಯ ವಿಜ್ಞಾನದ ಅಧ್ಯಯನದ ಪ್ರಕಾರ , 1980ರ ದಶಕದಲ್ಲಿ ಔಷಧ ಉತ್ಪಾದನೆ ಕುಂಠಿತಗೊಂಡಿತು. ನಿಸರ್ಗ ದತ್ತ ಮೂಲವಸ್ತುಗಳ ಬಳಕೆಯನ್ನು ನಿರ್ಲಕ್ಷಿಸಿ ಕೇವಲ ಸಂಶೋಧನೆ ಮತ್ತು ಅಭಿವೃದ್ಧಿಗೆ ಒತ್ತು ಕೊಡಲಾಯಿತು. ಇದರಿಂದಾಗಿ ('ಬಯೊಪ್ರಾಸ್ಪೆಕ್ಟಿಂಗ್‌')ಯಿಂದ ಸರಿದು ಜಿನೊಮಿಕ್ಸ್‌ ಮತ್ತು ರಸಾಯನಿಕ ವಿಷಯವನ್ನಾಧರಿಸಿ ಸಂಶೋಧನೆ ಮತ್ತು ವೃದ್ಧಿಯನ್ನು ಕೈಗೆತ್ತಿಕೊಳ್ಳಲಾಯಿತು.ಇವರೆಡೂ ನಿರೀಕ್ಷಿತ ಫಲಿತಾಂಶ ನೀಡಿಲ್ಲ. , ನೈಸರ್ಗಿಕ ಉತ್ಪಾದನಾ ಪದ್ದತಿ ಹೊಸತನಕ್ಕೆ ನಾಂದಿ ಹಾಡಿತು.ಇದು ಆರ್ಥಿಕ ಮತ್ತು ಆರೋಗ್ಯ ಸವಲತ್ತುಗಳನ್ನೂ ಒದಗಿಸುತ್ತದೆ.[೨೯][೩೦] ಜಲ ಪರಿಸರ ವ್ಯವಸ್ಥೆಯು ವಿಶೇಷ ಆಸಕ್ತಿ ಕೇಂದ್ರವಾಗಿದೆ.[೩೧] ಆದರೂ, ಅನಿಯಂತ್ರಿತ ಮತ್ತು ಅಪಾಯಕಾರಿ ಬಯೊಪ್ರೊಸ್ಪೆಕ್ಟಿಂಗ್‌ ಒಂದು ರೀತಿಯಲ್ಲಿ ವಿಪರೀತ ಬಳಕೆ ಎಂದು ಪರಿಗಣಿಸಬಹುದು. ಇದು ಪರಿಸರ ವ್ಯವಸ್ಥೆಗಳನ್ನು ಹಾಳು ಮಾಡುವುದಲ್ಲದೆ, ಸಂಪನ್ಮೂಲಗಳ ವಿನಾಶಕ್ಕೂ ಕಾರಣವಾಗುತ್ತದೆ. ಸಮುದಾಯ ಮತ್ತು ರಾಜ್ಯಗಳ ಸ್ವಾಮ್ಯಗಳ ಮೇಲೆ ಪ್ರಭಾವ ಬೀರಲೂಬಹುದು.[೩೨][೩೩][೩೪]

ಉದ್ಯಮ ಮತ್ತು ಕೈಗಾರಿಕೆ

[ಬದಲಾಯಿಸಿ]

ಕೈಗಾರಿಕೆಗಳಿಗೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಜೈವಿಕ ಸಂಪನ್ಮೂಲಗಳಿಂದ ನೇರವಾಗಿ ಪಡೆಯಲಾಗುತ್ತದೆ. ಇವುಗಳಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು, ನಾರುಗಳು, ವರ್ಣದ್ರವ್ಯ(ಡೈ)ಗಳು, ರಾಳರಬ್ಬರ್‌ ಮತ್ತು ತೈಲಗಳು ಸೇರಿವೆ. ಜೀವಿಗಳ ವೈವಿಧ್ಯದಿಂದ ಕಚ್ಚಾ ಸಾಮಗ್ರಿಗಳ ಬಳಕೆ ಬಗ್ಗೆ ಇನ್ನಷ್ಟು ಸಂಶೋಧನೆಗೆ ವಿಫುಲ ಅವಕಾಶವಿದೆ. ಇದಕ್ಕೆ ತಾಳ್ಮೆಯ ಅಗತ್ಯವನ್ನೂ ನಿಸರ್ಗ ಅಪೇಕ್ಷಿಸುತ್ತದೆ. ಆರೋಗ್ಯಕರ ಆರ್ಥಿಕ ಅಭಿವೃದ್ಧಿಗೆ ಜೀವವೈವಿಧ್ಯ ಮತ್ತು ಪರಿಸರ ಸಾಮಗ್ರಿಗಳು ಮತ್ತು ಉಪಭೋಗಗಳು ತಳಹದಿ ಎಂದು ಪರಿಗಣಿಸಲಾಗಿದೆ. ಜೀವವೈವಿಧ್ಯವು ಉದ್ಯಮಕ್ಕೆ ಒದಗಿಸುವ ಪ್ರಯೋಜನಗಳು ಪ್ರದೇಶದಿಂದ ಪ್ರದೇಶಕ್ಕೆ ಹಾಗೂ ವಿಭಿನ್ನ ಆರ್ಥಿಕ ವಲಯವನ್ನು ಅವಲಂಬಿಸಿವೆ. ಇದು ವ್ಯತ್ಯಾಸವಾಗುತ್ತಿರುತ್ತದೆ. ಆದರೆ, ಸಂಪನ್ಮೂಲಗಳ ಭದ್ರತೆ ನಿಸರ್ಗದ ಕೊಡುಗೆ (ನೀರಿನ ಪ್ರಮಾಣ ಮತ್ತು ಗುಣಮಟ್ಟ, ಮರ, ಕಾಗದ, ನಾರು, ಆಹಾರ ಮತ್ತು ಔಷಧೀಯ ಸಂಪನ್ಮೂಲಗಳು ಇತ್ಯಾದಿ) ಎಂದು ಒಪ್ಪಿಕೊಳ್ಳಲಾಗುತ್ತಿದೆ.[೩೫][೩೬][೩೭]

ಉದ್ಯಮ ಅಭಿವೃದ್ಧಿಗೆ ಜೀವ ವೈವಿಧ್ಯದ ವಿನಾಶ ಮಾರಣಾಂತಿಕವಾಗುತ್ತದೆ. ಇದೂ ಅಲ್ಲದೆ ಸುದೀರ್ಘ ಆರ್ಥಿಕ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತದೆ. ಜೈವಿಕ ಸಂಪನ್ಮೂಲದ ಅಳಿವು ಆರ್ಥಿಕ ಅಸ್ಥಿರತೆಗೆ ಕಾರಣವಾಗುತ್ತದೆ. ಇತ್ತೀಚೆಗೆ ವಿಶ್ವ ಸಂಪನ್ಮೂಲ ಸಂಸ್ಥೆ ಅಧ್ಯಯನ ನಡೆಸಿದೆ. ಈ ಅಧ್ಯಯನಗಳು ನಿರ್ದಿಷ್ಟ ಕೈಗಾರಿಕೆಗಳಲ್ಲಿ ಗುರುತಿಸಲಾದ ಅಪಾಯಗಳ ಸೂಚನೆಯನ್ನು ನೀಡುವ ಮೂಲಕ ತಮ್ಮ ಮುಂಜಾಗ್ರತೆ ಪ್ರದರ್ಶಿಸಿವೆ.[೩೮]
ಒರೆಗಾನ್‌ನ ಈಗಲ್‌ ಕ್ರೀಕ್‌ನಲ್ಲಿ ಕಾಲ್ನಡಿಗೆ ಯಾತ್ರೆ

ಇತರೆ ಪರಿಸರ ಉಪಯುಕ್ತತೆಗಳು

[ಬದಲಾಯಿಸಿ]

ಜೀವವೈವಿಧ್ಯವು ಅಗೋಚರ ಸವಲತ್ತುಗಳ ಭಂಡಾರವಾಗಿದೆ. ನಮ್ಮ ವಾತಾವರಣ ಮತ್ತು ಜಲಮೂಲ ಪೂರೈಕೆಯ ವ್ಯವಸ್ಥಿತ ನಿಯಂತ್ರಣಕ್ಕೆ ಕೊಂಡಿಯಾಗಿ ಪ್ರಮುಖ ಪಾತ್ರ ವಹಿಸುತ್ತದೆ. ನೀರು ಶುಧ್ಧೀಕರಣ, ಆಹಾರಾಂಶಗಳ ಪುನರ್ಬಳಕೆ ಮತ್ತು ಫಲವತ್ತಾದ ಮಣ್ಣನ್ನು ಒದಗಿಸಲು ಜೀವವೈವಿಧ್ಯವು ನೇರವಾಗಿ ಸಕ್ರಿಯವಾಗಿದೆ. ಮಾನವನ ಅಗತ್ಯ ಪೂರೈಕೆಗೆ ತಕ್ಕುದಾದ ಪರಿಸರ ನಿರ್ಮಿಸಲು ಮಾನವನ ಕೈಲಾಗದು ಎಂದು ಪ್ರಯೋಗಗಳು ತೋರಿಸಿವೆ. ಉದಾಹರಣೆಗೆ, ಕೀಟ ಪರಾಗಸ್ಪರ್ಶವನ್ನು ಮಾನವ-ನಿರ್ಮಿತವು ಅನುಕರಿಸಲಾಗದು; ಪರಿಶುದ್ಧ ಪರಿಸರ ಮಾತ್ರ ವಾರ್ಷಿಕ ಹತ್ತಾರು ಶತಕೋಟಿ ದಾಲರ್‌ಗಳ ಮೌಲ್ಯದ ಪರಿಸರ ವ್ಯವಸ್ಥೆ ಸೇವೆ-ಸವಲತ್ತುಗಳನ್ನು ಕೊಡಬಲ್ಲದು.ಇದು ಮನುಕುಲಕ್ಕೆ ನಿಸರ್ಗದ ನಿಸ್ವಾರ್ಥ ಸೇವೆ ಇನ್ನುವುದರಲ್ಲಿ ಸಂದೇಹವಿಲ್ಲ.

ಪರಿಸರ ಸ್ಥಿರತೆ ಜೀವವೈವಿಧ್ಯಕ್ಕೆ ಸಂಬಂಧಿಸಿದೆ. ವಿಶಿಷ್ಟ ಜೀವವೈವಿಧ್ಯವು ವಾಯುಗುಣಕ್ಕೆ ನಿರಂತರ ಸ್ಥಿರತೆ ನೀಡುತ್ತದೆ. ಮಾನವ ಶೋಷಣೆ ಅಥವಾ ಹವಾಮಾನದ ವೈಪರಿತ್ಯ ಅಥವಾ ಯಾವುದೇ ಕ್ಷೋಭೆಯ ಸಾಧ್ಯತೆಯನ್ನು ಕಡಿಮೆಗೊಳಿಸುತ್ತದೆ.

ರಜಾ ಕಾಲದ ವಿಶ್ರಾಂತಿ, ಸಾಂಸ್ಕೃತಿಕ ಮತ್ತು ಸದಭಿರುಚಿಯ ಮೌಲ್ಯ

[ಬದಲಾಯಿಸಿ]

ಹಲವರು ಬಿಡುವಿನ ವೇಳೆಯ ಚಟುವಟಿಕೆಗಳಾದ ಕಾಲ್ನಡಿಗೆಯ ಪ್ರವಾಸ (ಹೈಕಿಂಗ್‌), ಪಕ್ಷಿಧಾಮ ವೀಕ್ಷಣೆ ಅಥವಾ ನೈಸರ್ಗಿಕ ಇತಿಹಾಸದ ಅಧ್ಯಯನದ ವೇಳೆ ಜೀವವೈವಿಧ್ಯದಿಂದ ಸ್ಫೂರ್ತಿ ಪಡೆಯುತ್ತಾರೆ. ಜೀವವೈವಿಧ್ಯವು ಸಂಗೀತಗಾರರು, ಚಿತ್ರಕಲಾವಿದರು, ಶಿಲ್ಪಿಗಳು, ಲೇಖಕರು ಮತ್ತು ಇತರೆ ಕಲಾವಿದರಿಗೆ ಸ್ಫೂರ್ತಿಯಾಗಿದೆ. ಹಲವು ಸಾಂಸ್ಕೃತಿಕ ಸಮೂಹಗಳು ತಮ್ಮನ್ನು ನೈಸರ್ಗಿಕ ಪ್ರಪಂಚದ ಅಂಶವೆಂದು ಪರಿಗಣಿಸಿ ಇತರೆ ಜೀವಿಗಳ ಸಹಬಾಳ್ವೆಗೆ ಸಹಕಾರ ತೋರುತ್ತವೆ.

ಕೈತೋಟ, ಜಲಜೀವಿ (ಅಕ್ವೇರಿಯಮ್‌)ಗಳ ನಿರ್ವಹಣೆ ಮತ್ತು ಚಿಟ್ಟೆಗಳ ಸಂಗ್ರಹಗಳೆಲ್ಲವೂ ಜೀವವೈವಿಧ್ಯವನ್ನು ಅವಲಂಬಿಸಿವೆ. ಇಂತಹ ಜಾತಿಗಳ ಸಂಖ್ಯೆಯು ಅಪಾರ. ಸುಮಾರು ಸಾವಿರಾರುಗಟ್ಟಲೆಯಿರಬಹುದು. ಆದರೂ, ಬಹುಪಾಲು ವ್ಯವಹಾರಿ ಬುದ್ದಿಯ ಜೀವಿಗಳು ಮುಖ್ಯವಾಹಿನಿಯೊಳಗೆ ಪ್ರವೇಶಿಸಿಲ್ಲ.

ವಿದೇಶೀತಳಿಯ ಪಶು-ಪ್ರಾಣಿಗಳು ಮೂಲತಃ ಸ್ವದೇಶೀ ವರ್ಗ  ಮತ್ತು  ವಹಿವಾಟುದಾರರು, ಪೂರೈಕೆದಾರರು, ಜೀವಿಜನಕರು/ತಳಿಗಾರರು, ಪ್ರಚಾರಕರು ಮತ್ತು ಸೌಲಭ್ಯಗಳ ನಡುವಿನ ಸಂಬಂಧ ಬಹಳ ಜಟಿಲವಾಗಿದ್ದು,ಇದೂವರೆಗೂ ಸರಿಯಾಗಿ ಅರ್ಥಕ್ಕೆ ನಿಲುಕಿಲ್ಲ.  ಆದರೂ, ಅಪರೂಪದ,ನಿಸರ್ಗಜೀವಿಗಳನ್ನು ಕಂಡಾಗ ಸಾರ್ವಜನಿಕರು ಉತ್ತಮ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಾರೆ. ಅವರು ಇಂತಹವುಗಳ ಸೌಂದರ್ಯ ಮೌಲ್ಯಗಳಿಗೆ ಮನ್ನಣೆ ನೀಡುತ್ತಾರೆ.  ಕುಟುಂಬವೊಂದು ಸಸ್ಯಧಾಮ ಅಥವಾ ಪ್ರಾಣಿಸಂಗ್ರಹಾಲಯಕ್ಕೆ ಭೇಟಿ ನೀಡುವುದು ಶೈಕ್ಷಣಿಕ ಉಪಯುಕ್ತತೆ ಕಾರಣದಿಂದ. ಇದು ಒಂದು ಸದಭಿರುಚಿಯ ಅಥವಾ ಸಾಂಸ್ಕೃತಿಕ ಅನುಭವ ನೀಡುವುದು.

ತಾತ್ವಿಕವಾಗಿ, ಜೀವವೈವಿಧ್ಯವು ತನ್ನದೇ ಆದ ಸ್ವಾಭಾವಿಕ, ಸದಭಿರುಚಿಯ ಹಾಗೂ ಆಧ್ಯಾತ್ಮಿಕ ಮೌಲ್ಯ ಹೊಂದಿದೆಯೆಂದು ಹೇಳಬಹುದು. ಔಷಧ ಮತ್ತು ಇತರೆ ಉಪಯುಕ್ತ ಉತ್ಪನ್ನಗಳ ಕಾರಣಕ್ಕಾಗಿ, ಉಷ್ಣವಲಯದ ಕಾಡುಗಳು ಮತ್ತು ಇತರೆ ಪರಿಸರ ಕ್ಷೇತ್ರಗಳು ಮಾತ್ರ ಸಂರಕ್ಷಣೆಗಾಗಿ ಯೋಗ್ಯ ಎಂಬ ವಾದ ಮಂಡನೆಯಾಗಿದೆ.

DNA ಎಂಬುದು ಜ್ಞಾನದ ಮೂಲ[೩೯] ವಾಗಿರುತ್ತದೆ. ಜೀವ ಸಂಕುಲವನ್ನು ನಾಶಪಡಿಸುವುದು, ಪುಸ್ತಕವನ್ನು ಸುಟ್ಟಂತೆ; ಏಕೆಂದರೆ ಈ ಪುಸ್ತಕದಲ್ಲಿರುವ ಮಾಹಿತಿಯು ಸಾಕಷ್ಟು ವಿಸ್ತೃತವಾಗಿದೆ, ಪ್ರಾಮುಖ್ಯತೆ ಇದೆ,ಆದರೆ ಅದನ್ನು ಇಂಧನದ ರೂಪದಲ್ಲಿ ಬಳಸಬಹುದು ಎಂಬುದು ಕುತೂಹಲಕಾರಿ ಅಂಶ.

