ಜೀವವೈವಿಧ್ಯ ಸಂರಕ್ಷಣೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈವಿಕ ಪರಿಸರದಲ್ಲಿರುವ ಒಂದು ನಿರ್ದಿಷ್ಟ ವ್ಯವಸ್ಥೆಯೆ ಜೀವವೈವಿಧ್ಯ. ಪ್ರಸ್ತುತ ಸನ್ನಿವೇಶದಲ್ಲಿ ಈ ಜೀವವೈವಿಧ್ಯ ಸಂರಕ್ಷಣೆಯ ಹೊಣೆಗಾರಿಕೆ ಮುಖ್ಯವಾದುದು.

ದೇವರ ಕಾಡು (ನಾಗವನ)

ಸಾಮಾನ್ಯವಾಗಿ ನಮ್ಮ ದೇಶದ ಪ್ರತಿಯೊಂದು ಗ್ರಾಮದಲ್ಲಿ, ಸ್ಠಳೀಯ ದೇವರು ಅಥವಾ ದೇವತೆಯ ಹೆಸರಿನಲ್ಲಿ ಕೆಲವು ಸಸ್ಯ-ಪ್ರಾಣಿಗಳನ್ನು ಸಂರಕ್ಷಿಸುತ್ತಾರೆ ಹಾಗು ಅವುಗಳನ್ನು ಪೂಜಿಸುತ್ತಾರೆ. ಈ ಪೂಜ್ಯನೀಯ ಸ್ಥಳಕ್ಕೆ ದೇವರಕಾಡು ಅಥವಾ ನಾಗವನ Sacred groves ಎಂದು ಕರೆತಯುತ್ತಾರೆ. ಪಶ್ಚಿಮ ಘಟ್ಟಗಳು ಹಾಗು ನಮ್ಮ ದೇಶದ ಈಶಾನ್ಯ ರಾಜ್ಯಗಳಲ್ಲಿ ದೇವರ ಕಾಡುಗಳನ್ನು ಕಾಣಬಹುದು. ಅದರಲ್ಲಿಯೂ ಕರ್ನಾಟಕಕೊಡಗಿನಲ್ಲಿ ದೇವರಕಾಡುಗಳು ಸಾಕಷ್ಟು ಸಂಖ್ಯೆಯಲ್ಲಿವೆ. ಪ್ರತಿ ಹಳ್ಳಿಯಲ್ಲಿ ಒಂದಕ್ಕಿಂತ ಹೆಚ್ಚು ದೇವರಕಾಡುಗಳನ್ನು ನಾವು ಕಾಣಬಹುದು.[೧] ಸಣ್ಣ ಸಣ್ಣ ಕಾಡುಗಳನ್ನು ಪೂಜಾಸ್ಥಾನಗಳಾಗಿ ಪರಿವರ್ತಿಸಿ, ಅವುಗಳನ್ನು ರಕ್ಷಿಸುವ ಕಾರ್ಯ ಒಂದು ವಿಶೇಷ ಪದ್ಧತಿಯಾಗಿ ಇಲ್ಲಿಯ ಜನರಲ್ಲಿ ಬೆಳೆದುಬಂದಿದೆ. ಇದಕ್ಕೆ ಕಾರಣವೆಂದರೆ ಇಲ್ಲಿ ಕಾಡುಗಳ ಸಂಖ್ಯೆ ಹೆಚ್ಛು. ದೇವರ ಕಾಡುಗಳು ನಿತ್ಯಹರಿದ್ವರ್ಣ ಅರಣ್ಯಗಳ ಭಾಗಗಳು. ಬಯಲು ಸೀಮೆಯಲ್ಲಿ ದೇವರಕಾಡುಗಳ ಸಂಖ್ಯೆ ಬಹಳ ಕಡಿಮೆ. ಸ್ಥಳೀಯ ಜನರು ದೇವರ ಕಾಡುಗಳನ್ನು ದೇವತೆಗಳ ರೂಪದಲ್ಲಿ ಪೂಜಿಸುತ್ತಾರೆ. ದೇವರ ಕಾಡುಗಳಲ್ಲಿ ಅತ್ಯಂತ ವಿರಳವಾದ ಹಾಗು ಹೊಸ ಪ್ರಭೇದಗಳನ್ನು ಕಾಣಬಹುದು.

