ಭೂಮಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭೂಮಿ 🜨
ಅಪೋಲೊ ೧೭ರಿಂದ ಕಂಡಂತೆ ಭೂಮಿಯ ಚಿತ್ರ.
ನೀಲಿ ಗೋಲಿಯಂತೆ ಕಾಣುವ ಭೂಮಿ; ಅಪೋಲೊ ೧೭ ತೆಗೆದ ಚಿತ್ರ.
ಕಕ್ಷೆಯ ಗುಣಗಳು
ಅಪರವಿ ೧೫೨,೦೯೭,೭೦೧ ಕಿ.ಮೀ.
(೧.೦೧೬ ೭೧೦ ೩೩೩ ೫ AU)
ಪುರರವಿ ೧೪೭,೦೯೮,೦೭೪ ಕಿ.ಮೀ.
(೦.೯೮೩ ೨೮೯ ೮೯೧ ೨ AU)
ದೀರ್ಘಾರ್ಧ ಅಕ್ಷ ೧೪೯,೫೯೭,೮೮೭.೫ ಕಿ.ಮೀ.
(೧.೦೦೦ ೦೦೦ ೧೧೨ ೪ AU)
ಹ್ರಸ್ವಾರ್ಧ ಅಕ್ಷ ೧೪೯,೫೭೬,೯೯೯.೮೨೬ ಕಿ.ಮೀ.
(೦.೯೯೯ ೮೬೦ ೪೮೬ ೯ AU)
ಕಕ್ಷೆಯ ಪರಿಧಿ ೯೨೪,೩೭೫,೭೦೦ ಕಿ.ಮೀ.
( ೬.೧೭೯ ೦೬೯ ೯೦೦ ೭ AU)
ಕಕ್ಷೀಯ ಕೇಂದ್ರ ಚ್ಯುತಿ ೦.೦೧೬ ೭೧೦ ೨೧೯
ನಾಕ್ಷತ್ರಿಕ ವರ್ಷ ೩೬೫.೨೫೬ ೩೬೬ ದಿನ
(೧.೦೦೦ ೦೧೭ ೫ a)
ಯುತಿ ಅವಧಿ n/a
ಗರಿಷ್ಠ ಕಕ್ಷಾ ವೇಗ ೩೦.೨೮೭ ಕಿ.ಮೀ./ಪ್ರತಿ ಕ್ಷಣ
(೧೦೯,೦೩೩ ಕಿ.ಮೀ./ಘಂ.)
ಸರಾಸರಿ ಕಕ್ಷಾ ವೇಗ ೨೯.೭೮೩ ಕಿ.ಮೀ./ಪ್ರತಿ ಕ್ಷಣ
(೧೦೭,೨೧೮ ಕಿ.ಮೀ./ಘಂ.)
ಕನಿಷ್ಠ ಕಕ್ಷಾ ವೇಗ ೨೯.೨೯೧ ಕಿ.ಮೀ./ಪ್ರತಿ ಕ್ಷಣ
(೧೦೫,೪೪೮ ಕಿ.ಮೀ./ಘಂ.)
ಓರೆ
(ಸೂರ್ಯನ ಸಮಭಾಜಕ ರೇಖೆಗೆ ೭.೨೫°)
ಆರೋಹಣ ಸಂಪಾತದ ರೇಖಾಂಶ ೩೪೮.೭೩೯ ೩೬°
Argument of the perihelion ೧೧೪.೨೦೭ ೮೩°
ನೈಸರ್ಗಿಕ ಉಪಗ್ರಹಗಳ ಸಂಖ್ಯೆ ೧ (ಚಂದ್ರ)
(3753 Cruithne ಲೇಖನವನ್ನೂ ನೋಡಿ)
Aspect Ratio ೦.೯೯೬ ೬೪೭ ೧
ದೀರ್ಘವೃತ್ತೀಯತೆ ೦.೦೦೩ ೩೫೨ ೯
ಸಮಭಾಜಕ ರೇಖೆಯ ವ್ಯಾಸ ೧೨,೭೫೬.೨೭೪ ಕಿ.ಮೀ.
ಧ್ರುವಗಳ ಮೂಲಕ ವ್ಯಾಸ ೧೨,೭೧೩.೫೦೪ ಕಿ.ಮೀ.
ಸರಾಸರಿ ತ್ರಿಜ್ಯ ೬,೩೭೨.೭೯೭ ಕಿ.ಮೀ.
ಸಮಭಾಜಕದ ಪರಿಧಿ ೪೦,೦೭೫.೦೨ ಕಿ.ಮೀ.
Meridional circumference ೪೦,೦೦೭.೮೬ ಕಿ.ಮೀ.
ಸರಾಸರಿ ಪರಿಧಿ ೪೦,೦೪೧.೪೭ ಕಿ.ಮೀ.
ಮೇಲ್ಮೈ ವಿಸ್ತೀರ್ಣ ೫೧೦,೦೬೫,೬೦೦ ಕಿ.ಮೀ.²
ನೆಲದ ವಿಸ್ತೀರ್ಣ ೧೪೮,೯೩೯,೧೦೦ ಕಿ.ಮೀ.² (೨೯.೨ %)
ನೀರಿನ ವಿಸ್ತೀರ್ಣ ೩೬೧,೧೨೬,೪೦೦ ಕಿ.ಮೀ.² (೭೦.೮ %)
ಗಾತ್ರ ೧.೦೮೩ ೨೦೭ ೩×೧೦೧೨ ಕಿ.ಮೀ.³
ದ್ರವ್ಯರಾಶಿ ೫.೯೭೪೨×೧೦೨೪ kg
ಸರಾಸರಿ ಸಾಂದ್ರತೆ ೫,೫೧೫.೩ kg/m³
ಸಮಭಾಜಕದ ಬಳಿ ಗುರುತ್ವ ೯.೭೮೦ ೧ m/s²
(೦.೯೯೭ ೩೨ g)
ಮುಕ್ತಿ ವೇಗ ೧೧.೧೮೬ ಕಿ.ಮೀ./ಪ್ರತಿ ಕ್ಷಣ

೩೯,೬೦೦ ಕಿ.ಮೀ./ಘಂ.≅

ನಾಕ್ಷತ್ರಿಕ ದಿನ ೦.೯೯೭ ೨೫೮ ದಿನ (೨೩.೯೩೪ ಘಂಟೆ)
ಅಕ್ಷೀಯ ಪರಿಭ್ರಮಣ ವೇಗ ೪೬೫.೧೧ ಮೀ./ಪ್ರತಿ ಕ್ಷಣ (ಸಮಭಾಜಕದಲ್ಲಿ)
ಅಕ್ಷದ ಓರೆ ೨೩.೪೩೯ ೨೮೧°
ಉತ್ತರ ಧ್ರುವದ ವಿಷುವದಂಶ ೦° (೦ ಘಂಟೆ ೦ ನಿಮಿಷ ೦ ಕ್ಷಣ)
ಘಂಟಾವೃತ್ತಾಂಶ +೯೦°
ಪ್ರತಿಫಲನಾಂಶ ೦.೩೬೭
ಮೇಲ್ಮೈ ತಾಪಮಾನ
ಕನಿಷ್ಠ ಸರಾಸರಿ ಗರಿಷ್ಠ
೧೮೫ ಕೆ ೨೮೭ ಕೆ ೩೩೧ ಕೆ
-೮೮.೩ °ಸೆ. ೧೪ °ಸೆ. ೫೭.೭ °ಸೆ.
ವಾತಾವರಣದ ಒತ್ತಡ ೧೦೧.೩ kPa (MSL)
Adjective Terrestrial, Terran, Telluric, Tellurian, Earthly, Earthling (lifeforms)
Atmospheric constituents
ಸಾರಜನಕ ೭೮.೦೮ %
ಆಮ್ಲಜನಕ ೨೦.೯೪ %
ಆರ್ಗಾನ್ ೦.೯೩ %
ಇಂಗಾಲದ ಡೈಆಕ್ಸೈಡ್ ೦.೦೩೮ %
ನೀರಾವಿ ಅತ್ಯಲ್ಪ ಪ್ರಮಾಣ (ಪ್ರಮಾಣವು ಹವಾಮಾನದ ಮೇಲೆ ಅವಲಂಬಿತವಾಗಿರುತ್ತದೆ.)

ಇತಿವೃತ್ತ[ಬದಲಾಯಿಸಿ]

ವೈಜ್ಞಾನಿಕ ಅಧ್ಯಯನದ ಪ್ರಕಾರ ಭೂಮಿಯು ೪೬೦ಕೋಟಿ ವರ್ಷಗಳ ಹಿಂದೆ ರೂಪು ಗೊಂಡಿತು.[೧] ಭೂಮಿಯ ನೈಸರ್ಗಿಕ ಉಪಗ್ರಹವಾದ ಚಂದ್ರ ಅದರ ಸ್ವಲ್ಪವೇ ನಂತರ, ಸುಮಾರು ೪೫೩ ಕೋಟಿ ವರ್ಷಗಳ ಹಿಂದೆ ರೂಪುಗೊಂಡಿತು.

ಖಗೋಳದ ದೂರ ಮಾನ[ಬದಲಾಯಿಸಿ]

  • ಸೂರ್ಯನಿಂದ ಸರಾಸರಿ ದೂರ-149,597,887.5 ಕಿ.ಮೀ. (1.000 000 112 4 ಖಗೋಳ ಮಾನ)ಇದನ್ನು ಸೌರವ್ಯೂಹದ ವಿವರಣೆಯಲ್ಲಿ ಈ ದೂರವನ್ನು 1 ಖಗೊಲ ಮೂಲಮಾನವಾಗಿ ಪರಿಗಣಿಸುವರು.ಅದನ್ನು ಸರಳಗೊಳಿಸಲು 15,00,00,000=15 ಕೋಟಿ ಕಿ.ಮೀ.ರನ್ನು 1 ಅಂತರರಾಷ್ಟ್ರೀಯ ಖಗೋಲ ಮೂಲಮಾನವಾಗಿ ಪರಿಗಣಿಸುವರು. 150000000 km = 1AU = 1 Astronomical Unit.

ಪರಿಚಯ[ಬದಲಾಯಿಸಿ]

EarthRender
  • ಭೂಮಿಯ ಚಿಪ್ಪು ಹಲವು ಫಲಕಗಳಾಗಿ ಒಡೆದಿದೆ. ಈ ಭೂಫಲಕಗಳು ನಿಧಾನವಾಗಿ ಭೂಮಿಯ ಅತ್ತಿಂದಿತ್ತ ಅಸ್ತೆನೋ ಗೋಳದ ಮೇಲೆ ಚಲಿಸುತ್ತವೆ. ಭೂಮಿಯ ಒಳಭಾಗವು ಇನ್ನೂ ಸಾಕಷ್ಟು ಚಟುವಟಿಕೆಗಳಿಂದ ಕೂಡಿದೆ. ಭೂಮಿಯ ಅತ್ಯಂತ ಮೇಲಿನ ಪದರ ಚಿಪ್ಪು. ಇದು ಸಿಲಿಕ -ಅಲ್ಯುಮಿನಿಯಂನಿಂದಾದ ಹೊರಪದರ,, ಸಿಲಿಕ-ಮೆಗ್ನೇಸಿಯಂನಿಂದಾದ ಕೆಳಪದರದಿಂದ ಕೂಡಿದೆ. ಖಂಡದ ಕೆಳಗೆ ಚಿಪ್ಪು ಹೆಚ್ಚು ಮಂದವಿದೆ.
  • ಆದರೆ ಸಾಗರದಡಿಯಲ್ಲಿ ತೆಳುವಾಗಿದೆ. ಕವಚವು ಅರೆಘನಸ್ಥಿತಿಯಲ್ಲಿದೆ.ಬಹುತೇಕ ಎಲ್ಲ ಲೋಹಗಳ ಭಂಡಾರವಿದು. ಭೂಗರ್ಭವು ಕಬ್ಬಿಣ ಮತ್ತು ನಿಕ್ಕಲ್ ನಿಂದ ನಿರ್ಮಿತವಾಗಿದೆ. ಭೂಮಿಯ ಕಾಂತಕ್ಷೇತ್ರದ ನೆಲೆ ಇದು. ಜೀವಸಂಕುಲಗಳ ಅಸ್ತಿತ್ವದ ಕಾರಣದಿಂದ ಭೂಮಿಯ ವಾಯುಮಂಡಲದ ಗುಣಲಕ್ಷಣಗಳು ಗಮನಾರ್ಹವಾಗಿ ಬದಲಾಗಿವೆ.
  • ಈ ಜೀವ ಸಂಕುಲಗಳು ಉಂಟುಮಾಡುವ ಪರಿಸರ ಅಸಮತೋಲನವು ಭೂಮಿಯ ಮೇಲ್ಮೈಯನ್ನು ಗಮನಾರ್ಹವಾಗಿ ಬದಲಾಯಿಸಿದೆ. ಮೇಲ್ಮೈನ ಸುಮಾರು ೭೧% ಭಾಗವು ಉಪ್ಪು ನೀರಿನ ಸಾಗರಗಳಿಂದ ಆವೃತವಾಗಿದೆ; ಉಳಿದ ಮೇಲ್ಮೈಯು ಭೂಖಂಡಗಳು ಮತ್ತು ದ್ವೀಪಗಳಿಂದ ಕೂಡಿದೆ. ಭೂಮಿ ಮತ್ತು ಅದರ ಸುತ್ತುಮುತ್ತಲಿನ ಅಂತರಿಕ್ಷದ ನಡುವೆ ಬಹಳಷ್ಟು ವಿನಿಮಯ ಕ್ರಿಯೆಗಳು ಜರಗುತ್ತವೆ.
  • ಸ್ವಲ್ಪ ದೊಡ್ಡದೆಂದೇ ಹೇಳಬಹುದಾದ ಚಂದ್ರನ ಕಾರಣದಿಂದ ಸಾಗರಗಳಲ್ಲಿ ಉಬ್ಬರವಿಳಿತಗಳು ಉಂಟಾಗುತ್ತವೆ. ಹಲವಾರು ಕೋಟಿ ವರ್ಷಗಳ ಅವಧಿಯಲ್ಲಿ ಈ ಉಬ್ಬರವಿಳಿತಗಳು ಭೂಮಿಯ ಅಕ್ಷೀಯ ಪರಿಭ್ರಮಣ ವೇಗವನ್ನು ನಿಧಾನವಾಗಿ ಕಡಿಮೆಗೊಳಿಸಿವೆ. ಭೂ ಇತಿಹಾಸದ ಮೊದಲ ಭಾಗದಲ್ಲಿ ಧೂಮಕೇತು ಅಪ್ಪಳಿಸಿದ್ದರಿಂದ ಸಾಗರಗಳು ಉದ್ಭವವಾದವು ಎಂಬುದು ಒಂದು ಸಿದ್ಧಾಂತ.
  • ನಂತರದ ಕ್ಷುದ್ರಗ್ರಹಗಳ ತಾಡನೆಯಿಂದ ಮೇಲ್ಮೈ ಸಾಕಷ್ಬು ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಉಂಟುಮಾಡಿರಬಹುದು. ಓರೆಗೊಂಡ ಭೂ ಕಕ್ಷೆ ದೀರ್ಘಾವಧಿಯಲ್ಲಿ [:en:Milankovitch cycle ಭೂ ಮೇಲ್ಮೈನ ಬಹಳಷ್ಟು ಭಾಗಗಳನ್ನು ಹಿಮದಲ್ಲಿ ಹೊದಿಸಿದ ಹಿಮಯುಗಗಳಿಗೂ ಕಾರಣವಾಗಿದ್ದಿರಬಹುದು.