ವಿಭಿನ್ನ ಜೀವ ಸಂಕುಲ

[ಬದಲಾಯಿಸಿ]
ಪರಿಶೋಧವಾಗಿಲ್ಲದ ಮತ್ತು ಪರಿಶೋಧ ಮಾಡಲಾದ ಜಾತಿಗಳು

ಜಾಗತಿಕ ಜೀವಿವರ್ಗೀಕರಣ ಶಾಸ್ತ್ರ [೪೦] ಮತ್ತು ಯುರೋಪೀಯ ಜೀವಿವರ್ಗೀಕರಣದ ಸಂಸ್ಥೆಯ ಪ್ರಕಾರ, ಕೆಲವು ವಲಯಗಳಲ್ಲಿನ ಪ್ರಭೇಧಗಳ ಒಟ್ಟು ಸಂಖ್ಯೆಯು, ನಮಗೆ ಸದ್ಯಕ್ಕೆ ಮಾಹಿತಿಕ್ಕಿಂತಲೂ ಹೆಚ್ಚಿದೆ:

ಜೈವಿಕಮಂಡಲದ ಜೀವಿಗಳ ಪೈಕಿ ಕೇವಲ ಒಂದು ಭಾಗ ಮಾತ್ರ ನಮಗೆ ತಿಳಿದಿರುವ ಕಾರಣ, ನಮಗೆ ಪರಿಸರದ ಕಾರ್ಯವೈಖರಿಗಳ ಬಗ್ಗೆ ಸಂಪೂರ್ಣ ತಿಳಿವಳಿಕೆಯಿಲ್ಲ. ಪ್ರೊ. ಜೇಮ್ಸ್‌ ಮಲೆಟ್‌ರ ಪ್ರಕಾರ,ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ನಾವು ಈ ಜೀವವರ್ಗವನ್ನು ಅಗಣಿತ ಪ್ರಮಾಣದಲ್ಲಿ ವಿನಾಶದಂಚಿಗೆ ತಳ್ಳುತ್ತಿದ್ದೇವೆ.[೪೬] ಇದರ ಅರ್ಥ, ಯಾವುದೇ ಹೊಸ ತಳಿಯ ಅಧ್ಯಯನ ಆರಂಭಿಸುವ ಮುಂಚೆಯೇ ಅದು ಆಗಲೇ ಅಳಿಸಿಹೋಗಿರಬಹುದು.

ಗಂಡಾಂತರಗಳು

[ಬದಲಾಯಿಸಿ]

ಕಳೆದ ಶತಮಾನದಲ್ಲಿ, ಜೀವವೈವಿಧ್ಯದ ಕಣ್ಮರೆ ಹೆಚ್ಚಾಗಿರುವುದು ಗಮನಕ್ಕೆ ಬಂದಿದೆ. ಗಿಡಗಳ ಪರಿಚಿತ ಜಾತಿಗಳಲ್ಲಿ ಎಂಟನೆಯ ಒಂದು ಭಾಗದಷ್ಟು ಅಳಿವಿನ ಭೀತಿಯಲ್ಲಿವೆಯೆಂದು ಕೆಲವು ಅಧ್ಯಯನಗಳು ತೋರಿಸಿವೆ.[೪೭] ಜೈವಿಕ-ವಲಯ ಸಿದ್ಧಾಂತದ ಆಧಾರದ ಮೇಲೆ, ವರ್ಷಕ್ಕೆ ಸುಮಾರು 140,000 ಜೀವಿಗಳು ಇಲ್ಲವಾಗುತ್ತಿವೆ. ಇದನ್ನು ತೀವ್ರ ಚರ್ಚೆಗೆ[೪೮] ಒಳಪಡಬಹುದಾದ ಕೆಲವು ಅಂದಾಜುಗಳು ತಿಳಿಸಿವೆ. ಈ ಅಂಕಿ-ಅಂಶವು ಅಸಹನೀಯ ಪರಿಸರದ ಅವನತಿ ಸೂಚಿಸುತ್ತದೆ, ಏಕೆಂದರೆ ಪ್ರತಿ ವರ್ಷ ಪರಿಸರದ ಜೀವಿಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಜೈವಿಕ ಲೋಕಕ್ಕೆ ಪದಾರ್ಪಣೆ ಮಾಡುತ್ತವೆ. ಮಾನವನ ಇತಿಹಾಸದಲ್ಲೇ ಅತ್ಯಂತ ಅಧಿಕ ಪ್ರಮಾಣದಲ್ಲಿ ನಿಸರ್ಗ ಜೀವಿಸಂಕುಲ ಕಾಣೆಯಾಗುತ್ತಿದೆ. ಬಹುಶಃ ಎಲ್ಲಾ ವಿಜ್ಞಾನಿಗಳು ಇದನ್ನು ಒಪ್ಪಿದ್ದಾರೆ.[೪೭] ಸಾಮಾನ್ಯ ವಿನಾಶದ ಪ್ರಮಾಣಕ್ಕಿಂತಲೂ ನೂರು ಪಟ್ಟು ಅಳಿವು ಸಂಭವಿಸುತ್ತಿದೆ.

ಜೀವವೈವಿಧ್ಯಕ್ಕೆ ಭೀತಿಯೊಡ್ಡುವ ಕಾರಣಗಳನ್ನು ವಿವಿಧ ವರ್ಗಗಳಲ್ಲಿ ವಿಂಗಡಿಸಲಾಗಿದೆ. ವಾಸಸ್ತಾನ ನಾಶಗೊಳಿಸುವಿಕೆ, ಅವಶ್ಯಕತೆಗಿಂತಲೂ ಹೆಚ್ಚಾಗಿ ಜೀವಿಗಳ ಹತ್ಯೆ, ಅವುಗಳ ದುರ್ಬಳಕೆ ಮತ್ತು ಸ್ಥಳಬದಲಾವಣೆ ವಿಸ್ತರಣೆಗಳೆಂಬ 'ದುಷ್ಟ ಚೌಕಟ್ಟ'ನ್ನು ಜಾರೆಡ್‌ ಡೈಮೆಂಡ್‌ ವಿವರಿಸಿದ್ದಾರೆ. ಎಡ್ವರ್ಡ್‌ ಒ. ವಿಲ್ಸನ್‌ HIPPO ಎಂಬ ಪೂರ್ವಪದ ಬಳಸಲು ಇಚ್ಛಿಸುತ್ತಾರೆ, ಅರ್ಥಾತ್‌ H(ಪ್ರಾ ಣಿಗಳ ವಾಸಸ್ತಾನಗಳ ನಾಶಗೊಳಿಸುವಿಕೆ), I ( ತಿಕ್ರಮಣಕಾರಿ ಜೀವಿಗಳು), P (ಮಾ ಲಿನ್ಯ, ಮಾನವ P ( ನಸಂಖ್ಯಾಸ್ಫೋಟ) ಮತ್ತು O ( ತಿಕಟಾವು).[೪೯][೫೦] IUCNನೇರ ಅಪಾಯ ವಿಂಗಡನೆ[೫೧] ಯೇ ಇಂದಿನ ಅಧಿಕೃತ ಜೀವ ವರ್ಗೀಕರಣ. US ನೈಸರ್ಗಿಕ ಸಂರಕ್ಷಕ, ವಿಶ್ವ ವನ್ಯಜೀವಿ ನಿಧಿ, ಕನ್ಸರ್ವೆಷನ್‌ ಇಂಟರ್ನ್ಯಾಷನಲ್‌ ಮತ್ತು ಬರ್ಡ್‌ಲೈಫ್‌ ಇಂಟರ್ನ್ಯಾಷನಲ್‌ ಸೇರಿದಂತೆ ಹಲವು ಪ್ರಮುಖ ಅಂತಾರಾಷ್ಟ್ರೀಯ ಸಂರಕ್ಷಣಾ ಸಂಘಟಣೆಗಳು ಇದನ್ನು ಒಪ್ಪಿಕೊಂಡಿವೆ.

ವಾಸ್ತವ್ಯಗಳ ನಾಶಗೊಳಿಸುವಿಕೆ

[ಬದಲಾಯಿಸಿ]

1000 AD ಇಂದ 2000 AD ವರಗೆ ಸಂಭವಿಸಿದ ವಿವಿಧ ನಿಸರ್ಗ ವಿನಾಶಗಳಿಗೆ ಮಾನವನ ದುರಾಸೆಯೇ ಕಾರಣ; ಅದರಲ್ಲೂ ನಿರ್ದಿಷ್ಟವಾಗಿ ಸಸ್ಯ ಮತ್ತು ಪ್ರಾಣಿ ಸಂತತಿಯ ನಿರ್ವಸತಿಕರಣದ ದುರಂತ. ಅಳಿವಿನ ಪ್ರಮಾಣ ಅಧಿಕಗೊಂಡಿದೆ. ಮಾನವಕುಲದಿಂದ ಸಾವಯವ ಸಂಪನ್ಮೂಲಗಳ ಅಪವ್ಯಯದುರಾಸೆಗೆ ಕಾರಣವಾಗಿದೆ; ಅದರಲ್ಲೂ ವಿಶೇಷವಾಗಿ ಉಷ್ಣವಲಯದ ಕಾಡುಗಳ ನಾಶ.[೫೨] ಅಳಿಸಿಹೋಗಿರುವ ಜಾತಿಗಳಲ್ಲಿ ಬಹುಪಾಲು ಆಹಾರ ಒದಗಿಸುವ ವರ್ಗಕ್ಕೆ ಸೇರಿಲ್ಲ. ಆದರೂ, ಅವುಗಳ ವಾಸಸ್ತಾನವನ್ನು ಹುಲ್ಲುಗಾವಲು, ಫಲವತ್ತಾದ ಭೂ ಪ್ರದೇಶ ಮತ್ತು ತೋಟಗಳಾಗಿಸಿದಾಗ, ಅಲ್ಲಿನ ಜೀವರಾಶಿಯು ಮಾನವನ ಆಹಾರಕ್ಕಾಗಿ ಅನಿವಾರ್ಯ ಅಳಿವಿಗೆ ತುತ್ತಾಗುತ್ತದೆ. ಅದರ ಪಳೆಯುಳಿಕೆಯೇ ಆಹಾರ ಉತ್ಪಾದನೆಗೆ ಬಳಕೆಯಾಗಬಹುದು. ಭೂಮಿಯ ಜೀವರಾಶಿ[೫೩] ಯಲ್ಲಿ ಮೂರನೆಯ ಒಂದು ಭಾಗಕ್ಕಿಂತಲೂ ಹೆಚ್ಚು ಮನುಷ್ಯರು, ಪಶುಸಂಪತ್ತು ಮತ್ತು ಪೈರು ಒಳಗೊಂಡಿದೆ. ಕೆಲವೇ ವರ್ಗಗಳಿಗೆ ಅಕ್ರಮಣ ಶಕ್ತಿ ಸೀಮಿತವಾಗಿದೆಯೆಂದು ಅಂದಾಜಿಸಲಾಗಿದೆ. ವಿಭಿನ್ನವರ್ಗ ಅಳಿಸಿಹೋಗಿ ಪರಿಸರ ವ್ಯವಸ್ಥೆ ಅಸ್ಥಿರವಾಗುವುದು. ಜಾಗತಿಕ ಪರಿಸರ ಸಂಕೀರ್ಣತೆಯು ಕುಸಿಯುವ ಸಾಧ್ಯತೆಯಿದೆಯೆಂದು ಅಧ್ಯಯನಗಳು ಎಚ್ಚರಿಸಿವೆ. ಜೀವವೈವಿಧ್ಯದ ವಿನಾಶಕ್ಕೆ ಕಾರಣಗಳು: ಜನಸಂಖ್ಯಾ ಸ್ಫೋಟ , ಅರಣ್ಯನಾಶ ಸಾಮಾನ್ಯ, ಮಾಲಿನ್ಯ (ವಾಯು ಮಾಲಿನ್ಯ, ಜಲ ಮಾಲಿನ್ಯ, ಫಲವತ್ತತೆ ನಾಶ) ಮತ್ತು ಜಾಗತಿಕ ತಾಪಮಾನ ಏರುವಿಕೆ ಅಥವಾ ಹವಾಮಾನ ಬದಲಾವಣೆ - ಇವೆಲ್ಲವೂ ಮಾನವ ಚಟುವಟಿಕೆಗಳಿಂದ ಸಂಭವಿಸುತ್ತಿವೆ. ಈ ಕಾರಣಗಳ ಹಿಂದೆ ಅತಿ ಜನಸಾಂದ್ರತೆಯಿದ್ದರೂ, ಜೀವವೈವಿಧ್ಯದ ಮೇಲೆ ಅದು ಒಟ್ಟಾರೆ ದುಷ್ಪರಿಣಾಮ ಬೀರುತ್ತದೆ.

ಖಗ-ಮೃಗ ಪ್ರದೇಶ ಮತ್ತು ಅದು ಆಸರೆ ನೀಡಬಹುದಾದ ಜಾತಿ-ಪ್ರಾದೇಶಿಕ ಸಂಖ್ಯೆಗೂ ಅವಿನಾಭಾವ ಸಂಬಂಧವಿದೆ. ಜೊತೆಗೆ, ದೊಡ್ಡ ಗಾತ್ರದ ಜೀವಿಗಳು, ತಗ್ಗು ಪ್ರದೇಶಗಳಲ್ಲಿ, ಕಾಡುಗಳಲ್ಲಿ ಅಥವಾ ಸಮುದ್ರ-ಸಾಗರಗಳಲ್ಲಿ ವಾಸಿಸುವ ಜಾತಿಗಳ ವಾಸ ಸ್ಥಾನ ಕ್ಷೀಣಿಸಿದಲ್ಲಿ ಹೆಚ್ಚು ಅಪಾಯ ಕಂಡುಬರುತ್ತದೆ.[೫೪] ಜೀವವೈವಿಧ್ಯದ ಅಳಿವು'ಪರಿಸರ ವ್ಯವಸ್ಥೆಯ ವಿನಾಶ'ಅಲ್ಲ, ಬದಲಾಗಿ ಪರಿಸರ ವ್ಯವಸ್ಥೆ ಕ್ಷೋಭೆಯಿಂದ ನಲುಗಬಹುದು.' (ಉದಾಹರಣೆಗೆ ಅರಣ್ಯನಾಶದ ಬಳಿಕ ಒಂದೇ ಫಸಲಿನ ಕೃಷಿ) ಎಂದು ಕೆಲವರು ಬಣ್ಣಿಸಿದ್ದಾರೆ. ಕೆಲವು ದೇಶಗಳಲ್ಲಿ, ಆಸ್ತಿ ಪಾಸ್ತಿ ಹಕ್ಕುಗಳ ಅಥವಾ ಜೈವಿಕ ಸಂಪನ್ಮೂಲಗಳ ತಾಣಗಳ ಪ್ರವೇಶ ಹಕ್ಕು ನಿಯಂತ್ರಣ ಕಾನೂನು ತೊಡಕು ಜೀವವೈವಿಧ್ಯತೆಯ ಕಣ್ಮರೆಗೆ ಕಾರಣವಾಗುತ್ತದೆ (ಇದರ ವೆಚ್ಚವನ್ನು ಜನ ಸಮುದಾಯ ಭರಿಸಬೇಕಾಗುತ್ತದೆ).

ಜೀವವೈವಿಧ್ಯ ಮತ್ತು ತಳಿ ವೈವಿಧ್ಯಪರಸ್ಪರ ಅವಲಂಬಿಸಿವೆ ಎಂದು ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನವು 2007ಸೆಪ್ಟೆಂಬರ್‌ 14ರಂದು ನಡೆದ ಅಧ್ಯಯನ ಪತ್ತೆ ಮಾಡಿದೆ. ಅಂತರ್ಜಾತೀಯ ವೈವಿಧ್ಯ ಉಳಿಸಲು ಜಾತಿಪ್ರಭೇಧ ವೈವಿಧ್ಯ ಅಗತ್ಯ, ಹಾಗೂ ಪ್ರತಿಯಾಗಿ,ವಿಭಿನ್ನತೆ ಉಳಿಸಿಕೊಳ್ಳಲು ಅಂತರ್ಜಾತೀಯ ವಿಂಗಡಣೆಯೂ ಅಗತ್ಯ. ಪ್ರಮುಖ ಸಂಶೋಧಕ ಡಾ. ರಿಚರ್ಡ್‌ ಲಂಕಾವ್‌ರ ಪ್ರಕಾರ, 'ವ್ಯವಸ್ಥೆಯಿಂದ ಯಾವುದಾದರೂ ಒಂದು ವರ್ಗ ನಾಶವಾದರೆ, ಜೀವರಾಶಿಯ ತಂತು ಮುರಿದುಬೀಳಬಹುದು ಮತ್ತು ಸಮುದಾಯದಲ್ಲಿ ಒಂದೇ ಜಾತಿಯು ತನ್ನ ಪ್ರಾಬಲ್ಯ ಮೆರೆಯುತ್ತದೆ.[೫೫]

ಸದ್ಯಕ್ಕೆ ಅತ್ಯಂತ ಭೀತಿಗೊಳಗಾಗಿರುವ ಪರಿಸರ ವ್ಯವಸ್ಥೆಗಳಲ್ಲಿ ಶುದ್ಧ ನೀರಿನ ಅವಲಂಬಿತ ಜೀವಜಾಲವೂ ಒಂದು. 2005ರಲ್ಲಿ ನಡೆದ ಸಹಸ್ರಮಾನ ಪರಿಸರ ವ್ಯವಸ್ಥೆಯ ಸಮೀಕ್ಷೆಯು ಶುದ್ಧ ನೀರಿನ ಜೀವ ಸಂಕುಲ 'ಅತಿ ಹೆಚ್ಚು ಭೀತಿಯನ್ನೆದುರಿಸುತ್ತಿರುವ ವ್ಯವಸ್ಥೆ'ಯೆಂದು ಗುರುತಿಸಿತು. ಜೀವವೈವಿಧ್ಯ ವೇದಿಕೆ ಮತ್ತು ಫ್ರೆಂಚ್‌ ಇನ್ಸ್ಟಿಟ್ಯೂಟ್‌ ಡಿ ರಿಚರ್ಚ್‌ ಪೊರ್‌ ಲೆ ದೆವೆಲಪ್ಮೆಂಟ್‌ (MNHNP)[೫೬] ಇದನ್ನು ಖಚಿತಪಡಿಸಿತು.

