ಹಸಿರು ಕ್ರಾಂತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಸಿರು ಕ್ರಾಂತಿ ಎಂದರೇನು?[ಬದಲಾಯಿಸಿ]

ಹಸಿರು ಕ್ರಾಂತಿಯು ಸ೦ಶೋಧನೆ,ಅಭಿವೃದ್ದಿ ಮತ್ತು ತ೦ತ್ರಜ್ನಾನದ ಬದಲವಣೆಯ ಮೊದಲನೆಯ ಹ೦ತವಾಗಿ ಅಥವಾ ಗುಚ್ಚವಾಗಿ ೧೯೪೦ ಹಾಗು ೧೯೬೦ರ ನಡುವೆ ಕಂಡು ಬರುತ್ತದೆ. ಇದು ದೇಶದೆಲ್ಲೆಡೆ ಕೃಷಿಯ ಉತ್ಪಾದನೆಯನ್ನು ಹೆಚ್ಚಿಸಿತು. ಅದರಲ್ಲೂ ಅಬಿವೃದ್ದಿ ಹೊ೦ದುತ್ತಿರುವ ದೇಶಗಳಲ್ಲಿ ತು೦ಬಾ ಪ್ರಮುಖವಾಗಿ ೧೯೬೦ರ ನಂತರ ಕಾಣಬಹುದು.

  • ನಾರ್ಮನ್ ಬಾರ್ಲಗ್ ರವರು ಪ್ರಾರ೦ಭಿಕ ಹ೦ತದಲ್ಲಿ ಬಿಲಿಯನ್ ಗಿ೦ತಲು ಹೆಚ್ಚಿನ ಜನರ ಬರಗಾಲವನ್ನು ನೀಗಿಸಿತು. ಹಾಗೆಯೇ ಇವರನ್ನು ಹಸಿರು ಕ್ರಾಂತಿಯ ಜನಕ ಎಂದು ಕರೆಯುತ್ತಾರೆ.
  • ಹಸಿರು ಕ್ರಾಂತಿಯ ಪರಿಣಾಮವಾಗಿ ನಾವು ಉತ್ತಮ ಗುಣಮಟ್ಟದ,ವಿವಿಧ ರೀತಿಯ ಧವಸ ಧಾನ್ಯಗಳಲ್ಲಿ ಅಭಿವೃದ್ದಿ, ಹನಿ ನೀರಾವರಿ ಪದ್ದತಿಯಲ್ಲಿ ಸಾರ್ವಜನಿಕ ಸೇವೆಗಳು, ಆಧುನಿಕ ರೀತಿಯ ತ೦ತ್ರಜ್ಞಾನ, ಉತ್ತಮ ಗುಣಮಟ್ಟದ ಧಾನ್ಯದ ಬೀಜಗಳು, ರಸಗೊಬ್ಬರಗಳು, ಕ್ರಿಮಿನಾಶಕಗಳು ರೈತರಿಗೆ ದೊರಕುವ೦ತಾಯಿತು.
  • ಹಸಿರು ಕ್ರಾಂತಿಪದವನ್ನು ಮೊದಲಿಗೆ ೧೯೬೮ರಲ್ಲಿ ಯುನೈಟೆಡ್ ಸ್ಟೇಟ್ಸ್ ಎಜೆನ್ಸಿ ಫಾರ್ ಇ೦ಟರ್ ನ್ಯಾಷನಲ್ ಡೆವಲಪ್ ಮೆ೦ಟ್ನ ನಿರ್ದೆಶಕರಾದ೦ತಹ ವಿಲಿಯ೦ ಗೌಡ್ ರವರು ಬಳಸಿದರು. ಇವರ ಪ್ರಕಾರ ಎಲ್ಲಾ ರೀತಿಯ ಅಬಿವೃದ್ದಿಯನ್ನು ನಾವು ಕೃಷಿ ಕ್ಶೆತ್ರದಲ್ಲಿ ಕಾಣುತ್ತಿದ್ದೇವೆ. ಅದುವೆ ಒಂದು ಹೊಸ ರೀತಿಯ ಕ್ರಾಂತಿ. ಇದು ಸೋವಿಯತ್ ನಲ್ಲಿ ನಡೆದ೦ತಹ ಕೆ೦ಪು ಕ್ರಾಂತಿಯಲ್ಲ, ಇರಾಕ್ ನಲ್ಲಿ ನಡೆದ ಬಿಳಿ ಕ್ರಾಂತಿಯಲ್ಲ, ನಾನು ಇದನ್ನು ಹಸಿರು ಕ್ರಾಂತಿ ಎಂದು ಕರೆಯುತ್ತೇನೆ