ಇತಿಹಾಸ[ಬದಲಾಯಿಸಿ]

  • ಲಭ್ಯವಿರುವ ಪುರಾವೆಗಳನ್ನು ಆಧರಿಸಿ, ಗ್ರಹದ ವೈಜ್ಞಾನಿಕ ಇತಿಹಾಸವನ್ನು ವಿಜ್ಞಾನಿಗಳು ಮರುರೂಪಿಸಿದ್ದಾರೆ. ಸುಮಾರು ೪೬೦ ಕೋಟಿ ವರ್ಷಗಳ ಹಿಂದೆ, ಸೂರ್ಯ ಮತ್ತು ಬೇರೆ ಗ್ರಹಗಳ ಜೊತೆಯಲ್ಲೇ ಭೂಮಿಯು solar nebula ನೀಹಾರಿಕೆಯಿಂದ ಉದ್ಭವವಾಯಿತು. ಭೂಮಿಯು ಪ್ರಸ್ತುತದ ಅರ್ಧ ವ್ಯಾಸವನ್ನು ಹೊಂದಿದ್ದಾಗ ವಾಯುಮಂಡಲದಲ್ಲಿ ನಿಧಾನವಾಗಿ ನೀರು ಮತ್ತು ನೀರಾವಿಗಳು ಶೇಖರವಾಗತೊಡಗಿದವು.
  • ನೀರಿನ ಅಂಶ ಹೆಚ್ಚುತ್ತಿದ್ದಂತೆ, ದ್ರವರೂಪದಲ್ಲಿದ್ದ ಭೂಮಿಯ ಮೇಲ್ಮೈಯು ಘನರೂಪಕ್ಕೆ ತಿರುಗಿತು. ಇದರ ಸ್ವಲ್ಪ ನಂತರವೇ ಚಂದ್ರ ರೂಪುಗೊಂಡಿತು. ಇದು ಮಂಗಳ ಗ್ರಹದಷ್ಟು ಗಾತ್ರದ ಥೀಯ ಎಂಬ ಕಾಯ ಭೂಮಿಯನ್ನು ತಾಡಿಸಿದ್ದರಿಂದ ಮೈದಳೆದಿರುವ ಸಾಧ್ಯತೆಗಳಿವೆ. ಭೂಮಿಯ ಒಳಭಾಗದಿಂದ ಹೊರಬಂದ ಅನಿಲಗಳು ಮತ್ತು ಅಗ್ನಿಪರ್ವತಗಳ ಚಟುವಟಿಕೆಗಳಿಂದ ಆದಿಮ ವಾಯುಮಂಡಲವು ಸೃಷ್ಟಿಯಾಯಿತು;
  • ಧೂಮಕೇತುಗಳಿಂದ ಬಂದ ಮಂಜು ಮತ್ತು ಸಾಂದ್ರೀಕರಿತವಾಗುತ್ತಿದ್ದ ನೀರಾವಿಗಳಿಂದ, ಮೊದಲ ಸಾಗರಗಳು ರೂಪುಗೊಂಡವು.[೨] ಸುಮಾರು ೪೦೦ ಕೋಟಿ ವರ್ಷಗಳ ಹಿಂದೆ ಪ್ರಬಲವಾದ ರಸಾಯನಿಕ ಕ್ರಿಯೆ ಜರುಗಿ ಜೀವಾಧಾರವಾದ ಕಾರ್ಬನ್ ಮೈದಳೆಯಿತು. ಮುಂದೆ ಇದೇ ಜೀವಕೋಶಕ್ಕೆ ಎಡೆಗೊಟ್ಟು ೫೦ ಕೋಟಿ ವರ್ಷಗಳ ನಂತರ ಮೊಟ್ಟಮೊದಲ ಜೀವಿಯು ಉಗಮವಾಯಿತು. *ಭೂವಿಜ್ಞಾನದಲ್ಲಿ ಈ ಕಾಲವನ್ನು ಆದಿಜೀವಿಕಲ್ಪ ಎಂದು ಗುರುತಿಸಲಾಗಿದೆ.[೩] ಆರಂಭದಲ್ಲಿ ಕೆಳದರ್ಜೆಯ ಸಸ್ಯವಾದ ಪಾಚಿ ಮೈದಳೆಯಿತು. ದ್ಯುತಿಸಂಶ್ಲೇಷಣೆಯಿಂದ ಸೂರ್ಯನ ಶಕ್ತಿಯ ನೇರ ಶೇಖರಣೆ ಮತ್ತು ಬಳಕೆಯು ಸಾಧ್ಯವಾಯಿತು; ಈ ಪ್ರಕ್ರಿಯೆಯಿಂದ ಹೊರಬಂದ ಆಮ್ಲಜನಕವು ವಾಯುಮಂಡಲದಲ್ಲಿ ಶೇಖರವಾಗಿ ಓಜೋನ್ ಪದರವನ್ನು ನಿರ್ಮಿಸಿತು.
  • ದೊಡ್ಡ ಕೋಶಗಳಲ್ಲಿ ಸಣ್ಣ ಕೋಶಗಳ ಸಂಘಟನೆಯು ಯೂಕ್ಯಾರಿಯೋಟ್ ಎಂದು ಕರೆಯಲಾಗುವ ಸಂಕೀರ್ಣ ಕೋಶಗಳ ಅಭಿವೃದ್ಧಿಗೆ ಎಡೆಮಾಡಿಕೊಟ್ಟಿತು. ಗುಂಪಾಗಿದ್ದ ಜೀವಕೋಶಗಳು ಬೇರೆ ಬೇರೆ ಕೆಲಸ ಕಾರ್ಯಗಳಲ್ಲಿ ನೈಪುಣ್ಯತೆ ಹೊಂದುತ್ತಿದ್ದಂತೆ ನಿಜವಾದ ಬಹುಕೋಶ ಜೀವಿಗಳು ರೂಪುಗೊಂಡವು.
  • ಅಪಾಯಕಾರಿ ಅತಿನೇರಳೆ ಕಿರಣಗಳನ್ನು ಓಜೋನ್ ಪದರವು ಹೀರಿಕೊಳ್ಳಲು ಆರಂಭಿಸಿದ ನಂತರ ಭೂಮಿಯ ಮೇಲೆ ಜೀವಿಗಳು ವ್ಯಾಪಕವಾಗಿ ವಿಕಾಸವಾಗತೊಡಗಿದವು. ಭೂಚಿಪ್ಪು ಮತ್ತು ಮೇಲಿನ ವಾಯುಗೋಳ ಸ್ಥರೀಕರಣಗೊಳ್ಳಲು ಸುಮಾರು ನೂರು ಕೋಟಿ ವರ್ಷಗಳು ಸಂದಿವೆ ಎಂಬುದು ಒಂದು ಅಂದಾಜು. ಕೋಟ್ಯಂತರ ವರ್ಷಗಳ ಅವಧಿಯಲ್ಲಿ, ಭೂಮಿಯ ನಿರಂತರ ಚಟುವಟಿಕೆಯ ಕಾರಣದಿಂದ, ಮೇಲ್ಮೈ ಮೇಲೆ ಭೂಖಂಡಗಳು ನಿರ್ಮಾಣಗೊಳ್ಳುತ್ತ ಮತ್ತೆ ಛಿದ್ರಗೊಳ್ಳುತ್ತ ಬಂದಿವೆ.

ಭೂಖಂಡಗಳ ಚಲನೆ[ಬದಲಾಯಿಸಿ]

  • ಸದಾ ಚಲನಶೀಲವಾದ ಈ ಭೂಫಲಕಗಳು ಎಷ್ಟು ದೊಡ್ಡವೆಂದರೆ ಇವು ಖಂಡಗಳನ್ನೇ ಹೊತ್ತು ಸರಿದಾಡಬಲ್ಲವು. ಉದಾಹರಣೆಗೆ ಭಾರತ ಮತ್ತು ಆಸ್ಟ್ರೇಲಿಯವನ್ನು ಇಂಡೋ ಆಸ್ಟ್ರೇಲಿಯನ್ ಫಲಕ ಹೊತ್ತು ಸರಿದಾಡುತ್ತಿದೆ. ಸುಮಾರು ೨೨೫ ದಶಲಕ್ಷ ವರ್ಷಗಳ ಹಿಂದೆ ಭಾರತ, ಆಸ್ಟ್ರೇಲಿಯ, ಅಂಟಾರ್ಕ್ಟಿಕ, ದಕ್ಷಿಣ ಆಫ್ರಿಕ ಮತ್ತು ದಕ್ಷಿಣ ಅಮೆರಿಕ ಒಂದುಗೂಡಿದ್ದವು. ಅದನ್ನೇ ಗೊಂಡ್ವಾನ ಮಹಾಖಂಡವೆಂದು ಈಗ ಗುರುತಿಸಲಾಗಿದೆ.
  • ಹಾಗೆಯೇ ಯೂರೋಪು, ಉತ್ತರ ಅಮೆರಿಕ, ಏಷ್ಯದ ಬಹುಭಾಗ ಒಂದುಗೂಡಿದ್ದವು. ಅದಕ್ಕೆ ಲಾರೇಷ್ಯ ಎಂಬ ಹೆಸರನ್ನು ವಿಜ್ಞಾನಿಗಳು ನೀಡಿದರು. ಖಂಡಗಳು ಸರಿದು ೬.೫ ಕೋಟಿ ವರ್ಷಗಳ ಹಿಂದೆ ಇಂದಿನ ಸ್ಥಿತಿ ತಲಪಿವೆ ಎಂಬುದು ಖಂಡಗಳ ಸಿದ್ಧಾಂತವನ್ನು ಬೆಂಬಲಿಸುವವರವಾದ.ಇದಕ್ಕೆ ಹೆಚ್ಚಿನ ಭೂವೈಜ್ಞಾನಿಕ ಪುರಾವೆಗಳನ್ನು ಒದಗಿಸಿದ ಖ್ಯಾತಿ ಜರ್ಮನಿಯ ಖ್ಯಾತ ಪವನವಿಜ್ಞಾನಿ ಮತ್ತು ಭೂಭೌತವಿಜ್ಞಾನಿ ಆಲ್ಫ್ರೆಡ್ ವೆಗೆನರ್ (೧೮೮೦-೧೯೩೦)ಗೆ ಸೇರುತ್ತದೆ.
  • ಎರಡನೇ ಮಹಾಯುದ್ಧಾನಂತರ ಸಾಗರ ವಿಜ್ಞಾನ ಹೆಚ್ಚು ಅಭಿವೃದ್ಧಿಯಾಯಿತು. ಇದರ ಪರಿಣಾಮವಾಗಿ ಖಂಡಗಳ ಅಲೆತದ ಸಿದ್ಧಾಂತಕ್ಕೆ ಸಾಗರ ತಳದಲ್ಲಿ ಪುರಾವೆಗಳು ಲಭ್ಯವಾದವು. ಈಗಿನ ತಿಳಿವಿನ ಪ್ರಕಾರ ಕೇವಲ ಅದು ಖಂಡಗಳ ಸರಿತವಲ್ಲ ಬದಲು ಖಂಡಗಳನ್ನು ಹೊತ್ತ ಶಿಲಾಫಲಕಗಳ ಸರಿತ.ಈ ಸಿದ್ಧಾಂತದನ್ವಯ ಸಾಗರ ತಳದ ಸ್ವರೂಪ, ಜ್ವಾಲಾಮುಖಿಗಳ ಹಂಚಿಕೆ, ಭೂಕಂಪನಗಳ ತೀವ್ರತೆ, ಪರ್ವತಗಳ ಉಗಮ ಮುಂತಾದ ಭೂವೈಜ್ಞಾನಿಕ ಪ್ರಕ್ರಿಯೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿವರಿಸಬಹುದು.[೪]
  • ಸುಮಾರು ೭೫-೫೮ ಕೋಟಿ ವರ್ಷಗಳ ಹಿಂದೆ ತೀವ್ರವಾದ ಹಿಮನದಿಗಳ ಚಟುವಟಿಕೆಗಳು ಭೂಮಿಯ ಬಹುತೇಕ ಮೇಲ್ಮೈಯನ್ನು ಹಿಮದ ಪದರದಲ್ಲಿ ಹೊದೆಸಿದ್ದವು ಎಂದು ೧೯೬೦ ರಿಂದೀಚೆಗೆ ಶಂಕಿಸಲಾಗಿದೆ. ಈ ವಾದವನ್ನು "ಹಿಮದ ಉಂಡೆ ಭೂಮಿ" ಎಂದು ಕರೆಯಲಾಗಿದೆ. ಬಹುಕೋಶ ಜೀವಿಗಳು ಹೇರಳವಾಗಿ ವಂಶಾಭಿವೃದ್ಧಿ ಮಾಡಿದ ಕೇಂಬ್ರಿಯನ್ ಸ್ಫೋಟದ ಸ್ವಲ್ಪವೇ ಮುನ್ನ ಈ ಹಿಮ ಯುಗವು ಘಟಿಸಿದ್ದರಿಂದ ಇದರ ಬಗ್ಗೆ ಸಾಕಷ್ಟು ಆಸಕ್ತಿ ಇದೆ.[೫]
  • ಸುಮಾರು ೫೩.೫ ಕೋಟಿ ವರ್ಷಗಳ ಹಿಂದೆ ನಡೆದ ಕೇಂಬ್ರಿಯನ್ ಸ್ಫೋಟದ ನಂತರ ಇದುವರೆಗೆ ಐದು ದೊಡ್ಡ ಅವನತಿಗಳು ಅಂದರೆ ಜೀವಿಗಳ ಉತ್ಪಾಟನೆ ನಡೆದಿವೆ.[೬] ಸುಮಾರು ೬.೫ ಕೋಟಿ ವರ್ಷಗಳ ಹಿಂದೆ ಆದ ಕೊನೆಯ ಅವನತಿಯು ಬಹುಶಃ ಒಂದು ದೊಡ್ಡ ಉಲ್ಕೆಯು ಭೂಮಿಯ ಮೇಲೆ ಅಪ್ಪಳಿಸಿದಾಗ ಉಂಟಾಯಿತು.
  • ಈ ಅವನತಿಯಿಂದ (ಪಕ್ಷಿಗಳಲ್ಲದ) ಡೈನೊಸಾರ್ಗಳು ಮತ್ತಿತರ ದೊಡ್ಡ ಸರೀಸೃಪಗಳು ನಾಶವಾದರೂ, ಸ್ತನಿಗಳಂಥ ಚಿಕ್ಕ ಪುಟ್ಟ ಜೀವಿಗಳು ಉಳಿದುಕೊಂಡವು. ಕಳೆದ ೬.೫ ಕೋಟಿ ವರ್ಷಗಳಲ್ಲಿ ಸ್ತನಿಗಳು ಬಹಳಷ್ಟು ವೈವಿಧ್ಯಮಯವಾಗಿ ವಿಕಾಸವಾಗಿವೆ. ಸುಮಾರು ಇಪ್ಪತ್ತು ಲಕ್ಷ ವರ್ಷಗಳ ಹಿಂದೆ ಪ್ರೈಮೇಟ್ ಗುಂಪಿಗೆ ಸೇರಿದ ವಾನರ ಮುಂದೆ ವಿಕಾಸವಾಗಿ ಎರಡು ಕಾಲುಗಳ ಮೇಲೆ ನಿಂತುಕೊಳ್ಳಲು ಕಲಿತದ್ದೇ ಆದಿಮಾನವನ ಉಗಮಕ್ಕೆ ಎಡೆಕೊಟ್ಟಿತು ಎಂದು ಮಾನವವಿಜ್ಞಾನವನ್ನು ಅಧ್ಯಯನ ಮಾಡಿರುವ ತಜ್ಞರು ನಿರ್ವಿವಾದವಾಗಿ ಒಪ್ಪಿಕೊಂಡಿದ್ದಾರೆ. *ಇದರ ಹಿಂದೆಯೇ ಉಪಕರಣಗಳ ಬಳಕೆಗೆ ಮಿದುಳು ಪ್ರೇರೇಪಿಸಿತು. ವಾನರರೂಪಿ ಮಾನವ ಮತಿವಂತನಾಗಿ ಹೋಮೋಸೇಫಿಯನ್ ಆದದ್ದು ಭೂಇತಿಹಾಸದಲ್ಲಿ ಒಂದು ರೋಚಕ ಅಧ್ಯಾಯ. ಬೇಸಾಯ ಮತ್ತು ನಂತರದ ನಾಗರಿಕತೆಗಳ ಕಾರಣದಿಂದ, ಇಂದು ಮಾನವ ಸಮುದಾಯ ವು ಸ್ವಲ್ಪವೇ ಕಾಲದಲ್ಲಿ ಭೂಮಿಯ ಮೇಲೆ ಆಳವಾದ ಪರಿಣಾಮವನ್ನು ಬೀರಿದೆ.

ರಚನೆ ಮತ್ತು ವಿನ್ಯಾಸ[ಬದಲಾಯಿಸಿ]

ಆಕಾರ[ಬದಲಾಯಿಸಿ]

  • ಭೂಮಿಯ ಆಕಾರವು ಸರಿಸುಮಾರು ಹ್ರಸ್ವಾಕ್ಷ ಗೋಳಕಲ್ಪಎನ್ನಬಹುದು.. ಅಂದರೆ ಗೋಳಕಲ್ಪವು ಅದರ ಅಕ್ಷದ ದಿಶೆಯಲ್ಲಿ ಅದು ಧ್ರುವದಿಂದ ಧ್ರುವಕ್ಕೆ ಚಪ್ಪಟೆಯಾಗಿದೆ. ಇದರ ಪರಿಣಾಮವಾಗಿ ಸಮಭಾಜಕ ವೃತ್ತದಲ್ಲಿ ಅದು ಉಬ್ಬಿದೆ. ಭೂಮಿಯ ಗಿರಕಿಯಿಂದಾಗಿ ಈ ಉಬ್ಬು ಮೈದಳೆದಿದೆ. ಈ ಕಾರಣಕ್ಕಾಗಿ ಸಮಭಾಜಕ ವೃತ್ತದಲ್ಲಿ ಇದರ ವ್ಯಾಸ ಧ್ರುವದಿಂದ ಧ್ರುವಕ್ಕೆ ಇರುವ ವ್ಯಾಸಕ್ಕಿಂತ 43 ಕಿ.ಮೀ. ಹೆಚ್ಚಾಗಿದೆ.
  • ಈ ಅಂಶವನ್ನು ಪರಿಗಣಿಸಿದರೆ ಭೂ ರಾಶಿ ಕೇಂದ್ರದಿಂದ ಅತಿ ಎತ್ತರದ ಬಿಂದುವೆಂದರೆ ಈಕ್ವೇಡಾರ್ ನಲ್ಲಿರುವ ಚಿಂಬೊರಾಜೋ ಜ್ವಾಲಾಮುಖಿಯ ಶೃಂಗ. ಭೂಮಿಯ ಮೇಲ್ಮೈನಲ್ಲಿ ಅತ್ಯಧಿಕ ಸ್ಥಳೀಯ ವಿಚಲತೆಗಳೆಂದರೆ ಮೌಂಟ್ ಎವರೆಸ್ಟ್ (ಸ್ಥಳೀಯ ಸಾಗರ ಮಟ್ಟಕ್ಕಿಂತ ೮,೮೫೦ ಮೀ. ಮೇಲೆ) ಮತ್ತು ಮೇರಿಯಾನ ಕಂದಕ (ಸ್ಥಳೀಯ ಸಾಗರ ಮಟ್ಟಕ್ಕಿಂತ ೧೦,೯೨೪ ಮೀ. ಕೆಳಗೆ). ಆದ್ದರಿಂದ, ಒಂದು ಪರಿಪೂರ್ಣ ದೀರ್ಘವೃತ್ತಜಕ್ಕೆ ಹೋಲಿಸಿದರೆ, ಭೂಮಿಯು ಸುಮಾರು ೦.೧೭% [[:en:tolerance (engineering)ಆಕಾರ ವಕ್ರತೆಯನ್ನು ಹೊಂದಿದೆ. ಹೋಲಿಕೆಯಲ್ಲಿ, ಬಿಲಿಯರ್ಡ್ ಚೆಂಡುಗಳು ೦.೨೨%ಗಿಂತ ಕಡಿಮೆ ಆಕಾರ ವಕ್ರತೆಯನ್ನು ಹೊಂದಿರುತ್ತವೆ.