ವಿದೇಶೀ ತಳಿಗಳು

[ಬದಲಾಯಿಸಿ]

ವಿಶ್ವದ ಹಲವು ಭಾಗಗಳಲ್ಲಿರುವ ಅಪೂರ್ವ ಜೀವರಾಶಿಯು ಸಮೃದ್ಧವಾಗಿದೆ. ಈ ವೈವಿಧ್ಯವು ಆಸ್ತಿತ್ವದಲ್ಲಿರಲು ಏಕೈಕ ಕಾರಣವೆಂದರೆ ಇವುಗಳು ತೊಡಕುಗಳಿಂದ ಮುಕ್ತವಾಗಿವೆ. ನಿರ್ದಿಷ್ಟವಾಗಿ, ಅಧಿಕ ಫಲವತ್ತಾದ, ಅತ್ಯಂತ ಪ್ರತಿಸ್ಪರ್ಧಾತ್ಮಕ, ಸಾಮಾನ್ಯ 'ವಿಶಿಷ್ಟ ವರ್ಗಗಳಿಂದ' ಭಾರೀ ನದಿಗಳು, ಸಮುದ್ರಗಳು, ಸಾಗರಗಳು, ಪರ್ವತಗಳು ಮತ್ತು ಮರುಭೂಮಿಗಳಂತಹ ಪ್ರಾದೇಶಿಕತೆಯಿಂದ ಈ ಸಮೃದ್ಧ ಜಾತಿಗಳನ್ನು ಬೇರ್ಪಡಿಸಲಾಗಿದೆ. ಭೂ ಭ್ರಮಣವನ್ನು ಹೊರತುಪಡಿಸಿ ಈ ತಡೆಗಳನ್ನು ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಸುಲಭವಾಗಿ ದಾಟಲು ಆಗುತ್ತಿರಲಿಲ್ಲ. ಆದರೂ, ತಮ್ಮ ವಿಕಸನದ ಇತಿಹಾಸದಲ್ಲಿ ಇದುವರೆಗೂ ಸಂಪರ್ಕಕ್ಕೆ ಬರದ ಜಾತಿಗಳ ಪರಸ್ಪರ ಪರಿಚಯಕ್ಕೆ ಮಾನವರು ಸಾಗಾಟ-ಸಂಪರ್ಕ ಆವಿಷ್ಕರಣ ಮಾಡಿದರು. ಜೊತೆಗೆ, ಪ್ರಮುಖ ಪ್ರಾಣಿ ವಲಸೆಯು ಶತಮಾನಗಳ ಅವಧಿಯಲ್ಲಿ ನಡೆಯುವುದಕ್ಕಿಂತಲೂ ಭಿನ್ನವಾಗಿ, ಅಲ್ಪ ಕಾಲಾವಧಿಯಲ್ಲಿ ಸಾಧಿಸಲಾಗುತ್ತಿದೆ. ಹಿಂದೆಂದೂ ಪರಸ್ಪರ ಸಂಕರವಾಗಿರದ ಈ ಜಾತಿಗಳ ಸಂಕರವಾದಾಗ ಅಳಿಸಿಹೋಗುತ್ತಿರುವ ಪ್ರಮಾಣ ಇನ್ನೂ ಏರುತ್ತಿದೆ. ಉದಾಹರಣೆಗಾಗಿ ನೋಡಿ.

ವಿದೇಶೀಯ ಜಾತಿಗಳ ವ್ಯಾಪಕ ಪರಿಚಯವು ಜೀವವೈವಿಧ್ಯಕ್ಕೆ ಸಂಭಾವ್ಯ ಭೀತಿಯನ್ನೊಡ್ಡುತ್ತದೆ. ಮನುಕುಲಕ್ಕೂ ಅಪಾಯಕಾರಿ. ವಿದೇಶೀಯ ತಳಿಗಳ ಸಂಖ್ಯೆ ಅಧಿಕಗೊಂಡಾಗ ದೇಶೀಯ ತಳಿಗಳ ಅಸ್ತಿತ್ವಕ್ಕೆ ಗಂಡಾತರ ಕಾದಿಟ್ಟ ಬುತ್ತಿ. ಪರಿಸರ ವ್ಯವಸ್ಥೆಗೆ ಪರಿಚಯಿಸಿ, ನೂತನ ಸಂಖ್ಯೆಗೆ ,ಹೊಸ ವಿದೇಶೀ ಜಾತಿಗಳೊಂದಿಗೆ ಹೊಂದಿಕೊಳ್ಳದ, ವಿಕಸನ ಹೊಂದಿರದ ಆ ಪರಿಸರ ಜೀವಿ ಬದುಕುಳಿಯದಿರಬಹುದು. ಪರ ಜೀವಿಗಳು ಪರಭಕ್ಷಕಗಳಾಗಲೀ, ಪರಾವಲಂಬಿಗಳಾಗಲೀ ಅಥವಾ, ಸ್ಥಳೀಯ ಜಾತಿಗಳಿಂದ ಪೌಷ್ಟಿಕಾಂಶ, ನೀರು ಮತ್ತು ಬೆಳಕಿನಂತಹ ಅಗತ್ಯಗಳನ್ನು ಕಸಿದುಕೊಳ್ಳುವಂತಹ ಅಕ್ರಮಣಕಾರಿ ಜಾತಿಗಳಾಗಿ ಮಾರ್ಪಡಬಹುದು. ಅವುಗಳ ವಿಕಸನದ ಹಿನ್ನೆಲೆ ಮತ್ತು ಹೊಸ ಪರಿಸರದ ಕಾರಣ ಈ ಅತಿಕ್ರಮಣಕಾರಿ ಜಾತಿಗಳು ಸ್ಪರ್ಧಾತ್ಮಕ ಪ್ರವೃತ್ತಿಯುಳ್ಳವಾಗಿದ್ದು, ದೃಢವಾಗಿ ನೆಲೆಯೂರಿ, ಬೇಗ ಪಸರಿಸಿ, ಸ್ಥಳೀಯ ಜಾತಿಗಳ ಒಟ್ಟಾರೆ ವಾಸಸಂಖ್ಯೆ ಕ್ಷೀಣಿಸಲು ಕಾರಣವಾಗುತ್ತದೆ.

ಮಾನವಕುಲವು ತನಗೆ ಗೊತ್ತಿಲ್ಲದೆಯೋ ಅಥವಾ ಉದ್ದೇಶಪೂರ್ವಕವಾಗಿಯೋ ಹೊಸ ತಳಿಗಳನ್ನು ಪರಿಚಯಿಸುತ್ತದೆ. ಉದಾಹರಣೆಗೆ ಲೇಡಿಬರ್ಡ್‌ (ಜೀರುಂಡೆಯಂತಹ ದುಂಬಿ ಜಾತಿಗೆ ಸೇರಿದ ಕೀಟ). ಕೃಷಿಯಲ್ಲಿ (ಹಸಿರುಮನೆಗಾಗಿ) ಕೀಟಗಳನ್ನು ಕೊಲ್ಲಲು ಇವುಗಳನ್ನು ಬೆಳೆಸಲಾಯಿತು. , ವಾಹನ/ಹಡಗುಗಳ ಮೂಲಕ ತಂದು ಪರಿಚಯಿಸಿದ ಜಾತಿಗಳು ಇತರ ಉದಾಹರಣೆಗಳಾಗಿವೆ. ಇವುಗಳಲ್ಲಿ ನಿರ್ದಿಷ್ಟ ಬ್ಯಾಕ್ಟೀರಿಯಾಗಳು, ಜೇಡಗಳು, ಕೆಲವು ಅಪರೂಪದ ಗಿಡಗಳ ಬೀಜಗಳು ಸಹ ಸೇರಿವೆ. ಉದ್ದೇಶಪೂರ್ವಕವಾದ ಆಮದುಗಳಲ್ಲಿ, ತೋಟಗಳಲ್ಲಿ ವಿದೇಶೀ ಸಸಿಗಳ ನೆಡುವಿಕೆ. ಸರಳ ಕ್ರಮಗಳ ಮೂಲಕ ಪರಕೀಯ ಕಸಿ ಆಕ್ರಮಣ, ತದ್ರೂಪಿಗಳ ದಟ್ಟಣೆ ತಡೆಗಟ್ಟಬಹುದು. ಆದರೂ, ಸದ್ಯಕ್ಕೆ, ವಿದೇಶೀ ಜಾತಿಗಳ ಒಳಹರಿವನ್ನು ಕಡಿಮೆಗೊಳಿಸುವ ಯತ್ನವು ರಾಜಕೀಯ ಕಾರ್ಯಸೂಚಿಯಲ್ಲಿ ಕಟ್ಟಕಡೆಯ ಸ್ಥಾನದಲ್ಲಿದೆ. ಜೊತೆಗೆ, ಸ್ಥಳೀಯ ಎಂದು ಗುರುತಿಸಲಾದ, ಆದರೆ ಸ್ಥಳೀಯವಲ್ಲದ ತಳಿಯಿಂದ ಬಂದಿರುವ, ಉದ್ದೇಶಪೂರ್ವಕವಾಗಿ ಆಮದು ಮಾಡಿಕೊಂಡದ್ದನ್ನು ವಿದೇಶೀಯವೆಂದು ಪರಿಗಣಿಸಲಾಗಿದೆ. ಇವು ಪರಿಸರ ವ್ಯವಸ್ಥೆಯಲ್ಲಿ ಸಮಸ್ಯೆಗಳನ್ನುಂಟು ಮಾಡಬಹುದು. ಉದಾಹರಣೆಗೆ, ಪ್ರುನಸ್‌ ಸ್ಪೈನೋಸಾ ಎಂಬ ಪೂರ್ವ ಯುರೋಪ್‌ ಮೂಲದ, ಸ್ಥಳೀಯ ಸಸ್ಯ ಜಾತಿಯ ತಳಿಯನ್ನು ಬೆಲ್ಜಿಯಮ್‌ನಲ್ಲಿ ಪರಿಚಯಿಸಲಾಯಿತು. ತನ್ನ ಪಶ್ಚಿಮ ಯುರೋಪ್ ಕಸಿಗಳಿಗೆ ಹೋಲಿಸಿದರೆ ಈ ಮರದ ಜಾತಿಯು ಬಹಳ ಬೇಗ ಎಲೆಗಳನ್ನು ಬಿಡುತ್ತದೆ. ಹಾಗಾಗಿ ಎಲೆಗಳನ್ನು ಭಕ್ಷಿಸುವಂತಹ ಥೆಕ್ಲಾ ಬೆಟುಲೇ ಚಿಟ್ಟೆಗೂ ಸಮಸ್ಯೆಯನ್ನೊಡ್ಡುತ್ತದೆ.

ಮೇಲಿನ ಪರಿಣಾಮವಾಗಿ, ಒಂದು ವೇಳೆ ಮನುಷ್ಯರು ವಿವಿಧ ಪರಿಸರ ವಲಯಗಳಿಗೆ ಸೇರಿದ ಜಾತಿಗಳನ್ನು ಸಂಕರಿಸಲು ಮುಂದುವರೆದಲ್ಲಿ, ಪ್ರಪಂಚದ ಪರಿಸರ ವ್ಯವಸ್ಥೆಗಳಲ್ಲಿ ಕೇವಲ ಕೆಲವೇ ಆಕ್ರಮಣಕಾರಿ, ಸರ್ವವ್ಯಾಪಿ 'ಮಹಾ ಜಾತಿ'ಗಳು ಪ್ರಾಬಲ್ಯ ಮೆರೆಯುವ ಸಂಭವವಿದೆ. '

ಸದ್ಯಕ್ಕೆ ಹಲವು ದೇಶಗಳು ಈಗಾಗಲೇ ಬಹಳಷ್ಟು ವಿದೇಶೀಯ ಸಸ್ಯ ಮತ್ತು ಪ್ರಾಣಿ ತಳಿಗಳನ್ನು ಆಮದು ಮಾಡಿಕೊಂಡಿರುವ ಕಾರಣ, ಸ್ಥಳೀಯ ಸಸ್ಯ-ಪ್ರಾಣಿ ವರ್ಗಗಳ ಸಂಖ್ಯೆಯಲ್ಲಿ ಏರು-ಪೇರು ಉಂಟಾಗುತ್ತದೆ. ಉದಾಹರಣೆಗೆ, ಬೆಲ್ಜಿಯಮ್‌ನಲ್ಲಿ ಸ್ಥಳೀಯ ಜಾತಿ ಮರಗಳಲ್ಲಿ ಕೇವಲ 5%ರಷ್ಟು ಮಾತ್ರ ಉಳಿದಿವೆ.[೫೭][೫೮]

ಜಾಗತಿಕ ತಾಪಮಾನದ ಏರಿಕೆ[೫೯] ಯ ಕಾರಣ, 2050ರಲ್ಲಿ 10%ರಷ್ಟುಉತ್ತಮ ಜಾತಿಗಳು ಅಳಿಸಿಹೋಗಬಹುದೆಂದು ವಿಜ್ಞಾನಿಗಳ ಅಂತಾರಾಷ್ಟ್ರೀಯ ತಂಡವೊಂದು 2004ರಲ್ಲಿ ಅಂದಾಜು ಮಾಡಿದೆ. "ನಾವು ಹವಾಮಾನದಲ್ಲಿನ ವೈಪರಿತ್ಯಗಳನ್ನು ಸೀಮಿತಗೊಳಿಸಬೇಕು. ಇಲ್ಲದಿದ್ದಲ್ಲಿ ಹಲವು ಜಾತಿಗಳು ತೊಂದರೆಗೀಡಾಗಬಹುದು, ಅಥವಾ ಅಳಿಸಿಹೋಗುವ ಸಾಧ್ಯತೆಯೂ ಇದೆ," ಎಂದು ಅಂಕಣಕಾರ ಸಹ-ಲೇಖಕ ಮತ್ತು ಕನ್ಸರ್ವೇಷನ್‌ ಇಂಟರ್ನ್ಯಾಷನಲ್‌ನಲ್ಲಿರುವ ಆನ್ವಯಿಕ ಜೀವವೈವಿಧ್ಯ ವಿಜ್ಞಾನ ಕೇಂದ್ರ ಮುಖ್ಯ ಹವಾಮಾನ ಜೀವವಿಜ್ಞಾನಿ ಡಾ. ಲೀ ಹ್ಯಾನಾ ಹೇಳಿದ್ದಾರೆ.

ತಳಿಯಲ್ಲಿನ ದೋಷ

[ಬದಲಾಯಿಸಿ]

ತಳಿ ದೋಷದ ಮೂಲಕ ಶುದ್ಧ ತಳಿಯ, ನೈಸರ್ಗಿಕವಾಗಿ ವಿಕಸನಗೊಂಡ, ವಲಯ-ವಿಶಿಷ್ಟ ವನ್ಯ ಜಾತಿಗಳು ಅಳಿವಿನ ಭೀತಿಗೊಳಗಾಗಬಹುದು. ಅರ್ಥಾತ್‌ ಅನಿಯಂತ್ರಿತ ಸಂಕರೀಕರಣ, ಅಂತರ್ಗಮನ ಮತ್ತು ತಳೀಯ ನಿಷ್ಕ್ರಿಯತೆ ಅಡ್ಡ ಪರಿಣಾಮ ಬೀರಬಹುದು. ಸಸ್ಯ ಅಥವಾ ಸಾಕು ಪ್ರಾಣಿಗಳ ಅಥವಾ ಸಂಖ್ಯಾಬಲ ಪರಿಗಣನೆ ಸ್ಥಳೀಯ ಜೀನ್‌ ನಮೂನೆಗಳ ಸಮೀಕರಣ ಅಥವಾ ಪರಿವರ್ತನೆ.[೬೦] ಇವುಗಳಿಂದ ವಿದೇಶಿ ಜಾತಿ ಸಸ್ಯ ವರ್ಗ ಮೂಲಸ್ಥಾನದಿಂದಲೇ ನಿರ್ನಾಮವಾಗುವ ಸಾಧ್ಯತೆ ಇದೆ. ಮುಂಚೆ ಪ್ರತ್ಯೇಕಿಸಲಾಗಿದ್ದ ಜಾತಿಗಳನ್ನು ಸಂಪರ್ಕಕ್ಕೆ ತಂದು, ವಾಸಸ್ತಾನ ಬದಲಾವಣೆ, ಅಥವಾ ಉದ್ದೇಶಪೂರ್ವಕ ಸಂಕರ ,ಅಥವಾ ಅಂತರ್ಗಮನದ ಮೂಲಕ, ಆಮದಾದ ಜಾತಿಗಳು ಸ್ಥಳೀಯ ಜಾತಿಯ ಸಸ್ಯ-ಪಶುಸಂಪತ್ತು ನಶಿಸಲು ಕಾರಣವಾಗುತ್ತದೆ. ಹೇರಳವಾಗಿರುವ ಜಾತಿಗಳೊಂದಿಗೆ ಸಂಪರ್ಕಕ್ಕೆ ಬರುವ ಅಪರೂಪದ ಜಾತಿಗಳಿಗೆ ಈ ಆಮದು ಹಾನಿಕಾರಕವಾಗಬಲ್ಲದು. ಹೇರಳವಾದ ಜಾತಿಗಳು ಅಪರೂಪದ ಜಾತಿಗಳೊಂದಿಗೆ ಸಂಕರಿಸಿದಾಗ, ಇಡೀ ತಳಿ ಸಂಗ್ರಹ ಸಂಕರಗಳನ್ನು ಸೃಷ್ಟಿಸುತ್ತವೆ. ಹಾಗಾಗಿ ಸ್ವದೇಶಿ ತಳಿಯನ್ನು ಅಳಿವಿನಂಚಿಗೆ ತಳ್ಳಿಬಿಡುತ್ತದೆ. ಈ ಸಮಸ್ಯೆಯನ್ನು ದೃಶ್ಯ ವಿಜ್ಞಾನ(ಹೊರಗಿನ ತೋರಿಕೆ) ದೃಷ್ಟಿಯಿಂದ ಮಾತ್ರ ಗಮನಿಸಿದರೆ ಸಾಲದು; ಈ ಸಮಸ್ಯೆಯ ತೀವ್ರತೆಯತ್ತ ಗಮನ ಕೇಂದ್ರೀಕರಿಸುವುದು ಅಗತ್ಯವಾಗಿದೆ. ಜೀನ್‌ ಹರಿವಿನ ಕೆಲವು ಹಂತಗಳು ಸಹಜ, ವಿಕಸನ ಪ್ರಕ್ರಿಯೆಯಾಗಿರಬಹುದು. ಜೀನ್‌ ಮತ್ತು ಜೀನ್‌ ಮಾದರಿಗಳ ಎಲ್ಲಾ ಗುಂಪನ್ನು ಸಂರಕ್ಷಿಸಲಾಗದು. ಆದರೂ, ಅಂತರ್ಗಮನ ಸಹಿತ/ರಹಿತದ ಸಂಕರಣವು ಅಪರೂಪದ ಜಾತಿಗಳ ಆಸ್ತಿತ್ವಕ್ಕೆ ಭೀತಿಯನ್ನೊಡ್ಡಬಹುದು.[೬೧][೬೨]

ಸಂಕರೀಕರಣ ಮತ್ತು ತಳಿಗಳು

[ಬದಲಾಯಿಸಿ]