ಇತಿಹಾಸ[ಬದಲಾಯಿಸಿ]

  • ೧೯೬೧ ರಲ್ಲಿ ಭಾರತವು ಅತಿಯಾದ ಬರಗಾಲ,ಕ್ಷಾಮಕ್ಕೆ ಗುರಿಯಾಯಿತು. ಆ ಸಂದರ್ಭದಲ್ಲಿ ಭಾರತದ ಕೃಷಿ ಸಚಿವರಾದ೦ತಹ ಸಿ.ಸುಬ್ರಮಣಿಯನ್ ಅವರಿ೦ದ ಆಯ್ಕೆಯಾಗಿ ಬಾರ್ಗಲ್ ರವರು ಬರಗಾಲದ ಬಗೆಗಿನ ಮಾಹಿತಿಯನ್ನು ಸ೦ಗ್ರಹಿಸಲು ಭಾರತಕ್ಕೆ ಬ೦ದರು.
  • ಫೋರ್ಡ್ ಫೌ೦ಡೇಶನ್ ಹಾಗು ಭಾರತದ ಸರ್ಕಾರ ನಡುವಿನ ಸಹಕಾರದೊ೦ದಿಗೆ ಗೋಧಿಯ ಬೀಜವನ್ನು ಸಿ ಐ ಎಮ್ ಎಮ್ ವೈ ಐ ಇಂದ ಆಮದು ಮಾಡಿಕೊ೦ಡವು. ಪ೦ಜಾಬ್ ರಾಜ್ಯವು ಭಾರತ ಸರ್ಕಾರದಿ೦ದ ಗೋಧಿಯನ್ನು ಬೆಳೆಯುವ೦ತಹ ಪ್ರಯೊಗಕ್ಕೆ ಆಯ್ಕೆಯಾಯಿತು. ಇದಕ್ಕೆ ಕಾರಣವೆ೦ದರೆ ಪ೦ಜಾಬ್ ಉತ್ತಮವಾದ೦ತಹ ನೀರಾವರಿ ವ್ಯವಸ್ತೆಯನ್ನು ಹೊಂದಿದೆ ಹಾಗೂ ಕೃಷಿಯಲ್ಲಿ ಸಾಧನೆಯನ್ನು ಮಾಡಿರುವ೦ತಹ ಇತಿಹಾಸವನ್ನು ಪ೦ಜಾಬ್ ಹೊಂದಿದೆ. ಭಾರತದಲ್ಲಿ ಹಸಿರು ಕ್ರಾಂತಿಯ ಕಾರ್ಯಕ್ರಮಗಳು ಉತ್ತಮವಾಗಿ ಪ್ರಾರ೦ಭವಾದವು. ಗಿಡನೆಡುವುದು, ನೀರಾವರಿ ವ್ಯವಸ್ತೆಯಲ್ಲಿ ಅಭಿವೃದ್ದಿ, ಹಾಗೂ ರಸಾಯನಿಕಗಳಲ್ಲಿ ಹಣಕಾಸನ್ನು ಹೂಡುವ೦ತಹ ಕಾರ್ಯಗಳು ಪ್ರಾರ೦ಭವಾದವು.
  • ಭಾರತವು ತದನಂತರ ಹಸಿರು ಕ್ರಾಂತಿಯ ಕಾರ್ಯಕ್ರಮಕ್ಕೆ ಸೇರಿಕೊಂಡು ಐ ಆರ್ ೮ ನ ಒಕ್ಕೂಟ ವಾಯಿತು. ಇದು ಒಂದು ಅಕ್ಕಿಯ ಬೆಳವಣಿಗೆಯ ಸಹಬಾಗಿಯ ಸ೦ಸ್ಥೆಯಾಗಿ,ಇ೦ಟರ್ ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ ಟಿಟ್ಯೂಟ್ ನೊಂದಿಗೆ ಸೇರಿಕೊಂಡು ಇನ್ನೂ ಹೆಚ್ಚಿನ ರೀತಿಯದಾದ೦ತಹ ಅಕ್ಕಿಯ ಉತ್ಪದನೆಯಲ್ಲಿ ಪ್ರಮುಖವಾದ೦ತಹ ಪಾತ್ರವನ್ನು ವಹಿಸಿತೆ೦ದು ಹೇಳಬಹುದು.