ರಸಾಯನಿಕ ರಚನೆ[ಬದಲಾಯಿಸಿ]

ಭೂಮಿಯ ಚಿಪ್ಪಿನಲ್ಲಿ ಆಕ್ಸೈಡುಗಳು - ಎಫ್. ಡಬ್ಲ್ಯು. ಕ್ಲಾರ್ಕ್‌ನ ಕೋಷ್ಟಕ
ಸಂಯುಕ್ತ ವಸ್ತು ಸೂತ್ರ ಸಂಯೋಜನೆ
ಸಿಲಿಕಾ SiO2 ೫೯.೭೧%
ಅಲ್ಯುಮಿನ Al2O3 ೧೫.೪೧%
ಸುಣ್ಣ CaO ೪.೯೦%
ಮೆಗ್ನೀಷಿಯ MgO ೪.೩೬%
ಸೋಡಿಯಂ ಆಕ್ಸೈಡ್ Na2O ೩.೫೫%
ಕಬ್ಬಿಣದ(೨) ಆಕ್ಸೈಡ್ FeO ೩.೫೨%
ಪೊಟಾಷಿಯಂ ಆಕ್ಸೈಡ್ K2O ೨.೮೦%
ಕಬ್ಬಿಣದ(೩) ಆಕ್ಸೈಡ್ Fe2O3 ೨.೬೩%
ನೀರು H2O ೧.೫೨%
ಟೈಟಾನಿಯಂ ಡೈಆಕ್ಸೈಡ್ TiO2 ೦.೬೦%
ರಂಜಕದ ಪೆಂಟಾಕ್ಸೈಡ್ P2O5 ೦.೨೨%
ಒಟ್ಟು ೯೯.೨೨%

ಭೂಮಿಯ ದ್ರವ್ಯರಾಶಿಯು ಸುಮಾರು ೫.೯೮ × ೧೦೨೪ ಕಿ.ಗ್ರಾಮ್.ಗಳಷ್ಟಿದೆ. ಬಹುತೇಕವಾಗಿ ಇದು ಕಬ್ಬಿಣ (೩೫.೦%), ಆಮ್ಲಜನಕ (೨೮.೦%), ಸಿಲಿಕಾನ್ (೧೭.೦%), ಮೆಗ್ನೀಷಿಯಂ (೧೫.೭%), ನಿಕಲ್ (೧.೫%), ಕ್ಯಾಲ್ಷಿಯಂ (೧.೪%) ಮತ್ತು ಅಲ್ಯುಮಿನಿಯಮ್ (೧.೪%) ಮೂಲವಸ್ತುಗಳಿಂದ ಕೂಡಿದೆ[೭]. ಭೂಮಿಯ ಚಿಪ್ಪಿನ ಸಾಮಾನ್ಯ ಶಿಲಾ ಭಾಗಗಳೆಲ್ಲ ಬಹುತೇಕ ಆಕ್ಸೈಡುಗಳೆ; ಇದಕ್ಕೆ ಮುಖ್ಯ ಅಪವಾದವಾಗಿರುವ ಕ್ಲೋರಿನ್, ಗಂಧಕ ಮತ್ತು ಫ್ಲೋರಿನ್‌ಗಳು ಶಿಲೆಗಳಲ್ಲಿ ಒಟ್ಟಾರೆ ೧%ಗಿಂತ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ. ಭೂಮಿಯ ಮೇಲ್ಭಾಗದ ದ್ರವ್ಯರಾಶಿಯಲ್ಲಿ ೪೭% ಕ್ಕಿಂತ ಹೆಚ್ಚು ಆಮ್ಲಜನಕವೇ ಇದೆಯೆಂದು ಎಫ್. ಡಬ್ಲ್ಯು. ಕ್ಲಾರ್ಕ್ ಕಂಡು ಹಿಡಿದಿದ್ದಾನೆ. ಆಮ್ಲಜನಕವು ಮುಖ್ಯವಾಗಿ ಆಕ್ಸೈಡುಗಳಲ್ಲಿ ಕಾಣುತ್ತದೆ. ಸಿಲಿಕಾ, ಅಲ್ಯುಮಿನ, ಕಬ್ಬಿಣದ ಆಕ್ಸೈಡುಗಳು, ಸುಣ್ಣ, ಮೆಗ್ನೀಷಿಯ, ಪೊಟಾಷ್ ಮತ್ತು ಸೋಡ, ಇವುಗಳು ಮುಖ್ಯವಾದ ಆಕ್ಸೈಡುಗಳು. ಸಿಲಿಕಾವು ಒಂದು ಆಮ್ಲದಂತೆ ಕೆಲಸಮಾಡಿ ಸಿಲಿಕೇಟ್ ಗಳನ್ನು ರೂಪಿಸುತ್ತದೆ. ಅಗ್ನಿಶಿಲೆಯಲ್ಲಿ ಸಾಮಾನ್ಯವಾಗಿ ದೊರಕುವ ಸುಮಾರೆಲ್ಲ ಖನಿಜಗಳು ಈ ರೀತಿಯವೆ. ೧೬೭೨ರಲ್ಲಿ ವಿವಿಧ ಶಿಲೆಗಳನ್ನು ವಿಶ್ಲೇಷಿಸಿ ಕ್ಲಾರ್ಕ್‌ನು ಮಾಡಿದ ಲೆಕ್ಕಾಚಾರದ ಪ್ರಕಾರ, ಸರಾಸರಿ ಖನಿಜಾಂಶಗಳು ಈ ರೀತಿ ಇವೆ: SiO2=೫೯.೭೧%, Al2O3=೧೫.೪೧%, CaO=೪.೯೦%, MgO=೪.೩೬%, Na2O=೩.೫೫%, FeO=೩.೫೨%, K2O=೨.೮೦%, Fe2O3=೨.೬೩%, H2O=೧.೫೨%, TiO2=೦.೬೦%, P2O5=೦.೨೨%. ಇವು ಒಟ್ಟಾರೆ ೯೯.೨೨% ನಷ್ಟು ಭಾಗವನ್ನು ಆಕ್ರಮಿಸುತ್ತವೆ (ಬಲಗಡೆಯಿರುವ ಕೋಷ್ಟಕವನ್ನು ನೋಡಿ). ಉಳಿದ ಖನಿಜಗಳು ಬಹಳ ಕಡಿಮೆ ಪ್ರಮಾಣದಲ್ಲಿ ಸಿಗುತ್ತವೆ.[೮]

ಆಂತರಿಕ ರಚನೆ[ಬದಲಾಯಿಸಿ]

ಭೂಮಿಯ ಒಳಭಾಗದಿಂದ ಹೊರ ವಾಯುಮಂಡಲದವರೆಗಿನ ಚಿತ್ರ. Partially to scale

ಬೇರೆ ಘನರೂಪಿ ಗ್ರಹಗಳಂತೆ, ಭೂಮಿಯ ಒಳಭಾಗವನ್ನು ರಸಾಯನಿಕ ದೃಷ್ಟಿಯಿಂದ ವಿವಿಧ ಪದರಗಳಲ್ಲಿ ವಿಂಗಡಿಸಬಹುದು. ಭೂಮಿಯು ಸಿಲಿಕೇಟ್ನ ಒಂದು ಘನರೂಪಿ ಹೊರ ಚಿಪ್ಪನ್ನು, ಬಹಳ ಸ್ನಿಗ್ಧವಾದ ಒಂದು ಕವಚವನ್ನು, ಕವಚಕ್ಕಿಂತ ಬಹಳ ಕಡಿಮೆ ಸ್ನಿಗ್ಧತೆಯನ್ನು ಹೊಂದಿರುವ ದ್ರವರೂಪ ಹೊರ ಭೂಗರ್ಭವನ್ನು, ಮತ್ತು ಘನರೂಪಿ ಒಳ ಭೂಗರ್ಭವನ್ನು ಹೊಂದಿದೆ. ಭೂಮಿಯ ಭೂವೈಜ್ಞಾನಿಕ ಪದರಗಳು[೯] ಮೇಲ್ಮೈನ ಕೆಳಗೆ ಈ ಕೆಳಗೆ ಸೂಚಿಸಿದ ಆಳದಲ್ಲಿವೆ:

ಆಳ ಪದರ
ಕಿ.ಮೀ.ಗಳು ಮೈಲಿಗಳು
೦–೬೦ ೦–೩೭ ಶಿಲಾಗೋಳ (ಇದರ ಆಳವು ಸ್ಥಳೀಯವಾಗಿ ೫ ರಿಂದ ೨೦೦ ಕಿ.ಮೀ.ಗಳವರೆಗೆ ಇರುತ್ತದೆ)
೦–೩೫ ೦–೨೨ ... ಚಿಪ್ಪು (ಇದರ ಆಳವು ಸ್ಥಳೀಯವಾಗಿ ೫ ರಿಂದ ೭೦ ಕಿ.ಮೀ.ಗಳವರೆಗೆ ಇರುತ್ತದೆ)
೩೫–೬೦ ೨೨–೩೭ ... ಕವಚದ ಹೊರಭಾಗ
೩೫–೨೮೯೦ ೨೨–೧೭೯೦ ಕವಚ
೧೦೦–೭೦೦ ೬೨–೪೩೫ ... ಅಸ್ಥೆನೋಗೋಳ
೨೮೯೦–೫೧೦೦ ೧೭೯೦–೩೧೬೦ ಭೂಗರ್ಭದ ಹೊರಭಾಗ
೫೧೦೦–೬೩೭೮ ೩೧೬೦–೩೯೫೪ ಭೂಗರ್ಭದ ಒಳಭಾಗ

ಗ್ರಹದ ಆಂತರಿಕ ಶಾಖವು ಬಹುಶಃ ಪೊಟಾಷಿಯಂ-೪೦, ಯುರೇನಿಯಂ-೨೩೮ ಮತ್ತು ಥೋರಿಯಂ-೨೩೨ ಸಮಸ್ಥಾನಿಗಳ ವಿಕಿರಣ ಕ್ಷಯದಿಂದ ಉಂಟಾಗುತ್ತದೆ. ಈ ಮೂರೂ ಧಾತುಗಳ ಅರ್ಧಾಯುಗಳು ೧೦೦ ಕೋಟಿ ವರ್ಷಗಳಿಗಿಂತ ಹೆಚ್ಚು.[೧೦] ಗ್ರಹದ ಮಧ್ಯದಲ್ಲಿ ತಾಪಮಾನವು ೭,೦೦೦ K ವರೆಗೆ ಮತ್ತು ಒತ್ತಡವು ೩೬೦ GPa ವರೆಗೆ ಇರಬಹುದು.[೧೧] ಭೂಗರ್ಭದ ಈ ಶಾಖದ ಒಂದು ಭಾಗವು ಕವಚದ ಗರಿಗಳಿಂದ ಚಿಪ್ಪಿನೆಡೆಗೆ ಸಾಗಿಸಲ್ಪಡುತ್ತದೆ; ಈ ಗರಿಗಳು ಹೆಚ್ಚು ತಾಪಮಾನ ಹೊಂದಿರುವ ಶಿಲಾದ್ರವದ ಸಂವಾಹಕ ಪ್ರವಾಹಗಳು. ಈ ಗರಿಗಳು ಶಾಖಕಲೆ ಮತ್ತು ಪ್ರವಾಹ ಕಪ್ಪುಶಿಲೆಗಳನ್ನು ಉಂಟುಮಾಡಬಲ್ಲವು.[೧೨]ಭೂಗರ್ಭ

ಭೂಫಲಕಗಳು[ಬದಲಾಯಿಸಿ]

ಭೂಮಿಯ ಪ್ರಮುಖ ಭೂಫಲಕಗಳನ್ನು ತೋರಿಸುತ್ತಿರುವ ಒಂದು ನಕ್ಷೆ.

ಬಹುತೇಕ ವಿಜ್ಞಾನಿಗಳು ಒಪ್ಪಿಕೊಳ್ಳುವ ಫಲಕ ರಚನಾ ಶಾಸ್ತ್ರದ ಪ್ರಕಾರ, ಭೂಮಿಯ ಹೊರಭಾಗವು ಎರಡು ಪದರಗಳಿಂದ ಕೂಡಿದೆ: ಚಿಪ್ಪು ಮತ್ತು ಕವಚದ ಘನೀಕೃತ ಮೇಲ್ಭಾಗಗಳನ್ನು ಒಳಗೊಂಡ ಶಿಲಾಗೋಳ. ಶಿಲಾಗೋಳದ ಕೆಳಗಿರುವ ಅಸ್ಥೆನೋಗೋಳದಲ್ಲಿ ಕವಚದ ಸ್ನಿಗ್ಧ ಒಳಭಾಗವು ಸೇರಿದೆ. ಕವಚವು ಅತ್ಯಂತ ಬಿಸಿಯಾದ ಮತ್ತು ಅತಿ ಹೆಚ್ಚಿನ ಸ್ನಿಗ್ಧತೆಯನ್ನು ಹೊಂದಿದ ದ್ರವದಂತೆ ಕೆಲಸಮಾಡುತ್ತದೆ. ಅಸ್ಥೆನೋಗೋಳದ ಮೇಲೆ ತೇಲುವ ಶಿಲಾಗೋಳವು ಹಲವು ಭೂಫಲಕಗಳಿಂದ ಕೂಡಿದೆ. ಭೂಮಿಯ ಮೇಲ್ಮೈ ಮೇಲೆ ನಿರಂತರವಾಗಿ ಚಲಿಸುವ ಈ ಫಲಕಗಳ ತುದಿಗಳಲ್ಲಿ ಮೂರು ಬಗೆಗಳು ಇವೆ: ಅಭಿಸಾರೀ, ಅಪಸಾರೀ, ಮತ್ತು ಪರಿವರ್ತೀಯ. ಭೂಕಂಪನಗಳು, ಅಗ್ನಿಪರ್ವತಗಳು, ಪರ್ವತಗಳ ನಿರ್ಮಾಣ, ಮತ್ತು ಸಾಗರ ಕಂದಕಗಳು ಭೂಫಲಕಗಳ ತುದಿಗಳಲ್ಲಿ ಉಂಟಾಗುತ್ತವೆ.