ಕೃಷಿ ಮತ್ತು ಪಶು ಸಂಗೋಪನೆ ಕ್ಷೇತ್ರಗಳಲ್ಲಿ, ಹಸಿರು ಕ್ರಾಂತಿಯು ಹೆಚ್ಚು ಲಾಭ ಗಳನ್ನು ಸೃಷ್ಟಿಸಿ, ಇಳುವರಿ ಹೆಚ್ಚಿಸುವುದರಲ್ಲಿ ಸಾಂಪ್ರದಾಯಿಕ ಸಂಕರೀಕರಣವನ್ನು ಜನಪ್ರಿಯಗೊಳಿಸಿದೆ. ಕಾಲಕಾಲಕ್ಕೆ, ಒಂದಿಷ್ಟು ಸಂಕರೀಕೃತ ತಳಿಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಉಗಮವಾದವು. ಸ್ಥಳೀಯ ಹವಾಮಾನ ಮತ್ತು ರೋಗಗಳ ವಿರುದ್ಧ ಪ್ರತಿರೋಧ ಶಕ್ತಿ ಹೊಂದಿರುವ ಹೆಚ್ಚು ಪರಿಣಾಮಕಾರಿ ತಳಿಗಳ ಸೃಷ್ಟಿಸಲು, ವಿಶ್ವದ ಅಭಿವೃದ್ಧಿಶೀಲ ವಲಯಗಳಲ್ಲಿ ಸ್ಥಳೀಯ ವಿಧಗಳೊಂದಿಗೆ ಸಂಕರಿಸಲಾಯಿತು. ಸ್ಥಳೀಯ ಸರ್ಕಾರಗಳು ಮತ್ತು ಉದ್ದಿಮೆಗಳು ಸಂಕರೀಕರಣಕ್ಕೆ ಒತ್ತು ನೀಡುತ್ತಿರುವ ಕಾರಣ, ದೇಶೀಯತೆ ತಳಿ ಅಳಿಸಿಹೋಗಿವೆ ಅಥವಾ ಅಳಿವಿನ ಭೀತಿಯಲ್ಲಿವೆ. ಲಾಭವಿಲ್ಲದಿರುವಿಕೆ ಮತ್ತು ಅನಿಯಂತ್ರಿತ ಉದ್ದೇಶಪೂರ್ವಕ ಮತ್ತು ಉದ್ದೇಶರಹಿತ ಮಿಶ್ರ-ಪರಾಗಸ್ಪರ್ಶ ಮತ್ತು ಮಿಶ್ರತಳಿಸೃಷ್ಟಿಯ (ತಳಿ ಮಾಲಿನ್ಯ) ಕಾರಣದಿಂದಾಗಿರುವ ಬಳಕೆ ನಿಲ್ಲಿಸಿರುವಿಕೆಯಿಂದಾಗಿ, ಹಿಂದೊಮ್ಮೆ ಬೃಹತ್ತಾಗಿದ್ದ ವಿವಿಧ ವನ್ಯ ಮತ್ತು ಸ್ಥಳಜನ್ಯ ತಳಿಗಳ ಜೀನ್‌ ಸಂಗ್ರಹಗಳು ಕುಸಿದಿವೆ. ಇದರಿಂದಾಗಿ ವ್ಯಾಪಕವಾದ ತಳಿ ಸವಕಳಿ ಹಾಗೂ ತಳಿ ಮಾಲಿನ್ಯವು ಕಂಡುಬಂದಿದೆ. ಇದು ತಳಿ ವೈವಿಧ್ಯದ ಮತ್ತು ಒಟ್ಟಾರೆ ಜೀವ ವೈವಿಧ್ಯ ಕ್ಷೀಣಿಸಲು ಕಾರಣವಾಗಿದೆ. .[೬೩]

ತಳಿ ತದ್ರೂಪ ಜೀವಿ (GMO) ಎಂಬುದು, ಪುನಃ ಸಂಯೋಜಿತ DNA ತಂತ್ರಜ್ಞಾನದಂತಹ ಏಕರೂಪದ ರಚನಾವಿಜ್ಞಾನ ಬಳಸಿ ಪರಿವರ್ತಿತ ಬ್ರೀಡ್ ಅಂಶ ಹೊಂದಿದ ಜೀವಿಯಾಗಿದೆ. ಇಂತಹವು (GM) ಇಂದು ತಳೀಯ ಮಾಲಿನ್ಯಕ್ಕೆ ಸಾಮಾನ್ಯ ಮೂಲವಾಗಿದೆ. ಇದು ಕೇವಲ ವನ್ಯ ವಿಧಗಳು ಮಾತ್ರವಲ್ಲ, ನೈಸರ್ಗಿಕ ಸಂಕರೀಕರಣದಿಂದ ಪಡೆದ ಸ್ಥಳೀಯ ವಿಧಗಳಿಗೂ ಸಹ ಈ ಮಾಲಿನ್ಯ ಪಸರಿಸುತ್ತದೆ.[೬೪][೬೫][೬೬][೬೭][೬೮]

ಮಾಲಿನ್ಯದೊಂದಿಗೆ ಸೇರಿದ ಸವಕಳಿ ಅಪರೂಪದ ಜೀನ್‌ಗಳನ್ನು ಹಾಳು ಮಾಡುತ್ತಿರಬಹುದು, ಹೀಗಾಗಿ  ಬಿಕ್ಕಟ್ಟನ್ನು ಸೃಷ್ಟಿಸಿ  ನಮ್ಮ ಆಹಾರ ಭದ್ರತೆಗೆ ತೀವ್ರ ಭೀತಿಯೊಡ್ಡಬಹುದು.  ವಿಭಿನ್ನ ತದ್ರೂಪಿ ಅಂಶಗಳು ಅಳಿಸಿಹೋಗಬಹುದು. ಇದರಿಂದಾಗಿ, ರೋಗಗಳು ಮತ್ತು ಹವಾಮಾನ ವೈಪರಿತ್ಯದ ವಿರುದ್ಧ, ಖಾದ್ಯ ಬೆಳೆ ಮತ್ತು ಪಶುಸಂಪತ್ತುಗಳ ಸಂಕರಣದ ಮೇಲೆ ಇನ್ನಷ್ಟು ಪ್ರಭಾವ ಬೀರಬಹುದು.[೬೩]

ಹವಾಮಾನ ಬದಲಾವಣೆ

[ಬದಲಾಯಿಸಿ]

ಜಾಗತಿಕ ತಾಪಮಾನ ಏರಿಕೆಯೆಂಬ ಇತ್ತೀಚೆಗಿನ ಜ್ವಲಂತ ಸಮಸ್ಯೆಯು ಜಾಗತಿಕ ಜೀವವೈವಿಧ್ಯಕ್ಕೆ ಭೀತಿಯನ್ನೊಡ್ಡಿರುವಂತೆ ಪರಿಗಣಿಸಲಾಗಿದೆ.[ಸೂಕ್ತ ಉಲ್ಲೇಖನ ಬೇಕು] ಉದಾಹರಣೆಗೆ, ಜಾಗತಿಕ ತಾಪಮಾನ ಏರಿಕೆ ಇದೇ ರೀತಿ ಮುಂದುವರೆದಲ್ಲಿ, ಜೀವವೈವಿಧ್ಯದ ತಾಣಗಳಾದ ಹವಳದ ದಿಬ್ಬಗಳು 20-40 ವರ್ಷಗಳಲ್ಲಿ ಅಳಿಸಿಹೋಗುತ್ತವೆ.[೬೯]

ಜೀವವೈವಿಧ್ಯದ ಸಂರಕ್ಷಣೆ

[ಬದಲಾಯಿಸಿ]
ಜೀವವೈವಿಧ್ಯ, ಪರಿಸರ ವ್ಯವಸ್ಥೆ ಸೇವೆಗಳು, ಮಾನವ ಯೋಗಕ್ಷೇಮ ಮತ್ತು ಬಡತನದ ನಡುವಿನ ಸಂಬಂಧಗಳನ್ನು ಚಿತ್ರೀಕರಿಸುವ ಒಂದು ಸಾಂಕೇತಿಕ ಚಿತ್ರ, and poverty.[೭೦] ಸಂರಕ್ಷಣಾ ಕ್ರಿಯೆ, ರೂಪುರೇಖೆಗಳು, ಯೋಜನೆಗಳು ಜೀವವೈವಿಧ್ಯದ ಪ್ರಸ್ತುತ ಬಿಕ್ಕಟ್ಟಿನ ಹಿಂದಿರುವ ಕಾರಣಗಳನ್ನು ಸ್ಥಳೀಯ, ಪ್ರಾದೇಶಿಕ ಮತ್ತು ಜಾಗತಿಕ ದರ್ಜೆಗಳಲ್ಲಿ ಪ್ರಭಾವ ಬೀರಬಹುದು ಎಂಬುದನ್ನು ಚಿತ್ರವು ತೋರಿಸುತ್ತದೆ.

ಪರಿಸರ ವಿಜ್ಞಾನಿಗಳು, ಪ್ರಕೃತಿ ವಿಚಾರವಾದಿಗಳು ಮತ್ತು ಇತರೆ ವಿಜ್ಞಾನಿಗಳು ಜೀವವೈವಿಧ್ಯದಲ್ಲಿ ಸಂಭವಿಸುತ್ತಿದ್ದ ಜಾಗತಿಕ ಹಾನಿ ಪತ್ತೆ ಮತ್ತು ಪರಿಹಾರಕ್ಕಾಗಿ ಸಾಮೂಹಿಕ ಸಂಶೋಧನೆ ಕೈಗೊಂಡ ಕಾರಣದಿಂದಾಗಿ ಸಂರಕ್ಷಣಾ ಜೀವವಿಜ್ಞಾನವು 20ನೆಯ ಶತಮಾನದ ಮಧ್ಯದಲ್ಲಿ ಪ್ರವರ್ಧಮಾನಕ್ಕೆ ಬಂದಿತು.[೭೧][೭೨][೭೩] ಕಾಯ್ದುಕೊಳ್ಳುವ ನಿಯಮವು ಸುರಕ್ಷತಾ ನೀತಿಗಿಂತ ಭಿನ್ನವಾಗಿದೆ. ಜಾನ್‌ ಮುಯಿರ್‌ ನೇತೃತ್ವದ ಆಂದೋಲನವು, ಮಾನವ ಶೋಷಣೆ, ಲಾಭದ ಹಸ್ತಾಕ್ಷೇಪವಾಗಲೀ ನಡೆಯಲಸಾಧ್ಯವಾದ ಸುರಕ್ಷಿತ ಪ್ರದೇಶಗಳಿಗಾಗಿ ಪ್ರತಿಪಾದಿಸಿತು.[೭೨] ಪ್ರವರ್ಗಗಳು, ಪರಿಸರ ವ್ಯವಸ್ಥೆಗಳು, ವಿಕಸನಾ ಪ್ರಕ್ರಿಯೆಗಳು, ಮಾನವ ಸಂಸ್ಕೃತಿ ಮತ್ತು ಸಮಾಜಗಳಲ್ಲಿ ಜೀವವೈವಿಧ್ಯವನ್ನು ರಕ್ಷಿಸಿ ಉಳಿಸಿಕೊಳ್ಳಬೇಕಾಗಿದೆ. ಸಂರಕ್ಷಣಾ ನಿಯಮವು ನೈಸರ್ಗಿಕ ಸಂಪನ್ಮೂಲಗಳ ಉತ್ಪಾದನೆಯ ವಿವೇಚಿತ ಮೇಲುಸ್ತುವಾರಿ ಮತ್ತು ಗಮನ ಪ್ರತಿಪಾದಿಸುತ್ತದೆ.[೭೧][೭೩][೭೪][೭೫] ಈ ಯುಗದ ಜೀವವೈವಿಧ್ಯದ ಪ್ರವೃತ್ತಿಗಳನ್ನು ಗಮನಿಸಿದ ಸಂರಕ್ಷಣಾ ಜೀವವಿಜ್ಞಾನಿಗಳು ತಳಮಳಗೊಂಡಿದ್ದಾರೆ. ಏಕೆಂದರೆ, ವಿಜ್ಞಾನದ ದೃಷ್ಟಿಯಿಂದ ಆರನೆಯ ಸಾಮೂಹಿಕ ನಾಶ[೭೬] ಎಂದೂ ಹೇಳಲಾದ ಹಾಲಸೀನ್‌ ಅಳಿವಿನ ಕಾಲವಾಗಿದೆ. ಈ ಆರನೆಯ ಸಾಮೂಹಿಕ ವಿನಾಶದಲ್ಲಿ ಗಮನಿಸಿದರೆ ಜೀವವೈವಿಧ್ಯದಲ್ಲಿನ ಇಳಿಕೆ ಪ್ರಮಾಣ, ಪಳೆಯುಳಿಕೆಯ ದಾಖಲೆಯಲ್ಲಿನ ಹಿಂದಿನ ಐದು ಅಳಿವಿನ ಲಕ್ಷಣಗಳನ್ನೂ ಮೀರಿಸಿದೆ.[೭೬][೭೭][೭೮][೭೯][೮೦] ಅಳಿವಿನ ಆತಂಕಕ್ಕೆ ಉತ್ತರವಾಗಿ ಸಂರಕ್ಷಣಾ ಜೀವಿವಿಜ್ಞಾನಿಗಳ ಸಂಶೋಧನೆ, ತತ್ವಗಳು, ಮಾರ್ಗದರ್ಶಿಗಳು ಮತ್ತು ಜೀವವೈವಿಧ್ಯವನ್ನು ರಕ್ಷಿಸುವ ಧ್ಯೇಯಕ್ಕೆ ಸಾಧನಗಳ ರೂಪುರೇಷೆಗಳಾಗಿ ರಚಿಸಲಾಗಿದೆ.[೭೧][೮೧][೮೨] ಸಂರಕ್ಷಣಾ ಜೀವವಿಜ್ಞಾನವು ಸಮಗ್ರ ಪೋಷಣೆಯ ವಿಷಯವಾಗಿದೆ. ಪರಿಸರ, ಸಾಮಾಜಿಕ, ಶೈಕ್ಷಣಿಕ ಮತ್ತು ಜೀವವಿಜ್ಞಾನದ ಹೊರಗಿರುವ ಇತರೆ ವಿಷಯಗಳನ್ನು ಒಳಗೊಂಡು ಅದು ಬಹು-ಉದ್ದೇಶಿತವಾಗಿದೆ. ಸಂರಕ್ಷಣಾ ಜೀವವಿಜ್ಞಾನಿಗಳು, ಸರ್ಕಾರಗಳು, ವಿಶ್ವವಿದ್ಯಾನಿಲಯಗಳು, ಸರ್ಕಾರೇತರ ಸಂಘಟನೆಗಳು ಮತ್ತು ಕೈಗಾರಿಕೆ ಮತ್ತು ಬಾಹ್ಯ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.[೭೧][೭೩] ಸಮುದಾಯ, ಪರಿಸರ ಮತ್ತು ಸಂಸ್ಕೃತಿಗಳ ಪ್ರಾದೇಶಿಕ ಮತ್ತು ಜಗತ್ತಿನ ಮೇಲೆ ಪ್ರಭಾವ ಬೀರುವ ಸಾರ್ವಜನಿಕ ನೀತಿ ಮತ್ತು ಆಸಕ್ತಿಗಳನ್ನು ಸಂರಕ್ಷಣಾ ಯೋಜನೆಯ ರೂಪುರೇಷೆಗಳಲ್ಲಿ ಜೀವವೈವಿಧ್ಯ ಸಂರಕ್ಷಣೆಯು ಜಾಗತಿಕ ಆದ್ಯತೆಯಾಗಿದೆ.[೮೩] ಜೀವವೈವಿಧ್ಯ ಸಂರಕ್ಷಣೆ ಮತ್ತು ಕ್ರಿಯಾ ಯೋಜನೆಗಳು ಮಾನವ ಯೋಗಕ್ಷೇಮ ಹಾಗೂ ನೈಸರ್ಗಿಕ ಬಂಡವಾಳ, ಮಾರುಕಟ್ಟೆ ಬಂಡವಾಳ ಮತ್ತು ಪರಿಸರ ಲಭ್ಯತೆಗಳನ್ನು ಒಳಗೊಂಡಿರುವ, ಜಾಗತಿಕ ಆರ್ಥಿಕತೆಗಳನ್ನು ಉಳಿಸಿಕೊಳ್ಳುವ ರೀತಿ ಗುರುತಿಸುತ್ತವೆ.[೮೪][೮೫]

ಮಾಧ್ಯಮಗಳು

[ಬದಲಾಯಿಸಿ]