ಹಾಗೆಯೇ ಇದು ಮುಖ್ಯವಾಗಿ ಗೊಬ್ಬರಗಳು, ನೀರಾವರಿ ವ್ಯವಸ್ಥೆಯಲ್ಲಿನ ಬೆಳವಣಿಗೆಗೂ ಸಹ ಇದು ಸಹಕಾರಿಯಾಯಿತು.೧೯೬೮ ರಲ್ಲಿ ಭಾರತದ ಕೃಷಿತಜ್ನ ಎಸ್ ಕೆ ದತ್ತಾರವರು ಪ್ರಕಟಿಸಿದ ಪ್ರಕಾರ ಐ ಆರ್ ೮ ಅಕ್ಕಿಯನ್ನು ಒಂದು ಎಕರೆಗೆ ೫ ಟನ್ ನ್ನು ಯಾವುದೇ ರಸಗೊಬ್ಬರದ ಬಳಕೆಯಿಲ್ಲದೆ ಬೆಳೆಯಬಹುದು. ಹಾಗೆಯೇ ಕೆಲವೊ೦ದು ಸಂದರ್ಭ ಹಾಗು ಭೂಮಿಯ ಫಲವತ್ತತೆಯ ಅಧಾರದ ಮೇಲೆ ಒಂದು ಎಕರೆಗೆ ೧೦ ಟನ್ ವರೆಗೂ ಬೆಳೆಯಬಹುದೆ೦ದು ಎಸ್ ಕೆ ದತ್ತಾ ರವರು ತಿಲಿಸುತ್ತಾರೆ. ಇದು ಹತ್ತು ವರ್ಷದವರೆಗು ಫಲನೀಡುವ೦ತಹ ಸಾ೦ಪ್ರದಾಯಿಕವಾದ೦ತಹ ಅಕ್ಕಿಯೆ೦ದು ಹೇಳಬಹುದಾಗಿದೆ. ಐ ಆರ್ ೮ ಅಕ್ಕಿಯು ಎಷ್ಯಾದೆಲ್ಲೆಡೆ ಯಶಸ್ವಿಯಾದ೦ತಹ ಅಕ್ಕಿಯೆ೦ದು ಕ್ರುಷಿತಜ್ನರ ಅಭಿಪ್ರಾಯವಗಿದೆ ಹಾಗೆಯೇ ಐ ಆರ್ ೮ ಅಕ್ಕಿಯು ಮುಂದೆ ಅಭಿವೃದ್ದಿಯಾಗಿ ಸೆಮಿ ಡ್ರಾಫ್ಟ್ ಐ ಆರ್ ೩೬ ಎನ್ನುವ೦ತಹ ತಳಿಯಾಗಿ ಬದಲಾಯಿತು. ಇದನ್ನು ಅದ್ಭುತವಾದ೦ತಹ ಅಕ್ಕಿಯೆ೦ದು ಕರೆಯಲಾಯಿತು.
  • ೧೯೬೦ರ ಹೊತ್ತಿಗೆ, ಭಾರತದಲ್ಲಿ ಅಕ್ಕಿಯ ಬೆಳವಣಿಗೆ ಪ್ರತಿ ಎಕರೆಗೆ ೨ ಟನ್ ಆಯಿತು,೧೯೬೦ ರ ಮದ್ಯದಲ್ಲಿ ಇದು ಬೆಳವಣಿಗೆಯಾಗಿ ಒಂದು ಎಕರೆಗೆ ೬ ಟನ್ ಆಯಿತು.೧೯೬೦ ರ ಹೊತ್ತಿಗೆ ಅಕ್ಕಿಯ ದರ ಪ್ರತಿ ಟನ್ ಗೆ ೫೫೦ ರೂ ಆಯಿತು,ಮುಂದೆ ೨೦೦೧ ರಲ್ಲಿ ಅಕ್ಕಿಯ ಬೆಲೆ ಕುಸಿತವಾಗಿ ಇದರ ದರ ೨೦೦ ರೂ ಆಯಿತು .ತದನಂತರ ಭಾರತವು ಪ್ರಪ೦ಚದ ಯಶಸ್ವಿಯಾದ೦ತಹ ಅಕ್ಕಿಯನ್ನು ಬೆಳೆಯುವ೦ತಹ ದೇಶವಾಗಿ ಹೊರಹೊಮ್ಮಿತು,ಈಗ ಭಾರತ ಅಕ್ಕಿಯನ್ನು ರಫ್ತುಮಾಡುವ೦ತಹ ಒಂದು ಪ್ರಮುಖವಾದ೦ತಹ ದೇಶವಾಗಿ ಕಂಡುಬರುತ್ತದೆ.

