ವಿಷಯಕ್ಕೆ ಹೋಗು

ಪರಜೀವಿಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಪರಾವಲಂಬಿ ಇಂದ ಪುನರ್ನಿರ್ದೇಶಿತ)

ವಿಕಸನೀಯ ಜೀವಶಾಸ್ತ್ರದಲ್ಲಿ, ಪರಜೀವಿಕೆ ಎಂದರೆ ಪ್ರಜಾತಿಗಳ ನಡುವಿನ ಸಂಬಂಧವಾಗಿದೆ. ಇದರಲ್ಲಿ ಪರೋಪಜೀವಿ ಎಂದು ಕರೆಯಲ್ಪಡುವ ಒಂದು ಜೀವಿಯು ಆಶ್ರಯದಾತ ಎಂದು ಕರೆಯಲ್ಪಡುವ ಮತ್ತೊಂದು ಜೀವಿಯ ಮೇಲೆ ಅಥವಾ ಒಳಗೆ ಇರುತ್ತದೆ. ಪರೋಪಜೀವಿಯು ಆಶ್ರಯದಾತ ಜೀವಿಗೆ ಸ್ವಲ್ಪ ಹಾನಿಯುಂಟುಮಾಡುತ್ತದೆ ಮತ್ತು ರಾಚನಿಕವಾಗಿ ಈ ಜೀವನಶೈಲಿಗೆ ಹೊಂದಿಕೊಂಡಿರುತ್ತದೆ. ಕೀಟಶಾಸ್ತ್ರಜ್ಞ ಇ. ಒ. ವಿಲ್ಸನ್ ಪರೋಪಜೀವಿಗಳನ್ನು "ತಮ್ಮ ಬೇಟೆಯನ್ನು ಒಂದಕ್ಕಿಂತ ಕಡಿಮೆಯಿರುವ ಘಟಕಗಳಲ್ಲಿ ತಿನ್ನುವ ಪರಭಕ್ಷಕರು" ಎಂದು ವಿವರಿಸಿದ್ದಾರೆ. ಪರೋಪಜೀವಿಗಳಲ್ಲಿ ಮಲೇರಿಯಾ, ನಿದ್ರಾಲಸ್ಯ, ಮತ್ತು ಅಮೀಬಿಕ್ ಭೇದಿಯ ವಾಹಕಗಳಂತಹ ಪ್ರೋಟೊಜ಼ೋವನ್‍ಗಳು; ಕೊಕ್ಕೆಹುಳುಗಳು, ಹೇನುಗಳು, ಸೊಳ್ಳೆಗಳು ಹಾಗೂ ರಕ್ತ ಹೀರುವ ಬಾವಲಿಗಳಂತಹ ಪ್ರಾಣಿಗಳು; ಜೇನಣಬೆ ಹಾಗೂ ಹುಳುಕಡ್ಡಿಯ ವಾಹಕಗಳಂತಹ ಶಿಲೀಂಧ್ರಗಳು; ಮತ್ತು ಮಿಸಲ್‍ಟೋ, ಡಾಡರ್ ಹಾಗೂ ಬ್ರೂಮ್‍ರೇಪ್‍ಗಳಂತಹ ಸಸ್ಯಗಳು ಸೇರಿವೆ. ಪ್ರಾಣಿ ಆಶ್ರಯದಾತಗಳ ಉಪಯೋಗದ ಆರು ಪ್ರಮುಖ ಪರಾವಲಂಬಿ ತಂತ್ರಗಳಿವೆ, ಅವೆಂದರೆ ಜನನಗ್ರಂಥಿಗಳ ಪರಾವಲಂಬಿ ಕ್ರಿಯಾನಿರ್ಬಂಧ, ಪ್ರತ್ಯಕ್ಷವಾಗಿ ಪ್ರಸಾರವಾದ ಪರಾವಲಂಬಿಕೆ (ಸಂಪರ್ಕದಿಂದ), ತಿನ್ನುವಿಕೆ ರೀತಿಯಲ್ಲಿ ಪ್ರಸಾರವಾದ ಪರಾವಲಂಬಿಕೆ (ತಿನ್ನಲ್ಪಡುವುದರಿಂದ), ವಾಹಕದಿಂದ ಪ್ರಸಾರಗೊಂಡ ಪರಾವಲಂಬಿಕೆ, ಪರಜೀವಿ ಸಾಮ್ಯತೆ, ಮತ್ತು ಸೂಕ್ಷ್ಮಜೀವಿ ಪರಭಕ್ಷಣೆ.