ಜೀವವೈವಿಧ್ಯ ಬ್ಯಾಂಕಿಂಗ್‌ ಮೂಲಕ ಜೀವವೈವಿಧ್ಯದ ಮೌಲ್ಯಮಾಪನವೂ ಒಂದು. ಉದಾಹರಣೆಗೆ, ಆಸ್ಟ್ರೇಲಿಯನ್‌ ಸ್ಥಳೀಯ ಸಸ್ಯಜೀವಜಾಲದ ನಿರ್ಮಾಣ ಚೌಕಟ್ಟು. ಜೀನ್‌ ಬ್ಯಾಂಕ್‌ಗಳ ಸೃಷ್ಟಿ, ಜೊತೆಗೆ ಪರಿಸರ ವ್ಯವಸ್ಥೆಯೊಳಗೆ ಪುನರ್ಪರಿಚಯಿಸುವ ಧ್ಯೇಯ ಸ್ಥಳೀಯ ಜಾತಿಗಳ ಅಭಿವೃದ್ಧಿ ಜೀನ್‌ ಬ್ಯಾಂಕ್‌ಗಳು (ಉದಾಹರಣೆಗೆ ಸಸ್ಯಕಾಶಿ ನರ್ಸರಿಗಳು) ಇತರೆ ಯತ್ನಗಳಾಗಿವೆ.[೮೬] ವಿದೇಶೀ ಜಾತಿಗಳ ನಿರ್ಮೂಲನೆಯು ಸ್ಥಳೀಯ ಜೀವವೈವಿಧ್ಯದ ಸುರಕ್ಷೆತೆಯ ಮುಖ್ಯ ಗುರಿ. ಜೀವವರ್ಗೀಕರಣ ಶಾಸ್ತ್ರದ ಮೂಲಕ ಪಿಡುಗಿನಂತಾಗಿರುವ ವಿದೇಶೀಯಪ್ರಬಲ ಜಾತಿಗಳನ್ನು ಪತ್ತೆ ಮಾಡಿ (ಉದಾಹರಣೆಗೆ DAISY (=ಡೈಸಿ), ಬಾರ್ಕೋಡ್‌ ಆಫ್‌ ಲೈಫ್‌[೮೭], ...) ನಂತರ ಅವುಗಳನ್ನು ನಿರ್ಮೂಲಗೊಳಿಸಬಹುದು.[೮೭] ಈ ರೀತಿ ಕೇವಲ ನಿರ್ದಿಷ್ಟ ಜೀವಿಗಳು ಹೆಚ್ಚಿನ ಪ್ರಮಾಣದಲ್ಲಿದ್ದಾಗ ಮಾತ್ರ ಬಳಸಬಹುದಾಗಿದೆ, ಏಕೆಂದರೆ ಇದು ಆರ್ಥಿಕವಾಗಿ ವೆಚ್ಚದಾಯಕ. ಜೀವವೈವಿಧ್ಯದ ಸಂರಕ್ಷಣೆಗಾಗಿ ಇತರೆ ಕ್ರಮಗಳ ಪೈಕಿ ಕೀಟನಾಶಕಗಳ ಬಳಕೆಯನ್ನು ಕಡಿಮೆಗೊಳಿಸುವುದು ಮತ್ತು/ಅಥವಾ ಸಾವಯವ ಕೀಟನಾಶಕಗಳನ್ನು ಬಳಸುವುದು, ... ಆದರೂ, ಗ್ರಾಮಾಂತರ ಫಲವತ್ತಾದ ಭೂ ಸಂರಕ್ಷಣೆ, ಸ್ಥಳೀಯ ಜಾತಿಗಳ ಪುನರ್ಪರಿಚಯ ಮತ್ತು ವಿದೇಶೀಯ ಜಾತಿಗಳ ನಿರ್ಮೂಲನೆಗೆ ಹೋಲಿಸಿದರೆ, ಮೇಲ್ಕಂಡ ಕ್ರಮಗಳ ಪ್ರಾಮುಖ್ಯತೆ ಕಡಿಮೆ. ಸ್ಥಳೀಯ ಸಂಕುಲಗಳ ಸಂರಕ್ಷಣೆಯು ನಿಶ್ಚಿತವಾದರೆ, ಅಳಿದುಹೋಗಿರುವ ಸ್ಥಳೀಯ ಜಾತಿಗಳನ್ನು ಪರಿಸರದೊಳಗೆ ಪುನರ್ಪರಿಚಯಿಸಲು ಯತ್ನಿಸಬಹುದಾಗಿದೆ. ಪುನರ್ಪರಿಚಯಿಸುವ ಮೊದಲು, ಆ ಜಾತಿಯು ಅ ಸ್ಥಳಕ್ಕೆ ಸುಪರಿಚಿತವೇ ಎಂಬುದನ್ನು ನಿರ್ಣಯಿಸುವ ಅಗತ್ಯವಿದೆ. ಎನ್ಸೈಕ್ಲೊಪೀಡಿಯಾ ಆಫ್‌ ಲೈಫ್‌, ಜಾಗತಿಕ ಜೀವವೈವಿಧ್ಯ ಮಾಹಿತಿ ಸೌಲಭ್ಯ ಬಳಸಿ ನಿರ್ಣಯಿಸಬಹುದಾಗಿದೆ. ನಿರ್ಮೂಲನಾ ಕಾರ್ಯವನ್ನು ಸಾಮಾನ್ಯವಾಗಿ ನೈಸರ್ಗಿಕ ಪರಾವಲಂಬಿಗಳು ಅಥವಾ ವಾಯು ಗುಣಕ್ಕೆ ಹೊಂದುವ ಕೀಟನಾಶಕಗಳನ್ನು ಬಳಸಿ ಮಾಡಲಾಗುತ್ತದೆ.

ನೀತಿ-ನಿಯಮಗಳು

[ಬದಲಾಯಿಸಿ]

ಮೇಲೆ ಗಮನಿಸಿದಂತೆ (ವಿಂಗಡಣೆ), ಜೀವವೈವಿಧ್ಯವು ಎಲ್ಲೆಡೆ ಅಷ್ಟು ಸಮೃದ್ಧವಾಗಿಲ್ಲ. ಸಮಶೀತೋಷ್ಣ ಹವಾಮಾನ ಹೊಂದಿರುವ ವಲಯಗಳಿಗೆ ಹೋಲಿಸಿದರೆ, ಉಷ್ಣ ಮತ್ತು ಉಪ-ಉಷ್ಣವಲಯಗಳು ಜೀವವೈವಿಧ್ಯದಲ್ಲಿ ಸಮೃದ್ಧವಾಗಿವೆ. ಇದರ ಜೊತೆಗೆ, ಸಮಶೀತೋಷ್ಣ ಹವಾಮಾನಗಳಲ್ಲಿ, ವ್ಯಾಪಕ ನಗರೀಕರಣದ ವಲಯಗಳುಳ್ಳ ಹಲವಾರು ದೇಶಗಳಲ್ಲಿವೆ. ಇದರಿಂದಾಗಿ ಖಾದ್ಯ ಬೆಳೆಸಲು ಭಾರೀ ಪ್ರಮಾಣದ ಪ್ರದೇಶ ಅಗತ್ಯವಿದೆ. ಈ ದೇಶಗಳ ಜೀವವೈವಿಧ್ಯ ಪುನಃಶ್ಚೇತನದ ಅಗತ್ಯವಿದೆ. ಇಂತಹ ಯತ್ನಗಳನ್ನು ಉಷ್ಣವಲಯಗಳಲ್ಲಿ ನಡೆಸುವುದು ಸೂಕ್ತವೆಂದು ಪ್ರಸ್ತಾಪವಾಗಿದೆ. ವಾದಗಳಲ್ಲಿ ಮಿತವ್ಯಯವೂ ಸೇರಿದೆ. ಏಕೆಂದರೆ ಉಷ್ಣವಲಯಗಳಲ್ಲಿ ಜೀವವೈವಿಧ್ಯ ಉಳಿಸುವ ವೆಚ್ಚ ಕಡಿಮೆ ಮತ್ತು ದಕ್ಷತೆಯಿಂದ ಮಾಡಬಹುದು. ಇಷ್ಟೇ ಅಲ್ಲ, ಉಷ್ಣವಲಯದಲ್ಲಿರುವ ದೇಶಗಳು ಈಗೀಗಷ್ಟೇ ನಗರೀಕರಣವಾಗತೊಡಗಿವೆ.[೮೮]

ಆದರೂ, ಯತ್ನಗಳನ್ನು ಕೇವಲ ಈ ಕ್ಷೇತ್ರಗಳತ್ತ ಕೇಂದ್ರೀಕರಿಸಿದರೆ ಸಾಲದು, ಹಲವು ಜಾತಿಗಳು ವರ್ಷದ ನಿರ್ದಿಷ್ಟ ಸಮಯದಲ್ಲಿ ವಲಸೆ ಹೋಗುವ ಸಾಧ್ಯತೆಯಿರುತ್ತದೆ. ಇದರಿಂದಾಗಿ ಇತರೆ ವಲಯ/ದೇಶಗಳೊಂದಿಗೆ ಸಂಪರ್ಕದ ಅಗತ್ಯವಿರುತ್ತದೆ. ಸಮಶೀತೋಷ್ಣ ವಲಯದಲ್ಲಿರುವ ಹೆಚ್ಚು ನಗರೀಕೃತ ದೇಶಗಳಲ್ಲಿ ವನ್ಯಜೀವಿ ಪ್ರದೇಶ(ಕಾರಿಡಾರ್‌)ಗಳನ್ನು ರೂಪಿಸಬೇಕಾಗಿದೆ. ಆದರೂ, ಹೊಸ ವಲಯಗಳನ್ನು ಶುದ್ಧಗೊಳಿಸಿ ಸಂರಕ್ಷಿಸುವ ವೆಚ್ಚಗಳಿಗೆ ಹೋಲಿಸಿದರೆ, ವನ್ಯಜೀವಿ ಕಾರಿಡಾರ್ ಗಳನ್ನು ನಿರ್ಮಿಸುವ ವೆಚ್ಚ ಕಡಿಮೆ.

ನ್ಯಾಯಿಕ ಪರಿಸ್ಥಿತಿ

[ಬದಲಾಯಿಸಿ]

ಜೀವವೈವಿಧ್ಯದ ಮೌಲ್ಯಮಾಪನ ಆರಂಭಗೊಂಡಿದೆ. ಪರಾಮರ್ಷೆ, ತಪಶೀಲು ಪಟ್ಟಿ, ಸಂರಕ್ಷಣೆಗಳ ಮೂಲಕ ವಿಕಸನದ ವಿಶ್ಲೇಷಣೆಯಾಗಿದೆ. ರಾಜಕೀಯ ಮತ್ತು ನ್ಯಾಯಿಕ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಜೀವವೈವಿಧ್ಯವನ್ನು ಸಹ ಗಣನೆಗೆ ತೆಗೆದುಕೊಳ್ಳಲಾಗುತ್ತದೆ.

  • ಕಾನೂನು ಮತ್ತು ಪರಿಸರ ವ್ಯವಸ್ಥೆಗಳ ನಡುವಿನ ಸಂಬಂಧವು ಬಹಳ ಪ್ರಾಚೀನವಾಗಿದ್ದು, ಜೀವವೈವಿಧ್ಯಕ್ಕೆ ಸಾಮ್ಯತೆ ಹೊಂದಿದೆ. ಖಾಸಗಿ ಮತ್ತು ಸಾರ್ವಜನಿಕ ಸ್ವತ್ತುಗಳ ಹಕ್ಕುಗಳಿಗೆ ಅದು ಸಂಬಂಧಿಸಿದೆ. ಅಳಿವಿನ ಭೀತಿಗೊಳಗಾದ ಪರಿಸರದ ರಕ್ಷಣೆಯ ವ್ಯಾಖ್ಯಾನ ನೀಡಬಹುದು; ಜೊತೆಗೆ ಕೆಲವು ಹಕ್ಕುಗಳು ಮತ್ತು ಕರ್ತವ್ಯಗಳನ್ನೂ ಸಹ ಒಳಗೊಂಡಿದೆ (ಉದಾಹರಣೆಗೆ, ಮೀನುಗಾರಿಕೆ ಹಕ್ಕುಗಳು, ಬೇಟೆಯಾಡುವ ಹಕ್ಕುಗಳು).
  • ತಳಿಗಳಿಗೆ ಸಂಬಂಧಿತ ಕಾನೂನು ಪ್ರಚಲಿತವಾಗಿದೆ . ಕೆಲವರ್ಗ ಅಳಿವಿನ ಭೀತಿಗೊಳಗಾಗಿರುವ ಕಾರಣ ರಕ್ಷಣೆ ನೀಡಬೇಕೆಂದು ವ್ಯಾಖ್ಯಾನಿಸುತ್ತದೆ. ಕಾನೂನು ಮತ್ತು ಬ್ರೀಡ್ ಗಳ ಸೂಕ್ತ ಪರಿಹಾರಕ್ಕೆ U.S. ಅಪಾಯಕ್ಕೀಡಾದ ವರ್ಗಗಳ ರಕ್ಷಣೆ ಕಾಯಿದೆಯು ಒಂದು ಉದಾಹರಣೆಯಾಗಿದೆ.
  • ಜೀನ್‌‌ ಸಂಗ್ರಹಗಳ ಕಾನೂನುಗಳು ಕೇವಲ ಒಂದು ಶತಮಾನದಷ್ಟು ಹಳೆಯದಾಗಿವೆ.[ಸೂಕ್ತ ಉಲ್ಲೇಖನ ಬೇಕು]. ಹೊಸ ತಳಿ ಅಭಿವೃದ್ಧಿ ಯತ್ನವು ಹೊಸತಲ್ಲದಿದ್ದರೂ (/ಸ್ಥಳೀಯವಾಗಿಸುವಿಕೆ, ಗಿಡಗಳ ಸಾಂಪ್ರದಾಯಿಕ ಆಯ್ಕೆ ರೀತಿಗಳು), ಕಳೆದ 20 ವರ್ಷಗಳಲ್ಲಿ ತಳಿ ಕ್ಷೇತ್ರಗಳಲ್ಲಿನ ಪ್ರಗತಿಯು ಕಟ್ಟುನಿಟ್ಟಿನ ಕಾನೂನುಗಳಿಗೆ ಕಾರಣವಾಗಿದೆ. ತಳಿ ವಿಶ್ಲೇಷಣೆ ಮತ್ತು ತಂತ್ರಜ್ಞಾನದಂತಹ ಹೊಸ ವಿಷಯ, ತಳಿಯ ಸ್ವಾಮ್ಯದ ಹಕ್ಕು , ಪ್ರಕ್ರಿಯೆಗಳ ಸ್ವಾಧೀನ ಮತ್ತು ಸಂಪನ್ಮೂಲಗಳ ಹೊಸ ಪರಿಕಲ್ಪನೆಯತ್ತ ಜನರು ಆಸಕ್ತಿ ತೋರಿದ್ದಾರೆ.[೮೯] ಸಂಪನ್ಮೂಲವು ಜೀನೋ(ವಂಶಾವಳಿ) ಅಥವಾ ಜೀವಿಯೋ ಅಥವಾ ಅದರ DNAನೋ ಎಂಬುದನ್ನು,ತಜ್ಞರ ಗಹನವಾದ ಚರ್ಚೆಯು ಇದನ್ನು ವ್ಯಾಖ್ಯಾನಿಸಲು ಯತ್ನಿಸುತ್ತದೆ.

ಸಸ್ಯಮೂಲದ ಜೈವಿಕ ಸಂಪನ್ಮೂಲಗಳು ಮನುಕುಲಕ್ಕೆ ಸಾಮಾನ್ಯ ಪರಂಪರೆಯಾಗಿದ್ದವು ಎಂದು 1972ರಲ್ಲಿ ನಡೆದ UNESCO ವಿಶ್ವ ಪರಂಪರೆಯ ಸಮಾವೇಶ ಪ್ರಕಟಿಸಿತು. ಈ ನಿಯಮಗಳು ಹೊರಗೆ ತಳೀಯ ಸಂಪನ್ಮೂಲ ಬ್ಯಾಂಕ್‌ಗಳ ಸೃಷ್ಟಿಗೆ ಪ್ರೇರಣೆ ನೀಡಿದವು. ಇದರ ವೈಶಾಲ್ಯ ಸಾರ್ವಜನಿಕರಿಗೂ ತಲುಪಿ ಹೊರಭಾಗಗಳಲ್ಲಿ, ವಿದೇಶಗಳಲ್ಲೂ ಶಾಖೆಗಳು ಕಾರ್ಯ ನಿರ್ವಹಿಸಲು ಆರಂಭಿಸಿದವು.

ಹೊಸ ಜಾಗತಿಕ ಒಪ್ಪಂದಗಳು ಉದಾಹರಣೆಗೆ (ಜೈವಿಕ ವೈವಿಧ್ಯ ಸಮಾವೇಶ),ಈಗ ಜೈವಿಕ ಸಂಪನ್ಮೂಲಗಳ ಬಳಕೆ ಮೇಲೆ (ಒಡೆತನದ ಮೇಲೆ ಅಲ್ಲ) ರಾಷ್ಟ್ರೀಯ ಹಕ್ಕುಗಳನ್ನು ನೀಡುತ್ತವೆ. ಜೀವವೈವಿಧ್ಯದ ಸಂರಕ್ಷಣೆಯ ಉದ್ದೇಶ ಕಣ್ಮರೆಯಾಗುತ್ತಿದ್ದು, ಅದರ ಸ್ಥಾನದಲ್ಲಿ ಸಂಪನ್ಮೂಲ ಮತ್ತು ನಾವೀನ್ಯದ ಹುಡುಕಾಟದ ಮೂಲಕ ಸಂರಕ್ಷಣೆಯ ಉದ್ದೇಶ ಸಫಲವಾಗಿದೆ.

ಜೀವವೈವಿಧ್ಯಗಳನ್ನು ಸಂರಕ್ಷಿಸಿ , ಸಶಕ್ತ ಸಾಮರ್ಥ್ಯವುಳ್ಳ ಸಂಪನ್ಮೂಲಗಳ ಅಭಿವೃದ್ಧಿಗೊಳಿಸಿ , ಅನುಕೂಲಗಳನ್ನು ವಿತರಿಸು ವಂತೆ ಈ ಹೊಸ ಒಪ್ಪಂದಗಳು ದೇಶಗಳನ್ನು ಬದ್ಧತೆಗೆ ಒಳಪಡಿಸುತ್ತವೆ. ಹೊಸ ನಿಯಮಗಳ ಪ್ರಕಾರ, ಜೀವವೈವಿಧ್ಯ ಸಮೃದ್ಧವಾಗಿರುವ ದೇಶ ಬಯೊಪ್ರಾಸ್ಪೆಕ್ಟಿಂಗ್‌ ಅಥವಾ ನೈಸರ್ಗಿಕ ಉತ್ಪನ್ನಗಳ ಸಂಗ್ರಹಣೆಗೆ ಅನುವು ಮಾಡಿಕೊಡಬೇಕು. ಪ್ರತಿಯಾಗಿ ಆ ದೇಶವು ತನ್ನ ಪಾಲನ್ನು ಪಡೆಯಬಹುದು.

ಹಕ್ಕು ಸ್ವಾಮ್ಯದ ನಿಯಮಗಳು ಪ್ರವೇಶ ಹಕ್ಕು ಮತ್ತು ಹಂಚಿಕೆಯ ಒಪ್ಪಂದಗಳನ್ನು (ABAs) ಅವಲಂಬಿಸಬಹುದು. ನೈಸರ್ಗಿಕ ಮೂಲಗಳ ದೇಶ ಮತ್ತು ಪಡೆಯುವವರ ಪರಸ್ಪರ ಒಪ್ಪಿಗೆಬಗ್ಗೆ, ಜೀವವೈವಿಧ್ಯ ಕುರಿತು ಬೃಹತ ಸಮಾವೇಶದ ಮಾರ್ಗಸೂಚಿ ತಿಳಿಸುತ್ತದೆ. ಯಾವ ಸಂಪನ್ಮೂಲವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗುತ್ತದೆ ಎಂಬುದನ್ನ, ಸೌಲಭ್ಯಗಳ ಹಂಚಿಕೆಯ ಮೇಲೆ ನ್ಯಾಯಯುತ ಒಪ್ಪಂದವನ್ನು ರೂಪಿಸಬಹುದು. ಈ ಮಸೂದೆ ಮನ್ನಣೆ ನೀಡದಿದ್ದಲ್ಲಿ, ಬಯೊಪ್ರಾಸ್ಪೆಕ್ಟಿಂಗ್‌ ಒಂದು ರೀತಿಯ ಬಯೊಪೈರೆಸಿ (ಜೈವಿಕ ಸ್ವಾಮ್ಯಚೌರ್ಯ) ಆಗಬಹುದು.