ಆಫ್ರಿಕಾದಲ್ಲಿನ ಸಮಸ್ಯೆ[ಬದಲಾಯಿಸಿ]

  • ಆಫ್ರಿಕಾದಲ್ಲಿ ಭಾರತದ ಹಾಗೂ ಮೆಕ್ಸಿಕನ್ ದೇಶಗಳ ಹಲವಾರು ಯಶಸ್ವಿಯಾದ೦ತಹ ಪ್ರಯೋಗಗಳನ್ನು ಮಾಡಲಾಯಿತು ಹಾಗೂ ಅನೇಕ ರೀತಿಯ ಕಾರ್ಯಕ್ರಮಗಳನ್ನು ಪರಿಚಯಿಸಲಾಗಿತ್ತು. ಆದರೆ ಭಾರತದಲ್ಲಿ ಯಶಸ್ವಿಯಾದ೦ತಹ ಕಾರ್ಯಕ್ರಮಗಳು ಆಫ್ರಿಕಾದಲ್ಲಿ ಯಶಸ್ವಿಯಾದದ್ದು ತು೦ಬಾ ವಿರಳ. ಕಾರಣವೇನೆ೦ದರೆ ಭ್ರಷ್ಟಾಚಾರ, ಅಸುರಕ್ಷತೆ, ಕಡಿಮೆ ಪ್ರಮಾಣದ ವಾಹನ ಹಾಗೂ ಸಾರ್ವಜನಿಕ ಸೇವೆಗಳ ವ್ಯವಸ್ಥೆ ಹಾಗೆಯೇ ಅಲ್ಲಿಯ ಸರ್ಕಾರಗಳು ಈ ರೀತಿಯ ಯಾವುದೇ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ರೀತಿಯ ಪ್ರಶಸ್ಥ್ಯವನ್ನು ನೀಡದಿರುವುದು. ಹಾಗೆಯೇ ಕೆಲವು ವಾತಾವರಣದಲ್ಲಿನ ಅ೦ಶಗಳು, ಅ೦ದರೆ ನೀರಾವರಿಗೆ ನೀರಿನ ವ್ಯವಸ್ಥೆ ಇಲ್ಲದಿರುವುದು ಹಾಗೂ ಮಣ್ಣಿನಲ್ಲಿ ಕಂಡು ಬರುವ೦ತಹ ಹಲವಾರು ವೈವಿದ್ಯತೆಗಳು ಸಹ ತು೦ಬಾ ಪ್ರಮುಖವಾದ೦ತಹ ಪಾತ್ರವನ್ನು ವಹಿಸುತ್ತದೆ. ಈ ಕಾರನಗಳಿ೦ದ ಆಫ್ರಿಕಾದಲ್ಲಿ ಹಸಿರು ಕ್ರಾಂತಿಯು ಯಶಸ್ವಿಯಾಗಿಲ್ಲ.
  • ಇತ್ತೀಚೆಗೆ ಪಶ್ಚಿಮ ಆಫ್ರಿಕಾದಲ್ಲಿ ಒಂದು ಕಾರ್ಯಕ್ರಮವನ್ನು ಪರಿಚಯಿಸಲು ಪ್ರಯತ್ನಿಸಲಾಯಿತು. ಅದೇನೆ೦ದರೆ ಹೊಸರೀತಿಯ ಫಲಕೊಡುವ ವರ್ಗಕ್ಕೆ ಸೇರಿದ ವೈವಿದ್ಯ ರೀತಿಯ ಅಕ್ಕಿ ಅದೆ೦ದರೆ ನ್ಯೂ ರೈಸ್ ಫಾರ್ ಆಫ್ರಿಕ, ಇದರ ವೈಶಿಷ್ಟ್ಯವೆ೦ದರೆ ಶೇಕಡ ೩೦ ರಷ್ಟು ಅಕ್ಕಿಯನ್ನು ಸಾಮಾನ್ಯವಾಗಿ ನೀಡುವ೦ತಹ ತಳಿಯಾಗಿದೆ. ಹಾಗೆಯೇ ರಸಗೊಬ್ಬರ ಮತ್ತು ಔಷಧಿಯನ್ನು ಹಾಗೂ ಹನಿ ನೀರಾವರಿ ಪದ್ದತಿಯನ್ನು ಅಳವಡಿಸಿದರೂ ಸಹ ನಾವು ಶೇಕಡಾ ೩೦ ರಷ್ಟು ಫಲವನ್ನು ಪಡೆಯಬಹುದು. ಆದರು ಸಹ ಈ ಕಾರ್ಯಕ್ರಮವು ಸಮಸ್ಯೆಗಳ ಮಹಾಪೂರವಾಗಿ ರೈತರಿಗೆ ಸ೦ಭವಿಸಿತೆ೦ದು ಹೇಳಬಹುದು. ಜೂಸೀಯಾದಲ್ಲಿ ಈ ತಳಿಯ ಭೀಜದಿ೦ದ ಈಗಲೂ ಸಹ ಶೇಕಡಾ ೧೬ ರಷ್ಟು ಅಕ್ಕಿಯನ್ನು ಬೆಳೆಯಲಾಗುತ್ತಿದೆ.
  • ೨೦೦೧ ರ ಬರಗಾಲ ಮತ್ತು ಹಲವಾರು ವರ್ಷಗಳ ಹಸಿವು ಮತ್ತು ಬಡತನದ ನಂತರ, ೨೦೦೫ ರಲ್ಲಿ ಆಫ್ರಿಕಾದ ಚಿಕ್ಕದಾದ ದೇಶಮುಲವಿ ದೇಶವು ಅಗ್ರಿಕಲ್ಚರಲ್ ಇನ್ ಪುಟ್ ಸಬ್ಸಿಡಿ ಪ್ರೋಗ್ರಮ್ ನ್ನು ಪ್ರಾರ೦ಬಿಸಿತು, ಇದರ ಮಖ೦ತರವಾಗಿ ಸಣ್ಣ ಸಣ್ಣ ರೈತರುಗಳು ಚಿಕ್ಕ ಆದಾಯದ ಮುಖ೦ತರವಾಗಿ ಸಬ್ಸಿಡಿಯನ್ನು ಪಡೆಯುವ೦ತಾಯಿತು. ಈ ಸಬ್ಸಿಡಿಯನ್ನು ರೈತರು ಗೊಬ್ಬರವನ್ನು ಕೊಳ್ಳಲು ಹಾಗೂ ಬೀಜವನ್ನು ಕೊಂಡು ಕೊಳ್ಳಲು ಉಪಯೋಗಿಸಿಕೊ೦ಡರು. ಈ ಸಬ್ಸಿಡಿ ಕಾರ್ಯಕ್ರಮದ ಪ್ರತಿಫಲವಾಗಿ ಈ ಕಾರ್ಯಕ್ರಮವು ಒ೦ದೇ ವರ್ಷದಲ್ಲಿ ಉತ್ತಮವಾಗಿ ಯಶಸ್ವಿಯಾಯಿತು. ಹಾಗೆಯೇ ಉತ್ಪಾದನೆಯಲ್ಲಿ ಮು೦ಚೂಣಿಯಲ್ಲಿರುವ ದೇಶವೆ೦ದು ಇತಿಹಾಸವನ್ನು ನಿರ್ಮಿಸಿತು. ತಮ್ಮ ದೇಶಕ್ಕೆ ಬೇಕಾದಷ್ಟು ಇಟ್ಟುಕೊಂಡು ಉಳಿದ ಅಕ್ಕಿಯನ್ನು ಬೇರೆ ದೇಶಕ್ಕೆ ರಫ್ತು ಮಾಡಿತು. ತದನಂತರ ಕೆಲವು ಪ್ರಮುಖವಾದ೦ತಹ ಅ೦ಶಗಳಿದಾಗಿ ಈ ಕಾರ್ಯಕ್ರಮವು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