ದೇವರ ಕಾಡುಗಳಲ್ಲಿ ಅನೇಕ ಜೀವಿ ಪ್ರಭೇದಗಳು ಸಂರಕ್ಷಿತವಾಗಿವೆ. ಆದರೆ ಅವೇ ಪ್ರಭೇದಗಳು ಇತರೆ ಪ್ರದೇಶಗಳಲ್ಲಿ ಕಣ್ಮರೆಯಾಗುತ್ತಲಿವೆ. ಕುನ್ ಸ್ಟೆಲೇರಿಯಾ ಕೇರಳೆನ್ಸಿಸ್ (Kunstleria Keralansis) ಎಂಬ ಸಸ್ಯವು ದೇವರ ಕಾಡುಗಳಲ್ಲಿ ಮಾತ್ರ ಉಳಿದಿದೆ. ಇದರ ಅರ್ಥ ದೇವರ ಕಾಡುಗಳು ಜೀವವೈವಿಧ್ಯ ಸಂರಕ್ಷಣೆಯಲ್ಲಿ ಮಹತ್ವದ ಪಾತ್ರ ವಹಿಸಿವೆ. ಇವು ಕೇವಲ ಪರಿಸರವನ್ನಷ್ಟೇ ರಕ್ಷಿಸುವುದಿಲ್ಲ, ಜೊತೆಗೆ ಸ್ಥಳೀಯ ಜನರಿಗೆ ಉರುವಲು, ಒಣ ಎಲೆ ಹಾಗು ಇತರೆ ಉತ್ಪನ್ನಗಳನ್ನು ಕೊಡುತ್ತವೆ.

ನೈಸರ್ಗಿಕ ಪರಿಸರ, ನದಿ, ಅರಣ್ಯ, ಸರೋವರ ಹಾಗು ವನ್ಯಜೀವಿಗಲ ಸಂರಕ್ಷಣೆ ಮತ್ತು ಅಭಿವೃದ್ದಿ ಪಡಿಸುವುದು ಪ್ರತಿಯೊಬ್ಬ ಭಾರತೀಯನ ಆದ್ಯ ಕರ್ತವ್ಯ ಎಂದು ರಾಷ್ಟ್ರೀಯ ಶಾಸನ ಒಪ್ಪಂದ ಎಂದು ೫೧ರಲ್ಲಿ ಬರೆಯಲಾಗಿದೆ. ಕ್ರಿ.ಪೂ. ೪ನೇ ಶತಮಾನದಿಂದಲೂ ಸಸ್ಯ ಪ್ರಾಣಿಗಳನ್ನು ರಕ್ಷಿಸುವಲ್ಲಿ ನಮ್ಮ ಪೂರ್ವಜರು ಆಸಕ್ತಿವಹಿಸಿ ಉದ್ಯಾನವನ ಹಾಗು ಅಭಯಾರಣ್ಯಗಳನ್ನು ಸ್ಥಾಪಿಸಿದ್ದರು. ವನ್ಯಜೀವಿಗಳಿಗೆ ಕಾನೂನು ರೀತ್ಯ ರಕ್ಷಣೆ ಒದಗಿಸುವಲ್ಲಿ ೧೯೭೨ರಲ್ಲಿ ಕೇಂದ್ರೀಯ ಶಾಸನವನ್ನು ಜಾರಿಗೆ ತರಲಾಯಿತು. ವಿಶೇಷವಾಗಿ ಅಳಿವಿನ ಅಂಚಿಗೆ ಬಂದ ವನ್ಯ ಜೀವಿಗಳಿಗೆ ರಕ್ಷಣೆ ನೀಡಲು ಈ ಶಾಸನ ಹೆಚ್ಚು ಸಹಕಾರಿಯಾಗಿದೆ. ಇದನ್ನು ಕೋಷ್ಟಕ ೧ರಲ್ಲಿ ತೋರಿಸಲಾಗಿದೆ.