ಆದರೂ,ಗುಣಮಟ್ಟದ ಕಾನೂನು ಏಕಪ್ರಕಾರದ ಜೀವವೈವಿಧ್ಯದ ಬಳಕೆಗೆ ಅನುಮೋದನೆ ಇನ್ನು ಪಡೆದಿಲ್ಲ. ಜೀವವೈವಿಧ್ಯವನ್ನು ಕಾನೂನು, ಮಾಪನವನ್ನಾಗಿ ಬಳಸಬಾರದು; ಜೀವವೈವಿಧ್ಯದ ಪರಿಕಲ್ಪನೆಯಲ್ಲಿ ಅಂತರ್ಗತ ವೈಜ್ಞಾನಿಕ ಅನಗತ್ಯ ಆಡಳಿತ ವೆಚ್ಚ ಮತ್ತು ಸಂರಕ್ಷಣಾ ಗುರಿ ಉತ್ತೇಜಿಸದೆ ದುಗುಡ ಹೆಚ್ಚಿಸುತ್ತದೆ ಎಂದು ವ್ಯಾಖ್ಯಾನಕಾರರು ವಾದಿಸಿದ್ದಾರೆ. ಫ್ರೆಡ್‌ ಬೊಸೆಲ್ಮನ್‌, ಎ ಡಜನ್‌ ಬಯೊಡೈವರ್ಸಿಟಿ ಪಝಲ್ಸ್‌, 12 N.Y.U. ಎನ್ವಿರಾನ್ಮೆಂಟಲ್‌ ಲಾ ಜರ್ನಲ್‌ 364 (2004) ನೋಡಿ.

ವಿಶ್ಲೇಷಣಾ ಪರಿಮಿತಿಗಳು

[ಬದಲಾಯಿಸಿ]

ಜೀವ ವರ್ಗೀಕರಣ ಮತ್ತು ಗಾತ್ರ ಪರಿಗಣನೆ

[ಬದಲಾಯಿಸಿ]

ವಿವರಿಸಲಾದ ಎಲ್ಲ ಜಾತಿಗಳಲ್ಲಿ, ಅಸ್ತಿತ್ವ ದಾಖಲಿಸಿ ಅಧ್ಯಯನಿಸಿದ್ದು 1%ಕ್ಕಿಂತಲೂ ಕಡಿಮೆ.[೯೦] ಭೂಜೈವಿಕ ವೈವಿಧ್ಯದಲ್ಲಿ ಸೂಕ್ಷ್ಮಜೀವಿಯದ್ದೇ ಹೆಚ್ಚು ಪಾಲು. ಜೀವವೈವಿಧ್ಯವು ಭೌತವಿಜ್ಞಾನದ 'ದೃಷ್ಟಿ ಗೋಚರದ ಮೇಲೆಯೇ ದೃಢವಾಗಿದೆ' ಎಂದು ಜೀವವೈವಿಧ್ಯ ಸಂಶೋಧಕ ಸೀನ್‌ ನೀ ಹೇಳುತ್ತಾರೆ (ಸೀನ್‌ ನೀ ಸ್ಥೂಲದೃಷ್ಟಿ ಗೋಚರ ಎಂಬ ಪದಕ್ಕೆ ಪರ್ಯಾಯವಾಗಿ ದೃಷ್ಟಿ ಗೋಚರ ಎಂದು ಬಳಸಿದ್ದಾರೆ).[೯೧] ಉದಾಹರಣೆಗೆ, ಬಹುಕೋಶೀಯ ಜೀವಿಗಳಿಂದ ಸೂಕ್ಷ್ಮಜೀವಿಯ ಬದುಕು ಚಯಾಪಚಯದಂತೆ ಮತ್ತು ಪರಿಸರಕ್ಕೆ ಬಹಳಷ್ಟು ಭಿನ್ನವಾಗಿದೆ. ಎಕ್ಸ್‌ಟ್ರಿಮೊಫೈಲ್‌ ನೋಡಿ.) "ಮರದ ಜೈವಿಕ ಚಕ್ರ, ರೈಬೊಸೊಮ್‌ RNAದ ಸಣ್ಣ-ಘಟಕದ ವಿಶ್ಲೇಷಣೆಗಳ ಮೇಲೆ, ದೃಷ್ಟಿಗೋಚರ ಜೀವಚಕ್ರವು ಅಷ್ಟೇ ಕೊಂಬೆಗಳನ್ನು ಹೊಂದಿವೆ" ಎಂದು ಸೀನ್‌ ನೀ ಹೇಳಿದ್ದಾರೆ.

ಗಾತ್ರದ ಲೋಪವು ಕೇವಲ ಸೂಕ್ಷ್ಮಜೀವಿಗಳ ಪರಿಗಣನೆಗೆ ಸೀಮಿತವಾಗಿಲ್ಲ. 'ಮೊದಲ ಬಾರಿ ಸ್ಥೂಲವಾಗಿ ಗಮನಿಸಿದರೆ, ಭೂಮಿಯ ಮೇಲಿರುವ ಎಲ್ಲಾ ಬಹುಕೋಶೀಯ ಜೀವಿಗಳು ಕೀಟಗಳಾಗಿವೆ[೯೨]' ಎಂದು ಕೀಟಶಾಸ್ತ್ರಜ್ಞ ನೈಗೆಲ್‌ ಸ್ಟಾರ್ಕ್‌ ಹೇಳುತ್ತಾರೆ. ಆದರೂ, ಕೀಟಗಳಲ್ಲಿಯೂ,ಅಳಿವಿನ ಪ್ರಮಾಣ ಅಧಿಕವಾಗಿದೆ. ಹೀಗಾಗಿ ಮಾನವ ಸಮುದಾಯವು ಎದುರಿಸುತ್ತಿರುವ ಆರನೆಯ ಮಹಾ ಅಳಿವಿನ ಕಾಲದ ಸಾಮಾನ್ಯ ಪ್ರವೃತ್ತಿ ಸೂಚಿಸುತ್ತದೆ.[೯೩][೯೪] ಜೀವಿಗಳ 'ಸಹ-ಅಳಿವು' ಕೂಡ ಸಂಭವಿಸುತ್ತಿದೆ. ಉದಾಹರಣೆಗೆ ಗಿಡ ಮತ್ತು ಜೀರುಂಡೆಗಳಲ್ಲಿ, ಒಂದರಲ್ಲಿ ಕುಸಿತ ಅಥವಾ ಅಳಿವು ಸಂಭವಿಸಿದರೆ ಇನ್ನೊಂದರ ಮೇಲೂ ಪರಿಣಾಮ ಬೀರುತ್ತದೆ.[೯೫]

ವ್ಯಾಖ್ಯಾನ

[ಬದಲಾಯಿಸಿ]
  1. ಜೀವವೈವಿಧ್ಯವೆಂಬುದು ಜೈವಿಕ ವಿಧಗಳು:ಸಸ್ಯ, ಗಿಡಗಳು, ಖಗ-ಮೃಗ ಮತ್ತು ಸೂಕ್ಷ್ಮಜೀವಿಗಳು ಮತ್ತು ಅವುಗಳ ಜೀನ್‌ಗಳು ಇವೆಲ್ಲವೂ ಪರಿಸರ ವ್ಯವಸ್ಥೆಗಳು. ಇದು ಒಂದು ದಶಲಕ್ಷಕ್ಕಿಂತಲೂ ಹೆಚ್ಚು ಸಸ್ಯ ಜಾತಿಗಳಿಗೆ ಆಸರೆಯಾಗಿದೆ. ಇವುಗಳಲ್ಲಿ ಬಹುಪಾಲು ವಿಶ್ವದಲ್ಲಿ ಬೇರೆಲ್ಲಿಯೂ ಕಂಡುಬಂದಿಲ್ಲ.[೯೬]
  2. 'ಜೀವವೈವಿಧ್ಯ', 'ಜೀನ್‌ಗಳಿಂದ ಹಿಡಿದು ಜಾತಿಗಳ ವರೆಗೂ, ಪರಿಸರ ವ್ಯವಸ್ಥೆಗಳಾದ್ಯಂತ ಕಾಣುವ ಜೀವದ ರೂಪಗಳಲ್ಲಿರುವ ವಿಭಿನ್ನತೆ' ಎಂದು ವ್ಯಾಖ್ಯಾನಿಸಲಾಗಿದೆ. (ಈ ಸರಳ ವ್ಯಾಖ್ಯಾನದ ಬಗ್ಗೆ ರೂಪಾಂತರಗಳ ಪಟ್ಟಿಗಾಗಿ ಗ್ಯಾಸ್ಟನ್‌ 1996 ನೋಡಿ).