ಮುಖ್ಯ ಭೂಫಲಕಗಳು:

ಭೂಫಲಕ ವಿಸ್ತೀರ್ಣ
೧೦ ಚ.ಕಿ.ಮೀ.
ಆವರಿಸಿದ ಭೂಮಿ
ಆಫ್ರಿಕನ್ ಭೂಫಲಕ ೬೧.೩ ಆಫ್ರಿಕಾ
ಅಂಟಾರ್ಕ್‌ಟಿಕ್ ಭೂಫಲಕ ೬೦.೯ ಅಂಟಾರ್ಕ್‌ಟಿಕ
ಆಸ್ಟ್ರೇಲಿಯನ್ ಭೂಫಲಕ ೪೭.೨ ಆಸ್ಟ್ರೇಲಿಯ
ಯುರೇಷಿಯನ್ ಭೂಫಲಕ ೬೭.೮ ಏಷ್ಯಾ ಮತ್ತು ಯೂರೋಪ್
ಉತ್ತರ ಅಮೇರಿಕ ಭೂಫಲಕ ೭೫.೯ ಉತ್ತರ ಅಮೇರಿಕ ಮತ್ತು ಈಶಾನ್ಯ ಸೈಬೀರಿಯಾ
ದಕ್ಷಿಣ ಅಮೇರಿಕ ಭೂಫಲಕ ೪೩.೬ ದಕ್ಷಿಣ ಅಮೇರಿಕ
ಪೆಸಿಫಿಕ್ ಭೂಫಲಕ ೧೦೩.೩ ಪೆಸಿಫಿಕ್ ಮಹಾಸಾಗರ

ಸಣ್ಣವಾದರೂ ಗಮನಾರ್ಹವಾದ ಭೂಫಲಕಗಳಲ್ಲಿ ಭಾರತೀಯ ಭೂಫಲಕ, ಅರೇಬಿಯನ್ ಭೂಫಲಕ, ಕೆರಿಬಿಯನ್ ಭೂಫಲಕ, ನಕ್ಜಾ ಭೂಫಲಕ ಮತ್ತು ಸ್ಕೋಶಿಯಾ ಭೂಫಲಕಗಳು ಸೇರಿವೆ. ಆಸ್ಟ್ರೇಲಿಯನ್ ಭೂಫಲಕವು ಸುಮಾರು ೫-೫.೫ ಕೋಟಿ ವರ್ಷಗಳ ಹಿಂದೆ ಭಾರತೀಯ ಭೂಫಲಕದೊಂದಿಗೆ ಸಂಲಯಿಸಿತು. ಬಹುತೇಕ ಸಾಗರ ಭೂಫಲಕಗಳು ವೇಗವಾಗಿ ಚಲಿಸುತ್ತವೆ. ಇವುಗಳಲ್ಲಿ ಪ್ರತಿವರ್ಷ ೭೫ ಮಿ.ಮೀ. ಚಲಿಸುವ ಕೋಕೋಸ್ ಭೂಫಲಕ[೧೩] ಮತ್ತು ವರ್ಷಕ್ಕೆ ೫೨-೬೯ ಮಿ.ಮೀ. ಚಲಿಸುವ ಪೆಸಿಫಿಕ್ ಭೂಫಲಕಗಳು ಸೇರಿವೆ. ಇವುಗಳ ವಿರುದ್ಧ ವೈಪರೀತ್ಯದಲ್ಲಿ ವರ್ಷಕ್ಕೆ ಸುಮಾರು ೨೧ ಮಿ.ಮೀ. ಚಲಿಸುವ ಯುರೇಷಿಯನ್ ಭೂಫಲಕವು ಅತಿ ನಿಧಾನವಾಗಿ ಚಲಿಸುವ ಫಲಕವಾಗಿದೆ.[೧೪]

ಭೂಮಿಯ ವಿವಿದ ಪ್ರದೇಶಗಳ ಎತ್ತರಗಳು

ಮೇಲ್ಮೈ[ಬದಲಾಯಿಸಿ]

ಭೂಮಿಯ ಮೇಲ್ಮೈಯು ಸ್ಥಳದಿಂದ ಸ್ಥಳಕ್ಕೆ ವಿಪರೀತವಾದ ಭಿನ್ನತೆಗಳನ್ನು ಹೊಂದಿದೆ. ಸುಮಾರು ೭೦% ಮೇಲ್ಮೈಯು ನೀರಿನಿಂದ ಆವೃತವಾಗಿದ್ದು, ಭೂಖಂಡ ಚಾಚಿನ ಬಹುತೇಕ ಭಾಗವು ಸಾಗರದ ಮಟ್ಟದ ಕೆಳಗಿದೆ. ಭೂಮಿಯ ನೆಲವನ್ನೆಲ್ಲಾ ಒಂದೇ ಎತ್ತರದಲ್ಲಿ ಸಮನಾಗಿ ಹರಡಿದರೆ, ನೀರು ೨೫೦೦ ಮೀ. ಗಳಿಗಿಂತ ಹೆಚ್ಚು ಮಟ್ಟಕ್ಕೆ ಏರುತ್ತದೆ. ನೀರಿನಿಂದ ಆವೃತವಾಗಿರದ ಉಳಿದ ೩೦% ಮೇಲ್ಮೈಯು ಪರ್ವತಗಳು, ಮರುಭೂಮಿಗಳು, ಸಮತಳಗಳು, ಪ್ರಸ್ಥಭೂಮಿಗಳು, ಇತ್ಯಾದಿಗಳಿಂದ ಕೂಡಿದೆ. ಪ್ರಸ್ತುತದಲ್ಲಿ ಒಣನೆಲದ ೧೩.೩೧% ರಷ್ಟು ಮಾತ್ರ ಬೇಸಾಯಕ್ಕೆ ಯೋಗ್ಯವಾಗಿದೆ. ಆದರೆ, ೪.೭೧% ನೆಲದಲ್ಲಿ ಮಾತ್ರ ಶಾಶ್ವತ ಬೆಳೆಗಳನ್ನು ಬೆಳೆಯಬಹುದು.[೧೫] ಭೂಮಿಯ ನೆಲದ ಸುಮಾರು ೪೦% ಭಾಗವು ಪ್ರಸ್ತುತದಲ್ಲಿ ಬೇಸಾಯಕ್ಕೆ ಮತ್ತು ಮೇವಿಗಾಗಿ ಬಳಕೆಯಾಗುತ್ತಿದೆ. ಇದು ಸುಮಾರು ೩.೩ ೧೦ ಎಕರೆ ಬೇಸಾಯದ ಭೂಮಿ ಮತ್ತು ೮.೪ ೧೦ ಎಕರೆಗಳಷ್ಟು ಮೇವಿನ ಭೂಮಿ ಎಂದು ಅಂದಾಜು ಮಾಡಲಾಗಿದೆ.[೧೬]

ಚಿತ್ರ:Earth elevation histogram.png
ಭೂ-ಮೇಲ್ಮೈಯ ಎತ್ತರವನ್ನು ತೋರಿಸುವ ಆಯತ ಚಿತ್ರ - ಭೂಮಿಯ ಮೇಲ್ಮೈಯ ಸುಮಾರು ೭೧% ಭಾಗವು ನೀರಿನಿಂದ ಕೂಡಿದೆ.

ವೈಪರೀತ್ಯ ಬಿಂದುಗಳು[ಬದಲಾಯಿಸಿ]

ಎತ್ತರದ ವೈಪರೀತ್ಯಗಳು: (ಸಾಗರ ಮಟ್ಟಕ್ಕೆ ಸಾಪೇಕ್ಷವಾಗಿ ಮಾಪಿಸಿದಂತೆ)

ಕ್ಷಿತಿಗೋಳ[ಬದಲಾಯಿಸಿ]

ಭೂಮಿಯ ಹೊರ ಪದರವಾದ ಕ್ಷಿತಿಗೋಳವು ಮಣ್ಣಿನಿಂದ ರಚಿತವಾಗಿದ್ದು, ಮಣ್ಣನ್ನು ರೂಪಿಸುವ ಪ್ರಕ್ರಿಯೆಗಳು ಇಲ್ಲಿ ನಡೆಯುತ್ತವೆ. ಭೂಮಿಯ ಶಿಲಾಗೋಳ, ವಾಯುಮಂಡಲ, ಜಲಗೋಳ ಮತ್ತು ಜೈವಗೋಳಗಳ ಸೀಮೆಗಳಲ್ಲಿ ಕ್ಷಿತಿಗೋಳವು ಸ್ಥಿತವಾಗಿರುತ್ತದೆ.

ಜಲಗೋಳ[ಬದಲಾಯಿಸಿ]

ಭೂಮಿಯ ಮೇಲೆ ನೀರಿನ ಹೇರಳತೆಯು ಈ ನಮ್ಮ "ನೀಲ ಗ್ರಹ"ವನ್ನು ಸೌರಮಂಡಲದ ಬೇರೆಲ್ಲಾ ಗ್ರಹಗಳಿಂದ ಪ್ರತ್ಯೇಕಿಸುತ್ತದೆ. ಸುಮಾರು ೭೦.೮% ಮೇಲ್ಮೈಯು ನೀರಿನಿಂದಾವೃತವಾಗಿದ್ದು, ೨೯.೨% ವಿಸ್ತೀರ್ಣವು ಮಾತ್ರ ಸ್ಥಿರ ನೆಲವಾಗಿದೆ. ಭೂಮಿಯ ಜಲಗೋಳವು ಮುಖ್ಯವಾಗಿ ಸಾಗರಗಳಿಂದ ಕೂಡಿದ್ದರೂ, ಸರೋವರಗಳು, ಕೆರೆ-ನದಿಗಳು ಮತ್ತು ಭೂಗತ ನೀರು ಸಹ ಇದರಲ್ಲಿ ಸೇರಿವೆ. ಸಾಗರಗಳ ಸರಾಸರಿ ಆಳವು ೩,೭೯೪ ಮೀ. (೧೨,೪೪೭ ಅಡಿ)ಗಳಷ್ಟಿದ್ದು, ಭೂಖಂಡಗಳ ಸರಾಸರಿ ಎತ್ತರಕ್ಕಿಂತ ಐದು ಪಟ್ಟು ಇದೆ. ಸಾಗರಗಳ ದ್ರವ್ಯರಾಶಿಯು ಸುಮಾರು ೧.೩೫ ೧೦^೧೮ ಟನ್ನುಗಳು, ಅಥವಾ, ಭೂಮಿಯ ಒಟ್ಟು ದ್ರವ್ಯರಾಶಿಯ ೧/೪೪೦೦ ಭಾಗ.

ವಾಯುಮಂಡಲ[ಬದಲಾಯಿಸಿ]

  • ಭೂಮಿಯ ವಾಯುಮಂಡಲವು ಸ್ಫುಟವಾದ ಮಿತಿರೇಖೆಯನ್ನು ಹೊಂದಿಲ್ಲ. ಬದಲಿಗೆ, ಮೇಲ್ಮೈಯಿಂದ ಹೆಚ್ಚು ಮೇಲೆ ಮೇಲೆ ಹೋಗುತ್ತಿದ್ದಂತೆ, ವಾಯುಮಂಡಲವು ನಿಧಾನವಾಗಿ ವಿರಳವಾಗುತ್ತಾ, ಕೊನೆಗೆ ಅಂತರಿಕ್ಷದ ನಿರ್ವಾತದಲ್ಲಿ ಬೆರೆತುಹೋಗುತ್ತದೆ. ವಾಯುಮಂಡಲದ ಮುಕ್ಕಾಲು ಪಾಲು ದ್ರವ್ಯರಾಶಿಯು ಮೇಲ್ಮೈಯಿಂದ ಮೊದಲ ೧೧ಕಿ.ಮೀ.ಗಳ ಅಂತರದಲ್ಲಿದೆ. ಈ ಕೆಳಗಿನ ಪದರವನ್ನು ಹವಾಗೋಳವೆಂದು ಕರೆಯಲಾಗುತ್ತದೆ.
  • ಇದರ ಮೇಲಿನ ವಾಯುಮಂಡಲವನ್ನು ಸ್ತರಗೋಳ, ಮಧ್ಯಮಂಡಲ, ಮತ್ತು ಉಷ್ಣಗೋಳಗಳಾಗಿ ವಿಂಗಡಿಸಲಾಗಿದೆ. ಇವುಗಳ ಆಚೆಯಿರುವ ಬಹಿರ್ಗೋಳವು ಕ್ರಮೇಣವಾಗಿ ಭೂಮಿಯ ಕಾಂತಗೋಳದೊಂದಿಗೆ ಬೆರೆಯುತ್ತದೆ (ಇಲ್ಲಿ ಭೂಮಿಯ ಕಾಂತಕ್ಷೇತ್ರವು ಸೌರ ಮಾರುತದೊಂದಿಗೆ ಒಡನಾಡುತ್ತದೆ). ವಾಯುಮಂಡಲದ ಒಂದು ಭಾಗವಾದ ಓಜೋನ್ ಪದರವು ಭೂಮಿಯ ಜೀವಿಗಳಿಗೆ ಒಂದು ಮುಖ್ಯವಾದ ಅವಶ್ಯಕ ಭಾಗ.
  • ಭೂಮಿಯ ಮೇಲ್ಮೈಯಲ್ಲಿ ವಾಯು ಭಾರವು ಸರಾಸರಿ ೧೦೧.೩೨೫ kPa ಗಳಷ್ಟಿರುತ್ತದೆ. ವಾಯುವು ೭೮% ಸಾರಜನಕ ಮತ್ತು ೨೧% ಆಮ್ಲಜನಕಗಳಿಂದ ಕೂಡಿದ್ದು, ಅತ್ಯಲ್ಪ ಪ್ರಮಾಣದಲ್ಲಿ ನೀರಾವಿ ಮತ್ತಿತರ ಅನಿಲರೂಪಿ ಸಂಯುಕ್ತ ವಸ್ತುಗಳನ್ನು ಹೊಂದಿದೆ. ವಾಯುಮಂಡಲವು ಹಾನಿಕಾರಕ ಅತಿನೇರಳೆ ಕಿರಣಗಳನ್ನು ಹೀರಿಕೊಂಡು, ಉಷ್ಣತೆಯನ್ನು ಮಂದಿಸಿ, ನೀರಾವಿಯನ್ನು ಸಾಗಿಸಿ, ಉಪಯುಕ್ತ ಅನಿಲಗಳನ್ನು ಒದಗಿಸಿ, ಭೂಮಿಯ ಜೀವಜಂತುಗಳನ್ನು ರಕ್ಷಿಸುತ್ತದೆ. ಹವಾಮಾನವನ್ನು ನಿರ್ಧರಿಸುವುದರಲ್ಲಿ ವಾಯುಮಂಡಲವು ಒಂದು ಪ್ರಮುಖ ಅಂಗ.
  • ಜಲಜನಕದ ಅಣುಗಳು ತುಂಬಾ ಹಗುರವಾಗಿದ್ದು, ಭೂಮಿಯ ಸರಾಸರಿ ತಾಪಮಾನದಲ್ಲಿ ಇವು ಮುಕ್ತಿ ವೇಗವನ್ನು ತಲುಪುವುದರಿಂದ, ಭೂಮಿಯ ಮೇಲೆ ಶುದ್ಧ ಜಲಜನಕವು ಮೂಲರೂಪದಲ್ಲಿ ಸಿಗುವುದಿಲ್ಲ. ಹೀಗಾಗಿ, ಭೂಮಿಯ ಪರಿಸರವು ರಾಸಾಯನಿಕವಾಗಿ ಉತ್ಕರ್ಷದಾಯಕವಾಗಿದೆ. ಭೂಮಿಯ ಜೀವಜಂತುಗಳ ರಾಸಾಯನಿಕ ರಚನೆಗೆ ಇದೇ ಕಾರಣ.

ಹವಾಮಾನ[ಬದಲಾಯಿಸಿ]

ಎತ್ತರದ ಕಕ್ಷೆಯಿಂದ ಕಾಣುವಂತೆ ಭೂಮಿಯ ಒಂದು ಭಾಗ.

ಭೂಮಿಯ ಹವಾಮಾನದಲ್ಲಿ ಎದ್ದು ಕಾಣುವ ವೈಶಿಷ್ಟ್ಯಗಳೆಂದರೆ, ಎರಡು ಧ್ರುವ ವಲಯಗಳು, ಎರಡು ಸಮಶೀತೋಷ್ಣ ವಲಯಗಳು, ಮತ್ತು ಒಂದು ಅಗಲವಾದ ಸಮಭಾಜಕ ವಲಯ. ಮಳೆ ಮತ್ತು ಹಿಮಪಾತಗಳು ಬಹಳಷ್ಟು ವಿಭಿನ್ನವಾಗಿ, ವರ್ಷಕ್ಕೆ ಹಲವು ಮೀಟರ್ ನೀರಿನಿಂದ ಹಿಡಿದು, ಒಂದು ಮಿ.ಮೀ. ಗಿಂದ ಕಡಿಮೆಯಷ್ಟು ಬೀಳುತ್ತವೆ. ಸಾಗರ ಪ್ರವಾಹಗಳು ಹವಾಮಾನದ ಮೇಲೆ ಆಳವಾದ ಪ್ರಭಾವವನ್ನು ಬೀಳುತ್ತವೆ. ವಿಶಿಷ್ಟವಾಗಿ, ಅದ್ಭುತವಾದ ಲವಣೋಷ್ಣ ಪರಿಚಲನೆಯು ಅಪಾರವಾದ ಶಾಖವನ್ನು ಭೂಮಧ್ಯರೇಖೆಯ ವಲಯದಿಂದ ಧ್ರುವವಲಯಗಳ ಬಳಿಗೆ ಪಸರಿಸುತ್ತದೆ.

ಕಾಂತಕ್ಷೇತ್ರ[ಬದಲಾಯಿಸಿ]

ಭೂಮಿಯ ಕಾಂತಕ್ಷೇತ್ರವು ಸುಮಾರು ಕಾಂತೀಯ ದ್ವಿಧ್ರುವದ ಆಕಾರವನ್ನು ಹೊಂದಿದ್ದು, ಪ್ರಸ್ತುತದಲ್ಲಿ ಕಾಂತ ಧ್ರುವಗಳು ಗ್ರಹದ ಭೌಗೋಳಿಕ ಧ್ರುವಗಳ ಸಮೀಪದಲ್ಲಿವೆ. ಡೈನಮೊ ಸಿದ್ಧಾಂತದ ಪ್ರಕಾರ, ದ್ರವೀಕೃತ ಹೊರ ಭೂಗರ್ಭದ ವಲಯದಲ್ಲಿ ಶಾಖವು ವಾಹಕ ಪದಾರ್ಥಗಳಲ್ಲಿ ಸಂವಹನ ಚಲನೆಗಳನ್ನುಂಟುಮಾಡಿ, ಇದರಿಂದ ವಿದ್ಯುತ್ ಪ್ರವಾಹಗಳು ಸೃಷ್ಟಿಯಾಗುತ್ತವೆ. ಈ ವಿದ್ಯುತ್ ಪ್ರವಾಹಗಳು ಕಾಂತಕ್ಷೇತ್ರವನ್ನು ಉಂಟುಮಾಡುತ್ತವೆ. ಭೂಗರ್ಭದಲ್ಲಿನ ಸಂವಹನ ಚಲನೆಗಳು ಸ್ವಾಭಾವಿಕವಾಗಿ ಅವ್ಯವಸ್ಥಿತವಾಗಿದ್ದು, ಮತ್ತೆ ಮತ್ತೆ ತಮ್ಮ ಹೊಂದಾಣಿಕೆಯನ್ನು ಬದಲಿಸಿಕೊಳ್ಳುತ್ತವೆ. ಇದರಿಂದ, ಸರಾಸರಿ ಪ್ರತಿ ಕೋಟಿ ವರ್ಷಗಳಲ್ಲಿ ಕೆಲವು ಬಾರಿಯಂತೆ ಅನಿಯತವಾಗಿ ಕಾಂತಕ್ಷೇತ್ರ ವಿಪರ್ಯಯಗಳು ಉಂಟಾಗುತ್ತವೆ. ಇತ್ತೀಚೆಗಿನ ವಿಪರ್ಯಯವು ಸುಮಾರು ೭೦೦,೦೦೦ ವರ್ಷಗಳು ಹಿಂದೆ ಆಯಿತು. [೧೮][೧೯]

ಈ ಕಾಂತಕ್ಷೇತ್ರದಿಂದ ಸೃಷ್ಟಿಗೊಂಡ ಕಾಂತಗೋಳವು ಸೌರ ಮಾರುತದಲ್ಲಿನ ಕಣಗಳನ್ನು ಭೂಮಿಯಿಂದಾಚೆಗೆ ವಾಲಿಸುತ್ತದೆ. ಆಘಾತ ತರಂಗದ ಸೂರ್ಯನೆಡೆಗಿರುವ ತುದಿಯು ಭೂಮಿಯ ತ್ರಿಜ್ಯದ ಸುಮಾರು ೧೩ ಪಟ್ಟು ದೂರದಲ್ಲಿ ಸ್ಥಿತವಾಗಿದೆ. ಕಾಂತಕ್ಷೇತ್ರ ಮತ್ತು ಸೌರ ಮಾರುತಗಳ ಅಪ್ಪಳಿಕೆಯಿಂದ ವಾನ್ ಆಲನ್ ವಿಕಿರಣ ಪಟ್ಟಿಗಳೆಂದು ಕರೆಯಲಾಗುವ ಒಂದು ಜೋಡಿ ಏಕಕೇಂದ್ರೀಯ ಬಳೆಯಾಕಾರದ ಶಕ್ತಿಯುತ ಆವಿಷ್ಟಕಣಗಳ ವಲಯಗಳು ನಿರ್ಮಿತವಾಗುತ್ತವೆ. ಈ ಪ್ಲಾಸ್ಮವು ಕಾಂತ ಧ್ರುವಗಳ ಬಳಿ ಭೂಮಿಯ ವಾಯುಮಂಡಲವನ್ನು ಹೊಕ್ಕಾಗ ಧ್ರುವಾರುಣ ಜ್ಯೋತಿಯು ಉಂಟಾಗುತ್ತದೆ.[೨೦]

ಕಕ್ಷೆ ಮತ್ತು ಪರಿಭ್ರಮಣೆ[ಬದಲಾಯಿಸಿ]

ಭೂಮಿಯ ಅಕ್ಷೀಯ ಪರಿಭ್ರಮಣೆಯನ್ನು ತೋರುತ್ತಿರುವ ಚಲನಚಿತ್ರ.
  • ಹಿನ್ನೆಲೆ ನಕ್ಷತ್ರಗಳಿಗೆ ಸಾಪೇಕ್ಷವಾಗಿ, ತನ್ನ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳನ್ನು ಸೇರಿಸುವ ಅಕ್ಷದ ಸುತ್ತ ಒಂದು ಸುತ್ತು ಸುತ್ತಲು ಭೂಮಿಗೆ ಸರಾಸರಿ ೨೩ ಘಂಟೆಗಳು, ೫೬ ನಿಮಿಷಗಳು ಮತ್ತು ೪.೦೯೧ ಕ್ಷಣಗಳು ಹಿಡಿಯುತ್ತವೆ. ಈ ಅವಧಿಗೆ ನಾಕ್ಷತ್ರಿಕ ದಿನ ಎಂದು ಹೆಸರು.[೨೧] ಭೂಮಿಯಿಂದ ಕಂಡಂತೆ, ಅಂತರಿಕ್ಷದಲ್ಲಿ ಆಕಾಶಕಾಯಗಳ ಚಲನೆಯು ೧೫°/ಘಂ. = ೧೫’/ನಿ. ಪಶ್ಚಿಮದೆಡೆಗೆ ಇರುತ್ತದೆ. ಇದು ಪ್ರತಿ ಎರಡು ನಿಮಿಷಗಳಲ್ಲಿ ಸೂರ್ಯ ಅಥವಾ ಚಂದ್ರರ ಗೋಚರ ವ್ಯಾಸಕ್ಕೆ ಸಮಾನ. (ಸೂರ್ಯ ಮತ್ತು ಚಂದ್ರ ಗೋಚರ ಗಾತ್ರಗಳು ಸುಮಾರು ಒಂದೇ ಪ್ರಮಾಣದಲ್ಲಿವೆ.)
  • ಭೂಮಿಯು ಸೂರ್ಯನನ್ನು ಸರಾಸರಿ ಸುಮಾರು ೧೫ ಕೋಟಿ ಕಿ.ಮೀ. (೯.೩೨ ಕೋಟಿ ಮೈಲಿ) ದೂರದಲ್ಲಿ ಪ್ರತಿ ೩೬೫.೨೫೬೪ ಸರಾಸರಿ ಸೌರ ದಿನಗಳಿಗೊಮ್ಮೆ (೧ ನಾಕ್ಷತ್ರಿಕ ವರ್ಷ) ಪರಿಭ್ರಮಿಸುತ್ತದೆ. ಹೀಗಾಗಿ, ಭೂಮಿಯಿಂದ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಸೂರ್ಯನ ಗೋಚರ ಚಲನೆಯು ಸುಮಾರು ೧°/ದಿನ (ಅಥವಾ ಪ್ರತಿ ೧೨ಘಂಟೆಗಳಲ್ಲಿ ಸೂರ್ಯ/ಚಂದ್ರರ ವ್ಯಾಸದಷ್ಟು) ಪೂರ್ವದೆಡೆಗೆ ಇರುತ್ತದೆ.
  • ಈ ಚಲನೆಯ ಕಾರಣದಿಂದ, ಸೂರ್ಯನು ಪುನಃ ಮಧ್ಯಾಹ್ನವೃತ್ತಕ್ಕೆ ಮರಳುವಷ್ಟು ತಿರುಗಲು ಭೂಮಿಗೆ ಸರಾಸರಿ ೨೪ಘಂಟೆಗಳು - ಒಂದು ಸೌರ ದಿನದಷ್ಟು ಕಾಲ ಹಿಡಿಯುತ್ತದೆ. ಭೂಮಿಯ ಕಕ್ಷೀಯ ವೇಗವು ಸರಾಸರಿ ಸುಮಾರು ೩೦ಕಿ.ಮೀ./ಘಂ.ನಷ್ಟಿದೆ. (೧೦೮,೦೦೦ಕಿ.ಮೀ./ಘಂ. ಅಥವಾ ೬೭,೦೦೦ಮಿ/ಘಂ.). ಈ ವೇಗದಲ್ಲಿ ಗ್ರಹದ ವ್ಯಾಸವನ್ನು ಸುಮಾರು ಏಳು ನಿಮಿಷಗಳಲ್ಲಿ ಮತ್ತು ಭೂಮಿ-ಚಂದ್ರರ ನಡುವಿನ ದೂರವನ್ನು ನಾಲ್ಕು ಘಂಟೆಗಳಲ್ಲಿ ಕ್ರಮಿಸಬಹುದು.[೨೨]
೬೦೦ ಕೋಟಿ ಕಿ.ಮೀ. (೪೦೦ ಕೋಟೀ ಮೈಲಿ) ಗಳಿಂದಾಚೆಯಿಂದ ವಾಯೇಜರ್ ೧ ಗಗನನೌಕೆಗೆ ಭೂಮಿಯು ಒಂದು ಸಣ್ಣ ಚುಕ್ಕೆಯಂತೆ ಕಂಡಿತು.
  • ಹಿನ್ನೆಲೆಯ ನಕ್ಷತ್ರಗಳಿಗೆ ಸಾಪೇಕ್ಷವಾಗಿ ಚಂದ್ರವು ಭೂಮಿಯೊಂದಿಗಿನ ಭಾರಕೇಂದ್ರದ ಸುತ್ತ ಪ್ರತಿ ೨೭.೩೨ ದಿನಗಳಿಗೊಮ್ಮೆ ಪರಿಭ್ರಮಿಸುತ್ತದೆ. ಸೂರ್ಯನ ಸುತ್ತ ಭೂಮಿ-ಚಂದ್ರ ವ್ಯವಸ್ಥೆಯ ಸಾಮಾನ್ಯ ಪರಿಭ್ರಮಣೆಯನ್ನು ಜೊತೆಗೂಡಿಸಿದರೆ, ಒಂದು ಹುಣ್ಣಿಮೆಯಿಂದ ಇನ್ನೊಂದಕ್ಕಿರುವ ಅವಧಿಯು ೨೯.೫೩ ದಿನಗಳು (ಯುತಿ ಮಾಸ). ಖಗೋಳದ ಉತ್ತರ ಧ್ರುವದಿಂದ ನೋಡಿದಾಗ, ಭೂಮಿ, ಚಂದ್ರರ ಚಲನೆ, ಮತ್ತವುಗಳ ಅಕ್ಷೀಯ ಪರಿಭ್ರಮಣಗಳೆಲ್ಲ ಅಪ್ರದಕ್ಷಿಣ ದಿಶೆಯಲ್ಲಿರುತ್ತವೆ.
  • ಪರಿಭ್ರಮಣೀಯ ಮತ್ತು ಅಕ್ಷೀಯ ಸಮತಳಗಳು ನಿಖರವಾದ ಹೊಂದಾಣಿಕೆಯಲ್ಲಿಲ್ಲ: ಭೂಮಿಯ ಅಕ್ಷವು ಭೂಮಿ-ಸೂರ್ಯ ಸಮತಳದ ಲಂಬಕ್ಕೆ ಸುಮಾರು ೨೩.೫ ಡಿಗ್ರಿಗಳು ಓರೆಯಾಗಿದೆ (ಇದರಿಂದ ಋತುಗಳುಂಟಾಗುತ್ತವೆ); ಭೂಮಿ-ಚಂದ್ರ ಸಮತಳವು ಭೂಮಿ-ಸೂರ್ಯ ಸಮತಳಕ್ಕೆ ಸುಮಾರು ೫ ಡಿಗ್ರಿಗಳ ಓರೆಯಲ್ಲಿದೆ (ಈ ಓರೆಯಿಲ್ಲದಿದ್ದಿದ್ದರೆ, ಪ್ರತಿ ಎರಡು ವಾರಗಳಿಗೊಮ್ಮೆ ಪರ್ಯಾಯವಾಗಿ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಗಳುಂಟಾಗುತ್ತಿದ್ದವು).[೨೨][೨೩]
  • ಭೂಮಿಯ ಅಕ್ಷೀಯ ಓರೆಯ ಕಾರಣದಿಂದ, ಬಾನಿನಲ್ಲಿ ಸೂರ್ಯನ ಸ್ಥಾನವು (ನೆಲದ ಮೇಲಿನ ವೀಕ್ಷಕರಿಗೆ ಕಂಡಂತೆ) ವರ್ಷದಲ್ಲಿನ ಋತು/ಮಾಸಗಳೊಂದಿಗೆ ಬದಲಾಗುತ್ತದೆ. ಉತ್ತರೀಯ ಅಕ್ಷಾಂಶದಲ್ಲಿರುವ ವೀಕ್ಷಕನೊಬ್ಬನಿಗೆ, ಉತ್ತರೀಯ ಧ್ರುವವು ಸೂರ್ಯನೆಡೆಗೆ ಬಾಗಿದ್ದಾಗ ದಿನವು ಹೆಚ್ಚು ದೀರ್ಘವಾಗಿರುತ್ತದೆ ಹಾಗೂ ಸೂರ್ಯವು ಬಾನಿನಲ್ಲಿ ಹೆಚ್ಚು ಎತ್ತರಕ್ಕೇರುತ್ತದೆ. ಇದರಿಂದ ಮೇಲ್ಮೈ ತಲುಪುವ ಸೌರ ವಿಕಿರಣವು ಹೆಚ್ಚಾಗಿ, ಸರಾಸರಿ ತಾಪಮಾನವು ಹೆಚ್ಚಾಗುತ್ತದೆ.
  • ಉತ್ತರ ಧ್ರುವವು ಸೂರ್ಯನಿಂದ ದೂರ ವಾಲಿದ್ದಾಗ ಈ ಪ್ರಕ್ರಿಯೆಯು ಹಿಂದುಮುಂದಾಗಿ, ಸಾಮಾನ್ಯವಾಗಿ ತಣ್ಣಗಿನ ಹವೆಯನ್ನು ಉಂಟುಮಾಡುತ್ತದೆ. ಆರ್ಕ್‌ಟಿಕ್ ವೃತ್ತದ ಉತ್ತರದಲ್ಲಿ ಈ ಪ್ರಕ್ರಿಯೆಯು ವಿಪರೀತವಾಗಿ, ವರ್ಷದ ಒಂದು ಕಾಲದಲ್ಲಿ ಬೆಳಕೇ ಇರುವುದಿಲ್ಲ. (ಇದಕ್ಕೆ ಧ್ರುವ ರಾತ್ರಿ ಎಂದು ಹೆಸರು.)
  • ವಾಯುಗುಣದಲ್ಲಿನ ಈ ಬದಲಾವಣೆಯಿಂದ (ಭೂಮಿಯ ಅಕ್ಷೀಯ ಓರೆಯ ಕಾರಣ) ಋತುಗಳು ಉಂಟಾಗುತ್ತವೆ. ಖಗೋಳಶಾಸ್ತ್ರೀಯ ರೂಢಿಯ ಪ್ರಕಾರ, ಭೂಮಿಯ ೪ ಋತುಗಳನ್ನು ಅಯನ ಬಿಂದುಗಳು ಮತ್ತು ವಿಷುವ ಬಿಂದುಗಳು ನಿರ್ಧರಿಸುತ್ತವೆ. ಸೂರ್ಯನೆಡೆಗೆ ಅತಿ ಹೆಚ್ಚಿನ ಅಕ್ಷೀಯ ಓರೆಗಳು ಅಯನ ಬಿಂದುಗಳಾದರೆ, ಓರೆಯ ದಿಕ್ಕು ಮತ್ತು ಸೂರ್ಯನೆಡೆಗಿರುವ ದಿಕ್ಕುಗಳು ಪರಸ್ಪರ ಲಂಬವಾಗಿರುವ ಬಿಂದುಗಳು ವಿಷುವ ಬಿಂದುಗಳು. Winter solstice occurs on about December 21, summer solstice is near June 21, spring equinox is around March 20 and autumnal equinox is about September 23. ದಕ್ಷಿಣಾರ್ಧಗೋಳದಲ್ಲಿ ಅಕ್ಷೀಯ ಓರೆಯು ಉತ್ತರಾರ್ಧ ಗೋಳದ ಓರೆಯ ವಿರುದ್ಧವಾಗಿರುತ್ತದೆ. ಹೀಗಾಗಿ, ದಕ್ಷಿಣಾರ್ಧಗೋಳದಲ್ಲಿ ಋತುಮಾನಗಳು ವಿರುದ್ಧವಾಗಿರುತ್ತವೆ.
  • ಭೂಮಿಯ ಓರೆಯ ಕೋನವು ಧೀರ್ಘಕಾಲಗಳವರೆಗೆ ಬಹಳಷ್ಟು ಸ್ಥಿರವಾಗಿರುತ್ತದೆ. ಆದರೆ, ಈ ಓರೆಯು ೧೮.೬ ವರ್ಷಗಳ ಅವಧಿಯುಳ್ಳ ಹಾಗೂ ಅಕ್ಷ ವಿಚಲನೆ ಎಂದು ಕರೆಯಲ್ಪಡುವ ಒಂದು ಕ್ಷೀಣ ಚಲನೆಗೆ ಒಳಪಟ್ಟಿದೆ. ಭೂಮಿಯ ಅಕ್ಷದ ಹೊಂದಾಣಿಕೆಯು (ಕೋನವಲ್ಲ) ಸಹ ಸಮಯದೊಂದಿಗೆ ಬದಲಾಗುತ್ತಿದ್ದು, ಪ್ರತಿ ೨೫,೮೦೦ ವರ್ಷಗಳಿಗೊಮ್ಮೆ ಒಂದು ವೃತ್ತಾಕಾರದ ಅಯನಕ್ಕೆ ಒಳಪಟ್ಟಿರುತ್ತದೆ; ಸೌರವರ್ಷ ಮತ್ತು ನಾಕ್ಷತ್ರಿಕ ವರ್ಷಗಳ ನಡುವಿನ ವ್ಯತ್ಯಾಸಕ್ಕೆ ಈ ಅಯನವೇ ಕಾರಣ.
  • ಈ ಎರಡೂ ಚಲನೆಗಳಿಗೆ ಕಾರಣ ಸಮಭಾಜಕದ ಉಬ್ಬಿನ ಮೇಲೆ ಸೂರ್ಯ-ಚಂದ್ರರ ಬದಲಾಗುವ ಆಕರ್ಷಕ ಬಲ. ಭೂಮಿಯ ದೃಷ್ಟಿಯಿಂದ, ಧ್ರುವಗಳೂ ಮೇಲ್ಮೈ ಮೇಲೆ ಕೆಲವು ಮೀಟರ್‌ಗಳಷ್ಟು ಚಲಿಸುತ್ತವೆ. ಹಲವು ಆವರ್ತೀಯ ಅಂಶಗಳನ್ನು ಹೊಂದಿರುವ ಈ ಧ್ರುವೀಯ ಚಲನೆಗೆ ಒಟ್ಟಾರೆ ಅರೆ-ಆವರ್ತೀಯ ಚಲನೆ ಎಂದು ಹೆಸರು. ಈ ಚಲನೆಗೆ ವಾರ್ಷಿಕ ಅಂಶವಲ್ಲದೆ ಚಾಂಡ್ಲರ್ ಓಲಾಟವೆಂದು ಕರೆಯಲಾಗುವ ೧೪-ಮಾಸದ ಆವರ್ತೀಯ ಅಂಶವೂ ಒಂದಿದೆ. ಭೂಮಿಯ ಅಕ್ಷೀಯ ಪರಿಭ್ರಮಣೆಯ ವೇಗವು ದಿನದ ಅವಧಿ ಬದಲಾವಣೆ ಎಂಬ ವಿದ್ಯಮಾನದಿಂದಲೂ ಬದಲಾಗುತ್ತಿರುತ್ತದೆ.[೨೪] ಆಧುನಿಕ ಕಾಲಗಳಲ್ಲಿ, ಭೂಮಿಯ ಪುರರವಿಯು ಜನವರಿ ೩ರ ಹೊತ್ತಿಗೆ, ಹಾಗೂ, ಅಪರವಿಯು ಜುಲೈ ೪ರ ಹೊತ್ತಿಗೆ ಉಂಟಾಗುತ್ತದೆ (ಬೇರೆ ಕಾಲಗಳಿಗೆ, ಅಯನ ಮತ್ತು ಮಿಲಾಂಕೊವಿಚ್ ಆವರ್ತಗಳನ್ನು ನೋಡಿ).
  • ಪುರರವಿಯಲ್ಲಿ, ಭೂಮಿಯನ್ನು ತಲುಪುವ ಸೌರಶಕ್ತಿಯು ಅಪರವಿಗಿಂತ ೬.೯% ಹೆಚ್ಚಿರುತ್ತದೆ. ಸುಮಾರು ಪುರರವಿಯ ಕಾಲದಲ್ಲೇ ದಕ್ಷಿಣಾರ್ಧಗೋಳವು ಸೂರ್ಯನ ಕಡೆಗೆ ಬಾಗಿರುವುದರಿಂದ, ಒಂದು ವರ್ಷದ ಅವಧಿಯಲ್ಲಿ ದಕ್ಷಿಣಾರ್ಧಗೋಳವು ಉತ್ತರಾರ್ಧಗೋಳಕ್ಕಿಂತ ಸ್ವಲ್ಪ ಹೆಚ್ಚು ಸೌರಶಕ್ತಿಯನ್ನು ಪಡೆಯುತ್ತದೆ. ಆದರೆ, ಅಕ್ಷೀಯ ಓರೆಯಿಂದ ಆಗುವ ಶಕ್ತಿಯ ಬದಲಾವಣೆಗೆ ಹೋಲಿಸಿದರೆ ಇದು ಬಹಳ ದುರ್ಬಲ ಪರಿಣಾಮವಾಗಿದ್ದು, ದಕ್ಷಿಣಾರ್ಧ ಗೋಳದಲ್ಲಿನ ಹೆಚ್ಚಿನ ನೀರು ಈ ಅಧಿಕ ಶಕ್ತಿಯನ್ನು ಹೀರಿಕೊಳ್ಳುತ್ತದೆ.[೨೫]
  • ಭೂಮಿಯ ಹಿಲ್ ಗೋಳವು (ಗುರುತ್ವಪ್ರಭಾವವಿರುವ ಗೋಳ) ಸುಮಾರು ೯೩೦,೦೦೦ಮೈಲಿಗಳ ತ್ರಿಜ್ಯವನ್ನು ಹೊಂದಿದೆ.[೨೬][೨೭] ಇದು ಭೂಮಿಯ ಗುರುತ್ವ ಪ್ರಭಾವವು ಸೂರ್ಯ ಮತ್ತು ಗ್ರಹಗಳ ಪ್ರಭಾವಕ್ಕಿಂತ ಅಧಿಕವಾಗಿರುವ ಗರಿಷ್ಠ ದೂರ. ಈ ತ್ರಿಜ್ಯದ ಹೊರಗೆ ಭೂಮಿಯನ್ನು ಪರಿಭ್ರಮಿಸುವ ಕಾಯಗಳು ಸೂರ್ಯನ ಗುರುತ್ವ ಕ್ಷೋಭೆಯ ಕಾರಣದಿಂದ ತಮ್ಮ ಕಕ್ಷೆಯನ್ನು ತಪ್ಪಿಹೋಗಬಹುದು.