ಪರಭಕ್ಷಣೆಯಂತೆ, ಪರಜೀವಿಕೆಯು ಒಂದು ಬಗೆಯ ಭಕ್ಷಕ ಸಂಪನ್ಮೂಲ ಪರಸ್ಪರ ಕ್ರಿಯೆಯಾಗಿದೆ,[] ಆದರೆ ಪರಭಕ್ಷಕಗಳಂತೆ, ಪರೋಪಜೀವಿಗಳು (ಭಾಗಶಃ ಪರೋಪಜೀವಿಗಳನ್ನು ಹೊರತುಪಡಿಸಿ) ಸಾಮಾನ್ಯವಾಗಿ ಅವುಗಳ ಆಶ್ರಯದಾತಗಳಿಗಿಂತ ಹೆಚ್ಚು ಚಿಕ್ಕದಾಗಿರುತ್ತವೆ, ಅವುಗಳನ್ನು ಕೊಲ್ಲುವುದಿಲ್ಲ, ಮತ್ತು ಹಲವುವೇಳೆ ತಮ್ಮ ಆಶ್ರಯದಾತ ಜೀವಿಗಳ ಮೇಲೆ ಅಥವಾ ಒಳಗೆ ವಿಸ್ತೃತ ಅವಧಿವರೆಗೆ ಇರುತ್ತವೆ. ಪ್ರಾಣಿಗಳ ಪರೋಪಜೀವಿಗಳು ಅತಿ ವಿಶಿಷ್ಟವಾಗಿರುತ್ತವೆ, ಮತ್ತು ತಮ್ಮ ಆಶ್ರಯದಾತಗಳಿಗಿಂತ ಹೆಚ್ಚು ವೇಗದ ಪ್ರಮಾಣದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ಅತ್ಯುತ್ತಮ ಉದಾಹರಣೆಗಳಲ್ಲಿ ಕಶೇರುಕ ಆಶ್ರಯದಾತಗಳು ಮತ್ತು ಲಾಡಿಹುಳುಗಳು, ಫ಼್ಲೂಕ್‍ಗಳು, ಮಲೇರಿಯಾ ಉಂಟುಮಾಡುವ ಪ್ಲಾಸ್ಮೋಡಿಯಂ ಪ್ರಜಾತಿಗಳು, ಹಾಗೂ ಚಿಕ್ಕಾಡುಗಳ ನಡುವಿನ ಪಾರಸ್ಪರಿಕ ಕ್ರಿಯೆಗಳು ಸೇರಿವೆ.

ಪರೋಪಜೀವಿಗಳು ಜನನಗ್ರಂಥಿಗಳ ಪರಾವಲಂಬಿ ಕ್ರಿಯಾನಿರ್ಭಂಧದಿಂದ ಹಿಡಿದು ಆಶ್ರಯದಾತದ ವರ್ತನೆಯ ಮಾರ್ಪಾಡಿನವರೆಗೆ, ಆಶ್ರಯದಾತದ ದೇಹಾರೋಗ್ಯವನ್ನು ಸಾಮಾನ್ಯ ಅಥವಾ ವಿಶಿಷ್ಟ ಕಾಯಿಲೆಯಿಂದ ಕುಗ್ಗಿಸುತ್ತವೆ. ಆಶ್ರಯದಾತಗಳನ್ನು ತಮ್ಮ ಉಳಿಯುವಿಕೆಗೆ ಅಗತ್ಯವಾದ ಸಂಪನ್ಮೂಲಗಳಿಗಾಗಿ ಬಳಸಿಕೊಂಡು ಪರೋಪಜೀವಿಗಳು ತಮ್ಮ ಸ್ವಂತ ದೇಹಾರೋಗ್ಯವನ್ನು ಹೆಚ್ಚಿಸಿಕೊಳ್ಳುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. Getz, W. M. (2011). "Biomass transformation webs provide a unified approach to consumer-resource modelling". Ecological Letters. 14 (2): 113–124. doi:10.1111/j.1461-0248.2010.01566.x. PMC 3032891. PMID 21199247.