ಇದನ್ನೂ ನೋಡಿರಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Chapman, A.D. (2005). "Numbers of Living Species in Australia and the World". Australian Biological Resources Study. Archived from the original on 2009-05-19. Retrieved 2009-04-23. {{cite web}}: Unknown parameter |month= ignored (help)
  2. "Determing the genomic infrastructure of evolution and diversity through comparative genome analysis". National Institute of Informatics. 2009. Archived from the original on 2009-07-06. Retrieved 2009-04-23.
  3. ಡಾಸ್ಮನ್‌, ಆರ್‌. ಎಫ್‌. 1968. ಎ ಡಿಫೆರೆಂಟ್‌ ಕೈಂಡ್‌ ಆಫ್‌ ಕಂಟ್ರಿ. ಮೆಕ್ಮಿಲನ್‌ ಕಂಪನಿ, ನ್ಯೂ ಯಾರ್ಕ್‌. ಐಎಸ್‌ಬಿಎನ್‌ 978-0751328868
  4. ಎಂ. ಇ. ಸೌಲೆ ಮತ್ತು ಬಿ. ಎ. ವಿಲ್ಕಾಕ್ಸ್‌. 1980. ಕಂಸರ್ವೆಷನ್‌ ಬಯಾಲಜಿ: ಅನ್‌ ಎವಲ್ಯೂಷನರಿ-ಎಕೊಲೊಜಿಕಲ್‌ ಪರ್ಸ್ಪೆಕ್ಟಿವ್‌. ಸಿನಾಯೆರ್ ಅಸೊಷಿಯೇಟ್ಸ್‌, ಸಂಡರ್ಲೆಂಡ್‌, MA. ISBN 0-87893-518-5 ಸಂಡರ್ಲೆಂಡ್‌, ಮಸ್ಸಾಚುಸೆಟ್ಸ್.
  5. ಜಾಗತಿಕ ಜೀವವೈವಿಧ್ಯ ಮೌಲ್ಯಮಾಪನ. UNEP, 1995, ಅನೆಕ್ಸ್‌ 6, ಗ್ಲಾಸರಿ. ISBN 0-521-56481-6, "ಜೀವವೈವಿಧ್ಯ", CBDಗೆ ಸಂಬಂಧಿತ ಪದಗಳ ಪಟ್ಟಿ ಯಿಂದ ಮೂಲವಾಗಿ ಬಳಸಲಾದದ್ದು; ಬೆಲ್ಜಿಯನ್‌ ಕ್ಲಿಯರಿಂಗ್‌ ಹೌಸ್‌ ಮೆಕ್ಯಾನಿಸಮ್‌. ಪುನರ್ಪಡೆದದ್ದು 2006-04-26.
  6. ಎಡ್ವರ್ಡ್‌ ಒ. ವಿಲ್ಸನ್‌, ಸಂಪಾದಕರು, ಫ್ರಾನ್ಸೆಸ್‌ ಎಮ್‌. ಪೀಟರ್‌, ಸಹ-ಸಂಪಾದಕರು, ಜೀವವೈವಿಧ್ಯ , ನ್ಯಾಷನಲ್‌ ಅಕಾಡೆಮಿ ಪ್ರೆಸ್‌, ಮಾರ್ಚ್‌ 1988 ISBN 0-309-03783-2; ISBN 0-309-03739-5 (ಪಿಬಿಕೆ.), ಆನ್ಲ್ಲೈನ್‌ ಆವೃತ್ತಿ Archived 2006-09-13 ವೇಬ್ಯಾಕ್ ಮೆಷಿನ್ ನಲ್ಲಿ.
  7. ವಿಲ್ಕಾಕ್ಸ್‌, ಬ್ರೂಸ್‌ ಎ. 1984. ಅದರ (ಮೂಲ) ಸ್ಥಾನದಲ್ಲಿ ತಳೀಯ ಸಂಪನ್ಮೂಲಗಳ ಸಂರಕ್ಷಣೆ: ಕನಿಷ್ಠ ಕ್ಷೇತ್ರೀಯ ಅಗತ್ಯಗಳ ನಿರ್ಧಾರಕ. ರಾಷ್ಟ್ರೀಯ ಉದ್ಯಾನಗಳಲ್ಲಿ ಸಂರಕ್ಷಣೆ ಮತ್ತು ಅಭಿವೃದ್ಧಿ, ರಾಷ್ಟ್ರೀಯ ಉದ್ಯಾನವನಗಳ ಕುರಿತು ವಿಶ್ವ ಮಹಾಸಭೆಯ ಆಗುಹೋಗುಗಳು, ಜೆ.ಎ. ಮೆಕ್ನೀಲಿ ಮತ್ತು ಕೆ.ಆರ್. ಮಿಲರ್‌ , ಸ್ಮಿತ್‌ಸನಿಯನ್‌ ಇನ್ಸ್ಟಿಟ್ಯೂಷನ್‌ ಪ್ರೆಸ್‌, ಪಿಪಿ. 18-30.
  8. ಕೆವಿನ್‌ ಜೆ. ಗ್ಯಾಸ್ಟನ್‌ ಮತ್ತು ಜಾನ್‌ ಐ. ಸ್ಪೈಸರ್‌. (2004) "ಬಯೊಡೈವರ್ಸಿಟಿ: ಅನ್‌ ಇನ್ಟ್ರೊಡಕ್ಷನ್‌", ಬ್ಲ್ಯಾಕ್ವೆಲ್‌ ಪಬ್ಲಿಷಿಂಗ್‌. 2ನೆಯ ಸಂ., ಐಎಸ್‌ಬಿಎನ್‌ 1-4051-1857-1(ಪಿಬಿಕೆ.)
  9. ವೈಟ್‌, ದಿ ನ್ಯಾಚುರಲ್‌ ಹಿಸ್ಟರಿ ಆಫ್‌ ಸೆಲ್ಬೊರ್ನ್‌ , ಪತ್ರ xx 8 ಅಕ್ಟೊಬರ್‌ 1768.
  10. "Endangered Species List Expands to 16,000". Retrieved 2007-11-13.
  11. "Moustakas, A. & I. Karakassis. How diverse is aquatic biodiversity research?, Aquatic Ecology, 39, 367-375" (PDF).[permanent dead link]
  12. ಮಯರ್ಸ್‌ ಎನ್‌. (1988), ಉಷ್ಣವಲಯಗಳಲ್ಲಿ "ಭೀತಿಗೊಡ್ಡಲಾದ ಬಯೊಟಾಸ್‌": 'ಬಿಸಿದಾಣಗಳು', ಎನ್ವಿರಾನ್ಮೆಂಟಲಿಸ್ಟ್‌ , 8 , 187–208.
  13. ಮಯರ್ಸ್‌ ಎನ್‌. (1990), "ಜೀವವೈವಿಧ್ಯದ ಸವಾಲು: ಬಿಸಿದಾಣಗಳ ವಿಸ್ತರಿತ ವಿಶ್ಲೇಷಣೆಗಳು", ಎನ್ವಿರಾನ್ಮೆಂಟಲಿಸ್ಟ್‌ , 10 , 243–256.
  14. ಜೆ. ಆಲ್ರಾಯ್‌, ಸಿ.ಆರ್‌. ಮತ್ತು ಇತರರು 2001. ಫನೆರೊಜೊನಿಕ್‌ ಕಡಲ ವೈವಿಧ್ಯೀಕರಣದ ಮೇಲೆ ಮಾದರಿ ತೆಗೆದುಕೊಳ್ಳುವಿಕೆಯ ಪ್ರಮಾಣೀಕರಣದ ಪ್ರಭಾವ. ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, USA 98ರಲ್ಲಿ ನಡೆದ ಆಗುಹೋಗುಗಳು: 6261–6266
  15. ೧೫.೦ ೧೫.೧ "Mapping the web of life". Unep.org. Archived from the original on 2010-07-25. Retrieved 2009-06-21.
  16. Edward O. Wilson (2002). The Future of Life. New York: Alfred A. Knopf.
  17. http://www.springerlink.com/content/kx5768ll862h418v/[permanent dead link]
  18. ಉಲ್ಲೇಖ ದೋಷ: Invalid <ref> tag; no text was provided for refs named nature.com
  19. Hassan, Rashid M. (2006). Ecosystems and human well-being: current state and trends : findings of the Condition and Trends Working Group of the Millennium Ecosystem Assessment. Island Press. p. 105. ISBN 1559632283, 9781559632287. {{cite book}}: Check |isbn= value: invalid character (help); Unknown parameter |coauthors= ignored (|author= suggested) (help)
  20. ೨೦.೦ ೨೦.೧ ೨೦.೨ "Rice Grassy Stunt Virus". Lumrix.net. Retrieved 2009-06-21.
  21. GM ವಾಹ್ಲ್, BR ಡಿ ಸೇಂಟ್‌ ವಿನ್ಸೆಂಟ್‌ ಮತ್ತು ML ಡಿರೋಸ್‌, ಪ್ರಾಣಿ ಕೋಶಗಳಲ್ಲಿ ಟ್ರಾನ್ಸ್‌ಫೆಕ್ಟೆಡ್‌ ಜೀನ್‌ಗಳ ವಿಸ್ತರಣದ ಮೇಲೆ ವರ್ಣತಂತುಗಳ ಸ್ಥಾನದ ಪ್ರಭಾವ , ನೇಚರ್‌ 307:516–520
  22. "Southern Corn Leaf Blight". Archived from the original on 2006-09-04. Retrieved 2007-11-13.
  23. ಆರೋಗ್ಯ ಮತ್ತು ಜೀವವೈವಿಧ್ಯ ಕುರಿತು ಮೊದಲ ಮತ್ತು ಎರಡನೆಯ ಅಂತಾರಾಷ್ಟ್ರೀಯ ಸಮ್ಮೇಳನಗಳ ವರದಿಗಳು. Archived 2009-01-07 ವೇಬ್ಯಾಕ್ ಮೆಷಿನ್ ನಲ್ಲಿ. ಇದನ್ನೂ ನೋಡಿ: UN COHAB ಇನಿಷಿಯೆಟಿವ್‌ನ ಜಾಲತಾಣ Archived 2009-02-04 ವೇಬ್ಯಾಕ್ ಮೆಷಿನ್ ನಲ್ಲಿ.
  24. ೨೪.೦ ೨೪.೧ ಚಿವಿಯನ್‌ ಇ. ಮತ್ತು ಬರ್ನ್‌ಸ್ಟೀನ್‌ ಎ. (ಸಂಪಾದಕರು), 2008. ಜೀವಿಗಳನ್ನು ಉಳಿಸಿಕೊಳ್ಳುವುದು: ಹೇಗೆ ಮಾನವನ ಆರೋಗ್ಯ ಜೀವವೈವಿಧ್ಯ ಅವಲಂಬಿಸಿದೆ
  25. ಕರ್ವಲನ್‌ ಸಿ. ಮತ್ತು ಇತರರು , 2005 ಪರಿಸರ ವ್ಯವಸ್ಥೆಗಳು ಮತ್ತು ಮಾನವ ಯೋಗಕ್ಷೇಮ: ಆರೋಗ್ಯ ಸಂಶ್ಲೇಷಣೆ . ಸಹಸ್ರಮಾನ ಪರಿಸರ ವ್ಯವಸ್ಥೆ ಮೌಲ್ಯಮಾಪನದ ವರದಿ
  26. ಫುಲ್ಲರ್‌ ಆರ್‌.ಎ. ಇರ್ವಿನ್‌ ಕೆ.ಎನ್‌. ಡೆವಿನ್‌-ರೈಟ್‌ ಪಿ. ವಾರೆನ್‌ ಪಿ.ಹೆಚ್‌. ಗ್ಯಾಸ್ಟನ್‌ ಕೆ.ಜೆ., ಜೀವವೈವಿಧ್ಯದೊಂದಿಗೆ ಹಸಿರುವಲಯದ ವಿಸ್ತರಣೆಯ ಅನುಕೂಲಗಳು ಜೀವವಿಜ್ಞಾನ ಪತ್ರಗಳಲ್ಲಿ, 2007
  27. "COHAB Initiative: Biodiversity and Human Health - the issues". Cohabnet.org. Archived from the original on 2008-09-05. Retrieved 2009-06-21.
  28. "ವಿಶ್ವ ವನ್ಯಜೀವಿ ನಿಧಿ (WWF): "ರಕ್ಷಣೆಗಾಗಿ ವಾದಗಳು" ಜಾಲತಾಣ". Archived from the original on 2009-03-14. Retrieved 2009-11-27.
  29. ಹಾರ್ವಿ ಎಲ್‌., 2008. ಔಷಧಿಗಳ ಸಂಶೋಧನೆಯಲ್ಲಿ ನೈಸರ್ಗಿಕ ಉತ್ಪನ್ನಗಳು . ಇಂದಿನ ಔಷಧ ಸಂಶೋಧನೆ
  30. ಹಾಕಿನ್ಸ್‌ ಇ.ಎಸ್‌. ಮತ್ತು ರೀಚ್‌ ಎಂ.ಆರ್‌., 1992 1960ರಿಂದ 1989ರ ವರೆಗೆ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಜಪಾನಿ ಮೂಲದ ಔಷಧಿ ಉತ್ಪನ್ನಗಳು: ನಾವೀನ್ಯದ ಮೌಲ್ಯಮಾಪನೆ . ಕ್ಲಿನ್‌ ಫಾರ್ಮಕಾಲ್‌ ಥೆರ್‌. 51:1-11
  31. ರೂಪೇಶ್‌ ಜೆ. ಮತ್ತು ಇತರರು. , 2008 ಕಡಲ ಜೀವಿಗಳು: ಔಷಧ ಪರಿಶೋಧನೆಗಾಗಿ ಸಂಭಾವ್ಯ ಮೂಲ ಪ್ರಸ್ತುತ ವಿಜ್ಞಾನ, ಸಂಪುಟ. 94, ಸಂಖ್ಯೆ. 3, 10 ಫೆಬ್ರುವರಿ 2008
  32. ಬಯೊಪ್ರಾಸ್ಪೆಕ್ಟಿಂಗ್‌: ಪರಿಸರ ಮತ್ತು ಅಭಿವೃದ್ಧಿಯ ಮೇಲೆ ಪರಿಣಾಮಗಳು[permanent dead link]
  33. Home (2005-07-16). "Looking for new compounds in sea is endangering ecosystem". Bmj.com. doi:10.1136/bmj.330.7504.1350-d. Retrieved 2009-06-21.
  34. "COHAB Initiative - on Natural Products and Medicinal Resources". Cohabnet.org. Archived from the original on 2017-10-25. Retrieved 2009-06-21.
  35. IUCN, WRI, WBCSD, ಅರ್ಥ್‌ವಾಚ್‌ ಇನ್ಸ್ಟಿಟ್ಯೂಟ್‌ 2007 ಉದ್ದಿಮೆ ಮತ್ತು ಪರಿಸರ ವ್ಯವಸ್ಥೆಗಳು: ಪರಿಸರ ವ್ಯವಸ್ಥೆಗಳ ಮುಂದಿರುವ ಸವಾಲುಗಳು ಮತ್ತು ಉದ್ದಿಮೆಯ ಅಂತರಾರ್ಥಗಳು
  36. ಸಹಸ್ರಮಾನ ಪರಿಸರ ವ್ಯವಸ್ಥೆ ಮೌಲ್ಯಮಾಪನ 2005 ಪರಿಸರ ವ್ಯವಸ್ಥೆಗಳು ಮತ್ತು ಮಾನವ ಯೋಗಕ್ಷೇಮ: ಉದ್ದಿಮೆ ಮತ್ತು ಕೈಗಾರಿಕೆಗಳಿಗೆ ಅವಕಾಶಗಳು ಮತ್ತು ಸವಾಲುಗಳು
  37. "Business and Biodiversity webpage of the U.N. Convention on Biological Diversity". Cbd.int. Retrieved 2009-06-21.
  38. WRI ಸಾಂಸ್ಥಿಕ ಪರಿಸರ ವ್ಯವಸ್ಥೆ ಸೇವೆಗಳ ವಿಮರ್ಶೆ. ಇದನ್ನೂ ನೋಡಿ: ಪರಿಸರ ವ್ಯವಸ್ಥೆ-ಸೇವಾ ಆಧಾರಿತ ಅಪಾಯಗಳು, ಅವಕಾಶಗಳು ಮತ್ತು ರೂಪುರೇಖೆಗಳು Archived 2009-04-01 ವೇಬ್ಯಾಕ್ ಮೆಷಿನ್ ನಲ್ಲಿ.
  39. Popper, Karl (1972). Objective Knowledge. Oxford: Clarendon Press. pp. 288–289.
  40. ಸಂಧಿಪದಿಗಳಲ್ಲಿ ಕೇವಲ 50 ಮತ್ತು ಪ್ರೊಟೊಜೋವಾಗಳಲ್ಲಿ ಕೇವಲ 5%ರಷ್ಟು ಮಾತ್ರ ವಿವರಿಸಲಾಗಿದೆ ಎಂದು ತಿಳಿಸಿದ ಜಾಗತಿಕ ಜೀವಿವರ್ಗೀಕರಣ ವಿಜ್ಞಾನ ಮುಂತೊಡಗುವಿಕೆ
  41. "Encyclopedia Smithsonian: Numbers of Insects". Si.edu. Retrieved 2009-06-21.
  42. ೪೨.೦ ೪೨.೧ ಲೆ ಮೊಂಡ್‌ ಪತ್ರಿಕಾ ಲೇಖನ
  43. ರಾಷ್ಟ್ರೀಯ ವಿಜ್ಞಾನ ಅಕಾಡೆಮಿ, ಕಡಲ ಜೀವಿ ಗಣನೆ (CoML)ಯ ಆಗುಹೋಗುಗಳು
  44. ಡೇವಿಡ್‌ ಎಲ್‌. ಹಾಕ್ಸ್‌ವರ್ಥ್‌, "ಶಿಲೀಂಧ್ರದ ವೈವಿಧ್ಯ: 1.5 ದಶಲಕ್ಷ ಜಾತಿಗಳ ಅಂದಾಜಿನ ಮರುಭೇಟಿ" ಶಿಲೀಂಧ್ರಶಾಸ್ತ್ರ ಸಂಶೋಧನೆ (2001), 105: 1422–1432 ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌ [೧] Archived 2011-05-24 ವೇಬ್ಯಾಕ್ ಮೆಷಿನ್ ನಲ್ಲಿ.
  45. "Acari at University of Michigan Museum of Zoology Web Page". Insects.ummz.lsa.umich.edu. 2003-11-10. Retrieved 2009-06-21.
  46. ಹೆಚ್ಚು ಪ್ರಮಾಣದಲ್ಲಿ ಹೊಸ ಜಾತಿಗಳ ಪರಿಶೋಧನೆ ಮತ್ತು ನಿರ್ಮುಲ
  47. ೪೭.೦ ೪೭.೧ "Reid Reversing loss of Biodiversity". Ag.arizona.edu. Retrieved 2009-06-21.
  48. ಎಸ್‌.ಎಲ್‌. ಪಿಮ್‌, ಜಿ.ಜೆ. ರಸೆಲ್‌, ಜೆ.ಎಲ್‌. ಗಿಟ್ಲ್‌ಮನ್‌ ಮತ್ತು ಟಿ.ಎಮ್‌. ಬ್ರೂಕ್ಸ್‌, ಜೀವವೈವಿಧ್ಯದ ಭವಿಷ್ಯ , ವಿಜ್ಞಾನ 269: 347–350 (1995)
  49. Jim Chen (2003). "Across the Apocalypse on Horseback: Imperfect Legal Responses to Biodiversity Loss". The Jurisdynamics of Environmental Protection: Change and the Pragmatic. Environmental Law Institute. p. 197. ISBN 1585760714.
  50. "Hippo dilemma". Windows on the Wild: Science and Sustainabiliy. New Africa Books. 2005. ISBN 1869283805.
  51. "IUCNರವರ ನೇರ ಭೀತಿಗಳ ವರ್ಗೀಕರಣ". Archived from the original on 2009-02-21. Retrieved 2009-11-27.
  52. ಪಾಲ್‌ ಎಹ್ರ್ಲಿಚ್‌ ಮತ್ತು ಆನ್‌ ಎಹ್ರ್ಲಿಚ್‌, ಎಕ್ಸ್‌ಟಿನ್ಕ್ಷನ್‌ , ರಾಂಡಮ್‌ ಹೌಸ್‌, ನ್ಯೂ ಯಾರ್ಕ್‌ (1981) ಐಎಸ್‌ಬಿಎನ್‌ 0-394-51312-6
  53. "Astrobio paper on biomass Distribution". Astrobio.net. 2002-03-15. Archived from the original on 2006-09-28. Retrieved 2009-06-21.
  54. ಡ್ರಕರ್‌ ಎಸ್‌‌., ಲೆನನ್‌ ಜೆ.ಎಲ್‌., ಹಿಲ್‌ಬ್ರಾಂಡ್ ಹೆಚ್‌., 2006 ಜಾತಿ-ಕ್ಷೇತ್ರ ಸಂಬಂಧಗಳ ಮೇಲೆ ಭೌಗೋಳಿಕ, ವಿಕಸನ ಮತ್ತು ಪರಿಸರೀಯ ಸಂದರ್ಭಗಳ ಪ್ರಭಾವ ಎಕಾಲಜಿ ಲೆಟರ್ಸ್‌ 9 (2), 215–227[permanent dead link]
  55. "Study: Loss Of Genetic Diversity Threatens Species Diversity". Enn.com. 2007-09-26. Retrieved 2009-06-21.
  56. ವಿಜ್ಞಾನ ಸಂಪರ್ಕ 22 (ಜುಲೈ 2008)
  57. "ಕ್ರಿಸ್ಟಿನ್‌ ವ್ಯಾನ್‌ ಡರ್‌ ಮಿನ್ಸ್‌ಬ್ರುಗ್‌ ಹೇಳಿದಂತೆ, ಸ್ಥಳೀಯ ಮರಗಳ ಸಂಖ್ಯೆಯಲ್ಲಿ ಬೆಲ್ಜಿಯಮ್‌ನಲ್ಲಿರುವುದು ಕೇವಲ 5%ರಷ್ಟು". Archived from the original on 2011-09-01. Retrieved 2009-11-27.
  58. ಸ್ಥಳೀಯ ಮರಗಳ ಸಂಖ್ಯೆಯಲ್ಲಿ ಬೆಲ್ಜಿಯಮ್‌ನಲ್ಲಿರುವುದು ಕೇವಲ 5%ರಷ್ಟು
  59. "Guardian.co.uk". Guardian. Retrieved 2009-06-21.