ಕೋಷ್ಟಕ-೧: ಭಾರತದಲ್ಲಿ ಜೀವವೈವಿಧ್ಯದ ಕಾನೂನಿನ ಅವಕಾಶಗಳ ವಿವಿಧ ರೂಪಗಳು

ಕ್ರಮಸಂಖ್ಯೆ ವನ್ಯ ಸಸ್ಯ ವನ್ಯ ಪ್ರಾಣಿ
ಗುರುತಿಸುವಿಕೆ ರಕ್ಷಣೆಗೊಳಪ್ಪಟ್ಟಿಲ್ಲ ರಕ್ಷಣೆಗೊಳಪ್ಪಟ್ಟಿಲ್ಲ
ಉದ್ದರಣೆ ಅರೆರಕ್ಷಣೆ ಅರೆರಕ್ಷಣೆ
ಉಪಯೋಗ ಅರೆರಕ್ಷಣೆ ಪೂರ್ಣರಕ್ಷಣೆ
ವ್ಯಾಪಾರ ಪೂರ್ಣರಕ್ಷಣೆ ಪೂರ್ಣರಕ್ಷಣೆ
ತಳಿ ಅಭಿವೃದ್ದಿ/ದ್ವಿಗುಣಗೊಳಿಸುವಿಕೆ ಅರೆರಕ್ಷಣೆ ಪೂರ್ಣರಕ್ಷಣೆ
ತಿರುಗಾಟ ಅರೆರಕ್ಷಣೆ ಪೂರ್ಣರಕ್ಷಣೆ
ಪೀಠಿಕೆ ಅರೆರಕ್ಷಣೆ ಅರೆರಕ್ಷಣೆ
ಭೌದ್ಧಿಕ ಆಸ್ತಿ ಹಕ್ಕುಗಳು ರಕ್ಷಣೆಗೊಳಪ್ಪಟ್ಟಿಲ್ಲ ರಕ್ಷಣೆಗೊಳಪ್ಪಟ್ಟಿಲ್ಲ
ಸ್ವಸ್ಥಾನೀಯ ಸಂರಕ್ಷಣೆ ಪೂರ್ಣರಕ್ಷಣೆ ಪೂರ್ಣರಕ್ಷಣೆ
೧೦ ಅನ್ಯಸ್ಥಾನೀಯ ಸಂರಕ್ಶಣೆ ಅರೆರಕ್ಷಣೆ ಪೂರ್ಣರಕ್ಷಣೆ

ಅಳಿವಿನ ಅಂಚಿಗೆ ಬಂದಿರುವ ವನ್ಯ ಸಸ್ಯ-ಪ್ರಾಣಿಗಳ ಅಂತರರಾಷ್ಟ್ರೀಯ ವ್ಯಾಪಾರೀ ಒಪ್ಪಂದ (ಸೈಟ್ಸ್-CITES-Convention on Internal Trade in Endangered Species) ವನ್ನು ೧೯೭೫ರಲ್ಲಿ ಎಲ್ಲಾ ರಾಷ್ಟ್ರಗಳು ಒಪ್ಪಿಕೊಂಡವು. ಈ ಒಪ್ಪಂದದ ಪ್ರಕಾರ ಭೂಮಿಯ ಮೇಲೆ ಅಪರೂಪದ ಸಸ್ಯ ಪ್ರಾಣಿಗಳಿವೆ. ಇವುಗಳನ್ನು ನಾವು ಒಮ್ಮೆ ಕಳೆದುಕೊಂಡರೆ ಮತ್ತೆ ಅವನ್ನು ನಾವು ತಿರುಗಿ ಪಡೆಯಲು ಸಾಧ್ಯವಿಲ್ಲ. ಈಗಾಗಲೆ ಜಗತ್ತಿನ ಜೀವವೈವಿಧ್ಯ ಅತ್ಯಂತ ಅಪಾಯದಲ್ಲಿವೆ.[೨] ನಮ್ಮ ಮುಂದಿನ ಉಪಯೋಗಕ್ಕೆ ಈ ಜೀವಿ ಸಂಕುಲ ಬೇಕೇಬೇಕು. ತಮ್ಮ ತಮ್ಮ ರಾಷ್ಟ್ರಗಳಲ್ಲಿರುವ ಅಳಿವಿಂಚಿನಲ್ಲಿರುವ ಸಸ್ಯ-ಪ್ರಾಣಿಗಳನ್ನು ಉಳಿಸಿಕೊಳ್ಳಲೇಬೇಕಾದ ಪ್ರಸಂಗ ಬಂದಿದೆ. ಈ ಕಾರ್ಯವನ್ನು ಸೈಟ್ಸ್ ನ ಸಹಾಯದಿಂದ ಮಾಡಬಹುದು.

ಉಲ್ಲೇಖಗಳು[ಬದಲಾಯಿಸಿ]

  1. http://www.kodagufirst.in/?tag=oldest-devara-kadu-of-kodagu-is-in-kolathode-bygode ಕರ್ನಾಟಕದ ಕೊಡಗಿನಲ್ಲಿರುವ ದೇವರ ಕಾಡು.
  2. http://www.prajavani.net/news/article/2014/06/16/251406.html[ಶಾಶ್ವತವಾಗಿ ಮಡಿದ ಕೊಂಡಿ]