ವೀಕ್ಷಣೆ[ಬದಲಾಯಿಸಿ]

೧೯೫೯ರಲ್ಲಿ ಎಕ್ಸ್‌ಪ್ಲೋರರ್ನೌಕೆಯು ಮೊದಲಬಾರಿಗೆ ಅಂತರಿಕ್ಷದಿಂದ ಭೂಮಿಯ ಛಾಯಾಚಿತ್ರವನ್ನು ತೆಗೆಯಿತು.[೨೮] ೧೯೬೧ರಲ್ಲಿ ಯೂರಿ ಗಗಾರಿನ್ನು ಅಂತರಿಕ್ಷದಿಂದ ಭೂಮಿಯನ್ನು ವೀಕ್ಷಿಸಿದ ಮೊಟ್ಟಮೊದಲ ಮಾನವನಾದನು. ಅಪೋಲೋ ೮ರ ಸಿಬ್ಬಂದಿಯು ಮೊದಲಬಾರಿಗೆ ೧೯೬೮ರಲ್ಲಿ ಚಾಂದ್ರ ಕಕ್ಷೆಯಿಂದ ಭೂಮಿ-ಉದಯವನ್ನು ವೀಕ್ಷಿಸಿತು. ೧೯೭೨ರಲ್ಲಿ ಅಪೋಲೋ ೧೭ರ ಸಿಬ್ಬಂದಿಯು ಪ್ರಸಿದ್ಧವಾದ "ನೀಲಿ ಗೋಲಿ" ಛಾಯಾಚಿತ್ರವನ್ನು ಸಂಪಾದಿಸಿತು. ಈ ನೀಲಿ ಗೋಲಿಯ ಚಿತ್ರವು ಮಾನವ ಇತಿಹಾಸದಲ್ಲೇ ಅತಿ ಹೆಚ್ಚಾಗಿ ವಿತರಿಸಲಾಗಿರುವ ಚಿತ್ರವಿರಬಹುದೆಂದು ಶಂಕಿಸಲಾಗಿದೆ.

ಮಂಗಳ ಸಮೀಕ್ಷಕಕ್ಕೆ ಮಂಗಳ ಗ್ರಹದ ಮೇಲಿನಿಂದ ಕಂಡಂತೆ ಭೂಮಿ ಮತ್ತು ಚಂದ್ರ

.

ಬಾಹ್ಯಾಕಾಶದಿಂದ ನೋಡಿದಾಗ, ಭೂಮಿಯು ಚಂದ್ರ ಮತ್ತು ಶುಕ್ರಗಳಗಳಂತೆಯೇ ಕಲೆಗಳನ್ನು ತೋರುತ್ತದೆ. ಭೂಮಿಯು ಸೂರ್ಯನ ಸುತ್ತ ಸುತ್ತುವಾಗ ತನ್ನ ಮೇಲ್ಮೈನಿಂದ ಪ್ರತಿಫಲಿಸುವ ಬೆಳಕು ಇದಕ್ಕೆ ಕಾರಣ. ಕಾಣುವ ಕಲೆಗಳು ಅಂತರಿಕ್ಷದಲ್ಲಿ ವೀಕ್ಷಕನ ಸ್ಥಾನದ ಮೇಲೆ ಅವಲಂಬಿತವಾಗಿದೆ. ಈ ಕಲೆಗಳು ಮಾರ್ಪಡುವ ವೇಗವು ವೀಕ್ಷಕನ ಮತ್ತು ಭೂಮಿಯ ಕಕ್ಷೀಯ ಅವಧಿಗಳ ಮೇಲೆ ಅವಲಂಬಿತವಾಗಿವೆ. ಪ್ರಯೋಗಾಲಯದಲ್ಲಿ ಭೂಗೋಳಾಕೃತಿಯೊಂದರ ಮೇಲೆ ಬೆಳಕನ್ನು ಹಾಯಿಸಿ ಕಲೆಗಳನ್ನು ನಿರ್ಮಿಸಬಹುದು.

ಭೂಮಿಯ ಮೇಲಿನ ವೀಕ್ಷಕನಿಗೆ ಶುಕ್ರನ ಕಲೆಗಳು ಕಾಣುವಂತೆ (ಗೆಲಿಲಿಯೊ ಕಂಡುಹಿಡಿದಂತೆ), ಮಂಗಳದ ಮೇಲಿನ ವೀಕ್ಷಕನಿಗೆ ಭೂಮಿಯ ಕಲೆಗಳು ಕಾಣುತ್ತವೆ. ಆದರೆ, ಸೂರ್ಯನ ಮೇಲಿನ ಕಾಲ್ಪನಿಕ ವೀಕ್ಷಕನೊಬ್ಬನಿಗೆ ಭೂಮಿಯ ಯಾವುದೇ ಕಲೆಗಳು ಕಾಣುವುದಿಲ್ಲ. ಸೂರ್ಯ ವೀಕ್ಷಕನಿಕ್ಗೆ ಭೂಮಿಯ ಬೆಳಕಿನ ಮುಖ ಮಾತ್ರ ಕಾಣುತ್ತದೆ.

ವಾಸಯೋಗ್ಯತೆ[ಬದಲಾಯಿಸಿ]

ಯಾವುದೇ ಗ್ರಹವು ಜೀವಿಗಳನ್ನು ಪೋಷಿಸುವ ಸಾಮರ್ಥ್ಯವುಳ್ಳದ್ದಾಗಿದ್ದರೆ (ಜೀವಿಗಳು ಆ ಗ್ರಹದ ಮೇಲೆ ಉದ್ಭವವಾಗಿರದಿದ್ದರೂ) ಅದನ್ನು ವಾಸಯೋಗ್ಯವೆಂದು ಕರೆಯಲಾಗುತ್ತದೆ. ಇದುವರೆಗೆ ತಿಳಿದುಬಂದಂತೆ, ಭೂಮಿಯು ದ್ರವರೂಪಿ ನೀರು, ಜಟಿಲವಾದ ಸಾವಯವ ಕಣಗಳು ಒಗ್ಗೂಡುವಂತಹ ಪರಿಸರ, ಮತ್ತು ಉಪಾಪಚಯವನ್ನು ಉಳಿಸಿಕೊಂಡು ಹೋಗಲು ಅವಶ್ಯಕವಾದ ಶಕ್ತಿ, ಇವುಗಳನ್ನು ಒದಗಿಸುತ್ತದೆ.[೨೯] ಸೂರ್ಯನಿಂದ ಭೂಮಿಯ ದೂರ, ಅದರ ಕಕ್ಷೀಯ ಉತ್ಕೇಂದ್ರೀಯತೆ, ಅಕ್ಷೀಯ ಪರಿಭ್ರಮಣ ಕಾಲ, ಅಕ್ಷೀಯ ಓರೆ, ಭೂವೈಜ್ಞಾನಿಕ ಇತಿಹಾಸ, ವಾಯುಮಂಡಲ ಮತ್ತು ಕಾಂತಕ್ಷೇತ್ರಗಳ ಉಳಿವು, ಇವೆಲ್ಲವೂ ಈ ಗ್ರಹದ ಮೇಲೆ ಜೀವಿಗಳ ಉದ್ಭವ ಮತ್ತು ಪೋಷಣೆಗಳಿಗೆ ಅಡಿ ಮಾಡಿಕೊಡುತ್ತವೆ.[೩೦]

ಜೈವಗೋಳ[ಬದಲಾಯಿಸಿ]

ಭೂಮಿಯ ಮೇಲಿನ ಜೀವಜಂತುಗಳು ಒಂದು ಜೈವಗೋಳವನ್ನು ರೂಪಿಸುತ್ತವೆ. ಈ ಜೈವಗೋಳವು ಸುಮಾರು ೩೫೦ ಕೋಟಿ ವರ್ಷಗಳ ಹಿಂದೆ ವಿಕಸಿಸಲು ಶುರುವಾಯಿತೆಂದು ನಂಬಲಾಗಿದೆ. ಭೂಮಿಯ ಮೇಲಿನ ಸಮುದಾಯಗಳು ಅಧಿಕೃತವಾಗಿ ತಿಳಿದುಕೊಂಡಂತೆ, ಖಂಡಿತವಾಗಿಯೂ ಜೀವಿಗಳು ಅಸ್ತಿತ್ವದಲ್ಲಿರುವುದು ಭೂಮಿಯ ಮೇಲೆ ಮಾತ್ರ. ಇದಲ್ಲದೆ, ಜೈವಗೋಳಗಳು ಬಹಳ ವಿರಳ ಎಂದು ಕೆಲವು ವಿಜ್ಞಾನಿಗಳು ನಂಬುತ್ತಾರೆ.

ಜೈವಗೋಳವನ್ನು ಹಲವು ಬಯೋಮ್ಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಬಯೋಮ್‌ನಲ್ಲಿ ಸ್ಥೂಲವಾಗಿ ಒಂದೇ ರೀತಿಯ ಗಿಡ-ಮರಗಳು ಮತ್ತು ಪ್ರಾಣಿ-ಪಕ್ಷಿಗಳು ಕಂಡುಬರುತ್ತವೆ. ಒಣ ನೆಲದ ಮೇಲೆ, ಮುಖ್ಯವಾಗಿ ಅಕ್ಷಾಂಶ ರೇಖೆ ಮತ್ತು ಸಾಗರದಿಂದ ಇರುವ ಎತ್ತರವು ಬಯೋಮ್‌ಗಳನ್ನು ಪ್ರತ್ಯೇಕಿಸುತ್ತವೆ. ಆರ್ಕ್‌ಟಿಕ್, ಅಂಟಾರ್ಕ್‌ಟಿಕ್ ವೃತ್ತ ಅಥವಾ ಎತ್ತರದಲ್ಲಿರುವ ಬಯೋಮ್‌ಗಳಲ್ಲಿ ಹೆಚ್ಚು ಜೀವಿಗಳು ಸಿಗುವುದಿಲ್ಲ. ಆದರೆ, ಸಮಭಾಜಕದ ಬಳಿಯಿರುವ ಬಯೋಮ್‌ಗಳಲ್ಲಿ ಬಹಳಷ್ಟು ಜೀವಿಗಳನ್ನು ಕಾಣಬಹುದು.

ಸ್ವಾಭಾವಿಕ ಸಂಪನ್ಮೂಲಗಳು ಮತ್ತು ನೆಲದ ಬಳಕೆ[ಬದಲಾಯಿಸಿ]

ಮಾನವರು ತಮ್ಮ ಉಪಯೋಗಗಳಿಗೆ ಬಳಸಬಹುದಾದ ಸಂಪನ್ಮೂಲಗಳನ್ನು ಭೂಮಿಯು ಒದಗಿಸುತ್ತದೆ. ಈ ಸಂಪನ್ಮೂಲಗಳಲ್ಲಿ ಖನಿಜ ಇಂಧನಗಳಂಥ ಕೆಲವು ನವೀಕರಿಸಲು ಅಯೋಗ್ಯವಾಗಿದ್ದು, ಇವುಗಳನ್ನು ಕಡಿಮೆ ಸಮಯಾವಧಿಯಲ್ಲಿ ನವೀಕರಿಸಲಾಗುವುದಿಲ್ಲ.

ಖನಿಜ ಇಂಧನಗಳ ದೊಡ್ಡ ಶೇಖರಣೆಗಳು ಭೂಮಿಯ ಚಿಪ್ಪಿನಲ್ಲಿ ಕಂಡುಬರುತ್ತವೆ. ಈ ಬಗೆಯ ಇಂಧನಗಳಲ್ಲಿ ಕಲ್ಲಿದ್ದಿಲು, ಕಲ್ಲೆಣ್ಣೆ, ನಿಸರ್ಗಾನಿಲ, ಮತ್ತು ಮೀಥೇನ್ಗಳು ಸೇರಿವೆ. ಈ ಶೇಖರಣೆಗಳನ್ನು ಮಾನವರು ಶಕ್ತಿಯ ಉತ್ಪನ್ನಕ್ಕಾಗಿ ಮತ್ತು ರಾಸಾಯನಿಕ ಉತ್ಪನ್ನಗಳಿಗೆ ಆದಾರವಾಗಿ ಬಳಸುತ್ತಾರೆ. ಸವಕಳಿ ಮತ್ತು ಭೂಫಲಕ ಚಲನೆಗಳಿಂದುಂಟಾಗುವ ಅದಿರು ಉತ್ಪತ್ತಿ ಪ್ರಕ್ರಿಯೆಯಿಂದಲೂ ಭೂಮಿಯ ಚಿಪ್ಪಿನಲ್ಲಿ ಅದಿರಿನ ಶೇಖರಣೆಗಳು ರೂಪುಗೊಳ್ಳುತ್ತವೆ.[೩೧] ಈ ಶೇಖರಣೆಗಳು ಹಲವು ಲೋಹ ಮತ್ತಿತರ ಉಪಯುಕ್ತ ಮೂಲವಸ್ತುಗಳ ಸಾಂದ್ರೀಕರಿತ ಆಗರಗಳಾಗಿರುತ್ತವೆ.