  60. "Glossary: definitions from the following publication: Aubry, C., R. Shoal and V. Erickson. 2005. Grass cultivars: their origins, development, and use on national forests and grasslands in the Pacific Northwest. USDA Forest Service. 44 pages, plus appendices.; Native Seed Network (NSN), Institute for Applied Ecology, 563 SW Jefferson Ave, Corvallis, OR 97333, USA". Nativeseednetwork.org. Archived from the original on 2006-02-22. Retrieved 2009-06-21.
  61. ಸಂಕರೀಕರಣ ಮತ್ತು ಅಂತರ್ಗಮನದ ಮೂಲಕ ಅಳಿವು; ಲೇಖಕರು: ಜುಡಿತ್‌ ಎಂ. ರೈಮರ್‌, ವನ್ಯಜೀವಿ ಪರಿಸರ ವಿಜ್ಞಾನ ವಿಭಾಗ, ಮೆಯಿನ್‌ ವಿಶ್ವವಿದ್ಯಾನಿಲಯ, ಒರೊನೊ, ಮೆಯಿನ್‌ 04469, USA; ಮತ್ತು ಡೆನಿಯಲ್‌ ಸಿಂಬರ್ಲಾಫ್‌, ಜೈವಿಕ ವಿಜ್ಞಾನ, ಫ್ಲಾರಿಡಾ ರಾಜ್ಯ ವಿಶ್ವವಿದ್ಯಾನಿಲಯ, ಟಾಲಹಾಸ್ಸೆ, ಫ್ಲಾರಿಡಾ 32306, USA; ಪರಿಸರ ವಿಜ್ಞಾನ ಮತ್ತು ವರ್ಗೀಕರಣ ಶಾಸ್ತ್ರ, ನವೆಂಬರ್‌ 1996, ಸಂಪುಟ. 27, ಪುಟಗಳು 83–109 (doi: 10.1146/annurev.ecolsys.27.1.83) Archived 2009-01-09 ವೇಬ್ಯಾಕ್ ಮೆಷಿನ್ ನಲ್ಲಿ., [೨]
  62. "ನೀಲಗಿರಿ ಜಾತಿ ಮತ್ತು ಸಂಕರಗಳನ್ನು ಬಳಸಿ ಹೊಲಗದ್ದೆ ವನ್ಯಪ್ರದೇಶದಿಂದ ತಳೀಯ ಮಾಲಿನ್ಯ; RIRDC/L&WA/FWPRDCಗಾಗಿ ಒಂದು ವರದಿ; ಸಹಯೋಗದ ಕೃಷಿವನ್ಯಪ್ರದೇಶ ಯೋಜನೆ; ಲೇಖಕರು: ಬ್ರ್ಯಾಡ್‌ ಎಂ. ಪಾಟ್ಸ್‌, ರಾಬರ್ಟ್‌ ಸಿ. ಬಾರ್ಬೊರ್‌, ಆಂಡ್ರ್ಯೂ ಬಿ. ಹಿಂಗ್ಸ್‌ಟನ್‌; ಸೆಪ್ಟೆಂಬರ್‌ 2001; RIRDC ಪ್ರಕಟಣಾ ಸಂ: 01/114; RIRDC ಯೋಜನೆ ಸಂ. CPF - 3A; ಐಎಸ್‌ಬಿಎನ್‌ 0642583366; ISSN 1440-6845; ಆಸ್ಟ್ರೇಲಿಯನ್‌ ಸರ್ಕಾರ, ಗ್ರಾಮಾಂತರ ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ನಿಗಮ" (PDF). Archived from the original (PDF) on 2016-01-05. Retrieved 2009-11-27.
  63. ೬೩.೦ ೬೩.೧ “ಜೆನೆಟಿಕ್‌ ಪಲ್ಯೂಷನ್‌: ದಿ ಗ್ರೇಟ್‌ ಜೆನೆಟಿಕ್‌ ಸ್ಕ್ಯಾಂಡಲ್‌”; ದೇವಿಂದರ್‌ ಶರ್ಮಾ ಅವರನ್ನು ಈ ವಿಳಾಸದಲ್ಲಿ ಸಂಪರ್ಕಿಸಬಹುದು: 7 ತ್ರಿವೇಣಿ ಅಪಾರ್ಟ್‌ಮೆಂಟ್ಸ್‌, A-6 ಪಶ್ಚಿಮ್‌ ವಿಹಾರ್‌, ಹೊಸ ದಿಲ್ಲಿ-110 063, ಭಾರತ. Archived 2009-05-18 ವೇಬ್ಯಾಕ್ ಮೆಷಿನ್ ನಲ್ಲಿ.Email: dsharma@ndf.vsnl.net.in. ಪರ್ಯಾಯ ಕೃಷಿ ಮಾಧ್ಯಮ ಕೇಂದ್ರ (CAAM). Archived 2009-05-18 ವೇಬ್ಯಾಕ್ ಮೆಷಿನ್ ನಲ್ಲಿ. [೩] Archived 2008-02-14 ವೇಬ್ಯಾಕ್ ಮೆಷಿನ್ ನಲ್ಲಿ.
  64. Pollan, Michael (2001-12-09). "The year in ideas: A TO Z.; Genetic Pollution; By Michael Pollan, The New York Times, December 9, 2001". New York Times. Retrieved 2009-06-21.
  65. "Dangerous Liaisons? When Cultivated Plants Mate with Their Wild Relatives; by Norman C. Ellstrand; The Johns Hopkins University Press, 2003; 268 pp. hardcover, $ 65; ISBN 0-8018-7405-X. Book Reviewed in: Hybrids abounding; Nature Biotechnology 22, 29–30 (2004) doi:10.1038/nbt0104-29; Reviewed by: Steven H Strauss & Stephen P DiFazio; 1 Steve Strauss is in the Department of Forest Science, Oregon State University, Corvallis, Oregon 97331-5752, USA. steve.strauss@oregonstate.edu; 2 Steve DiFazio is at Oak Ridge National Laboratory, Bldg. 1059, PO Box 2008, Oak Ridge, Tennessee 37831-6422 USA. difazios@ornl.gov". Nature.com. 2004-01-01. doi:10.1038/nbt0104-29. Retrieved 2009-06-21.
  66. ""Genetic pollution: Uncontrolled spread of genetic information (frequently referring to transgenes) into the genomes of organisms in which such genes are not present in nature." Zaid, A. et al. 1999. Glossary of biotechnology and genetic engineering. FAO Research and Technology Paper No. 7. ISBN 92-5-104369-8". Fao.org. Retrieved 2009-06-21.
  67. “ತಳೀಯ ಮಾಲಿನ್ಯ: ಆ ಜೀನ್‌ಗಳು ಮುಂಚೆ ಆಸ್ತಿತ್ವದಲ್ಲಿರದ ಪರಿಸರದಲ್ಲಿರುವ ಜೀವಿಗಳ ಜಿನೊಮ್‌ಗಳೊಳಗೆ ತಳೀಯ ಮಾಹಿತಿಯ (ತಳೀಯ ಶಿಲ್ಪವಿಜ್ಞಾನದ ಉತ್ಪನ್ನಗಳನ್ನು ಆಗಾಗ್ಗೆ ಉಲ್ಲೇಖಿಸುವುದು) ಅನಿಯಂತ್ರಿತ ಪಾರಾಗುವಿಕೆ." Archived 2008-02-10 ವೇಬ್ಯಾಕ್ ಮೆಷಿನ್ ನಲ್ಲಿ. ಹುಡುಕಬಹುದಾದ ಜೈವಿಕ ತಂತ್ರಜ್ಞಾನದ ನಿಘಂಟು. Archived 2008-02-10 ವೇಬ್ಯಾಕ್ ಮೆಷಿನ್ ನಲ್ಲಿ.ಮಿನೆಸೊಟ. Archived 2008-02-10 ವೇಬ್ಯಾಕ್ ಮೆಷಿನ್ ನಲ್ಲಿ., [೪] Archived 2008-03-16 ವೇಬ್ಯಾಕ್ ಮೆಷಿನ್ ನಲ್ಲಿ.
  68. ""Genetic pollution: Living organisms can also be defined as pollutants, when a non-indigenous species (plant or animal) enters a habitat and modifies the existing equilibrium among the organisms of the affected ecosystem (sea, lake, river). Non-indigenous, including transgenic species (GMOs), may bring about a particular version of pollution in the vegetable kingdom: so-called genetic pollution. This term refers to the uncontrolled diffusion of genes (or transgenes) into genomes of plants of the same type or even unrelated species where such genes are not present in nature. For example, a grass modified to resist herbicides could pollinate conventional grass many miles away, creating weeds immune to the most widely used weed-killer, with obvious consequences for crops. Genetic pollution is at the basis of the debate on the use of GMOs in agriculture." The many facets of pollution; Bologna University web site for Science Communication. The Webweavers: Last modified Tue, 20 Jul 2005". Scienzagiovane.unibo.it. Retrieved 2009-06-21.
  69. Saturday, June 20, 2009 (2008-12-10). "Coral reefs to be destroyed in 20-40 years". Mnn.com. Retrieved 2009-06-21.{{cite web}}: CS1 maint: multiple names: authors list (link) CS1 maint: numeric names: authors list (link)[permanent dead link]
  70. ಸಹಸ್ರಮಾನ ಪರಿಸರ ವ್ಯವಸ್ಥೆ ಮೌಲ್ಯಮಾಪನೆ (2005). ಪರಿಸರ ವ್ಯವಸ್ಥೆಗಳು ಮತ್ತು ಮಾನವ ಯೋಗಕ್ಷೇಮ: ಜೀವವೈವಿಧ್ಯ ಸಂಶ್ಲೇಷಣೆ. ವಾಷಿಂಗ್ಟನ್‌ DCಯಲ್ಲಿರುವ ವಿಸ್ವ ಸಂಪನ್ಮೂಲ ಸಂಸ್ಥೆ.[137]
  71. ೭೧.೦ ೭೧.೧ ೭೧.೨ ೭೧.೩ ಎಂ. ಇ. ಸೌಲ್‌. ಸೆಪ್ಟೆಂಬರ್ 6, 1986). ಸಂರಕ್ಷಣಾ ಜೀವಶಾಸ್ತ್ರ ಎಂದರೇನು? ಬಯೊಸಯನ್ಸ್‌, 35(11): 727-734
  72. ೭೨.೦ ೭೨.೧ ಪಿ. ಡೇವಿಸ್‌. (1996). ಸಂಗ್ರಹಾಲಯಗಳು ಮತ್ತು ನೈಸರ್ಗಿಕ ಪರಿಸರ. ಲೀಸೆಸ್ಟರ್‌ ಯುನಿವರ್ಸಿಟಿ ಪ್ರೆಸ್‌.
  73. ೭೩.೦ ೭೩.೧ ೭೩.೨ ಎಫ್‌. ವ್ಯಾನ್‌ ಡೈಕ್‌. (2008). ಕನ್ಸರ್ವೇಷನ್ ಬಯಾಲಜಿ: ಫೌಂಡೇಷನ್ಸ್‌, ಕಾನ್ಸೆಪ್ಟ್ಸ್‌, ಅಪ್ಲಿಕೇಷನ್ಸ್‌, 2ನೆಯ ಸಂಪುಟ.. ಸ್ಪ್ರಿಂಗರ್‌ ವೆರ್ಲಾಗ್‌. ಪಿಪಿ. 478. ಐಎಸ್‌ಬಿಎನ್‌ 978-1-4020-6890-4 (hc).
  74. ಹಂಟರ್‌, ಎಂ. ಎಲ್‌. (1996). ಸಂರಕ್ಷಣಾ ಜೀವಶಾಸ್ತ್ರದ ಮೂಲತತ್ವಗಳು ಬ್ಲ್ಯಾಕ್‌ವೆಲ್‌ ಸಯನ್ಸ್‌ ಇಂಕ್‌., ಕೇಂಬ್ರಿಡ್ಜ್‌, ಮ್ಯಾಸಚೂಸೆಟ್ಸ್, ISBN 0-86542-371-7.
  75. ಬಿ. ಡಬ್ಲ್ಯೂ. ಬೊವೆನ್‌, (1999). ಪ್ರಿಸರ್ವಿಂಗ್‌ ಜೀನ್ಸ್‌, ಸ್ಪೀಷೀಸ್‌ ಆರ್‌ ಎಕೊಸಿಸ್ಟಮ್ಸ್‌? ಹೀಲಿಂಗ್‌ ದಿ ಫ್ರಾಕ್ಷರ್ಡ್‌ ಫೌಂಡೇಷನ್ಸ್‌ ಆಫ್‌ ಕನ್ಸರ್ವೇಷನ್‌ ಪಾಲಿಸಿ. ಮಾಲೆಕ್ಯುಲರ್‌ ಎಕಾಲಜಿ, 8:S5-S10.
  76. ೭೬.೦ ೭೬.೧ ಡಿ. ಬಿ. ವೇಕ್‌ ಮತ್ತು ವಿ. ಟಿ. ವ್ರೆಡೆನ್ಬರ್ಗ್‌. 2008[55] ನಾವು ಆರನೆಯ ಸಾಮೂಹಿಕ ಅಳಿವಿನ ಮಧ್ಯದಲ್ಲಿದ್ದೇವೇನು? ನೆಲಜಲಚರಿಗಳ ಪ್ರಪಂಚದಿಂದ ದೃಷ್ಟಿ. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿನ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯಲ್ಲಿನ ಆಗುಹೋಗುಗಳು, 105: 11466–11473.[೫] Archived 2012-08-19 ವೇಬ್ಯಾಕ್ ಮೆಷಿನ್ ನಲ್ಲಿ.
  77. ಎಲ್‌. ಪಿ. ಕೊಹ್‌, ಆರ್‌. ಆರ್‌. ಡನ್‌, ಎನ್‌. ಎಸ್‌. ಸೋಢಿ, ಆರ್‌. ಕೆ. ಕೊಲ್ವೆಲ್‌, ಹೆಚ್‌. ಸಿ. ಪ್ರಾಕ್ಟರ್‌ ಮತ್ತು ವಿ. ಎಸ್‌. ಸ್ಮಿತ್‌. (2004) ಜಾತಿಗಳ ಸಹ-ಅಳಿವು ಮತ್ತು ಜೀವವೈವಿಧ್ಯ ಬಿಕ್ಕಟ್ಟು. 305, 1632-1634 [೬]
  78. ಎಂ. ಎಲ್‌. ಮೆಕಲ್ಲಮ್‌. 2007 ನೆಲಜಲಚರಿಗಳ ಇಳಿತ ಅಥವಾ ಅಳಿವು? ಪ್ರಸ್ತುತ ಇಳಿತಗಳು ಹಿನ್ನೆಲೆಯಲ್ಲಿ ಅಳಿವಿನ ದರವನ್ನು ಗಿಡ್ಡಾಗಿಸುತ್ತದೆ. ಜರ್ನಲ್‌ ಆಫ್‌ ಹರ್ಪೆಟಾಲಜಿ, 41(3): 483–491.[೭] Archived 2008-12-17 ವೇಬ್ಯಾಕ್ ಮೆಷಿನ್ ನಲ್ಲಿ.
  79. ಜೆ. ಬಿ. ಸಿ. ಜ್ಯಾಕ್ಸನ್‌. (2008) .... ಪರಿಸರೀಯ ಅಳಿವು ಮತ್ತು ನವನವೀನ ಸಾಗರದಲ್ಲಿ ವಿಕಸನ. PNAS 2008 105:11458-11465.[೮]
  80. ಆರ್‌. ಆರ್‌. ಡನ್. 2005. ಆಧುನಿಕ ಕೀಟಗಳ ಅಳಿವು, ಉಪೇಕ್ಷಿಸಲಾದ ಬಹುಪಾಲು. ಸಂರಕ್ಷಣಾ ಜೀವಶಾಸ್ತ್ರ, 19(4): 1030 - 1036 [೯]
  81. ಎಂ. ಇ. ಸೌಲ್‌. ಎಡ್‌ ಪಾರ್ಕರ್‌ ಸೆಪ್ಟೆಂಬರ್ 6, 1986). ಸಂರಕ್ಷಣಾ ಜೀವಶಾಸ್ತ್ರ: ಕೊರತೆ ಮತ್ತು ವೈವಿಧ್ಯದ ವಿಜ್ಞಾನ. ಸಿನಾರ್‌ ಅಸೊಷಿಯೆಟ್ಸ್‌ ಇಂಕ್‌.
  82. ಸಿ. ಆರ್‌. ಮಾರ್ಗುಲ್ಸ್‌ ಮತ್ತು ಆರ್‌. ಎಲ್‌. ಪ್ರೆಸಿ. 2000 ವ್ಯವಸ್ಥಿತ ಸಂರಕ್ಷಣಾ ಯೋಜನೆ. ಪ್ರಕೃತಿ, 405: 243-253. [೧೦]
  83. ಉದಾಹರಣೆ: ಗ್ಯಾಸ್ಕಾನ್‌, ಸಿ., ಕಾಲಿನ್ಸ್‌, ಜೆ. ಪಿ., ಮೂರ್‌, ಆರ್‌. ಡಿ., ಚರ್ಚ್‌, ಡಿ. ಆರ್‌., ಮ್ಯಾಕೆ, ಜೆ. ಇ. ಮತ್ತು ಮೆಂಡೆಲ್ಸನ್‌, ಜೆ. ಆರ್‌. III (ಸಂಪಾದಕರು). 2007 ನೆಲಜಲಜೀವಿಗಳ ಸಂರಕ್ಷಣಾ ಕ್ರಿಯಾ ಯೋಜನೆ. IUCN/SSC ನೆಲಜಲಜೀವಿ ವಿಶೇಷಜ್ಞ ಸಮುದಾಯ. ಗ್ಲ್ಯಾಂಡ್‌, ಸ್ವಿಟ್ಜರ್ಲೆಂಡ್‌ ಮತ್ತು ಕೇಂಬ್ರಿಡ್ಜ್‌, UK. 64ಪಿಪಿ. [೧೧], ಇದನ್ನೂ ನೋಡಿ [೧೨][೧೩] Archived 2009-02-12 ವೇಬ್ಯಾಕ್ ಮೆಷಿನ್ ನಲ್ಲಿ.
  84. ಜಿ. ಡಬ್ಲ್ಯೂ. ಲಕ್‌, ಜಿ. ಸಿ. ಡೈಲಿ ಮತ್ತು ಪಿ. ಆರ್‌. ಎಹ್ರ್ಲಿಚ್‌. 2003 ಜನಸಂಖ್ಯಾ ವೈವಿಧ್ಯ ಮತ್ತು ಪರಿಸರ ವ್ಯವಸ್ಥೆ ಸೇವೆಗಳು. 18, (7): 331-336 [೧೪]
  85. ಇದನ್ನೂ ನೋಡಿ
  86. 45 ಬೀಜ ತೋಟಗಳನ್ನು ಸೃಷ್ಟಿಸುತ್ತಿರುವ ಬೆಲ್ಜಿಯಮ್‌; ಪುನರ್ಪರಿಚಯಿಸುವ ಉದ್ದೇಶ ಜೀನ್‌ ಬ್ಯಾಂಕ್‌ಗಳು.
  87. ೮೭.೦ ೮೭.೧ "ಬಾರ್ಕೋಡ್‌ ಆಫ್‌ ಲೈಫ್‌". Archived from the original on 2022-11-22. Retrieved 2009-11-27.
  88. ಜೀವವೈವಿಧ್ಯದ ಅರ್ಥವಿಜ್ಞಾನ
  89. "Gene Patenting". Ornl.gov. Retrieved 2009-06-21.
  90. ಎಡ್ವರ್ಡ್‌ ಒ. ವಿಲ್ಸನ್‌. 2000 ಸಂರಕ್ಷಣಾ ಜೀವಶಾಸ್ತ್ರದ ಭವಿಷ್ಯದ ಬಗ್ಗೆ. ಸಂರಕ್ಷಣಾ ಜೀವಶಾಸ್ತ್ರ, 14(1): 1-3
  91. ನೀ ಎಸ್‌. (2004), "ಮೋರ್‌ ದ್ಯಾನ್‌ ಮೀಟ್ಸ್‌ ದಿ ಐ",ಪರಿಸರ , 429 , 804–805.
  92. ಎನ್‌.ಇ. ಸ್ಟೊರ್ಕ್‌ 2007. ಜೀವವೈವಿಧ್ಯ: ಕೀಟಗಳ ಪ್ರಪಂಚ . ಪ್ರಕೃತಿ 448, 657–658 (9 ಆಗಸ್ಟ್‌ 2007)
  93. ಜೆ. ಎ. ಥಾಮಸ್‌, ಎಂ. ಜಿ. ಟೆಲ್ಫರ್‌, ಡಿ. ಬಿ. ರಾಯ್‌, ಸಿ. ಡಿ. ಪ್ರೆಸ್ಟನ್‌, ಜೆ. ಜೆ. ಡಿ. ಗ್ರೀನ್ವುಡ್‌, ಜೆ. ಆಷರ್‌, ಆರ್‌. ಫಾಕ್ಸ್‌, ಆರ್‌. ಟಿ. ಕ್ಲಾರ್ಕ್‌, ಜೆ. ಹೆಚ್‌. ಲಾಟನ್‌. (2004) ಬ್ರಿಟಿಷ್‌ ಚಿಟ್ಟೆ, ಹಕ್ಕಿ ಮತ್ತು ಗಿಡಗಳ ನಷ್ಟಗಳು ಮತ್ತು ಜಾಗತಿಕ ಅಳಿವಿನ ಬಿಕ್ಕಟ್ಟು. ಸಯನ್ಸ್‌, 303(5665): 1879 - 1881 [೧೫]
  94. ಆರ್‌. ಆರ್‌. ಡನ್‌. 2005. ಆಧುನಿಕ ಕೀಟಗಳ ಅಳಿವುಗಳು, ಉಪೇಕ್ಷೆಗೊಳಗಾದ ಬಹುಪಾಲು. ಸಂರಕ್ಷಣಾ ಜೀವವಿಜ್ಞಾನ, 19(4): 1030 - 1036. [ಆರ್‌. ಆರ್‌. ಡನ್‌. 2005. ಆಧುನಿಕ ಕೀಟಗಳ ಅಳಿವುಗಳು, ಉಪೇಕ್ಷೆಗೊಳಗಾದ ಬಹುಪಾಲು. ಸಂರಕ್ಷಣಾ ಜೀವವಿಜ್ಞಾನ,, 19(4): 1030 - 1036]
  95. ಎಲ್‌. ಪಿ. ಕೊಹ್‌, ಆರ್‌. ಆರ್‌. ಡನ್‌, ಎನ್‌. ಎಸ್‌. ಸೋಢಿ, ಆರ್‌. ಕೆ. ಕೊಲ್ವೆಲ್‌, ಹೆಚ್‌. ಸಿ. ಪ್ರಾಕ್ಟರ್‌ ಮತ್ತು ವಿ. ಎಸ್‌. ಸ್ಮಿತ್‌. (2004) ಜಾತಿಗಳ ಸಹ-ಅಳಿವು ಮತ್ತು ಜೀವವೈವಿಧ್ಯ ಬಿಕ್ಕಟ್ಟು. ಸಯನ್ಸ್‌, 305(5690):1632-4.[೧೬]
  96. (ಇಂದ http://www.environment.gov.au/biodiversity/)

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಪತ್ರ/ಕಡತಗಳು

[ಬದಲಾಯಿಸಿ]

ಸಾಧನಗಳು

[ಬದಲಾಯಿಸಿ]

ಮೂಲಗಳು

[ಬದಲಾಯಿಸಿ]