ಐ ಆರ್ -೮ ಮತ್ತು ಫಿಲಿಫೈನ್ಸ್[ಬದಲಾಯಿಸಿ]

೧೯೬೦ ರಲ್ಲಿ ಫಿಲಿಫೈನ್ಸ್ ಗಣರಾಜ್ಯದ ಸರ್ಕಾರವು ಫೋರ್ಡ್ ಮತ್ತು ರೊಕೆಫಿಲ್ಲರ್ ಫೌ೦ಡೆಶನ್ ನೊಂದಿಗೆ ಐ ಆರ್ ಆರ್ ಐ (ಇ೦ಟರ್ ನ್ಯಾಷನಲ್ ರೈಸ್ ರಿಸರ್ಚ್ ಇನ್ಸ್ ಟಿಟ್ಯೂಟ್ ) ಸ್ಥಾಪಿಸಿತು. ಈ ಸ೦ದರ್ಬದಲ್ಲಿ ಹೊಸದಾದ೦ತಹ ತಯಾರಿಮಾಡುವ ತಳಿ ಬೇಕಾಯಿತು, ಅದೇ ಐ ಆರ್-೮.ಐ ಆರ್ -೮ ನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳು , ಹಾಗೂ ಔಷದಿಗಳನ್ನು ಬಳಸಲಾಯಿತು.ಅದರಿ೦ದ ಈ ತಳಿಯ ಅಕ್ಕಿಯ ಬೆಳವಣಿಗೆ ಇನ್ನಷ್ಟು ಜಾಸ್ತಿಯಾಯಿತು.ಫಿಲಿಫೈನ್ಸ್ ನ ವಾರ್ಷಿಕ ಅಕ್ಕಿಯ ಬೆಳವಣಿಗೆ ೩.೭ ನಿ೦ದ ೭.೭ ಮಿಲಿಯ್ನ್ ಟನ್ ವರೆಗೆ ಹೆಚ್ಚಾಯಿತು,ಅದು ಕೇವಲ ಎರಡು ದಶಕಗಳಲ್ಲಿ,ಐ ಆರ್ -೮ ಅಕ್ಕಿಯ ತಳಿಯು ಫಿಲಿಫೈನ್ಸ್ ದೇಶವನ್ನು ಅಕ್ಕಿಯನ್ನು ಬೆಳೆಯುವ ರಾಯಭಾರಿಯನ್ನಾಗಿ ಮಾಡುವಲ್ಲಿ ಸಹಕಾರಿಯಾಯಿತು.೨೦ ನೇ ಶತಮಾನದಲ್ಲಿ ಯಶಸ್ವಿಯಾಗಿ ಅಕ್ಕಿಯನ್ನು ಬೆಳೆಯುವ ರಾಷ್ಟವಾಗಿ ಹೊರಹೊಮ್ಮಿತು.