ಭೂಮಿಯ ಜೈವಗೋಳವು ಮಾನವರಿಗೆ ಉಪಯುಕ್ತವಾಗುವ ಹಲವು ಜೈವಿಕ ಉತ್ಪನ್ನಗಳನ್ನು ಸೃಷ್ಟಿಸುತ್ತದೆ. ಇವುಗಳಲ್ಲಿ ಆಹಾರ, ಮರ, ಔಷಧಿಗಳು, ಆಮ್ಲಜನಕ, ಹಲವು ಜೈವಿಕ ತ್ಯಾಜ್ಯವಸ್ತುಗಳ ಮರುಬಳಕೆ, ಇತ್ಯಾದಿಗಳು ಸೇರಿವೆ. ನೆಲದ ಮೇಲಿನ ಪರಿಸರ ವ್ಯವಸ್ಥೆಗಳು ಸಿಹಿನೀರು ಮತ್ತು ಮೇಲ್ಮಣ್ಣಿನ ಮೇಲೆ ಅವಲಂಬಿತವಾಗಿದ್ದರೆ, ಸಾಗರಗಳಲ್ಲಿನ ಪರಿಸರ ವ್ಯವಸ್ಥೆಗಳು ನೆಲದಿಂದ ಸಮುದ್ರಕ್ಕೆ ಕೊಚ್ಚಿ ಬಂದು ಕರಗಿದ ಪೋಷಕಗಳ ಮೇಲೆ ಅವಲಂಬಿತವಾಗಿರುತ್ತವೆ.[೩೨] ೧೯೯೩ರಲ್ಲಿ ಮಾನವರಿಂದ ನೆಲದ ಬಳಕೆ ಸುಮಾರು ಈ ಕೆಳಗಿನಂತಿತ್ತು:

ನೆಲದ ಬಳಕೆ ಶೇಕಡಾ
ವ್ಯವಸಾಯಯೋಗ್ಯ ನೆಲ: ೧೩.೧೩%[೧೫]
ಶಾಶ್ವತ ಬೆಳೆಗಳು: ೪.೭೧%[೧೫]
ಶಾಶ್ವತ ಹುಲ್ಲುಗಾವಲುಗಳು: ೨೬%
ಕಾಡುಗಳು: ೩೨%
ನಾಗರಿಕ ವಲಯಗಳು: ೧.೫%
ಇತರೆ: ೩೦%

೧೯೯೩ರಲ್ಲಿ ಮಾಡಿದ ಅಂದಾಜಿನ ಪ್ರಕಾರ ನೀರಾವರಿಗೆ ಒಳಪಟ್ಟಿದ್ದ ನೆಲದ ವಿಸ್ತೀರ್ಣವು ೨,೪೮೧,೨೫೦ ಕಿ.ಮೀ..[೧೫]

ಸ್ವಾಭಾವಿಕ ಮತ್ತು ಪಾರಿಸರಿಕ ಹಾನಿಗಳು[ಬದಲಾಯಿಸಿ]

  • ಭೂಮಿಯ ಮೇಲೆ ಹಲವು ವಿಸ್ತಾರ ವಲಯಗಳು ಸುಮಾರು ನಿರಂತರವಾಗಿ ಚಂಡಮಾರುತ, ತುಫಾನುಗಳಂಥ ವಿಪರೀತ ಹವೆಗಳಿಗೆ ಒಳಪಟ್ಟಿರುತ್ತವೆ. ಹಲವೆಡೆಗಳು ಭೂಕಂಪನ, ಭೂಪಾತ, ಸುನಾಮಿ, ಜ್ವಾಲಾಮುಖಿ, ಪ್ರಳಯ, ಬರಗಾಲ, ಮತ್ತಿತರ ವಿಪತ್ತು ಮತ್ತು ನಾಶಗಳನ್ನು ಎದುರಿಸುತ್ತವೆ.
  • ಹಲವು ಸ್ಥಳೀಯ ಪ್ರದೇಶಗಳು ಮಾನವರಿಂದುಂಟಾದ ಜಲ ಮತ್ತು ವಾಯು ಮಾಲಿನ್ಯ, ಆಮ್ಲ ಮಳೆ ಮತ್ತು ವಿಷಕಾರಕ ಪದಾರ್ಥಗಳು, ಸಸ್ಯಸಂಪತ್ತಿನ ನಾಶ (ಅತಿಯಾದ-ಮೇಯುವಿಕೆ, ಅರಣ್ಯನಾಶ, ವನ್ಯಜೀವಿಗಳ ನಾಶ, ಪ್ರಭೇದಗಳ ನಾಶ, ಸವಕಳಿ) ಮುಂತಾದ ನಾಶಕಾರಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಕಾರ್ಖಾನೆಗಳಿಂದ ಇಂಗಾಲದ-ಡೈ-ಆಕ್ಸೈಡ್‌ನ ಉತ್ಪತ್ತಿಯು ವಾಯುಗುಣದಲ್ಲಿ ದೀರ್ಘಾವಧಿ ಮಾರ್ಪಾಡುಗಳನ್ನು ಉಂಟುಮಾಡುತ್ತಿವೆ. ಇದರಿಂದ, ಹಿಮನದಿಗಳು ಮತ್ತು ಆರ್ಕ್‌ಟಿಕ್ ಹಿಮದ ಕರಗುವಿಕೆ, ಇನ್ನೂ ಹೆಚ್ಚಿನ ವಿಪರೀತ ತಾಪಮಾನಗಳು, ಹವಾಮಾನದಲ್ಲಿ ಗಮನಾರ್ಹವಾದ ಬದಲಾವಣೆಗಳು, ಭೂಮಿಯಾದ್ಯಂತ ಸರಾಸರಿ ಸಾಗರ ಮಟ್ಟದ ಏರಿಕೆ ಸೇರಿದಂತೆ ಹಲವು ಪರಿಣಾಮಗಳು ಉಂಟಾಗುವ ನಿರೀಕ್ಷೆಯಿದೆ.[೩೩]

ಮಾನವ ಭೂವಿವರಣೆ[ಬದಲಾಯಿಸಿ]

ರಾತ್ರಿಯಲ್ಲಿ ಭೂಮಿ. ಇದನ್ನು ಪವನ ವಿಜ್ಞಾನ/ಉಪಗ್ರಹ ಮಾಹಿತಿಗಳನ್ನು ಭೂಮಿಯ ರಾತ್ರಿಚಿತ್ರದ ಛದ್ಮನದ ಮೇಲೆ ಅಧ್ಯಾರೋಪಿಸಿ ತಯಾರಿಸಲಾಗಿದೆ. ಈ ಚಿತ್ರವು ಛಾಯಾಚಿತ್ರವಾಗಿರದೆ, ಇದರಲ್ಲಿನ ಹಲವು ಭಾಗಗಳು ನೇರ ವೀಕ್ಷಕನಿಗೆ ಕಾಣುವುದಕ್ಕಿಂತ ಹೆಚ್ಚು ಪ್ರಕಾಶಮಾನವಾಗಿವೆ.

ಭೂಮಿಯು ಸುಮಾರು ೬,೬೦೦,೦೦೦,೦೦೦ ಮಾನವ ವಾಸಿಗಳನ್ನು ಹೊಂದಿದೆ.[೩೪][೩೫] ಮುನ್ನಂದಾಜುಗಳ ಪ್ರಕಾರ ಭೂಮಿಯ ಜನಸಂಖ್ಯೆಯು ೨೦೧೩ರಲ್ಲಿ ೭೦೦ ಕೋಟಿ ಮತ್ತು ೨೦೫೦ ೯೨೦ ಕೋಟಿಯಷ್ಟು ಆಗಲಿದೆ.[೩೬]. ಜನಸಂಖ್ಯಾ ಬೆಳವಣಿಗೆಯ ಸಿಂಹಪಾಲು ಪ್ರಗತಿಶೀಲ ದೇಶಗಳಿಂದ ಬರಲಿದೆ. ಮಾನವ ಜನಸಂಖ್ಯಾ ಸಾಂದ್ರತೆಯು ಭೂಮಿಯ ವಿವಿಧೆಡೆಗಳಲ್ಲಿ ಬಹಳ ಭಿನ್ನವಾಗಿದ್ದರೂ, ಬಹುತೇಕ ಜನರು ಏಷ್ಯಾ ಖಂಡದಲ್ಲಿ ವಾಸಿಸುತ್ತಾರೆ. ೨೦೨೦ರ ಹೊತ್ತಿಗೆ ಭೂಮಿಯ ಸುಮಾರು ೬೦% ಜನರು ನಾಗರಿಕ ವಲಯಗಳಲ್ಲಿ ವಾಸವಾಗಿರುತ್ತಾರೆಂದು ಅಂದಾಜು ಮಾಡಲಾಗಿದೆ.[೩೭]

ಭೂಮಿಯ ಮೇಲ್ಮೈನ ಕೇವಲ ಎಂಟನೇ ಒಂದು ಭಾಗ ಮಾತ್ರ ಮಾನವ ವಾಸಕ್ಕೆ ಯೋಗ್ಯವಾಗಿದೆ ಎಂದು ಅಂದಾಜು ಮಾಡಲಾಗಿದೆ — ಮೇಲ್ಮೈನ ಮುಕ್ಕಾಲು ಭಾಗ ಸಾಗರಗಳಿಂದ ಕೂಡಿದ್ದು, ನೆಲ ವಿಸ್ತೀರ್ಣದ ಅರ್ಧ ಭಾಗವು ಮರುಭೂಮಿ (೧೪%)[೩೮] ಎತ್ತರ ಪರ್ವತಗಳು (೨೭%),[೩೯] ಅಥವಾ ಇತರ ವಾಸಿಸಲಯೋಗ್ಯ ಪ್ರದೇಶಗಳಿಂದ ಸೇರಿದೆ. ಭೂಮಿಯ ಅತಿ ಉತ್ತರದ ಶಾಶ್ವತ ನೆಲೆಯೆಂದರೆ ನುನಾವುಟ್, ಕೆನಡಾದಲ್ಲಿನ ಎಲ್ಲೆಸ್‌ಮಿಯರ್ ದ್ವೀಪದ ಮೇಲಿನ ಅಲರ್ಟ್ .[೪೦] (೮೨°೨೮′ಉ) ಅತಿ ದಕ್ಷಿಣದ ಶಾಶ್ವತ ನೆಲೆಯು ಅಂಟಾರ್ಕ್‌ಟಿಕಅಮುಂಡ್ಸೆನ್-ಸ್ಕಾಟ್ ದಕ್ಷಿಣ ಧ್ರುವ ಧಾಮವಾಗಿದ್ದು, ಇದು ದಕ್ಷಿಣ ಧ್ರುವಕ್ಕೆ ಬಹಳ ಸಮೀಪದಲ್ಲಿದೆ. (೯೦°ದ)

  • ಅಂಟಾರ್ಕ್‌ಟಿಕದಲ್ಲಿನ ಕೆಲ ಭಾಗಗಳನ್ನು ಹೊರತುಪಡಿಸಿ, ಭೂಮಿಯ ಎಲ್ಲಾ ನೆಲ ಮೇಲ್ಮೈನ ಮೇಲೆ ಸ್ವತಂತ್ರ ಸಾರ್ವಭೌಮ ರಾಷ್ಟ್ರಗಳು ಹಕ್ಕು ಸಾಧಿಸಿವೆ. ೨೦೦೭ರ ಗಣತಿಯ ಪ್ರಕಾರ, ೧೯೨ ಸಂಯುಕ್ತ ರಾಷ್ಟ್ರ ಸದಸ್ಯ ರಾಷ್ಟ್ರಗಳು ಸೇರಿದಂತೆ ೨೦೧ ಸಾರ್ವಭೌಮ ದೇಶಗಳಿವೆ. ಇವಲ್ಲದೆ, ಭೂಮಿಯ ಮೇಲೆ ೫೯ ಅವಲಂಬಿ ಪ್ರಾಂತ್ಯಗಳು, ಹಲವು ಸ್ವಾಯತ್ತ ವಲಯಗಳು, ವಿವಾದಿತ ಪ್ರದೇಶಗಳು, ಮತ್ತು ಇತರೆ ಪ್ರದೇಶಗಳೂ ಇವೆ.ಹಲವು ರಾಷ್ಟ್ರಗಳು ವಿಶ್ವಾಧಿಪತ್ಯ ಸಾಧಿಸಲು ಪ್ರಯತ್ನಿಸಿದ್ದರೂ, ಐತಿಹಾಸಿಕವಾಗಿ ಇಡೀ ಭೂಮಿಯ ಮೇಲೆ ಹತೋಟಿಯಿದ್ದಂಥ ಯಾವುದೇ ಸರ್ಕಾರವು ಇದುವರೆಗೆ ಇದ್ದಿಲ್ಲ.
  • ರಾಷ್ಟ್ರಗಳ ನಡುವಿನ ವ್ಯಾಜ್ಯಗಳಲ್ಲಿ ಮಧ್ಯವರ್ತಿಯಾಗಿ ಪ್ರವೇಶಿಸಿ ಸಶಸ್ತ್ರ ಸಂಘರ್ಷಣೆಯನ್ನು ತಪ್ಪಿಸುವ ಉದ್ದೇಶದಿಂದ ಅಂತರಾಡಳಿತ ಸಂಸ್ಥೆಯಾದ ಸಂಯುಕ್ತ ರಾಷ್ಟ್ರವನ್ನು ರಚಿಸಲಾಯಿತು. ಆದರೆ, ಈ ಸಂಸ್ಥೆಯು ವಿಶ್ವವ್ಯಾಪಿ ಸರ್ಕಾರವಲ್ಲ. ಸಂಯುಕ್ತ ರಾಷ್ಟ್ರವು ಅಂತರರಾಷ್ಟ್ರೀಯ ಕಾನೂನಿಗೆ ವ್ಯವಸ್ಥೆ ಕಲ್ಪಿಸುವುದು, ಹಾಗೂ, ಸದಸ್ಯ ರಾಷ್ಟ್ರಗಳ ಒಮ್ಮತವಿದ್ದಾಗ ಸಶಸ್ತ್ರ ಸಂಘರ್ಷಣೆಗೆ ಅನುವು ಮಾಡಿಕೊಡುವುದು[೪೧] - ಇವುಗಳನ್ನು ಮಾಡುತ್ತದಾದರೂ, ಇದು ಮುಖ್ಯವಾಗಿ ಅಂತರರಾಷ್ಟ್ರೀಯ ರಾಯಭಾರಕ್ಕೆ ಚರ್ಚಾ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತದೆ.
  • ಒಟ್ಟಾರೆ, ೨೦೦೪ನೇ ಇಸವಿಯ ಹೊತ್ತಿಗೆ ಸುಮಾರು ೪೦೦ ಮಾನವರು ಭೂಮಿಯ ವಾಯುಮಂಡಲದ ಹೊರಗೆ ಪಯಣಿಸಿದ್ದು, ಇದರಲ್ಲಿ ಹನ್ನೆರಡು ಜನರು ಚಂದ್ರನ ಮೇಲೆ ನಡೆದಾಡಿದ್ದಾರೆ. ಸಾಮಾನ್ಯವಾಗಿ ಅಂತರಿಕ್ಷದಲ್ಲಿರುವ ಮಾನವರೆಂದರೆ ಅಂತರರಾಷ್ಟ್ರೀಯ ಅಂತರಿಕ್ಷ ನಿಲ್ದಾಣದಲ್ಲಿರುವವರು. ನಿಲ್ದಾಣದ ಮೂರು ಜನರ ಸಿಬ್ಬಂದಿಯನ್ನು ಆರು ತಿಂಗಳಿಗೂಮ್ಮೆ ಬದಲಾಯಿಸಲಾಗುತ್ತದೆ.