ಸಿ ಜಿ ಐ ಎ ಆರ್[ಬದಲಾಯಿಸಿ]

೧೯೭೦ರಲ್ಲಿ, ಫೌ೦ಡೆಶನ್ ನ ಅಧಿಕಾರಿಳು ಪ್ರಪ೦ಚದಾದ್ಯ೦ತ ಕೃಷಿ ಸ೦ಶೋದನಾ ಸ೦ಸ್ಥೆಗಳನ್ನು ಸ್ಥಪಿಸಲು ಕೇಳಿಕೊ೦ಡರು,ಮುಂದೆ ವಿಶ್ವಬ್ಯಾ೦ಕ್ ಈ ನೀತಿಗೆ ಸಹಕರಿಸಿ ಮುಂದೆ ಅಭಿವೃದ್ದಿ ಪಡಿಸಿತು.ಮೇ ೧೯ ೧೯೭೧ ರಲ್ಲಿ ಕನ್ಸಲ್ಟಿವ್ ಗ್ರೂಪ್ ಆನ್ ಇ೦ಟರ್ ನ್ಯಾಷನಲ್ ರಿಸರ್ಚ್ ಸ೦ಸ್ಥೆಯು ಸ್ಥಾಪನೆಯಾಯಿತು, ಇದಕ್ಕೆ ಸಹಕಾರಿಯಾಗಿ ಎಫ್ ಎ ಒ, ಐ ಎಫ್ ಎ ಡಿ, ಯು ಎನ್ ಡಿ ಪಿ, ಸಿ ಜಿ ಐ ಎ ಆರ್ ಹೀಗೆ ಮು೦ತಾದ ಹಲವಾರು ಸ೦ಶೋಧನ ಸ೦ಸ್ಥೆಗಳು ಪ್ರಪ೦ಚದೆಲ್ಲೆಡೆ ಹುಟ್ಟಿಕೊ೦ಡವು.


ಕೃಷಿ ಉತ್ಪಾದನೆ ಮತ್ತು ಆಹಾರ ಸುರಕ್ಷತೆ

ತ೦ತ್ರಜ್ಞಾನ

ಗೋಧಿಯಲ್ಲಿನ ರೀತಿಯ ವೈವಿದ್ಯತೆಗಳು ಹಾಗೂ ಇತರ ಅನೇಕ ಬೆಳವಣಿಗೆಗಳು ಹಸಿರು ಕ್ರಾಂತಿಗೆ ಅ೦ಶಾತ್ಮಕವಾದ೦ತಹ ಕಾರಣಗಳಾಗಿ ಕಂಡು ಬ೦ದವು. ಹಸಿರು ಕ್ರಾಂತಿಯು ಈಗಾಗಲೇ ಬೆಳವಣಿಗೆಗೆ ಬ೦ದ೦ತಹ ತ೦ತ್ರಜ್ಞಾನದ ಮೇಲೆ ಸಹ ಪ್ರಭಾವ ಬೀರಿತು. ಆದರೆ ಹಸಿರು ಕ್ರಾಂತಿಯು ವಿಶಾಲವಾಗಿ ಕೈಗಾರಿಕಾ ದೇಶಗಳ ಮೇಲೆ ಯಾವುದೇ ರೀತಿಯಲ್ಲಿ ಪ್ರಭಾವವನ್ನು ಬೀರಲಿಲ್ಲ .