ಭವಿಷ್ಯ[ಬದಲಾಯಿಸಿ]

ಭವಿಷ್ಯದಲ್ಲಿ ಸೂರ್ಯನ ಗಾತ್ರದ ಹೆಚ್ಚಳ

ಭೂಮಿಯ ಭವಿಷ್ಯವು ಸೂರ್ಯನ ಭವಿಷ್ಯದ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ. ಸೂರ್ಯನ ಒಳಭಾಗದಲ್ಲಿ ಹೀಲಿಯಂ ಬೂದಿಯ ನಿರಂತರ ಶೇಖರಣೆಯ ಕಾರಣದಿಂದ, ಸೂರ್ಯನ ಒಟ್ಟಾರೆ ಕಾಂತೀಯತೆಯು ನಿಧಾನವಾಗಿ ಹೆಚ್ಚಾಗುತ್ತದೆ. ಸುಮಾರು ೧೧೦ ಕೋಟಿ ವರ್ಷಗಳಲ್ಲಿ ಕಾಂತೀಯತೆಯು ೧೦%ನಷ್ಟು ಮತ್ತು ಸುಮಾರು ೩೫೦ ಕೋಟಿ ವರ್ಷಗಳಲ್ಲಿ ೪೦% ಹೆಚ್ಚುತ್ತದೆ.[೪೨] ಹೆಚ್ಚಾದ ಈ ವಿಕಿರಣದಿಂದ, ಭೂಮಿಯ ಸಾಗರಗಳ ನಾಶವೂ ಸೇರಿದಂತೆ ಹಲವಾರು ಘೋರ ಪರಿಣಾಮಗಳು ಉಂಟಾಗುತ್ತವೆಂದು ಹವಾಮಾನ ಮಾದರಿಗಳು ಸೂಚಿಸುತ್ತವೆ.[೪೩]

ಭೂಮಿಯ ಮೇಲ್ಮೈ ತಾಪಮಾನವು ಹೆಚ್ಚಿದಂತೆ, ಅಜೈವಿಕ CO2 ಆವರ್ತದ ವೇಗವು ಹೆಚ್ಚಾಗುತ್ತದೆ. ಇದರಿಂದ, ಇನ್ನು ೯೦ ಕೋಟಿ ವರ್ಷಗಳಲ್ಲಿ ಇಂಗಾಲದ ಡೈ ಆಕ್ಸೈಡ್ನ ಸಾಂದ್ರತೆಯು ಗಿಡ-ಮರಗಳಿಗೆ ಮಾರಕವಾಗುವಷ್ಟು (C4 ದ್ಯುತಿಸಂಶ್ಲೇಷಣೆಗೆ ಲಕ್ಷದಲ್ಲಿ ೧ ಭಾಗದಷ್ಟು ಸಾಂದ್ರತೆ ಅತ್ಯವಶ್ಯಕ) ಕಡಿಮೆಯಾಗುತ್ತದೆ. ಆದರೆ, ಸೂರ್ಯನು ಶಾಶ್ವತವಾಗಿ ಸ್ಥಿರವಾಗಿದ್ದಿದ್ದರೂ, ಭೂಮಿಯು ನಿಧಾನವಾಗಿ ತಣ್ಣಗಾಗುತ್ತಿರುವುದರಿಂದ, ಅಗ್ನಿಪರ್ವತ ಚಟುವಟಿಕೆಗಳು ಕಡಿಮೆಯಾಗಿ, ಭೂಮಿಯ ಬಹುತೇಕ ವಾಯುಮಂಡಲ ಮತ್ತು ಸಾಗರಗಳು ನಶಿಸಿಹೋಗಿರುತ್ತಿದ್ದವು.[೪೪] ಹೆಚ್ಚು ವಿಶಿಷ್ಟವಾಗಿ, ಭೂಮಿಯ ಚಿಪ್ಪಿನ ಕಡಿಮೆಯಾದ ತಾಪಮಾನವು ಈಗಿಗಿಂತ ಹೆಚ್ಚು ನೀರನ್ನು ತನ್ನ ಮೂಲಕ ಜಿನುಗಲು ಬಿಡುತ್ತದೆ. ಹೀಗಾಗಿ, ಇನ್ನು ಸುಮಾರು ೧೦೦ ಕೋಟಿ ವರ್ಷಗಳಲ್ಲಿ ಸೂರ್ಯನ ಪ್ರಭಾವವಿಲ್ಲ್ದಿದ್ದರೂ ಮೇಲ್ಮೈ ನೀರು ಪೂರ್ಣವಾಗಿ ಇಂಗುತ್ತದೆ.[೪೫]

ಇನ್ನು ೫೦೦ ಕೋಟಿ ವರ್ಷಗಳಲ್ಲಿ ತನ್ನ ಜೀವನ ಚಕ್ರದ ಭಾಗವಾಗಿ, ಸೂರ್ಯವು ಕೆಂಪು ದೈತ್ಯವಾಗಿ ಉಬ್ಬುತ್ತದೆ. ಭೂಮಿಯ ಪ್ರಸ್ತುತದ ಕಕ್ಷೆಗಿರುವ ದೂರದ (೧ ಖಗೋಳ ಮಾನ) ೯೯%ರಷ್ಟು ದೂರದ ಗಾತ್ರಕ್ಕೆ ಸೂರ್ಯವು ಹಿಗ್ಗುತ್ತದೆ ಎಂದು ಮಾದರಿಗಳು ಹೇಳುತ್ತವೆ. ಆದರೆ, ಅಷ್ಟು ಹೊತ್ತಿಗೆ ಸೂರ್ಯನ ದ್ರವ್ಯರಾಶಿಯ ಕುಗ್ಗುವಿಕೆಯ ಕಾರಣ, ಭೂಮಿಯ ಕಕ್ಷೆಯು ಸುಮಾರು ೧.೭ ಖ.ಮಾಗಳ ದೂರಕ್ಕೆ ಸರಿಯಬಹುದು. ಹೀಗೆ, ಭೂಮಿಯು ಸೂರ್ಯನ ಹೊರ ವಾಯುಮಂಡಲದಿಂದ ಆವೃತವಾಗುವುದನ್ನು ತಪ್ಪಿಸಿಕೊಂಡರೂ, ಸೂರ್ಯನ ಸಾಮೀಪ್ಯತೆಯ ಕಾರಣದಿಂದ ಬಹುತೇಕ ಎಲ್ಲಾ ಜೀವಿಗಳೂ ನಶಿಸಿಹೋಗುತ್ತವೆ.[೪೨]

ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ[ಬದಲಾಯಿಸಿ]

  • 23 Feb, 2017;
  • ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಸೌರಮಂಡಲದಾಚೆ ಇನ್ನೊಂದು ಸೌರಮಂಡಲವನ್ನು ಪತ್ತೆ ಹಚ್ಚಿದೆ. ಈ ಸೌರಮಂಡಲದಲ್ಲಿ ಭೂಮಿಯಂತೆ ಇರುವ 7 ಗ್ರಹಗಳನ್ನು ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ವಾಸಯೋಗ್ಯ ಗ್ರಹಗಳು ಎಷ್ಟಿವೆ ಎಂಬುದರ ಬಗ್ಗೆ ಸಂಶೋಧನೆ ನಡೆಸಲಾಗುತ್ತಿದೆ.
  • ನಮ್ಮ ಸೌರಮಂಡಲದಂತೆಯೇ ಇರುವ ಈ ಹೊಸ ಸೌರಮಂಡಲದಲ್ಲಿ ಕುಬ್ಜ ನಕ್ಷತ್ರದ ಸುತ್ತುವ ಏಳು ಗ್ರಹಗಳನ್ನು ಪತ್ತೆ ಹಚ್ಚಿದ್ದು, ಇವುಗಳಲ್ಲಿ ಕೆಲವು ಗ್ರಹಗಳು ವಾಸಯೋಗ್ಯ ವಾತಾವರಣವನ್ನು ಹೊಂದಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಈ ಏಳು ಗ್ರಹಗಳ ಪೈಕಿ ಮೂರು ಗ್ರಹಗಳಲ್ಲಿ ಜೀವಿಗಳು ವಾಸಿಸಲು ಯೋಗ್ಯವಾದ ವಾತಾವರಣವಿದ್ದು, ಇಲ್ಲಿ ನೀರಿನ ಸೆಲೆ ಕಂಡು ಬಂದಿದೆ ಎಂದು ವಿಜ್ಞಾನಿಗಳು ಹೇಳುತ್ತಿದ್ದಾರೆ.
  • ಸೂರ್ಯನಿಗಿಂತ 200 ಪಟ್ಟು ಕಾಂತಿಹೀನವಾಗಿರುವ ನಕ್ಷತ್ರವೊಂದರ ಸುತ್ತಲೂ ಈ ಗ್ರಹಗಳು ತಿರುಗುತ್ತಿವೆ. ಭೂಮಿಯಿಂದ ಸುಮಾರು 40 ಜೋತಿರ್‍‍ ವರ್ಷಗಳಷ್ಟು ದೂರವಿರುವ ಸೌರಮಂಡಲವನ್ನು ಹೋಲುವ ಈ ಸೌರಮಂಡಲದ ಕೇಂದ್ರ ಬಿಂದುವಾದ ಕುಬ್ಜ ನಕ್ಷತ್ರಕ್ಕೆ ತ್ರಪ್ಪಿಸ್ಟ್ (Trappist-1) ಎಂದು ಹೆಸರಿಡಲಾಗಿದೆ. 1 ನಕ್ಷತ್ರದ ಸುತ್ತಲೂ ಭೂಮಿಯಂತೆ ಇರುವ ಏಳು ಗ್ರಹಗಳು ಸುತ್ತುತ್ತಿವೆ. Trappist-1 ನಮ್ಮ ಸೂರ್ಯನಂತೆ ಕೇಂದ್ರ ಸ್ಥಾನದಲ್ಲಿದ್ದರೆ, ಸೌರಮಂಡಲದಲ್ಲಿ ಬುಧಗ್ರಹದ ಕಕ್ಷೆಯಷ್ಟು ಪರಿಧಿಯಲ್ಲಿ ಈ ಗ್ರಹಗಳು ಸ್ಥಿತಿಗೊಂಡಿವೆ. ಈ ಗ್ರಹಗಳನ್ನು ಸದ್ಯಕ್ಕೆ b,c,d,e,f,g,h ಎಂದು ಹೆಸರಿಸಲಾಗಿದ್ದು ಕೇಂದ್ರ ಬಿಂದುವಾದ ನಕ್ಷತ್ರಕ್ಕೆ A ಎಂದು ಹೆಸರಿಡಲಾಗಿದೆ.[೪೬]

ಹೆಚ್ಚಿನ ಮಾಹಿತಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. G.B. Dalrymple, 1991, "The Age of the Earth", Stanford University Press, California, ISBN 0-8047-1569-6.
  2. A. Morbidelli et al, 2000, "Source Regions and Time Scales for the Delivery of Water to Earth", Meteoritics & Planetary Science, vol. 35, no. 6, pp. 130920.
  3. W. Ford Doolitte, "Uprooting the Tree of Life", Scientific American, Feb. 2000.
  4. J.B. Murphy, R.D. Nance, "ಈ ವಿದ್ಯಮಾನವನ್ನು ಫಲಕ ಸಂರಚನೆ ಎಂದು ಕರೆದಿದೆ. How do supercontinents assemble?", American Scientist, vol. 92, pp. 32433.
  5. J.L. Kirschvink, 1992, "Late Proterozoic Low-Latitude Global Glaciation: The Snowball Earth", The Proterozoic Biosphere, pp 5152.
  6. D. Raup & J. Sepkoski, 1982, "Mass extinctions in the marine fossil record", Science, vol. 215, pp. 150103.
  7. http://earthref.org/cgi-bin/er.cgi?s=erda.cgi?n=547
  8. Public Domain This article incorporates text from a publication now in the public domainChisholm, Hugh, ed. (1911). "Petrology". Encyclopædia Britannica (11th ed.). Cambridge University Press. {{cite encyclopedia}}: Cite has empty unknown parameters: |separator= and |HIDE_PARAMETER= (help); Invalid |ref=harv (help)
  9. T. H. Jordan, "Structural Geology of the Earth's Interior", Proceedings National Academy of Science, 1979, Sept., 76(9): 4192–4200.
  10. Sanders, Robert (December 10, 2003). "Radioactive potassium may be major heat source in Earth's core". UC Berkeley News. Retrieved 2007-02-28.
  11. Alfè, D.; Gillan, M. J.; Vocadlo, L.; Brodholt, J; Price, G. D. (2002). "The ab initio simulation of the Earth's core" (PDF). Philosophical Transaction of the Royal Society of London. 360 (1795): 1227–1244. Retrieved 2007-02-28.{{cite journal}}: CS1 maint: multiple names: authors list (link)
  12. Richards, M. A.; Duncan, R. A.; Courtillot, V. E. (1989). "Flood Basalts and Hot-Spot Tracks: Plume Heads and Tails". Science. 246 (4926): 103–107. Retrieved 2007-04-21.{{cite journal}}: CS1 maint: multiple names: authors list (link)
  13. Meschede, M.; Udo Barckhausen, U. (November 20, 2000). "Plate Tectonic Evolution of the Cocos-Nazca Spreading Center". Proceedings of the Ocean Drilling Program. Texas A&M University. Retrieved 2007-04-02.{{cite web}}: CS1 maint: multiple names: authors list (link)
  14. Staff. "GPS Time Series". NASA JPL. Archived from the original on 2011-08-22. Retrieved 2007-04-02.
  15. ೧೫.೦ ೧೫.೧ ೧೫.೨ ೧೫.೩ CIA: The World Factbook, "World Archived 2010-01-05 ವೇಬ್ಯಾಕ್ ಮೆಷಿನ್ ನಲ್ಲಿ.".
  16. FAO, 1995, "United Nations Food and Agricultural Organization Production Yearbook", 49.
  17. ""Deep Ocean Studies"". Ocean Studies. RAIN National Public Internet and Community Technology Center. Archived from the original on 2006-04-24. Retrieved 2006-04-02.
  18. Fitzpatrick, Richard (February 16, 2006). "MHD dynamo theory". NASA WMAP. Retrieved 2007-02-27. {{cite web}}: Check date values in: |date= (help)
  19. Campbell, Wallace Hall (2003). Introduction to Geomagnetic Fields. New York: Cambridge University Press. pp. p57. ISBN 0521822068. {{cite book}}: |pages= has extra text (help); Cite has empty unknown parameter: |coauthors= (help)
  20. Stern, David P. (July 8, 2005). "Exploration of the Earth's Magnetosphere". NASA. Archived from the original on 2013-02-14. Retrieved 2007-03-21.
  21. Fisher, Rick (January, 30, 1996). "Astronomical Times". National Radio Astronomy Observatory. Archived from the original on 2011-08-22. Retrieved 2007-03-21. {{cite web}}: Check date values in: |date= (help)
  22. ೨೨.೦ ೨೨.೧ Williams, David R. (September 1, 2004). "Earth Fact Sheet". NASA. Retrieved 2007-03-17.
  23. Williams, David R. (September 1, 2004). "Moon Fact Sheet". NASA. Retrieved 2007-03-21.
  24. Fisher, Rick (February 5, 1996). "Earth Rotation and Equatorial Coordinates". National Radio Astronomy Observatory. Archived from the original on 2011-08-22. Retrieved 2007-03-21.
  25. Williams, Jack (December 20, 2005). "Earth's tilt creates seasons". USAToday. Retrieved 2007-03-17.
  26. Vázquez, M.; Montañés Rodríguez, P.; Palle, E. (2006). "The Earth as an Object of Astrophysical Interest in the Search for Extrasolar Planets" (PDF). Instituto de Astrofísica de Canarias. Retrieved 2007-03-21.{{cite web}}: CS1 maint: multiple names: authors list (link)
  27. For the Earth, the Hill radius is
    ,
    where m is the mass of the Earth, a is an Astronomical Unit, and M is the mass of the Sun. So the radius in A.U. is about: .
  28. Staff (October, 1998). "Explorers: Searching the Universe Forty Years Later" (PDF). NASA/Goddard. Archived from the original (PDF) on 2011-09-17. Retrieved 2007-03-05. {{cite web}}: Check date values in: |date= (help)
  29. Staff (September, 2003). "Astrobiology Roadmap". NASA, Lockheed Martin. Archived from the original on 2012-03-11. Retrieved 2007-03-10. {{cite web}}: Check date values in: |date= (help)
  30. Dole, Stephen H. (1970). Habitable Planets for Man (2nd edition ed.). American Elsevier Publishing Co. ISBN 0-444-00092-5. Retrieved 2007-03-11. {{cite book}}: |edition= has extra text (help)
  31. Staff (November 24, 2006). "Mineral Genesis: How do minerals form?". Non-vertebrate Paleontology Laboratory, Texas Memorial Museum. Retrieved 2007-04-01.
  32. Rona, Peter A. (2003). "Resources of the Sea Floor". Science. 299 (5607): 673–674. Retrieved 2007-02-04.
  33. Staff (February 2, 2007). "Evidence is now 'unequivocal' that humans are causing global warming – UN report". United Nations. Retrieved 2007-03-07. {{cite web}}: Check date values in: |date= (help)
  34. Currently it is closer to 6.6 billion than 6.5 billion. It will reach 6.6 billion in June 2007.
  35. David, Leonard (2006-02-24). "Planet's Population Hit 6.5 Billion Saturday". Live Science. Archived from the original on 2006-03-19. Retrieved 2006-04-02. {{cite news}}: Check date values in: |date= (help)
  36. Staff. "World Population Prospects: The 2006 Revision". United Nations. Retrieved 2007-03-07.
  37. Staff (2007). "Human Population: Fundamentals of Growth: Growth". Population Reference Bureau. Archived from the original on 2013-02-10. Retrieved 2007-03-31.
  38. Peel, M. C.; Finlayson, B. L.; McMahon, T. A. (2007). "Updated world map of the Köppen-Geiger climate classification". Hydrology and Earth System Sciences Discussions. 4: 439–473. Archived from the original on 2008-01-25. Retrieved 2007-03-31.{{cite journal}}: CS1 maint: multiple names: authors list (link)
  39. Staff. "Themes & Issues". Secretariat of the Convention on Biological Diversity. Archived from the original on 2007-04-07. Retrieved 2007-03-29.
  40. Staff (2006-08-15). "Canadian Forces Station (CFS) Alert". Information Management Group. Archived from the original on 2007-06-09. Retrieved 2007-03-31.
  41. Staff. "International Law". United Nations. Retrieved 2007-03-27.
  42. ೪೨.೦ ೪೨.೧ Sackmann, I.-J.; Boothroyd, A. I.; Kraemer, K. E. (1993). "Our Sun. III. Present and Future". Astrophysical Journal. 418: 457–468. Retrieved 2007-03-31.{{cite journal}}: CS1 maint: multiple names: authors list (link)
  43. Kasting, J.F. (1988). "Runaway and Moist Greenhouse Atmospheres and the Evolution of Earth and Venus". Icarus. 74: 472–494. Retrieved 2007-03-31.
  44. Guillemot, H.; Greffoz, V. (Mars 2002). "Ce que sera la fin du monde". Science et Vie (in French). N° 1014. {{cite journal}}: Check date values in: |date= (help)CS1 maint: multiple names: authors list (link) CS1 maint: unrecognized language (link)
  45. Carrington, Damian (February 21, 2000). "Date set for desert Earth". BBC News. Retrieved 2007-03-31.
  46. ಭೂಮಿಯನ್ನು ಹೋಲುವ ಏಳು ಗ್ರಹಗಳನ್ನು ಪತ್ತೆ ಮಾಡಿದ ನಾಸಾ
"https://kn.wikipedia.org/w/index.php?title=ಭೂಮಿ&oldid=1213086" ಇಂದ ಪಡೆಯಲ್ಪಟ್ಟಿದೆ